विश्वास-प्रस्तुतिः
विक्रमाक्रान्तभुवने समे षाड्गुण्यशालिनि ।
भजति स्थिरतां लक्ष्मीः कस्मिंश्चित् पुरुषोत्तमे ॥ ९-१ ॥
मूलम्
विक्रमाक्रान्तभुवने समे षाड्गुण्यशालिनि ।
भजति स्थिरतां लक्ष्मीः कस्मिंश्चित् पुरुषोत्तमे ॥ ९-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಈ ಪದ್ಧತಿಯು ಮುಖ್ಯವಾಗಿ ರಾಜನೀತಿಗೇ ಸಂಬಂಧಿಸಿದೆ.
(೧) ತ್ರಿವಿಕ್ರಮನ ಅವತಾರದಲ್ಲಿ ವಿಶ್ವವನ್ನೇ ಆಕ್ರಮಿಸಿದ, ಸರ್ವಭೂತಗಳಲ್ಲಿಯೂ ಒಂದೇ ಸಮನಾದ ಪ್ರವೃತ್ತಿಯುಳ್ಳ, ಜ್ಞಾನ-ಶಕ್ತಿ-ಬಲ-ಐಶ್ವರ್ಯ-ವೀರ್ಯ-ತೇಜಸ್ ಇವೇ ಆರು ಗುಣಗಳಿಂದ ಮನೋಹರನಾದ, ಅನಿರ್ವಚನೀಯನಾದ ಪುರುಷೋತ್ತಮನಲ್ಲಿ ಲಕ್ಷ್ಮೀದೇವಿಯು ಸ್ಥಿರವಾಗಿ ನೆಲೆಸುತ್ತಾಳೆ. (೨) ಪರಾಕ್ರಮದಿಂದ ಜಗತ್ತನ್ನೇ ತನ್ನ ವಶಮಾಡಿಕ್ಕೊಂಡಿರುವ, ನಿಷ್ಪಕ್ಷಪಾತಿಯಾದ, ಸಂಧಿ-ವಿಗ್ರಹ-ಯಾನ-ಆಸನ-ದ್ವೈಧೀಭಾವ-ಸಮಾಶ್ರಯವೆಂಬ ಆರು ಗುಣಗಳಿಂದ ಒಪ್ಪುವ ಶ್ರೇಷ್ಠಪುರುಷನೊಬ್ಬನಲ್ಲಿ ಐಶ್ವರ್ಯವು ಸ್ಥಿರವಾಗಿ ನಿಲ್ಲುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಅಸಂಖ್ಯೇಯಗುಣನಿಧಿಯಾದ ಪರಮಾತ್ಮನಲ್ಲಿ ಈ ಆರು ಗುಣಗಳು ವಿಶೇಷವಾದುವು. ಪರಮಾತ್ಮನಿಗೆ ಸಂಬಂಧಿಸಿ ಈ ಆರು ಗುಣಗಳನ್ನು ಬಲ್ಲವರು ಈ ರೀತಿ ವಿವರಿಸುತ್ತಾರೆ: ಸಕಲವನ್ನೂ ಏಕಕಾಲದಲ್ಲಿ ಸಾಕ್ಷಾತ್ಕರಿಸುವ ಶಕ್ತಿಯು ಜ್ಞಾನ; ಇತರರಿಂದ ಮಾಡಲು ಅಶಕ್ಯವಾದವುಗಳನ್ನು ಮಾಡುವುದು ಶಕ್ತಿ; ಶ್ರಮವಿಲ್ಲದೆ ಸಮಸ್ತವನ್ನೂ ಧರಿಸುವ ಸಾಮರ್ಥ್ಯವು ಬಲ; ತನ್ನ ಸಂಕಲ್ಪಕ್ಕೆ ಪ್ರತಿಬಂಧವಿಲ್ಲದಂತೆ ಎಲ್ಲವನ್ನೂ ನಿಯಮಿಸುವುದು ಐಶ್ವರ್ಯ; ಸ್ವಲ್ಪವೂ ವಿಕಾರವಿಲ್ಲದೆ ಇರುವುದು ವೀರ್ಯ; ಯಾರಿಗೂ ಸ್ವಾಧೀನನಾಗದೆ ಯಾವ ಸಹಕಾರಿಯ ಅವಶ್ಯಕತೆಯಿಲ್ಲದೆ ಇರುವುದು ತೇಜಸ್. ಶ್ರೇಷ್ಠ ರಾಜನಲ್ಲಿ ಇರಬೇಕಾದ ಗುಣಗಳೂ ಆರು. ತನ್ನ ವಿಜಯಕ್ಕೆ ಸಂದರ್ಭವು ಅನುಕೂಲವಾಗಿಲ್ಲದೆ ಇದ್ದರೆ ಎದುರಾಳಿಯೊಡನೆ ಗೆಳೆತನ ಬೆಳೆಸುವುದು ಸಂಧಿ; ತನಗೆ ಅನುಕೂಲವೆಂದೆನಿಸಿದಾಗ ಯುದ್ಧಮಾಡುವುದು ವಿಗ್ರಹ; ಸಮಯವನ್ನರಿತು ಸರಿಯಾದ ವಿಧದಲ್ಲಿ ಯುದ್ಧಕ್ಕೆ ಹೊರಡುವುದು ಯಾನ; ಅಂತಿಮವಿಜಯವನ್ನು ಸಾಧಿಸುವುದಕ್ಕಾಗಿ ಅನೇಕಕಾರಣಗಳಿಂದ ಯುದ್ಧಮಾಡದೇ ಇರುವುದು ಆಸನ; ಎದುರಾಳಿಯ ಸೈನ್ಯದಲ್ಲಿ ಬಿರುಕು ಬರುವಂತೆ ಮಾಡಿ ಲಾಭ ಪಡೆಯುವುದು ದ್ವೈಧೀಭಾವ; ಮತ್ತೊಬ್ಬರಲ್ಲಿ ಆಶ್ರಯ ಪಡೆಯುವುದು ಸಮಾಶ್ರಯ.
विश्वास-प्रस्तुतिः
पार्थिवानां पदार्थानां स्वभूत्या चक्रवर्तिनाम् ।
जनयत्यचिराद्भेदं छिद्रेण महताऽन्वयः ॥ ९-२ ॥
मूलम्
पार्थिवानां पदार्थानां स्वभूत्या चक्रवर्तिनाम् ।
जनयत्यचिराद्भेदं छिद्रेण महताऽन्वयः ॥ ९-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಪೃಥ್ವಿಗೆ ಸಂಬಂಧಿಸಿದ ಅಂದರೆ ಮಣ್ಣಿನ ರೂಪದ, ಸಹಜವಾಗಿಯೇ (ಕುಂಬಾರನ) ಚಕ್ರದಲ್ಲಿರುವ ವಸ್ತುಗಳಲ್ಲಿ ದೊಡ್ಡ ರಂಧ್ರವೊಂದು ಉಂಟಾದರೆ ಆ ರಂಧ್ರವು ಆ ವಸ್ತುಗಳು ಸೀಳಿಹೋಗುವುದಕ್ಕೆ ಕಾರಣವಾಗುತ್ತದೆ. (೨) ತಮ್ಮೊಳಗೆ ಶ್ರೇಷ್ಠತೆಯನ್ನು ಅಪೇಕ್ಷಿಸುತ್ತಿರುವ, ತಮ್ಮ ಐಶ್ವರ್ಯದಿಂದ ಚಕ್ರವರ್ತಿಗಳಾಗಿರುವ ರಾಜರುಗಳಲ್ಲಿ ದೊಡ್ಡ ದೌರ್ಬಲ್ಯವು ತಲೆದೋರಲು, ಅದು ಅವರುಗಳಲ್ಲಿ ಕಲಹವನ್ನು ಉಂಟುಮಾಡುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟಪದಗಳು: ಪಾರ್ಥಿವ= (ಪೃಥ್ವಿಗೆ ಸಂಬಂಧಿಸಿದ, ರಾಜ); ಪದಾರ್ಥಾನಾಮ್= (ವಸ್ತುಗಳ, ಪದವಿಯನ್ನು ಅಪೇಕ್ಷಿಸುವ); ಚಕ್ರವರ್ತೀ= (ಕುಂಬಾರನ ಚಕ್ರದಮೇಲಿರುವ, ಚಕ್ರವರ್ತಿ); ಛಿದ್ರ= (ರಂಧ್ರ, ದೌರ್ಬಲ್ಯ). ಕುಂಬಾರನು ಮಡಕೆಯನ್ನು ಮಾಡುವಾಗ ಚಕ್ರದ ಮೇಲೆ ಇಟ್ಟಿರುವ ಮಣ್ಣಿನ ಮುದ್ದೆಯಲ್ಲಿ ಒಂದು ದೊಡ್ಡ ಬಿರುಕು ಉಂಟಾದರೆ ಆಗ ಆ ಮಡಕೆಯೇ ಒಡೆದು ಹೋಗುವ ಸಂಭವವಿದೆ. ರಾಜರುಗಳಲ್ಲಿ ಒಂದು ದೊಡ್ಡ ದೌರ್ಬಲ್ಯವೂ ಕೂಡ ಅವರುಗಳ ಮಧ್ಯೆ ಭಿನ್ನಾಭಿಪ್ರಾಯವನ್ನು ಬರಿಸಿ ಅವರಲ್ಲಿ ಕಲಹವನ್ನು ಉಂಟುಮಾಡುತ್ತದೆ. ಪಾಂಡವ ಕೌರವರಲ್ಲಿ ಪಗಡೆಯ ದೌರ್ಬಲ್ಯವೇ ಕಲಹಕ್ಕೆ ಎಡೆಕೊಡಲಿಲ್ಲವೇ?
