ಒಂದನೆಯ ಅಧ್ಯಾಯ - ನಾಲ್ಕನೆಯ ಪಾದ

(ಪ್ರಧಾನಕಾರಣವಾದವು ಶ್ರುತಿಸಿದ್ಧವಲ್ಲವೆಂಬುದರ ವಿವರ)

ಮುಂದಿನ ಗ್ರಂಥದ ಸಂಬಂಧ

(ಭಾಷ್ಯ) | ೩೩೩. ಬ್ರಹ್ಮಜಿಜ್ಞಾಸಾಂ ಪ್ರತಿಜ್ಞಾಯ ಬ್ರಹ್ಮಣೋ ಲಕ್ಷಣಮುಕ್ತಮ್ “ಜನ್ಮಾದ್ಯಸ್ಯ ಯತಃ’ (೧-೧-೨) ಇತಿ, ತಲ್ಲಕ್ಷಣಂ ಪ್ರಧಾನಸ್ಯಾಪಿ ಸಮಾನಮ್ ಇತ್ಯಾಶ ತತ್ ಅಶಬ್ದನ ನಿರಾಕೃತಮ್ “ತಕ್ಷತೇರ್ನಾಶಬ್ಬಮ್’ (೧-೧-೫) ಇತಿ | ಗತಿಸಾಮಾನ್ಯಂ ಚ ವೇದಾನ್ತವಾಕ್ಯಾನಾಂ ಬ್ರಹ್ಮಕಾರಣವಾದಂ ಪ್ರತಿ ವಿದ್ಯತೇ ನ ಪ್ರಧಾನಕಾರಣವಾದಂ ಪ್ರತಿ ಇತಿ ಪ್ರಪಇತಮ್ ಗತೇನ ಗ್ರಸ್ಥನ | ಇದಂ ಮೈದಾನೀಮ್ ಅವಶಿಷ್ಟಮ್ ಆಶತೇ - ಯದುಕ್ತಂ ಪ್ರಧಾನಸ್ಯ ಅಶಬ್ದತ್ವಮ್, ತದಸಿದ್ಧಮ್ | ಕಾಸುಚಿತ್‌ ಶಾಖಾಸು ಪ್ರಧಾನಸಮರ್ಪಣಾಭಾಸಾನಾಂ ಶಬ್ದಾನಾಂ ಶೂಯಮಾಣಾತ್ 1 ಅತಃ ಪ್ರಧಾನಸ್ಯ ಕಾರಣತ್ವಂ ವೇದಸಿದ್ಧಮೇವ, ಮಹಃ ಪರಮರ್ಷಿಭಿಃ ಕಪಿಲಪ್ರಭತಿಭಿಃ ಪರಿಗೃಹೀತಮ್ ಇತಿ ಪ್ರಸಜ್ಯತೇ | ತದ್ ಯಾವತ್ ತೇಷಾಂ ಶಬ್ದಾನಾಮ್ ಅನ್ಯಪರತ್ವಂ ನ ಪ್ರತಿಪಾದ್ಯತೇ, ತಾವತ್ ಸರ್ವಜ್ಞಂ ಬ್ರಹ್ಮ ಜಗತಃ ಕಾರಣಮ್ ಇತಿ ಪ್ರತಿಪಾದಿತಮಪಿ ಆಕುಲೀಭವೇತ್ | ಅತಸ್ತೇಷಾಮ್ ಅನ್ಯಪರತ್ವಂ ದರ್ಶಯಿತುಂ ಪರಃ ಸದ್ದರ್ಭ: ಪ್ರವರ್ತತೇ ||

(ಭಾಷ್ಯಾರ್ಥ) ಬ್ರಹ್ಮಜಿಜ್ಞಾಸೆಯನ್ನು (ಮಾಡುತ್ತೇವೆಂದು) ಪ್ರತಿಜ್ಞೆಯನ್ನು ಮಾಡಿ “ಜನ್ಮಾದ್ಯಸ್ಯ ಯತಃ’ (೧-೧-೨) ಎಂದು ಬ್ರಹ್ಮದ ಲಕ್ಷಣವನ್ನು ಹೇಳಿದ್ದಾಯಿತು. ಆ ಲಕ್ಷಣವು ಪ್ರಧಾನಕ್ಕೂ ಸಮಾನವಾಗಿದೆಯಲ್ಲ ! ” ಎಂದು ಆಶಂಕಿಸಿ ಅದನ್ನು ಅಶಬ್ದವೆಂಬ (ಕಾರಣ)ದಿಂದ “ಈಕ್ಷತೇರ್ನಾಶಬ್ದಮ್’ (೧-೧-೫) ಎಂದು ತಳ್ಳಿ ಹಾಕಿದ್ದಾಯಿತು. ವೇದಾಂತವಾಕ್ಯಗಳ ಗತಿ ಸಾಮಾನ್ಯವು ಬ್ರಹ್ಮಕಾರಣವಾದಕ್ಕೆ ಇದೆಯೇ ಹೂರತು ಪ್ರಧಾನಕಾರಣವಾದಕ್ಕಿಲ್ಲ ಎಂದು ಹಿಂದಿನ ಗ್ರಂಥದಲ್ಲಿ ವಿವರಿಸಿ ತಿಳಿಸಿ ದ್ವಾಯಿತು. ಆದರೆ ಇನ್ನು ಉಳಿದಿರುವ ಇದೂಂದನ್ನು (ಇಲ್ಲಿ ) ಆಶಂಕಿಸಲಾಗುತ್ತದೆ.

  1. ಶಬ್ದಪ್ರಮಾಣಕವಲ್ಲವೆಂಬ ಕಾರಣದಿಂದ.

raes

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಪ್ರಧಾನವು ಅಶಬ್ದವು ಎಂದು ಹೇಳಿದಿರಲ್ಲ, ಅದು ಅಸಿದ್ಧ ; ಏಕೆಂದರೆ ಕೆಲವು ಶಾಖೆಗಳಲ್ಲಿ ಪ್ರಧಾನವನ್ನು ತಿಳಿಸುವಂತಿರುವ ಶಬ್ದಗಳು ಶ್ರುತಿಯಲ್ಲಿರುತ್ತವೆ. ಆದ್ದರಿಂದ ಪ್ರಧಾನವು ಕಾರಣವೆಂಬುದು ವೇದಸಿದ್ಧವಾಗಿಯೇ ಇದ್ದು ಪರಮರ್ಷಿಗಳಾದ ಕಪಿಲಾದಿಗಳಿಂದ ಸ್ವೀಕೃತವಾಗಿರುತ್ತದೆ ಎಂದಾಗುತ್ತದೆ. ಆದ್ದರಿಂದ ಆ ಶಬ್ದ ಗಳು ಅನ್ಯಪರವೆಂದು ಎಲ್ಲಿಯವರೆಗೆ (ನಾವು) ಪ್ರತಿಪಾದಿಸುವದಿಲ್ಲವೋ ಅಲ್ಲಿಯ ವರೆಗೆ ಸರ್ವಜ್ಞವಾದ ಬ್ರಹ್ಮವೇ ಜಗತ್ಕಾರಣವು ಎಂದು ಪ್ರತಿಪಾದಿತವಾಗಿದ್ದರೂ ಆಕುಲವಾಗಿರುವದು. ಆದ್ದರಿಂದ ಅವುಗಳು ಅನ್ಯಪರವೆಂದು ತಿಳಿಸುವದಕ್ಕೆ ಮುಂದಿನ ಸಂದರ್ಭವು ಹೊರಟಿರುತ್ತದೆ.

೧. ಆನುಮಾನಿಕಾಧಿಕರಣ (ಸೂ. ೧-೭)

(ಕಠ ೧-೩-೧೧ ರಲ್ಲಿ ಸಾಂಖ್ಯರ ಮಹದವ್ಯಕ್ತಪುರುಷರನ್ನು ಹೇಳಿಲ್ಲ)

ಆನುಮಾನಿಕಮಕೇಷಾಮಿತಿ ಚೇನ್ನ ಶರೀರರೂಪಕ

ವಿನ್ಯಸ್ತಗೃಹೀತೇರ್ದಶ್ರಯತಿ ಚ lol ೧.ಆನುಮಾನಿಕವೂ ಕೆಲವರ (ಶಾಖೆಯಲ್ಲಿದೆ) ಎಂದರೆ ಇಲ್ಲ ; ಏಕೆಂದರೆ ರೂಪಕದಲ್ಲಿಟ್ಟಿರುವ ಶರೀರವನ್ನು (ಇಲ್ಲಿ) ಗ್ರಹಿಸಬೇಕು. (ಶ್ರುತಿಯು

ಅದನ್ನು) ತಿಳಿಸುತ್ತಲೂ ಇದೆ.

ಪೂರ್ವಪಕ್ಷ : ಪ್ರಧಾನವೂ ಒಂದು ಶಾಖೆಯಲ್ಲಿ ಉಕ್ತವಾಗಿದೆ

(ಭಾಷ್ಯ) ೩೩೪. ಆನುಮಾನಿಕಮಪಿ ಅನುಮಾನನಿರೂಪಿತಮಪಿ ಪ್ರಧಾನಮ್ ಏಶೇಷಾರಿ ಶಾಖನಾಂ ಶಬ್ದವತ್ ಉಪಲಭ್ಯತೇ | ಕಾಠಕೇ ಹಿ ಪಠ್ಯತೇ. “ಮಹತಃ ಪರಮ ವ್ಯಕ್ತಮವ್ಯಕ್ತಾತ್ ಪುರುಷಃ ಪರಃ’ (೧-೩-೧೧) ಇತಿ | ತತ್ರ ಯ ಏವ ಯನ್ನಾಮಾನೋ ಯತ್ನಮಾಶ್ಚ ಮಹದವ್ಯಕ್ತಪುರುಷಾಃ ಸ್ಮೃತಿಪ್ರಸಿದ್ಧಾಃ, ತ ಏವ ಇಹ ಪ್ರತ್ಯಭಿಜ್ಞಾಯ | ತತ್ರ ‘ಅವ್ಯಕ್ತಮ್’ ಇತಿ ಸ್ಮೃತಿಪ್ರಸಿದ್ಧ, ಶಬ್ದಾದಿಹೀನತ್ವಾಚ ನ ವ್ಯಕ್ತಮ್ ಅವ್ಯಕ್ತಮ್ ಇತಿ ವ್ಯುತ್ಪತ್ತಿ ಸಂಭವಾತ್, ಸ್ಮೃತಿಪ್ರಸಿದ್ಧಂ ಪ್ರಧಾನಮ್

  1. ಸಾಂಖ್ಯರ ಸಿದ್ಧಾಂತವೂ ಆಗಬಹುದಂದಾಗುವದರಿಂದ ವೇದಾಂತಸಿದ್ಧಾಂತವೇ ಕಡೆಯ ಮಾತಂದು ನಿರ್ಣಯವಾಗದ ಹೂಗುವದು ಎಂದರ್ಥ.

ಅಧಿ. ೧. ಸೂ. ೧] ಸಿದ್ಧಾಂತ : ಈ ಅವ್ಯಕ್ತವು ಪ್ರಧಾನವೆಂಬುದಕ್ಕೆ ಪ್ರಮಾಣವಿಲ್ಲ ೫೩೯ ಅಭಿಧೀಯತೇ | ಅತಃ ತಸ್ಯ ಶಬ್ದ ವಾತ್ ಅಶಬ್ದತ್ವಮ್ ಅನುಪಪನ್ನಮ್ | ತದೇವ ಚ ಜಗತಃ ಕಾರಣಂ ಶ್ರುತಿಸ್ಮತಿನ್ಯಾಯಪ್ರಸಿದ್ಧಿಭ್ಯಃ ಇತಿ ಚೇತ್ ||

  • (ಭಾಷ್ಯಾರ್ಥ) - ಆನುಮಾನಿಕವೂ ಎಂದರೆ ಅನುಮಾನದಿಂದ ಗೊತ್ತುಮಾಡಿರುವ ಪ್ರಧಾನವೂ ಕೆಲವು ಶಾಖೆಯವರ ಶಬ್ದ (ಪ್ರಮಾಣ)ವುಳ್ಳದ್ದೆಂದು ಕಂಡುಬರುತ್ತಿದೆ. ಹೇಗೆಂದರೆ, ಕಾಠಕದಲ್ಲಿ “ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ’ (ಕ. ೧-೩-೧೧) ಎಂದು ಪಠಿತವಾಗಿರುತ್ತದೆ. ಅಲ್ಲಿ ಯಾವ ಹೆಸರಿನಲ್ಲಿ ಯಾವ ಕ್ರಮದಲ್ಲಿ ಯಾವ ಮಹದವ್ಯಕ್ತಪುರುಷರು (ಸಾಂಖ್ಯ) ಸ್ಮೃತಿಪ್ರಸಿದ್ಧರಾಗಿರುವರೋ ಅವರನ್ನೇ ಇಲ್ಲಿ ಗುರುತಿಸಿ ಅರಿಯಬಹುದಾಗಿದೆ.’ (ಸಾಂಖ್ಯ) ಸ್ಮೃತಿಯಲ್ಲಿ (ಅವ್ಯಕ್ತವೆಂಬ ಹೆಸರಿ ನಿಂದ) ಪ್ರಸಿದ್ಧವಾಗಿರುವದರಿಂದಲೂ , ಶಬ್ದಾದಿಗಳಿಲ್ಲದ್ದರಿಂದ ವ್ಯಕ್ತವಲ್ಲದ್ದು ಅವ್ಯಕ್ತವು ಎಂಬ ವ್ಯುತ್ಪತ್ತಿಯು ಹೊಂದುವದರಿಂದಲೂ ಇಲ್ಲಿ ಅವ್ಯಕ್ತವೆಂದು (ಸಾಂಖ್ಯ)ಸ್ಕೃತಿಪ್ರಸಿದ್ಧವಾದ ಪ್ರಧಾನವನ್ನು ಹೇಳಿರುತ್ತದೆ. ಅದು ಶಬ್ದ (ಪ್ರಮಾಣ) ವುಳ್ಳದ್ದಾದ್ದರಿಂದ, ಅಶಬ್ದವನ್ನುವದು ಯುಕ್ತವಲ್ಲ. ಮತ್ತು ಶ್ರುತಿ, ಸ್ಮೃತಿ, ನ್ಯಾಯ - (ಇವುಗಳಿಂದ) ಪ್ರಸಿದ್ಧವಾಗಿರುವದರಿಂದ ಅದೇ ಜಗತ್ತಿಗೆ ಕಾರಣವು ಎಂದರೆ - ಸಿದ್ಧಾಂತ : ಈ ಅವ್ಯಕ್ತವು ಪ್ರಧಾನವೆಂಬುದಕ್ಕೆ ಪ್ರಮಾಣವಿಲ್ಲ

(ಭಾಷ್ಯ) ೩೩೫. ನೃತದೇವಮ್ | ನ ಹಿ ಏತತ್ ಕಾಠಕಂ ವಾಕ್ಯಂ ಸ್ಮೃತಿಪ್ರಸಿದ್ಧಯೋಃ ಮಹದವ್ಯಕ್ತಯೋಃ ಅಸ್ತಿತ್ವಪರಮ್ ನ ಹಿ ಅತ್ರ ಯಾದೃಶಂ ಸ್ಮತಿಪ್ರಸಿದ್ಧಂ ಸ್ವತಂ ಕಾರಣಂ ತ್ರಿಗುಣಂ ಪ್ರಧಾನಂ ತಾದೃಶಂ ಪ್ರತ್ಯಭಿಜ್ಞಾಯತೇ | ಶಬ್ದಮಾತ್ರಂ ಹಿ ಅತ್ರ ಅವ್ಯಕ್ತಮ್ ಇತಿ ಪ್ರತ್ಯಭಿಜ್ಞಾಯತೇ | ಸ ಚ ಶಬ್ದಃ ನ ವ್ಯಕ್ತಮ್ ಅವ್ಯಕ್ತಮ್ ಇತಿ ಯೌಗಿಕತ್ವಾತ್ ಅನ್ಯಸ್ಮಿನ್ನಪಿ | ಸೂಕ್ಷ್ಮ ಸುದುರ್ಲಕ್ಷೇ ಚ ಪ್ರಯುಜ್ಯತೇ | ನ ಚಾಯಂ ಕಸ್ಮಿಂಶ್ಚಿತ್‌ ರೂಢಃ | ಯಾ ತು ಪ್ರಧಾನವಾದೀನಾಂ ರೂಢಿಃ ಸಾ ತೇಷಾಮೇವ

1.‘ಅತಃ’ ಎಂಬುದು ನಿ 11 ಪಾಠದಲ್ಲಿಲ್ಲ ; ಕಾ 11 ಪಾಠದಲ್ಲಿದೆ.

  1. ಮಹತ್ತಿಗಿಂತ ಅದರ ಕಾರಣವಾದ ಅವ್ಯಕ್ತವು ಹೆಚ್ಚು, ಅವ್ಯಕ್ತಕ್ಕಿಂತ ಚೇತನನಾದ ಪುರುಷನು ಹೆಚ್ಚು -‘ಎಂದು ಸಾಂಖ್ಯರು ಹೇಳುತ್ತಾರೆ. ಇವನ್ನು ಅದೇ ಹೆಸರಿನಿಂದ ಅದೇ ಕ್ರಮದಲ್ಲಿ ಶ್ರುತಿಯು ಹೇಳಿದ.

  2. ಪ್ರಧಾನದಲ್ಲಿ ಯಾವ ಶಬ್ದಾದಿಗಳೂ ಇರುವದಿಲ್ಲ ; ಅದು ಪಂಚಭೂತಗಳ ರೂಪವಾಗಿ ಪರಿಣಮಿಸಿದ ಮೇಲೆ ಅದರಲ್ಲಿ ಶಬ್ದಾದಿಗಳು ತೋರಿಕೊಳ್ಳುವವು.

೫೪೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಪಾರಿಭಾಷಿಕೀ ಸತೀ ನ ವೇದಾರ್ಥನಿರೂಪಣೇ ಕಾರಣಭಾವಂ ಪ್ರತಿಪದ್ಯತೇ | ನ ಚ ಕ್ರಮಮಾತ್ರಸಾಮ್ಯಾತ್ ಸಮಾನಾರ್ಥಪ್ರತಿಪತ್ತಿರ್ಭವತಿ ಅಸತಿ ತದ್ರೂಪ ಪ್ರತ್ಯಭಿಜ್ಞಾನ ನ ಹಿ ಆಶ್ಚಸ್ಥಾನೇ ಗಾಂ ಪಶ್ಯನ್ ಅಶ್ಲೋಯಮ್ ಇತಿ ಅಮೂಡೋSಧ್ಯವಶ್ಯತಿ ||

(ಭಾಷ್ಯಾರ್ಥ) ಇದು ಹೀಗಲ್ಲ: ಏಕೆಂದರೆ ಈ ಕಾಠಕವಾಕ್ಯವು (ಸಾಂಖ್ಯ) ಸ್ಮತಿಪ್ರಸಿದ್ಧವಾದ ಮಹದವ್ಯಕ್ತಿಗಳು ಇವೆ ಎಂಬುದನ್ನು ತಾತ್ಪರ್ಯದಿಂದ (ಹೇಳುವದಕ್ಕೆ) ಬಂದಿಲ್ಲ. ಪ್ರಧಾನವು ತ್ರಿಗುಣವುಳ್ಳ ಸ್ವತಂತ್ರವಾದ ಕಾರಣವೆಂದು ಹೇಗೆ (ಸಾಂಖ್ಯ) ಸ್ಮೃತಿಯಲ್ಲಿ ಪ್ರಸಿದ್ಧವಾಗಿದೆಯೋ ಹಾಗೆ ಇಲ್ಲಿ ಗುರುತಿಸಿ ಅರಿಯುವದಕ್ಕೆ ಬರುವಂತಿಲ್ಲ.ಅವ್ಯಕ್ತ ಎಂಬ ಶಬ್ದವೊಂದೇ ಇಲ್ಲಿ ಕಾಣಬರುತ್ತದೆ. ಆ ಶಬ್ದವನ್ನು ವ್ಯಕ್ತವಲ್ಲದ್ದು ಅವ್ಯಕ್ತವು ಎಂದು ಯೌಗಿಕವಾಗಿರುವದರಿಂದ, (ಇದನ್ನು) ಸೂಕ್ಷ್ಮವಾಗಿ, ಕಾಣುವದು ಬಹಳ ಕಷ್ಟವಾಗಿರುವ, ಬೇರ (ಯಾವದಾದರೊಂದು ತತ್ತ್ವ)ದಲ್ಲಿಯೂ ಪ್ರಯೋಗಿಸಬಹು ದಾಗಿದೆ. ಈ ಶಬ್ದವು ಯಾವದೂಂದು (ಗೊತ್ತಾದ ಪದಾರ್ಥ)ದಲ್ಲಿಯೂ ರೂಢ ವಾಗಿರುವದಿಲ್ಲ. ಇನ್ನು ಪ್ರಧಾನವಾದಿಗಳ (ಪ್ರಕ್ರಿಯೆಯಲ್ಲಿ) ರೂಢಿಯಿದಯಷ್ಟೆ, ಅದು ಅವರದೇ ಪಾರಿಭಾಷಿಕವಾಗಿರುವದರಿಂದ ವೇದಾರ್ಥವನ್ನು ಗೊತ್ತುಪಡಿಸುವದಕ್ಕೆ ಸಾಧನತ್ವವನ್ನು ಹೊಂದಲಾರದು. ಇಂಥ ರೂಪದ್ದು ಎಂದು ಗೊತ್ತಾಗದ ಇರುವಲ್ಲಿ ಬರಿಯ ಕ್ರಮದ ಹೋಲಿಕೆಯಿಂದ ಅದೇ ಪದಾರ್ಥವೆಂಬ ಅರಿವು ಉಂಟಾಗಲಾರದು. ಕುದುರೆಯ ಸ್ಥಾನದಲ್ಲಿ ಎತ್ತನ್ನು ಕಂಡರೆ ಮೂಢನಲ್ಲದವನು (ಯಾವನೂ) ಇದು ಕುದುರ ಎಂದು ನಿಶ್ಚಯಿಸಲಾರನಷ್ಟ,

  1. ತಾನೇ ಜಗತ್ತಾಗಿ ಪರಿಣಮಿಸುವ.

  2. ಏಕೆಂದರೆ ಈ ಸಂದರ್ಭದಲ್ಲಿ ಪರಮಾತ್ಮನ ಸಂಬಂಧವಿಲ್ಲದ ಸ್ವತಂತ್ರವಾದ ಜಗತ್ಕಾರಣವನ್ನು ಹೇಳಿದ ಎಂಬುದಕ್ಕೆ ಯಾವ ಗುರುತೂ ಇರುವದಿಲ್ಲ.

  3. ಹಾಗಿದ್ದರೆ ಈ ಶಬ್ದವನ್ನು ಗಿಕಾರ್ಥದಲ್ಲಿ ತೆಗೆದುಕೊಳ್ಳಬಾರದೆಂದು ಹೇಳಬಹು ದಾಗಿತ್ತು. ಆದ್ದರಿಂದ ಇಲ್ಲಿ ಪ್ರಕರಣಕ್ಕೆ ಹೊಂದುವಂತ ಈ ಶಬ್ದವನ್ನು ಯೌಗಿಕಾರ್ಥದಲ್ಲಿಯೇ ತಗೆದುಕೊಳ್ಳಬೇಕಾಯಿತು - ಎಂದು ಭಾವ.

  4. ಹಾಗಾದರೆ ವೈಯಾಕರಣರು ಒಪ್ಪಿರುವ ಗುಣ, ವೃದ್ಧಿ - ಮುಂತಾದ ಶಬ್ದಗಳಿಗೆ ವೇದದಲ್ಲಿ ಅದೇ ಅರ್ಥವೆಂದಾಗಬೇಕಾಗುವದು ಎಂದು ಭಾವ.

  5. ಸಾಂಖ್ಯರ ಸ್ಮೃತಿಯಲ್ಲಿ ಮಹದವ್ಯಕ್ತಪುರುಷರು ಯಾವ ಕ್ರಮದಲ್ಲಿ ಉಕ್ತರಾಗಿರು ವರೋ ಅದೇ ಕ್ರಮದಲ್ಲಿ ಶ್ರುತಿಯಲ್ಲಿರುತ್ತಾರೆ ಎಂದ ಮಾತ್ರದಿಂದ ಅವರೇ ಇವರು ಎನ್ನುವದಕ್ಕಾಗಲಾರದು - ಎಂದರ್ಥ.

ಅಧಿ. ೧. ಸೂ. ೧] ಇಲ್ಲಿ ಅವ್ಯಕ್ತವೆಂದರೆ ರಥವೆಂದು ಕಲ್ಪಿಸಿರುವ ಶರೀರವು ೫೪೧ ಇಲ್ಲಿ ಅವ್ಯಕ್ತವೆಂದರೆ ರಥವೆಂದು ಕಲ್ಪಿಸಿರುವ ಶರೀರವು

(ಭಾಷ್ಯ) ೩೩೬. ಪ್ರಕರಣನಿರೂಪಣಾಯಾಂ ಚ ಅತ್ರ ನ ಪರಪರಿಕಲ್ಪಿತಂ ಪ್ರಧಾನಂ ಪ್ರತೀಯತೇ | ಶರೀರರೂಪಕವಿನ್ಯಸ್ತಗೃಹೀತೇ | ಶರೀರಂ ಹಿ ಅತ್ರ ರಥ ರೂಪಕವಿಸ್ತಮ್ ಅವ್ಯಕಶಪ್ಪೇನ ಪರಿಗೃಹ್ಯತೇ | ಕುತಃ ? ಪ್ರಕರಣಾತ್, ಪರಿಶೇಷಾಚ್ಚ | ತಥಾ ಹಿ ಅನನ್ತರಾತೀತೋ ಗ್ರ: ಆತ್ಮಶರೀರಾದೀನಾಂ ರಥಿರಥಾದಿರೂಪಕಕೃಪ್ತಿಂದರ್ಶಯತಿ - ‘‘ಆತ್ಮಾನಂ ರಥಿನಂ ವಿದ್ದಿ ಶರೀರಂರಥಮೇವ ತು | ಬುದ್ದಿಂ ತು ಸಾರಥಿಂ ವಿದ್ದಿ ಮನಃ ಪ್ರಗ್ರಹಮೇವ ಚ | ಇನ್ಸಿಯಾಣಿ ಹಯಾನಾಹುರ್ವಿಷಯಾಂಷು ಗೋಚರಾನ್ | ಆತ್ಮೀಯಮನೋಯುಕ್ತಂ ಭೋಕ್ತತ್ಯಾಹುರ್ಮನೀಷಿಣಃ’ || (ಕ. ೧-೩-೩, ೪) ಇತಿ | ತೈಶ್ಚ ಇನ್ಸಿಯಾದಿಭಿಃ ಅಸಂಯತ್ಯಃ ಸಂಸಾರಮ್ ಅಧಿಗಚ್ಛತಿ | ಸಂಯತ್ನಿಸ್ತು ಅಧ್ವನಃ ಪಾರಂ ತದ್ವಿಷ್ಟೂ ಪರಮಂ ಪದಮ್ ಆಪ್ಪೋತಿ ಇತಿ ದರ್ಶಯಿತ್ವಾ ಕಿಂ ತತ್ ಅಧ್ವನಃ ಪಾರಂ ವಿಷ್ಟೂ ಪರಮಂ ಪದಮ್ ? ಇತ್ಯಸ್ಯಾಮ್ ಆಕಾಜ್ಯಾಯಾಮ್, ತೇಭ್ಯಃ ಏವ ಪ್ರಕೃತೇಭ್ಯಃ ಇನ್ನಿಯಾದಿಭ್ಯಃ ಪರತ್ಯೇನ ಪರಮಾತ್ಮಾನಮ್ ಅಧ್ವನಃ ಪಾರಂ ವಿಷ್ಟೋಃ ಪರಮಂ ಪದಂ ದರ್ಶಯತಿ - “ಇನ್ನಿಯೇಭ್ಯಃ ಪರಾ ಹೃರ್ಥಾ ಅರ್ಥಭ್ಯಶ್ಚ ಪರಂ ಮನಃ | ಮನಸಸ್ತು ಪರಾ ಬುದ್ದಿ ರ್ಬುದ್ದೇರಾತ್ಮಾ ಮಹಾನ್ ಪರಃ | ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ | ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಟಾ ಸಾ ಪರಾ ಗತಿಃ’ (ಕ. ೧-೩-೧೦, ೧) ಇತಿ | ತತ್ರ ಯ ಏವ ಇನ್ಸಿಯಾದಯಃ ಪೂರ್ವಸ್ಯಾಂ ರಥರೂಪಕಕಲ್ಪನಾಯಾಂ ಅಶ್ವಾದಿಭಾವೇನ ಪ್ರಕೃತಾಃ, ತ ಏವ ಇಹ ಪರಿಗೃಹ್ಯ ಪ್ರಕೃತಹಾನಾಪ್ರಕೃತಪ್ರಕ್ರಿಯಾಪರಿಹಾರಾಯ | ತತ್ರ ಇನ್ಸಿಯ ಮನೋಬುದ್ದಯಸ್ತಾವತ್ ಪೂರ್ವತ್ರ ಇಹ ಚ ಸಮಾನಶಬ್ದಾ ಏವ | ಅರ್ಥಾ’ ಯೇ ಶಬ್ದಾದಯೋ ವಿಷಯಾ ಇನ್ಸಿಯಹಯಗೋಚರನ ನಿರ್ದಿಷ್ಟಾಃ, ತೇಷಾಂ ಚ ಇನ್ನಿಯೇಭ್ಯಃ ಪರತ್ವಮ್ | ಇನ್ಸಿಯಾಣಾಂ ಗ್ರಹತ್ವಂ, ವಿಷಯಾಣಾಮ್ ಅತಿಗ್ರಹತ್ವಮ್ - ಇತಿ ಶ್ರುತಿಪ್ರಸಿದ್ಧ | ವಿಷಯೇಭ್ಯಶ್ಚ ಮನಸಃ ಪರತ್ವಮ್, ಮನೋಮೂಲಾದ್ ವಿಷಯೇಯವ್ಯವಹಾರಸ್ಯ | ಮನಸನ್ನು ಪರಾ ಬುದ್ಧಿಃ ಬುದ್ಧಿಂ ಹಿ ಆರುಹ್ಯ ಭೋಗ್ಯಜಾತಂ ಭೋಕ್ತಾರಮ್ ಉಪಸರ್ಪತಿ | ಬುದ್ಧರಾತ್ಮಾ ಮಹಾನ್ ಪರಃ | ಯಃ ಸ ‘ಆತ್ಮಾನಂ ರಥಿನಂ ವಿದ್ದಿ’ ಇತಿ ರಥಿನ ಉಪಕ್ಷಿಪ್ತಃ |

  1. ‘ಅರ್ಥಾಸ್ತು’ ಎಂಬ ಊಚಿತ್ಪಾಠವು ಬೇಕಿಲ್ಲ.೫೪೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಕುತಃ ? ಆತ್ಮಶಬ್ದಾತ್ | ಭೋಕುಶ್ಚ ಭೋಗೋಪಕರಣಾತ್ ಪರತ್ತೋಪಪಃ | ಮಹತ್ತ್ವಂ ಚ ಅಸ್ಯ ಸ್ವಾಮಿತ್ವಾತ್ ಉಪಪನ್ನಮ್ | ಅಥವಾ ‘ಮನೋ ಮಹಾನ್ ಮತಿಬ್ರ್ರಹ್ಮಾ ಪೊರ್ಬುದ್ಧಿ: ಖ್ಯಾತಿರೀಶ್ವರಃ | ಪ್ರಜ್ಞಾ ಸಂವಿಚ್ಚಿತಿಶೈವ ಸ್ಮೃತಿಶ್ಚ ಪರಿಪಠ್ಯತೇ’ || (?)’ ಇತಿ ಸ್ಮತೇಃ “ಯೋ ಬ್ರಹ್ಮಾಣಂ ವಿದಧಾತಿ ಪೂರ್ವ ಯೋ ವೈ ವೇದಾಗ್ಂಶ್ಚ ಪ್ರಹಿಣೋತಿ ತಸ್ಮ” (ಶ್ವೇ. ೬-೧೮) ಇತಿ ಚ ಶ್ರುತೇ ಯಾ ಪ್ರಥಮಜಸ್ಯ ಹಿರಣ್ಯಗರ್ಭಸ್ಯ ಬುದ್ದಿ: ಸಾ ಸರ್ವಾಸಾಂ ಬುದ್ದೀನಾಂ ಪರಾ ಪ್ರತಿಷ್ಠಾ ! ಸ್ನೇಹ ‘ಮಹಾನಾತ್ಮಾ’ ಇತ್ಯುಚ್ಯತೇ ! ಸಾ ಚ ಪೂರ್ವತ್ರ ಬುದ್ದಿ ಗ್ರಹಣೇನೈವ ಗೃಹೀತಾ ಸತೀ ಹಿರುಕ್ ಇಹ ಉಪದಿಶ್ಯತೇ | ತಸ್ಮಾ ಅಪಿ ಅಸ್ಮದೀಯಾಬ್ರೂ ಬುದ್ಧಿಭ್ಯಃ ಪರತ್ಕಪಪತೇ | ಏತಸ್ಮಿಂಸ್ತು ಪಕ್ಷ ಪರಮಾತ್ಮವಿಷಯೇವ ಪರೇಣ ಪುರುಷಗ್ರಹಣೇನ ರಥಿನಃ ಆತ್ಮನೋ ಗ್ರಹಣಂ ದ್ರಷ್ಟವ್ಯಮ್ | ಪರಮಾರ್ಥತಃ ಪರಮಾತ್ಮವಿಜ್ಞಾನಾತ್ಮನೋ ಭೇದಾಭಾವಾತ್ | ತದೇವಂ ಶರೀರಮೇವ ಏಕಂ ಪರಿಶಿಷ್ಯತೇ | ಇತರಾಣಿ ಇನ್ನಿಯಾದೀನಿ ಪ್ರಕೃತಾವ ಪರಮಪದದಿದರ್ಶಯಿಷಯಾ ಸಮನುಕ್ರಾಮನ್ ಪರಿಶಿಷ್ಯಮಾಣೇನ ಇಹ ಅನೇನ ಅವ್ಯಕ್ತಶದ್ದೇನ ಪರಿಶಿಷ್ಯಮಾಣಂ ಪ್ರಕೃತಂ ಶರೀರಂ ದರ್ಶಯತಿ ಇತಿ ಗಮ್ಯತೇ ||

(ಭಾಷ್ಯಾರ್ಥ) ಪ್ರಕರಣವನ್ನು ಪರೀಕ್ಷಿಸಿ ನೋಡಿದರೂ ಇಲ್ಲಿ ಪರ(ವಾದಿ)ಗಳು ಕಲ್ಪಿಸಿರುವ ಪ್ರಧಾನವು ಕಾಣಬರುವದಿಲ್ಲ. ಏಕಂದರೆ (ಇಲ್ಲಿ) ಶರೀರರೂಪಕ ವಿನ್ಯಸ್ತಗ್ರಹಣವಿದ (ಇದರ ವಿವರಣೆ) : ಇಲ್ಲಿ ರಥರೂಪಕದಲ್ಲಿಟ್ಟಿರುವ ಶರೀರವನ್ನೇ ಅವ್ಯಕಶಬ್ದದಿಂದ ತೆಗೆದುಕೊಳ್ಳಬೇಕು. ಏಕ ? ಎಂದರೆ ಪ್ರಕರಣದಿಂದ ಮತ್ತು ಪರಿಶೇಷದಿಂದ. ಹೇಗೆಂದರೆ ಇದರ ಹಿಂದೆಯೇ ಆಗಿಹೋಗಿರುವ ಗ್ರಂಥವು “ಆತ್ಮನನ್ನು ರಥಿಯಂದು

  1. ಅಚ್ಚಿನ ಭಾರತದಲ್ಲಿ ಈ ಅನುಕ್ರಮದ ಶ್ಲೋಕವು ನಮಗೆ ಸಿಕ್ಕಿರುವದಿಲ್ಲ. ಆದರೆ ಇದೇ ಅಭಿಪ್ರಾಯದ ಈ ಶ್ಲೋಕಗಳು ಕಂಡುಬಂದಿರುತ್ತವ :

೧. ಮಹಾನಾತ್ಮಾ ಮತಿಬ್ರ್ರಹ್ಮಾ ವಿಶ್ವ: ಶಮ್ಮುಃ ಸ್ವಯಂಭವಃ | .

ಬುದ್ಧಿ: ಪ್ರಜ್ಯೋಪಲಬ್ಲಿಶ್ವ ಸಂವಿತ್ ಖ್ಯಾತಿರ್ಧತಿಃ ಸ್ಮೃತಿ: 11 - ಅನು. ೧೪-೪೧೬. ೨. ಮಹಾನಾತ್ಮಾ ಮತಿರ್ವಿಷ್ಣುರ್ಜಿಷ್ಣುಃ ಶಮ್ಯುಶ್ಚ ವೀರ್ಯವಾನ್ ||

ಬುದ್ಧಿಃ ಪ್ರಜ್ಯೋಪಲಬ್ಲಿಶ್ಚ ತಥಾ ಖ್ಯಾತಿರ್ಧತಿಃ ಸ್ಮೃತಿ: || ಪರ್ಯಾಯವಾಚಕ್ಕೆ: ಶಬ್ಬರ್ಮಹಾನಾತ್ಮಾ ವಿಭಾವ್ಯತೇ || - ಅಶ್ವ, ೪೦-೨

  1. ‘ಶರೀರಂ ಚ ತತ್ ರೂಪಕವಿನ್ಯಸ್ತಂ ಚ ಶರೀರರೂಪಕವಿನ್ಯಸ್ತಮ್ | ತಸ್ಯ ಗೃಹೀತೇ’ ಎಂದು ಸೂತ್ರಭಾಗವನ್ನು ಇಲ್ಲಿ ಬಿಡಿಸಿತೋರಿಸಿರುತ್ತಾರ.

ಅಧಿ. ೧. ಸೂ. ೧] ಇಲ್ಲಿ ಅವ್ಯಕ್ತವೆಂದರೆ ರಥವೆಂದು ಕಲ್ಪಿಸಿರುವ ಶರೀರವು

೫೪೩

ತಿಳಿ, ಶರೀರವೆಂದರ ರಥವೆಂದೇ (ತಿಳಿ). ಬುದ್ದಿಯನ್ನಾದರ ಸಾರಥಿಯಂದು ತಿಳಿ. ಮನಸ್ಸನ್ನು ಕಡಿವಾಣವೆಂದೇ (ತಿಳಿ). ಬಲ್ಲವರು ಇಂದ್ರಿಯಗಳನ್ನು ಕುದುರಗಳು ಎನ್ನವರು, ವಿಷಯಗಳು ಅವುಗಳ ಗೋಚರ(ವೆನ್ನುವರು), ಆತ್ಮ, ಇಂದ್ರಿಯಗಳು ಮನಸ್ಸು - (ಇವುಗಳಿಂದ) ಕೂಡಿದಾತನನ್ನು ಭೋಕ್ತ ಎಂದು ಕರೆಯುತ್ತಾರ’ (ಕ. ೧ ೩-೩,೪) ಎಂದು ಆತ್ಮಶರೀರಾದಿಗಳನ್ನು ರಥ, ರಥಿ - ಎಂದು ಮುಂತಾಗಿ ರೂಪಕವನ್ನು ಕಲ್ಪಿಸಿ ತೋರಿಸಿರುತ್ತದೆ. ಆ ಇಂದ್ರಿಯಗಳೇ ಮುಂತಾದವುಗಳನ್ನು ಬಿಗಿಹಿಡಿಯದಿದ್ದರೆ ಸಂಸಾರವನ್ನು ಪಡೆಯುತ್ತಾನೆ, ಬಿಗಿಹಿಡಿದುಕೊಂಡರೆ ದಾರಿಯ ಕೊನೆಯಲ್ಲಿರುವ ಆ ವಿಷ್ಣುವಿನ ಪರಮಪದವನ್ನು ಪಡೆದುಕೊಳ್ಳುತ್ತಾನೆ - ಎಂದು ತಿಳಿಸಿ ಆ ದಾರಿಯ ಕೊನೆಯಲ್ಲಿರುವ ವಿಷ್ಣುವಿನ ಪರಮಪದವೆಂಬುದು ಯಾವದು ? - ಎಂಬ ಆಕಾಂಕ್ಷ ಯುಂಟಾಗಲಾಗಿ ಪ್ರಕೃತವಾಗಿರುವ ಅದೇ ಇಂದ್ರಿಯಾದಿಗಳಿಗಿಂತ ಹೆಚ್ಚಾಗಿರುವ ಪರಮಾತ್ಮನೇ ದಾರಿಯ ಕೊನೆಯಲ್ಲಿರುವ ವಿಷ್ಣುವಿನ ಪರಮಪದವು ಎಂದು “ಇಂದ್ರಿಯಗಳಿಗಿಂತ ಅರ್ಥಗಳು ಹೆಚ್ಚಿನವು, ಮತ್ತು ಅರ್ಥಗಳಿಗಿಂತ ಮನಸ್ಸು ಹೆಚ್ಚಿನದು ; ಮನಸ್ಸಿಗಿಂತ ಬುದ್ದಿಯು ಹೆಚ್ಚಿನದು ; ಬುದ್ಧಿಗಿಂತ ಮಹಾನ್ ಆತ್ಮನು ಹೆಚ್ಚಿನವನು. (ಆ) ಮಹತ್ತಿಗಿಂತ ಅವ್ಯಕ್ತವು ಹೆಚ್ಚಿನದು, ಅವ್ಯಕ್ತಕ್ಕಿಂತ ಪುರುಷನು ಹೆಚ್ಚಿನವನು. ಪುರುಷನಿಗಿಂತ ಯಾವದೂ ಹೆಚ್ಚಿನದಿಲ್ಲ ; ಅವನೇ ಕೊನೆ, ಅವನೇ ಪರಗತಿ’’ (ಕ. ೧ ೩-೧೦, ೧) ಎಂಬ (ವಾಕ್ಯವು) ತಿಳಿಸುತ್ತದೆ. ಇಲ್ಲಿ ಯಾವ ಇಂದ್ರಿಯಾದಿಗಳನ್ನೇ ಹಿಂದಿನ ರಥರೂಪಕಕಲ್ಪನೆಯಲ್ಲಿ ಕುದುರ ಮುಂತಾದ ರೂಪ ದಿಂದ ಪ್ರಕ್ರಮಮಾಡಿದೆಯೋ ಅವುಗಳನ್ನೇ ಇಲ್ಲಿಯೂ, ಪ್ರಕೃತವನ್ನು ಬಿಟ್ಟು ಅಪ್ರಕೃತವಾದದ್ದನ್ನು ಪ್ರಾರಂಭಿಸುವ(ದೆಂಬ ದೋಷವನ್ನು ) ಪರಿಹರಿಸಿಕೊಳ್ಳು ವದಕ್ಕಾಗಿ ಪರಿಗ್ರಹಿಸಬೇಕಾಗಿದೆ.

ಮೊದಲನೆಯದಾಗಿ ಇವುಗಳಲ್ಲಿ ಇಂದ್ರಿಯಗಳು, ಮನಸ್ಸು, ಬುದ್ದಿ - ಇವುಗಳಿಗೆ ಹಿಂದೆಯೂ ಇಲ್ಲಿಯೂ ಅದೇ ಹಸರುಗಳೇ ಇರುತ್ತವೆ. ಅರ್ಥಗಳಂಬ ಶಬ್ದಾದಿವಿಷಯಗಳನ್ನು ಇಂದ್ರಿಯಗಳೆಂಬ ಕುದುರೆಗಳಿಗೆ ಗೋಚರವೆಂದು ಹಿಂದೆ

  1. ಶರೀರ.

  2. ಕ. ೧-೩-೭ ರಿಂದ ೯ ರ ವರೆಗಿನ ಗ್ರಂಥದ ಅರ್ಥವಿದು. ಪ್ರಕರಣವು ಶರೀರೇಂದ್ರಿಯಾದಿಗಳ ಮೂಲಕ ಪರಮಾತ್ಮನನ್ನು ತಿಳಿಸುವದಕ್ಕೆ ಹೊರಟಿದೆ ಎಂಬುದನ್ನು ತಿಳಿಸುವದಕ್ಕೆ ಈ ಗ್ರಂಥದ ಉಪನ್ಯಾಸವನ್ನು ಮಾಡಿದ.

  3. ಪೂರ್ವಪಕ್ಷದಲ್ಲಿ ಪ್ರಕೃತವಾಗಿರುವ ಇಂದ್ರಿಯಾದಿಗಳನ್ನು ಬಿಟ್ಟು ಅಪಕೃತವಾಗಿರುವ ಮಹದವ್ಯಕ್ತಪುರುಷರನ್ನು ಹೇಳುವದಕ್ಕಾರಂಭಿಸಿದಂತೆ ಆಗಿರುತ್ತದೆ ಎಂದು ಭಾವ.

೫೪೪

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೪. ಹೇಳಿತ್ತಷ್ಟ, ಅವು ಇಂದ್ರಿಯಗಳಿಗಿಂತ ಹೆಚ್ಚಿನವು ಎಂದಿರುವದು “ಇಂದ್ರಿಯಗಳು ಗ್ರಹ, ವಿಷಯಗಳು ಅತಿಗ್ರಹ’ (ಬೃ. ೩-೨-೨ರಿಂದ ೯) ಎಂಬ ಶ್ರುತಿಪ್ರಸಿದ್ಧಿಯಿಂದ, ಮತ್ತು ವಿಷಯಗಳಿಗಿಂತ ಮನಸ್ಸು ಹೆಚ್ಚಿನದು ಎಂದಿರುವದು ವಿಷಯೇಂದ್ರಿಯ ವ್ಯವಹಾರವು ಮನೋಮೂಲವಾಗಿರುವದರಿಂದ, ಮನಸ್ಸಿಗಿಂತಲಾದರ ಬುದ್ದಿಯು ಹೆಚ್ಚಿನದು ; ಏಕೆಂದರೆ ಭೋಗ್ಯಸಮೂಹವು ಬುದ್ಧಿಯನ್ನು ಹತ್ತಿಕೊಂಡೇ ಭೋಕ್ಸವಿನ ಬಳಿಗೆ ಬಂದು (ಸೇರು)ತ್ತದೆ. ಬುದ್ಧಿಗಿಂತ ಮಹಾನ್ ಆತ್ಮನು ಹೆಚ್ಚಿನವನು. “ಆತ್ಮನನ್ನು ರಥಿಯಂದು ತಿಳಿ’ ಎಂದು (ಹಿಂದ) ರಥಿ ಎಂತ ಸೂಚಿತನಾಗಿದ್ದನಲ್ಲ, ಅವನೇ ಇವನು. (ಇದು) ಏತರಿಂದ (ಗೂತ್ತು) ?’ ಎಂದರೆ (ಇಲ್ಲಿ) ಆತ್ಮಶಬ್ದ ವಿರುವದರಿಂದ ಭೋಕ್ತವು ಭೋಗೋಪಕರಣಕ್ಕಿಂತ ಹೆಚ್ಚಿನವನು ಎಂಬುದು ಯುಕ್ತವೂ ಆಗಿರುತ್ತದ. ಇವನು ‘ಮಹಾನ್'5 (ಎಂದಿರುವದೂ) ಇವನು ಶರೀರಕರಣಗಳಿಗೆ ಒಡೆಯನಾಗಿರುವದರಿಂದ ಯುಕ್ತವಾಗಿರುತ್ತದೆ. ಅಥವಾ ‘ಮನೋ ಮಹಾನ್ ಮತಿಬ್ರ್ರಹ್ಮಾ ಪೊರ್ಬುದ್ಧಿ: ಖ್ಯಾತಿರೀಶ್ವರಃ | ಪ್ರಜ್ಞಾ ಸಂವಿಚ್ಚಿತಿಶ್ಚವ ಸ್ಮೃತಿಶ್ಚ ಪರಿಪಠ್ಯತೇ’ (ಮನಃ, ಮಹಾನ್, ಮತಿಃ, ಬ್ರಹ್ಮಾ, ಪೂಃ, ಬುದ್ಧಿ, ಖ್ಯಾತಿ, ಈಶ್ವರಃ, ಪ್ರಜ್ಞಾ, ಸಂವಿತ್, ಚಿತಿಃ, ಸ್ಮೃತಿ: ಎಂದೂ ಹೇಳಲ್ಪಡುತ್ತದೆ) ಎಂಬ ಸ್ಮೃತಿ(?)ಯಿಂದಲೂ “ಯಾವನು ಬ್ರಹ್ಮನನ್ನು ಮೊದಲು ಸೃಷ್ಟಿಮಾಡುವನೋ, ಮತ್ತು ಯಾವನು ಅವನಿಗೆ ವೇದಗಳನ್ನು ಕಳುಹಿಸಿಕೊಡುವನೋ’ (ಶೇ. ೬-೧೮) ಎಂಬ ಶ್ರುತಿಯಿಂದಲೂ ಮೊದಲು ಹುಟ್ಟುವ ಹಿರಣ್ಯಗರ್ಭನ ಬುದ್ದಿಯುಂಟಲ್ಲ, ಅದು ಎಲ್ಲಾ ಬುದ್ದಿಗಳಿಗೂ ಹೆಚ್ಚಿನ ಆಶ್ರಯವಾಗಿರುತ್ತದೆ. ಅದನ್ನೇ ಇಲ್ಲಿ ಮಹಾನ್ ಆತ್ಮಾ ಎಂದಿರುತ್ತದೆ. ಅದನ್ನು ಹಿಂದೆ ಬುದ್ದಿಯನ್ನು ತಗೆದುಕೊಂಡದ್ದರಿಂದಲೇ ತೆಗದು ಕೊಂಡಂತಾಗಿತ್ತು. ಇಲ್ಲಿ ಬೇರೆಯಾಗಿ ತಿಳಿಸಿರುತ್ತದೆ ; ಏಕೆಂದರೆ ಅದೂ ನಮ್ಮ

  1. ಭೋಗವನ್ನು ಅನುಭವಿಸುವದು ಬುದ್ಧಿಯ ಮೂಲಕವೇ, ಆತ್ಮನು ನೇರಾಗಿ ಭೋಗಿಸುವದಿಲ್ಲ.

2.ಸಾಂಖ್ಯರ ಮಹತ್ತತ್ತ್ವವನ್ನೇ ಇಲ್ಲಿ ಹೇಳಿದೆ ಎಂದೇಕೆ ತಿಳಿಯಬಾರದು? - ಎಂದು ಪ್ರಶ್ನೆ. 3. ಮಹತ್ತತ್ಯವು ಮುಖ್ಯಾರ್ಥದಲ್ಲಿ ಆತ್ಮನಾಗಲಾರದು.

  1. ಕರ್ತವಿಗಾಗಿ ಕರಣವಿರುವದರಿಂದ ಕರಣರೂಪವಾದ ಬುದ್ಧಿಗಿಂತ ಕರ್ತವಾದ ಜೀವನು ಹೆಚ್ಚಿನವನೆಂದು ಯುಕ್ತ ಎಂದು ಭಾವ.

  2. ಮಹಾನ್ ಎಂಬುದು ಮಹತ್ತತ್ಯಕ್ಕೇ ಮುಖ್ಯಾರ್ಥದಲ್ಲಿ ಹೊಂದುತ್ತದೆಯಲ್ಲ ! ಎಂಬ ಆಕ್ಷೇಪಕ್ಕೆ ಪರಿಹಾರವಿದು.

  3. ನಮ್ಮ ಬುದ್ಧಿಗಳಲ್ಲ ಆ ಹಿರಣ್ಯಗರ್ಭನ ಬುದ್ಧಿಯ ಅಂಶಗಳೇ.

.

ವಿಜ್ಞಾನಾತ್ಮರು ಆಯಿತೆಂದು ತಿಳಿಯಗ್ರಹಿಸಿದ್ಧರಿಂದ

ಅಧಿ. ೧. ಸೂ. ೧] ಅಧ್ಯಾತ್ಮಯೋಗ ಹೇಳಿರುವದರಿಂದ ಈ ಅವ್ಯಕ್ತವು ಶರೀರವೇ ೫೪೫

ಬುದ್ದಿಗಳಿಗಿಂತ ಹೆಚ್ಚಿನದಾಗಿರಬಹುದಾಗಿದೆ. ಈ ಪಕ್ಷದಲ್ಲಾದರೆ ಪರಮಾತ್ಮವಿಷಯ ನಾಗಿರುವ ಪರದಿಂದ ಪುರುಷ(ಶಬ್ದವನ್ನು) ಗ್ರಹಿಸಿದ್ಧರಿಂದಲೇ ರಥಿಯಾದ ಆತ್ಮನನ್ನು ತೆಗೆದುಕೊಂಡಂತೆ ಆಯಿತೆಂದು ತಿಳಿಯಬೇಕು ; ಏಕೆಂದರೆ ನಿಜವಾಗಿ ಪರಮಾತ್ಮ ವಿಜ್ಞಾನಾತ್ಮರುಗಳಿಗೆ ಭೇದವಿರುವದಿಲ್ಲ.”

ಈ ರೀತಿಯಲ್ಲಿ ಶರೀರವೊಂದೇ ಉಳಿದುಕೊಳ್ಳುತ್ತದೆ. ಪ್ರಕೃತವೇ ಆಗಿರುವ ಉಳಿದ ಇಂದ್ರಿಯಾದಿಗಳನ್ನೇ ಪರಮಪದವನ್ನು ತೋರಿಸಿಕೊಡಬೇಕೆಂಬ ಇಚ್ಛೆಯಿಂದ ಒಂದಾಗುತ್ತಲೊಂದಾಗಿ ಹೇಳಿರುವದರಿಂದ ಉಳಿದಿರುವ ಕೊನೆಯ ಅವ್ಯಕ್ತ ಎಂಬ ಶಬ್ದದಿಂದ ಉಳಿದಿರುವ ಪ್ರಕೃತಶರೀರವನ್ನೇ ಇಲ್ಲಿ ಹೇಳಿರುತ್ತದೆ ಎಂದು ಗೊತ್ತಾಗುತ್ತದೆ.

ಅಧ್ಯಾತ್ಮಯೋಗವನ್ನು ಹೇಳಿರುವದರಿಂದಲೂ ಈ ಅವ್ಯಕ್ತವು ಶರೀರವೇ

(ಭಾಷ್ಯ) ೩೩೭. ಶರೀರೇನ್ಸಿಯಮನೋಬುದ್ಧಿ ವಿಷಯವೇದನಾಸಂಯುಕ್ತಸ್ಯ ಹಿ ಅವಿದ್ಯಾವತೋ ಭೋಕ್ತು: ಶರೀರಾದೀನಾಂ ರಥಾದಿರೂಪಕಕಲ್ಪನಯಾ ಸಂಸಾರ ಮೋಕ್ಷಗತಿನಿರೂಪಣೇನ ಪ್ರತ್ಯಗಾತ್ಮಬ್ರಹ್ಮಾವಗತಿರಿಹ ವಿವಕ್ಷಿತಾ | ತಥಾ ಚ ಏಷ ಸರ್ವಷು ಭೂತೇಷು ಗೂಢSತ್ಮಾ ನ ಪ್ರಕಾಶತೇ ! ದೃಶ್ಯತೇ ತ್ವಯಾ ಬುದ್ದಾ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ’ (ಕ. ೧-೩-೧೨) ಇತಿ ವೈಷ್ಣವಸ್ಯ ಪರಮಪದಸ್ಯ ದುರವಗಮತ್ವಮ್ ಉಕ್ಕಾ ತದವಗಮಾರ್ಥಂ ಯೋಗಂ ದರ್ಶಯತಿ - “ಯಚ್ಛೇದ್ಘಾಲ್ಮನಸೀ ಪ್ರಾಜ್ಞಸದ್ಯಚ್ಛಜ್ಞಾನ ಆತ್ಮನಿ | ಜ್ಞಾನಮಾತ್ಮನಿ ಮಹತಿ ನಿಯಜೇತ್ ತದ್ಯಚ್ಛೇಚ್ಛಾನ್ಯ ಆತ್ಮನಿ ||” (ಕ. ೧-೩-೧೩) ಏತದುಕ್ತಂ ಭವತಿ | ವಾಚಂ ಮನಸಿ ಸಂಯಚೇತ್, ವಾಗಾದಿಬಾಹ್ಯ ವ್ಯಾಪಾರಮ್ ಉತ್ಸಜ್ಯ ಮನೋಮಾತ್ರೇಣ ಅವಶಿಷ್ಟೇತ | ಮನೋSಪಿ ವಿಷಯವಿಕಲ್ಪಾಭಿಮುಖ ವಿಕಲ್ಪ ದೋಷದರ್ಶನೇನ ಜ್ಞಾನಶಬ್ದದಿತಾಯಾಂ ಬುದ್ ಅಧ್ಯವಸಾಯಸ್ವಭಾವಾಯಾಂ

  1. ಆಶ್ರಯವಾದ ಹಿರಣ್ಯಗರ್ಭನ ಬುದ್ಧಿಯು ಅದನ್ನು ಆಶ್ರಯಿಸಿಕೊಂಡಿರುವ ವ್ಯಷ್ಟಿ ಬುದ್ಧಿಗಳಿಗಿಂತ ಹೆಚ್ಚಿನದು ಎಂದು ಭಾವ.
    1. ಆದ್ದರಿಂದ ಪುರುಷಶಬ್ದದಿಂದಲೇ ಜೀವನನ್ನು ಹೇಳಿದಂತಾಯಿತು.
  1. ಪರಿಶೇಷದಿಂದ ಶರೀರವೇ ಅವ್ಯಕ್ತವೆಂದು ಗೊತ್ತಾಗುತ್ತದೆ ಎಂದು ಮೇಲೆ ಹೇಳಿರುವದು ಈ ಕಾರಣದಿಂದಲೇ.

೫೪೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಧಾರಯೇತ್ | ತಾಮಪಿ ಬುದ್ಧಿಂ ಮಹತಿ ಆತ್ಮನಿ ಭೋಕ್ತರಿ ಅಗ್ರಾಯಾಂ ವಾ ಬುದ್ಧ ಸೂಕ್ಷ್ಮತಾಪಾದನೇನ ನಿಯಜೇತ್ | ಮಹಾನ್ತಂ ತು ಆತ್ಮಾನಂ ಶಾನ್ತೇ ಆತ್ಮನಿ ಪ್ರಕರಣವತಿ ಪರಸ್ಮಿನ್ ಪುರುಷ ಪರಸ್ಕಾಂ ಕಾಷ್ಠಾಯಾಂ ಪ್ರತಿಷ್ಠಾಪಯೇತ್ ಇತಿ ಚ’ | ತದೇವಂ ಪೂರ್ವಾಪರಾಲೋಚನಾಯಾಂ ನಾಸ್ತ್ರ, ಪರಪರಿಕಲ್ಪಿತಸ್ಯ ಪ್ರಧಾನಸ್ಯ ಅವಕಾಶಃ 11

(ಭಾಷ್ಯಾರ್ಥ) ಶರೀರ, ಇಂದ್ರಿಯಗಳು, ಮನಸ್ಸು, ಬುದ್ದಿ, ವಿಷಯವೇದನೆ - ಇವು ಗಳಿಂದ ಕೂಡಿರುವ ಅವಿದ್ಯಾವಂತನಾದ ಭೋವಿನ ಶರೀರಾದಿಗಳನ್ನು ರಥವೇ ಮುಂತಾದದ್ದೆಂದು ರೂಪಕವನ್ನು ಕಲ್ಪಿಸಿ ಸಂಸಾರಮೋಕ್ಷಗತಿಗಳನ್ನು ನಿಶ್ಚಯಿಸುವದರ ಮೂಲಕ ಪ್ರತ್ಯಗಾತ್ಮ (ರೂಪವಾದ) ಬ್ರಹ್ಮವನ್ನು ಗೊತ್ತುಪಡಿಸುವದೇ ಇಲ್ಲಿ ವಿವಕ್ಷಿತವಾಗಿರುತ್ತದೆ. ಆದ್ದರಿಂದಲೇ “ಸರ್ವಭೂತಗಳಲ್ಲಿಯೂ ಗೂಢನಾಗಿರು ವ(ದರಿಂದ)ಲೂ ಈ ಆತ್ಮನು ಬೆಳಗುವದಿಲ್ಲ. ಆದರೆ ಸೂಕ್ಷ್ಮವಾದ ಅಗ್ರಬುದ್ದಿ ಯಿಂದ (ನೋಡುವ) ಸೂಕ್ಷ್ಮದರ್ಶಿಗಳಿಗೆ ಕಾಣುತ್ತಾನೆ’ (ಕ. ೧-೩-೧೨) ಎಂದು ವೈಷ್ಣವಪರಮಪದವನ್ನು ಅರಿತುಕೊಳ್ಳುವದು ಕಷ್ಟವೆಂದು ಹೇಳಿ “ವಿವೇಕಿ ಯಾದವನು ವಾಕ್ಕನ್ನು ಮನಸ್ಸಿನಲ್ಲಿ ಹಿಡಿದಿಡಬೇಕು, ಅದನ್ನು ಜ್ಞಾನಾತ್ಮನಲ್ಲಿ ಹಿಡಿದಿಡಬೇಕು, ಜ್ಞಾನಾ(ತೃ)ನನ್ನು ಮಹತ್ತಿನಲ್ಲಿ ಹಿಡಿದಿಡಬೇಕು, ಅದನ್ನು ಶಾಂತಾತ್ಮನಲ್ಲಿ ಹಿಡಿದಿಡಬೇಕು’ (ಕ. ೧-೩-೧೩) ಎಂದು ಅದನ್ನು ಅರಿತು ಕೂಳ್ಳುವದಕ್ಕೆ ಯೋಗವನ್ನೂ ತಿಳಿಸುತ್ತದ.

(ಈ ಶ್ರುತಿಯಲ್ಲಿ ) ಇಷ್ಟನ್ನು ಹೇಳಿದಂತಾಗಿರುತ್ತದೆ : ವಾಕ್ಕನ್ನು ಮನಸ್ಸಿನಲ್ಲಿ ಸಂಯಮಮಾಡಬೇಕು, ಎಂದರೆ ವಾಕ್ಕೇ ಮುಂತಾದ ಹೊರಗಿನ ಇಂದ್ರಿಯಗಳ ವ್ಯಾಪಾರವನ್ನು ಬಿಟ್ಟು ಬರಿಯ ಮನಸ್ಸಾಗಿ ನಿಲ್ಲಬೇಕು. ವಿಷಯಗಳನ್ನು ವಿಕಲ್ಪಿಸಿರುವ ಕಡೆಗೆ ತಿರುಗುವ ಮನಸ್ಸನ್ನೂ ವಿಕಲ್ಪಗಳಲ್ಲಿರುವ ದೋಷವನ್ನೂ ಕಂಡುಕೊಂಡು ಜ್ಞಾನವೆಂಬ ಶಬ್ದಕ್ಕೆ ವಾಚ್ಯವಾಗಿರುವ ನಿಶ್ಚಯಸ್ವಭಾವದ ಬುದ್ಧಿಯಲ್ಲಿ

  1. ಇಲ್ಲಿ ಚ ಬೇಕಿಲ್ಲವೆಂದು ಕಾಣುತ್ತದೆ. 2. ಪ್ರಧಾನವನ್ನು ಹೇಳುವ ಪ್ರಕರಣವಿದಲ್ಲ. 3. ಆ ಪರಮಾತ್ಮನನ್ನು.

  2. ನಿದಿಧ್ಯಾಸನವನ್ನೂ ಎಂದರ್ಥ. ಗೀತೆಯ ಆರನೆಯ ಅಧ್ಯಾಯದಲ್ಲಿ ಹೇಳಿರುವ ಧ್ಯಾನಯೋಗವೂ, ಮಾಂಡೂಕ್ಯಕಾರಿಕಯ ೩-೪೦ರಿಂದ ೪೬ ರವರೆಗಿನ ಗ್ರಂಥಭಾಗದಲ್ಲಿ ಹೇಳಿರುವ ಮನೋನಿಗ್ರಹವೂ ಇದೇ ಅಧ್ಯಾತ್ಮಯೋಗವು, ಪೀಠಿಕೆಯನ್ನು ನೋಡಿ.

ಅಧಿ. ೧. ಸೂ. ೨] ಶರೀರವನ್ನು ಅವ್ಯಕ್ತವೆಂದಿರುವದು ಭೂತಸೂಕ್ಷ್ಮದ ದೃಷ್ಟಿಯಿಂದ ೫೪೭ ನಿಲ್ಲಿಸಿಕೊಳ್ಳಬೇಕು. ಆ ಬುದ್ದಿಯನ್ನೂ ಮಹಾನ್ ಆತ್ಮನಲ್ಲಿ ಎಂದರೆ ಭೋವಿನಲ್ಲಿ ಅಥವಾ ಮೊದಲು ಹುಟ್ಟಿದ (ಹಿರಣ್ಯಗರ್ಭನ) ಬುದ್ದಿಯಲ್ಲಿ ಸೂಕ್ಷ್ಮವಾಗಿಸಿಕೊಂಡು, ನಿಲ್ಲಿಸಿಕೊಳ್ಳಬೇಕು. ಮಹಾನ್ ಆತ್ಮನನ್ನಾದರೋ ಶಾಂತಾತ್ಮನಲ್ಲಿ ಎಂದರೆ (ಈ) ಪ್ರಕರಣಕ್ಕೆ ಸೇರಿರುವ, (ಎಲ್ಲಕ್ಕೂ) ತೀರ ಕೊನೆಯವನಾದ, ಪರಮಪುರುಷನಲ್ಲಿ ನಿಲ್ಲಿಸಿಕೊಳ್ಳಬೇಕು ಎಂದು (ಅರ್ಥ).

ಅಂತೂ ಹೀಗೆ ಹಿಂದುಮುಂದಿನ (ಸಂದರ್ಭವನ್ನು) ಆಲೋಚಿಸಿದರ ಪರ (ವಾದಿಗಳಾದ ಸಾಂಖ್ಯರು) ಕಲ್ಪಿಸಿರುವ ಪ್ರಧಾನಕ್ಕೆ ಅವಕಾಶವಿರುವದಿಲ್ಲ.

ಸೂಕ್ಷ್ಮಂ ತು ತದರ್ಹತ್ವಾತ್ ||೨||

೨. ಸೂಕ್ಷ್ಮವನ್ನೇ (ಇಲ್ಲಿ ಅವ್ಯಕ್ತವೆಂದಿದೆ) ; ಏಕೆಂದರೆ (ಅದು) ಆ (ಶಬ್ದಕ್ಕೆ) ಯೋಗ್ಯವಾಗಿರುತ್ತದೆ.

ಶರೀರವನ್ನು ಅವ್ಯಕ್ತವೆಂದಿರುವದು ಭೂತಸೂಕ್ಷ್ಮದ ದೃಷ್ಟಿಯಿಂದ

(ಭಾಷ್ಯ) ೩೩೮. ಉಕ್ರಮೇತತ್ ಪ್ರಕರಣಪರಿಶೇಷಾಭ್ಯಾಂ ಶರೀರಮ್ ಅವ್ಯಕ್ತಶಬ್ದಂ ನ ಪ್ರಧಾನಮ್ ಇತಿ | ಇದಮ್ ಇದಾನೀಮ್ ಆಶಜ್ಯತೇ - ಕಥಮ್ ಅವ್ಯಕ್ತ ಶಬ್ದಾರ್ಹತ್ವಂ ಶರೀರಸ್ಯ ? ಯಾವತಾ ಸ್ಕೂಲತ್ವಾತ್ ಸ್ಪಷ್ಟತರಮಿದಂ ಶರೀರಂ ವ್ಯಕ್ತಶಬ್ದಾರ್ಹಮ್, ಅಸ್ಪಷ್ಟವಚನಸ್ಸು ಅವ್ಯಕ್ತ ಶಬ್ದಃ ಇತಿ | ಅತಃ ಉತ್ತರಮ್ ಉಚ್ಯತೇ - ಸೂಕ್ಷ್ಮಂ ತು ಇಹ ಕಾರಣಾತ್ಮನಾ ಶರೀರಂ ವಿವಕ್ಷತೇ ಸೂಕ್ಷ್ಮಸ್ಯ ಅವ್ಯಕ್ತಶಬ್ದಾರ್ಹತ್ವಾತ್ | ಯದ್ಯಪಿ ಸ್ಫೂಲಮಿದಂ ಶರೀರಂ ನ ಸ್ವಯಮ್ ಅವ್ಯಕ್ತಶಬ್ದಮ್ ಅರ್ಹತಿ ತಥಾಪಿ ತಸ್ಯ ತು ಆರಮ್ಮಕಂ ಭೂತಸೂಕ್ಷ್ಮಮ್ ಅವ್ಯಕಶಬ್ದಮ್ ಅರ್ಹತಿ 1 ಪ್ರಕೃತಿಶಬ್ದಶ್ಚ ವಿಕಾರೇ ದೃಷ್ಟ: | ಯಥಾ “ಗೋಭಿಃ ಶ್ರೀಣೀತ ಮತ್ಸರಮ್’’ (ಋ. ಸಂ. ೯-೪೬-೪) ಇತಿ | ಶ್ರುತಿಶ್ಚ ‘ತದ್ಧದಂ ತರ್ಥ್ಯವ್ಯಾಕೃತಮಾಸೀತ್” (ಬೃ. ೧-೪-೭) ಇತಿ ಇದಮೇವ ವ್ಯಾಕೃತನಾಮರೂಪ ವಿಭಿನ್ನಂ ಜಗತ್ ಪ್ರಾಗವಸ್ಟಾಯಾಂ ಪರಿತ್ಯಕ್ತವ್ಯಾಕೃತನಾಮರೂಪಂ ಬೀಜ ಶಕ್ಯವಸ್ಥಮ್ ಅವ್ಯಕಶಬ್ದ ಯೋಗ್ಯಂ ದರ್ಶಯತಿ ||

೫೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

(ಭಾಷ್ಯಾರ್ಥ) ಪ್ರಕರಣಪರಿಶೇಷಗಳಿಂದ ಶರೀರವನ್ನೇ ಅವ್ಯಕ್ತಶಬ್ದ (ದಿಂದ ಹೇಳಿದೆ). ಪ್ರಧಾನವನ್ನಲ್ಲ ಎಂಬದನ್ನು ಹೇಳಿದ್ದಾಯಿತು. ಈಗ ಇದನ್ನು ಆಶಂಕೆಮಾಡಲಾಗುತ್ತದೆ. ಶರೀರವು ಅವ್ಯಕ್ತಶಬ್ದಕ್ಕೆ ತಕ್ಕದ್ದೆಂಬುದು ಹೇಗೆ ? ಏಕೆಂದರೆ ಸ್ಕೂಲವಾಗಿರುವದರಿಂದ ಈ ಶರೀರವು ಸ್ಪಷ್ಟತರವಾಗಿದೆಯಾಗಿ ವ್ಯಕ್ತ ಎಂಬ ಶಬ್ದಕ್ಕೆ ತಕ್ಕದ್ದು ; ಅವ್ಯಕ್ತ ಶಬ್ದವಾದರೋ ಅಸ್ಪಷ್ಟವಾದದ್ದನ್ನು (ಹೇಳುತ್ತದೆಯಲ್ಲ) !

ಇದಕ್ಕೆ ಉತ್ತರವನ್ನು ಹೇಳಲಾಗುತ್ತದೆ : ಕಾರಣರೂಪದಿಂದ ಸೂಕ್ಷ್ಮವಾಗಿರುವ ಶರೀರವನ್ನೇ ಇಲ್ಲಿ (ಅವ್ಯಕ್ತಶಬ್ದದಿಂದ) ಹೇಳಬೇಕೆಂದಿರುತ್ತದೆ. ಏಕೆಂದರೆ ಸೂಕ್ಷ್ಮವು ಅವ್ಯಕ್ತಶಬ್ದಕ್ಕೆ ತಕ್ಕದ್ದಾಗಿರುತ್ತದೆ. ಈ ಸ್ಕೂಲಶರೀರವು ತಾನೇ ಅವ್ಯಕಶಬ್ದಕ್ಕೆ ತಕ್ಕದ್ದಲ್ಲವೆಂಬುದು ನಿಜ ; ಆದರೂ ಅದಕ್ಕೆ ಕಾರಣವಾದ ಭೂತಸೂಕ್ಷ್ಮವು ಅವ್ಯಕ್ತಶಬ್ದಕ್ಕೆ ತಕ್ಕದ್ದಾಗಿರುತ್ತದೆ. ಕಾರಣ (ವಾಚಕ) ಶಬ್ದವನ್ನು ಕಾರ್ಯದಲ್ಲಿ (ಪ್ರಯೋಗಿಸುವದು) ಕಂಡಿದ ; ಉದಾಹರಣೆಗೆ ‘ಗೋಭಿಃ ಶ್ರೀಣೀತ ಮತ್ಸರಮ್", (ಋ. ಸಂ. ೯-೪೬-೪) ಗೋವುಗಳಿಂದ ಮತ್ಸರವನ್ನು ಮಿಶ್ರಮಾಡಬೇಕುಎಂಬಲ್ಲಿ ಹಾಗೆ ಪ್ರಯೋಗಿಸಿದ. ಆಗ ಈ (ಜಗತ್ತು) ಅವ್ಯಾಹೃತವಾಗಿತ್ತು’’ (ಬೃ. ೧-೪-೭) ಎಂದು ಶ್ರುತಿಯೂ ನಾಮರೂಪಗಳಿಂದ ಬಿಡಿಬಿಡಿಯಾಗಿ ವಿಂಗಡಿಸಿಕೊಂಡಿರುವ ಇದೇ ಜಗತ್ತು ಹಿಂದಿನ ಅವಸ್ಥೆಯಲ್ಲಿ ಬಿಡಿಬಿಡಿಯಾದ ನಾಮರೂಪಗಳನ್ನು ಬಿಟ್ಟು ಬೀಜಶಕ್ತಿಯ ಅವಸ್ಥೆಯಲ್ಲಿ (ಇತ್ತು ಎಂದು ಅದನ್ನು ) ಅವ್ಯಕ್ತ ಎಂಬ ಶಬ್ದಕ್ಕೆ ತಕ್ಕದ್ದೆಂದು ತಿಳಿಸುತ್ತದೆ.

  1. ಪ್ರಧಾನವು ಅವ್ಯಕ್ತವು, ಮಹದಾದಿಗಳು ವ್ಯಕ್ತ, ಪುರುಷನು “ಸ್ವರೂಪನು - ಎಂದು ವಿಂಗಡಿಸಿ ತಿಳಿದುಕೊಂಡರೆ ಕೈವಲ್ಯವಾಗುವದಂದು ಸಾಂಖ್ಯರ ಮತ. ಆದ್ದರಿಂದ ಶರೀರವು ವ್ಯಕ್ತವಾಗಿದೆ, ಇಂದ್ರಿಯಗಳಿಗೆ ಕಾಣುತ್ತದೆ ; ಇದನ್ನು ಅವ್ಯಕ್ತವೆನ್ನುವದು ಹೇಗೆ ? ಎಂದು ಸಾಂಖ್ಯನ ಆಕ್ಷೇಪ.

  2. ಆರಂಭಕ ಎಂಬ ಶಬ್ದವನ್ನು ಕಾರಣ ಎಂಬರ್ಥದಲ್ಲಿ ಭಾಷ್ಯಕಾರರು ಪ್ರಯೋಗಿಸುವರು. ಇದು ವೈಶೇಷಿಕರ ಪಾರಿಭಾಷಿಕಪದವೆಂದು ಭ್ರಮಿಸಕೂಡದು.

  3. ಭೂತಗಳು ಹುಟ್ಟುವದಕ್ಕೆ ಬೇಕಾದ ಸೂಕ್ಷ್ಮ ಕಾರಣವಾದ ಅವ್ಯಾಹೃತವು.

  4. ಸೋಮಕ್ಕೆ ಹಾಲನ್ನು ಬೆರೆಯಿಸಬೇಕು ಎಂದರ್ಥ. ಇಲ್ಲಿ ಗೋವೆಂಬ ಪ್ರಕೃತಿವಾಚಕವನ್ನು ಹಾಲಂಬ ವಿಕಾರವನ್ನು ತಿಳಿಸುವದಕ್ಕೆ ಪ್ರಯೋಗಿಸಿರುತ್ತದೆ.

ರ್ಶಿ

ಅಧಿ. ೧. ಸೂ. ೩]

ಅವ್ಯಾಹೃತವು ಪ್ರಧಾನವಲ್ಲ

ತದಧೀನತ್ಯಾದರ್ಥವತ್ ||೩|| ೩. ಅವನಿಗೆ ಅಧೀನವಾಗಿರುವದರಿಂದ (ಇದು) ಅರ್ಥವತ್ತಾಗಿರುತ್ತದೆ.

ಅವ್ಯಾಹೃತವು ಪ್ರಧಾನವಲ್ಲ

(ಭಾಷ್ಯ) ೩೩೯. ಅತ್ರಾಹ | ಯದಿ ಜಗದಿದಮ್ ಅನಭಿವ್ಯಕ್ತನಾಮರೂಪಂ ಬೀಜಾತ್ಮಕಂ ಪ್ರಾಗವಸ್ಥಮ್ ಅವ್ಯಕ್ತಶಬ್ದಾರ್ಹಮ್ ಅಭ್ಯುಪಗಮ್ಮೇತ, ತದಾತ್ಮನಾ ಚ ಶರೀರಸ್ಯಾಪಿ ಅವ್ಯಕ್ತಶಬ್ದಾರ್ಹತ್ವಂ ಪ್ರತಿಜ್ಞಾಯೇತ, ಸ ಏವ ತರ್ಹಿ ಪ್ರಧಾನಕಾರಣವಾದಃ ಏವಂ ಸತಿ ಆಪತ | ಅಸ್ಯವ ಜಗತಃ ಪ್ರಾಗವಸ್ಥಾಯಾಃ ಪ್ರಧಾನನ ಅಭ್ಯುಪಗಮಾತ್ ಇತಿ | ಅತ್ತೂಚ್ಯತೇ - ಯದಿ ವಯಂ ಸ್ವತಾಂ ಕಾಂಚಿತ್ ಪ್ರಾಗವಸ್ಥಾಂ ಜಗತಃ ಕಾರಣನ ಅಭ್ಯುಪಗಚ್ಛೇಮ ಪ್ರಸಞ್ಞಯಮ ತದಾ ಪ್ರಧಾನಕಾರಣವಾದಮ್ | ಪರಮೇಶ್ವರಾಧೀನಾ ತು ಇಯಮ್ ಅಸ್ಮಾಭಿಃ ಪ್ರಾಗವಸ್ಥಾ ಜಗತಃ ಅಭ್ಯುಪಗಮ್ಯತೇ | ನ ಸ್ವತಾ | ಸಾ ಚ ಅವಶ್ಯಾಭ್ಯುಪಗನವ್ಯಾ | ಅರ್ಥವತೀ ಹಿ ಸಾ 1 ನ ಹಿ ತಯಾ ವಿನಾ ಪರಮೇಶ್ವರಸ್ಯ ಸ್ಪಷ್ಟತ್ವಂ ಸಿಧ್ಯತಿ ಶಕ್ತಿರಹಿತಸ್ಯ ತಸ್ಯ ಪ್ರವೃತ್ತನುಪಪತೇಃ | ಮುಕ್ತಾನಾಂ ಚ ಪುನರನುತ್ಪತ್ತಿಃ | ಕುತಃ ? ವಿದ್ಯಯಾ ತಸ್ಯಾ ಬೀಜಶಕ್ತರ್ದಾಹಾತ್ | ಅವಿದ್ಯಾತ್ಮಿಕಾ ಹಿ ಬೀಜಶಕ್ತಿ: ಅವ್ಯಕ್ತಶಬ್ದ ನಿರ್ದಶ್ಯಾ ಪರಮೇಶ್ವರಾಶ್ರಯಾ ಮಾಯಾಮಯಿ ಮಹಾಸುಪ್ತಿ: | ಯಸ್ಕಾಂ ಸ್ವರೂಪಪ್ರತಿಬೋಧರಹಿತಾಃ ಶೇರತೇ ಸಂಸಾರಿಣೋ ಜೀವಾಃ | ತದೇತತ್ ಅವ್ಯಕ್ತಂ ಕ್ವಚಿತ್ ಆಕಾಶಶಬ್ದ ನಿರ್ದಿಷ್ಟಮ್ - “ಏತಸ್ಮಿನ್ನು ಖಿಲ್ಪಕ್ಷರೇ ಗಾರ್ಗ್ಯಾಕಾಶ ಓತಶ್ಚ ಪ್ರೋತಶ್ಚ’’ (ಬೃ. ೩-೮-೧೧) ಇತಿ ಶ್ರುತೇಃ | ಕ್ವಚಿತ್ ಅಕ್ಷರಶಯ್ಯೋದಿತಮ್ - “ಅಕ್ಷರಾತ್ ಪರತಃ ಪರಃ’ (ಮುಂ. ೨ ೧-೨) ಇತಿ ಶ್ರುತೇಃ | ಕ್ವಚಿತ್ ಮಾಯಾ ಇತಿ ಸೂಚಿತಮ್ - ‘ಮಾಯಾಂ ತು ಪ್ರಕೃತಿಂ ವಿದ್ಯಾನ್ಮಾಯಿನಂ ತು ಮಹೇಶ್ವರಮ್’’ (ಶ್ವೇ. ೪-೧೦) ಇತಿ ಮyವರ್ಣಾತ್ | ಅವ್ಯಕ್ತಾ ಹಿಸಾ ಮಾಯಾ 1 ತಾತ್ವನಿರೂಪಣಸ್ಯ ಅಶಕ್ಯತ್ವಾತ್ | ತದಿದಂ ‘ಮಹತಃ ಪರಮವ್ಯಕಮ್’’ ಇತ್ಯುಕ್ತಮ್ ಅವ್ಯಕ್ತಪ್ರಭವತ್ಪಾನ್ಮಹತಃ, ಯದಾ ಹೃರಣ್ಯಗರ್ಭಿ ಬುದ್ಧಿ: ಮಹಾನ್ ||

(ಭಾಷ್ಯಾರ್ಥ) (ಆಕ್ಷೇಪ) :- ಇಲ್ಲಿ (ಪೂರ್ವಪಕ್ಷಿಯು) ಹೇಳುತ್ತಾನೆಂದರೆ, ಈ ಜಗತ್ತು ನಾಮರೂಪಗಳು ಅಭಿವ್ಯಕ್ತವಾಗದೆ ಬೀಜರೂಪವಾಗಿ (ಸೃಷ್ಟಿಗ) ಹಿಂದಿನ

888RO

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅವಸ್ಥೆಯಲ್ಲಿ (ರುವಾಗ) ಅವ್ಯಕಶಬ್ದಕ್ಕೆ ತಕ್ಕದ್ದಾಗಿರುವದೆಂದು ಒಪ್ಪಿದರೆ, ಮತ್ತು ಆ ‘ರೂಪದಿಂದ ಶರೀರವೂ ಅವ್ಯಕ್ತಶಬ್ದಕ್ಕೆ ತಕ್ಕದ್ದೆಂದು ಹೇಳುವದಾದರೆ, ಆಗ ಅದೇ ಪ್ರಧಾನಕಾರಣವಾದವೇ ಬಂದೊದಗುವದು. ಏಕೆಂದರೆ ಇದೇ ಜಗತ್ತಿನ (ಸೃಷ್ಟಿಗೆ) ಹಿಂದಿನ ಅವಸ್ಥೆಯನ್ನೇ (ಸಾಂಖ್ಯರು) ಪ್ರಧಾನವೆಂದು ಒಪ್ಪಿರುತ್ತಾರೆ.’

(ಪರಿಹಾರ) :- ಇದಕ್ಕೆ (ಸಮಾಧಾನವನ್ನು) ಹೇಳುತ್ತೇವ. ಸ್ವತಂತ್ರವಾಗಿರುವ ಯಾವದಾದರೊಂದು ಪ್ರಾಗವಸ್ಥೆಯು ಜಗತ್ತಿಗೆ ಕಾರಣವೆಂದು ನಾವು ಒಪ್ಪಿದ್ದರೆ, ಆಗ ಪ್ರಧಾನಕಾರಣವಾದವನ್ನೇ ತಂದೊಡ್ಡಿದಂತೆ ಆಗುತ್ತಿತ್ತು. ಆದರೆ ಈ ಜಗತ್ತಿನ ಪ್ರಾಗವಸ್ಥೆಯು ಪರಮೇಶ್ವರನಿಗೆ ಅಧೀನವಾಗಿರುತ್ತದೆ ಎಂದು ನಾವು ಒಪ್ಪಿರು ತೇವೆಯೇ ಹೊರತು ಸ್ವತಂತ್ರ (ವೆಂದು ಒಪ್ಪಿರುವ)ದಿಲ್ಲ. ಇದನ್ನು ಅವಶ್ಯವಾಗಿ ಒಪ್ಪಬೇಕು. ಏಕೆಂದರೆ ಇದು ಸಾರ್ಥಕವಾಗಿರುತ್ತದೆ. ಅದಿಲ್ಲದ ಪರಮೇಶ್ವರನಿಗೆ ಸ್ಪಷ್ಟತ್ವವೇ ಸಿದ್ಧಿಸುವದಿಲ್ಲ ; ಏಕೆಂದರೆ ಶಕ್ತಿರಹಿತನಾದರೆ ಅವನು (ಸೃಷ್ಟಿಯಲ್ಲಿ) ತೊಡಗಲಾರನು (ಮತ್ತು ಇದನ್ನು ಒಪ್ಪಿದರೆ) ಮುಕ್ತರು ಮತ್ತೆ ಹುಟ್ಟುವಹಾಗಿಲ್ಲ. ಏಕೆ ? ಎಂದರೆ ವಿದ್ಯೆಯಿಂದ ಆ ಬೀಜಶಕ್ತಿಯು ಸುಟ್ಟು ಹೋಗಿರುತ್ತದೆ. ಏಕೆಂದರೆ ಅವ್ಯಕ್ತಶಬ್ದದಿಂದ ಹೇಳಿರುವ (ಈ) ಬೀಜಶಕ್ತಿಯು ಅವಿದ್ಯಾತ್ಮಕವಾಗಿ, ಪರ ಮೇಶ್ವರನನ್ನು ಆಶ್ರಯಿಸಿರುವ ಮಾಯಾಮಯವಾದ ಮಹಾಸುಪ್ತಿಯಲ್ಲವೆ ? ಅದರಲ್ಲಿ ಸಂಸಾರಿಗಳಾದ ಜೀವರು ತಮ್ಮ ರೂಪದ ಅರಿವಿಲ್ಲದ ನಿದ್ರಿಸುತ್ತಿರು

  1. ಪ್ರಧಾನವೂ ಜಗತ್ತಿನ ಪ್ರಾಗವಸ್ಥೆ, ಅವ್ಯಾಹೃತವೂ ಪ್ರಾಗವಸ್ಥೆ ; ಅವ್ಯಾಹೃತವೆಂಬ ನಾಮಾಂತರದಿಂದಲೇ ವೇದಾಂತವು ಸಾಂಖ್ಯರ ಪ್ರಧಾನವಾದಕ್ಕಿಂತ ಹೇಗೆ ಭಿನ್ನವಾದೀತು ? - ಎಂದು ಆಕ್ಷೇಪ.

  2. ಪ್ರಧಾನವು ತಾನೇ ಪರಿಣಮಿಸುತ್ತದೆ, ಅವ್ಯಾಕೃತವನ್ನು ಈಶ್ವರನು ನಾಮರೂಪಗಳಾಗಿ ವಿಂಗಡಿಸುತ್ತಾನೆ. ಹೀಗೆ ಸ್ವತಂತ್ರವಾದ ತತ್ತ್ವವೊಂದು, ಪರತಂತ್ರವಾದದ್ದು ಮತ್ತೊಂದು.

  3. ಪರಮೇಶ್ವರನು ಜಗತ್ಕಾರಣನೆಂಬುದು ಈ ಶಕ್ತಿಯ ಮೂಲಕ ; ನಿರ್ವಿಶೇಷನಾದ್ದರಿಂದ ಅವನು ಸ್ವತಃ ಕಾರಣನಾಗಲಾರನು. ಅವಿದ್ಯಾಶಕ್ತಿಯು ಪ್ರತಿಜೀವರಿಗೂ ಒಂದೊಂದು ಎಂದು ಭಾಮತೀಕಾರರೂ ಅದು ತನ್ನ ಅನೇಕ ಶಕ್ತಿಗಳಿಂದ ವಿಚಿತ್ರ ಕಾರ್ಯಗಳನ್ನು ಮಾಡುವದೆಂದು ನ್ಯಾಯನಿರ್ಣಯಕಾರರೂ ಬರದಿರುವದಕ್ಕೆ ಪ್ರಕೃತಭಾಷ್ಯದಲ್ಲಿ ಆಧಾರವಿಲ್ಲ. ಪೀಠಿಕೆಯನ್ನು ನೋಡಿ.

  4. ಪ್ರಧಾನವು ಪರಮಾರ್ಥವಾದ್ದರಿಂದ ಮತ್ತೆಮತ್ತೆ ಜಗತ್ತಾಗಿ ಪರಿಣಮಿಸುತ್ತಲೇ ಇರಬೇಕು ; ಆದರೆ ಅವ್ಯಾಹೃತವು ಅವಿದ್ಯಾಕಲ್ಪಿತವಾದ್ದರಿಂದ ಅಜ್ಞರ ದೃಷ್ಟಿಯಿಂದ ಪರಿಣಮಿಸುತ್ತದೆ, ಜ್ಞಾನದಿಂದ ಅದೇ ಬಾಧಿತವಾಗುತ್ತದೆ.

ಅಧಿ. ೧. ಸೂ. ೩] ಅವ್ಯಾಹೃತವು ಪ್ರಧಾನವಲ್ಲ ವರು. ಆ ಈ ಅವ್ಯಕ್ತವನ್ನು ಒಂದೊಂದು ಕಡೆಯಲ್ಲಿ ಆಕಾಶಶಬ್ದದಿಂದ ತಿಳಿಸಿದ ; “ಎಲೆ ಗಾರ್ಗಿಯ, ಈ ಅಕ್ಷರದಲ್ಲಿಯೇ ಆಕಾಶವು ಓತವಾಗಿಯೂ ಪ್ರೋತ ವಾಗಿಯೂ ಇರುತ್ತದೆ’’ (ಬೃ. ೩-೮-೧೧) ಎಂಬ ಶ್ರುತಿಯಿಂದ (ಇದು ಆಕಾಶಶಬ್ದ ವಾಚ್ಯವೆಂದು ಗೊತ್ತಾಗುತ್ತದೆ). ಒಂದೊಂದು ಕಡೆಯಲ್ಲಿ ಅಕ್ಷರವೆಂಬ ಶಬ್ದದಿಂದ ನಿರ್ದಿಷ್ಟವಾಗಿರುತ್ತದೆ ; “ಪರವಾದ ಅಕ್ಷರಕ್ಕಿಂತಲೂ ಪರನಾದವನು'3 (ಮುಂ. ೨-೧-೨) ಎಂಬ ಶ್ರುತಿಯಿಂದ (ಇದು ಅಕ್ಷರಶಬ್ದ ವಾಚ್ಯವೆಂದು ಗೊತ್ತಾಗುತ್ತದೆ). ಕೆಲವು ಕಡೆಗಳಲ್ಲಿ ಮಾಯ ಎಂದು ಸೂಚಿತವಾಗಿರುತ್ತದೆ ; “ಪ್ರಕೃತಿಯನ್ನು ಮಾಯ ಎಂದು ತಿಳಿಯಬೇಕು, ಮಹೇಶ್ವರನನ್ನು ಮಾಯಿಯಂದು (ತಿಳಿಯಬೇಕು) 4 (ಶ್ವೇ. ೪-೧೦) ಎಂಬ ಮಂತ್ರವರ್ಣದಿಂದ (ಹೀಗಂದು ತಿಳಿಯಬರುತ್ತದೆ). ಈ ಮಾಯೆಯು ಅವ್ಯಕ್ತವು ; ಏಕೆಂದರೆ ಆ (ಪರಮೇಶ್ವರ) ನೆಂದಾಗಲಿ (ಅವನಿಗಿಂತ) ಬೇರ ಎಂದಾಗಲಿ ಗೊತ್ತುಪಡಿಸಿ ಹೇಳಲು ಅಶಕ್ಯವಾಗಿರು ತದೆ. ಯಾವಾಗ ಹಿರಣ್ಯಗರ್ಭನ ಬುದ್ದಿಯೇ ಮಹಾನ್ (ಆತ್ಮ ಎಂದು ಇಟ್ಟು,

  1. ಇದು ಅವಿದ್ಯಕವೆಂದು ಅರಿತುಕೊಳ್ಳದೆ ಇರುವ ಜೀವರು ಈಶ್ವರನು ತಮಗಿಂತ ಬೇರೆ ಎಂದೂ ತಾವು ಅಲ್ಪಜ್ಞರಾದ ಸಂಸಾರಿಗಳೆಂದೂ ತಿಳಿದುಕೊಂಡು ಜನನಮರಣಗಳ ಮಾಯಾ ಸ್ವಪ್ನವನ್ನು ಕಾಣುತ್ತಿರುವರು. ಮಾಂ. ಕಾ. ೧-೧೬ ರ ಭಾಷ್ಯವನ್ನು ನೋಡಿ. ಪರಮೇಶ್ವರಾಶ್ರಯಾ ಎಂಬ ವಿಶೇಷಣವು ತಮ್ಮ ಸಿದ್ಧಾಂತಕ್ಕೆ ವಿರುದ್ದವಾಗುವದರಿಂದ ಭಾಮತೀಕಾರರು ‘ಅವಿದ್ಯಯು ಜೀವಾಶ್ರಯವಾಗಿದ್ದರೂ ನಿಮಿತ್ತವಾಗಿಯೂ ವಿಷಯವಾಗಿಯೂ ಈಶ್ವರನನ್ನು ಆಶ್ರಯಿಸಿರುತ್ತದೆ’ - ಎಂದು ಬರೆಯುತ್ತಾರೆ. ಆದರೆ ಅವಿದ್ಯಾಮಾಯಗಳನ್ನು ಭಾಷ್ಯದಲ್ಲಿ ಬೇರೆಬೇರೆಯಾಗಿ ತಿಳಿಸಿರುವದಕ್ಕೆ ಈ ವ್ಯಾಖ್ಯಾನವು ವಿರುದ್ಧವಾಗಿರುತ್ತದೆ. ಮುಂದ ೩೪೧ ರಲ್ಲಿ ಅಭೇದೋಪಚಾರ ದಿಂದ ಎಂಬುದರ ಟಿಪ್ಪಣಿಯನ್ನು ನೋಡಿ.

  2. ಹಾಸುಹೊಕ್ಕಾಗಿ ಹಣೆದುಕೊಂಡಿರುತ್ತದೆ ; ಅದಕ್ಕಿಂತ ಬೇರೆಯಾಗಿ ಬಿಡಿಸಿ ಹೇಳುವದಕ್ಕೆ ಬರುವದಿಲ್ಲ ಎಂದು ಶ್ರುತ್ಯರ್ಥ.

  3. ತನ್ನ ಕಾರ್ಯವಾದ ಜಗತ್ತಿಗಿಂತಲೂ ಅವ್ಯಾಹೃತವು ಪರವು, ಅದಕ್ಕಿಂತಲೂ ಪರಮೇಶ್ವರನು ಪರನು ಎಂದರ್ಥ.

