ಒಂದನೆಯ ಅಧ್ಯಾಯ - ಮೂರನೆಯ ಪಾದ (ಅಸ್ಪಷ್ಟಬ್ರಹ್ಮಲಿಂಗವಾಕ್ಯಗಳ ವಿಚಾರ)

೧. ದ್ಯುಚ್ಛಾದ್ಯಧಿಕರಣ (೧-೭) (ಮುಂಡಕದ ೨-೨-೫ ರಲ್ಲಿರುವ ದ್ಯುಲೋಕಾದಿಗಳ ಆಯತನವು ಬ್ರಹ್ಮ)

ದ್ಯುಚ್ಛಾದ್ಯಾಯತನಂ ಸ್ವಶಬ್ದಾತ್ |loll ೧. ದ್ಯುಲೋಕಭೂಮ್ಯಾದಿಗಳಿಗೆ ಆಯತನವಾಗಿರುವದು (ಬ್ರಹ್ಮವು) ; ಏಕೆಂದರೆ (ಇಲ್ಲಿ) ಸ್ವಶಬ್ದವಿದೆ.

ವಿಷಯವೂ ಸಂಶಯವೂ

(ಭಾಷ್ಯ) ೨೨೦. ಇದಂ ಶ್ರಯತೇ - “ಯಸ್ಮಿನ್ ದೈಃ ಪೃಥಿವೀಚಾಸ್ತರಿಕ್ಷಮೋತಂ ಮನಃ ಸಹ ಪ್ರಾಣೈಶ್ಚ ಸರ್ವಃ | ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಞ್ಞಥಾಮೃತಸ್ಮಿಷ ಸೇತುಃ” (ಮುಂ. ೨-೨-೫) ಇತಿ | ಅತ್ರ ಯದೇತತ್ ದ್ಯುಪ್ರಚ್ಛನಾಮ್ ಓತತ್ವವಚನಾತ್ ಆಯತನಂ ಕಿಂಚಿದವಗಮ್ಯತೇ, ತತ್ ಕಿಂ ಪರಂ ಬ್ರಹ್ಮ ಸ್ಮಾತ್, ಆಹೋಸ್ಟಿತ್ ಅರ್ಥಾನ್ನರಮ್ ಇತಿ ಸನ್ನಿಹತೇ ||

(ಭಾಷ್ಯಾರ್ಥ) “ಯಾವನಲ್ಲಿ ದ್ಯುಲೋಕವೂ ಪೃಥಿವಿಯೂ ಅಂತರಿಕ್ಷವೂ ಎಲ್ಲಾ ಪ್ರಾಣ ಗಳಿಂದೊಡಗೂಡಿದ ಮನನ್ನೂ ಹೆಣೆದುಕೊಂಡಿರುವವೋ ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ, ಬೇರೆಯ ಮಾತುಗಳನ್ನು ಬಿಡಿರಿ. ಅಮೃತಕ್ಕೆ ಇದೇ ಸೇತು” (ಮುಂ. ೨-೨-೫) ಎಂಬೀ (ವಾಕ್ಯವು) ಶ್ರುತಿಯಲ್ಲಿದೆ. ಇಲ್ಲಿ ದ್ಯುಲೋಕವೇ ಮುಂತಾದವುಗಳು (ಇದರಲ್ಲಿ) ಹಣೆದುಕೊಂಡಿರುವವೆಂದು ಹೇಳಿರುವದರಿಂದ ಯಾವದೋ ಒಂದು ಆಯತನ’ (ವಿರಬೇಕೆಂದು) ಅರಿವಾಗುತ್ತಿದೆಯಲ್ಲ, ಅದೇನು ಪರಬ್ರಹ್ಮವಾಗಿರ

  1. ಆಶ್ರಯವಾಗಿರುವ ವಸ್ತು.

೩೫೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಬಹುದೆ, ಅಥವಾ ಮತ್ತೆ ಯಾವದಾದರೂ ಒಂದು ಪದಾರ್ಥವ ? ಎಂದು ಸಂಶಯ ವಾಗುತ್ತದೆ.

ಪೂರ್ವಪಕ್ಷ : ಈ ಆಯತನವು ಪ್ರಧಾನಾದಿಗಳಲ್ಲಿ ಒಂದು

(ಭಾಷ್ಯ) ೨೨೧. ತತ್ರ ಅರ್ಥಾವರಂ ಕಿಮಪಿ ಆಯತನಂ ಸ್ಯಾತ್ ಇತಿ ಪ್ರಾಪ್ತಮ್ |ಕಸ್ಮಾತ್ ? “ಅಮೃತಸ್ಮಿಷ ಸೇತುಃ’ ಇತಿ ಶ್ರವಣಾತ್ ಪಾರವಾನ್ ಹಿಲೋಕೇ ಸೇತುಃ ಪ್ರಖ್ಯಾತಃ | ನ ಚ ಪರಸ್ಯ ಬ್ರಹ್ಮಣಃ ಪಾರವತ್ಯಂ ಶಕ್ಯಮ್ ಅಭ್ಯುಪಗನ್ನಮ್ | “ಅನನ್ಯಮಪಾರಂ’ (ಬೃ. ೨-೪-೧೨) ಇತಿ ಶ್ರವಣಾತ್ | ಅರ್ಥಾನ್ನರೇ ಚ ಆಯತನೇ ಪರಿಗೃಹ್ಯಮಾಣೇ ಸ್ಮೃತಿಪ್ರಸಿದ್ಧಂ ಪ್ರಧಾನಂ ಪರಿಗೃಹೀತವ್ಯಮ್ | ತಸ್ಯ ಕಾರಣ? ಆಯತನವಪತ್ತೆಃ 1 ಶ್ರುತಿಪ್ರಸಿದ್ಧೂ ವಾ ವಾಯುಃ ಸ್ಯಾತ್ |,‘‘ವಾಯು, ಗೌತಮ ತತ್ ಸೂತ್ರಂ ವಾಯುನಾ ವೈ ಗೌತಮ ಸೂತ್ರೇಣಾಯಂ ಚ ಲೋಕಃ ಪರಶ್ಚ ಲೋಕಃ ಸರ್ವಾಣಿ ಚ ಭೂತಾನಿ ಸಂತೃಪ್ಲಾನಿ ಭವನಿ’’ (ಬೃ. ೩-೭-೨) ಇತಿ ವಾಯೋರಪಿ ವಿಧಾರಣತ್ವಶ್ರವಣಾತ್ | ಶಾರೀರೋ ವಾ ಸ್ಯಾತ್ | ತಸ್ಯಾಪಿ ಭೋಕೃತ್ವಾತ್ ಭೋಗ್ಯಂ ಪ್ರಪಞ್ಚಂ ಪ್ರತಿ ಆಯತನಕ್ಕೋಪವತ್ತೇ ಇತಿ ||

(ಭಾಷ್ಯಾರ್ಥ) ಇಲ್ಲಿ ಆಯತನವು (ಬ್ರಹ್ಮವನ್ನು ಬಿಟ್ಟು ಬೇರೆ ಯಾವದೋ ಒಂದು ಪದಾರ್ಥವಾಗಿರಬೇಕು ಎಂದು (ಪೂರ್ವಪಕ್ಷವು) ಬಂದೊದಗುತ್ತದೆ. ಏಕೆ ? ಎಂದರೆ “ಅಮೃತಕ್ಕೆ ಇದೇ ಸೇತು’ ಎಂದು ಶ್ರುತಿಯಲ್ಲಿರುವದರಿಂದ ಲೋಕದಲ್ಲಿ ಸೇತುವಿಗೆ ಪಾರವುಂಟು - ಎಂದು ಪ್ರಸಿದ್ಧವಾಗಿರುತ್ತದೆ. ಆದರೆ ಪರಬ್ರಹ್ಮಕ್ಕೆ ಪಾರವುಂಟೆಂದು ಒಪ್ಪುವದಕ್ಕಾಗುವದಿಲ್ಲ. ಅನಂತವಾದದ್ದು, ಅಪಾರವಾದದ್ದು” (ಬೃ. ೨-೪-೧೨) ಎಂದು ಶ್ರುತಿಯಲ್ಲಿದೆ. ಬೇರೊಂದು ಪದಾರ್ಥವನ್ನು ಆಯತನವೆಂದು ಇಟ್ಟು ಕೊಳ್ಳುವದಾದರೆ ಸ್ಮತಿಪ್ರಸಿದ್ಧವಾದ ಪ್ರಧಾನವನ್ನೇ ತೆಗೆದುಕೊಳ್ಳಬೇಕು ; ಏಕೆಂದರೆ (ಎಲ್ಲಕ್ಕೂ ಕಾರಣವಾಗಿರುವದರಿಂದ (ಅದು) ಆಯತನವಾಗಬಹುದಾಗಿದೆ. ಅಥವಾ ವಾಯುವಾದರೂ ಆಗಬಹುದು. ಏಕೆಂದರೆ ‘ಗೌತಮನೆ, ವಾಯುವೇ ಆ ಸೂತ್ರವು ; ಗೌತಮನೆ, ವಾಯುವೆಂಬ ಸೂತ್ರದಿಂದಲೇ ಈ ಲೋಕವೂ ಪರಲೋಕವೂ ಸರ್ವ ಭೂತಗಳೂ ಕಟ್ಟಲ್ಪಟ್ಟಿವೆ" (ಬೃ. ೩-೭-೨) ಎಂದು ವಾಯುವೂ (ಎಲ್ಲವನ್ನೂ)

  1. ಸೂತ್ರಾತ್ಮನೆಂಬ ಅಪರಬ್ರಹ್ಮವು ಎಂದರ್ಥ.

ಅಧಿ. ೧. ಸೂ. ೧) ಸಿದ್ಧಾಂತ : ಸ್ವಶಬ್ದವಿರುವದರಿಂದ ಈ ಆಶ್ರಯವು ಬ್ರಹ್ಮವೇ ೩೫೭ ಎತ್ತಿ ಹಿಡಿದುಕೊಂಡಿದೆ ಎಂದು ಶ್ರುತಿಯಲ್ಲಿದೆ. ಅಥವಾ ಶಾರೀರನಾಗಬಹುದು, ಏಕೆಂದರೆ ಭೋಕ್ತವಾಗಿರುವದರಿಂದ ಅವನೂ ಭೋಗ್ಯಪ್ರಪಂಚಕ್ಕೆ ಆಶ್ರಯವಾಗ ಬಹುದು.

ಸಿದ್ಧಾಂತ : ಸ್ವಶಬ್ದವಿರುವದರಿಂದ ಈ ಆಶ್ರಯವು ಬ್ರಹ್ಮವೇ

  • (ಭಾಷ್ಯ) ೨೨೨. ಏವಂ ಪ್ರಾಪ್ತ ಇದಮಾಹ - ದ್ಯುಭಾದ್ಯಾಯತನಮ್ ಇತಿ ! ದೈಶ್ಚ ಭೂಶ್ಚ ದ್ಯುಭುವೇ | ದ್ಯುಭುವೇ ಆದೀ ಯಸ್ಯ ತದಿದಂ ದ್ಯುಚ್ಛಾದಿ | ಯದೇತತ್ ಅಸ್ಮಿನ್ ವಾಕ್ಕೇ ದೈಃ ಪೃಥಿವ್ಯಸ್ತರಿಕ್ಷ ಮನಃ ಪ್ರಾಣಾ ಇವ ಮಾತ್ಮಕಂ ಜಗತ್ ಓತನ ನಿರ್ದಿಷ್ಟಮ್, ತಸ್ಯ ಆಯತನಂ ಪರಂ ಬ್ರಹ್ಮ ಭವಿತುಮರ್ಹತಿ 1 ಕುತಃ ? ಸ್ವಶಬ್ದಾತ್ | ಆತ್ಮಶಬ್ದಾತ್ ಇತ್ಯರ್ಥ: | ಆತ್ಮಶಬ್ದ ಹಿ ಇಹ ಭವತಿ - ‘ತಮವೈಕಂ ಜಾನಥ ಆತ್ಮಾನಮ್’ ಇತಿ | ಆತ್ಮಶಬ್ದಶ್ಚ ಪರಮಾತ್ಮಪರಿಗ್ರಹ ಸಮ್ಯಕ್ ಅವಕಲ್ಪತೇ ನ ಅರ್ಥಾನ್ನರಪರಿಗ್ರಹೇ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸೂತ್ರಕಾರರು) ಈ (ಸಿದ್ಧಾಂತವನ್ನು ) ಹೇಳುತ್ತಾರೆ. “ದ್ಯುಚ್ಛಾದ್ಯಾಯತನಮ್’ ದ್ಯುಲೋಕವೂ ಭೂಲೋಕವೂ ದ್ಯುಭೂಗಳು ; ದ್ಯುಭೂಗಳು ಯಾವದಕ್ಕೆ ಆದಿಯೋ ಆ ಇದು ದ್ಯುಚ್ಛಾದಿ ; ಈ ವಾಕ್ಯದಲ್ಲಿ ದ್ಯುಲೋಕ, ಪೃಥಿವಿ, ಅಂತರಿಕ್ಷ, ಮನಸ್ಸು, ಪ್ರಾಣಗಳು - ಎಂಬೀ ರೂಪದ ಈ ಜಗತ್ತು ಹಣೆದುಕೊಂಡಿದೆಯೆಂದು ಹೇಳಿದೆ ಯಲ್ಲ, ಅದಕ್ಕೆ ಆಯತನವು ಪರಬ್ರಹ್ಮವೇ ಆಗಿರಬೇಕು. ಏಕೆ ? ಎಂದರೆ ‘ಸ್ವಶಬ್ದ ವಿರುವದರಿಂದ’ ; ಆತ್ಮಶಬ್ದವಿರುವದರಿಂದ ಎಂದರ್ಥ. ಇಲ್ಲಿ “ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ” (ಮುಂ. ೨-೨-೫) ಎಂದು ಆತ್ಮಶಬ್ದವಲ್ಲವ, ಶ್ರುತಿಯಲ್ಲಿದೆ ? ಆತ್ಮಶಬ್ದವು ಪರಮಾತ್ಮನನ್ನು ತೆಗೆದುಕೊಂಡರೆ ಚೆನ್ನಾಗಿ ಹೊಂದು ತದೆಯೇ ಹೊರತು ಬೇರೊಂದು ಪದಾರ್ಥವನ್ನು ತೆಗೆದುಕೊಂಡರೆ (ಹೊಂದುವ) ದಿಲ್ಲ.

