ಪೌರಾಣಿಕ ನಾಟಕಗಳಲ್ಲಿ ಸ್ವಾಭಾವಿಕವಾಗಿ ದೇವತೆಗಳಿಗೆ, ಅದರಲ್ಲಿಯೂ ಶಿವ ವಿಷ್ಣು ಮತ್ತು ಅವರ ಪರಿವಾರಗಳಿಗೆ ಸಂಬಂಧಪಟ್ಟ ವಸ್ತು ವೃತ್ತಾಂತಗಳೇ ಹೆಚ್ಚು. ಇವುಗಳೂ ಬಹುಮಟ್ಟಿಗೆ ‘’ ಪರಿಣಯ’ ಗಳು, ‘ವಿವಾಹ’ ಗಳು. ಇಂದ್ರಚಂದ್ರರಿಗೆ ಸಂಬಂಧಪಟ್ಟವೂ ಕೆಲವು ಇವೆ.
ಅರ್ಥಪಂಚಕ ನಾಟಕ, ಅದಿತಿಕುಂಡಲಾಹರಣ, ಅಂಬುಜವಲ್ಲೀ ಕಲ್ಯಾಣ, ಅಮೃತೋದಯ ನಾಟಕ, ಅಹಲ್ಯಾಸಂಕ್ರಂದನ, ಇಂದಿರಾ ಪರಿಣಯ, ಇಂದುಮತೀ ಪರಿಣಯ ನಾಟಕ, ಉಷಾ ಪರಿಣಯ, ಐಂದವಾನಂದ, ಕಮಲಾ ಕಂಠೀರವ ನಾಟಕ, ಕಲಾನಂದ, ಕಾಮಾಕ್ಷೀ ಪರಿಣಯ, ಕುಮಾರ ವಿಜಯ, ಕೌಮುದೀಸೋಮ, ಗಂಗಾವತರಣ, ಗಣೇಶ ಪರಿಣಯ, ಗೀತದಿಗಂಬರ, ಗೋದಾ ಪರಿಣಯ, ಗೋದಾವರೀ ಪರಿಣಯ, ಗೌರೀ ದಿಗಂಬರ, ಚಂಡೀವಿಲಾಸ (— ಚರಿತ), ಚಂದ್ರಕಲಾ, ಚಂದ್ರಕಲಾ ಪರಿಣಯ (—ಕಲ್ಯಾಣ), ಚಂದ್ರರೇಖಾ ವಿದ್ಯಾಧರ, ಚಂದ್ರವಿಲಾಸ, ಚಂದ್ರಶೇಖರ ವಿಲಾಸ ಡಮರುಕ, ತ್ರಿಪುರಾರಿ ನಾಟಕ, ನವಗ್ರಹ ಚರಿತ, ನಾಗರಾಜ ನಾಟಕ, ನರಾಯಣೀ ವಿಲಾಸ, ಪ್ರದ್ಯುಮ್ನಾನಂದೀಯ, ಪ್ರಸನ್ನ ಚಂಡಿಕಾ, ಪಾರ್ವತೀಪರಿಣಯ ನಾಟಕ, ಪಾರ್ವತೀ ಸ್ವಯಂವರ, ಭೈರವ ಪ್ರಾದುರ್ಭಾವ, ಮಂಗಳ ನಾಟಕ (ಸಂಸ್ಕೃತ ಮತ್ತು ಹಿಂದಿ), ಮದನ ಸಂಜೀವನ, ಮಧುರಾನಿರುದ್ಧ, ಮನ್ಮಥ ವಿಜಯ, ರತಿಮನ್ಮಥ ನಾಟಕ, ರತ್ನೇಶ್ವರ ಪ್ರಸಾದನ, ಲಕ್ಷ್ಮೀ ಸ್ವಯಂವರ, ಲಿಂಗ ದುರ್ಭೇದ, ವಲ್ಲೀಪರಿಣಯ (೭), ವಾರ್ಧಿಕನ್ಯಾಪರಿಣಯ, ವಾಸಲಕ್ಷ್ಮೀ ಕಲ್ಯಾಣ, ವಿಕ್ರಮ ಚಂದ್ರಿಕಾ, ವೀರರಾಘವ ಕನಕವಲ್ಲೀಪರಿಣಯ, ಶರ್ವಚರಿತ್ರ (?), ಸೌಮ್ಯ ಸೋಮ, ಹರಕೇಳೀ ನಾಟಕ, ಹರಗೌರೀ ವಿವಾಹ, ಹಸ್ತಿಗಿರಿ ಮಹಾತ್ಮ್ಯ— ಇವು ನಮಗೆ ಇದುವರೆಗೆ ತಿಳಿದುಬಂದಿರುವ ಈಚಿನ ಪೌರಾಣಿಕ ನಾಟಕಗಳು.