ನಡುಗನ್ನಡಪಾಠ

ಧರಣಿ ಮಂಡಲ ಮಧ್ಯದ್ ಒಳಗೆ, ಮೆರೆವುದ್ ಐವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು, ಪರಿಯ ನಾನ್ ಎಂತು+++(=ಹೇಗೆ)+++ ಪೇಳ್ವೆನು
ಉದಯಕಾಲದೊಳ್ ಎದ್ದು ಗೊಲ್ಲನು, ನದಿಯ ಸ್ನಾನವ ಮಾಡಿಕೊಂಡು
ಮದನ-ತಿಲಕವ ಹಣೆಯೊಳ್ ಇಟ್ಟು, ಚದುರ-ಶಿಕೆಯನು ಹಾಕಿದ

+++(ಚದುರ-ಶಿಕೆ ಇಲ್ಲಿ.)+++

ಎಳೆಯ ಮಾವಿನ ಮರದ ಕೆಳಗೆ, ಕೊಳಲನ್ ಊದುತ ಗೊಲ್ಲ-ಗೌಡನು
ಬಳಸಿ ನಿಂದ ತುರು+++(=ಗೋವು)+++ಗಳನ್ನು, ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ, ಗೌರಿ ಬಾರೆ, ತುಂಗ-ಭದ್ರೆ ನೀನು ಬಾರೆ
ಕಾಮಧೇನು ನೀನು ಬಾರ್ ಎಂದು - ಪ್ರೇಮದಿಂದಲಿ ಕರೆದನು

ಪುಣ್ಯಕೋಟಿಯೆ ನೀನು ಬಾರೆ, ಪುಣ್ಯವಾಹಿನಿ ನೀನು ಬಾರೆ
ಪೂರ್ಣ-ಗುಣ-ಸಂಪನ್ನೆ ಬಾರ್ ಎಂದು, ಪ್ರೇಮದಿಂ ಗೊಲ್ಲ ಕರೆದನು
ಗೊಲ್ಲ ಕರೆದ್ ಆ ಧ್ವನಿಯು ಕೇಳಿ, ಎಲ್ಲ ಪಶುಗಳು ಬಂದುವ್ ಆಗ
ಚೆಲ್ಲಿ ಸೂಸಿ+++(=ಚೆಲ್ಲಿ)+++ ಪಾಲ ಕರೆಯಲು, ಅಲ್ಲಿ ತುಂಬಿತು ಬಿಂದಿಗೆ

ಒಡನೆ ದೊಡ್ಡಿಯ ಬಿಡುತ ಪಶುಗಳು, ನಡೆದವ್ ಆಗಾಽರಣ್ಯಕ್ಕಾಗಿ
ಕಡಲು+++(=ಸಮುದ್ರ)+++ ಮೇಘವು ತೆರಳುವ್ ಅಂದದಿ, ನಡೆದವ್ ಆಗಾಽರಣ್ಯಕೆ
ಅಟ್ಟ-ಬೆಟ್ಟದ ಕಿಬ್ಬಿಯ್+++(=ಸಾನು)+++ ಒಳಗೆ, ಇಟ್ಟಡೆಯ+++(=ಕೃಶವಾದ)+++ ಬೆಟ್ಟಾದ ನಡುವೆ
ದಟ್ಟೈಸಿದ್ ಆ ಸಸಿಗಳ್ ಎಡೆಯೊಳು, ಮುಟ್ಟಿ ಮೇದವು ಹುಲ್ಲನು

ಹಬ್ಬಿದ್ ಆ ಮಲೆ-ಮದ್ಯದ್ ಒಳಗೆ, ಅರ್ಭುತಾನ್ ಎಂತ್ ಎಂಬ ವ್ಯಾಘ್ರನು
ಗಬ್ಬಿ+++(=ಕೊಬ್ಬು)+++-ತನದ್ ಒಳು ಬೆಟ್ಟದ್ ಆ ಅಡಿ, ಕಿಬ್ಬಿಯ್+++(=ಸಾನು)+++ ಒಳು ತಾನ್ ಇರುವನು.
ಒಡಲಿಗ್+++(=ಶರೀರಕ್)+++ ಏಳು ದಿವಸದಿಂದ, ತಡೆದ್ ಆಹಾರವ ಬಳಲಿ+++(=ಸುಸ್ತಾಗೆ)+++ ವ್ಯಾಘ್ರನು
ತುಡುಕಿ+++(=ಚೆಲ್ಲಾಡಿ)+++ ಎರೆದವ+++(=ಬೇಟೆಯವನ)+++ ರಭಸದಿಂದ್ +++(ಬರಲು)+++, ಒಗ್ಗ್+++(=ಸೇರಿ ಹೋಗಲು)+++ ಒಡೆದವ್ ಆಗ್ ಆ ಗೋವ್ಗಳು