विश्वास-प्रस्तुतिः
सदसन्तौ विचिन्वानः समवर्ती शमप्रदः ।
अपि दंडधरो नित्यं लोकपालः स दक्षिणः ॥ ९-३ ॥
मूलम्
सदसन्तौ विचिन्वानः समवर्ती शमप्रदः ।
अपि दंडधरो नित्यं लोकपालः स दक्षिणः ॥ ९-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಸಜ್ಜನರನ್ನೂ ದುರ್ಜನರನ್ನೂ ಆರಿಸುತ್ತಾ ಅವರಲ್ಲಿ ಸಮನಾಗಿ ನಡೆದುಕ್ಕೊಂಡು ಅವರಿಗೆ ನಿವೃತ್ತಿಯನ್ನು (ಶಾನ್ತಿಯನ್ನು) ನೀಡುವ ದಕ್ಷಿಣದಿಕ್ಪಾಲಕನಾದ ಯಮಧರ್ಮರಾಜನು (ಲೋಕವನ್ನು ಆಳುವ ರಾಜನು) ಶಿಕ್ಷೆಯನ್ನು ಕೊಡುವವನಾದರೂ ಯಾವಾಗಲೂ ಸರಳಸ್ವಭಾವದವನು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸಮವರ್ತೀ, ದಂಡಧರಃ ಮತ್ತು ಲೋಕಪಾಲಃ ಇವು ಮುರೂ ಯಮನೆಂಬ ಅರ್ಥದಲ್ಲಿ ಪರ್ಯಾಯಪದಗಳು. ಇವು ಧರ್ಮದಿಂದ ಆಳುವ ರಾಜನಿಗೆ ವಿಶೇಷಣಗಳು.
विश्वास-प्रस्तुतिः
यमेनोपक्रमेऽजानन् विश्वाधीशं व्यवस्थितं ।
सामादिषु च तत्त्वज्ञः स न कः सिद्धिमर्हति ॥ ९-४ ॥
मूलम्
यमेनोपक्रमेऽजानन् विश्वाधीशं व्यवस्थितं ।
सामादिषु च तत्त्वज्ञः स न कः सिद्धिमर्हति ॥ ९-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(ಪ್ರಜೆಗಳು) ಯಾರನ್ನು ಪಾಪಕಾರ್ಯಗಳನ್ನು ಇಳಿಸುವುದರಲ್ಲಿ ಕಂಕಣಬದ್ಧನನ್ನಾಗಿಯೂ ವಿಶ್ವಕ್ಕೇ ಅಧಿಪತಿಯನ್ನಾಗಿಯೂ ಅರಿತರೋ ಸಾಮ-ದಾನ-ಭೇದ-ದಂಡ ಉಪಾಯಗಳಲ್ಲಿ ಪರಿಣತನಾಗಿರುವ ಅಂತಹ ರಾಜನು ಯಾವನು ತಾನೆ ಸಫಲತೆಯನ್ನು ಪಡೆಯುವುದಿಲ್ಲ?
ಶ್ರೀನಿವಾಸಮೂರ್ತಿ - ಟಿಪ್ಪನೀ
ವ್ಯಾಖ್ಯಾನಕಾರರು ಈ ಶ್ಲೋಕಕ್ಕೆ ಇನ್ನೂ ಎರಡು ಅರ್ಥಗಳನ್ನು ಕೊಟ್ಟಿದ್ದಾರೆ. ಒಂದು “ಸನಕಃ” ಎಂದು ಒಂದೇ ಪದವನ್ನಾಗಿ ಗಣಿಸಿ ಹಂಸಾವತಾರಕ್ಕೆ ಸಂಬಂಧಿಸಿದಂತೆ, ಇನ್ನೊಂದು “ಸಾಮಾದಿಷು” ಎಂಬಲ್ಲಿ ಸಾಮವೇ ಮೊದಲಾದ ವೇದಗಳಲ್ಲಿ ಎಂಬ ಅರ್ಥವನ್ನು ಮಾಡಿ ವೇದಮಂತ್ರಗಳ ಅಧಿಷ್ಠಾತೃ ದೇವತೆಗಳಿಗೆ ಅನ್ವಯಿಸಿದಂತೆ.
विश्वास-प्रस्तुतिः
तमिस्राचारिणां रोद्धा विजिताक्षो मरुत्प्रियः ।
कपिकृत्यैरपि स्थाने भाति वेलातिलङ्घिभिः ॥ ९-५ ॥
मूलम्
तमिस्राचारिणां रोद्धा विजिताक्षो मरुत्प्रियः ।
कपिकृत्यैरपि स्थाने भाति वेलातिलङ्घिभिः ॥ ९-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ನಿಶಾಚರರಾದ ರಾಕ್ಷಸರನ್ನು ತಡೆದ, ಅಕ್ಷಕುಮಾರನನ್ನು ಕೊಂದ, ವಾಯುದೇವನಿಗೆ ಪ್ರಿಯನಾದ (ಮಾರುತಿಯು) ಎಲ್ಲೆಮೀರಿದ ಕಪಿಕೃತ್ಯಗಳನ್ನೆಸಗಿದರೂ (ತನ್ನ ಯಶಸ್ಸಿನಿಂದ) ಯುಕ್ತವಾಗಿಯೇ ಶೋಭಿಸುತ್ತಾನೆ. (೨) ಕತ್ತಲಿನಲ್ಲಿ ಸಂಚರಿಸುವ (ಶತ್ರುಪಕ್ಷದ ಗೂಢಚಾರರನ್ನು) ತಡೆಯುವ, ಜಿತೇಂದ್ರಿಯನಾದ, (ಯಜ್ಞಯಾಗಾದಿಗಳನ್ನು ಮಾಡಿ) ದೇವತೆಗಳಿಗೆ ಪ್ರಿಯನಾದ ರಾಜನು ತನ್ನ ದೇಶದ ಎಲ್ಲೆಯನ್ನು ದಾಟಿ ಸಾಹಸಗಳನ್ನು ಮಾಡಿದರೂ ಕೂಡ ನ್ಯಾಯವಾಗಿಯೇ ತೇಜಸ್ವಿಯಾಗಿರುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ತಮಿಸ್ರಾಚಾರಿನ್= (ರಾಕ್ಷಸ, ಗೂಢಚಾರ); ವಿಜಿತಾಕ್ಷಃ= (ಅಕ್ಷ ಕುಮಾರನನ್ನು ಕೊಂದವನು, ಜಿತೇಂದ್ರಿಯ); ಮರುತ್= (ವಾಯು, ದೇವತೆ); ಕಪಿಕೃತ್ಯ= (ಕಪಿಯ ಸ್ವಾಭಾವಿಕ ಕೃತ್ಯಗಳು, ಆನೆಯಿಂದ ಸಾಧ್ಯವಾದ ಕೃತ್ಯಗಳು). ಇಲ್ಲಿ ರಾಮಾಯಣದ ಕಥೆಯಲ್ಲಿ ಬರುವ ಮಾರುತಿಯ ಸಾಹಸಗಳು ಪ್ರಸ್ತುತ. ಕಪಿಗಳು ಮರದಿಂದ ಮರಕ್ಕೆ ಹಾರುತ್ತವೆ. ಮಾರುತಿಯಾದರೋ ಸಮುದ್ರವನ್ನೇ ಹಾರಿಬಿಟ್ಟ. ಅದು ಎಲ್ಲೆ ಮೀರಿದ ಕಪಿಕೃತ್ಯವಲ್ಲವೇ? “ಅಪಿ” ಎಂಬ ಶಬ್ದದ ಪ್ರಯೋಗದಿಂದ ಕಪಿಕೃತ್ಯಗಳನ್ನು ಮಾಡಿದರೂ ಎಂಬ ವಿರೋಧವು ತೋರಿಬರುತ್ತದೆ. ಸರಿಯಾಗಿ ಅರ್ಥವಾದ ಮೇಲೆ ಆ ತೋರಿಕೆ ಮಾಯವಾಗುತ್ತದೆ.
