ಈಗ ನಮಗೆ ದೊರೆತಿರುವ “ವ್ಯಾಯೋಗ” ಗಳಲ್ಲಿ ಭಾಸನ ‘ಮಧ್ಯಮ ವ್ಯಾಯೋಗ’ ವೇ ಪ್ರಾಚೀನ; ಅದನ್ನು ಬಿಟ್ಟರೆ ವತ್ಸರಾಜನ (ಸುಮಾರು ೧೧೫೦) ‘ಕಿರಾತಾರ್ಜುನೀಯ’ ವೇ ಹಿಂದಿನದಾಗಿ ಕಾಣುತ್ತದೆ. ಕೃಷ್ಣ ವಿಜಯ ವ್ಯಾಯೋಗ, ಧನಂಜಯವಿಜಯ ವ್ಯಾಯೋಗ, ನರಕಾಸುರ ವಿಜಯ ವ್ಯಾಯೋಗ, ನಿರ್ಭಯ ಭೀಮ ವ್ಯಾಯೋಗ, ಪ್ರಚಂಡ ಗರುಡ, ಪ್ರಚಂಡ ಭೈರವ, ಪಾರ್ಥಪರಾಕ್ರಮ, ಭೀಮ ವಿಕ್ರಮ ವ್ಯಾಯೋಗ, ರಾಮವಿಜಯ, ವಿನತಾನಂದ, ಸೌಗಂಧಿಕಾಹರಣ —ಇವು ಈಗ ನಮಗೆ ತಿಳಿದಿರುವ ಇತರ ವ್ಯಾಯೋಗಗಳು.