ಅದರ ರಭಸಕೆ ನಿಲ್ಲನ್ ಅರಿಯದ, ಕದುಬಿಕಮ್+++(=ರಭಸವಂ)+++ ಅರಿಯ ಬಿದ್ದು ಪಶುಗಳು
ಪದರಿ+++(=ಗದರಿ)+++-ತಳ್ಳಣ-ಗೊಂಡ ಪಶುಗಳು, ಚೆದರಿ+++(=ಕೆದರಿ)+++ ಓಡಿ ಹೋದವು
ಕನ್ನೆ+++(=ಕನ್ಯೆ→ಮೊದಲ)+++-ಮಗನಾ ಪಡೆದು-ಕೊಂಡು, ತನ್ನ ಕಂದನ ನೆನೆದು-ಕೊಂಡು
ಪುಣ್ಯಕೋಟಿ ಎಂಬ ಪಶುವು, ಚೆಂದದಿ ತಾ ಬರುತಿದೆ

+++(/ಇಂದು ಎನಗ್ ಆಹಾರ ಸಂದಿತು, ಎನುತಲಾಗ ದುಷ್ಟ-ವ್ಯಾಘ್ರನು
ಬಂದು ಬಳಸಿ ಅಡ್ಡಕ್ ಅಟ್ಟಿಕೊಂಡಿತ್ ಆಗ ಪಶುವನು)+++
ಇಂದೆನಗೆ ಆಹಾರ ಸಿಕ್ಕಿತು! ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಲಿರಾಯನು
ಖೂಳ+++(=ದುಷ್ಟ)+++ ಹುಲಿಯ್ ಆ ಅಡ್ಡ-ಕಟ್ಟಿ ಬೀಳ-ಹೊಯ್ವೆನು ನಿನ್ನನ್ ಎನುತಲಿ
ಸೀಳಿ ಬಿಸುಡುವೆ ಬೇಗನ್ ಎನುತಾ ಪ್ರಳಯವ್ ಆಗಿಯೆ ಕೋಪಿಸೆ

ಒಂದು ಬಿನ್ನಹ ಹುಲಿಯ ರಾಯನೆ ಕಂದನ್ ಐದನೆ+++(=ಇದ್ದಾನೆ)+++ ದೊಡ್ಡಿಯೊಳಗೆ +++(/ಮನೆಯ ಒಳಗೆ)+++
ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ +++(/ನಾನ್ ಇಲ್ಲಿ ನಿಲ್ಲುವೆ)+++
ಹಸಿದ ವೇಳೆಗೆ ಸಿಕ್ಕಿದ್ ಒಡವೆಯ ವಶವ ಮಾಡದೆ ಬಿಡಲು, ನೀನು +++(/ಮಾಡಿಕೊಳ್ಳದ್ ಈಗ)+++
ನುಸುಳಿ ಹೋದರೆ ನೀನು ಬರುವೆಯ ಹುಸಿಯನಾಡುವೆ!+++(/ಹಸನಾಯಿತಿಗ್)+++ ಎಂದಿತು

ಮೂರು ಮೂರ್ತಿಗಳ್ ಆಣೆ ಬರುವೆನು ಸೂರ್ಯ-ಚಂದಮನ್ ಆಣೆ ಬರುವೆನು
ಧಾರುಣಿ-ದೇವಿಯ್ ಆಣೆ ಬರುವೆನು ಎಂದು ಭಾಷೆಯ ಮಾಡಿತು
ಬರುವೆನೆಂದು ಭಾಷೆ-ಮಾಡಿ ತಪ್ಪೆನ್ ಎಂದ್ ಆ ಪುಣ್ಯಕೋಟಿಯು
ಒಪ್ಪಿಸಲ್ ಒಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು

ಅಲ್ಲಿಂದ ಕಳುಹಿಸಿಕೊಂಡು ನಿಲ್ಲದೆ ದೊಡ್ಡಿಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು
ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ

ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆನೆಂದು ಬಂದೆನು ದೊಡ್ಡಿಗೆ
ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು

ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ
ಸತ್ಯವೇ ನಮ್ಮ ತಾಯಿ-ತಂದೆ ಸತ್ಯವೇ ನಮ್ಮ ಸಕಲ ಬಳಗ
ಸತ್ಯವಾಕ್ಯಕೆ ತಪ್ಪಿದರೆ ಅಚ್ಚುತ ಹರಿ ಮೆಚ್ಚನು

ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು
ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ

ಮುಂದೆ ಬಂದರೆ ಹಾಯದಿರಿ ಹಿಂದೆ ಬಂದರೆ ಒದೆಯದಿರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ
ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಕಂದನಿಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು
ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು

ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ
ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು

ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು
ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು

ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನು ಎನುತಲಿ ತನ್ನ ಮನದೊಳು ಧ್ಯಾನಿಸಿ
ಮೂರು ಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.