“ವೀಥೀ” ಜಾತಿಯ ರೂಪಕವು ನಮಗೆ ಯಾವುದೂ ದೊರೆತಿಲ್ಲ. ಸಾಹಿತ್ಯ ದರ್ಪಣಕಾರನು ವೀಥಿಗೆ ‘ಮಾಳವಿಕಾ’ ಎಂಬುದು ಉದಾಹರಣೆಯೆಂದು ಹೇಳುತ್ತಾನೆ. ಇದು ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ ವಲ್ಲ. ಅದರಲ್ಲಿ ವೀಥಿಯ ಯಾವ ಲಕ್ಷಣವೂ ಇಲ್ಲ.