ಸಂಸ್ಕೃತದ ಅನ್ನ

ಸಂಸ್ಕೃತದ ಅನ್ನ ಕಸಿದುಕೊಳ್ಳಬೇಡಿ

ಪದವಿಹಂತದಲ್ಲಿ ಕನ್ನಡಕ ಕಲಿಕೆ ಕಡ್ಡಾಯವೆಂದು ಆದೇಶ ಐಹೊರಡಿಸಿದ್ದರ ಬಗ್ಗೆ ಹಾಗೂ ಈ ಕುರಿತು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಿದ್ದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ ಕನ್ನಡ ಕಲಿಕೆಗೆ ಪ್ರಾಶಸ್ತ್ಯ ಇರಬೇಕು ನಿಜ. ಇದನ್ನು ಯಾರೂ ವಿರೋಧಿಸಬಾರದು.

ನೂತನ ಶಿಕ್ಷಣ ನೀತಿಯೂ ಭಾರತೀಯ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತದೆ. ರಾಜ್ಯ ಸರಕಾರ ನೂತನ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರುವ ಹುಮ್ಮಸ್ಸಿನಿಂದ ಆತುರದ ಹೆಜ್ಜೆಯಿಟ್ಟು ಪದವಿ ಹಂತದಲ್ಲಿ ಕನ್ನಡಕ ಕಲಿಕೆ ಕಡ್ಡಾಯವೆಂದು ಆದೇಶ ಹೊರಡಿಸಿದೆ. ಪದ ವಿಯ ಹಂತದಲ್ಲಿ ಎರಡೇ ಭಾಷೆಗಳನ್ನು ಕಲಿಯಲು ಅವಕಾಶ ವಿದೆ. ವ್ಯಾವಹಾರಿಕ ಪ್ರಯೋಜನ ಹೆಚ್ಚಿರುವುದರಿಂದ ಯಾವುದೇ ವಿದ್ಯಾರ್ಥಿಯೂ ಇಂಗ್ಲೀಷ್ ಭಾಷೆ ಬಿಡುವುದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಕನ್ನಡ ಇಂಗ್ಲಿಷ್‌ನ್ನು ಆಯುಕೊಳ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.+++(5)+++ ಇದರಿಂದ ಸಂಸ್ಕೃ ತಕ್ಕೆ ಸೇರಿದಂತೆ ವಿವಿಧ ಭಾಷೆಗಳಿಗೆ ವಿದ್ಯಾರ್ಥಿಗಳು ಇಲ್ಲದಾಗಿ 5000 ಕ್ಕೂ ಹೆಚ್ಚು ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.+++(5)+++

ಸರಕಾರದ ಈ ತರಾತುರಿ ಆದೇಶವನ್ನು ಪ್ರಶ್ನಿಸುವ ಅನಿವಾ ರ್ಯತೆ ಬಂದಿದ್ದರಿಂದ ನ್ಯಾಯಾಲಯದಲ್ಲಿ ಸಾರ್ವಜನಿಕ ಆಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಹಾಗಂತ ಸಂಸ್ಕೃತ ಬರುವ ಎಲ್ಲರೂ ಕನ್ನಡ ವಿರೋಧಿಗಳು ಎಂದರ್ಥವಲ್ಲ ಕೆಲವೇ ವಿದ್ಯಾರ್ಥಿಗಳು ಆಯ್ದುಕೊಂಡು ಓದುವ ಅವಕಾಶ ವನ್ನು ಕಿತ್ತೊಗೆದು ಸಂಸ್ಕೃತದ ಅನ್ನ ಕಸಿದುಕೊಳ್ಳಬೇಡಿ ಎಂಬು ದನ್ನು ತಿಳಿಸಿ ನ್ಯಾಯಯುತ ಬೇಡಿಕೆಗಾಗಿ ನ್ಯಾಯಾಲಯದ ಮೊರೆ ಹೊಗಲಾಗಿದೆ.