विश्वास-प्रस्तुतिः
अङ्गयुक्तः कृतास्त्रश्च कुर्वन् सम्यक् पुरोविधिम् ।
विजानन् सिद्धसाध्यादीन् वैरिणोऽस्त्रैर्न पीड्यते ॥ ९-६ ॥
मूलम्
अङ्गयुक्तः कृतास्त्रश्च कुर्वन् सम्यक् पुरोविधिम् ।
विजानन् सिद्धसाध्यादीन् वैरिणोऽस्त्रैर्न पीड्यते ॥ ९-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಅಂಗನ್ಯಾಸದಿಂದ ಕೂಡಿ, ಅಸ್ತ್ರಮಂತ್ರದಿಂದ ದಿಗ್ಬಂಧನ ಮಾಡಿ, ಸಿದ್ಧ-ಸಾಧ್ಯ ಇವೆರಡನ್ನೂ ತಿಳಿದುಕ್ಕೊಂಡು ಮಂತ್ರಸಿದ್ಧಿಗಾಗಿ ಸಾಧನೆಯನ್ನು ಮಾಡಿದರೆ ಶತ್ರುಗಳ ಮಂತ್ರಗಳಿಂದ ತೊಂದರೆಗೊಳಗಾಗುವುದಿಲ್ಲ. (೨) ಸಪ್ತಾಂಗಯುಕ್ತನಾಗಿ ಅಸ್ತ್ರಶಾಸ್ತ್ರಜ್ಞನಾಗಿ ಯಾವುದು ಸಿದ್ಧ, ಯಾವುದು ಸಾಧ್ಯ ಎಂಬುದನ್ನು ಚೆನ್ನಾಗಿ ಅರಿತು, ಮುಂದಿನ ಆಗು ಹೋಗುಗಳನ್ನು ಪರಾಮರ್ಶಿಸಿ ಕೆಲಸ ಮಾಡುವ ರಾಜನು ಶತ್ರುಗಳ ಅಸ್ತ್ರಗಳಿಂದ ಬಾಧಿತನಾಗುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಇಲ್ಲಿ ಮೊದಲನೆಯ ಅರ್ಥ ಮಂತ್ರಜಪಶಾಸ್ತ್ರಕ್ಕೆ ಸಂಬಂಧಿಸಿದೆ. ಅಂಗನ್ಯಾಸ, ಅಸ್ತ್ರ ದಿಗ್ಬಂಧನ, ಸಿದ್ಧ-ಸಾಧ್ಯಗಳು ಆ ಶಾಸ್ತ್ರಕ್ಕೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳು. ಪ್ರಸ್ತುತವಾದ ಎರಡನೆಯ ಅರ್ಥದಲ್ಲಿ ರಾಜ್ಯದ ಸಪ್ತಾಂಗಗಳು ಹೀಗಿವೆ: ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ ಮತ್ತು ಬಲ.
विश्वास-प्रस्तुतिः
कामाधिकरणग्राह्यमूलादिबलशालिनः ।
अहीनेऽपि नरेन्द्रस्य शक्तयः सिद्धिहेतवः ॥ ९-७ ॥
मूलम्
कामाधिकरणग्राह्यमूलादिबलशालिनः ।
अहीनेऽपि नरेन्द्रस्य शक्तयः सिद्धिहेतवः ॥ ९-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಸ್ವೇಚ್ಛೆಯಿಂದ ಆರಿಸಿಕ್ಕೊಂಡ ಸ್ಥಾನಗಳಲ್ಲಿ ದೊರಕುವ ಮೂಲಿಕೆಗಳೇ ಮೊದಲಾದ ಬಲಗಳುಳ್ಳ ವಿಷವೈದ್ಯನ ಶಕ್ತಿಗಳು ಸರ್ಪರಾಜನಲ್ಲಿಯೂ ಫಲಕಾರಿಯಾಗುತ್ತವೆ. (೨) ಯುದ್ಧಕ್ಕೆ ಬೇಕಾದ ಮೂಲವೇ ಮುಂತಾದ ಬಲಗಳನ್ನು ಸಾಕಷ್ಟು ಹೊಂದಿದ ರಾಜನ ಶಕ್ತಿಗಳು ತನಗಿಂತ ಅಶಕ್ತರಲ್ಲದವರಲ್ಲಿಯೂ ಕೂಡ ಫಲಕಾರಿಯಾಗುತ್ತವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: (ಕಾಮಾಧಿಕರಣ+ಗ್ರಾಹ್ಯ, ಕಾಮಾಧಿಕ+ರಣಗ್ರಾಹ್ಯ); ಮೂಲ= (ಮೂಲಿಕೆ, ಮೂಲಬಲ), ಅಹೀನ= (ಅಹಿ+ಇನ, ಅ+ಹೀನ); ನರೇಂದ್ರ= (ವಿಷವೈದ್ಯ, ರಾಜ). ವಿಷವೈದ್ಯನಿಗೆ ಮಣಿ, ಮಂತ್ರ ಮತ್ತು ಮೂಲಿಕೆ ಇವು ಬಲಗಳು. ರಾಜನಿಗೆ ಇರಬೇಕಾದ ಶಕ್ತಿಗಳು ಮೂರು. ಕೋಶ ಮತ್ತು ದಂಡಗಳಿಂದ ಉಂಟಾಗುವ ಶಕ್ತಿ ಪ್ರಭು ಶಕ್ತಿ; ವಿಕ್ರಮದಿಂದ ಉಂಟಾಗುವುದು ಉತ್ಸಾಹ ಶಕ್ತಿ; ಸಂಧಿ, ವಿಗ್ರಹ ಮುಂತಾದ ಷಡ್ಗುಣಗಳನ್ನು ಮತ್ತು ಸಾಮ-ದಾನ-ಭೇದ-ದಂಡ ಉಪಾಯಗಳನ್ನು ರಕ್ಷಿಸಿಕ್ಕೊಂಡು ಬರುವುದು ಮಂತ್ರ ಶಕ್ತಿ.
विश्वास-प्रस्तुतिः
प्रद्युम्नो ह्यनिरुद्धात्मा स्वनाम्ना मानसोदयः ।
वीरः कश्चिद्वितन्वीत स्त्रीप्रायमखिलं जगत् ॥ ९-८ ॥
मूलम्
प्रद्युम्नो ह्यनिरुद्धात्मा स्वनाम्ना मानसोदयः ।
वीरः कश्चिद्वितन्वीत स्त्रीप्रायमखिलं जगत् ॥ ९-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಅನಿರುದ್ಧನಲ್ಲೇ ನೆಟ್ಟ ಮನಸ್ಸುಳ್ಳ ಮನೋಭವನಾದ ಪ್ರದ್ಯುಮ್ನನೆಂಬ ವೀರನೊಬ್ಬನು ಜಗತ್ತೆಲ್ಲವನ್ನೂ ಸ್ತ್ರೀಯರನ್ನಾಗಿ ಮಾಡುತ್ತಾನೆ. (೨) ಹಣವಂತನಾದ, ತಡೆಯಿಲ್ಲದ ಯತ್ನಗಳುಳ್ಳ, ತನ್ನ ಕೀರ್ತಿ्ಯಿಂದ ಸಂದ ಗೌರವದಿಂದ ವೃದ್ಧಿಹೊಂದಿದ ವೀರನೊಬ್ಬನು ಜಗತ್ತೆಲ್ಲವನ್ನೂ ಸ್ತ್ರೀಯರನ್ನೆಂಬಂತೆ ಮಾಡಿಯಾನು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಪ್ರದ್ಯುಮ್ನ= (ಧನಿಕ, ಪ್ರದ್ಯುಮ್ನ); (ಮಾನಸ+ಉದಯಃ, ಮಾನ+ಸೋದಯಃ). ಕೃಷ್ಣನ ಮಗನಾದ ಪ್ರದ್ಯುಮ್ನನು ಅನಿರುದ್ಧನ ತಂದೆಯಾದುದರಿಂದ “ಅನಿರುದ್ಧಾತ್ಮಾ”. “ಆತ್ಮಾ ವೈ ಪುತ್ರ ನಾಮಾಸಿ” ಎಂಬಂತೆ ಎಂದು ಬೇಕಾದರೂ ಹೇಳಬಹುದು. ಅವನೇ ಮನ್ಮಥನಾದುದರಿಂದ “ಮಾನಸೋದಯ”. ಮನ್ಮಥನನ್ನು ನೋಡಿದರೆ ಹೆಂಗಸರು ಆಶಿಸುವುದು ಹೋಗಲಿ ಗಂಡಸರೂ ಕೂಡ ಹೆಂಗಸರಾಗಿ ಅವನಿಗೆ ಆಶಿಸುತ್ತಾರೆ ! ರಾಜನ ಪರವಾದ ಅರ್ಥದಲ್ಲಿ ಎಲ್ಲರನ್ನೂ ತನ್ನ ಪರಾಕ್ರಮದಿಂದ ಸೋಲಿಸುವುದರಿಂದ ಹೆಂಗಸರಂತನ್ನಾಗಿ ಮಾಡುತ್ತಾನೆ.
