ಸಂಸ್ಕೃತ-ಶಬ್ದ-ತಿರಸ್ಕಾರ

ಅಚ್ಚ ಕನ್ನಡ; ಗೊಂದಲದ ನಡೆ ಬೇಡ

ಅಚ್ಚ ಕನ್ನಡದ ನಾಕುತೊರುಗೆ (ಕಾಲೆಂಡರ/ ದಿನದರ್ಶಿಕೆ) ಅಚ್ಚಾದ ಸುದ್ದಿಯನ್ನೋದಿದೆ. ಹೊಸ ಪ್ರಯೋಗ ಮಾಡಿರುವ ಪ್ರಯತ್ನ ಶ್ಲಾಘ್ಯಯವಾದದ್ದೇ. ಯಾವುದೇ ಹೊಸ ಪ್ರಯೋಗವನ್ನೂ ನಾವು ಸ್ವಾಗತಿಸಲೇ ಬೇಕು. ‘ಕನ್ನಡಾಭಿಮಾನವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನವಾಗಿ ಇದನ್ನು ತಯಾರಿಸಿ ಪ್ರಕಟಿಸಲಾಗಿದೆ’ ಎಂಬುದು ಇದನ್ನು ತಯಾರಿಸಿದವರ ಹೇಳಿಕೆ. ಇದರಿಂದ ಕನ್ನಡಾಭಿಮಾನ ಹೆಚ್ಚುತ್ತದೆಂದಾದರೆ, ಕನ್ನಡದ ಬಳಕೆಗೆ ಅನುಕೂಲವಾಗುತ್ತದೆಂದಾದರೆ ಖಂಡಿತ ಇದು ಸ್ವಾಗತಾರ್ಹ ಪ್ರಯೋಗವೇ ಆಗಬಹುದಾಗಿದೆ. ಆದರೆ ನನಗೆ ಸಂದೇಹವಿರುವುದು ಅಚ್ಚ ಕನ್ನಡ ಬಳಕೆಯ ವಿಚಾರದಲ್ಲಿ ತುಂಬ ದೀರ್ಘ ಕಾಲದಿಂದ ಬಳಕೆಯಲ್ಲಿರುವ, ಎಲ್ಲ ಕನ್ನಡಿಗರೂ ಸಲೀಸಾಗಿ ಬಳಸುತ್ತಿರುವ ಪದಗಳನ್ನೆಲ್ಲ ಹೊಸತೇನನ್ನೋ ತರಬೇಕೆಂಬ ಹುಮ್ಮಸ್ಸಿನಲ್ಲಿ ಬದಲಾಯಿಸ ಹೊರಟರೆ ಜನ ಇದನ್ನು ಸ್ವಾಗತಿಸುವುದೂ ಇಲ್ಲ ಓದುವುದೂ ಇಲ್ಲವೆಸುತ್ತದೆ. ಸಲಿಸಾದ ದಾರಿಯನ್ನು ಬಿಟ್ಟು ತೊಡಕಿನ ದಾರಿ ಹಿಡಿಯಿರಿ ಎಂದರೆ ಯಾರು ತಾನೇ ಅದಕ್ಕೆ ತಯಾರಾದಾರು?

ಡಿ.ಎನ್.ಶಂಕರಭಟ್ಟರು ಪ್ರವರ್ತಕರಾಗಿರುವ ಈ ಅಚ್ಚ ಕನ್ನಡ ಬಳಕೆಯ ವಿಚಾರವನ್ನೊಪುವ ಕೆಲವರು ಇಂತಹ ಪದ ಗಳನ್ನು ಬಳಸಿದ್ದನ್ನು ಕಂಡು ಸಂತೋಷಪಟ್ಟಾರು. ಆದರೆ ಬೆರಳೇಣಿಕೆಯ ಇವರನ್ನು ಬಿಟ್ಟು ಉಳಿದವರೆಲ್ಲ ಇಂತಹ ಪ್ರಯೋಗ ದಲ್ಲಿ ತೊಡಕನ್ನೇ ಕಾಣುತ್ತಾರೆ. ಈ ಕುರಿತಂತೆ ಶಂಕರ ಭಟ್ಟರು ಪದಗಳ ರಾಶಿಯನ್ನೇ ಸೃಷ್ಟಿಸಿ ಪುಸ್ತಕ ಪ್ರಕಟಿಸಿದ್ದಾರೆ. ಆ ಪದಗಳನ್ನು ಬಳಸಿ ಈ ಅಚ್ಚ ಕನ್ನಡ ಬಳಕೆಗಾಗರು ಮಾತನಾಡ ಬಲ್ಲರೇ, ಅಥವಾ ಮಾತನಾಡುತ್ತಿದ್ದಾರೆಯೇ ಎಂಬುದು ನನಗಂತೂ ತಿಳಿಯದು. ಅಚ್ಚ ಕನ್ನಡ ಬಳಸಿ ಸಿದ್ದಪಡಿಸಿದ ಕೆಲ ಲೇಖನಗಳನ್ನು ನಾನು ಹಿಂದೆ ಓದಿದ್ದೆ. ಆಗ ನನಗೆ ಅನಿಸಿದ್ದು - ಇಂತಹ ಒಂದೊಂದು ಲೇಖನದ ಜತೆಗೂ ಅಚ್ಚ ಕನ್ನಡ ಪದಗಳ ಅರ್ಥದ ಯಾದಿಯನ್ನು(=ಪದಸೂಚಿಯನ್ನು) ಕೊಟ್ಟಾಗ ಮಾತ್ರ ಕಷ್ಟಪಟ್ಟಾದರೂ ಇಂತಹ ಲೇಖನಗಳನ್ನು ಓದಬಹುದೇನೋ ಎಂದು.

