ಧ್ವನಿಸಞ್ಚಿಕೆ ಇಲ್ಲಿ।
೧. ಜೋ ಜೋ ಜೋ ಜೋ ಜೊಗುಂಡಯ್ಯ
ನೀಜಗದೊಳು ಬಹು ಪ್ರಖ್ಯಾತನಯ್ಯ ॥ ಪಲ್ಲ॥
ಬರೆದರೆ ನಾಮವ ಭೂತನ ಜರುವೆ
ಧರಿಸೆ ವಿಭೂತಿಯ ಕೈಲಾಸ ಗುರುವೆ
ಪರಿಕಿಸಿದವರಿಗೆ ಭಯವನ್ನು ಕೊಡುವೆ
ನರರಿಗೆ ನಿತ್ಯವು ಬೇಕಾಗಿರುವೆ - ಜೋ ಜೋ ॥ ಸೊಲ್ಲು ೧ ॥
ತೊಟ್ಟಿಲು ಬೇಕೆಂತದು ಕಾಡುವನಲ್ಲ
ಕಟ್ಟಿಗೆ ಮೂಲೆಲಿ ಮಲಗೋದ ಬಲ್ಲ
ಪೆಟ್ಟಿಗೆ ಬಟ್ಟೆಯ ಕೇಳುವನಲ್ಲ
ಹುಟ್ಟಿದರಿವನಂತ ಮಗು ಕಷ್ಟವಿಲ್ಲ - ಜೋ ಜೋ ॥ ಸೊಲ್ಲು ೨ ॥
ಸುಣ್ಣದ ಬಟ್ಟುಗಳಿಟ್ಟರೇನಪ್ಪ
ಕಣ್ಣಿಗೆ ಬೀಳುವ ಭಯವಿಲ್ಲವಪ್ಪ
ಸಣ್ಣಕೂಸೆಂದೆತ್ತಳ್ ದೊಡ್ಡಗುಂಡಪ್ಪ
ಬಣ್ಣಿಸಲಾರೆನೊ ನಿನ್ನ ಗುಂಡಪ್ಪ - ಜೋ ಜೋ ॥ ಸೊಲ್ಲು ೩ ॥
ಸೊಂಟದ ಮೇಲ್ಗಡೆ ನಿಲ್ಲುವನಲ್ಲ
ತುಂಟರ ಕಂಡರೆ ಸಹಿಸುವನಲ್ಲ
ಬಂಟನು ಜಾರೀ ಬಿದ್ದರೇನಪ್ಪ
ಕುಂಟನೆ ಮಾಡುವುದು ನೀನೇ ಗುಂಡಪ್ಪ - ಜೋ ಜೋ ॥ ಸೊಲ್ಲು ೪ ॥
ಹೋಳಿಗೆ ಹೂರಣ ತಿರುಗೋದಬಲ್ಲ
ಕಣಿಕೆಹೂರಣ ದೋಸೆ ಹಿಟ್ಟುಗಳೆಲ್ಲ
ಕ್ಷಣದೊಳು ಚೆನ್ನಾಗಿ ತಿರುಗೋದ ಬಲ್ಲ
ಕ್ಷಮಿಸುತ ಜನನಿಯ ಕಾಡುವನಲ್ಲ - ಜೋ ಜೋ ॥ ಸೊಲ್ಲು ೫ ॥
೨. ಜೋ ಜೋ ಶ್ರೀಕೃಷ್ಣಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ - ಜೋ ಜೋ ॥ ಪಲ್ಲ ॥
ಪಾಲು ಕಡಲೊಳುS ಪವಡಿಸಿದವನೇ
ಆಲದೆಲೆಯ ಮೇಲೆ ಮಲಗಿದ ಶಿಶುವೇ
ಶ್ರೀ ಲಲಿತಾಂಗಿಯ ಚಿತ್ತದೊಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆSS - ಜೋ ಜೋ ॥ ಸೊಲ್ಲು ೧ ॥
ಹೊಳೆವನ್ನ ರನ್ನದ ತೊಟ್ಟಿಲವೊಳಗೆ
ಥಳಥಳಿಸುವ ಗುಲುಗುಂಜಿಯ ಚೆಂಡ
ಅಳದೆಯೆ ಪಿಡಿದ ಮುದ್ದುವೆ ಯೆನಕಂದ
ಪಾಂಡುರಂಗನೆ ನಿನ್ನ ಪಾಡಿ ತೂಗುವೆನೋ - ಜೋ ಜೋ ॥ ಸೊಲ್ಲು ೨ ॥
ಯಾರ ಕಂದಾS ನೀನು ಯಾರ ನಿದಾನಿ
ಯಾರ ರತ್ನವೆ ನೀ ಯಾರ ಮಾಣಿಕನೋ/ಬಾಲಕನೋ
ಸೇರಿತು ಯೆನಗೊಂದು ಚಿಂತಾಮಣಿಯಿಂದು
ಬಾಲ ನಿನ್ನನು ನಾನು ಪಾಡಿ ತೂಗುವೆನೋ - ಜೋ ಜೋ ॥ ಸೊಲ್ಲು ೩ ॥
ಗುಣನಿಧಿಯೇ ನಿನ್ನS ಎತ್ತಿಕೊಂಡಿದ್ದರೆ
ಮನೆಯ ಕೆಲಸವ ಯಾರು ಮಾಡುವರಯ್ಯ
ಮನಕೆ ಸುಖನಿದ್ರೆಯ ತಂದುಕೊ ಮಗನೇ
ಬಾಲ ನಿನ್ನನು ನಾನು ಪಾಡಿ ತೂಗುವೆSS - ಜೋ ಜೋ ॥ ಸೊಲ್ಲು ೪ ॥
ಅಂಡಜವಾಹನ ಅನಂತ ಶಯನS
ಪುಂಡರಿಕಾಕ್ಷ ಶ್ರೀ ಪುರಂದರವಿಠಲ
ಹಿಂಡು ದೈತ್ಯರ ದಂಡ ಉದ್ದಂಡನೇ
ಪಾಂಡುರಂಗನೆ ನಿನ್ನ ಪಾಡಿ ತೂಗುವೆನೋ - ಜೋ ಜೋ ॥ ಸೊಲ್ಲು ೫ ॥