विश्वास-प्रस्तुतिः
प्रयुक्तं मंत्रिभिः काले भक्तिभेदपुरस्कृतम् ।
अपि ज्वलनवक्त्राणां साम संवननं परम् ॥ ९-९ ॥
मूलम्
प्रयुक्तं मंत्रिभिः काले भक्तिभेदपुरस्कृतम् ।
अपि ज्वलनवक्त्राणां साम संवननं परम् ॥ ९-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಮಂತ್ರವನ್ನು ಚೆನ್ನಾಗಿ ತಿಳಿದವರಿಂದ ಸಾಮಗಾಯನದ ಭಾಗಗಳಾದ “ಭಕ್ತಿ” ವೈವಿಧ್ಯದಿಂದ ಕೂಡಿ ಸಕಾಲದಲ್ಲಿ ಉಚ್ಚರಿತವಾದ ಸಾಮವೇದವು ಅಗ್ನಿಮುಖೇನ ತೃಪ್ತರಾಗುವ ದೇವತೆಗಳನ್ನು ವಶಪಡಿಸಿಕ್ಕೊಳ್ಳುತ್ತದೆ. (೨) ಮಂತ್ರಿಗಳಿಂದ ಸಕಾಲದಲ್ಲಿ ರಚನೆಯವೈವಿಧ್ಯದಿಂದ ಕೂಡಿ ಪ್ರಯುಕ್ತವಾದ ಸಾಮೋಪಾಯವು ಬೆಂಕಿಯನ್ನು ಕಾರುವ ಶತ್ರುಗಳನ್ನೂ ಕೂಡ ಸುಲಭವಾಗಿ ವಶಪಡಿಸಿಕ್ಕೊಳ್ಳುತ್ತದೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಸಾಮವೇದಗಾಯನದಲ್ಲಿ ಹಿಂಕಾರ, ಪ್ರಸ್ತಾವ, ಉದ್ಗೀಥ, ಪ್ರತಿಹಾರ ಮತ್ತು ನಿಧನ ಎಂಬ ಐದು “ಭಕ್ತಿ"ಗಳು ಇವೆ ಎಂದು ವ್ಯಾಖ್ಯಾನದಲ್ಲಿ ಕೊಟ್ಟಿದೆ. ವೇದಪಾರಙ್ಗತರಿಗೆ ವೇದ್ಯವಾಗಿರಬಹುದಾದ ವಿಷಯ ಇದು.
विश्वास-प्रस्तुतिः
विधौ लब्धधृतिर्नीत्या विनतानन्दनो द्विजः ।
नियम्यमानैः स्थानेषु भुजङ्गैरपि भूष्यते ॥ ९-१० ॥
मूलम्
विधौ लब्धधृतिर्नीत्या विनतानन्दनो द्विजः ।
नियम्यमानैः स्थानेषु भुजङ्गैरपि भूष्यते ॥ ९-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ವಿಷ್ಣುವನ್ನು ಒಯ್ಯುವುದರಿಂದ ಸಂದ ಅವನಲ್ಲಿನ ಪ್ರೇಮಾತಿಶಯದಿಂದ ಕೂಡಿದ, ವಿನತೆಯ ಮಗನಾದ ಗರುಡನು (ತನ್ನ ದೇಹದಮೇಲೆ) ಅಲ್ಲಲ್ಲಿ ಧರಿಸಿಕ್ಕೊಂಡಿರುವ ಹಾವುಗಳಿಂದಲೂ ಭೂಷಿತನಾಗುತ್ತಾನೆ (೨) ವಿಧಿಸಬೇಕಾದ ಕಾರ್ಯಗಳಲ್ಲಿ ನ್ಯಾಯವಾದ ವರ್ತನೆಯಿಂದ ಬಂದ ಧೈರ್ಯವುಳ್ಳವನಾದ, ನಮ್ರರಾದವರನ್ನು ಆನಂದಗೊಳಿಸುವ, ಶಾಸ್ತ್ರಪಾರಙ್ಗತನಾದ ರಾಜನು ಅವರವರಿಗೆ ತಕ್ಕ ಸ್ಥಾನಗಳಲ್ಲಿ ನಿಯುಕ್ತರಾದ ಕಪಟಜನರಿಂದಲೂ ಕೂಡ ಭೂಷಿತನಾಗುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ವಿಧೌ= (ವಿಷ್ಣುವಿನಲ್ಲಿ, ವಿಧಿಸುವ ಕಾರ್ಯಗಳಲ್ಲಿ); ನೀತಿಃ= (ಒಯ್ಯುವುದು, ನ್ಯಾಯವಾದ ವರ್ತನೆ); ದ್ವಿಜಃ= (ಶಾಸ್ತ್ರವೇತ್ತಾ, ಹಕ್ಕಿ); ಭುಜಙ್ಗಃ= (ಸರ್ಪ, ವಿಟ ಅರ್ಥಾತ್ ಕಪಟಿ ).
विश्वास-प्रस्तुतिः
नीतिः सती त्वयि परं परपुष्ट धातुः
कण्ठे ययैव तव पञ्चममुच्चकार ।
पुत्रीकृतोऽपि बलिपुष्टकुलैर्यतस्त्वम्
दूरीकृतोऽसि परुषैस्तत एव काले ॥ ९-११ ॥
मूलम्
नीतिः सती त्वयि परं परपुष्ट धातुः
कण्ठे ययैव तव पञ्चममुच्चकार ।
पुत्रीकृतोऽपि बलिपुष्टकुलैर्यतस्त्वम्
दूरीकृतोऽसि परुषैस्तत एव काले ॥ ९-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಎಲೈ ಕೋಗಿಲೆ, ಬ್ರಹ್ಮನು ನಿನ್ನ ಕೊರಳಿನಲ್ಲಿ ಪಂಚಮಸ್ವರವನ್ನು ಸೃಷ್ಟಿಸಿದುದು ನ್ಯಾಯವೇ ಸರಿ. ಬಲಿಕರ್ಮದಲ್ಲಿನ ಆಹುತಿಯನ್ನು ತಿಂದು ಕೊಬ್ಬಿದ, ಕರ್ಕಶಸ್ವರದ ಕಾಗೆಗಳ ಗುಂಪುಗಳು ನಿನ್ನನ್ನು ಶಿಶುವನ್ನಾಗಿ ಮಾಡಿಕ್ಕೊಂಡರೂ ನೀನು ಹಾಡುವ ಕಾಲ ಬಂದಾಗ ತಾವೇ ನಿನ್ನನ್ನು ಹೊಡೆದಟ್ಟುತ್ತವೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಕೋಗಿಲೆಯ ಅನ್ಯಾಪದೇಶದಿಂದ ದುರ್ಜನರೊಡನೆ ಸೇರಿಕ್ಕೊಂಡ ಸಜ್ಜನನು ಅವನ ಸದ್ಗುಣಗಳನ್ನು ಹೊರಪಡಿಸಿದೊಡನೆಯೇ ಆ ದುರ್ಜನರು ಅವನನ್ನು ಹೊಡೆದಟ್ಟುತ್ತಾರೆ, ಹಾಗೆ ಅವರ ಸಹವಾಸವನ್ನು ತೊರೆಯುವುದು ಸಜ್ಜನನ ಸುಕೃತವೇ ಸರಿ ಎಂಬ ನೀತಿಯನ್ನು ದೇಶಿಕರು ತಿಳಿಸಿದ್ದಾರೆ.
