गौतमो विभागे

वर्गाः

ಜೈನರಲ್ಲಿ ಆದ ಹಾಗೇ, ವೀರಶೈವರಲ್ಲೇ ಪುರೋಹಿತವರ್ಗ, ಕ್ಷತ್ರಿಯವರ್ಗ, ವೈಶ್ಯವರ್ಗ, ಶೂದ್ರವರ್ಗ ಏರ್ಪಟ್ಟುಬಿಟ್ಟಿದೆ.

ಪುರೋಹಿತರನ್ನ ಐನೋರು, ಆರಾಧ್ಯರು ಅಂತ ಕರಿತೀವಿ ನಮ್ಮಲ್ಲಿ. (ವಿರಕ್ತಸಾಂಪ್ರದಾಯದಲ್ಲೂ ಸಾಕಷ್ಟು ಮಂದಿ ಪುರೋಹಿತವೃತ್ತಿ ಮಾಡ್ತಾರೆ. ತುಂಬಾ ಸಂಕೀರ್ಣವಾದ ಪರಿಸ್ಥಿತಿ ಇದು.)

ಬಣಜಿಗರು, ಪಟ್ಟಣದಶೆಟ್ಟರು - ಇವರೆಲ್ಲಾ ವೈಶ್ಯವೃತ್ತಿಯನ್ನ ಅವಲಂಬಿಸಿರುವ ಸಮುದಾಯಗಳು.

ಕುರುಬಜಂಗಮರು, ಬೇಡಜಂಗಮರು - ಇವರೆಲ್ಲ ಎಸ್.ಸಿ/ಎಸ್.ಟಿಗೆ ಸೇರಿದವರು. (पञ्चमसाली)

ಹೀಗೆ ಬೇರೆ ಬೇರೆ ಪಂಗಡಗಳಿರೋದು ಹೌದು.

ಆದ್ರೆ ಇವರನ್ನೆಲ್ಲಾ ಬೇರೆ ಬೇರೆ ಜಾತಿ ಅಂತ ಕರೀಬೇಕೆ ಅನ್ನೋದು ಪ್ರಶ್ನೆ.
ಈ ಎಲ್ಲಾ ಸಮುದಾಯಗಳೂ ಈ ಎಲ್ಲಾ ಸಮುದಾಯದವರೂ ದೊಡ್ಡದೊಡ್ಡ ಮಠಗಳಲ್ಲಿ ಸ್ವಾಮಿಗಳಾಗಿದ್ದಾರೆ, ದೊಡ್ಡದೊಡ್ಡ ವಿದ್ವಾಂಸರಾಗಿದ್ದಾರೆ.
ಆದರೆ ಅವರವರ ಸಮುದಾಯದ ನಡುವಣ ಜಗಳ, ಭೇದ ಇವೆಲ್ಲ ಮೊದಲಿಂದ್ಲೂ ಇದ್ದೇ ಇದೆ.

ಉದಾಹರಣೆಗೆ ಐನೋರು “ನಾವು ಲಿಂಗಾಯತರಲ್ಲ, ಐನೋರು” - ಹೀಗೆಲ್ಲಾ ಹೇಳ್ತಾರೆ. ಆದ್ರಿಂದ ಬೇರೆಯವರಿಗೆ ಗೊಂದಲಗಳುಂಟಾಗತ್ವೆ.

वीरशैव-लिङ्गायत-शब्दौ

ಇಷ್ಟಲಿಂಗ ದೇಹದ ಮೇಲೆ ಆಯತ್ತವಾಗಿರುವವನು ಲಿಂಗಾಯತ. ಆದ್ದರಿಂದ ಎಲ್ಲ ವೀರಶೈವರೂ ಲಿಂಗಾಯತರೇ. ಏಕದೇವೋಪಾಸಕರಾದ್ದರಿಂದ ಎಲ್ಲರೂ ವೀರಶೈವರು.

ಈಗ ಬಳಕೆಯಲ್ಲಿ ವಿರಕ್ತಸಂಪ್ರದಾಯದವರು ತಾವು ಲಿಂಗಾಯತರು ಅಂತ ಗುರುತಿಸಿಕೊಂಡಿದ್ದಾರೆ. ಬಳಕೆಯಲ್ಲೂ ಹಾಗೇನೂ ಇಲ್ಲ. ವೀರಶೈವ-ಲಿಂಗಾಯತ ಎರಡನ್ನೂ ಪರ್ಯಾಯವಾಗಿ ಬಳಸಬೋದು.