  1. ಪೂರ್ವಪಕ್ಷದಲ್ಲಿ ಪ್ರಧಾನಾದಿಗಳನ್ನು ಹೀಗೆಂದು ಉಪಾಸನೆಮಾಡಬೇಕೆಂದು ಶ್ರುತಿಗೆ ಅರ್ಥ. ಸಿದ್ಧಾಂತದಲ್ಲಿ ಇಂಥ ಬ್ರಹ್ಮದ ಜ್ಞಾನವನ್ನು ಮಾಡಿಕೊಳ್ಳಬೇಕೆಂದು ಅರ್ಥ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. “ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ’ ಎಂಬುದರ ಅರ್ಥ

(ಭಾಷ್ಯ) ೨೨೩. ಕ್ವಚಿಚ್ಚ ಸ್ವಶಪ್ಡೇನೈವ ಬ್ರಹ್ಮಣಃ ಆಯತನತ್ವಂಪ್ಯೂಯತೇ ‘ಸನ್ಮೂಲಾ ಸೋಮಾಃ ಸರ್ವಾ: ಪ್ರಜಾಃ ಸದಾಯತನಾಃ ಸತ್ಪತಿಷ್ಠಾಃ’ (ಛಾಂ. ೬-೮-೪) ಇತಿ | ಸ್ವಶದ್ದೇನೈವ ಚ ಇಹ ಪುರಸ್ತಾತ್ ಉಪರಿಷ್ಕಾಚ ಬ್ರಹ್ಮ ಸಂಕೀರ್ತ್ಯತೇ - “ಪುರುಷ ಏವೇದಂ ವಿಶ್ವಂ ಕರ್ಮ ತಪೋ ಬ್ರಹ್ಮ ಪರಾಮೃತಮ್’’ (ಮುಂ. ೨-೧ ೧೦) ಇತಿ | ‘ಬ್ರಹ್ಮವೇದಮಮೃತಂ ಪುರಸ್ಕಾದೃಹ್ಮ ಪಶ್ಚಾದ್ ಬ್ರಹ್ಮ ದಕ್ಷಿಣತ ಶ್ಲೋತ್ತರೇಣ” (ಮುಂ. ೨-೨-೧೨) ಇತಿ ಚ | ತತ್ರ ತು ಆಯತನಾಯತನ ವಾವಶ್ರವಣಾತ್, ಸರ್ವಂ ಬ್ರಹ್ಮ ಇತಿ ಚ ಸಾಮಾನಾಧಿಕರಣ್ಯಾತ್, ಯಥಾ ಅನೇಕಾತ್ಮಕೋ ವೃಕ್ಷ ಶಾಖಾ ಸನ್ನೋ ಮೂಲಂ ಚ ಇತಿ, ಏವಂ ನಾನಾರಸೋ ವಿಚಿತ್ರ ಆತ್ಮಾಇತ್ಯಾಶಜ್ಞಾ ಸಂಭವತಿ | ತಾಂ ನಿವರ್ತಯಿತುಂ ಸಾವಧಾರಣಮ್ ಆಹ - “ತಮೇವೈಕಂ ಜಾನಥ ಆತ್ಮಾನಮ್’ ಇತಿ | ಏತದುಕ್ತಂ ಭವತಿ - ನ ಕಾರ್ಯ ಪ್ರಪಞ್ಚವಿಶಿಷ್ಟೂ ವಿಚಿತ್ರ ಆತ್ಮಾ ವಿಜೇಯಃ, ಕಿಂ ತರ್ಹಿ, ಅವಿದ್ಯಾಕೃತಂ ಕಾರ್ಯಪ್ರಪಞ್ಞಂ ವಿದ್ಯಯಾ ಪ್ರವಿಲಾಪಯಸ್ತ: ತಮೇವೈಕಂ ಆಯತನಭೂತಮ್ ಆತ್ಮಾನಂ ಜಾನಥ ಏಕರಸಮ್ ಇತಿ | ಯಥಾ ಯಸ್ಮಿನ್ ಆಸ್ತೆ ದೇವದತ್ತ: ತತ್ ಆನಯ ಇತ್ಯುಕ್ತಃ ಆಸನಮೇವ ಆನಯತಿ ನ ದೇವದತ್ತಮ್, ತದ್ವತ್ ಆಯತನಭೂತವ ಏಕರಸಸ್ಯ ಆತ್ಮನಃ ವಿಜೇಯತ್ವಮ್ ಉಪದಿಶ್ಯತೇ | ವಿಕಾರಾವೃತಾಭಿಸನ್ಯಸ್ಯ ಚ ಅಪವಾದಃ ಶೂಯತೇ -‘ಮೃತ್ಯೋಃ ಸ ಮೃತ್ಯುಮಾಪ್ರೀತಿ ಯ ಇಹ ನಾನೇವ ಪಶ್ಯತಿ |’ (ಕ. ೨-೨-) ಇತಿ | ‘ಸರ್ವಂ ಬ್ರಹ್ಮ’ ಇತಿ ತು ಸಾಮಾನಾಧಿಕರಣ್ಯಂ ಪ್ರಪಞ್ಚಪ್ರವಿಲಾಪನಾರ್ಥಂ, ನಾನೇಕರಸತಾಪ್ರತಿಪಾದನಾ ರ್ಥಮ್ | “ಸ ಯಥಾ ಸೈಷ್ಣವಘನೋಳನನ್ನರೋಬಾಹ್ಯಃ ಕೃತ್ಯ ರಸಘನ ಏವಂ ವಾ ಅರೇಂಯಮಾತ್ಮಾನರೋಬಾಹ್ಯಃ ಕೃತ್: ಪ್ರಜ್ಞಾನಘನ ಏವ’ (ಬೃ. ೪-೫-೧೩) ಇಕರಸತಾಶ್ರವಣಾತ್ | ತಸ್ಮಾತ್ ದ್ಯುಚ್ಛಾದ್ಯಾಯತನಂ ಪರಂ ಬ್ರಹ್ಮ ||

(ಭಾಷ್ಯಾರ್ಥ) ಮತ್ತು ಒಂದು ಕಡೆಯಲ್ಲಿ “ಎಲೈ ಸೋಮ್ಮನೆ, ಈ ಸರ್ವಪ್ರಜೆಗಳೂ ಸನ್ನೂಲವಾಗಿವೆ. ಸದಾಯತನವಾಗಿವೆ, ಸತ್ಪತಿಷ್ಠಗಳಾಗಿವ” (ಛಾಂ. ೬-೮-೪)

ಅಧಿ. ೧. ಸೂ. ೧] ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ ಎಂಬುದರ ಅರ್ಥ ೩೫೯

ಎಂದು ಬ್ರಹ್ಮವು ಎಲ್ಲಕ್ಕೂ ಆಯತನವೆಂದು ಸ್ವಶಬ್ದದಿಂದಲೇ’ ಶ್ರುತಿಯಲ್ಲಿ ಹೇಳಿದೆ. ಮತ್ತು ಈ (ಉಪನಿಷತ್ತಿನಲ್ಲಿ (ಇದರ) ಹಿಂದೂಮುಂದೂ ಬ್ರಹ್ಮವನ್ನು ಸ್ವಶಬ್ದದಿಂದಲೇ ‘ಕರ್ಮವೂ ತಪಷ್ಟೂ - ಇದಲ್ಲವೂ ಪುರುಷನೇ, ಹೆಚ್ಚಿನ ಅಮೃತವಾದ ಬ್ರಹ್ಮವೇ’ (ಮುಂ. ೨-೧-೧೦) ಎಂದೂ ‘ಮುಂದೆ ಇರುವ ಇದು ಅಮೃತವಾದ ಬ್ರಹ್ಮವೇ, ಹಿಂದ ಬ್ರಹ್ಮವೇ, ದಕ್ಷಿಣಕ್ಕೂ ಬ್ರಹ್ಮವೇ, ಉತ್ತರಕ್ಕೂ (ಬ್ರಹ್ಮವೇ)” (ಮುಂ. ೨-೨-೧೨) ಎಂದೂ ಹೇಳಿರುತ್ತದೆ. ಆದರೆ ಇಲ್ಲಿ ಆಯತನ, ಆಯತನವುಳ್ಳ (ಭೂತಗಳು) ಎಂಬ (ಸಂಬಂಧ)ವನ್ನು ಹೇಳಿರುವದರಿಂದಲೂ ಎಲ್ಲವೂ ಬ್ರಹ್ಮವೇ ಎಂದು ಸಾಮಾನಾಧಿಕರಣ್ಯ (ವನ್ನು ಹೇಳಿರುವದ)ರಿಂದಲೂ ಹೇಗೆ ಕೊಂಬೆ, ಬುಡ, ಬೇರು - ಎಂದು ಮರವು ಅನೇಕಾತ್ಮಕವಾಗಿರುವದೋ ಹಾಗೆಯೇ ಆತ್ಮನು ನಾನಾರಸವಾಗಿ ಬಗೆಬಗೆಯಾಗಿರುವನು ಎಂಬ ಆಶಂಕೆಯು ಉಂಟಾಗ ಬಹುದಾಗಿದೆ ; (ಆ ಶಂಕೆಯನ್ನು) ಹೋಗಲಾಡಿಸುವದಕ್ಕಾಗಿ ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ” ಎಂದು (ಈ ಶ್ರುತಿಯಲ್ಲಿ) ಒತ್ತಿ ಹೇಳಿರುತ್ತದೆ. (ಈ ಶ್ರುತಿಯಲ್ಲಿ) ಇಷ್ಟನ್ನು ಹೇಳಿದಂತಾಗಿರುತ್ತದೆ : ಕಾರ್ಯಪ್ರಪಂಚದಿಂದ ಕೂಡಿ ಕೊಂಡು ವಿಚಿತ್ರವಾಗಿರುವನೆಂದು ಆತ್ಮನನ್ನು ಅರಿಯಬಾರದು ; ಮತ್ತೇನೆಂದರೆ ಅವಿದ್ಯಾಕೃತವಾದ ಕಾರ್ಯಪ್ರಪಂಚವನ್ನು ವಿದ್ಯೆಯಿಂದ ಕರಗಿಸಿ, (ಅದಕ್ಕೆ) ಆಯತನವಾಗಿರುವ ಆತನೊಬ್ಬನನ್ನೇ, ಏಕರಸನಾದ ಆತ್ಮನೆಂದು ಅರಿತುಕೊಳ್ಳಿರಿ. ಹೇಗ, ದೇವದತ್ತನು ಯಾವದರಲ್ಲಿ ಕುಳಿತಿರುವನೋ ಅದನ್ನು ತೆಗೆದುಕೊಂಡು ಬಾ’ ಎಂದರೆ ಆಸನವನ್ನು ತರುತ್ತಾರೆಯೇ ಹೊರತು ದೇವದತ್ತನನ್ನು ತರುವದಿಲ್ಲವೋ

  1. ಬ್ರಹ್ಮವೇ ಎಲ್ಲಕ್ಕೂ ಆಯತನವೆಂದು ಈ ಶ್ರುತಿಯಲ್ಲಿ ಸ್ವಶಬ್ದದಿಂದಲೇ ಎಂದರೆ ಬ್ರಹ್ಮವಾಚಕವಾದ ಸತ್ ಎಂಬ ಶಬ್ದದಿಂದಲೇ ಸ್ಪಷ್ಟವಾಗಿ ಹೇಳಿರುತ್ತದೆ ಎಂದರ್ಥ. ‘ಸ್ಪಶಬ್ದಾತ್’ ಎಂಬುದಕ್ಕೆ ಮತ್ತೊಂದು ವ್ಯಾಖ್ಯಾನವಿದು.

  2. ಬ್ರಹ್ಮಶಬ್ದದಿಂದಲೇ ಎಂದರ್ಥ. ಸ್ವಶಬ್ದಾಚ್ಚ ಎಂಬುದಕ್ಕೆ ಇದು ಮೂರನೆಯ ವ್ಯಾಖ್ಯಾನ.

  3. ಛಾಂದೋಗ್ಯದಲ್ಲಿಯೂ ಈ ಶ್ರುತಿಯಲ್ಲಿಯೂ.

  4. ಏಕಮ್ ಎಂಬ ಮಾತಿನ ಮುಂದ ಅವಧಾರಣೆಯನ್ನು ಹೇಳುವ ಶಬ್ದವು ಯಾವದೂ ಇಲ್ಲದಿದ್ದರೂ ಏಕ - ಎಂದರೇ ಏಕರಸವಾಗಿರುವ ಎಂದರ್ಥ. ಅವನನ್ನೇ ಏಕರಸವಾಗಿರುವ ಆತ್ಮನೆಂದು ಅರಿತುಕೊಳ್ಳಿರಿ ಎಂಬುದು ವಾಕ್ಯದ ಅರ್ಥವು. ವೃಕ್ಷ ಸಮುದ್ರಾದಿದೃಷ್ಟಾಂತಗಳಿಂದ ಬ್ರಹ್ಮವು ನಾನಾರಸವಾಗಿರುವದಂದು ಛರ್ತಪ್ರಪಂಚರೇ ಮುಂತಾದವರು ಹೇಳುತ್ತಿದ್ದರು ; ಅದನ್ನು ಇಲ್ಲಿ ಖಂಡಿಸಿದ.

೩೬೦

ಬ್ರಹ್ಮಸೂತ್ರಭಾಷ್ಯ

[ಅ. ೧, ಪು. ೩.

