विस्तारः (द्रष्टुं नोद्यम्)
The lyricist in particular has done an exceptional job of compressing DLN’s 114 verses to 24, by slicing and combining verses. DLN’s version also has a number of metrical errors that would be glaring when sung, and the lyricist has painstakingly fixed these as well. For now, without much further ado:
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚತುರ ಶಿಖೆಯನು ಹಾಕಿದ
ಎಳೆಯ ಮಾವಿನ ಮರದ ಕೆಳಗೆ
ಕೊಳಲನ್ ಊದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು(=ಹಸುಗಳನ್ನು)
ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು
ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನ್ ಎಂದ್ ಎಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯ್(=ಸಾನುವಿನ್) ಒಳು ತಾನಿದ್ದನು
ಸಿಡಿದು ರೋಷದಿ ಮೊರೆಯುತ್ ಆ ಹುಲಿ
ಘುಡುಘುಡಿಸಿ ಭೋರ್-ಇಡುತ ಛಂಗನೆ
ತುಡುಕಲ್ ಎರಗಿದ(=ಬಿದ್ದ) ರಭಸಕ್ ಅಂಜಿ
ಚೆದರಿ(=ಹಾದಿ-ತಪ್ಪಿ) ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನ್ ಎನುತ
ಚೆಂದದಿ ತಾ ಬರುತಿರೆ
ಇಂದ್ ಎನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ-ವ್ಯಾಘ್ರನು
ಬಂದು ಬಳಸಿ ಅಡ್ಡ-ಗಟ್ಟಿ
ನಿಂದನಾ ಹುಲಿ-ರಾಯನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಮೇಲೆ ಬಿದ್ದು ನಿನ್ನನ್ ಈಗಲೆ
ಬೀಳ-ಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ-ಬಿಡುವೆನು ಎನುತ ಕೋಪದಿ
ಖೂಳ(=ದುಷ್ಟ)-ವ್ಯಾಘ್ರನು ಕೂಗಲು
ಒಂದು ಬಿನ್ನಹ ಹುಲಿಯೆ ಕೇಳು
ಕಂದನ್ ಇರುವನು ದೊಡ್ಡಿಯ್ ಒಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನ್ ಆಡುವೆ ಎಂದಿತು
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ್ ಆ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಕೊಂದು ತಿನ್ನುವೆನ್ ಎಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಹೋಗುವೆನ್
ಎಂದು ಬಂದೆನು ದೊಡ್ಡಿಗೆ
(
ಅಮ್ಮ ನೀನು ಸಾಯಲೇತಕೆ
ಸುಮ್ಮನಿರು ಎಲ್ಲಾರಹಾಗೆ !
ತಮ್ಮ ತಾಯಿಗೆ ಪೇಳಿ ಕರುವು
ಸುಮ್ಮನಾಗಿ ನಿಂದಿತು DLN 74
ಕೇಳಿ ಮಗನ ಬುದ್ಧಿಯನ್ನು
ತಾಳಿ ಹರುಷವ ಸತ್ಯವ್ ಎಂದು
ಬಾಳಿ ಬದುಕುವ ಭಾಗ್ಯ ನಿನ್ನದು
ಬಾಳು, ಮಂಗಳವಾಗಲಿ! DLN 75
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನ್ ಆ ಪರಮಾತ್ಮನು
)
ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?
ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯ್-ಒಡ-ಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನ್ ಈ ಕರುವನು
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನ್ ಎಂದು ಕಾಣಿರಿ
ತಬ್ಬಲಿಯನ್ ಈ ಕರುವನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದ್ ಅಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು
ಖಂಡವ್ ಇದೆಕೋ ಮಾಂಸವ್ ಇದೆಕೋ
ಗುಂಡಿಗೆಯ ಬಿಸಿ ರಕ್ತವ್ ಇದೆಕೋ
ಚಂಡ ವ್ಯಾಘ್ರನೆ ನೀನ್ ಇದ್ ಎಲ್ಲವನ್
ಉಂಡು ಸಂತಸದಿಂದ್ ಇರು
ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯ್ ಇವಳನು ಕೊಂದು ತಿಂದರೆ
ಮೆಚ್ಚನ್ ಆ ಪರಮಾತ್ಮನು
ಎನ್ನ ಒಡಹುಟ್ಟ್ ಅಕ್ಕ ನೀನು
ನಿನ್ನ ಕೊಂದು ಏನ ಪಡೆವೆನು?
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು
ಎನ್ನ ವಂಶದ ಗೋವ್ಗಳ್ ಒಳಗೆ
ನಿನ್ನ ವಂಶದ ಗೊಲ್ಲರ್ ಒಳಗೆ
ಮುನ್ನ ಪ್ರತಿ ಸಂಕ್ರಾಂತಿಯ್ ಒಳಗೆ
ಚೆನ್ನ ಕೃಷ್ಣನ ಭಜಿಸಿರೈ
ಈವನು ಸೌಭಾಗ್ಯ-ಸಂಪದ
ಭಾವ-ಜಪಿತ-ಕೃಷ್ಣನು