Footnotes

ಅವಸ್ಥಾನಕೃತಿರ್ನಾಟ್ಯಂ ರೂಪಂ ದೃಶ್ಯತಯೋಚ್ಯತೇ । ರೂಪಕಂ ತತ್ಸಮಾರೋಪಾತ್ (ಸಮಾವೇಶಾತ್)…. ಅನ್ಯದ್ಭಾವಾಶ್ರಯಂ ನೃತ್ಯಂ ನೃತ್ತಂ ತಾಲಲಯಾಶ್ರಯಂ ॥ - ದಶರೂಪಕ,

ಈ ಸಂಬಂಧವಾದ ಹೆಚ್ಚಿನ ವಿಚಾರವನ್ನು `ಕನ್ನಡ ಕೈಪಿಡಿ’ಯಲ್ಲಿ ನೋಡಬಹುದು. Also vide J.O.R., x-i and ii

‘ದೂತವಾಕ್ಯ’ ದಲ್ಲಿರುವುದು ಬರಿಯ ಸಂಸ್ಕೃತ; ‘ಕರ್ಪೂರಮಂಜರಿ’ ಯಲ್ಲಿ ಬರಿಯ ಪ್ರಾಕೃತ; ಆದರೆ ಇಂಥವು ಅಪರೂಪ.

ಅತ್ರ ನೋಕ್ತಂ ಮಯಾ ಯಚ್ಚ ಲೋಕಾದ್ಗ್ರಾಹ್ಯಂ ಬುಧೈಸ್ತು ತತ್ ॥ -ನಾಟ್ಯಶಾಸ್ತ್ರ, xvii ೬೩.

ದಾಮೋದರ ಗುಪ್ತನ “ಕುಟ್ಟನೀಮತದಲ್ಲಿ (೮ನೆಯ ಶತ.) ರತ್ನಾವಳಿಯನ್ನು ಪ್ರಯೋಗಿಸಿದ್ದರ ವರ್ಣನೆ ಸ್ವಲ್ಪಮಟ್ಟಿಗೆ ದೊರೆಯುತ್ತದೆ.

ಯಾದೃಶಂ ಯಸ್ಯ ಯದ್ರೂಪಂ ಪ್ರಕೃತ್ಯಾ ತಸ್ಯ ತಾದೃಶಂ. -ನಾಟ್ಯಶಾಸ್ತ್ರ, ೨೪-೮೩.

ಪ್ರತ್ಯಾಹಾರ, ಅವತರಣ, ಆರಂಭ, ಆಶ್ರಾವಣ, ವಕ್ತ್ರಪಾಣಿ, ಪರಿಘಟ್ಟನ, ಸಂವೇದನಾ, ಮಾರ್ಗಾಸಾದಿತ, ಅಸಾರಿತ, ಗೀತ, ವರ್ಧಮಾನ, ಉತ್ಥಾಪನ, ಪರಿವರ್ತನ, ನಾಂದೀ, ಶುಷ್ಕಾವಕೃಷ್ಟಾ, ರಂಗದ್ವಾರ, ಚಾರೀ, ಮಹಾಚಾರೀ, ತ್ರಿಗತ, ಪ್ರರೋಚನಾ.

ಅವ್ಯಗ್ರೈರಿಂದ್ರಿಯೈಃ ಶುದ್ಧ ಊಹಾಪೋಹವಿಕಾರದಃ ।

ವ್ಯಕ್ತಾದೋಷಾನುರಾಗೀ ಚ ಸ ನಾಟ್ಯೇ ಪ್ರೇಕ್ಷಕಃ ಸ್ಮೃತಃ ॥ ೫೧ ॥

ಯಸ್ತುಷ್ಟೇ ತುಷ್ಟಿ ಮಾಯಾತಿ ಶೋಕೇ ಶೋಕಮುಪೈತಿ ಚ ।

ದೈನ್ಯೇ ದೀನತ್ವಮಭ್ಯೇತ ಸ ನಾಟ್ಯೇ ಪ್ರೇಕ್ಷಕಃ ಸ್ಮೃತಃ ॥ ೫೨ ॥

ಏವಂ ಭಾವಾನುಕರಣೇ ಯೋ ಯಸ್ಮಿನ್ ಪ್ರವಿಶೇನ್ನರಃ ।

ಸ ತತ್ರ ಪ್ರೇಕ್ಷಕೋ ಜ್ಞೇಯೋ ಗುಣೈರೇತೈರಲಂಕೃತಃ ॥ ೫೯ ॥ -ನಾಟ್ಯಶಾಸ್ತ್ರ, ಅಧ್ಯಾಯ ೨೭

ಎಂದರೆ, ಸೂಕ್ಷ್ಮವಾಗಿ ಆರಂಭವಾಗಿ, ಬೆಳೆದು ಮತ್ತೆ ಏಕಮುಖವಾಗಿ ಸೂಕ್ಷ್ಮರೂಪದಲ್ಲಿ ಮುಗಿಯುವುದು - ಎಂದು ಅರ್ಥವಿರಬಹುದು.

ಧರ್ಮ, ಅರ್ಥ, ಕಾಮ; ಸ್ವಾಭಾವಿಕ, ಕೃತ್ರಿಮ, ದೈವಜ; ಅಚೇತನ, ಚೇತನ, ಚೇತನಾಚೇತನ.

ಆರು, ಎಂಬುದು ಪಾಠಾಂತರ.

ಉದ್ಧಾತಕ, ವಲಗಿ, ಪ್ರಪಂಚ, ತ್ರಿಗತ, ಛಲ, ವಾಕ್ಕೇಳಿ, ಅಧಿಬಲ, ಗಂಡ, ಅವಸ್ಯಂದಿತ, ನಾಲಿಕಾ, ಅಸತ್ಪ್ರಲಾಪ, ವ್ಯಾಹಾರ, ಮಾರ್ದವ.

ನಾಯಕೋ ಮೃಗವದಲಭ್ಯಾಮಪಿ ನಾಯಿಕಾಮತ್ರ ಈಹತೇ ವಾಂಛತೀತಿ “ಈಹಾಮೃಗಃ”.

ಈ ಶಬ್ದವು ‘ಸಾಟಕ’ ಎಂಬುದರಿಂದ ಬಂದಿರಬಹುದು; ‘ಸಾಟಕ’ ವೆಂಬುದು ಒಂದು ನೃತ್ಯದ, ರಾಗದ ಅಥವಾ ಛಂದಸ್ಸಿನ ಹೆಸರಾಗಿ ಕಾಣುತ್ತದೆ; ಸಟ್ಟಕವು ಪೂರ್ತಿಯಾಗಿ ಪ್ರಾಕೃತದಲ್ಲೇ ಇರಬೇಕೆಂಬ ನಿಯಮವು ಹಿಂದೆ ಇದ್ದ ಹಾಗಿಲ್ಲ; ಪ್ರಾಯಶಃ ಅದರಲ್ಲಿ ಬಳಕೆಯ ಮಾತು ಉಪಯೋಗದಲ್ಲಿತ್ತು. I.H.Q., Vol. VII Pp. ೧೬೯ - ೧೭೩.

ಡಾ ॥ ಎ.ಎನ್. ಉಪಾಧ್ಯೆ ಅವರು ‘ಚಂದ್ರಲೇಖಾ’ ಸಟ್ಟಕಕ್ಕೆ ಬರೆದಿರುವ ಪೀಠಿಕೆಯನ್ನೂ ನೋಡಿ -Jaina Antiquary, Dec. ೧೯೫೧, page ೩೮.

ವರ್ಣಮಾತ್ರಾಚ್ಚಗಣಿಕಾಯುತಂ ಶೃಂಗಾರ ಭೂಷಿತಂ (?)

ವರ್ಣಮಾತ್ರಾಚ್ಛಡ್ಡುಲಿಕಾಯುತಂ ಶೃಂಗಾರ ಭಾಷಿತಂ (?)

ಆಶಂಸಾ, ತರ್ಕ, ಸಂದೇಹ, ತಾಪ, ಉದ್ವೇಗ, ಪ್ರಸಕ್ತಿ, ಪ್ರಯತ್ನ, ಗ್ರಥನ, ಉತ್ಕಂಠಾ, ಅವಹಿತ್ಥಾ, ಪ್ರತಿಪತ್ತಿ, ವಿಲಾಸ, ಆಲಸ್ಯ, ಬಾಷ್ಪ, ಪ್ರಹರ್ಷ, ಆಶ್ವಾಸ, ಮೂಢತೆ, ಸಾಧನಾ, ಅನುಗಮನ, ಉಚ್ಛ್ವಾಸ, ವಿಸ್ಮಯ, ಲಾಭ, ಸ್ಮೃತಿ, ಸಂಫೇಟ, ವೈಶಾರದ್ಯ, ಪ್ರಬೋಧನ, ಚಮತ್ಕೃತಿ.

ವಾಕ್ಯಾರ್ಥಾಭಿನಯೋಯಂ ಪ್ರಕೀರ್ತಿತೋ ನಾಟಕಾದಿ ಭೇದೇನ ।

ದ್ವಾದಶವಿಧಪದಾರ್ಥಾಭಿನಯಸ್ಯ ಯಥಾಸ್ಥಿತಂ ವಕ್ಷ್ಯೇ ॥

ಶೃಂ. ಪ್ರ., ೧೪೨.

ರಸಾತ್ಮಿಕಾ ದಶೈತೇಷು ವಿಂಶದ್ಭಾವಾತ್ಮಕಾ ಮತಾಃ ॥

ಭಾ. ಪ್ರ., VIII, ಪು. ೨೨೧, ಪಂ. ೧೧

ಆವಾಂತರಭಿದಾಃ ಕಾಶ್ಚಿತ್ಪ್ರದಾರ್ಥಾಭಿನಯಾತ್ಮಿಕಾ ।

ತೇ ನೃತ್ಯ ಭೇದಾಃ ಪ್ರಾಯೇಣ ಸಂಖ್ಯಯಾ ವಿಂಶತಿರ್ಮತಾಃ ॥

ಭಾ. ಪ್ರ., IX, ಪು. ೨೫೫, ಪಂ. ೮-೯

ಡೊಂಬೀ ಶ್ರೀಗದಿತಂ ಭಾಣೋ ಭಾಣೀ ಪ್ರಸ್ಥಾನರಾಸಕಾಃ ।

ಕಾವ್ಯಂ ಚ ಸಪ್ತ ನೃತ್ಯಸ್ಯ ಭೇದಾಃ ಸ್ಯುಸ್ತೇಪಿ ಭಾಣವತ್ ॥

ಇತ್ಯಾಹುಃ ಕೇಚಿದನ್ಯೇ ತಾನ್ ಸರ್ವಾನ್ ನೃತ್ಯಾತ್ಮಿಕಾನ್ ವಿದುಃ ॥

ಭಾ. ಪ್ರ., IX, ಪು. ೨೫೬, ಪಂ. ೪-೬

ನಾಟಿಕಾ ಸಟ್ಟಕ ತ್ರೋಟಕಗಳೇನೋ ರಸವತ್ತಾದ ದೊಡ್ಡ ಪ್ರಬಂಧಗಳೇ; ಆದರೆ ವಸ್ತುತಃ ಇವು ಉಪರೂಪಕಗಳಲ್ಲವೆಂದೂ ನಾಟಕ ಪ್ರಕರಣಗಳಲ್ಲಿಯೇ ಅಂತರ್ಭಾವವೆಂದೂ ಹಿಂದಿನ ಲಾಕ್ಷಣಿಕರೇ ಒಪ್ಪಿಕೊಂಡಿದ್ದಾರೆ. - ಭಾ. ಪ್ರ., VII, ಪು. ೧೮೦, ಪಂ. ೯-೧೯; ಪು. ೧೮೧, ಪಂ ೧-೫.

ಭಾ. ಪ್ರ., ಉಪೋದ್ಘಾತ, ಪು. ೫೧.