ಅದಿಲ್ಲವಾದರೆ ಅಚ್ಚ ಕನ್ನಡ ಶಬ್ದಕೋಶವನ್ನು ನೀವು ಪಕದಲ್ಲಿ ಕೊಂಡಿರಬೇಕು. “ಮತ್ತೆ ಮತ್ತೆ ಆ ಪದಕೋಶವನ್ನು ನೋಡುವುದು ನಿಮಗೆ ಕಿರಿಕಿರಿಯೆನಿಸುತ್ತದೆಂದಾದರೆ ನಾವೇನೂ ಮಾಡಲಾರೆವು. ಕನ್ನಡದ ಅಭಿಮಾನವೇ ನಿಮಗಿಲ್ಲ ಎಂಬುದು ಸಾಬೀತಾಗುತ್ತದೆ, ಅಷ್ಟೇ, ಅಚ್ಚ ಕನ್ನಡ ಪದಗಳನ್ನೇ ಬಳಸಬೇಕ್” ಎಂದು ಪ್ರತಿಪಾದಿಸುವ ಕಳಕಳಿ ನನಗೆ ಅರ್ಥವಾಗುತ್ತದೆ. ತುಳಿವಿನಲ್ಲಿ ಇಂತಹ ಪದಗಳನ್ನು ಬಳಕೆಗೆ ತರುವಲ್ಲಿ ಸಾಕಷ್ಟು ಸಫಲತೆ ಕಂಡಿದ್ದಾರೆಂದೂ ಕೇಳಿಬಿ ಆದರೆ ನನಗನಿಸುತ್ತದೆ - ಬಳಕೆಯಲ್ಲಿರುವ ಪದಗಳ ಬದಲು ಅಚ್ಚ ಕನ್ನಡ ಪದಗಳ ಬಳಕೆಯನ್ನು ತರಲು ಪ್ರಯತ್ನಿಸುವುದು ಕಾಲಸಂಗತವಾಗದು ಎಂದು. ಹೊಸ ಹೊಸ ವಸ್ತುಗಳು ಇಂದು ಸಾವಿರಾರಿರುವುದರಿಂದ ಅವುಗಳ ಬಳಕೆಗೆ ಅಚ್ಚ ಕನ್ನಡ ಶಬ್ದಗಳನ್ನು ಸೃಷ್ಟಿಮಾಡಿ ಬಳಕೆಗೆ ತಂದರೆ ಮಾತ್ರ ಅಂತಹವನ್ನು ಜನ ಬಳಸಿಯಾರು. ಹಕ್ಕೊತ್ತಾಯ, ಮಿಂಚಂಚೆ ಮುಂತಾದ ವನ್ನು ಇಲ್ಲಿ ಉದಾಹರಿಸಬಹುದೇನೋ. ಅದನ್ನು ಬಿಟ್ಟು ಬಳಕೆ ಯಲ್ಲಿರುವ ಶಬ್ದಗಳನ್ನೆಲ್ಲ ಕೈ ಬಿಟ್ಟು ಅಚ್ಚ ಕನ್ನಡ ಪದಗಳನ್ನೇ ಬಳಸಬೇಕೆಂದು ಅಪೇಕ್ಷಿಪಟ್ಟರೆ ಅದು ಎಂದೂ ಜನಮನ್ನಣೆ ಪಡೆಯದೆನಿಸುತ್ತದೆ. ಮೊಬೈಲ್ ಇಂದು ಎಲ್ಲೆಡೆ ಬಳಕೆಯ ಲಿದೆ. ಅದಕ್ಕೆ ಸಂಬಂಧಿಸಿದ ನೂರಾರು ಶಬ್ದಗಳು ಇಂಗ್ಲಿಷ್ ನಲ್ಲಿವೆ. ಅದಕ್ಕೆಲ್ಲ ಕನ್ನಡ ಶಬ್ದಗಳನ್ನು ಸೃಷ್ಟಿಸಿ ಬಳಕೆಗೆ ತಂದರೆ ಕನ್ನಡ ಭಾಷೆಯ ಬೆಳವಣಿಗೆ ಖಂಡಿತ ಒಂದಿಷ್ಟು ಉಪಕಾರ ವಾದೀತು. ಅಚ್ಚ ಕನ್ನಡ ಪ್ರತಿಪಾದಕರು ಮಾಡಬೇಕಾದುದು ಇಂತಹ ಕೆಲಸಗಳನ್ನು.

ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಈ ಅಚ್ಚ ಕನ್ನಡ ಬಳಕೆಯ ಹಿನ್ನೆಲೆಯಲ್ಲಿ ಗುಪ್ತವಾಗಿ ಹರಿಯುತ್ತಿರುವುದು ಸಂಸ್ಕೃತ ದ್ವೇಷ ಮಾತ್ರ.(5) ಸಂಸ್ಕೃತ ಭಾಷೆಯ ದ್ವೇಷದಿಂದ ಹುಟ್ಟಿರುವ ಈ ವಿಚಾರಧಾರೆಯನ್ನು ನಾವು ವಿಧಾಯಕ ನಡೆಯೆಂದು ಹೇಗೆ ತಾನೇ ಭಾವಿಸೋಣ? ಯಾವುದೇವಿ ಚಾರಧಾರೆಯೂ ಪ್ರೀತಿಯ ಒಡಲಿನಿಂದ ಹುಟ್ಟಿ ಬಂದುದಾದರೆ ಅದಕ್ಕೆ ಜನಮನ್ನಣೆ ಖಂಡಿತ ಸಿಗುತ್ತದೆ. ಹಿಂದೆ ಕನ್ನಡ ಕಟ್ಟಿ ಬೆಳೆಸಿದವರೆಲ್ಲ ಈ ಹಿನ್ನೆಲೆಯುಳ್ಳವರೇ ಆಗಿದ್ದರು. ಅದಕ್ಕೇ ಅವರ ಕೆಲಸ ಹಾಗೂ ಮಾತುಗಳನ್ನು ಕನ್ನಡ ಜನತೆ ಒಪ್ಪಿತು. ಆದರೆ ಈ ಅಚ್ಚ ಕನ್ನಡ ವಿಚಾರಧಾರೆಯವರ ಹಿನ್ನೆಲೆಯಲ್ಲಿ ಕನ್ನಡ ಪ್ರೀತಿಗಿಂತ ಹೆಚ್ಚಾಗಿ ಸಂಸ್ಕೃತ ದ್ವೇಷವೇ ಕಾಣುತ್ತಿರುವುದರಿಂದ ಇದು ಜನ ಮನ್ನಣೆ ಪಡೆಯಲಾರದು ಎಂದೆನಿಸುತ್ತದೆ. ಇಂದು ಕನ್ನಡದ ಎಲ್ಲೆಯನ್ನು ಪ್ರತಿಪಾದಿಸುವ ಹಲವರ ಚಿಂತನೆಯಲ್ಲಿ ಬೇರೆ ಬೇರೆ ‘ದ್ವೇಷ’ಗಳೇ ಎದ್ದು ತೋರುತ್ತಿರುವುದರಿಂದ ನಾವಿಂದು ಕನ್ನಡದ ಏಳೆಗೆ ಪ್ರಯತ್ನಿಸುತ್ತಿದ್ದೇವೆಯೋ ಅಥವಾ * ಗೊಂದಲ ಸೃಷ್ಟಿಸುತ್ತಿದ್ದೇವೆಯೋ ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ.

ಬಳಕೆಯಲ್ಲಿರುವ ಪದಗಳನ್ನು ಕಿತ್ತೊಗೆದು ಹೊಸ ಪದಗಳನ್ನು ಊರಲು ಪ್ರಯತ್ನಿಸುವುದು ಪೂರಕ ನಡೆಯಲ್ಲ, ಇಂದಿನ ಅವಶ್ಯಕತೆಗೆ ಬೇಕಾದ ಪದಗಳನ್ನು ಅಚ್ಚ ಕನ್ನಡದಲ್ಲಿ ಸೃಷ್ಟಿಸುವುದು ಇಂದು ಆಗಬೇಕಾದಕೆಲಸ.

-ಜನಾರ್ದನ ಹೆಗಡೆ, ಬೆಂಗಳೂರು