ರಾಮಕಥೆಯ ನಾಟಕಗಳನ್ನು ಬಿಟ್ಟರೆ ಕೃಷ್ಣಕಥೆಯ ನಾಟಕಗಳೇ ಸಂಖ್ಯೆಯಲ್ಲಿ ಹೆಚ್ಚು. ಕೃಷ್ಣಲೀಲೆ, ರುಕ್ಮಿಣೀಕಲ್ಯಾಣ, ಸತ್ಯಭಾಮಾವಿಲಾಸ — ಇವು ಮುಖ್ಯವಿಷಯಗಳು. ಆದರೆ ಇವಾಗಲಿ ಮುಂದೆ ಹೇಳುವ ಇತರ ನಾಟಕಗಳಾಗಲಿ ರಾಮಾಯಣ ನಾಟಕಗಳಷ್ಟ ಪ್ರಸಿದ್ಧವಾಗಿಲ್ಲ.
ಕನ್ಯಾಮಾಧವ, ಕಂಸವಧ (೨), ಕೃಷ್ಣಕುತೂಹಲ, ಕೃಷ್ಣಭಕ್ತಿ ಚಂದ್ರಿಕಾ, ಕೃಷ್ಣಲೀಲಾ, ಕೃಷ್ಣಲೀಲಾ ತರಂಗಿಣೀ, ಗೋಪಾಲಕೇಳೀಚಂದ್ರಿಕಾ, ಗೋಪೀಚಂದನ, ಗೋವಿಂದವಲ್ಲಭ, ಜಗನ್ನಾಥವಲ್ಲಭ ನಾಟಕ, ಜಾಂಬವತೀಕಲ್ಯಾಣ, ಪ್ರದ್ಯುಮ್ನವಿಜಯ, ಪ್ರದ್ಯುಮ್ನಾಭ್ಯುದಯ, ಪ್ರಭಾವತೀ ಪ್ರದ್ಯುಮ್ನ, ಪ್ರಭಾವತೀಪರಿಣಯ (೨), ಪಾರಿಜಾತ (೨), ಪಾರಿಜಾತ ಹರಣ, ಮಾಧವಾನಲ (೨), ಮುರಾರಿ ವಿಜಯ, ಯಾದವಾಭ್ಯುದಯ, ರಾಧಾಮಾಧವ, ರೋಚನಾನಂದ, ಲಲಿತಮಾಧವ, ವಿದಗ್ಧಮಾಧವ (೩), ವೈದರ್ಭೀ ವಾಸುದೇವ, ಶ್ರೀದಾಮಚರಿತ, ಸತ್ಯಭಾಮಾಪರಿಣಯ, ಸತ್ಯ ಭಾಮಾವಿಲಾಸ, ಸಮೃದ್ಧಮಾಧವ, ಸಾನಂದಗೋವಿಂದ, ಸುದರ್ಶನವಿಜಯ — ಇವು ಈಗ ನಮಗೆ ತಿಳಿದುಬಂದಿರುವ ಭಾಗವತ ನಾಟಕಗಳು.