ಯೋಯಂ ಸ್ವಭಾವೋ ಲೋಕಸ್ಯ ಸುಖದುಃಖಸಮನ್ವಿತಃ ।

ಸೋಂಗಾದ್ಯಭಿನಯೋಪೇತಃ ನಾಟ್ಯ ಮಿತ್ಯಭಿಧೀಯತೇ ॥ ೧೨೨ ॥

ನಾನಾಭಾವೋಪಸಂಪನ್ನ ನಾನಾವಸ್ಥಾಂತರಾತ್ಮಕಂ ।

ಲೋಕವೃತ್ತಾನುಕರಣಂ ನಾಟ್ಯಮೇತನ್ಮಯಾ ಕೃತಂ ॥ ೧೧೩ ॥

ಯೇ ತಾವದೇತೇ ಶೋಭನಿಕಾ (ಶೌಭಿಕಾ) ನಾಮೈತೇ ಪ್ರತ್ಯಕ್ಷಂ ಕಂಸಂ ಘಾತಯಂತಿ ಪ್ರತ್ಯಕ್ಷಂ ಬಲಿಂ ಬಂಧಯಂತೀತಿ. ಚಿತ್ರೇಷು ಕಥಂ? ಚಿತ್ರೇಷ್ವಪಿ ಉದ್ಗೂರ್ಣಾ ನಿಪಾತಿತಾಶ್ಚ ಪ್ರಹಾರಾ ದೃಶ್ಯಂತೇ ಕಂಸ ಕರ್ಷಣ್ಯಶ್ಚ. ಗ್ರಂಥಿಕೇಷು ಕಥಂ ಯತ್ರ ಶಬ್ದಗಡು ಮಾತ್ರಂ ಲಕ್ಷ್ಯತೇ? ತೇಪಿ ಹಿ ತೇಷಾಂ ಉತ್ಪತ್ತಿ ಪ್ರಭೃತಿ ಆವಿನಾಶಾತ್ ಋದ್ಧೀವ್ಯಾಚಕ್ಷಾಣಃ ಸತೋ ಬುದ್ಧಿ ವಿಷಯಾನ್ ಪ್ರಕಾಶಯಂತಿ; ಆತಶ್ಚಸತೋವ್ಯಾಮಿಶ್ರಾ ಹಿ ದೃಶ್ಯಂತೇ; ಕೇಚಿತ್ ಕಂಸಭಕ್ತಾ ಭವಂತಿ, ಕೇಚಿದ್ವಾಸುದೇವಭಕ್ತಾಃ; ವರ್ಣಾನ್ಯತ್ವಂ ಖಲ್ವಪಿ ಪುಷ್ಯಂತಿ; ಕೇಚಿತ್ ಕಾಲಮುಖಾ ಭವಂತ, ಕೇಚಿದ್ರಕ್ತಮುಖಾಃ. - ‘ಮಹಾಭಾಷ್ಯ’ III, i, ೨೬

೨೩ Greek dancing…. Used bodily motion to convey thought; as in speech the tounge articulates words, so in dancing the body swayed and gesticulated meaning- “every motion a word” such dancing united with speech and music to make ballad-dance - R. G. Moulton, The Ancient Classical Drama

ದೂತವಾಕ್ಯ’ ದಂಥ ಏಕಾಂಕ ನಾಟಕವನ್ನು ತೆಗೆದುಕೊಂಡರೂ ‘ಭಾಣ’ ಮುಂತಾದ ರೂಪಕ ಜಾತಿಗಳನ್ನು ನೋಡಿದರೂ, ಒಬ್ಬರು ಇಬ್ಬರು ಅಥವಾ ಮೂವರು ವ್ಯಕ್ತಿಗಳು ಮಾತ್ರ ಇರುವುದು ಕಂಡುಬರುತ್ತದೆ. ಇದಲ್ಲದೆ ಸಂಸ್ಕೃತದಲ್ಲಿ ಮೊದಮೊದಲು ಹುಟ್ಟಿದ ನಾಟಕಗಳು ಸಿಕ್ಕಿಲ್ಲ; ಅವುಗಳ ಸ್ವರೂಪ ಹೇಗಿತ್ತೋ!

ರುದ್ರನಾಟಕ ಜಾತಿ, ‘ಕಾಲೈಕ್ಯ’, ‘ದೇಶೈಕ್ಯ’ ಮುಂತಾದ ಅಂಶಗಳಲ್ಲಿ ವೈದೃಶ್ಯಗಳೂ ಇವೆ; ಅವುಗಳ ವಿಚಾರವನ್ನು ಇಲ್ಲಿ ಎತ್ತಿಲ್ಲ; ಅವುಗಳನ್ನು ಬೇರೆ ಗ್ರಂಥಗಳಿಂದ ತಿಳಿಯಬಹುದಾಗಿದೆ.

‘We cannot assuredly deny the possibility of Greek influence in the sense that Weber admitted the probability; the drama, or the mime may as played at Greek courts have aided in the development of a true drama, but the evidence leaves only a nagative answer to the search for positive signs of influence’ Keith, pi, 68

Asiatic Researches, Vol. III.

ಶ್ರೀ ಕೃಷ್ಣನು ಒಂದು ನಾಟಕವನ್ನು ಏರ್ಪಡಿಸಿದ್ದನೆಂದು ಹರಿವಂಶದಲ್ಲಿ ಹೇಳಿದೆ:

ದೈವೀಂ ಮಾಯಾಂ ಸಮಾಶ್ರಿತ್ಯ ಸಂವಿಧಾಯ ಹರಿರ್ನಟಂ ।

ನಟವೇಷೇಣ ಭೈಮಾನಾಂ ಪ್ರೇಷಯಾಮಾಸ ಭಾರತ ॥ ೫೮ ॥

ಪ್ರದ್ಯುಮ್ನಂ ನಾಯಕಂ ಕೃತ್ವಾ ಸಾಂಬಂ ಕೃತ್ವಾ ವಿದೂಷಕಂ ।

ಪಾರಿಪಾರ್ಶ್ವೇ ಗದಂ ವೀರಮನ್ಯಾನ್ ಭೈಮಾಂಸ್ತಥೈವ ಚ ॥ ೫೯ ॥

ವಾರಮುಖ್ಯಾ ನಟೀಃ ಕೃತ್ವಾ ತತ್ತೂರ್ಯಸದೃಶಾಸ್ತಥಾ ।

ತಥೈವ ಭದ್ರಂ ಭದ್ರಸ್ಯ ಸಹಾಯಾಂಶ್ಚ ಕಥಾವಿಧಾನ್ ॥ ೬೦ ॥ -ವಿಷ್ಣುಪರ್ವ, ಅಧ್ಯಾಯ ೯೨.

‘ಹರಿವಂಶ’ ದ ಕಾಲವನ್ನು ನಿಶ್ಚಯಿಸಿ ಹೇಳುವುದಕ್ಕಾಗುವುದಿಲ್ಲ.

Bruckstucke Buddhisticher Dramen ಮತ್ತು Sitzungsherichte der Koniglich Preussischen Akademie der Wissenschaften 1911, pp. 388. 411.

E.H.I., pp. 272f ff.; Camb. Ind. Hist., I, p. 583; J.R.A.S., 1924, pp. 399 ff., H.I.L., ii, 611-614.

Ep. Ind. VIII, pp. 171-172.

ಏಕೆಂದರೆ, ಅವನ ಪ್ರಶಿಷ್ಯನ ಕಾಲ, ಮೂರನೆಯ ಶತಮಾನ; (Archeological Report of South India - Burgess. p. ೧೧೨).

ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಇಲ್ಲ. J. A., Oct-Dec., ೧೯೩೧ ನೋಡಿ.

ಹರಪ್ರಸಾದಶಾಸ್ತ್ರೀ; ‘ಸೌಂದರನಂದ’ ದ ಪೀಠಿಕೆ.

ಇವುಗಳಲ್ಲಿ ಕಾಳಿದಾಸನ ಭಾವ ಶಬ್ದ ಶೈಲಿ ಸಾದೃಶ್ಯಗಳನ್ನು ಅನೇಕ ಕಡೆ ಕಾಣಬಹುದು, ನಾಟಕಗಳಲ್ಲಿಯೂ ಹೀಗೆಯೇ ಇದ್ದಿತೋ ಎಂದು ಹೇಳಲು ತಕ್ಕಷ್ಟು ಸಾಮಗ್ರಿ ಇಲ್ಲ.

Bibliotheca Buddhika, XV. cf. F.W. Thomas in J.R.A.S., ೧೯೧೪, p. ೭೫೨ ff.

ಈಗಿನ ‘ಅಯೋಧ್ಯೆ’ ; ಕಾಶಿ, ಪಾಟ್ನಾನಗರದಲ್ಲಿದ್ದನೆಂದು ಹೇಳುವುದೂ ಉಂಟು.

ವಿಮಲಾಚರಣ ಲಾ: ‘ಸೌಂದರನಂದ’ ದ ಬಂಗಾಳಿ ಭಾಷಾಂತರ - ಪೀಠಿಕೆ;

The Awakening of Faith, by T. Suzuki, p. ೩೫; G.K. Nariman: Literary History of Sanskrit Buddhism, p. ೨೨.

ಡಾ ॥ ಥಾಮಸ್ ಅವರು ಅಶ್ವಘೋಷನಿಗೇ ಬೇರೆ ಬೇರೆ ಹೆಸರುಗಳು ಇದ್ದುವೆಂದು ಅಭಿಪ್ರಾಯಪಡುತ್ತಾರೆ. (Ind. Ant., ಸೆಪ್ಟಂ. ೧೯೦೩). ಆದರೆ ಇದು ಸಂಭವವಲ್ಲ.

ಇದನ್ನು

ಶಾರೀರಿ,

ದೀರ್ಘತ್ವಾದಾ.

ಮೋಕ್ಷಸ್ತು,

  • ಈ ಶ್ಲೋಕವು ‘ಬುದ್ಧ ಚರಿತ’ ದಲ್ಲಿಯೂ ಬರುತ್ತದೆ.

ಭಗವನ್.

ಸತಿ.

ನಿವೃತ್ತಿ.

ನೈರಾತ್ಮ್ಯದರ್ಶನಾಚ್ಚ.

ಅಸ್ಮಿನ್ನು.

ಸ್ಯ.

ತೇ (?).

ಬೀಜೋದಕಂ ಪೃಥಿವ್ಯರ್ಥಂ.

ಅಸ್ಮಿನ್.

ವಿನಷ್ಟೇ ಮುಕ್ತ ಇತಿ ನಿಶ್ಚಯಃ ಕೃತಃ.

ಕರ್ಮ.

ಅವನ್ಧ್ಯಮ್.

ಏವಮ್ ಲೋಕಸ್ಸಸ್ಯವ.

ಬುದ್ಧಃ.

ಗತೇನ ಮಾರ್ಗೇಣ ವಿನೀತ

ಯುವಯೋಃ.

(ಏ?)

ಭಾವಯಿತುಮ್.

ಭಿಕ್ಷ.

ಈ ವೃತ್ತಾಂತವು ವಿನಯಪಿಟಕದ ಮಹಾವಗ್ಗದಲ್ಲಿ ಆಗಲೇ ಪ್ರಖ್ಯಾತವಾದದ್ದು, ಅಶ್ವಘಷನಿಂದ ಕಲ್ಪಿತವಾದದ್ದಲ್ಲ.

ದಕ್ಷಿಣ ಹಿಂದೂಸ್ಥಾನದ ಒಂದು ನಾಟಕ ಮಂಡಲಿಯವರು ಶೋಭಾವತೀ ರಾಜನ ಮುಂದೆ ಒಂದು ಬೌದ್ಧ ನಾಟಕವನ್ನು ಆಡಿದರೆಂದೂ ಅದರಲ್ಲಿ ಸೂತ್ರಧಾರನೇ ಬುದ್ಧನ ಪಾತ್ರವನ್ನು ವಹಿಸಿದ್ದನೆಂದೂ ಹೇಳಿದೆ. ಆದ್ದರಿಂದ, ಈಗ ಕ್ರಿಸ್ತನನ್ನು ರಂಗಕ್ಕೆ ತರಲು ಪಾಶ್ಚಾತ್ಯರು ಹಿಂಜರಿಯುತ್ತಿರುವರಂತೆ, ಬುದ್ಧನನ್ನು ರಂಗಕ್ಕೆ ತರಲು ಇಂಡಿಯದಲ್ಲಿ ಬೌದ್ಧರು ಹಿಂಜರಿಯುತ್ತಿರಲಿಲ್ಲ. (B.B.D.)

ಶ್ಲೋಕ, ಉಪಜಾತಿ, ಶಾಲಿನೀ, ವಂಶಸ್ಥ, ಪ್ರಹರ್ಷಿಣೀ, ವಸಂತ ತಿಲಕಾ, ಮಾಲಿನೀ, ಶಿಖರಿಣೀ, ಹರಿಣೀ, ಶಾರ್ದೂಲವಿಕ್ರೀಡಿತ, ಸ್ರಗ್ಧರಾ, ಸುವದನಾ - ಇತ್ಯಾದಿ. ‘ಸುವದನಾ’ ವೃತ್ತವು ಅಪರೂಪ.

ಪ್ರಬುದ್ಧ ಕರ್ಣಾಟಕ - ಸಂಪುಟ ೨೧, ಸಂಚಿಕೆ ೨, ಪುಟ ೧೨೩ - ೧೨೫.

ಕರ್ಣಭಾರಕ್ಕೆ ಕವಚದಾನ ಕುಂಡಲಾ ಹರಣ ಎಂಬ ಹೆಸರುಗಳೂ, ಊರುಭಂಗಕ್ಕೆ ಗದಾಯುದ್ಧವೆಂಬ ಹೆಸರೂ, ಅಭಿಷೇಕ ನಾಟಕಕ್ಕೆ ರಾಮಾಭಿಶೋಕವೆಂಬ ಹೆಸರೂ, ಪ್ರತಿಮಾನಾಟಕಕ್ಕೆ ಪ್ರತಿಮಾರಾಮ ಪ್ರತಿಮಾದಶರಥ ಎಂಬ ಹೆಸರುಗಳೂ ದೊರೆಯುತ್ತವೆಯೆಂದು ರಾಮಕೃಷ್ಣ ಕವಿಗಳು ಹೇಳುತ್ತಾರೆ. J.A.H.R.S., Vol. III.

ಭಾಸನು ಒಂದು ನಾಟ್ಯಶಾಸ್ತ್ರವನ್ನು ಬರೆದಿದ್ದನೆಂದೂ, ಅದರಲ್ಲಿ ಅವನು ಈ ಸ್ವಂತ ಶ್ಲೋಕಗಳನ್ನು ಉದಾಹರಿಸಬಹುದೆಂದೂ ಕೆಲವರು ಊಹಿಸುತ್ತಾರೆ.

ಭಾಸನು ದಕ್ಷಿಣದೇಶದವನಾಗಿದ್ದಿರಬಹುದೆಂದು ಮೇಲೆ ಸೂಚಿಸಿದೆಯಿಷ್ಟೆ; ಆದ್ದರಿಂದ ಅವನು ತಮಿಳಿನ ಬೃಹತ್ಕಥೆ (ಪೆರುಂಕತೈ)ಯನ್ನು ನೋಡಿದ್ದನೋ ಏನೊ! ಈ ಪೆರುಂಕತೈ ಕ್ರಿ.ಶ. ಎರಡು ಅಥವಾ ಮೂರನೆಯ ಶತಮಾನದಲ್ಲಿ ದುಟ್ಟಿದ್ದೆಂದು ಹೇಳುತ್ತಾರೆ.