पुरोहित-वर्ग-वैशिष्ट्यम्

ಸಂಸ್ಕಾರಗಳಲ್ಲಿ ಭೇದಗಳಿವೆ.
ವಿರಕ್ತಸಂಪ್ರದಾಯ ಸಾಮಾನ್ಯಜನತೆಯ (ಶೂದ್ರಸಮುದಾಯದ) ಹಿನ್ನಲೆಯಲ್ಲಿ ೧೨ನೆ ಶತಮಾನದಲ್ಲಿ
ಬಸವರಾಜದೇವರ ನೇತೃತ್ವದಲ್ಲಿ ನಡೆದದ್ದಲ್ವೆ?
ಆದ್ರಿಂದ ವಿರಕ್ತರ ಆಚರಣೆಗಳು ತುಂಬಾ ಸುಲಭ.
ವಿರಕ್ತಸಂಪ್ರದಾಯದವರು ಸಂಕಲ್ಪಪೂರ್ವಕವಾಗಿ ಇಷ್ಟಲಿಂಗ ಪೂಜೆ ಮಾಡೋಲ್ಲ, ಮಂತ್ರಪಠಣಪೂರ್ವಕವಾಗಿ ಮಾಡೋಲ್ಲ; ಗೃಹಸ್ಥರೂ ಹಾಗೆ ಮಾಡೋಲ್ಲ.

ಸನ್ಯಾಸಿಗಳಲ್ಲಿ ಮಾತ್ರ ವೈದಿಕಕ್ರಮದಲ್ಲಿ ಪೂಜೆ ಮಾಡೊ ಕ್ರಮ ಉಳಿದಿದೆ.

ವೀರಶೈವರದ್ದು ಪಂಚಪೀಠಗಳು -

  • ರಂಭಾಪುರೀ, ಋಗ್ವೇದದ ಪೀಠ
  • ಉಜ್ಜೈನಿ, ಅಥರ್ವಣ
  • ಶ್ರೀಶೈಲ, ಯಜುರ್ವೇದ
  • ಕಾಶಿ। ಕಾಶೀಪೀಠವೇ ಜಂಗಮವಾಡಿ ಪೀಠ. ಅಜಪವೇದ (ಶಿವಾಗಮಗಳ ಪೀಠ)
  • ಕೇದಾರ. ಸಾಮವೇದ

ಈ ಪೀಠದವರನ್ನ ಪಂಚಾಚಾರ್ಯ ಸಂಪ್ರದಾಯದವರು ಅಂತ ಕರೀತಾರೆ.

उपनयनम्

ನಮ್ಮಲ್ಲಿ ಲಿಂಗದೀಕ್ಷೆಯೇ ಉಪನಯನಕ್ಕೆ ಸಮಾನ. ಲಿಂಗದೀಕ್ಷೆಯೇ ವೇದಾಧ್ಯಯನಕ್ಕೆ ಅಧಿಕಾರ ಕೊಡತ್ತೆ ಅಂತಿರೋದು. ಆದ್ದರಿಂದ ಲಿಂಗದೀಕ್ಷೆ ಹಾಗು ವೇದಾಧ್ಯಯನ ಇರೋದು.

ಆಂಧ್ರದ ಆರಾಧ್ಯರ ಪೈಕಿ ಉಪನಯನ, ಲಿಂಗದೀಕ್ಷೆ ಎರಡೂ ಉಂಟು.

भाष्याणि

ಶ್ರೀಕರಭಾಷ್ಯ ೧೨ನೆ ಶತಮಾನದ ಕೃತಿ. ಈಹೊತ್ತು ಅದರ ಶುದ್ಧವಾದ ಪಾಠ ಸಿಕ್ಕಿಲ್ಲ. ಶ್ರೀಭಾಷ್ಯದ್ದೇ ಕೆಲವೊಂದು ಭಾಗಗಳನ್ನ ಪ್ರಕ್ಷೇಪ ಮಾಡಿದ್ದಾರೆ ಅಂತ ಪ್ರತೀತಿ.(5)

ಕೈವಲ್ಯೋಪನಿಷತ್ತು, ಮಹಾನಾರಾಯಣೋಪನಿಷತ್ತು ಮತ್ತೆ ಕಾಠಕೋಪನಿಷತ್ತಿಗೆ ಪ್ರಾಚೀನ ಭಾಷ್ಯಗಳು ಸಿಗತ್ವೆ.

ಉಮಚಗಿ ಶಂಕರಶಾಸ್ತ್ರಿಗಳು ೧೯-೨೦ನೆ ಶತಮಾನದವರು. ಸಂಸ್ಕೃತದಲ್ಲಿ ಉಮಚಗಿ ಶಂಕರಶಾಸ್ತ್ರಿಗಳು ಅನ್ನೋರು ರಚಿಸಿರೋದು; ಉಜ್ಜನೀಪೀಠದ ವಿದ್ವಾಂಸರು. ಶಾಂಕರೀ ಅಂತ ಒಂದೈದು ಉಪನಿಷತ್ತಿಗೆ ವ್ಯಾಖ್ಯಾನ ಬರ್ದಿದ್ದಾರೆ‌.

ಶಾಂಕರೀವಿವೃತಿ ಅಂತ ಬ್ರಹ್ಮಸೂತ್ರಗಳಿಗೂ ಒಂದು ವೃತ್ತಿಯನ್ನು ಬರ್ದಿದ್ದಾರೆ ಇವರು.