ಭಾಷಾರಾಜಕೀಯ-ನಿಷೇಧ

Sources
  1. Dr. Janardana Hegde’s excellent clarification
  2. Clear Editorial - See: https://epaper.vishwavani.news/bng/e/bng/19-01-2022/6/add
  3. Front page : right hand bottom - https://epaper.vishwavani.news/bng/e/bng/19-01-2022/1

ಭಾಷಾ ವಿಷಯದಲ್ಲಿ ರಾಜಕೀಯ ಬೇಡ

ಸಂಪಾದಕೀಯ

ಕರ್ಣಾಟಕದಲ್ಲಿ ಕಳೆದೊಂದು ವಾರದಿಂದ ಕರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಸರಕಾರ ಹಾಗೂ ಆಡಳಿತ ವರ್ಗ ಚಿಂತಿಸುತ್ತಿದೆ. ಎರಡನೇ ಅಲೆಯ ಆಘಾತದಿಂದ ಹೊರಬಾರದ ಜನರಿಗೆ, ಮೂರನೇ ಆಲೆಯಿಂದ ಇನ್ನಷ್ಟು ಆತಂಕ ಸೃಷ್ಟಿಯಾಗಿದೆ.

ಭಾರಿ ಚರ್ಚೆಗೆ ಗ್ರಾಸವಾಗಿರುವುದು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನು ದಾನ ನೀಡಿರುವ ಬಗ್ಗೆ ಕನ್ನಡಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಹಾಗೂ ಕಾಂಗ್ರೆಸ್ ನಾಯಕರು ರಾಜ್ಯ ಸರಕಾರ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಸಹಜ ಎನ್ನುವಂತೆ ಬಿಜೆಪಿ ಹಾಗೂ ಬಲಪಂಥೀಯ ಚಿಂತಕರು ಪ್ರತಿಕ್ರಿಯೆ ನೀಡಲು ಶುರುಮಾಡಿದ್ದಾರೆ.

ಈ ಸಮಯದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಸಲಹೆ ಸೂಚನೆ ನೀಡಬೇಕಾದ ಪ್ರತಿಪಕ್ಷಗಳು ಈ ರೀತಿ ಭಾಷಾ ರಾಜಕೀಯ ಮಾಡಿಕೊಂಡು ಕೂರುವುದು ಸರಿಯಲ್ಲ. ಅಷ್ಟಕ್ಕೂ ಸಂಸ್ಕೃತ ವಿಶ್ವವಿದ್ಯಾ ಲಯ ಆರಂಭವಾಗಿರುವುದು ಈಗಲ್ಲ ಬದಲಿಗೆ 2010ರಲ್ಲಿಯೇ ಆರಂಭ ವಾಗಿರುವ ವಿ ಈಗಿರುವ ಸರಕಾರ, ಅನುದಾನ ಹಾಗೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಒದಗಿಸಿದೆ.

ದೇವಭಾಷೆಯಾಗಿರುವ ಸಂಸ್ಕೃತದ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಅದಕ್ಕಾಗಿ ಪ್ರತ್ಯೇಕ ವಿವಿ ಅಗತ್ಯವಿದೆ ಎನ್ನುವ ಕಾರಣಕ್ಕೆ ಆರಂಭಿಸಿರುವ ವಿವಿಯನ್ನು ಅಭಿವೃದ್ಧಿಗೊಳಿಸುವಲ್ಲಿ ಇರುವ ತಪ್ಪೇನು? ಕನ್ನಡ ವಿಶ್ವವಿದ್ಯಾ ಲಯಕ್ಕೆ ಅನುದಾನ ನೀಡುವ ಬದಲು ಸಂಸ್ಕೃತ ವಿವಿಗೆ ಅನುದಾನ ನೀಡ ಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಕನ್ನಡ ವಿವಿಗೆ ಅನುದಾನ ನೀಡಿ ಎಂದು ಬೇಡಿಕೆ ಸಲ್ಲಿಸುವುದು ಸು ಹಾಗೂ ಕರ್ನಾಟಕ ಸರಕಾರ ಕನ್ನಡ ವಿವಿಗೆ ಅನುದಾನ ನೀಡುವುದು ತಪ್ಪಲ್ಲ. ಆದರೆ ಸಂಸ್ಕೃತ ವಿವಿಗೆ ಇರುವ ಅನುದಾನವನ್ನು ಕಡಿತಗೊಳಿಸಿ ಎನ್ನುವುದು ಸರಿಯಲ್ಲ.

ವಾರ್ತಾಃ

ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

ಸಂಸ್ಕೃತ ವಿವಿಗೆ ವಿರೋಧಿಸುತ್ತಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪೊಸ್ಟ್ ಮಾಡುತ್ತಿದ್ದಂತೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಸಂಸ್ಕೃತ ವಿವಿಗೆ ಅನುದಾನ ನೀಡುವ ಬದಲು, ಕನ್ನಡ ವಿವಿಗೆ ನೀಡಿ ಎಂದು ಕೆಲವರು ಹೇಳಿದರೆ, ಅದಕ್ಕೆ ವಿರುದ್ಧ ಎನ್ನುವಂತೆ ಕನ್ನಡ ವಿವಿಗೆ ಅನುದಾನ ಹೆಚ್ಚುವರಿಯಾಗಿ ನೀಡುವುದರಲ್ಲಿ ಯಾರ ಆಕ್ಷೇಪವಿಲ್ಲ. ಆದರೆ ಸಂಸ್ಕೃತ ವಿವಿಗೆ ಅನುದಾನ ನೀಡುವುದಕ್ಕೆ ವಿರೋಧವಣೆ ಎನ್ನುವ ಪೊಸ್ಟ್‌ಗಳು ವೈರಲ್ ಆಗುತ್ತಿದೆ.