  4. ಜಗತ್ಕಾರಣವಾದ ಅವ್ಯಕ್ತವು ಅಥವಾ ಅವ್ಯಾಹೃತವು ಮಾಯಯಂದೂ ಪರಮೇಶ್ವರನು ಆ ಮಾಯೆಯನ್ನು ತನ್ನ ವಶದಲ್ಲಿಟ್ಟುಕೊಂಡಿರುವನೆಂದೂ ತಿಳಿಯಬೇಕು ಎಂದರ್ಥ.

  5. ಅವ್ಯಕ್ತವೆಂಬ ಶಬ್ದವನ್ನು ಉಪಯೋಗಿಸಿರುವದಕ್ಕೆ ಅನಿರ್ವಚನೀಯತ್ವವೇ ನಿಮಿತ್ತ ಎಂದರ್ಥ. ತನ್ನ ರೂಪದಿಂದ ಅನಿರ್ವಚನೀಯವಾಗಿ ಅಪರಮಾರ್ಥವಾಗಿದ್ದರೂ ಪರಮಾತ್ಮ ರೂಪದಿಂದ ಅದು ಪರಮಾರ್ಥವೇ ಆಗಿದೆ. ನೀರುನೂರಗಳ ದೃಷ್ಟಾಂತದಿಂದ ನಾಮರೂಪ ಮಾಯಯನ್ನು ‘ತತ್ಕಾವ್ಯತ್ಯಾಭ್ಯಾಮನಿರ್ವಚನೀಯ’ ಎಂದಿರುವದನ್ನೂ ಅವಿದ್ಯಾಕಲ್ಪಿತವೆಂದಿರು ವದನ್ನೂ ಬ್ರ. ಭಾ. ೨-೪-೧೦, ೩-೫-೧- ಇವುಗಳಲ್ಲಿ ಕಾಣಬಹುದು.ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಕೂಳ್ಳುವವೋ ಆ ಪಕ್ಷದಲ್ಲಿ ): “ಮಹತ್ತಿಗಿಂತ ಅವ್ಯಕ್ತವು ಹೆಚ್ಚಿನದು’ ಎಂಬಲ್ಲಿ ಇಂಥ ಈ (ಅವ್ಯಾಹೃತವನ್ನೇ) ಹೇಳಿರುತ್ತದೆ (ಎನ್ನಬೇಕು) ; ಏಕೆಂದರೆ ಮಹತ್ತು ಅವ್ಯಕ್ತದಿಂದ ಉಂಟಾಗುತ್ತದೆ.

ಅವ್ಯಕ್ತವೆಂದರೆ ಅವಿದ್ಯೆಯೆಂದೂ ಅರ್ಥಮಾಡಬಹುದು

(ಭಾಷ್ಯ) ೩೪೦. ಯದಾ ತು ಜೀವೋ ಮಹಾನ್ ತದಾಪಿ ಅವ್ಯಕ್ತಾಧೀನತ್ವಾತ್ ಜೀವಭಾವಸ್ಯ ಮಹತಃ ಪರಮವ್ಯಕ್ತಮ್’ ಇತ್ಯುಕ್ತಮ್ | ಅವಿದ್ಯಾ ಹಿ ಅವ್ಯಕ್ತಮ್ | ಅವಿದ್ಯಾವನೈವ ಜೀವಸ್ಯ ಸರ್ವ: ಸಂವ್ಯವಹಾರಃ ಸವ್ರತೋ ವರ್ತತೇ ||

(ಭಾಷ್ಯಾರ್ಥ) ಆದರೆ ಯಾವಾಗ ಮಹಾನ್ (ಆತ್ಮ)ನೆಂದರ ಜೀವ(ನೆಂದು ಇಟ್ಟುಕೊಳ್ಳು ವವೋ)’ ಆಗಲೂ ಜೀವಭಾವವು ಅವ್ಯಕ್ತಾಧೀನವಾಗಿರುವದರಿಂದ “ಮಹತ್ತಿ ಗಿಂತಲೂ ಅವ್ಯಕ್ತವು ಹೆಚ್ಚಿನದು’’ ಎಂದು ಹೇಳಿದ (ಎನ್ನಬೇಕು). ಏಕಂದರೆ (ಆ ಪಕ್ಷದಲ್ಲಿ) ಅವಿದ್ಯಯೇ ಅವ್ಯಕ್ತವು ; ಅವಿದ್ಯಯುಳ್ಳವನಾಗಿರುವದರಿಂದಲೇ ಜೀವನ ಎಲ್ಲಾ ವ್ಯವಹಾರವೂ ಸಂತತವಾಗಿ (ಸಾಗಿರುತ್ತದೆ).

  1. ಭಾ. ಭಾ. ೩೩೬ರಲ್ಲಿ ‘ಮಹಾನ್ ಆತ್ಮಾ’ ಎಂಬ ಮಾತಿಗೆ ಕೊಟ್ಟಿರುವ ಎರಡನೆಯ ಅರ್ಥವನ್ನು ತೆಗೆದುಕೊಳ್ಳುವಾಗ ಎಂದರ್ಥ.

  2. ಭಾ. ಭಾ. ೩೩೬ರಲ್ಲಿ ಮಹಾನ್ ಆತ್ಮಾ ಎಂಬ ಮಾತಿಗೆ ಕೊಟ್ಟಿದ್ದ ಮೊದಲನೆಯ ಅರ್ಥವಿದು.

  3. ‘ತದಧೀನತ್ವಾತ್’ ಎಂಬ ಸೂತ್ರಕ್ಕೆ ಇದು ಮತ್ತೊಂದು ವ್ಯಾಖ್ಯಾನವು, ಜೀವತ್ವವು ಅವಿದ್ಯಾಧೀನವಾಗಿರುವದರಿಂದ ಅದರ ಅಂಗೀಕಾರವು ಸಾರ್ಥಕವಾಗಿರುತ್ತದೆ ಎಂದು ಸೂತ್ರದ ಅರ್ಥ.

  4. ಏಕೆಂದರೆ ತಾನು ಕಾಣಿಸಿಕೊಳ್ಳದೆಯೇ ಅವಿದ್ಯೆಯು ಜೀವನ ಜೀವತ್ವಕ್ಕೆ ಕಾರಣವಾಗಿರುತ್ತದೆ ಎಂದು ಭಾವ.

  5. ಅವಿದ್ಯೆಯನ್ನೊಪ್ಪದಿದ್ದರೆ ಬ್ರಹ್ಮಸ್ವರೂಪದವನೇ ಆಗಿರುವ ಜೀವನಿಗೆ ಜನನಮರಣ, ಕರ್ತತ್ವಭೋಕೃತ್ವ, ಗತಾಗತ್ಯಾದಿಗಳನ್ನು ಹೇಳುವದಕ್ಕೆ ಬರುವದಿಲ್ಲ ಎಂದು ಭಾವ. ಈ ಪಕ್ಷದಲ್ಲಿ ‘ಸೂಕ್ಷ್ಮಂ ತು ತದರ್ಹತ್ಪಾತ್” ಎಂಬ ಸೂತ್ರಕ್ಕೆ ಶರೀರಕ್ಕೆ ಕಾರಣವಾಗಿರುವ ಅವಿದ್ಯೆಯೇ ಅವ್ಯಕ್ತಶಬ್ಲಾರ್ಹವಾಗಿರುವದರಿಂದಲೂ ಶರೀರವು ಅವಿದ್ಯೆಯಿಂದಲೇ ಕಲ್ಪಿತವಾಗಿರುವದ ರಿಂದಲೂ ಅದನ್ನು ಅವ್ಯಕ್ತವನ್ನಬಹುದು ಎಂದು ಭಾಷ್ಯವನ್ನು ಕಲ್ಪಿಸಿಕೊಳ್ಳಬೇಕು.

ಅಧಿ. ೧. ಸೂ. ೩] ಶರೀರವನ್ನೇ ಅವ್ಯಕ್ತವೆಂದು ಹಿಡಿಯುವದಕ್ಕೆ ಕಾರಣ

ಶರೀರವನ್ನೇ ಅವ್ಯಕ್ತವೆಂದು ಹಿಡಿಯುವದಕ್ಕೆ ಕಾರಣ

(ಭಾಷ್ಯ) ೩೪೧. ಮಹತಃ ಪರತ್ವಮ್ ಅಭೇದೋಪಚಾರಾತ್ ತದ್ವಿಕಾರ ಶರೀರೇ ಪರಿಕಲ್ಪತೇ | ಸತ್ಯಪಿ ಶರೀರವತ್ ಇನ್ಸಿಯಾದೀನಾಂ ತದ್ವಿಕಾರತ್ವಾವಿಶೇಷ ಶರೀರವ ಅಭೇದೋಪಚಾರಾತ್ ಅವ್ಯಕ್ತಶಬ್ದನ ಗ್ರಹಣಮ್ ಇನ್ಸಿಯಾದೀನಾಂ ಸ್ವಶರೇವ ಗೃಹೀತತ್ವಾತ್, ಪರಿಶಿಷ್ಟತ್ವಾಚ್ಚ ಶರೀರಸ್ಯ ||

(ಭಾಷ್ಯಾರ್ಥ) (ಅವ್ಯಾಕೃತಕ್ಕೂ ಶರೀರಕ್ಕೂ) ಅಭೇದೋಪಚಾರದಿಂದ’ ಅದರ ವಿಕಾರವಾದ (ಅವ್ಯಕ್ತದ) (ಇದು) ಮಹತ್ತಿಗಿಂತ ಹೆಚ್ಚಿನದೆಂದು ಶರೀರದಲ್ಲಿ ಕಲ್ಪಿಸಿರುತ್ತದೆ. ಶರೀರದಂತ ಇಂದ್ರಿಯಾದಿಗಳೂ ಅದರ ಕಾರ್ಯವೆಂಬುದು ಸಮಾನವಾಗಿದ್ದರೂ ಶರೀರವನ್ನೇ ಅಭೇದೋಪಚಾರದಿಂದ ಅವ್ಯಕ್ತಶಬ್ದದಿಂದ ಗ್ರಹಿಸಿರುವದು (ಏಕೆಂದರೆ) ಇಂದ್ರಿಯಾದಿಗಳನ್ನು (ಇಲ್ಲಿ ) ತಮ್ಮ ತಮ್ಮ ಶಬ್ದಗಳಿಂದಲೇ ಗ್ರಹಿಸಿದ್ಧಾಗಿದೆ, ಮತ್ತು ಶರೀರವು ಉಳಿದುಕೊಂಡಿರುತ್ತದೆ.”

ಈ ಎರಡು ಸೂತ್ರಗಳಿಗೆ ವೃತ್ತಿಕಾರರ ವ್ಯಾಖ್ಯಾನ

(ಭಾಷ್ಯ) ೩೪೨. ಅನ್ಯ ತು ವರ್ಣಯ - ದ್ವಿವಿಧಂ ಹಿ ಶರೀರಂ ಸ್ಕೂಲಂ ಸೂಕ್ಷಂ ಚ | ಸ್ಕೂಲಂ ಯದಿದಮ್ ಉಪಲಭ್ಯತೇ | ಸೂಕ್ಷ್ಮಂ ಯತ್ ಉತ್ತರತ್ರ ವಕ್ಷತೇ - ತದನ್ನರಪ್ರತಿಪತ್ ರಂಹತಿ ಸಂಪರಿಷಕ್ತ: ಪ್ರಶ್ನನಿರೂಪಣಾಭ್ಯಾಮ್” (೩-೧-೧) ಇತಿ | ತಚ್ಚ, ಉಭಯಮಪಿ ಶರೀರಮ್ ಅವಿಶೇಷಾತ್ ಪೂರ್ವತ್ರ ರಥನ ಸಂಕೀರ್ತಿತಮ್ | ಇಹ ತು ಸೂಕ್ಷ್ಮಮ್ ಅವ್ಯಕ್ತಶಬ್ದನ ಪರಿಗೃಹ್ಯತೇ | ಸೂಕ್ಷ್ಮಸ್ಯ

  1. ಕಾರ್ಯಕಾರಣಗಳಿಗೆ ಅಭೇದೋಪಚಾರದಿಂದ ಎಂದರ್ಥ. ಇದು ಅವ್ಯಾಹೃತಪಕ್ಷದಲ್ಲಿ. ಅವಿದ್ಯಾಪಕ್ಷದಲ್ಲಾದರ ಕಲ್ಪಕಕಲ್ಪಿತಗಳಿಗೆ ಅಭೇದೋಪಚಾರದಿಂದ ಎಂದು ಅರ್ಥವನ್ನು ಮಾಡಬೇಕು. ಮುಂದಿರುವ ‘ವಿಕಾರ’ ಎಂಬ ಮಾತಿಗೆ ಆ ಪಕ್ಷದಲ್ಲಿ ಕಲ್ಪಿತ ಎಂದರ್ಥ. ಅವ್ಯಾಹೃತವನ್ನೇ ಅವಿದ್ಯಾಶಕ್ತಿರ್ಮಾಯಾದಿಶಬ್ದ ವಾಚ್ಯಾ’ ಎಂದು ಭಾಮತೀಕಾರರು ಬರದಿರುವದು ಪ್ರಕೃತಭಾಷ್ಯದ ಎರಡು ವರ್ಣಕಗಳ ವಿಭಾಗವನ್ನು ಕಡೆಗಣಿಸಿದಂತಾಗಿದ. ಪೀಠಿಕೆಯನ್ನು ನೋಡಿ.

  2. ಭಾ. ಭಾ. ೩೩೬ ರಲ್ಲಿ ವರ್ಣಿಸಿರುವದನ್ನು ಇಲ್ಲಿ ಮನಸ್ಸಿಗೆ ತಂದುಕೊಳ್ಳಬೇಕು.

೫೫೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅವ್ಯಕಶಬ್ದಾರ್ಹತ್ವಾತ್ | ತದಧೀನತ್ವಾಚ್ಚ ಬನ್ದ ಮೋಕ್ಷವ್ಯವಹಾರಸ್ಯ ಜೀವಾತ್ ತಸ್ಯ ಪರತ್ವಮ್ | ಯಥಾ ಅರ್ಥಾಧೀನತ್ವಾತ್ ಇನ್ಸಿಯವ್ಯಾಪಾರಸ್ಯ ಇನ್ಸಿಯೇಭ್ಯಃ ಪರತ್ವಮ್ ಅರ್ಥಾನಾಮ್ ಇತಿ ||

(ಭಾಷ್ಯಾರ್ಥ) ಬೇರೆ (ಕೆಲವರು ವೃತ್ತಿಕಾರರು ಸೂತ್ರಾರ್ಥವನ್ನು ) ವರ್ಣಿಸಿರುವದು ಹೇಗೆಂದರೆ, ಶರೀರವು ಸ್ಕೂಲವೆಂದೂ ಸೂಕ್ಷ್ಮವೆಂದೂ’ ಎರಡೇ ವಿಧವಾಗಿದ. ಈ ಕಾಣುತ್ತದೆಯಲ್ಲ, (ಇದು) ಸ್ಕೂಲ ; ಮುಂದೆ ‘ತದನ್ನರಪ್ರತಿಪತ್ ರಂಹತಿ ಸಂಪರಿಷ್ಟಕ: ಪ್ರಶ್ನೆ ನಿರೂಪಣಾಭ್ಯಾಮ್’’ ಎಂಬ (ಸೂತ್ರದಲ್ಲಿ ) ಹೇಳಿದೆಯಲ್ಲ, (ಅದು) ಸೂಕ್ಷವು. ಈ ಎರಡು ಬಗೆಯ ಶರೀರವನ್ನೂ ಸಮಾನವಾಗಿಯೇ ಹಿಂದೆ ರಥವೆಂದು ಹೇಳಿರುತ್ತದೆ. ಆದರೆ ಇಲ್ಲಿ ಅವ್ಯಕ್ತಶಬ್ದದಿಂದ ಸೂಕ್ಷ್ಮವನ್ನೇ ತೆಗೆದುಕೊಂಡಿದೆ. ಏಕೆಂದರೆ ಸೂಕ್ಷ್ಮವು ಅವ್ಯಕ್ತಶಬ್ದಕ್ಕೆ ತಕ್ಕದ್ದಾಗಿದೆ. ಬಂಧಮೋಕ್ಷವ್ಯವಹಾರವು ಆ (ಸೂಕ್ಷ್ಮಶರೀರಕ್ಕೆ) ಅಧೀನವಾಗಿರುವದರಿಂದ (ಅದು) ಜೀವನಿಗಿಂತಲೂ ಹೆಚ್ಚಿನದು. ಹೇಗೆ ಇಂದ್ರಿಯ ವ್ಯಾಪಾರವು (ಇಂದ್ರಿಯಾರ್ಥಗಳಿಗೆ ಅಧೀನವಾಗಿರುವದರಿಂದ ಅರ್ಥಗಳು ಇಂದ್ರಿಯಗಳಿಗಿಂತ ಹೆಚ್ಚು (ಎಂದು ಶ್ರುತಿಯಲ್ಲಿ ಹೇಳಿದೆಯೋ ಹಾಗೆಯೇ ಇದು).

ವೃತ್ತಿಕಾರಮತದ ವಿಮರ್ಶೆ

(ಭಾಷ್ಯ) | ೩೪೩. ತೃಸ್ತು ಏತದ್ವಕ್ತವ್ಯಮ್ - ಅವಿಶೇಷೇಣ ಶರೀರದ್ವಯಸ್ಯ ಪೂರ್ವತ್ರ ರಥನ ಸಂಕೀರ್ತಿತತ್ವಾತ್ ಸಮಾನಯೋಃ ಪ್ರಕೃತತ್ವಪರಿಶಿಷ್ಟತ್ವಯೋಃ ಕಥಂ ಸೂಕ್ಷ್ಮಮೇವ ಶರೀರಮ್ ಇಹ ಗೃಹ್ಯತೇ, ನ ಪುನಃ ಸ್ಫೂಲಮಪಿ ಇತಿ | ಆಮ್ರಾತಸ್ಯ ಅರ್ಥ೦ ಪ್ರತಿಪತ್ತುಂ ಪ್ರಭವಾಮಃ, ನಾಮ್ರಾತಂ ಪರ್ಯನುಯೋಕ್ತುಮ್ | ಆಯ್ತಾತಂ ಚ ಅವ್ಯಕ್ತಪದಂ ಸೂಕ್ಷ್ಮಮೇವ ಪ್ರತಿಪಾದಯಿತುಂ ಶಕ್ಟೋತಿ ನೇತರತ್ ವ್ಯಕ್ತತ್ವಾತ್

  1. ಈ ವೃತ್ತಿಕಾರರೂ ಎರಡೇ ಶರೀರಗಳನ್ನು ಒಪ್ಪಿರುತ್ತಾರೆ. ಕಾರಣಶರೀರವನ್ನು ಹೇಳಿಲ್ಲ. 2. ಇದು ‘ಸೂಕ್ಷ್ಮಂ ತು ತದರ್ಹತಾತ್’ ಎಂಬ ಸೂತ್ರದ ವ್ಯಾಖ್ಯಾನ.

  2. ‘ತದಧೀನತ್ವಾತ್’ ಎಂಬ ಸೂತ್ರಭಾಗದ ವ್ಯಾಖ್ಯಾನವಿದು ; ಯಾವದು ಯಾವದರ ಅಧೀನವಾಗಿದೆಯೋ ಅದಕ್ಕಿಂತ ಅದು ಹೆಚ್ಚು ಎಂಬುದು ಯುಕ್ತ ಎಂದು ಭಾವ.

  3. ಇದು ಅರ್ಥವತ್ ಎಂಬ ಸೂತ್ರಭಾಗದ ವ್ಯಾಖ್ಯಾನ, ಭಾಷ್ಯಕಾರರಂತ ಅರ್ಥವತ್’ ಎಂಬುದಕ್ಕೆ ‘ಸಪ್ರಯೋಜನವು’ ಎಂದು ಇವರು ವ್ಯಾಖ್ಯಾನಮಾಡಿಲ್ಲ ; ಶ್ರುತಿಯಲ್ಲಿ ಅರ್ಥಾಃ ಎಂದಿರುವದನ್ನು ಅನುಸರಿಸಿ ವಿವರಿಸಿರುತ್ತಾರ.

೫೫

ಅಧಿ. ೧. ಸೂ. ೩] ವೃತ್ತಿಕಾರಮತದ ವಿಮರ್ಶ ತಸ್ಯ, ಇತಿ ಚೇತ್ | ನ | ಏಕವಾಕ್ಯತಾಧೀನತ್ವಾತ್ ಅರ್ಥಪ್ರತಿಪತ್ತೇ? 1 ನ ಹಿ ಇಮೇ ಪೂರ್ವೋತ್ತರೇ ಆಮಾತೇ ಏಕವಾಕ್ಯತಾಮ್ ಅನಾಪದ್ಯ ಕಂಚಿತ್ ಅರ್ಥ೦ ಪ್ರತಿ ಪಾದಯತಃ | ಪ್ರಕೃತಹಾನಾಪ್ರಕೃತಪ್ರಕ್ರಿಯಾ ಪ್ರಸಜ್ಜಾತ್ | ನ ಚ ಆಕಾಜ್ಯಾಮ್ ಅನ್ಯರೇಣ ಏಕವಾಕ್ಯತಾಪ್ರತಿಪತ್ತಿ: ಅಸ್ತಿ | ತತ್ರ ಅವಿಶಿಷ್ಟಾಯಾಂ ಶರೀರದ್ವಯಸ್ಕ ಗ್ರಾಹತ್ವಾಕಾಚ್ಯಾಯಾಂ ಯಥಾಕಾ ಸಂಬನ್ದ ಅನಭ್ಯುಪಗಮ್ಯಮಾನೇ ಏಕವಾಕ್ಯವ ಬಾಧಿತಾ ಭವತಿ | ಕುತ ಆಮ್ಯಾ ತಸ್ಯ ಅರ್ಥಪ್ರತಿಪತ್ತಿ: ? ನ ಚೈವಂ ಮಸ್ತವ್ಯಮ್ - ದುಃಶೋಧತ್ವಾತ್ ಸೂಕ್ಷ್ಮವ ಶರೀರಸ್ಯ ಇಹಗ್ರಹಣಮ್ ಸ್ಕೂಲಸ್ಯ ತು ದೃಷ್ಟಭೀಭತ್ಸತಯಾ ಸುಶೋಧತ್ವಾತ್ ಅಗ್ರಹಣಮ್ ಇತಿ 1 ಯತೋ ನೈವ ಇಹ ಶೋಧನಂ ಕಸ್ಯಚಿತ್ ವಿವಕ್ಷತೇ | ನ ಹಿ ಅತ್ರ ಶೋಧನವಿಧಾಯಿ ಕಿಂಚಿತ್ ಆಖ್ಯಾತಮ್ ಅಸ್ತಿ | ಅನನ್ತರನಿರ್ದಿಷ್ಟತ್ವಾತ್ ತು ಕಿಂ ತದ್ ವಿಷ್ಟೂ ಪರಮಂ ಪದಮ್ ಇತಿ ಇದಮ್ ಇಹ ವಿವಕ್ಷತೇ | ತಥಾ ಹಿ, ಇದಮ್ ಅಸ್ಮಾತ್ ಪರಮ್, ಇದಮ್ ಅಸ್ಮಾತ್ ಪರಮ್, ಇತ್ಯುಕ್ಯಾ “ಪುರುಷಾನ್ನ ಪರಂ ಕಿಂಚಿತ್’’ (ಕ. ೧-೩-೧೧) ಇತ್ಯಾಹ | ಸರ್ವಥಾಪಿತು ಅನುಮಾನಿಕನಿರಾಕರಣೋಪಪತ್ತೇ ತಥಾ ನಾಮ ಅಸ್ತು, ನ ನಃ ಕಿಂಚಿತ್ ಛಿದ್ಯತೇ ||

(ಭಾಷ್ಯಾರ್ಥ) ಆದರೆ ಎರಡು ಶರೀರಗಳನ್ನೂ ಹಿಂದಿನ (ಗ್ರಂಥದಲ್ಲಿ) ರಥವೆಂದು ಸಮ ನಾಗಿಯೇ ಹೇಳಿರುವಲ್ಲಿ, ಪ್ರಕೃತವಾಗಿರುವದೂ ಉಳಿದಿರುವದೂ (ಎರಡಕ್ಕೂ) ಸಮಾನವಾಗಿರುವಲ್ಲಿ, ಸೂಕ್ಷ್ಮಶರೀರವನ್ನೇ ಇಲ್ಲಿ ಏತಕ್ಕೆ ತೆಗೆದುಕೊಂಡಿರುತ್ತದೆ, ಸ್ಕೂಲವನ್ನು (ಏಕೆ ತೆಗೆದುಕೊಂಡಿಲ್ಲ ) ? ಎಂಬುದನ್ನು ಅವರು ಹೇಳಬೇಕಾಗಿರುತ್ತದೆ.

(ವೃತ್ತಿಕಾರ) :- ಶ್ರುತಿಯಲ್ಲಿ ಹೇಳಿರುವದರ ಅರ್ಥವನ್ನು ತಿಳಿದುಕೊಳ್ಳುವದಕ್ಕೆ ನಮ್ಮಿಂದ ಆದೀತೇ ಹೊರತು ಶ್ರುತಿಯಲ್ಲಿ ಹೇಳಿರುವದರಮೇಲೆ ಆಕ್ಷೇಪವನ್ನು ಮಾಡುವದಕ್ಕೆ ಆಗುವದಿಲ್ಲ. ಶ್ರುತಿಯಲ್ಲಿ ಹೇಳಿರುವ ಅವ್ಯಕ್ತಪದವು ಸೂಕ್ಷ್ಮ (ಶರೀರ)ವನ್ನು ಹೇಳಬಲ್ಲದೇ ಹೊರತು ಇನ್ನೊಂದನ್ನು (ಹೇಳ)ಲಾರದು ; ಏಕಂದರ ಅದು ವ್ಯಕ್ತವಾಗಿರುತ್ತದೆ.’

(ಭಾಷ್ಯಕಾರ) :- ಹಾಗಲ್ಲ. ಏಕಂದರ ಅರ್ಥವನ್ನು ತಿಳಿದುಕೊಳ್ಳುವದೆಂಬುದು ಏಕವಾಕ್ಯತೆಗೆ ಅಧೀನವಾಗಿರುತ್ತದೆ. ಹಿಂದುಮುಂದಿನ (ಗ್ರಂಥಭಾಗದಲ್ಲಿ ) ಶ್ರುತಿಯಲ್ಲಿ ಹೇಳಿರುವ ಈ (ಮಾತುಗಳಿಗೆ) ಏಕವಾಕ್ಯತೆಯು ಆಗದೆಯೇ (ಇವು) ಯಾವದೂಂದು

  1. ಅವ್ಯಕ್ತಪದವೇ ಸ್ಕೂಲಶರೀರವನ್ನು ಬಿಡುವದಕ್ಕೆ ಕಾರಣ ಎಂದು ವೃತ್ತಿಕಾರರ ಆಶಯ.

೫೫೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅರ್ಥವನ್ನೂ ತಿಳಿಸುವಹಾಗೆಯೇ ಇಲ್ಲ ; ಏಕೆಂದರೆ (ಹಾಗೆ ಸ್ವತಂತ್ರವಾಗಿ ತಿಳಿಸುವ ದಾದರೆ) ಪ್ರಕೃತವಾದದ್ದನ್ನು ಬಿಟ್ಟು, ಅಪ್ರಕೃತವಾದದ್ದನ್ನು ಪ್ರಾರಂಭಿಸಬಹುದಾಗಿರು ತದೆ. ಆದರೆ ಆಕಾಂಕ್ಷೆಯಿಲ್ಲದ ಏಕವಾಕ್ಯತೆಯ ಅರಿವು ಆಗುವಂತೆ ಇಲ್ಲ. ಇಲ್ಲಿ ಎರಡು ಶರೀರಗಳನ್ನೂ ತೆಗೆದುಕೊಳ್ಳಬೇಕೆಂಬ ಆಕಾಂಕ್ಷೆಯು ಸಮಾನ ವಾಗಿರುವಲ್ಲಿ, ಆಕಾಂಕ್ಷಗ ಅನುಗುಣವಾಗಿ ಸಂಬಂಧವನ್ನು ಒಪ್ಪದಿದ್ದರೆ ಏಕ ವಾಕ್ಯತೆಯೇ ತಪ್ಪಿಹೋಗುತ್ತದೆ ; (ಇನ್ನು) ಶ್ರುತಿ ಹೇಳಿದ್ದನ್ನು ತಿಳಿದುಕೊಳ್ಳುವದಲ್ಲಿ (ಬಂತು) ?” (ಸೂಕ್ಷ್ಮಶರೀರ ವನ್ನು) ಬೇರ್ಪಡಿಸಿ ತೋರಿಸುವದು ಕಷ್ಟವಾಗಿರುವದರಿಂದ ಇಲ್ಲಿ ಸೂಕ್ಷ್ಮವನ್ನೇ ತಗೆದುಕೊಂಡಿರುತ್ತದ ; ಸ್ಕೂಲಶರೀರವಾದರೋ ಬೀಭತ್ಸವಾಗಿರುವದು ಕಂಡೇ ಇರುವದರಿಂದ ಸುಲಭವಾಗಿ ಬೇರ್ಪಡಿಸಿ ತೋರಿಸಬಹುದಾದ್ದರಿಂದ (ಅದನ್ನು ಇಲ್ಲಿ) ತಗೆದುಕೊಂಡಿಲ್ಲ - ಎಂದೂ ಭಾವಿಸುವಹಾಗಿಲ್ಲ. ಏಕೆಂದರೆ ಇಲ್ಲಿ ಯಾವದೊಂದನ್ನೂ ಬೇರ್ಪಡಿಸಿ ತಿಳಿಸಬೇಕೆಂಬ ವಿವಕ್ಷೆಯೇ ಇರುವದಿಲ್ಲ. ಏಕೆಂದರೆ ಇಲ್ಲಿ ಬೇರ್ಪಡಿಸಿ ಹೇಳುವ ಯಾವ ಮಾತೂ ಇರುವದಿಲ್ಲ ; ಮತ್ತೇನಂದರ ಹಿಂದೆ ಹೇಳಿರುವದರಿಂದ ಆ ವಿಷ್ಣುವಿನ ಪರಮಪದವು ಯಾವದು ? ಎಂಬದನ್ನೇ ಇಲ್ಲಿ ಹೇಳಬೇಕೆಂದು ಹೊರಟಿರುತ್ತದೆ. (ಅದು) ಹೇಗೆಂದರೆ ಇದು ಇದಕ್ಕಿಂತ ಹೆಚ್ಚಿನದು, ಇದು ಇದಕ್ಕಿಂತ ಹೆಚ್ಚಿನದು - ಎಂದು ಹೇಳಿ ‘ಪುರುಷನಿಗಿಂತ ಯಾವದೂ ಹೆಚ್ಚಿನದಿಲ್ಲ’’ (ಕ.೧-೩-೧೧) ಎಂದು (ಶ್ರುತಿ) ಹೇಳುತ್ತದ.

ಇದು ಹೇಗೇ ಆದರೂ ಆನುಮಾನಿಕವನ್ನು ನಿರಾಕರಣಮಾಡುವದು ಹೂಂದು ವದರಿಂದ ಹೀಗೂ ಆಗಲಿ, ನಮ್ಮದೇನೂ ಕಡುವದಿಲ್ಲ.

  1. ಹಿಂದುಮುಂದಿನ ಗ್ರಂಥಭಾಗವನ್ನು ಹೊಂದಿಸಿದಮೇಲಲ್ಲವೆ, ಅವ್ಯಕ್ತಶಬ್ದದ ಅರ್ಥವನ್ನು ನಿರ್ಣಯಿಸಬೇಕಾದದ್ದು ? ಹಾಗಿಲ್ಲದಿದ್ದರೆ ಅದು ಅಪ್ರಕೃತವಾದ ಪ್ರಧಾನವನ್ನೂ ಹೇಳುತ್ತದೆ ಎಂದರೆ ಏನು ತಪ್ಪು ?- ಎಂದು ಆಕ್ಷೇಪ.

  2. ನಮ್ಮ ಪಕ್ಷದಲ್ಲಾದರೆ ಹಿಂದೆಯೂ ಈಗಲೂ ಶರೀರವನ್ನೇ ಹೇಳಿದ ಎಂದು ಪ್ರಕರಣಪರಿಶೇಷಗಳಿಂದ ಗೊತ್ತುಮಾಡಿದ ಬಳಿಕ ಶರೀರಕ್ಕೆ ಅವ್ಯಕಶಬ್ದವಾಚ್ಯತ್ವವು ಹೇಗೆ ? - ಎಂಬ ಆಕ್ಷೇಪವೊಂದು ಉಳಿದುಕೊಳ್ಳುತ್ತದೆ. ಅದಕ್ಕೆ ಸೂಕ್ಷಂತು’ ಎಂಬ ಸೂತ್ರವು ಪರಿಹಾರವನ್ನು ಹೇಳುತ್ತದೆಯಾದ್ದರಿಂದ ಯಾವ ಆಕ್ಷೇಪವೂ ಇರುವದಿಲ್ಲ.

  3. ಹಿಂದ ೯ನೆಯ ಮಂತ್ರದಲ್ಲಿ ತಿಳಿಸಿದ್ಧರ ವಿವರವು ಪ್ರಕೃತವಾಗಿದ. ಸ್ಕೂಲಸೂಕ್ಷ ಶರೀರಗಳ ವಿವೇಚನೆಯು ಪ್ರಕೃತವಾಗಿಲ್ಲ ; ಅದನ್ನು ಹೇಳುವ ಶಬ್ದವೂ ಇಲ್ಲಿಲ್ಲ ಎಂದರ್ಥ.

  4. ಅವ್ಯಕ್ತಶಬ್ದವು ಪ್ರಧಾನವನ್ನು ಹೇಳುವದಿಲ್ಲವೆಂಬುದು ನಿಮಗೂ ಒಪ್ಪಿತವಾದ್ಧ - ರಿಂದ ನಿಮ್ಮ ವ್ಯಾಖ್ಯಾನವೇ ಆದರೂ ನಮ್ಮ ಮತಕ್ಕೆ ಅಡ್ಡಿಯಿಲ್ಲ ಎಂದರ್ಥ. ಇಲ್ಲಿ ಹಾಗೂ ಆಗಲಿ’ ಎಂಬುದು ಅರ್ಧಾಂಗೀಕಾರವೇ ; ಏಕಂದರೆ ವೃತ್ತಿಕಾರಮತದಲ್ಲಿ ದೋಷವನ್ನು ತೋರಿಸಿದ್ಧಾಗಿದೆ.

ಅಧಿ. ೧. ಸೂ. ೪] ಜ್ಞಾತವ್ಯವೆಂದು ಹೇಳಿಲ್ಲವಾದ್ದರಿಂದಲೂ ಇದು ಪ್ರಧಾನವಲ್ಲ ೫೫೭

ಜೈಯತ್ನಾವಚನಾಚ್ಚ ||೪|| ೪. (ಅವ್ಯಕ್ತವು) ಯವೆಂದು ಹೇಳದಿರುವದರಿಂದಲೂ (ಅದು ಪ್ರಧಾನವಲ್ಲ ) .

ಅವ್ಯಕ್ತವು ಜ್ಞಾತವ್ಯವೆಂದು ಹೇಳಿಲ್ಲವಾದ್ದರಿಂದಲೂ

ಇದು ಪ್ರಧಾನವಲ್ಲ

. (ಭಾಷ್ಯ) ೩೪೪. ಜೇಯನ ಚ ಸಾಸ್ಕೃ ಪ್ರಧಾನಂ ಸ್ಮರ್ಯತೇ ಗುಣಪುರುಷಾನ್ಯರ ಜ್ಞಾನಾತ್ ಕೈವಲ್ಯಮ್ ಇತಿ ವದಗ್ನಿಃ ನ ಹಿ ಗುಣಸ್ವರೂಪಮ್ ಅಜ್ಞಾತ್ವಾ ಗುಣೇಭ್ಯ: ಪುರುಷಸ್ಯ ಅನ್ತರಂ ಶಕ್ಯಂ ಜ್ಞಾತುಮ್ ಇತಿ 1 ಕ್ವಚಿಚ್ಚ ವಿಭೂತಿವಿಶೇಷಪ್ರಾಪ್ತಯೇ ಪ್ರಧಾನಂ ಜೇಯಮ್ ಇತಿ ಸ್ಮರ ! ನ ಚ ಇದಮ್ ಇಹ ಅವ್ಯಕ್ತಂ ಜೇಯನ ಉಚ್ಯತೇ | ಪದಮಾತ್ರಂ ಹಿ ಅವ್ಯಕ್ತಶಬ್ದಃ | ನೇಹ ಅವ್ಯಕ್ತಂ ಜ್ಞಾತವ್ಯಮ್ ಉಪಾಸಿತವ್ಯಮ್ ಚ ಇತಿ ವಾಕ್ಯಮ್ ಅಸ್ತಿ | ನ ಚ ಅನುಪದಿಷ್ಟಪದಾರ್ಥಜ್ಞಾನಂ ಪುರುಷಾರ್ಥಮ್ ಇತಿ ಶಕ್ಯಂ ಪ್ರತಿಪತ್ತುಮ್ | ತಸ್ಮಾದಪಿ ನಾವ್ಯಕ್ತಶಬ್ದನ ಪ್ರಧಾನಮ್ ಅಭಿಧೀಯತೇ | ಅಸ್ಮಾಕಂ ತು ರಥರೂಪಕಕೃಪ್ತಶರೀರಾದ್ಯನುಸರಣೇನ ವಿಷ್ಟೂರೇವ ಪರಮಂ ಪದಂ ದರ್ಶಯಿತುಮ್ ಅಯಮ್ ಉಪನ್ಯಾಸಃ ಇತಿ ಅನವದ್ಯಮ್ ||

(ಭಾಷ್ಯಾರ್ಥ) ಸಾಂಖ್ಯರು “ಗುಣಪುರುಷಾಂತರಜ್ಞಾನದಿಂದ ಕೈವಲ್ಯವು (ದೊರೆಯು ವದು) (?)’ ಎಂದು ಹೇಳುತ್ತಾರಾದ್ದರಿಂದ ಪ್ರಧಾನವನ್ನು (ಅವರು) ಜೇಯ ವೆಂದು (ತಮ್ಮ) ಸ್ಮೃತಿಯಲ್ಲಿ ಹೇಳಿದ್ದಾರಂದಾಗುತ್ತದೆ). ಏಕೆಂದರೆ ಗುಣಗಳ ಸ್ವರೂಪವನ್ನು ತಿಳಿದುಕೊಳ್ಳದ ಗುಣಗಳಿಗೂ ಪುರುಷನಿಗೂ ಇರುವ ಅಂತರವನ್ನು ತಿಳಿಯುವದಕ್ಕೆ ಶಕ್ಯವಾಗುವದಿಲ್ಲ. ಮತ್ತು ಕೆಲವು ವಿಭೂತಿಗಳನ್ನು ಪಡೆದುಕೊಳ್ಳು ವದಕ್ಕಾಗಿ ಪ್ರಧಾನವನ್ನು ಅರಿತುಕೊಳ್ಳಬೇಕು ಎಂದು (ತಮ್ಮ) ಸ್ಮೃತಿಯಲ್ಲಿ ಒಂದು ಕಡೆಯಲ್ಲಿ ಹೇಳಿಕೊಂಡಿರುತ್ತಾರೆ. ಆದರೆ ಇಲ್ಲಿ ಈ ಅವ್ಯಕ್ತವು ಜ್ಯ ವೆಂದು ಹೇಳಿರುವದಿಲ್ಲ. ಅವ್ಯಕ್ತ ಎಂಬ ಮಾತು ಬರಿಯ (ಒಂದು) ಪದವು ; ಇಲ್ಲಿ

  1. ಈ ವಚನವು ಕಾರಿಕೆಯಲ್ಲಿಲ್ಲ. 2. ಇದೂ ಕಾರಿಕೆಯಲ್ಲಿಲ್ಲ.

೫೫೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅವ್ಯಕ್ತವನ್ನು ಅರಿತುಕೊಳ್ಳಬೇಕು ಅಥವಾ ಉಪಾಸನಮಾಡಬೇಕು ಎಂಬ ವಾಕ್ಯ ವಿರುವದಿಲ್ಲ. (ಶ್ರುತಿಯಲ್ಲಿ) ಹೇಳದೆ ಇರುವ ಪದಾರ್ಥದ ಜ್ಞಾನವು ಪುರುಷಾರ್ಥ (ವನ್ನು ಕೊಡುತ್ತದ) ಎಂದು ತಿಳಿಯುವದಕ್ಕೆ ಆಗುವಂತಿಲ್ಲ. ಆದ್ದರಿಂದಲೂ ಅವ್ಯಕ್ತಶಬ್ದದಿಂದ ಪ್ರಧಾನವನ್ನು ಹೇಳಿಲ್ಲ (ವಂದಾಯಿತು).

ನಮ್ಮ ಪಕ್ಷದಲ್ಲಾದರೂ ರಥರೂಪಕದಲ್ಲಿ ಕಲ್ಪಿಸಿರುವ ಶರೀರವೇ ಮುಂತಾದವುಗಳನ್ನು ಅನುಸರಿಸಿಕೊಂಡು ವಿಷ್ಣುವಿನ ಪರಮಪದವನ್ನೇ ಹೇಳುವದಕ್ಕೆ ಈ (ಅವ್ಯಕ್ತವನ್ನು) ಹೇಳಿದೆಯಾದ್ದರಿಂದ (ಯಾವ) ದೋಷವೂ ಇಲ್ಲ.

ವದತೀತಿ ಚೇನ್ನ ಪ್ರಾಬ್ಲೊ ಹಿ ಪ್ರಕರಣಾತ್ ||೫|| ೫. (ಪ್ರಧಾನವನ್ನು ) ಹೇಳಿದೆ ಎಂದರೆ, ಇಲ್ಲ ; ಏಕೆಂದರೆ ಪ್ರಕರಣ ದಿಂದ ಅದು ಪ್ರಾಜ್ಞನೇ.

ಪೂರ್ವಪಕ್ಷ : ಅಶಬ್ದಾದಿಧರ್ಮಗಳಿಂದ ಪ್ರಧಾನವನ್ನು ಹೇಳಿದೆ

(ಭಾಷ್ಯ) ೩೪೫, ಅತ್ರಾಹ ಸಾಲ್ಮೀಕಿ - ‘ಜೇಯತ್ವಾವಚನಾತ್’ ಇತಿ ಅಸಿದ್ಧಮ್ | ಕಥಮ್ ? ಶೂಯತೇ ಹಿ ಉತ್ತರತ್ರ ಅವ್ಯಕ್ತಶಟ್ಟೋದಿತಸ್ಯ ಪ್ರಧಾನಸ್ಯ ಜೇಯತ್ವ, ವಚನಮ್ “ಅಶಬ್ದ ಮಸ್ಪರ್ಶಮರೂಪಮವಯಂ ತಥಾರಸಂ ನಿತ್ಯಮಗನ್ಗವಚ್ಚ ಯತ್ | ಅನಾದ್ಯನನ್ನಂ ಮಹತಃ ಪರಂ ಧ್ರುವಂ ನಿಚಾಯ್ಯ ತಂ ಮೃತ್ಯುಮುಖಾತ್ ಪ್ರಮುಚ್ಯತೇ |’ (ಕ. ೨-೩-೧೫) ಇತಿ | ಅತ್ರ ಹಿ ಯಾದೃಶಂ ಶಬ್ದಾದಿಹೀನಂ ಪ್ರಧಾನಂ ಮಹತಃ ಪರಂ ಸ್ಮತ್ ನಿರೂಪಿತಮ್, ತಾದೃಶಮೇವ ನಿಚಾಯ್ಯತ್ವನ ನಿರ್ದಿಷ್ಟಮ್ || ತಸ್ಮಾತ್ ಪ್ರಧಾನಮವೇದಮ್ | ತದೇವ ಚ ಅವ್ಯಕ್ತಶಬ್ದ . ನಿರ್ದಿಷ್ಟಮ್ ಇತಿ ||

(ಭಾಷ್ಯಾರ್ಥ) (ಆಕ್ಷೇಪ) :- ಇಲ್ಲಿ ಸಾಂಖ್ಯನು ಹೇಳುತ್ತಾನೇನೆಂದರೆ ‘ಜೇಯಾ ವಚನಾತ್’’

  1. ಮೂಲದಲ್ಲಿರುವ ‘ಚ’ ಎಂಬುದು ವಾ ಎಂಬರ್ಥದಲ್ಲಿ ಪ್ರಯುಕ್ತವಾಗಿದೆ ಎಂದು ಭಾವಿಸಬೇಕು ಅಥವಾ ‘ವಾ’ ಎಂದೇ ಮೂಲದಲ್ಲಿ ಭಾಷ್ಯಕಾರರು ಬರದಿದ್ದರೂ ಇರಬಹುದು.

  2. ಕೈವಲ್ಯವು ವಚನದ ಅರ್ಥಜ್ಞಾನದಿಂದ ಆಗತಕ್ಕದ್ದು.

  3. ಅವ್ಯಕ್ತವನ್ನು ಜೇಯವೆಂದು ಹೇಳಿಲ್ಲ ಎಂಬ ದೋಷವು ನಮ್ಮ ಪಕ್ಷದಲ್ಲಿಲ್ಲ ; ಅವ್ಯಕ್ತವನ್ನು ಹೇಳಿದ್ದು ವ್ಯರ್ಥವೆಂಬ ದೋಷವೂ ಇಲ್ಲ.

ಅಧಿ. ೧. ಸೂ. ೫] ಸಿದ್ಧಾಂತ : ಇಲ್ಲಿ ಹೇಳಿರುವದು ಪರಮಾತ್ಮನನ್ನು

(ಅವ್ಯಕ್ತವು ಜ್ಯ ವೆಂದು ಹೇಳಿಲ್ಲ) ಎಂಬುದು ಅಸಿದ್ಧವು. (ಅದು) ಹೇಗೆ ಎಂದರೆ, ಮುಂದ “ಅಶಬ್ದವೂ ಅಸ್ಪರ್ಶವೂ ಅರೂಪವೂ ಅವ್ಯಯವೂ ಮತ್ತು ಅರಸವೂ ಯಾವಾಗಲೂ ಅಗಂಧವೂ, ಆಗಿ ಅನಾದನಂತವಾಗಿ ಮಹತ್ತಿಗಿಂತ ಹೆಚ್ಚಿನದಾಗಿ ನಿತ್ಯವಾಗಿರುತ್ತದೆಯಲ್ಲ, ಅದನ್ನು ಅರಿತುಕೊಂಡರೆ ಮೃತ್ಯುಮುಖದಿಂದ ಬಿಡುಗಡ ಯನ್ನು ಹೊಂದುತ್ತಾನೆ’’ (ಕ. ೨-೩-೧೫) ಎಂದು ಅವ್ಯಕ್ತಶಬ್ದದಿಂದ ಉಕ್ತವಾಗಿರುವ ಪ್ರಧಾನವು ಜೇಯವೆಂದು ಹೇಳುವ ವಚನವು ಶ್ರುತಿಯಲ್ಲಿದೆ. ಇಲ್ಲಿ ಶಬ್ದಾದಿಗಳಿಲ್ಲದ ಮಹತ್ತಿಗಿಂತಲೂ ಹೆಚ್ಚಾದ ಪ್ರಧಾನವು ಹೇಗೆ (ಸಾಂಖ್ಯ) ಸ್ಮೃತಿಯಲ್ಲಿ ನಿರೂಪಿತವಾಗಿರುತ್ತದೆಯೋ ಹಾಗೆಯೇ ಅರಿತುಕೊಳ್ಳಬೇಕೆಂದು ತಿಳಿಸಿರುತ್ತದೆ ಯಲ್ಲವೆ ? ಆದ್ದರಿಂದ ಇದು ಪ್ರಧಾನವೇ ; ಅದನ್ನೇ (ಇಲ್ಲಿ) ಅವ್ಯಕ್ತಶಬ್ದದಿಂದ ಹೇಳಿದೆ.

ಸಿದ್ಧಾಂತ : ಇಲ್ಲಿ ಹೇಳಿರುವದು ಪರಮಾತ್ಮನನ್ನು

(ಭಾಷ್ಯ) ೩೪೬. ಅತ್ರ ಬೂರ್ಮ - ನೇಹ ಪ್ರಧಾನ ನಿಚಾಯ್ಯನ ನಿರ್ದಿಷ್ಟಮ್ | ಪ್ರಾಕ್ಟೋ ಹಿ ಇಹ ಪರಮಾತ್ಮಾ ನಿಚಾಯ್ಯನ ನಿರ್ದಿಷ್ಟ: ಇತಿ ಗಮ್ಯತೇ | ಕುತಃ ? ಪ್ರಕರಣಾತ್ | ಪ್ರಾಜ್ಞಸ್ಯ ಹಿ ಪ್ರಕರಣಂ ವಿತತಂ ವರ್ತತೇ |‘ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ’ (ಕ. ೧-೩-೧೧) ಇತ್ಯಾದಿನಿರ್ದಶಾತ್ | ‘ಏಷ ಸರ್ವೆಷು ಭೂತೇಷು ಗೂಢಾ ನ ಪ್ರಕಾಶತೇ” (ಕ. ೧-೩-೧೨) ಇತಿ ಚ ದುರ್ಜ್ಞಾನತ್ವವಚನೇನ ತಸ್ಮವ ಜೇಯತ್ವಾಕಾಣಾತ್ | “ಯಜೇದ್ ವಾಡ್ಮಿನಸೀ ಪ್ರಾಜ್ಞಃ’ (ಕ. ೧-೩-೧೩) ಇತಿ ಚ ತಜ್ಞಾನಾಯ್ಕವ ವಾಗಾದಿಸಂಯಮಸ್ಯ ವಿಹಿತತ್ವಾತ್ | ಮೃತ್ಯುಮುಖಪ್ರಮೋಕ್ಷಣಫಲತ್ವಾಚ | ನ ಹಿ ಪ್ರಧಾನಮಾತ್ರಂ ನಿಚಾಯ್ಯ ಮೃತ್ಯುಮುಖಾತ್ ಪ್ರಮುಚ್ಯತೇ ಇತಿ ಸಾಕ್ಷ್ಯರಿಷ್ಯತೇ | ಚೇತನಾತ್ಮವಿಜ್ಞಾನಾತ್ ಹಿ ಮೃತ್ಯುಮುಖಾತ್ ಪ್ರಮುಚ್ಯತೇ

ಇತಿ ತೇಷಾಮ್ ಅಭ್ಯುಪಗಮಃ | ಸರ್ವಷು ವೇದಾನ್ತೇಷು ಪ್ರಾಜ್ಞವ ಆತ್ಮನಃ ಅಶಬ್ದಾದಿಧರ್ಮತ್ವಮ್ ಅಭಿಲಪ್ಯತೇ | ತಸ್ಮಾತ್ ನ ಪ್ರಧಾನಸ್ಯ ಅತ್ರ ಜೇಯತ್ವಮ್, ಅವ್ಯಕಶಬ್ದ ನಿರ್ದಿಷ್ಟತ್ವಂ ವಾ ||

(ಭಾಷ್ಯಾರ್ಥ) (ಪರಿಹಾರ) :- ಇದಕ್ಕೆ (ಪರಿಹಾರವನ್ನು) ಹೇಳುತ್ತೇವೆ. ಇಲ್ಲಿ ಪ್ರಧಾನವನ್ನು

೫೬೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅರಿತುಕೊಳ್ಳಬೇಕೆಂದು ಹೇಳಿರುವದಿಲ್ಲ ; ಪ್ರಾಜ್ಞನಾದ ಪರಮಾತ್ಮನನ್ನೇ ಇಲ್ಲಿ ಅರಿತುಕೊಳ್ಳಬೇಕೆಂದು ಹೇಳಿದ ಎಂದು ಗೊತ್ತಾಗುವಂತಿದೆ. (ಅದು) ಹೇಗೆ ? ಎಂದರೆ ಪ್ರಕರಣದಿಂದ. “ಪುರುಷನಿಗಿಂತ ಹೆಚ್ಚಿನದು ಯಾವದೂ ಇಲ್ಲ ; ಅವನೇ ಕೊನೆಯು, ಅವನೇ ಪರಗತಿಯು’ (ಕ. ೧-೩-೧) ಎಂದು ಮುಂತಾಗಿ ತಿಳಿಸಿರುವದರಿಂದಲೂ ‘‘ಸರ್ವಭೂತಗಳಲ್ಲಿ ಗೂಢನಾಗಿರುವದರಿಂದ ಈ ಆತ್ಮನು ಬೆಳಗುವದಿಲ್ಲ’’ (ಕ. ೧-೩-೧೨) ಎಂದು ಆತನನ್ನು ತಿಳಿದುಕೊಳ್ಳುವದು ಕಷ್ಟವೆಂದು ಹೇಳಿರುವದರಿಂದ ಅವನೇ ಜೇಯನೆಂದು ಆಕಾಂಕ್ಷೆಯುಂಟಾಗುವದರಿಂದಲೂ

“ವಿವೇಕಿಯಾದವನು ವಾಕ್ಕನ್ನು ಮನಸ್ಸಿನಲ್ಲಿ ಬಿಗಿಹಿಡಿದಿರಬೇಕು’’ (ಕ. ೧-೩-೧೩) ಎಂದು ಆ (ಆತ್ಮಜ್ಞಾನಕ್ಕೋಸ್ಕರವೇ ವಾಗಾದಿಗಳ ಸಂಯಮವನ್ನು ವಿಧಿಸಿರು ವದರಿಂದಲೂ ಪ್ರಾಜ್ಞನ ಪ್ರಕರಣವೇ (ಇಲ್ಲಿ) ಬಿಡದ (ಸಾಗಿ)ರುತ್ತದೆ. (ಈ ಜ್ಞಾನಕ್ಕೆ) ಮೃತ್ಯುಮುಖದಿಂದ ಬಿಡುಗಡೆಯನ್ನು ಹೊಂದುವದು ಎಂಬ ಫಲವನ್ನು ಹೇಳಿರುವದರಿಂದಲೂ (ಹೀಗಂದೇ ತಿಳಿಯಬೇಕು). ಏಕೆಂದರೆ ಬರಿಯ ಪ್ರಧಾನವನ್ನೇ ಅರಿತುಕೊಂಡಮಾತ್ರದಿಂದ ಮೃತ್ಯುಮುಖದಿಂದ ಬಿಡುಗಡೆಹೊಂದು ತ್ತಾರೆಂದು (ಸಾಂಖ್ಯರು ಒಪ್ಪುವದಿಲ್ಲ ; ಚೇತನಾತ್ಮನ ವಿಜ್ಞಾನದಿಂದಲೇ ಮೃತ್ಯುಮುಖದಿಂದ ಬಿಡುಗಡೆಯಾಗುವ ದಂದೇ ಅವರ ಅಂಗೀಕಾರ(ವಿರುತ್ತದೆ). ಎಲ್ಲಾ ವೇದಾಂತಗಳಲ್ಲಿಯೂ ಪ್ರಾಜ್ಞನಾದ ಆತ್ಮನೇ ಅಶಬ್ದಾದಿಧರ್ಮಗಳುಳ್ಳವನೆಂದು ಹೇಳಿರುತ್ತದೆ. ಆದ್ದರಿಂದ ಪ್ರಧಾನವು (ಇಲ್ಲಿ) ಜೇಯವಲ್ಲ, (ಅದನ್ನು) ಅವ್ಯಕಶಬ್ದದಿಂದ ತಿಳಿಸಿಯೂ ಇಲ್ಲ.

ತಯಾಣಾಮೇವ ಚೈವಮುಪನ್ಯಾಸಃ ಪ್ರಶ್ನಶ್ಚ ||೬|| ೬. ಹೀಗಿರುವದರಿಂದ ಮೂವರನ್ನೇ ಹೇಳಿದೆ. ಪ್ರಶ್ನೆಯನ್ನೂ ಮಾಡಿದ.

  1. ಪ್ರಾಜ್ಞನೆಂಬ ಶಬ್ದವನ್ನು ಸರ್ವಜ್ಞನಾದ ಈಶ್ವರನು ಎಂಬರ್ಥದಲ್ಲಿಯೇ ಸೂತ್ರ ದಲ್ಲಿ ಪ್ರಯೋಗಿಸಿರುತ್ತದೆ ; ಈಚಿನ ವೇದಾಂತಿಗಳು ಕಲವರಂತ ‘ಅಜ್ಞನಾದ ಸುಷುಪ್ತಾತ್ಮನು’ ಎಂಬ ಅಸ್ವಾಭಾವಿಕವಾದ ಅರ್ಥದಲ್ಲಿ ಪ್ರಯೋಗಿಸಿರುವದಿಲ್ಲ ಎಂಬುದನ್ನು ಲಕ್ಷಿಸಬೇಕು.

  2. ಕೇ. ೧-೫ರಿಂದ ೯, ಮುಂ. ೧-೧-೬, ಮಾಂ. ೭, ತ್ಯ. ೨-೭, ೧, ೩-೮-೮ ಇವು ಗಳನ್ನು ನೋಡಿ.

  3. ಏವಂ ಎಂಬುದಕ್ಕೆ ಪ್ರಧಾನಕ್ಕೆ ಹೀಗಿಲ್ಲ ಎಂದು ವ್ಯಾಖ್ಯಾನಕಾರರ ಅರ್ಥ. ಆದರೆ ಆ ಅರ್ಥವು ಏವಕಾರದಿಂದಲೇ ಸಿದ್ಧವಾಗುತ್ತದೆ.

ಅಧಿ. ೧. ಸೂ. ೬] ಪ್ರಶೋತ್ತರಗಳಿಂದಲೂ ಅವ್ಯಕ್ತವು ಪ್ರಧಾನವಲ್ಲವೆಂದಾಗುತ್ತದೆ ೫೬೧ ಪ್ರಶೋತ್ತರಗಳಿಂದಲೂ ಅವ್ಯಕ್ತವು ಪ್ರಧಾನವಲ್ಲವೆಂದಾಗುತ್ತದೆ

(ಭಾಷ್ಯ) ೩೪೭. ಇತಶ್ಚ ನ ಪ್ರಧಾನಸ್ಯ ಅವ್ಯಕ್ತಶಬ್ದ ವಾಚ್ಯತ್ವಂ ಜೇಯತ್ವಂ ವಾ | ಯಸ್ಮಾತ್ ತಯಾಣಾಮೇವ ಪದಾರ್ಥಾನಾಮ್ ಅಗ್ನಿಜೀವಪರಮಾತ್ಮನಾಮ್ ಅಸ್ಮಿನ್ ಗ್ರವೇ ಕಠವಲೀಷು ವರಪ್ರದಾನಸಾಮರ್ಥ್ಯಾತ್ ವಕ್ತವ್ಯತಯಾ ಉಪ ನ್ಯಾಸೋ ದೃಶ್ಯತೇ | ತದ್ವಿಷಯ ಏವ ಚ ಪ್ರಶ್ನ: | ನಾರ್ತೋನ್ಯಸ್ಯ ಪ್ರಶ್ನೆ: ಉಪನ್ಯಾಸೋ ವಾ ಅಸ್ತಿ | ತತ್ರ ತಾವತ್ “ಸ ತ್ವಮಗ್ನಿಂ ಸ್ವರ್ಗ್ಯಮಧ್ಯೆಷಿ ಮೃತ್ಯೋ ಪ್ರಬೊಹಿ ತಂ ಶ್ರದ್ದಧಾನಾಯ ಮಹ್ಯಮ್ ||” (ಕ. ೧-೧-೧೩) ಇತಿ ಅಗ್ನಿವಿಷಯಃ ಪ್ರಶ್ನೆ: ( “ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯತ್ಯೇಕೇ ನಾಯಮಸ್ತಿತಿ ಚೈಕೇ | ಏತದ್ವಿದ್ಯಾಮನುಶಿಷ್ಯಸ್ಯಾಹಂ ವರಾಣಾಮೇಷ ವರತೀಯಃ |’ (ಕ. ೧-೧-೨೦) ಇತಿ ಜೀವವಿಷಯಃ ಪ್ರಶ್ನಃ | ಅನ್ಯತ್ರ ಧರ್ಮಾದಸ್ಯತ್ಯಾಧರ್ಮಾದನ್ಯತಾಸ್ಮಾತ್ ಕೃತಾಕೃತಾತ್ || ಅನ್ಯತ್ರ ಭೂತಾಚ್ಚ ಭವ್ಯಾಚ್ಚ ಯತ್ ತತ್ ಪಶ್ಯಸಿ ತದ್ವದ 11” (ಕ. ೧-೨-೧೪) ಇತಿ ಪರಮಾತ್ಮ ವಿಷಯ: ( ಪ್ರತಿವಚನಮಪಿ | ‘ಲೋಕಾದಿಮಲ್ಟಿಂ ತಮುವಾಚ ತಸ್ಮ ಯಾ ಇಷ್ಟಕಾ ಯಾವತೀರ್ವಾಯಥಾ ವಾ” (ಕ.೧-೧-೧೫) ಇತಿ ಅಗ್ನಿವಿಷಯಮ್ | ‘ಹನ್ನತ ಇದಂ ಪ್ರವಕ್ಷಾಮಿ ಗುಹ್ಯಂ ಬ್ರಹ್ಮಸನಾತನಮ್ | ಯಥಾ ಚ ಮರಣಂ ಪ್ರಾಪ್ಯ ಆತ್ಮಾ ಭವತಿ ಗೌತಮ ! ಯೋನಿಮನ್ನೇ ಪ್ರಪದ್ಯ ಶರೀರತ್ವಾಯ ದೇಹಿನಃ | ಸ್ಟಾಣುಮಕ್ಕೇನು ಸಂಯ ಯಥಾಕರ್ಮ ಯಥಾಶ್ರುತಮ್ |’ (ಕ. ೨-೨-೬, ೭) ಇತಿ ವ್ಯವಹಿತಂ ಜೀವವಿಷಯಮ್ | “ನ ಜಾಯತೇ ಪ್ರಯತೇ ವಾ ವಿಪಶ್ಚಿತ್ ” (ಕ. ೧-೨-೧೮) ಇತ್ಯಾದಿಬಹುಪ್ರಪಂ ಪರಮಾತ್ಮವಿಷಯಮ್ | ನೈವಂ ಪ್ರಧಾನ ವಿಷಯಃ ಪ್ರಶಸ್ತಿ | ಅದೃಷ್ಟ ತ್ಯಾಚ್ಚ ಅನುಪನ್ಯಸನೀಯತ್ವಂ ತಸ್ಯ ಇತಿ ||

(ಭಾಷ್ಯಾರ್ಥ) ಈ (ಕಾರಣ)ದಿಂದಲೂ ಪ್ರಧಾನವು ಅವ್ಯಕಶಬ್ದ ವಾಚ್ಯವಲ್ಲ, ಜೇಯವೂ ಅಲ್ಲ. ಏಕೆಂದರೆ ಅಗ್ನಿ, ಜೀವ, ಪರಮಾತ್ಮ - ಎಂಬೀ ಮೂರೇ ಪದಾರ್ಥಗಳನ್ನೇ ಈ ಗ್ರಂಥದಲ್ಲಿ ಕಠವಲ್ಲಿಗಳಲ್ಲಿ ವರಪ್ರದಾನಸಾಮರ್ಥ್ಯದಿಂದ ಹೇಳತಕ್ಕದ್ದಾಗಿ ತಿಳಿಸಿರು ವದು ಕಂಡುಬರುತ್ತದೆ, ಅವುಗಳ ವಿಷಯದಲ್ಲಿಯೇ ಪ್ರಶ್ನವಿದೆ. ಇದಕ್ಕಿಂತ ಬೇರೆ (ಯಾವದೊಂದರಲ್ಲಿ ಪ್ರಶ್ನೆಯಾಗಲಿ ವಿವರವಾಗಲಿ ಇರುವದಿಲ್ಲ. ಇವುಗಳಲ್ಲಿ ಮೊದಲನೆಯದಾಗಿ ‘ಮೃತ್ಯುವೆ, ಆ ನೀನು ಸ್ವರ್ಗವಾದ ಅಗ್ನಿಯನ್ನು ತಿಳಿದಿರುವ ;೫೬೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಶ್ರದ್ಧೆಯುಳ್ಳ ನನಗೆ ಅವನನ್ನು ತಿಳಿಸಿಕೊಡು” (ಕ. ೧-೧-೧೩) ಎಂಬಿದು ಅಗ್ನಿವಿಷಯದ ಪ್ರಶ್ನೆ, “ಸತ್ತ ಮನುಷ್ಯನ ವಿಷಯದಲ್ಲಿ - ಇದಾನೆಂದು ಕೆಲವರು, ಇವನು ಇರುವದಿಲ್ಲವೆಂದು ಕೆಲವರು - ಈ ಸಂಶಯವುಂಟಷ್ಟೆ, ನಿನ್ನಿಂದ ಶಿಕ್ಷಿತನಾಗಿ ನಾನು ಇದನ್ನು ಅರಿತುಕೊಳ್ಳಬೇಕು. ವರಗಳಲ್ಲಿ ಈ ವರವು ಮೂರನೆಯದು’ (ಕ. ೧ ೧-೨೦) ಎಂಬುದು ಜೀವವಿಷಯದ (ಪ್ರಶ್ನೆ). ‘ಧರ್ಮಕ್ಕಿಂತ ಬೇರೆ, ಅಧರ್ಮಕ್ಕಿಂತ ಬೇರೆ, ಈ ಕೃತಾಕೃತಕ್ಕಿಂತ ಬೇರೆ, ಭೂತಕ್ಕಿಂತಲೂ ಭವ್ಯಕ್ಕಿಂತಲೂ ಬೇರೆ - ಯಾವ ಇಂಥದ್ದನ್ನು (ನೀನು) ಅರಿತಿರುವೆಯೋ ಅದನ್ನು (ನನಗೆ) ಹೇಳು’’ (ಕ. ೧-೨-೧೪) ಎಂಬುದು ಪರಮಾತ್ಮವಿಷಯದ (ಪ್ರಶ್ನೆ). ಉತ್ತರವೂ (ಹೀಗೆಯೇ). ಆ ಲೋಕಾದಿಯಾದ ಅಗ್ನಿಯನ್ನು ಅವನಿಗೆ ಹೇಳಿದನು. ಇಟ್ಟಿಗೆಗಳು ಯಾವವು, ಎಷ್ಟು

ಮತ್ತು ಹೇಗೆ (ಅವನ್ನುಪಯೋಗಿಸಬೇಕು ಎಂಬುದನ್ನು ) ಅವನಿಗೆ ಹೇಳಿಕೊಟ್ಟನು’ (ಕ. ೧-೧-೧೫) ಎಂಬುದು ಅಗ್ನಿವಿಷಯವಾದದ್ದು. “ಅಪ್ಪ, ಈ ಗುಹ್ಯವಾದ ಸನಾತನಬ್ರಹ್ಮವನ್ನು ನಿನಗೆ ತಿಳಿಸಿಕೊಡುವೆನು. ಮತ್ತು ಮರಣವನ್ನು ಹೊಂದಿ ಆತ್ಮನು ಹೇಗಾಗುವನೋ (ಅದನ್ನೂ) ಹೇಳಿಕೊಡುವೆನು. ಕೆಲವರು ದೇಹಿಗಳು ಶರೀರವನ್ನು ಪಡೆಯುವದಕ್ಕೆ (ಮನುಷ್ಯ) ಯೋನಿಯನ್ನು ಪಡೆಯುವರು ; ಇನ್ನು ಕೆಲವರು (ತಮ್ಮ) ಕರ್ಮವಿದ್ದಂತೆಯೂ ಜ್ಞಾನವಿದ್ದಂತೆಯೂ ಸ್ಥಾವರ(ಜನ್ಮ)ವನ್ನು ಪಡೆಯುವರು” (ಕ. ೨-೨-೬, ೭) ಎಂದು (ಮುಂದೆ) ವ್ಯವಹಿತವಾಗಿರುವದು ಜೀವನ ವಿಷಯವಾದದ್ದು. (ಆ) ಸರ್ವಜ್ಞನು ಹುಟ್ಟುವದೂ ಇಲ್ಲ, ಸಾಯು ವದೂ ಇಲ್ಲ’ (ಕ. ೧-೨-೧೮) ಎಂದು ಮುಂತಾಗಿ ಬಹುವಿಸ್ತಾರವಾಗಿರುವದು ಪರಮಾತ್ಮವಿಷಯವಾದದ್ದು. (ಇಲ್ಲಿ) ಹೀಗೆ ಪ್ರಧಾನವಿಷಯವಾದ ಪ್ರಶ್ನೆಯಿಲ್ಲ ; ಕೇಳದೆ ಇರುವದರಿಂದ ಅದನ್ನು ಹೇಳಬೇಕಾದದ್ದೂ ಇರುವದಿಲ್ಲ.

ಆಕ್ಷೇಪ : ಪರಮಾತ್ಮಪ್ರಶ್ನೆಯು ಯಮನು ಕೊಟ್ಟ ವರಕ್ಕಿಂತ ಬೇರೆ

(ಭಾಷ್ಯ) ೩೪೮. ಅತ್ರಾಹ - ಯೋSಯಮ್ ಆತ್ಮವಿಷಯಃ ಪ್ರಶ್ನೆ: ‘ಯೇಯಂ ಪ್ರೇತೇ ವಿಚಿಕಿತ್ಸಾ ಮನುರ್ಷ್ಕ ತಿ’ (ಇತಿ)’ ಕಿಂ ಸ ಏವಾಯಮ್ ‘ಅನ್ಯತ್ರ ಧರ್ಮಾದಸ್ಯತ್ಯಾಧರ್ಮಾತ್’ ಇತಿ ಪುನರನುಕೃಷ್ಯತೇ, ಕಿಂ ವಾ ತತೋಸ್ಕೋಯಮ್ ಅಪೂರ್ವ: ಪ್ರಶ್ನೆ: ಉತ್ಥಾಪ್ಯತೇ ಇತಿ ? ಕಿಂ ಚಾತಃ ? ಸ ಏವಾಯಂ ಪ್ರಶ್ನಃ

  1. ಇಲ್ಲಿ ಒಂದು ‘ಇತಿ’ಯು ಬೇಕೆಂತ ಕಾಣುತ್ತದೆ.

ಅಧಿ. ೧. ಸೂ. ೬] ಜೀವಪರಮಾತ್ಮರಿಗೆ ಭೇದವಿಲ್ಲದ್ದರಿಂದ ಬೇರೆ ಪ್ರಶ್ನೆಯಿಲ್ಲ ೫೬೩ ಪುನರನುಷ್ಯತೇ ಇತಿ ಯದಿ ಉಚೈತ, ದ್ವಯರಾತ್ಮವಿಷಯಯೋಪ್ರಶ್ನೆಯೂ ಏಕತಾಪತ್ತೇ ಅಗ್ನಿವಿಷಯ ಆತ್ಮವಿಷಯಶ್ಚ ದ್ವಾವೇವ ಪ್ರಶ್ನೆ ಇತ್ಯತಃ ನ ವಕ್ತವ್ಯಂ ತಯಾಣಾಂ ಪ್ರಶ್ಲೋಪನ್ಯಾಸ ಇತಿ | ಅಥ ಅನ್ನೋSಯಮ್ ಅಪೂರ್ವ ಪ್ರಶ್ನೆ: ಉತ್ಥಾಪ್ಯತೇ ಇತಿ ಉಕ್ಕೇತ, ತತೋ ಯಥೈವ ವರಪ್ರದಾನವ್ಯತಿರೇಕೇಣ ಪ್ರಶ್ನೆ ಕಲ್ಪನಾಯಾಮ್ ಅದೋಷಃ, ಏವಂ ಪ್ರಶ್ನವ್ಯತಿರೇಕೇಣಾಪಿ ಪ್ರಧಾನೋಪನ್ಯಾಸ ಕಲ್ಪನಾಯಾಮ್ ಅದೋಷಃ ಸ್ಯಾತ್ ಇತಿ ||

(ಭಾಷ್ಯಾರ್ಥ) (ಸಾಂಖ್ಯ) :- ಇಲ್ಲಿ (ಸಾಂಖ್ಯನು) ಕೇಳುತ್ತಾನೆ : “ಸತ್ತ ಮನುಷ್ಯನ ವಿಷಯದಲ್ಲಿ - ಇದಾನೆಂದು (ಕೆಲವರು) - ಎಂಬೀ ಸಂಶಯವುಂಟಷ್ಟ”, (ಕ. ೧ ೧-೨೦) ಎಂಬ ಈ ಆತ್ಮವಿಷಯದ ಪ್ರಶ್ನೆಯಿದೆಯಲ್ಲ, ಆ ಇದನ್ನೇ “ಧರ್ಮಕ್ಕಿಂತ ಬೇರೆ, ಅಧರ್ಮಕ್ಕಿಂತ ಬೇರೆ,’’ (ಕ. ೧-೨-೧೪) ಎಂದು ಎಳೆದುಕೊಂಡಿದೆಯೊ, ಅಥವಾ ಅದಕ್ಕಿಂತ ಬೇರೆಯಾಗಿ ಈ ಅಪೂರ್ವಪ್ರಶ್ನೆಯನ್ನು ಎಬ್ಬಿಸಿದಯೊ ?

(ಸಿದ್ಧಾಂತಿ) :- ಈ (ವಿಚಾರ)ದಿಂದ ಏನು (ಪ್ರಯೋಜನ) ?

(ಸಾಂಖ್ಯ) :- ಅದೇ ಈ ಪ್ರಶ್ನೆಯನ್ನು ಮತ್ತೆ ಎಳೆದುಕೊಂಡಿದೆ ಎಂದು ಹೇಳಿ ದರೆ (ಆಗ) ಆತ್ಮವಿಷಯವಾದ ಎರಡು ಪ್ರಶ್ನೆಗಳೂ ಒಂದಾಗಿಬಿಡುವದರಿಂದ ಅಗ್ನಿ ವಿಷಯವಾದದ್ದು, ಆತ್ಮವಿಷಯವಾದದ್ದು (ಎಂದು) ಎರಡೇ ಪ್ರಶ್ನೆಗಳಾಗುವದರಿಂದ ಮೂರು (ವಿಷಯಗಳ) ಪ್ರಶ್ಲೋತ್ತರಗಳು ಎಂದು (ಸೂತ್ರದಲ್ಲಿ) ಹೇಳಬಾರದು (ಎಂದಾಗುವದು), ಹಾಗಿಲ್ಲದ ಬೇರೆಯಾಗಿಯೇ ಈ ಅಪೂರ್ವಪ್ರಶ್ನೆಯನ್ನೆಬ್ಬಿಸಿದ ಎಂದು ಹೇಳುವದಾದರೆ, ಆಗ ವರಪ್ರದಾನವಿಲ್ಲದ ಪ್ರಶ್ನೆಯನ್ನು ಕಲ್ಪಿಸುವದರಲ್ಲಿ ಹೇಗೆ ದೋಷವಿಲ್ಲವೋ ಹಾಗೆಯೇ ಪ್ರಶ್ನೆಯಿಲ್ಲದ ಪ್ರಧಾನವನ್ನು ಹೇಳಿರುತ್ತದೆ ಎಂದು ಕಲ್ಪಿಸುವದರಲ್ಲಿಯೂ ದೋಷವಿಲ್ಲವಾಗುವದು.

ಸಮಾಧಾನ : ಜೀವಪರಮಾತ್ಮರಿಗೆ ಭೇದವಿಲ್ಲದ್ದರಿಂದ

ಬೇರೆ ಪ್ರಶ್ನೆಯಿಲ್ಲ

(ಭಾಷ್ಯ) ೩೪೯. ಅಚ್ಯತೇ | ನೈವಂ ವಯಮಿಹ ವರಪ್ರದಾನವ್ಯತಿರೇಕೇಣ ಪ್ರಶ್ನಂ ಕಂಚಿತ್ ಕಲ್ಪಯಾಮಃ ವಾಕ್ಕೋಪಕ್ರಮಸಾಮರ್ಥ್ಯಾತ್ | ವರಪ್ರದಾನೋಪಕ್ರಮಾ ಹಿ ಮೃತ್ಯುನಚಿಕೇತಃಸಂವಾದರೂಪಾ ವಾಕ್ಯಪ್ರವೃತ್ತಿ: ಆ ಸಮಾಪ್ತ ಕಠವಲ್ಲೀನಾಂ ಲಕ್ಷತೇ | ಮೃತ್ಯುಃ ಕಿಲ ನಚಿಕೇತಸೇ ಪಿತ್ರಾ ಪ್ರಹಿತಾಯ ತ್ರೀನ್ ವರಾನ್ ಪ್ರದದೌ |

೫೬೪

ಬ್ರಹ್ಮಸೂತ್ರಭಾಷ್ಯ

[ಅ. ೧. ಮಾ. ೪:

ನಚಿಕೇತಾಃ ಕಿಲ ತೇಷಾಂ ಪ್ರಥಮ್ನ ವರೇಣ ಪಿತುಃ ಸೌಮನಸ್ಯಂ ವಿ 1 ದ್ವಿತೀಯೇನ ಅಗ್ನಿವಿದ್ಯಾಮ್, ತೃತೀಯೇನ ಆತ್ಮವಿದ್ಯಾಮ್ | “ಯೇಯಂ ಪ್ರೇತೇ ವರಾಣಾಮೇಷ ವರತೀಯಃ’ (ಕ. ೧-೧-೨೦) ಇತಿಲಿಜ್ಜಾತ್ | ತತ್ರ ಯದಿ “ಅನ್ಯತ್ರ ಧರ್ಮಾತ್’ (ಕ. ೧-೨-೧೪) ಇತಿ ಅನ್ನೋಯಮ್ ಅಪೂರ್ವಃ ಪ್ರಶ್ನಃ ಉತ್ಸಾತ, ತತೋ ವರಪ್ರದಾನವ್ಯತಿರೇಕೇಣಾಪಿ ಪ್ರಶ್ನೆ ಕಲ್ಪನಾತ್ ವಾಕ್ಯಂ ಬಾಧೈತ | ನನು ಪ್ರಷ್ಟವ್ಯ ಭೇದಾತ್ ಅಪೂರ್ವೋಯಂ ಪ್ರಕ್ಕೂ ಭವಿತುಮರ್ಹತಿ ಪೂರ್ವೋ ಹಿ ಪ್ರಶ್ಲೋ ಜೀವವಿಷಯಃ | ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಕ ಅಸ್ತಿ ನಾಸ್ತೀತಿ ವಿಚಿಕಿತ್ಸಾಭಿಧಾನಾತ್ | ಜೀವಶ್ಚ ಧರ್ಮಾದಿಗೋಚರತ್ನಾತ್ ನ ‘ಅನ್ಯತ್ರ ಧರ್ಮಾತ್’ ಇತಿ ಪ್ರಶ್ನಮ್ ಅರ್ಹತಿ ಪ್ರಾಜ್ಞಸ್ತು ಧರ್ಮಾದ್ಯತೀತತ್ವಾತ್ ‘ಅನ್ಯತ್ರ ಧರ್ಮಾತ್’ ಇತಿ ಪ್ರಶ್ನಮ್ ಅರ್ಹತಿ 1 ಪ್ರಶ್ನಚ್ಛಾಯಾ ಚ ನ ಸಮಾನಾ ಲಕ್ಷ್ಮತೇ | ಪೂರ್ವಸ್ಯ ಅಸ್ತಿತ್ವನಾಸ್ತಿತ್ವವಿಷಯಾತ್, ಉತ್ತರಸ್ಯ ಚ ಧರ್ಮಾತೀತವಸ್ತುವಿಷಯಾತ್ | ತಸ್ಮಾತ್ ಪ್ರತ್ಯಭಿಜ್ಞಾನಾಭಾವಾತ್ ಪ್ರಶ್ನಭೇದಃ, ನ ಪೂರ್ವಸ್ಯವ ಉತ್ತರತ್ರಾನು ಕರ್ಷಣಮ್ ಇತಿ ಚೇತ್ | ನ ಜೀವಪ್ರಾಜ್ಞಯೋರೇಕಾಭ್ಯುಪಗಮಾತ್ ಭವೇತ್ ಪ್ರಷ್ಟವ್ಯಭೇದಾತ್ ಪ್ರಶ್ನಭೇದಃ ಯದಿ ಅನ್ನೂ ಜೀವಃ ಪ್ರಾಜ್ಞಾತ್ ಸ್ಮಾತ್ ! ನ ತು ಅನ್ಯತ್ವಮ್ ಅಸ್ತಿ | ‘ತತ್ತ್ವಮಸಿ’ (ಛಾಂ. ೬-೮-೭) ಇತ್ಯಾದಿಶ್ರುತ್ಯನ್ತರೇಭ್ಯಃ | ಇಹ ಚ ಅನ್ಯತ್ರ ಧರ್ಮಾತ್’ ಇತ್ಯಸ್ಯ ಪ್ರಶ್ನಸ್ಯ ಪ್ರತಿವಚನಂ ನ ಜಾಯತೇ ಪ್ರಿಯತೇ ವಾ ವಿಪಶ್ಚಿತ್" (ಕ. ೧-೨-೧೮) ಇತಿ ಜನ್ಮಮರಣಪ್ರತಿಷೇಧನ ಪ್ರತಿಪಾದ್ಯಮಾನಂ ಶಾರೀರಪರಮೇಶ್ವರಯೂ ಅಭೇದಂ ದರ್ಶಯತಿ 1 ಸತಿ ಹಿ ಪ್ರಸಜ್ಞ ಪ್ರತಿಷೇಧೂ ಭಾಗೀ ಭವತಿ | ಪ್ರಸಜ್ಜಶ್ಚ ಜನ್ಮಮರಣಯೋ ಶರೀರಸಂಸ್ಪರ್ಶಾತ್ ಶಾರೀರಸ್ಯ ಭವತಿ ನ ಪರಮೇಶ್ವರಸ್ಯ | ತಥಾ “ಸ್ವಷ್ಟಾನಂ ಜಾಗರಿತಾನ್ಯಂ ಚೋಭೌ ಯೇನಾನುಪಶ್ಯತಿ | ಮಹಾನ್ತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ ’ (ಕ. ೨-೪-೪) ಇತಿ ಸ್ವಪ್ನಜಾಗರಿತದೃಶಃ ಜೀವಸ್ಯವ ಮಹತ್ವಿಭುತ್ವವಿಶೇಷಣಸ್ಯ ಮನನೇನ ಶೋಕ ವಿಚ್ಛೇದಂ ದರ್ಶಯನ್ ನ ಪ್ರಾಜ್ಞಾತ್ ಅನ್ನೋ ಜೀವಃ ಇತಿ ದರ್ಶಯತಿ | ಪ್ರಾಜ್ಯ ವಿಜ್ಞಾನಾದ್ ಹಿ ಶೋಕವಿಚೇದಃ ಇತಿ ವೇದಾwಸಿದ್ಧಾನ: 1 ತಥಾ ಅಗ್ರೇ “ಯದೇವೇಹ ತದಮುತ್ರ ಯದಮುತ್ರ ತದಹ | ಮೃತ್ಯೋಃ ಸ ಮೃತ್ಯುಮಾಪ್ರೋತಿ ಯ ಇಹ ನಾನೇವ ಪಶ್ಯತಿ’ (ಕ. ೨-೪-೧೦) ಇತಿ ಜೀವಪ್ರಾಜ್ಯಭೇದದೃಷ್ಟಿಮ್ ಅಪವದತಿ ||

(ಭಾಷ್ಯಾರ್ಥ) ಇದಕ್ಕೆ (ಸಮಾಧಾನವನ್ನು ಹೇಳುತ್ತೇವೆ) : ಹೀಗೆ ನಾವು ಇಲ್ಲಿ ವರಪ್ರದಾನ ವಿಲ್ಲದ ಯಾವ ಪ್ರಶ್ನೆಯನ್ನೂ ಕಲ್ಪಿಸಿರುವದಿಲ್ಲ. ವಾಕ್ಯದ ಉಪಕ್ರಮದ ಸಾಮರ್ಥ್ಯ

ಅಧಿ. ೧. ಸೂ. ೬] ಜೀವಪರಮಾತ್ಮರಿಗೆ ಭೇದವಿಲ್ಲದ್ದರಿಂದ ಬೇರೆ ಪ್ರಶ್ನೆಯಿಲ್ಲ ೫೬೫ ದಿಂದ (ಇದೇ ಸರಿ). ಏಕೆಂದರೆ ಕಠವಲ್ಲಿಗಳ ಸಮಾಪ್ತಿಯಾಗುವವರೆಗಿನ ವಾಕ್ಯ ಪ್ರವೃತ್ತಿಯು ಮೃತ್ಯುನಚಿಕೇತರ ಸಂವಾದರೂಪವಾಗಿದ್ದು ವರಪ್ರದಾನವೇ (ಅದಕ್ಕೆ) ಉಪಕ್ರಮವೆಂದು ಕಂಡುಬರುತ್ತದೆ. (ಹೇಗೆಂದರ), ತಂದೆಯು ಕಳುಹಿಸಿಕೊಟ್ಟ ನಚಿಕೇತನಿಗೆ ಮೃತ್ಯುವು ಮೂರು ವರಗಳನ್ನು ಕೊಟ್ಟನಷ್ಟ. ನಚಿಕೇತನು ಅವುಗಳಲ್ಲಿ ಮೊದಲನೆಯ ವರದಿಂದ ತಂದೆಯ ಪ್ರಸನ್ನತೆಯನ್ನು ಬೇಡಿಕೊಂಡನು ; ಎರಡನೆಯ ವರದಿಂದ ಅಗ್ನಿವಿದ್ಯೆಯನ್ನು (ಬೇಡಿಕೊಂಡನು) ; ಮೂರನೆಯ (ವರ)ದಿಂದ ಆತ್ಮವಿದ್ಯೆಯನ್ನು (ಬೇಡಿಕೊಂಡನು), ‘ಸತ್ತವನ ವಿಷಯದಲ್ಲಿ ಈ (ಸಂಶಯ) ವಿದೆಯಷ್ಟೆ …. ವರಗಳಲ್ಲಿ ಇದು ಮೂರನೆಯ ವರವು” (ಕ. ೧-೧-೨೦) ಎಂಬ ಲಿಂಗದಿಂದ (ಇದು ಸ್ಪಷ್ಟವಾಗುತ್ತದೆ). (ಹೀಗಿರುವಲ್ಲಿ) ಇಲ್ಲಿ ಧರ್ಮಕ್ಕಿಂತ ಬೇರೆ (ಕ. ೧-೨-೧೪) ಎಂಬದನ್ನು ಅಪೂರ್ವ ಪ್ರಶ್ನೆಯಾಗಿ ಎಬ್ಬಿಸಿದ ಎಂದರೆ, ಆಗ ವರಪ್ರದಾನವಿಲ್ಲದೆಯೇ ಪ್ರಶ್ನೆಯನ್ನು ಕಲ್ಪಿಸುವದರಿಂದ (ಈ) ವಾಕ್ಯವು ಬಾಧಿತವಾಗುವದು.

(ಆಕ್ಷೇಪ) :- ಕೇಳುವ (ವಿಷಯವು) ಬೇರೆಯಾಗಿರುವದರಿಂದ ಈ ಪ್ರಶ್ನೆಯು ಅಪೂರ್ವವಾಗಿರಬೇಕು. ಏಕೆಂದರೆ “ಸತ್ತ ಮನುಷ್ಯನ ವಿಷಯದಲ್ಲಿ ಇರುತ್ತಾನೆ, ಇಲ್ಲವೊ ? - ಎಂಬೀ ಸಂಶಯವುಂಟಷ್ಟೆ’’ ಎಂದು ಸಂಶಯವನ್ನು ಹೇಳಿರುವದರಿಂದ ಹಿಂದಿನ ಪ್ರಶ್ನೆಯು ಜೀವನ ವಿಷಯವಾದದ್ದು. (ಆ) ಜೀವನು ಧರ್ಮಾದಿ ಗೋಚರನಾಗಿರುವದರಿಂದ ‘ಧರ್ಮಕ್ಕಿಂತ ಬೇರ” ಎಂಬ ಪ್ರಶ್ನೆಗೆ ತಕ್ಕವನಾಗಿಲ್ಲ. ಪ್ರಾಜ್ಞನಾದರೋ ಧರ್ಮಾದಿಗಳನ್ನು ಮೀರಿರುವದರಿಂದ ‘ಧರ್ಮಕ್ಕಿಂತ ಬೇರ’ ಎಂಬ ಪ್ರಶ್ನೆಗೆ ತಕ್ಕವನಾಗಿರುತ್ತಾನೆ. ಪ್ರಶ್ನೆಯ ಛಾಯಯೂ ಹಾಗೆಯೇ (ಇರುವಂತ) ಕಾಣಿಸುವದಿಲ್ಲ ; ಏಕೆಂದರೆ ಹಿಂದೆ ‘ಇದಾನೂ, ಇಲ್ಲವೊ ? - ಎಂಬ ವಿಷಯವಾಗಿ (ಕೇಳಿದೆ). ಮುಂದಿನ (ಪ್ರಶ್ನೆಯು) ಧರ್ಮಾದಿಗಳನ್ನು ಮೀರಿದ ವಸ್ತುವನ್ನು ಕುರಿತದ್ದಾ (ಗಿರುತ್ತದೆ). ಆದ್ದರಿಂದ (ಅದೇ ಇದಂದು) ಗುರುತಿಸುವಹಾಗಿಲ್ಲವಾದ್ದ ರಿಂದ ಪ್ರಶ್ನೆಗಳು ಬೇರೆಯೇ, ಹಿಂದಿನ (ಪ್ರಶ್ನೆ )ಯನ್ನೇ ಮುಂದ ಎಳೆದುಕೊಂಡಿಲ್ಲ (ಎನ್ನಬೇಕು) .!

(ಪರಿಹಾರ) :- ಹಾಗಲ್ಲ. ಏಕೆಂದರೆ, ಜೀವಪ್ರಾಜ್ಞರಿಗೆ ಏಕತ್ವವನ್ನೇ (ನಾವು) ಒಪ್ಪಿರುತ್ತೇವೆ. ಜೀವನು ಪ್ರಾಜ್ಞನಿಗಿಂತ ಬೇರೆಯಾಗಿದ್ದರೆ ಕೇಳತಕ್ಕ (ವಿಷಯ)ಗಳು ಬೇರೆಯಾದ್ದರಿಂದ ಪ್ರಶ್ನೆಗಳು ಬೇರೆ ಎಂದಾದೀತು. ಆದರೆ (ಅವನು) ಬೇರೆ ಎಂಬುದಿಲ್ಲ. ಏಕೆಂದರೆ ಅದೇನೀನು’ (ಛಾಂ. ೬-೮-೭) ಎಂದು ಮುಂತಾದ ಬೇರೆ ಶ್ರುತಿ

  1. ನಿರೀಶ್ವರಸಾಂಖ್ಯನು ಈ ಆಕ್ಷೇಪವನ್ನು ತರುವದಕ್ಕೆ ಆಗುವಹಾಗಿಲ್ಲವಾದರೂ ಸೇಶ್ವರಸಾಂಖ್ಯನು ತರಬಹುದಾಗಿದೆ.

೫೬೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

(ವಚನ) ಗಳಿರುತ್ತವೆ. ಇಲ್ಲಿಯೂ ಧರ್ಮಕ್ಕಿಂತ ಬೇರೆ’ ಎಂಬೀ ಪ್ರಶ್ನೆಯ ಉತ್ತರವನ್ನು “(ಈ) ಸರ್ವಜ್ಞನು ಹುಟ್ಟುವದಿಲ್ಲ, ಸಾಯುವದೂ ಇಲ್ಲ’ ಎಂದು ಹುಟ್ಟು ಸಾವುಗಳನ್ನು ಅಲ್ಲಗಳದೇ ಪ್ರತಿಪಾದಿಸುವದು ಶಾರೀರಪರಮೇಶ್ವರರಿಗೆ ಅಭೇದವನ್ನೇ ತಿಳಿಸುತ್ತದೆ. ಏಕೆಂದರೆ (ಹುಟ್ಟು ಸಾವುಗಳ) ಪ್ರಸಂಗವಿದ್ದರಲ್ಲವೆ, (ಅವುಗಳನ್ನು ) ಅಲ್ಲಗಳೆಯುವದು ಯುಕ್ತವಾಗುತ್ತದೆ ? ಹುಟ್ಟು ಸಾವುಗಳ ಪ್ರಸಂಗ ವಂತೂ ಶರೀರದ ಸಂಬಂಧವಿರುವದರಿಂದ ಶಾರೀರನಿಗೇ ಇದ್ದೀತೇ ಹೊರತು ಪರಮೇಶ್ವರನಿಗೆ ಇರುವಹಾಗಿಲ್ಲ. ಇದರಂತ ‘ಸ್ವಷ್ಟಾಂತ, ಜಾಗರಿತಾಂತ - ಈ ಎರಡನ್ನೂ ಯಾವನಿಂದ ಅರಿತುಕೊಳ್ಳುತ್ತಾರೋ (ಆ) ದೊಡ್ಡವನಾದ ವಿಭುವಾದ ಆತ್ಮನನ್ನು ಅರಿತುಕೊಂಡ ಧೀರನು ಶೋಕಿಸುವದಿಲ್ಲ” (ಕ. ೨-೪-೪) ಎಂದು ಎಚ್ಚರಕನಸುಗಳನ್ನು ಕಾಣುವ ಜೀವನಿಗೇ ಮಹತ್ವಿಭುತ್ವವಿಶೇಷಣ(ವಿರುವದೆಂಬು ದನ್ನು) ಅರಿತುಕೊಂಡರೆ ಶೋಕವು ನಾಶವಾಗುವದಂದು ತಿಳಿಸುವದರಿಂದ ಜೀವನು ಪ್ರಾಜ್ಞನಿಗಿಂತ ಬೇರೆಯಲ್ಲ ಎಂದು ತಿಳಿಸಿದ (ಎನ್ನಬೇಕು). ಏಕೆಂದರೆ ಪ್ರಾಜ್ಞನ ವಿಜ್ಞಾನದಿಂದಲೇ ಶೋಕವು ನಾಶವಾಗುವದು ಎಂಬುದೇ ವೇದಾಂತಸಿದ್ಧಾಂತವು. ಇದರಂತ ಮುಂದ “ಯಾವದು ಇಲ್ಲಿರುವದೋ, ಅದೇ ಅಲ್ಲಿರುವದು ; ಯಾವದು ಅಲ್ಲಿರುವದೂ ಅದೇ ಇಲ್ಲಿ (ಉಪಾಧಿ)ಗೆ ಅನುಗುಣವಾಗಿರುವದು. ಯಾವನು ಇಲ್ಲಿ ಬೇರೆಬೇರೆಯಾಗಿರುವಂತೆ ಕಾಣುವನೋ ಅವನು ಸಾವಿನಮೇಲೆ ಸಾವನ್ನು ಪಡೆಯುವನು” (ಕ. ೨-೪-೧೦) ಎಂದು ಜೀವಪ್ರಾಜ್ಞರು ಬೇರೆ ಎಂಬ ದೃಷ್ಟಿಯನ್ನು ಅಲ್ಲಗಳೆದಿರುತ್ತದೆ.

