೦೮ ಸಮವಕಾರ

ಈಗ ನಮಗೆ ದೊರೆತಿರುವ “ಸಮವಕಾರವು” ಮೇಲೆ ಕಂಡ ವತ್ಸರಾಜನ ‘ಸಮುದ್ರ ಮಥನ’ ವೊಂದೇ; ಭರತನು ಇದೇ ಹೆಸರಿನ ಒಂದು ಸಮವಕಾರವನ್ನು ಉದಾಹರಣೆಯಾಗಿ ಹೇಳಿದ್ದಾನೆ. ವತ್ಸರಾಜನ ಕಾಲಕ್ಕೇ ಅದು ಸಿಕ್ಕದೆ, ಬೇರೆ ಉದಾಹರಣೆಯೂ ಇಲ್ಲದೆ, ಅವನು ಅದೇ ಹೆಸರಿನ ಹೊಸ ಒಂದು ಕೃತಿಯನ್ನು ರಚಿಸಿದಂತೆ ತೋರುತ್ತದೆ.

ಭಾಸನ ‘ಪಂಚರಾತ್ರವನ್ನು ‘ಸಮವಕಾರ’ ವೆಂದೂ ಕೆಲವರು ಭಾವಿಸುತ್ತಾರೆ.