विश्वास-प्रस्तुतिः
विबुधमहिते मेरावैरावतः करटी मुहुः
कषतु करटं कण्डूलं स्वं क्षरन् मदकर्दमम् ।
भजतु च तटक्रीडां पीडाभिसन्धिरसात् दृढम्
न तु मलिनता नापि क्षोभः क्षमाभृति संभृतः ॥ ९-१२ ॥
मूलम्
विबुधमहिते मेरावैरावतः करटी मुहुः
कषतु करटं कण्डूलं स्वं क्षरन् मदकर्दमम् ।
भजतु च तटक्रीडां पीडाभिसन्धिरसात् दृढम्
न तु मलिनता नापि क्षोभः क्षमाभृति संभृतः ॥ ९-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಐರಾವತ ಗಜವು ಮದಜಲದ ಕೆಸರನ್ನು ಸುರಿಸುತ್ತಾ ತನ್ನ ತುರಿಯುತ್ತಿರುವ ಗಂಡಸ್ಥಲವನ್ನು ದೇವತೆಗಳು ಗೌರವಿಸುವ ಮೇರುಪರ್ವತಕ್ಕೆ ತಿಕ್ಕಲಿ. ಮೇರುಪರ್ವತವನ್ನು ಹಿಂಸಿಸುವುದಕ್ಕಾಗಿ ಅದನ್ನು ಬಲವಾಗಿ ತನ್ನ ದಂತಗಳಿಂದ ತಿವಿಯಲಿ. ಆ ಪರ್ವತಕ್ಕೆ ಮಲಿನತೆಯಾಗಲಿ ಹಿಂಸೆಯಾಗಲಿ ಆಗುವುದಿಲ್ಲವಷ್ಟೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ದುಷ್ಟನು ಎಷ್ಟೇ ಬಲಿಷ್ಟನಾದರೂ ಮಹಾತ್ಮನೊಬ್ಬನನ್ನು ತೆಗಳುವುದರಿಂದ ಇಲ್ಲವೇ ಹಿಂಸಿಸುವುದರಿಂದ ಆ ಮಹಾತ್ಮನಿಗೆ ಯಾವ ವಿಧವಾದ ಪರಿಣಾಮವೂ ಆಗದು ಎಂಬುದೇ ಈ ಅನ್ಯೋಕ್ತಿಯ ಸಂದೇಶ.
|| ಇತಿ ನೀತಿಮತ್ಪದ್ಧತಿಃ ನವಮೀ ||
॥ इति नीतिमत्पद्धतिर्नवमी ॥
॥वदान्यपद्धतिः॥ १० ॥
विश्वास-प्रस्तुतिः
आभिमुख्यदशामात्रात् आदर्श इव सज्जनः ।
शीघ्रं रक्तमरक्तं वा गृह्णाति स्वप्रसादतः ॥ १०-१ ॥
मूलम्
आभिमुख्यदशामात्रात् आदर्श इव सज्जनः ।
शीघ्रं रक्तमरक्तं वा गृह्णाति स्वप्रसादतः ॥ १०-१ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ವದಾನ್ಯ ಎಂದರೆ ದಾನಶೀಲ, ಧಾರಾಳಿ. ಈ ಪದ್ಧತಿ ತನ್ನೆಲ್ಲವನ್ನೂ ಪರರಿಗಾಗಿಯೇ ಮೀಸಲಾಗಿ ಇಡುವ ಅಂತಹ ದಾನಿಗಳ ಬಗ್ಗೆ.
ಸಜ್ಜನನು ತನ್ನ ಎದುರಿನಲ್ಲಿರುವವನು ಅಪೇಕ್ಷೆಯುಳ್ಳವನಾಗಿರಲಿ ಇಲ್ಲದೆ ಇರಲಿ ಆತನು ಎದುರಿನಲ್ಲಿದ್ದಾನೆಂಬ ಕಾರಣದ ಮಾತ್ರದಿಂದಲೇ ಆತನನ್ನು ತನ್ನ ಪ್ರಸನ್ನತೆಯಿಂದ, ಹೇಗೆ ಸ್ವಚ್ಛವಾದ ಕನ್ನಡಿಯು ತನ್ನೆದುರಿನಲ್ಲಿರುವವನನ್ನು ಆತನು ವರ್ಣರಞ್ಜಿತನಾಗಿರಲಿ ಇಲ್ಲದೆ ಇರಲಿ ಪ್ರತಿಫಲಿಸುವುದೋ ಹಾಗೆ, ಶೀಘ್ರವಾಗಿ ಸ್ವೀಕರಿಸುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ರಕ್ತ= (ಅಪೇಕ್ಷೆಯುಳ್ಳವನು, ವರ್ಣರಞ್ಜಿತ); ಪ್ರಸಾದ= (ಪ್ರಸನ್ನತೆ, ಸ್ವಚ್ಛ). ಸಂತ-ಸಾಧುಗಳನ್ನು ಅವರಲ್ಲಿ ಶ್ರದ್ಧೆಯಿಲ್ಲದೆ ಇರುವವವರೂ ಕೂಡ ಕುತೂಹಲಕ್ಕಾಗಿ ಸಂದರ್ಶಿಸಹೋದವರು ಆ ಮಹಾತ್ಮರ ಕಟಾಕ್ಷದಿಂದಲೇ ಪುಲಕಿತರಾಗಿ ಅವರ ಆಪ್ತ ಅನುಯಾಯಿಗಳಾಗಿ ಮಾರ್ಪಾಡು ಹೊಂದುವುದು ಅನುಭವವೇದ್ಯ. ಶ್ರೀರಾಮಚಂದ್ರನು ವಿಭೀಷಣನಿಗೆ ಅವನು ರಾಜ್ಯಪ್ರಾಪ್ತಿಗಾಗಿ ಶರಣಾಗದೇ ಹೋದರೂ ರಾಜ್ಯವನ್ನು ದೊರಕಿಸಿಕೊಡಲಿಲ್ಲವೇ?
विश्वास-प्रस्तुतिः
अप्यनावर्जिताः स्वेन फलभारेण सन्नताः ।
अर्भकैरपि गृह्यन्ते साधुसन्तानशाखिनः ॥ १०-२ ॥
मूलम्
अप्यनावर्जिताः स्वेन फलभारेण सन्नताः ।
अर्भकैरपि गृह्यन्ते साधुसन्तानशाखिनः ॥ १०-२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಇತರರಿಂದ ಬಗ್ಗಿಸಲು ಬಾರದ ಕಲ್ಪವೃಕ್ಷವು ತನ್ನ ಫಲದ ಭಾರದಿಂದ ಬಗ್ಗಿ ಚಿಕ್ಕ ಮಕ್ಕಳಿಂದ ಕೂಡ ಹಿಡಿದುಕ್ಕೊಳ್ಳಲು ಸಾಧ್ಯವಾಗುವಂತೆ, ಇತರರು ವಶಪಡಿಸಿಕ್ಕೊಳ್ಳಲು ಬಾರದ ಸಾಧುಗಳು ತಮ್ಮ ಸಿದ್ಧಿಯ ಹಿರಿಮೆಯಿಂದ ನಮ್ರರಾಗಿ ಜ್ಞಾನಾರ್ಜನೆಯಲ್ಲಿ ಶಿಶುಗಳಾಗಿರುವವರಿಗೂ ಕೂಡ ಒಲಿಯುತ್ತಾರೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಆವರ್ಜಿತ= (ಬಗ್ಗಿಸಲ್ಪಟ್ಟ, ವಶಪಡಿಸಿಕೊಳ್ಳಲ್ಪಟ್ಟ); ಸನ್ನತ= (ಬಗ್ಗಿದ, ನಮ್ರರಾದ). ಮೂಲದಲ್ಲಿ ರೂಪಕವಾಗಿ ಕೊಟ್ಟಿರುವ ವಾಕ್ಯವನ್ನು, ಅರ್ಥ ಸ್ಪಷ್ಟವಾಗಲೆಂದು ಭಾವಾರ್ಥದಲ್ಲಿ ಉಪಮಾನದಂತೆ ಕೊಟ್ಟಿದೆ.
विश्वास-प्रस्तुतिः
निर्मुक्तभवनक्षेत्राः स्युः सदागतिनिर्वृताः ।
प्राप्ते भयविपर्यासे भोगिनः खलु भोगिनः ॥ १०-३ ॥
मूलम्
निर्मुक्तभवनक्षेत्राः स्युः सदागतिनिर्वृताः ।
प्राप्ते भयविपर्यासे भोगिनः खलु भोगिनः ॥ १०-३ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಮನೆ-ಹೊಲಗಳಲ್ಲಿ ಪೊರೆಯನ್ನು ಬಿಟ್ಟು ಗಾಳಿಯಲ್ಲೇ ಸುಖಿಸುವ ಸರ್ಪಗಳು ಭಯವನ್ನು ಕೊಡುವ ಬದಲಾವಣೆಗಳು ಬಂದರೆ ಹೆಡೆಯನ್ನು ಎತ್ತುವುವಲ್ಲವೆ? (೨) ಮನೆ-ಹೊಲಗಳನ್ನು ಬಿಟ್ಟುಕೊಟ್ಟು ಸತ್ಪುರುಷರ ಆಗಮನದಿಂದಲೇ ಆನಂದವನ್ನು ಪಡೆದು ಭಯವೆಂಬುದೇ ಇಲ್ಲದ ಭೋಗಿಗಳೆ ನಿಜವಾದ ಭೋಗಿಗಳಲ್ಲವೆ?