ಯಮನು ಪ್ರಶ್ನೆಯನ್ನು ಹೊಗಳಿರುವದರಿಂದಲೂ

ಇದು ಹೊಸ ಪ್ರಶ್ನೆಯಲ್ಲ

(ಭಾಷ್ಯ) ೩೫೦. ತಥಾ ಜೀವವಿಷಯಸ್ಯ ಅಸ್ತಿತ್ವನಾಸ್ತಿತ್ವಪ್ರಶಸ್ಮಾನನ್ನರಮ್ ‘‘ಅನ್ಯಂ ವರಂ ನಚಿಕೇತೋ ವೃಣೀಷ್ಟ’ (ಕ. ೧-೧-೨೧) ಇತ್ಯಾರಭ್ಯ ಮೃತ್ಯುನಾ ತೃಸೈಃ ಕಾಮ್ಯ: ಪ್ರಲೋಭ್ಯಮಾನೋsಪಿ ನಚಿಕೇತಾ ಯದಾ ನ ಚಚಾಲ, ತದಾ ಏನಂ ಮೃತ್ಯು ಅಭ್ಯುದಯನಿಃಶ್ರೇಯಸವಿಭಾಗಪ್ರದರ್ಶನೇನ ವಿದ್ಯಾವಿದ್ಯಾವಿಭಾಗಪ್ರದರ್ಶನೇನ ಚ “ವಿದ್ಯಾಭೀಪ್ಪಿನಂ ನಚಿಕೇತಸಂ ಮ ನ ತ್ಯಾ ಕಾಮಾ ಬಹವೋಲೋಲುಪನ್ನ’’ (ಕ.

  1. ‘ತತ್ತ್ವಮಸಿ’ ಎಂಬ ಶ್ರುತಿಯನ್ನು ಹಿಂದೆ ಹೇಳಿತ್ತು. ಈಶ್ವರನಿಗೇ ಜೀವಧರ್ಮಗಳನ್ನು ಹೇಳಿರುವದಂಬ ಲಿಂಗವನ್ನು ಈ ಎರಡು ವಾಕ್ಯಗಳಲ್ಲಿ ತಿಳಿಸಿದೆ.

ಅಧಿ. ೧. ಸೂ. ೬] ಎರಡನೆಯ ಆತ್ಮಪ್ರಶ್ನೆಯಲ್ಲಿ ಕಾಣುವ ವೈಲಕ್ಷಣ್ಯಕ್ಕೆ ಗತಿ ೫೬೭ ೧-೨-೪) ಇತಿ ಪ್ರಶಸ್ಯ ಪ್ರಶ್ನೆಮಪಿ ತದೀಯಂ ಪ್ರಶಂಸನ್ ಯತ್ ಉವಾಚ ‘ತಂ ದುರ್ದಶ್ರಂ ಗೂಢಮನುಪ್ರವಿಷ್ಟಂ ಗುಹಾಂತಂ ಗಹ್ವರೇಷ್ಠಂ ಪುರಾಣಮ್ | ಆಧ್ಯಾತ್ಮಯೋಗಾಧಿಗಮೇನ ದೇವಂ ಮತ್ವಾ ಧೀರೋ ಹರ್ಷಶೋಕೌ ಜಹಾತಿ’’ (ಕ. ೧-೨-೧೨) ಇತಿ, ತೇನಾಪಿ ಜೀವಪ್ರಾಜ್ಞಯೋ ಅಭೇದ ಏವ ಇಹ ವಿವಕ್ಷಿತಃ ಇತಿ ಗಮ್ಯತೇ | ಯತ್ನಶ್ನಿಮಿತ್ಯಾಂ ಚ ಪ್ರಶಂಸಾಂ ಮಹತೀಂ ಮೃತ್ಯೋಃ ಪ್ರತ್ಯಪದ್ಯತ ನಚಿಕೇರ್ತಾ, ಯದಿ ತಂ ವಿಹಾಯ ಪ್ರಶಂಸಾನನ್ತರಮ್ ಅನ್ಯಮೇವ ಪ್ರಶ್ನಮ್ ಉಪಕ್ಷಿಪೇತ್ ಅಸ್ಥಾನ ಏವ ಸಾ ಸರ್ವಾ ಪ್ರಶಂಸಾ ಪ್ರಸಾರಿತಾ ಸ್ಯಾತ್ | ತಸ್ಮಾತ್ ‘ಯೇಯಂ ಪ್ರೇತೇ’ ಇತ್ಯಸ್ಯವ ಪ್ರಶ್ನಸ್ಯ ಏತದನುಕರ್ಷಣಮ್ ‘ಅನ್ಯತ್ರ ಧರ್ಮಾತ್’ ಇತಿ ||

  • (ಭಾಷ್ಯಾರ್ಥ) ಇದರಂತೆ ಜೀವವಿಷಯದಲ್ಲಿ ಇದಾನೂ, ಇಲ್ಲವೊ ? ’ ಎಂಬ ಪ್ರಶ್ನೆ ಯಾದ ಬಳಿಕ ‘ನಚಿಕೇತನೆ, ಮತ್ತೊಂದು ವರವನ್ನು ಕೇಳಿಕೊ’ (ಕ. ೧-೧-೨೧) ಎಂಬುದರಿಂದ ಹಿಡಿದು ಮೃತ್ಯುವು ಆಯಾ ಕಾಮಗಳ ಆಶಯನ್ನು ತೋರಿಸಿದರೂ ನಚಿಕೇತನು ಯಾವಾಗ ಕದಲಲಿಲ್ಲವೋ, ಆಗ ಮೃತ್ಯುವು ಅಭ್ಯುದಯನಿಃಶ್ರೇಯಸ ಗಳ ವಿವೇಕವನ್ನು ತಿಳಿಸುವದರ ಮೂಲಕವೂ ವಿದ್ಯಾವಿದ್ಯಗಳ ವಿವೇಕವನ್ನು ತಿಳಿ ಸುವದರ ಮೂಲಕವೂ (ನಚಿಕೇತನಾದ (ನೀನು) ವಿದ್ಯೆಯನ್ನೇ ಬಯಸುವವ ನೆಂದು ತಿಳಿಯುತ್ತೇನೆ ; (ಏಕೆಂದರೆ) ನಿನ್ನನ್ನು ಬಹಳ ಕಾಮಗಳು ಸಳಯಲಿಲ್ಲ” (ಕ. ೧-೨-೪) ಎಂದು ಹೊಗಳಿ ಅವನ ಪ್ರಶ್ನೆಯನ್ನೂ ಹೊಗಳುತ್ತಾ “ಆ ದುರ್ದಶ್ರ ನಾದ, ಗುಹೆಯನ್ನು ಒಳಹೊಕ್ಕಿರುವ, (ಬುದ್ದಿ ) ಗುಹೆಯಲ್ಲಿ ಇರುವವನಾದ, ಗಹ್ವರೇಷ್ಠನಾದ ಪುರಾಣನಾದ ದೇವನನ್ನು ಧೀರನಾದವನು ಅಧ್ಯಾತ್ಮಯೋಗದ ಪ್ರಾಪ್ತಿ ಯಿಂದ ತಿಳಿದುಕೊಂಡು ಹರ್ಷಶಕಗಳನ್ನು ಬಿಡುವನು’ (ಕ. ೧-೨-೧೨) ಎಂದು ಹೇಳಿದನಲ್ಲ, ಅದರಿಂದಲೂ ಇಲ್ಲಿ ಜೀವಪ್ರಾಜ್ಞರಿಗೆ ಅಭೇದವೇ ವಿವಕ್ಷಿತವಾಗಿದೆ ಎಂದು ನಿಶ್ಚಯವಾಗುತ್ತದೆ. ಮತ್ತು ಯಾವ ಪ್ರಶ್ನೆಯ ನಿಮಿತ್ತವಾಗಿ ಮೃತ್ಯುವಿ ನಿಂದ ಹೆಚ್ಚಿನ ಹೊಗಳಿಕೆಯನ್ನು ನಚಿಕೇತನು ಪಡೆದುಕೊಂಡನೋ ಅದನ್ನು ಬಿಟ್ಟು (ಹಾಗೆ) ಹೂಗಳಿದ ಬಳಿಕ ಬೇರೆಯೇ (ಒಂದು) ಪ್ರಶ್ನೆಯನ್ನು ಹಾಕಿದರ ಆ ಹೊಗಳಿಕೆಯಲ್ಲವೂ ಅಯೋಗ್ಯವಾದ ವಿಷಯದಲ್ಲಿಯೇ ಬಿತ್ತರಿಸಿದಂತೆ ಆಗಿ ಬಿಟ್ಟಿತು. ಆದ್ದರಿಂದ ‘‘ಸತ್ತವನ ವಿಷಯದಲ್ಲಿ ಈ ಸಂಶಯವಿದಯಲ್ಲ’’ ಎಂದು (ಹಿಂದ ಕೇಳಿದ) ಆ (ಪ್ರಶ್ನೆಯನ್ನ) “ಧರ್ಮಕ್ಕಿಂತ ಬೇರೆ” ಎಂದು ಈಗ ಎಳೆದುಕೊಂಡಿದೆ (ಎನ್ನುವದೇ ಸರಿ).

೫೬೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಎರಡನೆಯ ಆತ್ಮಪ್ರಶ್ನೆಯಲ್ಲಿ ಕಾಣುವ

ವೈಲಕ್ಷಣ್ಯಕ್ಕೆ ಗತಿ

(ಭಾಷ್ಯ) ೩೫೧. ಮತ್ತು ಪ್ರಶ್ನೆಚ್ಚಾಯಾವೈಲಕ್ಷಣ್ಯಮ್ ಉಕ್ತಮ್, ತತ್ ಅದೂಷಣಮ್, ತದೀಯಸ್ಕೃವ ವಿಶೇಷಸ್ಯ ಪುನಃ ಪೃಚ್ಛಮಾನತ್ವಾತ್ | ಪೂರ್ವತ್ರ ಹಿ ದೇಹಾದಿ ವ್ಯತಿರಿಕ್ತಸ್ಯ ಆತ್ಮನಃ ಅಸ್ತಿತ್ವಂ ಪೃಷ್ಟಮ್, ಉತ್ತರತ್ರ ತು ತಸ್ಮವ ಅಸಂಸಾರಿತ್ವಂ ಪೃಚ್ಯತೇ ಇತಿ (ಯಾವದ್ ಹಿಅವಿದ್ಯಾ ನ ನಿವರ್ತತೇ ತಾವದ್ ಧರ್ಮಾದಿಗೋಚರತ್ವಂ ಜೀವಸ್ಯ ಜೀವತ್ವಂ ಚ ನ ನಿವರ್ತತೇ | ತನ್ನಿವೃತ್ ತು ಪ್ರಾಜ್ಞ ಏವ “ತತ್ ತ್ವಮಸಿ’ ಇತಿ ಶ್ರುತ್ಯಾ ಪ್ರತ್ಯಾಯ್ಯತೇ | ನ ಚ ಅವಿದ್ಯಾವ ತದಪಗಮೇ ಚ ವಸ್ತುನಃ ಕಶ್ಚಿದ್ ವಿಶೇಷೋಸ್ತಿ | ಯಥಾ ಕಶ್ಚಿದ್ ಸಂತಮಸೇ ಪತಿತಾಂ ಕಾಂಚಿದ್ ರಜ್ಜುಮ್, ಅಹಿಂಮನ್ಯಮಾನಃ ಭೀತೋ ವೇಪಮಾನಃ ಪಲಾಯತೇ ತಂ ಚ ಅಪರೂ ಬ್ರೂಯಾತ್ ಮಾ ಭ್ರಷಿಃ ನಾಯಮಹಿಃ, ರಜ್ಜುರೇವ, ಇತಿ, ಸ ಚ ತತ್ ಉಪಶ್ರುತ್ಯ ಅಹಿಕೃತಂ ಭಯಮ್ ಉತ್ಸಜೇತ್ ವೇಪಥುಂ ಪಲಾಯನಂ ಚ | ನ ತು ಅಹಿಬುದ್ದಿ ಕಾಲೇ ತದಪಗಮಕಾಲೇ ಚ ವಸ್ತುನಃ ಕಶ್ಚಿದ್ ವಿಶೇಷಃ ಸ್ಯಾತ್ | ತಥ್ಯವ ಏತದಪಿ ದ್ರಷ್ಟವ್ಯಮ್ | ತತಶ್ಚ ನ ಜಾಯತೇ ಪ್ರಿಯತೇ ವಾ” (೧-೨-೧೮) ಇವಮಾದಪಿ ಭವತಿ ಅಸ್ತಿತ್ವಪ್ರಶ್ನೆ ಪ್ರತಿವಚನಮ್ ||

(ಭಾಷ್ಯಾರ್ಥ) ಇನ್ನು ಪ್ರಶ್ನೆಚ್ಚಾಯಯಲ್ಲಿ ವೈಲಕ್ಷಣ್ಯ (ವಿದಯಂದು ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ, ಅದು (ನಮ್ಮ ಪಕ್ಷದ) ದೂಷಣವಲ್ಲ. ಏಕೆಂದರೆ ಅದೇ (ವಿಷಯದ) ವಿಶೇಷವನ್ನು ಮತ್ತೆ ಕೇಳಿರುತ್ತದೆ. ಹೇಗಂದರೆ ಹಿಂದೆ ದೇಹವೇ ಮುಂತಾದವುಗಳಿಗಿಂತ ವ್ಯತಿರಿಕ್ತನಾದ ಆತ್ಮನು ಇದಾನೆಯ ? (ಎಂಬುದನ್ನು) ಕೇಳಿರುತ್ತದೆ ; ಮುಂದ ಯಾದರೂ ಅವನಿಗೇ ಅಸಂಸಾರಿತ್ವವು (ಹೇಗೆ ಎಂಬುದನ್ನು) ಕೇಳಿದ. ಎಲ್ಲಿಯವರೆಗೆ ಅವಿದ್ಯೆಯು ತೋಲಗುವದಿಲ್ಲವೋ ಅಲ್ಲಿಯವರಗೆ ಧರ್ಮಾದಿಗೋಚರನಾಗಿರುವ ನೆಂಬುದೂ ಜೀವತ್ವವೂ ತೊಲಗುವದಿಲ್ಲ. ಅದು ತೊಲಗಿದರೋ, ಪ್ರಾಜ್ಞನನ್ನೇ “ಅದು ನೀನಾಗಿರುವ’ ಎಂದು ಶ್ರುತಿಯು ತಿಳಿಸಿಕೊಡುತ್ತದೆ. ಅವಿದ್ಯಗ ವಿಷಯ ವಾಗಿರುವಲ್ಲಾಗಲಿ ಅದು ತೋಲಗುವಲ್ಲಾಗಲಿ ವಸ್ತುವಿಗೆ ಯಾವ ವಿಶೇಷವೂ ಇರುವದಿಲ್ಲ. ಹೇಗೆಂದರೆ ನಸುಗತ್ತಲೆಯಲ್ಲಿ ಬಿದ್ದಿರುವ ಒಂದಾನೊಂದು ಹಗ್ಗವನ್ನು ಹಾವೆಂದು ಭಾವಿಸಿಕೊಂಡು ಒಬ್ಬನು ಹೆದರಿಕೆಯಿಂದ ನಡುಗುತ್ತಾ ಓಡುತ್ತಾನೆ. ಅವನನ್ನು

ಅಧಿ. ೧. ಸೂ. ೭] ಸೂತ್ರದಲ್ಲಿ ಮೂರು ವಿಷಯಗಳ ಪ್ರಶ್ನೆ ಎಂದದ್ದು ಹೇಗೆ ? ೫೬೯ (ಕುರಿತು) ಮತ್ತೊಬ್ಬನು “ಅಂಜದಿರು ; ಇದು ಹಾವಲ್ಲ, ಹಗ್ಗವೇ’’ ಎಂದು ಹೇಳು ತಾನೆ. ಅವನು ಅದನ್ನು ಕೇಳಿ ಹಾವಿನಿಂದಾಗಿದ್ದ ಅಂಜಿಕೆಯನ್ನೂ ನಡುಕವನ್ನೂ ಓಟವನ್ನೂ ಬಿಟ್ಟುಬಿಡುತ್ತಾನೆ. ಆದರೆ ಹಾವೆಂದು ತಿಳಿದ ಕಾಲದಲ್ಲಾಗಲಿ ಆ ತಿಳಿವಳಿಕೆಯು ತೊಲಗಿದ ಕಾಲದಲ್ಲಾಗಲಿ ವಸ್ತುವಿನಲ್ಲಿ ಯಾವದೊಂದು ವಿಶೇಷವೂ ಆಗುವದಿಲ್ಲ. (ಅಲ್ಲವೆ ?) ಇದೂ ಅದರಂತೆಯೇ ಎಂದರಿಯಬೇಕು. ಇದರಿಂದ “ಹುಟ್ಟುವದಿಲ್ಲ, ಸಾಯುವದೂ ಇಲ್ಲ’ (೧-೨-೧೮) ಎಂಬುದೇ ಮುಂತಾದದ್ದು (ಆತ್ಮನು) ಇದಾನೆಯೆ ? ಎಂಬ ಪ್ರಶ್ನೆಗೆ ಉತ್ತರವೇ ಆಗುತ್ತದೆ.

ಸೂತ್ರದಲ್ಲಿ ಮೂರು ವಿಷಯಗಳ ಪ್ರಶ್ನೆ ಎಂದದ್ದು ಹೇಗೆ ?

(ಭಾಷ್ಯ) ೩೫೨. ಸೂತ್ರಂ ತು ಅವಿದ್ಯಾಕಲ್ಟಿತಜೀವಪ್ರಾಜ್ಯಭೇದಾಪೇಕ್ಷಯಾ ಯೋಜಯಿತವ್ಯಮ್ | ಏಕಪಿ ಹಿ ಆತ್ಮವಿಷಯಸ್ಯ ಪ್ರಶ್ನಸ್ಯ ಪ್ರಾಯಣಾ ವಸ್ಥಾಯಾಂ ದೇಹವ್ಯತಿರಿಕ್ತಾತ್ವಮಾತ್ರವಿಚಿಕಿತ್ಸನಾತ್ ಕರ್ತತ್ವಾದಿಸಂಸಾರಸ್ವಭಾವಾ ನಪೋಹನಾಚ್ಚ ಪೂರ್ವಸ್ಯ ಪರ್ಯಾಯಸ್ಯ ಜೀವವಿಷಯತ್ವಮ್ ಉತ್ಕೃತೇ | ಉತ್ತರಸ್ಯ ತು ಧರ್ಮಾದ್ಯತ್ಯಯಸಂಕೀರ್ತನಾತ್ ಪ್ರಾಜ್ಞವಿಷಯತ್ವಮ್ ಇತಿ | ತತಶ್ಚ ಯುಕ್ತಾ ಅಗ್ನಿಜೀವಪರಮಾತ್ಮ ಕಲ್ಪನಾ | ಪ್ರಧಾನಕಲ್ಪನಾಯಾಂ ತು ನ ವರಪ್ರದಾನಮ್ ನ ಪ್ರಶ್ನಃ, ನ ಪ್ರತಿವಚನಮ್ ಇತಿ ವೈಷಮ್ಯಮ್ ||

(ಭಾಷ್ಯಾರ್ಥ) ಸೂತ್ರವಾದರೆ ಅವಿದ್ಯಾಕಲ್ಪಿತವಾದ ಜೀವಪ್ರಾಜ್ಞಭೇದದ ಅಪೇಕ್ಷೆಯಿಂದ (ಹೇಳಿದ್ದೆಂದು) ಹೊಂದಿಸಬೇಕು. ಆತ್ಮವಿಷಯದ ಪ್ರಶ್ನೆಯು ಒಂದೇ ಆದರೂ ಸಾಯುವ ಅವಸ್ಥೆಯಲ್ಲಿ ದೇಹಕ್ಕಿಂತ ಬೇರೆಯಾಗಿ ಇದಾನೆಯ ? - ಎಂಬಿಷ್ಟನ್ನೇ ಸಂಶಯಪಟ್ಟಿರುವದರಿಂದಲೂ ಕರ್ತತ್ವವೇ ಮುಂತಾದ ಸಂಸಾರಸ್ವಭಾವವನ್ನು ಕಳೆದುಹಾಕಿರುವದಿಲ್ಲವಾದ್ದರಿಂದಲೂ ಮೊದಲನೆಯ ಸಲದ (ಪ್ರಶ್ನೆಯು) ಜೀವ ವಿಷಯವೆಂದು ಊಹಿಸಬೇಕಾಗಿದೆ ; ಮುಂದಿನ (ಪ್ರಶ್ನೆ)ಯೋ ಎಂದರೆ ಧರ್ಮವೇ

ಮುಂತಾದದ್ದನ್ನು ಮೀರಿರುವ ವಿಷಯವನ್ನು ಹೇಳಿರುವದರಿಂದ ಪ್ರಾಜ್ಞ ವಿಷಯಕ (ವೆಂದು ಊಹಿಸಬೇಕಾಗಿದೆ). ಅದರಿಂದ ಅಗ್ನಿ, ಜೀವ, ಪರಮಾತ್ಮ - (ಎಂದು

  1. ಜೀವಪ್ರಾಜ್ಞರು ನಿಜವಾಗಿ ಇಬ್ಬರಿಲ್ಲವಾದರೂ ಅವಿದ್ಯಾಕಲ್ಪನೆಯಿಂದ ಜನರು ಇಬ್ಬರಂತ ವ್ಯವಹರಿಸುವದನ್ನು ಇಟ್ಟುಕೊಂಡು ಎಂದರ್ಥ.

೫೭೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

೨೨) _ಪರಃ’ (ಕ. ಆದಿಕೇಪಿ ಪಳ ಸಾಮ

ಮೂರು ವಿಷಯಗಳ ಪ್ರಶ್ನೆಗಳಂದು) ಕಲ್ಪಿಸಿರುವದು ಯುಕ್ತವಾಗಿರುತ್ತದೆ. ಆದರೆ ಪ್ರಧಾನಕಲ್ಪನೆಯ (ವಿಷಯದಲ್ಲಿಯೂ) ಎಂದರೆ ವರಪ್ರದಾನವೂ ಇಲ್ಲ, ಪ್ರಶ್ನೆಯೂ ಇಲ್ಲ, ಉತ್ತರವೂ ಇಲ್ಲ ; ಆದ್ದರಿಂದ (ಇವೆರಡು ಕಲ್ಪನೆಗಳಿಗೂ) ಹೆಚ್ಚು ಕಡಿಮೆ(ಯಿದ).

ಮಹದ್ವಚ್ಚ ||೭|| ೭. ಮತ್ತು ಮಹತ್ತಿನಂತೆ (ಅವ್ಯಕ್ತವೂ ಸಾಂಖ್ಯರದಲ್ಲ). ಮಹತ್ತಿನಂತೆಯೇ ಅವ್ಯಕ್ತವು ಸಾಂಖ್ಯಪ್ರಕ್ರಿಯೆಗೆ ಸೇರಿಲ್ಲ

(ಭಾಷ್ಯ) ೩೫೩. ಯಥಾ ಮಹಚ್ಛಬ್ದ : ಸಾಚ್ಯ: ಸಾಮಾಪಿ ಪ್ರಥಮಚೇ ಪ್ರಯುಕ್ಟೋ ನ ತಮೇವ ವೈದಿಕೇSಪಿ ಪ್ರಯೋಗ ಅಭಿಧ ! ‘ಬುದ್ಧರಾತ್ಮಾ ಮಹಾನ್ ಪರಃ” (ಕ. ೧-೩-೧೦), ‘ಮಹಾನಂ ವಿಭುಮಾತ್ಮಾನಮ್’’ (ಕ.೧-೨ ೨೨), ‘ವೇದಾಹಮೇತಂ ಪುರುಷಂ ಮಹಾನಮ್’ (ಶ್ವೇ. ೩-೮) ಇವಮಾದೊ ಆತ್ಮಶಬ್ದಪ್ರಯೋಗಾದಿಬ್ರೂ ಹೇತುಭ್ಯಃ | ತಥಾ ಅವ್ಯಕ್ತಶಬ್ದಪಿ ನ ವೈದಿಕೇ ಪ್ರಯೋಗೇ ಪ್ರಧಾನಮ್ ಅಭಿಧಾತುಮರ್ಹತಿ 1 ಅತಶ್ಚ ನಾಸ್ತಿ ಆನುಮಾನಿಕಸ್ಯ ಶಬ್ದ ವತ್ರಮ್ ||

(ಭಾಷ್ಯಾರ್ಥ) ಹೇಗೆ ಮಹತ್ತೆಂಬ ಶಬ್ದವನ್ನು ಸಾಂಖ್ಯರು ಮೊದಲು ಹುಟ್ಟುವ ಸತ್ತಾಮಾತ್ರ (ವನ್ನು ತಿಳಿಸುವದಕ್ಕೆ) ಪ್ರಯೋಗಮಾಡಿದರೂ ‘ಬುದ್ಧಿಗಿಂತ ಮಹಾನ್ ಆತ್ಮನು ಹೆಚ್ಚಿನವನು’ (ಕ, ೧-೩-೧೦), “ಮಹಾನ್ತನಾದ ವಿಭುವಾದ ಆತ್ಮನನ್ನು’ (ಕ. ೧ ೨-೨೨), “ಈ ಮಹಾಪುರುಷನನ್ನು ನಾನು ಬಲ್ಲನು(ಶ್ವೇ. ೩-೮) ಎಂದು ಮುಂತಾದ (ವಾಕ್ಯಗಳಲ್ಲಿ) ಆತ್ಮಶಬ್ದವನ್ನು ಪ್ರಯೋಗಿಸಿರುವದೇ ಮುಂತಾದ ಕಾರಣಗಳಿಂದ, (ಆತ್ಮಶಬ್ದವು) ವೈದಿಕಪ್ರಯೋಗದಲ್ಲಿಯೂ ಅದನ್ನೇ ಹೇಳುವ ದಿಲ್ಲವೋ, ಹಾಗೆಯೇ ಅವ್ಯಕ್ತಶಬ್ದವೂ ವೈದಿಕಪ್ರಯೋಗದಲ್ಲಿ ಪ್ರಧಾನವನ್ನು ಹೇಳಲಾರದು. ಆದ್ದರಿಂದಲೂ ಅನುಮಾನಿಕ (ವಾದ ಪ್ರಧಾನವು) ಶಬ್ದ (ಪ್ರಮಾಣ) ವುಳ್ಳದ್ದೆಂಬುದು (ಸರಿ)ಯಲ್ಲ.

  1. ಮಹತ್ತನ್ನು ಸಾಮಾತ್ರವೆಂದು ಭಾಷ್ಯಕಾರರು ಏತಕ್ಕೆ ಕರೆದಿರುವರೋ ತಿಳಿಯದು. ವ್ಯಾಖ್ಯಾನಗಳಲ್ಲಿ ಈ ವಿಷಯಕ್ಕೆ ಐಕಮತ್ಯವಿಲ್ಲ. (೧) ಸತ್ಯಪ್ರಧಾನವಾದ ಪ್ರಕೃತಿಯ

ಅಧಿ. ೨. ಸೂ. ೮] ಪೂರ್ವಪಕ್ಷ : ಪ್ರಧಾನವನ್ನೂ ಶ್ವೇತಾಶ್ವತರದಲ್ಲಿ ಹೇಳಿದೆ

೫೭೧

೨. ಚಮಸಾಧಿಕರಣ (೮-೧೦)

(ಶ್ವೇ. ೪-೫ ರಲ್ಲಿ ‘ಅಜಾ’ ಎಂಬ ಮಾತು ಭೂತತ್ರಯಲಕ್ಷಣವಾದ

ಪ್ರಕೃತಿಯನ್ನು ಹೇಳುತ್ತದೆ).

ಚಮಸವದವಿಶೇಷಾತ್ ||೮||

೮. ಚಮಸದಂತೆ ಅವಿಶೇಷವಾಗಿರುವದರಿಂದ (ಅಜಾ) ಶಬ್ದವು ಪ್ರಧಾನವಾಚಕವಲ್ಲ.

ಪೂರ್ವಪಕ್ಷ : ಪ್ರಧಾನವನ್ನೂ ಶ್ವೇತಾಶ್ವತರದಲ್ಲಿ ಹೇಳಿದೆ

(ಭಾಷ್ಯ) | ೩೫೪, ಪುನರಪಿ ಪ್ರಧಾನವಾದೀ ಅಶಬ್ದ ತ್ವಂ ಪ್ರಧಾನಸ್ಯ ಅಸಿದ್ಧಮ್ ಇತ್ಯಾಹ | ಕಸ್ಮಾತ್ ? ಮyವರ್ಣಾತ್ “ಅಜಾಮೇಕಾಂ ಲೋಹಿತಶುಕ್ಷ ಕೃಷ್ಣಾಂ ಬಕ್ಷೀ ಪ್ರಜಾಃ ಸೃಜಮಾನಾಂ ಸರೂಪಾಃ | ಅಜೋ ಹೈಕೋ ಜುಷಮಾಡೋನುಶೇತೇ ಜಹಾನಾಂ ಭುಕ್ತಭೋಗಾಮಜೋನ್ಯಃ ’ (ಶೇ. ೪-೫) ಇತಿ | ಅತ್ರ ಹಿ ಮನೇ ಲೋಹಿತಶುಕ್ಷ ಕೃಷ್ಣಶಬೈ: ರಜಸತ್ತಮಾಂಸ್ಯಭಿಧೀಯ | ಲೋಹಿತಂ ರಜಃ | ರಜ್ಞನಾತ್ಮಕತ್ವಾತ್ | ಶುಕ್ಲಂ ಸತ್ಯಮ್ | ಪ್ರಕಾಶಾತ್ಮಕತ್ವಾತ್ | ಕೃಷ್ಣಂ ತಮಃ | ಆವರಣಾತ್ಮಕತ್ವಾತ್ | ತೇಷಾಂ ಸಾಮ್ಯಾವಸ್ಲಾ ಅವಯವಧರ್ಮಃ ವ್ಯಪದಿಶ್ಯತೇ ‘ಲೋಹಿತಶುಕ್ಲಕೃಷ್ಣಾ’ ಇತಿ | ನ ಜಾಯತೇ ಇತಿ ಚ ಅಜಾ ಸ್ಯಾತ್ | “ಮೂಲ ಪ್ರಕೃತಿರವಿಕೃತಿಃ’ (ಸಾಂ. ಕಾ. ೩) ಇತ್ಯಭ್ಯುಪರಮಾತ್ | ನನು ಅಜಾಶಬ್ದ; ಛಾಗಾಯಾಂ ರೂಢಃ | ಬಾಢಮ್ | ಸಾ ತು ರೂಢಿರಿಹ ನಾಶ್ರಯಿತುಂ ಶಕ್ಕಾ | ವಿದ್ಯಾಪ್ರಕರಣಾತ್ | ಸಾ ಚ ಬಷೀಃ ಪ್ರಜಾಃ ತ್ವಗುಣಾನ್ವಿತಾಃ ಜನಯತಿ | ತಾಂ ಪ್ರಕೃತಿಮ್ ಅಜ ಏಕಃ ಪುರುಷಃ ಜುಷಮಾಣಃ ಪ್ರಿಯಮಾಣಃ ಸೇವಮಾನೋ ವಾ

ಮೊದಲನೆಯ ಪರಿಣಾಮ, ನಿರ್ವಿಕಲ್ಪಕಬುದ್ಧಿ ಎಂದು ರ| ಪ್ರ| ; ‘ಪುರುಷಾರ್ಥವು ಮಹಂಬ ಬುದ್ಧಿಯ ಕಾರ್ಯವಾಗಿರುವದರಿಂದ ಫಲದ ಕಾರಣವನ್ನು ಸಂದಿದೆ. ಮಹತ್ತು ಪ್ರತ್ಯಕ್ಷವಲ್ಲವೆಂಬುದನ್ನು ತಿಳಿಸುವದಕ್ಕೆ ಮಾತ್ರ ಶಬ್ದವು ಬಂದಿದೆ ಎಂದು ನ್ಯಾ|| ನಿ ; ಶಬ್ದಾದಿಗಳನ್ನು ಭೋಗಿಸುವದು, ಸತ್ಪುರುಷರನ್ನು ಬೇರ್ಪಡಿಸುವದು ಎಂದು ಪುರುಷಾರ್ಥ ಕ್ರಿಯೆಯು ಮಹತ್ತೆಂಬ ಬುದ್ಧಿಯಲ್ಲಿ ಸಮಾಪ್ತಿಯಾಗುತ್ತದೆಯಾದ್ದರಿಂದ ಮಹತ್ವವನ್ನು ಸತ್ತಾಮಾತ್ರವಂದಿದ - ಎಂದು ಭಾವತೀವ್ಯಾಖ್ಯಾನ.೫೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅನುಶೇತೇ ತಾಮೇವ ಅವಿದ್ಯಯಾ ಆತ್ಮನ ಉಪಗಮ್ಮ ‘ಸುಖೀ,’ ‘ದುಃಖಿ’ ‘ಮೂಢಹಮ್’ ಇತಿ ಅವಿವೇಕತಯಾ’ ಸಂಸರತಿ | ಅನ್ಯ: ಪುನರಜಃ ಪುರುಷಃ ಉತ್ಪನ್ನ ವಿವೇಕಜ್ಞಾನಃ ವಿರಕ್ತಃ, ಜಹಾತಿ ಏನಾಂ ಪ್ರಕೃತಿಂ ಭುಕ್ತಭೋಗಾಂ ಕೃತ ಭೋಗಾಪವರ್ಗಾ೦ ಪರಿತ್ಯಜತಿ | ಮುಚ್ಯತೇ ಇತ್ಯರ್ಥ: | ತಸ್ಮಾತ್ ಶ್ರುತಿಮೂಲೈವ ಪ್ರಧಾನಾದಿಕಲ್ಪನಾ ಕಾಪಿಲಾನಾಮ್ ಇತಿ ||

(ಭಾಷ್ಯಾರ್ಥ) ಈಗ ಮತ್ತೂ ಪ್ರಧಾನವಾದಿಯು ಪ್ರಧಾನವು ಅಶಬ್ದವೆಂಬುದು ಅಸಿದ್ಧ ಎನ್ನುತ್ತಾನೆ. ಅದೇಕ ? ಎಂದರೆ ‘ಕಂಪು, ಬಿಳಿದು, ಕಪ್ಪು - (ಈ) ರೂಪವಾಗಿರುವ, ಸರೂಪರಾದ ಬಹುಪ್ರಜೆಗಳನ್ನು ಸೃಷ್ಟಿಸುತ್ತಿರುವ, ಒಂದು ಅಜೆಯನ್ನು ಹೊಂದಿ ಕೊಂಡು ಒಂದು ಅಜನು ಜೊತೆಯಲ್ಲಿ ಮಲಗಿರುತ್ತದೆ ; ಭುಕ್ಕಭೋಗವಾದ ಈ (ಅಜೆಯನ್ನು) ಇನ್ನೊಂದು ಅಜನು ಬಿಡುತ್ತದೆ’ (ಶ್ವೇ. ೪-೫) ಎಂದು ಮಂತ್ರವರ್ಣವಿರುವದರಿಂದ. ಹೇಗಂದರೆ ಈ ಮಂತ್ರದಲ್ಲಿ ಕಂಪು, ಬಿಳಿದು, ಕಪ್ಪು - ಎಂಬ ಮಾತುಗಳಿಂದ ರಜಸ್ಸು, ಸತ್ಯ, ತಮಸ್ಸು - ಇವುಗಳನ್ನು ಹೇಳಿರುತ್ತದೆ. (ಇಲ್ಲಿ) ಕಂಪಂದರ ರಜಸ್ಸು ; ಏಕೆಂದರೆ (ಅದು) ರಂಗುಮಾಡುವದಾಗಿರುತ್ತದೆ. ಬಿಳಿದೆಂದರೆ ಸತ್ಯವು ಏಕಂದರ (ಅದು) ಪ್ರಕಾಶಸ್ವರೂಪವಾಗಿರುತ್ತದೆ. ಕಪ್ಪು ಎಂದರೆ ತಮಸ್ಸು ; ಏಕೆಂದರೆ (ಅದು) ಆವರಣರೂಪವಾಗಿರುತ್ತದ. ಈ (ಸರಜಸ್ತಮಸ್ಸುಗಳ ) ಸಾಮ್ಯಾವಸ್ಥೆ (ಯಾದ ಪ್ರಧಾನವನ್ನು) ‘ಲೋಹಿತಶುಕ್ಲಕೃಷ್ಣ’ ಎಂದು ಶ್ರುತಿಯಲ್ಲಿ (ಅದರ) ಅವಯವಧರ್ಮಗಳಿಂದ ಹೇಳಿರುತ್ತದೆ. (ಅದು) ಹುಟ್ಟುವದಿಲ್ಲ ವಾದ್ದರಿಂದ ‘ಅಜಾ’ ಎಂದಾಗಬಹುದು ; “ಮೂಲಪ್ರಕೃತಿಯು ವಿಕೃತಿಯಲ್ಲ’’ (ಸಾಂ. ಕಾ.೩) ಎಂದು (ಸಾಂಖ್ಯರು) ಒಪ್ಪಿರುವದರಿಂದ (ಈ ಅರ್ಥವನ್ನು ಮಾಡಬಹುದು). ಅಜಾಶಬ್ದವು ಹಣ್ಣಾಡಿನಲ್ಲಿ ರೂಢವಾಗಿದೆಯಲ್ಲ ! - ಎಂದು (ಆಕ್ಷೇಪಿಸಬಹುದು). (ಅದು) ನಿಜ. ಆದರೆ ಆ ರೂಢಿಯನ್ನು ಇಲ್ಲಿ ಆಶ್ರಯಿಸುವದಕ್ಕೆ ಬರುವದಿಲ್ಲ ; ಏಕೆಂದರೆ (ಇದು) ಜ್ಞಾನಪ್ರಕರಣವಾಗಿರುತ್ತದೆ. ಇನ್ನು ಆ (ಅಜೆಯು ಸರೂಪರಾದ) ತಗುಣ್ಯದಿಂದ ಕೂಡಿದ ಬಹಳ ಪ್ರಜೆಗಳನ್ನು ಉಂಟುಮಾಡುತ್ತದೆ. ಆ ಪ್ರಕೃತಿಯನ್ನು ಒಂದು ಅಜನು ಎಂದರೆ ಒಬ್ಬ ಪುರುಷನು ಹೊಂದಿಕೊಂಡು ಎಂದರೆ ಪ್ರೀತಿಯಿಂದ ಅಥವಾ ಸೇವಿಸುತ್ತಾ ಹತ್ತಿರ ಮಲಗಿಕೊಂಡಿರುತ್ತಾನೆ ; ಎಂದರೆ ಅದನ್ನೇ ಅವಿದ್ಯೆಯಿಂದ

  1. ‘ಅವಿವೇಕಿತಯಾ’ ಎಂದಿದ್ದರ ಮೇಲು.

  2. ‘ಜುಷಿ ಪ್ರೀತಿಸೇವನಯೋಃ ’ ಎಂಬ ಧಾತುವಿನ ಅರ್ಥಗಳರಡನ್ನೂ ಇಲ್ಲಿ ತೆಗೆದು ಕೂಂಡಿದೆ.

ಅಧಿ. ೨. ಸೂ. ೮] ಸಿದ್ಧಾಂತ : ಅಜಾ ಎಂಬ ಶಬ್ದವು ಸಾಮಾನ್ಯವಾಚಕ

೫೭೩

ತಾನೆಂದು ಇಟ್ಟುಕೊಂಡು ನಾನು ಸುಖಿಯು, ದುಃಖಿಯು, ಮೂಡನು ಎಂದೂ ಅವಿವೇಕದಿಂದ ಸಂಸಾರದಲ್ಲಿ ತೊಳಲುತ್ತಾನೆ. ಆದರೆ ಇನ್ನೊಂದು ಅಜನು ಎಂದರೆ ವಿವೇಕಜ್ಞಾನವುಂಟಾಗಿರುವ ವಿರಕ್ತನಾದ ಪುರುಷನು ಭುಕ್ತಭೋಗವಾದ, ಎಂದರೆ ಭೋಗಾಪವರ್ಗಗಳನ್ನು ಮಾಡಿಕೊಟ್ಟಿರುವ, ಈ ಪ್ರಕೃತಿಯನ್ನು ಬಿಡುತ್ತಾನೆ ; ಮುಕ್ತನಾಗುತ್ತಾನೆ - ಎಂದರ್ಥ. ಆದ್ದರಿಂದ ಕಾಪಿಲರು ಪ್ರಧಾನವೇ ಮುಂತಾದದ್ದನ್ನು ಕಲ್ಪಿಸಿರುವದು ಶ್ರುತಿಮೂಲದಿಂದಲೇ (ಆಗಿರುತ್ತದೆ).

ಸಿದ್ಧಾಂತ : ಅಜಾ ಎಂಬ ಶಬ್ದವು ಸಾಮಾನ್ಯವಾಚಕ

(ಭಾಷ್ಯ) ೩೫೫, ಏವಂ ಪ್ರಾಪ್ತ ಬೂರ್ಮ | ನಾನೇನ ಮಣ ಶ್ರುತಿಮತ್ರ್ಯಂ ಸಾಸ್ಕೃವಾದಸ್ಯ ಶಕ್ಯಮ್ ಆಶ್ರಯಿತುಮ್ । ನ ಹಿ ಅಯಂ ಮy: ಸ್ವಾತಣ ಕಂಚಿದಪಿ ವಾದಂ ಸಮರ್ಥಯಿತುಮ್ ಉತ್ಸಹತೇ 1 ಸರ್ವತ್ರಾಪಿ ಯಯಾ ಕಯಾಚಿತ್ ಕಲ್ಪನಯಾ ಅಜಾತ್ಪಾದಿಸಂಪಾದನೋಪಪತ್ತೇ ಸಾವಾದ ಏವ ಇಹ ಅಭಿಪ್ರೇತಃ ಇತಿ ವಿಶೇಷಾವಧಾರಣಕಾರಣಾಭಾವಾತ್ 1 ಚಮಸವತ್ | ಯಥಾ ಹಿ “ಅರ್ವಾಗ್ನಿಲಶ್ಚಮಸ ಊರ್ಧ್ವಬುದ್ಧಃ’ (ಬೃ-೨-೨-೩) ಇತ್ಯಸ್ಮಿನ್ ಮನ್ನೇ ಸ್ವಾತಣ ಅಯಂ ನಾಮ

ಅಸೌ ಚಮಸೋSಭಿಪ್ರೇತಃ ಇತಿ ನ ಶಕ್ಯತೇ ನಿರೂಪಯಿತುಮ್ | ಸರ್ವತ್ರಾಪಿ ಯಥಾ ಕಥಂಚಿತ್ ಅರ್ವಾಲಾದಿಕಲ್ಪನೋಪಪತೇಃ | ಏವಮ್ ಇಹಾಪಿ ಅವಿಶೇಷಃ ಅಜಾಮೇಕಾಮ್ ಇತ್ಯಸ್ಯ ಮyಸ್ಯ ! ನಾಸ್ಮಿನ್ ಮನ್ಯ ಪ್ರಧಾನಮೇವ ಅಜಾ ಅಭಿಪ್ರೇತಾ ಇತಿ ಶಕ್ಯತೇ ನಿಯತ್ತುಮ್ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳುತ್ತೇವ. ಈ ಮಂತ್ರದಿಂದ ಸಾಂಖ್ಯವಾದಕ್ಕೆ ಶ್ರುತಿ (ಪ್ರಮಾಣ)ವಿದೆ ಎಂದು ಇಟ್ಟುಕೊಳ್ಳುವದಕ್ಕೆ ಆಗಲಾರದು. ಈ ಮಂತ್ರವು ತಾನೊಂದೇ ಯಾವದೂಂದು ವಾದವನ್ನೂ ಸಮರ್ಥಿ ಸಲೇ ಆರದು. ಏಕೆಂದರೆ ಯಾವದಾದರೊಂದು ಕಲ್ಪನೆಯಿಂದ ಅಜೆಯಾಗಿರುವದು ಮುಂತಾದದ್ದನ್ನು ಎಲ್ಲಕ್ಕೂ ಹೊಂದಿಸಬಹುದಾಗಿರುವದರಿಂದ ಸಾಂಖ್ಯವಾದವೇ ಇಲ್ಲಿ ಅಭಿಪ್ರೇತವಾಗಿದೆ ಎಂದು ಗೊತ್ತಾಗಿ ನಿಶ್ಚಯಿಸುವದಕ್ಕೆ ಕಾರಣವಿರುವದಿಲ್ಲ. ಚಮಸದಂತೆಯೇ ಇದು. “ಕೆಳಕ್ಕೆ ಬಾಯಿಯೂ ಮೇಲಕ್ಕೆ ತಳವೂ ಇರುವ ಚಮಸವು”

  1. ಪ್ರಕೃತಿಯಿಂದಲೇ ಪುರುಷನಿಗೆ ಭೂಗಾಪವರ್ಗಗಳಾಗುವವು ಎಂದು ಭಾವ.

೫೭೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

(ಬೃ. ೨-೨-೩) ಎಂಬ ಮಂತ್ರದಲ್ಲಿ ಎಲ್ಲಾ (ಚಮಸಕ್ಕೂ) ಹೇಗೋ ಮಾಡಿ ಈ ಕೆಳಕ್ಕೆ ಬಾಯಿಯಿರುವದೇ ಮುಂತಾದದ್ದನ್ನು ಹೊಂದಿಸಬಹುದಾದ್ದರಿಂದ ಈ ಚಮ್ಸ ಎಂಬುದು ಇಂಥದ್ದೇ ಎಂದು (ಇಷ್ಟರಿಂದಲೇ) ಸ್ವತಂತ್ರವಾಗಿ ಗೊತ್ತುಪಡಿಸುವದಕ್ಕೆ ಹೇಗ ಆಗುವದಿಲ್ಲವೋ ಹಾಗೆಯೇ ಇಲ್ಲಿಯೂ ‘ಅಜಾಮ್‌ಕಾಮ್’’ ಎಂಬೀ ಮಂತ್ರವೂ ಅವಿಶೇಷವಾಗಿರುತ್ತದೆ. ಈ ಮಂತ್ರದಲ್ಲಿ ಪ್ರಧಾನವೇ ಅಜಾ (ಎಂಬ ಶಬ್ದದಿಂದ) ಅಭಿಪ್ರೇತವಾಗಿದೆ ಎಂದು ಗೊತ್ತುಪಡಿಸುವದಕ್ಕೆ ಆಗುವಂತಿಲ್ಲ.

ಜ್ಯೋತಿರುಪಕ್ರಮಾ ತು ತಥಾ ಹ್ಯಧೀಯತ ಏಕೇ ||೯|| ೯. ಜ್ಯೋತಿಯೇ ಮುಂತಾದ (ರೂಪದ ಪ್ರಕೃತಿಯೇ ಅಜೆಯು) ; ಏಕೆಂದರೆ ಕೆಲವರು ಹಾಗೆಂದು ಅಧ್ಯಯನಮಾಡುತ್ತಾರೆ. ತೇಜೋಬನ್ನರೂಪವಾದ ಪ್ರಕೃತಿಯೇ ಅಜಾಶಬ್ದ ವಾಚ್ಯವಾದದ್ದು

(ಭಾಷ್ಯ) ೩೫೬. ತತ್ರ ತು “ಇದಂ ತಚ್ಚಿರ ಏಷ ಹೂರ್ವಾಗ್ನಿಲಶ್ಚಮಸ ಊರ್ಧ್ವಬುದ್ಧಃ” (ಬೃ. ೨-೨-೩) ಇತಿ ವಾಕ್ಯಶೇಷಾತ್ ಚಮಸವಿಶೇಷಪ್ರತಿಪತ್ತಿರ್ಭವತಿ | ಇಹ ಪುನಃ ಕೇಯಮ್ ಅಜಾ ಪ್ರತಿಪತ್ತಮ್ಮಾ ಇತಿ ? ಅತ್ರ ಬೂಮಃ | ಪರಮೇಶ್ವರಾತ್ ಉತ್ಪನ್ನಾ ಜ್ಯೋತಿಃಪ್ರಮುಖಾ ತೇಜೋಬನ್ನಲಕ್ಷಣಾ ಚತುರ್ವಿಧಸ್ಯ ಭೂತಗ್ರಾಮಸ್ಯ ಪ್ರಕೃತಿಭೂತಾ ಇಯಮ್ ಅಜಾ ಪ್ರತಿಪತ್ತಮ್ಮಾ | ತುಶಬ್ದಃ ಅವಧಾರಣಾರ್ಥಃ | ಭೂತತ್ರಯಲಕ್ಷಣ್ಯವ ಇಯಮ್ ಅಜಾ ವಿಜ್ಞಯಾ, ನ ಗುಣತ್ರಯಲಕ್ಷಣಾ | ಕಸ್ಮಾತ್ ? ತಥಾ ಹಿ ಏಕೇ ಶಾಖಿನಃ ತೇಜೋಬಾನಾಂ ಪರಮೇಶ್ವರಾತ್ ಉತ್ಪತ್ತಿಮ್ ಆಮ್ಯಾಯ ತೇಷಾಮೇವ ರೋಹಿತಾಧಿರೂಪತಾಮ್ ಆಮನ : “ಯದನ್ನೇ ರೋಹಿತಂ ರೂಪಂ ತೇಜಸಸ್ತದ್ರೂಪಂ ಯಚ್ಚುತ್ಥಂ ತದಪಾಂ ಯತ್ ಕೃಷ್ಣಂ ತದನ್ನಸ್ಯ’ (ಛಾಂ. ೬-೪-೧) ಇತಿ | ತಾವ ಇಹ ತೇಜೋಬಾನಿ ಪ್ರತ್ಯಭಿಜ್ಞಾಯನ್ನೇ ರೋಹಿತಾದಿಶಬ್ದ ಸಾಮಾನ್ಯಾತ್ | ರೋಹಿತಾದೀನಾಂ ಚ ಶಬ್ದಾನಾಂ ರೂಪವಿಶೇಷೇಷು ಮುಖ್ಯತ್ವಾತ್ ಭಾಕ್ತತ್ವಾಚ್ಚ ಗುಣವಿಷಯತ್ವಸ್ಯ 1 ಅಸಗ್ಗೇನ ಚ ಸದ್ದಿಗ್ಧಸ್ಯ ನಿಗಮನಂ ನ್ಯಾಯ್ಯಂ ಮನ್ಯ | ತಥಾ ಇಹಾಪಿ ‘ಬ್ರಹ್ಮವಾದಿನೋ ವದನಿ | ಕಿಂ ಕಾರಣಮ್ ಬ್ರಹ್ಮ” (ಶ್ವೇ. ೧-೧) ಇತ್ಯುಪಕ್ರಮ್ಮ ‘ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುರ್ನಿಗೂಢಾಮ್’ (ಶ್ವೇ. ೧-೩) ಇತಿ ಪಾರಮೇಶ್ವರ್ಯಾಃ ಶಕ್ತಃ ಸಮಸ್ತಜಗದ್ವಿಧಾಯಿನ್ಮಾ ವಾಕ್ಕೋಪಕ್ರಮ ಅವಗಮಾತ್ | ವಾಕ್ಯಶೇಷೇಪಿ

ಅಧಿ. ೨. ಸೂ.೯] ತೇಜೋಬನ್ನರೂಪವಾದ ಪ್ರಕೃತಿಯೇ ಅಜಾಶಬ್ದ ವಾಚ್ಯವಾದದ್ದು ೫೭೫ “ಮಾಯಾಂತು ಪ್ರಕೃತಿಂ ವಿದ್ಯಾನ್ಮಾಯಿನಂತು ಮಹೇಶ್ವರಮ್’’ (ಶ್ವೇ.೪-೧೦) ಇತಿ, “ಯೋ ಯೋನಿಂ ಯೋನಿಮಧಿತಿಷ್ಠತ್ಯೇಕಃ’ (ಶ್ವೇ. ೪-೧೧) ಇತಿ ಚ ತಸ್ಯಾ ಏವಾವಗಮಾನ್ನ ಸ್ವತಾ ಕಾಚಿತ್ ಪ್ರಕೃತಿ ಪ್ರಧಾನಂ ನಾಮ ಅಜಾಮಣ ಆಮ್ರಾಯತೇ ಇತಿ ಶಕ್ಯತೇ ವಸ್ತುಮ್ | ಪ್ರಕರಣಾತ್ ತು ಸೃವ ದೈವೀ ಶಕ್ತಿ: ಅವ್ಯಾಕೃತನಾಮರೂಪಾ ನಾಮರೂಪಯೋಃ ಪ್ರಾಗವಸ್ಥಾ ಅನೇನಾಪಿ ಮಣ ಆಮ್ರಾಯತೇ ಇತ್ಯುಚ್ಯತೇ | ತಸ್ಮಾಶ್ಚ ಸ್ವವಿಕಾರವಿಷಯಣ ತ್ಯರೂಣ ತೈರೂಪ್ಯಮ್ ಉಕ್ತಮ್ ||

  • (ಭಾಷ್ಯಾರ್ಥ) ಆದರೆ ಆ (ಬೃಹದಾರಣ್ಯಕಮಂತ್ರ)ದಲ್ಲಿ “ಈ ಶಿರಸ್ಸೇ ಆ (ಚಮಸವು) ಇದೇ ಅಲ್ಲವೆ, ಕೆಳಕ್ಕೆ ಬಾಯಿಯುಳ್ಳ ಮೇಲಕ್ಕೆ ತಳವುಳ್ಳ ಚಮಸವು ?’’ (ಬೃ. ೨-೨-೩) ಎಂಬ ವಾಕ್ಯಶೇಷದಿಂದ ಒಂದಾನೊಂದು ಗೊತ್ತಾದ ಚಮಸದ ಅರಿವಾಗುತ್ತದೆ. ಆದರೆ ಇಲ್ಲಿ ಈ ಅಜೆ ಎಂದು ಅರಿತುಕೊಳ್ಳಬೇಕಾದದ್ದು ಯಾವದು ? ಎಂದರೆ ಅದಕ್ಕೆ ಹೇಳುತ್ತೇವೆ :

ಪರಮೇಶ್ವರನಿಂದ ಹುಟ್ಟಿದ ಜ್ಯೋತಿಯ ಮೊದಲಾದ, ಎಂದರ ತೇಜೋ5 ಬನ್ನಸ್ವರೂಪವಾದ, ನಾಲ್ಕು ಬಗೆಯ ಭೂತಗ್ರಾಮಕ್ಕೆ ಕಾರಣವಾಗಿರುವದೇ ಈ ಅಜೆ ಎಂದು ಅರಿಯಬೇಕು. ಈ (ಸೂತ್ರದಲ್ಲಿರುವ) ತು ಶಬ್ದವು ಅವಧಾರಣಾರ್ಥ ವುಳ್ಳದ್ದು ; ಈ ಅಜೆ ಎಂಬುದು ಭೂತತ್ರಯಸ್ವರೂಪವಾದದ್ದೇ ಹೊರತು ಗುಣ ತ್ರಯಸ್ವರೂಪವಾದದ್ದಲ್ಲ. ಏಕೆ ? ಎಂದರೆ ಹಾಗೆಂದು ಒಂದು ಶಾಖೆಯವರು ತೇಜೋಬನ್ನಗಳಿಗೆ ಪರಮೇಶ್ವರನಿಂದ ಉತ್ಪತ್ತಿಯನ್ನು ಹೇಳಿದ ಬಳಿಕ “ಅಗ್ನಿಯ ಕೆಂಪುಬಣ್ಣವಿದೆಯಲ್ಲ, ಆ ಬಣ್ಣವು ತೇಜಸ್ಸಿನದು ; ಬಿಳಿಯ (ಬಣ್ಣ) ವಿದೆಯಲ್ಲ ಅದು ಅಪ್ಪಿನದು ; ಕಪ್ಪು ಬಣ್ಣವಿದ)ಯಲ್ಲ, ಅದು ಅನ್ನದ್ದು” (ಛಾಂ. ೬-೪-೧) ಎಂದು ಅವುಗಳಿಗೆ ಕೆಂಪು ಮುಂತಾದ ಬಣ್ಣವನ್ನು ಪಠಿಸಿರುತ್ತಾರೆ. ರೋಹಿತ (ಕಂಪು) ಮುಂತಾದ ಶಬ್ದಗಳು (ಎರಡು ಕಡೆಯಲ್ಲಿಯೂ) ಸಮಾನವಾಗಿರುವದರಿಂದ ಇಲ್ಲಿಯೂ ಅದೇ ತೇಜೋಬನ್ನಗಳನ್ನು ಗುರುತಿಸಿ ಅರಿಯಬಹುದಾಗಿದೆ ; ಏಕಂದರ ರೋಹಿತವೇ

ಮುಂತಾದ ಶಬ್ದಗಳು ಆಯಾ ಬಣ್ಣಗಳಲ್ಲಿ ಮುಖ್ಯ (ವೃತ್ತಿಯುಳ್ಳ) ವಾಗಿರುತ್ತವೆ ;

  1. ಜರಾಯುಜ, ಅಂಡಜ, ಸ್ಟೇದಜ, ಉದ್ರಿಜ್ಜ - ಎಂಬ ನಾಲ್ಕು ಬಗೆಯ ಪ್ರಾಣಿವರ್ಗಕ್ಕೆ ತೇಜೋಬನ್ನರೂಪವಾದ ಭೂತಗಳೇ ಕಾರಣ.
    1. ಸತ್ಯಾದಿಗುಣಗಳನ್ನು ಇಲ್ಲಿ ನಿರಾಕರಿಸಿದಂತೆ ಕಂಡರೂ ಅದರಲ್ಲಿ ತಾತ್ಪರ್ಯವಿಲ್ಲ. ಪೀಠಿಕೆಯನ್ನು ನೋಡಿ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

(ಸತ್ಯಾದಿ) ಗುಣವಿಷಯವಾದರ ಗೌಣವಾಗುತ್ತವೆ. ಅಸಂದಿಗ್ಧ ವಾದ್ದರಿಂದ ಸಂದಿಗ್ಧವಾದದ್ದನ್ನು ನಿಶ್ಚಯಿಸುವದು ಯುಕ್ತ’ವೆಂದು (ಮೀಮಾಂಸಕರು) ಅಭಿಪ್ರಾಯಪಡುತ್ತಾರೆ.

ಹಾಗೆಯೇ ಇಲ್ಲಿಯೂ “ಬ್ರಹ್ಮವಾದಿಗಳು ಹೇಳುತ್ತಾರೇನೆಂದರ : ಬ್ರಹ್ಮವು ಕಾರಣವ ?’’(ಶ್ವೇ. ೧-೧) ಎಂದು ಉಪಕ್ರಮಿಸಿ ಅವರು ಧ್ಯಾನಯೋಗವನ್ನು ಅನುಸರಿಸಿ ತನ್ನ ಗುಣಗಳಿಂದ (ಕೂಡಿ) ನಿಗೂಢವಾಗಿರುವ ದೇವಾತ್ಮಶಕ್ತಿಯನ್ನು ಕಂಡುಕೊಂಡರು’ (ಶ್ವೇ. ೧-೩) ಎಂದು ಸಮಸ್ತಜಗತ್ತನ್ನೂ ವ್ಯವಸ್ಥೆಗೊಳಿಸುವ ಪರಮೇಶ್ವರಶಕ್ತಿ ಎಂದು ವಾಕ್ಯದ ಉಪಕ್ರಮದಲ್ಲಿ ನಿಶ್ಚಯವಾಗಿರುವದರಿಂದ ವಾಕ್ಯಶೇಷದಲ್ಲಿಯೂ ಪ್ರಕೃತಿಯನ್ನು ಮಾಯಯಂದು ತಿಳಿಯಬೇಕು, ಮಹೇಶ್ವರ ನನ್ನಾದರೆ ಮಾಯಿ (ಎಂದು ತಿಳಿಯಬೇಕು)’ (ಶ್ವೇ. ೪-೧೦), ‘ಯಾವನು ಯೋನಿ ಯೋನಿಯನ್ನೂ ತಾನೊಬ್ಬನೇ ಮೇಲಿದ್ದು ಆಳುತ್ತಿರುವನೋ’’ (ಶ್ವೇ. ೪-೧೧) ಎಂದು ಅದೇ ನಿಶ್ಚಯವಾಗುತ್ತಿರುವದರಿಂದಲೂ ಸ್ವತಂತ್ರವಾದ ಪ್ರಧಾನವೆಂಬ ಒಂದಾನೊಂದು ಪ್ರಕೃತಿಯನ್ನು ಅಜಾಮಂತ್ರದಿಂದ ಪಠಿಸಿದ ಎಂದು ಹೇಳುವದಕ್ಕೆ

  1. ಛಾಂದೋಗ್ಯಶ್ರುತಿಯು ಭೂತತ್ರಯವನ್ನು ತಿಳಿಸುವದಕ್ಕೆ ರೋಹಿತಾದಿಶಬ್ದ ಗಳನ್ನುಪಯೋಗಿಸಿದ ಎಂಬುದು ಅಸಂದಿಗ್ಧವಾಗಿದೆ. ಆದ್ದರಿಂದ ಇಲ್ಲಿಯೂ ಆ ಶಬ್ದಗಳಿಗೆ ಅದೇ ಅರ್ಥವನ್ನು ಮಾಡುವದು ಯುಕ್ತ.

2.‘ಕಿಂ ಕಾರಣಮ್’ ಎಂಬುದನ್ನು ಒಂದು ಪದವಂದು ಭಾವಿಸಿ ವ್ಯಾಖ್ಯಾನಕಾರರು ಬ್ರಹ್ಮಕ ಉಪಕರಣವು ಯಾವದು ? - ಎಂಬರ್ಥವನ್ನು ತೆಗೆದಿರುತ್ತಾರೆ. ಆದರೆ ಈ ಮಂತ್ರದ ವಾಕ್ಯಶೇಷ ದಲ್ಲಿ ಅದಕ್ಕೆ ಪುಷ್ಟಿ ಇರುವಂತೆ ಕಾಣುವದಿಲ್ಲ.

  1. ಸೃಷ್ಮಾದಿಗಳನ್ನು ಮಾಡಬಲ್ಲ ಧರ್ಮಗಳಿಂದೊಡಗೂಡಿ ಎಂದರ್ಥ. ಸತ್ಪಾದಿಗುಣ ಗಳಿಂದೊಡಗೂಡಿ ಎಂದು ರII ಪ್ರIL.

  2. ಇಲ್ಲಿ ‘ಯೋನಿಂ ಯೋನಿಮ್’ ಎಂದು ದ್ವಿರುಕ್ತಿಬಂದಿರುವದೇತಕ್ಕೆಂಬ ಬಗ್ಗೆ ವ್ಯಾಖ್ಯಾನಕಾರರಲ್ಲಿ ಮತಭೇದವಿದೆ. ಅವಿದ್ಯಾಶಕ್ತಿಯು ಒಬ್ಬೊಬ್ಬ ಜೀವನಿಗೆ ಒಂದೊಂದರಂತ ಇರುವದರಿಂದ ವೀಪ್ಪಾರ್ಥದಲ್ಲಿ ದ್ವಿರುಕ್ತಿ ಬಂದಿದೆ ಎಂದು ಭಾಮತೀಕಾರರು, ಮಾಯಯು ಒಂದಾದರೂ ಅದರ ಅಂಶಗಳಾದ ಅವಿದ್ಯಗಳು ಜೀವರಿಗ ಉಪಾಧಿಗಳಾಗಿ ಅನೇಕವಾಗಿವೆ. ಆದ್ದರಿಂದ ವೀಪ್ಪಾರ್ಥದಲ್ಲಿ ದ್ವಿರುಕ್ತಿ ಎಂದು ರ|| ಪ್ರ| ; ಅವಿದ್ಯಾಶಕ್ತಿಯು ಒಂದಾದರೂ ಕಾರ್ಯಗಳು ಬೇರೆಬೇರೆಯಿರುವದರಿಂದ ವೀಪ್ಪ ಬಂದಿದೆ ಎಂದು ನ್ಯಾ| ನಿ।। ಶಕ್ತಿಯು ಸರ್ವಕಾರಣವಾದರೂ ಅದರ ಕಾರ್ಯಗಳಾದ ಅವಾಂತರಕಾರಣಗಳು ವ್ಯವಹಾರದೃಷ್ಟಿಯಿಂದ ಅನೇಕವಾಗಿರುತ್ತವ ; ಯಾವ ಕಾರಣವನ್ನು ತಗೆದುಕೊಂಡರೂ ಅದಕ್ಕೆ ಅಧಿಷ್ಠಾತೃವು ಈಶ್ವರನೇ ಎಂಬುದು ಶ್ರುತ್ಯರ್ಥವೆಂದು ತೋರುತ್ತದೆ.

ಅಧಿ. ೨. ಸೂ. ೧೦] ತೇಜೋಬನ್ನಪ್ರಕೃತಿಗೆ ಅಜಾ ಎಂಬ ಹೆಸರು ಹೇಗೆ ಬಂತು ? ೫೭೭ ಆಗಲಾರದು. ಆದರೆ ಪ್ರಕರಣದಿಂದ ಅವ್ಯಾಕೃತನಾಮರೂಪಗಳುಳ್ಳ ನಾಮರೂಪಗಳ ಪ್ರಾಗವಸ್ಥೆಯಾದ ಅದೇ ದೈವಶಕ್ತಿಯೇ ಈ ಮಂತ್ರದಿಂದಲೂ ಪಠಿತವಾಗಿದ ಎನ್ನುತ್ತೇವೆ. ಆ (ಶಕ್ತಿಗೆ) ತನ್ನ ಕಾರ್ಯ(ಗಳಾದ ತೇಜೋಬನ್ನಗಳ) ವಿಷಯವಾದ ತರೂಪ್ಯದಿಂದ (ಇಲ್ಲಿ) ವೈರೂಪ್ಯವನ್ನು ಹೇಳಿರುತ್ತದೆ.

ಕಲ್ಪನೋಪದೇಶಾಚ್ಚ ಮಧ್ವಾದಿವದವಿರೋಧಃ II೧oll ೧೦. ಮಧ್ಯಾದಿಗಳಂತೆ (ಇದೂ) ಕಲ್ಪನೋಪದೇಶವಾದ್ದರಿಂದ ವಿರೋಧವಲ್ಲ.

ತೇಜೋಬನ್ನಪ್ರಕೃತಿಗೆ ಅಜಾ ಎಂಬ ಹೆಸರು ಹೇಗೆ ?

(ಭಾಷ್ಯ) ೩೫೭. ಕಥಂ ಪುನಸ್ತೇಜೋಬನ್ನಾತ್ಮನಾ ರೂಪೇಣ ರೂಪಾ ಅಜಾ ಪ್ರತಿಪತ್ತುಂ ಶಕ್ಯತೇ ? ಯಾವತಾ ನ ತಾವತ್ ತೇಜೋಬನ್ನೇಷು ಅಜಾಕೃತಿರಸ್ತಿ ನ ಚ ತೇಜೋಬಾನಾಂ ಜಾತಿಶ್ರವಣಾತ್ ಅಜಾತಿನಿಮಿತ್ತೋSಪಿ ಅಜಾಶಬ್ದಃ ಸಂಭವತಿ ಇತಿ | ಅತ ಉತ್ತರಂ ಪಠತಿ ! ನಾಯಮ್ ಅಜಾಕೃತಿನಿಮಿತ್ತ: ಅಜಾಶಬ್ದಃ | ನಾಪಿ ಯೌಗಿಕಃ | ಕಿಂ ತರ್ಹಿ ಕಲ್ಪನೋಪದೇಶೋಽಯಮ್ | ಅಜಾರೂಪಕಕ್ಷಿಪ್ತಿ: ತೇಜೋಬನ್ನಲಕ್ಷಣಾಯಾಃ ಚರಾಚರಯೋನೇ ಉಪದಿಶ್ಯತೇ | ಯಥಾ ಹಿ ಲೋಕೇ ಯದೃಚ್ಛಯಾ ಕಾಚಿತ್ ಅಜಾ ರೋಹಿತಶುಕ್ಲಕೃಷ್ಣವರ್ಣಾ ಸ್ಮಾತ್ ಬಹುಬರ್ಕರಾ ಸರೂಪಬರ್ಕರಾ ಚ, ತಾಂ ಚ ಕಶ್ಚಿದಜಃ ಜುಷಮಾನುಶಮೀತ, ಕಶ್ಚಿಚ್ಚ ಏನಾಂ ಭುಕ್ತಭೋಗಾಂ ಜಹ್ಮಾತ್, ಏವಮ್ ಇಯಮಪಿ ತೇಜೋಬನ್ನಲಕ್ಷಣಾ ಭೂತಪ್ರಕೃತಿ ತ್ರಿವರ್ಣಾ ಬಹುಸರೂಪಂ ಚರಾಚರಲಕ್ಷಣಂ ವಿಕಾರಜಾತಂ ಜನಯತಿ 1 ಅವಿದುಷಾ ಚ ಕ್ಷೇತ್ರಕ್ಕೇನ ಉಪಭುಜ್ಯತೇ, ವಿದುಷಾ ಚ ಪರಿತ್ಯಜ್ಯತೇ ಇತಿ | ನ ಚ ಇದಮಾ ಶಜ್ತವ್ಯಮ್ ಏಕಃ ಕ್ಷೇತ್ರಜ್ಞಃ ಅನುಶೆತೇ ಅನ್ಯ: ಜಹಾತಿ ಇತ್ಯತಃ ಕ್ಷೇತ್ರಜ್ಞ ಭೇದಃ

  1. ‘ದೇವಾತ್ಮಶಕ್ತಿಮ್’, ‘ಮಾಯಿನಂ ತು ಮಹೇಶ್ವರಮ್’, ‘ಅಧಿತಿಷ್ಠಕಃ’ ಎಂಬ ಮಾತುಗಳಿಂದ ಈಶ್ವರಶಕ್ತಿಯಾದ ಪ್ರಕೃತಿಯೇ ಇಲ್ಲಿ ಪ್ರಕೃತವಾಗಿರುತ್ತದೆ ಎಂಬುದು ಸ್ಪಷ್ಟ ವಾಗಿದೆ, ಸ್ವತಂತ್ರವಾದ ಪ್ರಕೃತಿಯು ಪ್ರಕೃತವಲ್ಲ ಎಂದರ್ಥ.

  2. ಹಿಂದ ೧-೪-೩ (ಭಾ. ಭಾ. ೩೩೯) ಹೇಳಿದ ಶಕ್ತಿಯೇ ಇದು.

  3. ಕಾರ್ಯವಾದ ತೇಜೋಬನ್ನಗಳ ರೂಪವನ್ನೇ ಕಾರಣವಾದ ಶಕ್ತಿಗೂ ಹೇಳಿರುತ್ತದೆ ಎಂದು ಭಾವ.

೫೭೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಪಾರಮಾರ್ಥಿಕಃ ಪರೇಷಾಮ್ ಇಷ್ಟಃ ಪ್ರಾಪ್ಪೋತಿ ಇತಿ | ನ ಹಿ ಇಯಂ ಕ್ಷೇತ್ರದ ಪ್ರತಿಪಿಪಾದಯಿಷಾ ಕಿಂ ತು’ ಬಗ್ಧಮೋಕ್ಷವ್ಯವಸ್ಥಾಪ್ರತಿಪಿಪಾದಯಿಷಾ ತು ಏಷಾ | ಪ್ರಸಿದ್ಧಂ ತು ಭೇದಮ್ ಅನೂದ್ಯ ಬಣ್ಣ ಮೋಕ್ಷವ್ಯವಸ್ಥಾ ಪ್ರತಿಪಾದ್ಯತೇ । ಭೇದಸ್ಸು ಉಪಾಧಿನಿಮಿತ್ತ: ಮಿಥ್ಯಾಜ್ಞಾನಕಿತಃ, ನ ಪಾರಮಾರ್ಥಿಕಃ | “ಏಕೋ ದೇವಃ ಸರ್ವ ಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾನ್ತರಾತ್ಮಾ’’ (ಶ್ವೇ. ೬-೧) ಇತ್ಯಾದಿ ಶ್ರುತಿಭ್ಯಃ | ಮಧ್ವಾದಿವತ್‌ ಯಥಾ ಆದಿತ್ಯಸ್ಯ ಅಮಧು ಮಧುತ್ವಮ್ | ವಾಚಶ್ಚ ಅದೇನೋರ್ಧನುತ್ವಮ್ ದ್ಯುಲೋಕಾದೀನಾಂ ಚ ಅನಗೀನಾಮ್ ಅಗ್ನಿತ್ವಮ್ | ಇವಂಜಾತೀಯಕಂ ಕಲ್ಪತೇ | ಏವಮ್ ಇದಮ್ ಅನಜಾಯಾ ಅಜಾತ್ವಂ ಕಲ್ಪತೇ ಇತ್ಯರ್ಥಃ | ತಸ್ಮಾತ್ ಅವಿರೋಧಸ್ತೇಜೋಬನ್ನೇಷು ಅಜಾಶಬ್ದ ಪ್ರಯೋಗಸ್ಯ |

(ಭಾಷ್ಯಾರ್ಥ) (ಆಕ್ಷೇಪ) :- ತೇಜೋಬನ್ನಗಳ ರೂಪದಿಂದ ತೃರೂಪ್ಯವಿರುವದರಿಂದ ಮೂರು ರೂಪವುಳ್ಳ (ಇದೇ) ಅಜೆ ಎಂದು ಅರಿತುಕೊಳ್ಳುವದು ಹೇಗಾದೀತು ? ಏಕೆಂದರ ತೇಜೋಬನ್ನಗಳಲ್ಲಿ ಆಡಿನ ಆಕಾರವಿಲ್ಲ ; ತೇಜೋಬನ್ನಗಳು ಹುಟ್ಟಿರುವ ವಂದು ಶ್ರುತಿಯಿರುವದರಿಂದ ಅಜಾಶಬ್ದವು ಹುಟ್ಟುವದಿಲ್ಲವೆಂಬ ನಿಮಿತ್ತದಿಂದ ಬಂದದ್ದು ಎಂದು ಹೇಳುವದಕ್ಕೂ ಇಲ್ಲವಲ್ಲ !

(ಪರಿಹಾರ) :- ಇದಕ್ಕೆ ಉತ್ತರವನ್ನು (ಸೂತ್ರಕಾರರು) ಹೇಳುತ್ತಾರೆ. (ಏನೆಂದರ) ಈ ಅಜಾಶಬ್ದವು ಅಜಾಕಾರದ ನಿಮಿತ್ತದಿಂದ ಬಂದದ್ದಲ್ಲ, ಯೌಗಿಕವೂ ಅಲ್ಲ ; ಮತ್ತೇನಂದರೆ ಇದು ಕಲ್ಪನೋಪದೇಶವು, ಚರಾಚರಪ್ರಾಣಿಗಳಿಗೆ ಕಾರಣ ವಾಗಿರುವ ತೇಜೋಬನ್ನ (ರೂಪವಾದ ಪ್ರಕೃತಿಗೆ) ಆಡಿನ ರೂಪವನ್ನು ಕಲ್ಪಿಸಿ (ಇಲ್ಲಿ ) ಹೇಳಿರುತ್ತದೆ. (ಹೇಗಂದರ) ಹೇಗೆ ಲೋಕದಲ್ಲಿ ಅಕಸ್ಮಾತ್ತಾಗಿ ಒಂದು ಆಡು ಕೆಂಪು, ಬಿಳುಪು, ಕಪ್ಪುಬಣ್ಣ (ಗಳಿಂದ ಕೂಡಿ)ದ್ದಾಗಿರಬಹುದೋ ಬಹಳ ಮರಿಗಳುಳ್ಳದ್ದೂ ತನ್ನಂತೆ ಇರುವ ಮರಿಗಳುಳ್ಳದ್ದೂ ಆಗಿರಬಹುದೋ, ಮತ್ತು ಅದನ್ನು ಪ್ರೀತಿಸುವ ಒಂದು ಹೋತವು ಅದರ ಬಳಿಯಲ್ಲಿ ಮಲಗಿರಬಹುದೋ, ಮತ್ತು ಇನ್ನೊಂದು ಈ ಭೂಗವನ್ನು ಅನುಭವಿಸಿರುವ (ಆಡನ್ನು) ಬಿಟ್ಟುಬಿಡಬಹುದೂ, ಹಾಗೆಯೇ

ಇಲ್ಲಿಯೂ ಈ ತೇಜೋಬನ್ನರೂಪವಾದ ಭೂತಪ್ರಕೃತಿಯು ಮೂರು ಬಣ್ಣದ್ದು, ಬಹಳವಾಗಿ ತನ್ನ ರೂಪವುಳ್ಳ ಚರಾಚರರೂಪವಾದ ಕಾರ್ಯಸಮೂಹವನ್ನು ಹಡೆಯು ತದ ; ಅಜ್ಞಾನಿಯಾದ ಕ್ಷೇತ್ರಜ್ಞನು (ಇದನ್ನು ) ಅನುಭವಿಸುತ್ತಾನೆ, ಮತ್ತು ಜ್ಞಾನಿ

  1. ಕಿಂ ತು ಎಂಬ ಅವ್ಯಯವು ಇಲ್ಲದಿದ್ದರೂ ಸಾಗುತ್ತದೆ. ಏಕೆಂದರೆ ಮುಂದೆ ಪ್ರತಿ ಪಿಪಾದಯಿಷಾ ತು ಎಂಬಲ್ಲಿ ತು ಇದ.

ಅಧಿ. ೨. ಸೂ. ೧೦] ತೇಜೋಬನ್ನ ಪ್ರಕೃತಿಗೆ ಅಜಾ ಎಂಬ ಹೆಸರು ಹೇಗೆ ಬಂತು ? ೫೭೯

ಯಾದ (ಕ್ಷೇತ್ರಜ್ಞನು) ಬಿಟ್ಟುಬಿಡುತ್ತಾನೆ ಎಂದು (ಕಲ್ಪಿತರೂಪಕದ ಅಭಿ ಪ್ರಾಯವು).

ಒಬ್ಬ ಕ್ಷೇತ್ರಜ್ಞನು ಹತ್ತಿರ ಮಲಗಿರುತ್ತಾನೆ, ಇನ್ನೊಬ್ಬನು ಬಿಡುತ್ತಾನೆ ಎಂದದ್ದ ರಿಂದ ಕ್ಷೇತ್ರಜ್ಞರು ನಿಜವಾಗಿಯೂ ಬೇರೆಯಾಗಿರುತ್ತಾರೆಂದು ಪರ(ವಾದಿಗಳಿಗೆ) ಇಷ್ಟ ವಾದದ್ದು (ಸರಿಯಂ)ದಾಗುವದೆಂದು ಆಶಂಕಿಸಬಾರದು. ಏಕೆಂದರೆ ಇದು ಕ್ಷೇತ್ರಜ್ಞರು ಬೇರೆಬೇರೆ ಎಂದು ಹೇಳುವದಕ್ಕೆ ಬಂದದ್ದಲ್ಲ ; ಮತ್ತೇನೆಂದರ ಪ್ರಸಿದ್ಧವಾದ ಭೇದವನ್ನು ಅನುವಾದಮಾಡಿಕೊಂಡು ಇದು ಬಂಧಮೋಕ್ಷಗಳ ವ್ಯವಸ್ಥೆಯನ್ನು ತಿಳಿಸುವದಕ್ಕೆ ಬಂದದ್ದು, ಭೇದವಾದರೋ ಉಪಾಧಿಯ ನಿಮಿತ್ತವಾದದ್ದು, ಮಿಥ್ಯಾಜ್ಞಾನಕಲ್ಪಿತವಾದದ್ದೇ ಹೊರತು ಪಾರಮಾರ್ಥಿಕವಲ್ಲ. “ಒಬ್ಬನೇ ದೇವನು ಸರ್ವಭೂತಗಳಲ್ಲಿಯೂ ಅಡಗಿರುತ್ತಾನ. (ಅವನು) ಸರ್ವವ್ಯಾಪಿಯು, ಎಲ್ಲಾ ಭೂತಗಳಿಗೂ ಒಳಗಿರುವ ಆತ್ಮನು.’’ (ಶ್ವೇ.೬-೧) ಮುಂತಾದಶ್ರುತಿಗಳಿಂದ (ಇದು ಸಿದ್ಧವಾಗಿರುತ್ತದೆ).

ಮಧ್ಯಾದಿಗಳಂತೆಯೇ (ಇದು ಕಲ್ಪನೋಪದೇಶವು). ಆದಿತ್ಯನು ಮಧುವಲ್ಲ ದಿದ್ದರೂ ಮಧುವೆಂದೂ (ಛಾಂ. ೩-೧-೧), ವಾಕ್ಕು ಧೇನುವಲ್ಲದಿದ್ದರೂ ಧೇನು ವೆಂದೂ (ಬೃ. ೫-೮-೧) ದ್ಯುಲೋಕಾದಿಗಳು ಅಗ್ನಿಯಲ್ಲದಿದ್ದರೂ ಅಗ್ನಿಯಂದು (ಬೃ. ೬-೨-೯ ರಿಂದ ೧೩ ರವರೆಗೆ ; ಛಾಂ. ೫-೪ ರಿಂದ ೮ ರವರೆಗೆ) ಮುಂತಾಗಿ ಹೇಗ ಕಲ್ಪಿತವಾಗಿದೆಯೋ ಹಾಗೆಯೇ ಆಡಲ್ಲದಿದ್ದರೂ ಆಡು ಎಂದು (ಇಲ್ಲಿ)

  1. ಇಲ್ಲಿ ಸೂತ್ರಕಾರರಿಗೆ ಅವಾಂತರಪ್ರಕೃತಿಯಾದ ತೇಜೋಬನ್ನವೂ ಭಾಷ್ಯಕಾರರಿಗೆ ಅವ್ಯಾಹೃತವೂ ಅಜಾಶಬ್ದದಿಂದ ಅಭಿಪ್ರೇತವಾಗಿದೆ ಎಂದು ರ|| ಪ್ರ|| ವ್ಯಾಖ್ಯಾನದಲ್ಲಿ ಕಲ್ಪಿಸಿರುವ ಮತಭೇದವನ್ನೇನೂ ಒಪ್ಪಬೇಕಾದದ್ದಿಲ್ಲ. ಪ್ರಕರಣದಿಂದ ಅವ್ಯಾಹೃತವೇ ಇಷ್ಟವಾಗಿದೆ. ಕಾರ್ಯ ವಾದ ತೇಜೋಬನ್ನರೂಪಪ್ರಕೃತಿಗೆ ಕಲ್ಪನೆಯಿಂದ ಕೊಟ್ಟಿರುವ ‘ಅಜಾ’ ಎಂಬ ಹೆಸರನ್ನು ಕಾರಣವಾದ ಅವ್ಯಾಕೃತಕ್ಕೂ ಉಪಯೋಗಿಸಿದ. ಕಾರ್ಯವಾದ ತೇಜೋಬನ್ನಕ್ಕಾದರೂ ಅಜಾತ್ಯವು ಹೇಗೆ ಸಲ್ಲುತ್ತದೆ ? - ಎಂಬ ಆಕ್ಷೇಪಕ್ಕೆ ಸೂತ್ರದಲ್ಲಿ ಪರಿಹಾರವನ್ನು ಹೇಳಿದೆ. ಹಿಂದೆ ಕಾರಣವಾಚಿಯಾದ ಅವ್ಯಕ್ತಶಬ್ದವನ್ನು ಕಾರ್ಯವಾದ ಶರೀರಕ್ಕೆ ಉಪಯೋಗಿಸಿದ್ಧಂತೆ ಇಲ್ಲಿ ಕಾರ್ಯವಾಚಕವನ್ನು ಕಾರಣಕ್ಕೆ ಉಪಯೋಗಿಸಿದ ಎಂಬುದು ಸಿದ್ಧಾಂತಿಯ ಭಾವ.

  2. ಸಾಂಖ್ಯರಿಗೆ ಇಷ್ಟವಾದ ಆತ್ಮನಾನಾತ್ವವೇನೂ ಸಿದ್ಧಿಸುವದಿಲ್ಲ ಎಂದರ್ಥ.

  3. ಏಕಾತ್ಮವಾದದಲ್ಲಿ ಒಬ್ಬನಿಗೆ ಬಂಧ, ಮತ್ತೊಬ್ಬನಿಗೆ ಮೋಕ್ಷ - ಎಂಬ ವ್ಯವಸ್ಥೆ ಹೇಗೆ ? - ಎಂಬುದನ್ನು ತಿಳಿಸತಕ್ಕದ್ದು ಎಂದರ್ಥ.

  4. ಈ ಉಪಾಧಿಗಳೂ ಅವಿದ್ಯಾಕಲ್ಪಿತವೇ. ೩-೨-೧೫, ಮಾಂ. ಕಾ. ಭಾ. ೩-೫ (ಭಾ. ಭಾ. ೧೩೮) ನೋಡಿ.

speso

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಕಲ್ಪಿಸಿದ ಎಂದರ್ಥ. ಆದ್ದರಿಂದ ತೇಜೋಬನ್ನಗಳಲ್ಲಿ ಅಜಾಶಬ್ದವನ್ನು ಪ್ರಯೋಗ ಮಾಡಿರುವದರಲ್ಲಿ (ಯಾವ) ವಿರೋಧವೂ ಇಲ್ಲ.

೩. ಸಂಸ್ಕೂಪಸಂಗ್ರಹಾಧಿಕರಣ (ಸೂ. ೫-೧೩) (ಬ. ೪-೪-೧೭ ರಲ್ಲಿರುವ ಪಂಚಪಂಚಜನಾ ಎಂಬುದು

ಸಾಂಖ್ಯರ ತತ್ತ್ವಗಳಲ್ಲ)

ನ ಸಲ್ಯೂಪಸಂಗ್ರಹಾದಪಿ ನಾನಾಭಾವಾದತಿರೇಕಾಚ್ಚ Ill

೫. ಸಂಖ್ಯೆಯಿಂದ ಉಪಸಂಗ್ರಹವಾಗಿದೆಯೆಂಬುದರಿಂದಲೂ (ಶಬ್ದ ಪ್ರಮಾಣಕತ್ವ)ವಿಲ್ಲ ; ಏಕೆಂದರೆ ನಾನಾಭಾವವಿದೆ, ಮತ್ತು ಅತಿರೇಕವಿದೆ.

ಪೂರ್ವಪಕ್ಷ : ಪ್ರಧಾನಾದಿಗಳಿಗೂ ಶ್ರುತಿಪ್ರಮಾಣವಿದೆ

(ಭಾಷ್ಯ) ೩೫೮. ಏವಂ ಪರಿಹೃತೇಶಪಿ ಅಜಾಮನೇ ಪುನಃ ಅನ್ಯಸ್ಮಾತ್ ಮಾತ್ ಸಾಃ ಪ್ರತ್ಯವತಿಷ್ಠತೇ | ಯಸ್ಮಿನ್ ಪಞ್ಞ ಪಞ್ಞಜನಾ ಆಕಾಶಶ್ಚ ಪ್ರತಿಷ್ಠಿತಃ | ತಮೇವ ಮನ್ಯ ಆತ್ಮಾನಂ ವಿದ್ವಾನ್ ಬ್ರಹ್ಮಾಮೃತೋsಮೃತಮ್’’ (ಬೃ. ೪-೪-೧೭) ಇತ್ಯಸ್ಮಿನ್ ಮನೇ ‘ಪಞ್ಚಪಞ್ಞಜನಾ’ ಇತಿ ಪಞ್ಚಸಜ್ಞಾವಿಷಯಾ ಅಪರಾ ಪಞ್ಚಾಸಜ್ಞಾ ಶೂಯತೇ ಪಞ್ಞಶಬ್ದ ದ್ವಯದರ್ಶನಾತ್ | ತ ಏತೇ ಪಞ್ಞಪಞ್ಚಕಾಃ ಪಞ್ಚವಿಂಶತಿಃ ಸಂಪದ್ಯ | ತಥಾ ಪಞ್ಚವಿಂಶತಿಸಲ್ಮೀಯಾ ಯಾವy: ಸಯಾ ಆಕಾಸ್ಮಿ ತಾವವ ಚ ತತ್ವಾನಿ ಸಾಜ್ ಸಜ್ಯಾಯ | “ಮೂಲಪ್ರಕೃತಿ ರವಿಕೃತಿರ್ಮಹದಾದ್ಯಾಃ ಪ್ರಕೃತಿವಿಕೃತಯಃ ಸಪ್ತ 1 ಷೋಡಶಕಶ್ಚ ವಿಕಾರೋ ನ ಪ್ರಕೃತಿರ್ನ ವಿಕೃತಿಃ ಪುರುಷಃ’ (ಸಾಂ. ಕಾ. ೩) ಇತಿ | ತಯಾ ಶ್ರುತಿಪ್ರಸಿದ್ಧಿಯಾ ಪಞ್ಚವಿಂಶತಿಸಲ್ಮೀಯಾ ತೇಷಾಂ ಸ್ಮೃತಿಪ್ರಸಿದ್ಧಾನಾಂ ಪಞ್ಚವಿಂಶತಿತತ್ಯಾನಾಮ್ ಉಪಸ್ಥಿಹಾತ್ ಪ್ರಾಪ್ತಂ ಪುನಃ ಶ್ರುತಿಮತ್ಯಮೇವ ಪ್ರಧಾನಾದೀನಾಮ್ ||

(ಭಾಷ್ಯಾರ್ಥ) ಹೀಗ ಅಜಾಮಂತ್ರವನ್ನು ಬಗೆಹರಿಸಿದರೂ ಮತ್ತೂ ಇನ್ನೊಂದು ಮಂತ್ರದ (ಬಲ)ದಿಂದ ಸಾಂಖ್ಯನು ಎದುರಾಗುತ್ತಾನೆ. “ಯಾವನಲ್ಲಿ ಪಂಚಪಂಚಜನರೂ ಆಕಾಶವೂ ನಿಂತಿರುವವೋ ಆ ಆತ್ಮನನ್ನೇ ಅಮೃತಬ್ರಹ್ಮವೆಂದು ನಾನು ಎಣಿಸು

ಅಧಿ. ೩. ಸೂ. ೫] ಸಿದ್ಧಾಂತ : ಸಾಂಖ್ಯರ ತತ್ತ್ವಗಳು ಐದಾಗಿಲ್ಲ

೫೮೧

ತೇನೆ ; (ಅದನ್ನು) ಅರಿತು ಅಮೃತನಾಗಿರುವನು. (ಬೃ. ೪-೪-೧೭) ಎಂಬೀ

ಮಂತ್ರದಲ್ಲಿ ಪಂಚಪಂಚಜನರು ಎಂದು ಪಂಚಸಂಖ್ಯೆಯ ವಿಷಯವಾದ ಇನ್ನೊಂದು ಪಂಚಸಂಖ್ಯೆಯನ್ನು ಹೇಳಿದೆ. ಏಕೆಂದರೆ (ಇಲ್ಲಿ) ಪಂಚ ಎಂಬ ಎರಡು ಶಬ್ದಗಳು ಕಾಣುತ್ತವೆ. ಆ ಇವು ಐದು ಐದುಗಳಾದ್ದರಿಂದ ಇಪ್ಪತೈದಾಗುತ್ತವೆ. ಇದಕ್ಕನುಗುಣ ವಾಗಿ ಇಪ್ಪತೈದು ಸಂಖ್ಯೆಯಿಂದ ಎಷ್ಟು ಸಂಖ್ಯೆಯಗಳ ಆಕಾಂಕ್ಷೆಯಾಗುವ ಅಷ್ಟೇ ತತ್ತ್ವಗಳನ್ನು ಸಾಂಖ್ಯರು ಲೆಕ್ಕಮಾಡಿ ಹೇಳುತ್ತಾರೆ. ಮೂಲಪ್ರಕೃತಿಯು ಅವಿಕೃತಿಯು ; ಮಹತ್ತೇ ಮುಂತಾದ ಪ್ರಕೃತಿವಿಕೃತಿಗಳು ಏಳು ; ಹದಿನಾರು (ಸೇರಿರುವ ಗುಂಪು) ವಿಕಾರವು ; ಪುರುಷನು ಪ್ರಕೃತಿಯೂ ಅಲ್ಲ, ವಿಕೃತಿಯೂ ಅಲ್ಲ’’ (ಸಾಂ. ಕಾ. ೩).’ ಈ ಶ್ರುತಿಪ್ರಸಿದ್ಧವಾದ ಇಪ್ಪತೈದೆಂಬ ಸಂಖ್ಯೆಯಿಂದ ಆ ಸಾಂಖ್ಯಸ್ಮತಿಪ್ರಸಿದ್ಧವಾದ ಇಪ್ಪತೈದು ತತ್ತ್ವಗಳನ್ನು ಸಂಗ್ರಹಿಸಿ (ಹೇಳಿ)ರುವದರಿಂದ ಪ್ರಧಾನಾದಿಗಳು ಶ್ರುತಿ (ಪ್ರಮಾಣಕ)ವೆಂದೇ (ಪೂರ್ವಪಕ್ಷವು) ಬಂದೊದಗುತ್ತದೆ. ಸಿದ್ಧಾಂತ : ಸಾಂಖ್ಯರ ತತ್ವಗಳು ಐದೈದಾಗಿಲ್ಲ

(ಭಾಷ್ಯ) ೩೫೯. ತತೋ ಬ್ಯೂಮಃ | ನ ಸಂಖ್ಯೋಪಸಂಗ್ರಹಾದಪಿ ಪ್ರಧಾನಾದೀನಾಂ ಶ್ರುತಿಮತ್ಯಂ ಪ್ರತ್ಯಾಶಾ ಕರ್ತವ್ಯಾ | ಕಸ್ಮಾತ್ ? ನಾನಾಭಾವಾತ್ | ನಾನಾ ಹಿ ಏತಾನಿ ಪಂಚವಿಂಶತಿಸ್ತಾನಿ | ನೃಷಾಂ ಪಶಃ ಪಶಃ ಸಾಧಾರಣೋ ಧರ್ಮೊಸ್ತಿ | ಯೇನ ಪಞ್ಚವಿಂಶತೇರನ್ನರಾಲೇ ಪರಾಃ ಪಞ್ಚ ಪಣ್ಯ ಸಂಖ್ಯಾ ನಿವಿಶ್ರನ್ 1 ನ ಹಿ ಏಕನಿಬನ್ಧನಮಸ್ಕರೇಣ ನಾವಾಭೂತೇಷು ದ್ವಿತ್ವಾದಿಕಾ ಸಂಖ್ಯಾ ನಿವಿಶನೇ | ಅಥಚ್ಯತ - ಪಂಚವಿಂಶತಿಸಂಖ್ಯವ ಇಯಮ್ ಅವಯವದ್ವಾರೇಣ ಲಕ್ಷ್ಮತೇ ಯಥಾ ಪಞ್ಚ ಸಪ್ತ ಚ ವರ್ಷಾಣಿ ನ ವವರ್ಷ ಶತಕ್ರತುಃ’ (?) ಇತಿ ದ್ವಾದಶ ವಾರ್ಷಿಕೀಮ್ ಅನಾವೃಷ್ಟಿ ಕಥಯ ತದ್ವತ್ ಇತಿ | ತದಪಿ ನೋಪಪದ್ಯತೇ | ಅಯಮೇವ ಅಸ್ಮಿನ್ ಪಕ್ಷ ದೋಷಃ ಯತ್ ಲಕ್ಷಣಾ ಆಶ್ರಯಣೀಯಾ ಸ್ಯಾತ್ | ಪರಶ್ವಾತ್ರ ಪಞ್ಞಶಬ್ದಃ ಜನಶಬೈನ ಸಮಸ್ತ: ‘ಪಞ್ಞಜನಾಃ’ ಇತಿ | ಪಾರಿಭಾಷಿಕೇಣ

  1. ಮೂಲಪ್ರಕೃತಿಯು ಯಾವದರ ಕಾರ್ಯವೂ ಅಲ್ಲ. ಮಹತ್ತು, ಅಹಂಕಾರ, ತನ್ಮಾತ್ರೆಗಳು ಐದು - ಇವೇಳೂ ಪ್ರಕೃತಿವಿಕೃತಿಗಳು ಎಂದರೆ ಕಾರಣ ಕಾರ್ಯಗಳು. ಇವುಗಳಲ್ಲಿ ಹಿಂದುಹಿಂದಿನದಕ್ಕೆ ಮುಂದಿನದು ಕಾರ್ಯವು ; ಎಂದರೆ ಮಹತ್ತಿಗೆ ಅಹಂಕಾರ, ಅಹಂಕಾರಕ್ಕೆ ತನ್ಮಾತ್ರೆಗಳು ಕಾರ್ಯಗಳು, ತನ್ಮಾತ್ರೆಗಳು ಸ್ಕೂಲಭೂತಕ್ಕೆ ಕಾರಣ ಪಂಚಭೂತಗಳೂ ಏಕಾದಶೇಂದ್ರಿಯಗಳೂ ವಿಕಾರವೇ, ಕಾರ್ಯವೇ, ಪ್ರಕೃತಿಯಲ್ಲ, ಪುರುಷನು ಪ್ರಕೃತಿಯೂ ಅಲ್ಲ, ವಿಕೃತಿಯೂ ಅಲ್ಲ ; ಅವನು ಕಾರ್ಯಕಾರಣಗಳಿಗಿಂತ ಭಿನ್ನನು - ಎಂದು ಕಾರಿಕಯ ಅರ್ಥ.RU)

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. ಸ್ವರೇಣ ಏಕಪದತ್ವನಿಶ್ಚಯಾತ್ | ಪ್ರಯೋಗಾನರೇ ಚ ಪಾನಾಂ ತ್ಯಾ ಪಞ್ಞಜನಾನಾಮ್’ (ತೈ. ಸಂ. ೧-೬-೨) ಇತಿ ಐಕಪದ್ಯಕರ್ಯಕವಿಭಕ್ತಿಕಾ ವಗಮಾತ್ | ಸಮಸ್ತತ್ವಾಚ್ಚ ನ ವೀಪ್ಪಾ ಪಞ್ಞ ಪಞ್ಚ ಇತಿ | ನ ಚ ಪಞ್ಚಕದ್ವಯ ಗ್ರಹಣಂ ಪಞ್ಞಪಞ್ಚ ಇತಿ | ನ ಚ ಪಞ್ಚಸಜ್ಜಾಯಾ ಏಕಸ್ಮಾ: ಪಞ್ಚಸಜ್ಜಯಾ ಪರಯಾ ವಿಶೇಷಣಂ ಪಞ್ಞ ಪಞ್ಚರ್ಕಾ ಇತಿ | ಉಪಸರ್ಜನಸ್ಯ ವಿಶೇಷಣೇನ ಅಸಂಯೋಗಾತ್ ! ನನು ಆಪನ್ನಪಞ್ಚಸಜ್ಜಾಕಾ ಜನಾ ಏವ ಪುನಃ ಪಞ್ಚಸಜ್ರಾಯಾ ವಿಶೇಷ್ಯಮಾಣಾಃ ಪಞ್ಚವಿಂಶತಿಃ ಪ್ರತ್ಯೇಷ್ಯನ್ತೇ ಯಥಾ ‘ಪಞ್ಞ ಪಞ್ಚಪೂಲ್ಯ?’ ಇತಿ ಪಞ್ಚವಿಂಶತಿಪೂಲಾಃ ಪ್ರತೀಯನೇ, ತದ್ವತ್ | ನೇತಿ ಬ್ಯೂಮಃ | ಯುಕ್ತಂ ಯತ್ ಪಞ್ಞಪೂಲೀಶಬ್ದಸ್ಯ ಸಮಾಹಾರಾಭಿಪ್ರಾಯಶ್ಚಾತ್ ಕತಿ ?- ಇತಿ ಸತ್ಯಾಂ ಭೇದಾಕಾಚ್ಯಾಯಾಂ ‘ಪಞ್ಞ ಪಞ್ಞಪೂಲ್ಯ?’ ಇತಿ ವಿಶೇಷಣಮ್ | ಇಹ ತು ‘ಪಣ್ಣ ಜನಾಃ’ ಇತಿ ಆದಿತ ಏವ ಭೇದೋಪಾದಾನಾತ್ ಕತಿ ? - ಇತಿ ಅಸತ್ಯಾಂ ಭೇದಾಕಾಷ್ಮಾಯಾಂ ನ ಪ ಪಞ್ಞಜನಾಃ ಇತಿ ವಿಶೇಷಣಂ ಭವೇತ್ |ಭವದಪಿ ಇದರ ವಿಶೇಷಣಂ ಪಞ್ಚಸಜ್ಜಾಯಾ ಏವ ಭವೇತ್ | ತತ್ರ ಚ ಉಕ್ರೋ ದೋಷಃ | ತಸ್ಮಾತ್ ಪಞ್ಞ ಪಞ್ಞಜನಾಃ ಇತಿ ನ ಪಞ್ಚವಿಂಶತಿತತ್ನಾಭಿಪ್ರಾಯಮ್ ||

(ಭಾಷ್ಯಾರ್ಥ) ಇದಕ್ಕೆ (ಪರಿಹಾರವನ್ನು) ಹೇಳುತ್ತೇವೆ. ಸಂಸ್ಕೋಪಸಂಗ್ರಹದಿಂದಲೂ ಪ್ರಧಾನಾದಿಗಳು ಶ್ರುತಿ (ಪ್ರಮಾಣಕ) ವೆಂಬ ಆಶೆಯನ್ನು ಮಾಡಿಕೊಳ್ಳಬಾರದು. ಏಕ ? ಎಂದರೆ ನಾನಾಭಾವವಿರುವದರಿಂದ, ಈ ಇಪ್ಪತೈದು ತತ್ವಗಳು ನಾನಾ (ರೂಪ) ವಾಗಿರುತ್ತವೆಯೇ ಹೊರತು ಇವುಗಳಿಗೆ ಐದಾಗಿ ಸಾಧಾರಣಧರ್ಮವು ಇರುವದಿಲ್ಲ.!

