೫ ಕಥಾ ನಾಟಕಗಳು

ಹಿಂದೆ ರಾಮ ಕೃಷ್ಣ ಶಿವ ಇವರಿಗೆ ಸಂಬಂಧಪಟ್ಟ ಇತಿಹಾಸ ಪುರಾಣ ಕಥೆಗಳು ಎಷ್ಟು ಜನಪ್ರಿಯವಾಗಿದ್ದುವೋ ಅಷ್ಟೇ ನಳ ಹರಿಶ್ಚಂದ್ರ ಉದಯನ ಮುಂತಾದ ಉದಾತ್ತನಾಯಕರ ಕಥೆಗಳೂ ಜನಪ್ರಿಯವಾಗಿದ್ದುವು. ಆದ್ದರಿಂದ ಇವುಗಳ ಮೇಲೆ ಬರೆದ ನಾಟಕಗಳೂ ಹಲವು ಇವೆ. ಆದರೆ ಇವುಗಳ ಮೂಲವೂ ಇಂಥದೇ ಎಂದು ಸಾಮಾನ್ಯವಾಗಿ ನಿರ್ಧರಿಸಿ ಹೇಳುವುದು ಕಷ್ಟ; ಯಾವುದಾದರೂ ಒಂದು ಪುರಾಣವಿರಬಹುದು, ಜನಜನಿತವಾದ ಅಥವಾ ಗ್ರಂಥರೂಪವಾದ ಕಥೆ ಇರಬಹುದು; ಕಲ್ಪನೆ ಕಡಿಮೆ.

ಉದಯನ ಚರಿತ, ಉಪಹಾರವರ್ಮ ಚರಿತ, ಕನಕವಲ್ಲೀ ಪರಿಣಯ, ಕಮಲಿನೀ ಕಲಹಂಸ, ಕಮಲಿನೀ ರಾಜಹಂಸ, ಕಲಾವತೀ ಕಾಮರೂಪ, ಕಲ್ಯಾಣೀ ಪರಿಣಯ, ಕಲಿವಿಧುನನ, ಕಾಂತಿಮತೀ ಪರಿಣಯ, ಕುಂದಮಾಲಾ, ಕುವಲಯಾಶ್ವ ಚರಿತ, ಕುವಲಯಾಶ್ವನಾಟಕ, ಕುವಲಯಾ ಶ್ರೀಯ, ಕೃತಾರ್ಥ ಮಾಧವ, ಗಿರಿಜಾ ಕಲ್ಯಾಣ ನಾಟಕ, ಚೈತ್ರ ಜೈವಾತೃಕ, ನಲಚರಿತ, ನಲಭೂಮಿಪಾಲ ರೂಪಕ, ನಲ ವಿಲಾಸ, ನಲಾನಂದ, ನೀಲಾಪರಿಣಯ, ಭರ್ತೃಹರಿ ನಿರ್ವೇದ, ಭೈಮಿ ಪರಿಣಯ (೪), ಭೈರವಾನಂದ, ಮಂಜುಲನೈಷಧ, ಮದನಮಂಜರೀ, ಮದಾಲಸಾ ನಾಟಕ (೨), ಮದಾಲಸಾ ಪರಿಣಯ, ಮರಕತವಲ್ಲೀ ಪರಿಣಯ, ಯಯಾತಿ ಕರುಣಾನಂದ, ಯಯಾತಿ ಚರಿತ, ಯಯಾತಿ ದೇವಯಾನಿ ಚರಿತ, ರತ್ನಕೇತೂದಯ, ಲಲಿತ ಕುವಲಯಾಶ್ವ ನಾಟಕ, ಲವಲೀ ಪರಿಣಯ, ವಜ್ರಮುಕುಟೀ ವಿಲಾಸ, ವಸುಮಂಗಳ, ವಸುಮತೀ ಚಿತ್ರಸೇನ ವಿಲಾಸ, ವಸುಮತೀ ಪರಿಣಯ, ವಾಸಂತಿಕಾ ಪರಿಣಯ, ವಿಜಯ ಪಾರಿಜಾತ, ಶರ್ಮಿಷ್ಠಾವಿಜಯ ನಾಟಕ, ಶೂರ ಮಯೂರ, ಸತ್ಯಹರಿಶ್ಚಂದ್ರ ನಾಟಕ, ಸಾಮವತ, ಸಾರಸ್ವತಾದರ್ಶ (?), ಸುಬಾಲಾವಜ್ರತುಂಡ, ಸೇವಂತಿಕಾ ಪರಿಣಯ, ಸೌಗಂಕಾಧಿ ಪರಿಣಯ, ಹರಿಶ್ಚಂದ್ರನೃತ್ಯ, ಹರಿಶ್ಚಂದ್ರ ಯಶಶ್ಚಂದ್ರಿಕಾ —ಇವು ನಮಗೆ ತಿಳಿದುಬಂದಿರುವ ಈಚಿನ ಕಥಾ ನಾಟಕಗಳು.