೬ ಚರಿತ್ರ ನಾಟಕಗಳು

ಸಂಸ್ಕೃತ ಸಾಹಿತ್ಯದಲ್ಲಿ ಶುದ್ಧವಾದ ಚರಿತ್ರೆ ಎನ್ನಬಹುದಾದ ಗ್ರಂಥವಿಲ್ಲ. ಆದ್ದರಿಂದ ಚರಿತ್ರ ನಾಟಕಗಳೂ ಇಲ್ಲವೇ ಇಲ್ಲವೆನ್ನಬಹುದು; ಇರುವವು ಕಲ್ಪನೆ ಕೂಡಿದ ಮಿಶ್ರವಸ್ತುವಿನವು; ಅವೂ ಕೆಲವು ಮಾತ್ರ. ಅವುಗಳ ಬೆಲೆ ಅಲ್ಪ.

ಅದ್ಭುತಾರ್ಣವ, ಕಂಪನೀ ಪ್ರತಾಪ ಮಂಡನ, ಗಂಗದಾಸಪ್ರತಾಪವಿಲಾಸ, ಚಂದ್ರಾಭಿಷೇಕ, ಜಯಸಿಂಹಾಶ್ವಮೇಧೀಯ, ದಿಲ್ಲೀ ಸಾಮ್ರಾಜ್ಯ, ನಂದಿಘೋಷ ವಿಜಯ (ಕಮಲಾ ವಿಲಾಸ), ಪ್ರತಾಪರುದ್ರ ಕಲ್ಯಾಣ, ಭೋಜ (ರಾಜ) ಸಚ್ಚರಿತ, ಲಲಿತವಿಗ್ರಹರಾಜ ನಾಟಕ, ಶೃಂಗಾರಮಂಜರೀ ಶಾಹರಾಜೀಯ, ಹಮ್ಮೀರ ಮದಮರ್ದನ — ಇವು ನಮಗೆ ತಿಳಿದುಬಂದಿರುವ ಇಂಥ “ಚರಿತ್ರ” ನಾಟಕಗಳು.