(೧೯೪ | ವಿಚಾರ ಪ್ರಪಂಚ - ಆಗ ಸೇಡಿಯಾಪು-ಕೃಷ್ಣಭಟ್ಟರು ೨೫ ವರ್ಷದವರಾಗಿದ್ದರನ್ತೆ.)
ಪ್ರಿಯ ಸಹೋದರರ ಮುಂದಿಡಲು ಹಿಂದುಮುಂದು ನೋಡುವನು. ಅತ ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವುದು ಯಾರಿಗೂ ಶ್ರೇಯಸ್ಕರವಲ್ಲ. ಈ ರೀತಿಯ ಸದ್ವಿಚಾರವುಳ್ಳ, ವಿದ್ಯಾದಿಗಳಿಂದ ಸಂಸ್ಕೃತವಾದ ಹೃದಯದಲ್ಲಿ ಅಭಿಪ್ರಾಯಗಳು ವಿಪುಲವಾಗಿ ಸುರಿಸುವುವು. ಲೇಖನ ಶಕ್ತಿಯಿದ್ದರೆ, ಅವು ಕಾಗದಗಳನ್ನೂ ಪತ್ರಿಕೆಗಳನ್ನೂ ಮಾತ್ರವಲ್ಲ, ಭಾಷೆಯನ್ನೇ ಅಲಂಕರಿಸುವುವು.
ಆದುದರಿಂದ, ಲೇಖನಶಕ್ತಿಯುಳ್ಳವರಿಗೆ ಮತ್ತು ಅದನ್ನು ಹೊಂದಲು ಪ್ರಯತ್ನಿಸುವವರಿಗೆ, ಅನುಕ್ರಮವಾಗಿ ನನ್ನ ನಮ್ರವಿಜ್ಞಾಪನೆಯೇನೆಂದರೆ:- ನಮ್ಮ ದೇಶದ, ಭಾಷೆಯ, ಕಾಲದ, ಸ್ಥಿತಿಗಳನ್ನು ಆಲೋಚಿಸಿ, ಅವುಗಳ ಅಭಾವ, ಆವಶ್ಯಕತೆಗಳನ್ನು ಕಂಡುಕೊಳ್ಳಿರಿ. ನಿಮಗಿರುವ ಕಲ್ಪನಾಶಕ್ತಿಯನ್ನುಪಯೋಗಿಸಲು ಕಲಿಯಿರಿ. ಆಮೇಲೆ ದೈವದತ್ತವಾದ, ಅಥವಾ ನಿಮ್ಮ ಪ್ರಯತ್ನ ಲಭ್ಯವಾದ ಲೇಖನಶಕ್ತಿಯ ಮತ್ತು ವಿದ್ಯತೆಯ ಪ್ರಯೋಗಗಳನ್ನು ಮಾಡಿತೋರಿಸಿರಿ. ಆಗ ಮಾತ್ರ ಪ್ರಯತ್ನವು ಸತ್ಫಲವನ್ನು ಕೊಡುವುದು.
ನಿಮಗೆ ಭವಿಷ್ಯತ್ತಿನಲ್ಲಿ ಉತ್ತಮ ಲೇಖಕರಾಗಬೇಕೆಂದಿದ್ದರೆ, ನಿಮ್ಮ ಭಾಷಾಭಿಮಾನವು ಉಕ್ಕೇರುತ್ತಿದ್ದರೆ, ನಮ್ಮ ವಾಙ್ಮಯವನ್ನು ಮೊದಲು ಚೆನ್ನಾಗಿ ಅಭ್ಯಾಸಮಾಡಿರಿ. ಈಗ ಮಾಡಬೇಕಾದ ಭಾಷಾಭಿಮಾನಿಗಳ ಕರ್ತವ್ಯವು ಇದಕ್ಕಿಂತ ಹೆಚ್ಚಿನದಾವುದೂ ಇಲ್ಲ. ಯಾವುದಾದರೂ ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಂಡು, ಅನಂತರ ಆ ವಿಷಯವಾಗಿ ಲೇಖನಗಳನ್ನು ಬರೆಯಿರಿ. ಆವರೆಗೆ ಬರೆಯದಿದ್ದರೆ ಲೇಖನಶಕ್ತಿಯು ಕುಂಠಿತವಾಗಿ ಹೋದೀತೆಂಬ ಹೆದರಿಕೆಯಿದ್ದರೆ, ವಿಚಾರವು ಹರಿದಂತೆ ಬರೆದು, ಜೋಕೆಯಿಂದ+++(=ಜೋಪಾನದಿಂದ)+++ ಸಂಗ್ರಹಿಸಿಡಿರಿ ಆದರೆ ಅದನ್ನು ಯಾವುದಾದರೂ ಪತ್ರಿಕೆಯ ಸಂಪಾದಕರ ಹೆಸರು ಬರೆದ ಲಕೋಟೆಯ್+++(=envelope)+++ ಒಳಗೆ ಮಾತ್ರ ಸೇರಿಸಬೇಡಿರಿ.+++(4)+++ ಇಷ್ಟೆ.