ತಾಪಸ ವತ್ಸರಾಜ’ ದಲ್ಲಿ ಹೊರತು, ವತ್ಸರಾಜನ ಕಥೆ ಬರುವ ಮಿಕ್ಕ ಯಾವ ನಾಟಕಕ್ಕೂ ಅವನ ಹೆಸರಿಲ್ಲ - ಸ್ವಪ್ನವಾಸವದತ್ತ, ಪ್ರಿಯದರ್ಶಿಕಾ, ರತ್ನಾವಳೀ, ಇತ್ಯಾದಿ.

Camb. History of India, I, p. 185.

ಚಾರುದತ್ತನ ನಾಲ್ಕು ಅಂಕಗಳಲ್ಲಿ ೫೫ ಪದ್ಯಗಳಿವೆ. ಅದೇ ಮೃಚ್ಛಕಟಿಕದ ನಾಲ್ಕು ಅಂಕಗಳಲ್ಲಿ ೧೨೯ ಪದ್ಯಗಳಿವೆ.

ನೇಮಿನಾಥ ಪುರಾಣ, ನೇಮಿಜಿನೇಶ ಸಂಗತಿ ಮುಂತಾದ ಜೈನಗ್ರಂಥಗಳಲ್ಲಿ ದೇವಕಿ ಮೂರು ಸಾರಿ ಅವಳಿ ಮಕ್ಕಳನ್ನು ಹೆತ್ತಳೆಂದೂ ಆಮೇಲೆ ಕೃಷ್ಣನು ನಾಲ್ಕನೆಯ ಸಾರಿ ಏಳನೆಯ ಮಗುವಾಗಿ ಹುಟ್ಟಿದನೆಂದೂ ಹೇಳಿದೆ. ಹೀಗೇ ನಂದಗೋಪನ ಹೆಣ್ಣು ಮಗುವಿನ ವಿಚಾರವೂ.

ರಾಮನು ವಿದ್ಯಾ ಸಂಪಾದನೆಯಲ್ಲಿ ಎಲ್ಲರನ್ನೂ ಮೀರಿಸಿದ್ದಾನೆ ಎಂಬುದರಲ್ಲಿ.

ಶೂದ್ರಕನ ಹೆಸರಿನಲ್ಲಿ ತಿಳಿದುಬಂದಿರುವುದು ಈ ನಾಟಕ ಒಂದೇಯೆ. ವಲ್ಲಭದೇವನ ‘ಸುಭಾಷಿತಾವಳಿ’ ಯಲ್ಲಿ ಶೂದ್ರಕನದೆಂದು ಈ ಮುಂದಿನ ಶ್ಲೋಕ ಮಾತ್ರ ದೊರೆಯುತ್ತದೆ

ತ್ಯಾಗೋ ಹಿ ಸರ್ವವ್ಯಸನಾನಿ ಹಂತೀತ್ಯಲೀಕಮೇತದ್ಭುವಿ ಸಂಪ್ರತೀತಂ ।

ಜಾತಾನಿ ಸರ್ವವ್ಯಸನಾನಿ ತಸ್ಯಾಸ್ತ್ಯಾಗೇನ ಮೇ ಮುಗ್ಧವಿಲೋಚನಾಯಃ ॥

’ ರಾಜತರಂಗಿಣಿ’ iii ೩೪೩ ‘ಸ್ಕಾಂದಪುರಾಣ’ - (Wilson, Works, IX- ೧೯೪); ವೇತಾಳ ಪಂಚವಿಂಶಶಿ; ಕಥಾಸರಿತ್ಸಾಗರ, ಕಾದಂಬರಿ, ಹರ್ಷ ಚರಿತೆ, ದಶಕುಮಾರಚರಿತ, ಕಾವ್ಯಾಲಂಕಾರ ಸೂತ್ರವೃತ್ತಿ III, ೨.೪-ಇತ್ಯಾದಿ.

ಶೂದ್ರಕನೆಂಬುದು ಅವನ ಅಡ್ಡ ಹೆಸರಾಗಿರಬಹುದು ಎಂದೂ ಅವನು “ದ್ವಿಜ” ರಲ್ಲಿ ಮೊದಲೆರಡು ಜಾತಿಗಳವನಾಗಿರಲಾರನೆಂದೂ ವಿಂಟರ್ನಿಟ್ಸ್ರವರು ಊಹಿಸುತ್ತಾರೆ (G.I.L., iii, ೨೦೩)

K.C. Mehendale : Bhandarkar Commemoration Vol. p. ೩೬೮.

ಮೃಚ್ಛಕಟಿಕ ಚಾರುದತ್ತಳಿಗೆ ಇರುವ ಸಂಬಂಧದ ವಿಚಾರವಾಗಿ ಬಹಳ ಚರ್ಚೆ ನಡೆದಿದೆ. ‘ಚಾರುದತ್ತ’ ವೇ ಮೂಲವೆಂಬುದು ಬಹು ವಿದ್ವಾಂಸರ ಮತ. ಅದನ್ನೇ ಇಲ್ಲಿ ಅಂಗೀಕರಿಸಿದೆ (cf. V.S. Sukthankar, J.A.O.S., vol. ೪೨, pp. ೫೯-೭೪).

R.G. Bhandarkar’ s Report on the Search for Skt. MSS, ೧೮೮೭, ೯೧. p.x.

Hist. of Skt. Lit., p.೨೪೮; G.I.L. iii, ೨೮೧.

ಸಂತ್ಯಜ್ಯ ವಿಕ್ರಮಾದಿತ್ಯಂ ಸತ್ತ್ವೋದ್ರಿಕ್ತಂ ಚ ಶೂದ್ರಕಂ ।

ತ್ವಾಂ ಚ ಭೂಪಾಲ ಪರ್ಯಾಪ್ತಂ ಧೈರ್ಯಮನ್ಯತ್ರ ದುರ್ಲಭಂ ॥ iii, ೩೪೩.

ಅವರು ಸಂಪಾದಿಸಿದ ಮೃಚ್ಛಕಟಿಕದ ಉಪೋದ್ಘಾತ (ಪುಟ ೮).

ಮೃಚ್ಛಕಟಿಕದಲ್ಲಿರುವ ಮೂವತ್ತು ಪಾತ್ರಗಳಲ್ಲಿ ಸಂಸ್ಕೃತವನ್ನು ಆಡುವವರು ಆರು ಜನ; ಶೌರಸೇನಿಯನ್ನು ಆಡುವವರು ಹದಿನೈದು; ಶುದ್ಧ ಮಾಗಧಿಯನ್ನು ಆಡುವವರು ಏಳು; ಮಿಕ್ಕವರು ಮಿಶ್ರಪ್ರಾಕೃತವನ್ನಾಡುತ್ತಾರೆ. ಸಂವಾಹಕನ ಅಪಭ್ರಂಶದಲ್ಲಿ ಎರಡು ಕಡೆ ಉಕಾರಾಂತ ಪದವು (‘ಷಿಲು’, ‘ಗಂಥು’ -ಅಂಕ ೨) ಇದೆಯೆಂದೂ ಇದು ದಾಕ್ಷಿಣಾತ್ಯ ಭಾಷೆಗಳ ವೈಲಕ್ಷಣ್ಯವೆಂದೂ ಪ್ರಾಚೀನ ಮಹಾರಾಷ್ಟ್ರಿಯಲ್ಲಿ ಹೀಗಿದೆಯೆಂದೂ ಪರಂಜಪೆಯವರು (ಉಪೋ., ಪು.೬) ಹೇಳುತ್ತಾರೆ. ಹೊಸಗನ್ನಡದಲ್ಲಿಯೂ ಮಾತುಗಳಿಗೆ-ಉ ಸೇರುತ್ತದೆ.

ಶೂದ್ರಕ ಎಂಬೆಡೆಯಲ್ಲಿ, -ಕ ಎಂಬುದು ಸ್ವಾರ್ಥಪ್ರತ್ಯಯವೇ? ಈ ನಾಟಕದಲ್ಲಿ ಬರುವ ಪಾತ್ರಗಳಲ್ಲಿ ಸುಮಾರು ಅರ್ಧ ಜನರ ಹೆಸರು ಕಕಾರದಿಂದ ಮುಗಿಯುತ್ತದೆ. ಇದಕ್ಕೆ ಆಂಧ್ರಪ್ರದೇಶದ ಪದ್ಧತಿ ಕಾರಣವಿರಬಹುದೇ? ಆಂಧ್ರ ಪ್ರಾಂತದ ಹತ್ತಿರದಲ್ಲಿದ್ದ ಕೆಲವು ಕನ್ನಡಿಗರ ಹೆಸರುಗಳು ಹೀಗೆ ಗಾಂತವಾಗಿವೆ. - ಪೊನ್ನಿಗ, ಜನ್ನಿಗ, ಅರಿಗ ಇತ್ಯಾದಿ.

ಕನ್ನಡಿಗರು ತಮ್ಮ ಪೂರ್ವಿಕರ ಈ ಪ್ರಸಿದ್ಧಿಯನ್ನು ನೋಡಿ ವಿನೋದ ಪಡಬಹುದು! ಕನ್ನಡವು ಒಂದು “ಮ್ಲೇಚ್ಛ” ಭಾಷೆ ಬೇರೆ !!

‘ಮೃಚ್ಛಕಟಿಕ’ ವು ನಾಟಕವಾದರೂ ಅದರಲ್ಲಿ ಆಗಿನ ಭರತಖಂಡದ ಅನೇಕ ರಾಜಕೀಯ ಧಾರ್ಮಿಕ ಸಾಮಾಜಿಕ ಸಂಗತಿಗಳು ಅನುಷಂಗಿಕವಾಗಿ ಬಂದಿವೆ. ಅವುಗಳನ್ನು ಪರಂಜಪೆಯವರೂ (ಅವರು ಸಂಪಾದಿಸಿದ ‘ಮೃಚ್ಛಕಟಿಕ’ ದ ಮುದ್ರಣ- ಅನುಬಂಧ ೧.) ವಿಂಟರ್ನಿಟ್ಸ್ ಅವರೂ (G.I.I., ಸಂ. iii, ಪು. ೨೦೮-೨೦೯) ಗಮನಕ್ಕೆ ತಂದಿದ್ದಾರೆ. ಇಲ್ಲಿ ನಾಟಕದ ದೃಷ್ಟಿಯಿಂದ ಅದರ ಮುಖ್ಯ ಕಥಾಭಾಗವನ್ನು ಮಾತ್ರ ಸಂಗ್ರಹಿಸಿದೆ.

ಐತಿಹಾಸಿಕ ಭಿತ್ತಿಯಲ್ಲಿ ಶೃಂಗಾರವಸ್ತು ಪ್ರತಿಪಾದನವು ಸ್ಕಾಟ್, ಬಂಕಿಂ ಮುಂತಾದವರ ಆಧುನಿಕ ಐತಿಹಾಸಿಕ ಕಾದಂಬರಿಗಳಲ್ಲಿ ಪರಿಚಿತವಾಗಿದೆ.

ಈ ನಾಟಕದ ವಸ್ತುವಿಗೆ ಬೃಹತ್ಕಥೆಯೇ ಮೂಲವಿರಬಹುದು. ‘ಚಾರುದತ್ತ ವಸಂತತಿಲಕೆ’ ಯರ ಕಥೆಯೂ ಪಾಲಕರಾಜನ ವೃತ್ತಾಂತವೂ ಜೈನರ ‘ಹರಿವಂಶ’ (‘ನೇಮಿನಾಥ ಪುರಾಣ’)ದಲ್ಲಿಯೂ ಬರುತ್ತದೆ. ಆದರೆ ಅದು ಮೂಲವಿರಲಾರದು.

‘ಮೃಚ್ಛಕಟಿಕ’ ವೆಂದರೆ ಸಣ್ಣ ಮಣ್ಣಿನ ಗಾಡಿ. ಇದನ್ನು ರೋಹಸೇನನು ಬೇಡವೆನ್ನುತ್ತಾನೆ. ಈ ಗಾಡಿಯ ಚರಿತ್ರೆಯೇ-ಅದು ಹೊನ್ನಾಗಿದ್ದು ಮಣ್ಣಾಗಿ ಮತ್ತೆ ಹೊನ್ನಾದದ್ದೇ-’ ಚಾರುದತ್ತನ ಚರಿತ್ರೆ’. ವಸಂತಸೇನೆ ಅದನ್ನು ನೋಡಿ ಕಣ್ಣೀರು ಹಾಕಿ ತನ್ನ ಆಭರಣಗಳನ್ನು ತೆಗೆದು ಅದರಲ್ಲಿ ತುಂಬಿಕೊಟ್ಟಿದ್ದೇ ಅವಳ ಕಾಮಿನೀ ಪ್ರೀತಿಯ, ಮಾತೃವಾತ್ಸಲ್ಯದ, ಪರಾಕಾಷ್ಠೆ.

‘ಪರಂಜಪೆ ‘, ಉಪೋ. ಪು. ೨೧-೨೨.

Shudrak’ s humour runs the whole gamut, from grim to farcical from satirical to quaint. Its variety and keenness are such that King Shudraka need not fear a comparison with the greatest of occidental writers of Comedies—A.. Ryder (Introduction to Mrich, H.O.S., p. ೧೨)

‘ಅವಿಮಾರಕ’ ದಲ್ಲಿಯೂ ಹೀಗೆಯೇ ಒಂದು ಬಹು ಉದ್ದವಾದ ನಗರ ವರ್ಣನೆ ಬರುತ್ತದೆ.