ಶ್ರೀನಿವಾಸಮೂರ್ತಿ - ಟಿಪ್ಪನೀ
ನಿರ್ಮುಕ್ತ= (ಪೊರೆಯನ್ನು ಬಿಟ್ಟ, ದಾನಮಾಡಿದ); ಸದಾಗತಿ+ನಿರ್ವೃತಾಃ, ಸತ್+ಆಗತಿ+ನಿರ್ವೃತಾಃ ; ಅಭಯ+ವಿಪರ್ಯಾಸೇ, ಭಯ+ವಿಪರ್ಯಾಸೇ; ಭೋಗಿನಃ= (ಸರ್ಪಗಳು, ಭೋಗಿಗಳು). ವ್ಯಾಖ್ಯಾನದಲ್ಲಿ “ಭಯವಿಪರ್ಯಾಸ” ಎಂಬುದಕ್ಕೆ “ಯಭ” ಎಂಬ ಅರ್ಥವನ್ನು ಮಾಡಿ ಮತ್ತೊಂದು ಅರ್ಥವನ್ನು ಕೊಟ್ಟಿದ್ದಾರೆ. “ಯಭ” ಎಂಬ ಧಾತುವು ಮೈಥುನಕ್ರಿಯೆಯಲ್ಲಿ ಪ್ರವೃತ್ತವಾಗುತ್ತದೆ. “ಮನೆಮಠಗಳನ್ನು ತೊರೆದು ಯಾವಾಗಲೂ ಅಲೆಯುವುದರಲ್ಲೇ ಸಂತೋಷವನ್ನು ಪಡೆಯುವ ವಿಷಯಾಸಕ್ತರು ನಿಜಕ್ಕೂ ಅಭೋಗಿಗಳು ಅಂದರೆ ದುಃಖಿಗಳು” ಎಂಬ ಅರ್ಥ ಕೂಡ ಬರುತ್ತದೆ. ಈ ಶ್ಲೋಕದಲ್ಲಿ ದೇಶಿಕರ ಮುಖ್ಯ ಅಭಿಪ್ರಾಯ ತನ್ನ ಎಲ್ಲಾ ಐಹಿಕಸಂಪತ್ತಿಯನ್ನೂ ದಾನಮಾಡಿದ ವಿರಕ್ತನೇ ನಿಜವಾದ ಭೋಗಿ ಎಂಬುದು.
विश्वास-प्रस्तुतिः
सर्वेषामुत्तरामाशां धनदो यः प्रतीक्षते ।
सत्यं मनुष्यधर्मैव स तु पुण्यजनेश्वरः ॥ १०-४ ॥
मूलम्
सर्वेषामुत्तरामाशां धनदो यः प्रतीक्षते ।
सत्यं मनुष्यधर्मैव स तु पुण्यजनेश्वरः ॥ १०-४ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಎಲ್ಲಕ್ಕೂ ಉತ್ತರದಲ್ಲಿರುವ ದಿಕ್ಕನ್ನು ಯಾವ ಧನದ(ಕುಬೇರ)ನು ಕಾಯುತ್ತಾನೋ ಆತನು ನಿಜಕ್ಕೂ ಮನುಷ್ಯಧರ್ಮನು ಪುಣ್ಯಜನೇಶ್ವರನು ಕೂಡ. (೨) ಯಾವ ದಾನಿಯು ಎಲ್ಲ ಅರ್ಥಿಗಳ ಮುಂದಿನ ಆಸೆಗಾಗಿ ಎದುರುನೋಡುತ್ತಿರುತ್ತಾನೋ ಅಂತಹವನು ಸಾಮಾನ್ಯ ಮನುಷ್ಯನಂತೆ ಆಚರಿಸಿದರೂ ನಿಜಕ್ಕೂ ಪುಣ್ಯವಂತರಲ್ಲಿ ಹಿರಿಯನು.
ಶ್ರೀನಿವಾಸಮೂರ್ತಿ - ಟಿಪ್ಪನೀ
“ಧನದ”, “ಮನುಷ್ಯಧರ್ಮಾ”, “ಪುಣ್ಯಜನೇಶ್ವರ” ಎಂಬುವು ಕುಬೇರನ ನಾಮಗಳು. ಈ ನಾಮಗಳನ್ನು ಜೋಡಿಸಿ ದೇಶಿಕರು ದಾನಿಗಳ ಪರವಾದ ಪ್ರಸ್ತುತ ಅರ್ಥವನ್ನು ದೊರಕಿಸಿಕೊಟ್ಟಿದ್ದಾರೆ. ನಿಜವಾದ ದಾನಿಯು ಅರ್ಥಿಗಳು ಮುಂದೇನನ್ನು ಕೇಳುವರು, ಆವರ ಆಸೆಯನ್ನು ಪೂರೈಸುವ ಭಾಗ್ಯ ನನಗೆ ಯಾವಾಗ ಎಂದು ತವಕ ಪಡುತ್ತಿರುತ್ತಾನೆ!
विश्वास-प्रस्तुतिः
येषां हिरण्यकशिपुक्षेत्रदानकरः करः ।
तेषां तिर्यङ्मुखत्वेऽपि पुरुषत्वं न हीयते ॥ १०-५ ॥
मूलम्
येषां हिरण्यकशिपुक्षेत्रदानकरः करः ।
तेषां तिर्यङ्मुखत्वेऽपि पुरुषत्वं न हीयते ॥ १०-५ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಯಾರ ಕರವು ಹಿರಣ್ಯಕಶಿಪುವಿನದೇಹವನ್ನು ಕತ್ತರಿಸಿತೋ ಅವರ ಮುಖವು ತಿರ್ಯಕ್ಪ್ರಾಣಿಯದಾದರೂ ಅವರ ಪುರುಷ(ವಿಷ್ಣು)ತ್ವಕ್ಕೆ ಹಾನಿಯೇನಿಲ್ಲ. (೨) ಯಾರ ಕೈ ಚಿನ್ನ,ಬೆಳ್ಳಿ,ಅನ್ನ,ಬಟ್ಟೆ,ಹೊಲ,ಗದ್ದೆಗಳನ್ನೆಲ್ಲಾ ದಾನಮಾಡುವುದೋ ಅವರ ಮೋರೆ ಸೊಟ್ಟಾದರೂ ಅವರ ಪ್ರಭೂತವಾಗಿ ದಾನಮಾಡುವ ಗುಣಕ್ಕೆ ಹಾನಿಯೇನಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಹಿರಣ್ಯಕಶಿಪು= (ಪ್ರಹ್ಲಾದನ ತಂದೆ, ಚಿನ್ನ-ಬೆಳ್ಳಿ-ಅನ್ನ-ಬಟ್ಟೆ); ಕ್ಷೇತ್ರ= (ದೇಹ,ಹೊಲ-ಗದ್ದೆ); ದಾನ= (ಕೊಡಿಗೆ,ಕತ್ತರಿಸುವುದು); ತಿರ್ಯಙ್ಮುಖ= (ತಿರ್ಯಕ್ಜಂತುವಿನಮುಖ, ಸೊಟ್ಟ ಮೋರೆ); ಪುರುಷ= (ಹೇರಳವಾಗಿ ಕೊಡುವ, ವಿಷ್ಣು). ವಿಷ್ಣುವು ನರಸಿಹ್ಮಾವತಾರದಲ್ಲಿ ಸಿಹ್ಮಮುಖನಾಗಿ ಹಿರಣ್ಯಕಶಿಪುವಿನ ದೇಹವನ್ನು ಸೀಳಿದ ಪೌರಾಣಿಕ ಕಥೆಯನ್ನು ಜ್ಞಾಪಿಸುತ್ತಾ ದೇಶಿಕರು ಸರ್ವವನ್ನೂ ದಾನಮಾಡಲು ಸಿದ್ಧರಾಗಿರುವವರನ್ನು ಪ್ರಶಂಸಿಸಿರುತ್ತಾರೆ.
विश्वास-प्रस्तुतिः
मुख्यदानोदकक्लिन्नकरः ख्यातक्षमाधृतिः ।
लोकपालाश्रितः कश्चिदनाशावारणः कथम् ॥ १०-६ ॥
मूलम्
मुख्यदानोदकक्लिन्नकरः ख्यातक्षमाधृतिः ।
लोकपालाश्रितः कश्चिदनाशावारणः कथम् ॥ १०-६ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಮುಖದಿಂದ ಹೊರಡುವ ಮದಜಲದಿಂದ ತೊಯ್ದ ಸೊಂಡಿಲುಳ್ಳ, ಭೂಧಾರಣೆಯಿಂದ ಪ್ರಸಿದ್ಧವಾದ, ಇಂದ್ರಾದಿ ದಿಕ್ಪಾಲರಿಗೆ ಆಸರೆಯಾದ ಆನೆಯು ದಿಗ್ಗಜವಲ್ಲದೇ ಮತ್ತೇನು? (೨) ಮುಖ್ಯವಸ್ತುಗಳ ದಾನ ಮಾಡುವ ಜಲಧಾರೆಯಿಂದ ತೊಯ್ದ ಕೈಗಳುಳ್ಳ, ಕ್ಷಮೆಗೂ ಧೈರ್ಯಕ್ಕೂ ಹೆಸರಾದ, ಜನಾಧಿಪತಿಗಳಿಗೂ ಆಶ್ರಯನಾದ ದಾನಿಯು ಅರ್ಥಿಗಳ ಆಸೆಗಳನ್ನು ಪೂರೈಸದೇ ಇರುವುದು ಉಂಟೆ?