ಅದರಂತೆ ಆಯತನವಾಗಿರುವ ಏಕರಸನಾದ ಆತ್ಮನನ್ನೇ ಅರಿತುಕೊಳ್ಳಬೇಕು (ಎಂದು ಇಲ್ಲಿ) ಉಪದೇಶಿಸಿರುತ್ತದೆ. ಕಾರ್ಯವೆಂಬ ಅಮೃತವನ್ನು ಮನಸ್ಸಿನಲ್ಲಿ ತಂದು ಕೊಳ್ಳುವಾತನನ್ನು “ಯಾವನು ಇಲ್ಲಿ ಬೇರೆಬೇರೆಯಾಗಿರುವಂತೆ ಕಾಣುತ್ತಾನೋ

ಅವನು ಸಾವಿನಿಂದ ಸಾವನ್ನು (ಮೇಲಿಂದಮೇಲೆ) ಪಡೆಯುತ್ತಿರುವನು” (ಕ. ೨-೧ M) ಎಂದು ನಿಂದಿಸಿರುವದು ಶ್ರುತಿಯಲ್ಲಿ (ಕಾಣುತ್ತದೆ. ಎಲ್ಲವೂ ಬ್ರಹ್ಮವೇ’’ ಎಂದು (ಇಲ್ಲಿ ) ಸಾಮಾನಾಧಿಕರಣ್ಯವನ್ನು (ಹೇಳಿರುವದೋ ) ಎಂದರೆ (ಅದು) ಪ್ರಪಂಚವನ್ನು ಪ್ರವಿಲಯಮಾಡುವದಕ್ಕೇ ಹೊರತು (ಬ್ರಹ್ಮವು) ಅನೇಕರಸವಾಗಿರು ವದಂದು ತಿಳಿಸುವದಕ್ಕಲ್ಲ. ಏಕೆಂದರೆ ‘‘ಹೇಗೆ ಉಪ್ಪಿನ ಹರಳು ಒಳಗಂಬುದಿಲ್ಲದ, ಹೊರಗೆಂಬುದಿಲ್ಲದೆ ಪೂರ್ಣವಾಗಿ ರಸದ ಗಟ್ಟಿಯೇ (ಆಗಿರುವದೊ), ಹೀಗೆಯೇ ಎಲೆ (ಮೈತ್ರೇಯಿ), ಈ ಆತ್ಮನು ಒಳಗೆಂಬುದಿಲ್ಲದೆ, ಹೊರಗೆಂಬುದಿಲ್ಲದ, ಪೂರ್ಣವಾಗಿ ಪ್ರಜ್ಞಾನದ ಗಟ್ಟಿಯೇ ಆಗಿರುವನು’ (ಬೃ. ೪-೫-೧೩) ಎಂದು (ಆತ್ಮನು) ಏಕರಸನೆಂದೇ ಶ್ರುತಿಯಲ್ಲಿ (ಹೇಳಿ)ದೆ. ಆದ್ದರಿಂದ ದ್ಯುಭ್ಯಾದಿಗಳ ಆಯತನ(ವೆಂದು ಇಲ್ಲಿ ಹೇಳಿರುವದು) ಬ್ರಹ್ಮವೇ.

ಸೇತುಶ್ರುತಿಗೆ ಗತಿ

(ಭಾಷ್ಯ) ೨೨೪. ಮತ್ತು ಉಕ್ತಮ್ - ಸೇತುಶ್ರುತೇಃ, ಸೇತೋಶ್ಚ ಪಾರವತ್ತೂಪಪತ್ತೇ? ಬ್ರಹ್ಮಣೋSರ್ಥಾನ್ನರೇಣ ದ್ಯುಲ್ವಾದ್ಯಾಯತನೇನ ಭವಿತವ್ಯಮ್ ಇತಿ | ಅತ್ರೋಚ್ಯತೇ | ವಿಧಾರಣಮಾತ್ರಮ್ ಅತ್ರ ಸೇತುಶ್ರುತ್ಯಾ ವಿವಕ್ಷತೇ ನ ಪಾರವತ್ಯಾದಿ | ನ ಹಿ ಮೃದ್ದಾರುಮಯೋ ಲೋಕೇ ಸೇತುರ್ದಷ್ಟ: ಇತಿ ಅತ್ರಾಪಿ ಮೃದ್ದಾರುಮಯ ಏವ ಸೇತುರಭ್ಯವಗಮ್ಯತೇ | ಸೇತುಶಬ್ದಾರ್ಥ್ಪಿ ವಿಧಾರಣತ್ವಮಾತ್ರಮೇವ ನ ಪಾರವತ್ಯಾದಿ | ಷಿಣ ಬನ್ಧನಕರ್ಮಣಃ ಸೇತು ಶಬ್ದ ವ್ಯುತ್ಪತ್ತೆಃ 11 ಅಪರ ಆಹ - ‘ತಮೇವೈಕಂ ಜಾನಥ ಆತ್ಮಾನಮ್’’ ಇತಿ ಯದೇತತ್ ಸಂಕೀರ್ತಿತಮ್ ಆತ್ಮಜ್ಞಾನಮ್, ಯಚ್ಛತತ್ ‘ಅನ್ಯಾ ವಾಚೋ ವಿಮುಞ್ಞಥ” ಇತಿ , ವಾಗ್ವಿಮೋಚನಮ್, ತದ ಅಮೃತತ್ವಸಾಧನಾತ್

  1. ನಾನಾರಸವಾಗಿ ತೋರುತ್ತಿರುವ ಪ್ರಪಂಚವನ್ನು ಪ್ರಾಮಾಣಿಕವೆಂದು ಹೇಳುತ್ತಿದ್ದವರಿಗೆ ಉತ್ತರವಿದು.

  2. ಉಪ್ಪಿನರಸದ ಗಟ್ಟಿಯ, ಎಲ್ಲೆಲ್ಲಿಯೂ ಉಪ್ಪೇ ಹೊರತು ಮತ್ತೊಂದಿಲ್ಲ.

ಅಧಿ. ೧. ಸೂ. ೧] ಸೇತುಶ್ರುತಿಗೆ ಗತಿ

೩೬೧

“ಅಮೃತಸ್ಮಿಷ ಸೇತುಃ ಇತಿ ಸೇತುಶ್ರುತ್ಯಾ ಸಂಕೀರ್ತ್ಯತೇ ನ ತು

ದ್ಯುಚ್ಛಾದ್ಯಾಯತನೇನ ಭಾವ್ಯಮ್ ಇತಿ, ಏತದಯುಕ್ತಮ್ ||

(ಭಾಷ್ಯಾರ್ಥ) ಇನ್ನು ಸೇತುಶ್ರುತಿ (ಯಿರುವ)ದರಿಂದಲೂ ಸೇತುವೆಯು ಪಾರವುಳ್ಳದ್ದಾಗಿರುವ ದೆಂಬುದೇ ಯುಕ್ತವಾದ್ದರಿಂದಲೂ (ಈ) ದ್ಯುಚ್ಛಾದ್ಯಾಯತನವು, ಬ್ರಹ್ಮಕ್ಕಿಂತ ಬೇರೆಯಾಗಿಯೇ ಇರಬೇಕು - ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಲ್ಲ, ಅದಕ್ಕೆ ಹೇಳುತ್ತೇವೆ : ತಡೆದಿಟ್ಟಿರುವದೆಂಬುದು ಮಾತ್ರ ಸೇತುಶ್ರುತಿಯ ಅಭಿಪ್ರಾಯವೇ ಹೊರತು ಪಾರವುಳ್ಳದ್ದಾಗಿರುವದು ಮುಂತಾದದ್ದು (ಅಲ್ಲಿ ವಿವಕ್ಷಿತ)ವಲ್ಲ. ಲೋಕದಲ್ಲಿ ಸೇತುವು ಮಣ್ಣು, ಕಟ್ಟಿಗೆ - ಇವುಗಳಿಂದಾಗಿರುವದು ಕಂಡಿರುವದ ರಿಂದ ಇಲ್ಲಿಯೂ ಮೃದ್ದಾರುಮಯವಾದ ಸೇತುವೇ (ಆಗಿರಬೇಕೆಂದು ಯಾರೂ) ಒಪ್ಪುವದಿಲ್ಲವಷ್ಟೆ. ಸೇತು ಎಂಬ ಶಬ್ದಕ್ಕೆ ಅರ್ಥವುಕೂಡ ಬರಿಯ ತಡೆದಿಟ್ಟಿರುವದು ಎಂದಿಷ್ಟೇ ಹೊರತು ಪಾರವುಳ್ಳದ್ದಾಗಿರುವಿಕೆ ಮುಂತಾದದ್ದಲ್ಲ ; ಏಕೆಂದರೆ ಸೇತು ಎಂಬ ಶಬ್ದವು ಬಂಧನಕ್ರಿಯೆಯನ್ನು (ಹೇಳುವ) ಷಿಗ್ ಎಂಬ ಧಾತುವಿನಿಂದ ವ್ಯುತ್ಪನ್ನವಾಗಿರುತ್ತದೆ.

(ಇಲ್ಲಿ) ಮತ್ತೊಬ್ಬರು ಹೇಳುತ್ತಾರೇನೆಂದರೆ “ಆತನನ್ನೇ ಒಬ್ಬ ಆತ್ಮನನ್ನಾಗಿ ಅರಿತುಕೊಳ್ಳಿರಿ’ ಎಂದು ಈ ಆತ್ಮಜ್ಞಾನವನ್ನು ಹೇಳಿದೆಯಷ್ಟ, ಮತ್ತು “ಮಿಕ್ಕ ಮಾತುಗಳನ್ನು ಬಿಡಿರಿ’’ ಎಂದು ಮಾತುಗಳನ್ನು ಬಿಡಬೇಕೆಂದು (ಹೇಳಿದೆಯಷ್ಟೆ), ಅದು ಅಮೃತತ್ವಕ್ಕೆ ಸಾಧನವಾಗಿರುವದರಿಂದ ಇದು ಅಮೃತಕ್ಕೆ ಸೇತು” ಎಂದು ಸೇತುಶ್ರುತಿಯಿಂದ ಉಕ್ತವಾಗಿರುತ್ತದೆಯೇ ಹೊರತು ದುಭ್ಯಾದ್ಯಾಯತನವನ್ನು (ಸೇತುವೆಂದು) ಹೇಳಿಲ್ಲ. ಹೀಗಿರುವಲ್ಲಿ ಸೇತುಶ್ರುತಿಯಿರುವದರಿಂದ (ಈ) ಆಯತನವು ಬ್ರಹ್ಮಕ್ಕಿಂತ ಬೇರೆಯ ಪದಾರ್ಥವಾಗಿರಬೇಕು ಎಂದು (ಪೂರ್ವ ಪಕ್ಷದಲ್ಲಿ) ಹೇಳಿತ್ತಲ್ಲ, ಅದು ಅಯುಕ್ತವು.

  1. ಸೇತು ಎಂದರೆ ಒಟ್ಟು , ಅಣೆಗಟ್ಟು - ಎಂದರ್ಥವೆಂದು ಇದರಿಂದ ತೋರುತ್ತದೆ. 2. ಇದು ಸ್ವವ್ಯಾಖ್ಯಾನವೇ ; ಉಪನಿಷದ್ಭಾಷ್ಯವನ್ನು ನೋಡಿ.

  2. ಸೇತುವೆಂದರೆ ದಾಟುವ ಸಾಧನವೆಂದರ್ಥವಂದು ಭಾವ.೬೬

ಬ್ರಹ್ಮಸೂತ್ರಭಾಷ್ಯ

[ಅ. ೧, ಪು. ೩. ಮುಕ್ತರು ಪಡೆಯತಕ್ಕದ್ದೆಂದು ಹೇಳಿರುವದರಿಂದಲೂ

ಇದು ಬ್ರಹ್ಮವೇ ಮುಕ್ಟೋಪಸೃಷ್ಯವ್ಯಪದೇಶಾತ್ ||೨|| ೨. ಮುಕ್ಟೋಪಸೃಷ್ಯನೆಂದು ಹೇಳಿರುವದರಿಂದ.

(ಭಾಷ್ಯ) ೨೨೫. ಇತಶ್ಚ ಪರಮೇವ ಬ್ರಹ್ಮ ದ್ಯುಭಾದ್ಯಾಯತನಮ್ | ಯಸ್ಮಾತ್ ಮುಕ್ಕೋಪಸ್ಸಪ್ಯತಾ ಅಸ್ಯ ವ್ಯಪದಿಶ್ಯಮಾನಾ ದೃಶ್ಯತೇ ! ಮುಕ್ತಃ ಉಪಸೃಷ್ಯಂ ಮುಪಸೃಷ್ಯಮ್ | ದೇಹಾದಿಷು ಅನಾತ್ಮಸು ‘ಅಹಮ’ ಇತ್ಯಾತ್ಮ ಬುದ್ದಿ

ರವಿದ್ಯಾ | ತತಃ ತತ್ತೂಜನಾದೇ ರಾಗಃ, ತತ್ಪರಿಭವಾದೌ ದ್ವೇಷಃ, ತದುಚ್ಛೇದ ದರ್ಶನಾತ್ ಭಯಮ್, ಮೋಹಶ್ಚ - ಇವಮಯಮ್ ಅನನ್ತಭೇದೋನರ್ಥ ಪ್ರಾತಃ ಸವ್ರತಃ ಸರ್ವಷಾಂ ನಃ ಪ್ರತ್ಯಕ್ಷಃ | ತದ್ವಿಪರ್ಯಯೇಣ ಅವಿದ್ಯಾರಾಗದ್ವೇಷಾದಿ ದೋಷಮುಕ್ತಃ ಉಪಸೃಷ್ಯಂ ಗಮ್ಮಮೇತತ್ ಇತಿ ದ್ಯುಚ್ಛಾದ್ಯಾಯತನಂ ಪ್ರಕೃತ್ಯ

ವ್ಯಪದೇಶೋಭವತಿ | ಕಥಮ್? ‘‘ಭಿವ್ಯತೇ ಹೃದಯಗ್ರಶ್ನಿದ್ಯ ಸರ್ವಸಂಶಯಾಃ 1 ಕ್ಷಿಯನ್ನೇ ಚಾಸ್ಯ ಕರ್ಮಾಣಿ ತಸ್ಮಿನ್ ದೃಷ್ಟೇ ಪರಾವರೇ’ (ಮುಂ. ೨-೨-೮) ಇತ್ಯುಕ್ಕಾ ಬ್ರವೀತಿ, ‘‘ತಥಾ ವಿದ್ವಾನ್ನಾಮರೂಪಾದ್ವಿಮುಕ್ತಃ ಪರಾತ್ಪರಂ ಪುರುಷಮುಪ್ಪತಿ ದಿವ್ಯಮ್” (ಮುಂ. ೩-೨-೮) ಇತಿ | ಬ್ರಹ್ಮಣಶ್ಚ ಮುಕ್ಕೋಪ ಸೃಷ್ಯತ್ವಂ ಪ್ರಸಿದ್ಧಂ ಶಾಸ್ತ್ರ - “ಯದಾ ಸರ್ವ ಪ್ರಮುಚ್ಯನೇ ಕಾಮಾ ಯೇಸ್ಯ ಹೃದಿ ಶ್ರಿತಾಃ | ಅಥ ಮರ್ಕ್ಯೂಮೃತೋ ಭವತ್ಯತ್ರ ಬ್ರಹ್ಮ ಸಮಶ್ನುತೇ” (ಬೃ. ೪-೪-೭) ಇವಮಾದೌ | ಪ್ರಧಾನಾದೀನಾಂ ತು ನ ಕ್ವಚಿತ್ ಮುಕ್ಟೋಪಸೃಷ್ಯತ್ವಮಸ್ತಿ ಪ್ರಸಿದ್ಧಮ್ | ಅಪಿ ಚ ‘ತಮೇಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಞ್ಞಥಾಮೃತಸ್ಮಷ ಸೇತುಃ’’ ಇತಿ ವಾಗ್ವಿಮೋಕಪೂರ್ವಕಂ ವಿಜೇಯತ್ವಮ್ ಇಹ ದ್ಯುಚ್ಛಾದ್ಯಾಯತನಸ್ಯ ಉಚ್ಯತೇ ತಚ್ಚ ಶ್ರುತ್ಯನ್ತರೇ ಬ್ರಹ್ಮಣೋದೃಷ್ಟಮ್ ‘ತಮೇವ ಧೀರೋ ವಿಜ್ಞಾಯಪ್ರಜ್ಞಾಂಕುರ್ವಿತ ಬ್ರಾಹ್ಮಣಃ ನಾನುಧ್ಯಾಯಾಹೂ ಇಬಾನ್ ವಾಚೊ ವಿಗ್ಲಾಪನಂ ಹಿ ತತ್” (ಬ್ರ, ೪-೪-೨೧) ಇತಿ | ತಸ್ಮಾದಪಿ ದ್ಯುಚ್ಛಾದ್ಯಾಯತನಂ ಪರಂ ಬ್ರಹ್ಮ ||

(ಭಾಷ್ಯಾರ್ಥ) ಈ (ಕಾರಣ)ದಿಂದಲೂ (ಈ) ದ್ಯುಚ್ಛಾದ್ಯಾಯತನವು ಪರಬ್ರಹ್ಮವೇ.

