ಭಾನಿಗೊಂದು ಎಲ್ಲೆ

ಬಾನಿಗೊಂದು ಎಲ್ಲೆ ಎಲ್ಲಿದೆ Lyrics -
ಪ್ರೇಮದ ಕಾಣಿಕೆ

ಹೇ…..ಹೇ ಹೇ ……ಹೇ ಹೇಹೇಹೇ..ಹೇಹೇಹೇ…..ಆಹಾ ……..ಉಹೊಂ ……
ಬಾನಿಗೊಂದು ಎಲ್ಲೇ ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು…

ಬಾನಿಗೊಂದು ಎಲ್ಲೇ ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು…

ಆಸೆಯೆಂಬ ಬಿಸಿಲು-ಕುದುರೆಯ್ ಏಕೆ ಏರುವೇ,
ಮರಳು-ಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ, ವಿನೋದವಾಗಲಿ, ಅದೇನೇ ಆಗಲಿ ಅವನೇ ಕಾರಣ.

ಬಾನಿಗೊಂದು ಎಲ್ಲೇ ಎಲ್ಲಿದೆ,……

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ, ನಿರಾಸೆ ಏತಕೆ, ಅದೇನೇ ಬಂದರು, ಅವನ ಕಾಣಿಕೆ

ಬಾನಿಗೊಂದು ಎಲ್ಲೇ ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು…
ನಿಧಾನಿಸು ನಿಧಾನಿಸು…