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: ಮುಖ್ಯ= (ಮುಖದ, ಮುಖ್ಯವಾದ); ದಾನೋದಕ= (ಮದಜಲ,ದಾನಮಾಡುವ ಜಲಧಾರೆ); ಕ್ಷಮಾ= (ಭೂಮಿ, ಕ್ಷಮೆ); ಧೃತಿಃ= (ಧಾರಣ, ಧೈರ್ಯ); ಲೋಕಪಾಲ= (ಇಂದ್ರ, ಜನಾಧಿಪತಿ); ಆಶಾವಾರಣಃ= (ದಿಗ್ಗಜ, ಆಸೆಗಳನ್ನು ಪೂರೈಸುವ).
विश्वास-प्रस्तुतिः
क्षोभितो विबुधैः कश्चित् गंभीरमधुराशयः ।
चंद्ररत्नगजाश्वादिसहितां दिशति श्रियम् ॥ १०-७ ॥
मूलम्
क्षोभितो विबुधैः कश्चित् गंभीरमधुराशयः ।
चंद्ररत्नगजाश्वादिसहितां दिशति श्रियम् ॥ १०-७ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಆಳವಾದ ಜಲಾಶಯ(ಕ್ಷೀರಸಾಗರ)ವೊಂದು ದೇವತೆಗಳಿಂದ ಕಲಕಲ್ಪಟ್ಟಾಗ ಚಂದ್ರ ಚಿಂತಾಮಣಿ ಐರಾವತಗಜ ಉಚ್ಚೈಃಶ್ರವಸ್ಸೆಂಬ ಕುದುರೆ ಇವುಗಳೇ ಮೊದಲಾದುವುಗಳ ಸಹಿತ ಲಕ್ಷ್ಮೀದೇವಿಯನ್ನು ದಯಪಾಲಿಸುತ್ತದೆ. (೨) ಗಂಭೀರವಾದ ಮತ್ತು ಪ್ರಿಯಕರವಾದ ಮನಸ್ಸುಳ್ಳ ದಾನಿಯೊಬ್ಬನು ಪಣ್ಡಿತರಿಂದ ಕೆಣಕಲ್ಪಟ್ಟು ಚಿನ್ನ ರತ್ನ ಆನೆ ಕುದುರೆ ಇವೇ ಮೊದಲಾದವುಗಳೊಡನೆ ಸಂಪತ್ತಿಯನ್ನು ದಯಪಾಲಿಸುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದಗಳು: “ಬುಧಾಃ= (ದೇವತೆಗಳು, ಪಣ್ಡಿತರು); ಗಂಭೀರ= (ಆಳವಾದ, ಗಂಭೀರವಾದ); ಮಧುರ= (ನೀರು,ಪ್ರಿಯವಾದ); ಆಶಯಃ= (ಆಸರೆ, ಮನಸ್ಸು); ಚಂದ್ರ=(ಚಂದ್ರ, ಚಿನ್ನ); ಶ್ರೀಃ= (ಲಕ್ಷ್ಮೀ, ಸಂಪತ್ತಿ).
विश्वास-प्रस्तुतिः
अपुनर्देहिशब्दार्थमप्रत्युपकृतिक्षमम् ।
अर्थिनं कुरुते कश्चित् पुनरावृत्तिवर्जितम् ॥ १०-८ ॥
मूलम्
अपुनर्देहिशब्दार्थमप्रत्युपकृतिक्षमम् ।
अर्थिनं कुरुते कश्चित् पुनरावृत्तिवर्जितम् ॥ १०-८ ॥
ಶ್ರೀನಿವಾಸಮೂರ್ತಿ - ಭಾವಾರ್ಥ
(೧) ಪರಮಾತ್ಮನು ಮೋಕ್ಷಪುರುಷಾರ್ಥಿಯನ್ನು ಪ್ರತ್ಯುಪಕಾರಕ್ಕೆ ಅಸಮರ್ಥನಾಗುವಂತೆ, ಮತ್ತೆ ಶರೀರಿಯಾಗದಂತೆ ಪುನರ್ಜನ್ಮವಿಲ್ಲದವನನ್ನಾಗಿ ಮಾಡುತ್ತಾನೆ. (೨) ದಾನಿಯು ಯಾಚಕನನ್ನು “ಮತ್ತೆ ಕೊಡಿ” ಎಂದು ಕೇಳದಂತೆ, ಪ್ರತ್ಯುಪಕಾರಕ್ಕೆ ಅಸಾಧ್ಯವಾಗುವಂತೆ ಮರಳಿ ಬರಲು ಅವಶ್ಯಕತೆಯಿಲ್ಲದಂತೆ ಸಂಪತ್ಭರಿತನನ್ನಾಗಿ ಮಾಡುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಶ್ಲಿಷ್ಟ ಪದ: ದೇಹಿ= (ಶರೀರಿ, ಕೊಡು).
विश्वास-प्रस्तुतिः
वदान्यश्च कदर्यश्च गृहीतस्थिरलोभतः ।
स्वानर्थान् सञ्चिनोत्यर्थान् परानर्थैरयोजयन् ॥ १०-९ ॥
मूलम्
वदान्यश्च कदर्यश्च गृहीतस्थिरलोभतः ।
स्वानर्थान् सञ्चिनोत्यर्थान् परानर्थैरयोजयन् ॥ १०-९ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಜಿಪುಣನು ತಾನುತೆಗೆದುಕ್ಕೊಂಡುದು ಸ್ಥಿರವೆಂಬ ಲೋಭದಿಂದ ಇತರರಿಗೆ ಹಣವನ್ನು ಕೊಡದೆ ತನಗೆ ಹಾನಿಕರಗಳಾದ ವ್ಯವಹಾರಗಳನ್ನು ಕೂಡಿಹಾಕಿಕ್ಕೊಳ್ಳುತ್ತಾನೆ. ದಾನಿಯು ಕೂಡ ತಾನು ಯಾಚಕರನ್ನಾಗಿ ಸ್ವೀಕರಿಸಿದವರ ಪರವಾದ ದೃಢ ಅಭಿಲಾಷೆಯಿಂದ ತನ್ನ ಧನವನ್ನು, ಅದು ತನಗೇ ಹಾನಿಕರವೆಂಬುದನ್ನು ತಿಳಿದವನಾಗಿ, ಪರರಿಗೆ ಅನರ್ಥಕರವಾಗದಂತೆ (ಪರರ ಪ್ರಯೋಜನಕ್ಕಾಗಿಯೇ) ಕೂಡಿಹಾಕಿಕ್ಕೊಳ್ಳುತ್ತಾನೆ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಒಂದೇ ಪದಸಮೂಹವು ಜಿಪುಣನಿಗೂ ದಾನಿಗೂ ಅನ್ವಯವಾಗುವ ಚಮತ್ಕಾರವನ್ನು ಈ ಶ್ಲೋಕದಲ್ಲಿ ದೇಶಿಕರು ಹೆಣೆದಿದ್ದಾರೆ.
विश्वास-प्रस्तुतिः
अनिश्शेषितदातव्यं वदान्यदिति वादिनम् ।
वधुर्व्रीडाकुलेवार्थी सव्रीडॊ नोपसर्पति ॥ १०-१० ॥
मूलम्
अनिश्शेषितदातव्यं वदान्यदिति वादिनम् ।
वधुर्व्रीडाकुलेवार्थी सव्रीडॊ नोपसर्पति ॥ १०-१० ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಕೊಡಬೇಕಾದುದು ಸ್ವಲ್ಪವೂ ಉಳಿಯದಂತೆ ಕೊಡದ, ಹಾಗಾದರೂ “ಇನ್ನೇನು ಬೇಕು, ಹೇಳು” ಎಂದು ಕೇಳುವವನ ಬಳಿ, ನಾಚಿದ ಹೆಣ್ಣಿನಂತೆ, ನಾಚಕೆಯಿಂದ ಯಾಚಕನು ಬರುವುದಿಲ್ಲ.
ಶ್ರೀನಿವಾಸಮೂರ್ತಿ - ಟಿಪ್ಪನೀ
ಬರಿಯ ವಾಕ್ಯೋಪಚಾರದಲ್ಲೇ ಮುಗಿಸುವ ದಾನಿಯ ಬಳಿ, ತಾನು ಕೇಳಿದುದನ್ನು ಕೊಡದೆ ಮತ್ತೇನು ಬೇಕು ಎಂದು ಕೇಳುವ ಹೊಸ ಗಂಡನಲ್ಲಿ ತನ್ನ ನಿರಾಶೆಯನ್ನು ಹೇಳಿಕೊಳ್ಳಲು ನಾಚಿ ಅವನ ಬಳಿಸಾರದ ಹೆಣ್ಣಿನಂತೆ, ಯಾಚಕನು ಬರುವುದಿಲ್ಲ ಎಂಬುದು ಶ್ಲೋಕದ ಅಭಿಪ್ರಾಯ.