ಅಧಿ. ೧. ಸೂ. ೨]

ಇದು ಬ್ರಹ್ಮವೇ

೩೬೩

ಏಕೆಂದರೆ ಇದಕ್ಕೆ ಮುಕ್ಕೋಪಸೃಷ್ಯತ್ವವನ್ನು ಹೇಳಿರುವದು ಕಂಡುಬರುತ್ತದ. ಮುಕ್ಕೋಪಸೃಷ್ಯವು, ಎಂದರೆ ಮುಕ್ತರಿಂದ ಉಪಸೃಷ್ಯವಾದದ್ದು. (ಇದರ ವಿವರ): ದೇಹವೇ ಮುಂತಾದ ಅನಾತ್ಮಗಳಲ್ಲಿ ನಾನು (ಇವೇ) ಆಗಿರುವೆನು ಎಂಬ ಆತ್ಮಬುದ್ದಿಯು ಅವಿದ್ಯಯು’ ; ಅದರಿಂದ ಅವುಗಳನ್ನು ಗೌರವಿಸುವದೇ ಮುಂತಾದದ್ದರಲ್ಲಿ ರಾಗ, ಅವುಗಳನ್ನು ತಿರಸ್ಕರಿಸುವದೇ ಮುಂತಾದದ್ದರಲ್ಲಿ ದ್ವೇಷ, ಅವುಗಳು ನಾಶವಾಗುವವೆಂದು ಕಂಡುಬರುವದರಿಂದ ಭಯ, ಮತ್ತು ಮೋಹ - ಎಂಬೀ ಅನಂತಪ್ರಕಾರವಾಗಿರುವ ಅನರ್ಥಸಮೂಹವು ಎಡೆಬಿಡದೆ ಆಗುತ್ತಿರುವದು ನಮ್ಮಗಳಿಗೆಲ್ಲ ಪ್ರತ್ಯಕ್ಷವಾಗಿರುತ್ತದೆ. ಇದಕ್ಕೆ ವಿಪರೀತವಾಗಿ ಅವಿದ್ಯಾರಾಗದ್ವೇಷಾದಿ ದೋಷಗಳಿಂದ ಮುಕ್ತರಾಗಿರುವವರಿಂದ ಉಪಸೃಷ್ಯವಾದದ್ದು’ (ಎಂದರೆ ಅವರಿಗೆ) ಸಿಕ್ಕುವದಿದು ಎಂದು (ಈ) ದ್ಯುಚ್ಛಾದ್ಯಾಯತನವನ್ನು ಕುರಿತು ಹೇಳಿರುವದಾಗಿ ರುತ್ತದೆ. ಹೇಗೆ ? ಎಂದರೆ “ಆ ಪರಾವರನನ್ನು ಕಂಡುಕೊಂಡರೆ ಹೃದಯಗ್ರಂಥಿಯು ಬಿಚ್ಚಿಕೊಳ್ಳುತ್ತದೆ, ಎಲ್ಲಾ ಸಂಶಯಗಳೂ ನಾಶವಾಗುತ್ತವೆ ; ಈತನ ಕರ್ಮಗಳೂ ಕ್ಷಯವಾಗುತ್ತವೆ’ (ಮುಂ. ೨-೨-೮) ಎಂದು ಹೇಳಿ (ದ ಬಳಿಕ) “ಹಾಗೆಯೇ ಜ್ಞಾನಿಯು ನಾಮರೂಪದಿಂದ ಬಿಡುಗಡೆಯಾಗಿ ಪರಾತ್ಪರನಾದ ದಿವ್ಯಪುರುಷನನ್ನು ಸೇರುತ್ತಾನ’ (ಮುಂ. ೩-೨-೮) ಎಂದು (ಶ್ರುತಿಯಲ್ಲಿ) ಹೇಳಿರುತ್ತದೆ. ಬ್ರಹ್ಮವು ಮುಕ್ಕೋಪಸೃಷ್ಯವೆಂಬುದು ಈತನ ಹೃದಯದಲ್ಲಿರುವವಲ್ಲ, (ಆ) ಕಾಮಗಳೆಲ್ಲವೂ ಯಾವಾಗ ಬಿಡುಗಡೆಯಾಗುವವೋ ಆಗ ಮರ್ತ್ಯನು ಅಮೃತನಾಗುವನು. ಇಲ್ಲಿಯೇ ಬ್ರಹ್ಮವನ್ನು ಸೇರುತ್ತಾನೆ” (ಬೃ. ೪-೪-೭) ಎಂಬಿವೇ ಮುಂತಾದ ಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ಆದರೆ ಪ್ರಧಾನಾದಿಗಳು ಮುಕ್ಕೋಪಕೃತ್ಯವೆಂದು ಎಲ್ಲಿಯೂ ಪ್ರಸಿದ್ಧವಾಗಿಲ್ಲ.

  1. ಅಧ್ಯಾಸವೇ ಅವಿದ್ಯಯು.

  2. ಅವಿದ್ಯಾದಿಗಳನ್ನು ಕಳೆದುಕೊಂಡ ಬಳಿಕ ಪಡೆಯುವದಕ್ಕೆ ಪ್ರಯತ್ನವನ್ನು ಮಾಡಬೇಕೆಂದೇನೂ ಅಭಿಪ್ರಾಯವಲ್ಲ ; ಪಡೆದುಕೊಂಡವರು ಅವಿದ್ಯಾದಿಮುಕ್ತರು ಎಂದೇ ಅಭಿಪ್ರಾಯ.

  3. ಈ ವಾಕ್ಯದಲ್ಲಿ ಕಾಮಾದಿಗಳಿಂದಲೂ ನಾಮರೂಪಗಳಿಂದಲೂ ಮುಕ್ತನಾದವನೇ ಬ್ರಹ್ಮವನ್ನು ಸೇರುತ್ತಾನೆಂದು ಹೇಳಿದೆ. ನಾಮರೂಪಮುಕ್ತರಾಗಿಯೇ ಸೇರುತ್ತಾರೆ ಎಂದು ಸೂತ್ರಕ್ಕೆ ಅರ್ಥವನ್ನು ಹೇಳಿದಂತೆಯೂ ಆಯಿತು.

  4. ಕಾಮಾದಿಮುಕ್ತರು ಬ್ರಹ್ಮವನ್ನು ಸೇರುವರು ಎಂಬುದು ಶ್ರುತಿಪ್ರಸಿದ್ಧವೆಂಬುದಕ್ಕೆ ಇದೊಂದು ಉದಾಹರಣೆ.

  5. ಸಾಂಖ್ಯಶಾಸ್ತ್ರದಲ್ಲಿ ಕೂಡ ಪ್ರಸಿದ್ಧವಲ್ಲ, ಉಪನಿಷತ್ತಿನಲ್ಲಂತೂ ಅದರ ಸೊಲ್ಲಿಲ್ಲ.

೩೬೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

  • ಇದಲ್ಲದೆ “ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ, ಮಿಕ್ಕ ಮಾತುಗಳನ್ನು ಬಿಡಿರಿ ; ಅಮೃತಕ್ಕೆ ಇದೇ ಸೇತು” ಎಂದು ವಾಗ್ವಿಮೋಕಪೂರ್ವಕವಾಗಿ’ ಅರಿತು ಕೊಳ್ಳಬೇಕಾದದ್ದೆಂದು (ಈ) ದ್ಯುಭಾದ್ಯಾಯತನವನ್ನು ಹೇಳಿರುತ್ತದೆ. ಅದನ್ನೂ

“ಆತನನ್ನೇ ಧೀರನಾದ ಬ್ರಾಹ್ಮಣನು ಅರಿತುಕೊಂಡು ಪ್ರಜ್ಞೆಯನ್ನು ಮಾಡಿ ಕೊಳ್ಳಬೇಕು’ ; ಬಹಳ ಮಾತುಗಳನ್ನು ಚಿಂತಿಸಬಾರದು, ಏಕೆಂದರೆ ಅದು ವಾಕ್ಕಿಗೆ ಆಯಾಸವನ್ನುಂಟುಮಾಡತಕ್ಕದ್ದು” (ಬೃ. ೪-೪-೨೧) ಎಂದು ಬೇರೊಂದು ಶ್ರುತಿ ಯಲ್ಲಿ ಬ್ರಹ್ಮದ (ವಿಷಯ) ಹೇಳಿರುವದು ಕಂಡುಬರುತ್ತದೆ. ಆದ್ದರಿಂದಲೂ (ಈ) ದ್ಯುಚ್ಛಾದ್ಯಾಯತನವು ಪರಬ್ರಹ್ಮವೇ.

ನಾನುಮಾನಮತಚ್ಚಬಾತ್ ||೩|| ೩. (ದ್ಯುಚ್ಛಾದ್ಯಾಯತನವು) ಅನುಮಾನವಲ್ಲ ; ಏಕೆಂದರೆ ಅದರ ಶಬ್ದವಿರುವದಿಲ್ಲ.

ಈ ಆಯತನವು ಪ್ರಧಾನವಲ್ಲ

(ಭಾಷ್ಯ) ೨೨೬. ಯಥಾ ಬ್ರಹ್ಮಣಃ ಪ್ರತಿಪಾದಕೋ ವೈಶೇಷಿಕೋ ಹೇತುರುಕ್ತ: ನೈವಮ್ ಅರ್ಥಾನ್ನರಸ್ಯ ವೈಶೇಷಿಕೋ ಹೇತುಃ ಪ್ರತಿಪಾದಕೋಸ್ತಿ ಇತ್ಯಾಹ | ನ ಆನುಮಾನಿಕಂ ಸಾಫ್ಟಿಸ್ಮತಿಪರಿಕಲ್ಪಿತಂ ಪ್ರಧಾನಮ್ ಇಹ ದ್ಯುಚ್ಛಾದ್ಯಾಯತನನ ಪ್ರತಿಪತ್ರವ್ಯಮ್ | ಕಸ್ಮಾತ್ ? ಅತಚ್ಛಬ್ದಾತ್ | ತಸ್ಯ ಅಚೇತನಸ್ಯ ಪ್ರಧಾನಸ್ಯ ಪ್ರತಿಪಾದಕಃ ಶಬ್ದಃ ತಚ್ಛಬ್ದಃ | ನ ತಚ್ಚಬ್ದಃ ಅತಚ್ಛಬ್ದಃ | ನ ಹಿ ಅತ್ರ ಅಚೇತನಸ್ಯ ಪ್ರಧಾನಸ್ಯ ಪ್ರತಿಪಾದಕಃ ಕಶ್ಚಿತ್ ಶಬ್ದಃ ಅಸ್ತಿ ಯೇನ ಅಚೇತನಂಪ್ರಧಾನಂ ಕಾರಣನ ಆಯತನತ್ಯೇನ ವಾ ಅವಗಮ್ಮತ | ತದ್ವಿಪರೀತಸ್ಯ ಚೇತನಸ್ಯ ಪ್ರತಿಪಾದಕಶಜ್ಯೋತ್ರಾಸ್ತಿ “ಯಃ ಸರ್ವಜ್ಞಃ ಸರ್ವವಿತ್” (ಮುಂ. ೧-೧-೯) ಇತ್ಯಾದಿಃ | ಅತ ಏವ ನ ವಾಯುರಪಿ ಇಹ ದ್ಯುಚ್ಛಾದ್ಯಾಯತನನ ಆಶೀಯತೇ ||

(ಭಾಷ್ಯಾರ್ಥ) ಹೇಗೆ (ಇದು) ಬ್ರಹ್ಮವೆಂದು ತಿಳಿಸಿಕೊಡತಕ್ಕ ವಿಶೇಷಹೇತುವನ್ನು (ಹಿಂದೆ) 1. ಮುಪಸೃಷ್ಯವ್ಯಪದೇಶಾತ್ ಎಂಬುದಕ್ಕೆ ಇದು ಇನ್ನೊಂದು ಅರ್ಥವು. 2. ಅರಿತುಕೊಂಡು ಜ್ಞಾನನಿಷ್ಠನಾಗುವದಕ್ಕೆ ಬೇಕಾದ ನಿವೃತ್ತಿಧರ್ಮಗಳನ್ನು ಮಾಡಬೇಕು.

  1. ಸ್ವಶಬ್ದವಿರುವದು, ಮುಕ್ಕೋಪಸೃಷ್ಯತ್ವವನ್ನು ಹೇಳಿರುವದು - ಎಂಬ ವಿಶೇಷ ಹೇತುವನ್ನು.