  1. ಕಾರಿಕೆಯಲ್ಲಿರುವ ಇಪ್ಪತೈದು ತತ್ವಗಳನ್ನು ಪ್ರಕೃತಿ, ಮಹತ್ತು ; ಅಹಂಕಾರ, ಎರಡು ತನ್ಮಾತ್ರಗಳು ; ತನ್ಮಾತ್ರಗಳು ಮೂರು, ವಿಕಾರಗಳಲ್ಲಿ ಎರಡು ; ವಿಕಾರಗಳಲ್ಲಿ ಮುಂದಿನ ಐದು (ತೇಜಸ್ಸು, ವಾಯು, ಆಕಾಶ, ಇಂದ್ರಿಯಗಳಲ್ಲಿ ಎರಡು) ; ಮುಂದಿನ ಐದು ಇಂದ್ರಿಯಗಳು ; ಉಳಿದ ನಾಲ್ಕು ಇಂದ್ರಿಯಗಳು, ಪುರುಷ - ಹೀಗೆ ವಿಂಗಡಿಸಿದರೆ ಆಗುವ ಐದು ಗುಂಪುಗಳಲ್ಲಿ ಯಾವದೂಂದು ಗುಂಪನ್ನೂ ಇಂಥ ದ್ರವ್ಯ, ಗುಣ, ಅಥವಾ ಕರ್ಮ ಎಂದು ಮುಂತಾಗಿ ಯಾವದೂಂದು ಸಾಧಾರಣಧರ್ಮದ ಹೆಸರಿನಿಂದಲೂ ಕರೆಯುವದಕ್ಕೆ ಬರುವದಿಲ್ಲ ಎಂದರ್ಥ. ಭಾಮತೀವ್ಯಾಖ್ಯಾನದಲ್ಲಿ (೧) ಸರಜಸ್ತಮೋಗುಣಗಳು, ಮಹದಹಂಕಾರಗಳು ; (೨) ಪ್ರಥಿವ್ಯಪ್ರೇಜೋವಾಯುಫ್ರಾಣಗಳು ; (೩) ರಸನಚಕ್ಕುಸ್ತಕ್ಶೂತ್ರವಾಕ್ಕುಗಳು ; (೪) ಪಾಣಿಪಾದಪಾಯೂಪಸ್ಟಮನಸ್ಸು - ಇವುಗಳಲ್ಲಿ ಸಮಾನಧರ್ಮವಿಲ್ಲವೆಂದು ಬರದಿದ. ರತ್ನಪ್ರಭಾವ್ಯಾಖ್ಯಾನದಲ್ಲಿ ಬೇರೆಯಾಗಿಯೇ ಬರದಿದ.

ಅಧಿ. ೩. ಸೂ. m] ಸಿದ್ಧಾಂತ : ಸಾಂಖ್ಯರ ತತ್ತ್ವಗಳು ಐದೈದಾಗಿಲ್ಲ

೫೮೩

ಹಾಗಿದ್ದರೆ ಇಪ್ಪತೈದರೊಳಗೇ ಬೇರೆಯ ಐದು ಐದು ಸಂಖ್ಯೆಗಳನ್ನು ಸೇರಿಸಿಕೊಳ್ಳ ಬಹುದಾಗಿತ್ತು. ಒಂದೇ ಕಾರಣವಿಲ್ಲದೆ ನಾನಾರೂಪವಾಗಿರುವ (ವಸ್ತುಗಳಲ್ಲಿ) ಎರಡು ಮುಂತಾದ ಸಂಖ್ಯೆಗಳನ್ನು ಸೇರಿಸುವದಿಲ್ಲವಷ್ಟೆ. ಇನ್ನು ‘ಪಂಚ ಸಪ್ತ ಚ ವರ್ಷಾಣಿ ನ ವರ್ಷ ಶತಕ್ರತುಃ” (?) (ಐದೂ ಏಳು ವರ್ಷಗಳವರೆಗೆ ಇಂದ್ರನು ಮಳ ಗರಿಯಲಿಲ್ಲ) ಎಂದು ಹನ್ನೆರಡು ವರ್ಷದ ಅನಾವೃಷ್ಟಿಯನ್ನು ಹೇಳುವರಲ್ಲ, ಹಾಗೆಯೇ ಈ ಇಪ್ಪತೈದು ಸಂಖ್ಯೆಯನ್ನೇ ಅವಯವದ್ವಾರದಿಂದ ಲಕ್ಷಣಾವೃತ್ತಿಯಿಂದ ಹೇಳಿದ - ಎಂದು (ಪೂರ್ವಪಕ್ಷಿಯು) ಹೇಳಬಹುದು. ಅದೂ ಹೊಂದುವದಿಲ್ಲ. (ಏಕೆಂದರೆ) ಈ ಪಕ್ಷದಲ್ಲಿ ಲಕ್ಷಣೆಯನ್ನು ಅನುಸರಿಸಬೇಕಾಗುವದಂಬುದೇ ದೋಷವು.? ಇಲ್ಲಿ ಎರಡನೆಯ ಪಂಚಶಬ್ದವು ಜನಶಬ್ದದೊಡನೆ ‘ಪಞ್ಚ ಜನಾಃ’ ಎಂದು ಸಮಾನವಾಗಿರುತ್ತದೆ ; ಏಕೆಂದರೆ ಪಾರಿಭಾಷಿಕಸ್ವರದಿಂದ (ಇದು) ಒಂದು ಪದವೆಂದು ನಿಶ್ಚಯವಾಗುತ್ತದೆ. “ಪಣ್ಣಾನಾಂ ತ್ವಾ ಪಞ್ಞಜನಾನಾಮ್’ (ತೈ. ಸಂ.

  1. ಒಂದಕ್ಕೊಂದಕ್ಕೆ ಸಮಾನಧರ್ಮವಿಲ್ಲದಿರುವಾಗ ಬೇರೆಬೇರೆಯಾಗಿರುವ ವಸ್ತುಗಳನ್ನು ಎರಡರಡಾಗಿ ಅಥವಾ ಮೂರುಮೂರಾಗಿ, ಅಥವಾ ನಾಲ್ಕುನಾಲ್ಕಾಗಿ ಹೀಗಲ್ಲ ವಿಂಗಡಿಸುವದಕ್ಕೆ ಕಾರಣವೇ ಇಲ್ಲ ಎಂದರ್ಥ.

  2. ಅವಯವದಿಂದ ಅವಯವಿಯನ್ನು ತಿಳಿಸುವದು ಲಕ್ಷಣ. ಮುಖ್ಯಾರ್ಥವು ಹೊಂದು ವಾಗ ಲಕ್ಷಣೆಯನ್ನು ಸ್ವೀಕರಿಸುವದು ಯುಕ್ತವಲ್ಲ.

  3. ಈ ಮಂತ್ರದಲ್ಲಿ ಮೊದಲನೆಯ ಪಂಚಶಬ್ದವು ಆದ್ಯುದಾತ್ತ, ಎರಡನೆಯದು ಸರ್ವಾನುದಾತ್ತ, ಜನಶಬ್ದವು ಅನ್ನೋದಾತ್ತವು. ಆದ್ದರಿಂದ ಎರಡನೆಯ ಪಂಚಶಬ್ದವೂ ಜನಶಬ್ದವೂ ಸೇರಿ ಸಮಾಸವಾಗದಿದ್ದರೆ ಕೊನೆಯ ಅಕಾರವು ಉದಾತ್ತವೂ, ಮಿಕ್ಕದ್ದಲ್ಲವೂ ಅನುದಾತ್ತವೂ ಆಗಲು ಕಾರಣವಿಲ್ಲ ; ಸಮಾಸವು ಮಾತ್ರ ಅಂತೋದಾತ್ತವಾಗುತ್ತದೆ ಎಂಬ ಸೂತ್ರವಿದ. ಯಾವ ವರ್ಣವು ಸ್ವರಿತವೆಂದು ಅಥವಾ ಉದಾತ್ತವೆಂದು ವಿಧಿಸಿದೆಯೋ ಅದನ್ನು ಬಿಟ್ಟು ಮಿಕ್ಕದ್ದಲ್ಲವೂ ಅನುದಾತ್ತವಾಗುವದೆಂದೂ ಸೂತ್ರವಿದೆ. ಶತಪಥಬ್ರಾಹ್ಮಣದ ಸ್ವರವನ್ನು ವಿಧಾನಮಾಡುವ ಭಾಷಿಕ ಎಂಬ ಗ್ರಂಥದಲ್ಲಿ ‘ಸ್ವರಿರ್ತೋನುದಾತ್ತೋ ವಾ’ ಎಂಬ ಸೂತ್ರವಿದ ; ಮಂತ್ರದಶೆಯಲ್ಲಿ ಸ್ವರಿತವಾಗಿ ಅನುದಾತ್ತವಾಗಲಿ ಇದ್ದರೆ ಅದು ಬ್ರಾಹ್ಮಣದಶೆಯಲ್ಲಿ ಉದಾತ್ತವಾಗುತ್ತದೆ ಎಂದು ಅದರ ಅರ್ಥ. ಇದರಿಂದ ಕೊನೆಯ ನಕಾರದ ಮೇಲಿರುವ ಅಕಾರಕ್ಕಿಂತ ಮೊದಲಿರುವ ಅನುದಾತ್ತಗಳಲ್ಲಿ ಬ್ರಾಹ್ಮಣದಲ್ಲಿ ಉದಾತ್ತವಾಗಬೇಕಾಯಿತು. ‘ಉದಾತ್ತ ಮನುದಾತ್ತ ಮನನ್ನಮ್’ ಎಂಬ ಸೂತ್ರದಿಂದ ಅನಂತ್ಯವಾದ ಮತ್ತೊಂದಕ್ಕೆ ಸೇರಿ ಉಚ್ಚರಿಸುವ ಉದಾತ್ತಕ್ಕೆ ಅನುದಾತ್ತವಾಗುವದಾದ್ದರಿಂದ ಆಕಾಶಶ್ಚ ಎಂಬದರೊಡನೆ ಸೇರಿ ಉಚ್ಚರಿಸುವದರಿಂದ ಉದಾತ್ತವಾದ ಆಕಾರವು ಅನುದಾತ್ತವಾಯಿತು. ಅಂತೋದಾತ್ತಸ್ವರವೇ ಪಾರಿಭಾಷಿಕವು ಎಂಬ ವ್ಯಾಖ್ಯಾನ ಸರಿಯಲ್ಲ. ಈ ಪಾರಿಭಾಷಿಕಸ್ವರದಿಂದ ಇದು ಒಂದೇ ಪದವೆಂದು ನಿಶ್ಚಯವಾಗುತ್ತದೆ ನ್ಯಾನಿI.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

೧-೬-೨) (ಯಂತ್ರದಂತಿರುವ ಶರೀರವು ಇಹಪರಭೋಗಸಮರ್ಥವಾಗಿರಲೆಂದು) ‘‘ಐದು ಮಂದಿ ಪಂಚಜನ (ದೇವತೆಗಳಿಗಾಗಿ) ನಿನ್ನನ್ನು (ಸ್ವೀಕರಿಸುತ್ತೇನೆ)’’ - ಎಂಬ ಮತ್ತೊಂದು ಪ್ರಯೋಗದಲ್ಲಿ (ಈ ಎರಡೂ ಸೇರಿ) ಒಂದೇ ಪದವಾಗಿ ಒಂದೇ ಸ್ವರ ವಾಗಿ ಒಂದೇ ವಿಭಕ್ತಿಯುಳ್ಳವಾಗಿರುವವೆಂದು ಗೊತ್ತಾಗಿರುವದರಿಂದಲೂ (ಹೀಗನ್ನ ಬೇಕು. ಹೀಗ) ಸಮಸ್ತವಾಗಿರುವದರಿಂದ ಐದು ಐದು ಎಂದು ವೀಪ್ಪೆಯಾಗುವದಿಲ್ಲ. ಐದು ಐದು - ಎಂದು ಎರಡು ಪಂಚಕಗಳನ್ನೂ (ಇಲ್ಲಿ ) ತಗೆದುಕೊಳ್ಳಲಾಗುವದಿಲ್ಲ. (ಇವುಗಳಲ್ಲಿ) ಒಂದು ಪಂಚಸಂಖ್ಯೆಗೆ ಮತ್ತೊಂದು ಪಂಚಸಂಖ್ಯೆಯನ್ನು ವಿಶೇಷಣ ವನ್ನು ಮಾಡಿ ಐದು ಪಂಚಕಗಳು ಎಂದು (ಅರ್ಥವನ್ನು ಮಾಡುವದಕ್ಕೂ ಬರುವ)ದಿಲ್ಲ ; ಏಕೆಂದರ (ಸಮಾಸದಲ್ಲಿ) ಉಪಸರ್ಜನವಾಗಿರುವ (ಪಂಚಶಬ್ದವು ಪಂಚ) ಎಂಬ ವಿಶೇಷಣದೊಡನೆ ಕೂಡುವಹಾಗಿಲ್ಲ.. ಐದು ಸಂಖ್ಯೆಯವರಾದ ಮೇಲೆ (ಅದೇ) ಜನರೇ ಪಂಚಸಂಖ್ಯೆ ಎಂಬ ವಿಶೇಷಣದಿಂದೊಡಗೂಡಿದರೆ ಇಪ್ಪತೈದು ಎಂಬ ಅರಿವಾಗಬಹುದಲ್ಲ ! ಹೇಗೆ ಐದು ಪಂಚಪೂಲಿಗಳು ಎಂದರೆ ಇಪ್ಪತೈದು ಎಂಬ ಸಿವುಡುಗಳ ಜ್ಞಾನವಾಗುವದೋ ಹಾಗೆಯೇ (ಆಗಬಹುದಲ್ಲ) ! ಎಂದರೆ (ಆಗಲಾರದು ಎನ್ನುತ್ತೇವೆ. ಪಂಚಪೂಲೀಶಬ್ದವು ಸಮಾಹಾರವನ್ನು ತಿಳಿಸುವದಕ್ಕೆ (ಬಂದಿರು)ವದರಿಂದ ಎಷ್ಟು ಎಂಬ ಭೇದದ ಆಕಾಂಕ್ಷೆಯುಂಟಾಗಲಾಗಿ, ‘ಐದು ಪಂಚಪೂಲಿಗಳು’ ಎಂದು ವಿಶೇಷಣವು (ಬರುವ)ದಂಬುದು ಯುಕ್ತವು. ಆದರ ಇಲ್ಲಿ ಐದು ಜನರು ಎಂದು ಮೊದಲೇ - ಭೇದವನ್ನು ತೆಗೆದುಕೊಂಡು (ಹೇಳಿರು)ವದರಿಂದ ಮತ್ತೆ ಭೇದಾಕಾಂಕ್ಷೆಯುಂಟಾಗುವದಿಲ್ಲವಾದ್ದರಿಂದ ಐದು ಐದು ಜನರು ಎಂದು ವಿಶೇಷಣವು ಆಗಲಾರದು. ಈ ವಿಶೇಷಣವು ಆದರೂ ಐದು ಎಂಬ ಸಂಖ್ಯೆಗೇ ಆದೀತು ; ಆ (ಪಕ್ಷ)ದಲ್ಲಿ ದೋಷವನ್ನು (ಆಗಲೇ) ಹೇಳಿದ್ದಾಗಿದೆ. ಆದ್ದರಿಂದ ‘ವಞ್ಞ ವಞ್ಞಜನಾಃ’ ಎಂಬುದು ಇಪ್ಪತೈದು ತತ್ತ್ವಗಳನ್ನು ತಿಳಿಸುವ ಅಭಿಪ್ರಾಯದ ವಾಕ್ಯವಲ್ಲ.

ಸಾಂಖ್ಯನು ಇಪ್ಪತೈದಕ್ಕಿಂತ ಹೆಚ್ಚು ತತ್ತ್ವಗಳನ್ನು

ಒಪ್ಪಬೇಕಾಗುತ್ತದೆ

(ಭಾಷ್ಯ) ೩೬೦. ಅತಿರೇಕಾಚ್ಚ ನ ಪಞ್ಚವಿಂಶತಿತತ್ನಾಭಿಪ್ರಾಯಮ್ | ಅತಿರೇಕೋ ಹಿ ಭವತಿ ಆತ್ಮಾಕಾಶಾಭ್ಯಾಂ ಪಞ್ಚವಿಂಶತಿಸಜ್ಜಾಯಾಃ | ಆತ್ಮಾ ತಾವತ್ ಇಹ ಪ್ರತಿಷ್ಠಾಂ

  1. ಯಜಮಾನನು ಆಜ್ಯವನ್ನು ಕುರಿತು ಹೇಳುವ ಮಂತ್ರವಿದು.

೫೮೫

(

.

ಅಧಿ. ೩. ಸೂ. M] ‘ಪಞ್ಞ ಪಞ್ಞಜನಾಃ’ ಎಂಬುದರ ಸರಿಯಾದ ಅರ್ಥ ಪ್ರತಿ ಆಧಾರನ ನಿರ್ದಿಷ್ಟ: | ಯಸ್ಮಿನ್ ಇತಿ ಸಪ್ತಮೀಸೂಚಿತಸ್ಯ ‘ತಮೇವ ಮನ್ಯ ಆತ್ಮಾನಮ್’’ ಇತಿ ಆತ್ಮನ ಅನುಕರ್ಷಣಾತ್ | ಆತ್ಮಾ ಚ ಚೇತನಃ ಪುರುಷಃ | ಸ ಚ ಪಞ್ಚವಿಂಶತ್‌ ಅನ್ಯರ್ಗತ ಏವ ಇತಿ ನ ತಸ್ಮವ ಆಧಾರತ್ವಮ್ ಆಧೇಯತ್ವಂ ಚ ಯುಜ್ಯತೇ | ಅರ್ಥಾನ್ನರಪರಿಗ್ರಹೇ ಚ ತತ್ಸಜ್ಞಾತಿರೇಕಃ ಸಿದ್ಧಾಂತವಿರುದ್ಧ: ಪ್ರಸಜೇತ | ತಥಾ ‘‘ಆಕಾಶಶ್ಚ ಪ್ರತಿಷ್ಠಿತಃ” ಇತಿ ಆಕಾಶಸ್ಕಾಪಿ ಪಞ್ಚವಿಂಶತೆ ಅನ್ಯರ್ಗತಸ್ಯ ನ ಪೃಥರುಪಾದಾನಂ ನ್ಯಾಯ್ಯಮ್ | ಅರ್ಥಾನರಪರಿಗ್ರಹೇ ಚ ಉಕ್ತಂ ದೂಷಣಮ್ 11

(ಭಾಷ್ಯಾರ್ಥ) ಹೆಚ್ಚಾಗುವದರಿಂದಲೂ (ಈ ವಾಕ್ಯವು) ಇಪ್ಪತೈದು ತತ್ತ್ವಗಳಲ್ಲಿ ಅಭಿಪ್ರಾಯ ವುಳ್ಳದ್ದಲ್ಲ. ಹೇಗೆಂದರೆ ಆತ್ಮಾಕಾಶಗಳು (ಸೇರಿದರೆ) ಇಪ್ಪತೈದು ಸಂಖ್ಯೆಗಿಂತ ಹೆಚ್ಚಾಗುತ್ತದೆ. ಮೊದಲನೆಯದಾಗಿ ಆತ್ಮನು (ಪಂಚಜನರ ಮತ್ತು ಆಕಾಶದ) ಪ್ರತಿಷ್ಠೆಗೆ ಆಧಾರನೆಂದು ತಿಳಿಸಿದೆ. ಏಕೆಂದರೆ ‘ಯಾವನಲ್ಲಿ’ ಎಂದು ಸಪ್ತಮೀ ಸೂಚಿತವಾದದ್ದನ್ನು “ಅವನನ್ನೇ ಆತ್ಮನೆಂದು ಎಣಿಸುತ್ತೇನೆ’’ ಎಂದು ಆತ್ಮನೆಂದು ಎಳೆದುಕೊಂಡು (ಹೇಳಿದೆ). ಆತ್ಮನೆಂದರೆ ಚೇತನನಾದ ಪುರುಷನು ; ಆ (ಪುರುಷನು ಸಾಂಖ್ಯರ) ಇಪ್ಪತೈದು (ತತ್ತ್ವಗಳಲ್ಲಿ) ಸೇರಿಕೊಂಡೇ ಇರುತ್ತಾನಾದ್ದರಿಂದ ಅವನಿಗೆ ಆಧಾರತ್ವವೂ ಆಧೇಯತ್ವವೂ ಹೊಂದುವಹಾಗಿಲ್ಲ. (ಆತ್ಮನು) ಬೇರೆಯ ಪದಾರ್ಥ ಎಂದು ಹಿಡಿದರ ತತ್ತ್ವಗಳು ಸಂಖ್ಯೆಗಿಂತ ಹೆಚ್ಚಾಗಿ ಸಿದ್ಧಾಂತವಿರುದ್ಧವಾಗುವದು. ಇದರಂತ “ಆಕಾಶವೂ ಪ್ರತಿಷ್ಠಿತವಾಗಿದೆ’ ಎಂದು ಇಪ್ಪತೈದುತತ್ತ್ವಗಳಲ್ಲಿಯೇ ಸೇರಿರುವ ಆಕಾಶವನ್ನೂ ಬೇರೆಯಾಗಿ ತೆಗೆದುಕೊಂಡಿರುವದು ನ್ಯಾಯವಲ್ಲ. (ಅದು) ಬೇರಯ ಪದಾರ್ಥವೇ ಎಂದರೆ ದೂಷಣವನ್ನು (ಆಗಲೆ) ಹೇಳಿದ್ದಾಗಿದೆ.’

‘ಪಞ್ಚ ಪಞ್ಞಜನಾಃ’ ಎಂಬುದರ ಸರಿಯಾದ ಅರ್ಥ

(ಭಾಷ್ಯ) ೩೬೧. ಕಥಂ ಚ ಸಚ್ಛಾಮಾಗ್ರಶ್ರವಣೇ ಸತಿ ಅಶ್ರುತಾನಾಂ ಪಞ್ಚವಿಂಶತಿ ತತ್ಯಾನಾಮ್ ಉಪಸಂಗ್ರಹಃ ಪ್ರತೀಯೇತ ? ಜನಶಬ್ದಸ್ಯ ತತ್ಕಷು ಅರೂಢತ್ವಾತ್ | ಅರ್ಥಾನ್ಯರೋಪಸಂಗ್ರಹಣೆಪಿ ಸಜ್ಯೋಪಪಃ | ಕಥಂ ತರ್ಹಿ ‘ಪಞ್ಚ ಪಞ್ಞಜನಾ’

  1. ಇಪ್ಪತೈದಕ್ಕಿಂತ ಹೆಚ್ಚು ತತ್ತ್ವಗಳಂದಾಗಿ ಸಿದ್ಧಾಂತಕ್ಕೆ ವಿರುದ್ಧವಾಗುವದು ಎಂಬ ದೋಷವನ್ನು ಆಗಲೇ ಹೇಳಿದ್ದಾಗಿದೆ ಎಂದರ್ಥ.

೫೮೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ.೪.

ಇತಿ ? ಉಚ್ಯತೇ | “ದಿಕ್ಕ ಸಂಜ್ಞಾಯಾಮ್’ (ಪಾ, ೨-೧-೫೦) ಇತಿ ವಿಶೇಷಣಸ್ಮರಣಾತ್ ಸಂಜ್ಞಾಯಾಮೇವ ಪಶಬ್ದಸ್ಯ ಜನಶಬ್ದನ ಸಮಾಸಃ | ತತಶ್ಚ ರೂಢತ್ವಾಭಿಪ್ರಾಯವ ಕೇಚಿತ್ ಪಞ್ಞಜನಾ ನಾಮ ವಿವಕ್ಷ ನ ಸಾಕ್ಷ್ಮಿ ತತ್ವಾಭಿಪ್ರಾಯಣ 1 ತೇ ಕತಿ ? ಇತ್ಯಸ್ಯಾಮ್ ಆಕಾಸ್ಮಾಯಾಂ ಪುನಃ ‘ಪಞ್ಞ’ ಇತಿ ಪ್ರಯುಜ್ಯತೇ | ಪಞ್ಞಜನಾ ನಾಮ ಯ ಕೇಚಿತ್ ತೇ ಚ ಪಣ್ಣವ ಇತ್ಯರ್ಥ: | ಸಪ್ತರ್ಷಯಃ ಸಪ್ತ ಇತಿ ಯಥಾ ||

(ಭಾಷ್ಯಾರ್ಥ) ಇದಲ್ಲದೆ ಬರಿಯ ಸಂಖ್ಯೆಯು ಶ್ರುತಿಯಲ್ಲಿರುವಲ್ಲಿ ಶ್ರುತಿಯಲ್ಲಿಲ್ಲದ ಇಪ್ಪತೈದು ತತ್ತ್ವಗಳನ್ನು (ಇಲ್ಲಿ) ಉಪಸಂಗ್ರಹಿಸಿದ (ಎಂದು) ಹೇಗತಾನೆ ತಿಳಿಯ ಲಾದೀತು ? ಏಕೆಂದರೆ ಜನಶಬ್ದವು ತತ್ತ್ವಗಳಲ್ಲಿ ರೂಢವಲ್ಲ, ಮತ್ತ (ಯಾವದಾದರೂ) ಬೇರೆ ಪದಾರ್ಥಗಳನ್ನು ಉಪಸಂಗ್ರಹಿಸಿದ (ಎಂದರೂ ಈ) ಸಂಖ್ಯೆಯು ಹೊಂದುತ್ತದೆ.

(ಸಾಂಖ್ಯ) :- ಹಾಗಾದರ ‘ಪಂಚ ಪಂಚಜನಾಃ’ ಎಂದು (ಇಲ್ಲಿ ಪ್ರಯೋಗಿಸಿರುವದು) ಹೇಗೆ ?

(ವೇದಾಂತಿ) :- ಹೇಳುತ್ತೇವೆ (ಕೇಳು).“ದಿಕೃಜ್ ಸಂಜ್ಞಾಯಾಮ್’’ (ಪಾ. ಸೂ. ೨-೧-೫೦)’ ಎಂದು ವಿಶೇಷಣವು ಸ್ಮೃತಿಯಲ್ಲಿರುವದರಿಂದ ಸಂಜ್ಞೆಯನ್ನು ತಿಳಿಸುವದಕ್ಕೆ ಪಂಚಶಬ್ದವು ಜನಶಬ್ದದೊಡನೆ ಸಮಾಸ (ವಾಗಿರುತ್ತದೆ). ಆದ್ದರಿಂದ (ಶಬ್ದವು) ರೂಢವೆಂಬ ಅಭಿಪ್ರಾಯದಿಂದಲೇ ‘ಪಂಚಜನರು’ ಎಂಬ ಹೆಸರಿನಿಂದ ಯಾರನ್ನೂ (ಇಲ್ಲಿ ) ತಿಳಿಸುವದಕ್ಕೆ (ಬಂದಿದೆಯೇ ಹೊರತು) ಸಾಂಖ್ಯರ ತತ್ತ್ವಗಳನ್ನು (ತಿಳಿಸಬೇಕೆಂಬ) ಅಭಿಪ್ರಾಯದಿಂದಲ್ಲ. ಅವರು ಎಷ್ಟು (ಮಂದಿ) ? ಎಂಬೀ ಆಕಾಂಕ್ಷೆಯುಂಟಾಗಲಾಗಿ ಮತ್ತ ‘ಪಂಚ’ (ಎಂಬ ಮಾತನ್ನು) ಪ್ರಯೋಗಿಸಿದ. ಪಂಚಜನರಂಬವರು ಯಾರೇ ಆಗಲಿ, ಅವರು ಐವರೇ ಎಂದರ್ಥ. ‘ಸಪ್ತರ್ಷಿಗಳು ಏಳು ಮಂದಿ’ ಎಂಬಂತೆಯೇ (ಇದು).

ಪ್ರಾಣಾದಯೋ ವಾಕ್ಯಶೇಷಾತ್ ||೧೨|| ೧೨. ಪ್ರಾಣಾದಿಗಳೇ (ಪಂಚಜನರು) ; ವಾಕ್ಯಶೇಷದಿಂದ (ಇದು ಗೊತ್ತಾಗುತ್ತದೆ).

  1. ದಿಗ್ವಾಚಕಗಳೂ ಸಂಖ್ಯಾವಾಚಕಗಳೂ ವಿಶೇಷಣವಿಶೇಷ್ಯಭಾವದಿಂದ ಸಮಾಸವಾದರೆ ಸಂಜ್ಞೆ (ಸಂಕೇತನಾಮ)ವಾಗುವ ಸಂದರ್ಭದಲ್ಲಿಯೇ ಎಂದು ಸೂತ್ರದ ಅಭಿಪ್ರಾಯವು.

ಅಧಿ. ೩. ಸೂ. ೧೨]

ಪಂಚಜನರೆಂದರೆ ಯಾರು ?

೫೮೭

ಪಂಚಜನರೆಂದರೆ ಯಾರು ?

(ಭಾಷ್ಯ) ೩೬೨. ಕೇ ಪುನಸ್ಕ ಪಞ್ಞಜನಾ ನಾಮ ಇತಿ ? ತದುಚ್ಯತೇ - “ಯಸ್ಮಿನ್ ಪಞ್ಞ ಪಞ್ಞಜನಾಃ” ಇತ್ಯತ್ರ ಉತ್ತರಸ್ಮಿನ್ ಮೆನೇ ಬ್ರಹ್ಮಸ್ವರೂಪನಿರೂಪಣಾಯ ಪ್ರಾಣಾದಯಃ ಪ ನಿರ್ದಿಷ್ಮಾ: ‘ಪ್ರಾಣಸ್ಯ ಪ್ರಾಣಮುತ ಚಕ್ಷುಷಶ್ಚಕ್ಷುರುತ ಪ್ರೋತ್ರಸ್ಯ ಶ್ಲೋತ್ರಮನ್ನಸ್ಕಾನ್ನಂ ಮನಸೋ ಯೇ ಮನೋ ವಿದುಃ” (ಬೃ. ಮಾ. ೪ ೪-೧೮) ಇತಿ | ತೇತ್ರ ವಾಕ್ಯಶೇಷಗತಾ ಸಂವಿಧಾನಾತ್ ಪಞ್ಞಜನಾ ವಿವಕ್ಷ | ಕಥಂ ಪುನಃ ಪ್ರಾಣಾದಿಷು ಜನಶಬ್ದ ಪ್ರಯೋಗಃ ?. ತತ್ಕಷು ವಾ ಕಥಂ ಜನಶಬ್ದ ಪ್ರಯೋಗಃ ? ಸಮಾನೇ ತು ಪ್ರಸಿದ್ಧತಿಕ್ರಮ್ ವಾಕ್ಯಶೇಷವಶಾತ್ ಪ್ರಾಣಾದಯ ಏವ ಗ್ರಹೀತವ್ಯಾ ಭವನ್ತಿ | ಜನಸಂಬನ್ಸಾಚ್ಚ ಪ್ರಾಣಾದಯೋ ಜನಶಬ್ದಭಾಜೋ ಭವನ್ತಿ | ಜನವಚನಶ್ಚ ಪುರುಷಶಬ್ದಃ ಪ್ರಾಣೇಷು ಪ್ರಯುಕ್ತ “ತೇ ವಾ ಏತೇ ಪಞ್ಞ ಬ್ರಹ್ಮಪುರುಷಾಃ’ (ಛಾಂ. ೩-೧೩-೬) ಇತ್ಯತ್ರ ! ‘‘ಪ್ರಾಣೋ ಹ ಪಿತಾ ಪ್ರಾಣೋ ಹ ಮಾತಾ’ (ಛಾಂ. ೭-೧೫-೧) ಇತ್ಯಾದಿ ಚ ಬ್ರಾಹ್ಮಣಮ್ | ಸಮಾಸಬಲಾಚ್ಚ ಸಮುದಾಯಸ್ಯ ರೂಢತ್ವಮ್ ಅವಿರುದ್ಧ ಮ್ | ಕಥಂ ಪುನಃ ಅಸತಿ ಪ್ರಥಮಪ್ರಯೋಗ ರೂಢಿಃ ಶಕ್ಯಾ ಆಶ್ರಯಿತುಮ್ ? ಶಕ್ಕಾ ಉದ್ದಿದಾದಿವತ್ ಇತ್ಯಾಹ | ಪ್ರಸಿದ್ಧಾರ್ಥ ಸಂವಿಧಾನೇ ಹಿ ಅಪ್ರಸಿದ್ಧಾರ್ಥಃ ಶಬ್ದಃ ಪ್ರಯುಜ್ಯಮಾನಃ ಸಮಭಿವ್ಯಾಹಾರಾತ್ ತದ್ವಿಷಯೋ ನಿಯಮೃತೇ 1 ಯಥಾ “ಉಬ್ಬಿದಾ ಯಜೇತ”, “ಯೂಪಂ ಛಿನ”, “ವೇದಿಂ ಕರೋತಿ’’ ಇತಿ | ತಥಾ ಅಯಮಪಿ ಪಞ್ಞಜನಶಬ್ದಃ ಸಮಾಸಾನ್ಸಾಖ್ಯಾನಾತ್ ಅವಗತಸಂಜ್ಞಾ ಭಾವಃ ಸಂಜ್ಞಾ ಕಾಜ್ ವಾಕ್ಯಶೇಷಸಮಭಿವ್ಯಾಹೃತೇಷು ಪ್ರಾಣಾದಿಷು ವರ್ತಿಷ್ಯತೇ ||

(ಭಾಷ್ಯಾರ್ಥ) ‘ಹಾಗಾದರೆ ಆ ಪಂಚಜನರೆಂಬವರು ಯಾರು ? ಎಂದರೆ (ಸೂತ್ರಕಾರರು) ಹೇಳುತ್ತಾರೆ : “ಯಸ್ಮಿನ್ ಪಣ್ಯ ಪಞ್ಞಜನಾಃ’ ಎಂಬೀ (ವಾಕ್ಯದ) ಮುಂದಿನ ಮಂತ್ರದಲ್ಲಿ ಬ್ರಹ್ಮಸ್ವರೂಪವನ್ನು ಗೊತ್ತುಪಡಿಸುವದಕ್ಕಾಗಿ ಪ್ರಾಣಕ್ಕೆ ಪ್ರಾಣವು, ಚಕ್ಷುಸ್ಸಿಗೆ ಚಕ್ಷುಸ್ಸು, ಮತ್ತು ಶೂತ್ರಕ್ಕೆ ಪ್ರೋತ್ರವು, ಅನ್ನಕ್ಕೆ ಅನ್ನವು, ಮನಸ್ಸಿಗೆ ಮನಸ್ಸು - ಎಂದು ಯಾರು ಅರಿಯುವರೋ…’ (ಬೃ. ಮಾ. ೪-೪-೧೮) ಎಂದು ಪ್ರಾಣವೇ ಮುಂತಾದ ಐದನ್ನು ಹೇಳಿರುತ್ತದೆ. ವಾಕ್ಯಶೇಷದಲ್ಲಿರುವ ಆ (ಪ್ರಾಣಾದಿ ಗಳ) ಹತ್ತಿರವಿರುವದರಿಂದ ಇಲ್ಲಿ ಪಂಚಜನರೆಂದು ವಿವಕ್ಷಿತವಾಗಿರುತ್ತವೆ.

preses

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. * (ಆಕ್ಷೇಪ) :- ಆದರೆ ಪ್ರಾಣಾದಿಗಳಲ್ಲಿ ಜನಶಬ್ದವನ್ನು ’ ಪ್ರಯೋಗಿಸಿರುವದು ಹೇಗ (ಸರಿ) ?

(ಪರಿಹಾರ) :- ತತ್ಯಗಳಲ್ಲಾದರೂ ಜನಶಬ್ದವನ್ನು ಹೇಗೆ ಪ್ರಯೋಗಿ (ಸಿದೆ ಎನ್ನುವಿರಿ) ? ಪ್ರಸಿದ್ಧಿಯನ್ನು ಮೀರುವದು (ಎರಡು ಪಕ್ಷಕ್ಕೂ) ಸಮಾನವಾಗಿರುವಲ್ಲಿ

ವಾಕ್ಯಶೇಷವಶದಿಂದ ಪ್ರಾಣಾದಿಗಳನ್ನೇ ಗ್ರಹಿಸಬೇಕಾಗುತ್ತದೆ. ಜನರಿಗೆ ಸಂಬಂಧ ಪಟ್ಟಿರುವದರಿಂದಲೂ ಪ್ರಾಣಾದಿಗಳು ಜನಶಬ್ದಕ್ಕೆ ತಕ್ಕವಾಗಿರುತ್ತವೆ. ಜನರನ್ನು ಹೇಳುವ ಪುರುಷಶಬ್ದವನ್ನು “ಆ ಇವರೇ ಐವರು ಬ್ರಹ್ಮಪುರುಷರು’ (ಛಾಂ. ೩-೧೩ ೬) ಎಂಬಲ್ಲಿ ಪ್ರಾಣಗಳಲ್ಲಿ ಪ್ರಯೋಗಿಸಿರುತ್ತದೆ. “ಪ್ರಾಣವೇ ತಂದೆ, ಪ್ರಾಣವೇ ತಾಯಿ’ (ಛಾಂ. ೭-೧೫-೧) ಎಂದು ಮುಂತಾಗಿ (ಛಾಂದೋಗ್ಯ) ಬ್ರಾಹ್ಮಣ (ವಾಕ್ಯವೂ ಇದೆ). ಸಮಾಸಬಲದಿಂದ ಒಟ್ಟು (ಪದವು ಪ್ರಾಣಾದಿಗಳಲ್ಲಿ) ರೂಢ ವಾಗಿರುವದೂ ವಿರುದ್ಧವಲ್ಲ.”

(ಆಕ್ಷೇಪ) :- ಮೊದಲಿನ ಪ್ರಯೋಗವಿಲ್ಲದಿರುವಾಗ ರೂಢಿಯನ್ನು ಆಶ್ರಯಿಸುವದು ಹೇಗೆ ಸಾಧ್ಯ (ವಾದೀತು) ?

(ಪರಿಹಾರ) :- ಉಬ್ಬಿದಾದಿಗಳಂತ (ರೂಢಿಯನ್ನು ಆಶ್ರಯಿಸಬಹುದು) ಎನ್ನುತ್ತಾನೆ, (ಸಿದ್ಧಾಂತಿ). ‘ಉಬ್ಬಿದಾ ಯಜೇತ” (ಉದ್ದಿನಿಂದ ಯಾಗ ಮಾಡಬೇಕು), “ಯೂಪಂ ಛಿನ’’ (ಯೂಪವನ್ನು ಕತ್ತರಿಸುತ್ತಾನ), “ವೇದಿಂ ಕರೋತಿ” (ವೇದಿಯನ್ನು ಮಾಡುತ್ತಾನ)- ಎಂಬಂತ ಪ್ರಸಿದ್ಧವಾದ ಅರ್ಥದ (ಶಬ್ದದ) ಹತ್ತಿರ ಅಪ್ರಸಿದ್ಧವಾದ ಅರ್ಥವುಳ್ಳ ಶಬ್ದವನ್ನು ಪ್ರಯೋಗಮಾಡಿದರೆ, (ಎರಡನ್ನೂ) ಜೊತೆಯಲ್ಲಿ ಹೇಳಿದ್ದರಿಂದ ಆ ವಿಷಯದ್ದೆಂದು ಗೊತ್ತಾಗುತ್ತದೆ. ಇದರಂತೆ ಈ ಪಂಚಜನಶಬ್ದವೂ ಸಮಾಸವನ್ನು (ವ್ಯಾಕರಣದಲ್ಲಿ) ಹೇಳಿರುವದರಿಂದ

  1. ಪಂಚಜನಶಬ್ದವನ್ನು ಅಥವಾ ಪಂಚಜನ ಎಂಬ ಮಾತಿನಲ್ಲಿರುವ ಜನಶಬ್ದವನ್ನು ಪ್ರಾಣಾದಿಗಳನ್ನು ಹೇಳುವದಕ್ಕೆ ಉಪಯೋಗಿಸುವದು ಸರಿಯಲ್ಲ ; ಏಕೆಂದರೆ ಪ್ರಾಣಾದಿಗಳು ಜನರಲ್ಲ ಎಂದು ಆಕ್ಷೇಪ.

  2. ಸಮಾಸವು ಒಂದಾನೊಂದು ಸಂಕೇತನಾಮವನ್ನು ಹೇಳುತ್ತದೆ ಎಂದು ಗೊತ್ತಾಗಿರುವದರಿಂದ ಯೌಗಿಕಾರ್ಥವನ್ನು ಇಟ್ಟುಕೊಂಡು ಪ್ರಧಾನಾದಿಗಳೆಂಬ ಅರ್ಥವನ್ನು ಮಾಡುವದಕ್ಕೆ ಬರುವದಿಲ್ಲ ; ಅದನ್ನು ಸಪ್ತರ್ಷಿ ಮುಂತಾದ ರೂಢನಾಮವಂದೇ ಇಟ್ಟು ಕೂಳ್ಳಬೇಕು.

  3. ಲೋಕದಲ್ಲಿ ರೂಢಿಯಿಲ್ಲದಿದ್ದರೂ ವೇದದಲ್ಲಿ ಅದನ್ನು ರೂಢನಾಮವಾಗಿ ಉಪಯೋಗಿಸಬಹುದು ಎಂದು ಭಾವ.

  4. ಈ ವಾಕ್ಯಗಳು ಎಲ್ಲಿ ಪ್ರಯೋಗವಾಗಿವೆಯೋ ತಿಳಿಯದು.

ಅಧಿ, ೩. ಸೂ. ೧೨] ಪಞ್ಞಜನಾ ಎಂಬ ಮಾತಿಗೆ ಬೇರೆಯ ಅರ್ಥಗಳು

MESE

(ಇದು) ಸಂಜ್ಞೆಯಂದು ನಿಶ್ಚಯವಾಗಲಾಗಿ (ಇದಕ್ಕೆ) ಸಂಜಿ (ಯಾವದೆಂಬ) ಆಕಾಂಕ್ಷೆಯುಂಟಾಗಲು ವಾಕ್ಯಶೇಷದಲ್ಲಿ ಜೊತೆಯಲ್ಲಿ ಹೇಳಿರುವ ಪ್ರಾಣಾದಿಗಳಲ್ಲಿ ವೃತ್ತಿಯುಳ್ಳದ್ದಾಗಬಹುದು.

ಪಞ್ಞಜನಾ ಎಂಬ ಮಾತಿಗೆ ಬೇರೆಯ ಅರ್ಥಗಳು

(ಭಾಷ್ಯ) ೩೬೩. ಕೃಶ್ಚಿತ್ತು ದೇವಾಃ, ಪಿತರಃ, ಗನ್ಗರ್ವಾ, ಅಸುರಾಃ, ರಕ್ಷಾಂಸಿ ಚ ಪಞ್ಞ ಪಞ್ಞಜನಾ ವ್ಯಾಖ್ಯಾತಾಃ । ಅನ್ಯಶ್ಚ ಚತ್ವಾರೂ ವರ್ಣಾಃ ನಿಷಾದಪಞ್ಚರ್ಮಾ ಪರಿಗೃಹೀತಾಃ | ಕ್ವಚಿಚ್ಚ “ಯತ್ ಪಾಞ್ಞಜನ್ಯಯಾ ವಿಶಾ’ (ಋ. ಸಂ. ೮-೬೩-೭) ಇತಿ ಪ್ರಜಾಪರಃ ಪ್ರಯೋಗಃ ಪಞ್ಞಜನಶಬ್ದಸ್ಯ ದೃಶ್ಯತೇ | ತತ್ಪರಿಗ್ರಹಪಿ ಇಹ ನ ಕಶ್ಚಿತ್ ವಿರೋಧ: 1 ಆಚಾರ್ಯಸ್ತು ನ ಪಞ್ಚವಿಂಶತೇಸ್ತತ್ಯಾನಾಮ್ ಇಹ ಪ್ರತೀತಿರಸ್ತಿ ಇತ್ತ್ವಂಪರತಯಾ ‘‘ಪ್ರಾಣಾದಯೋ ವಾಕ್ಯಶೇಷಾತ್’ ಇತಿ ಜಗಾದ ||

(ಭಾಷ್ಯಾರ್ಥ) ಆದರೆ ಕೆಲವರು ದೇವತೆಗಳು, ಪಿತೃಗಳು, ಗಂಧರ್ವರು, ಅಸುರರು, ರಾಕ್ಷಸರು - ಎಂಬವರು ಐವರು ಪಂಚಜನರು ಎಂದು ವಿವರಿಸಿರುತ್ತಾರೆ. ಮತ್ತೆ ಕೆಲವರು ನಾಲ್ಕು ವರ್ಣದವರು, ನಿಷಾದನೆಂಬ ಐದನೆಯವನು’ (ಇವರನ್ನು ಪಂಚಜನರೆಂದು) ಹಿಡಿ ದಿರುತ್ತಾರೆ. ಒಂದು ಕಡೆಯಲ್ಲಿ ಪುರುಷರೂಪವಾದ ಪಾಂಚಜನ್ಯರಿಂದ (ಘೋಷಗಳು ಸೃಷ್ಟವಾದವು)” (ಋ. ಸಂ. ೮-೬೩-೭) ಎಂದು ಪಂಚಜನಶಬ್ದವನ್ನು ಪ್ರಜಾಪರ ವಾಗಿ (ಪ್ರಯೋಗಿಸಿರುವದು) ಕಾಣಬರುತ್ತದೆ ; ಅದನ್ನು ತೆಗೆದುಕೊಂಡರೂ ಇಲ್ಲಿ ಯಾವ ವಿರೋಧವೂ ಇರುವದಿಲ್ಲ. ಆದರೆ (ಸೂತ್ರಕಾರರಾದ) ಆಚಾರ್ಯರು ಇಲ್ಲಿ ಇಪ್ಪತೈದು ತತ್ತ್ವಗಳೆಂಬ ಅರಿವು ಆಗುವದಿಲ್ಲ ಎಂಬದರಲ್ಲಿ ತಾತ್ಪರ್ಯದಿಂದ ‘ಪ್ರಾಣಾದಯೋ ವಾಕ್ಯಶೇಷಾತ್’ ಎಂದು ಹೇಳಿರುತ್ತಾರೆ.

  1. ಇಲ್ಲಿ ಉದಾಹರಿಸಿರುವ ಪಕ್ಷಗಳರಡೂ ಕಲವರು ಆಚಾರ್ಯರವಾದರೂ ಅವು ಸರಿಯಲ್ಲ ; ಪ್ರಾಣಾದಿಗಳೇ ಪಂಚಜನರು - ಎಂದು ಭಾವತೀವ್ಯಾಖ್ಯಾನದಲ್ಲಿದೆ. ಆದರೆ ಪಂಚಜನಶಬ್ದದ ಅರ್ಥದ ವಿಷಯದಲ್ಲಿ ಭಾಷ್ಯಕಾರರಿಗೆ ನಿರ್ಭರವಿಲ್ಲವೆಂಬುದು ‘ತತ್ಪರಿಗ್ರಹೇಪಿನಕಶ್ಚಿದ್ವಿರೋಧಃ’ ಎಂಬ ವಾಕ್ಯದಿಂದ ಗೊತ್ತಾಗುತ್ತದೆ. ಬೃಹದಾರಣ್ಯಕದಲ್ಲಿ ಇವರಡು ಪಕ್ಷಗಳನ್ನೂ ಅಂಗೀಕರಿಸಿಯೂ ಇದೆ.

  2. ಶೂದ್ರಸ್ತ್ರೀಯಲ್ಲಿ ಬ್ರಾಹ್ಮಣನಿಂದ ಹುಟ್ಟಿದವನು. ಇಲ್ಲಿ ಚಂಡಾಲನನ್ನು ಸೇರಿಸಿಲ್ಲವೆಂಬುದನ್ನು ಲಕ್ಷಿಸತಕ್ಕದ್ದಾಗಿದೆ.

80

ಬ್ರಹ್ಮಸೂತ್ರಭಾಷ್ಯ

[ಅ. ೧. ಪ. ೪.

ಜ್ಯೋತಿಷ್ಯಶೇಷಾಮಸತ್ಯನ್ನೇ ||೧೩|| ೧೩. ಒಂದು (ಶಾಖೆಯವರ ಪಾಠ)ದಲ್ಲಿ ಅನ್ನವಿಲ್ಲದಿರುವಲ್ಲಿ ಜ್ಯೋತಿಯಿಂದ (ಪೂರ್ತಿಮಾಡಿಕೊಳ್ಳಬಹುದು).

ಕಾಣ್ಯಪಾಠದಲ್ಲಿ ಪಂಚಜನರು ಯಾರು ?

(ಭಾಷ್ಯ) ೩೬೪. ಭವೇಯುಸ್ರಾವತ್ ಪ್ರಾಣಾದಯಃ ಪಞ್ಞಜನಾ ಮಾಧ್ಯಂದಿನಾನಾಂ ಯೇನ್ನಂ ಪ್ರಾಣಾದಿಷು ಆಮನ | ಕಾಣಾನಾಂ ತು ಕಥಂ ಪ್ರಾಣಾದಯಃ ಪಞ್ಞಜನಾಃ ಭವೇಯುರ್ಯನ್ನಂ ಪ್ರಾಣಾದಿಷು ನಾಮನ ಇತಿ ? ಅತ ಉತ್ತರಂ ಪಠತಿ - (ಜ್ಯೋತಿಷ್ಯಶೇಷಾಮಸತ್ಯನ್ನ) | ಅಸತ್ಯಪಿ ಕಾಣ್ಯಾನಾಮನ್ನೇ ಜ್ಯೋತಿಷಾ ತೇಷಾಂ ಪಞ್ಚಸಜ್ಞಾ ಪೂರ್ಯತ | ತೇSಪಿ ಹಿ ಯಸ್ಮಿನ್ ಪಞ್ಞ ಪಞ್ಞಜನಾಃ” ಇತ್ಯತಃ ಪೂರ್ವಸ್ಮಿನ್ ಮನೇ ಬ್ರಹ್ಮಸ್ವರೂಪನಿರೂಪಣಾಯ್ಯವ ಜ್ಯೋತಿರಧೀಯತೇ - ‘ತದ್ದೇವಾ ಜ್ಯೋತಿಷಾಂ ಜ್ಯೋತಿಃ’ ಇತಿ | ಕಥಂ ಪುನಃ ಉಭಯೇಷಾಮಪಿ ತುಲ್ಯವತ್ ಇದಂ ಜ್ಯೋತಿಃ ಪಠ್ಯಮಾನಂ ಸಮಾನಮನ್ತಗತಯಾ ಪಞ್ಚಸಯಾ ಕೇಷಾಂಚಿತ್ ಗೃಹ್ಯತೇ ತೇಷಾಂಚಿತ್ ನ ಇತಿ ? ಅಪೇಕ್ಷಾಭೇದಾತ್ ಇತ್ಯಾಹ | ಮಾಧ್ಯಂದಿನಾನಾಂ ಹಿ ಸಮಾನಮನ್ಯಪಠಿತಪ್ರಾಣಾದಿಪಞ್ಞಜನಲಾಭಾತ್ ನಾಸ್ಮಿನ್ ಮನ್ಯಾರಪಠಿತೇ ಜ್ಯೋತಿಷಿ ಅಪೇಕ್ಷಾ ಭವತಿ | ತದಲಾಭಾತ್ ತು ಕಾಣ್ಯಾನಾಂ ಭವತ್ಯಪೇಕ್ಷಾ ! ಅಪೇಕ್ಷಾಭೇದಾಶ್ಚ ಸಮಾನೇಪಿ ಮನ್ನೇ ಜ್ಯೋತಿಷೋ ಗ್ರಹಣಾಗ್ರಹಣೇ | ಯಥಾ ಸಮಾನೇಪಿ ಅತಿರಾತ್ರೀ ವಚನಭೇದಾತ್ ಷೋಡಶಿನೂ ಗ್ರಹಣಾಗ್ರಹಣೇ ತದ್ವತ್ | ತದೇವಂ ನ ತಾವತ್ ಶ್ರುತಿಪ್ರಸಿದ್ಧಿ: ಕಾಚಿತ್ ಪ್ರಧಾನವಿಷಯಾ ಅಸ್ತಿ | ಸ್ಮತಿನ್ಯಾಯಪ್ರಸಿದ್ಧ ತು ಪರಿಹರಿಷ್ಯತೇ ||

(ಭಾಷ್ಯಾರ್ಥ) (ಆಕ್ಷೇಪ) :- ಮಾಧ್ಯಂದಿನರ ಪಾಠದಲ್ಲಿ ಪ್ರಾಣಾದಿಗಳು ಪಂಚಜನವಾಗ ಬಹುದು ; ಏಕೆಂದರೆ ಅವರು ಪ್ರಾಣಾದಿಗಳೊಳಗೆ ಅನ್ನವನ್ನು ಪಠಿಸುತ್ತಾರೆ. ಆದರೆ ಅನ್ನವನ್ನು ಪ್ರಾಣಾದಿಗಳೊಳಗೆ ಪಠಿಸದ ಇರುವ ಕಾರ ಪಾಠದಲ್ಲಿ ಪ್ರಾಣಾದಿಗಳು ಹೇಗೆ ಪಂಚಜನರಾದಾವು ?

(ಪರಿಹಾರ) :- ಇದಕ್ಕೆ (ಸೂತ್ರಕಾರರು) ಉತ್ತರವನ್ನು ಹೇಳುತ್ತಾರೆ. (ಜ್ಯೋತಿಷ್ಯಶೇಷಾಮಸತ್ಯನ್ನ). ಕಾಣೂರ ಪಾಠದಲ್ಲಿ ಅನ್ನವು ಇಲ್ಲದಿದ್ದರೂ ಅವರ

ಸಮಾನಮನ್ಯಪವತಿ | ತದಲಾಭಾ

ಗ್ರಹಣಾಗ್ರಹ

ಅಧಿ. ೩. ಸೂ. ೧೩] ಕಾಪಾಠದಲ್ಲಿ ಪಂಚಜನರು ಯಾರು ?

೫೯೧

(ಪಾಠ)ದಲ್ಲಿ ಜ್ಯೋತಿಯಿಂದ ಪಂಚಸಂಖ್ಯೆಯನ್ನು ಪೂರೈಸಿಕೊಳ್ಳಬಹುದು. ಏಕೆಂದರೆ “ಯಸ್ಮಿನ್ ಪಞ್ಚ ಪಞ್ಞಜನಾ’ (. ೪-೪-೧೭) ಎಂಬುದಕ್ಕಿಂತ ಹಿಂದಿನ ಮಂತ್ರದಲ್ಲಿ ಬ್ರಹ್ಮಸ್ವರೂಪವನ್ನು ಗೊತ್ತುಪಡಿಸುವದಕ್ಕಾಗಿಯೇ ‘ಜ್ಯೋತಿಗಳಿಗೂ ಜ್ಯೋತಿಯಾಗಿರುವ ಅದನ್ನು ದೇವತೆಗಳು (ಆಯುಸ್ಸೆಂದು ಉಪಾಸನೆಮಾಡುತ್ತಾರ)’

(ಬೃ. ೪-೪-೧೬) ಎಂದು ಜ್ಯೋತಿಯನ್ನು ಅಧ್ಯಯನಮಾಡುತ್ತಾರೆ.

(ಆಕ್ಷೇಪ) :- ಇಬ್ಬರಿಗೂ ಸಮಾನವಾಗಿಯೇ ಪಾಠದಲ್ಲಿರುವ ಈ ಜ್ಯೋತಿ ಯನ್ನು ಒಂದೇ ಮಂತ್ರದಲ್ಲಿರುವ ಐದಂಬ ಸಂಖ್ಯೆಯಿಂದ ಒಬ್ಬರು ತಗೆದುಕೊಳ್ಳು ವದೂ ಇನ್ನೊಬ್ಬರೂ ತೆಗೆದುಕೊಳ್ಳದೆ ಇರುವದೂ ಹೇಗೆ ?

(ಪರಿಹಾರ) :- ಅಪೇಕ್ಷಾಭೇದದಿಂದ (ಇದಾಗಬಹುದು) ಎನ್ನುತ್ತಾನೆ, (ಸಿದ್ಧಾಂತಿ). ಹೇಗೆಂದರೆ, ಮಾಧ್ಯಂದಿನರಿಗೆ ಅದೇ ಮಂತ್ರದಲ್ಲಿ ಹೇಳಿದ ಪ್ರಾಣವೇ ಮುಂತಾದ ಪಂಚಜನರು ಸಿಕ್ಕಿರುವದರಿಂದ ಈ (ಪಾಠ)ದಲ್ಲಿ ಮತ್ತೊಂದು ಮಂತ್ರದಲ್ಲಿ ಪಠಿಸಿರುವ ಜ್ಯೋತಿಯ ಅಪೇಕ್ಷೆಯಿರುವದಿಲ್ಲ. ಆದರೆ ಅದು ಸಿಕ್ಕದೆ ಇರುವದರಿಂದ ಕಾಣೂರಿಗೆ (ಅದರ) ಅಪೇಕ್ಷೆಯಾಗುತ್ತದೆ. (ಹೀಗೆ) ಆಪೇಕ್ಷಾಭೇದವಿರುವದರಿಂದ ಅದೇ ಮಂತ್ರದಲ್ಲಿಯೇ ಜ್ಯೋತಿಯನ್ನು ತೆಗೆದುಕೊಳ್ಳುವದು ತಗೆದುಕೊಳ್ಳದಿರುವದು (ಇವು ಆಗಬಹುದಾಗಿರುತ್ತದೆ). ಹೇಗ ವಚನಭೇದದಿಂದ ಒಂದೇ ಅತಿರಾತ್ರ ದಲ್ಲಿಯೂ ಷೋಡಶಿಯನ್ನು ತೆಗೆದುಕೊಳ್ಳುವದು, ತೆಗೆದುಕೊಳ್ಳದಿರುವದು - ಇವು (ಆಗಬಹುದೂ) ಅದರಂತೆಯೇ ಇದು.’

  1. ಅತಿರಾತ್ರವು ಕ್ರಿಯಯಾದ್ದರಿಂದ ಅದರಲ್ಲಿ ವಿಕಲ್ಪವಾಗಬಹುದು, ವಸ್ತುವಿಷಯದಲ್ಲಿ ಹೇಗೆ ? - ಎಂಬ ಶಂಕೆಗೆ ದೃಷ್ಟಿಕ್ರಿಯೆಯಲ್ಲಿ ವಸ್ತುವಿಷಯವಾದ ವಿಕಲ್ಪವೂ ಆಗಬಹುದು ಎಂದು ನ್ಯಾ| ನಿ; ‘ಮನಸಾನುದ್ರಷ್ಟವಮ್’ (ಬೃ. ೪-೪-೧೯) ಎಂಬುದು ಧ್ಯಾನಕ್ರಿಯಯಾದ್ದರಿಂದ ವಿಕಲ್ಪವು ಇರಬಹುದು ಎಂದು ರI| ಪ್ರ|| ಪರಿಹಾರವನ್ನು ಬರೆದಿವೆ ಆದರೆ ಜ್ಞಾನದ ವಿಷಯಕ್ಕೆ ವಿಕಲ್ಪಕ್ಕೆ ಅವಕಾಶವಿಲ್ಲ ; ದ್ರಷ್ಟವಮ್ ಎಂಬುದು ಧ್ಯಾನಕ್ರಿಯೆಯೂ ಅಲ್ಲ. ದೃಷ್ಟಾಂತದಲ್ಲಿ ವಚನಭೇದದಿಂದ ಗ್ರಹಾಣಾಗ್ರಹಣಗಳು ಆಗುವಂತ ದಾರ್ಷ್ಮಾಂತಿಕದಲ್ಲಿ ಅಪೇಕ್ಷಾಭೇದದಿಂದ ಜ್ಯೋತಿಯನ್ನು ಸೇರಿಸುವದೂ ಬಿಡುವದೂ ಆಗಬಹುದು - ಎಂದಿಷ್ಟೇ ಭಾಷ್ಯಕಾರರ ಅಭಿಪ್ರಾಯವೆಂದು ತೋರುತ್ತದೆ. ‘ಬ್ರಹ್ಮಸ್ವರೂಪನಿರೂಪಣಾಯ್ಕವ ಜ್ಯೋತಿರಧೀಯತೇ’ ಎಂಬ ಭಾಷ್ಯವಾಕ್ಯವು ಇದು ವಸ್ತುನಿರೂಪಣವೆಂಬುದನ್ನು ಗಟ್ಟಿಗೊಳಿಸುತ್ತದೆ. ಈಶಾವಾಸ್ಕದಲ್ಲಿ ವಿದ್ಯಾಂ ಚಾವಿದ್ಯಾಂಚ’ ಎಂಬ ಮಂತ್ರಕ್ಕೆ ಶಾಖಾಭೇದದಿಂದ ಎರಡು ಅರ್ಥಗಳನ್ನು ಹೇಳಿರುವದನ್ನು ಇದಕ್ಕೆ ಹೋಲಿಸಬಹುದು.೫೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅಂತೂ ಈ ರೀತಿಯಲ್ಲಿ, ಮೊದಲನೆಯದಾಗಿ ಪ್ರಧಾನವಿಷಯದಲ್ಲಿ ಶ್ರುತಿ ಪ್ರಸಿದ್ಧಿಯಿಲ್ಲ (ಎಂದಾಯಿತು) ಸ್ಮತಿನ್ಯಾಯಪ್ರಸಿದ್ಧಿಗಳನ್ನಾದರೂ ಮುಂದ ಪರಿ ಹರಿಸಲಾಗುವದು.

೪. ಕಾರಣತ್ವಾಧಿಕರಣ (ಸೂ. ೧೪-೧೫)

(ಬ್ರಹ್ಮವೇ ಜಗತ್ಕಾರಣವೆಂದು ಎಲ್ಲಾ ಶ್ರುತಿಗಳಲ್ಲಿಯೂ ಹೇಳಿದೆ). ಕಾರಣತ್ತೇನ ಚಾಕಾಶಾದಿಷು ಯಥಾವಪದಿಷ್ಟೂಕ್ತಃ ||೧೪||

೧೪. ಆಕಾಶಾದಿಗಳಲ್ಲಿ (ವಿಗಾನವಿದ್ದರೂ ಅವುಗಳ) ಕಾರಣವಾಗಿ (ಬ್ರಹ್ಮವನ್ನು ಒಂದು ಕಡೆಯಲ್ಲಿ) ಹೇಳಿದಂತೆಯೇ (ಮಿಕ್ಕ ಎಲ್ಲಾ ಕಡೆ ಯಲ್ಲಿಯೂ) ಹೇಳಿರುವದರಿಂದ (ಗತಿಸಾಮಾನ್ಯವಿದೆ).

ಪೂರ್ವಪಕ್ಷ : ಗತಿಸಾಮಾನ್ಯವು ಸಿದ್ಧವಾಗಿಲ್ಲ

(ಭಾಷ್ಯ) ೩೬೫, ಪ್ರತಿಪಾದಿತಂ ಬ್ರಹ್ಮಣೇ ಲಕ್ಷಣಮ್ | ಪ್ರತಿಪಾದಿತಂ ಚ ಬ್ರಹ್ಮವಿಷಯಂ ಗತಿಸಾಮಾನ್ಯರ ವೇದಾನ್ತವಾಕ್ಕಾನಾಮ್ | ಪ್ರತಿಪಾದಿತಂ ಚ ಪ್ರಧಾನಸ್ಯ ಅಶಬ್ದತ್ವಮ್ | ತತ್ರ ಇದಮಪರಮ್ ಆಶಜ್ಯತೇ 1ನ ಜನ್ಮಾದಿಕಾರಣತ್ವಂ ಬ್ರಹ್ಮಣೋ ಬ್ರಹ್ಮವಿಷಯಂ ವಾ ಗತಿಸಾಮಾನ್ಯಂ ವೇದಾನ್ತವಾಕ್ಕಾನಾಂ ಪ್ರತಿಪಾದಯಿತುಂ ಶಕ್ಯಮ್ | ಕಸ್ಮಾತ್ ? ವಿಗಾನದರ್ಶನಾತ್ | ಪ್ರತಿವೇದಾನ್ತಂ ಹಿ ಅನ್ಯಾನ್ಯಾ ಸೃಷ್ಟಿ: ಉಪಲಭ್ಯತೇ ಕ್ರಮಾದಿವ್ಯಚಿತ್ರಾತ್ | ತಥಾ ಹಿ - ಕ್ವಚಿತ್ “ಆತ್ಮನ ಆಕಾಶಃ ಸಂಭೂತಃ’ (ತ್ಯ. ೨-೧) ಇತಿ ಆಕಾಶಾದಿಕಾ ಸೃಷ್ಟಿಸಿ ಆಮ್ಯಾಯತೇ | ಕ್ವಚಿತ್ ತೇಜಆದಿಕಾ ತತ್ತೇಜೋsಸೃಜತ’ (ಛಾಂ, ೬-೨-೩) ಇತಿ | ಕ್ವಚಿತ್ ಪ್ರಾಣಾದಿಕಾ ‘‘ಸ ಪ್ರಾಣಮಸೃಜತ ಪ್ರಾಣಾಯ್ಸದ್ದಾಮ್’ (ಪ್ರ. ೬-೪) ಇತಿ | ಕ್ವಚಿತ್ ಅಕ್ರಮೇಣೈವ ಲೋಕಾನಾಮ್ ಉತ್ಪರಾಮಾಯತೇ “ಸ ಇಮಾ ಶ್ಲೋಕಾನ್ನ ಸೃಜತ | ಅನ್ನೋ ಮರೀಚೀರ್ಮರಮಾಪಃ’ (ಐ. ೧-೧) ಇತಿ | ತಥಾ ಕ್ವಚಿತ್ ಅಸತ್ತೂರ್ವಿಕಾ ಸೃಷ್ಟಿ: ಪಠ್ಯತೇ “ಅಸಟ್ಟಾ, ಇದಮಗ್ರ ಆಸೀತ್ತತೋ ವೈ ಸದಜಾಯತ’ (ತ್ಯ. ೨-೭) ಇತಿ | “ಅಸದೇವೇದಮಗ್ರ ಆಸೀತ್ ಸದಾಸೀತ್ ತತ್ಸಮಭವತ್’ (ಛಾಂ. ೩-೧೯-೧) ಇತಿ ಚ 1 ಕ್ವಚಿತ್ ಅಸಾದನಿರಾಕರಣೇನ

ಅಧಿ. ೪. ಸೂ. ೧೪] ಪೂರ್ವಪಕ್ಷ : ಗತಿಸಾಮಾನ್ಯವು ಸಿದ್ಧವಾಗಿಲ್ಲ

REZ

ಸತ್ತೂರ್ವಿಕಾ ಪ್ರಕ್ರಿಯಾ ಪ್ರತಿಜ್ಞಾಯತೇ ‘ತದ್ಭಕ ಆಹುರಸದೇವೇದಮಗ್ರ ಆಸೀತ್’ ಇತ್ಯುಪಕ್ರಮ್ಮ “ಕುತಸ್ತು ಖಲು ಸೋಮ್ಮವಂ ಸ್ಯಾದಿತಿ ಹೋವಾಚ ಕಥಮಸತಃ ಸಜ್ಜಾಯೇತೇತಿ | ಸತ್ವ ಸೋಮ್ಮೇದಮಗ್ರ ಆಸೀತ್’’ (ಛಾಂ. ೬-೨-೧,೨) ಇತಿ | ಕ್ವಚಿತ್ ಸ್ವಯಂಕರ್ತರೈವ ವ್ಯಾಕ್ರಿಯಾ ಜಗತೋ ನಿಗದ್ಯತೇ ‘ತದ್ದೇದಂ ತರ್ಥ್ಯವ್ಯಾಕೃತಮಾಸೀತ್ ತನ್ನಾಮರೂಪಾಭ್ಯಾಮೇವ ವ್ಯಾಕ್ರಿಯತ’ (ಬೃ. ೧-೪-೭) ಇತಿ | ಏವಮ್ ಅನೇಕಧಾ ವಿಪ್ರತಿಪರ್ವಸ್ತುನಿ ಚ ವಿಕಲ್ಪಸ್ಕಾನುಪಪ ನ ವೇದಾನ್ತವಾಕ್ಕಾನಾಂ ಜಗತ್ಕಾರಣಾವಧಾರಣಪರತಾ ನ್ಯಾಯ್ಯಾ | ಸ್ಮತಿನ್ಯಾಯ ಪ್ರಸಿದ್ಧಿಭ್ಯಾಂ ತು ಕಾರಣಾನ್ತರಪರಿಗ್ರಹೋ ನ್ಯಾಯ್ಯ: ಇತಿ ||

(ಭಾಷ್ಯಾರ್ಥ) ಬ್ರಹ್ಮದ ಲಕ್ಷಣವನ್ನು ಪ್ರತಿಪಾದಿಸಿದ್ಧಾಯಿತು. ವೇದಾಂತವಾಕ್ಯಗಳಿಗೆ ಬ್ರಹ್ಮ ವಿಷಯದ ಗತಿಸಾಮಾನ್ಯವನ್ನು ಪ್ರತಿಪಾದಿಸಿದ್ಧಾಯಿತು. ಪ್ರಧಾನವು ಅಶಬ್ದವೆಂಬು ದನ್ನೂ ಪ್ರತಿಪಾದಿಸಿದ್ಧಾಯಿತು. ಇಲ್ಲಿ ಈ ಇನ್ನೊಂದು ಶಂಕೆಯನ್ನು ಮಾಡಲಾಗು ಇದ. ಬ್ರಹ್ಮವು ಜನ್ಮಾದಿಕಾರಣವೆಂಬುದನ್ನಾಗಲಿ, ವೇದಾಂತವಾಕ್ಯಗಳಿಗೆ ಬ್ರಹ್ಮ ವಿಷಯವಾದ ಗತಿಸಾಮಾನ್ಯವನ್ನಾಗಲಿ ನಿಶ್ಚಯಿಸುವದಕ್ಕೆ ಆಗಲಾರದು. ಏಕ ? ಎಂದರ ವಿಗಾನವು ಕಂಡುಬರುತ್ತದೆಯಾದ್ದರಿಂದ, ಒಂದೊಂದು ವೇದಾಂತದಲ್ಲಿಯೂ ಕ್ರಮವೇ ಮುಂತಾದ ವೈಚಿತ್ರ್ಯದಿಂದ ಬೇರೆ ಬೇರೆ (ಬಗೆಯ) ಸೃಷ್ಟಿಯ ಕಾಣಬರುತ್ತದೆ. ಹೇಗೆಂದರೆ ಒಂದು ಕಡೆಯಲ್ಲಿ ಆತ್ಮನಿಂದ ಆಕಾಶವು ಹುಟ್ಟಿತು” (ತ್ಯ. ೨-೧) ಎಂದು ಆಕಾಶಾದಿಕವಾದ ಸೃಷ್ಟಿಯನ್ನು ಹೇಳಿದೆ. ಒಂದು ಕಡೆಯಲ್ಲಿ “ಅದು ತೇಜಸ್ಸನ್ನು ಸೃಷ್ಟಿಸಿತು’ (ಛಾಂ. ೬-೨-೩) ಎಂದು ತೇಜದಿ (ಸೃಷ್ಟಿಯನ್ನು ಹೇಳಿದೆ). ಒಂದು ಕಡೆಯಲ್ಲಿ ಅವನು ಪ್ರಾಣವನ್ನು ಸೃಷ್ಟಿಸಿದನು. ಪ್ರಾಣದಿಂದ ಶ್ರದ್ಧೆಯನ್ನು (ಸೃಷ್ಟಿಸಿದನು)’’ (ಪ್ರ. ೬-೪) ಎಂದು ಪ್ರಾಣಾದಿಕವಾದ (ಸೃಷ್ಟಿಯನ್ನು

  1. ಜಗತ್ಕಾರಣವಾಕ್ಯಗಳು ಬ್ರಹ್ಮವನ್ನೇ ಹೇಳುತ್ತವೆ ಎಂದು ತೋರಿಸಿ ಬ್ರಹ್ಮವು ಜಗಜ್ಜನ್ಮಾದಿಕಾರಣವೆಂಬ ಲಕ್ಷಣವನ್ನು ಪ್ರತಿಪಾದಿಸಿದಂತಾಯಿತು.

  2. ಕಾರಣವು ಜಡವಲ್ಲ, ಜೀವನಲ್ಲ - ಎಂದು ತೋರಿಸಿದ್ಧರಿಂದ ಗತಿಸಾಮಾನ್ಯವನ್ನು ಪ್ರತಿಪಾದಿಸಿದಂತಾಯಿತು.

  3. ಪ್ರಧಾನವನ್ನು ಹೇಳುವಂತೆ ಕಾಣುವ ವಾಕ್ಯಗಳಲ್ಲಿ ನಿಜವಾಗಿ ಪ್ರಧಾನವನ್ನು ಹೇಳಿಲ್ಲ ಎಂದು ತಿಳಿಸಿ ಅದಕ್ಕೆ ಶ್ರುತಿಪ್ರಮಾಣವಿಲ್ಲವೆಂಬುದನ್ನು ಪ್ರತಿಪಾದಿಸಿದ್ಧಾಯಿತು.

  4. ಆಕ್ಷೇಪಸಂಗತಿಯಿಂದ ಈ ಅಧಿಕರಣವು ಹೂರಟಿದೆ ಎಂದು ಭಾವ. 5. ವಿರುದ್ಧವಾದ ಮಾತು. 6. ಉಪನಿಷತ್ತಿನಲ್ಲಿಯೂ.

೫೪,

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೪.

ಹೇಳಿದ). ಒಂದು ಕಡೆಯಲ್ಲಿ ಕ್ರಮವಿಲ್ಲದಯೇ ಅವನು ಅಂಭ, ಮರೀಚಿ, ಮರ, ಅಪ್ಪು - ಈ ಲೋಕಗಳನ್ನು ಸೃಷ್ಟಿಸಿದನು’’ (ಐ. ೧-೧) ಎಂದು ಕ್ರಮವಿಲ್ಲದಯ ಲೋಕಗಳ ಉತ್ಪತ್ತಿಯನ್ನು ಹೇಳಿದೆ. ಇದರಂತ’ ಒಂದು ಕಡೆಯಲ್ಲಿ ಇದು ಮೊದಲು ಅಸತ್ತೇ ಆಗಿತ್ತು, ಅದರಿಂದಲೇ ಸತ್ತು ಹುಟ್ಟಿತು’ (ತೈ. ೨-೭) ಎಂದೂ ‘‘ಇದು ಮೊದಲು ಅಸತ್ತೇ ಆಗಿತ್ತು. ಅದು ಸತ್ತಾಗಿತ್ತು. ಅದು ಹುಟ್ಟಿತು’ (ಛಾಂ. ೩-೧೯-೧). ಎಂದು ಅಸತ್ತೂರ್ವಕವಾದ ಸೃಷ್ಟಿಯನ್ನು ಹೇಳಿದೆ. ಒಂದು ಕಡ ಯಲ್ಲಿ ಅಲ್ಲಿ ಕೆಲವರು ಇದು ಮೊದಲು ಅಸತ್ತೇ ಆಗಿತ್ತು ಎಂದು ಹೇಳುತ್ತಾರೆ’ (ಛಾಂ. ೬-೨-೧) ಎಂದು ಉಪಕ್ರಮಿಸಿ ‘ಸೋಮ್ಯನ, ಹೇಗತಾನೆ ಇದು ಆದೀತು ? ಎಂದನು. ಅಸತ್ತಿನಿಂದ ಸತ್ತು ಹೇಗೆ ಹುಟ್ಟಿತು ? ಸೋಮ್ಮನ, ಇದು ಮೊದಲು ಸತ್ತೇ ಆಗಿತ್ತು’’ (ಛಾಂ. ೬-೨-೨) ಎಂದು ಅಸದ್ವಾದವನ್ನು ನಿರಾಕರಿಸಿ ಸತ್ತೂರ್ವಕವಾದ ಪ್ರಕ್ರಿಯೆಯನ್ನು ಹೇಳಿರುತ್ತದೆ. ಅಲ್ಲಿ ಆಗ ಇದು ಅವ್ಯಾಹೃತವಾಗಿತ್ತು, ಅದು ನಾಮ ರೂಪಗಳಿಂದಲೇ ವ್ಯಾಕರಣವಾಯಿತು’ (ಬೃ. ೧-೪-೭) ಎಂದು ಜಗತ್ತು ತಾನೇ ವ್ಯಾಕ್ರಿಯೆಯನ್ನು ಮಾಡಿಕೊಂಡಿತೆಂದು ಹೇಳಿದೆ. ಹೀಗೆ ಅನೇಕ ವಿಧವಾದ ವಿರುದ್ಧ ಪ್ರತಿಪತ್ತಿಯುಂಟಾಗುತ್ತಿರುವದರಿಂದಲೂ ವಸ್ತುವಿನಲ್ಲಿ ವಿಕಲ್ಪವು ಹೊಂದುವಹಾಗಿಲ್ಲ ವಾದ್ದರಿಂದಲೂ ವೇದಾಂತ ವಾಕ್ಯಗಳಿಗೆ ಜಗತ್ಕಾರಣವನ್ನು ಗೊತ್ತುಪಡಿಸುವದರಲ್ಲಿ ತಾತ್ಪರ್ಯವಿದೆ ಎಂಬುದು ಯುಕ್ತವಲ್ಲ. ಸ್ಮತಿ, ನ್ಯಾಯ - ಇವುಗಳಿಂದ ಪ್ರಸಿದ್ಧ ವಾಗುವದರಿಂದ ಮತ್ತೊಂದು ಕಾರಣವನ್ನೇ ತೆಗೆದುಕೊಳ್ಳುವದು ನ್ಯಾಯ.

  1. ಕಾರ್ಯವಿಗಾನದಂತ ಕಾರಣವಿಗಾನವೂ ಇದೆ ಎಂದು ತೋರಿಸುವದಕ್ಕೆ ಪೂರ್ವಪಕ್ಷಿ ಹೊರಟಿರುತ್ತಾನೆ.

  2. ವಾಕ್ಯದಿಂದ ಆಗುವ ಜ್ಞಾನಗಳು ಒಂದಕ್ಕೊಂದು ವಿರುದ್ಧವಾಗಿವೆ.

  3. ವಸ್ತುವು ಹಾಗೂ ಇರಬಹುದು, ಹೀಗೂ ಇರಬಹುದು - ಎಂದು ಹೇಳುವದಕ್ಕೆ ಬರುವದಿಲ್ಲವೆಂಬುದನ್ನು ವೇದಾಂತಿಗಳಂತ ಸಾಂಖ್ಯನೂ ಒಪ್ಪಿರುತ್ತಾನೆ. ಇದು ಎಲ್ಲರೂ ಒಪ್ಪತಕ್ಕ ನ್ಯಾಯವಾಗಿದೆ.

  4. ಬ್ರಹ್ಮಕಾರಣವಾದದಲ್ಲಿಯೇ ಶ್ರುತಿಗೆ ತಾತ್ಪರ್ಯವಿದೆ ಎಂದಾಗಿದ್ದರೆ ಪ್ರಧಾನ ಕಾರಣ ವಾದವು ಶ್ರುತಿವಿರುದ್ಧವೆಂದು ಬಿಡಬಹುದಾಗಿತ್ತು. ಶ್ರುತಿಗೆ ವಿರುದ್ಧವೂ ಅಲ್ಲದೆ ಸ್ಮೃತಿ ಯುಕ್ತಿ ಗಳಿಗೂ ಸಮ್ಮತವಾದ ಪ್ರಧಾನವನ್ನೇಕೆ ಬಿಡಬೇಕು ? - ಎಂದು ಆಕ್ಷೇಪ.

  5. ಇಲ್ಲಿ ಸಾಂಖ್ಯರ ಸ್ಮತಿಯುಕ್ತಿಗಳನ್ನೇ ಪರಾಮರ್ಶಿಸಿದ. ಇವನ್ನು ಮುಂದಿನ ಅಧ್ಯಾಯದಲ್ಲಿ ಖಂಡಿಸಿದ.

  6. ಪ್ರಧಾನವನ್ನು ತಗೆದುಕೊಳ್ಳಬೇಕು ಎಂದರ್ಥ. ಶ್ರುತಿಸಮನ್ವಯವು ಬ್ರಹ್ಮದಲ್ಲಿ ಎಂದು ನಿಶ್ಚಯಿಸುವದಕ್ಕೆ ಈ ಆಕ್ಷೇಪವನ್ನೂ ಪರಿಹರಿಸುವದು ಅವಶ್ಯವಾಗಿದೆ ಎಂದು ಭಾವ.

೫೫

ಅಧಿ. ೪. ಸೂ. ೧೪] ಸಿದ್ಧಾಂತಿ : ಕಾರಣದ ವಿಷಯದಲ್ಲಿ ವಿಗಾನವಿಲ್ಲ

ಸಿದ್ಧಾಂತಿ : ಕಾರಣದ ವಿಷಯದಲ್ಲಿ ವಿಗಾನವಿಲ್ಲ

(ಭಾಷ್ಯ) ೩೬೬. ಏವಂ ಪ್ರಾಪ್ತ ಬ್ಯೂಮಃ | ಸತ್ಯಪಿ ಪ್ರತಿವೇದಾಂ ಸೃಜ್ಯಮಾನೇಷು ಆಕಾಶಾದಿಷು ಕ್ರಮಾದಿದ್ವಾರಕೇ ವಿಗಾನೇ ನ ಸ್ರಷ್ಟರಿ ಕಿಂಚಿತ್ ವಿಗಾನಮ್’ ಅಸ್ತಿ | ಕುತಃ ? ಯಥಾವಪದಿಷ್ಟೂಕ್ತಃ | ಯಥಾಭೂತೋ ಹಿ ಏಕಸ್ಮಿನ್ ವೇದಾನ್ತ ಸರ್ವಜ್ಞ: ಸರ್ವೆಶ್ವರಃ ಸರ್ವಾತ್ಮಾ ಏಕೋದ್ವಿತೀಯಃ ಕಾರಣನ ವ್ಯಪದಿಷ್ಟ, ತಥಾಭೂತ ಏವ ವೇದಾನ್ನಾನ್ಯರೇಷ್ಟಪಿ ವ್ಯಪದಿಶ್ಯತೇ | ತತ್ ಯಥಾ “ಸತ್ಯಂ ಜ್ಞಾನಮನಸ್ತಂ ಬ್ರಹ್ಮ’ (ತೈ. ೨-೧) ಇತಿ | ಅತ್ರ ತಾವತ್ ಜ್ಞಾನಶಬ್ದನ ಪರೇಣ ಚ ತದ್ವಿಷಯಣ ಕಾಮಯಿತೃತ್ವವಚನೇನ ಚೇತನಂ ಬ್ರಹ್ಮ ರೂಪಯತ್ | ಅಪರಪ್ರಯೋಜನ ಈಶ್ವರಂ ಕಾರಣಮ್ ಅಬ್ರವೀತ್ | ತದ್ವಿಷಯವ ಪರೇಣ ಆತ್ಮಶಬ್ದನ ಶರೀರಾದಿಕೋಶಪರಂಪರಯಾ ಚ ಅನ್ಯರನುಪ್ರವೇಶನೇನ ಸರ್ವಷಾಮ್ ಅನ್ನ: ಪ್ರತ್ಯಗಾತ್ಮಾನಂ ನಿರಧಾರಯತ್‌ | ‘ಬಹುಸ್ಕಾಂಪ್ರಜಾಯೇಯ” (ತ್ಯ. ೨-೬) ಇತಿ ಚ ಆತ್ಮವಿಷಯಣ ಬಹುಭವನಾನುಶಂಸನೇನ ಸೃಜ್ಯ ಮಾನಾನಾಂ ವಿಕಾರಾಣಾಂ ಸೃಷ್ಟು: ಅಭೇದಮ್ ಅಭಾಷತ | ತಥಾ “ಇದಂ ಸರ್ವಮ ಸೃಜತ | ಯದಿದಂ ಕಿಂ ಚ’ (ತೈ. ೨-೬) ಇತಿ ಸಮಸ್ತಜಗತ್ಸೃಷ್ಟಿನಿರ್ದಶೇನ ಪ್ರಾಕ್ಕಷ್ಟೇ ಅದ್ವಿತೀಯಂ ಸ್ರಷ್ಟಾರಮ್ ಆಚಷ್ಟೇ ! ತದತ್ರ ಯಲ್ಲ ಕ್ಷಣಂ ಬ್ರಹ್ಮ ಕಾರಣತ್ವನ ವಿಜ್ಞಾತಂ ತಲ್ಲಕ್ಷಣಮೇವ ಅನ್ಯತ್ರಾಪಿ ವಿಜ್ಞಾಯತೇ - “ಸದೇವ ಸೋಮ್ಮದಮಗ್ರ ಆಸೀದೇಕಮೇವಾದ್ವಿತೀಯಮ್” (ಛಾಂ. ೬-೨-೧) “ತಕ್ಷತ ಬಹು ಸ್ಯಾಂ ಪ್ರಜಾಕೀಯೇತಿ ತತೇಜೋಸೃಜತ’ (ಛಾಂ. ೬-೨-೩) ಇತಿ | ತಥಾ “ಆತ್ಮಾ ವಾ ಇದಮೇಕ ಏವಾಗ್ರ ಆಸೀನ್ನಾತ್ ಕಿಂಚನ ಮಿಷತ್ | ಸ ಈಕ್ಷತ ಲೋಕಾನ್ನು ಸೃಜೈ” (ಐ. ೪-೧, ೨) ಇತಿ ಚ | ಏವಂಜಾತೀಯಕಸ್ಯ ಕಾರಣಸ್ವರೂಪ ನಿರೂಪಣಪರಸ್ಯ ವಾಕ್ಕಾಜಾತಸ್ಯ ಪ್ರತಿವೇದಾನ್ತಮ್ ಅವಿಗೀತಾರ್ಥತ್ವಾತ್ ||

(ಭಾಷ್ಯಾರ್ಥ) ಹೀಗಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳುತ್ತವೆ. ಪ್ರತಿಯೊಂದು ಉಪನಿಷತ್ತಿನಲ್ಲಿಯೂ ಸೃಷ್ಟಿಸಲ್ಪಡುವ ಆಕಾಶಾದಿಗಳ (ವಿಷಯ ದಲ್ಲಿ) ಕ್ರಮವೇ ಮುಂತಾದದ್ದರ ವಿಗಾನವಿದ್ದರೂ ಸ್ಪಷ್ಟವಿನ ವಿಷಯದಲ್ಲಿ ಯಾವ ವಿಗಾನವೂ ಇರುವದಿಲ್ಲ. ಏಕ ? ಎಂದರೆ ಯಥಾವ್ಯವದಿಷ್ಯಕ್ತಿಯಿರುವದರಿಂದ. (ಇದರ ವಿವರ) : ಒಂದು ವೇದಾಂತದಲ್ಲಿ ಎಂಥ ಸರ್ವಜ್ಞನೂ ಸರ್ವಶ್ವರನೂ

೫೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. ಸರ್ವಾತ್ಮನೂ, ತನಗರಡನೆಯದಿಲ್ಲದ ಒಬ್ಬನೇ ಒಬ್ಬನೂ’ (ಆದ ಪರಮಾತ್ಮನು) ಜಗತ್ತಿಗೆ ಕಾರಣನಂದು ಉಕ್ತನಾಗಿರುತ್ತಾನೋ, ಅಂಥವನೇ ಬೇರೆ ವೇದಾಂತಗಳಲ್ಲಿಯೂ ಉಕ್ತ ನಾಗಿರುತ್ತಾನೆ. ಅದು ಹೇಗೆಂದರೆ ಮೊದಲನೆಯದಾಗಿ (೧) “ಸತ್ಯಂ ಜ್ಞಾನಮನಸ್ತಂ ಬ್ರಹ್ಮ’ (ತೈ.೨-೧) ಎಂಬಲ್ಲಿ ಜ್ಞಾನಶಬ್ದವಿರುವದರಿಂದಲೂ ಮುಂದೆ ಅದರ ವಿಷಯವಾಗಿ ಕಾಮಯಿತೃತ್ವವನ್ನು ಹೇಳಿರುವದರಿಂದಲೂ ಚೇತನವಾದ ಬ್ರಹ್ಮವನ್ನು ತಿಳಿಸಿದ. ಮತ್ತೊಬ್ಬರಿಂದ ಪ್ರೇರಿತನಾಗದಿರುವದರಿಂದ ಕಾರಣವು ಈಶ್ವರನು’ ಎಂದು ಹೇಳಿದ. ಅದರ ವಿಷಯವಾಗಿಯೇ ಮುಂದೆ ಆತ್ಮಶಬ್ದ (ವಿರುವದ)ರಿಂದಲೂ ಶರೀರವೇ ಮುಂತಾದ ಕೋಶಪರಂಪರೆಯಿಂದ ಒಳಗೆ ಹೂಗಿಸುವದರಿಂದಲೂ ಎಲ್ಲರಿಗೂ ಒಳಗಿರುವ ಆತ್ಮನೇ (ಅದೆಂದು) ನಿಶ್ಚಯಿಸಿರು ತದೆ. “ಬಹು ಸ್ಯಾಂ ಪ್ರಜಾಯೇಯ’ (ತೈ. ೨-೬) ಎಂದು ತನ್ನ ವಿಷಯದಲ್ಲಿ ಬಹುವಾಗುವಿಕೆಯನ್ನು ಹೇಳಿರುವದರಿಂದ ಸೃಷ್ಟಿಸಲ್ಪಡುವ ಕಾರ್ಯಗಳು ಸ್ಪಷ್ಟವಿಗಿಂತ ಭಿನ್ನವಲ್ಲವೆಂದು ಹೇಳಿದೆ. ಹಾಗೂ “ಇದಂ ಸರ್ವಮಸೃಜತ | ಯದಿದಂ ಕಿಂಚ’ (ತೈ. ೨-೬) ಎಂದು ಸಮಸ್ತಜಗತ್ತನ್ನೂ ಸೃಷ್ಟಿ (ಮಾಡಿದನೆಂದು) ಹೇಳಿದ್ದರಿಂದ ಸೃಷ್ಟಿಗೆ ಪೂರ್ವದಲ್ಲಿ ಸ್ಪಷ್ಟವು ಅದ್ವಿತೀಯನಾಗಿದ್ದನೆಂದು ಹೇಳಿದೆ(ಯೆಂದಾಗುತ್ತದೆ). ಹೀಗೆ ಇಲ್ಲಿ ಯಾವ ಸ್ವರೂಪದ ಬ್ರಹ್ಮವು ಕಾರಣವೆಂದು ತಿಳಿದುಬರುತ್ತದೆಯೋ ಅದೇ ಸ್ವರೂಪದ (ಬ್ರಹ್ಮವೇ (೨) “ಸದೇವ ಸೋಮ್ಮದಮಗ್ರ ಆಸೀದೇಕ ಮೇವಾ ದ್ವಿತೀಯಮ್” (ಛಾಂ. ೬-೨-೧) “ತಕ್ಷತ ಬಹು ಸ್ಯಾಂ ಪ್ರಜಾಯೇಯೇತಿ | ತಜೋSಸೃಜತ’ (ಛಾಂ. ೬-೨-೩) ‘ಸೋಮ್ಯನ, ಇದು ಮೊದಲು ತನಗರಡನೆಯದಿಲ್ಲದ ಸಕ್ಕೊಂದೇ ಆಗಿತ್ತು’ (ಛಾಂ. ೬-೨-೧) “ಅದು ಬಹುವಾಗು ವನು, ಹುಟ್ಟುವನು - ಎಂದು ಆಲೋಚಿಸಿನೋಡಿತು. ಅದು ತೇಜಸ್ಸನ್ನು ಸೃಜಿಸಿತು” (ಛಾಂ. ೬-೨-೩) ಎಂದು ಮತ್ತೊಂದು ಕಡೆಯಲ್ಲಿಯೂ ತಿಳಿದು ಬರುತ್ತದೆ. ಮತ್ತು “ಆತ್ಮಾ ವಾ ಇದಮೇಕ ಏವಾಗ್ರ ಆಸೀನ್ನಾಂಚನ ಮಿಷತ್ | ಸ ಈಕ್ಷತ ಲೋಕಾನ್ನು ಸೃಜೈ" (ಐ. ೪-೧-೧, ೩) - ಇದು ಮೊದಲು ಆತ್ಮನೇ ಆಗಿತ್ತು, ಮತ್ತೊಂದು ಅಲುಗಾಡುವದು ಯಾವದೂ ಇರಲಿಲ್ಲ. ಅವನು ಲೋಕವನ್ನು ಸೃಷ್ಟಿ ಮಾಡುವನು ಎಂದು (ಯೋಚಿಸಿ) ನೋಡಿದನು - ಎಂದೂ (ಮತ್ತೊಂದು

  1. ಅದ್ವಿತೀಯಬ್ರಹ್ಮವೇ ಜಗತ್ಕಾರಣವೆಂದು ಬರೆದಿರುವದನ್ನು ಲಕ್ಷಿಸಬೇಕು.