विश्वास-प्रस्तुतिः
त्वचं मांसं जीवं यदपि ददुरस्थीनि पृथिवीं
श्रियं रत्नाधीशं त्रिदशतरुमैरावतमपि ।
तदेतत् प्रत्येकं मिलितमपि नालं तुलयितुं
मनस्कारोपेतस्थिरमधुरकल्योक्तिकणिकाम् ॥ १०-११ ॥
मूलम्
त्वचं मांसं जीवं यदपि ददुरस्थीनि पृथिवीं
श्रियं रत्नाधीशं त्रिदशतरुमैरावतमपि ।
तदेतत् प्रत्येकं मिलितमपि नालं तुलयितुं
मनस्कारोपेतस्थिरमधुरकल्योक्तिकणिकाम् ॥ १०-११ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ಚರ್ಮ, ಮಾಂಸ, ಪ್ರಾಣ, ಮೂಳೆ, ಭೂಮಿ ಇವನ್ನು ದಾನವಾಗಿ ಕೊಟ್ಟುದು ಉಂಟು. ಲಕ್ಷ್ಮೀ, ಚೂಡಾಮಣೀ, ಕಲ್ಪತರು ಮತ್ತು ಐರಾವತವನ್ನೂ ಕೊಟ್ಟುದು ಉಂಟು. ಇವೆಲ್ಲವನ್ನೂ ಸೇರಿಸಿ ಒಟ್ಟಿಗೆ ಕೊಟ್ಟರೂ ಕೂಡ ಮನಃಪೂರ್ವಕವಾಗಿ, ನಿಶ್ಚಲಬುದ್ಧಿಯಿಂದ, ಮಧುರವಾಗಿ ಹೇಳಿದ ಶುಭವಚನಗಳ ಒಂದು ತುಣುಕಿಗೆ ಕೂಡ ಸಮನಾಗಲಾರದು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಕರ್ಣನು ಚರ್ಮಭೂತವಾದ ಕವಚವನ್ನೇ ದಾನಮಾಡಿದ. ಶಿಬಿಯು ಪಾರಿವಾಳವನ್ನು ತಿನ್ನಲು ಬಂದ ಹದ್ದಿಗೆ ತನ್ನ ತೊಡೆಯ ಮಾಂಸವನ್ನೇ ದಾನಮಾಡಿದ. ಪಾರಿವಾಳವು ಬೇಡನಿಗೆ ತನ್ನ ಜೀವವನ್ನೇ ತೊರೆಯಿತು. ದಧೀಚಿಯು ಇಂದ್ರನಿಗೆ ತನ್ನ ಮೂಳೆಗಳನ್ನೇ ದಾನಮಾಡಿದನು. ಪರಶುರಾಮನು ಕಾಶ್ಯಪನಿಗೆ ಭೂಮಿಯನ್ನೇ ಕೊಟ್ಟನು. ಕ್ಷೀರಸಾಗರವು ಲಕ್ಷ್ಮೀ, ಚೂಡಾಮಣಿ, ಕಲ್ಪತರು ಮತ್ತು ಐರಾವತವನ್ನು ಕೊಟ್ಟಿತು. ಮನಃಪೂರ್ವಕವಾದ ಕಲ್ಯಾಣಕರ ವಚನಗಳು ಇವೆಲ್ಲಕ್ಕಿಂತಲೂ ಫಲಕಾರಿ ಎಂಬುದೇ ಈ ಶ್ಲೋಕದ ಅಭಿಪ್ರಾಯ. ಕಾಳಿದಾಸನ “ಆಶಿಷಂ ಪ್ರಯುಯುಜೇ ನ ವಾಹಿನೀಂ ಸಾ ಹಿ ರಕ್ಷಣವಿಧೌ ತಯೋಃ ಕ್ಷಮಾ” ಎಂಬ ಉಕ್ತಿಯನ್ನು ಇಲ್ಲಿ ನೆನೆಯಬಹುದು.
विश्वास-प्रस्तुतिः
अनिर्घातं धाराधरममथनीयं निधिमपाम्
अकाठिन्यं चिंतामणिमजडभृतं सुरतरुम् ।
अभित्त्वोपादाय प्रभुरपशुवृत्तिं च सुरभिं
परार्थैकस्वार्थान् अकृत पुरुषान् आदिपुरुषः ॥ १०-१२ ॥
मूलम्
अनिर्घातं धाराधरममथनीयं निधिमपाम्
अकाठिन्यं चिंतामणिमजडभृतं सुरतरुम् ।
अभित्त्वोपादाय प्रभुरपशुवृत्तिं च सुरभिं
परार्थैकस्वार्थान् अकृत पुरुषान् आदिपुरुषः ॥ १०-१२ ॥
ಶ್ರೀನಿವಾಸಮೂರ್ತಿ - ಭಾವಾರ್ಥ
ವಿಶ್ವಕ್ಕೇ ಒಡೆಯನಾದ ಆದಿಪುರುಷ ಭಗವಂತನು ಸಿಡಿಲಿಲ್ಲದ ಮೋಡ, ಕಡೆಯಲಾಗದ ಸಾಗರ, ಕಠಿನತೆಯಿಲ್ಲದ ಚಿಂತಾಮಣಿ, ಜಡವಲ್ಲದ ಕಲ್ಪತರು, ಪಶುವೃತ್ತಿಯನ್ನನುಸರಿಸದ ಕಾಮಧೇನು, ಇವೆಲ್ಲವನ್ನೂ ತೆಗೆದುಕ್ಕೊಂಡು ಒಟ್ಟುಗೂಡಿಸಿ ಇತರರಪ್ರಯೋಜನವೇ ತಮ್ಮ ಪ್ರಯೋಜನವಾಗಿ ಉಳ್ಳ ದಾನಶೌಂಡರನ್ನು ಸೃಷ್ಟಿಸಿದನು.
ಶ್ರೀನಿವಾಸಮೂರ್ತಿ - ಟಿಪ್ಪನೀ
ಈ ವಿಶ್ವದಲ್ಲಿ ಅನೇಕ ಸ್ಥಾವರ-ಜಂಗಮಗಳು ತಮ್ಮ ಕೊಡಿಗೆಗೆ ಹೆಸರಾಗಿವೆ. ಮೋಡವು ಮಳೆಯನ್ನು ಕೊಟ್ಟು ಎಲ್ಲ ಜೀವಿಗಳಿಗೂ ಜೀವನವನ್ನು ಕೊಡುತ್ತದೆ. ಆದರೆ ಗುಡುಗು ಸಿಡಿಲುಗಳಿಂದ ಕೂಡಿ ಭಯಾನಕವಾಗಿರುತ್ತದೆ. ಎಲ್ಲ ಜಲಕ್ಕೂ ಮೂಲಭೂತ ಆಶಯವಾದ ಸಾಗರವೂ ಕೂಡ ಪರೋಪಕಾರಕ್ಕಾಗಿಯೇ ಇದೆ. ಸಮುದ್ರಮಥನವಾದ ಕಾಲದಲ್ಲಿ ಅನೇಕ ಅನರ್ಘವಾದ ಭೋಗ್ಯವಸ್ತುಗಳು ಉತ್ಪತ್ತಿಯಾದವು. ಆದರೆ ಹಾಲಾಹಲವೂ ಹುಟ್ಟಿತು. ಕಡೆಯುವುದಕ್ಕೇ ಸಾಧ್ಯವಾಗದ ಕಡಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ನೆನದುದನ್ನು ಕೊಡುವ ಚಿಂತಾಮಣಿಯಲ್ಲಿ ಕಠಿನತೆಯಿದೆ, ಕಲ್ಪತರುವಿನಲ್ಲಿ ಜಡತ್ವವಿದೆ, ಕಾಮಧೇನುವಿನಲ್ಲಿ ಪಶುತ್ವವಿದೆ. ದೇಶಿಕರು ಇಲ್ಲಿ ಉತ್ಪ್ರೇಕ್ಷೆ ಮಾಡುತ್ತಾ ದಾನಶೌಂಡನು ಈ ಪ್ರಥಿತ ದಾನಿಗಳ ಲೋಪಗಳಿಲ್ಲದೆ ಈ ದಾನಿಗಳಷ್ಟೇ ಇತರರಿಗೆ ತನ್ನ ಜೀವನವನ್ನು ಸವೆಯುತ್ತಾನೆ ಎಂದಿದ್ದಾರೆ.
|| ಇತಿ ವದಾನ್ಯಪದ್ಧತಿಃ ದಶಮೀ ||
॥ इति वदान्यपद्धतिर्दशमी ॥