ಅಧಿ. ೧. ಸೂ. ೪] ಜೀವನೂ ದ್ಯುಭಾದ್ಯಾಯತನವಲ್ಲ

೩೬೫

ಹೇಳಲಾಯಿತೋ, ಹಾಗೆ ಮತ್ತೊಂದು ಪದಾರ್ಥವನ್ನು ತಿಳಿಸುವ ವಿಶೇಷಹೇತುವಿರು ವದಿಲ್ಲ ಎಂದು (ಈಗ) ಹೇಳುತ್ತಾರೆ : (ನಾನುಮಾನಮತಚ್ಚಬ್ಲಾತ್). ಅನುಮಾನ ದಿಂದ (ಸಾಧಿಸಬೇಕಾಗಿರುವ) ಸಾಂಖ್ಯರ ಸ್ಮೃತಿಯಲ್ಲಿ ಕಲ್ಪಿತವಾಗಿರುವ ಪ್ರಧಾನವನ್ನು ಇಲ್ಲಿ ದ್ಯುಭ್ಯಾದ್ಯಾಯತನವೆಂದು ತಿಳಿಯಬಾರದು. ಏಕೆ ? ಎಂದರೆ ಅತಬ್ದದಿಂದ. ಅದನ್ನು ಎಂದರೆ ಪ್ರಧಾನವನ್ನು ತಿಳಿಸಿಕೊಡುವ ಶಬ್ದವು ತಚ್ಛಬ್ದವು ; ತಚ್ಚಬ್ಬವಲ್ಲದ್ದು ಅತಚ್ಛಬ್ದವು. ಇಲ್ಲಿ ಅಚೇತನವಾದ ಪ್ರಧಾನವನ್ನು ತಿಳಿಸುವ ಯಾವ ಶಬ್ದವೂ ಇರುವದ ಇಲ್ಲ ; ಹಾಗಿದ್ದಿದ್ದರೆ ಅಚೇತನವಾದ ಪ್ರಧಾನವು ಕಾರಣವೆಂದಾಗಲಿ ಆಯತನವೆಂದಾಗಲಿ ನಿಶ್ಚಯಿಸಬಹುದಾಗಿತ್ತು. (ಆದರೆ) ಅದಕ್ಕೆ ವಿಪರೀತ ವಾದ ಚೇತನವನ್ನು ತಿಳಿಸುವ “ಯಾವನು ಸರ್ವಜ್ಞನೋ ಸರ್ವವಿತ್ತೂ” (ಮುಂ. ೧-೧-೯) ಎಂದು ಮುಂತಾಗಿರುವ ಶಬ್ದವು ಇಲ್ಲಿರುತ್ತದೆ. ಆದ್ದರಿಂದಲೇ ವಾಯುವೂ ಇಲ್ಲಿ ದ್ಯುಚ್ಛಾದ್ಯಾಯತನವೆಂದು ಇಟ್ಟುಕೊಳ್ಳುವ (ಹಾಗಿಲ್ಲ).

ಜೀವನೂ ದ್ಯುಚ್ಛಾದ್ಯಾಯತನವಲ್ಲ

ಪ್ರಾಣಭ್ರಚ್ಚ ||೪|| ೪. ಪ್ರಾಣಭತ್ತೂ (ಅಲ್ಲ).

(ಭಾಷ್ಯ) ೨೨೭. ಯದ್ಯಪಿ ಪ್ರಾಣಭ್ಯತೋ ವಿಜ್ಞಾನಾತ್ಮನಃ ಆತ್ಮತ್ವಂ ಚೇತನತ್ವಂ ಚ ಸಂಭವತಿ, ತಥಾಪಿ ಉಪಾಧಿಪರಿಚ್ಛಿನ್ನಜ್ಞಾನಸ್ಯ ಸರ್ವಜ್ಞತ್ವಾದ್ಯಸಂಭವೇ ಸತಿ ಅಸ್ಮಾದೇವ ಅತಚ್ಛಬ್ದಾತ್ ಪ್ರಾಣಭ್ರದಪಿ ನ ದ್ಯುಚ್ಛಾದ್ಯಾಯತನನ ಆಶ್ರಯಿ ತವಃ | ನ ಚ ಉಪಾಧಿಪರಿಚ್ಛಿನ್ನಸ್ಯ ಅವಿಭೋ ಪ್ರಾಣಭ್ಯತಃ ದ್ಯುಚ್ಛಾದ್ಯಾಯತನತ್ವ, ಮಪಿ ಸಮ್ಯಕ್ ಸಂಭವತಿ | ಪೃಥದ್ಯೋಗಕರಣಮ್ ಉತ್ತರಾರ್ಥಮ್ ||

. (ಭಾಷ್ಯಾರ್ಥ) ಪ್ರಾಣಭ್ರಗೆ (ಎಂದರೆ ಪ್ರಾಣವನ್ನು ಧರಿಸಿರುವ) ವಿಜ್ಞಾನಾತ್ಮನಿಗೆ ಆತ್ಮತ್ವವೂ ಚೇತನತ್ವವೂ ಹೊಂದುತ್ತದೆಯಾದರೂ ಉಪಾಧಿಪರಿಚ್ಛಿನ್ನವಾದ

  1. ಈಕ್ಷತೇರ್ನಾಶಬ್ದಮ್ (೧-೧-೫), ಗತಿಸಾಮಾನ್ಮಾತ್ (೧-೧-೧೦) ಎಂದು ಅಚೇತನವಾದವನ್ನು ತಿರಸ್ಕರಿಸಿದ್ಧನ್ನು ಇಲ್ಲಿ ಗಟ್ಟಿಗೊಳಿಸಿದೆ.

  2. ಅತಚ್ಛಬ್ದವೆಂದರ ತಚ್ಛಬ್ದಾಭಾವವೆಂಬ ಅರ್ಥವನ್ನು ಮೊದಲು ಮಾಡಿತ್ತು ; ತದ್ವಿರುದ್ಧವಾದದ್ದನ್ನು ಹೇಳುವ ಶಬ್ದವೆಂಬ ಅರ್ಥವನ್ನು ಈಗ ಮಾಡಿದೆ.

  3. ಅತಚ್ಛಬ್ದವಂಬ ಹೇತುವಿನಿಂದಲೇ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಜ್ಞಾನವುಳ್ಳ (ಅವನಿಗೆ) ಸರ್ವಜ್ಞತ್ವವೇ ಮುಂತಾದವು ಹೊಂದುವದಿಲ್ಲವಾಗಿ ಇದೇ ಅತಚ್ಛಬ್ದದ (ಕಾರಣ)ದಿಂದ ಪ್ರಾಣಭತ್ತೂ ದುಭ್ಯಾದ್ಯಾಯತನವೆಂದು ಇಟ್ಟು ಕೊಳ್ಳುವಹಾಗಿಲ್ಲ. ಉಪಾಧಿಪರಿಚಿನ್ನನೂ ವಿಭುವಲ್ಲದವನೂ ಆಗಿರುವ ಪ್ರಾಣಭತ್ತಿಗೆ ದ್ಯುಚ್ಛಾದ್ಯಾಯತನತ್ಯವೂ ಸರಿಯಾಗಿ ಹೊಂದುವಂತಿಲ್ಲ. (ಪ್ರಾಣಭ್ರಚ್ಚ ಎಂದು ಈ) ಸೂತ್ರವನ್ನು (ಹಿಂದಿನ ಸೂತ್ರಕ್ಕಿಂತ) ಬೇರೆಯಾಗಿ ಮಾಡಿಕೊಂಡಿರುವದು (ಜೀವ ನನ್ನು ತಿರಸ್ಕರಿಸುವ) ಮುಂದಿನ ಸೂತ್ರಗಳಲ್ಲಿ ಅವನನ್ನೇ ತೆಗೆದುಕೊಳ್ಳಬೇಕೆಂದು ತಿಳಿಸುವದಕ್ಕಾಗಿ.’

ಭೇದವ್ಯಪದೇಶಾತ್ ||೫|| ೫. ಭೇದವ್ಯಪದೇಶದಿಂದಲೂ (ಜೀವನು ಈ ಆಯತನವಲ್ಲ).

(ಭಾಷ್ಯ) ೨೨೮. ಕುತಶ್ಚ ನ ಪ್ರಾಣಭ್ರತ್ ದ್ಯುಚ್ಛಾದ್ಯಾಯತನನ ಆಶ್ರಯಿತವ್ಯ: ? (ಭೇದವ್ಯಪದೇಶಾತ್) ! ಭೇದವ್ಯಪದೇಶಶ್ಚ ಇಹ ಭವತಿ - ‘ತಮೇವೈಕಂ ಜಾನಥ ಆತ್ಮಾನಮ್’’ ಇತಿ ಜೋಯಜ್ಞಾತೃಭಾವೇನ | ತತ್ರ ಪ್ರಾಣಭ್ರತ್ ತಾವತ್ ಮುಮುಕ್ಷುತ್ಪಾತ್ ಜ್ಞಾತಾ | ಪರಿಶೇಷಾತ್ ಆತ್ಮಶಬ್ದ ವಾಚ್ಯಂ ಬ್ರಹ್ಮ ಜೇಯಂ ದ್ಯುಚ್ಛಾದ್ಯಾಯತನಮ್ ಇತಿ ಗಮ್ಯತೇ | ನ ಪ್ರಾಣಭ್ರತ್ ||

(ಭಾಷ್ಯಾರ್ಥ) ಮತ್ತೂ ಯಾವ ಕಾರಣದಿಂದ ಪ್ರಾಣಭತ್ತು ದ್ಯುಭ್ಯಾದ್ಯಾಯತನವೆಂದು ಇಟ್ಟುಕೊಳ್ಳುವದಕ್ಕಾಗದು ? ಎಂದರೆ, (ಭೇದವ್ಯಪದೇಶಾತ್). ಇಲ್ಲಿ “ಆತನನ್ನೇ ಒಬ್ಬ ಆತ್ಮನೆಂದು ಅರಿತುಕೊಳ್ಳಿರಿ’ ಎಂದು ಜ್ಯ ಜ್ಞಾತೃಭಾವದಿಂದ ಬೇರೆ (ಬೇರೆ) ಯಾಗಿ ಹೇಳಿರುವದಿದೆ. ಇಲ್ಲಿ ಮೊದಲನೆಯದಾಗಿ ಜೀವನು ಮುಮುಕ್ಷುವಾಗಿರುವದ ರಿಂದ ಜ್ಞಾತೃವು ; ಪರಿಶೇಷದಿಂದ ಆತ್ಮಶಬ್ದ ವಾಚ್ಯವಾಗಿರುವ ಬ್ರಹ್ಮವು ಜೈಯವು. (ಅದೇ) ದ್ಯುಚ್ಛಾದ್ಯಾಯತನವು (ಜೀವನಲ್ಲ), ಎಂದು ಗೊತ್ತಾಗುತ್ತದೆ.

  1. ಹೇತುವು ಒಂದೇ ಆದರೆ ‘ನಾನುಮಾನಪ್ರಾಣಭ್ಯತೆ’ ಎಂದು ಹಿಂದಿನ ಸೂತ್ರದಲ್ಲಿಯೇ ಹೇಳಲಿಲ್ಲವೇಕೆ ? ಎಂಬ ಆಕ್ಷೇಪಕ್ಕೆ ಇದು ಪರಿಹಾರ. ಮುಂದಿನ ಸೂತ್ರಗಳಲ್ಲಿ ಪ್ರಧಾನ ವಿಚಾರವಿಲ್ಲ, ಜೀವನ ವಿಚಾರವು ಮಾತ್ರ ಇದೆ ಎಂಬುದನ್ನು ತಿಳಿಸುವದಕ್ಕೆ ಹೀಗೆ ಬೇರೊಂದು ಸೂತ್ರವನ್ನು ಮಾಡಿಕೊಂಡಿದ್ದ ಎಂದು ಅಭಿಪ್ರಾಯ.

  2. ‘ಅರಿಯಿರಿ’ ಎಂದು ಜೀವನನ್ನು ಹೇಳಿದ ; ಆದ್ದರಿಂದ ಉಳಿದಿರುವ ಪರಮಾತ್ಮನನ್ನೇ ಆತ್ಮನೆಂದು ಕರೆದಿದೆ.

ಅಧಿ. ೧. ಸೂ. ೬]

ಜೀವನೂ ದ್ಯುಚ್ಛಾದ್ಯಾಯತನವಲ್ಲ

೩೬೭

ಪ್ರಕರಣಾತ್ ||೬|| ೬. ಪ್ರಕರಣದಿಂದಲೂ (ಜೀವನು ಆಯತನವಲ್ಲವೆನ್ನಬೇಕು)

(ಭಾಷ್ಯ) ೨೨೯. ಕುತಶ್ಚ ನ ಪ್ರಾಣಭ್ರದ್ ದ್ಯುಚ್ಛಾದ್ಯಾಯತನನ ಆಶ್ರಯಿತವ್ಯ: ? ಪ್ರಕರಣಾತ್ | ಪ್ರಕರಣಂ ಚೇದಂ ಪರಮಾತ್ಮನಃ | ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ” (ಮುಂ. ೧-೧-೩) ಇತಿ ಏಕವಿಜ್ಞಾನೇನ ಸರ್ವವಿಜ್ಞಾನಾಪೇಕ್ಷಣಾತ್ | ಪರಮಾತ್ಮನಿ ಹಿ ಸರ್ವಾತ್ಮಕೇ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಸ್ಯಾತ್ ನ ಕೇವಲೇ ಪ್ರಾಣಭ್ಯತಿ ||

(ಭಾಷ್ಯಾರ್ಥ) ಮತ್ತೂ ಯಾವ ಕಾರಣದಿಂದ ಪ್ರಾಣಭತ್ತನ್ನು ದ್ಯುಚ್ಛಾದ್ಯಾಯತನವೆಂದು ಇಟ್ಟುಕೊಳ್ಳಬಾರದು ? ಎಂದರೆ (ಪ್ರಕರಣಾತ್). ಇದು ಪರಮಾತ್ಮನ ಪ್ರಕರಣವೂ ಆಗಿದೆ. ಏಕೆಂದರೆ ಭಗವಂತನೆ, ಯಾವದನ್ನು ಅರಿತುಕೊಂಡರೆ ಇದೆಲ್ಲವನ್ನೂ ಅರಿತಂತಾಗುವದು ? (ಮುಂ. ೧-೧-೩) ಎಂದು ಒಂದರ ಅರಿವಿನಿಂದ ಎಲ್ಲದರ ಅರಿವನ್ನೂ ಬಯಸಿರುತ್ತದೆ. ಸರ್ವಾತ್ಮಕನಾದ ಪರಮಾತ್ಮನನ್ನು ಅರಿತುಕೊಂಡರೆ ಇದೆಲ್ಲವನ್ನೂ ಅರಿತಂತಾದೀತೇ ಹೊರತು ಬರಿಯ ಪ್ರಾಣಭತ್ತನ್ನು (ಅರಿತರೆ ಆಗ) ಲಾರದು.

ಸ್ಥಿತ್ಯದನಾಭ್ಯಾಂ ಚ ||೭|| ೭. ಇರವು, ತಿನ್ನುವದು (ಇವುಗಳನ್ನು ಹೇಳಿರುವ)ದರಿಂದಲೂ (ಜೀವನು ಆಯತನವಲ್ಲ).