ಈ ಚಂದ್ರಗುಪ್ತ ವಿಕ್ರಮಾದಿತ್ಯನು ಕಾಳಿದಾಸನನ್ನು ನಾಲ್ಕನೆಯ ಶತಮಾನದ ಕೊನೆಯಲ್ಲಿ ಆಳುತ್ತಿದ್ದ (ಭಗೀರಥನೆಂಬ) ಕುಂತಲ (ಕದಂಬ) ರಾಜನ ಸಭೆಗೆ ರಾಯಭಾರಿಯಾಗಿ ಕಳುಹಿಸಿದ್ದನೆಂದು ಪ್ರತೀತಿಯಿದೆ:- ‘ಭೋಜನ ಶೃಂಗಾರ ಪ್ರಕಾಶಿಕಾ’ ಬಾಲಸುಬ್ರಹ್ಮಣ್ಯ ಅಯ್ಯರ A Study in Kalidasa in Relation to Political Science (P.O.C., Madras), p.6. ‘ಹೇಮಚಂದ್ರನ ಔಚಿತ್ಯವಿಚಾರ ಚರ್ಚಾ’ ಪು. 30. 40. George More sa-The Kadamba Kula; Jayaswal- J.B.O.R.S., March, ೧೯೩೨.

ವಿಕ್ರಮೋರ್ವಶೀಯವೆಂದರೆ, ವಿಕ್ರಮ (ಪರಾಕ್ರಮ) ದಿಂದ ಪಡೆದ ಊರ್ವಶಿಯ ಕಥೆ ಎಂದು ಅರ್ಥವಾಗಬಹುದು. ಆದರೆ, ವಿಕ್ರಮ ಮತ್ತು ಊರ್ವಶಿ ಇವರ ಕಥೆ ಎಂದು ಅರ್ಥಮಾಡುವುದು ಹೆಚ್ಚು ಉಪಪನ್ನವಾಗಿದೆ. (‘ಮಾಲವಿಕಾಗ್ನಿಮಿತ್ರ’ ಎಂಬಲ್ಲಿ ಹೀಗೆಯೇ.) ಆದರೆ ಇಲ್ಲಿಯ ನಾಯಕನು ಪುರೂರವಸ್ಸು; ಅವನಿಗೆ ವೇದ ಪುರಾಣಾದಿ ಕಥೆಗಳಲ್ಲಿಯೂ ವಿಕ್ರಮನೆಂಬ ಹೆಸರಿಲ್ಲ.

ಇದರಂತೆಯೇ ದಿಲೀಪಾದಿಗಳ ನೆವದಲ್ಲಿ ಸಮುದ್ರಗುಪ್ತ ಮುಂತಾದ ಗುಪ್ತರಾಜರು ವರ್ಣಿತರಾಗಿದ್ದಾರೆಂದು ಊಹಿಸಲ್ಪಟ್ಟಿದೆ.-S.C.De, Kalidasa and Vikramaditya, Ch. III; J.R.A.S., 1909, 731.

Keith; Indian Logic, p. 28.

ಕೆ. ಜಿ. ಶಂಕರ, ನಂದಗಿರ್ಕರ್, ಕಾಳೆ, ೭೫-೨೫ B. C.; I. H. Q., 1.309 ff

“ಮಹತ್ ಖಲು ಪುರಷಾಕಾರಮಿದಂ ಜ್ಯೋತಿಃ.” (ಅಂಕ ೧) S. Ray, P.O.C., I (೧೯೨೦).

೧. ಪಾರಿಪಾರ್ಶ್ವಿಕಃ.-ಮಾ ತಾವತ್. ಪ್ರಥಿತಯಶಸಾಂ ಭಾಸ ಸೌಮಿಲ್ಲ ಕವಿ ಪುತ್ರಾದೀನಾಂ ಪ್ರಬಂಧಾನತಿಕ್ರಮ್ಯ ವರ್ತಮಾನಕವೇಃ ಕಾಳಿದಾಸಸ್ಯ ಕ್ರಿಯಾಯಾಂ ಕಥಂ ಬಹುಮಾನಃ?-’ ಮಾಲವಿಕಾಗ್ನಿಮಿತ್ರ.’

೨. ಸೂತ್ರಧಾರಃ- ಮಾರಿಷ, ಪರಿಷದೇಷಾ ಪೂರ್ವೇಷಾಂ ಕವೀನಾಂಷ್ಟರಸ ಪ್ರಬಂಧಾ…. ಪ್ರಣಯಿಸು ವಾ ದಾಕ್ಷಿಣ್ಯಾತ್ ಅಥವಾ ಸದ್ವಸ್ತುಪುರುಷಬಹುಮಾನಾತ್ । ಶೃಣುತ ಅಥವಾ ಸದ್ವಸ್ತುಪುರುಷಬಹುಮಾನತ್! ಶೃಣುತ ಜನಾ ಅವಧಾನತ್ ಕ್ರಿಯಾಮಿಮಾಂ ಕಾಲಿದಾಸ್ಯ- ‘ವಿಕ್ರಮೋರ್ವಶೀಯ.’

೩. ನಟೀ- ಸುವಿಹಿತಪ್ರಯೋಗತಯಾ ಆರ್ಯಸ್ಯ ನ ಕಿಮಪಿ ಪರಿಹಾಪಯಿಷ್ಯತಿ. ಸೂತ್ರಧಾರಃ- ಅರ್ಯೇ ಕಥಯಾಮಿ ತೇ ಭೂತಾರ್ಥಂ- ಆಪರಿತೋಷಾತ್ ವಿದುಷಾಂ…’ ಶಾಕುಂತಲ.’

ಉಷಸ್ಸು ಮತ್ತು ಸೂರ್ಯ - ಇವರು ಕ್ರಮವಾಗಿ ವೇದದಲ್ಲಿ ಊರ್ವಶೀ ಪುರೂರವರಾಗಿ ಪರಿಣಮಿಸಿದ್ದಾರೆಂದು ಹೇಳುತ್ತಾರೆ.

ಕಥಾಸರಿತ್ಸಾಗರವು ಕಾಳಿದಾಸನಿಗಿಂತ ಈಚಿನದು. ಆದರೆ ಇದಕ್ಕೆ ಮೂಲವಾದ ಬೃಹತ್ಕಥೆ ಕಾಳಿದಾಸನಿಗಿಂತ ಹಿಂದಿನದೆಂದು ತೋರುತ್ತದೆ.

ಉತ್ತರದೇಶದ ಪಾಠದಲ್ಲಿ ಕೊಟ್ಟಿರುವ ರಂಗ ಸೂಚನೆಗಳನ್ನೂ ಅವುಗಳಲ್ಲಿ ಬರುವ ‘ಹೆಜ್ಜೆ’ ಮತ್ತು ರಾಗಗಳನ್ನೂ ನೋಡಿ:-ದ್ವಿಪದೀ, ಚರ್ಚರೀ, ಭಿನ್ನಕ, ಖಂಡಕ, ಖುರಕ, ವಲಂತಿಕಾ, ಕಕುಭ, ಕುಟಿಲಿಕಾ, ಮಲ್ಲಘಟ್ಟೀ, ಅರ್ಧದ್ವಿಚತುರ ಸ್ರಕ, ಕುಟಿಕಾ, ಮಂದಘಟೀ, ಗಲಿತಕ, ಖಂಡಧಾರಾ-ಇತ್ಯಾದಿ.

ಯದ್ಗೀತಂ ಗುಣಕರ್ಯಾ ಚ ರಾಗೇಣ ಕ್ರೀಡಕೇನ ಚ ।

ತಾಲೇನ ಸಾ ಖಂಡಧಾರಾ ಯಷ್ಟಿಕೇನ ಪ್ರಕಾಶಿತಾ ॥

ಆತ್ಮನಃ ಸುಖಾವಸಾನೇನ ಆರ್ಯಪುತ್ರಸ್ಥ ಸುಖಮಿಚ್ಛಾಮಿ (III)

ಪಂಪನು ಇದನ್ನು ಅನುವಾದ ಮಾಡಿದ್ದಾನೆ. - ‘ಭಾರತ’, ೪, ೭೫

ಕಿಂ ವಾ ಸ್ವರ್ಗೇ ಸ್ಮರ್ತವ್ಯಂ? ನ ತತ್ರ ಖಾದ್ಯತೇ ನ ಪೀಯತೇ ಕೇವಲಮನಿಮಿಷೈರಕ್ಷಿಭಿರ್ಮೀನತಾವಲಂಬ್ಯತೇ ॥ (III)

ವೇದಾಭ್ಯಾಸಜಡಃ ಕಥಂ ಸ ವಿಷಯವ್ಯಾವೃತ್ತಕೌತುಹಲೋ… ಪುರಾಣೋ ಮುನಿಃ ॥ (I. ೧೦.)

‘ಶಕುಂತಲೋಪಾಖ್ಯಾನ’ ವು ಬಂಗಾಳಿಪಾಠದ ಪದ್ಮಪುರಾಣ (ಸ್ವರ್ಗಖಂಡ ಅಧ್ಯಾಯ ೧-೫) ದಲ್ಲಿಯೂ ಬರುತ್ತದೆ. ಆದರೆ ಹರದತ್ತಶರ್ಮರು ಹೇಳುವಂತೆ (Padmapurana and Kalidasa, Calcutta, ೧೯೨೫) ಇದು ‘ಶಾಕುಂತಲ’ ಕ್ಕೆ ಮೂಲವಾಗಿರಲಾರದು. ಪದ್ಮಪುರಾಣವೇ ಶಾಕುಂತಲ ನಾಟಕವನ್ನೂ ಮಹಾಭಾರತವನ್ನೂ ಮುಂದಿಟ್ಟುಕೊಂಡು ಮಾಡಿದ ಸರಳಾನುವಾದದಂತಿದೆ; ಹೀಗೆ ಇದರಲ್ಲಿ ದುಷ್ಯಂತನಿಂದ ಶಕುಂತಲೆ ತನ್ನ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ರಾಜ್ಯವನ್ನು ಕೇಳುವ ಮಹಾಭಾರತ ವೃತ್ತಾಂತದ ಜೊತೆಗೆ, ದುರ್ವಾಸ ಶಾಪ, ಅಂಗುಳೀಯಕ ವೃತ್ತಾಂತ, ಬೆಸ್ತನ ವ್ಯಾಪಾರ ಮುಂತಾದ ಘಟನೆಗಳೂ, ಪ್ರಿಯಂವದೆ ಪುರೋಹಿತ ವರ್ತಕ ಮಾತಲಿ ಕಶ್ಯಪ ಮುಂತಾದ ಪಾತ್ರಗಳೂ ಬರುತ್ತವೆ. ಕಥೆಯು ಅನುಪೂರ್ವಿ ಪೂರ್ತಿಯಾಗಿ ಶಾಕುಂತಲದ್ದಾಗಿದೆ; ನಾಟಕದ ಹಲವು ಮಾತುಗಳು ಈ ಕಥೆಯಲ್ಲಿ ಹಾಗೆ ಹಾಗೇ ಬರುತ್ತವೆ.

ದುರ್ವಾಸರು ಶಾಪ ಕೊಡುವುದಕ್ಕಿಂತ ಮುಂಚೆಯೇ ಅನುಸೂಯೆ ದುಷ್ಯಂತನಲ್ಲಿ ಈ ಅನುಮಾನವನ್ನಿಡುತ್ತಾಳೆ.-(IV ಅಂಕ-ವಿಷ್ಕಂಭ.)

ನಾಟಕಗಳಲ್ಲಿ ಅನುಸೂಯೆ ಅವಳನ್ನು ನವಮಾಲಿಕಾ ಕುಸುಮಕ್ಕೂ, ದುಷ್ಯಂತನು ಕುವಲಯದಳ, ಕಿಸಲಯ, ಮಾಲತೀಪುಷ್ಪ ಮುಂತಾದವುಗಳಿಗೂ ಹೋಲಿಸುತ್ತಾರೆ.

ರವೀಂದ್ರನಾಥ ಠಾಕೂರರವರ ‘ಪ್ರಾಚೀನ ಸಾಹಿತ್ಯ’. - ಮ ॥ ಟಿ.ಎಸ್. ವೆಂಕಣ್ಣಯ್ಯನವರ ಕನ್ನಡ ಭಾಷಾಂತರ.

ವಿಕ್ರಮೋರ್ವಶೀಯಕ್ಕೆ ಇರುವಂತೆಯೇ ಶಾಕುಂತಲಕ್ಕೂ ಒಂದು ಔತ್ತರೇಯ ಪಾಠವಿದೆ. ಇದರ ಪ್ರಕಾರ ಮೂರು ಮತ್ತು ಆರನೆಯ ಅಂಕಗಳಲ್ಲಿ ಹೆಚ್ಚು ಪಾಠವಿದ್ದು ಶಕುಂತಲಾ-ದುಷ್ಯಂತರ ಪ್ರಣಯವ್ಯಾಪರಕ್ಕೂ ವರ್ಣನಾದಿಗಳಿಗೂ ಅನುಚಿತವಾದ ವಿಸ್ತಾರವಿದೆ. ಇವೆಲ್ಲಾ ಪ್ರಕ್ಷಿಪ್ತವೆಂದು ತೋರುತ್ತದೆ.

೧ ‘ಪಶುಮಾರಣ ಕರ್ಮದಾರುಣಃ ಅನುಕಂಪಾಮೃದುರೇವ ಶ್ರೋತ್ರಿಯಂ’ (VI, ೧).

೨. ‘ಪ್ರಾಣಾನಾಮನಿಲೇನ ವೃತ್ತಿರುಚಿತಾ…’ (VII, ೧೨).