  2. ಈಶ್ವರನು ಎಂಬ ಶಬ್ದವನ್ನು ಅದ್ವಿತೀಯಬ್ರಹ್ಮಕ್ಕೆ ಉಪಯೋಗಿಸಿದ ಎಂಬುದನ್ನು ಲಕ್ಷಿಸಬೇಕು. ಈ ವಿಷಯಕ್ಕೆ ಪೀಠಿಕೆಯನ್ನು ನೋಡಿರಿ.

ಅಧಿ. ೪. ಸೂ. ೧೪} ಕಾರ್ಯವಿಷಯದ ವಿಗಾನವೂ ಇಲ್ಲ, ಇದ್ದರೂ ಚಿಂತೆಯಿಲ್ಲ ೫೯೭ ಕಡೆಯಲ್ಲಿದೆ). ಇಂಥ ಜಾತಿಯ, ಕಾರಣಸ್ವರೂಪವನ್ನು ಗೊತ್ತುಪಡಿಸುವದರಲ್ಲಿ ತಾತ್ಪರ್ಯವುಳ್ಳ, ವಾಕ್ಯಸಮೂಹವು ಪ್ರತಿವೇದಾಂತದಲ್ಲಿಯೂ ಅವಿರುದ್ಧವಾದ ಅರ್ಥವನ್ನೇ (ಹೇಳುತ್ತಿರು)ವದರಿಂದ (ನಮ್ಮ ಅಭಿಪ್ರಾಯವು ಸರಿಯಾಗಿರುತ್ತದೆ). ಕಾರ್ಯವಿಷಯದ ವಿಗಾನವೂ ಇಲ್ಲ, ಇದ್ದರೂ ಚಿಂತೆಯಿಲ್ಲ

(ಭಾಷ್ಯ) ೩೬೭. ಕಾರ್ಯವಿಷಯಂ ತು ವಿಗಾನಂ ದೃಶ್ಯತೇ ಕ್ವಚಿತ್ ಆಕಾಶಾದಿಕಾ ಸೃಷ್ಟಿಸಿ ಕ್ವಚಿತ್ ತೇಜಆದಿಕಾ ಇತ್ಯವಂಜಾತೀಯಕಮ್ | ನ ಚ ಕಾರ್ಯವಿಷಯೇಣ ವಿಗಾನೇನ ಕಾರಣಮಪಿ ಬ್ರಹ್ಮ ಸರ್ವವೇದಾನೇಷು ಅವಿಗೀತಮ್ ಅಧಿಗಮ್ಯಮಾನಮ್ ಅವಿವಕ್ಷಿತಂ ಭವಿತುಮರ್ಹತಿ ಇತಿ ಶಕ್ಯತೇ ವಸ್ತುಮ್ | ಅತಿಪ್ರಸಜ್ಜಾತ್ | ಸಮಾಧಾಸ್ಯ ಚ ಆಚಾರ್ಯ: ಕಾರ್ಯವಿಷಯಮಪಿ ವಿಗಾನಂ ನ ವಿಯದಶ್ರುತೇ’’ (೨-೩-೧) ಇತ್ಯಾರಭ್ಯ | ಭವೇದಪಿ ಕಾರ್ಯಸ್ಯ ವಿಗೀತತ್ವಮ್ | ಅಪ್ರತಿಪಾದ್ಯ ತ್ವಾತ್ | ನ ಹಿ ಅಯಂ ಸೃಷ್ಠಾದಿಪ್ರಪಞ್ಚ: ಪ್ರತಿಪಿಪಾದಯಿಷಿತಃ | ನ ಹಿ ತತ್ಪತಿ ಬದ್ಧಃ ಕಶ್ಚಿತ್ ಪುರುಷಾರ್ಥಃ ದೃಶ್ಯತೇ ಶೂಯತೇ ವಾ ! ನ ಚ ಕಲ್ಪಯಿತುಂ ಶಕ್ಯತೇ | ಉಪಕ್ರಮೋಪಸಂಹಾರಾಭ್ಯಾಂ ತತ್ರ ತತ್ರ ಬ್ರಹ್ಮವಿಷಯ್ಕೆರ್ವಾಕ್ಕೆ ಸಾಕಮ್ ಏಕ ವಾಕ್ಯತಾಯಾ ಗಮ್ಮಮಾನತ್ವಾತ್ | ದರ್ಶಯತಿ ಚ ಸೃಷ್ಠಾದಿಪ್ರಪಞ್ಞಸ್ಯ ಬ್ರಹ್ಮ ಪ್ರತಿಪತ್ಯರ್ಥತಾಮ್ ಅನ್ನೇನ ಸೋಮ್ಯ ಶುಚ್ಚನಾಪೋಮೂಲಮನ್ನಿಚ್ಛಾಃ ಸೋಮ್ಯ ಶುಚ್ಚನ ತೇಜೋಮೂಲಮನ್ನಿಚ್ಚ ತೇಜಸಾ ಸೋಮ್ಯ ಶುಕ್ಲೀನ ಸನ್ಮೂಲಮನ್ನಿಚ್ಚ’ (ಛಾಂ. ೬-೮-೪) ಇತಿ | ಮೈದಾದಿದೃಷ್ಟಾನೈಶ್ಚ ಕಾರ್ಯಸ್ಯ ಕಾರಣೇನ ಅಭೇದಂ ವದಿತುಂ ಸೃಷ್ಮಾದಿಪ್ರಪಞ್ಞಃ ಶ್ರಾವ್ಯತೇ ಇತಿ ಗಮ್ಯತೇ | ತಥಾ ಚ ಸಂಪ್ರದಾಯವಿದೋ ವದ “ಮೃತ್ತೂಹವಿಸ್ಸುಲಿಜ್ಞಾದ್ಯ ಸೃಷ್ಟಿರ್ಯಾ ಚೋದಿತಾ ನ್ಯಥಾ | ಉಪಾಯಃ ಸೋತವತಾರಾಯ ನಾಸ್ತಿ ಭೇದಃ ಕಥಂಚನ ’’ (ಮಾಂ. ಕಾ. ೩ ೧೫) ಇತಿ | ಬ್ರಹ್ಮಪ್ರತಿಪತ್ತಿಪ್ರತಿಬದ್ಧಂ ತು ಫಲಂ ಶೂಯತೇ “ಬ್ರಹ್ಮವಿದಾಪ್ಯೂತಿ ಪರಮ್ |’ (ತೈ. ೨-೧), ‘ತರತಿ ಶೋಕಮಾತ್ಮವಿತ್’ (ಛಾಂ, ೭-೧-೩), ‘ತಮೇವ ವಿದಿತ್ವಾತಿಮೃತ್ಯುಮೇತಿ’ (ಶ್ವೇ. ೩-೮) ಇತಿ | ಪ್ರತ್ಯಕ್ಷಾವಗಮಂ ಚ ಇದಂ ಫಲಮ್ | ‘ತತ್ವಮಸಿ’ (ಛಾಂ. ೬-೮-೭) ಇತಿ ಅಸಂಸಾರ್ಯಾತ್ಮತ್ವ ಪ್ರತಿಪತ್ ಸತ್ಯಾಂ ಸಂಸಾರ್ಯಾತ್ಮತ್ವವ್ಯಾವೃತ್ತೇ ||

(ಭಾಷ್ಯಾರ್ಥ) ಕಾರ್ಯದ ವಿಷಯದಲ್ಲಾದರೆ ಒಂದು ಕಡೆಯಲ್ಲಿ ಆಕಾಶಾದಿಕಸೃಷ್ಟಿ, ಒಂದು

೫೯೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಕಡೆಯಲ್ಲಿ ತೇಜಆದಿಕಸೃಷ್ಟಿ - ಎಂಬೀ ಜಾತಿಯ ವಿಗಾನವು ಕಂಡುಬರುತ್ತದೆ, (ನಿಜ) ; ಆದರ ಕಾರ್ಯವಿಷಯದ ವಿಗಾನದಿಂದ ಕಾರಣವಾದ ಬ್ರಹ್ಮವು ಸರ್ವವೇದಾಂತಗಳಲ್ಲಿಯೂ ಯಾವ ವಿರೋಧವೂ ಇಲ್ಲದ ತಿಳಿಯಬರುತ್ತಿರುವಲ್ಲಿ (ಅದೂ) ಅವಿವಕ್ಷಿತವಾಗಿರಬೇಕೆಂದು ಹೇಳುವದಕ್ಕಾಗುವದಿಲ್ಲ. ಏಕೆಂದರೆ (ಆಗ) ಅತಿಪ್ರಸಂಗವಾಗುವದು.’ ಕಾರ್ಯವಿಷಯದಲ್ಲಿರುವ ವಿಗಾನಕ್ಕೆ ಕೂಡ ಆಚಾರ್ಯರು ‘ನ ವಿಯದಶ್ರುತೇಃ’ (೨-೩-೧) ಎಂಬ (ಸೂತ್ರ)ದಿಂದ ಹಿಡಿದು (ಮುಂದಿನ ಗ್ರಂಥದಲ್ಲಿ) ಸಮಾಧಾನವನ್ನು ಹೇಳುವರು.” (ಇದಲ್ಲದೆ) ಕಾರ್ಯವು ಪ್ರತಿಪಾದ್ಯ ವಲ್ಲದ್ದರಿಂದ (ಅದರ ವಿಷಯಕ್ಕೆ) ವಿಗಾನವಿದ್ದರೂ ಇರಬಹುದು. ಹೇಗಂದರೆ ಈ ಸೃಷ್ಟಿಯೇ ಮುಂತಾದ (ವಿವರವನ್ನು ಶ್ರುತಿಯಲ್ಲಿ) ಪ್ರತಿಪಾದಿಸುವ ಅಭಿಪ್ರಾಯ ವಿಲ್ಲ ; ಏಕೆಂದರೆ ಅದರಿಂದಾಗುವ ಪುರುಷಾರ್ಥವು ಯಾವದೂ ಕಾಣಿಸುವದೂ ಇಲ್ಲ, ಶ್ರುತಿಯಲ್ಲಿ ಹೇಳಿಯೂ ಇಲ್ಲ. (ಇದಕ್ಕೆ ಯಾವ ಪುರುಷಾರ್ಥವನ್ನಾದರೂ) ಕಲ್ಪಿಸು ವದೂ ಆಗುವದಿಲ್ಲ. ಏಕಂದರ ಉಪಕ್ರಮೋಪಸಂಹಾರಗಳಿಂದ ಅಲ್ಲಲ್ಲಿರುವ ಬ್ರಹ್ಮ ವಿಷಯದ ವಾಕ್ಯಗಳೊಡನೆ (ಸೃಷ್ಟಿವಾಕ್ಯಗಳಿಗೆ) ಏಕವಾಕ್ಯತಯು (ಇರುವದು) ಗೊತ್ತಾಗುತ್ತದೆ. “ಸೋಮ್ಯನ, ಅನ್ನವಂಬ ಕಾರ್ಯದಿಂದ ಅಪ್ಪಂಬ ಮೂಲವನ್ನು ಹುಡುಕಿಕೊ ; ಅಪ್ಪಂಬ ಕಾರ್ಯದಿಂದ ತೇಜವಂಬ ಮೂಲವನ್ನು ಹುಡುಕಿಕೊ ; ಸೋಮ್ಮನ, ತೇಜಸ್ಸಂಬ ಕಾರ್ಯದಿಂದ ಸತ್ತಂಬ ಮೂಲವನ್ನು ಹುಡುಕಿಕೊ” (ಛಾಂ, ೬-೮-೪) ಎಂದು ಸೃಷ್ಟಿಯೇ ಮುಂತಾದ ವಿವರಕ್ಕೆ ಬ್ರಹ್ಮಜ್ಞಾನವೇ ಪ್ರಯೋಜನ ಎಂಬುದನ್ನು (ಶ್ರುತಿಯು) ತಿಳಿಸಿಯೂ ಇರುತ್ತದೆ. ಕಾರ್ಯವು ಕಾರಣಕ್ಕಿಂತ ಬೇರೆಯಲ್ಲ ಎಂಬುದನ್ನು ತಿಳಿಸುವದಕ್ಕಾಗಿಯೇ ಸೃಷ್ಮಾದಿವಿವರವನ್ನು ಶ್ರುತಿಯಲ್ಲಿ ಹೇಳಿದೆ ಎಂಬುದು ಮೈದಾದಿದೃಷ್ಟಾಂತಗಳಿಂದಲೂ ಗೊತ್ತಾಗುತ್ತದೆ. ಆದ್ದರಿಂದಲೇ ಸಂಪ್ರದಾಯವನ್ನು ಬಲ್ಲವರು ‘ಮಣ್ಣು, ಕಬ್ಬಿಣ, ಕಿಡಿ - ಮುಂತಾದ

  1. ಈ ಅಧ್ಯಾಯದಲ್ಲಿ ಕಾರ್ಯವಿಷಯದ ವಿಗಾನಕ್ಕೆ ಸಮಾಧಾನವನ್ನು ಹೇಳುವ ಕಾರಣವಿಲ್ಲ ; ಏಕೆಂದರೆ ಅದ್ವಿತೀಯಬ್ರಹ್ಮವು ಜಗಜ್ಜನ್ಮಾದಿಕಾರಣವಾಗಿದೆ, ಅದರಲ್ಲಿಯೇ ಶ್ರುತಿಸಮನ್ವಯ - ಎಂಬಿದೇ ಈ ಅಧ್ಯಾಯದ ಅರ್ಥ. ಕಾರ್ಯವು ಬ್ರಹ್ಮಜ್ಞಾನಾರ್ಥ ವಾಗಿರುವದರಿಂದಲೂ ಅದು ಮಿಥ್ಯಯಂದು ಜಿಜ್ಞಾಸಾಸೂತ್ರ, ಜನ್ಮಾದಿಸೂತ್ರಗಳಲ್ಲಿ ಸೂಚಿತವಾಗಿಯೇ ಇರುವದರಿಂದಲೂ ಅದರ ವಿಗಾನವೂ ಇದ್ದರೂ ಚಿಂತೆಯಿಲ್ಲ. ಇದನ್ನು ತಿಳಿಸುವದಕ್ಕೆ ಮುಂದಿನ ಭಾಷ್ಯವಾಕ್ಯವು ಬಂದಿದೆ. ಎರಡನೆಯ ಅಧ್ಯಾಯದಲ್ಲೋಕ ಇದರ ವಿಚಾರವು ಬಂದಿದೆ ಎಂಬುದಕ್ಕೆ ೨-೩-೧ ರ ಭಾಷ್ಯವನ್ನು ನೋಡಿ.

  2. ಆದ್ದರಿಂದ ಇಲ್ಲಿ ವಿಗಾನವನ್ನು ಅಂಗೀಕರಿಸಿ ಉತ್ತರ ಹೇಳಿದೆ ಎಂದು ತಿಳಿಯಬೇಕು. 3. ಗೌಡಪಾದರವರು. ಇವರ ವಿಷಯಕ್ಕೆ ಪೀಠಿಕೆಯನ್ನು ನೋಡಿ.

REE

ಅಧಿ. ೪. ಸೂ. ೧೫] ಅಸತ್ಕಾರಣಶ್ರುತಿಯ ಅರ್ಥ (ದೃಷ್ಟಾಂತಗಳಿಂದ) ಬೇರೆಬೇರೆಯಾಗಿ ಸೃಷ್ಟಿಯನ್ನು ಹೇಳಿದಯಷ್ಟ, ಅದು (ಅದೂತ ಜ್ಞಾನಕ್ಕೆ ಬುದ್ಧಿಯನ್ನು) ಇಳಿಸುವದಕ್ಕೆ ಉಪಾಯವೇ. (ಆದ್ದರಿಂದ) ಹೇಗೂ ಭೇದವಿರುವದಿಲ್ಲ” (ಮಾಂ. ಕಾ. ೩-೧೫) ಎಂದು ಹೇಳಿರುತ್ತಾರೆ.

ಆದರ ಬ್ರಹ್ಮಜ್ಞಾನದಿಂದಾಗುವ ಫಲವನ್ನು ಬ್ರಹ್ಮವನ್ನು ಅರಿತುಕೊಂಡವನು ಪರಮಪುರುಷಾರ್ಥವನ್ನು ಪಡೆದುಕೊಳ್ಳುತ್ತಾನೆ’’ (ತ್ಯ. ೨-೧), “ಆತ್ಮನನ್ನು ಅರಿತು ಕೊಂಡವನು ಶೋಕವನ್ನು ದಾಟುತ್ತಾನೆ’’ (ಛಾಂ, ೭-೧-೩) “ಆತನನ್ನೇ ಅರಿತು ಕೂಂಡರ ಅತಿಮೃತ್ಯುವನ್ನು ಹೊಂದುತ್ತಾನೆ” (ಶ್ವೇ. ೩-೮) .ಎಂದು ಶ್ರುತಿಯಲ್ಲಿ ಹೇಳಿರುತ್ತದೆ. ಮತ್ತು ಈ ಘಲವು ಪ್ರತ್ಯಕ್ಷವಾಗಿ ಗೊತ್ತುಮಾಡಿಕೊಳ್ಳಬಹು ದಾದದ್ದೂ (ಆಗಿದೆ) ; ಏಕೆಂದರೆ ಅದೇ ನೀನಾಗಿರುವ’ (ಛಾಂ. ೬-೮-೭) ಎಂದು ಅಸಂಸಾರ್ಯಾತ್ಮಭಾವವನ್ನು ಅರಿತುಕೊಂಡರೆ ಸಂಸಾರ್ಯಾತ್ಮತ್ವವು ತೊಲಗುತ್ತದೆ.’

ಸಮಾಕರ್ಷಾತ್ |l೧೫|| ೧೫. ಎಳೆದುಕೊಂಡು (ಹೇಳುವ)ದರಿಂದ (ಇದು ಅಸತ್ತಲ್ಲ).

ಅಸತ್ಕಾರಣಶ್ರುತಿಯ ಅರ್ಥ

(ಭಾಷ್ಯ) ೩೬೮, ಯತ್ ಪುನಃ. ಕಾರಣವಿಷಯಂ ವಿಗಾನಂ ದರ್ಶಿತಮ್ ಅಸದ್ವಾ ಇದಮಗ್ರ ಆಸೀತ್” (ತೈ. ೨-೭) ಇತ್ಯಾದಿ, ತತ್ ಪರಿಹರ್ತವ್ಯಮ್ | ಅತ್ತೋ ಚ್ಯತೇ |“ಅಸದ್ವಾ, ಇದಮಗ್ರ ಆಸೀತ್’’ (ತ್ಯ. ೨-೭) ಇತಿ ನಾತ್ರ ಅಸತ್ ನಿರಾತ್ಮಕ ಕಾರಣನ ಶ್ರಾವ್ಯತೇ | ಯತಃ ‘‘ಅಸನ್ನೇವ ಸ ಭವತಿ | ಅಸದ್ ಬ್ರಹ್ಮತಿ ವೇದ ಚೇತ್ | ಅಸ್ತಿ ಬ್ರಹ್ಮತಿ ಚೇಷ್ಟೇದ | ಸವ್ರಮನಂ ತತೋ ವಿದುಃ’ (ತೈ. ೨-೬) ಇತಿ ಅಸದ್ವಾದಾಪವಾದೇನ ಅಸ್ತಿತ್ವಲಕ್ಷಣಂ ಬ್ರಹ್ಮ ಅನ್ನಮಯಾದಿಕೇಶಪರಂಪರಯಾ ಪ್ರತ್ಯಗಾತ್ಮಾನಂ ನಿರ್ಧಾರ್ಯ ‘‘ಸೋಕಾಮಯತ’ (ತ್ಯ. ೨-೬) ಇತಿ ತಮೇವ ಪ್ರಕೃತಂ ಸಮಾಕೃಷ್ಣ ಸಪ್ರಪಞ್ಞಣ್ಣಾಂ ಸೃಷ್ಟಿಂ ತಸ್ಮಾತ್ ಶ್ರಾವಯಿತ್ವಾ “ತತೃತ್ಯಮಿತ್ಕಾ ಚಕ್ಷತೇ” (ತೈ. ೨-೬) ಇತಿ ಚ ಉಪಸಂಹೃತ್ಯ ‘ತದಷ ಶ್ಲೋಕೋ ಭವತಿ’ (ತ್ಯ.

1.ಹೀಗೆ ಜ್ಞಾನದ ಪ್ರಯೋಜನವಾದ ಅಜ್ಞಾನತತ್ಕಾರ್ಯನಿವೃತ್ತಿಯುದೃಷ್ಟ ವೂ ಶ್ರುತವೂ ಆಗಿರುತ್ತವೆ ; ಸೃಷ್ಯಾದಿಜ್ಞಾನದ ಪ್ರಯೋಜನವು ಅನುಭವದಲ್ಲಿಲ್ಲ, ಶ್ರುತಿಯಲ್ಲಿಯೂ ಇಲ್ಲ, ಕಲ್ಪಿಸುವದಕ್ಕೂ ಬರುವದಿಲ್ಲ. ಆದ್ದರಿಂದ ಕಾರ್ಯವಿಷಯದ ವಿಗಾನವಿದ್ದರೂ ಬಾಧಕವಿಲ್ಲ - ಎಂದು ಉಪಸಂಹಾರಮಾಡಿದಂತೆ ಆಯಿತು.

೬೦೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

೨-೬) ಇತಿ ತಸ್ಮಿನ್ನೇವ ಪ್ರಕೃತೇ ಅರ್ಥ ಇಮಂ ಶ್ಲೋಕಮ್ ಉದಾಹರತಿ - “ಅಸದ್ವಾ ಇದಮಗ್ರ ಆಸೀತ್’ (ತ್ಯ. ೨-೭) ಇತಿ | ಯದಿ ತು ಅಸತ್ ನಿರಾತ್ಮಕಮ್ ಅಸ್ಮಿನ್ ಶ್ಲೋಕೇ ಅಭಿಪ್ರೇಯೇತ, ತತಃ ಅನ್ಯಸಮಾಕರ್ಷಣೇ ಅನ್ಯಸ್ಯ ಉದಾಹರಣಾತ್

ಅಸಂಬದ್ದಂ ವಾಕ್ಯಮ್ ಆಪತ | ತಸ್ಮಾತ್ ನಾಮರೂಪವ್ಯಾಕೃತವಸ್ತುವಿಷಯಃ ಪ್ರಾಯಣ ಸಚ್ಚಬ್ದಃ ಪ್ರಸಿದ್ಧ: ಇತಿ ತದ್ಯಾಕರಣಾಭಾವಾಪೇಕ್ಷಯಾ ಪ್ರಾಗುತ್ಪತ್ತೇ ಸದೇವ ಬ್ರಹ್ಮ ಅಸದಿವ ಆಸೀತ್ ಇತಿ ಉಪಚರ್ಯತೇ ||

(ಭಾಷ್ಯಾರ್ಥ) ಇನ್ನು ಇದು ಮೊದಲು ಅಸತ್ತೇ ಆಗಿತ್ತು” (ತೈ. ೨-೭) ಎಂದು ಮುಂತಾದ ಕಾರಣವಿಷಯದ ವಿಗಾನವನ್ನು (ಪೂರ್ವಪಕ್ಷಿಯು) ತೋರಿಸಿದ್ಧನಷ್ಟೆ, ಅದಕ್ಕೆ ಪರಿಹಾರವನ್ನು ಹೇಳಬೇಕಾದದ್ದಿದ. ಅದಕ್ಕೆ (ಈ ಪರಿಹಾರವನ್ನು) ಹೇಳುತ್ತೇವೆ : (“ಸಮಾಕರ್ಷಾತ್’). ಇದು ಮೊದಲು ಅಸತ್ತೇ ಆಗಿತ್ತು” (ತೈ. ೨-೭) ಎಂದು ನಿರಾತ್ಮಕವಾದ ಅಸತ್ತು’ (ಜಗತ್ತಿಗೆ) ಕಾರಣವೆಂದು ಇಲ್ಲಿ ಶ್ರುತಿಯಲ್ಲಿ ಹೇಳಿಲ್ಲ. ಏಕೆಂದರೆ ಬ್ರಹ್ಮವು ಇಲ್ಲವೆಂದು ತಿಳಿದರೆ ಅವನು ಇಲ್ಲವೇ ಆಗುವನು ; ಬ್ರಹ್ಮವು ಇದ ಎಂದು ತಿಳಿದವನಾದರೆ ಅದರಿಂದ ಇವನು ಇರುವನೆಂದು ತಿಳಿಯುವರು? (ತೈ. ೨-೬) ಎಂದು ಅಸದ್ವಾದವನ್ನು ಹಳಿದು, ಇದ ಎಂಬ ಸ್ವರೂಪದ ಬ್ರಹ್ಮವನ್ನು ಅನ್ನಮಯಾದಿಕೋಶಗಳ ಪರಂಪರೆಯಿಂದ ಪ್ರತ್ಯಗಾತ್ಮನೆಂದು ನಿಶ್ಚಯಿಸಿ ‘‘ಅವನು ಇಚ್ಚಿಸಿದನು” (ತೈ. ೨-೬) ಎಂದು ಪ್ರಕೃತನಾದ ಆ (ಪರಮಾತ್ಮನನ್ನೇ) ಎಳೆದು ಕೊಂಡು ಅವನಿಂದ (ಆದ) ಸೃಷ್ಟಿಯನ್ನು ವಿವರಸಹಿತವಾಗಿ ತಿಳಿಸಿ ಅದನ್ನು ಸತ್ಯವೆಂದು ಕರೆಯುವರು’ (ತ್ಯ. ೨-೬) ಎಂದು ಉಪಸಂಹಾರಮಾಡಿ ಅದೇ ಪ್ರಕೃತವಾದ ಅರ್ಥದಲ್ಲಿ ಅದರಲ್ಲಿಯೇ ಈ ಶ್ಲೋಕವು ಇರುತ್ತದೆ’ ಎಂದು ‘ಇದು ಮೊದಲು ಅಸತ್ತೇ ಆಗಿತ್ತು’’ (ತ್ಯ. ೨-೭) ಎಂಬೀ ಶ್ಲೋಕವನ್ನು ಉದಾಹರಿಸಿರುತ್ತದ. ಆದರ ನಿರಾತ್ಮಕವಾದ ಅಸತ್ತೇ ಈ ಶ್ಲೋಕದಲ್ಲಿ ಅಭಿಪ್ರೇತವಾಗಿದ್ದರೆ ಆಗ ಒಂದನ್ನು ಎಳೆದುಕೊಂಡು (ಹೇಳುವಾಗ) ಮತ್ತೊಂದನ್ನು ಉದಾಹರಿಸುವದರಿಂದ (ಈ) ವಾಕ್ಯವು ಅಸಂಬದ್ಧವಾಗುತ್ತಿತ್ತು. ಆದ್ದರಿಂದ ಪ್ರಾಯಿಕವಾಗಿ ಸಂಬ ಶಬ್ದವು ನಾಮ ರೂಪಗಳಿಂದ ವ್ಯಾಕೃತವಾದ ವಸ್ತುವಿನ ವಿಷಯವೆಂದು ಪ್ರಸಿದ್ಧವಾಗಿರುವದರಿಂದ ಆ

  1. ಶೂನ್ಯವು ಎಂದರ್ಥ. ರಜ್ಜು ಸರ್ಪವೇ ಮುಂತಾದವುಗಳಂತ ವಿಕಲ್ಪವಲ್ಲ, ಇದು ನಿರಾಸ್ಪದವಾದದ್ದು ಎಂದು ತಿಳಿಸುವದಕ್ಕೆ ನಿರಾತ್ಮಕವಾದ ಎಂಬ ವಿಶೇಷಣವನ್ನು ಉಪಯೋಗಿಸಿದ.

ಅಧಿ. ೪. ಸೂ. ೧೫]

ಅಸತ್ಕಾರಣಶ್ರುತಿಯ ಅರ್ಥ

೬೦೧

(ನಾಮರೂಪ) ವ್ಯಾಕರಣವು ಆಗಿರಲಿಲ್ಲವೆಂಬ ಅಪೇಕ್ಷೆಯಿಂದ ಬ್ರಹ್ಮವು ಸತ್ತಾ ಗಿದ್ದರೂ ಸೃಷ್ಟಿಗಿಂತ ಮುಂಚೆ ಅಸತ್ತಿನಂತೆ ಇತ್ತು ಎಂದು ಉಪಚಾರಕ್ಕೆ ಹೇಳಿರುತ್ತದೆ.’

(ಭಾಷ್ಯ) ೩೬೯. ಏಷ್ಯವ ಅಸದೇವೇದಮಗ್ರ ಆಸೀತ್’’ (ಛಾಂ. ೩-೧೯-೧) ಇತ್ಯ ತಾಪಿ ಯೋಜನಾ | ‘ತತ್ಸದಾಸೀತ್’’ ಇತಿ ಸಮಾಕರ್ಷಣಾತ್ | ಅತ್ಯನಾಭಾವಾಭ್ಯು ಪಗಮೇಹಿತ’ದಾಸೀತ್’ ಇತಿ ಕಿಂ ಸಮಾಕೃತ ? ‘‘ತಕ ಆಹುರಸದೇವೇದಮಗ್ರ ಆಸೀತ್’’ (ಛಾಂ. ೬-೨-೧) ಇತ್ಯಾಪಿ ನ ಶ್ರುತ್ಯರಾಭಿಪ್ರಾಯೇಣ ಅಯ ಮೇಕೀಯಮತೋಪನ್ಯಾಸಃ | ಕ್ರಿಯಾಯಾಮಿವ ವಸ್ತುನಿ ವಿಕಲ್ಪಸ್ಯ ಅಸಂಭವಾತ್ | ತಸ್ಮಾತ್ ಶ್ರುತಿಪರಿಗೃಹೀತಸತ್ನಕ್ಷದಾರ್ತ್ಮಾಯ್ಯವ ಅಯಂ ಮನ್ಯಮತಿಪರಿಕಲ್ಪಿತಸ್ಯ ಅಸತ್ವಕ್ಷಸ್ಯ ಉಪನ್ಯಸ್ಯ ನಿರಾಸಃ ಇತಿ ದ್ರಷ್ಟವ್ಯಮ್ | ‘ತದ್ದೇದಂ ತರ್ಥ್ಯ ವ್ಯಾಕೃತಮಾಸೀತ್’’ (ಬೃ. ೧-೪-೭) ಇತ್ಯಾಪಿ ನ ನಿರಧ್ಯಕ್ಷಸ್ಯ ಜಗತೋ ವ್ಯಾಕರಣಂ ಕಥ್ಯತೇ |“ಸ ವಿಷ ಇಹ ಪ್ರವಿಷ್ಟ ಆ ನಖಾಗ್ರೇಭ್ಯಃ ’ (ಬೃ. ೧-೪-೭) ಇತಿ ಅಧ್ಯಕ್ಷಸ್ಯ ವ್ಯಾಕೃತಕಾರ್ಯಾನುಪ್ರವೇಶಿನ ಸಮಾಕರ್ಷಾತ್ | ನಿರಧ್ಯಕ್ಷೆ - ವ್ಯಾಕರಣಾಭ್ಯುಪ ಗಮೇ ಹಿ ಅನನ್ತರೇಣ ಪ್ರಕೃತಾವಲಬ್ಬಿನಾ ‘ಸ’ ಇತ್ಯನೇನ ಸರ್ವನಾಮಾ ಕಃ ಕಾರ್ಯಾನುಪ್ರವೇಶಿನ ಸಮಾಕೃಷ್ಕತ ? ಚೇತನಸ್ಯ ಚ ಅಯಮಾತ್ಮನಃ ಶರೀರೇ ಅನುಪ್ರವೇಶಃ ಕ್ರೌಯತೇ | ಪ್ರವಿಷ್ಟಸ್ಯ ಚೇತನಶ್ರವಣಾತ್ “ಪಶ್ಯಂಶ್ಚಕ್ಷುಃ ಶೃಇತ್ರಂ ಮನ್ನಾನೋ ಮನಃ’ (ಬೃ. ೧-೪-೭) ಇತಿ | ಅಪಿ ಚ ಯಾದೃಶಮ್ ಇದಮ್ ಅದ್ಯತ್ವ ನಾಮರೂಪಾಭ್ಯಾಂ ವ್ಯಾಕ್ರಿಯಮಾಣಂ ಜಗತ್ ಸಾಧ್ಯಕ್ಷ ವ್ಯಾಕ್ರಿಯತೇ, ಏವಮ್ ಆದಿಸರ್ಗಪಿ ಇತಿ ಗಮ್ಯತೇ | ದೃಷ್ಟವಿಪರೀತ ಕಲ್ಪನಾನುಪಪತ್ತೇ ! ಶ್ರುತ್ಯನ್ನರಮಪಿ “ಅನೇನ ಜೀವೇನಾತ್ಮನಾನುಪ್ರವಿಶ್ಯ ನಾಮರೂಪೇ ವ್ಯಾಕರವಾಣಿ’ (ಛಾಂ. ೬-೩-೨) ಇತಿ ಸಾಧ್ಯಕ್ಷಾಮೇವ ಜಗತೋ ವ್ಯಾಕ್ರಿಯಾಂ ದರ್ಶಯತಿ | ‘ವ್ಯಾಕ್ರಿಯತ’ ಇತ್ಯಪಿ ಕರ್ಮಕರ್ತರಿ ಲಕಾರಃ ಸವ ಪರಮೇಶ್ವರೇ ವ್ಯಾಕರ್ತರಿ ಸೌಕರ್ಯಮ್ ಅಪೇಕ್ಷ ದ್ರಷ್ಟವಃ | ಯಥಾ ಲೂಯತೇ ಕೇದಾರಃ ಸ್ವಯಮೇವ ಇತಿ ಸತ್ಯೇವ ಪೂರ್ಣಕೇ ಲವಿತರಿ | ಯದ್ವಾ ಕರ್ಮವ

  1. ಮೊದಲಿದ್ದ ನೀರು ಆಮೇಲೆ ನೀರು ನೂರ ಮುಂತಾಗಿ ಆಗುವಂತ ಸೃಷ್ಟಿಗೆ ಮೊದಲು ಬ್ರಹ್ಮವು ಒಂದೇ ಆಗಿದ್ದು ಸೃಷ್ಟಿಯಾದ ಬಳಿಕ ನಾಮರೂಪಗಳಿಂದ ಬಿಡಿಬಿಡಿಯಾಗಿ ವಿಂಗಡಿಸಿ ತೋರಿಕೊಳ್ಳುತ್ತದೆ. ಅದು ವ್ಯಾಕೃತವು ; ಅದಕ್ಕೆ ಹೋಲಿಸಿದರೆ ಮೊದಲಿದ್ದ ಬ್ರಹ್ಮವು ಅವ್ಯಾಹೃತವು, ಅಸತ್ತು. ಐ. ಭಾ. ೧-೧ ; ತ್ಯ. ಭಾ. ೨-೬ ; ಛಾಂ. ಭಾ. ೩-೧೯-೧, ೬-೨-೧, ೮ ೧೪-೧ ; ಬೃ.ಭಾ. ೧-೪-೭, ೩-೫-೧; ಗೀ, ಭಾ. ೯-೧೯-೫೭೩ ನ್ನು ನೋಡಿರಿ.೬೦೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಏಷ ಲಕಾರಃ ಅರ್ಥಾಕ್ಷಿಪ್ತಂ ಕರ್ತಾರಮ್ ಅಪೇಕ್ಷ ದ್ರಷ್ಟವ್ಯ: | ಯಥಾ ಗಮ್ಯತೇ ಗ್ರಾಮಃ ಇತಿ ||

(ಭಾಷ್ಯಾರ್ಥ) “ಇದು ಮೊದಲು ಅಸತ್ತೇ ಆಗಿತ್ತು’’ (ಛಾಂ. ೩-೧೯-೧) ಎಂಬಲ್ಲಿಯೂ ಇದೇ ಯೋಜನ(ಯನ್ನು ಮಾಡಿಕೊಳ್ಳಬೇಕು). ಏಕೆಂದರೆ ಅದು ಸತ್ತಾಗಿತ್ತು" (ಛಾಂ. ೩-೧೯-೧) ಎಂದು (ಅಲ್ಲಿಯೂ ಸತ್ತನ್ನು) ಎಳೆದುಕೊಂಡು (ಹೇಳಿದ). ಅತ್ಯಂತವಾಗಿ ಅಭಾವವೇ ಆಗಿತ್ತೆಂದು) ಇಟ್ಟುಕೊಂಡರೆ ಅದು ಸತ್ತಾಗಿತ್ತು’’ ಎಂದು ಯಾವದನ್ನು ಎಳೆದುಕೊಂಡು ಹೇಳಲಾದೀತು ? “ಇದು ಮೊದಲು ಅಸತ್ತೇ ಆಗಿತ್ತು ಎಂದು ಕೆಲವರು ಹೇಳುತ್ತಾರ" (ಛಾಂ, ೬-೨-೧) ಎಂಬಲ್ಲಿಯೂ ಮತ್ತೊಂದು ಶ್ರುತಿಯನ್ನು ಪರಾಮರ್ಶಿಸುವ) ಅಭಿಪ್ರಾಯದಿಂದ’ ಈ ಕಲವರ ಮತವನ್ನು ಹೇಳಿಲ್ಲ ; ಏಕಂದರ ಕ್ರಿಯೆಯಲ್ಲಿರುವಂತ ವಸ್ತುವಿನಲ್ಲಿ ವಿಕಲ್ಪವಿರುವ ಸಂಭವ ವಿಲ್ಲ. ಆದ್ದರಿಂದ ಶ್ರುತಿಯಲ್ಲಿ ತೆಗೆದುಕೊಂಡಿರುವ ಸತ್ಯತ್ವವನ್ನು ಗಟ್ಟಿಗೊಳಿಸು ವದಕ್ಕಾಗಿಯೇ ಅಲ್ಪಬುದ್ಧಿಯುಳ್ಳವರು ಕಲ್ಪಿಸಿಕೊಂಡಿರುವ ಅಸತ್ಪಕ್ಷವನ್ನು ಹೇಳಿ ಈ ನಿರಾಕರಣೆಯನ್ನು ಮಾಡಿದೆ ಎಂದು ಭಾವ.

“ಅಲ್ಲಿ ಆಗ ಇದು ಅವ್ಯಾಹೃತವೇ ಆಗಿತ್ತು’ (ಬೃ. ೧-೪-೭) ಎಂಬಲ್ಲಿಯೂ (ಯಾವ) ಅಧ್ಯಕ್ಷನೂ ಇಲ್ಲದ ಜಗತ್ತು (ತಾನೇ) ವ್ಯಾಕರಣವಾಯಿತೆಂದು ಹೇಳಿರುವದಿಲ್ಲ. ಏಕೆಂದರೆ ಆ ಈತನು ಉಗುರುಗಳ ತುದಿಗಳವರೆಗೂ ಇಲ್ಲಿ ಹೊಕ್ಕಿರುತ್ತಾನ’ (ಬೃ. ೧-೪-೭) ಎಂದು ಅಧ್ಯಕ್ಷನು ವ್ಯಾಕೃತಕಾರ್ಯವನ್ನು ಒಳಹೊಕ್ಕಿರುತ್ತಾನೆಂದು ಎಳೆದುಕೊಂಡು ಹೇಳಿದ.ಯಾವ ಅಧ್ಯಕ್ಷನೂ ಇಲ್ಲದ (ಜಗತ್ತು ತಾನೇ) ವ್ಯಾಕರಣವಾಯಿತಂದು ಒಪ್ಪುವದಾದರೆ ಮುಂದ (ಬಂದಿರುವ) ಪ್ರಕೃತಾವಲಂಬಿಯಾದ ‘ಸಃ’ (ಆತನು) ಎಂಬೀ ಸರ್ವನಾಮದಿಂದ ಯಾವನು ಕಾರ್ಯಾನುಪ್ರವೇಶಿಯಂದು ಎಳದು (ತಿಳಿಸುವದ)ಕ್ಕಾದೀತು ? ಶರೀರದೊಳಗೆ

1.ತ್ಯ. ೨-೭, ಛಾಂ. ೩-೧೯ -೧ ಇವುಗಳನ್ನು ಇಲ್ಲಿ ಪರಾಮರ್ಶಿಸಿಲ್ಲ.

  1. ಕ್ರಿಯೆಯನ್ನು ಹಾಗೂ ಮಾಡಬಹುದು, ಹೀಗೂ ಮಾಡಬಹುದು - ಎಂಬ ವಿಕಲ್ಪವು ಆಗಬಹುದು. ಆದರೆ ವಸ್ತುವು ಆ ಶ್ರುತಿಯಂತೆ ಸತ್ತು, ಈ ಶ್ರುತಿಯಂತೆ ಅಸತ್ತು - ಎಂದು ವಿಕಲ್ಪಿಸುವದಕ್ಕೆ ಆಗುವದಿಲ್ಲ ಎಂದರ್ಥ. ವಸ್ತುವಿನ ವಿಷಯದಲ್ಲಿ ವಿಕಲ್ಪವಿಲ್ಲವೆಂದು ಆಚಾರ್ಯರು ಅಲ್ಲಲ್ಲಿ ಹೇಳಿರುವದನ್ನು ಶ್ರುತಿಪ್ರಮಾಣದಿಂದ ಹಾಗೂ ಇರಬಹುದು, ಹೀಗೂ ಇರಬಹುದು - ಎನ್ನುವ ವಾದಿಗಳು ಕಡೆಗಣಿಸಿರುತ್ತಾರೆಂದು ಇದರಿಂದ ಸ್ಪಷ್ಟವಾಗುತ್ತದೆ.

  2. ಬೌದ್ಧರ ಅಸದ್ವಾದವನ್ನು ,

ಅಧಿ. ೪. ಸೂ. ೧೫]

ಅಸತ್ಕಾರಣಶ್ರುತಿಯ ಅರ್ಥ

೬೦೩

ಒಳಹೊಕ್ಕಿರುವನೆಂದು ಶ್ರುತಿಯಲ್ಲಿ ಹೇಳಿರುವ ಇದು ಚೇತನನಾದ ಆತ್ಮನ (ವಿಷಯವೇ) ; ಏಕೆಂದರೆ ‘‘ನೋಡುವದರಿಂದ ನೋಟಕನು, ಕೇಳುವದರಿಂದ ಕೇಳುವವನು, ಮನನಮಾಡುವದರಿಂದ ಮಂತ್ರ’’ (ಬೃ. ೧-೪-೭) ಎಂಬ ಶ್ರುತಿ (ವಾಕ್ಯದಲ್ಲಿ) ಪ್ರವಿಷ್ಟನಾಗಿರುವವನು ಚೇತನನೆಂದೇ ಹೇಳಿರುತ್ತದೆ. ಇದೂ ಅಲ್ಲದೆ ಹೇಗೆ ಈಗ ನಾಮರೂಪಗಳಿಂದ ವಿಂಗಡವಾಗುತ್ತಿರುವ ಜಗತ್ತು ಸಾಧ್ಯಕ್ಷವಾಗಿಯೇ ವಿಂಗಡವಾಗುತ್ತಿರುವದೋ ಇದರಂತೆಯೇ ಮೊದಲಿನ ಸೃಷ್ಟಿಯಲ್ಲಿಯೂ (ಇದ್ದಿರ ಬೇಕು) ಎಂದು ನಿಶ್ಚಯಿಸಬೇಕಾಗಿದೆ ; ಏಕೆಂದರೆ ಕಂಡದ್ದಕ್ಕೆ ವಿರುದ್ಧವಾಗಿ ಕಲ್ಪಿಸುವದು ಸರಿಯಾಗುವದಿಲ್ಲ ಮತ್ತೊಂದುಶ್ರುತಿಯೂ ‘ಈ ಜೀವನೆಂಬ ಆತ್ಮನ (ರೂಪ) ದಿಂದ ಒಳಹೊಕ್ಕು ನಾಮರೂಪಗಳನ್ನು ವಿಂಗಡಿಸುವನು’ (ಛಾಂ. ೬-೩-೨) ಎಂದು ಸಾಧ್ಯಕ್ಷವಾಗಿಯೇ ಜಗತ್ತಿನ ವ್ಯಾಕರಣವಾಗುವದೆಂದು ತಿಳಿಸುತ್ತಿದೆ. ‘ವ್ಯಾಕ್ರಿಯತ’ (ವಿಂಗಡವಾಯಿತು) ಎಂದು ಕರ್ಮಕರ್ತರಿ ಲಕಾರವನ್ನು ಉಪಯೋಗಿಸಿರುವದು ವ್ಯಾಕರ್ತವಾದ ಪರಮೇಶ್ವರನು ಇರುತ್ತಿರುವಾಗಲೇ ಸೌಕರ್ಯದ ಅಪೇಕ್ಷೆಯಿಂದ ತಿಳಿಯಬೇಕು. ಹೇಗೆ ‘ಲೂಯತೇ ಕೇದಾರಃ ಸ್ವಯಮೇವ’ (ಗದ್ದೆಯು ತಾನೇ ಕಟಾವಾಗುತ್ತದೆ) - ಎಂದು ಕ್ರಿಯೆಯನ್ನು ಪೂರ್ತಿಗೊಳಿಸುವ ಕಟಾವುಮಾಡುವವನು ಇರುತ್ತಿರುವಾಗಲೇ (ಪ್ರಯೋಗವಾಗುತ್ತದೆಯೋ ಹಾಗೆಯೇ ಇದು). ಯಾವಾಗ ಈ ಲಕಾರವು ಕರ್ಮಣಿ (ಪ್ರಯೋಗ)ವೇ ಆಗಿರುವದೋ ಆಗ ಅರ್ಥಾಕ್ಷಿಪ್ತವಾದ ಕರ್ತವಿನ ಅಪೇಕ್ಷೆಯಿಂದ ಎಂದು ತಿಳಿಯಬೇಕು. ಹೀಗೆ ‘ಗಮ್ಯತೇ ಗ್ರಾಮಃ’ ಊರು ಹೊಂದಲ್ಪಡುತ್ತದೆ (ಎನ್ನುವರೋ ಹಾಗೆಯೇ ಇದು).

  1. ಇಲ್ಲಿ ಚಕ್ಷುಸ್ಸು, ಮನಃ - ಮುಂತಾದ ಶಬ್ದಗಳು ಕತ್ರ್ರಥ್ರದಲ್ಲಿ ಪ್ರಯೋಗವಾಗಿವೆ ; ಈ ಉಪನಿಷತ್ತಿನ ಭಾಷ್ಯವನ್ನು ನೋಡಿ.

  2. ‘ಚಕ್ಕು’ ಮುಂತಾದ ಶಬ್ದಗಳು ಕರ್ತವಚನಗಳಾಗಿದ್ದರಿಂದ ಚೇತನವಾಚಿಗಳು ; ಮುಂದ ಆತ್ಮನಂದೇ ಉಪಾಸನೆಮಾಡಬೇಕು ಎಂಬುದರಿಂದಲೂ ಪ್ರವಿಷ್ಟನು ಚೇತನನೇ.

  3. ಕುಂಬಾರನೆಂಬ ಅಧ್ಯಕ್ಷನು ಇರುವಾಗಲೇ ಮಣ್ಣು ಮಡಿಕಕುಡಿಕ ಮುಂತಾದವು ಗಳಾಗುವವು. ಇದು ದೃಷ್ಟಾಂತವು.

  4. ದೃಷ್ಟಾಂತವಿಲ್ಲದ ಅಥವಾ ದೃಷ್ಟಾಂತಕ್ಕೆ ವಿರುದ್ಧವಾಗಿ ಅನುಮಾನಿಸುವದು ಸರಿ ಯಲ್ಲ ; ಬೆಟ್ಟದಲ್ಲಿ ಹೊಗೆಯಿರುವದರಿಂದ ಅದರೊಳಗೆ ನೀರಿರಬೇಕು - ಎಂಬ ಅನುಮಾನವು ಎಂದಿಗೂ ಸರಿಯಾದ ತರ್ಕವಾಗಲಾರದು.

  5. ಕರ್ಮಕರ್ತರಿ ಪ್ರಯೋಗವೂ ಕರ್ತವೂ ಕರ್ಮವೂ ಒಬ್ಬನೇ ಎಂಬುದನ್ನು ಹೇಳುತ್ತದೆ. ಆದರೂ ಗದ್ದ ಕಟಾವಾಗುತ್ತದೆ ಎಂಬಲ್ಲಿ ಕಟಾವುಮಾಡುವವರು ಬೇರೆ ಇದ್ದೇ ಇರಬೇಕೆಂದು ಸ್ಪಷ್ಟವಾಗಿದ. ‘ಈ ಲೇಖನಿ ಚೆನ್ನಾಗಿ ಬರೆಯುತ್ತದೆ’ ಎಂಬ ಪ್ರಯೋಗವನ್ನು ಇದಕ್ಕೆ ಹೋಲಿಸಿರಿ. ಕರ್ಮಣಿಪ್ರಯೋಗದಲ್ಲಿ ಕರ್ತವನ್ನು ಹೇಳದಿದ್ದರೂ ಅಧ್ಯಾಹಾರಮಾಡಿಕೊಳ್ಳಬೇಕಾಗಿರುತ್ತದೆ.

೬೦೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

೫. ಬಾಲಾಕ್ಯಧಿಕರಣ (ಸೂ. ೧೬-೧೮)

(ಕೌ, ೪-೧೮ ರಲ್ಲಿ ಯಸ್ಯ ವೃತತ್ಕರ್ಮ ಎಂದು ಪರಮಾತ್ಮನನ್ನು ಹೇಳಿದೆ).

ಜಗದ್ಘಾಚಿತ್ಪಾತ್ ||೧೬|| ೧೬. (ಕರ್ಮಶಬ್ದವು) ಜಗದ್ಯಾಚಿಯಾಗಿರುವದರಿಂದ (ಇಲ್ಲಿ ಹೇಳಿರು ವದು ಬ್ರಹ್ಮವೇ).

ವಿಷಯವೂ ಸಂಶಯವೂ

(ಭಾಷ್ಯ) ೩೭೦, ಕೌಷೀತಕೀಬ್ರಾಹ್ಮಣೇ ಬಾಲಾಕ್ಯಜಾತಶತ್ರುಸಂವಾದೇ ಶೂಯತೇ - “ಯೋ ವೈ ಬಾಲಾಕ ಏತೇಷಾಂ ಪುರುಷಾಣಾಂ ಕರ್ತಾ ಯಸ್ಯ ವೃತತ್ ಕರ್ಮ ಸ ವೇದಿತವ್ಯ: ’’’ (ಕೌ, ಬ್ರಾ, ೪-೧೮) ಇತಿ | ತತ್ರ ಕಿಂ ಜೀವೋ ವೇದಿತವ್ಯನ ಉಪದಿಶ್ಯತೇ, ಉತ ಮುಖ್ಯ: ಪ್ರಾಣಃ, ಉತ ಪರಮಾತ್ಮಾ ಇತಿ ಸಂಶಯಃ ||

(ಭಾಷ್ಯಾರ್ಥ) | ಕೌಷೀತಕೀಬ್ರಾಹ್ಮಣದಲ್ಲಿ ಬಾಲಾಕ್ಯಜಾತಶತ್ರುಸಂವಾದದಲ್ಲಿ “ಎಲೈ ಬಾಲಾಕಿಯ, ಯಾವನೇ ಈ ಪುರುಷರ ಕರ್ತನೋ, ಯಾವನದೇ ಈ ಕರ್ಮವೋ, ಅವನನ್ನೇ ಅರಿಯತಕ್ಕದ್ದು’’ (ಕೌ, ೪-೧೮) ಎಂದು ಶ್ರುತಿಯಿದೆ. ಅಲ್ಲಿ ಜೀವನನ್ನು ಅರಿಯತಕ್ಕದ್ದು ಎಂದು ತಿಳಿಸಿದಯ, ಅಥವಾ ಮುಖ್ಯಪ್ರಾಣನನ್ನು (ತಿಳಿಸಿದಯ), ಅಥವಾ ಪರಮಾತ್ಮನನ್ನ ? - ಎಂಬುದು ಸಂಶಯವು.

ಪೂರ್ವಪಕ್ಷ : ಜೀವಮುಖ್ಯಪ್ರಾಣರಲ್ಲಿ ಒಬ್ಬರನ್ನು ಹೇಳಿದೆ

(ಭಾಷ್ಯ) ೩೭೧. ಕಿಂ ತಾವತ್ ಪ್ರಾಪ್ತಮ್ ? ಪ್ರಾಣಃ ಇತಿ | ಕುತಃ ? ‘ಯಸ್ಯ ವೃತತ್ ಕರ್ಮ’ ಇತಿ ಶ್ರವಣಾತ್ | ಪರಿಸ್ಪಸ್ಟಲಕ್ಷಣಸ್ಯ ಚ ಕರ್ಮಣಃ ಪ್ರಾಣಾಶ್ರಯತಾತ್ | ವಾಕ್ಯಶೇಷೇ ಚ ಅಥಾಸ್ಮಿನ್ ಪ್ರಾಣ ಏಕಧಾ ಭವತಿ" (ಕೌ, ೪-೧೯) ಇತಿ ಪ್ರಾಣಶಬ್ದದರ್ಶನಾತ್ | ಪ್ರಾಣಶಬ್ದಸ್ಯ ಚ ಮುಖ್ಯ ಪ್ರಾಣೇ ಪ್ರಸಿದ್ಧ ತ್ವಾತ್ | ಯೇ

  1. ಇಲ್ಲಿ ಕೊಟ್ಟಿರುವ ಸಂಖ್ಯೆಗಳು ನಿ|| ಪಾಠದವು. ಆ ಪಾಠದಲ್ಲಿ ಇದು ಆರಣ್ಯಕದ ಆರನೆಯ ಅಧ್ಯಾಯದ ೧೯ ನೆಯ ಮಂತ್ರ. ಅಲ್ಲಿ “ಸ ವೈ ವೇದಿತಃ ” ಎಂದಿದ.

ಅಧಿ. ೫. ಸೂ. ೧೬] ಪೂರ್ವಪಕ್ಷ : ಜೀವಮುಖ್ಯಪ್ರಾಣರಲ್ಲಿ ಒಬ್ಬರನ್ನು ಹೇಳಿದೆ ೬೦೫ ಚೈತೇ ಪುರಸ್ತಾತ್ ಬಾಲಾಕಿನಾ “ಆದಿತ್ಯ ಪುರುಷಃ’ (ಕೌ, ೪-೨), ‘‘ಚನ್ನಮಸಿ ಪುರುಷಃ’ (ಕೌ, ೪-೩) ಇವಮಾದಯಃ ಪುರುಷಾಃ ನಿರ್ದಿಷ್ಟಾಃ, ತೇಷಾಮಪಿ ಭವತಿ ಪ್ರಾಣ ಕರ್ತಾ | ಪ್ರಾಣಾವಸ್ಥಾವಿಶೇಷತ್ವಾತ್ ಆದಿತ್ಯಾದಿದೇವತಾತ್ಮನಾಮ್ | “ಕತಮ ಏಕೋ ದೇವ ಇತಿ ಪ್ರಾಣ ಇತಿ ಸ ಬ್ರಹ್ಮ ತ್ಯದಿತ್ಯಾಚಕ್ಷತೇ’ (ಬೃ. ೩-೯-೯) ಇತಿ ಶ್ರುತ್ಯನ್ತರಪ್ರಸಿದ್ಧ | ಜೀವೋ ವಾ ಅಯಮಿಹ ವೇದಿತವ್ಯತಯಾ ಉಪ ದಿಶ್ಯತೇ | ತಸ್ಯಾಪಿ ಧರ್ಮಾಧರ್ಮಲಕ್ಷಣಂ ಕರ್ಮ ಶಕ್ಯತೇ ಶ್ರಾವಯಿತುಮ್ ‘ಯಸ್ಯ ವೃತತ್ ಕರ್ಮ’ ಇತಿ | ಸೋSಪಿ ಭೋಕೃತ್ವಾತ್ ಭೋಗೋಪಕರಣಭೂತಾನಾಮ್ ಏತೇಷಾಂ ಪುರುಷಾಣಾಂ ಕರ್ತಾ ಉಪಪದ್ಯತೇ | ವಾಕ್ಯಶೇಷೇ ಚ ಜೀವಲಿಜ್ಜಮ್ ಅವಗಮ್ಯತೇ | ಯತ್ಕಾರಣಂ ವೇದಿತವ್ಯತಯಾ ಉಪನ್ಯಸ್ತಸ್ಯ ಪುರುಷಾಣಾಂ ಕರ್ತು? ವೇದನಾಯ ಉಪೇತಂ ಬಾಲಾಕಿಂ ಪ್ರತಿ ಬುಭೋಧಯಿಷುಃ ಅಜಾತಶತ್ರು: ಸುಪ್ತಂ ಪುರುಷಮ್ ಆಮ ಆಮyಣಶಬ್ದಾಶ್ರವಣಾತ್ ಪ್ರಾಣಾದೀನಾಮ್ ಅಭೋಕ್ತ ತ್ವಮ್ ಪ್ರತಿಬೋಧ ಯಷ್ಟಿಘಾತೋತ್ಥಾನಾತ್ ಪ್ರಾಣಾದಿವ್ಯತಿರಿಕ್ತಂ ಜೀವಂ ಭೋಕ್ತಾರಂ ಪ್ರತಿಬೋಧಯತಿ | ತಥಾ ಪರಸ್ತ್ರಾದಪಿ ಜೀವಲಿಜ್ಮ್ ಅವಗಮ್ಮತೇ

“ತಥಾ ಶ್ರೇಷ್ಠ ಸೈರ್ಭುಜ್ ಯಥಾ ವಾ ಸ್ವಾ: ಶ್ರೇಷ್ಠನಂ ಭುಞ್ಞವಮೇಷ ಪ್ರಜ್ಞಾರಾತ್ಮಭಿರ್ಭು ಏವಮೇವೈತೇ ಆತ್ಮಾನ ಏತಮಾತ್ಮಾನಂ ಭುನ್ನಿ (ಕೆ. ೪-೨೦) ಇತಿ | ಪ್ರಾಣಭತ್ಯಾಚ್ಚ ಜೀವಸ್ಯ ಉಪಪನ್ನಂ ಪ್ರಾಣಶಬ್ದತ್ವಮ್ | ತಸ್ಮಾತ್ ಜೀವಮುಖ್ಯಪ್ರಾಣಯೋರನ್ಯತರ ಇಹ ಗ್ರಹಣಿಯೋ ನ ಪರಮೇಶ್ವರಃ | ತಲ್ಲಿ ಜ್ಞಾನವಗಮಾತ್ ಇತಿ ||

(ಭಾಷ್ಯಾರ್ಥ) ಇಲ್ಲಿ ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದೆ ? (ಇವನು) ಪ್ರಾಣನು ಎಂದು. ಏಕ ? ಎಂದರೆ ‘ಇದು ಯಾವನದೇ ಕರ್ಮವೋ’’ ಎಂದು ಶ್ರುತಿಯ ಲ್ಲಿದ್ದು ಚಲನರೂಪವಾದ ಕರ್ಮವು ಪ್ರಾಣವನ್ನು ಆಶ್ರಯಿಸಿರುವದರಿಂದಲೂ

  1. ಆll ಪಾಠದಲ್ಲಿ ೬-೩, ಈ ಪಾಠದಲ್ಲಿ “ಆದಿ ಬ್ರಹಚ್ಚನ್ನಮಸ್ಕನ್ನಮ್’’ ಎಂದು ಮುಂತಾಗಿರುವದು ಉಪನಿಷದ್ವಾಕ್ಯವೆಂದು ಗಣಿಸಿದ್ಧರಿಂದ ಸಂಖ್ಯೆಯು ಒಂದೊಂದು ಹೆಚ್ಚಾಗಿದೆ ಎಂದು ತೋರುತ್ತದೆ.

  2. “ತಥಾ ಶ್ರೇಷ್ಟ: ಸ್ವರ್ಭುಜ್ಞೆ ಯಥಾ ವಾ ಶ್ರೇಷ್ಠನಂ ಸ್ಟಾ, ಭುಞ್ಞ” - ಎಂಬ ನಿ! ಪಾಠವು ತಪ್ಪು

  3. ಪರಿಣಾಮ (ಮಾರ್ಪಡುವಿಕ), ಪರಿಸ್ಪಂದ (ಚಲಿಸುವಿಕ) - ಎಂದು ಕರ್ಮವು ಎರಡು ಬಗ. ಚಲನೆಯು ಪ್ರಾಣದಿಂದ ಆಗುವದರಿಂದ ಪ್ರಾಣನು ಎಂದು ಶ್ರುತಿಯಲ್ಲಿ ಹೇಳಿದ ಎಂದು ಭಾವ.

೬೦೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. ವಾಕ್ಯಶೇಷದಲ್ಲಿ “ಆಗ ಈ ಪ್ರಾಣನಲ್ಲಿಯೇ ಒಂದಾಗುತ್ತಾನ’ (ಕೆ. ೪-೧೯) ಎಂದು ಪ್ರಾಣಶಬ್ದವು ಕಾಣಬರುವದರಿಂದಲೂ (ಈ) ಪ್ರಾಣಶಬ್ದವು ಮುಖ್ಯಪ್ರಾಣನಲ್ಲಿಯೇ ಪ್ರಸಿದ್ಧವಾಗಿರುವದರಿಂದಲೂ ಮತ್ತು ಬಾಲಾಕಿಯು ಹಿಂದೆ ‘ಆದಿತ್ಯನಲ್ಲಿರುವ ಪುರುಷನು” (ಕೌ, ೪-೩) “ಚಂದ್ರನಲ್ಲಿರುವ ಪುರುಷನು” (ಕೌ, ೪-೩) ಎಂದು ಮುಂತಾಗಿ ಪುರುಷರನ್ನು ಹೇಳಿದ್ದನಲ್ಲ, ಅವರಿಗೂ ಪ್ರಾಣನು ಕರ್ತವಾಗಬಹುದು. ಏಕೆಂದರೆ ಒಬ್ಬನೇ ದೇವನು. ಯಾರು ? ಪ್ರಾಣನು. ಅವನೇ ಬ್ರಹ್ಮವು ; ‘ತತ್’ ಎಂದು (ಅವನನ್ನು ) ಕರೆಯುತ್ತಾರೆ.” (ಬೃ. ೩-೯-೯) ಎಂದು ಬೇರೊಂದು ಶ್ರುತಿ ಯಲ್ಲಿ ಪ್ರಸಿದ್ಧವಾಗಿರುವಂತ ಆದಿತ್ಯಾದಿದೇವತೆಗಳು ಪ್ರಾಣನ ಅವಸ್ಥಾವಿಶೇಷ ಗಳಾಗಿರುವದರಿಂದಲೂ (ಹೀಗಂದು ನಿಶ್ಚಯಿಸಬೇಕು).

ಅಥವಾ ಇಲ್ಲಿ ಅರಿಯತಕ್ಕದ್ದೆಂದು ಹೇಳಿದೆ(ಯಲ್ಲ), ಇವನು ಜೀವನು (ಎನ್ನಬಹುದು). ಏಕೆ ? ಎಂದರೆ “ಈ ಕರ್ಮವು ಯಾರದೋ” ಎಂದು ಧರ್ಮಾಧರ್ಮರೂಪವಾದ ಕರ್ಮವನ್ನು ಶ್ರುತಿಯಲ್ಲಿ ಹೇಳಿದ (ಎನ್ನು ವದಕ್ಕೂ ಬರುತ್ತದೆ. ಆ (ಜೀವ)ನೂ ಭೋಕ್ತವಾಗಿರುವದರಿಂದ ಭೋಗೋಪಕರಣರಾಗಿರುವ ಈ ಪುರುಷರ ಕರ್ತ ಎಂದು (ಹೇಳಿರುವದು) ಯುಕ್ತವಾಗುತ್ತದೆ. ಇದಲ್ಲದ ವಾಕ್ಯಶೇಷದಲ್ಲಿ ಜೀವಲಿಂಗವು (ಇದೆ ಎಂದು) ನಿಶ್ಚಯವಾಗುತ್ತದೆ. ಏಕೆಂದರೆ ಅರಿಯತಕ್ಕದ್ದೆಂದು ಹೇಳಿರುವ, ಪುರುಷರ ಕರ್ತವನ್ನು ಅರಿತುಕೊಳ್ಳುವದಕ್ಕಾಗಿ ಬಳಿಸಾರಿದ ಬಾಲಾಕಿಗ’ ತಿಳಿಯಪಡಿಸುವದಕ್ಕಾಗಿ ಅಜಾತಶತ್ರುವು ಸುಪ್ತಪುರುಷನನ್ನು (ಕೂಗಿ) ಕರೆದು, ಕರೆದ ಶಬ್ದವನ್ನು ಕೇಳದೆ ಇದ್ದದ್ದರಿಂದ ಪ್ರಾಣಾದಿಗಳು ಭೋಕ್ತ ವಲ್ಲವೆಂದು ತಿಳಿಸಿಕೊಟ್ಟು, ದೂಣ್ಣೆಯಿಂದ ಹೊಡದಬ್ಬಿಸಿ ಪ್ರಾಣಾದಿಗಳಿಗಿಂತ ಬೇರೆಯಾದ ಜೀವನೇ ಭೋಕ್ತವೆಂದು ತಿಳಿಸಿಕೊಟ್ಟಿರುತ್ತಾನೆ. ಮುಂದೂ “ಅಲ್ಲಿ ಶ್ರೇಷ್ಠಿಯು ಹೇಗೆ ತನ್ನವರಿಂದ ಭೋಗಿಸುವನೋ ಅಥವಾ ಹೇಗೆ ತನ್ನವರು ಶ್ರೇಷ್ಠ

1.ಈಭಾಗದ ಆ11 ಪಾಠವು ಹೀಗಿದೆ: “ಯೋ ವೈ ಬಾಲಾಕ ಏತೇಷಾಂ ಪುರುಷಾಣಾಂ ಕರ್ತಾ ಯಸ್ಯ ವೃತತ್ ಕರ್ಮ ಸ ವೈ ವೇದಿತವ್ಯಸ್ತತ ಈ ಹ ಬಾಲಾಕಿಃ ಸಮಿತ್ಪಾಣಿಃ ಪ್ರತಿಚಕ್ರಮ ಉಪಾಯಾನೀತಿ ತಂ ಹೋವಾಚಾಜಾತಶತ್ರುಃ ಪ್ರತಿಲೋಮರೂಪಮೇತನ್ಮಯತ್ ಕ್ಷತ್ರಿಯೋ ಬ್ರಾಹ್ಮಣಮುಪನಯತೇ ಹಿ ವ್ಯವ ತ್ಯಾ ಜ್ಞಪಯಿಷ್ಕಾಮೀತಿ ತಂ ಹ ಪಾಣಾವಭಿಪದ್ಯ ಪ್ರವಮ್ರಾಜ ತೌ ಹ ಸುಪ್ತಂ ಪುರುಷಮಾಜಣ್ಮತಸ್ತಂ ಹಾಚಾತಶತ್ರುರಾಮuಯಾಂಚಕ್ಕೇ ಬೃಹತ್ಸಾಣ್ಣರವಾಸಃ ಸೋಮರಾಜತಿ ಸಈ ಹಶಿಷ್ಯ ಏವ ತತ ಈ ಹೃನಂ ಯಷ್ಮಾ ವಿಚಿಪ ಸತತ ಏವ ಸಮುತ್ತಸ್ಥ

ತಂ ಹೂವಾಚಾಚಾತಶತ್ರುಃ ಕೃಷ ಏತದ್ಯಾಲಾಕೇ ಪುರುಷೋತಿಶಯಿಷ್ಟ ಕೈ ಚೈತದಭೂತ್ ಕುತ ಏತದಾಗಾದಿತಿ ತದು ಹ ಬಾಲಾಕಿರ್ನ ವಿಜಜ್ಜೆ”. ಇಲ್ಲಿ ದಪ್ಪಕ್ಷರದಲ್ಲಿರುವ ಭಾಗಗಳಲ್ಲಿ ಪಾಠಾಂತರಗಳಿವ.

ಅಧಿ. ೫. ಸೂ. ೧೬] ಉಪಕ್ರಮಸಾಮರ್ಥ್ಯದಿಂದ ಪರಮೇಶ್ವರನೆಂದೇ ತಿಳಿಯಬೇಕು ೬೦೭ ಯನ್ನು ಭೋಗಿಸುವರೋ ಹೀಗೆಯೇ ಈ ಪ್ರಜ್ಞಾತ್ಮನು ಈ ಆತ್ಮರಿಂದ ಭೋಗಿಸು ವನು, ಹೀಗೆಯೇ ಈ ಆತ್ಮರು ಈ ಆತ್ಮನನ್ನು ಭೋಗಿಸುವರು” (೪-೨೦) ಎಂದು ಜೀವಲಿಂಗವಿರುವದು) ಗೊತ್ತಾಗುತ್ತದೆ. ಜೀವನು ಪ್ರಾಣಧಾರಿಯಾಗಿರುವದರಿಂದ (ಅವನನ್ನು) ಪ್ರಾಣಶಬ್ದ (ದಿಂದ ಕರೆದಿರುವದು) ಹೊಂದುತ್ತದೆ.

ಆದ್ದರಿಂದ ಜೀವಮುಖ್ಯಪ್ರಾಣರೂಳಗೆ ಯಾವನಾದರೊಬ್ಬನನ್ನು ಗ್ರಹಿಸ ಬೇಕು, ಪರಮೇಶ್ವರನನ್ನಲ್ಲ ; ಏಕೆಂದರೆ (ಇಲ್ಲಿ) ಅವನ ಲಿಂಗ(ವಿರುವದು) ನಿಶ್ಚಯ ವಾಗಿಲ್ಲ.!

ಸಿದ್ಧಾಂತ : ಉಪಕ್ರಮಸಾಮರ್ಥ್ಯದಿಂದ ಪರಮೇಶ್ವರನೆಂದೇ ತಿಳಿಯಬೇಕು

(ಭಾಷ್ಯ) ೩೭೨. ಏವಂ ಪ್ರಾಪ್ತ ಬ್ಯೂಮಃ - ಪರಮೇಶ್ವರ ಏವಾಯಮೇತೇಷಾಂ ಪುರುಷಾಣಾಂ ಕರ್ತಾ ಸ್ಯಾತ್ | ಕಸ್ಮಾತ್ ? ಉಪಕ್ರಮಸಾಮರ್ಥ್ಯಾತ್ | ಇಹ ಹಿ ಬಾಲಾಕಿಃ ಅಜಾತಶತ್ರುಣಾ ಸಹ “ಬ್ರಹ್ಮ ತೇ ಪ್ರವಾಣಿ" (ಕೌ, ೪-೧) ಇತಿ ಸಂವದಿತುಮ್ ಉಪಚಕ್ರಮೇ, ಸ ಚ ಕತಿಚಿತ್ ಆದಿತ್ಯಾದ್ಯಧಿಕರಣಾನ್ ಪುರುಷಾನ್ ಅಮುಖ್ಯಬ್ರಹ್ಮದೃಷ್ಟಿಭಾಜಃ ಉಕ್ಕಾ ತೂಫೀಂ ಬಭೂವ | ತಮ್ ಅಜಾತಶತ್ರುಃ “ಮೃಷಾ ವೈ ಖಲು ಮಾ ಸಂವದಿಷ್ಠಾ ಬ್ರಹ್ಮ ತೇ ವಾಣಿ’’ (ಕೌ, ೪-೧೮) ಇತಿ ಅಮುಖ್ಯಬ್ರಹ್ಮವಾದಿಯಾ ಅಪೋದ್ಯ ತತ್ಕರ್ತಾರಮ್ ಅನ್ಯರ ವೇದಿತವ್ಯತಯಾ ಉಪಚಕ್ಷೇಪ | ಯದಿ ಸೋSಪಿ ಅಮುಖ್ಯಬ್ರಹ್ಮದೃಷ್ಟಿಭಾಕ್ ಸ್ಮಾತ್ ಉಪಕ್ರಮೋ

ಬಾಧೈತ | ತಸ್ಮಾತ್ ಪರಮೇಶ್ವರ ಏವ ಅಯಂ ಭವಿತುಮರ್ಹತಿ | ಕರ್ತತ್ವಂ ಚ ಏತೇಷಾಂ ಪುರುಷಾಣಾಂ ನ ಪರಮೇಶ್ವರಾತ್ ಅನ್ಯಸ್ಯ ಸ್ವಾತಣ ಅವಕಲ್ಪತೇ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳು ತೇವೆ : ಈ ಪುರುಷರ ಕರ್ತನೆಂಬ ಈತನು ಪರಮೇಶ್ವರನೇ ಆಗಿರಬೇಕು. ಏಕೆ ?

ರ್ಭ )

  1. ಇದುವರೆಗೆ ನಿಶ್ಚಿತಬ್ರಹ್ಮಲಿಂಗವಿರುವ ವಾಕ್ಯಗಳ ಸಮನ್ವಯವನ್ನು ಹೇಳಿದ್ದಾಯಿತು. ಇಲ್ಲಿ ಜೀವಮುಖ್ಯಪ್ರಾಣಲಿಂಗಗಳಿವೆಯೇ ಹೊರತು ಯಾವ ಬ್ರಹ್ಮಲಿಂಗಗಳೂ ಇಲ್ಲ. ಆದ್ದ ರಿಂದ ಈ ವಾಕ್ಯಕ್ಕೆ ಬ್ರಹ್ಮದಲ್ಲಿ ಸಮನ್ವಯವಿಲ್ಲ ಎಂದು ಭಾವ.

  2. ಇಲ್ಲಿ ಒಂದು ಇತಿಯು ಶ್ರುತಿಯ ಕೊನೆಯಲ್ಲಿ ಬಿಟ್ಟುಹೋಗಿದೆ.

೬೦೮

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೪.

ಎಂದರ ಉಪಕ್ರಮಸಾಮರ್ಥ್ಯದಿಂದ. ಹೇಗಂದರೆ ಇಲ್ಲಿ ಬಾಲಾಕಿಯು ಅಜಾತಶತ್ರು ವಿನೊಡನೆ “ನಿನಗೆ ಬ್ರಹ್ಮವನ್ನು ಹೇಳುವನು” (ಕೌ, ೪-೧) ಎಂದು ಸಂವಾದವನ್ನು ಮಾಡುವದಕ್ಕೆ ಉಪಕ್ರಮಿಸಿದನು. ಅವನು ಆದಿತ್ಯನೇ ಮುಂತಾದ ಅಧಿಕರಣಗಳುಳ್ಳ ಅಮುಖ್ಯಬ್ರಹ್ಮದೃಷ್ಟಿಗೆ ತಕ್ಕವರಾಗಿರುವ ಕೆಲವರು ಪುರುಷರನ್ನು ಹೇಳಿ ಸುಮ್ಮ ನಾದನು’ (ಕೌ, ೪-೧೮). ಅವನನ್ನು ಅಜಾತಶತ್ರುವು ‘‘ನಿನಗೆ ಬ್ರಹ್ಮವನ್ನು ಹೇಳುವನೆಂದು ನನಗೆ ಸುಳ್ಳನ್ನೇ ಹೇಳಿದೆಯಲ್ಲ !’’ (ಕೌ, ೪-೧೮) ಎಂದು ಅಮುಖ್ಯ ಬ್ರಹ್ಮರನ್ನು ಹೇಳಿದನಂಬ (ಕಾರಣದಿಂದ) ನಿಂದಿಸಿ ಆ (ಅಮುಖ್ಯಬ್ರಹ್ಮರ) ಕರ್ತವಾದ ಮತ್ತೂಬ್ಬ (ಆತ್ಮನನ್ನು) ಅರಿಯತಕ್ಕದ್ದು ಎಂದು (ಅವನ) ಮುಂದಿರಿಸಿದನು. (ಹೀಗಿರುವಲ್ಲಿ) ಆ (ಆತ್ಮನೂ) ಅಮುಖ್ಯಬ್ರಹ್ಮದೃಷ್ಟಿಗೆ ತಕ್ಕವನಾದರ ಉಪಕ್ರಮವು ಬಾಧಿತವಾದೀತು. (ಇದು ಸರಿಯಲ್ಲ). ಆದ್ದರಿಂದ ಇವನು ಪರಮೇಶ್ವರನೇ ಆಗಿರಬೇಕು. ಈ ಪುರುಷರ ಕರ್ತವಾಗಿರುವದಂಬುದೂ ಪರಮೇಶ್ವರನನ್ನು ಬಿಟ್ಟರೆ ಮತ್ತೊಬ್ಬನಿಗೆ ಸ್ವತಂತ್ರವಾಗಿ ಹೊಂದುವದಿಲ್ಲ.

ಇಲ್ಲಿ ಜಗತ್ನರ್ತತ್ವವೆಂಬ ಬ್ರಹ್ಮಲಿಂಗವಿದೆ

(ಭಾಷ್ಯ) ೩೭೩. “ಯಸ್ಯ ವೃತತ್ ಕರ್ಮ’ ಇತ್ಯಪಿ ನಾಯಂ ಪರಿಸ್ಪಸ್ಟಲಕ್ಷಣಸ್ಯ ಧರ್ಮಾಧರ್ಮಲಕ್ಷಣಸ್ಯ ವಾ ಕರ್ಮಣೋ ನಿರ್ದಶಃ ತಯೋಃ ಅನ್ಯತರಸ್ಕಾಪಿ ಅಪ್ರಕೃತತ್ವಾತ್, ಅಸಂಶಬ್ದ ತತ್ವಾಚ್ಯ ನಾಪಿ ಪುರುಷಾಣಾಮ್ ಅಯಂ ನಿರ್ದಶಃ | “ಏತೇಷಾಂ ಪುರುಷಾಣಾಂ ಕರ್ತಾ’ ಇತ್ಯವ ತೇಷಾಂ ನಿರ್ದಿಷ್ಟತ್ವಾತ್ | ಲಿಜ್ಞ ವಚನವಿಗಾನಾಚ್ಚ | ನಾಪಿ ಪುರುಷವಿಷಯಸ್ಯ ಕರೋತ್ಯರ್ಥಸ್ಯ ಕ್ರಿಯಾಫಲಸ್ಯ ವಾ ಅಯಂ ನಿರ್ದಶಃ | ಕರ್ತಶಚ್ಚೇನೈವ ತಯೋಃ ಉಪಾತ್ತತ್ವಾತ್ | ಪಾರಿಶೇಷ್ಯಾತ್ ಪ್ರತ್ಯಕ್ಷಸಂನಿಹಿತಂ ಜಗತ್ ಸರ್ವನಾಮ್ಮಾ ಏತಚ್ಚಬೇನ ನಿರ್ದಿಶ್ಯತೇ | ಕ್ರಿಯತೇ ಇತಿ ಚ ತದೇವ ಜಗತ್ ಕರ್ಮ | ನನು ಜಗದಪಿ ಅಪ್ರಕೃತಮಸಂಶಬ್ದ ತಂ ಚ | ಸತ್ಯಮೇ ತತ್ ತಥಾಪಿ ಅಸತಿ ವಿಶೇಷೋಪಾದಾನೇ ಸಾಧಾರಣೇನ ಅರ್ಥನ ಸಂವಿಧಾನೇನ. ಸಂನಿಹಿತವಸ್ತುಮಾತ್ರಸ್ಯ ಅಯಂ ನಿರ್ದಶಃ ಇತಿ ಗಮ್ಯತೇ, ನ ವಿಶಿಷ್ಟಸ್ಯ ಕಸ್ಯಚಿತ್ | ವಿಶೇಷಸಂವಿಧಾನಾಭಾವಾತ್ | ಪೂರ್ವತ್ರ ಚ ಜಗದೇಕದೇಶಭೂತಾನಾಂ ಪುರುಷಾಣಾಂ ವಿಶೇಷೋಪಾದಾನಾತ್ ಅವಿಶೇಷಿತಂ ಜಗದೇವ ಇಹ ಉಪಾದೀಯತೇ ಇತಿ ಗಮ್ಯತೇ | ಏತದುಕ್ತಂ ಭವತಿ | ಯ ಏತೇಷಾಂ ಪುರುಷಾಣಾಂ ಜಗದೇಕದೇಶ

  1. ಆ11೬-೧೯.

ಅಧಿ. ೫. ಸೂ. ೧೬] ಇಲ್ಲಿ ಜಗತ್ನರ್ತತ್ವವೆಂಬ ಬ್ರಹ್ಮಲಿಂಗವಿದೆ

೬೦೯

ಭೂತಾನಾಂ ಕರ್ತಾ - ಕಿಮನೇನ ವಿಶೇಷೇಣ ? ಯಸ್ಯ ಕೃತ್ಯಮೇವ ಜಗತ್ ಅವಿಶೇಷಿತಂ ಕರ್ಮ ಇತಿ | ವಾಶಬ್ದಃ ಏಕದೇಶಾವಚ್ಛನ್ನ ಕರ್ತತ್ವವ್ಯಾವೃತ್ಯರ್ಥ: 1 ಯೇ ಬಾಲಾಕಿನಾ ಬ್ರಹ್ಮಾಭಿಮತಾಃ ಪುರುಷಾಃ ಕೀರ್ತಿತಾಃ, ತೇಷಾಮ್ ಅಬ್ರಹ್ಮತ್ವಖ್ಯಾಪನಾಯ ವಿಶೇಷೋಪಾದಾನಮ್ | ಏವಂ ಬ್ರಾಹ್ಮಣಪರಿವ್ರಾಜಕನ್ಯಾಯೇನ ಸಾಮಾನ್ಯ ವಿಶೇಷಾಭ್ಯಾಂ ಜಗತಃ ಕರ್ತಾ ವೇದಿತವ್ಯತಯಾ ಉಪದಿಶ್ಯತೇ | ಪರಮೇಶ್ವರಶ್ಯ ಸರ್ವಜಗತಃ ಕರ್ತಾ ಸರ್ವವೇದಾನ್ತೇಷು ಅವಧಾರಿತಃ ||

(ಭಾಷ್ಯಾರ್ಥ) “ಇದು ಯಾವನದೇ ಕರ್ಮವೋ” ಎಂಬಿದೂ ಚಲನರೂಪವಾದ ಅಥವಾ ಧರ್ಮಾಧರ್ಮಲಕ್ಷಣರೂಪವಾದ ಕರ್ಮದ ನಿರ್ದೆಶವಲ್ಲ. ಏಕೆಂದರೆ ಅವರಡರಲ್ಲಿ ಯಾವದೊಂದೂ ಪ್ರಕೃತವಾಗಿಲ್ಲ, (ಯಾವದೊಂದನ್ನೂ ಅದರ) ಶಬ್ದದಿಂದ ಹೇಳಿಯೂ ಇಲ್ಲ. ಇದು (ಆದಿತ್ಯಾದಿ) ಪುರುಷರ ನಿರ್ದಶವೂ ಅಲ್ಲ. ಏಕೆಂದರೆ ಈ ಪುರುಷರ ಕರ್ತ” ಎಂದೇ ಅವರನ್ನು ತಿಳಿಸಿರುತ್ತದೆ. ಲಿಂಗವಚನಗಳ ಹೊಂದುಗಡೆ ಯಿಲ್ಲದ್ದರಿಂದಲೂ’ (ಪುರುಷರ ನಿರ್ದೆಶವಲ್ಲ). ಪುರುಷವಿಷಯಕವಾದ ಮಾಡು ಎಂಬರ್ಥದ (ಕ್ರಿಯಯು) ಅಥವಾ (ಆ) ಕ್ರಿಯಯ ಫಲದ ನಿರ್ದಶವೂ ಇದಲ್ಲ ; ಏಕೆಂದರೆ ಅವೆರಡನ್ನೂ ಕರ್ತ’ ಎಂಬ ಶಬ್ದದಿಂದಲೇ ತೆಗೆದುಕೊಂಡದ್ದಾಗಿದೆ. ಆದ್ದರಿಂದ ಪರಿಶೇಷ (ನ್ಯಾಯ)ದಿಂದ ಪ್ರತ್ಯಕ್ಷವಾಗಿ ಹತ್ತಿರವಾಗಿರುವ ಜಗತ್ತನ್ನೇ ‘ಇದು’ ಎಂಬ ಸರ್ವನಾಮಶಬ್ದದಿಂದ ತಿಳಿಸಿರುತ್ತದೆ (ಎಂದು ನಿಶ್ಚಯಿಸಬೇಕು), ಕ್ರಿಯತೇ (ಮಾಡಲ್ಪಡುತ್ತದೆ), ಆದ್ದರಿಂದ ಅದೇ ಜಗತ್ತೇ (ಇಲ್ಲಿ ) ಕರ್ಮವು.

  • (ಆಕ್ಷೇಪ) :- ಜಗತ್ತು (ಇಲ್ಲಿ ) ಪ್ರಕೃತವಾಗಿಲ್ಲ, ಶಬ್ದದಿಂದ (ಉಕ್ಕ) ವಾಗಿಯೂ ಇಲ್ಲವಲ್ಲ !

(ಸಮಾಧಾನ) :- ಇದು ನಿಜ. ಆದರೂ (ಇಂಥದ್ದಂಬ) ವಿಶೇಷವನ್ನು ತಗೆದುಕೊಂಡು (ಹೇಳದ ಇರು)ವಲ್ಲಿ ಸಂವಿಧಾನವೆಂಬ ಸಾಧಾರಣವಾದ ಅರ್ಥವು (ಇದು ಎಂಬ ಸರ್ವನಾಮಕ್ಕೆ ಆಗುವ)ದರಿಂದ ಹತ್ತಿರವಿರುವ ವಸ್ತುಸಾಮಾನ್ಯದ ನಿರ್ದೆಶವಿದು, ಇಂಥದ್ದೆಂದು ಗೊತ್ತಾದ ಯಾವ (ವಸ್ತುವಿನ ನಿರ್ದಶವೂ) ಅಲ್ಲ - ಎಂದು ನಿಶ್ಚಯವಾಗುತ್ತದೆ ; ಏಕೆಂದರೆ ವಿಶೇಷ (ವಸ್ತುವನ್ನು ಯಾವದನ್ನೂ) ಸಮೀಪದಲ್ಲಿ ಹೇಳಿರು)ವದಿಲ್ಲ. ಇದಲ್ಲದೆ ಹಿಂದ ಜಗತ್ತಿನ ಒಂದು ಭಾಗವಾದ ಪುರುಷರನ್ನು ವಿಶೇಷವಾಗಿ ತೆಗೆದುಕೊಂಡಿರುವದರಿಂದ ಯಾವ ವಿಶೇಷವೂ ಇಲ್ಲದ

  1. ಪುರುಷರನ್ನು ಹೇಳುವ ಶಬ್ದವು ಪುಲ್ಲಿಂಗ ಬಹುವಚನ, ಕರ್ಮಶಬ್ಬವು ನಪುಂಸಕ ಲಿಂಗ, ಏಕವಚನ.

೬೧

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. (ಇಡಿಯ) ಜಗತ್ತನ್ನೇ ಇಲ್ಲಿ ತೆಗೆದುಕೊಂಡು (ಹೇಳಿದ) ಎಂದು ನಿಶ್ಚಯವಾಗುತ್ತದೆ. ಇಷ್ಟನ್ನು ಹೇಳಿದಂತಾಯಿತು. ಯಾವನು ಜಗತ್ತಿನ ಒಂದು ಭಾಗವಾಗಿರುವ ಈ ಪುರುಷರಿಗೆ ಕರ್ತವೋ - ಹೀಗೆ ವಿಶೇಷವಾಗಿ ಹೇಳಿದ್ದರಿಂದ ಏನು (ಪ್ರಯೋಜನ) ? ಯಾವನಿಗೆ ಯಾವ ವಿಶೇಷವೂ ಇಲ್ಲದ ಇಡಿಯ ಜಗತ್ತೇ ಕರ್ಮವೋ ಎಂದು (ಅಭಿಪ್ರಾಯ. ಮೂಲದಲ್ಲಿರುವ) ವಾಶಬ್ದವು - ಒಂದು ಭಾಗವೆಂದು ಅಳತೆ ಯಾಗಿರುವ (ವಸ್ತುಗಳ) ಕರ್ತತ್ವವಲ್ಲವನ್ನುವದಕ್ಕೆ (ಬಂದಿದೆ) : ಬಾಲಾಕಿಯು ಬ್ರಹ್ಮವೆಂಬ ಅಭಿಪ್ರಾಯದಿಂದ ಯಾವ ಪುರುಷರನ್ನು ಹೇಳಿದ್ದಾನೋ ಅವರು ಬ್ರಹ್ಮ

ವಲ್ಲವೆಂದು ತಿಳಿಸುವದಕ್ಕೆ (ಈ ಪುರುಷರ ಕರ್ತ ಎಂದು) ವಿಶೇಷವನ್ನು ತೆಗೆದು ಕೂಂಡು (ಹೇಳಿದೆ).’ ಹೀಗ ಬ್ರಾಹ್ಮಣಪರಿವ್ರಾಜಕನ್ಯಾಯದಿಂದ ಸಾಮಾನ್ಯವಿಶೇಷ ರೂಪದಿಂದ ಜಗತ್ತಿನ ಕರ್ತವನ್ನೇ (ಅಲ್ಲಿ ) ಅರಿಯತಕ್ಕದ್ದೆಂದು ಹೇಳಿರುತ್ತದೆ. ಪರ ಮೇಶ್ವರನೇ ಸರ್ವಜಗತ್ತಿಗೂ ಕರ್ತವೆಂದು ಸರ್ವವೇದಾಂತಗಳಲ್ಲಿಯೂ ನಿರ್ಧರಿಸ ಲ್ಪಟ್ಟಿರುತ್ತದೆ.

ಜೀವಮುಖ್ಯಪ್ರಾಣಲಿಜ್ಞಾನೇತಿ ಚೇತ್ ತದ್ಘಾಖ್ಯಾತಮ್ ||೧೭||

೧೭. ಜೀವ, ಮುಖ್ಯಪ್ರಾಣ – ಇವುಗಳ ಲಿಂಗವೂ ಇರುವದರಿಂದ (ಇದು ಸರಿ)ಯಲ್ಲ ಎಂದರೆ, ಅದನ್ನು (ಆಗಲೇ) ಹೇಳಿದ್ದಾಗಿದೆ.

ಜೀವಮುಖ್ಯಪ್ರಾಣಗಳು ಇಲ್ಲಿ ವಿವಕ್ಷಿತವೆಂದರೆ ದೋಷ

(ಭಾಷ್ಯ) ೩೭೪. ಅಥ ಯದುಕ್ತಮ್ ವಾಕ್ಯಶೇಷಗತಾತ್ ಜೀವವಿಜ್ಞಾತ್ ಮುಖ್ಯ ಪ್ರಾಣಲಿಜ್ಞಾಚ್ಚ ತಯೋರೇವ ಅನ್ಯತರಸ್ಯ ಇಹ ಗ್ರಹಣಂ ನ್ಯಾಯ್ಯಮ್ ನ

1.‘ಯಸ್ಯ ವಾಏತತ್ಕರ್ಮ’ ಎಂಬಲ್ಲಿ ಸಾಮಾನ್ಯವಾಗಿಜಗತ್ತನ್ನು ತಗೆದುಕೊಂಡಿದೆಯಾದರ ‘ಏತೇಷಾಂ ಪುರುಷಾಣಾಂ ಕರ್ತಾ’ ಎಂದು ವಿಶೇಷವಾಗಿ ಪುರುಷರನ್ನು ವಿಂಗಡಿಸಿ ಹೇಳಿರುವದು ವ್ಯರ್ಥವಲ್ಲವ ? ಎಂಬ ಶಂಕೆಗೆ ಪರಿಹಾರವಿದು.