(ಭಾಷ್ಯ) ೨೩೦. ಕುತಶ್ಚ ನ ಪ್ರಾಣಭ್ರದ್ ದ್ಯುಭಾದ್ಯಾಯತನನ ಆಶ್ರಯಿತವ್ಯ: ? (ಸ್ಥಿತ್ಯದನಾಭ್ಯಾಂ ಚ) 1 ದ್ಯುಚ್ಛಾದ್ಯಾಯತನಂ ಚ ಪ್ರಕೃತ್ಯ “ದ್ವಾ ಸುಪರ್ಣಾ ಸಯುಜಾ ಸಖಾಯಾ’ (೩-೧-೧) ಇತ್ಯತ್ರ ಸ್ಥಿತ್ಯದನೇ ನಿರ್ದಿಶ್ಯತೇ | ‘ತಯೋರನ್ಯ: ಪಿಪ್ಪಲಂ ಸ್ವಾತಿ’ ಇತಿ ಕರ್ಮಫಲಾಶನಮ್, ಅನಸ್ಸನ್ನನ್ನೋSಭಿಚಾಕಶೀತಿ” ಇತಿ ಔದಾಸೀನ್ಯನ ಅವಸ್ಥಾನಂ ಚ | ತಾಭ್ಯಾಂ ಚ ಸ್ಥಿತ್ಯದನಾಭ್ಯಾಮ್ ಈಶ್ವರಕ್ಷೇತ್ರಜ್ಞ ತತ್ರ ಗೃಹ್ಮತೇ | ಯದಿ ಚ ಈಶ್ವರೋ ದ್ಯುಚ್ಛಾದ್ಯಾಯತನನ ವಿವಕ್ಷಿತಃ | ತತಸ್ತಸ್ಯ ಪ್ರಕೃತಸ್ಯ ಈಶ್ವರಸ್ಯ ಕ್ಷೇತ್ರಜ್ಞಾತ್ ಪೃಥಗ್ವಚನಮ್ ಅವಕಲ್ಪತೇ | ಅನ್ಯಥಾ ಹಿ ಅಪ್ರಕೃತವಚನಮ್ ಆಕಸ್ಮಿಕಮ್ ಅಸಂಬದ್ಧಂ ಸ್ಯಾತ್ ||

೩೬೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಭಾಷ್ಯಾರ್ಥ) ಮತ್ತೂ ಯಾವ ಕಾರಣದಿಂದ ಪ್ರಾಣಭತ್ತನ್ನು ದ್ಯುಚ್ಛಾದ್ಯಾಯತನವೆಂದು ಇಟ್ಟುಕೊಳ್ಳಬಾರದು ? ಎಂದರೆ (ಸ್ಥಿತ್ಯದನಾಭ್ಯಾಂ ಚ). ದ್ಯುಚ್ಛಾದ್ಯಾಯತನವನ್ನು (ಹೇಳುವದಕ್ಕೆ) ಪ್ರಾರಂಭಿಸಿ ‘‘ಜೊತೆಯಲ್ಲಿಯೇ ಇರುವ ಸಖರಾಗಿರುವ ಎರಡು ಹಕ್ಕಿಗಳು’ (ಮುಂ. ೩-೧-೧) ಎಂಬಲ್ಲಿ ಇರುವದು, ತಿನ್ನುವದು - ಇವನ್ನು ತಿಳಿಸಿದ. (ಹೇಗಂದರೆ) “ಅವುಗಳಲ್ಲಿ ಒಂದು ಪಿಪ್ಪಲವನ್ನು ಸವಿದು ತಿನ್ನುತ್ತದೆ’ ಎಂದು ಕರ್ಮಫಲವನ್ನು ತಿನ್ನುವದು ಇನ್ನೊಂದು ತಿನ್ನದೆ ನೋಡುತ್ತಿದೆ’ ಎಂದು ಔದಾಸೀನ್ಯದಿಂದ ಇರುವದು (ಇವುಗಳನ್ನು ತಿಳಿಸಿದೆ) .ಆ ಇರವುತಿನ್ನುವಿಕೆಗಳಿಂದ ಅಲ್ಲಿ ಈಶ್ವರಕ್ಷೇತ್ರಜ್ಞರನ್ನು ಗ್ರಹಿಸಬೇಕು. (ಇಲ್ಲಿ) ದ್ಯುಚ್ಛಾದ್ಯಾಯತನವೆಂದು ಈಶ್ವರನನ್ನು ಹೇಳಹೊರಟಿದೆ ಎಂದರೆ, ಆಗ ಆ ಪ್ರಕೃತನಾದ ಈಶ್ವರನನ್ನು ಕ್ಷೇತ್ರಜ್ಞನಿಗಿಂತ ಬೇರೆಯಾಗಿ ಹೇಳಿರುವದು ಯುಕ್ತವಾಗುತ್ತದೆ. ಹಾಗಿಲ್ಲದಿದ್ದರೆ, ಅಪ್ರಕೃತವಾದದ್ದನ್ನು (ಹೇಳಿದಂತಾಗುವದು), ಆಕಸ್ಮಿಕವಾಗಿ (ಹೇಳಿದಂತಾಗುವದು), ಸಂಬಂಧವಿಲ್ಲದ್ದನ್ನು (ಹೇಳಿ)ದಂತಾಗುವದು.

ಶ್ರುತಿಯಲ್ಲಿ ಜೀವನನ್ನು ಹೇಳಿರುವದೇಕೆ ?

(ಭಾಷ್ಯ) ೨೩೧. ನನು ತವಾಪಿ ಕ್ಷೇತ್ರಜ್ಞಸ್ಯ ಈಶ್ವರಾತ್ ಪೃಥಗ್ಧಚನಮ್ ಆಕಸ್ಮಿಕಮೇವ ಪ್ರಸಜೇತ 1 ನ 1 ತಸ್ಯ ಅವಿವಕ್ಷಿತತ್ವಾತ್ | ಕ್ಷೇತ್ರಜ್ಞ ಹಿ ಕರ್ತನ ಭೋಕೃತ್ವನ ಚ ಪ್ರತಿಶರೀರಂ ಬುದ್ದಾದ್ಯುಪಾಧಿ ಸಂಬ ಲೋಕತ ಏವ ಪ್ರಸಿದ್ಧ: ನಾಸೌ ಶ್ರುತ್ಯಾ ತಾತ್ಪರ್ಯಣ ವಿವಕ್ಷತೇ | ಈಶ್ವರಸ್ತು ಲೋಕತಃ ಅಪ್ರಸಿದ್ಧತ್ವಾತ್ ಶ್ರುತ್ಯಾ ತಾತ್ಪರ್ಯಣ ವಿವಕ್ಷತೇ ಇತಿ ನ ತಸ್ಯ ಆಕಸ್ಮಿಕಂ ವಚನಂ ಯುಕ್ತಮ್ ||

(ಭಾಷ್ಯಾರ್ಥ) (ಆಕ್ಷೇಪ) :- ನಿನ್ನ (ಪಕ್ಷದಲ್ಲಿಯೂ) ಕ್ಷೇತ್ರಜ್ಞನನ್ನು ಈಶ್ವರನಿಗಿಂತ ಬೇರೆಯಾಗಿ ಹೇಳಿರುವದು ಆಕಸ್ಮಿಕವೇ ಆಗುವದಿಲ್ಲವೆ ?

  • (ಪರಿಹಾರ) :- ಹಾಗಲ್ಲ, ಏಕೆಂದರೆ ಆ (ಕ್ಷೇತ್ರಜ್ಞ)ನನ್ನು ಹೇಳುವದರಲ್ಲಿ (ಶ್ರುತಿಗೆ) ತಾತ್ಪರ್ಯವಿಲ್ಲ. ಹೇಗೆಂದರೆ ಒಂದೊಂದು ಶರೀರದಲ್ಲಿಯೂ ಬುದ್ದಿಯೇ ಮುಂತಾದ ಉಪಾಧಿಗೆ ಸಂಬಂಧಪಟ್ಟವನಾಗಿರುವ ಕ್ಷೇತ್ರಜ್ಞನು ಕರ್ತವೆಂದೂ. ಭೋಕ್ತವೆಂದೂ ಲೋಕ (ದೃಷ್ಟಿ)ಯಿಂದಲೇ ಪ್ರಸಿದ್ಧನಾಗಿರುತ್ತಾನೆ. ಅವನನ್ನು ಶ್ರುತಿಯು ತಾತ್ಪರ್ಯದಿಂದ ಹೇಳುವದಕ್ಕೆ ಹೊರಟಿರುವದಿಲ್ಲ ; ಆದರೆ ಈಶ್ವರನು

ಅಧಿ. ೧. ಸೂ. ೭] ಪೆಂಗ್ಯುಪನಿಷತ್ತಿನ ವ್ಯಾಖ್ಯಾನಕ್ಕೂ ಸೂತ್ರಕ್ಕೂ ವಿರೋಧವಿಲ್ಲ ೩೬೯ ಲೋಕ (ದೃಷ್ಟಿಯಿಂದ) ಪ್ರಸಿದ್ಧನಾಗಿರುವದಿಲ್ಲವಾದ್ದರಿಂದ (ಅದನ್ನು) ಶ್ರುತಿಯು ತಾತ್ಪರ್ಯದಿಂದ ಹೇಳಬೇಕೆಂದು ಹೊರಟಿದೆ. ಆದ್ದರಿಂದ ಅವನನ್ನು ಆಕಸ್ಮಿಕವಾಗಿ ಹೇಳುವದು ಸರಿಯಲ್ಲ.’

ಪೆಂಗ್ಯುಪನಿಷತ್ತಿನ ವ್ಯಾಖ್ಯಾನಕ್ಕೂ ಸೂತ್ರಕ್ಕೂ ವಿರೋಧವಿಲ್ಲ

(ಭಾಷ್ಯ) ೨೩೨. ‘‘ಗುಹಾಂ ಪ್ರವಿಷ್ಕಾವಾತ್ಮಾನೌ ಹಿ” (೧-೨-೧) ಇತ್ಯಾಪಿ ಏತದ್ ದರ್ಶಿತಮ್, “ದ್ವಾ ಸುಪರ್ಣಾ’ ಇತ್ಯಸ್ಯಾಮ್ ಋಚಿ ಈಶ್ವರಕ್ಷೇತ್ರಜ್ಞ ಉಚ್ಯತೇ ಇತಿ : ಯದಾಪಿ ಪೈಜ್ಜುಪನಿಷತ್ಕೃತೇನ ವ್ಯಾಖ್ಯಾನೇನ ಅಸ್ಯಾಮ್ ಋಚಿ ಸತ್ಯಕ್ಷೇತ್ರಜ್ಞಾ ಉಚ್ಯತೇ ತದಾಪಿ ನ ವಿರೋಧಃ ಕಶ್ಚಿತ್ | ಕಥಮ್ ? ಪ್ರಾಣಭ್ರದ್ ಹಿ ಇಹ ಘಟಾದಿಚ್ಛಿದ್ರವತ್ ಸತ್ಯಾಮ್ಯುಪಾಧ್ಯಭಿಮಾನಿನ ಪ್ರತಿಶರೀರಂ ಗೃಹಮಾಣಃ ದ್ಯುಚ್ಛಾದ್ಯಾಯತನಂ ನ ಭವತಿ ಇತಿ ನಿಷಿಧ್ಯತೇ | ಯಸ್ತು ಸರ್ವಶರೀರೇಷು ಉಪಾಧಿಭಿರ್ವಿನಾ ಉಪಲಕ್ಷ್ಮತೇ ಪರಮಾತ್ಮನ ಸ ಭವತಿ ‘ಯಥಾ ಘಟಾದಿಚ್ಛಿದ್ರಾಣಿ ಘಟಾದಿಭಿಃ ಉಪಾಧಿಭಿರ್ವಿನಾ ಉಪಲಕ್ಷಮಾಣಾನಿ ಮಹಾಕಾಶ ಏವ ಭವನ್ತಿ, ತದ್ವತ್ | ಪ್ರಾಣಭತಃ ಪರಸ್ಮಾತ್ ಅನ್ಯತ್ಯಾನುಪಪತೇಃ ಪ್ರತಿಷೇಧೋ ನೋಪ ಪದ್ಯತೇ | ತಸ್ಮಾತ್ ಸಾದ್ಯುಪಾಧ್ಯಭಿಮಾನಿನ ಏವ ದ್ಯುಚ್ಛಾದ್ಯಾಯತನತ್ವ, ಪ್ರತಿಷೇಧ: 11

(ಭಾಷ್ಯಾರ್ಥ) | ‘‘ಗುಹಾಂ ಪ್ರವಿಷ್ಕಾವಾತ್ಮಾನೌ ಹಿ’ (೧-೨-೧) ಎಂಬಲ್ಲಿಯೂ “ದ್ವಾ ಸುಪರ್ಣಾ’ ಎಂಬೀ ಋಕ್ಕಿನಲ್ಲಿ ಈಶ್ವರಕ್ಷೇತ್ರಜ್ಞರನ್ನು ಹೇಳಿದೆ ಎಂದು ತಿಳಿಸಲಾಗಿದೆ. ಯಾವಾಗ ವ್ಯಂಗ್ಯುಪನಿಷತ್ತಿನಲ್ಲಿ ಮಾಡಿರುವ ವ್ಯಾಖ್ಯಾನದಂತ ಈ ಋಕ್ಕಿನಲ್ಲಿ ಸತ್ಯ ಕ್ಷೇತ್ರಜ್ಞರನ್ನು ಹೇಳಿದ (ಎಂದು ಹಿಡಿಯುತ್ತೇವೋ) ಆಗಲೂ ಯಾವ ವಿರೋಧವೂ ಇರುವದಿಲ್ಲ. ಹೇಗೆಂದರೆ ಸತ್ಯವೇ ಮುಂತಾದವುಗಳ ಅಭಿಮಾನಿ ಯಾಗಿರುವದರಿಂದ ಗಡಿಗೆಯೇ ಮುಂತಾದವುಗಳ ಬಯಲಿನಂತ ಒಂದೊಂದು ಶರೀರಕ್ಕೂ (ಬೇರೆಬೇರೆಯಾಗಿ) ಕಾಣುವ ಪ್ರಾಣಭತ್ತನ್ನಲ್ಲವೆ, (ಈ) (ಸೂತ್ರ)ದಲ್ಲಿ

  1. ಜೀವನೇ ಆಯತನವೆಂದರ ಈಶ್ವರನನ್ನು ಆಕಸ್ಮಿಕವಾಗಿ ಹೇಳಿದಂತೆ ಆಗುತ್ತದೆ ; ಅದು ಸರಿಯಲ್ಲ. ಈಶ್ವರನೇ ಆಯತನವೆಂದರೆ ಪ್ರಕೃತವಾಗಿರುವ ಈಶ್ವರನನ್ನೇ ಇಲ್ಲಿಯೂ ಹೇಳಿದಂತ ಆಗುತ್ತದೆ. ಜೀವನು ಪ್ರಕೃತನಲ್ಲದಿದ್ದರೂ ಲೋಕಪ್ರಸಿದ್ಧನಾಗಿರುವದರಿಂದ ಜೀವಸ್ವರೂಪವನ್ನು ಅನುವಾದಮಾಡಿಕೊಂಡು ಈಶ್ವರಸ್ವರೂಪವನ್ನು ಹೇಳಿದ್ದು ಯುಕ್ತವಾಗುತ್ತದೆ.