೩ ‘ಅಕೃತಾರ್ಥೇಪಿ ಮನಸಿಜೇ…(II, ೧) ಮಾಲವಿಕಾಗ್ನಿ ಮಿತ್ರದ ‘ಪರಸ್ಪರಾಪ್ರಾಪ್ತಿ..’ (III, ೧೫) ಎಂಬ ಶ್ಲೋಕವನ್ನು ಹೋಲಿಸಿ.

೪ ಸ್ವರ್ಗದಲ್ಲಿ ತಿಂಡಿಯಿಲ್ಲ ತೀರ್ಥವಿಲ್ಲ; ಸುಮ್ಮನೆ ಮೀನುಗಳಂತೆ ಮಿಟ ಮಿಟನೆ ರೆಪ್ಪೆಯಿಲ್ಲದ ಕಣ್ಣು ಬಿಟ್ಟುಕೊಂಡು ನೋಡುತ್ತಿರುವುದು. ಉರ್ವಶಿಯ ತಂದೆ ‘ವೇದಾಭ್ಯಾಸಜಡ’, ಋಷಿಗಳು ‘ಜೋಲುಗಡ್ಡದವರು’, ‘ಹಣ್ಣೆಲೆಯಂತಿರುವವರು’, ಅವರ ತಲೆ ‘ಇಂಗುದೀ ತೈಲದಿಂದ ಮಣುಕುಕಟ್ಟಿ ಹೋಗಿರುತ್ತದೆ’, ಅವರಿಗೆ ‘ಜನದಿಂದ ತುಂಬಿದ ಮನೆ ಬೆಂಕಿಬಿದ್ದಂತೆ ಕಾಣುತ್ತದೆ’ - ಮುಂತಾದ ವಾಕ್ಯಗಳಿಂದ ಇದು ಧ್ವನಿತವಾಗುವಂತಿದೆ. ಬ್ರಾಹ್ಮಣಕವಿ ಆಗಿನ ಕಾಲದಲ್ಲಿ ಸಂಪ್ರದಾಯ ವಿರುದ್ಧವಾಗಬಹುದಾದ ಇಂಥ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ?

ಇಲ್ಲಿಯೂ ‘ಗಿಣಿಯ ಹೊಟ್ಟೆಯಂತಿರುವ ತಾವರೆ ಎಲೆ’ ‘ಅಂತಶ್ಯಿಖಿಯಾದ ಶಮಿ’ ‘ಅರಸುತನಂ ಸ್ವಹಸ್ತಧೃತದಂಡಮಹಾತಪವಾರಣೋಪಮಂ’ -ಮುಂತಾದ ಉಪಮಾನಗಳ ಸೌಂದರ್ಯವನ್ನೂ ಔಚಿತ್ಯವನ್ನೂ ಪರಿಶೀಲಿಸಿ.

ನಾಟಕವಾದರೂ ಶಾಕುಂತಲದಲ್ಲಿ ಬರುವ ಕೆಲವು ವರ್ಣನೆಗಳು ಬಹು ಪ್ರಸಿದ್ಧವಾಗಿವೆ- ‘ಗ್ರೀವಾಭಂಗಾಭಿರಾಮಂ’ (I, ೭) ‘ಅಯಮರವಿವರೇಭ್ಯಃ…’ (VII, ೭), ಶೈಲಾನಾಮವರೋಹತೀವ…’ (VII, ೮), ‘ಆಲಕ್ಷ್ಯದಂತ ಮುಕುರ್ಲಾ…’ (VII, ೧೭)- ಇತ್ಯಾದಿ. ಇವು ಕಾವ್ಯಸೌಂದರ್ಯವನ್ನು ಹೆಚ್ಚಿಸುತ್ತವೆ. ಕಥೆಯ ಓಟಕ್ಕೆ ಅಡ್ಡಿಯಾಗುವುದಿಲ್ಲ.

W II, ೧೨೮.

ಮು.ರಾ’ ಪೀಠಿಕೆ, ಪು ೨೬.

S.D 204

J.A.೧೯೨೩. ಅಕ್ಟೋ., ಡಿಸೆಂ., ಪು. ೨೦೮

ind. Ant. ೧೯೧೩. ಪು. ೨೬೫ J.B.O.R.S., ೩೩ I.H.Q., VIII, ೧೬೩.

I.D. ೭೧.

ಕಾಳಿದಾಸನೂ ಹೀಗೆ ತನ್ನ ಆಶ್ರಿತರಾಜನ ಹೆಸರನ್ನು ಸೂಚಿಸುವಂತಿದೆ - ಪುಟ ೧೨೪ ನೋಡಿ.

J.B.O.R.S., ೧೯೩೨, ಪು. ೩೭ ಇತ್ಯಾದಿ

ಯಾಕೊಬಿ, V.O.J.II. p 212f; ಧ್ರುವ V, O. J. V. p.25f ‘ಮು.ರಾ.’, ಪೀಠಿಕೆ.

‘ದಂತಿವರ್ಮಾ’ ಎಂಬ ಪಾಠವೂ ಹೀಗೆಯೇ; ರಾಷ್ಟ್ರಕೂಟರಲ್ಲಿ ಇಬ್ಬರೂ (ಕ್ರಿ.ಶ. ೬೦೦, ೭೫೦) ಪಲ್ಲವರಲ್ಲಿ ಒಬ್ಬನೂ (ಕ್ರಿ.ಶ.೭೭೯) ಈ ಹೆಸರಿನ ರಾಜರಿದ್ದರು.

V.O.J., II, ೨೧೨.

‘ಕರ್ಣಾಟಕ ಮುದ್ರಾರಾಕ್ಷಸ ನಾಟಕಂ’ (ಮೋ. ರಾಜಶೇಷ ಶಾಸ್ತ್ರೀಗಳಿಂದ), ಪೀಠಿಕೆ ಪು. ೨೫; I.H.Q., vii, ೧೬೮

J.R.A.S., ೧೯೨೩, ೫೯೨-೫೯೩; ind. Ant., March, ೧೯೨೨ ಪು. ೪೯-೫೧; V.O.J. II, v

K.H. Dhruva, Poona Orientalist, Oct., ೧೯೩೬.

‘ದ.ರೂ.’ ವ್ಯಾಖ್ಯಾನ; ಮೊದಲನೆಯ ಪರಿಚ್ಛೇದದ ಕೊನೆ; ಈ ಭಾಗವು ಪ್ರಕ್ಷಿಪ್ತವೆಂಬುದು ಕೆಲವರ ಅಭಿಪ್ರಾಯ; (I.C., Vol. I, Nos. ೨ and ೩) ಆಗಲೂ, ಈ ನಾಟಕದ ಮೂಲವನ್ನು-ಪುರಾಣಾದಿಗಳೆಂದು ಹೇಳದೆ-ಬೃಹತ್ಕಥೆಯೆಂದು ಹೇಳಿರುವುದರಿಂದ, ಅದರಲ್ಲಿ ಈ ಕಥೆಯನ್ನು ನೋಡಿದ (ಧನಿಕನಲ್ಲದಿದ್ದರೆ ಮತ್ತೆ ಯಾರೋ) ಪೂರ್ವಿಕರು ಹೀಗೆ ಬರೆದರೆಂದಾದರೂ ಹೇಳಬಹುದು.

ಈ ಮಾತು ವಾಯುಪುರಾಣ ಮತ್ಸ್ಯಪುರಾಣಗಳಲ್ಲಿಯೂ ಬರುತ್ತದೆ. ಇದಕ್ಕೆ ‘ರಾಜ’ ಎಂಬ ಅರ್ಥವಿರಬಹುದು. (Gk. Basileus)-I.H.Q. ೧೯೩೯. page ೪೭೨.

‘ಶೃಂಗಾರ ಪ್ರಕಾಶ’ ದಲ್ಲಿ.

‘ಹರ್ಷಚರಿತ’ ದಲ್ಲಿ

J.B.O.R.S., xviii, p ೧೯; Ind. Ant., ೧೯೨೩, pp. ೧೮೨-೧೮೩.

J.A. Oct.-Dec., ೧೯೨೩, pp. ೨೦೧-೬. ಈಚೆಗೆ ಡಾ ॥ ರಾಘವನ್ ಅವರು ಅಭಿನವಗುಪ್ತನ ನಾಟ್ಯಶಾಸ್ತ್ರ ವ್ಯಾಖ್ಯಾನ ಮುಂತಾದ ಇತರ ಕಡೆಗಳಲ್ಲಿ ದೊರೆಯುವ ಭಾಗಗಳನ್ನೂ ಸಂಗ್ರಹಿಸಿ ಒಂದು ಲೇಖನವನ್ನು ಬರೆದಿದ್ದಾರೆ- The journal of the Henaras Hindu University II 23-54, 307

‘ವಸಂತಸೇನಾಮುದ್ದಿಶ್ಯ ಮಾಧವಸ್ಯೋಕ್ತಿಃ.’ Ind. Ant., ೧೯೨೩.

J.A., ೧೯೨೩, Oct. Dec., pp. ೨೦೧-೨೦೬

A.B.O.R., XII, i.

J.B.H.R.S., II, III

ಅವನಿಗೆ ಹರ್ಷವರ್ಧನ, ರಾಜಪುತ್ರ-ಶೀಲಾದಿತ್ಯ ಎಂದೂ ಹೆಸರು.

ಪರಮಮಾಹೇಶ್ವರೋ ಮಹೇಶ್ವರ ಇವ ಸರ್ವಸತ್ವಾನುಕಂಪಃ (ಬನ್ ಸ್ಖೆರ ಶಾಸನ)

cf. ಏಕಃ ಶ್ಲಾಘ್ಯೋ ವಿವಸ್ವಾನ್… (ನಾಗಾನಂದ iii, ೧೮)

ಹಿಂದೂ ಚರಿತ್ರೆಯಲ್ಲಿ ಮೂವರು ಶ್ರೀಹರ್ಷರು ಪ್ರಸಿದ್ಧರಾಗಿದ್ದಾರೆ. ಇವರಲ್ಲಿ ಯಾರು ‘ರತ್ನಾವಳಿ’ ಮುಂತಾದವುಗಳ ಕರ್ತೃವೆಂಬ ಚರ್ಚೆಯನ್ನು ಇಲ್ಲಿ ಎತ್ತಿಲ್ಲ. ಸ್ಥಾಣೇಸ್ವರ ಕನ್ಯಕುಬ್ಜಗಳಲ್ಲಿ ಆಳಿದ ಹರ್ಷನೇ ಕರ್ತೃ ಎಂಬ ಸಿದ್ಧಾಂತವನ್ನು ಮಾತ್ರ ತೆಗೆದುಕೊಂಡಿದೆ. ಆ ಚರ್ಚೆಯನ್ನು ವಿ.ಎಸ್.. ಘಾಟೆ ಅವರಿಂದ ಸಂಪಾದಿತವಾದ ‘ರತಾವಳಿ’ ಯ ಪೀಠಿಕೆಯಲ್ಲಿಯೂ, ಕೃಷ್ಣಮಾಚಾರ್ಯರಿಂದ ಸಂಪಾದಿತವಾದ ‘ಪ್ರಿಯದರ್ಶಿಕಾ’ ನಾಟಿಕೆಯ ಭೂಮಿಕೆಯಲ್ಲಿಯೂ ನೋಡಬಹುದು.

‘ಕವೀಂದ್ರ ವಚನ ಸಮುಚ್ಚಯ,’ ‘ಸದುಕ್ತಿ ಕರ್ಣಾಮೃತ,’ ‘ಸುಭಾಷಿತಾವಳಿ’ ಮುಂತಾದ ಕಾವ್ಯಸಂಗ್ರಹಗಳಲ್ಲಿ ಹರ್ಷರಚಿತವೆಂದು ಕೆಲವು ಬಿಡಿ ಪದ್ಯಗಳೂ ಉಕ್ತವಾಗಿವೆ.

ಕವಿಗಳಾದ ರಾಜರು ಇಲ್ಲದೆಯೇ ಇಲ್ಲ: - ಸಮುದ್ರಗುಪ್ತ, “ಶೂದ್ರಕ”, ಹೇಂದ್ರ ವಿಕ್ರಮವರ್ಮ, ನೃಪತುಂಗ ಇತ್ಯಾದಿ.-I.C., xx, ೨೦೧ ಪುಟ ನೋಡಿ.

(೧)ಆಢ್ಯರಾಜ ಕೃತೋತ್ಸಾಹೈಃ ಹೃದಯಸ್ಥೈಃ ಸ್ಮೃತೈರಪಿ । ಜಿಹ್ವಾನ್ನಃಕೃಷ್ಯಮಾಣೀವನ ಕವಿತ್ವೇ ಪ್ರವರ್ತತೇ ॥ -’ ಹರ್ಷಚರಿತ’ I, ಶ್ಲೋ. ೧೯. (ಆಢ್ಯರಾಜ = ಹರ್ಷ; ಉತ್ಸಾಹ=ಕಾರ್ಯವಿಶೇಷ?)

(೨)ಅಪಿ ಚಾಸ್ಯ ತ್ಯಾಗಸ್ಯಾರ್ಥಿನಃ ಪ್ರಜ್ಞಾಯಾಃ ಶಾಸ್ತ್ರಾಣಿ ಕವಿತ್ವಸ್ಯ ವಾಚಃ….ಕೌಶಲಸ್ಯ ಕಲಾ ನ ಪರ್ಯಾಪ್ತೋ ವಿಷಯಃ-’ ಹರ್ಷಚರಿತ’ II.

(೩)ಕಾವ್ಯಕಥಾಸ್ವಪೀತಮಮೃತಮುದ್ವಮಂತಂ -’ ಹರ್ಷಚರಿತ’ II.

