೩ ಭಾರತ ನಾಟಕಗಳು

ಮಹಾಭಾರತದ ವಿಸ್ತಾರವನ್ನೂ, ಅದರಲ್ಲಿ ದೊರಕುವ ನಾಟಕೋಚಿತವಾದ ವಸ್ತುಸಂಪತ್ತನ್ನೂ ನೋಡಿದರೆ ಅದರ ಮೇಲಿರುವ ನಾಟಕಗಳು ಕೇವಲ ಸ್ವಲ್ಪವೆನ್ನಿಸುತ್ತದೆ.

ಅರ್ಜುನ ನಾಟಕ, ಅಶ್ವಮೇಧ ನಾಟಕ, ಘೋಷಯಾತ್ರಾ ನಾಟಕ, ಚಿತ್ರಭಾರತ, ತಪತೀ ಸಂವರಣ, ದ್ರೌಪದೀಪರಿಣಯ, ಭರತರಾಜ ನಾಟಕ, ಮೇಘೇಶ್ವರ ನಾಟಕ, ಲಕ್ಷಣಾ ಸ್ವಯಂವರ (ಸಂಸ್ಕೃತ ಮತ್ತು ಮಲೆಯಾಳ), ವಿಖ್ಯಾತ ವಿಜಯ, ಸಭಾ ನಾಟಕ, ಸಭಾಪರ್ವ ನಾಟಕ (ಪಾಂಡವ ವಿಜಯ), ಸುಭದ್ರಾ ಧನಂಜಯ (೩), ಸುಭದ್ರಾ ಪರಿಣಯ, ಸುಭದ್ರಾ ವಿಜಯ— ಇವು ನಮಗೆ ತಿಳಿದುಬಂದಿರುವ ಭಾರತಕಥಾನಾಟಕಗಳು.