2010ರಲ್ಲಿಯೇ ಸ್ಥಾಪನೆಯಾಗಿರುವ ವಿವಿ

ಸಂಸ್ಕೃತ ವಿವಿ ಆರಂಭವಾಗಿರುವುದು ಇಂದು, ನಿದ್ದೆಯಲ್ಲ, ಬದಲಿಗೆ 2010ರಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರದಲ್ಲಿರುವಾಗಲೇ ಈ ವಿವಿ ಸ್ಥಾಪನೆಯಾಗಿದೆ. ಇದಾದ ಬಳಿಕ ಬಂದ ಕಾಂಗ್ರೆಸ್ ಸರಕಾರವೂ ಈ ವಿವಿಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ. ಕಳೆದ 12 ವರ್ಷದಿಂದ ಈ ವಿವಿ ಬಗ್ಗೆ ಚಕಾರ ಎತ್ತದವರು ಇದೀಗ ಬೊಬ್ಬೆ ಹಾಕುತ್ತಿರುವುದನ್ನು ನೋಡಿದರೆ, ಅದೊಂದು ರಾಜಕೀಯ ಪ್ರೇರಿತ ಟೀಕೆ ಎನ್ನುವುದು ಸ್ಪಷ್ಟವಾಗುತ್ತಿದೆ - ಎಂಬ ಮಾತು ಕೇಳಿಬರುತ್ತಿದೆ.

ದಶಕದಿಂದಿರುವ ಸಂತ ವಿವಿಗೆ ಈಗೇಕೆ ವಿರೋಧ?

  • ಬಿಜೆಪಿ ಸರಕಾರದ ಅನುಮೋದನೆ ಕಟ್ಟಡ ನಿರ್ಮಾಣ, ಜಾಗ ಮಾತ್ರ ದೇವಭಾಷೆಯಾಗಿರುವ ಸಂಸ್ಕೃತಕ್ಕೇಕೆ ಪಂಥ, ಪಕ್ಷದ ನಂಟು
  • ಸಂಸ್ಕೃತ ವಿವಿಗೆ ವಿರೋಧಿಸುತ್ತಿರುವ ಅಭಿಯಾನಕ್ಕೆ ಭಾರಿ ವಿರೋಧ

ಯಾವುದಾದರೂ ಯೋಜನೆ ಹೊಸದಾಗಿ ಆರಂಭಿಸಿದಾಗ ವಿರೋಧಿಸುವುದು ಸಾಮಾನ್ಯ. ಆದರೆ ಈಗಾಗಲೇ ವಿವಿಯೊಂದು ಆರಂಭವಾಗಿ 12 ವರ್ಷ ಕಳೆದ ಬಳಿಕ ಇದೀಗ ಕರ್ನಾಟಕದಲ್ಲಿ ‘ಸಂಸ್ಕೃತ ವಿಶ್ವವಿದ್ಯಾಲಯ’ ಬೇಡ ಎನ್ನುವ ಕೂಗು ಜೋರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕರ್ನಾಟಕ ಸಂಸ್ಕೃತ ವಿವಿ ರಾಜ್ಯದಲ್ಲಿ ಕಾರ್ಯನಿರ್ವ ಹಿಸಲು ಶುರುವಾಗಿ ದಶಕ ಕಳೆದಿದೆ. ಇದೀಗ ಬೊಮ್ಮಾಯಿ ನೇತೃತ್ವದ ಸರಕಾರ ಈ ವಿವಿಗೆ ರಾಮನಗರ ಜಿಲ್ಲೆಯಲ್ಲಿ ಸ್ವಂತ ಭೂಮಿ ಹಾಗೂ ಕಟ್ಟಡ ಕಾಮಗಾರಿಗೆ 100 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಆಚ್ಚರಿಯ ರೀತಿಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ವಿವಿಗೆ ಹೆಚ್ಚುವರಿ ಅನುದಾನ ನೀಡಿರುವುದನ್ನೇ, ಕೆಲ ಪ್ರಗತಿಪರರು, ಕನ್ನಡ ಹೋರಾಟಗಾರರು ಹಾಗೂ ಕಾಂಗ್ರೆಸ್ ನಾಯಕರು ಕನ್ನಡ ವಿರೋಧಿ ನೀತಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಸಂಸ್ಕೃತ ವಿವಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರುತ್ತಿದ್ದಂತೆ, ಕಾಂಗ್ರೆಸ್‌ನ ಕೆಲ ನಾಯಕರು, ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಅನೇಕರು, ಬಿಜೆಪಿಯಿಂದ ಸಂಸ್ಕೃತ ಹೇರಿಕೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ನಡೆದ ಕಾರ್ಯಕ್ರಮ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಹೊರತು, ನೂತನವಾಗಿ ಎಎ ಸ್ಥಾಪಿಸಿರುವುದಕ್ಕಾಗಿ ಅಲಎನ್ನುವ ಮಾತನ್ನು ಸಂಸ್ಕೃತ ವಿದ್ವಾಂಸರು ಹೇಳಿದ್ದಾರೆ.

ರಾಜಕೀಯ ನಂಟು ಸರಿಯಲ್ಲ: ದೇವಭಾಷೆ, ಭಾಷೆಗಳ ತಾಯಿ ಎಂದೇ ಕರೆಯಲ್ಪಡುವ ಸಂಸ್ಕೃತಕ್ಕೆ ಎಂಟು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಆದರೆ ಭಾಷೆಯ ಅಭಿವೃದ್ಧಿಯ ವಿಷಯವನ್ನಿಟ್ಟುಕೊಂಡು ಅದಕ್ಕೆ, ರಾಜಕೀಯ ನಂಟು ಬೆರೆಸುವುದು ಸೂಕ್ತವಲ್ಲ