(೪)ಮುಖನಿವಾಸಿನಿಂ ಸರಸ್ವತೀಂ ದಧಾನಂ -’ ಹರ್ಷಚರಿತ’ II.

ತಕಕುಸು ಭಾಷಾಂತರ, ಪು: ೧೬೩-೧೬೪.

Ind. Ant., (II. ಪು. ೧೨೭-೧೨೮) ಯಲ್ಲಿ, ಭೂಳರ್ ಅವರು ಬರೆದಿರುವ On the Authorship of the Ratnavali ಎಂಬ ಲೇಖನವನ್ನು ನೋಡಿ.

ಆದರೆ ವಿದೂಷಕನು ಸೂರ್ಯಾಸ್ತ (ರತ್ನಾ.III) ಉದ್ಯಾನಾದಿಗಳನ್ನು ವರ್ಣಿಸುವಾಗ ಉಪಯೋಗಿಸಿರುವ ಗದ್ಯವನ್ನು ನೋಡಿ.

“ಲೋಕೇ ಹಾರಿ ಚ ವತ್ಸರಾಜಚರಿತಂ” - ಪ್ರಸ್ತಾವನೆ, ರತ್ನಾ ಮತ್ತು ಪ್ರಿಯ.

ಒಂದರಲ್ಲಿ ‘ಸಹಜಾಭಿಜಾತ್ಯಜನಿತವಾದ ಸೇವೆ, ಇನ್ನೊಂದರಲ್ಲಿ ‘ಪ್ರೇಮಾ ಬಂಧ ವಿವಿರ್ಧಿತಾಧಿಕರಸ’ ವಾದ ಪ್ರೀತಿ.- ‘ರತ್ನಾವಳಿ’, III, ೧೧೮.

ಈ ಕಥೆಯನ್ನು ಓದುವಾಗ ಹರ್ಷನ ತಂಗಿ ರಾಜ್ಯಶ್ರೀಯು ಗಂಡನನ್ನು ಕಳೆದುಕೊಂಡು ನಿರಾಶ್ರಯಳಾಗಿ, ವಿಂಧ್ಯಾರಣ್ಯದಲ್ಲಿದ್ದ ಶರಭಕೇತುವನ್ನು ಆಶ್ರಯಿಸಿದ್ದುದ್ದು ಜ್ಞಾಪಕಕ್ಕೆ ಬರುತ್ತದೆ.

ಕಥಾಸರಿತ್ಸಾಗರಕ್ಕೂ ಮೂಲ ಬೃಹತ್ಕಥೆಗೂ ವಿಷಯದಲ್ಲಿ ತುಂಬ ವ್ಯತ್ಯಾಸವಿದ್ದಂತೆಯೂ ಭಾಸಹರ್ಷರು ಅನುಸರಿಸಿರುವ ಅನುಪೂರ್ವಿ ಮೂಲ ಬೃಹತ್ಕಥೆಯನ್ನು ಹೋಲುವಂತೆಯೂ ತೋರುತ್ತದೆ. ಬೃಹತ್ಕಥಾ ಶ್ಲೋಕ ಸಂಗ್ರಹವು ಮೂಲವನ್ನು ಹೆಚ್ಚು ಹೋಲುತ್ತದೆಯೆಂದು ಹಿಂದೆ ಹೇಳಿದೆ. ಈ ಸಂಗ್ರಹದಲ್ಲಿಯೂ ಪ್ರಿಯದರ್ಶಿಕದಲ್ಲಿಯೂ ಪ್ರತೀಹಾರಿಯ ಹೆಸರು ‘ಯಶೋದರೆ’ ಎಂದೇ ಇದೆ. ಕ.ಸ.ಸಾ. ದಂತೆ, ಪದ್ಮಾವತೀ ವಿವಾಹ ನಡೆಯುವುದು ಬಂಧುಮತೀ ಪ್ರಕರಣವಾದ ಮೇಲೆ. ಆದರೆ ಪ್ರಿಯದರ್ಶಿಕೆಯಲ್ಲಿ (ಅಂಕ III) ಆಗಲೇ ಪದ್ಮಾವತಿಯ ಹೆಸರನ್ನು ಹೇಳಿದೆ. ‘ರತ್ನಾವಳಿ’ ಯಲ್ಲಿಯ ವತ್ಸರಾಜನು ಲಾವಾಣಕ ವಹ್ನಿಯನ್ನು ನೆನೆಸಿಕೊಳ್ಳುತ್ತಾನೆ (ಅಂಕ IV.೧೫). ಲಾವಣಕ ಪ್ರವಾದ ಹುಟ್ಟಿದ ತರುಣದಲ್ಲಿಯೇ ಅವನು ಪದ್ಮಾವತಿಯನ್ನು ಮದುವೆಯಾದದ್ದು. ಆದ್ದರಿಂದ ಹರ್ಷನ ಪ್ರಕಾರ ‘ರತ್ನಾವಳೀ’ ಕಥೆ ನಡೆದದ್ದೂ ಪದ್ಮಾವತೀ ವಿವಾಹವಾದ ಮೇಲೆಂದಿರುವಂತೆ ಕಾಣುತ್ತದೆ. ಇವೆಕ್ಕೆಲ್ಲಾ ಕಾರಣವು ಕವಿಕಲ್ಪನೆಯೋ ಕಥೆಯಲ್ಲಿ ಪಾಠಂತರವೋ ಹೇಳುವುದು ಕಷ್ಟ.

‘ಪ್ರಿಯದರ್ಶಿಕೆ’ ಯಲ್ಲಿ ಕಂಚುಕಿ ತೀರ್ಥಯಾತ್ರೆಗೆ ಹೋಗುವುದೂ, ‘ರತ್ನಾವಳಿ’ ಯಲ್ಲಿ ರತ್ನಾವಳಿ ತಾಯಿತಂದೆಗಳನ್ನು ಬಿಟ್ಟು ಸಿಂಹಳದಿಂದ ಕೌಶಾಂಬಿಗೆ ಕಂಚುಕಿಯ ಜೊತೆಯಲ್ಲಿ ಹೊರಡುವುದೂ ಅಸಂಭವವಾಗಿ ತೋರುವುದರಿಂದ ಅವು ಸಂವಿಧಾನ ರಚನೆಯಲ್ಲಿ ಲೋಪಗಳೆನ್ನಬಹುದು.

ಇದು ‘ಬೃಹತ್ಕಥಾಮಂಜರಿ’ (VI, XI) ಮತ್ತು ‘ವೇತಾಳ ಪಂಚವಿಂಶತಿ’ (XV)ಗಳಲ್ಲಿಯೂ ಬರುತ್ತದೆ.

‘ರತ್ನಾವಳೀ’, IV ೬ನ್ನೂ ನೋಡಿ.

ಒಂದು ಹಸ್ತಪ್ರತಿಯಲ್ಲಿ ಈತನ ಹೆಸರು ‘ಸಿಂಹಭೂತಿ’ ಎಂದಿದೆ.

‘ಮಾಲತೀಮಾಧವ’ ದ ಕೆಲವು ಪ್ರತಿಗಳಲ್ಲಿ ಇದು ವಿದರ್ಭ (ಬೀರಾರ್) ಪ್ರಾಂತದಲ್ಲಿದೆಯೆಂದು ಉಕ್ತವಾಗಿದೆ. ‘ಮಾಲತೀಮಾಧವ’ ದಲ್ಲಿ ಬರುವ ‘ಪದ್ಮಾವತಿ’ ಯೇ ಈ ಪದ್ಮಪುರವೆಂದೂ, ಅದು ಗ್ವಾಲಿಯರ್ ಸಂಸ್ಥಾನದಲ್ಲಿರುವ ‘ಪವಾಯ’ ಅಥವಾ ‘ನರ್ವಾ’ ಗ್ರಾಮವೆಂದೂ ಕೆಲವರು ಊಹಿಸುತ್ತಾರೆ. ನಾಗಪುರ ಪ್ರಾಂತದಲ್ಲಿರುವ ಚಂದ್ರಪುರ ಅಥವಾ ಚಾಂಡಾ ಗ್ರಾಮವಾಗಿರಬಹುದೆಂದು ಡಾ ॥ ಭಂಡಾರ್ಕರವರು ಅಭಿಪ್ರಾಯಪಡುತ್ತಾರೆ. ಮಧ್ಯಪ್ರಾಂತದ ಭಂಡಾರ ಜಿಲ್ಲೆಯಲ್ಲಿರುವ ಆಂಗಾವ್ ಸ್ಟೇರ್ಷನಿಂದ ಮೂರು ಮೈಲಿಯಲ್ಲಿ ಪದ್ಮಪುರವೆಂಬ ಊರು ಇದೆ. ಇದೇ ಭವಭೂತಿಯ ಊರು ಎಂದು ಮತ್ತೆ ಕೆಲವರ ಅಭಿಪ್ರಾಯ (The Hindu ೩೦.೮.೧೯೩೯). ಅಲ್ಲದೆ ‘ಭವಭೂತಿಯ ಮೂರು ನಾಟಕಗಳೂ ಕಾಲಪ್ರಿಯನಾಥ’ ನ ಜಾತ್ರೆಯಲ್ಲಿ ಅಭಿನಯಿಸಲ್ಪಟ್ಟಂತೆ ಹೇಳಿದೆ (ಪ್ರಸ್ತಾವನೆ). ಈ ಕಾಲಪ್ರಿಯನ ಗುಡಿ ಉಜ್ಜಯಿನಿಯಲ್ಲಿ ಪ್ರಸಿದ್ಧವಾದದ್ದಿರಬಹುದು ಅಥವಾ ಯಮುನಾತೀರದಲ್ಲಿರುವ ‘ಕಾಲ್ಪಿ’ ಎಂಬುದು ಇರಬಹುದು. ಆದರೆ ಇವೊಂದೂ ನಿರ್ವಿವಾದವಾಗಿ ನಿಶ್ಚಿತವಾಗಿಲ್ಲ.

ವೀರರಾಘವರ ವ್ಯಾಖ್ಯಾನ.

cf. ಯದ್ವೇದಾಧ್ಯಯನಂ ತಥೋಪನಿಷದಾಂ ಸಾಂಖ್ಯಸ್ಯ ಯೋಗಸ್ಯ ಚಜ್ಞಾನಂ ತತ್ಕಥನೇನ ಕಿಂ?…(ಮಾಲತೀಮಾಧವದ ಪ್ರಸ್ತಾವನೆ); ಮತ್ತು ಮಾ.ಮಾ., V ಇತ್ಯಾದಿ.

ಉದಾ.-ಮಾ.ಮಾ. ದ IXರಲ್ಲಿ ವಿಕ್ರಮೋರ್ವಶೀಯ ಮೇಘಸಂದೇಶಗಳ ಛಾಯೆ.

‘ಇಂಡಿಯನ್ ಹಿಸ್ಟಾರಿಕಲ್ ಕ್ವಾರ್ಟರ್ಲಿ’ ಪತ್ರಿಕೆಯಲ್ಲಿರ್ (ಜೂ, ೧೯೩೧) ದಿನೇಶಚಂದ್ರ ಭಟ್ಟಾಚಾರ್ಯರು ಈ ವಿಚಾರವಾಗಿ ಒಂದು ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ‘ಭವಭೂತಿ ಸುರೇಶ’ ನೆಂಬ ಹೆಸರುಳ್ಳ ಒಬ್ಬ ವಿಶ್ವರೂಪನ ಪ್ರಸ್ತಾಪ ಬರುತ್ತದೆ. ಪ್ರಕೃತ ನಾಟಕ ಕರ್ತನು “ಭವಭೂತಿ ಶ್ರೀಕಂಠ” ನಾದ್ದರಿಂದ ಈ ಇಬ್ಬರೂ ಒಂದೇ ವ್ಯಕ್ತಿಯಾಗಿರಲಾರದು. ಉಂಬೇಕನೂ ಭವಭೂತಿಯೂ ಒಬ್ಬನೇ ಎಂದು ಪಿ.ಪಿ. ಕಾಣೆಯವರು ಅಭಿಪ್ರಾಯಪಡುತ್ತಾರೆ. (J.B.B.R.A. ೧೯೨೮ pp. ೨೮೯-೯೩) ಭವಭೂತಿ ಯ ಹೆಸರು ಹಿಂದೆ ಅಷ್ಟು ಪ್ರಸಿದ್ಧವಾಗಿರದೆ ಈ ವಿಕಲ್ಪಗಳೆಲ್ಲಾ ಹುಟ್ಟಿರಬಹುದೆಂದು ಡಾ ॥ ಬೆಲ್ವಳಕರರು ಊಹಿಸುತ್ತಾರೆ (ಪೀಠಿಕೆ, xIiii)

“ಪ್ರಾಚೀನ ಕರ್ನಾಟಕ” ದಲ್ಲಿ (ಅಕ್ಟೋಬರ್, ೧೯೩೨) ನಾ. ಶ್ರೀ. ರಾಜಪುರೋಹಿತರು ಭವಭೂತಿಗೂ ಸುರೇಶ್ವರಾದಿಗಳಿಗೂ ಯಾವ ಸಂಬಂಧವೂ ಇರಲಾರದೆಂದು ತೋರಿಸಿದ್ದಾರೆ.