೩೭೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ದ್ಯುಚ್ಛಾದ್ಯಾಯತನವಾಗಲಾರನು ಎಂದು ಅಲ್ಲಗಳೆದಿರುವದು ? ಆದರೆ ಯಾವನು ಶರೀರಗಳಲ್ಲೆಲ್ಲ ಉಪಾಧಿಗಳನ್ನು ಬಿಟ್ಟು ಕಾಣಬರುವನೋ ಅವನು ಪರಮಾತ್ಮನೇ ಆಗಿರುತ್ತಾನೆ. ಹೇಗೆ ಗಡಿಗೆಯೇ ಮುಂತಾದ ಉಪಾಧಿಗಳನ್ನು ಬಿಟ್ಟು ಕಾಣುವ ಗಡಿಗೆಯ ಮುಂತಾದ ಬಯಲುಗಳು ಮಹಾಕಾಶವೇ ಆಗಿರುವವೋ ಹಾಗೆ. (ಆ ಪಕ್ಷದಲ್ಲಿ) ಪ್ರಾಣಭತ್ತು ಪರ(ಮಾತ್ಮನಿಗಿಂತ ಬೇರೆಯಾಗಿರುವನೆಂಬುದೇ ಹೊಂದುವದಿಲ್ಲವಾದ್ದರಿಂದ (ಆಗ ಅವನನ್ನು ) ಅಲ್ಲಗಳೆಯುವದೇ ಆಗುವದಿಲ್ಲ. ಆದ್ದರಿಂದ ಸತ್ಯವೇ ಮುಂತಾದ ಉಪಾಧಿಗಳಲ್ಲಿ ಅಭಿಮಾನವಿರುವ (ಜೀವನನ್ನ) ದ್ಯುಚ್ಛಾದ್ಯಾಯತನವಲ್ಲವೆಂದು (ಸೂತ್ರದಲ್ಲಿ) ಅಲ್ಲಗಳೆದಿರುವದು. ಈ ಅಧಿಕರಣದ ನ್ಯಾಯವು ಅದೃಶ್ಯತ್ಯಾಧಿಕರಣದಲ್ಲಿ ಅಡಕವಾಗಿದೆ

(ಭಾಷ್ಯ) ೨೩೩. ತಸ್ಮಾತ್ ಪರಮೇವ ಬ್ರಹ್ಮ ದ್ಯುಚ್ಛಾದ್ಯಾಯತನಮ್ | ತದೇತತ್ “ಅದೃಶ್ಯಾದಿಗುಣಕೋ ಧರ್ಮಃ ’ (೧-೨-೨೧) ಇತ್ಯವೇನೈವ ಸಿದ್ಧಮ್ | ತಸ್ಮವ ಹಿ ಭೂತಯೋನಿವಾಕ್ಯಸ್ಯ ಮಧ್ಯೆ ಇದಂ ಪರಿತಮ್ ಯಸ್ಮಿನ್ ದೈಃ ಪೃಥಿವೀ ಚಾನ್ನರಿಕ್ಷಮ್’ ಇತಿ 1 ಪ್ರಪಞ್ಞಾರ್ಥಂ ತು ಪುನರುಪನ್ಯಸ್ತಮ್ ||

(ಭಾಷ್ಯಾರ್ಥ) ಆದ್ದರಿಂದ (ಈ) ದ್ಯುಚ್ಛಾದ್ಯಾಯತನವು ಪರಬ್ರಹ್ಮವೇ. ಆ ಇದು “ಅದ್ರಶ್ಯಾದಿಗುಣಕೋ ಧರ್ಮೊ’ (೧-೨-೨) ಎಂಬೀ (ಅಧಿಕರಣ) ದಿಂದಲೇ ಸಿದ್ಧವಾಗಿರುತ್ತದೆ. ಅದೇ ಭೂತಯೋನಿವಾಕ್ಯದ ನಡುವೆಯಲ್ಲವೆ, ಈ “ಯಸ್ಮಿನ್ ದೈಃ ಪೃಥಿವೀ ಚಾಸ್ತರಿಕ್ಷಮ್’’ ಎಂಬ ವಾಕ್ಯವನ್ನು ಹೇಳಿರುತ್ತದೆ ? ಆದರೆ (ಅದನ್ನೇ) ವಿವರಿಸಿ (ತಿಳಿಸು)ವದಕ್ಕಾಗಿ (ಇಲ್ಲಿ) ಮತ್ತೆ (ಅದನ್ನೇ) ಹೇಳಿದೆ.

೨. ಭೂಮಾಧಿಕರಣ (೮-೯)

(ಛಾಂದೋಗ್ಯ ೭-೨೪-೧ ರಲ್ಲಿರುವ ಭೂಮವು ಬ್ರಹ್ಮ)

ಭೂಮಾ ಸಂಪ್ರಸಾದಾದದ್ದುಪದೇಶಾತ್ ||೮|| ೮. ಭೂಮವು (ಬ್ರಹ್ಮವೇ) ; ಏಕೆಂದರೆ ಸಂಪ್ರಸಾದನಿಗಿಂತ ಮುಂದೆ (ಇದನ್ನು) ಹೇಳಿರುತ್ತದೆ.

ಅಧಿ. ೨. ಸೂ. ೮]

ವಿಷಯವೂ ಸಂಶಯವೂ

೩೭೧.

ವಿಷಯವೂ ಸಂಶಯವೂ

(ಭಾಷ್ಯ) ೨೩೪. ಇದಂ ಸಮಾಮನನ್ನಿ - ‘ಭೂಮಾ ತೈವ ವಿಜಿಜ್ಞಾಸಿತವ್ಯ ಇತಿ ಭೂಮಾನಂ ಭಗವೋ ವಿಜಿಜ್ಞಾಸ ಇತಿ |’ (ಛಾಂ. ೭-೨೩-೧), ‘ಯತ್ರ ನಾನ್ಯತ್

ಪಶ್ಯತಿ ನಾನ್ಯಶೃಣೋತಿ ನಾನ್ಯದ್ ವಿಜಾನಾತಿ ಸ ಭೂಮಾಥ ಯಾತ್ ಪಶ್ಯತ್ಯಕ್ಷಣೋತ್ಯನ್ಯದ್ ವಿಜಾನಾತಿ ತದಲ್ಪಮ್’ (ಛಾಂ. ೭-೨೪-೧) ಇತ್ಯಾದಿ | ತತ್ರ ಸಂಶಯಃ | ಕಿಂ ಪ್ರಾಣೋ ಭೂಮಾ ಸ್ಮಾತ್, ಆಹೋಸ್ಟಿತ್ ಪರಮಾತ್ಮಾ ? ಇತಿ ||

(ಭಾಷ್ಯಾರ್ಥ) ಈ (ವಾಕ್ಯವನ್ನು ಛಾಂದೋಗ್ಯದಲ್ಲಿ) ಪಠಿಸುತ್ತಾರೆ : “ಆದರೆ ಭೂಮವನ್ನೇ ವಿಜಿಜ್ಞಾಸೆಮಾಡಬೇಕು. ಪೂಜ್ಯನೆ, ಭೂಮವನ್ನು ಅರಿಯಬೇಕೆನ್ನುವೆನು’ (ಛಾಂ. ೭-೨೩-೧), “ಎಲ್ಲಿ ಮತ್ತೊಂದನ್ನು ಕಾಣುವದಿಲ್ಲವೋ ಮತ್ತೊಂದನ್ನು ಕೇಳುವ ದಿಲ್ಲವೋ ಮತ್ತೊಂದನ್ನು ಅರಿಯುವದಿಲ್ಲವೋ ಅದು ಭೂಮವು ; ಇನ್ನು ಎಲ್ಲಿ ಮತ್ತೊಂದನ್ನು ಕಾಣುವನೋ, ಮತ್ತೊಂದನ್ನು ಕೇಳುವನೋ, ಮತ್ತೊಂದನ್ನು ಅರಿಯು ವನೋ ಅದು ಅಲ್ಪವು ” (ಛಾಂ. ೭-೨೪-೧) ಇತ್ಯಾದಿ. ಇಲ್ಲಿ ಸಂಶಯವೇನೆಂದರೆ ಭೂಮವೆಂದರೆ ಪ್ರಾಣವಾಗಿರಬಹುದೆ ?, ಅಥವಾ ಪರಮಾತ್ಮನ ?!

ಸಂಶಯಕ್ಕೆ ಕಾರಣ

(ಭಾಷ್ಯ) ೨೩೫. ಕುತಃ ಸಂಶಯಃ ? ‘ಭೂಮಾ ಇತಿ ತಾವದ್ ಬಹುಮ್ ಅಭಿಧೀಯತೇ | ‘ಬಯೋರ್ಲೊಪೋಭೂಚಬಹೂಃ ”. (ಪಾ.೬-೪-೧೫೮) ಇತಿ ಭೂಮಶಬ್ದಸ್ಯ ಭಾವಪ್ರತ್ಯಯಾನ್ಯತಾಸ್ಮರಣಾತ್ | ಕಿಮಾತ್ಮಕಂ ಪುನಸ್ತದ್ ಬಹುತ್ವಮ್ ?- ಇತಿ ವಿಶೇಷಾಕಾಚ್ಯಾಯಾಂ “ಪ್ರಾಣೋ ವಾವ ಆಶಾಯಾ ಭೂಯಾನ್’’ (ಛಾಂ, ೭-೧೫-೧) ಇತಿ ಸಂವಿಧಾನಾತ್ ಪ್ರಾಣೋ ಭೂಮಾ ಇತಿ ಪ್ರತಿಭಾತಿ | ತಥಾ ‘‘ಶ್ರುತಂ ಹೈವ ಮೇ ಭಗವದ್ದಶೇಭ್ಯಸ್ತರತಿ ಶೋಕಮಾತ್ಮವಿದಿತಿ ಸೋಹಂ ಭಗವಃ ಶೋಚಾಮಿ ತಂ ಮಾ ಭಗವಾಇಗೋಕಸ್ಯ ಪಾರಂ ತಾರಯತು’ (ಛಾಂ, ೭-೧-೩) ಇತಿ ಪ್ರಕರಣೋತ್ಸಾನಾತ್ ಪರಮಾತ್ಮಾ ಭೂಮಾ ಇತ್ಯಪಿ

1.ಪ್ರಾಣವನ್ನು ಉಪಾಸನೆಗಾಗಿ ಭೂಮವೆಂದು ಕರೆದಿದಯ? ಪರಮಾತ್ಮನನ್ನು ಹಾಗೆಂದು ಅರಿತುಕೊಳ್ಳಬೇಕೆಂದು ತಿಳಿಸಿದಯ ?೩೭೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಪ್ರತಿಭಾತಿ | ತತ್ರ ಕಸ್ಯ ಉಪಾದಾನಂ ನ್ಯಾಯ್ಯಮ್, ಕಸ್ಯ ವಾ ಹಾನಮ್ ? ಇತಿ ಭವತಿ ಸಂಶಯಃ ||

(ಭಾಷ್ಯಾರ್ಥ) | (ಇಲ್ಲಿ ) ಸಂಶಯವೇಕೆ ? ಎಂದರೆ ಮೊದಲನೆಯದಾಗಿ ‘ಭೂಮಾ’ ಎಂಬುದು ಬಹುತ್ವವನ್ನು ಹೇಳುತ್ತದೆ. ಏಕೆಂದರೆ ‘ಬಹೋರ್ಲೋಪೋಭೂಚ ಬಹೋ’’ (ಬಹು ಎಂಬ ಶಬ್ದಕ್ಕೆ ಭಾವಾರ್ಥದಲ್ಲಿ ಬರುವ ‘ಇಮನಿಚ್’ ಇಮನ್ ಪ್ರತ್ಯಯಕ್ಕೆ ಇಕಾರವು ಲೋಪವಾಗುತ್ತದೆ ; ಬಹು ಎಂಬ ಶಬ್ದಕ್ಕೆ ಭೂ ಎಂಬಾದೇಶವು ಬರುತ್ತದೆ). (ಪಾ. ೬ ೪-೧೫೮) ಎಂಬ (ಸೂತ್ರದಲ್ಲಿ) ಭೂಮಶಬ್ದವು ಭಾವಪ್ರತ್ಯಯಾಂತವಾಗಿದೆ ಎಂದು (ವ್ಯಾಕರಣ) ಸ್ಮತಿಯಿದೆ. ಹಾಗಾದರೆ ಆ ಬಹುತ್ವವು ಯಾವ ರೂಪ ವಾದದ್ದು ? ಎಂದು ವಿಶೇಷದ ಆಕಾಂಕ್ಷೆಯು ಉಂಟಾಗಲಾಗಿ “ಪ್ರಾಣವೇ ಆಶೆಗಿಂತ ದೊಡ್ಡದು” (ಛಾಂ. ೭-೧೫-೧) ಎಂಬ ಸಂವಿಧಾನ (ದಲ್ಲಿರುವ ವಾಕ್ಯದಿಂದ) ಪ್ರಾಣನೇ ಭೂಮವೆಂದು ತೋರುತ್ತದೆ. ಇದರಂತೆ ಆತ್ಮಜ್ಞಾನಿಯು ಶೋಕವನ್ನು ದಾಟುತ್ತಾನೆ ಎಂದು ತಮ್ಮಂಥವರಿಂದ ಕೇಳಿರುತ್ತೇನೆ, ಅಷ್ಟೆ. ಪೂಜ್ಯರೆ, ಆ ನಾನು ಶೋಕಿಸುತ್ತಿದೇನೆ ; ಆ ನನ್ನನ್ನು ತಾವು ಶೋಕದ ಪಾರವನ್ನು ಮುಟ್ಟಿಸಬೇಕು’’ (ಛಾಂ. ೭-೧-೩) ಎಂದು ಪ್ರಕರಣವು ಹುಟ್ಟಿರುವದರಿಂದ ಪರಮಾತ್ಮನೇ ಭೂಮವೆಂದೂ ತೋರುತ್ತದೆ. ಇಲ್ಲಿ ಯಾವದನ್ನು ತೆಗೆದುಕೊಳ್ಳುವದು ಯುಕ್ತ, ಯಾವದನ್ನು ಬಿಡುವದು (ಯುಕ್ತ) ? - ಎಂದು ಸಂಶಯವಾಗುತ್ತದೆ.