  1. ಪರಿವ್ರಾಜಕನು ಬ್ರಾಹ್ಮಣರಲ್ಲಿ ಸೇರಿದ್ದರೂ “ಬ್ರಾಹ್ಮಣರನ್ನೂ ಪರಿವ್ರಾಜಕರನ್ನೂ ಕರೆದುಕೊಂಡು ಬಾ’’ ಎಂಬ ವಿಶೇಷವಾಗಿ ಹೇಳುವಂತೆ ಜಗತ್ತನ್ನು ಸಾಮಾನ್ಯವಾಗಿಯೂ

ಪುರುಷರನ್ನು ವಿಶೇಷವಾಗಿಯೂ ಹೇಳಿದ ಎಂದು ಭಾವ. ಇದು ಯಜ್ಯೋಪವೀತಾದಿಗಳನ್ನು ಇಟ್ಟುಕೊಂಡಿರುವ ಸಂನ್ಯಾಸಿಗಳ ವಿಷಯ ; ಏಕಂದರ ಪರಮಹಂಸನು ವರ್ಣಾಶ್ರಮಾದಿಗಳ ಅಭಿಮಾನವನ್ನು ತೊರೆದಿರುತ್ತಾನೆ. ‘ಈ ಕಡೆ ಬ್ರಾಹ್ಮಣರಿಗೆ ಭೋಜನ ಮಾಡಿಸಿರಿ. ಈ ಕಡೆ ಪರಿವ್ರಾಜಕರಿಗೆ ಮಾಡಿಸಿರಿ’ - ಎಂಬಂತ. ಜೈ. ಸೂ. ಶಾ.ಭಾ.

  1. ಆದ್ದರಿಂದ ‘ಯಸ್ಯ ವೃತತ್ ಕರ್ಮ’ ಎಂಬುದೇ ಲಿಂಗವಾಯಿತು ಎಂದು ಭಾವ.

ಅಧಿ. ೫. ಸೂ. ೧೭] ಜೀವಮುಖ್ಯಪ್ರಾಣಗಳು ಇಲ್ಲಿ ವಿವಕ್ಷಿತವೆಂದರೆ ದೋಷ ೬m ಪರಮೇಶ್ವರಸ್ಯ ಇತಿ | ತತ್ ಪರಿಹರ್ತವ್ಯಮ್ | ಅ ಚ್ಯತೇ’ - ಪರಿಹೃತಂ ಚೈತತ್ ‘‘ನೋಪಾಸಾತ್ಯವಿಧ್ಯಾತ್ ಆಶ್ರಿತತ್ವಾತ್ ಇಹ ತದ್ಯೋಗಾತ್’ (ಸೂ. ೧-೧-೩೧) ಇತ್ಯ | ತ್ರಿವಿಧಂ ಹಿ ಅತ್ರ ಉಪಾಸನಮ್ ಏವಂ ಸತಿ ಪ್ರಸಜೇತ ಜೀವೋಪಾಸನಮ್, ಮುಖ್ಯಪ್ರಾಣೋಪಾಸನಮ್, ಬ್ರಹ್ಮಪಾಸನಂ ಚ ಇತಿ | ನ ಚೈತತ್ ನ್ಯಾಯ್ಯಮ್ | ಉಪಕ್ರಮೋಪಸಂಹಾರಾಭ್ಯಾಂ ಹಿ ಬ್ರಹ್ಮವಿಷಯತ್ವಮ್ ಅಸ್ಯ ವಾಕ್ಯಸ್ಯ ಅವ ಗಮ್ಯತೇ | ತತ್ರ ಉಪಕ್ರಮಸ್ಯ ತಾವತ್ ಬ್ರಹ್ಮವಿಷಯತ್ವಂ ದರ್ಶಿತಮ್ | ಉಪಸಂಹಾರಸ್ಯಾಪಿ ನಿರತಿಶಯಫಲಶ್ರವಣಾತ್ ಬ್ರಹ್ಮವಿಷಯತ್ವಂ ದೃಶ್ಯತೇ “ಸರ್ವಾನ್ ಪಾದ್ಮನೋಪಹತ್ಯ ಸರ್ವಷಾಂ ಚ ಭೂತಾನಾಂ ಶೃಷ್ಟಂ ಸ್ವಾರಾಜ್ಯ ಮಾಧಿಪತ್ಯಂ ಪರ್ಯತಿ ಯ ಏವಂ ವೇದ’ (ಕೆ. ೪-೨೦) ಇತಿ ||

(ಭಾಷ್ಯಾರ್ಥ) ಇನ್ನು ವಾಕ್ಯಶೇಷದಲ್ಲಿರುವ ಜೀವಲಿಂಗದಿಂದಲೂ ಮುಖ್ಯಪ್ರಾಣಲಿಂಗ ದಿಂದಲೂ ಅವುಗಳಲ್ಲಿಯೇ ಒಂದನ್ನು ಇಲ್ಲಿ ಹಿಡಿಯುವದು ಯುಕ್ತವೇ ಹೊರತು ಪರಮೇಶ್ವರನನ್ನು (ಹಿಡಿಯುವದು ಯುಕ್ತವಲ್ಲ ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಲ್ಲ, ಅದನ್ನು ಪರಿಹರಿಸಬೇಕಾಗಿದೆ.

ಅದಕ್ಕೆ ಈ ಪರಿಹಾರವನ್ನು ಹೇಳುತ್ತೇವೆ : ಇದನ್ನು “ನೋಪಾಸಾತ್ಯವಿಧ್ಯಾ ದಾಶ್ರಿತತ್ವಾದಿಹ ತದ್ಯೋಗಾತ್’’ (೧-೧-೩೧) ಎಂಬಲ್ಲಿ ಪರಿಹರಿಸಿದ್ಧಾಗಿದೆ. ಏಕೆಂದರೆ ಹೀಗಾದರೆ ಜೀವೋಪಾಸನೆ, ಮುಖ್ಯಪ್ರಾಣೋಪಾಸನೆ, ಬ್ರಹ್ಮಪಾಸನೆ - ಎಂದು ಮೂರು ವಿಧವಾದ ಉಪಾಸನೆಯಂದು ಆಗಬೇಕಾಗುವದು. ಆದರೆ ಅದು ನ್ಯಾಯವಲ್ಲ ; ಏಕೆಂದರೆ ಉಪಕ್ರಮೋಪಸಂಹಾರಗಳಿಂದ ಈ ವಾಕ್ಯವು ಬ್ರಹ್ಮವಿಷಯ ವಾದದ್ದಂದು ನಿರ್ಣಯವಾಗುತ್ತದೆ. ಇಲ್ಲಿ ಮೊದಲನೆಯದಾಗಿ ಉಪಕ್ರಮವು ಬ್ರಹ್ಮ ವಿಷಯವಾದದ್ದೆಂಬುದನ್ನು (ಆಗಲೆ) ತೋರಿಸಿಕೊಟ್ಟದ್ದಾಗಿದೆ. ಉಪಸಂಹಾರವೂ (ಹಾಗಯೇ). “ಹೀಗೆಂದು ತಿಳಿದುಕೊಂಡವನು ಎಲ್ಲಾ ಪಾಪಗಳನ್ನೂ ನಾಶಮಾಡಿ

  1. ಯಚ್ಯತೇ - ಎಂದು ಪಾಠಾಂತರ.

  2. ‘ನೋಪಾಸಾತ್ಯವಿಧ್ಯಾತ್’ ಎಂಬ ಸೂತ್ರಭಾಗದ ಎರಡನೆಯ ವರ್ಣಕವು ಪ್ರಕೃತಕ್ಕೆ ಹೊಂದುವದಿಲ್ಲವಾದ್ದರಿಂದ ಇಲ್ಲಿ ಅದನ್ನು ಪರಾಮರ್ಶಿಸಿಲ್ಲ.

  3. “ಉಪಕ್ರಮಸಾಮರ್ಥ್ಯದಿಂದ” (೩೭೨. ಭಾ. ಭಾ.) ಎಂಬಲ್ಲಿ ಇದನ್ನು ತೋರಿಸಿಕೊಟ್ಟದ್ದಾಗಿದೆ.೬೧೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಕೊಂಡು ಎಲ್ಲಾಭೂತಗಳಲ್ಲಿ ಶ್ರೇಷ್ಠತ್ವವನ್ನೂ ಸ್ವಾರಾಜ್ಯವನ್ನೂ ಆಧಿಪತ್ಯ ವನ್ನೂ ಪಡೆದುಕೊಳ್ಳುವನು” (ಕೌ, ೪-೨೦) ಎಂದು ಮಿಗಿಲಿಲ್ಲದ ಫಲವನ್ನು ಶ್ರುತಿಯಲ್ಲಿ ಹೇಳಿರುವದರಿಂದ (ಅದು) ಬ್ರಹ್ಮವಿಷಯವಾಗಿಯೇ ಇದೆ ಎಂದು ಕಂಡುಬರುತ್ತದೆ.

ಈ ಅಧಿಕರಣವು ಪ್ರತರ್ದನಾಧಿಕರಣದಲ್ಲಿ ಅಡಕವಾಗಲಾರದು

(ಭಾಷ್ಯ) ೩೭೫. ನನು ಏವಂ ಸತಿ ಪ್ರತರ್ದನವಾಕೃನಿರ್ಣಯೇನೈವ ಇದಮಪಿ ವಾಕ್ಯಂ ನಿರ್ಣಿಯೇತ | ನ ನಿರ್ಣಿಯತೇ | ಯಸ್ಯ ವೃತತ್ ಕರ್ಮ” ಇತ್ಯಸ್ಯ ಬ್ರಹ್ಮ ವಿಷಯನ ತತ್ರ ಅನಿರ್ಧಾರಿತತ್ವಾತ್ | ತಸ್ಮಾತ್ ಅತ್ರ ಜೀವಮುಖ್ಯಪ್ರಾಣಶಜ್ಞಾ ಪುನರುತ್ಪದ್ಯಮಾನಾ ನಿವರ್ತ್ಯತೇ ! ಪ್ರಾಣಶಕ್ಟೋಪಿ ಬ್ರಹ್ಮವಿಷಯೋ ದೃಷ್ಟ “ಪ್ರಾಣಬದ್ಧನಂ ಹಿ ಸೋಮ್ಮ ಮನಃ’ (ಛಾ, ೬-೮-೨) ಇತ್ಯತ್ರ ! ಜೀವಲಿಜ್ಞಮಪಿ ಉಪಕ್ರಮೋಪಸಂಹಾರಯೋಃ ಬ್ರಹ್ಮವಿಷಯತ್ವಾತ್ ಅಭೇದಾಭಿಪ್ರಾಯಣ ಯೋಜಯಿತವ್ಯಮ್ ||

(ಭಾಷ್ಯಾರ್ಥ) (ಆಕ್ಷೇಪ) :- ಹೀಗಾದರೆ ಪ್ರತರ್ದನವಾಕ್ಯದ ನಿರ್ಣಯದಿಂದಲೇ ಈ ವಾಕ್ಯವೂ ನಿರ್ಣಿತವಾದಂತಾಗುವದಿಲ್ಲವ ?

(ಪರಿಹಾರ) :- (ಇದು ಅದರಿಂದ) ನಿರ್ಣಯವಾಗುವದಿಲ್ಲ. ಏಕೆಂದರೆ “ಯಸ್ಯ ವೃತತ್ ಕರ್ಮ" ಎಂಬೀ (ವಾಕ್ಯವು) ಬ್ರಹ್ಮವಿಷಯ ಎಂದು ಅಲ್ಲಿ

  1. ಧರ್ಮಾಧರ್ಮರೂಪವಾದ ಎಲ್ಲಾ ಪಾಪಗಳನ್ನೂ ನಾಶಪಡಿಸಿಕೊಳ್ಳುವದು ಬ್ರಹ್ಮಜ್ಞಾನದಿಂದಲೇ ; ಆದ್ದರಿಂದ ಇದು ಬ್ರಹ್ಮವಿಷಯವಾದ ವಾಕ್ಯವು.

2.ಗುಣಗಳಿಂದಾದ ಹೆಚ್ಚುಗಾರಿಕೆಯನ್ನು. 3. ಮತ್ತೊಬ್ಬರಿಗೆ ಅಧೀನವಾಗಿಲ್ಲದಿರುವಿಕೆಯನ್ನು. 4. ಸ್ವತಂತ್ರವಾಗಿ ಆಳುವಿಕೆಯನ್ನು,

  1. ಇಲ್ಲಿ ಹೇಳಿರುವ ಶ್ರೇಷ್ಠತ್ವಾದಿಗಳು, ವಾಕ್ಯವು ಬ್ರಹ್ಮವಿಷಯವೆಂಬುದನ್ನೇ ತಿಳಿಸುತ್ತವ ಎಂದು ಭಾವ.

ಅಧಿ. ೫. ಸೂ. ೧೮] ಇಲ್ಲಿರುವ ಜೀವಪರಾಮರ್ಶವು ಬ್ರಹ್ಮಜ್ಞಾನಕ್ಕಾಗಿ ೬೧೩ ನಿರ್ಣಯಿಸಿರುವದಿಲ್ಲ. ಆದ್ದರಿಂದ ಇಲ್ಲಿ ಜೀವಮುಖ್ಯಪ್ರಾಣಗಳ ಶಂಕೆಯು ಮತ್ತ ಉಂಟಾಗುವದರಿಂದ (ಅದನ್ನು) ತೊಲಗಿಸಲಾಗಿರುತ್ತದೆ.

“ಸೋಮ್ಮನೆ, ಮನಸ್ಸು ಪ್ರಾಣಬಂಧನವಲ್ಲವೆ?’’ (ಛಾಂ. ೬-೮-೨) ಎಂಬಲ್ಲಿ ಪ್ರಾಣಶಬ್ದವೂ ಬ್ರಹ್ಮವಿಷಯವಾಗಿರುವದು ಕಂಡುಬಂದಿದೆ. ಉಪಕ್ರಮೋಪ ಸಂಹಾರ ಗಳು ಬ್ರಹ್ಮವಿಷಯಕವಾಗಿರುವದರಿಂದ (ಜೀವಬ್ರಹ್ಮರುಗಳಿಗೆ) ಅಭೇದವೆಂಬ ಅಭಿಪ್ರಾಯದಿಂದ ಜೀವಲಿಂಗವೂ (ಇರಬಹುದೆಂದು) ಹೊಂದಿಸಬೇಕು.” ಅನ್ಯಾರ್ಥಂ ತು ಜೈಮಿನಿಃ ಪ್ರಶ್ನವ್ಯಾಖ್ಯಾನಾಭ್ಯಾಮಪಿ

ಚೈವಮೇಕೇ ll೧೮|| ೧೮. (ಜೀವಪರಾಮರ್ಶವು) ಅನ್ಯಾರ್ಥವಾಗಿಯೇ ಎಂದಿರುತ್ತದೆ ; ಏಕೆಂದರೆ ಪ್ರಶೋತ್ತರಗಳಿಂದ (ಹಾಗೆಂದು ಸಿದ್ಧವಾಗುತ್ತದೆ). ಇದಲ್ಲದೆ ಹೀಗೆಂದು ಕೆಲವರು (ಶಾಖೆಯವರು ಪಠಿಸುತ್ತಲಿದ್ದಾರೆ) ಎಂದು ಜೈಮಿನಿಯು (ಅಭಿಪ್ರಾಯಪಡುತ್ತಾನೆ).

ಇಲ್ಲಿರುವ ಜೀವಪರಾಮರ್ಶವು ಬ್ರಹ್ಮಜ್ಞಾನಕ್ಕಾಗಿ

(ಭಾಷ್ಯ) ೩೭೬. ಅಪಿ ಚ ನೃವಾತ್ರ ವಿವದಿತವ್ಯಮ್ ಜೀವಪ್ರಧಾನಂ ವಾ ಇದಂ ವಾಕ್ಯಂ ಸ್ಮಾತ್ ಬ್ರಹ್ಮಪ್ರಧಾನಂ ವಾ ಇತಿ | ಯತಃ ಅನ್ಯಾರ್ಥಂ ಜೀವಪರಾಮರ್ಶಂ ಬ್ರಹ್ಮ ಪ್ರತಿಪತ್ಯರ್ಥಮ್ ಅಸ್ಮಿನ್ ವಾಕ್ಕೇ ಜೈಮಿನಿರಾಚಾರ್ಯ ಮನ್ಯತೇ | ಕಸ್ಮಾತ್ ? ಪ್ರಶ್ನವ್ಯಾಖ್ಯಾನಾಭ್ಯಾಮ್ | ಪ್ರಶ್ನಸ್ತಾವತ್ ಸುಪ್ತಪುರುಷಪ್ರತಿಬೋಧನೇನ ಪ್ರಾಣಾದಿ ವ್ಯತಿರಿಕ್ತ ಜೀವೇ ಪ್ರತಿಬೋಧಿತೇ, ಪುನರ್ಜೀವವ್ಯತಿರಿಕ್ತವಿಷಯೂ ದೃಶ್ಯತೇ “ಕೃಷ ಏತದ್ಯಾಲಾಕೇ ಪುರುಷಶಯಿಷ್ಯ ಕೈ ವಾ ಏತದಭೂತ್ ಕುತ ಏತದಾಗಾತ್’’ (ಕೆ.

  1. ಕರ್ಮಶಬ್ದವು ಚಲನೆ, ಧರ್ಮಾಧರ್ಮಗಳು ಎಂಬರ್ಥದಲ್ಲಿ ರೂಢವಾಗಿರುತ್ತದೆ. ಯೌಗಿಕವಾಗಿ ಮಾಡಲ್ಪಡತಕ್ಕ ಕಾರ್ಯ’ ಎಂಬ ಗೌಣಾರ್ಥದಲ್ಲಿ ಏಕೆ ತೆಗೆದುಕೊಳ್ಳಬೇಕು ? - ಎಂಬ ಶಂಕೆಯು ಇಲ್ಲಿ ಉಂಟಾಗಬಹುದಷ್ಯ ; ಅದಕ್ಕೆ ಪರಿಹಾರವು ಆ ಅಧಿಕರಣದಲ್ಲಿಲ್ಲ ಎಂದರ್ಥ.

  2. ಇದು ಬ್ರಹ್ಮವಿಷಯಕವೆಂದು ನಿಶ್ಚಯವಾಗಿರುವದರಿಂದ ಜೀವಲಿಂಗವನ್ನೂ ಹೇಗೋ ಮಾಡಿ ಬ್ರಹ್ಮಕ್ಕ ಹೊಂದಿಸಿಕೊಳ್ಳಬೇಕು ಎಂದು ಅಭಿಪ್ರಾಯ.

೬೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. ೪-೧೯) ಇತಿ | ಪ್ರತಿವಚನಮಪಿ “ಯದಾ ಸುಪ್ತ: ಸ್ವಪ್ನಂ ನ ಕಂಚನ ಪಶ್ಯತ್ಯಥಾಸ್ಮಿನ್ ಪ್ರಾಣ ಏಕಧಾ ಭವತಿ’ ಇತ್ಯಾದಿ, “ಏತಸ್ಮಾದಾತ್ಮನಃ ಪ್ರಾಣಾ ಯಥಾಯತನಂ ವಿಪ್ರತಿಷ್ಠನೇ ಪ್ರಾಣೇಭ್ಯ ದೇವಾ ದೇವೇಭ್ಯ ಲೋಕಾಃ’ (ಕೌ, ೪-೨೦) ಇತಿ ಚ | ಸುಷುಪ್ತಿಕಾಲೇ ಚ ಪರೇಣ ಬ್ರಹ್ಮಣಾ ಜೀವಃ ಏಕತಾಂ ಗಚ್ಛತಿ, ಪರಸ್ಮಾಚ ಬ್ರಹ್ಮಣಃ ಪ್ರಾಣಾದಿಕಂ ಜಗತ್ ಜಾಯತೇ ಇತಿ ವೇದಾನಮರ್ಯಾದಾ | ತಸ್ಮಾತ್ ಯತ್ರಾಸ್ಯ ಜೀವಸ್ಯ ನಿಃಸಂಬೋಧತಾ ಸ್ವಚ್ಛತಾರೂಪಃ ಸ್ಟಾಪಃ ಉಪಾಧಿಜನಿತ ವಿಶೇಷವಿಜ್ಞಾನರಹಿತಂ ಸ್ವರೂಪಮ್, ಯತಸ್ತಂಶರೂಪಮ್ ಆಗಮನಮ್, ಸೋತ್ರ ಪರಮಾತ್ಮಾ ವೇದಿತವ್ಯತಯಾ ಶ್ರಾವಿತಃ ಇತಿ ಗಮ್ಯತೇ ||

(ಭಾಷ್ಯಾರ್ಥ) ಇದಲ್ಲದ ಈ ವಾಕ್ಯವು ಜೀವಪ್ರಧಾನವಾಗಿರಬಹುದೆ, ಅಥವಾ ಬ್ರಹ್ಮ ಪ್ರಧಾನವಾಗಿರಬಹುದೆ ? - ಎಂಬೀ (ವಿಷಯದಲ್ಲಿ) ವಿವಾದಮಾಡುವಂತೆಯೇ ಇಲ್ಲ. ಏಕಂದರ ಈ ವಾಕ್ಯದಲ್ಲಿರುವ ಜೀವಪರಾಮರ್ಶವು ಅನ್ಯಾರ್ಥವಾಗಿರುತ್ತದೆ, ಎಂದರೆ ಬ್ರಹ್ಮಜ್ಞಾನಾರ್ಥವಾಗಿರುತ್ತದೆ ಎಂದು ಜೈಮಿನಿ ಎಂಬ ಆಚಾರ್ಯರು ಅಭಿಪ್ರಾಯ ಪಡುತ್ತಾರೆ. ಏತರಿಂದ ? ಎಂದರೆ ಪ್ರಶೋತ್ತರಗಳಿರುವದರಿಂದ. ಮೊದಲನೆಯದಾಗಿ ನಿದ್ರಿಸುತ್ತಿದ್ದ ಮನುಷ್ಯನನ್ನು ಎಬ್ಬಿಸಿದ್ಧರಿಂದ ಪ್ರಾಣಾದಿಗಳಿಗಿಂತ ಬೇರೆಯಾಗಿರುವ ಜೀವನನ್ನು ತಿಳಿಸಿದಮೇಲೆ ಮತ್ತೆ ಜೀವವ್ಯತಿರಿಕ್ತವಾದ (ಬ್ರಹ್ಮ) ವಿಷಯದಲ್ಲಿ “ಬಾಲಾಕಿಯ, ಈ ಪುರುಷನು ಎಲ್ಲಿ ಹೇಗೆ ನಿದ್ರಿಸಿದನು ? ಅಥವಾ ಎಲ್ಲಿದ್ದು ಕೊಂಡಿದ್ದನು ? ಎಲ್ಲಿಂದ ಹೀಗೆ ಬಂದನು ?’ (ಕೌ, ೪-೧೯) ಎಂಬ ಪ್ರಶ್ನೆಯು ಕಂಡುಬರುತ್ತದೆ. “ಯಾವಾಗ ನಿದ್ರಿಸಿದವನು ಯಾವ ಕನಸನ್ನೂ ಕಾಣುವದಿಲ್ಲವೋ ಆಗ ಈ ಪ್ರಾಣನಲ್ಲಿಯೇ ಒಂದಾಗುತ್ತಾನೆ’ ಎಂದು ಮುಂತಾಗಿಯೂ ಈ ಆತ್ಮನಿಂದ ಪ್ರಾಣಗಳು (ತಮ್ಮ ತಮ್ಮ ಸ್ಥಾನವನ್ನು ಅನುಸರಿಸಿ ಬಂದು ಸೇರುತ್ತವೆ. ಪ್ರಾಣಗಳ ಹಿಂದ ದೇವತೆಗಳು, ದೇವತೆಗಳ ಹಿಂದ ಲೋಕಗಳು, ಹೊರಟು ಬರುತ್ತವ’ (ಕೌ. ೪ ೨೦) ಎಂದೂ ಉತ್ತರವೂ (ಕಂಡುಬರುತ್ತದೆ). ಸುಷುಪ್ತಿಕಾಲದಲ್ಲಿ ಜೀವನು ಪರಬ್ರಹ್ಮದೊಡನೆ ಏಕತ್ವವನ್ನು ಹೊಂದುತ್ತಾನೆ, ಮತ್ತು ಪರಬ್ರಹ್ಮದಿಂದಲೇ ಪ್ರಾಣವೇ ಮುಂತಾದ ಜಗತ್ತು ಉಂಟಾಗುತ್ತಿರುವದು ಎಂಬುದು ವೇದಾಂತಮರ್ಯಾದೆ.! ಆದ್ದರಿಂದ ಯಾವನಲ್ಲಿ ಜೀವನಿಗೆ ಅರಿವಿಲ್ಲದ ಸ್ವಚ್ಛತ್ವರೂಪವಾದ ನಿದ್ರಯುಂಟಾಗು

  1. ಈ ಅಭಿಪ್ರಾಯದ ವಿಷಯಕ್ಕೆ ಈಚಿನ ವೇದಾಂತಿಗಳು ಹೇಳುವದನ್ನು ಪೀಠಿಕೆಯಲ್ಲಿ ವಿಮರ್ಶಿಸಿದ.

ಅಧಿ. ೫. ಸೂ. ೧೮] ಈ ಅರ್ಥಕ್ಕೆ ಬೃಹದಾರಣ್ಯಕದ ಸಂವಾದವಿದೆ

೬೧೫

ವದೋ, ಉಪಾಧಿಯಿಂದುಂಟಾದ ವಿಶೇಷವಿಜ್ಞಾನರಹಿತವಾದ ಸ್ವರೂಪವಿರು ವದೂ, ಯಾವನತ್ತಲಿಂದ ಆ (ಸ್ವರೂಪ)ದಿಂದ ಜಾರಿಬೀಳುವ ರೂಪದ ಬರುವಿಕ ಯುಂಟಾಗುವದೋ, ಆ ಪರಮಾತ್ಮನನ್ನೇ ಇಲ್ಲಿ ತಿಳಿಯತಕ್ಕದ್ದೆಂದು ಶ್ರುತಿಯಲ್ಲಿ ಹೇಳಿದೆ ಎಂದು ನಿಶ್ಚಯವಾಗುತ್ತದೆ.

ಈ ಅರ್ಥಕ್ಕೆ ಬೃಹದಾರಣ್ಯಕದ ಸಂವಾದವಿದೆ

(ಭಾಷ್ಯ) ೩೭೭. ಅಪಿ ಚ ಏವಮೇಕೇ ಶಾಖಿನೋ ವಾಜಸನೇಯಿನಃ ಅಸ್ಮಿನ್ನೇವ ಬಾಲಾಕ್ಯಜಾತಶತ್ರುಸಂವಾದೇ ಸ್ಪಷ್ಟಂ ವಿಜ್ಞಾನಮಯಶಸ್ಸೇನ ಜೀವಮ್ ಆಮ್ಯಾಯ ತದ್ಭತಿರಿಕ್ತಂ ಪರಮಾತ್ಮಾನಮ್ ಆಮನ - “ಯ ಏಷ ವಿಜ್ಞಾನಮಯಃ ಪುರುಷಃ ಕೈಷ ತದಾಭೂತ್ ಕುತ ಏತದಾಗಾತ್’’ (ಬೃ. ೨-೧-೧೬) ಇತಿ ಪ್ರಶ್ನೆ ! ಪ್ರತಿ ವಚನೇSಪಿ ‘ಯ ಏರ್ಷೋನರ್ಹದಯ ಆಕಾಶಸ್ತಸ್ಮಿತೇ ’’ (ಬೃ. ೨-೧-೧೭) ಇತಿ | ಆಕಾಶಶಬ್ದಶ್ಚ ಪರಮಾತ್ಮನಿ ಪ್ರಯುಕ್ತ: ‘ದಹರೂನನ್ನರಾಕಾಶಃ’ (ಛಾಂ. ೮-೧-೧) ಇತ್ಯತ್ರ | ‘ಸರ್ವ ಏತೇ ಆತ್ಮಾನೋ ವುಚ್ಚರ’’ (ಬೃ. ಮಾ. ೨-೧-೨೦) ಇತಿ ಚ ಉಪಾಧಿಮತಾಮಾತ್ಮನಾಮ್ ಅನ್ಯತೋ ವೈುಚ್ಚರಣಮ್ ಆಮನನ್ನ; ಪರಮಾತ್ಮಾನಮೇವ ಕಾರಣನ ಆಮನ ಇತಿ ಗಮ್ಮತೇ 1 ಪ್ರಾಣನಿರಾಕರಣಸ್ಕಾಪಿ ಸುಷುಪ್ತಪುರುಷೋತ್ಸಾಪನೇನ ಪ್ರಾಣಾದಿವ್ಯತಿರಿಕ್ಲೋಪದೇಶಃ ಅಭ್ಯುಚ್ಚಯಃ ||

(ಭಾಷ್ಯಾರ್ಥ) ಇದಲ್ಲದ ಹೀಗೆ ಕೆಲವು ಶಾಖೆಯವರು, ಎಂದರೆ ವಾಜಸನೇಯಿಗಳು ಇದೇ ಬಾಲಾಕ್ಯಜಾತಶತ್ರುಸಂವಾದದಲ್ಲಿ ಸ್ಪಷ್ಟವಾಗಿ ‘ವಿಜ್ಞಾನಮಯ’ ಎಂಬ ಶಬ್ದದಿಂದ

  1. ಅರಿವಿಲ್ಲದಿರುವದಕ್ಕೆ ಕಾರಣವನ್ನು ೩-೨-೭ ರ ಭಾಷ್ಯದಲ್ಲಿ ಕೊಟ್ಟಿದೆ. “ಸ್ವಚ್ಛತಾರೂಪದಂತೆ ಇರುವ ರೂಪವು, ಸ್ವಚ್ಛತೆಯೇ ಅಲ್ಲ ; ಏಕೆಂದರೆ ಅಲ್ಲಿ ಲಯ, ವಿಕ್ಷೇಪ, ಸಂಸ್ಕಾರ - ಇವುಗಳು ಇರುತ್ತವೆ. ವ್ಯಕ್ತವಾಗಿ ವ್ಯಾಪಾರಮಾಡುತ್ತಿರುವ ವಿಕ್ಷೇಪವಿಲ್ಲವೆಂಬ ಮಾತ್ರದಿಂದ ಸ್ವಚ್ಛರೂಪಕ್ಕೆ ಹೋಲಿಸಿದೆ’ ಎಂದು ಭಾವತೀವ್ಯಾಖ್ಯಾನ. ಈ ವ್ಯಾಖ್ಯಾನವನ್ನು ಒಪ್ಪಿದರೆ ಅಧಿಕರಣದ ನ್ಯಾಯವೇ ಹಾರಿಹೋಗುವದು. ಪೀಠಿಕೆಯನ್ನು ನೋಡಿ,

  2. ಬರಿಯ ಚೈತನ್ಯಸ್ವರೂಪವಿರುವದೋ ಎಂದರ್ಥ. ಎಲ್ಲಿದ್ದುಕೊಂಡಿದ್ದನು ? - ಎಂಬ ಪ್ರಶ್ನೆಗೆ ಉತ್ತರವಿದು. ಈಗಲೂ ಚೈತನ್ಯರೂಪದಲ್ಲಿಯೇ ಇದ್ದರೂ ಬೇರೊಂದು ರೂಪವನ್ನು ಹೊಂದಿದಂತೆ ಆಗಿರುತ್ತದೆ. ೩-೨-೬ ರ ಭಾಷ್ಯವನ್ನು ನೋಡಿ.

  3. ಚಿನ್ಮಾತ್ರಸ್ವಚ್ಛತಾರೂಪದಿಂದ ಭ್ರಂಶನಾದಂತ ಉಪಾಧಿಯಿಂದ ಕಾಣಬರುತ್ತಿರುವದೇ ಅಲ್ಲಿಂದ ಬರುವದು. ಆತ್ಮನಿಗೆ ನಿಜವಾಗಿ ಹೋಗುವದಾಗಲಿ ಬರುವದಾಗಲಿ ಇಲ್ಲ.

೬೧೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಜೀವನನ್ನು ಹೇಳಿ ಅವನಿಗಿಂತ ವ್ಯತಿರಿಕ್ತನಾದ ಪರಮಾತ್ಮನನ್ನು ‘ಈ ವಿಜ್ಞಾನಮಯ ಪುರುಷನಿದಾನಲ್ಲ, ಇವನು ಆಗ ಎಲ್ಲಿದ್ದನು ? ಎಲ್ಲಿಂದ ಹೀಗೆ ಬಂದನು ?’’ (ಬೃ. ೨ ೧-೧೬) ಎಂದು ಪ್ರಶ್ನೆಯಲ್ಲಿ ಪಠಿಸುತ್ತಾರೆ. ಉತ್ತರದಲ್ಲಿಯೂ ‘ಹೃದಯದೊಳಗೆ ಈ ಆಕಾಶವಿದೆಯಲ್ಲ, ಅದರಲ್ಲಿ ನಿದ್ರಿಸುತ್ತಾನೆ’ (೨-೧-೧೭) ಎಂದು (ಪಠಿಸುತ್ತಾರೆ). “ಇದರೊಳಗಿನದಹರವಾದ ಆಕಾಶವು’ (ಛಾಂ. ೮-೧-೧) ಎಂಬಲ್ಲಿ ಆಕಾಶ ಶಬ್ದವನ್ನು ಪರಮಾತ್ಮನಲ್ಲಿ ಪ್ರಯೋಗಿಸಿರುತ್ತದೆ. “ಈ ಆತ್ಮರುಗಳೆಲ್ಲರೂ ಹೊರಕ್ಕೆ ಬರುತ್ತಾರೆ’ (ಬೃ. ಮಾ. ೨-೧-೨೦) ಎಂದು ಉಪಾಧಿಯುಳ್ಳ’ ಆತ್ಮರುಗಳು ಮತ್ತೊಬ್ಬನಿಂದ ಹೊರಟುಬರುತ್ತಾರೆಂದು ಪಠಿಸುತ್ತಿರುವದರಿಂದ ಪರಮಾತ್ಮನೇ (ಅವನಿಗೆ) ಕಾರಣನೆಂದು ಪಠಿಸುತ್ತಾರೆ ಎಂದು ನಿಶ್ಚಯವಾಗುತ್ತದೆ.

ನಿದ್ರಿಸಿದ ಪುರುಷನನ್ನು ಎಬ್ಬಿಸಿದ್ಧರಿಂದ ಪ್ರಾಣಾದಿಗಳಿಗಿಂತ ಬೇರೆಯಾಗಿರುವ (ಪರಮಾತ್ಮನನ್ನು) ಉಪದೇಶಿಸಿರುವದು ಪ್ರಾಣನಿರಾಕರಣೆಗೆ ಮತ್ತೊಂದು ಕಾರಣ ವಾಗುತ್ತದೆ.

೬. ವಾಕ್ಯಾನ್ವಯಾಧಿಕರಣ (ಸೂ. ೧೯- ೨೨)

(ಬೃಹದಾರಣ್ಯಕ ೨-೪-೫ ರಲ್ಲಿ ಹೇಳಿರುವದು ಪರಮಾತ್ಮನನ್ನೇ)

ವಾಕ್ಯಾನ್ವಯಾತ್ ||೧೯||

೧೯. ವಾಕ್ಯಾನ್ವಯದಿಂದ (ದ್ರಷ್ಟವನೆಂದು ಮುಂತಾಗಿ ಹೇಳಿರುವವನು ಪರಮಾತ್ಮನೇ).

ವಿಷಯವೂ ಸಂಶಯವೂ

(ಭಾಷ್ಯ) ೩೭೮. ಬೃಹದಾರಣ್ಯಕೇ ಮೈತ್ರೇಯೀಬ್ರಾಹ್ಮಣೇ ಅಧೀಯತೇ “ನ ವಾ ಅರೇ ಪತ್ಯುಃ ಕಾಮಾಯ’ (ಬೃ. ೨-೪-೫ ; ೪-೫-೬) ಇತ್ಯುಪಕ್ರಮ್ಮ, “ನ ವಾ ಅರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವತ್ಯಾತ್ಮನನ್ನು ಕಾಮಾಯ ಸರ್ವಂ ಪ್ರಿಯಂ ಭವತ್ಯಾತ್ಮಾ ವಾ ಅರೇ ದ್ರಷ್ಟವ್ಯ: ಶ್ರತ ಮನ ನಿದಿಧ್ಯಾಸಿತವೋ ಮೃತೇಯ್ತಾತ್ಮನೋ ವಾ ಅರೇ ದರ್ಶನೇನ ಶ್ರವಣೇನ ಮತ್ಯಾ ವಿಜ್ಞಾನೇನೇದಂ ಸರ್ವಂ

1.ಜೀವರುಗಳಿಗೆ ಉತ್ಪತ್ತಿಯಿಲ್ಲವಾದರೂ ಉಪಾಧಿಗಳ ಮೂಲಕ ಉತ್ಪತ್ತಿಯನ್ನು ಹೇಳಿದ ಎಂದರ್ಥ, ಮಾಂ. ಕಾ. ಭಾ.೩-೩ ನೋಡಿ.

ಅಧಿ. ೬. ಸೂ. ೧೯] ಉಪಕ್ರಮಸಾಮರ್ಥ್ಯದಿಂದ ಇದು ಜೀವನೆಂದು ತಿಳಿಯಬೇಕು ೬೧೭ ವಿದಿತಮ್’’ (ಬೃ. ೨-೪-೫) ಇತಿ | ತತ್ರ ಏತದ್ ವಿಚಿಕಿತ್ಸತೇ - ಕಿಂ ವಿಜ್ಞಾನಾತ್ಮವ ಅಯಂ ದ್ರಷ್ಟವ್ಯಶೋತವ್ಯತ್ಯಾದಿರೂಪೇಣ ಉಪದಿಶ್ಯತೇ ಆಹೂಸ್ಟಿತ್ ಪರಮಾತ್ಮಾ ಇತಿ 1 ಕುತಃ ಪುನರೇಷಾ ವಿಚಿಕಿತ್ಸಾ ? ಪ್ರಿಯಸಂಸೂಚಿತೇನ ಆತ್ಮನಾ ಭೋಕ್ತಾ ಉಪಕ್ರಮಾತ್ ವಿಜ್ಞಾನಾತ್ರೋಪದೇಶಃ ಇತಿ ಪ್ರತಿಭಾತಿ | ತಥಾ ಆತ್ಮವಿಜ್ಞಾನೇನ ಸರ್ವವಿಜ್ಞಾನೋಪದೇಶಾತ್ ಪರಮಾತ್ರೋಪದೇಶಃ ಇತಿ ||

(ಭಾಷ್ಯಾರ್ಥ) ಬೃಹದಾರಣ್ಯಕದಲ್ಲಿ ಮೈತ್ರೇಯೀಬ್ರಾಹ್ಮಣದಲ್ಲಿ “ಎಲ, ಪತಿಯ ಕಾಮಕ್ಕಾಗಿ (ಪತಿಯು ಪ್ರಿಯನಾಗುವುದಿಲ್ಲ” (ಬ. ೨-೪-೫) ಎಂದು ಉಪಕ್ರಮಿಸಿ ‘ಎಲೆ, ಎಲ್ಲದರ ಕಾಮಕ್ಕಾಗಿ ಎಲ್ಲವೂ ಪ್ರಿಯವಾಗುವದಿಲ್ಲ ; ಮತಕ್ಕೆಂದರೆ ಆತ್ಮನ ಕಾಮಕ್ಕಾಗಿ ಎಲ್ಲವೂ ಪ್ರಿಯವಾಗಿರುತ್ತದೆ. ಎಲೆ, ಆತ್ಮನನ್ನೇ ಕಂಡುಕೊಳ್ಳಬೇಕು, ಕೇಳಬೇಕು, ವಿಚಾರಿಸಬೇಕು, ಚಿಂತಿಸಬೇಕು ; ಎಲೆ ಆತ್ಮನನ್ನು ಕಂಡುಕೊಳ್ಳುವದರಿಂದ, (ಆತ್ಮನ) ಶ್ರವಣದಿಂದ, ಮನನದಿಂದ, ವಿಜ್ಞಾನದಿಂದ ಇದೆಲ್ಲವೂ ವಿದಿತವಾಗು ವದು’’ (ಬೃ. ೨-೪-೫) ಎಂದು ಅಧ್ಯಯನಮಾಡುತ್ತಾರೆ.

ಇಲ್ಲಿ ದ್ರಷ್ಟವ್ಯ, ಶೌತವ್ಯ ಮುಂತಾದ ರೂಪದಿಂದ ಉಪದೇಶಿಸಿರುವ ಇವನು ವಿಜ್ಞಾನಾತ್ಮನೇಯೊ, ಅಥವಾ ಪರಮಾತ್ಮನೂ ? - ಎಂಬುದರ (ವಿಷಯಕ್ಕ) ಸಂಶಯವುಂಟಾಗುತ್ತದೆ.

(ಪ್ರಶ್ನ) :- .ಈ ಸಂಶಯವು ಏತರಿಂದ (ಉಂಟಾಗುತ್ತದೆ) ?

(ಉತ್ತರ) :- ಪ್ರಿಯ (ವಸ್ತುಗಳಿಂದ) ಸಂಸೂಚಿತನಾದ ಭೋಕ್ತವಾದ ಆತ್ಮನಿಂದ ಉಪಕ್ರಮಿಸಿರುವದರಿಂದ ವಿಜ್ಞಾನಾತ್ಮನನ್ನು ಉಪದೇಶಿಸಿದ ಎಂದು ತೋರುತ್ತದೆ. ಆತ್ಮವಿಜ್ಞಾನದಿಂದ ಎಲ್ಲವನ್ನೂ ಅರಿತಂತಾಗಬಹುದೆಂದು ತಿಳಿಸಿರುವದ

ರಿಂದ ಪರಮಾತ್ಮನನ್ನು ಉಪದೇಶಿಸಿದ ಎಂದು ತೋರುತ್ತದೆ.

ಪೂರ್ವಪಕ್ಷ : ಉಪಕ್ರಮಸಾಮರ್ಥ್ಯದಿಂದ ಇದು ಜೀವನೆಂದು ತಿಳಿಯಬೇಕು

(ಭಾಷ್ಯ) ೩೭೯. ಕಿಂ ತಾವತ್ ಪ್ರಾಪ್ತಮ್ ? ವಿಜ್ಞಾನಾತ್ರೋಪದೇಶಃ ಇತಿ | ಕಸ್ಮಾತ್ ? ಉಪಕ್ರಮಸಾಮರ್ಥ್ಯಾತ್ | ಪತಿಜಾಯಾಪುತ್ರವಿತ್ತಾದಿಕಂ ಹಿ ಭೋಗ್ಯಭೂತಂ ಸರ್ವಂ ಜಗತ್ ಆತ್ಮಾರ್ಥತಯಾ ಪ್ರಿಯಂ ಭವತಿ ಇತಿ ಪ್ರಿಯಸಂಸೂಚಿತಮ್ ಭೋಕ್ತಾರಮ್

೬೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಆತ್ಮಾನಮ್ ಉಪಕ್ರಮ್ಮ ಅನನ್ತರಮ್ ಇದಮ್ ಆತ್ಮನಃ ದರ್ಶನಾದಿ ಉಪದಿಶ್ಯ ಮಾನಂ ಕಸ್ಯ ಅನ್ಯಸ್ಯ ಆತ್ಮನಃ ಸ್ಯಾತ್ ? ಮಧ್ಯೆಪಿ ಇದಂ ಮಹದ್ದೂತಮನನ್ನ ಮಪಾರಂ ವಿಜ್ಞಾನಘನ ಏವೃತೇಭೋ ಭೂತೇಭ್ಯಃ ಸಮುತ್ಥಾಯ ತಾನೈವಾನು ವಿನಶ್ಯತಿ ನ ಪ್ರತ್ಯ ಸಂಜ್ಞಾಸ್ತಿ’ (ಬೃ. ೨-೪-೧೨) ಇತಿ ಪ್ರಕೃತಸ್ಯವ ಮಹತೋ ಭೂತಸ್ಯ ದ್ರಷ್ಟವ್ಯಸ್ಯ ಭೂತೇಭ್ಯಃ ಸಮುತ್ಥಾನಂ ವಿಜ್ಞಾನಾತ್ಮಭಾವೇನ ಬ್ರುವನ್ ವಿಜ್ಞಾನಾತ್ಮನ ಏವೇದಂ ದ್ರಷ್ಟವ್ಯತ್ವಂ ದರ್ಶಯತಿ । ತಥಾ “ವಿಜ್ಞಾತಾರವರೇ ಕೇನ ವಿಜಾನೀಯಾತ್” (ಬೃ. ೨-೪-೧೪) ಇತಿ ಕರ್ತವಚನೇನ ಶಬ್ದನ ಉಪ ಸಂಹರನ್ ವಿಜ್ಞಾನಾತ್ಮಾನವ ಇಹ ಉಪದಿಷ್ಟಂ ದರ್ಶಯತಿ | ತಸ್ಮಾತ್ ಆತ್ಮ ವಿಜ್ಞಾನೇನ ಸರ್ವವಿಜ್ಞಾನವಚನಂ ಭೋಕ್ತರ್ಥತ್ವಾತ್ ಭೋಗ್ಯಜಾತಸ್ಯ ಔಪಚಾರಿಕಂ ದ್ರಷ್ಟವ್ಯಮ್ ಇತಿ ||

(ಭಾಷ್ಯಾರ್ಥ) ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದೆ ? (ಇದು) ವಿಜ್ಞಾನಾತ್ರೋಪದೇಶವಂದು. ಏಕೆ ? ಎಂದರೆ ಉಪಕ್ರಮಸಾಮರ್ಥ್ಯದಿಂದ. ಗಂಡ, ಹಂಡತಿ, ಮಗ, ವಿತ್ತ - ಮುಂತಾದ ಭೋಗ್ಯವಾಗಿರುವ ಜಗತ್ತೆಲ್ಲವೂ ಆತ್ಮ ನಿಗೋಸ್ಕರವೇ ಪ್ರಿಯವಾಗಿರುತ್ತದೆ ಎಂದು ಪ್ರಿಯಸೂಚಿತನಾಗಿರುವ ಭೂಕ್ತವಾದ ಆತ್ಮನನ್ನು ಉಪಕ್ರಮಿಸಿದ ಬಳಿಕವೇ ಆತ್ಮನ ಈ ದರ್ಶನವೇ ಮುಂತಾದದ್ದನ್ನು ಉಪದೇಶಿಸಿರುವದು ಮತ್ತೆ ಯಾವ ಆತ್ಮನ (ಉಪದೇಶ) ವಾದೀತು ? ನಡುವೆಯೂ “ಈ ಅನಂತವೂ ಅಪಾರವೂ ಆಗಿರುವ ದೊಡ್ಡ ಭೂತವು ವಿಜ್ಞಾನದ ಗಟ್ಟಿಯೇ (ಆಗಿರುತ್ತದೆ, ಇದು) ಈ ಭೂತಗಳಿಂದ ಮೇಲಕ್ಕೆದ್ದು ಅವುಗಳನ್ನೇ ಅನುಸರಿಸಿ ನಾಶವಾಗುತ್ತದೆ. (ಹಾಗೆ) ಹೂರಟುಹೋದಬಳಿಕ ಜ್ಞಾನವಿರುವದಿಲ್ಲ’ (ಬೃ. ೨-೪ ೧೨) ಎಂದು ಪ್ರಕೃತವಾಗಿರುವ ದ್ರಷ್ಟವ್ಯವಾದ ಮಹದ್ದೂತವನ್ನೇ ಭೂತಗಳಿಂದ ವಿಜ್ಞಾನಾತ್ಮರೂಪದಿಂದ ಮೇಲಕ್ಕೇಳುವದಂದು ಹೇಳಿರುವದರಿಂದ (ಯಾಜ್ಯ ವನು) ಈ ದ್ರಷ್ಟವ್ಯವೆಂದು ಹೇಳಿದ್ದು ವಿಜ್ಞಾನಾತ್ಮನನ್ನೇ ಎಂದು ತಿಳಿಸಿರುತ್ತಾನೆ. ಹಾಗೂ ‘ಎಲೆ, ವಿಜ್ಞಾತೃವನ್ನು ವಿತರಿಂದ ಅರಿತುಕೊಂಡಾನು ?’’ (ಬೃ. ೨-೪-೧೪) ಎಂದು ಕರ್ತವಾಚಕವಾದ (ವಿಜ್ಞಾತೃ) ಶಬ್ದದಿಂದ ಉಪಸಂಹಾರಮಾಡಿರುವದರಿಂದ ಇಲ್ಲಿ ಉಪದೇಶಮಾಡಿರುವದು ವಿಜ್ಞಾನಾತ್ಮನನ್ನೇ ಎಂದು ತಿಳಿಸಿರುತ್ತಾನೆ. ಆದ್ದರಿಂದ ಆತ್ಮವಿಜ್ಞಾನದಿಂದ ಎಲ್ಲವನ್ನೂ ಅರಿತಂತಾಗುವದೆಂದು ಹೇಳುವದು ಭೋಗ್ಯಜಾತವು

  1. ಉಪಕ್ರಮಸಾಮರ್ಥ್ಯದಿಂದ ಹಿಂದಿನ ಅಧಿಕರಣದಲ್ಲಿ ಪರಮಾತ್ಮನೆಂದು ನಿಶ್ಚಯಿಸಿರು ವಂತೆ ಇಲ್ಲಿಯೂ ಜೀವಪರವೆಂದು ನಿಶ್ಚಯಿಸಬೇಕು ಎಂದು ಭಾವ.

ಅಧಿ. ೬. ಸೂ. ೧೯] ವಾಕ್ಯದ ಅನ್ವಯದಿಂದ ಇದು ಪರಮಾತ್ಮನೆಂದು ಗೊತ್ತಾಗುತ್ತದೆ ೬೧೯

ಭೋತೃವಿಗೋಸ್ಕರವಿದೆಯಂಬ ಕಾರಣದಿಂದ ಉಪಚಾರಕ್ಕಾಗಿ (ಹೇಳಿದ್ದು) ಎಂದು ತಿಳಿಯಬೇಕು.

ಸಿದ್ಧಾಂತ : ವಾಕ್ಯದ ಅನ್ವಯದಿಂದ ಇದು ಪರಮಾತ್ಮನೆಂದು ಗೊತ್ತಾಗುತ್ತದೆ

(ಭಾಷ್ಯ) .೩೮೦. ಏವಂ ಪ್ರಾಪ್ತ ಬ್ಯೂಮಃ | ಪರಮಾತ್ರೋಪದೇಶ ಏವಾಯಮ್ | ಕಸ್ಮಾತ್ ? ವಾಕ್ಯಾನ್ವಯಾತ್ | ವಾಕ್ಯಂ ಹಿ ಇದಂ ಪೌರ್ವಾಪರ್ಯಣ ಅವೇಕ್ಷಮಾಣಂ ಪರಮಾತ್ಮಾನಂ ಪ್ರತಿ ಅನ್ವಿತಾವಯವಂ ಲಕ್ಷ್ಮತೇ | ಕಥಮಿತಿ ? ತದುಪಪಾದ್ಯತೇ | “ಅಮೃತತ್ವಸ್ಯ ತು ನಾಶಾಸ್ತಿ ವಿತ್ತೇನ’ (ಬೃ. ೨-೪-೨) ಇತಿ ಯಾಜ್ಞವಲ್ಯಾತ್ ಉಪಶ್ರುತ್ಯ ‘ಯೇನಾಹಂ ನಾಮೃತಾ ಸ್ಯಾಂ ಕಿಮಹಂ ತೇನ ಕುರ್ಯಾಂ ಯದೇವ ಭಗವಾನ್ ವೇದ ತದೇವ ಮೇ ಬ್ರೂಹಿ’ (ಬೃ. ೨-೪-೩) ಇತಿ ಅಮೃತತ್ವಮ್ ಆಶಾಸಾನಾಯಾಃ ಮೈತ್ರೇಯಾಃ ಯಾಜ್ಞವಲ್ಕಃ ಆತ್ಮವಿಜ್ಞಾನಮಿದಮ್ ಉಪದಿಶತಿ | ನ ಚ ಅನ್ಯತ್ರ ಪರಮಾತ್ಮವಿಜ್ಞಾನಾತ್ ಅಮೃತತ್ವಮ್ ಅಸ್ತಿ ಇತಿ ಶ್ರುತಿಸ್ಮೃತಿವಾರ್ದಾ ವದನ್ತಿ | ತಥಾ ಚ ಆತ್ಮವಿಜ್ಞಾನೇನ ಸರ್ವವಿಜ್ಞಾನಮ್ ಉಚ್ಯಮಾನಂ ನಾನ್ಯ ಪರಮಕಾರಣವಿಜ್ಞಾನಾತ್ ಮುಖ್ಯಮ್ ಅವಕಲ್ಪತೇ | ನ ಚೈತತ್ ಔಪಚಾರಿಕಮ್ ಆಶ್ರಯಿತುಂ ಶಕ್ಯಮ್ | ಯತ್ಕಾರಣಮ್ ಆತ್ಮವಿಜ್ಞಾನೇನ ಸರ್ವವಿಜ್ಞಾನಂ ಪ್ರತಿಜ್ಞಾಯ ಅನನ್ತರೇಣ ಗ್ರಸ್ಥನ ತದೇವ ಉಪಪಾದಯತಿ - “ಬ್ರಹ್ಮ ತಂ ಪರಾದಾದ್ಯೋನ್ಯತಾತ್ಮನೋ ಬ್ರಹ್ಮ ವೇದ’ (ಬೃ. ೨-೪-೬) ಇತ್ಯಾದಿನಾ | ಯೋ ಹಿಬ್ರಹ್ಮಕ್ಷತ್ರಾದಿಕಂ ಜಗತ್ ಆತ್ಮನೋನ್ಯತ್ರ ಸ್ವಾತyಣಲಬ್ಧ ಸದ್ಭಾವಂ ಪಶ್ಯತಿ ತಂ ಮಿಥ್ಯಾದರ್ಶಿನಂ ತದೇವ ಮಿಥ್ಯಾದೃಷ್ಟಂ ಬ್ರಹ್ಮಕ್ಷತ್ರಾದಿಕಂ ಜಗತ್ ಪರಾಕರೋತಿ ಇತಿ ಭೇದದೃಷ್ಟಿಮ್ ಅಪೋದ್ಯ ಇದಂ ಸರ್ವಂ ಯದಯಮಾತ್ಮಾ’ (ಬೃ. ೨-೪-೬) ಇತಿ ಸರ್ವಸ್ಯ ವಸ್ತುಜಾತಸ್ಯ ಆತ್ಮಾವ್ಯತಿರೇಕಮ್ ಅವತಾರಯತಿ | ದುನ್ನು ಭ್ಯಾದಿ ದೃಷ್ಟಾನ್ಯಶ್ಚ (ಬೃ. ೨-೪-೭, ೮, ೯) ತಮೇವ ಅವ್ಯತಿರೇಕಂ ದೃಢಯತಿ | ಅಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ಯದಲ್ವೇದಃ’ (ಬೃ. ೨-೪-೧೦, ೪-೫-೧೧) ಇತ್ಯಾದಿನಾ ಚ ಪ್ರಕೃತಸ್ಯ ಆತ್ಮನಃ ನಾಮರೂಪಕರ್ಮಪ್ರಪಞ್ಚಕಾರಣತಾಂ ವ್ಯಾಚ ಕಾಣಃ ಪರಮಾತ್ಮಾನಮೇನಂ ಗಮಯ | ತಥೈವ ಏಕಾಯನಪ್ರಕ್ರಿಯಾಯಾ ಮಪಿ (ಬೃ. ೨-೪-೧೧, ೪-೫-೧೨) ಸವಿಷಯಸ್ಯ ಸೇಯಸ್ಯ ಸಾನ್ಯಾಕರಣ ಪ್ರಪಞ್ಞಕಾಯನಮ್ ಅನನ್ತರಮ್ ಅಬಾಹ್ಯಂ ಕೃಂ ಪ್ರಜ್ಞಾನಘನಂ

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ವ್ಯಾಚಕ್ಷಾಣಃ ಪರಮಾತ್ಮಾನಮನಂ ಗಮಯ | ತಸ್ಮಾತ್ ಪರಮಾತ್ಮನ ಏವಾಯಂ ದರ್ಶನಾದ್ಯುಪದೇಶಃ ಇತಿ ಗಮ್ಯತೇ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು ) ಹೇಳುತ್ತೇವ. ಇದು ಪರಮಾತ್ಮನ ಉಪದೇಶವೇ. ಏಕೆ ? ಎಂದರ ವಾಕ್ಯಾನ್ವಯವಿರುವದರಿಂದ, ಈ ವಾಕ್ಯದ ಹಿಂದುಮುಂದಿನ (ಸಂದರ್ಭ) ವನ್ನು ನೋಡಿದರೆ ಈ ವಾಕ್ಯದ ಅವಯವಗಳು ಪರಮಾತ್ಮನ ವಿಷಯದಲ್ಲಿ ಅನ್ವಿತವಾಗಿರುವದು ಕಂಡುಬರುತ್ತದೆ. ಅದು ಹೇಗೆ ? ಎಂದರೆ ಅದನ್ನು ತೋರಿಸಿಕೊಡುತ್ತೇವೆ. ಆದರೆ ವಿತ್ತದಿಂದ ಅಮೃತತ್ವದ ಆಶೆಯಿಲ್ಲ’ (ಬೃ. ೨-೪-೨) ಎಂದು ಯಾಜ್ಞವಲ್ಕನಿಂದ ಕೇಳಿ ತಿಳಿದುಕೊಂಡು) “ಯಾವದರಿಂದ ನಾನು ಅಮೃತಳಾಗಲಾರನೂ ಅದರಿಂದ ನಾನು ಏನು ಮಾಡಿಕೊಂಡೇನು ? ಪೂಜ್ಯನಾದ ನಿನಗೆ ಯಾವದು ತಿಳಿದಿದೆಯೋ ಅದನ್ನೇ ನನಗೆ ಹೇಳು’ (ಬೃ. ೨-೪-೩) ಎಂದು ಅಮೃತತ್ವವನ್ನು ಬಯಸಿದ ಮೈತ್ರೇಯಿಗೆ ಯಾಜ್ಞವಲ್ಕನು ಈ ಆತ್ಮವಿಜ್ಞಾನವನ್ನು ಉಪದೇಶಿಸಿರುತ್ತಾನೆ. ಪರಮಾತ್ಮವಿಜ್ಞಾನವನ್ನು ಬಿಟ್ಟರೆ ಮತ್ತಲ್ಲಿಯೂ ಅಮೃತತ್ವವು (ದೂರಕುವಹಾಗಿಲ್ಲವೆಂದು ಶ್ರುತಿಸ್ಮೃತಿವಾದಗಳು ಹೇಳುತ್ತಿರುತ್ತವೆ. ಇದರಂತೆ ಆತ್ಮ ವಿಜ್ಞಾನದಿಂದ ಎಲ್ಲವನ್ನೂ ಅರಿತುಕೊಂಡಂತಾಗುವದೆಂದು ಹೇಳಿರುವದು ಪರಮ ಕಾರಣವಾದ (ಆತ್ಮನ) ವಿಜ್ಞಾನದಿಂದಲ್ಲದ ಮತ್ತಲ್ಲಿಯೂ ಮುಖ್ಯವಾಗಿ ಹೊಂದು ವದಿಲ್ಲ. ಇದು ಔಪಚಾರಿಕವೆಂದು ಇಟ್ಟುಕೊಳ್ಳುವದೂ ಆಗಲಾರದು ; ಏಕೆಂದರೆ ಆತ್ಮವಿಜ್ಞಾನದಿಂದ ಸರ್ವವಿಜ್ಞಾನ(ವಾಗುವದಂದು) ಹೇಳಿ (ಅದರ) ಮುಂದಿನ ಗ್ರಂಥದಲ್ಲಿ “ಯಾವನು ಆತ್ಮನಿಗಿಂತ ಬೇರೆಯಾಗಿ ಬ್ರಾಹ್ಮಣಜಾತಿ (ಇರುವದೆಂದು) ತಿಳಿಯುವನೋ ಅವನನ್ನು (ಆ) ಬ್ರಾಹ್ಮಣಜಾತಿಯು ತಿರಸ್ಕರಿಸುವದು’ (ಬೃ. ೨-೪ ೬) ಎಂದು ಮುಂತಾದ (ವಾಕ್ಯದಿಂದ) ಅದನ್ನೇ ತೋರಿಸಿಕೊಟ್ಟಿರುತ್ತಾನೆ. ಯಾವನು ಬ್ರಹ್ಮಕ್ಷತ್ರಾದಿಯಾದ ಜಗತ್ತು ಆತ್ಮನಿಗಿಂತ ಬೇರೆಯಾಗಿ ಮತ್ತೊಂದು ಕಡೆಯಲ್ಲಿ ಇರವನ್ನು ಪಡೆದಿರುವದಂದು ತಿಳಿಯುವನೋ ಆ ಮಿಥ್ಯಾದರ್ಶಿಯನ್ನು ಅದೇ ಮಿಥಾದೃಷ್ಟವಾದ (ಆ) ಬ್ರಹ್ಮಕ್ಷತ್ರಾದಿಜಗತ್ತು ನಿರಾಕರಿಸುತ್ತದೆ ಎಂದು ಭೇದ ದೃಷ್ಟಿಯನ್ನು ನಿಂದಿಸಿ ‘ಇದೆಲ್ಲವೂ ಈ ಆತ್ಮನೆಂಬುದೇ’ (ಬೃ. ೨-೪-೬) ಎಂದು ಎಲ್ಲಾ ವಸ್ತುಜಾತವೂ ಆತ್ಮನಿಗಿಂತ ಅಭಿನ್ನವಾಗಿರುವದೆಂಬುದಕ್ಕೆ ಅವತರಣಿಕೆ ಯನ್ನು ಮಾಡಿರುತ್ತಾನೆ, ಮತ್ತು ದುಂದುಭಿಯೇ ಮುಂತಾದ ದೃಷ್ಟಾಂತಗಳಿಂದ’ (ಬೃ.

1.ಸಾಮಾನ್ಯಕ್ಕಿಂತ ವಿಶೇಷಗಳು ಬೇರೆಯಿಲ್ಲವೆಂದು ತಿಳಿಸುವದರ ಮೂಲಕ ಸ್ಥಿತಿ ಕಾಲದಲ್ಲಿ ಬ್ರಹ್ಮಕ್ಕಿಂತ ಜಗತ್ತು ಬೇರೆಯಿಲ್ಲವೆಂಬುದನ್ನು ಈ ದೃಷ್ಟಾಂತಗಳು ತಿಳಿಸುವವು.

ಅಧಿ. ೬. ಸೂ. ೧೯] ಉಪಕ್ರಮದಲ್ಲಿ ಪ್ರಿಯಸಂಸೂಚಿತನಾದ ಆತ್ಮನನ್ನೇಕೆ ಹೇಳಿದೆ ? ೬೨ ೨-೪-೭, ೮, ೯) ಅದೇ ಅಭೇದವನ್ನೇ ಗಟ್ಟಿಗೊಳಿಸಿರುತ್ತಾನೆ. ಮತ್ತು ಈ ಋಗೈದವು (ಮುಂತಾದದ್ದು) ಈ ದೊಡ್ಡ ಭೂತದ ಉಸಿರು’ (ಬೃ. ೨-೪-೧೦, ೪ ೫-೧೧) ಎಂದು ಮುಂತಾಗಿರುವ ಗ್ರಂಥದಿಂದ ಪ್ರಕೃತನಾಗಿರುವ ಆತ್ಮನು ನಾಮ ರೂಪಕರ್ಮಪ್ರಪಂಚಕ್ಕೆ ಕಾರಣವಾಗಿರುವನೆಂದು ಹೇಳುವದರಿಂದಲೂ ಇವನು ಪರಮಾತ್ಮನೆಂದು ತಿಳಿಸಿರುತ್ತಾನೆ. ಇದರಂತೆಯೇ ಏಕಾಯನಪ್ರಕ್ರಿಯೆಯಲ್ಲಿಯೂ (ಬೃ. ೨-೪-೧೧, ೪-೫-೧೨) ವಿಷಯಗಳಿಂದಲೂ ಇಂದ್ರಿಯಗಳಿಂದಲೂ ಅಂತಃಕರಣಗಳಿಂದಲೂ ಕೂಡಿದ ಪ್ರಪಂಚಕ್ಕೆ ಒಂದೇ ಅಯನವಾಗಿರುವ (ತತ್ತ್ವವು) ಒಳಗಿಲ್ಲದ್ದೂ ಹೊರಗಿಲ್ಲದ್ದೂ ಪೂರ್ಣವೂ ಪ್ರಜ್ಞಾನಘನವೂ (ಆಗಿದ) ಎಂದು ಹೇಳಿರುವದರಿಂದ ಇವನು ಪರಮಾತ್ಮನೇ ಎಂದು ತಿಳಿಸಿರುತ್ತಾನೆ. ಆದ್ದರಿಂದ ಈ ದರ್ಶನವೇ ಮುಂತಾದದ್ದನ್ನು ಹೇಳಿರುವದು ಪರಮಾತ್ಮನ ವಿಷಯವೇ ಎಂದು ನಿಶ್ಚಯವಾಗುತ್ತದೆ.

ಉಪಕ್ರಮದಲ್ಲಿ ಪ್ರಿಯಸಂಸೂಚಿತನಾದ ಆತ್ಮನನ್ನೇಕೆ ಹೇಳಿದೆ ?

(ಭಾಷ್ಯ) ೩೮೧. ಯತ್ ಪುನರುಕ್ತಮ್ - ಪ್ರಿಯಸಂಸೂಚಿತೋಪಶ್ರಮಾತ್ ವಿಜ್ಞಾ ನಾತ್ಮನ ಏವಾಯಂ ದರ್ಶನಾದ್ರುಪದೇಶಃ ಇತಿ | ಅತ್ರ ಬ್ಯೂಮಃ -

(ಭಾಷ್ಯಾರ್ಥ) ಇನ್ನು ಪ್ರಿಯಸಂಸೂಚಿತನಾದ (ವಿಜ್ಞಾನಾತ್ಮನನ್ನು) ಉಪಕ್ರಮ(ದಲ್ಲಿ ಹೇಳಿರುವದ)ರಿಂದ ವಿಜ್ಞಾನಾತ್ಮನನ್ನೇ ದರ್ಶನಮಾಡಬೇಕು ಎಂದು ಮುಂತಾಗಿ ಈ ಉಪದೇಶವು (ಹೇಳುತ್ತದೆ) ಎಂದು ಪೂರ್ವಪಕ್ಷದಲ್ಲಿ ಹೇಳಿತ್ತಷ್ಟ, ಈ (ವಿಷಯ) ದಲ್ಲಿ (ಸಿದ್ಧಾಂತ)ವನ್ನು ಹೇಳುತ್ತೇವೆ :

  1. ಈ ಸಂದರ್ಭವು ಬೃಹದಾರಣ್ಯಕದಲ್ಲಿ ಎರಡನೆಯ ಅಧ್ಯಾಯದಲ್ಲಿಯೂ ನಾಲ್ಕನೆಯ ಅಧ್ಯಾಯದಲ್ಲಿಯೂ ಬಂದಿದೆ. ಇಲ್ಲಿರುವ ವಾಕ್ಯಗಳು ಬಹುಮಟ್ಟಿಗೆ ಎರಡನೆಯ ಅಧ್ಯಾಯಕ್ಕ ಅನುಗುಣವಾಗಿ ಕಂಡದ್ದರಿಂದ ನಾವು ಆ ಅಧ್ಯಾಯದ ಸಂಖ್ಯೆಗಳನ್ನೇ ತೋರಿಸಿರುತ್ತೇವೆ. ಆದರೆ ನಾಮರೂಪಕರ್ಮವೆಂಬ ವಿಶೇಷಣವು ೪-೫-೫ ಕ್ಕೆ ಹೆಚ್ಚು ಒಪ್ಪುತ್ತದೆ. ಏಕೆಂದರೆ ಋಗ್ವದಾದಿನಾಮವನ್ನೂ ‘ಇಷ್ಟಂ ಹುತಂ’ ಎಂದು ಕರ್ಮವನ್ನೂ ‘ಅಯಂ ಚ ಲೋಕಃ’ ಎಂದು ಮುಂತಾಗಿ ರೂಪವನ್ನೂ ಅಲ್ಲಿ ತಿಳಿಸಿರುತ್ತದೆ. ಎರಡನೆಯ ಅಧ್ಯಾಯದಲ್ಲಿ ನಾಮವನ್ನು ಮಾತ್ರ ಉಪಲಕ್ಷಣವಾಗಿ ಹೇಳಿದೆ.

  2. ಲಯಸ್ಥಾನವಾಗಿರುವ ಎಂದರ್ಥ.೬೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಪ್ರತಿಜ್ಞಾಸಿದ್ಧರ್ಲಿಜ್ಞಮಾತ್ಮರಥ್ಯಃ ೨೦|| ೨೦. ಪ್ರತಿಜ್ಞಾಸಿದ್ಧಿಯ ಲಿಂಗ(ವಿದೆಂದು) ಆತ್ಮರಥನು (ಅಭಿಪ್ರಾಯ ಪಡುತ್ತಾನೆ).

(ಭಾಷ್ಯ) ೩೮೨. ಅಸ್ಕತ್ರ ಪ್ರತಿಜ್ಞಾ “ಆತ್ಮನಿ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ’ (ಬೃ. ೨-೪-೫, ೪-೫-೬), ‘‘ಇದಂ ಸರ್ವಂ ಯದಯಮಾತ್ಮಾ” (ಬೃ. ೨-೪-೬, ೪-೫-೭) ಇತಿ ಚ | ತಸ್ಮಾ: ಪ್ರತಿಜ್ಞಾಯಾಃ ಸಿದ್ಧಿಂ ಸೂಚಯತಿ ಏತಲ್ಲಿ ಜ್ಞಂ ಯತ್ ಪ್ರಿಯಸಂಸೂಚಿತಸ್ಯ ಆತ್ಮನೋ ದ್ರಷ್ಟವ್ಯತ್ಪಾದಿಸಂಕೀರ್ತನಮ್ | ಯದಿ ಹಿ ವಿಜ್ಞಾನಾತ್ಮಾ ಪರಮಾತ್ಮನೋನ್ಯ: ಸ್ಮಾತ್, ತತಃ ಪರಮಾತ್ಮವಿಜ್ಞಾನೇಪಿ ವಿಜ್ಞಾನಾತ್ಮಾ ನ ವಿಜ್ಞಾತ ಇತಿ ಏಕವಿಜ್ಞಾನೇನ ಸರ್ವವಿಜ್ಞಾನಂ ಯತ್ ಪ್ರತಿಜ್ಞಾತಂ ತದ್ ಹೀಯೇತ | ತಸ್ಮಾತ್‌ ಪ್ರತಿಜ್ಞಾಸಿದ್ಯರ್ಥಂ ವಿಜ್ಞಾನಾತ್ಮಪರಮಾತ್ಮನೋ? ಅಭೇದಾಂಪೇನ ಉಪಕ್ರಮಣಮ್ ಇತಿ ಆತ್ಮರಥ್ಯ ಆಚಾರ್ಯ ಮನ್ಯತೇ |

(ಭಾಷ್ಯಾರ್ಥ) “ಇಲ್ಲಿ ಆತ್ಮನನ್ನು ಅರಿತುಕೊಂಡರೆ ಇದೆಲ್ಲವನ್ನೂ ಅರಿತಂತಾಗುತ್ತದೆ’ (ಬೃ. ೨-೪-೫, ೪-೫-೬) ಎಂದೂ ‘ಇದಲ್ಲವೂ ಈ ಆತ್ಮನೆಂಬುದೇ’ (ಬೃ. ೨-೪-೬,೪ ೫-೭) ಎಂದೂ ಇಲ್ಲಿ ಪ್ರತಿಜ್ಞೆ ಇರುತ್ತದೆ. ಪ್ರಿಯಸಂಸೂಚಿತನಾದ ಆತ್ಮನನ್ನು ‘ಕಾಣಬೇಕು’ ಎಂದು ಮುಂತಾಗಿ ಹೇಳಿರುವದೆಂಬೀಲಿಂಗವು ಆ ಪ್ರತಿಜ್ಞೆಯ ಸಿದ್ಧಿ ಯನ್ನು ಸೂಚಿಸುತ್ತದೆ. ವಿಜ್ಞಾನಾತ್ಮನು ಪರಮಾತ್ಮನಿಗಿಂತ ಭಿನ್ನನಾಗಿದ್ದರೆ, ಆಗ ಪರಮಾತ್ಮನನ್ನು ಅರಿತರೂ ವಿಜ್ಞಾನಾತ್ಮನನ್ನು ಅರಿತಂತಾಗುವದಿಲ್ಲವಾದ್ದರಿಂದ ಒಂದನ್ನು ಅರಿತದ್ದರಿಂದ ಎಲ್ಲವನ್ನೂ ಅರಿತುಕೊಳ್ಳಬಹುದಂದು ಪ್ರತಿಜ್ಞೆ ಮಾಡಿತ್ತಲ್ಲ, ಅದನ್ನು ಕೈಬಿಟ್ಟಂತೆ ಆದೀತು. ಆದ್ದರಿಂದ ಪ್ರತಿಜ್ಞೆಯ ಸಿದ್ಧಿಯಾಗುವದಕ್ಕಾಗಿ ವಿಜ್ಞಾನಾತ್ಮಪರಮಾತ್ಮರ ಅಭೇದಾಂಶದಿಂದ ಉಪಕ್ರಮಿಸಿದ ಎಂದು ಆತ್ಮರಥನೆಂಬ ಆಚಾರ್ಯನು ಅಭಿಪ್ರಾಯಪಟ್ಟಿರುತ್ತಾನೆ.

ಉತೃಮಿಷ್ಯತ ಏವಂಭಾವಾದಿತ್ಯಾಡುಲೋಮಿಃ ||೨೧|| ೨೧. (ಶರೀರದಿಂದ) ಹೊರಟುಹೋಗುವವನಿಗೆ ಈ ಸ್ವರೂಪವಾಗು ವದರಿಂದ (ಹೀಗೆ ಉಪಕ್ರಮಿಸಿದೆ) ಎಂದು ಔಡುಲೋಮಿಯು.

ಅಧಿ. ೬. ಸೂ. ೨೫೧] ಉಪಕ್ರಮದಲ್ಲಿ ಪ್ರಿಯಸಂಸೂಚಿತನಾದ ಆತ್ಮನನ್ನೇಕ ಹೇಳಿದ? ೬೨೩

(ಭಾಷ್ಯ) ೩೮೩. ವಿಜ್ಞಾನಾತ್ಮನ ಏವ ದೇಹೇಯಮನೋಬುದ್ಧಿಸಜ್ಜಾತೋಪಾಧಿ ಸಂಪರ್ಕಾತ್ ಕಲುಷಿಭೂತಸ್ಯ ಜ್ಞಾನಧ್ಯಾನಾದಿಸಾಧನಾನುಷ್ಠಾನಾತ್ ಸಂಪ್ರಸನ್ನಸ್ಯ ದೇಹಾದಿಸಜ್ಜಾತಾತ್ ಉತ್ಕಮಿಷ್ಯತಃ ಪರಮಾತ್ಮಕ್ಕೋಪಪತ್ತೇ ಇದಮ್ ಅಭೇದೇನ ಉಪಕ್ರಮಣಮ್ ಇತಿ ಔಡುಲೋಮಿರಾಚಾರ್ಯ ಮನ್ಯತೇ | ಶ್ರುತಿಶ್ಚ ಏವಂ ಭವತಿ - “ಏಷ ಸಂಪ್ರಸಾದೋSಸ್ಮಾಚ್ಛರೀರಾತ್ ಸಮುತ್ಥಾಯ ಪರಂ ಜ್ಯೋತಿರುವ ಸಂಪದ್ಯ ಸ್ಟೇನ ರೂಪೇಣಾಭಿನಿಷ್ಪದ್ಯತೇ” (ಛಾಂ. ೮-೧೨-೩) ಇತಿ | ಕ್ವಚಿಚ್ಚ ಜೀವಾಶ್ರಯಮಪಿ ನಾಮರೂಪಂ ನದೀನಿದರ್ಶನೇನ ಜ್ಞಾಪಯತಿ - “ಯಥಾ ನದ್ಯಃ ಸೈನ್ಸಮಾನಾಃ ಸಮುದ್ರವಸ್ತ್ರಂ ಗಚ್ಛನ್ತಿ ನಾಮರೂಪೇ ವಿಹಾಯ | ತಥಾ ವಿದ್ವಾನ್ನಾಮ ರೂಪಾದ್ವಿಮುಕ್ತಃ ಪರಾತ್ಪರಂ ಪುರುಷಮುಪೈತಿ ದಿವ್ಯಮ್’’ (ಮುಂ. ೩-೨-೮) ಇತಿ | ಯಥಾ ಲೋಕೇ ನದ್ಯ: ಸ್ಟಾಶ್ರಯಮೇವ ನಾಮರೂಪಂ ವಿಹಾಯ ಸಮುದ್ರಮ್ ಉಪಯ, ಏವಂ ಜೀವೋಪಿ ಸ್ವಾಶ್ರಯಮೇವ ನಾಮರೂಪಂ ವಿಹಾಯ ಪರಂ

ಪುರುಷಮ್ ಉಪೈತಿ ಇತಿ ಹಿ ತತ್ರಾರ್ಥ: ಪ್ರತೀಯತೇ ದೃಷ್ಟಾನ್ನದಾರ್ಷ್ಟಾನಿಕಯೋ ಸ್ತುಲ್ಯತಾಯ್ಕೆ ||

(ಭಾಷ್ಯಾರ್ಥ) ವಿಜ್ಞಾನಾತ್ಮನೇ ದೇಹ, ಇಂದ್ರಿಯ, ಮನ, ಬುದ್ದಿ - ಇವುಗಳ ಸಂಘಾತವೆಂಬ ಉಪಾಧಿಯ ಸಂಪರ್ಕದಿಂದ ಕಲ್ಮಷನಾಗಿದ್ದು, ಜ್ಞಾನಧ್ಯಾನಗಳೇ ಮುಂತಾದ ಸಾಧನಗಳ ಅನುಷ್ಠಾನದಿಂದ ನಿರ್ಮಲನಾಗಿದೇಹಾದಿಗಳ ಸಂಘಾತ(ವನ್ನು ಬಿಟ್ಟು) ಹೊರಡುವಾಗ ಪರಮಾತ್ಮನೊಡನೆ ಐಕ್ಯವಾಗಬಹುದಾದ್ದರಿಂದ ಈ (ರೀತಿಯಲ್ಲಿ) ಅಭೇದ(ರೂಪ) ದಿಂದ ಉಪಕ್ರಮಿಸಿದ ಎಂದು ಔಡುಲೋಮಿ ಎಂಬ ಆಚಾರ್ಯನು ಅಭಿಪ್ರಾಯ ಪಡುತ್ತಾನೆ. ಈ ಸಂಪ್ರಸಾದನು ಈ ಶರೀರವನ್ನು ಬಿಟ್ಟಿದ್ದು ಪರಂ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಸಿದ್ಧನಾಗುತ್ತಾನೆ’ (ಛಾಂ. ೮-೧೨-೩) ಎಂಬ ಶ್ರುತಿಯೂ ಹೀಗೆ ಹೇಳುತ್ತದೆ. ಮತ್ತು ಒಂದು ಕಡೆಯಲ್ಲಿ ಹೇಗೆ ಹರಿಯುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಅಸ್ತ್ರವಾಗುವವೋ, ಹಾಗ ಜ್ಞಾನಿಯು ನಾಮರೂಪದಿಂದ ಬಿಡುಗಡೆಯಾಗಿ ಪರಾತ್ಪರನಾದ ದಿವ್ಯಪುರುಷನನ್ನು ಬಂದು ಸೇರುತ್ತಾನ” (ಮುಂ. ೩-೨-೮) ಎಂದು ಜೀವಾಶ್ರಯವಾದ’ ನಾಮರೂಪಗಳನ್ನು

  1. ಜೀವನಲ್ಲಿ ಉಪಾಧಿಸಂಪರ್ಕದಿಂದ ಕಲ್ಮಷವು ತೋರುತ್ತಿರುವದಂದು ಹಿಂದ ಹೇಳಿತ್ತು ; ಜೀವನ ಸ್ವರೂಪದಲ್ಲಿಯೇ ನಾಮರೂಪಗಳೆಂಬ ಕಲ್ಮಷವು ಇರುವದೆಂದೂ ಮಣ್ಣಿನ ಕಪ್ಪು ಪಾಕದಿಂದ ಹೋಗಿ ಅದು ಕಂಪಾಗುವಂತ ಜೀವನ ಕಲ್ಮಷವು ಜ್ಞಾನಧ್ಯಾನಾದಿಗಳಿಂದ ತೂಳದುಹೋಗುವದೆಂದೂ ಈಗ ಹೇಳಿದ.

೬೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ನದೀದೃಷ್ಟಾಂತದಿಂದ ತಿಳಿಸಿರುತ್ತದೆ ; ಹೇಗ ಲೋಕದಲ್ಲಿ ನದಿಗಳು ತಮ್ಮನ್ನೇ ಆಶ್ರಯಿಸಿರುವ ನಾಮರೂಪವನ್ನು ಬಿಟ್ಟು ಸಮುದ್ರವನ್ನು ಬಂದು ಸೇರುವವೋ, ಹೀಗಯೇ ಜೀವನೂ ತನ್ನನ್ನೇ ಆಶ್ರಯಿಸಿರುವ ನಾಮರೂಪವನ್ನು ಬಿಟ್ಟು ಪರಮಪುರುಷನನ್ನು ಬಂದು ಸೇರುತ್ತಾನ - ಎಂದಲ್ಲವ, ದೃಷ್ಟಾಂತದಾರ್ಷ್ಮಾಂತಿಕಗಳ ಸಾದೃಶ್ಯಕ್ಕಾಗಿ, ಆ (ಶ್ರುತಿ) ಯಲ್ಲಿ ಅರ್ಥವನ್ನು ತಿಳಿಯಬೇಕಾಗಿದೆ ?

ಅವಸ್ಥಿತೇರಿತಿ ಕಾಶಕೃತ್ಮ: ||೨೨|| ೨೨. (ಈ ವಿಜ್ಞಾನಾತ್ಮರೂಪದಿಂದ) ಇದ್ದುಕೊಂಡಿರುವದರಿಂದ (ಹೀಗೆ ಉಪಕ್ರಮಿಸಿದೆ) ಎಂದು ಕಾಶಕೃತ್ಮನು (ಅಭಿಪ್ರಾಯಪಡುತ್ತಾನೆ).

(ಭಾಷ್ಯ) ೩೮೪. ಅಸ್ಕೃವ ಪರಮಾತ್ಮನಃ ಅನೇನಾಪಿ ವಿಜ್ಞಾನಾತ್ಮಭಾವೇನ ಅವಸ್ಥಾನಾತ್ ಉಪಪನ್ನಮಿದಮ್ ಅಭೇದೇನ ಉಪಕ್ರಮಣಮ್ ಇತಿ ಕಾಶಕೃತ್ ಆಚಾರ್ಯ ಮನ್ಯತೇ | ತಥಾ ಚ ಬ್ರಾಹ್ಮಣಮ್ - “ಅನೇನ ಜೀವೇನಾತ್ಮನಾನುಪ್ರವಿಶ್ಯ ನಾಮ ರೂಪೇ ವ್ಯಾಕರವಾಣಿ’ (ಛಾಂ. ೬-೩-೨) ಇವಂಜಾತೀಯಕಂ ಪರಸ್ಮವ ಆತ್ಮನಃ ಜೀವಭಾವೇನ ಅವಸ್ಥಾನಂ ದರ್ಶಯತಿ ಮನ್ಯವರ್ಣಶ್ಚ ಸರ್ವಾಣಿ ರೂಪಾಣಿ ವಿಚಿತ್ಯ ಧೀರೋ ನಾಮಾನಿ ಕೃತ್ಯಾಭಿವದನ್ ಯದಾಸ್ತ’ (ತ್ಯ. ಆ. ೩-೧೨) ಇತ್ಯವಂ ಜಾತೀಯಕಃ | ನ ಚ ತೇಜಃಪ್ರಧೃತೀನಾಂ ಸೃಷ್ಟೋ ಜೀವಸ್ಯ ಪೃಥಕ್ಷಷ್ಟಿ ಶ್ರುತಾ | ಯೇನ ಪರಸ್ಮಾದಾತ್ಮನೋನ್ಯಃ ತದ್ವಿಕಾರೂ ಜೀವಃ ಸ್ಯಾತ್ ||

(ಭಾಷ್ಯಾರ್ಥ) ಇದೇ ಪರಮಾತ್ಮನೇ ಈ ವಿಜ್ಞಾನಾತ್ಮರೂಪದಿಂದಲೂ ಇದ್ದುಕೊಂಡಿರುವದ ರಿಂದ ಈ (ರೀತಿಯಲ್ಲಿ) ಅಭೇದರೂಪದಿಂದ ಉಪಕ್ರಮವನ್ನು ಮಾಡಿದ) ಎಂದು ಕಾಶಕೃತ್ಮನೆಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ. ಆದ್ದರಿಂದಲೇ “ಈ ಜೀವಾತ್ಮನ ರೂಪದಿಂದ ಒಳಹೊಕ್ಕು ನಾಮರೂಪಗಳನ್ನು ವ್ಯಾಕರಣಮಾಡುವನು” (ಛಾಂ. ೬-೩-೨) ಎಂಬೀ ಜಾತಿಯ ಬ್ರಾಹ್ಮಣವು ಪರಮಾತ್ಮನೇ ಜೀವಭಾವದಿಂದ ಇದ್ದುಕೊಂಡಿರುತ್ತಾನೆಂದು ತಿಳಿಸುತ್ತದ. “ಸರ್ವರೂಪಗಳನ್ನೂ ಸೃಷ್ಟಿಸಿ (ಅವುಗಳಿಗೆ) ನಾಮರೂಪಗಳನ್ನು ಕೊಟ್ಟು ಯಾವನು (ಹೆಸರಿನಿಂದ) ಕರೆಯುತ್ತಿರುವನೋ’’ (ತೈ. ಆ. ೩-೧೨) ಎಂಬೀ ಜಾತಿಯ ಮಂತ್ರವರ್ಣವೂ (ಹಾಗಂದು ಹೇಳುತ್ತಿರುವದು). ತೇಜಸ್ಟ್ ಮುಂತಾದವುಗಳ ಸೃಷ್ಟಿಯನ್ನು ಹೇಳುವಲ್ಲಿ ಜೀವನ ಸೃಷ್ಟಿಯನ್ನು

ಅಧಿ. ೬. ಸೂ. ೨೨] ಜೀವಪರಮಾತ್ಮರ ಸಂಬಂಧದ ವಿಷಯದಲ್ಲಿ ಮತಭೇದಗಳು ೬೨೫ ಬೇರೆಯಾಗಿ ಶ್ರುತಿಯಲ್ಲಿ ಹೇಳಿಯೂ ಇಲ್ಲ ; ಹಾಗಿದ್ದರೆ ಜೀವನು ಪರಮಾತ್ಮನಿಗಿಂತ

ಜೀವಪರಮಾತ್ಮರ ಸಂಬಂಧದ ವಿಷಯದಲ್ಲಿ

ಮತಭೇದಗಳು

(ಭಾಷ್ಯ) ೩೮೫. ಕಾಶಕೃತ್ಸ್ಯ ಆಚಾರ್ಯಸ್ಯ ಅವಿಕೃತಃ ಪರಮೇಶ್ವರೋ ಜೀವೋ ನಾನ್ಯ: ಇತಿ ಮತಮ್ | ಆತ್ಮರಥಸ್ಯ ತು ಯದ್ಯಪಿ ಜೀವಸ್ಯ ಪರಸ್ಮಾತ್ ಅನನ್ಯತ್ವಮ್ ಅಭಿಪ್ರೀತಮ್, ತಥಾಪಿ ‘ಪ್ರತಿಜ್ಞಾಸಿದ್ಧ’ ಇತಿ ಸಾಪೇಕ್ಷತಾಭಿಧಾನಾತ್ ಕಾರ್ಯ ಕಾರಣಭಾವಃ ಕಿಯಾನಪಿ ಅಭಿಪ್ರೇತಃ ಇತಿ ಗಮ್ಯತೇ | ಔಡುಲೋಮಿಪಕ್ಷೇ ಪುನಃ ಸ್ಪಷ್ಟಮೇವ ಅವಸ್ಥಾನರಾಪೇಕ್ಷ ಭೇದಾಭೇದ್ ಗಮ್ಯತೇ | ತತ್ರ ಕಾಶಕೃತ್ಮೀಯಂ ಮತಂ ಶ್ರುತ್ಯನುಸಾರಿ ಇತಿ ಗಮ್ಯತೇ | ಪ್ರತಿಪಿಪಾದಯಿಷಿತಾರ್ಥಾನುಸಾರಾತ್ | ‘ತತ್ತ್ವಮಸಿ’ ಇತ್ಯಾದಿಶ್ರುತಿಭ್ಯಃ | ಏವಂ ಚ ಸತಿ ತಜ್ಞಾನಾತ್ ಅಮೃತತ್ವಮ್ ಅವಕಲ್ಪತೇ | ವಿಕಾರಾತ್ಮಕ ಹಿ ಜೀವಸ್ಯ ಅಭ್ಯುಪಗಮ್ಯಮಾನೇ ವಿಕಾರಸ್ಯ ಪ್ರಕೃತಿಸಂಬದ್ಧೇ ಪ್ರಲಯಪ್ರಸಜ್ಜಾತ್ ನ ತಜ್ಞಾನಾತ್ ಅಮೃತತ್ವಮ್ ಅವಕಿತ | ಅತಶ್ಚ ಸ್ಟಾಶ್ರಯಸ್ಯ ನಾಮರೂಪಸ್ಯ ಅಸಂಭವಾತ್ ಉಪಾಧ್ಯಾಶ್ರಯಂ ನಾಮರೂಪಂ ಜೀವೇ ಉಪಚರ್ಯತೇ | ಅತ ಏವ ಉತ್ಸರಪಿ ಜೀವಸ್ಯ ಕ್ಲಚಿತ್ ಅಗ್ನಿ ವಿಸ್ಟುಲಿಜ್ಯೋದಾಹರಣೇನ ಶ್ರಾವ್ಯಮಾಣಾ ಉಪಾಧ್ಯಾಶ್ರಯ್ಯವ ವೇದಿತಾ ||

(ಭಾಷ್ಯಾರ್ಥ) ಕಾಶಕೃತ್ಮನೆಂಬ ಆಚಾರ್ಯನ (ಮತದಲ್ಲಿ) ಜೀವನು (ಯಾವ) ವಿಕಾರವನ್ನೂ

ಪರಮೇಶ್ವರನಿ)ಗಿಂತ ಬೇರೆಯಲ್ಲವೆಂಬುದೇ ಅಭಿಪ್ರಾಯವು ; ಆದರೂ ‘ಪ್ರತಿಜ್ಞಾ ಸಿದ್ಧಿಯ (ಲಿಂಗವು)’ ಎಂದು ಸಾಪೇಕ್ಷವಾಗಿ ಹೇಳಿರುವದರಿಂದ ಸ್ವಲ್ಪ ಕಾರ್ಯ ಕಾರಣಭಾವವೂ ಅಭಿಪ್ರೇತವಾಗಿದೆ ಎಂದು ತೋರುತ್ತದೆ. ಔಡುಲೋಮಿಪಕ್ಷ

  1. ಬಂಧಾವಸ್ಥೆಯಲ್ಲಿರುವ ಜೀವನು ಈಗಲೂ ನಿತ್ಯಮುಕ್ತನಾದ ಪರಮೇಶ್ವರನೇ.

  2. ಭೇದಾಭೇದಗಳರಡೂ ಸತ್ಯ. ಈಗ ಕಾರ್ಯವಾಗಿ ಜೀವನಾಗಿರುತ್ತಾನೆ, ಆದ್ದರಿಂದ ಪರಮೇಶ್ವರನಿಗಿಂತ ಬೇರೆಯೂ ಆಗಿರುತ್ತಾನೆ. ಆದರೆ ಮೋಕ್ಷದಲ್ಲಿ ಮಾತ್ರ ಅಭೇದವೊಂದೇ ಇರುತ್ತದೆ ಎಂದು ಭಾವ.

هع

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ದಲ್ಲಂತೂ ಬೇರೆಬೇರೆಯ ಅವಸ್ಥೆಗಳ ಅಪೇಕ್ಷೆಯಿಂದ ಭೇದಾಭೇದಗಳುಂಟು ಎಂದು ಸ್ಪಷ್ಟವಾಗಿಯೇ ತೋರುತ್ತದೆ. ಇವುಗಳಲ್ಲಿ ಕಾಶಕೃತ್ಸನ ಮತವು ಶ್ರುತ್ಯನುಸಾರವಾಗಿದೆ ಎಂದು ನಿಶ್ಚಯಿಸಬೇಕಾಗಿದೆ ; ಏಕೆಂದರೆ ಅದು (ಶ್ರುತಿಯಲ್ಲಿ) ಪ್ರತಿಪಾದಿಸ ಬೇಕಂದಿರುವ ಅರ್ಥಕ್ಕೆ ಅನುಸಾರವಾಗಿರುತ್ತದೆ. ಅದೇ ನೀನಾಗಿರುವ’ (ಛಾಂ.೬-೭ ೮) ಎಂದು ಮುಂತಾಗಿರುವ ಶ್ರುತಿಗಳಿಂದ (ಇದು ಗೊತ್ತಾಗುತ್ತದೆ), ಮತ್ತು ಹೀಗಾದರೇ “ಜ್ಞಾನದಿಂದ ಅಮೃತತ್ವ (ವುಂಟಾಗುವದೆಂಬುದು) ಹೊಂದುತ್ತದೆ. ಹೇಗೆಂದರೆ, ಜೀವನು (ಬ್ರಹ್ಮದ) ಕಾರ್ಯರೂಪನು ಎಂದು ಸ್ವೀಕರಿಸುವದಾದರೆ ಕಾರ್ಯವು (ತನ್ನ ) ಕಾರಣದೂಡನೆ ಸಂಬದ್ಧವಾದಾಗ ನಾಶವಾಗಿಬಿಡಬೇಕಾಗುವದ ರಿಂದ ಅದರ ಜ್ಞಾನದಿಂದ ಅಮೃತತ್ವವಾಗುವದೆಂಬುದು ಹೊಂದಲಾರದು. ಆದ್ದ ರಿಂದಲೇ ತನ್ನನ್ನಾಶ್ರಯಿಸಿರುವ ನಾಮರೂಪವು (ಜೀವರಿಗ) ಸಂಭವಿಸುವದಿಲ್ಲವಾಗಿ ಉಪಾಧಿಯಲ್ಲಿರುವ ನಾಮರೂಪವನ್ನೇ ಜೀವನದಂದು ಉಪಚಾರಕ್ಕಾಗಿ ಹೇಳಿದೆ (ಎನ್ನಬೇಕು). ಈ (ಕಾರಣದಿಂದಲೇ ಕೆಲವು ಕಡೆಗಳಲ್ಲಿ ಬೆಂಕಿಯ ಕಿಡಿಗಳ ಉದಾಹರಣೆಯಿಂದ ಜೀವನಿಗೆ ಉತ್ಪತ್ತಿಯನ್ನು ಶ್ರುತಿಯಲ್ಲಿ ಹೇಳಿರುವದೂ ಉಪಾಧಿ

ಯನ್ನು ಆಶ್ರಯಿಸಿದ (ಉತ್ಪತ್ತಿಯೇ) ಎಂದು ತಿಳಿಯಬೇಕು.