ಬಾಲರಾಮಾಯಣ (I.೧೬)

ಕವಿವಾಕ್ಪತಿರಾಜ ಶ್ರೀ ಭವಭೂತ್ಯಾದಿಸೇವಿತಃ ।

ಚಿತೋ ಯಯೌ ಯಶೋವರ್ಮಾ ತದ್ಗುಣಸ್ತುತಿವಂದಿತಾಂ ॥

ಭವಭೂಇ ಜಲಹಿಣಗ್ಗದ ಕಬ್ಬಾಮಯ ರಸಕಣಾ ಇವ ಪುರಂತಿ ।

ಜಸ್ಸ ವಿಸೇಸಾ ಅಜ್ಜವಿ ವಿಯಡೇಸು ಕಹಾಣಿವೇಸೇನು ॥

‘ಶಾರ್ಙ್ಗಧರ ಪದ್ಧತಿ’ ಮುಂತಾದ ಕೆಲವು ಕಾವ್ಯ ಸಂಗ್ರಹಗಳಲ್ಲಿ ಭವಭೂತಿಯದೆಂದು ಹತ್ತು ಹನ್ನೆರಡು ಶ್ಲೋಕಗಳು ದೊರೆಯುತ್ತವೆ. ಇವು ಅವನಮೂರು ನಾಟಕಗಳಲ್ಲಿ ದೊರೆಯುವುದಿಲ್ಲವಾದ್ದರಿಂದ ಭವಭೂತಿ ಬೇರೆ ನಾಟಕಗಳನ್ನೋ ಕಾವ್ಯಗಳನ್ನೋ ಬರೆದಿದ್ದರೂ ಬರೆದಿರಬಹುದು.

() ಈ ಆವರಣ ಚಿಹ್ನೆಗಳ ಮಧ್ಯೆ ಇರುವ ಸಂಗತಿಗಳು ತೆರೆಯ ಹಿಂದೆ ನಡೆಯುತ್ತವೆ ಅಥವಾ ವಿಷ್ಕಂಭಾದಿಗಳಿಂದ ಸೂಚಿತವಾಗಿವೆ.

ಈ ಭಾಗವು ಭವಭೂತಿಯ ಶೈಲಿಯನ್ನೇ ಅನುಕರಿಸಿದ್ದರೂ ಪೇಲವವಾಗಿದೆ. ಇದರಿಂದ ಈಚಿನವರು ಯಾರೂ ಅನುವಾದ ಮಾಡಿಲ್ಲ; ಇದರಲ್ಲಿ ಆವೃತ್ತಿಯೂ ಇಲ್ಲ.

ಅಹಲ್ಯಾ ಶಬರೀ ವೃತ್ತಾಂತಗಳು, ಸುಗ್ರೀವ ರಾಜ್ಯಾಭಿಷೇಕ-ಇತ್ಯಾದಿ ಮಿಕ್ಕವುಗಳನ್ನು ಕಥಾಸಂಗ್ರಹದಲ್ಲಿ ಆವರಣ ಚಿಹ್ನೆಗಳಿಂದ ಸೂಚಿಸಿದೆ.

ಮಹಾಪುರುಷಸಂರಂಭೋ ಯತ್ರ ಗಂಭೀರಭೀಷಣಃ ।

ಪ್ರಸನ್ನ ಕರ್ಕಶಾ ಯತ್ರ ವಿಪುಲಾರ್ಥ ಚ ಭಾರತೀ ॥

ಅಪ್ರಾಕೃತೇಷು ಪತ್ರೇಯ ಯತ್ರ ವೀರಃ ಸ್ಥಿತೋ ರಸಃ ।

ಭೇದೈಃ ಸೂಕ್ಷ್ಮೈರಭಿವ್ಯಕ್ತೈಃ ಪ್ರತ್ಯಾಧಾರಂ ವಿಭಜ್ಯತೇ ॥ (ಪ್ರಸ್ತಾವನೆ, ೨-೩)

ಉತ್ತರಕಾಂಡದಲ್ಲಿ ಲಕ್ಷ್ಮಣ.

ಮುದ್ದಣ್ಣನ ‘ರಾಮಾಶ್ವಮೇಧ’ ವನ್ನು ನೋಡಿ. ಇದು ಯಜ್ಞಾಶ್ವ ಸಂಚಾರ, ತಂದೆ ಮಕ್ಕಳ ಕಾಳಗ ಮುಂತಾದ ಅಂಶಗಳಲ್ಲಿ ಜೈಮಿನಿಭಾರತದ ಜ್ಞಾಪಕವನ್ನು ತರುತ್ತದೆ. ಆದರೆ ಯಾವುದನ್ನು ಅನುಸರಿಸಿ ಯಾವುದು ಹುಟ್ಟಿತೋ ಗೊತ್ತಿಲ್ಲ.

ಇದು ಕ್ರೋಧಪರವಶನಾದ ಯಾವನೋ ಒಬ್ಬ ಅಗಸನ ಮಾತು ಮಾತ್ರವಲ್ಲ.

ಮೊದಲನೆಯ ಅಂಕದ ಆದಿಯಲ್ಲಿ ಬರುವ ಈ ಸಾಂಸಾರಿಕ ಚಿತ್ರವು ಪ್ರತಿಮಾನಾಟಕದ ಮೊದಲನೆಯ ಅಂಕವನ್ನು ಜ್ಞಾಪಿಸುತ್ತದೆ.

‘ದೂತವಾಕ್ಯ’ ದಲ್ಲಿ ಬರುವ ಚಿತ್ರದ ಕಲ್ಪನೆಯನ್ನು ಹೋಲಿಸಿ.

ದೇವ್ಯಾಮಪಿ ಹಿ ವೈದೇಹ್ಯಾಂ….ಸರ್ವಥಾ ಋಷಯೋ ದೇವತಾಂಶಶ್ರೇಯೋ ವಿಧಾಸ್ಯಂತಿ.

ಪುಟಪಾಕ ಪ್ರತೀಕಾಶೋ ರಾಮಸ್ಯ ಕರುಣೋ ರಸಃ -III. ೪೭)

ಕೀತ್, ೧೯೨-೧೯೩; ಬೆಳ್ವಳಕರ್, ‘ಉತ್ತರ ರಾಮಚರಿತ್ರೆ’ ಯ ಪೀಠಿಕೆ, ಪುಟ ೬೮.

ಬೆಳ್ವಳಕರ್, ಅದೇ, ೬೭-೬೮; J.R.A.S, ಏಪ್ರಿಲ್, ೧೯೧೪; ಪುಟ ೩೨೫.

ಕಥಾಸರಿತ್ಸಾಗರ, ತರಂಗ ೧೩.

ಅದೇ, ತರಂಗ ೨೫, ೧೨೧ ಇತ್ಯಾದಿ.

ಹೀಗೆಯೇ ಕೆಲವು ಅಂಶಗಳು ಅಸಂಭವವಾಗಿಯೂ ತೋರುತ್ತವೆ. ಮಾಲತೀ ವೇಷದ ಮಕರಂದನಿಗೂ ನಂದನನಿಗೂ ಭೂರಿವಸುವಿನ ಮನೆಯಲ್ಲಿಯೇ ಮದುವೆ ನಡೆಯುತ್ತದೆ. ಆದರೆ ತಾಯಿತಂದೆಗಳಿಗೂ ಮೋಸವು ಗೊತ್ತಾಗುವುದಿಲ್ಲ; ಅಥವಾ ಕಾಮಂದಕಿ ಈ ವಿಚಾರವನ್ನು ಅವರಿಗೆ ತಿಳಿಸಿದ್ದಳೋ !

‘ಮಾ.ಮಾ.’, ಪ್ರಸ್ತಾವನೆ.

‘ಮ. ವೀ. ಚ.’ ಪ್ರಸ್ತಾವನೆ ೪; ‘ಉ. ರಾ. ಚ.’ ಪ್ರಸ್ತಾವನೆ ೧; ಭರತ ವಾಕ್ಯ.

ಸಂಸ್ತ್ಯಾಯ, ಶೇವಧಿ, ಅನುಪ್ಲವ (=ಮನೆ, ನಿಧಿ, ಸಹಾಯ,) ಇತ್ಯಾದಿ.

‘ಮಾ. ಮಾ,’ ಅಂಕ ೩, ಲವಂಗಿಕೆಯ ಮಾತು, ನೇಪಥ್ಯವಚನ; ಅಂಕ ೮, ಕಲಹಂಸಕನ ಮಾತು ಇತ್ಯಾದಿ.

‘ಮಾ. ಮಾ.’ ದ ೧ನೆಯ ಅಂಕದಲ್ಲಿ ಬರುವ ಚಿತ್ರಲೇಖನವನ್ನೂ ೯ನೆಯ ಅಂಕದಲ್ಲಿ ಕಂಡುಬರುವ ಮೇಘಸಂದೇಶ ವಿಕ್ರಮೋರ್ವಶೀಯಗಳ ಸಾದೃಶ್ಯವನ್ನೂ, ‘ಉತ್ತರ ರಾಮಚರಿತ’ ದಲ್ಲಿ ಬರುವ ಗರ್ಭಾಂಕವನ್ನೂ ನೋಡಿ.

‘ಮಾ. ಮಾ.’, ಅಂಕ ೫, ಮಾಲತಿಯ ಮತ್ತು ಶ್ಮಶಾನದ ವರ್ಣನೆ -ಇತ್ಯಾದಿ.

‘ಮಾ. ಮಾ.’, ಅಂಕ ೬ ಕರ್ಪೂರ ಹಾರ ಹರಿಚಂದನ ಚಂದ್ರಕಾಂತ…ಹಿಮಾದಿವರ್ಗಃ ॥ ಇತ್ಯಾದಿ. ‘ಮಾ. ಮಾ.’, ೮, ಮತ್ತು ‘ಉ. ರಾ. ಚ.’, ೧. ಬಾಹುರೈಂದವ ಮಯೂಖ ಚುಂಬಿತ…ಮಣಿಹಾರವಿಭ್ರಮಃ ॥

‘ಉ. ರಾ. ಚ,’ - ವಜ್ರಕೀಲಾಯಿತಂ; ದೃಢವಜ್ರಲೇಘಟಿತ ಬಂಧನಿಶ್ಚಲಂ ಹತಜೀವಿತಂ; ವಜ್ರಮಯಃ, ಅಪಿ ದಲತಿ ವಜ್ರಸ್ಯ ಹೃದಯಂ; ಕುಕೂಲಾ ನಾಂ ರಾಶೌತದನು ಹೃದಯಂ ಪಚ್ಯತ ಇವ; ಅಮೃತರಸ ಸ್ರೋತಸಾ ಸಿಂಚತೀವ; ದುರ್ವಿಪಾಕಂ ವಿಷದ್ರುಮಂ; ಮೂರ್ತಿವಾನಿವ ಮಹೋತ್ಸವಃ ಕರ; ಕರುಣಸ್ಯ ಮೂರ್ತಿಃ; ಕಾಯವಾನಸ್ತ್ರವೇದಃ; ನಿಷ್ಪೀಡಿತೇಂದು ಕರಕಂದಲಜೋನುಸೇಕಃ; ಕೋಪ್ಯಯಂ ದೇಹದಾಹಃ; ನಿಷ್ಪೀಡಿತೇಂದು ಕರಕಂದಲಜೋನುಸೇಕಃ; ಕೋಪ್ಯಯಂ ದೇಹದಾಹಃ, ಕೋಪ್ಯತಿಶಯಃ, ಕಿಮಪಿದ್ರವ್ಯಂ; ವಿಕಾರಃ ಕೋಪ್ಯಂ ತರ್ಜಡಯತಿ.- ಇತ್ಯಾದಿ.

‘ಉ. ರಾ. ಚ.’, ಅಂಕ II (೨೯-೩೦) ಪಂಚವಟಿಯ ವರ್ಣನೆ, V ಯುದ್ಧ ವರ್ಣನೆ ಇತ್ಯಾದಿ.

ಅದೇ, ಅಂಕ I (ಸೀತೆಯ ಮಾತು) IV (ವಟುಸಂವಾದ)-” ಧಿಕ್ ಪ್ರಹಸನಂ!”

ಭವಭೂತಿಯ ಶೀಕರಿಣೀವೃತ್ತವನ್ನು ಕ್ಷೇಮೇಂದ್ರನು ಹೊಗಳುತ್ತಾನೆ:

ಭವಭೂತೇಶ್ಶಿಖರಿಣೀ ನಿರರ್ಗಲತರಂಗಿಣೀ ।

ರುಚಿರಾ ಘನಸಂದರ್ಭೇಯಾ ಮಯೂರೀವ ನೃತ್ಯತಿ ॥ ಸುವೃತ್ತತಿಲಕ ೩೩.

‘ಮ, ವೀ ಚ.’, I, ೫೪, ಧನುರ್ಭಂಗ ವರ್ಣನೆ, ಇತ್ಯಾದಿ.

ಅಲ್ಲಲ್ಲಿ ನಾನಾ ನೆವಗಳಿಂದ ಅವನು ಮಾಡಿಕೊಂಡಿರುವ ಆತ್ಮಪ್ರಶಂಸೆಯನ್ನು ನೋಡಿ-

‘ಮಾ. ಮಾ.’ -ಅಹೋ ವೈದಗ್ಧ್ಯಂ- I, ಅಹೋ ಉಪನ್ಯಾಸಶುದ್ಧಿಃ… ಶಾಸ್ತ್ರೇಷು ನಿಷ್ಠಾ… ಕಾಮದುಘಾಃ ಕ್ರಿಯಾಸು- III. ಅಹೋ ಸರಸರಮಣೀಯತಾ ಸಂವಿಧಾನಸ್ಯ ! VI. -ಆಶ್ಚರ್ಯಂ….ಪರಿಣಾಮ ರಮಣೀಯತ್ವಂ ವಿಧೇಃ -X, ಅಸ್ತಿ ವಾ ಕುತಶ್ಚಿದೇವಂಭೂತಮದ್ಭುತಂ ವಿಚಿತ್ರರಮಣೀ ಯೋಜ್ಜ್ವಲಂ ಮಹಾ ಪ್ರಕರಣಂ! - X ಇತ್ಯಾದಿ.

ಈ ಶ್ಲೋಕದಲ್ಲಿ ಭವಭೂತಿ ತನ್ನ ಅನುಭವಕ್ಕೆ ಬಂದ ಯಾರನ್ನೋ ವರ್ಣಿಸಿರುವಂತೆ ತೋರುತ್ತದೆ; (ಇಂಥವರನ್ನು ಈಗಿನ ಕಾಲದಲ್ಲಿ ವಿಶೇಷವಾಗಿ ನೋಡಬಹುದು.) ಆದ್ದರಿಂದ ಇದು ಬಹು ನೈಸರ್ಗಿಕವಾಗಿದೆ-

ಬಹಿಸ್ಸರ್ವಾಕಾರಪ್ರಗುಣರಮಣೀಯಂ ವ್ಯವಹರನ್

ಪರಾಭ್ಯೂಹಸ್ಥಾನಾನ್ಯಪಿ ತನುತರಾಣಿ ಸ್ಥಗಯತಿ ।

ಜನಂ ವಿದ್ವಾನೇಕಃ ಸಕಲಮಧಿಸಂಧಾಯ ಕಪಟೈಃ

ತಟಸ್ಥಃ ಸ್ವಾನರ್ಥಾನ್ ಘಟಯತಿ ಚ ಮೌನಂ ಚ ಭಜತೇ ॥ (ಮಾ.ಮಾ., I)

ನಿಹಂತಿ…ಪಾಂಡುಸುತ್ಸುಯೋಧನಂ (I. ೫); ಭಗ್ನಂ… ಭೀಮೇನ (II); ಅಪಿ ನಾಮ ಭವೇನ್ಮೃತ್ಯುಃ ನ ಚ ಹಂತಾ ವೃಕೋದರಃ (IV. ೯); ರಾಕ್ಷಸ ಸದೃಶಂ ಹೃದಯಂ ಭವತಃ (VI) ಇತ್ಯಾದಿ.

ಅವನು ಬ್ರಾಹ್ಮಣನೋ ಕ್ಷತ್ರಿಯನೋ ಎಂಬ ವಿಚಾರದಲ್ಲಿ ಸ್ವಲ್ಪ ಸಂದೇಹವಿದೆ. ಮಹೇಂದ್ರಪಾಲನ ಉಪಾದ್ಯಾಯನಾದ್ದರಿಂದ ಅವನು ಬ್ರಾಹಣನೆನ್ನಬೇಕಾಗುತ್ತದೆ. ಹೆಸರನ್ನು ನೋಡಿಯೇ ಸಂದೇಹಪಡಬೇಕಾದುದಿಲ್ಲ; ಏಕೆಂದರೆ ರಾಜಶಬ್ದವು ಚಂದ್ರವಾಚಿಯಾಗಬಹುದು; ಆದರೆ ಅವನ ಹೆಂಡತಿ “ಚಾಹುವಾನ” (ಚೌಹಣ)ವಂಶದವಳು (ಕ.ಮಂ., I.೧೧) ಈ ವಂಶ ಕ್ಷತ್ರಿಯವಂಶ; ಅಲ್ಲದೆ ಅವನಿಗೆ “ಪರಾಕ್ರಮಧನಃ” ಎಂಬ ವಿಶೇಷಣವಿದೆ.(ಬಾ, ರಾ., I ೧೮). ಇದು ಕ್ಷತ್ರಿಯನಿಗೆ ಉಚಿತವಾದದ್ದು.

ರಾಜಶೇಖರನು ತನ್ನ ನಾಟಕಗಳಲ್ಲಿ ಉಪಯೋಗಿಸಿರುವ ಪ್ರಾಕೃತಗಳು ಎರಡೇ(ಗದ್ಯದಲ್ಲಿ) ಶೌರಸೇನೀ ಮತ್ತು (ಪದ್ಯದಲ್ಲಿ) ಮಹಾರಾಷ್ಟ್ರೀ. ಅವನ ಪ್ರಾಕೃತದಲ್ಲಿ ಮೃಚ್ಛಕಟಿಕದ ಪ್ರಾಕೃತದ ವೈವಿಧ್ಯವಿಲ್ಲ. ಆದರೆ ದೇಶೀಶಬ್ದಗಳು ಅಲ್ಲಲೇ ಬರುತ್ತವೆ-ಒಲ್ಲ (ಒದ್ದೆ), ಕೋಟವೀ (ಬೆತ್ತಲೆ ಹೆಂಗಸು), ಖಿಡಕ್ಕಿ ಆ (ಸಣ್ಣ ಬಾಗಿಲು), ಚಂಗ (ಚೆಂದ), ತರಟ್ಟೀ (ಗಟ್ಟಿಗಿತ್ತಿ), ತಸರ (ಒರಟು ರೇಷ್ಮೆ), ಪೊತ್ತ (ಬಟ್ಟೆ), ಸಿಪ್ಪಿ (ಮುತ್ತಿನ ಚಿಪ್ಪು)-ಇತ್ಯಾದಿ.

ರಾಜಶೇಖರನ ‘ಶಾರ್ದೂಲವಿಕ್ರೀಡಿತ’ ಗಳು ಹಿಂದೆ ಹೆಸರಾಗಿದ್ದಂತೆ ಕಾಣುತ್ತವೆ. ಇವೇ ಅವನ ಕೃತಿಗಳಲ್ಲಿ ಹೆಚು; ‘ಬಾಲರಾಮಾಯಣ’ ದ ಪದ್ಯಗಳಲ್ಲಿ ೨೦೦ಕ್ಕೆ ಮೇಲ್ಪಟ್ಟು ಅವೇ ಆಗಿವೆ. -” ಶಾರ್ದೂಲ ಕ್ರೀಡಿತೈರೇವ ಪ್ರಖ್ಯಾತೋ ರಾಜಶೇಖರಃ” -ಕ್ಷೇಮೇಂದ್ರ (‘ಸುವೃತ್ತತಿಲಕ’, III. ೩೫).

ರಸನಾಸು ಚ ಸುಕವೀನಾಂ ನಿವಸತಿ ಸಾರಸ್ವತಃ ಚಕ್ಷುಃ- ಬಾ.ರಾ., ೭. ಜೈಹ್ವಂ ಚಕ್ಷುರ್ನಿರ್ನಿಮೇಷಂ ಕವೀನಾಂ-ಬಾ.ಭಾ. I. ೩.

ಆದ್ದರಿಂದಲೇ ಈ ನಾಟಿಕೆಗೆ ‘ವಿದ್ಧ ಶಾಲಭಂಜಿಕೆ” (ಕಡೆದ ಬೊಂಬೆ) ಎಂದು ಹೆಸರು.

೧ ಕೆಲವು ಪ್ರತಿಗಳಲ್ಲಿ ‘ಅನೂಪರಾಧಸ್ಯ’ ಎಂಬ ಪಾಠವಿದೆಯೆಂದು ತಿಳಿದು ಬರುತ್ತದೆ. ಈ ಹೆಸರಿನ ಊರು ಯಾವುದೂ ಗೊತ್ತಿಲ್ಲ. ಅನೂರಾಧಪುರವಾಗಿರಲಾರದು.

  1. ಇದರಲ್ಲಿರುವುದು ೧೩೮ ಪದ್ಯಗಳು ಮಾತ್ರ.

೩. ಶ್ರೀರಾಮ:- ಅಸೀದಿಯತ್ಸು ದಿವಸೇಷು ನಿರಸ್ತಜಾನೇಃ ನೈರಾಶ್ಯಲುಪ್ತ ಮನಸೋ ನ ಸುಖಂ ನ ದುಃಖಂ ॥ ೫-೪ ॥. ಆದರೆ ಹೊರಗೆ ತಾವರೆದಂಟಿನಂತೆ ಒರಟಾಗಿ ಕಾಣುತ್ತಿದ್ದರೂ ಒಳಗೆ ಅದರ ನೂಲಿನಂತೆ ಮೃದುವಾದ ಪ್ರೇಮವಿತ್ತು. (೫-೬).

೪. cf ವಾಲ್ಮೀಕಿ:- ಕಥಮದೃಷ್ಟಪೂರ್ವಾ ಅಶ್ರುತಪೂರ್ವಾ ಇಯಮಾಶ್ಚರ್ಯ ಪರಂಪರಾವೃತ್ತಿಃ?

೫. ಮುಂದೆ ಪಾರಿಪಾರ್ಶ್ವಿಕನೂ ಬರುತ್ತಾನೆ.

೬. ಆದ್ದರಿಂದಲೇ ಪ್ರಾಯಶಃ ಈ ನಾಟಕದ ಕೆಲವು ಭಾಗಗಳು ಮಾತ್ರ ದೊರೆತಿವೆ ಎಂಬ ಪ್ರತೀತಿ ಬಂದಿದೆ ಎಂದು ತೋರುತ್ತದೆ.

೭ ಕಾಳೀಕೃಷ್ಣ ಸಂಪಾದಿತ; ಕಲ್ಕತ್ತ, ೧೮೪೮, ಶ್ಲೋಕಗಳೇನೋ ಪೂರ್ತಿಯಾಗಿ ದೊರೆಯುತ್ತದೆ. ಆದರೆ ಅವುಗಳನ್ನು ಇಲ್ಲಿ ಪೂರ್ತಿಯಾಗಿ ಕೊಟ್ಟಿಲ್ಲ; ಸೂಚಿಸಿದೆ.

೮ ಈ ‘ಕಲ್ಪನ’ ವಾಕ್ಯಗಳನ್ನು ಸಂಪಾದಕರು ಸೇರಿಸಿದರೆಂದು ತಾವೇ ಹೇಳಿಕೊಂಡಿದ್ದಾರೆ.—” ಚಿತ್ರ ಪ್ರಕಟವಾದಿಕಂ…….ಕಥಿತಂ ಮಯಾ.”

೯ ಬಾಲಮನೋರಮಾ ಪ್ರೆಸ್, ಮದ್ರಾಸ್, ೧೯೨೬.

೧೦ ಗಂಭೀರೋದಾತ್ತ ವಸ್ತವೇ (I, ೬); ಗಂಭೀರಮಧುರೋದ್ಗಾರಾಃ ಗಿರಾಂವ್ಯೂತಯಃ (I, ೮); ಗಂಭೀರ ಮಧುರ ಸ್ಫುರದ್ವಾಗ್ಬ್ರಹ್ಮಾಣಃ (I ೯); ಗಂಭೀರ ಮನೋಹರಾಣಿ ವಚಾಂಸಿ (I, ೧೨); ಅಹೋ ಗಂಭೀರಮಿದಮುಪಸ್ಥಿತಂ ವಸ್ತು (III, ೬೦ ಗದ್ಯ) -ಇತ್ಯಾದಿ ವಾಕ್ಯಗಳನ್ನು ನೋಡಿ.

ಭಾಟ್ಟ ಪ್ರಾಭಾಕರ ಮತಗಳನ್ನು ಬಿಟ್ಟು ಮೂರನೆಯ ಮತವನ್ನು ಪ್ರತಿವಾದಿಸಿದ ಮೀಮಾಂಸಕ ಮುರಾರಿಯೊಬ್ಬನಿದ್ದಾನೆ. ಈ ಹೇಳಿಕೆ ಅವನಿಗೆ ಅನ್ವಯಿಸಬಹುದು. ನಾಟಕಕರ್ತನಾದ ಮುರಾರಿಗೆ ಅನ್ವಯಿಸುತ್ತದೆಂಬ ಮತವನ್ನು ಹಿಡಿದು ಇಲ್ಲಿ ವಿಮರ್ಶೆ ಮಾಡಿದೆ.

೧೧ ವಿಟಪ್ಯತೇ (ಪುಟ ೬೦), ತರ್ಣೋತಿ (ಪುತ ೭೫), ಸಾರಣೀ (ಪುಟ ೭೬); ಸಂಚೀವರಯಿಷ್ಯಮಾಣ (ಪುಟ ೯೬), ಉದ್ಗ್ರಥ್ನತೀಭಿಃ (ಪುಟ ೧೦೦), ವೈಯಾತ್ಯ (ಪುಟ ೧೧೪), ವ್ಯತಿವಿದ್ರತೇ (ಪುಟ ೧೨೦), ಕಲಂಬ (ಪುಟ ೧೬೯) ಅಂಡೀರ (ಪುಟ ೧೭೬) ಇತ್ಯಾದಿ.

೧೨ ಕರಿಕುಂಭಕೂಟಕೋಟಪ್ರಕಟಕಠೋರನಖಾಂಕುರಂ (IV, ೨೮); ಕೃತಾಂತ ದಂಷ್ಟ್ರಾಕ್ರ ಕಚಕಠೋರಕುಠಾರದುರ್ನಿರೀಕ್ಷ್ಯಃ (IV, ೩೬); ಕಶಕಂಠ ಕುಂಜರಶಿರಃ ಸಂಚಾರಿಪಂಚಾನನಃ (V, ೧೭) ಇತ್ಯಾದಿ.

೧೩ ಮುದ್ರಣ - ಬೆಂಗಳೂರ್ ಬುಕ್ ಡಿಪೋ, ಮುದ್ರಾಕ್ಷರ ಶಾಲಾ (ತೆಲುಗು ಅಕ್ಷರ), ೧೮೯೩.

೧೪ ಸಾಧಾರಣವಾಗಿ ಪ್ರತಿಯೊಂದು ಹೆಸರಿನ ಮುಂದೆಯೂ - ‘ಭಾಣ’ ಎಂಬುದು ಸೇರಿಕೊಂಡಿರುತ್ತದೆ.