  1. ಈಗ ಜೀವನೇ, ಪರಮೇಶ್ವರನಲ್ಲ ; ಮುಕ್ತನಾದಾಗ ಪರಮೇಶ್ವರನೇ ; ಜೀವನಲ್ಲ. ಮೋಕ್ಷದಲ್ಲಿ ಜೀವೇಶ್ವರರಿಗೆ ಅಭೇದವನ್ನೊಪ್ಪದವರು ಯಾರೂ ಇಲ್ಲವೆಂಬುದನ್ನು ಇಲ್ಲಿ ಲಕ್ಕವಿಡಬೇಕು. ಈ ವಿಷಯದಲ್ಲಿ ಪೀಠಿಕೆಯನ್ನು ನೋಡಿ,

2.ಈಗಲೇ ಜೀವೇಶ್ವರರಿಗೆ ಪರಮಾರ್ಥವಾಗಿ ಅಭೇದವಿದ ಎಂದರೇ ಜ್ಞಾನದಿಂದ ‘ನಾನು ನಿತ್ಯಮುಕ್ತನಾದ ಈಶ್ವರನು’ ಎಂಬ ಅರಿವಾಗಿ ಅಜ್ಞಾನದಿಂದಾಗಿದ್ದ ಸಂಸಾರಿತ್ವಬಂಧವು ಹೋಗುತ್ತದೆ. ಬಂಧವು ಸತ್ಯವಾದರೆ ಅದು ಎಂದಿಗೂ ಹೋಗದು - ಎಂದು ಭಾವ.

  1. ಮಡಕೆಯು ಮಣ್ಣಾದಾಗ ಮಡಕೆಯಿರುವದಿಲ್ಲ ; ಹೀಗೆಯೇ ಜೀವನು ಬ್ರಹ್ಮವಾದಾಗ ಜೀವನಿರುವದಿಲ್ಲ. ಆಗ ಜೀವನಿಗೆ ಜ್ಞಾನದಿಂದ ಮೋಕ್ಷ ಎಂಬ ಮಾತು ಸುಳ್ಳಾಗುವದು.

  2. ಜೀವನಿಗೆ ನಾಮರೂಪವು ಸೇರಿದ್ದರೆ ನಾಮರೂಪಗಳ ನಾಶದಿಂದ ಜೀವನೂ ನಾಶವಾಗಬೇಕಾಗುತ್ತದೆಯಾದ್ದರಿಂದ ಅವನಿಗೆ ಸ್ವತಃ ನಾಮರೂಪಗಳು ಸಂಭವಿಸುವದಿಲ್ಲ.

  3. ಸ್ವತಃ ಉತ್ಪತ್ತಿಯಿದ್ದರೆ ಅನಿತ್ಯತ್ವವು ಗಂಟುಬೀಳುವದರಿಂದಲೇ. 6. ಇದನ್ನು ಮುಂದೆ ಸೂತ್ರಕಾರರು ೨-೩-೧೭ ರಲ್ಲಿ ನಿರ್ಣಯಿಸಿರುತ್ತಾರ.

ಅಧಿ. ೬.ಸೂ. ೨೨] ಭೂತಗಳನ್ನು ಬಿಟ್ಟು ಏಳುವನೆಂಬ ಶ್ರುತಿಯ ಅರ್ಥವೇನು ?

೬೨೭

ಭೂತಗಳನ್ನು ಬಿಟ್ಟು ವಿಜ್ಞಾನಾತ್ಮರೂಪದಿಂದ ಏಳುವನೆಂಬ ಶ್ರುತಿಯ ಅರ್ಥವೇನು ?

(ಭಾಷ್ಯ) ೩೮೬. ಯದಪ್ಪಕ್ತಮ್ - ಪ್ರಕೃತಸ್ಯವ ಮಹತೋ ಭೂತಸ್ಯ ದ್ರಷ್ಟವ್ಯಸ್ಯ ಭೂತೇಭ್ಯಃ ಸಮುತ್ಥಾನಂ ವಿಜ್ಞಾನಾತ್ಮಭಾವೇನ ದರ್ಶಯನ್ ವಿಜ್ಞಾನಾತ್ಮನ ಏವ ಇದಂ ದ್ರಷ್ಟವ್ಯತ್ವಂ ದರ್ಶಯತಿ ಇತಿ, ತತ್ರಾಪಿ ಇಯಮೇವ ತ್ರಿಸೂತ್ರೀ ಯೋಜಯಿತವ್ಯಾ | ‘ಪ್ರತಿಜ್ಞಾಸಿದ್ಧರ್ಲಿಜ್ಞ ಮಾರಥಃ’ | ಇದಮತ್ರ ಪ್ರತಿ ಜ್ಞಾತಮ್ - “ಆತ್ಮನಿ ವಿದಿತೇ ಸರ್ವ೦ ವಿದಿತಂ’, ‘ಇದಂ ಸರ್ವಂ ಯದಯ ಮಾತ್ಮಾ” (ಬೃ. ೨-೪-೬) ಇತಿ ಚ | ಉಪಪಾದಿತಂ ಚ ಸರ್ವಸ್ಯ ನಾಮರೂಪ ಕರ್ಮಪ್ರಪಞ್ಞಸ್ಯ ಏಕಪ್ರಸವತ್ತಾತ್, ಏಕಪ್ರಲಯಾಚ್ಚ ದುನ್ನು ಭ್ಯಾದಿಷ್ಟಾನೈಶ್ಯ ಕಾರ್ಯಕಾರಣಯೋ ಅವ್ಯತಿರೇಕಪ್ರತಿಪಾದನಾತ್ | ತಸ್ಮಾ ಏವ ಪ್ರತಿಜ್ಞಾಯಾಃ ಸಿದ್ಧಿಂ ಸೂಚಯತಿ ಏತಲ್ಲಿಂ ಯನ್ಮಹತೋ ಭೂತಸ್ಯ ದ್ರಷ್ಟವ್ಯಸ್ಯ ಭೂತೇಭ್ಯಃ ಸಮುತ್ಥಾನಂ ವಿಜ್ಞಾನಾತ್ಮಭಾವೇನ ಕಥಿತಮ್ ಇತಿ ಆತ್ಮರಥ್ಯ ಆಚಾರ್ಯ ಮನ್ಯತೇ | ಅಭೇದೇ ಹಿ ಸತಿ ಏಕವಿಜ್ಞಾನೇನ ಸರ್ವವಿಜ್ಞಾನಂ ಪ್ರತಿಜ್ಞಾತಮ್ ಅವಕಲ್ಪತೇ ಇತಿ | “ಉತ್ಕಮಿಷ್ಕತ ಏವಂಭಾವಾದಿಡುಲೋಮಿಃ’ ಉತೃಮಿಷ್ಯತೋ ವಿಜ್ಞಾನಾತ್ಮನಃ ಜ್ಞಾನಧ್ಯಾನಾದಿಸಾಮರ್ಥ್ಯಾತ್ ಸಂಪ್ರಸನ್ನಸ್ಯ ಪರೇಣ ಆತ್ಮನಾ ಐಕ್ಯಸಂಭವಾತ್ ಇದಮ್ ಅಭೇದಾಭಿಧಾನಮ್ ಇತಿ ಔಡುಲೋಮೀರಾಚಾರ್ಯ ಮನ್ಯತೇ | ‘ಅವಸ್ಥಿತೇರಿತಿ ಕಾಶಕೃತ್ಸ:| ಅಸ್ಯವ ಪರಮಾತ್ಮನಃ ಅನೇನಾಪಿ ವಿಜ್ಞಾನಾತ್ಮಭಾವೇನ ಅವಸ್ಥಾನಾತ್ ಉಪಪನ್ನಮಿದಮ್ ಅಭೇದಾಭಿಧಾನಮ್ ಇತಿ ಕಾಶಕೃತ್ ಆಚಾರ್ಯ ಮನ್ಯತೇ | ನನು ಉಚ್ಛೇದಾಭಿಧಾನಮ್ ಏತತ್ ‘ಏತೇಲ್ಕೂ ಭೂತೇಭ್ಯಃ ಸಮುತ್ಥಾಯ ತಾನ್ಯವಾನು ವಿನಶ್ಯತಿ ನ ಪ್ರತ್ಯ ಸಂಜ್ಞಾಸ್ತಿ’ (ಬೃ. ೨-೪-೧೨) ಇತಿ, ಕಥಮ್ ಅಭೇದಾಭಿಧಾನಮ್ ? ನೃಷ ದೋಷಃ | ವಿಶೇಷವಿಜ್ಞಾನವಿನಾಶಾಭಿಪ್ರಾಯಮೇತತ್ ವಿನಾಶಾಭಿಧಾನಮ್, ನಾತ್ರೋಚ್ಛೇದಾಭಿಪ್ರಾಯಮ್ | ಅತ್ಯವ ಮಾ ಭಗವಾನಮೂಮುಹನ್ನ ಪ್ರೀತ್ಯ ಸಂಜ್ಞಾ” (ಬೃ. ೨-೪-೧೩) ಇತಿ ಪರ್ಯನುಯುಜ್ಯ ಸ್ವಯಮೇವ ಶ್ರುತ್ಯಾ ಅರ್ಥಾನ್ಯರಸ್ಯ ದರ್ಶಿತತ್ವಾತ್ - (ನ ವಾ ಅರೇಹಂ ಮೋಹಂ ಬ್ರವೀಮ್ಮವಿನಾಶೀ ವಾ ಅರೇsಯಮಾತ್ಮಾನುಧರ್ಮಾಮಾತ್ರಾಸಂಸರ್ಗಸ್ಮಸ್ಯ

೨೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ.೪. ಭವತಿ’ (ಬೃ. ೪-೫-೧೪ ?)’ ಇತಿ | ಏತದುಕ್ತಂ ಭವತಿ - ಕೂಟಸ್ಟನಿತ್ಯ ಏವ ಅಯಂ ವಿಜ್ಞಾನಘನ ಆತ್ಮಾ ನಾಸ್ಯ ಉಚ್ಛೇದಪ್ರಸಜ್ಯೋಸ್ತಿ | ಮಾತ್ರಾಭಿಸ್ತು ಅಸ್ಯ ಭೂತೇಯಲಕ್ಷ್ಮಣಾಭಿಃ ಅವಿದ್ಯಾಕೃತಾಭಿಃ ಅಸಂಸರ್ಗೊ ವಿದ್ಯಾ ಭವತಿ | ಸಂಸರ್ಗಾಭಾವೇ ಚ ತತ್ತ್ತಸ್ಯ ವಿಶೇಷವಿಜ್ಞಾನಸ್ಯ ಅಭಾವಾತ್ ನ ಪ್ರೇತ್ಯ ಸಂಜ್ಞಾ ಅತ್ಯುತ್ತಮ್ ಇತಿ ||

(ಭಾಷ್ಯಾರ್ಥ) ಇನ್ನು ದ್ರಷ್ಟವನೆಂದು ಪ್ರಕೃತವಾಗಿರುವ ಮಹದ್ದೂತವೇ ಭೂತಗಳನ್ನು ಬಿಟ್ಟು) ವಿಜ್ಞಾನಾತ್ಮರೂಪದಿಂದ ಏಳುವದಂದು ತಿಳಿಸಿರುವದರಿಂದ ಈ ದ್ರಷ್ಟವನೆಂದು ಹೇಳಿರುವದು ವಿಜ್ಞಾನಾತ್ಮನನ್ನೇ ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ. ಆ (ವಿಷಯದಲ್ಲಿಯೂ) ಇದೇ ತ್ರಿಸೂತ್ರಿಯನ್ನು ಹೊಂದಿಸಿಕೊಳ್ಳ ಬೇಕು. (ಹೇಗಂದರ) :

‘ಪ್ರತಿಜ್ಞಾಸಿದ್ಧರ್ಲಿಮಾತ್ಮರಥ್ಯಃ’ (೨೧). ಇಲ್ಲಿ “ಆತ್ಮನನ್ನು ಅರಿತು ಕೊಂಡರೆ ಎಲ್ಲವನ್ನೂ ಅರಿತಂತೆ ಆಗುತ್ತದೆ” ಎಂದೂ “ಇದಲ್ಲವೂ ಈ ಆತ್ಮ ನೆಂಬುದೇ’ (ಬೃ. ೨-೪-೬) ಎಂದೂ ಈ ಪ್ರತಿಜ್ಞೆಯನ್ನು ಮಾಡಿರುತ್ತದೆ. ನಾಮರೂಪ ಕರ್ಮಪ್ರಪಂಚವೆಲ್ಲವೂ ಒಂದರಿಂದಲೇ ಹುಟ್ಟುವದರಿಂದಲೂ ಒಂದರಲ್ಲಿಯೇ ಲಯವಾಗುವದರಿಂದಲೂ ದುಂದುಭ್ಯಾದಿದೃಷ್ಟಾಂತಗಳಿಂದ ಕಾರ್ಯಕಾರಣಗಳು ಬೇರೆಯಲ್ಲ ಎಂದು ಹೇಳಿರುವದರಿಂದಲೂ (ಇದನ್ನು) ಯುಕ್ತಿಯಿಂದ ತೋರಿಸಿಯೂ ಕೊಟ್ಟಿರುತ್ತದೆ. ದ್ರಷ್ಟವ್ಯವಾದ ಮಹದ್ರೂತವು ಭೂತಗಳೊಳಗಿಂದ ವಿಜ್ಞಾನಾತ್ಮ ರೂಪದಿಂದ ಏಳುವದಂದು ಹೇಳಿರುವ ಈ ಲಿಂಗವು ಅದೇ ಪ್ರತಿಜ್ಞೆಯ ಸಿದ್ಧಿಯನ್ನು ಸೂಚಿಸುತ್ತದೆ ಎಂದು ಆತ್ಮರಥನೆಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ. ಅಭೇದವಿದ್ದರೇ ಅಲ್ಲವೆ, ಒಂದರ ಅರಿವಿನಿಂದ ಎಲ್ಲವನ್ನೂ ಅರಿಯಬಹುದೆಂದು ಪ್ರತಿಜ್ಞೆ ಮಾಡಿರುವದು ಹೊಂದುತ್ತದೆ ? ಆದ್ದರಿಂದ (ಹೀಗೆಂದು ತಿಳಿಯಬೇಕು ಎಂದು ಆ ಆಚಾರ್ಯನ ಮತವು).

“ಉತ್ಕಮಿಷ್ಯತ ಏವಂಭಾವಾದಿಡುಲೋಮಿಃ’ (೨೧) (ದೇಹವನ್ನು ಬಿಟ್ಟು) ತರಳುವ ವಿಜ್ಞಾನಾತ್ಮನು ಜ್ಞಾನಧ್ಯಾನಾದಿಗಳ ಸಾಮರ್ಥ್ಯದಿಂದ ನಿರ್ಮಲ ನಾಗಿ ಪರಮಾತ್ಮನೂಡನ ಐಕ್ಯವನ್ನು ಹೊಂದಬಹುದಾಗಿರುವದರಿಂದ ಈ ಅಭೇದ ವನ್ನು ಹೇಳಿದ ಎಂದು ಔಡುಲೋಮಿ ಎಂಬ ಆಚಾರ್ಯನು ಅಭಿಪ್ರಾಯಪಡುತ್ತಾನ.

  1. ಇದು ಮಾಧ್ಯಂದಿನ ಪಾಠ.

ಅಧಿ. ೬. ಸೂ. ೨೨] ವಿಜ್ಞಾತೃ ಎಂಬ ಕರ್ತವಾಚಕಶಬ್ದದ ಗತಿ

೬೨೯ “ಅವಸ್ಥಿತೇರಿತಿ ಕಾಶಕೃತ್‌’ (೨೨) ಇದೇ ಪರಮಾತ್ಮನೇ ಈ ವಿಜ್ಞಾನಾತ್ಮ ರೂಪದಿಂದಲೂ ಇರುವದರಿಂದ ಈ ಅಭೇದವನ್ನು ಹೇಳಿರುವದು ಹೊಂದುತ್ತದ ಎಂದು ಕಾಶಕೃತ್ಸಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ.

(ಆಕ್ಷೇಪ) :- “ಈ ಭೂತಗಳೊಳಗಿಂದ ಮೇಲಕ್ಕೆದ್ದು ಅವುಗಳನ್ನೇ ಅನುಸರಿಸಿ ಲಯವಾಗುತ್ತಾನೆ’ (ಬೃ. ೨-೪-೧೨) ಎಂಬದು ನಾಶವನ್ನು ಹೇಳುತ್ತದೆ. ಇದು ಅಭೇದವನ್ನು ಹೇಳುತ್ತದೆ ಎಂಬಿದು ಹೇಗೆ ?

(ಸಮಾಧಾನ) :- ಇದೇನೂ ದೋಷವಲ್ಲ. ಈ ವಿನಾಶವನ್ನು ಹೇಳಿರುವದು ವಿಶೇಷವಿಜ್ಞಾನದ ವಿನಾಶವನ್ನು ಹೇಳುತ್ತದೆಯೇ ಹೊರತು ಆತ್ಮನನಾಶವನ್ನು ಹೇಳುವದಿಲ್ಲ. ‘ಪೂಜ್ಯರಾದ ತಾವು (ಶರೀರದಿಂದ ಹೊರಟುಹೋದ ಬಳಿಕ ಜ್ಞಾನವಿರುವದಿಲ್ಲ ಎಂದು ಇದರ (ವಿಷಯ)ದಲ್ಲಿಯೇ ನನ್ನನ್ನು ಮೋಹ ಗೊಳಿಸಿರುವಿರಿ” (ಬೃ. ೨-೪-೧೩) ಎಂದು ಪ್ರಶ್ನೆಯನ್ನು ಹಾಕಿ ಶ್ರುತಿಯು ತಾನೇ “ಎಲೆ, ನಾನು ಮೋಹವನ್ನು ಹೇಳುತ್ತಿಲ್ಲ ; ಎಲೆ, ಈ ಆತ್ಮನು ಅವಿನಾಶಿಯು, ನಾಶವಾಗುವ ಧರ್ಮವುಳ್ಳವನಲ್ಲ ; ಆದರೆ ಇವನಿಗೆ ಮಾತ್ರಾಸಂಸರ್ಗವು ಆಗುತ್ತದೆ’ (ಬೃ. ೪-೫-೧೪ ?) ಎಂದು ಬೇರೊಂದರ್ಥವನ್ನು ತಿಳಿಸಿರುತ್ತದೆ. (ಇಲ್ಲಿ ) ಇಷ್ಟನ್ನು ಹೇಳಿದಂತಾಗಿದೆ : ಈ ವಿಜ್ಞಾನಘನನಾದ ಆತ್ಮನು ಕೂಟಸ್ಥನಿತ್ಯನೇ, ಇವನಿಗೆ ನಾಶವಾಗುವ ಪ್ರಸಕ್ತಿಯೇ ಇಲ್ಲ. ಆದರೆ ಅವಿದ್ಯಾಕೃತವಾದ ಭೂತೇಂದ್ರಿಯಗಳೆಂಬ ಮಾತ್ರಗಳ ಸಂಬಂಧಾಭಾವವು ವಿದ್ಯೆಯಿಂದ ಆಗುತ್ತದೆ. (ಆ) ಸಂಬಂಧವು ಇಲ್ಲ ವಾಗಲು ಅದರಿಂದಾಗಿರುವ ವಿಶೇಷವಿಜ್ಞಾನವೂ ಇರುವದಿಲ್ಲವಾದ್ದರಿಂದ (ಶರೀರ ವನ್ನು ಬಿಟ್ಟು) ತೆರಳಿದ ಬಳಿಕ ಜ್ಞಾನವಿರುವದಿಲ್ಲ.

ವಿಜ್ಞಾತೃ ಎಂಬ ಕರ್ತವಾಚಕಶಬ್ದದ ಗತಿ

(ಭಾಷ್ಯ) ೩೮೭. ಯದಪ್ಪಕ್ತಮ್ “ವಿಜ್ಞಾತಾರವರೇ ಕೇನ ವಿಜಾನೀಯಾತ್’ (ಬೃ. ೪ ೫-೧೫) ಇತಿ ಕರ್ತವಚನೇನ ಶಬ್ದನ ಉಪಸಂಹಾರಾತ್ ವಿಜ್ಞಾನಾತ್ಮನ ಏವೇದಂ

  1. ಇಲ್ಲಿಯೂ ಅಹ್ಮರಥನು ಭೇದಾಭೇದವಾದಿಯು, ಔಡುಭೂಮಿಯು ಸಂಸಾರದಲ್ಲಿ ಭೇದವನ್ನೂ ಮೋಕ್ಷದಲ್ಲಿ ಅಭೇದವನ್ನೂ ಹೇಳುವವನು, ಕಾಶಕೃತ್ಯನು ನಿತ್ಯಾಭೇದವಾದಿಯು - ಎಂಬುದು ಸ್ಪಷ್ಟ.

  2. ಸುಷುಪ್ತಿಯಲ್ಲಿ ಬಿಡಿಯರಿವು ನಾಶವಾಗುವಂತ ಕೈವಲ್ಯದಲ್ಲಿಯೂ ಆಗುತ್ತದ - ಎಂದು ಭಾವ.

೬೩೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ದ್ರಷ್ಟವ್ಯತ್ವಮಿತಿ, ತದಪಿ ಕಾಶಕೃತ್ಮೀಯೇನೈವ ದರ್ಶನೇನ ಪರಿಹರಣೀಯಮ್ | ಅಪಿ ಚ ‘‘ಯತ್ರ ಹಿ ದೈತಮಿವ ಭವತಿ ತದಿತರ ಇತರಂ ಪಶ್ಯತಿ’ (ಬೃ. ೪-೫-೧೫) - ಇತ್ಯಾರಭ್ಯ ಅವಿದ್ಯಾವಿಷಯ ತಸ್ಯವ ದರ್ಶನಾದಿಲಕ್ಷಣಂ ವಿಶೇಷವಿಜ್ಞಾನಂ ಪ್ರಪಞ್ಞ, “ಯತ್ರ ತಸ್ಯ ಸರ್ವಮಾತ್ಮವಾಭೂತ್ತನ ಕಂ ಪಶ್ಯತ್’ (ಬೃ. ೪-೫-೧೫) ಇತ್ಯಾದಿನಾ ವಿದ್ಯಾವಿಷಯೇ ತವ ದರ್ಶನಾದಿಲಕ್ಷಣಸ್ಯ ವಿಶೇಷವಿಜ್ಞಾನಸ್ಯ ಅಭಾವಮ್ ಅಭಿದಧಾತಿ | ಪುನಶ್ಚ ವಿಷಯಾಭಾವ್ಪಿ ಆತ್ಮಾನಂ ವಿಜಾನೀಯಾತ್ ಇತ್ಯಾಶಜ್ಯ ವಿಜ್ಞಾತಾರವರೇ ಕೇನ ವಿಜಾನೀಯಾತ್” (ಬೃ. ೪-೫-೧೫) ಇತ್ಯಾಹ | ತತಶ್ಚ ವಿಶೇಷವಿಜ್ಞಾನಾಭಾವೋಪಪಾದನಪರತ್ವಾತ್ ವಾಕ್ಯಸ್ಯ ವಿಜ್ಞಾನ ಧಾತುರೇವ ಕೇವಲಃ ಸ ಭೂತಪೂರ್ವಗತ್ಯಾ ಕರ್ತವಚನೇನ ಪೃಚಾ ನಿರ್ದಿಷ್ಟ ಇತಿ ಗಮ್ಯತೇ+ದರ್ಶಿತಂ ತು ಪುರಸ್ಕಾತ್ ಕಾಶಕೃತ್ಮೀಯಸ್ಯ ಪಕ್ಷಸ್ಯ ಶ್ರುತಿಮತ್ಯಮ್ ||

(ಭಾಷ್ಯಾರ್ಥ) ಇನ್ನು “ಎಲೆ, ವಿಜ್ಞಾತೃವನ್ನು ವಿತರಿಂದ ಅರಿತುಕೊಂಡಾನು ?’’ (ಬೃ. ೪-೫ ೧೫) ಎಂದು ಕರ್ತತ್ವವಾಚಕಶಬ್ದದಿಂದ ಉಪಸಂಹಾರಮಾಡಿರುವದರಿಂದ ಈ ದ್ರಷ್ಟವನೆಂದು (ಉಪದೇಶಿಸಿರುವದೂ) ವಿಜ್ಞಾನಾತ್ಮನನ್ನೇ ಎಂದು (ಪೂರ್ವ ಪಕ್ಷದಲ್ಲಿ) ಹೇಳಿತ್ತಷ್ಟೆ. ಅದನ್ನೂ ಕಾಶಕೃತ್‌ನ ದರ್ಶನದಿಂದಲೇ ಪರಿಹರಿಸಬೇಕು. ಇದಲ್ಲದೆ “ಎಲ್ಲಿ ದೈತದಂತೆ ಇರುವದೋ ಅಲ್ಲಿ ಒಬ್ಬನು ಇನ್ನೊಬ್ಬನನ್ನು ಕಾಣುತ್ತಾನ’ (ಬೃ. ೪-೫-೧೫) ಎಂಬುದರಿಂದ ಹಿಡಿದು ಅವಿದ್ಯಾವಿಷಯ ದಲ್ಲಿ ಅವನಿಗೇ ಕಾಣುವದೇ ಮುಂತಾದ ವಿಶೇಷವಿಜ್ಞಾನ(ವಿರುವದಂದು) ವಿಸ್ತರಿಸಿ ಹೇಳಿ ಆದರೆ ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿರುವದೋ ಅಲ್ಲಿ ವಿತರಿಂದ ಯಾರನ್ನು ನೋಡಿಯಾನು ?’’ (ಬೃ. ೪-೫-೧೫) ಎಂದು ಮುಂತಾಗಿ ವಿದ್ಯಾವಿಷಯ ದಲ್ಲಿ ಕಾಣುವದೇ ಮುಂತಾದ ವಿಜ್ಞಾನದ ಅಭಾವವನ್ನು (ಯಾಜ್ಞವಲ್ಕನು) ಹೇಳಿರು ತಾನೆ. ಮತ್ತು ವಿಷಯವಿಲ್ಲದಿದ್ದರೂ ತನ್ನನ್ನು ಅರಿತುಕೊಳ್ಳಬಹುದೆಂದು ಶಂಕಿಸಿ “ಎಲೆ, ವಿಜ್ಞಾತೃವನ್ನು ವಿತರಿಂದ ಅರಿತಾನು ?’’ (ಬೃ. ೪-೫-೧೫) ಎಂದು ಹೇಳಿರು ತಾನೆ. ಆದ್ದರಿಂದ ವಿಶೇಷವಿಜ್ಞಾನವು ಇಲ್ಲವೆಂದು ತೋರಿಸಿಕೊಡುವದರಲ್ಲಿಯೇ

  1. ಪರಮಾತ್ಮನೇ ಜೀವಭಾವದಿಂದ ಇದ್ದುಕೊಂಡಿರುವದರಿಂದ ಜೀವನನ್ನು ಹೇಳುವ ವಿಜ್ಞಾತೃಶಬ್ದವನ್ನೂ ಅವನಿಗೆ ಉಪಯೋಗಿಸಬಹುದಾಗಿದ - ಎಂದು ಪರಿಹಾರವನ್ನು ಹೇಳ ಬೇಕಂದು ಭಾವ.

  2. ‘ದೃತದಂತ’ ಎಂದಿರುವದರಿಂದ ದೃತವು ಕಲ್ಪಿತವಂದಾಯಿತು. 3. ನಿಜವಾಗಿಯೂ ವಿಜ್ಞಾತೃವಂದು ಹೇಳುವದರಲ್ಲಲ್ಲ.

ಅಧಿ. ೬. ಸೂ. ೨೨] ಜೀವಪರಮಾತ್ಮರ ಭೇದವು ಪರಮಾರ್ಥವಲ್ಲ

೬೩

ವಾಕ್ಯಕ್ಕೆ ತಾತ್ಪರ್ಯವಿರುವದರಿಂದ ಕೇವಲ ವಿಜ್ಞಾನಧಾತುವೇ’ ಆಗಿದ್ದರೂ ಭೂತ ಪೂರ್ವ ಗತಿಯಿಂದ ಕರ್ತವಾಚಕವಾದ ತೃಚ್ (ಪ್ರತ್ಯಯ)ದಿಂದ ತಿಳಿಸಲ್ಪಟ್ಟಿರುತ್ತಾನೆ ಎಂದು ನಿಶ್ಚಯವಾಗುತ್ತದೆ. ಕಾಶಕೃತ್‌ನ ಪಕ್ಷವು ಶ್ರುತಿ (ಪ್ರಮಾಣಕ)ವೆಂಬುದನ್ನು ಹಿಂದೆ ತೋರಿಸಿಕೊಟ್ಟೇ ಇರುತ್ತದೆ.

ಜೀವಪರಮಾತ್ಮರ ಭೇದವು ಪರಮಾರ್ಥವಲ್ಲ

(ಭಾಷ್ಯ) ೩೮೮. ಅತಶ್ಚ ವಿಜ್ಞಾನಾತ್ಮಪರಮಾತ್ಮನೋ ಅವಿದ್ಯಾಪ್ರತ್ಯುಪಸ್ಥಾಪಿತ ನಾಮರೂಪರಚಿತದೇಹಾದ್ಯುಪಾಧಿನಿಮಿತ್ತೂ ಭೇದಃ ನ ಪಾರಮಾರ್ಥಿಕಃ ಇತ್ಯೇಷ್ರ್ಥಃ ಸರ್ವವ್ರದಾನವಾದಿಭಿಃ ಅಭ್ಯುಪಗನ್ನವಃ | (ಸದೇವ ಸೋಮ್ಮೇದಮಗ್ರ ಆಸೀದೇಕಮೇವಾದ್ವಿತೀಯಮ್” (ಛಾಂ. ೬-೨-೧), ಆತ್ಮ ವೇದಂ ಸರ್ವಮ್’’ (ಛಾಂ. ೭-೨೫-೨) “ಬ್ರಹ್ಮವೇದಂ ಸರ್ವಮ್’‘3 (?) ‘ಇದಂ ಸರ್ವಂ ಯದಯಮಾತ್ಮಾ” (ಬೃ. ೨-೪-೬), ‘‘ನಾನ್ಶಿತೋSಸ್ತಿ ದ್ರಷ್ಟಾ” (ಬೃ. ೩-೭-೨೩), ನಾನ್ಯದತೋSಸ್ತಿ ದ್ರಷ್ಟ” (ಬೃ. ೩-೮-೧೧) ಇತ್ಯೇವಂರೂಪಾಭ್ಯಃ ಶ್ರುತಿಭ್ಯಃ | ಸ್ಮತಿಭ್ಯಶ್ಯ ‘ವಾಸುದೇವಃ ಸರ್ವಮಿತಿ’’ (ಗೀ. ೭ ೧೯), ‘ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ ಸರ್ವ ಕ್ಷೇತ್ರೇಷು ಭಾರತ” (ಗೀ. ೧೩-೨), ‘ಸಮಂ ಸರ್ವಷು ಭೂತೇಷು ತಿಷ್ಠಂ ಪರಮೇಶ್ವರಮ್’’ (ಗೀ, ೧೩-೨೭) ಇವಂರೂಪಾಭ್ಯಃ । ಭೇದದರ್ಶನಾಪವಾದಾಚ್ಚ - “ಅನ್ನೋಸಾವನ್ನೋಹ ಮತಿ ನ ಸ ವೇದ ಯಥಾ ಪಶುಃ” (ಬೃ. ೧-೪-೧೦), “ಮೃತ್ಯೋಃ ಸ ಮೃತ್ಯುಮಾಪ್ರೋತಿ ಯ ಇಹ ನಾನೇವ ಪಶ್ಯತಿ’ (ಬೃ. ೪-೪-೧೯) ಇತ್ಯವಂ ಜಾತೀಯಕಾತ್ | ‘ಸ ವಾ ಏಷ ಮಹಾನಜ ಆತ್ಮಾಜರೋಮರೋಮೃತೋS ಭಯೋ ಬ್ರಹ್ಮ” (ಬೃ. ೪-೪-೨೫) ಇತಿ ಚ ಆತ್ಮನಿ ಸರ್ವವಿಕ್ರಿಯಾಪ್ರತಿಷೇಧಾತ್ |

1.ಚೈತನ್ಯಸ್ವರೂಪನಾಗಿರುವವನೇ.

  1. ತತ್ತ್ವಜ್ಞಾನವಾಗುವದಕ್ಕೆ ಮೊದಲು ಅವಿದ್ಯೆಯಿಂದ ಜ್ಞಾನಕ್ಕೆ ಕರ್ತವಾಗಿ ತೋರುತ್ತಿದ್ದನಂಬ ಕಾರಣದಿಂದ.

  2. ಇದು ಯಾವ ಶ್ರುತಿ ಎಂಬುದು ತಿಳಿಯಲಿಲ್ಲ, ಮುಂಡಕದಲ್ಲಿ ‘‘ಬ್ರಹ್ಮವೇದಂ ವಿಶ್ವಮ್” ಎಂದಿದೆ. ಆಚಾರ್ಯರ ಮುಂಡಕಪಾಠವೇ ‘ಸರ್ವಮ್’ ಎಂದಿದಯೋ ಇದು ಬೇರೊಂದು ಉಪನಿಷತ್ತಿನ ವಾಕ್ಯವೋ ತಿಳಿಯದು. ಗೀ, ಭಾ. ೧೩-೧೫, ತ್ಯ. ಭಾ. ೧-೧೧, (ಭಾ.

ಭಾ. ೭೭) ಸ. ಭಾ. ೨-೧-೧೪ - ಇವುಗಳಲ್ಲೆಲ್ಲ ‘ಸರ್ವಮ್’ ಎಂದೇ ಉದಾಹೃತವಾಗಿದ.೬೩೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅನ್ಯಥಾ ಚ ಮುಮುಕ್ಕಣಾಂ ನಿರಪವಾದವಿಜ್ಞಾನಾನುಪಪಃ | ಸುನಿಶ್ಚಿತಾರ್ಥ ತ್ಯಾನುಪಪಶ್ಚ | ನಿರಪವಾದಂ ಹಿ ವಿಜ್ಞಾನಂ ಸರ್ವಾಕಾಜ್ಞಾನಿವರ್ತಕಮ್ ಆತ್ಮವಿಷಯಂ ಇಷ್ಯತೇ |“ವೇದಾನ್ಯವಿಜ್ಞಾನಸುನಿಶ್ಚಿತಾರ್ಥಾಃ ’ (ಮುಂ . ೩-೨-೬) ಇತಿ ಚ ಶ್ರುತೇ | ತತ್ರ ಕೂ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ’ (ಈ. ೭) ಇತಿ ಚ | ಸ್ಥಿತಪ್ರಜ್ಞಲಕ್ಷಣಸ್ಕೃತೇಶ್ಚ | ಸ್ಥಿತೇ ಚ ಕ್ಷೇತ್ರಜ್ಞಪರಮಾತ್ಮಕತ್ವವಿಷಯೇ ಸಮ್ಯಗ್ದರ್ಶನೇ ಕ್ಷೇತ್ರಜ್ಞಃ ಪರಮಾತ್ಮಾ ಇತಿ ನಾಮಮಾತ್ರಭೇದಾತ್ ಕ್ಷೇತ್ರ ಜ್ಯೋತಿಯಂ ಪರಮಾತ್ಮನೋ ಭಿನ್ನಃ ಪರಮಾತ್ಮಾ ಅಯಂ ಕ್ಷೇತ್ರಜ್ಞಾತ್ ಭಿನ್ನಇವಜಾತೀಯಕಃ ಆತ್ಮಭೇದವಿಷಯೂ ನಿರ್ಬನ್ಸೂ ನಿರರ್ಥಕಃ | ಏಕೋ ಹಿ ಅಯಮಾತ್ಮಾ ನಾಮಮಾತ್ರಭೇದೇನ ಬಹುಧಾ ಅಭಿಧೀಯತೇ ಇತಿ | ನ ಹಿ ‘ಸತ್ಯಂ ಜ್ಞಾನಮನನ್ನಂ ಬ್ರಹ್ಮ ಯೋ ವೇದ ನಿಹಿತಂ ಗುಹಾಯಾಮ್’’ (ತೈ. ೨-೧) ಇತಿ ಕಾಂಚಿದೇವ ಏಕಾಂ ಗುಹಾಮ್ ಅಧಿಕೃತ್ಯ ಏತದುಕ್ತಮ್ | ನ ಚ ಬ್ರಹ್ಮಹೋನ್ನೋ ಗುಹಾಯಾಂ ನಿಹಿತೋSಸ್ತಿ | ತತೃಷ್ಕಾ ತದೇವಾನುಪ್ರಾವಿಶತ್’ (ತ್ಯ. ೨-೬) ಇತಿ ಸ್ತಷ್ಟು ರೇವ ಪ್ರವೇಶಶ್ರವಣಾತ್ | ಯೇ ತು ನಿರ್ಬಸ್ಟಂ ಕುರ್ವನ್ನಿ ತೇ ವೇದಾನಾರ್ಥಂ ಬಾಧಮಾನಾ ಶ್ರೇಯೋದ್ವಾರಂ ಸಮ್ಯಗ್ದರ್ಶನಮೇವ ಬಾಧಕ್ಕೇ | ಕೃತಕಮ್ ಅನಿತ್ಯಂ ಚ ಮೋಕ್ಷ

ಕಲ್ಪಯ | ನ್ಯಾಯೇನ ಚ ನ ಸಂಗಚ್ಚ ಇತಿ ||

(ಭಾಷ್ಯಾರ್ಥ) ಆದ್ದರಿಂದಲೂ ವಿಜ್ಞಾನಾತ್ಮಪರಮಾತ್ಮರುಗಳಿಗೆ (ಕಾಣುವ) ಭೇದವು ಅವಿದ್ಯೆಯು ತಂದೊಡ್ಡಿದ ನಾಮರೂಪಗಳಿಂದಾಗಿರುವ ದೇಹಾದ್ಯುಪಾಧಿಗಳ ನಿಮಿತ್ತ ದಿಂದಾಗಿರುವದೇ ಹೊರತು ಪಾರಮಾರ್ಥಿಕವಲ್ಲ - ಎಂಬೀ ವಿಷಯವನ್ನು ಎಲ್ಲಾ ವೇದಾಂತವಾದಿಗಳೂ ಒಪ್ಪಬೇಕು. ಸೋಮ್ಮನೆ, ಮೊದಲು ತನಗೆರಡನೆಯದಿಲ್ಲದ ಸತ್ತು ಒಂದೇ ಇತ್ತು’ (ಛಾ೦೬-೨-೧), “ಇದೆಲ್ಲವೂ ಆತ್ಮನೇ’ (ಛಾಂ.೭-೨೫-೨) “ಇದಲ್ಲವೂ ಬ್ರಹ್ಮವೇ’ (?), ‘‘ಇದಲ್ಲವೂ ಈ ಆತ್ಮನೆಂಬುವನೇ’ (ಬೃ. ೨-೪-೬) “ಇವನಿಗಿಂತ ಬೇರೆ ದ್ರಷ್ಟವಿಲ್ಲ” (ಬೃ. ೩-೭-೨೩), ‘ಇದಕ್ಕಿಂತ ಬೇರ ದ್ರಷ್ಟವಾಗಿರುವದು ಇಲ್ಲ’ (ಬೃ. ೩-೮-೧) - ಎಂಬೀ ರೂಪದ ಶ್ರುತಿಗಳಿಂದ (ಹೀಗೆಂದು ಸಿದ್ಧವಾಗುತ್ತದೆ). ‘ವಾಸುದೇವನೇ ಎಲ್ಲವೂ ಎಂದು….” (ಗೀ. ೭ ೧೯), ಮತ್ತು ಎಲ್ಲಾ ಕ್ಷೇತ್ರಗಳಲ್ಲಿಯೂ ಇರುವ ಕ್ಷೇತ್ರಜ್ಞನನ್ನು ನಾನೆಂದು ತಿಳಿದುಕೊ” (ಗೀ, ೧೩-೨) “ಸರ್ವಭೂತಗಳಲ್ಲಿಯೂ ಸಮನಾಗಿ ಇದ್ದುಕೊಂಡಿರುವ ಪರಮೇಶ್ವರನನ್ನು” (ಗೀ. ೧೩-೨೭) ಎಂಬೀ ರೂಪದ ಸ್ಮೃತಿಗಳಿಂದಲೂ (ಹೀಗಂದು ಸಿದ್ಧವಾಗುತ್ತದೆ). “ಈ ದೇವತ ಬೇರೆ, ನಾನು ಬೇರೆಯಾಗಿರುವನು ಎಂದು

ಅಧಿ. ೬. ಸೂ. ೨೨] ಜೀವಪರಮಾತ್ಮರ ಭೇದವು ಪರಮಾರ್ಥವಲ್ಲ

೬೩೩

(ಉಪಾಸನಮಾಡುವನಲ್ಲ), ಅವನು ಪಶುವಿನಂತೆ (ತತ್ಯವನ್ನು) ಅರಿಯನು’ (ಬೃ. ೧-೪-೧೦) “ಯಾವನು ಇಲ್ಲಿ ನಾನಾ ಇರುವಂತೆ ಕಾಣುವನೋ ಅವನು ಸಾವಿನಮೇಲೆ ಸಾವನ್ನು ಪಡೆಯುವನು” (ಬೃ. ೪-೪-೧೯) ಎಂಬೀ ಜಾತಿಯ ಭೇದದರ್ಶನ ನಿಂದೆಯಿಂದಲೂ (ಹೀಗೆಂದು ಸಿದ್ಧವಾಗುತ್ತದೆ). “ಆ ಈ ಆತ್ಮನೇ ದೊಡ್ಡವನು, ಅಜನು, ಅಜರನು, ಅಮರನು, ಅಮೃತನು, ಬ್ರಹ್ಮವು’ (ಬೃ. ೪-೪-೨೫) ಎಂದು ಆತ್ಮನಲ್ಲಿ ಎಲ್ಲಾ ವಿಕಾರಗಳನ್ನೂ ಅಲ್ಲಗಳೆದಿರುವದರಿಂದಲೂ (ಹೀಗೆಂದು ಸಿದ್ಧ ವಾಗುತ್ತದೆ). ಹೀಗಲ್ಲದಿದ್ದರೆ ಮುಮುಕ್ಷುಗಳಿಗೆ ಅಬಾಧಿತವಾದ ವಿಜ್ಞಾನವು ಆಗು ವಂತಿಲ್ಲ, ವಿಷಯವನ್ನು ಸುನಿಶ್ಚಿತವಾಗಿ (ತಿಳಿದುಕೊಳ್ಳುವದೂ) ಆಗುವಂತಿಲ್ಲ. ಆತ್ಮವಿಷಯವಾದ ವಿಜ್ಞಾನವು ಅಬಾಧಿತವಾಗಿಯೂ ಎಲ್ಲ ಆಕಾಂಕ್ಷೆಗಳನ್ನೂ ತೊಲಗಿಸುವದಾಗಿಯೂ ಇರಬೇಕೆಂದಲ್ಲವೆ, (ವೇದಾಂತಿಗಳಿಗೆ) ಇಷ್ಟವಾಗಿರುವದು ? ‘‘ವೇದಾಂತವಿಜ್ಞಾನದಿಂದ ಸುನಿಶ್ಚಿತಾರ್ಥರಾದ’ (ಮುಂ. ೩-೨-೬) ಎಂದೂ “ಅಲ್ಲಿ ಏಕತ್ವವನ್ನು ಕಂಡುಕೊಂಡವರಿಗೆ ಯಾವ ಮೋಹವು, ಯಾವ ಶೋಕವು ?” (ಈ. ೭) ಎಂದೂ ಶ್ರುತಿಯಿರುವದರಿಂದ (ಹೀಗೆಂದು ಸಿದ್ಧವಾಗುತ್ತದೆ). ಸ್ಥಿತಪ್ರಜ್ಞನ ಲಕ್ಷಣ ವನ್ನು (ಹೇಳುವ) ಸ್ಮತಿ ಯಿಂದಲೂ’ (ಇದು ಸಿದ್ಧವಾಗುತ್ತದೆ).

ಕ್ಷೇತ್ರಜ್ಞಪರಮಾತ್ಮಕತ್ವವಿಷಯಕವಾದ, ಸಮ್ಮಗ್ಲರ್ಶನವಿರುತ್ತಿರುವಲ್ಲಿ ಕ್ಷೇತ್ರಜ್ಞ, ಪರಮಾತ್ಮ - ಎಂಬುದು ನಾಮಮಾತ್ರದ ಭೇದವಾಗಿರುವದರಿಂದ ಈ ಕ್ಷೇತ್ರಜ್ಞನು ಪರಮಾತ್ಮನಿಗಿಂತ ಭಿನ್ನನು, ಈ ಪರಮಾತ್ಮನು ಕ್ಷೇತ್ರಜ್ಞನಿಗಿಂತ ಭಿನ್ನನು - ಎಂಬೀ ಜಾತಿಯ ಆತ್ಮಭೇದವಿಷಯಕವಾದ ನಿರ್ಬಂಧವು ನಿರರ್ಥಕವು.

  1. ಜ್ಞಾನವು ನಿಲುಗಡೆಗೆ ಬಂದವನೇ ಸ್ಥಿತಪ್ರಜ್ಞನು, ಭೇದವೂ ಉಂಟು, ಅಭೇದವೂ ಉಂಟು - ಎಂಬ ಮತದಲ್ಲಿ ಸ್ಥಿತಪ್ರಜ್ಞೆಯೇ ಇರುವದಿಲ್ಲ - ಎಂದು ಭಾವ.

  2. ಜೀವನು ಮತ್ತೊಬ್ಬ ಜೀವನಿಗಿಂತ ಬೇರೆ ಎಂಬ ನಿರ್ಬಂಧವನ್ನೂ ಇಲ್ಲಿ ಸೇರಿಸಿಕೊಳ್ಳಬೇಕೆಂಬುದನ್ನು ಈ ಜಾತಿಯ’ ಎಂಬ ಮಾತು ಸೂಚಿಸುವದು.

  3. ಎಲ್ಲಾ ಶರೀರಗಳಲ್ಲಿಯೂ ಒಬ್ಬನೇ ಆತ್ಮನಿರುತ್ತಾನೆಂದರ್ಥ. “ನಿಜವಾಗಿ ಜೀವಪರಮೇಶ್ವರರಿಗ ಭೇದವಿಲ್ಲದಿದ್ದರೂ ಅನಿರ್ವಚನೀಯವಾದ ಅನಾದ್ಯವಿದ - ಎಂಬ ಉಪಾಧಿಭೇದದಿಂದ ‘ಈ ಪರಮಾತ್ಮನು ಶುದ್ಧವಿಜ್ಞಾನಾನಂದಸ್ವಭಾವದವನು, ಈ ಜೀವನು ಅವಿದ್ಯಾಶೋಕದುಃಖಾದ್ಯುಪದ್ರವಗಳುಳ್ಳವನು’ ಎಂದು ಕಾಲ್ಪನಿಕವಾದ ಭೇದಬುದ್ಧಿಯೂ ವ್ಯಪದೇಶವೂ ಆಗಬಹುದು. ಅವಿದ್ಯಯು ವಿದ್ಯಾಸ್ವರೂಪನಾದ ಪರಮಾತ್ಮನಲ್ಲಿರಲಾರದು : ಆದರೂ ಅವನ ಪ್ರತಿಬಿಂಬದಂತಿರುವ ಜೀವರುಗಳ ಮೂಲಕ ಪರಮಾತ್ಮನಿಗೂ ಸೇರಿದಂತೆ ವ್ಯವಹಾರವಾಗುತ್ತದೆ. ಜೀವವಿಭಾಗ, ಅವಿದ್ಯ - ಇವುಗಳಿಗೆ ಅನ್ನೋನ್ಯಾಶ್ರಯವಾಯಿತಲ್ಲ ! - ಎಂದು ಶಂಕಿಸಬಾರದು ; ಏಕೆಂದರೆ ಇವರಡೂ ಬೀಜಾಂಕುರಗಳಂತ ಅನಾದಿಯಾಗಿವ’ - ಎಂದು

೬೩೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಏಕಂದರ ಈ ಆತ್ಮನು ಒಬ್ಬನೇ ಆಗಿದ್ದು ಬರಿಯ ನಾಮದ ಭೇದದಿಂದ ಬಲು ಬಗೆಯಾಗಿ ಕರೆಯಲ್ಪಡುತ್ತಿದ್ದಾನೆ. ‘ಸತ್ಯವೂ ಜ್ಞಾನವೂ ಅನಂತವೂ ಆಗಿರುವ ಬ್ರಹ್ಮವು ಗುಹೆಯಲ್ಲಿ ನಿಹಿತವಾಗಿರುವದನ್ನು ಯಾವಾತನು ಅರಿತುಕೊಳ್ಳುವನೋ’’ (ತೈ. ೨-೧) ಎಂಬೀ (ವಾಕ್ಯದಲ್ಲಿ) ಯಾವದೋ ಒಂದು (ಗೊತ್ತಾದ) ಗುಹೆಯನ್ನು ಕುರಿತು ಹೇಳಿರುವದೇ ಇಲ್ಲ. ಬ್ರಹ್ಮಕ್ಕಿಂತ ಬೇರೆ (ಯಾವನೊಬ್ಬನೂ) ಗುಹೆಯಲ್ಲಿ ನಿಹಿತನಾಗಿರುವದೂ ಇಲ್ಲ. ಅದನ್ನು ಸೃಷ್ಟಿಸಿ ಅದೇ ಒಳಹೊಕ್ಕಿತು’ (ತ್ಯ. ೨-೬) ಎಂದು ಸೃಷ್ಟಿಕರ್ತನೇ ಪ್ರವೇಶಿಸಿರುತ್ತಾನೆಂದು ಶ್ರುತಿಯಲ್ಲಿ ಹೇಳಿರುತ್ತದೆ. ಯಾರಾದರೆ (ಕ್ಷೇತ್ರಕ್ಕೇಶ್ವರರು ಬೇರೆಬೇರೆ ಎಂದು) ನಿರ್ಬಂಧವನ್ನು ಮಾಡುವರೋ ಅವರು ವೇದಾಂತಾರ್ಥವನ್ನು ಬಾಧಿಸುತ್ತಾರಾದ್ದರಿಂದ ಮೋಕ್ಷದ್ವಾರವಾದ ಸಮ್ಯಗ್ದರ್ಶನವನ್ನೇ ಬಾಧಿಸಿದವರಾಗುತ್ತಾರೆ. ಮೋಕ್ಷವು ಕೃತಕವೂ ಅನಿತ್ಯವೂ ಆಗಿರುವದೆಂದು ಕಲ್ಪಿಸಿದವರಾಗುತ್ತಾರೆ. ನ್ಯಾಯಕ್ಕೆ ಹೊಂದುವದೂ ಇಲ್ಲ.

೭. ಪ್ರಕೃತ್ಯಧಿಕರಣ (ಸೂ. ೨೩-೨೭) (ಬ್ರಹ್ಮವು ಜಗತ್ತಿಗೆ ಉಪಾದಾನವೂ ನಿಮಿತ್ತವೂ ಆಗಿದೆ) ಪ್ರಕೃತಿಶ್ಚ ಪ್ರತಿಜ್ಞಾದೃಷ್ಮಾನ್ತಾನುಪರೋಧಾತ್ ||೨೩|| ೨೩. (ಬ್ರಹ್ಮವು) ಪ್ರಕೃತಿಯೂ (ಆಗಿದೆ). ಪ್ರತಿಜ್ಞೆಗೂ ದೃಷ್ಟಾಂತಕ್ಕೂ ಅವಿರೋಧವಾಗುವದ)ಕ್ಕಾಗಿ (ಹೀಗೆಂದು ಒಪ್ಪಬೇಕು).

ಬ್ರಹ್ಮಲಕ್ಷಣದ ವಿಷಯದಲ್ಲಿ ಸಂಶಯ

(ಭಾಷ್ಯ) ೩೮೯, ಯಥಾ ಅಭ್ಯುದಯಹೇತುತ್ವಾತ್ ಧರ್ಮ ಜಿಜ್ಞಾಸ್ಯ: ಏವಂ ಭಾಮತೀವ್ಯಾಖ್ಯಾನದಲ್ಲಿದೆ. ಇದಕ್ಕೆ ಭಾಷ್ಯದ ಆಧಾರವಿಲ್ಲ. ಜೀವವಿಭಾಗವೂ ಅವಿದ್ಯೆಯೂ ಕಾಲಾಶ್ರಿತವೆಂಬುದು ಯುಕ್ತಿವಿರುದ್ಧವೂ ಆಗಿರುತ್ತದೆ. ಪೀಠಿಕೆಯನ್ನು ನೋಡಿ.

  1. ಗುಹೆಯಲ್ಲಿರುವವನು ಜೀವನು, ಬ್ರಹ್ಮವಲ್ಲ ಎಂಬ ಶಂಕೆಗೆ ಇದು ಪರಿಹಾರವು.

  2. “ಬ್ರಹ್ಮವನ್ನು ಅರಿತುಕೊಂಡವನು ಬ್ರಹ್ಮವೇ ಆಗುತ್ತಾನ” ಎಂಬ ಶ್ರುತಿಯು ಅಪ್ರಮಾಣವಾಗುವದು.

  3. ಏಕೆಂದರೆ ಅವರ ಪಕ್ಷದಲ್ಲಿ ಮೋಕ್ಷವು ಹೊಸದಾಗಿ ಉಂಟಾಗತಕ್ಕದ್ದು ಎಂದಾಗುತ್ತವೆ. ‘ತತ್ತ್ವಮಸಿ’ ಎಂಬ ಶ್ರುತಿಯೂ ಅವರ ಪಕ್ಷಕ್ಕೆ ವಿರುದ್ಧ.

  4. ಆರಬ್ಧವಾದದ್ದು ಅನಿತ್ಯ ಎಂಬ ಯುಕ್ತಿಗೂ ಅವರ ಮತವು ವಿರುದ್ಧ.

ಅಧಿ. ೭. ಸೂ. ೨೩] ಪೂರ್ವಪಕ್ಷ : ಬ್ರಹ್ಮವು ಜಗತ್ತಿಗೆ ನಿಮಿತ್ತವೇ

೬೩೫

ನಿಃಶ್ರೇಯಸಹತುತ್ವಾತ್ ಬ್ರಹ್ಮ ಜಿಜ್ಞಾಸ್ಯಮ್ ಇತ್ಯುಕ್ತಮ್ 1ಬ್ರಹ್ಮ ಚಜನ್ಮಾದ್ಯಸ್ಯ ಯತಃ’ (೧-೧-೨) ಇತಿ ಲಕ್ಷಿತಮ್ । ತಚ್ಚ ಲಕ್ಷಣಂ ಘಟ ರುಚಕಾದೀನಾಂ ಮೃತ್ಸುವರ್ಣಾದಿವತ್‌ ಪ್ರಕೃತಿ ಕುಲಾಲಸುವರ್ಣಕಾರಾದಿವತ್‌ ನಿಮಿತ್ತ ಚ ಸಮಾನಮ್ ಇತ್ಯತೋ ಭವತಿ ವಿಮರ್ಶಃ ಕಿಮಾತ್ಮಕಂ ಪುನಃ ಬ್ರಹ್ಮಣಃ ಕಾರಣತ್ವಂ ಸ್ಯಾತ್ ಇತಿ ||

(ಭಾಷ್ಯಾರ್ಥ) ಹೇಗೆ ಅಭ್ಯುದಯಕ್ಕೆ ಕಾರಣವಾಗಿರುವದರಿಂದ ಧರ್ಮವನ್ನು ಜಿಜ್ಞಾಸ ಮಾಡ ಬೇಕೋ, ಹಾಗೆ ನಿಃಶ್ರೇಯಸಕ್ಕೆ ಕಾರಣವಾಗಿರುವದರಿಂದ ಬ್ರಹ್ಮವನ್ನು ಜಿಜ್ಞಾಸ ಮಾಡಬೇಕು ಎಂದು ಹೇಳಿದ್ದಾಯಿತು. ಬ್ರಹ್ಮಕ್ಕೆ “ಜನ್ಮಾದ್ಯಸ್ಯ ಯತಃ” (ಯಾವದರಿಂದ ಈ ಜಗತ್ತಿನ ಜನ್ಮಾದಿಗಳಾಗುವವೋ ಅದು ಬ್ರಹ್ಮವು) (೧-೧-೨) ಎಂದು ಲಕ್ಷಣವನ್ನೂ ಹೇಳಿದ್ದಾಯಿತು. ಆ ಲಕ್ಷಣವು ಗಡಿಗೆ, ಅಸಲಿ ಮುಂತಾದವುಗಳಿಗೆ ಮಣ್ಣು, ಚಿನ್ನ ಮುಂತಾದವುಗಳಂತ ಪ್ರಕೃತಿಯಾಗಿದ್ದರೂ ಕುಂಬಾರ, ಅಕ್ಕಸಾಲೆ ಮುಂತಾದವರಂತೆ ನಿಮಿತ್ತವಾಗಿದ್ದರೂ (ಎರಡಕ್ಕೂ) ಸಮಾನವಾಗಿರುವದರಿಂದ ಬ್ರಹ್ಮದ ಕಾರಣತ್ವವು ಎಂಥದ್ದು ಆಗಿರಬೇಕು ? - ಎಂಬ ಸಂಶಯವುಂಟಾಗುತ್ತದೆ. ಪೂರ್ವಪಕ್ಷ : ಬ್ರಹ್ಮವು ಜಗತ್ತಿಗೆ ನಿಮಿತ್ತವೇ ?

(ಭಾಷ್ಯ) ೩೯೦. ತತ್ರ ನಿಮಿತ್ತಕಾರಣಮೇವ ತಾವತ್ ಕೇವಲಂ ಸ್ಯಾತ್ ಇತಿ ಪ್ರತಿಭಾತಿ | ಕಸ್ಮಾತ್ ? ಈಕ್ಷಾಪೂರ್ವಕಕರ್ತತ್ವಶ್ರವಣಾತ್ | ಇಕ್ಷಾಪೂರ್ವಕಂ ಹಿ ಬ್ರಹ್ಮಣಃ ಕರ್ತತ್ವಮ್ ಅವಗಮ್ಯತೇ ‘ಸ ಈಕ್ಷಾಂಚಕ್ಕೇ ! ಸ ಪ್ರಾಣಮಸೃಜತ’ (ಪ್ರ. ೬-೩, ೪) ಇತ್ಯಾದಿಶ್ರುತಿಭ್ಯಃ | ಇಕ್ಷಾಪೂರ್ವಕಂ ಚ ಕರ್ತತ್ವಂ ನಿಮಿತ್ತಕಾರಣೇಷ್ಟವ ಕುಲಾಲಾದಿಷು ದೃಷ್ಟಮ್ | ಅನೇಕಕಾರಕಪೂರ್ವಿಕಾ ಚ ಕ್ರಿಯಾಫಲಸಿದ್ಧಿರ್ಲೋಕೇ ದೃಷ್ಟಾ | ಸ ಚ ನ್ಯಾಯಃ ಆದಿಕರ್ತಯ್ರಪಿ ಯುಕ್ತ: ಸಂಕ್ರಮಯಿತುಮ್ | ಈಶ್ವರಪ್ಪ ಪ್ರಸಿದ್ಧಶ್ಚ | ಈಶ್ವರಾಣಾಂ ಹಿ ರಾಜವೈವಸ್ವತಾದೀನಾಂ ನಿಮಿತ್ತಕಾರಣತ್ವಮೇವ ಕೇವಲಂ ಪ್ರತೀಯತೇ | ತದ್ವತ್ ಪರಮೇಶ್ವರಸ್ಕಾಪಿ ನಿಮಿತ್ತಕಾರಣತ್ವಮೇವ ಯುಕ್ತಂ ಪ್ರತಿಪತ್ತುಮ್ | ಕಾರ್ಯಂ ಚ ಇದಂ ಜಗತ್ ಸಾವಯವಮ್, ಅಚೇತನಮ್, ಅಶುದ್ಧಂ ಚ ದೃಶ್ಯತೇ | ಕಾರಣೇನಾಪಿ ತಸ್ಯ ತಾದೃಶವ ಭವಿತವ್ಯಮ್ |

  1. ಮೋಕ್ಷಕ್ಕೆ.

೬೩೬

ಬ್ರಹ್ಮಸೂತ್ರಭಾಷ್ಯ | [ಅ.೧. ಪಾ.೪. ಕಾರ್ಯಕಾರಣಯೋ ಸಾರೂಪ್ಯದರ್ಶನಾತ್ | ಬ್ರಹ್ಮ ಚ ನೈವಂಲಕ್ಷಣಮ್ ಅವ ಗಮ್ಯತೇ | ನಿಷ್ಕಲಂ ನಿಷಿಯಂ ಶಾನ್ತಂ ನಿರವದ್ಯಂ ನಿರನಮ್‌’’ (ಶ್ವೇ. ೬-೧೯) ಇತ್ಯಾದಿಶ್ರುತಿಭ್ಯಃ | ಪಾರಿಶೇಷ್ಮಾತ್ ಬ್ರಹ್ಮಣೋನ್ಯತ್ ಉಪಾದಾನಕಾರಣಮ್ ಅಶುದ್ಧಾದಿಗುಣಕಂಸ್ಕೃತಿಪ್ರಸಿದ್ಧಮ್ ಅಭ್ಯುಪಗಸ್ತವ್ಯಮ್ |ಬ್ರಹ್ಮಕಾರಣತ್ವ ಶ್ರುತೇಃ ನಿಮಿತ್ತತ್ವಮಾತ್ರ ಪರ್ಯವಸಾನಾತ್ ಇತಿ ||

(ಭಾಷ್ಯಾರ್ಥ) ಇಲ್ಲಿ (ಬರಿಯ) ನಿಮಿತ್ತಕಾರಣವೇ ಆಗಿರಬೇಕೆಂದು ಮೊದಲು ತೋರು ತದೆ. ಏಕ ? ಎಂದರೆ ಯೋಚಿಸಿ ನೋಡುವದರ ಮೂಲಕ (ಬ್ರಹ್ಮವು) ಕರ್ತವಾಗಿರು ವದಂದು ಶ್ರುತಿಯಲ್ಲಿ ಹೇಳಿರುವದರಿಂದ. “ಅವನು ಯೋಚಿಸಿ ನೋಡಿದನು ; ಅವನು ಪ್ರಾಣವನ್ನು ಸೃಷ್ಟಿಸಿದನು’ (ಪ್ರ. ೬-೩, ೪) ಮುಂತಾದ ಶ್ರುತಿಗಳಿಂದ ಬ್ರಹ್ಮವು ಈಕ್ಷಾಪೂರ್ವಕವಾದ ಕರ್ತವೆಂದಲ್ಲವ, ತಿಳಿಯಬರುತ್ತದೆ ? ಈಕ್ಷಾಪೂರ್ವಕವಾದ ಕರ್ತತ್ವವು ನಿಮಿತ್ತಕಾರಣವಾಗಿರುವ ಕುಂಬಾರನೇ ಮೊದಲಾದವರಲ್ಲಿಯೇ ಕಂಡಿರುತ್ತದೆ. ಕ್ರಿಯಯ ಫಲವು ಸಿದ್ಧಿಯಾಗುವದು ಅನೇಕಕಾರಕಗಳ ಮೂಲಕ ಎಂದು ಲೋಕದಲ್ಲಿ ಕಂಡಿದೆ ; ಈ ನ್ಯಾಯವನ್ನು ಆದಿಕರ್ತವಾದ (ಈಶ್ವರ)ನಿಗೂ ಹೊಂದಿಸುವದು ಯುಕ್ತವಾಗಿರುತ್ತದೆ.” ಈಶ್ವರ ನೆಂದು ಪ್ರಸಿದ್ಧನಾಗಿರುವದರಿಂದಲೂ ಹೀಗ ಈಶ್ವರರಾಗಿರುವ ರಾಜವೈವಸ್ವತನೇ ಮೊದಲಾದವರಲ್ಲಿ (ಬರಿಯ) ನಿಮಿತ್ತಕಾರಣತ್ವವೇ ಕಂಡುಬರುತ್ತದೆ. ಅದರಂತ, ಪರಮೇಶ್ವರನಿಗೂ ನಿಮಿತ್ತ ಕಾರಣತ್ವವು ಮಾತ್ರ ಇದೆ ಎಂದು ತಿಳಿಯುವದು ಯುಕ್ತವಾಗಿರುತ್ತದೆ, ಮತ್ತು ಕಾರ್ಯವಾದ ಈ ಜಗತ್ತು ಸಾವಯವವಾಗಿಯೂ ಅಚೇತನವಾಗಿಯೂ ಅಶುದ್ಧ - ವಾಗಿಯೂ ಇರುವದು ಕಂಡುಬರುತ್ತದೆ ; ಅದರ ಕಾರಣವೂ ಅಂಥದ್ದೇ ಆಗಿರಬೇಕು. ಏಕೆಂದರೆ ಕಾರ್ಯಕಾರಣಗಳಿಗೆ ಸಾರೂಪ್ಯವಿರುವದು (ಲೋಕದಲ್ಲಿ) ಕಂಡು

  1. ಕುಂಬಾರನೇ ಮಡಿಕೆಯಾದದ್ದು ಕಂಡುಬಂದಿಲ್ಲ.

  2. ಈಶ್ವರನು ಕರ್ತವಾಗಿರುತ್ತಾನೆ ; ಅವನಿಗೆ ಕುಂಬಾರನೇ ಮುಂತಾದವರಂತ ಕರ್ಮಕರಣಾದಿಕಾರಕಗಳೂ ಸೃಷ್ಟಿಗೆ ಬೇಕು - ಎಂದು ಕಲ್ಪಿಸುವದು ದೃಷ್ಟಾನುಸಾರವಾಗುತ್ತದೆ.

  3. ಸಾಮಾನ್ಯನಾದ ಈಶ್ವರನೇ ತನಗೆ ಇಷ್ಟವಾದ ವಸ್ತುಗಳನ್ನು ಮಾಡಿಕೊಳ್ಳುವದಕ್ಕೆ ತಾನೇ ಮಾರ್ಪಡುವದಿಲ್ಲ ; ಇನ್ನು ಪರಮೇಶ್ವರನು ಮಾರ್ಪಟ್ನಾನ ? - ಎಂದು ಭಾವ.

  4. ಇಲ್ಲಿಯವರೆಗೂ ಕಾರಣಸ್ವಭಾವವನ್ನು ಪರೀಕ್ಷಿಸಿ ತರ್ಕಿಸಿದ್ಧಾಯಿತು. ಇನ್ನು ಮುಂದೆ ಕಾರ್ಯವಾದ ಜಗತ್ತಿನ ಸ್ವಭಾವದಿಂದಲೂ ಈಶ್ವರನು ಉಪಾದಾನಕಾರಣವಲ್ಲವೆಂದು ತರ್ಕಿಸಲಾಗುವದು.

ಅಧಿ. ೭. ಸೂ. ೨೩] ಬ್ರಹ್ಮವು ಜಗತ್ತಿಗೆ ಉಪಾದಾನವೂ ನಿಮಿತ್ತವೂ ಆಗಿದೆ ೬೩೭ ಬರುತ್ತದೆ. ಆದರೆ ಬ್ರಹ್ಮವು ಇಂಥ ಲಕ್ಷಣ ದ್ದಲ್ಲವೆಂದು ನಿಷ್ಕಲವು, ನಿಷ್ಕ್ರಿಯವು, ಶಾಂತವು, ನಿರವದ್ಯವು (ದೋಷರಹಿತವು), ನಿರಂಜನವು’ (ಶೇ. ೬-೧೯) ಎಂದು ಮುಂತಾಗಿರುವ ಶ್ರುತಿಗಳಿಂದ ನಿಶ್ಚಿತವಾಗಿರುತ್ತದೆ. ಪರಿಶೇಷನ್ಯಾಯದಿಂದ ಬ್ರಹ್ಮಕ್ಕಿಂತ ಬೇರೆಯಾದ, ಅಶುದ್ಧಿಯೇ ಮುಂತಾದ ಗುಣಗಳುಳ್ಳ ಸ್ಮೃತಿಪ್ರಸಿದ್ಧವಾದ ಉಪಾದಾನಕಾರಣವನ್ನು ಒಪ್ಪಬೇಕು ; ಏಕೆಂದರೆ ಬ್ರಹ್ಮವು (ಜಗತ್ತಿಗೆ) ಕಾರಣವೆಂಬ ಶ್ರುತಿಯು ನಿಮಿತ್ತತ್ವಮಾತ್ರದಲ್ಲಿ ಮುಗಿಯುತ್ತದ.

ಸಿದ್ಧಾಂತ : ಬ್ರಹ್ಮವು ಜಗತ್ತಿಗೆ ಉಪಾದಾನವೂ ನಿಮಿತ್ತವೂ ಆಗಿದೆ

(ಭಾಷ್ಯ) ೩೯೧. ಏವಂ ಪ್ರಾಪ್ತ ಬೂರ್ಮ | ಪ್ರಕೃತಿಶ್ಚ ಉಪಾದಾನಕಾರಣಂ ಚ ಬ್ರಹ್ಮ ಅಭ್ಯುಪಗಸ್ತವ್ಯಮ್, ನಿಮಿತ್ತಕಾರಣಂ ಚ । ನ ಕೇವಲಂ ನಿಮಿತ್ತಕಾರಣಮೇವ | ಕಸ್ಮಾತ್ ? ಪ್ರತಿಜ್ಞಾದೃಷ್ಟಾನಾನುಪರೋಧಾತ್ | ಏವಂ ಪ್ರತಿಜ್ಞಾದೃಷ್ಕಾ ಶೌತ್‌ ನೋಪರುಧ್ಯತೇ | ಪ್ರತಿಜ್ಞಾ ತಾವತ್ - “ಉತ ತಮಾದೇಶಮಪ್ರಾಕ್ಕೂ ಯೇನಾ ಶ್ರುತಂ ಶ್ರುತಂ ಭವತ್ಯಮತಂ ಮತಮವಿಜ್ಞಾತ ವಿಜ್ಞಾತಂ’ (ಛಾಂ. ೬-೧-೩) ಇತಿ | ತತ್ರ ಚ ಏಕೇನ ವಿಜ್ಞಾನೇನ ಸರ್ವಮನ್ಯತ್ ಅವಿಜ್ಞಾತಮಪಿ ವಿಜ್ಞಾತಂ ಭವತಿ ಇತಿ ಪ್ರತೀಯತೇ | ತಚ್ಚ ಉಪಾದಾನಕಾರಣವಿಜ್ಞಾನೇ ಸರ್ವವಿಜ್ಞಾನಂ ಸಂಭವತಿ | ಉಪಾದಾನಕಾರಣಾವ್ಯತಿರೇಕಾತ್ ಕಾರ್ಯಸ್ಯ | ನಿಮಿತ್ತಕಾರಣಾವ್ಯತಿರೇಕಸ್ತು ಕಾರ್ಯಸ್ಯ ನಾಸ್ತಿ ! ಲೋಕೇ ತಕ್ಷಃ ಪ್ರಾಸಾದವ್ಯತಿರೇಕದರ್ಶನಾತ್ | ದೃಷ್ಟಾನ್ನೋSಪಿ “ಯಥಾ ಸೋಮ್ಯಕೇನ ಮೃಣ್ಣೆನ ಸರ್ವಂ ಮೃನ್ಮಯಂ ವಿಜ್ಞಾತಃ ಸ್ಯಾದ್

  1. ಪೂರ್ವಪಕ್ಷಿಯು ಲೋಕದಲ್ಲಿ ಕಂಡಿರುವದರ ಬಲದಿಂದ ಜಗತ್ಕಾರಣಸ್ವರೂಪವನ್ನು ತರ್ಕಿಸುತ್ತಿದ್ದಾನೆಂಬುದನ್ನು ಲಕ್ಷಿಸಬೇಕು.

  2. ಪ್ರಧಾನವನ್ನು ಎಂದರ್ಥ. ಅಣ್ಣಾದಿಕಾರಣವಾದಿಗಳೂ ಈ ಯುಕ್ತಿಗಳನ್ನು ತಮ್ಮ ಮತಕ್ಕೆ ಉಪಯೋಗಿಸಿಕೊಳ್ಳಬಹುದಾದರೂ ಪ್ರಧಾನಕ್ಕೆ ಇರುವಷ್ಟು ಒಲವು ಅವರ ವಾದಕ್ಕೆ ಇರುವದಿಲ್ಲವೆಂಬುದು ಮುಂದ ಗೊತ್ತಾಗುವದು.

  3. ಬ್ರಹ್ಮವು ಉಪಾದಾನವೆಂದು ಶ್ರುತಿಯಲ್ಲಿ ಹೇಳಿಲ್ಲ ; ಅದು ಉಪಾದಾನವಾಗಲು ತಕ್ಕದ್ದೂ ಅಲ್ಲ. ಬ್ರಹ್ಮವು ಬರಿಯ ನಿಮಿತ್ತವೇ ಎಂದಾದರೆ ಪ್ರಧಾನಾದಿಗಳೇ ಉಪಾದಾನವೆಂಬ ವಾದಕ್ಕೆ ಅವಕಾಶವು ದೊರಯುತ್ತದೆ. ಆಗ ಜಗಜ್ಜನ್ಮಾದಿಕಾರಣತ್ವರೂಪವಾದ ಲಕ್ಷಣವಾಗಲಿ ಗತಿಸಾಮಾನ್ಯವಾಗಿ ಬ್ರಹ್ಮಕ್ಕೆ ಹೊಂದುವದಿಲ್ಲ ಎಂಬುದು ಪೂರ್ವಪಕ್ಷಕ್ಕೆ ಪ್ರಯೋಜನವು.

೬೩೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ವಾಚಾರಮೃಣಂ ವಿಕಾರೋ ನಾಮಧೇಯಂ ಮೃತ್ತಿಕೇವ ಸತ್ಯಮ್’ (ಛಾಂ. ೬-೧ ೪) ಇತಿ ಉಪಾದಾನಕಾರಣಗೋಚರ ಏವ ಆಮ್ಮಾಯತೇ | ತಥಾ “ಏಕೇನ ಲೋಹಮಣಿನಾ ಸರ್ವಂ ಲೋಹಮಯಂ ವಿಜ್ಞಾತಂ ಸ್ಯಾತ್ |’’ (ಛಾಂ. ೬-೧-೫), “ಏಕೇನ ನಖನಿಕೃನ್ಮನೇನ ಸರ್ವಂ ಕಾರ್ಷ್ಠಾಯಸಂ ವಿಜ್ಞಾತಂ ಸ್ಯಾತ್’’ (ಛಾಂ. ೬-೧-೬) ಇತಿ ಚ | ತಥಾ ಅನ್ಯತ್ರಾಪಿ ‘‘ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ’ (ಮುಂ. ೧-೧-೩) ಇತಿ ಪ್ರತಿಜ್ಞಾ | “ಯಥಾ ಪೃಥಿ ವ್ಯಾಮೋಷಧಯಃ ಸಂಭವ’ (ಮುಂ. ೧-೧-೭) ಇತಿ ದೃಷ್ಟಾನ್ನ: ತಥಾ “ಆತ್ಮನಿ ಖಲ್ವರೇ ದೃಷ್ಟೇ ಶ್ರುತೇ ಮತೇ ವಿಜ್ಞಾತ ಇದಂ ಸರ್ವಂ ವಿದಿತಮ್’’ (ಬೃ. ೪-೫-೬) ಇತಿ ಪ್ರತಿಜ್ಞಾ | ಸ ಯಥಾ ದುನ್ನು ಭೇರ್ಪಮಾನಸ್ಯ ನ ಬಾಹ್ಯಾಬ್ದಾಣ್ಮಕ್ಕು ಯಾದ್ ಗ್ರಹಣಾಯ ದುನ್ನು ಭೇಸ್ತು ಗ್ರಹಣೇನ ದುನ್ನು ಭ್ಯಾಘಾತಸ್ಯ ವಾ ಶಬ್ದ ಗೃಹೀತಃ’ (ಬೃ. ೪-೫-೮) ಇತಿ ದೃಷ್ಟಾನ್ನ: | ಏವಂ ಯಥಾಸಂಭವಂ ಪ್ರತಿವೇದಾನ್ತಂ ಪ್ರತಿಜ್ಞಾದೃಷ್ಟಾನ್‌ ಪ್ರಕೃತಿತ್ವಸಾಧನೆ ಪ್ರತ್ಯೇತಾ | ಯತಃ ಇತೀಯಂ ಪಞ್ಚಮೀ “ಯತೋ ವಾ ಇಮಾನಿ ಭೂತಾನಿ ಜಾಯನ್ನ’ (ತೈ. ೩-೧) ಇತ್ಯತ್ರ “ಜನಿಕರ್ತು: ಪ್ರಕೃತಿಃ” (ಪಾ. ಸೂ. ೧-೪-೩೦) ಇತಿ ವಿಶೇಷಸ್ಮರಣಾತ್ ಪ್ರಕೃತಿಲಕ್ಷಣ ವಿವ ಅಪಾದಾನೇ ದ್ರಷ್ಟವ್ಯಾ | ನಿಮಿತ್ತಂ ತು ಅಧಿಷ್ಠಾತ್ರಸ್ತರಾಭಾವಾತ್ ಅಧಿಗನ್ನ ವ್ಯಮ್ | ಯಥಾ ಹಿ ಲೋಕೇ ಮೃತ್ತುವರ್ಣಾದಿಕಮ್ ಉಪಾದಾನಕಾರಣಂ ಕುಲಾಲ ಸುವರ್ಣಕಾರಾದೀನ್ ಅಧಿಷ್ಠಾತೃನ್ ಅಪೇಕ್ಷ ಪ್ರವರ್ತತೇ ನೈವಂ ಬ್ರಹ್ಮಣಃ ಉಪಾ ದಾನಕಾರಣಸ್ಯ ಸತೋsನ್ಯ: ಅಧಿಷ್ಠಾತಾ ಅಪೇಕ್ಟೋಸ್ತಿ | ಪ್ರಾಗುತ್ಪತ್ತೇ ‘ಏಕಮೇವಾದ್ವಿತೀಯಮ್’ ಇತ್ಯವಧಾರಣಾತ್ ! ಅಧಿಷ್ಠಾತ್ರಸ್ತರಾಭಾವೋಪಿ ಪ್ರತಿಜ್ಞಾದೃಷ್ಟಾನಾನುಪರೋಧಾದೇವ ಉದಿತೋ ವೇದಿತವ್ಯ: | ಅಧಿಷ್ಕಾತರಿ ಹಿ ಉಪಾದಾನಾತ್‌ ಅನ್ಯಸ್ಮಿನ್ ಅಭ್ಯುಪಗಮ್ಯಮಾನೇ ಪುನರಪಿ ಏಕವಿಜ್ಞಾನೇನ ಸರ್ವವಿಜ್ಞಾನಸ್ಯ ಅಸಂಭವಾತ್ ಪ್ರತಿಜ್ಞಾದೃಷ್ಟಾನ್ಲೋಪರೋಧ ಏವ ಸ್ಯಾತ್ | ತಸ್ಮಾತ್ ಅಧಿಷ್ಠಾತ್ರರಾಭಾವಾತ್ ಆತ್ಮನಃ ಕರ್ತತ್ವಮ್ ಉಪಾದಾನಾನ್ತರಾ ಭಾವಾಚ್ಚ ಪ್ರಕೃತಿತ್ವಮ್ ||

(ಭಾಷ್ಯಾರ್ಥ) ಹೀಗಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳುತ್ತೇವೆ. ಬ್ರಹ್ಮವು ಪ್ರಕೃತಿಯೂ ಎಂದರೆ ಉಪಾದಾನಕಾರಣವೂ ನಿಮಿತ್ತಕಾರಣವೂ (ಆಗಿದ ಎಂದು) ಒಪ್ಪಬೇಕು, ಬರಿಯ ನಿಮಿತ್ತಕಾರಣವೇ ಅಲ್ಲ. ಏಕ ? ಎಂದರೆ ಪ್ರತಿಜ್ಞಾ ದೃಷ್ಟಾಂತಗಳಿಗೆ ಅವಿರೋಧಕ್ಕಾಗಿ. (ಇದರ ವಿವರ) : ಹೀಗಾದರೆ ಶ್ರುತಿಯಲ್ಲಿರುವ

ಅಧಿ. ೭. ಸೂ. ೨೩] ಬ್ರಹ್ಮವು ಜಗತ್ತಿಗೆ ಉಪಾದಾನವೂ ನಿಮಿತ್ತವೂ ಆಗಿದೆ ೬೩೯ ಪ್ರತಿಜ್ಞಾ ದೃಷ್ಟಾಂತಗಳು ವಿರುದ್ಧವಾಗುವದಿಲ್ಲ. (ಹೇಗಂದರೆ) : ಮೊದಲನೆಯದಾಗಿ “ಯಾವದರಿಂದ ಅಶ್ರುತವಾದದ್ದು ಶ್ರುತವೂ, ಅಮತವಾದದ್ದು ಮತವೂ, ಅವಿಜ್ಞಾತವಾದದ್ದು ವಿಜ್ಞಾತವೂ ಆಗುತ್ತದೆಯೋ ಆ ಆದೇಶವನ್ನು ಕೇಳಿದೆಯೊ ?’’ (ಛಾಂ. ೬-೧-೩) ಎಂದು ಪ್ರತಿಜ್ಞೆ. ಅಲ್ಲಿ ಒಂದನ್ನು ಅರಿತುಕೊಂಡರೆ ಅರಿತುಕೊಳ್ಳದ ಇರುವ ಮಿಕ್ಕದ್ದಲ್ಲವೂ ಅರಿತದ್ದಾಗುತ್ತದೆ ಎಂದು ತೋರುತ್ತದೆ. ಮತ್ತು ಈ ಎಲ್ಲದರ ವಿಜ್ಞಾನವೆಂಬುದು ಉಪಾದಾನಕಾರಣವನ್ನು ಅರಿತುಕೊಂಡರೆ ಆಗುತ್ತದೆ ; ಏಕೆಂದರೆ ಕಾರ್ಯವು ಉಪಾದಾನಕಾರಣಕ್ಕಿಂತ ಅಭಿನ್ನವಾಗಿರುತ್ತದೆ. ಆದರೆ ಕಾರ್ಯವು ನಿಮಿತ್ತಕಾರಣಕ್ಕಿಂತ ಬೇರೆಯಿಲ್ಲವೆಂಬುದಿಲ್ಲ ; ಏಕೆಂದರೆ ಲೋಕದಲ್ಲಿ ಬಡಗಿಗಿಂತ ಉಪ್ಪರಿಗೆಯ ಮನೆಯು ಬೇರೆಯಾಗಿರುವದು ಕಂಡುಬರುತ್ತದೆ. ದೃಷ್ಟಾಂತವೂ “ಸೋಮ್ಯನ, ಹೇಗೆ ಒಂದು ಮಣ್ಣಿನ ಮುದ್ದೆಯಿಂದ ಮಣ್ಣಿನಿಂದಾದದ್ದಲ್ಲವೂ ಅರಿತದ್ದಾಗುತ್ತದೆಯೋ, ಕಾರ್ಯವೆಂಬುದು ಮಾತಿನಿಂದಾಗಿರುವ ಹೆಸರು ಮಾತ್ರವೋ, ಮಣ್ಣೆಂಬುದೇ ಸತ್ಯವೋ’’ (ಛಾಂ. ೬-೧-೪) ಎಂದೂ ‘ಒಂದು ಚಿನ್ನದ ಗಟ್ಟಿಯಿಂದ ಚಿನ್ನದಿಂದಾದದ್ದಲ್ಲವೂ (ಹೇಗೆ) ಅರಿತದ್ದಾಗುವದೋ” (ಛಾಂ. ೬-೧-೫) ಎಂದೂ “ಒಂದು ಉಗುರುಕತ್ತಿಯಿಂದ ಕಬ್ಬಿಣದಿಂದಾಗಿರುವದೆಲ್ಲವೂ ಅರಿತದ್ದಾಗುವದೂ’’ (ಛಾಂ. ೬-೧-೬) ಎಂದೂ ಉಪಾದಾನಕಾರಣವಿಷಯದಲ್ಲಿಯೇ ಪರಿತವಾಗಿರುತ್ತದೆ. ಇದರಂತ ಮತ್ತೊಂದು (ಶ್ರುತಿ)ಯಲ್ಲಿಯೂ “ಪೂಜ್ಯನೆ, ಯಾವದನ್ನು ಅರಿತು ಕೊಂಡರೆ ಇದೆಲ್ಲವನ್ನೂ ಅರಿತುಕೊಂಡಂತಾಗುವದು ?’’ (ಮುಂ. ೧-೧-೩) ಎಂದು ಪ್ರತಿಜ್ಞೆ. ಭೂಮಿಯಲ್ಲಿ ಹೇಗೆ ಮರಗಿಡಗಳು ಉಂಟಾಗುವವೋ’’ (ಮುಂ. ೧-೧ ೭) ಎಂದು ದೃಷ್ಟಾಂತ. ಹಾಗೂ “ಎಲೆ, ಆತ್ಮನನ್ನು ಕಂಡುಕೊಂಡರೆ, ಮನನ ಮಾಡಿದರೆ, ಅರಿತುಕೊಂಡರೆ ಇದೆಲ್ಲವನ್ನೂ ಅರಿತಂತ’ (ಬೃ. ೪-೫-೬) ಎಂದು ಪ್ರತಿಜ್ಞೆ. “ಅದು ಹೇಗೆಂದರೆ ದುಂದುಭಿಯನ್ನು ಹೊಡೆಯುತ್ತಿರುವಾಗ ಹೊರಗಿನ ಶಬ್ದಗಳನ್ನು ಗ್ರಹಿಸುವದಕ್ಕೆ ಆಗುವದಿಲ್ಲ. ಆದರೆ ದುಂದುಭಿಯನ್ನು ಹೊಡೆಯುವದ ರಿಂದಾದ (ಶಬ್ದ ಸಾಮಾನ್ಯವನ್ನು ಗ್ರಹಿಸಿ) ದುಂದುಭಿ (ಶಬ್ದ ಸಾಮಾನ್ಯದ ವಿಶೇಷ ಗಳೆಂದು) ಗ್ರಹಿಸಿದರೆ (ಆ) ಶಬ್ದವನ್ನು ಗ್ರಹಿಸಿದಂತಾಗುವದು.” (ಬೃ. ೪-೫-೮) ಎಂದು ದೃಷ್ಟಾಂತ. ಹೀಗೆ (ಅಲ್ಲಲ್ಲಿಗ) ತಕ್ಕಂತೆ ಪ್ರತಿಯೊಂದು ಉಪನಿಷತ್ತಿನಲ್ಲಿಯೂ ಪ್ರತಿಜ್ಞಾದೃಷ್ಟಾಂತಗಳು (ಬ್ರಹ್ಮವು ಜಗತ್ತಿಗೆ) ಪ್ರಕೃತಿ ಎಂಬುದನ್ನು ಸಾಧಿಸಿ ಕೂಡುತ್ತವೆ ಎಂದು ತಿಳಿಯಬೇಕು.

  1. ಇದನ್ನು ಕಬ್ಬಿಣದ ತುಂಡಿಗೆ ಉಪಲಕ್ಷಣವಾಗಿ ಹೇಳಿದೆ. ಒಂದು ಉಗುರುಕತ್ತಿಯು ಕಬ್ಬಿಣದ್ದಂದು ತಿಳಿದರೆ ಕಬ್ಬಿಣದ ವಿಕಾರವಲ್ಲವನ್ನೂ ತಿಳಿದಂತ ಎಂದರ್ಥ.

೬೪೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

“ಯಾವದರಿಂದ ಈ ಭೂತಗಳು ಹುಟ್ಟುತ್ತವೆಯೋ’’ (ತೈ. ೩-೧) ಎಂಬಲ್ಲಿ ‘ಯಾವದರಿಂದ’ (ಯತಃ) ಎಂಬೀ ಪಂಚಮಿಯು ಪ್ರಕೃತಿರೂಪವಾದ ಅಪಾದಾನವನ್ನೇ ತಿಳಿಸುತ್ತದೆ ಎಂದರಿಯಬೇಕು. ಏಕೆಂದರೆ ‘‘ಜನಿಕರ್ತು: ಪ್ರಕೃತಿಃ” (ಪಾ. ಸೂ. ೧-೪ ೩೦) ಹುಟ್ಟುವ ವಸ್ತುವಿನ ಉಪಾದಾನಕಾರಣವು ಅಪಾದಾನವೆನಿಸುವದು ಎಂಬ ವಿಶೇಷಸ್ಕೃತಿಯಿದೆ.

(ಬ್ರಹ್ಮವು) ನಿಮಿತ್ತವೆಂಬುದನ್ನಾದರೂ ಮತ್ತೂಬ್ಬ ಅಧಿಷ್ಠಾತೃವಿಲ್ಲದ್ದರಿಂದ ಗೊತ್ತುಮಾಡಿಕೊಳ್ಳಬೇಕು. ಲೋಕದಲ್ಲಿ ಮಣ್ಣು, ಚಿನ್ನ - ಮುಂತಾದ ಉಪಾದಾನ ಕಾರಣವು ಹೇಗೆ ಕುಂಬಾರ, ಅಕ್ಕಸಾಲೆ - ಮೊದಲಾದ ಅಧಿಷ್ಠಾತೃಗಳನ್ನು ಬಯಸಿಯೇ ತೊಡಗುವ ಹಾಗೆ ಉಪಾದಾನಕಾರಣವಾಗಿರುವ ಬ್ರಹ್ಮಕ್ಕೆ ಮತ್ತೊಬ್ಬ ಅಧಿಷ್ಠಾತೃ ವನ್ನು ಬಯಸತಕ್ಕದ್ದು ಇರುವದಿಲ್ಲ. ಏಕೆಂದರೆ ಸೃಷ್ಟಿಗಿಂತ ಮುಂಚೆ (ಸತ್ತು) ಒಂದೇ ಅದ್ವಿತೀಯವಾಗಿರುತ್ತದೆ) ಎಂದು (ಶ್ರುತಿಯಲ್ಲಿ) ಒತ್ತಿ ಹೇಳಿರುತ್ತದೆ. ಮತ್ತೊಬ್ಬ ಅಧಿಷ್ಠಾತೃವು ಇರುವದಿಲ್ಲವೆಂಬುದೂ ಪ್ರತಿಜ್ಞಾ ದೃಷ್ಟಾಂತಗಳಿಗೆ ವಿರೋಧವಿಲ್ಲದಿರು ವದಕ್ಕಾಗಿಯೇ (ಎಂದು) ಹೇಳಿದಂತಾಯಿತಂದು ತಿಳಿಯಬೇಕು. ಹೇಗಂದರೆ ಉಪಾದಾನಕ್ಕಿಂತಲೂ ಬೇರೆಯಾಗಿ ಅಧಿಷ್ಠಾತೃವನ್ನು ಒಪ್ಪಿದರೆ ಒಂದನ್ನರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತಾಗುವದು ಆಗುವಹಾಗಿಲ್ಲವಾದ್ದರಿಂದ ಪ್ರತಿಜ್ಞಾ ದೃಷ್ಟಾಂತಗಳಿಗೆ ಮತ್ತೂ ವಿರೋಧವೇ ಆಗಿಬಿಟ್ಟಿತು. ಆದ್ದರಿಂದ (ತನಗೆ) ಮತ್ತೊಬ್ಬ ಅಧಿಷ್ಠಾತೃವಿಲ್ಲದ್ದರಿಂದ ಆತ್ಮನು ಜಗತ್ತಿಗೆ ಕರ್ತವು, ಮತ್ತೊಂದು ಉಪಾದಾನ ವಿಲ್ಲದ್ದರಿಂದ ಪ್ರಕೃತಿಯು.

ಅಭಿದ್ಯೋಪದೇಶಾಚ್ಚ ||೨೪|| - ೨೪, ಯೋಚನೆಯನ್ನು ಉಪದೇಶಿಸಿರುವದರಿಂದಲೂ (ಬ್ರಹ್ಮವು ಪ್ರಕೃತಿ).

ಬ್ರಹ್ಮವು ಉಪಾದಾನಕಾರಣವೆಂಬುದಕ್ಕೆ ಕಾರಣಾಂತರಗಳು

(ಭಾಷ್ಯ) ೩೯೨. ಕುತಶ್ಚ ಆತ್ಮನಃ ಕರ್ತತ್ವಪ್ರಕೃತಿ ? (ಅಭಿಧೋಪದೇಶಾಚ್ಚ) | 1. ಮೇಲಿದ್ದು ಅದನ್ನುಪಯೋಗಿಸುವ ಕರ್ತವಿಲ್ಲದ್ದರಿಂದ ಎಂದರ್ಥ.

  1. ಏಕೆಂದರೆ ಉಪಾದಾನದಿಂದ ಕಾರ್ಯವನ್ನು ಅರಿತರೂ ಅಧಿಷ್ಠಾತೃವನ್ನು ಅರಿತಂತೆ ಆಗದ ಹೂಗುವದು.

ಅಧಿ. ೭. ಸೂ. ೨೫] ಬ್ರಹ್ಮವು ಉಪಾದಾನಕಾರಣವೆಂಬುದಕ್ಕೆ ಕಾರಣಾಂತರಗಳು ೬೪೧

ಅಭಿಧೋಪದೇಶಶ್ಚ ಆತ್ಮನಃ ಕರ್ತೃತ್ವಪ್ರಕೃತಿ ಗಮಯತಿ ‘ಸೋಕಾಮಯತ | ಬಹು ಸ್ಯಾಂ ಪ್ರಜಾಯೇಯೇತಿ’ (ತೈ. ೨-೬) | ‘‘ತಕ್ಷತ ಬಹು ಸ್ಯಾಂ ಪ್ರಜಾ ಯೇಯೇತಿ’’ (ಛಾಂ. ೬-೨-೩) ಇತಿ ಚ | ತತ್ರ ಅಭಿಧ್ಯಾನಪೂರ್ವಿಕಾಯಾಃ ಸ್ವಾತ, ಪ್ರವೃತೇಃ ಕರ್ತಾ ಇತಿ ಗಮ್ಯತೇ | ‘ಬಹು ಸ್ಯಾಮ್’ ಇತಿ ಪ್ರತ್ಯಗಾತ್ಮವಿಷಯಾತ್ ಬಹುಭವನಾಭಿಧ್ಯಾನಸ್ಯ ಪ್ರಕೃತಿರಿತ್ಯಪಿ ಗಮ್ಯತೇ 11

(ಭಾಷ್ಯಾರ್ಥ) ಆತ್ಮನಿಗೆ ಕರ್ತತ್ವಪ್ರಕೃತಿತ್ವ (ಗಳೆರಡೂ ಉಂಟೆಂಬುದು) ಮತ್ತೂ ಏತರಿಂದ ? ಎಂದರೆ (ಅಭಿದ್ಯೋಪದೇಶದಿಂದ), ‘‘ಬಹುವಾಗುವನು ಉತ್ಪತ್ತಿಯಾಗುವೆನು - ಎಂದು ಅವನು ಇಚ್ಚಿಸಿದನು’ (ತೈ. ೨-೬) ಎಂದೂ “ಬಹುವಾಗುವನು, ಉತ್ಪತ್ತಿ ಯಾಗುವನು - ಎಂದು ಅದು ಯೋಚಿಸಿಕೊಂಡಿತು’ (ಛಾಂ, ೬-೨-೩) ಎಂದೂ ಯೋಚನೆಯನ್ನು ಉಪದೇಶಿಸಿರುವದರಿಂದ ಆತ್ಮನಿಗೆ ಕರ್ತತ್ವಪ್ರಕೃತಿತ್ವಗಳುಂಟೆಂದು ತಿಳಿಸುತ್ತದೆ. ಇಲ್ಲಿ ಯೋಚಿಸಿನೋಡುವದರ ಮೂಲಕ ಸ್ವತಂತ್ರವಾಗಿ ತೊಡಗಿದ್ದರಿಂದ ಕರ್ತವೆಂದು ಗೊತ್ತಾಗುತ್ತದೆ. ‘ಬಹುವಾಗುವನು’ ಎಂದು ಬಹುವಾಗುವ ಯೋಚನ ಯನ್ನು ಪ್ರತ್ಯಗಾತ್ಮನ ವಿಷಯದಲ್ಲಿ ಹೇಳಿರುವದರಿಂದ ಪ್ರಕೃತಿ ಎಂದು ಗೊತ್ತಾ ಗುತ್ತದೆ.

ಸಾಕ್ಷಾಟ್ಟೋಭಯಾಮ್ಲಾನಾತ್ ||೨೫|| ೨೫. ಸಾಕ್ಷಾತ್ತಾಗಿ ಎರಡನ್ನೂ ಹೇಳಿರುವದರಿಂದಲೂ (ಹೀಗೆ).

(ಭಾಷ್ಯ) ೩೯೩. ಪ್ರಕೃತಿತ್ವಸ್ಯ ಅಯಮ್ ಅಭ್ಯುಚ್ಚಯಃ | ಇತಶ್ಚ ಪ್ರಕೃತಿಬ್ರ್ರಹ್ಮ | ಯತ್ಕಾರಣಂ ಸಾಕ್ಷಾದ್ ಬ್ರಹ್ಮವ ಕಾರಣಮ್ ಉಪಾದಾಯ ಉಭೋ ಪ್ರಭವ ಪ್ರಲ ಆಮ್ಯಾಯೇತೇ - “ಸರ್ವಾಣಿ ಹ ವಾ ಇಮಾನಿ ಭೂತಾನಿ ಆಕಾಶಾದೇವ ಸಮುತ್ಸದ್ಯ | ಆಕಾಶಂ ಪ್ರತ್ಯಂ ಯನ್ನಿ” (ಛಾಂ. ೧-೯-೧) ಇತಿ | ಯದ್ ಹಿ ಯಸ್ಮಾತ್ ಪ್ರಭವತಿ, ಯಸ್ಮಿಂಶ್ಚ ಪ್ರಲೀಯತೇ ತತ್ ತಸ್ಯ ಉಪಾದಾನಂ ಪ್ರಸಿದ್ಧಮ್ | ಯಥಾ ಪ್ರೀಹಿಯವಾದೀನಾಂ ಪೃಥಿವೀ | ‘ಸಾಕ್ಷಾತ್‌’ ಇತಿ ಚ ಉಪಾದಾನಾನ್ತರಾನುಪಾದಾನಂ ದರ್ಶಯತಿ ‘ಆಕಾಶಾದೇವ’ ಇತಿ | ಪ್ರತ್ಯಸ್ತಮಯಶ್ಚ ನೋಪಾದಾನಾತ್‌ ಅನ್ಯತ್ರ ಕಾರ್ಯಸ್ಯ ದೃಷ್ಟ: ||

  1. ಇಲ್ಲಿ ಒಂದು ಇತಿಯು ಅಚ್ಚಿನ ಪುಸ್ತಕದಲ್ಲಿ ಬಿಟ್ಟುಹೋಗಿದೆ ಎಂದು ತೋರು ವದು.೬೪೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪. (ಭಾಷ್ಯಾರ್ಥ) ಪ್ರಕೃತಿ ಎಂಬುದಕ್ಕೆ ಇದು ಮತ್ತೊಂದು (ಕಾರಣವು) . ಈ (ಕಾರಣ)ದಿಂದಲೂ ಬ್ರಹ್ಮವು ಪ್ರಕೃತಿಯು ; ಏಕೆಂದರೆ ನೇರಾಗಿ ಬ್ರಹ್ಮವನ್ನೇ ಕಾರಣವೆಂದು ತೆಗೆದುಕೊಂಡು “ಈ ಭೂತಗಳಲ್ಲವೂ ಆಕಾಶದಿಂದಲೇ ಹುಟ್ಟುತ್ತವೆ ; ಆಕಾಶದಲ್ಲಿಯೇ ಪ್ರತ್ಯಸ್ತ ಮಯವಾಗುತ್ತವ’ (ಛಾಂ. ೧-೯-೧) ಎಂದು ಸೃಷ್ಟಿಪ್ರಲಯಗಳೆರಡನ್ನೂ ಹೇಳಿರು ಇದ. ಯಾವದು ಯಾವದರಿಂದ ಉಂಟಾಗುವದೋ, ಯಾವದರಲ್ಲಿ ಪ್ರಲಯವೂ ಆಗುವದೋ, ಅದು ಅದಕ್ಕೆ ಉಪಾದಾನವೆಂದು ಪ್ರಸಿದ್ಧವಾಗಿರುತ್ತದೆ. ಉದಾಹರಣೆಗೆ ಬತ್ತ, ಜವೆಗೋಧಿ - ಮುಂತಾದವುಗಳಿಗೆ ಪೃಥಿವಿಯು (ಉಪಾದಾನವು, ಸೂತ್ರದಲ್ಲಿ) ‘ಸಾಕ್ಷಾತ್ತಾಗಿ’ ಎಂದು (ಹೇಳಿರುವದು) ‘ಆಕಾಶದಿಂದಲೇ’ (ಎಂದು) ಮತ್ತೂಂದು ಉಪಾದಾನವನ್ನು ತಗೆದುಕೊಂಡಿಲ್ಲವೆಂಬುದನ್ನು ತಿಳಿಸುತ್ತದೆ. ಪ್ರತ್ಯಸ್ತಮಯ ವೆಂಬುದೂ ಉಪಾದಾನವನ್ನು ಬಿಟ್ಟರೆ ಮತ್ತೇತರಲ್ಲಿಯೂ ಕಾರ್ಯಕ್ಕೆ (ಆಗುವದು) ಕಂಡಿಲ್ಲ.

ಆತ್ಮಕೃತೇಃ ಪರಿಣಾಮಾತ್ ||೨೬|| ೨೬. ಪರಿಣಾಮದಿಂದ (ಬ್ರಹ್ಮವು) ತನ್ನನ್ನು ತಾನೇ ಮಾಡಿಕೊಂಡಿ ತೆಂಬುದರಿಂದ (ಅದು ಪ್ರಕೃತಿಯು).

(ಭಾಷ್ಯ) ೩೯೪, ಇತಶ್ಚ ಪ್ರಕೃತಿಬ್ರ್ರಹ್ಮ | ಯತ್ಕಾರಣಂ ಬ್ರಹ್ಮಪ್ರಕ್ರಿಯಾಯಾಂ “ತದಾತ್ಮಾನಂ ಸ್ವಯಮಕುರುತ’ (ತೈ. ೨-೭) ಇತಿ ಆತ್ಮನಃ ಕರ್ಮತ್ವಂ ಕರ್ತತ್ವಂ ಚ ದರ್ಶಯತಿ | ‘ಆತ್ಮಾನಮ್’ ಇತಿ ಕರ್ಮತ್ವಮ್ ‘ಸ್ವಯಮಕುರುತ’ ಇತಿ ಕರ್ತತ್ವಮ್ | ಕಥಂ ಪುನಃ ಪೂರ್ವಸಿದ್ಧಸ್ಯ ಸತಃ ಕರ್ತತ್ವನ ವ್ಯವಸ್ಥಿತಸ್ಯ ಕ್ರಿಯಮಾಣತ್ವಂ ಶಕ್ಯಂ ಸಂಪಾದಯಿತುಮ್ ? ‘ಪರಿಣಾಮಾತ್’ ಇತಿ ಬ್ಯೂಮಃ | ಪೂರ್ವಸಿದ್ಧೋಪಿ ಹಿ ಸನ್ ಆತ್ಮಾ ವಿಶೇಷಣ ವಿಕಾರಾತ್ಮನಾ ಪರಿಣಮಯಾಮಾಸ ಆತ್ಮಾನಮ್ ಇತಿ | ವಿಕಾರಾತ್ಮನಾ ಚ ಪರಿಣಾಮೋ ಮೃದಾದ್ಯಾಸು ಪ್ರಕೃತಿಷು ಉಪಲಬ್ದಃ | ‘ಸ್ವಯಮ್’ ಇತಿ ಚ ವಿಶೇಷಣಾತ್ ನಿಮಿತ್ತಾವರಾನಪೇಕ್ಷತ್ವಮಪಿ ಪ್ರತೀಯತೇ | ‘ಪರಿಣಾಮಾತ್’ ಇತಿ ವಾ ಪೃಥಕ್ಕೂತ್ರಮ್ | ತಸ್ಯ ಏಷ್ರ್ಥಃ | ಇತಶ್ಚ ಪ್ರಕೃತಿಬ್ರ್ರಹ್ಮ | ಯತ್ಕಾರಣಂ ಬ್ರಹ್ಮಣ ಏವ ವಿಕಾರಾತ್ಮನಾ ಪರಿಣಾಮಃ

  1. ಪ್ರಲಯವಾಗುತ್ತದೆ.

ಅಧಿ. ೭. ಸೂ. ೨೭] ಬ್ರಹ್ಮವು ಉಪಾದಾನಕಾರಣವೆಂಬುದಕ್ಕೆ ಕಾರಣಾಂತರಗಳು ೬೪೩ ಸಾಮಾನಾಧಿಕರಣೇನ ಆಮ್ಯಾಯತೇ - “ಸಚ್ಚ ತಚ್ಛಾಭವತ್ | ನಿರುಕ್ಕಂ ಚಾನಿರುಕ್ಕಂ ಚ’ (ತೈ. ೨-೬) ಇತ್ಯಾದಿನಾ ಇತಿ ||

(ಭಾಷ್ಯಾರ್ಥ) ಈ ಕಾರಣದಿಂದಲೂ ಬ್ರಹ್ಮವು ಪ್ರಕೃತಿಯು, ಏಕೆಂದರೆ ಬ್ರಹ್ಮಪ್ರಕ್ರಿಯೆಯಲ್ಲಿ “ಅದು ತನ್ನನ್ನು ತಾನೇ ಮಾಡಿಕೊಂಡಿತು’ (ತೈ. ೨-೭) ಎಂದು ಆತ್ಮನಿಗ ಕರ್ಮತ್ವವನ್ನೂ ಕರ್ತತ್ವವನ್ನೂ (ಶ್ರುತಿಯಲ್ಲಿ) ತಿಳಿಸಿದೆ. ‘ತನ್ನನ್ನು’ ಎಂದು ಕರ್ಮತ್ವವನ್ನೂ ‘ತಾನೇ ಮಾಡಿಕೊಂಡಿತು’ ಎಂದು ಕರ್ತತ್ವವನ್ನೂ (ತಿಳಿಸಿದ).

(ಆಕ್ಷೇಪ) :- ಮೊದಲೇ ಇದ್ದುಕೊಂಡಿರುವ ಕರ್ತವೆಂದು ಗೊತ್ತಾಗಿರುವ (ಬ್ರಹ್ಮಕ್ಕೆ) ಮಾಡಲ್ಪಡುವದೆಂಬುದನ್ನು ಉಂಟುಮಾಡುವದಕ್ಕೆ ಹೇಗೆ ತಾನ ಶಕ್ಯ ?

(ಪರಿಹಾರ) :- ಪರಿಣಾಮದಿಂದ ಎಂದು ಹೇಳುತ್ತೇವೆ. ಆತ್ಮನು ಮೊದಲೇ ಸಿದ್ಧನಾಗಿರುವನಾದರೂ ವಿಶೇಷವಾದ ಕಾರ್ಯರೂಪದಿಂದ ತನ್ನನ್ನು (ತಾನು) ಮಾರ್ಪಡಿಸಿಕೊಂಡನು. ಆದ್ದರಿಂದ (ಇದು ಸಾಧ್ಯವು). ಕಾರ್ಯರೂಪದಿಂದ ಪರಿಣಾಮವಾಗುವದು ಮಣ್ಣು ಮುಂತಾದ ಪ್ರಕೃತಿಗಳಲ್ಲಿ ಕಂಡಿರುತ್ತದ. ‘ತಾನೇ’ (ಮಾಡಿಕೊಂಡಿತು) ಎಂಬ ವಿಶೇಷಣವಿರುವದರಿಂದ ಮತ್ತೊಂದು ನಿಮಿತ್ತವು ಬೇಕಿಲ್ಲವೆಂದೂ ಗೊತ್ತಾಗುತ್ತದೆ.

ಅಥವಾ ‘ಪರಿಣಾಮಾತ್’ ಎಂಬುದು ಬೇರೊಂದು ಸೂತ್ರವು. ಅದಕ್ಕೆ ಇದು ಅರ್ಥವು ; ಈ ಕಾರಣದಿಂದಲೂ ಬ್ರಹ್ಮವು ಪ್ರಕೃತಿಯು ; ಏಕೆಂದರೆ ಬ್ರಹ್ಮ ಕಾರ್ಯರೂಪದಿಂದ ಪರಿಣಾಮವು ಸಾಮಾನಾಧಿಕರಣ್ಯದಿಂದ “ಸತ್ತೂ ತ್ಯತ್ತೂ ಆಯಿತು, ನಿರುಕ್ತವೂ ಅನಿರುಕ್ತವೂ (ಆಯಿತು)’ (ತ್ಯ. ೨-೬) ಎಂದು ಮುಂತಾದ (ವಾಕ್ಯ)ದಿಂದ ಪಠಿತವಾಗಿರುತ್ತದೆ.

ಯೋನಿಶ್ಚ ಹಿ ಗೀಯತೇ ||೨೭|| ೨೭. ಯೋನಿಯೆಂದೂ ಹೇಳಲ್ಪಡುತ್ತದೆ.

(ಭಾಷ್ಯ) ೩೯೫. ಇತಶ್ಚ ಪ್ರಕೃತಿಬ್ರ್ರಹ್ಮ | ಯತ್ಕಾರಣಂ ಬ್ರಹ್ಮ ಯೋನಿರಿತ್ಯಪಿ ಪಠ್ಯತೇ ವೇದಾನ್ತೇಷು ‘ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್’ (ಮುಂ. ೩-೧-೩) ಇತಿ, ‘ಯದ್ರೂತಯೋನಿಂ ಪರಿಪಶ್ಯನಿ ಧೀರಾಃ’ (ಮುಂ. ೧-೧-೬) ಇತಿ ಚ | ಯೋನಿಶಬ್ದಶ್ಚ ಪ್ರಕೃತಿವಚನಃ ಸಮಧಿಗತೋ ಲೋಕೇ ‘ಪೃಥಿವೀ ಯೋನಿರೋಷಧಿ

೬೪೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ವನಸ್ಪತೀನಾಮ್’ (?) ಇತಿ | ಸ್ತ್ರೀಯೋನೇರಪಿ ಅವ ಅವಯವದ್ವಾರೇಣ ಗರ್ಭ೦ ಪ್ರತಿ ಉಪಾದಾನಕಾರಣತ್ವಮ್ | ಕ್ವಚಿತ್ ಸ್ಥಾನವಚನೋಪಿ ಯೋನಿಶಬ್ದ ದೃಷ್ಟಃ - “ಯೋನಿಷ್ಟ ಇನ್ನ ನಿಷದೇ ಅಕಾರಿ” (ಋ. ಸಂ. ೧-೧೦೪-೧) ಇತಿ | ವಾಕ್ಯಶೇಷಾತ್ ತು ಅತ್ರ ಪ್ರಕೃತಿವಚನತಾ ಪರಿಗೃಹ್ಮತೇ ‘ಯಥೋರ್ಣನಾಭಿಃ ಸೃಜತೇ ಗೃಹ್ಮತೇ ಚ’ (ಮುಂ. ೧-೧-೭) ಇತ್ಯವಂಜಾತೀಯಕಾತ್ 1 ತದೇವಂ ಪ್ರಕೃತಿತ್ವಂ ಬ್ರಹ್ಮಣಃ ಪ್ರಸಿದ್ಧಮ್ ||

(ಭಾಷ್ಯಾರ್ಥ) | ಈ (ಕಾರಣ)ದಿಂದಲೂ ಬ್ರಹ್ಮವು ಪ್ರಕೃತಿಯು ; ಏಕೆಂದರೆ “ಕರ್ತವಾದ ಈಶನಾದ ಬ್ರಹ್ಮಯೋನಿ(ಯಾದ ಪುರುಷನನ್ನು )” (ಮುಂ. ೩-೧-೩) ಎಂದೂ “ಈ ಭೂತಯೋನಿಯನ್ನು ಧೀರರು ಎಲ್ಲೆಲ್ಲಿಯೂ ಕಾಣುತ್ತಾರೆ. (ಮು. ೧-೧-೬) ಎಂದೂ ವೇದಾಂತಗಳಲ್ಲಿ ಬ್ರಹ್ಮವು ಯೋನಿಯಂದು ಕೂಡ ಪಠಿತವಾಗಿರುತ್ತದೆ. ‘ಪೃಥಿವಿಯು ಗಿಡಮರಗಳಿಗೆ ಯೋನಿಯು’ (?) ಎಂದು ಲೋಕದಲ್ಲಿ ಯೋನಿ ಶಬ್ದವನ್ನು ಪ್ರಕೃತಿವಚನವಾಗಿ (ಪ್ರಯೋಗಿಸುವದು) ತಿಳಿದುಬಂದಿರುತ್ತದೆ. ಸ್ತ್ರೀ ಯೋನಿಯೂ ಅವಯವಗಳ ದ್ವಾರದಿಂದ ಗರ್ಭಕ್ಕೆ ಉಪಾದಾನಕಾರಣವಾಗಿರುತ್ತದೆ. ಒಂದು ಕಡೆಯಲ್ಲಿ ಇಂದ್ರನ; ನಿನಗೆ ಕೂತುಕೊಳ್ಳುವದಕ್ಕೆ ಯೋನಿಯು ಮಾಡ ಲ್ಪಟ್ಟಿರುತ್ತದೆ’ (ಋ. ಸಂ. ೧-೧೦೪-೧) ಎಂದು ಯೋನಿಶಬ್ದವು ಸ್ಥಾನವಾಚಕ ವಾಗಿರುವದೂಕಂಡಿರುತ್ತದೆ. ಆದರೆ ಇಲ್ಲಿ ಹೇಗೆ ಜೇಡರಹುಳವು ಸೃಷ್ಟಿಮಾಡುತ್ತಲೂ ಹಿಂತೆಗೆದುಕೊಳ್ಳುತ್ತಲೂ ಇರುವದೋ” (ಮುಂ. ೧-೧-೭) ಎಂಬೀ ಜಾತಿಯ ವಾಕ್ಯಶೇಷದಿಂದ (ಈ ಶಬ್ದವು) ಪ್ರಕೃತಿವಾಚಕವೆಂದು ಸ್ವೀಕರಿಸಬೇಕಾಗಿದೆ.

ಈ ರೀತಿಯಲ್ಲಿ ಬ್ರಹ್ಮವು ಪ್ರಕೃತಿಯಂದು ಸಿದ್ಧವಾಯಿತು.

ಈಕ್ಷಾಪೂರ್ವಕಕರ್ತತ್ವವಿದ್ದರೂ ಬರಿಯ ನಿಮಿತ್ತವಲ್ಲ

(ಭಾಷ್ಯ) ೩೯೬, ಯತ್ಸುನಃ ಇದಮುಕ್ತಮ್ ಈಕ್ಷಾಪೂರ್ವಕಂ ಕರ್ತತ್ವಂ ನಿಮಿತ್ತ ಕಾರಣೇಷ್ಟವ ಕುಲಾಲಾದಿಷು ಲೋಕೇ ದೃಷ್ಟಮ್, ನೋಪಾದಾನೇಷು ಇತ್ಯಾದಿ | ತತ್ ಪ್ರತ್ಯುಚ್ಯತೇ - ನ ಲೋಕವತ್ ಇಹ ಭವಿತವ್ಯಮ್ | ನ ಹಿ ಅಯಮ್ ಅನುಮಾನಗಮ್ಯರ್ಥಃ | ಶಬ್ದಗಮ್ಮತ್ವಾತ್ ತು ಅಸ್ಯಾರ್ಥಸ್ಯ ಯಥಾಶಬ್ದಮ್

  1. ಇಲ್ಲಿ ಯಾವ ವಾಕ್ಯವನ್ನಾದರೂ ಉದಾಹರಿಸಿದೆಯೋ ಇಲ್ಲವೋ ತಿಳಿಯದು.

ಅಧಿ. ೮. ಸೂ. ೨೮] ಅಣ್ಣಾದಿಕಾರಣವಾದಗಳಿಗೂ ಸಾಂಖ್ಯಖಂಡನೆಯು ಹೊಂದುತ್ತದ ೬೪೫ ಇಹ ಭವಿತವ್ಯಮ್ | ಶಬ್ದಶ್ಚ ಕ್ಷಿತುರೀಶ್ವರಸ್ಯ ಪ್ರಕೃತಿತ್ವಂ ಪ್ರತಿಪಾದಯತಿ ಇತ್ಯವೋಚಾಮ | ಪುನಶ್ಚ ಏತತ್ ಸರ್ವ೦ ವಿಸ್ತರೇಣ ಪ್ರತಿವಕ್ಷಾಮ: ||

(ಭಾಷ್ಯಾರ್ಥ) ಇನ್ನು ಈಕ್ಷಾಪೂರ್ವಕವಾಗಿರುವ ಕರ್ತತ್ವವು ನಿಮಿತ್ತಕಾರಣವಾಗಿರುವ ಕುಲಾಲಾದಿಗಳಲ್ಲಿಯೇ ಲೋಕದಲ್ಲಿ ಕಂಡಿದೆಯೇ ಹೊರತು ಉಪಾದಾನಗಳಲ್ಲಿ (ಕಂಡುಬರುವದಿಲ್ಲ ಎಂಬೀ (ಪೂರ್ವಪಕ್ಷವನ್ನು) ಹೇಳಿತ್ತಷ್ಟೆ, ಅದಕ್ಕೆ ಪ್ರತ್ಯುತ್ತರ ವನ್ನು ಹೇಳುತ್ತೇವೆ. ಇಲ್ಲಿ ಲೋಕದಲ್ಲಿರುವಂತೆಯೇ ಇರಬೇಕೆಂಬುದಿಲ್ಲ ; ಏಕೆಂದರೆ ಈ ಅರ್ಥವು ಅನುಮಾನಗಮ್ಯವಾದದ್ದಲ್ಲ. ಈ ಅರ್ಥವು ಶಬ್ದದಿಂದ ತಿಳಿಯಬೇಕಾದದ್ದರಿಂದ ಶಬ್ದಕ್ಕನುಗುಣವಾಗಿಯೇ ಇರಬೇಕು.” ಶಬ್ದವು ಈಕ್ಷಿತೃವಾದ ಈಶ್ವರನಿಗೆ ಪ್ರಕೃತಿತ್ವವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿರುತ್ತೇವೆ. ಮತ್ತೊಮ್ಮೆ ಇದೆಲ್ಲಕ್ಕೂ ವಿಸ್ತಾರವಾಗಿ ಪ್ರತ್ಯುತ್ತರವನ್ನು ಹೇಳುವೆವು.

೮. ಸರ್ವವ್ಯಾಖ್ಯಾನಾಧಿಕರಣ

(ಅಣ್ಣಾದಿಗಳೂ ಜಗತ್ಕಾರಣವಲ್ಲ) ಏತೇನ ಸರ್ವ ವ್ಯಾಖ್ಯಾತಾ ವ್ಯಾಖ್ಯಾತಾಃ ||೨೮|| ೨೮. ಇದರಿಂದ ಎಲ್ಲವೂ ವ್ಯಾಖ್ಯಾತವಾದವು, ವ್ಯಾಖ್ಯಾತವಾದವು. ಅಣ್ಯಾಧಿಕಾರಣವಾದಗಳಿಗೂ ಸಾಂಖ್ಯಖಂಡನೆಯು ಹೊಂದುತ್ತದೆ

(ಭಾಷ್ಯ) ೩೯೭. ‘ಈಕ್ಷತೇರ್ನಾಶಬ್ದಮ್’’ (೧-೧-೫) ಇತ್ಯಾರಭ್ಯ ಪ್ರಧಾನ ಕಾರಣವಾದಃ ಸೂತ್ರರೇವ ಪುನಃಪುನಃ ಆಶ ನಿರಾಕೃತಃ | ತಸ್ಯ ಹಿ ಪಕ್ಷಕ್ಕೆ

  1. ಅನುಮಾನಗಮ್ಯವಾದದ್ದಾದರೆ ದೃಷ್ಟಬಲದಿಂದ ಕಲ್ಪಿಸಿದ ವ್ಯಾಪ್ತಿಯ ಆಶ್ರಯ ದಿಂದಲೇ ಆನುಮತಿಯುಂಟಾಗುವದರಿಂದ ಅದಕ್ಕೆ ದೃಷ್ಟಾಂತವೇ ಮುಖ್ಯ.

  2. ಶಬ್ದದಿಂದಲೇ ತಿಳಿಯಬೇಕಾದದ್ದನ್ನು ತರ್ಕದಿಂದ ತಿಳಿಯುವದಕ್ಕಾಗುವದಿಲ್ಲ. ವೇದಾಂತವಾಕ್ಯವು ಅನುಭವಕ್ಕೆ ಅನುಗುಣವಾಗಿ ಹೇಳುವದನ್ನು ಯುಕ್ತಿಯಿಂದ ತಿರಸ್ಕರಿಸುವದು ಸರಿಯೂ ಅಲ್ಲ.

  3. ಪ್ರತಿಜ್ಞಾ ದೃಷ್ಟಾಂತಗಳು ಪ್ರಕೃತಿತ್ವಕ್ಕೆ ಅನುಗುಣವಾಗಿವೆ ಎಂದು ತಿಳಿಸಿದ್ಧಾಗಿದೆ. 4. ಮುಂದಿನ ಅಧ್ಯಾಯದಲ್ಲಿ.

೬೪೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಉಪೋದ್ಘಲಕಾನಿ ಕಾನಿಚಿತ್ ಲಿಜ್ಞಾ ಭಾಸಾನಿ ವೇದಾನ್ತೇಷು ಆಪಾತೇನ ಮನ್ನಮತೀನ್ ಪ್ರತಿಭಾನ್ತಿ ಇತಿ | ಸ ಚ ಕಾರ್ಯಕಾರಣಾನನ್ಯತಾಭ್ಯುಪರಮಾತ್ ಪ್ರತ್ಯಾಸ ವೇದಾನ್ಯವಾದಸ್ಯ | ದೇವಲಪ್ರಕೃತಿಭಿಶ್ಚ ಕೃಶ್ಚಿತ್ ಧರ್ಮಸೂತ್ರಕಾರೈಃ ಸ್ವಗ್ರಸ್ಟೇಷು ಆಶ್ರಿತಃ | ತೇನ ತತ್ತ್ವನಿಷೇಧೇ ಯತ್ಯೋತೀವ ಕೃತಃ ನಾಣ್ಣಾದಿಕಾರಣವಾದಪ್ರತಿ ಷೇಧ | ತೇSಪಿ ತು ಬ್ರಹ್ಮಕಾರಣವಾದವಕ್ಷಸ್ಯ ಪ್ರತಿಪಕ್ಷಾತ್ ಪ್ರತಿಷೇದ್ದವ್ಯಾಃ | ತೇಷಾಮಪಿ ಉಪೋದ್ಘಲಕಂ ವೈದಿಕಂ ಕಿಂಚಿಲ್ಲಿ ಜಮ್ ಆಪಾತೇನ ಮನ್ನಮತೀನ್ ಪ್ರತಿಭಾಯಾತ್ ಇತಿ | ಅತಃ ಪ್ರಧಾನಮಲ್ಲನಿಬರ್ಹಣನ್ಯಾಯೇನ ಅತಿಶತಿ | ಏತೇನ ಪ್ರಧಾನಕಾರಣವಾದಪ್ರತಿಷೇಧನ್ಯಾಯಕಲಾಪೇನ ಸರ್ವ ಅಣ್ಣಾದಿಕಾರಣವಾದಾ ಅಪಿ ಪ್ರತಿಷಿದ್ಧತಯಾ ವ್ಯಾಖ್ಯಾತಾ ವೇದಿತವ್ಯಾಃ | ತೇಷಾಮಪಿ ಪ್ರಧಾನವದಶಬ್ದತ್ವಾತ್ ಶಬ್ದವಿರೋಧಿತ್ವಾಚ್ಚ ಇತಿ | ‘ವ್ಯಾಖ್ಯಾತಾ ವ್ಯಾಖ್ಯಾರ್ತಾ’ ಇತಿ ಪದಾಭ್ಯಾಸಃ ಅಧ್ಯಾಯಪರಿಸಮಾಪ್ತಿಂ ದ್ಯೋತಯತಿ ||

(ಭಾಷ್ಯಾರ್ಥ) ‘ಈಕ್ಷತೇರ್ನಾಶಬ್ಬಮ್’ (೧-೧-೫) ಎಂಬ (ಸೂತ್ರ)ದಿಂದ ಹಿಡಿದು ಪ್ರಧಾನ ಕಾರಣವಾದವನ್ನು ಸೂತ್ರಗಳಿಂದಲೇ ಮತ್ತೆ ಮತ್ತೆ ಆಶಂಕಿಸಿ ನಿರಾಕರಿಸಿದ್ಧಾಗಿದೆ. ಏಕೆಂದರೆ ಆ ಪಕ್ಷಕ್ಕೆ ಬಲವನ್ನು ಕೊಡುವ ಕೆಲವು ಲಿಂಗಾಭಾಸಗಳು ವೇದಾಂತಗಳಲ್ಲಿ ತಟ್ಟನ ಅಲ್ಪಬುದ್ಧಿಯುಳ್ಳವರಿಗೆ ತೋರುತ್ತವೆ. ಆ (ಪ್ರಧಾನ)ವಾದವು ಕಾರ್ಯ ಕಾರಣಾನನ್ಯತ್ವವನ್ನು ಅಂಗೀಕರಿಸಿರುವ ವೇದಾಂತವಾದಕ್ಕೆ ಹತ್ತಿರವಾಗಿರುತ್ತದೆ.* ದೇವಲನೇ ಮುಂತಾದ ಧರ್ಮಸೂತ್ರಕಾರರು ತಮ್ಮ ಗ್ರಂಥಗಳಲ್ಲಿ ಇದನ್ನು ಆಶ್ರಯಿಸಿಯೂ (ಇರುತ್ತಾರೆ). ಆದ್ದರಿಂದ ಅದನ್ನು ಖಂಡಿಸುವದರಲ್ಲಿ ಹೆಚ್ಚಾದ

  1. ಸೂತ್ರಕಾರರು ಪ್ರಧಾನವಾದವನ್ನು ನೇರಾಗಿ ಖಂಡಿಸಿರುತ್ತಾರ ಬರಿಯ ಸೂಚನೆಯಿಂದ ವ್ಯಾಖ್ಯಾನಕಾರರಿಗೆ ಈ ಕೆಲಸವನ್ನು ಬಿಟ್ಟಿಲ್ಲ.

  2. ಅವುಗಳನ್ನು ಪರಿಹರಿಸದ ಇದ್ದರ ‘ಲಕ್ಷಣಸಮನ್ವಯಗಳು ಬ್ರಹ್ಮದಲ್ಲಿಯೇ’, ‘ಗತಿಸಾಮಾನ್ಯವಿದೆ’ ಎಂಬುದು ಸಿದ್ಧವಾಗುತ್ತಿರಲಿಲ್ಲ.

  3. ಪ್ರಧಾನವೆಂಬ ಕಾರಣವೇ ಮಹದಾದಿಕಾರ್ಯರೂಪವನ್ನು ಪಡೆಯುತ್ತದೆ ಎಂಬುದು ಸಾಂಖ್ಯರ ಕಾರ್ಯಕಾರಣಾನನ್ಯತ್ವವಾದವು. ವೇದಾಂತಿಗಳು ಕಾರ್ಯವು ಕಾರಣಕ್ಕಿಂತ ಬೇರೆ ಯಾಗಿಲ್ಲವೆನ್ನುತ್ತಾರ. ೨-೧-೧೪ರ ಭಾಷ್ಯವನ್ನು ನೋಡಿರಿ.

  4. ಸತ್ಕಾರ್ಯವಾದಕ್ಕೆ ಅನುಗುಣವಾಗಿರುವದರಿಂದ ವೇದಾಂತಕ್ಕೆ ಹತ್ತಿರವಾಗಿದೆ. 5. ದೇವಲಧರ್ಮಸೂತ್ರವು ಅಚ್ಚಾಗಿಲ್ಲ.

ಅಧಿ. ೮. ಸೂ. ೨೮] ಅಣ್ಣಾದಿಕಾರಣವಾದಗಳಿಗೂ ಸಾಂಖ್ಯಖಂಡನೆಯು ಹೊಂದುತ್ತದ ೬೪೭

ಯತ್ನವನ್ನು ಮಾಡಿದೆಯೇ ಹೊರತು ಅಣ್ಣಾದಿಕಾರಣವಾದಗಳನ್ನು ಖಂಡಿಸುವದರಲ್ಲಿ (ಪ್ರಯತ್ನವನ್ನು ಮಾಡಲಿಲ್ಲ.

ಆದರೆ ಬ್ರಹ್ಮಕಾರಣವಾದಕ್ಕೆ ಪ್ರತಿಪಕ್ಷಗಳಾಗಿರುವದರಿಂದ ಅವನ್ನೂ ಖಂಡಿಸ ಬೇಕು. ಏಕೆಂದರೆ ಅವಕ್ಕೂ ಬಲವನ್ನು ಕೊಡುವ ಯಾವದಾದರೂ ವೈದಿಕಲಿಂಗವು ತಟ್ಟನೆ ಅಲ್ಪಬುದ್ದಿಯವರಿಗೆ ತೋರಬಹುದು. ಆದ್ದರಿಂದ ಪ್ರಧಾನಮಲ್ಲ ನಿಬರ್ಹಣನ್ಯಾಯದಿಂದ ಅತಿವೇಶವನ್ನು ಮಾಡುತ್ತಾರೆ.

ಇದರಿಂದ ಎಂದರೆ ಪ್ರಧಾನಕಾರಣವನ್ನು ಖಂಡಿಸುವ ಯುಕ್ತಿಸಮೂಹದಿಂದ ಅಣ್ಣಾದಿಕಾರಣವಾದಗಳೆಲ್ಲವನ್ನೂ ಖಂಡಿಸಿದ್ಧೇವೆಂದು ಹೇಳಿದಂತಾಯಿತೆಂದು ತಿಳಿಯ ಬೇಕು. ಏಕೆಂದರೆ ಅವೂ ಪ್ರಧಾನವಾದದಂತೆ ಅಶಬ್ದವಾಗಿವೆ, ಶಬ್ದಕ್ಕೆ ವಿರೋಧಿಗಳೂ ಆಗಿವೆ. (ಸೂತ್ರದಲ್ಲಿ) ‘ವ್ಯಾಖ್ಯಾತಾ ವ್ಯಾಖ್ಯಾತಾಃ’ ಎಂದು (ವ್ಯಾಖ್ಯಾತಾಃ ಎಂಬ) ಪದವನ್ನು ಮತ್ತೆ ಹೇಳಿರುವದು ಅಧ್ಯಾಯಪರಿಸಮಾಪ್ತಿಯನ್ನು ತಿಳಿಸುತ್ತದೆ.

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯ

ಶ್ರೀಮಚ್ಛಂಕರಭಗವತ್ತೂಜ್ಯಪಾದಕೃತ್ ಶಾರೀರಕಮೀಮಾಂಸಾಭಾಷ್ಕ

ಪ್ರಥಮಾಧ್ಯಾಯಃ

1, ಅಣುಕಾರಣವಾದ, ಅಸದ್ವಾದ, ಸ್ವಭಾವವಾದ - ಮುಂತಾದವನ್ನು.

  1. ಮುಖ್ಯನಾದ ಜಟ್ಟಿಯನ್ನು ಗೆದ್ದರೆ ಅವನ ಶಿಷ್ಯರನ್ನೂ ಗೆದ್ದಂತೆಯೇ ಎಂಬ ನ್ಯಾಯದಿಂದ. ‘ಪ್ರಧಾನಮಲ್ಲ’ ಎಂಬ ಮಾತನ್ನು ಪ್ರಧಾನಕ್ಕಾಗಿ ಕಾದಾಡುವ ಸಾಂಖ್ಯವಾದಿ ಎಂದರ್ಥದಲ್ಲಿಯೂ ಶ್ಲೇಷೆಯಿಂದ ಪ್ರಯೋಗಿಸಿದ.

  2. ಹಿಂದಿನ ಯುಕ್ತಿಗಳನ್ನು ಅವಕ್ಕೂ ಹೊಂದಿಸುತ್ತಾರೆ.

೬೪೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

ಅಧಿಕರಣಗಳ ಸಾರ

೧. ಆನುಮಾನಿಕಾಧಿಕರಣ

ವಿಷಯವೂ ಸಂಶಯವೂ : ‘ಮಹತಃ ಪರಮವ್ಯಕ್ತಮ್’ (ಕ. ೧-೩-೫೧) ಎಂಬ ಕಠೋಪನಿಷದ್ವಾಕ್ಯದಲ್ಲಿ ಅವ್ಯಕ್ತಶಬ್ದವು ಪ್ರಧಾನವನ್ನು ಹೇಳುತ್ತದೆಯ, ಇಲ್ಲವೆ ?

ಪೂರ್ವಪಕ್ಷ : ಸಾಂಖ್ಯಸ್ಕೃತಿಯಲ್ಲಿರುವ ಮಹತ್ತು, ಅವ್ಯಕ್ತ, ಪುರುಷ - ಈ ತತ್ತ್ವಗಳನ್ನು ಅದೇ ಹೆಸರಿನಿಂದ, ಅದೇ ಕ್ರಮದಲ್ಲಿ, ಹೇಳಿರುವದರಿಂದ ಅವ್ಯಕ್ತವು ಪ್ರಧಾನವೇ.

ಸಿದ್ಧಾಂತ : ಇಲ್ಲಿ ಅವ್ಯಕ್ತವೆಂಬ ಶಬ್ದಮಾತ್ರವಿದ. ಈ ಶಬ್ದವು ಸ್ವತಂತ್ರವಾದ ತ್ರಿಗುಣಾತ್ಮಕಪ್ರಧಾನವನ್ನು ಹೇಳುವದಿಲ್ಲ, ಶರೀರವನ್ನು ಹೇಳುತ್ತದೆ. ಏಕೆಂದರೆ ಹಿಂದ’ಆತ್ಮಾನಂ ರಥನಂ ವಿದ್ದಿ ಶರೀರಂ ರಥrವ ತು” (ಕ. ೧-೩-೩) ಎಂದು ಮುಂತಾಗಿ ರೂಪಕದಲ್ಲಿ ಹೇಳಿರುವ ಪದಾರ್ಥಗಳನ್ನೇ “ಇಂದ್ರಿಯೇಭ್ಯಃ ಪರಾ ಹೃರ್ಥಾಃ ’ (೧-೩-೧೦) ಎಂದು ಮುಂತಾಗಿರುವ ವಾಕ್ಯದಲ್ಲಿ ಹೇಳಿರುತ್ತದೆ. ಆ ಇಂದ್ರಿಯಾದಿಗಳನ್ನೇ ಇಲ್ಲಿ ಪರಮಪದವನ್ನು ತಿಳಿಸುವದಕ್ಕಾಗಿ ಹೇಳಿರುವದರಿಂದ ಅಲ್ಲಿ ಪ್ರಕೃತವಾಗಿರುವ ಶರೀರವನ್ನೇ ಇಲ್ಲಿ ಅವ್ಯಕ್ತಶಬ್ದದಿಂದ ಹೇಳಿದೆ ಎಂದು ಪರಿಶೇಷನ್ಯಾಯದಿಂದ ತಿಳಿಯಬಹುದಾಗಿದೆ. ಮುಂದೆ ಆ ಪರಮಪದವಾದ ಪರಮಾತ್ಮನನ್ನು ತಿಳಿಯುವದಕ್ಕೆ ಅಧ್ಯಾತ್ಮಯೋಗವನ್ನು ತಿಳಿಸಿರುತ್ತದೆ. ಅಲ್ಲಿಯೂ ಮಹಾನಾತ್ಮಾ ಎಂಬ ಶಬ್ದದಿಂದ ಭೂಕೃವನ್ನು ಅಥವಾ ಹಿರಣ್ಯಗರ್ಭನ ಬುದ್ಧಿಯನ್ನು ತಿಳಿಸಿದೆ. ಆದ್ದರಿಂದಲೂ ಇಲ್ಲಿ ಅವ್ಯಕ್ತವೆಂದರೆ ಶರೀರವೇ. ನಿಜವಾಗಿ ಅವ್ಯಕ್ತವೆಂದರ ಮಹತ್ತಿಗಿಂತ – ಎಂದರೆ ಜೀವನಿಗಿಂತ ಅಥವಾ ಸಮಷ್ಟಿಬುದ್ಧಿಗಿಂತ - ಹೆಚ್ಚಿನದಾದ ಅವಿದ್ಯೆ ಅಥವಾ ಮಾಯ. ಪ್ರಕೃತದಲ್ಲಿ ಆ ಅವಿದ್ಯೆಯ ಅಥವಾ ಮಾಯೆಯ ಕಾರ್ಯವಾದ ಶರೀರವನ್ನೇ ಕಾರಣವಾಚಕವಾದ ಅವ್ಯಕ್ತಶಬ್ದದಿಂದ ಹೇಳಿರುತ್ತದೆ. ಅವ್ಯಕಶಬ್ದ ವಾಚಕವಾದ ಮಾಯಯೇ ಪ್ರಧಾನವಾಗಲಿ ಎನ್ನುವದು ಸರಿಯಲ್ಲ ; ಏಕಂದರ ಪ್ರಧಾನದಂತ ಮಾಯಯು ಸ್ವತಂತ್ರವಾಗಿರುವದಿಲ್ಲ, ಪರಮಾತ್ಮನ ಅಧೀನ ವಾಗಿರುತ್ತದೆ. ಅವ್ಯಕ್ತಶಬ್ದ ವಾಚ್ಯವಾದ ಮಾಯಯನ್ನು (ಅಥವಾ ಅವಿದ್ಯೆಯನ್ನು ) ಅವಶ್ಯವಾಗಿ ಅಂಗೀಕರಿಸಬೇಕು ; ಏಕೆಂದರೆ ಅದರಿಂದಲೇ ಈಶ್ವರನ ಸ್ಪಷ್ಟತ್ವವು (ಅಥವಾ ಜೀವರ ಬನ್ಗಮೋಕ್ಷವ್ಯವಹಾರವು) ಸಿದ್ಧವಾಗುತ್ತದೆ. ಆ ಅವ್ಯಕ್ತದ ಕಾರ್ಯವಾದ ಶರೀರವನ್ನೂ ಅಭೇದೋಪಚಾರದಿಂದ ಇಲ್ಲಿ ಅವ್ಯಕ್ತವೆಂದು ಅಂಗೀಕರಿಸಿದೆಯೇ ಹೊರತು ಪ್ರಧಾನವನ್ನಲ್ಲ.

ಸಾಂಖ್ಯರ ಪ್ರಧಾನವು ಜೈಯವಾಗಿದೆ ; ಇಲ್ಲಿ ಅವ್ಯಕ್ತವನ್ನು ಜೇಯವೆಂದಿಲ್ಲ. ಅಶಬ್ದ ಮಸ್ಪರ್ಶಮ್ ಎಂದು ಮುಂತಾಗಿರುವ ತತ್ತ್ವವನ್ನು ಜೇಯವೆಂದು ಇಲ್ಲಿ ಹೇಳಿರುವದು ನಿಜ ; ಆದರೆ ಆ ತತ್ತ್ವವು ಪರಮಾತ್ಮನೇ, ಪ್ರಧಾನವಲ್ಲ. ಇದಲ್ಲದೆ ಅಗ್ನಿ, ಜೀವ, ಪರಮಾತ್ಮ - ಎಂಬ

೬೪

ಅ. ೧. ಪಾ. ೪]

ಬ್ರಹ್ಮಸೂತ್ರಭಾಷ್ಯ

ಮೂರು ವಿಷಯದ ಪ್ರಶ್ನೆಯೂ ಉತ್ತರವೂ ಇದ ; ಇಲ್ಲಿ ಪ್ರಧಾನವನ್ನು ನಚಿಕೇತನು ಕೇಳಿರುವದಿಲ್ಲವಾದ್ದರಿಂದ ಅದನ್ನು ಯಮನು ಹೇಳಬೇಕಾದದ್ದೂ ಇಲ್ಲ. ಮಹತ್‌ ಎಂಬ ಶಬ್ದವೂ ಇಲ್ಲಿದ ; ಆದರ ಆತ್ಮಶಬ್ದವೇ ಮುಂತಾದವುಗಳ ಜೊತೆಯಲ್ಲಿರುವದರಿಂದ ಅದು ಸಾಂಖ್ಯರ ಮಹತ್ತತ್ಯವನ್ನು ಹೇಳುವದಿಲ್ಲವೆಂದು ಸ್ಪಷ್ಟವಾಗಿದೆ ; ಅದರಂತೆ ಅವ್ಯಕ್ತಶಬ್ದದಿಂದ ಪ್ರಧಾನವನ್ನೂ ಹೇಳಿಲ್ಲವೆಂಬುದು ಯುಕ್ತವಾಗಿದೆ.

ಪ್ರಯೋಜನ : ಈ ಪಾದದಲ್ಲಿ ಮೊದಲನೆಯ ಮೂರು ಅಧಿಕರಣಗಳಲ್ಲಿಯೂ ಪ್ರಧಾನವು ವೇದಪ್ರಮಾಣಕವಂದು ಸಾಧಿಸುವದು ಪೂರ್ವಪಕ್ಷದ ಗುರಿಯು.

೨. ಚಮಸಾಧಿಕರಣ ವಿಷಯವೂ ಸಂಶಯವೂ : “ಅಜಾಮ್‌ಕಾಮ್’’ (ಶ್ವೇ. ೪-೫) ಎಂಬ ಶ್ವೇತಾಶ್ವತರ ವಾಕ್ಯದಲ್ಲಿ ಅಜಾಶಬ್ದದಿಂದ ಹೇಳಿರುವದು ಪ್ರಧಾನವೂ, ಅಲ್ಲವೂ ?

ಪೂರ್ವಪಕ್ಷ : ಇಲ್ಲಿ ಕಂಪು, ಬಿಳುಪು, ಕಪ್ಪು - ಎಂಬ ವಿಶೇಷಣಗಳಿರುವದರಿಂದ ರಜಸ್ಸು, ಸತ್ಯ, ತಮಸ್ಸು - ಎಂಬ ಗುಣಗಳುಳ್ಳ ಪ್ರಧಾನವನ್ನೇ ಹೇಳಿದ. ಅದು ಪ್ರಕೃತಿಯು, ವಿಕೃತಿಯಲ್ಲ - ಎಂದು ಸಾಂಖ್ಯರು ಅಂಗೀಕರಿಸುತ್ತಾರಾದ್ದರಿಂದ ಅದನ್ನು ಅಜಾ (ಹುಟ್ಟುವದಲ್ಲ) ಎಂದು ಕರೆದಿದ. ಅವಿದ್ಯೆಯಿಂದ ಪ್ರಧಾನಸಕ್ಕನಾದ ಜೀವನು ಸಂಸಾರವನ್ನು ಹೊಂದುತ್ತಾನೆಂದೂ ವಿವೇಕಿಯಾದ ಜೀವನು ಅದನ್ನು ಬಿಟ್ಟುಬಿಡುತ್ತಾನೆಂದೂ ವರ್ಣಿಸಿದೆ. ಆದ್ದರಿಂದ ಇಲ್ಲಿ ಅಜಾ ಎಂದರೆ ಪ್ರಧಾನವೇ.

ಸಿದ್ಧಾಂತ : ಅಜಾ ಎಂಬ ಶಬ್ದವಿದ್ದ ಮಾತ್ರದಿಂದ ಪ್ರಧಾನವೆಂದು ನಿರ್ಣಯಿಸುವದ ಕ್ಕಾಗುವದಿಲ್ಲ. “ಅರ್ವಾಗ್ನಿಲಶ್ಚಮಸ ಊರ್ಧ್ವಬುದ್ಧ:’ (ಬೃ. ೨-೨-೩) ಎಂಬ ವಾಕ್ಯದಲ್ಲಿರುವ ಚಮಸಶಬ್ದದಂತೆ ಇದೂ ಸಾಮಾನ್ಯವಾಚಕವಾಗಿದ. ಅಲ್ಲಿ ವಾಕ್ಯಶೇಷದಿಂದ ಚಮಸವೆಂಬುದು ಶಿರಸ್ಸೆಂದು ಗೊತ್ತಾಗುತ್ತದೆ ; ಇಲ್ಲಿ ಛಾಂದೋಗ್ಯದಲ್ಲಿ ಹೇಳಿರುವ ತೇಜೋಬನ್ನರೂಪವಾದ ಪ್ರಕೃತಿಯನ್ನೇ ಹೇಳಿದೆ ಎಂಬುದು ತೇಜಆದಿಗಳ ವರ್ಣಗಳಾದ ಶುಕ್ಕಾದಿಗಳನ್ನೇ ಜಗತ್ಕಾರಣವಾದ ಪರಮಾತ್ಮನ ಶಕ್ತಿಗೆ ಹೇಳಿರುವದರಿಂದ ಗೊತ್ತಾಗುತ್ತದೆ. ಶಕ್ತಿಯ ಕಾರ್ಯವಾದ ತೇಜೋಬನ್ನಗಳ ಬಣ್ಣವನ್ನು ಲಕ್ಷದಲ್ಲಿಟ್ಟು ಶಕ್ತಿಯೂ ಆ ಮೂರು ಬಣ್ಣಗಳುಳ್ಳದ್ದಂದು ಹೇಳಿರುವದು ಯುಕ್ತವಾಗಿರುತ್ತದೆ. ತೇಜೋಬನ್ನವು ಕಾರ್ಯವಾಗಿರುವದರಿಂದ ಅದನ್ನು ಅಜು (ಹುಟ್ಟುವದಲ್ಲ) ಎಂದು ಕರೆಯುವದು ಸರಿಯಲ್ಲ ಎಂದು ಆಕ್ಷೇಪಿಸಬಾರದು. ಆಡಿನ ಹೋಲಿಕೆಯನ್ನು ಕೊಟ್ಟು ಅದನ್ನು ಅಜಾ ಎಂದು ಕರೆದಿರುವದರಿಂದ ಇಲ್ಲಿ ಯಾವ ದೋಷವೂ ಇಲ್ಲ. ಅದನ್ನು ಅವಿವೇಕಿಯಾದ ಜೀವನು ಸೇವಿಸಿ ಸಂಸಾರದಲ್ಲಿ ತೊಳಲುತ್ತಾನೆಂದೂ ವಿವೇಕಿಯಾದವನು ಬಿಟ್ಟು ಮುಕ್ತನಾಗುತ್ತಾನೆಂದೂ ಇಲ್ಲಿ ಹೇಳಿರುತ್ತದೆ. ಮಧುವಲ್ಲದ ಆದಿತ್ಯಾದಿಗಳನ್ನು ‘ಮಧು’ ಎಂದು ಮುಂತಾಗಿ ಕಲ್ಪಿಸಿರುವಂತೆ ಇಲ್ಲಿ ತೇಜೋಬನ್ನಾತ್ಮಕ ಪ್ರಕೃತಿಯನ್ನು ‘ಅಜಾ’ ಎಂದು ಕಲ್ಪಿಸಿದೆಯಾದ್ದರಿಂದ ಇಲ್ಲಿ ಪ್ರಧಾನವಾದಕ್ಕೆ ಅವಕಾಶವಿಲ್ಲ.

೬೫೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೪.

೩. ಸಂಖ್ಯೋಪಸಂಗ್ರಹಾಧಿಕರಣ ವಿಷಯವೂ ಸಂಶಯವೂ : “ಯಸ್ಮಿನ್ ಪಞ್ಞ ಪಞ್ಞಜನಾಃ’ (ಬೃ. ೪-೪-೧೭) ಎಂಬ ಮಂತ್ರದಲ್ಲಿ ಪ್ರಧಾನವಾದಕ್ಕೆ ಅವಕಾಶವಿದೆಯ, ಇಲ್ಲವೆ ?

ಪೂರ್ವಪಕ್ಷ : ಸಾಂಖ್ಯರು ಇಪ್ಪತೈದು ತತ್ತ್ವಗಳನ್ನು ಒಪ್ಪಿರುತ್ತಾರೆ ; ಇಲ್ಲಿ ‘ಪಣ್ಣ ಪಞ್ಞಜನಾಃ’ ಎಂದಿರುವದರಿಂದ ಇಪ್ಪತೈದನ್ನೇ ಹೇಳಿದೆ. ಆದ್ದರಿಂದ ಸಾಂಖ್ಯವಾದವೇ ಇದು.

ಸಿದ್ಧಾಂತ : ಇಲ್ಲಿ ಸಾಂಖ್ಯಪ್ರಕ್ರಿಯೆಯಿಲ್ಲ. ಏಕಂದರ ಸಾಂಖ್ಯರ ಇಪ್ಪತೈದು ತತ್ತ್ವವನ್ನು ಐದು ಪಂಚಕಗಳಾಗಿ ವಿಂಗಡಿಸುವದಕ್ಕೆ ಬರುವದಿಲ್ಲ ; ಇಲ್ಲಿ ಐದು ಐದು ಎಂದು ಕಂಡುಬರುತ್ತಿದ. ತತ್ತ್ವಗಳನ್ನು ‘ಪಂಚಪಂಚಜನ’ ಎಂದರೆ ಅವಯವದ್ವಾರವಾಗಿ ಲಕ್ಷಣೆಯಿಂದ ಹೇಳಿದ ಎನ್ನಬೇಕಾಗುತ್ತದೆ. ಮುಖ್ಯಾರ್ಥವು ಹೊಂದುವಾಗ ಲಕ್ಷಣೆಯನ್ನು ಅಂಗೀಕರಿಸುವದು ಸರಿಯಲ್ಲ. ಇದೂ ಅಲ್ಲದ ‘ಪಞ್ಞಜನಾಃ’ ಎಂಬುದು ಸಮಸ್ತಪದವಂಬುದು ಭಾಷಿಕಸ್ವರದಿಂದಲೂ ತೈತ್ತಿರೀಯದ ‘ಪಾನಾಂ ತ್ಯಾ ಘಜನಾನಾಮ್’ ಎಂಬ ಪ್ರಯೋಗದಿಂದಲೂ ಸ್ಪಷ್ಟವಾಗು ತದೆ. ಆದ್ದರಿಂದ ಐದು ಐದು ಎಂದು ವಿಶೇಷ್ಯವಿಶೇಷಣಭಾವವನ್ನು ಕಲ್ಪಿಸುವದಕ್ಕಾಗುವದಿಲ್ಲ. ಪಞ್ಞಜನಾಃ ಎಂಬುದು ಪಞ್ಚಪೂಲೀಶಬ್ದದಂತ ಸಮಾಹಾರವನ್ನು ಹೇಳುವದಿಲ್ಲವಾದ್ದರಿಂದಲೂ ಇಲ್ಲಿ ಇಪ್ಪತ್ತೈದು ಎಂಬರ್ಥವು ಸಿಕ್ಕುವದಿಲ್ಲ. ಅಂತೂ ಸಾಂಖ್ಯರ ಇಪ್ಪತೈದು ತತ್ತ್ವಗಳು ಬೇರೆ ಬೇರೆಯಾಗಿದ್ದು ಐದು ಪಂಚಕಗಳಾಗುವಂತಿಲ್ಲವಾದ್ದರಿಂದ ಮಂತ್ರದಲ್ಲಿರುವದು ಅವುಗಳ ವಿಷಯವನ್ನುವದಕ್ಕಿಲ್ಲ.

ಇದೂ ಅಲ್ಲದ ಆತ್ಮ, ಆಕಾಶ - ಇವುಗಳನ್ನು ಬಿಟ್ಟೇ ಇಲ್ಲಿ ‘ಪಞ್ಚ ಪಞ್ಞಜನಾಃ’ ಎಂದು ಪ್ರಯೋಗಿಸಿದ. “ಯಾವ ಆತ್ಮನಲ್ಲಿ ಪಂಚ ಪಂಚಜನರೂ ಆಕಾಶವೂ ಇದೆಯೋ ಅವನನ್ನು ಅರಿತವನು ಅಮೃತನಾಗುವನು’ ಎಂಬುದು ಮಂತ್ರದ ಅರ್ಥವು. ಆದ್ದರಿಂದ ಆತ್ಮನೂ ಆಕಾಶವೂ ಸೇರಿದರೆ ಇಪ್ಪತ್ತೇಳಾಗಬೇಕಾಗಿರುವದರಿಂದಲೂ ಇದು ಸಾಂಖ್ಯರ ತತ್ತ್ವಗಳನ್ನು ಹೇಳುವದಿಲ್ಲ.

ಇಲ್ಲಿ ಹೇಳಿರುವ ಪಂಚಜನರು ಎಂಬುದು ‘ಸಪ್ತರ್ಷಿಗಳು’ ಎಂಬಂತೆ ಸಂಜ್ಞಾರ್ಥಕವಾದ ಶಬ್ದವು ಪ್ರಾಣ, ಚಕ್ಷುಸ್ಸು, ಶೂತ್ರ, ಅನ್ನ, ಮನಸ್ಸು - ಎಂಬ ವಾಕ್ಯಶೇಷದಲ್ಲಿರುವ ಪಂಚಜನರನ್ನು ಹೇಳಿದೆ ಎನ್ನುವದೇ ಯುಕ್ತ. ಕಾಪಾಠದಲ್ಲಿ ಅನ್ನ ಎಂಬುದಿಲ್ಲ ; ಅಲ್ಲಿ ಜ್ಯೋತಿ ಎಂಬ ತತ್ತ್ವವನ್ನು ಹಿಂದಿನ ವಾಕ್ಯದಿಂದ ಸೇರಿಸಿಕೊಂಡು ಅರ್ಥಮಾಡಬಹುದು. ಅಂತೂ ಇಲ್ಲಿ ಪ್ರಧಾನವಾದಕ್ಕೆ ಅವಕಾಶವೇ ಇಲ್ಲ.

೪. ಕಾರಣತ್ವಾಧಿಕರಣ ವಿಷಯವೂ ಸಂಶಯವೂ : ಬ್ರಹ್ಮಕ್ಕೆ ಜನ್ಮಾದಿಕಾರಣತ್ವವೂ ಗತಿಸಾಮಾನ್ಯವೂ ಹಿಂದಿನ ಗ್ರಂಥಭಾಗದಲ್ಲಿ ಉಕ್ತವಾಗಿದೆಯಷ್ಟ. ಆದ್ದರಿಂದ ಬ್ರಹ್ಮದಲ್ಲಿಯೇ ವೇದಾಂತವಾಕ್ಯಗಳ ತಾತ್ಪರ್ಯವಿರುವದೆಂದು ಹೇಳಬಹುದೂ, ಇಲ್ಲವೋ ?

ಪೂರ್ವಪಕ್ಷ.: ಹೇಳಕೂಡದು. ಏಕಂದರ ಸೃಷ್ಟಿ ಕ್ರಮವನ್ನು ಒಂದೊಂದು ಉಪನಿಷತ್ತಿ

ಅ. ೧. ಪಾ. ೪.]

ಬ್ರಹ್ಮಸೂತ್ರಭಾಷ್ಯ

ನಲ್ಲಿ ಒಂದೊಂದು ಬಗೆಯಾಗಿ ಹೇಳಿದ. ಸೃಷ್ಟಿಗೆ ಆಕಾಶವು ಮೊದಲೆಂದು ಒಂದು ಕಡ, ತೇಜವು ಮೊದಲೆಂದು ಒಂದು ಕಡೆ, ಪ್ರಾಣವು ಮೊದಲೆಂದು ಒಂದು ಕಡೆ, ಯಾವ ಕ್ರಮವೂ ಇಲ್ಲದ ಲೋಕಗಳು ಸ್ಪಷ್ಟವಾಗಿವೆ ಎಂದು ಒಂದು ಕಡ. ಅಸತ್ತಿನಿಂದ ಸೃಷ್ಟಿಯಾಗಿದೆ ಎಂದು ಒಂದು ಕಡೆ, ತಾನೇ ಜಗತ್ತು ಸೃಷ್ಟಿಯಾಗಿದೆ ಎಂದು ಒಂದು ಕಡೆ - ಹೀಗಲ್ಲ ಹೇಳಿರುವದರಿಂದ ಬ್ರಹ್ಮವೇ ಜಗತ್ಕಾರಣವೆಂಬುದಕ್ಕೆ ವೇದಾಂತಪ್ರಮಾಣವಿಲ್ಲ. ಆದ್ದರಿಂದ ಸ್ಮತಿಯುಕ್ತಿಗಳ ಆಶ್ರಯದಿಂದ ಪ್ರಧಾನಾದಿಕಾರಣವಾದವನ್ನು ಒಪ್ಪಬೇಕು.

ಸಿದ್ಧಾಂತ : ಕಾರ್ಯದ ವಿಷಯದಲ್ಲಿ ವಿಗಾನವಿದ್ದರೂ ಕಾರಣವು ಬ್ರಹ್ಮವೇ ಎಂಬ ವಿಷಯದಲ್ಲಿ ಗತಿಸಾಮಾನ್ಯವಿದೆ. ಇದನ್ನೇ ಪ್ರತಿವೇದಾಂತದಲ್ಲಿಯೂ ತಾತ್ಪರ್ಯದಿಂದ ಹೇಳಿದ. ಕಾರ್ಯವಿಷಯದಲ್ಲಿ ವಿಗಾನವಿದ್ದಮಾತ್ರದಿಂದ ಕಾರಣವಾದ ಬ್ರಹ್ಮವನ್ನು ತಾತ್ಪರ್ಯದಿಂದ ವೇದಾಂತವಾಕ್ಯಗಳು ಹೇಳುತ್ತಿರುವದನ್ನು ಅಲ್ಲಗಳೆಯುವದು ಯುಕ್ತವಲ್ಲ. ಇದಲ್ಲದೆ ಕಾರ್ಯವಿಷಯದಲ್ಲಿಯೂ ವಿಗಾನವಿಲ್ಲವೆಂಬುದನ್ನು ಮುಂದ ಸೂತ್ರಕಾರರು ತೋರಿಸಿ ಕೂಡುತ್ತಾರೆ. ಆ ವಿಷಯದಲ್ಲಿ ಒಂದು ವೇಳೆ ವಿಗಾನವಿದ್ದರೂ ಬಾಧಕವಿಲ್ಲ. ಏಕೆಂದರೆ ಸೃಷ್ಟಿಜ್ಞಾನದಿಂದ ಯಾವ ಫಲವಾದರೂ ಆಗುವದಂದು ಶ್ರುತಿಯಲ್ಲಿ ಹೇಳಿರುವದಿಲ್ಲ. ಸೃಷ್ಟಿಯನ್ನು ಬ್ರಹ್ಮಜ್ಞಾನಕ್ಕೇ ಉಪಾಯವಾಗಿ ಹೇಳಿರುತ್ತದೆ. ಬ್ರಹ್ಮಜ್ಞಾನದಿಂದಲಾದರೆ ಪರಮಪುರುಷಾರ್ಥವುಂಟಾಗುವದಂದು ಶ್ರುತಿಯಲ್ಲಿ ಹೇಳಿರುತ್ತದೆ ; ಅದು ಅನುಭವಕ್ಕೆ ಬರುವ ಫಲವೂ ಆಗಿರುತ್ತದ.

ಅಸತ್ತು ಕಾರಣವೆಂದು ಶ್ರುತಿಯಲ್ಲಿ ಹೇಳಿಲ್ಲ : ಕಲವು ಕಡೆಯಲ್ಲಿ ಅಸದ್ವಾದವನ್ನು ಖಂಡಿಸಿದೆ. ಇನ್ನು ಕೆಲವು ಕಡೆಗಳಲ್ಲಿ ಅವ್ಯಾಹೃತವನ್ನೇ ಅಸತ್ತೆಂದು ಕರದಿದ. ಜಗತ್ತು ನಾಮರೂಪಗಳಾಗಿ ತಾನೇ ವ್ಯಾಕೃತವಾಯಿತು ಎಂದು ಶ್ರುತಿಯಲ್ಲಿ ಹೇಳಿರುವ ಕಡೆಯಲ್ಲಿ ವ್ಯಾಕರಣಕರ್ತವಾದ ಈಶ್ವರನನ್ನು ಇಟ್ಟುಕೊಂಡೇ ಹಾಗಂದು ಹೇಳಿರುತ್ತದೆ.

ಆದ್ದರಿಂದ ಬ್ರಹ್ಮ ಕಾರಣವಾದವು ಶ್ರುತಿಸಿದ್ಧವಾಗಿದೆ ; ಬ್ರಹ್ಮದ ವಿಷಯದಲ್ಲಿ ಶ್ರುತಿಗಳ ಗತಿಸಾಮಾನ್ಯವೂ ಇದ.

೫. ಬಾಲಾಕ್ಯಧಿಕರಣ ವಿಷಯವೂ ಸಂಶಯವೂ : “ಯೋ ವೈ ಏತೇಷಾಂ ಪುರುಷಾಣಾಂ ಕರ್ತಾ ಯಸ್ಯ ವ್ಯತತ್ ಕರ್ಮ ಸ ವೇದಿತವ್ಯ’ (ಕೌ, ೪-೧೮) ಎಂಬ ವಾಕ್ಯದಲ್ಲಿ ಜ್ಯ ವೆಂದು ಹೇಳಿರುವದು ಜೀವನನ್ನೂ, ಪ್ರಾಣನನ್ನೊ, ಪರಮಾತ್ಮನನ್ನೊ ?

ಪೂರ್ವಪಕ್ಷ : ಕರ್ಮವೆಂದರ ಚಲನೆಯು, ಇದು ಪ್ರಾಣಕ್ಕೆ ಹೊಂದುತ್ತದೆ. ಆದಿತ್ಯಾದಿ ಪುರುಷರಿಗೆ ಪ್ರಾಣನೂ ಕರ್ತನಾಗಬಹುದು. ಸುಷುಪ್ತಿಯಲ್ಲಿ ಜೀವನು ಪ್ರಾಣನೂಡನೆ ಒಂದಾಗು ತಾನ ಎಂದು ಪ್ರಾಣಶಬ್ದವಿದೆ. ಅಥವಾ ಜೀವನಿಗೆ ಧರ್ಮಾಧರ್ಮರೂಪವಾದ ಕರ್ಮವುಂಟು ; ಅವನು ಧೈಕೃವಾದ್ದರಿಂದ ಭೂಗೋಪಕರಣವಾಗಿರುವ ಪುರುಷರ ಕರ್ತವೂ ಆಗಬಹುದು. ನಿದ್ರಿಸುತ್ತಿದ್ದ ಪುರುಷನನ್ನು ಎಬ್ಬಿಸಿ ಪ್ರಾಣನಿಗಿಂತ ಬೇರೆಯಾದ ಭೋಕ್ಷವನ್ನು ಅಜಾತಶತ್ರುವು೬೫೨

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೪.

ತೋರಿಸಿಕೊಟ್ಟನೆಂದಿರುವದರಿಂದ ಇದು ಜೀವನೇ ಎನ್ನಬಹುದು. ಇವನು ಪ್ರಾಣಧಾರಣೆ ಮಾಡಿಕೊಂಡಿರುವದರಿಂದ ಪ್ರಾಣನಂದೂ ಕರೆಯಬಹುದು. ಅಂತೂ ಜೀವಮುಖ್ಯಪ್ರಾಣರಲ್ಲಿ ಒಬ್ಬನು ಪುರುಷರ ಕರ್ತನು ; ಪರಮಾತ್ಮನಲ್ಲ. ಏಕಂದರ ಇಲ್ಲಿ ಪರಮಾತ್ಮಲಿಂಗವೇ ಇಲ್ಲ.

ಸಿದ್ಧಾಂತ : ಇಲ್ಲಿ ಉಪಕ್ರಮದಲ್ಲಿ ‘ಬ್ರಹ್ಮವನ್ನು ಹೇಳುತ್ತೇನೆ’ ಎಂದು ಬಾಲಾಕಿ ಪ್ರಾರಂಭಿಸಿರುತ್ತಾನ ; ‘ಬ್ರಹ್ಮವನ್ನು ಹೇಳುತ್ತೇನೆಂದು ಸುಳ್ಳು ಹೇಳಿದೆಯಲ್ಲ !’ ಎಂದು ಅಜಾತಶತ್ರು ಹಂಗಿಸಿರುತ್ತಾನೆ, ಆಮೇಲೆ ಪುರುಷರ ಕರ್ತವನ್ನು ಹೇಳಿರುತ್ತಾನೆ. ಆದ್ದರಿಂದ ಉಪಕ್ರಮದ ಬಲದಿಂದ ಇದು ಬ್ರಹ್ಮವೇ ಆಗಿರಬೇಕೆಂದು ನಿಶ್ಚಯವಾಗುತ್ತದ. ಆದಿತ್ಯಾದಿ ಪುರುಷರ ಕರ್ತ ಎಂಬುದು ಪರಮೇಶ್ವರನಿಗೇ ಒಪ್ಪುತ್ತದೆ. ಇದು ಯಾರ ಕರ್ಮವೋ’ ಎಂದಿರುವದು ಚಲನರೂಪವಾದ ಅಥವಾ ಧರ್ಮಾಧರ್ಮರೂಪವಾದ ಕರ್ಮವಲ್ಲ ; ಮಾಡಲ್ಪಡುವ ಜಗದ್ರೂಪವಾದ ಕರ್ಮವು. ಈಶ್ವರನು ಈ ಪುರುಷರಿಗೆ - ಅಥವಾ ಇವರಿಗೇ ಏಕ ? ಇಡಿಯ ಜಗತ್ತಿಗೇ - ಕರ್ತ ಎಂದು ಅಜಾತಶತ್ರು ಹೇಳಿರುತ್ತಾನ.

ಜೀವಮುಖ್ಯಪ್ರಾಣಲಿಂಗಗಳೂ ಇಲ್ಲವ ? - ಎಂದರೆ ಮೂರು ಬೇರೆಬೇರೆಯ ಉಪಾಸನೆಗಳನ್ನು ಇಲ್ಲಿ ಹೇಳಿದ ಎಂದು ಒಪ್ಪಬೇಕಾಗುವದರಿಂದ ಇದು ಸರಿಯಲ್ಲ : ಉಪಕ್ರಮೋಪಸಂಹಾರಗಳಿಂದ ಇದು ಬ್ರಹ್ಮವಿಷಯವೇ ಎಂದು ನಿರ್ಣಯವಾಗುತ್ತದೆ. ಆದ್ದರಿಂದ ಇಲ್ಲಿರುವ ಪ್ರಾಣಶಬ್ದವು ಬ್ರಹ್ಮಪರವು. ಜೀವಲಿಂಗವು ಬ್ರಹ್ಮಾಭೇದಾಭಿಪ್ರಾಯದಿಂದ ಬ್ರಹ್ಮ ಅನ್ವಯಿಸತಕ್ಕದ್ದು. ಅಥವಾ ಇಲ್ಲಿರುವ ಜೀವಪರಾಮರ್ಶವು ಬ್ರಹ್ಮಜ್ಞಾನಕ್ಕಾಗಿಯೇ ಎಂಬುದು “ಈ ಪುರುಷನು ಎಲ್ಲಿ ಮಲಗಿದ್ದನು, ಎಲ್ಲಿ ಹೀಗೆ ಇರುತ್ತಿದ್ದನು, ಎಲ್ಲಿಂದ ಹೀಗೆ ಬಂದನು ?” ಎಂಬ ಪ್ರಶ್ನೆಯಿಂದಲೂ ಸುಷುಪ್ತಿಯಲ್ಲಿ ಈ ಪ್ರಾಣನಲ್ಲಿಯೇ ಒಂದಾಗುತ್ತಾನೆ, ಈ ಆತ್ಮನಿಂದಲೇ ಪ್ರಾಣಾದಿಗಳು ಹೂರಟುಬರುತ್ತಾರೆ” - ಎಂಬ ಪ್ರತಿವಚನದಿಂದಲೂ ಸ್ಪಷ್ಟವಾಗುತ್ತದೆ. ಆದ್ದರಿಂದ ಸುಷುಪ್ತಿಯಲ್ಲಿ ಪ್ರಾಣಜೀವರುಗಳಿಗಿಂತ ವ್ಯತಿರಿಕ್ತವಾದ ಬ್ರಹ್ಮದಲ್ಲಿಯೇ ಸೇರಿಕೊಂಡಿದ್ದು ಅದರಿಂದಲೇ ಎಲ್ಲವೂ ಎಚ್ಚರದಲ್ಲಿ ಹೊರಕ್ಕೆ ಬರುತ್ತದೆ ಎಂಬ ವೇದಾಂತಸಿದ್ಧಾಂತವನ್ನೇ ಇಲ್ಲಿ ಹೇಳಿರುತ್ತದೆ ಎಂದು ತಿಳಿಯಬೇಕು.

೬. ವಾಕ್ಯಾನ್ವಯಾಧಿಕರಣ ವಿಷಯವೂ ಸಂಶಯವೂ : ಮೈತ್ರೀಯಾಬ್ರಾಹ್ಮಣದಲ್ಲಿ ‘ನ ವಾ ಅರೇ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ” ಎಂದು ಮುಂತಾಗಿರುವ ವಾಕ್ಯವಿದೆ. ಅಲ್ಲಿ “ಆತ್ಮನ ಕಾಮಕ್ಕಾಗಿಯೇ ಎಲ್ಲವೂ ಪ್ರಿಯವಾಗುತ್ತದೆ. ಆತ್ಮನೇ ದ್ರಷ್ಟವ್ಯನು, ಪ್ರೋತವನು, ಮಂತವನು, ನಿದಿಧ್ಯಾಸಿತವನು ; ಎಲೆ ಮೈತ್ರೇಯಿ, ಆತ್ಮನ ದರ್ಶನದಿಂದ ಶ್ರವಣದಿಂದ, ಮತಿಯಿಂದ, ವಿಜ್ಞಾನದಿಂದ - ಇದಲ್ಲವೂ ವಿದಿತವಾಗುವದು” (ಬೃ. ೨-೪-೫) ಎಂದು ಹೇಳಿರುತ್ತದೆ. ಈ ವಾಕ್ಯವು ವಿಜ್ಞಾನಾತ್ಮವಿಷಯವೂ, ಪರಮಾತ್ಮವಿಷಯವೊ ?

ಪೂರ್ವಪಕ್ಷ : ಪ್ರಿಯಸಂಸೂಚಿತವಾದ ಭೋಕ್ತವಾದ ಆತ್ಮನನ್ನೇ ಉಪಕ್ರಮಿಸಿ ಈ ಆತ್ಮದರ್ಶನಾದಿಗಳನ್ನು ಹೇಳಿರುವದರಿಂದ ವಿಜ್ಞಾನಾತ್ಮನನ್ನೇ ಹೇಳಿದ ಎನ್ನಬೇಕು. “ಈ

ಅ. ೧. ಪ. ೪.]

ಬ್ರಹ್ಮಸೂತ್ರಭಾಷ್ಯ

೬೫a

ಮಹದ್ಯೋತವು ಅನಂತವು, ಅಪಾರವು ; (ಇದು) ಈ ಭೂತಗಳೊಳಗಿಂದ ಎದ್ದು ಅವುಗಳನ್ನೇ ಅನುಸರಿಸಿ ನಾಶವಾಗುತ್ತದೆ’ ಎಂದು ವಿಜ್ಞಾತೃಸ್ವರೂಪವನ್ನೇ ಹೇಳಿದ. “ಎಲ ವಿಜ್ಞಾತೃವನ್ನು ಏತರಿಂದ ಅರಿತಾನು ?’ ಎಂದು ಕರ್ತವಾಚಕತೃಘ್ರತ್ಯಯದ ವಿಜ್ಞಾತೃಶಬ್ದವನ್ನು ಉಪ ಯೋಗಿಸಿರುವದರಿಂದಲೂ ಇದು ವಿಜ್ಞಾನಮಯನೆಂದು ಗೊತ್ತಾಗುತ್ತದೆ. ಆದಕಾರಣ ವಿಜ್ಞಾನಾತ್ಮನು ಭೋಕ್ತವಾಗಿರುವದರಿಂದಲೂ ಭೋಕ್ಸವಿಗಾಗಿಯೇ ಭೋಗ್ಯವೆಲ್ಲವೂ ಇದ್ದು ಕೊಂಡಿರುವದರಿಂದಲೂ ಆತ್ಮವಿಜ್ಞಾನದಿಂದ ಎಲ್ಲವನ್ನೂ ಅರಿತುಕೊಂಡಂತಾಗುವದಂದು ಹೇಳಿದೆ - ಎನ್ನಬೇಕು.

ಸಿದ್ಧಾಂತ : ಈ ವಾಕ್ಯದ ಅವಯವಗಳಲ್ಲ ಪರಮಾತ್ಮನಲ್ಲಿಯೇ ಅನ್ವಿತವಾಗಿರುವದರಿಂದ ಇದು ಪರಮಾತ್ರೋಪದೇಶವೇ. ಹೇಗಂದರ (೧) ಯಾಜ್ಞವಲ್ಕನು ವಿತ್ತದಿಂದ ಅಮೃತತ್ವವು ಸಿಕ್ಕುವ ಆಶಯಿಲ್ಲವೆಂದು ಹೇಳಲು ಅಮೃತತ್ವಕಾರಣವನ್ನೇ ಹೇಳು ಎಂದು ಮೈತ್ರೇಯಿ ಕೇಳಿರುತ್ತಾಳೆ. ಆದ್ದರಿಂದ ಇದು ಪರಮಾತ್ಮವಿಚಾರ, (೨) ಆತ್ಮವಿಜ್ಞಾನದಿಂದ ಸರ್ವವನ್ನೂ

ತಿಳಿದಂತಾಗುವದಂದು ಯಾಜ್ಞವಲ್ಕನು ಹೇಳಿರುವದು ಪರಮಾತ್ಮನ ವಿಷಯದಲ್ಲಿಯೇ ಮುಖ್ಯಾರ್ಥದಿಂದ ಹೊಂದುತ್ತದೆ. (೩) ಇದಲ್ಲವೂ ಈ ಆತ್ಮನೇ - ಎಂದು ಜಗತ್ತಲ್ಲವೂ ಆತ್ಮನಿಗಿಂತ ಬೇರೆಯಿಲ್ಲವೆಂದು ಹೇಳಿದೆ ; ದುಂದುಭ್ಯಾದಿದೃಷ್ಟಾಂತಗಳಿಂದ ಇದನ್ನೇ ಗಟ್ಟಿ ಗೊಳಿಸಿದೆ. (೪) ನಾಮರೂಪಕರ್ಮಾತ್ಮಕವಾದ ಋಗ್ವದಾದಿಜಗತ್ತು ಈ ಆತ್ಮನ ಉಸಿರೆಂದು ಹೇಳಿದ. (೫) ವಿಷಯ, ಇಂದ್ರಿಯ, ಅಂತಃಕರಣ - ಇವೆಲ್ಲವೂ ಸೇರಿದ ಜಗತ್ತು ಅನಂತರವೂ ಅಬಾಹ್ಯವೂ ಆಗಿರುವ ಪರಿಪೂರ್ಣವಾದ ಒಂದರಲ್ಲಿ ಲಯವಾಗುವದೆಂದು ಹೇಳಿರುತ್ತದೆ.

ಇಲ್ಲಿ ಪ್ರಿಯಸಂಸೂಚಿತನಾದ ಜೀವನ ಉಪಕ್ರಮವಿದೆಯಲ್ಲ ! - ಎಂಬ ಶಂಕೆಗೆ ಮೂರು ಜನ ಆಚಾರ್ಯರು ಮೂರು ವಿಧವಾಗಿ ಸಮಾಧಾನವನ್ನು ಕೊಟ್ಟಿರುತ್ತಾರ. (೧) ಏಕವಿಜ್ಞಾನದಿಂದ ಸರ್ವವಿಜ್ಞಾನವಾಗುವದು, ಇದೆಲ್ಲವೂ ಆತ್ಮನೇ ಎಂಬ ಪ್ರತಿಜ್ಞೆಯ ಸಿದ್ಧಿಗಾಗಿ ಜೀವಬ್ರಹ್ಮರ ಅಭೇದಾಂಶವನ್ನು ಉಪಕ್ರಮದಲ್ಲಿ ಹೇಳಿದೆ ಎಂದು ಆತ್ಮರಥನು ; (೨) ಜ್ಞಾನಧ್ಯಾನಗಳಿಂದ ಸಂಸ್ಕೃತನಾದ ಜೀವನು ಸತ್ತ ಬಳಿಕ ಪರಮಾತ್ಮನಲ್ಲಿ ಐಕ್ಯವನ್ನು ಪಡೆಯುವನಾದ್ದರಿಂದ ಹೀಗೆ ಉಪಕ್ರಮಿಸಿದ ಎಂದು ಔಡುಲೋಮಿ ; (೩) ಪರಮಾತ್ಮನೇ ಈಗಲೂ ಅವಿದ್ಯೆಯಿಂದ ಜೀವರೂಪನಾಗಿ ಕಾಣುತ್ತಿರುವನಾದ್ದರಿಂದ ಹೀಗೆಂದು ಉಪಕ್ರಮಿಸಿದೆ ಎಂದು ಕಾಶಕೃತ್, ಈ ಮೂರರಲ್ಲಿ ಕೊನೆಯದೇ ವೇದಾಂತಸಿದ್ಧಾಂತವು ; ಏಕೆಂದರೆ ಹಾಗೆ ಒಪ್ಪದಿದ್ದರೆ ಜ್ಞಾನದಿಂದ ಮೋಕ್ಷವೆಂಬುದನ್ನೂ ಮೋಕ್ಷವು ನಿತ್ಯವೆಂಬುದನ್ನೂ ಆತ್ಮನ ಸ್ವಭಾವವೇ ಎಂಬುದನ್ನೂ ತಿರಸ್ಕರಿಸಬೇಕಾಗುವದು.

೭. ಪ್ರಕೃತ್ಯಧಿಕರಣ ವಿಷಯವೂ ಸಂಶಯವೂ : ಬ್ರಹ್ಮವು ಜಗತ್ಕಾರಣವು ಎಂದು ಹೇಳುವ ವಾಕ್ಯಗಳು ಬರಿಯ ನಿಮಿತ್ತಕಾರಣವನ್ನು ಹೇಳುವವೂ, ಅಥವಾ ಉಪಾದಾನಕಾರಣವನ್ನೂ ಹೇಳುವವ ?

ಪೂರ್ವಪಕ್ಷ : ಬರಿಯ ನಿಮಿತ್ತಕಾರಣವನ್ನೇ ಹೇಳುತ್ತದೆ. ಏಕೆಂದರೆ ಬ್ರಹ್ಮವು ಕುಂಬಾರನೇ

೬೫೪

ಬ್ರಹ್ಮಸೂತ್ರಭಾಷ್ಯ

[ಅ.೧. ಪ. ೪.

ಮುಂತಾದವರಂತ ಯೋಚಿಸಿ ಸೃಷ್ಟಿಸಿತು ಎಂದು ಶ್ರುತಿಯಲ್ಲಿ ಹೇಳಿದ. ಒಂದು ಕ್ರಿಯೆಗೆ ಅನೇಕ ಕಾರಕಗಳು ಬೇಕೆಂಬುದು ಲೋಕದಲ್ಲಿ ಕಂಡಿದ. ಈಶ್ವರರಾದ ರಾಜವೈವಸ್ವತನೇ ಮುಂತಾದವರು ನಿಮಿತ್ತಕಾರಣರಾಗಿರುವದರಿಂದ ಪರಮೇಶ್ವರನೂ ನಿಮಿತ್ತಕಾರಣವಾಗಿರಬೇಕು. ಕಾರ್ಯವು ತನ್ನ ಉಪಾದಾನಕಾರಣಕ್ಕೆ ಸದೃಶವಾಗಿರಬೇಕು. ಪ್ರಕೃತದಲ್ಲಿ ಕಾರ್ಯವಾದ ಜಗತ್ತು ಸಾವಯವ,

ಅಚೇತನ, ಅಶುದ್ಧ ; ಅದಕ್ಕೆ ನಿರವಯವವೂ ಚೇತನವೂ ಶುದ್ಧವೂ ಆಗಿರುವ ಬ್ರಹ್ಮವು ಉಪಾದಾನಕಾರಣವಾಗಲಾರದು. ಆದ್ದರಿಂದ ಪ್ರಧಾನವೇ ಮುಂತಾದವುಗಳಲ್ಲಿ ಒಂದು ಉಪಾದಾನಕಾರಣವೆಂದೂ ಬ್ರಹ್ಮವು ನಿಮಿತ್ತಕಾರಣವೆಂದೂ ಒಪ್ಪುವದು ಯುಕ್ತ.

ಸಿದ್ಧಾಂತ : ಬ್ರಹ್ಮವು ಉಪಾದಾನವೂ ಆಗಿದೆ. ಏಕೆಂದರೆ ಒಂದನ್ನು ಅರಿತರೆ ಎಲ್ಲವನ್ನೂ ಅರಿತಂತ ಆಗುವದಂಬ ಪ್ರತಿಜ್ಞೆಯೂ ಮಣ್ಣು, ಮಡಕೆ - ಮುಂತಾದವುಗಳ ದೃಷ್ಟಾಂತವೂ ಶ್ರುತಿಯಲ್ಲಿದೆ. ಇದು ಉಪಾದಾನಕಾರಣಕ್ಕೆ ಹೊಂದುತ್ತದೆ. ಆದ್ದರಿಂದ ಬ್ರಹ್ಮವು ಉಪಾದಾನವು. ಆದರ ಜಗತ್ತನ್ನು ಸೃಷ್ಟಿಸುವಾಗ ಬ್ರಹ್ಮವು - ಮಣ್ಣು, ಚಿನ್ನ ಮುಂತಾದವುಗಳಂತ - ಮತ್ತೊಬ್ಬ ಅಧಿಷ್ಠಾತೃವನ್ನು ಬಯಸಿತಂದು ಶ್ರುತಿಯಲ್ಲಿಲ್ಲವಾದ್ದರಿಂದ ಅದು ನಿಮಿತ್ತವೂ ಆಗಿರಬೇಕು. ಬ್ರಹ್ಮವು ಯೋಚಿಸಿನೋಡಿ ಎಲ್ಲವೂ ಆಯಿತೆಂದು ಹೇಳಿರುವದರಿಂದಲೂ ಅದರಿಂದಲೇ ಜಗತ್ತಿನ ಸೃಷ್ಟಿಯೂ ಅದರಲ್ಲಿಯೇ ಪ್ರಲಯವೂ ಆಗುವದಂದಿರುವದರಿಂದಲೂ ಬ್ರಹ್ಮವು ತನ್ನನ್ನು ತಾನೇ

ಮಾಡಿಕೊಂಡಿತು ಎಂದು ಹೇಳಿರುವದರಿಂದಲೂ ಅದು ಜಗತ್ತಿಗೆ ಯೋನಿ ಎಂದು ಹೇಳಿರು ವದರಿಂದಲೂ ಬ್ರಹ್ಮವು ಜಗತ್ತಿಗೆ ಉಪಾದಾನವೂ ಆಗಿದೆ ಎಂದು ಒಪ್ಪಬೇಕು. ಪೂರ್ವಪಕ್ಷದಲ್ಲಿ ಹೇಳಿರುವ ಯುಕ್ತಿಗಳು ಶ್ರುತಿವಿರುದ್ಧವಾಗಿರುವದರಿಂದ ಒಪ್ಪತಕ್ಕವಲ್ಲ.

  • ೮. ಸರ್ವವ್ಯಾಖ್ಯಾನಾಧಿಕರಣ ವಿಷಯವೂ ಸಂಶಯವೂ : ಜಗತ್ತಿಗೆ ಅಣುವೇ ಮುಂತಾದವು ಕಾರಣವೆಂಬುದು ಶ್ರುತಿಸಿದ್ಧವ, ಅಲ್ಲವೆ ?

ಪೂರ್ವಪಕ್ಷ : ಅವಕ್ಕೂ ಶ್ರುತಿಲಿಂಗಗಳಿರುವದರಿಂದ ಅವೂ ಕಾರಣವಾಗಬಹುದು.

ಸಿದ್ಧಾಂತ : ಅನೇಕ ವೈದಿಕಲಿಂಗಗಳು ಇರುವಂತೆ ತೋರುವ, ಸ್ಮೃತಿಕಾರರೂ ಕಲವಂಶಗಳಲ್ಲಿ ಒಪ್ಪಿರುವ ಪ್ರಧಾನಕಾರಣವಾದವೇ ಶ್ರುತ್ಯನುಸಾರಿಯಲ್ಲವೆಂದು ನಿರಾಕರಿಸಿ ದ್ದಾಗಿದೆ. ಹೀಗಿರುವಲ್ಲಿ ಯಾವ ಶಬ್ದ ಪ್ರಮಾಣವೂ ಇಲ್ಲದ, ವೇದವಿರುದ್ಧವೇ ಆಗಿರುವ, ಯಾವ ಸ್ಕೃತಿಕಾರರೂ ಅಂಗೀಕರಿಸದ, ಆ ಅಣ್ಣಾದಿಕಾರಣವಾದಗಳು ಶ್ರುತಿಸಿದ್ಧವಲ್ಲವೆಂಬುದನ್ನು ಹೇಳತಕ್ಕದ್ದೇನಿದೆ ? ಅವುಗಳನ್ನು ಸಾಂಖ್ಯಖಂಡನೆಯಿಂದಲೇ ಖಂಡಿಸಿದಂತೆ ಆಗಿದೆ. ಆದ್ದರಿಂದ ಬ್ರಹ್ಮವೇ ಜಗತ್ಕಾರಣವು ; ಅದರಲ್ಲಿಯೇ ಗತಿಸಾಮಾನ್ಯವಿದ - ಎಂಬುದು ನಿರಾತಂಕವಾಗಿದೆ.

ಎರಡನೆಯ ಅಧ್ಯಾಯ - ಒಂದನೆಯ ಪಾದ

(ವೇದಾಂತವು ಸಾಂಖ್ಯಾದಿಸ್ಕೃತಿಯುಕ್ತಿಗಳಿಗೆ ವಿರುದ್ಧವೆಂಬ ಶಂಕೆಯ ಪರಿಹಾರ)

ಎರಡನೆಯ ಅಧ್ಯಾಯದ ಸಂಬಂಧ

(ಭಾಷ್ಯ) ೩೯೮, ಪ್ರಥಮೇ ಅಧ್ಯಾಯೇ ಸರ್ವಜ್ಞಃ ಸರ್ವೆಶ್ವರೋ ಜಗತಃ ಉತ್ಪತ್ತಿ ಕಾರಣಮ್ ಮೃತ್ಸುವರ್ಣಾದಯ ಇವ ಘಟರುಚಕಾದೀನಾಮ್ | ಉತ್ಪನ್ನಸ್ಯ ಜಗತಃ ನಿಯನ್ನನ ಸ್ಥಿತಿಕಾರಣಮ್, ಮಾಯಾವೀವ ಮಾಯಾಯಾಃ ಪ್ರಸಾರಿತಸ್ಯ ಚಜಗತಃ ಪುನಃ ಸ್ವಾತ್ಮವ ಉಪಸಂಹಾರಕಾರಣಮ್, ಅವನಿರಿವ ಚತುರ್ವಿಧಸ್ಯ ಭೂತ ಗ್ರಾಮಸ್ಯ ! ಸ ಏವ ಚ ಸರ್ವಷಾಂ ನ ಆತ್ಮಾ ಇತ್ಯೇತತ್ ವೇದಾನ್ತವಾಕ್ಯ ಸಮನ್ವಯಪ್ರತಿಪಾದನೇನ ಪ್ರತಿಪಾದಿತಮ್ | ಪ್ರಧಾನಾದಿಕಾರಣವಾದಾಶ್ಚ ಅಶಬ್ದನ ನಿರಾಕೃತಾಃ | ಇದಾನೀಂ ಸ್ವಪಕ್ಷೇ ಸ್ಮೃತಿಾಯವಿರೋಧಪರಿಹಾರಃ, ಪ್ರಧಾನಾದಿವಾದಾನಾಂ ಚ ನ್ಯಾಯಾಭಾಸೋಪಬೃಂಹಿತತ್ವಮ್, ಪ್ರತಿವೇದಾನ್ತಂ ಚ ಸೃಷ್ಮಾದಿಪ್ರಕ್ರಿಯಾಯಾ ಅವಿಗೀತತ್ವಮ್ ಇತ್ಯಸ್ಯ ಅರ್ಥಜಾತಸ್ಯ ಪ್ರತಿಪಾದನಾಯ ದ್ವಿತೀಯೋsಧ್ಯಾಯಃ ಆರಭ್ಯತೇ ||

(ಭಾಷ್ಯಾರ್ಥ) ಒಂದನೆಯ ಅಧ್ಯಾಯದಲ್ಲಿ ಸರ್ವಜ್ಞನಾದ ಸರ್ವೆಶ್ವರನು ಜಗತ್ತಿಗೆ ಮಣ್ಣು, ಚಿನ್ನ - ಮುಂತಾದವುಗಳು ಗಡಿಗೆ, ಅಸಲಿ ಮುಂತಾದವುಗಳಿಗೆ (ಕಾರಣವಾಗಿರು)ವಂತ ಉತ್ಪತ್ತಿಕಾರಣವು ; ಹುಟ್ಟಿದ ಜಗತ್ತನ್ನು ಕಟ್ಟಿನಲ್ಲಿಟ್ಟಿರುವದರಿಂದ ಮಾಯಾವಿಯು ಮಾಯೆಗೆ (ಕಾರಣವಾಗಿರು)ವಂತ ಸ್ಥಿತಿಕಾರಣವು ; ಮತ್ತು ಹರಡಿರುವ ಜಗತ್ತಿಗೆ ಭೂಮಿಯು ನಾಲ್ಕು ಬಗೆಯ ಭೂತಸಮೂಹಕ್ಕೆ (ಕಾರಣವಾಗಿರು)ವಂತೆ ಆತ್ಮ ನಲ್ಲಿಯೇ ಅಡಗಿಸಿಕೊಳ್ಳುವ ಕಾರಣವು ; ಆತನೇ ನಮ್ಮಗಳೆಲ್ಲರ ಆತ್ಮನು - ಎಂದು ವೇದಾಂತವಾಕ್ಯಗಳ ಸಮನ್ವಯವನ್ನು ತೋರಿಸುವದರ ಮೂಲಕ ತಿಳಿಸಿಕೊಟ್ಟ

೬೫೬

ಬ್ರಹ್ಮಸೂತ್ರಭಾಷ್ಯ

[ಅ. ೨ ಪಾ. ೧.

ಪ್ಲಾಯಿತು. ಪ್ರಧಾನವೇ ಮುಂತಾದವು (ಜಗತ್ತಿಗೆ) ಕಾರಣವೆಂಬ ವಾದಗಳು ಅಶಬ್ದ (ವಾಗಿವೆ) ಎಂದು ನಿರಾಕರಿಸಿದ್ಧೂ ಆಯಿತು.