ಪೂರ್ವಪಕ್ಷ : ಪ್ರಾಣವಿಚಾರವು ನಡೆದಿರುವದರಿಂದ

ಪ್ರಾಣನೇ ಭೂಮ

(ಭಾಷ್ಯ) ೨೩೬. ಕಿಂ ತಾವತ್ ಪ್ರಾಪ್ತಮ್ ? ಪ್ರಾಣೋ ಭೂಮಾ ಇತಿ | ಕಸ್ಮಾತ್ ? ಭೂಯಃಪ್ರಶ್ನಪ್ರತಿವಚನಪರಂಪರಾದರ್ಶನಾತ್ | ಯಥಾ ಹಿ ಅಸ್ತಿ ಭಗವೋ ನಾಮ್ರ ಭೂಯಃ’ (ಛಾಂ. ೭-೧-೫) ಇತಿ ವಾಗ್ಯಾವ ನಾಮ್ಮೋ ಭೂಯಸಿ” (ಛಾಂ. ೭-೨-೧) ಇತಿ, ತಥಾ ಅಸ್ತಿ ಭಗವೋ ವಾಚೋ ಭೂಯಃ ’ (ಛಾಂ. ೭-೨ ೨) ಇತಿ ‘ಮನೋ ವಾವ ವಾಚೋ ಭೂಯಃ ’ (ಛಾಂ, ೭-೩-೧) ಇತಿ ಚ ನಾಮಾದಿಭ್ರೂಹಿ ಆ ಪ್ರಾಣಾದ್ ಭೂಯಃಪ್ರಶ್ನಪ್ರತಿವಚನಪ್ರವಾಹಃ ಪ್ರವೃತ್ತನೈವಂ ಪ್ರಾಣಾತ್ ಪರಂ ಭೂಯಃಪ್ರಶ್ನಪ್ರತಿವಚನಂ ದೃಶ್ಯತೇ “ಅಸ್ತಿ ಭಗವಃ ಪ್ರಾಣಾದ್ ಭೂಯಃ’ ಇತಿ ‘ಅದೋ ವಾವ ಪ್ರಾಣಾದ್ ಭೂಯಃ’ ಇತಿ | ಪ್ರಾಣಮೇವ ತು

ಅಧಿ. ೨. ಸೂ. ೮] ಪೂ. ಪ. ಪ್ರಾಣವಿಚಾರವು ನಡೆದಿರುವದರಿಂದ ಪ್ರಾಣನೇ ಭೂಮ ೩೭೩

ನಾಮಾದಿಭ್ಯ ಆಶಾಭೋ ಭೂಯಾಂಸಂ “ಪ್ರಾಣೋ ವಾ ವ ಆಶಾಯಾ ಭೂಯಾನ್’’ (ಛಾಂ. ೭-೧೫-೧) ಇತ್ಯಾದಿನಾ ಸಪ್ರಪಞ್ಚಮ್ ಉಕ್ಕಾ ಪ್ರಾಣದರ್ಶಿನಶ್ಚ ಅತಿವಾದಿತ್ವಮ್ “ಅತಿವಾದ್ಯಸೀತ್ಯತಿವಾದ್ಯಸ್ಮಿತಿ ಬ್ರಯಾನ್ನಾಪ ಹೈುವೀತ’ (ಛಾಂ. ೭-೧೫-೪) ಇತಿ ಅಭ್ಯನುಜ್ಞಾಯ ಏಷ ತು ವಾ ಅತಿವದತಿ ಯಃ ಸತ್ಯೇನಾತಿವದತಿ’ (ಛಾಂ.೭-೧೬-೧) ಇತಿ ಪ್ರಾಣವ್ರತಮತಿವಾದಿತ್ವಮ್ ಅನುಕೃಷ್ಣ ಅಪರಿತ್ಯಜೈವ ಪ್ರಾಣಂ ಸತ್ಯಾದಿಪರಮ್ಮರಯಾ ಭೂಮಾನಮ್ ಅವತಾರಯನ್ ಪ್ರಾಣಮೇವ ಭೂಮಾವಂ ಮನ್ಯತೇ ಇತಿ ಗಮ್ಯತೇ ||

(ಭಾಷ್ಯಾರ್ಥ) ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದ ? ಪ್ರಾಣನೇ’ ಭೂಮನು ಎಂದು. ಏಕೆ ? ಎಂದರೆ ಹೆಚ್ಚಿನ (ವಿಷಯದ) ಪ್ರಶೋತ್ತರಪರಂಪರಯು ಕಂಡುಬರುವದರಿಂದ, ಹೇಗೆ “ಪೂಜ್ಯರೆ, ನಾಮಕ್ಕಿಂತ ಹೆಚ್ಚಿನದು ಇದೆಯ ?’’ (ಛಾಂ. ೭-೨-೫), “ವಾಕ್ಕೇ ನಾಮಕ್ಕಿಂತ ಹೆಚ್ಚಿನದು’ (ಛಾಂ, ೭-೨-೧) ಎಂದೂ ಮತ್ತು ‘ಪೂಜ್ಯರೆ, ವಾಕ್ಕಿಗಿಂತ ಹೆಚ್ಚಿನದು ಇದೆಯೆ ?” (ಛಾಂ.೭-೨-೨), ‘‘ಮನಸ್ಸೇ ವಾಕ್ಕಿಗಿಂತ ಹೆಚ್ಚಿನದು” (ಛಾಂ, ೭-೩-೧) ಎಂದೂ ನಾಮಾದಿಗಳಿಗಿಂತ ಹೆಚ್ಚಿನ (ವಿಷಯದ) ಪ್ರಶೋತ್ತರಪ್ರವಾಹವು ಪ್ರಾಣನವರೆಗೂ ಬಂದಿರುತ್ತದೆ. ಹೀಗೆ ಪ್ರಾಣನಿಗಿಂತ ಮುಂದೆ ‘ಪೂಜ್ಯರೆ, ಪ್ರಾಣನಿಗಿಂತ ಹೆಚ್ಚಿನದು ಯಾವದು ?’’ ಎಂದು “ಇಂಥದ್ದೇ ಪ್ರಾಣನಿಗಿಂತ ಹೆಚ್ಚಿನದು” ಎಂದು ಹೆಚ್ಚಿನ (ವಿಷಯದ) ಪ್ರಕ್ಟೋತ್ತರ ವಿರುವದಿಲ್ಲ. ಆದರೆ ನಾಮದಿಂದ ಹಿಡಿದು ಆಶೆಯವರೆಗಿನ (ವಸ್ತುಗಳೆಲ್ಲ)ಕ್ಕಿಂತಲೂ ಪ್ರಾಣನೇ ಹೆಚ್ಚಿನವನೆಂದು ‘ಪ್ರಾಣನೇ ಆಶೆಗಿಂತ ಹೆಚ್ಚಿನವನು’ (ಛಾಂ. ೭-೧೫-೧) ಎಂದು ಮುಂತಾಗಿರುವ (ವಾಕ್ಯ)ದಿಂದ ವಿಸ್ತಾರವಾಗಿ ತಿಳಿಸಿ ಪ್ರಾಣದರ್ಶಿಯು ಅತಿವಾದಿಯೆಂಬುದನ್ನು ಅತಿವಾದಿಯಾಗಿರುವ ಎಂದು (ಅವ)ರಂದರೆ, ಅತಿವಾದಿ ಯಾಗಿರುವೆನು ಎಂದು ಹೇಳಬೇಕು, ಇಲ್ಲವೆನ್ನಬಾರದು’ (೭-೧೫-೪) ಎಂದು ಒಪ್ಪಿ ಕೊಂಡು ‘‘ಆದರೆ ಯಾವನು ಸತ್ಯದಿಂದ ಅತಿವಾದವನ್ನು ಮಾಡುವನೋ ಅವನೇ ಅತಿವಾದಿಯು” (ಛಾಂ. ೭-೧೬-೧) ಎಂದು ಪ್ರಾಣವ್ರತವಾದ ಅತಿವಾದಿತ್ವವನ್ನು

  1. ಸೂತ್ರಾತ್ಮನೇ.

  2. ಎಲ್ಲಕ್ಕೂ ಮಿಗಿಲಾದ ತತ್ತ್ವವನ್ನವಲಂಬಿಸಿರುವನು ಎಂಬುದನ್ನು, ನಾಮಾದಿಗಳೆಲ್ಲ ವನ್ನೂ ಅತಿಕ್ರಮಿಸಿರುವ ಪ್ರಾಣಾತ್ಮನು ನಾನು ಎಂದು ಹೇಳುವವನೇ ಅತಿವಾದಿಯು ಎಂದು ಪೂರ್ವಪಕ್ಷಿಯ ಅಭಿಪ್ರಾಯ.

೩೭೪

ಬ್ರಹ್ಮಸೂತ್ರಭಾಷ್ಯ |

[ಅ. ೧. ಪಾ. ೩. ಹಿಡಿದೆಳೆದುಕೊಂಡು, ಪ್ರಾಣವನ್ನು ಬಿಡದೆಯೇ ಸತ್ಯಾದಿಗಳ ಪರಂಪರೆಯಿಂದ ಭೂಮದ ಅವತರಣಿಕೆಯನ್ನು ಮಾಡಿರುವದರಿಂದ ಪ್ರಾಣನೇ ಭೂಮವೆಂದು (ಸನತ್ಕುಮಾರನು) ಅಭಿಪ್ರಾಯಪಟ್ಟಿರುತ್ತಾನೆ - ಎಂದು ನಿಶ್ಚಯವಾಗುತ್ತದೆ.

ಭೂಮದ ಲಕ್ಷಣವೇ ಮುಂತಾದವು ಪ್ರಾಣನಿಗೂ ಹೊಂದುತ್ತವೆ

(ಭಾಷ್ಯ) ೨೩೭. ಕಥಂ ಪುನಃ ಪ್ರಾಣೇ ಭೂಮನಿ ವ್ಯಾಖ್ಯಾಯಮಾನೇ ಯತ್ರ ನಾನ್ಯತೆ ಪಶ್ಯತಿ’ (ಛಾಂ, ೭-೨೪-೧) ಇತ್ಯೇತದ್ ಭೂಷ್ಟೋ ಲಕ್ಷಣಪರಂ ವಚನಂ ವ್ಯಾಖ್ಯಾಯೇತೇತಿ ? ಉಚ್ಯತೇ | ಸುಷುಪ್ಯವಸ್ಟಾಯಾಂ ಪ್ರಾಣಗ್ರಸ್ತೇಷು ಕರಣೇಷು ದರ್ಶನಾದಿವ್ಯವಹಾರನಿವೃತ್ತಿದರ್ಶನಾತ್ ಸಂಭವತಿ ಪ್ರಾಣಸ್ಯಾಪಿ ಯತ್ರ ನಾನ್ಯತೆ ಪಶ್ಯತಿ’ ಇತ್ಯೇತಲ್ಲ ಕ್ಷಣಮ್ ತಥಾ ಚ ಶ್ರುತಿ: “ನ ಶೃಣೋತಿ ನ ಪಶ್ಯತಿ’ (ಪ್ರ. ೪ ೨) ಇತ್ಯಾದಿನಾ ಸರ್ವಕರಣವ್ಯಾಪಾರಪ್ರತ್ಯಸ್ತಮಯರೂಪಾಂ ಸುಷುಪ್ಯವಸ್ಥಾಮ್ ಉಕ್ಕಾ ‘ಪ್ರಾಣಾಗ್ನಯ ಏವೈತಸ್ಮಿನ್ ಪುರೇ ಜಾಗ್ರತಿ’ (ಪ್ರ. ೪-೩) ಇತಿ ತಸ್ಯಾಮೇವ ಅವಸ್ಟಾಯಾಂ ಪಞ್ಚವೃತ್ತ ಪ್ರಾಣಸ್ಯ ಜಾಗರಣಂ ಬ್ರುವತೀ ಪ್ರಾಣಪ್ರಧಾನಾಂ ಸುಷುಪ್ಯವಸ್ಥಾಂ ದರ್ಶಯತಿ | ಯಚ್ಚೆತದ್ ಭೂಮ್ಮ: ಸುಖತ್ವಂ ಶ್ರುತಮ್ - “ಯೋ ವ್ಯ ಭೂಮಾ ತತ್ ಸುಖಮ್’ (ಛಾಂ. ೭-೨೩-೧) ಇತಿ, ತದಪಿ ಅವಿರುದ್ದಮ್ | “ಅತ್ಯಷ ದೇವಃ ಸ್ವಷ್ಟಾನ್ನ ಪಶ್ಯತ್ಯಥ ಯದೇತಸ್ಮಿಣ್ಯರೀರೇ ಸುಖಂ ಭವತಿ’’ (ಪ್ರ. ೪-೬) ಇತಿ ಸುಷುಪ್ಯವಸ್ಥಾಯಾಮೇವ ಸುಖಶ್ರವಣಾತ್ | ಯಚ್ಚ “ಯೋ ವೈ ಭೂಮಾ ತದಮ್ಮತಮ್” (ಛಾಂ, ೭-೨೪-೧) ಇತಿ | ತದಪಿ ಪ್ರಾಣಸ್ಯ ಅವಿರುದ್ದಮ್ | “ಪ್ರಾಣೋ ವಾ ಅಮೃತಮ್’’ (ಕೆ. ೩-೨) ಇತಿ ಶ್ರುತೇಃ || ಕಥಂ ಪುನಃ ಪ್ರಾಣಂ ಭೂಮಾನಂ ಮನ್ಮಾನಸ್ಯ ತರತಿ ಶೋಕಮಾತ್ಮವಿತ್’ (ಛಾಂ. ೭ ೧-೩) ಇತ್ಯಾತ್ಮವಿವಿದಿಷಯಾ ಪ್ರಕರಣಸ್ಯ ಉತ್ಥಾನಮ್ ಉಪಪದ್ಯತೇ ? ಪ್ರಾಣ ಏವೇಹ ಆತ್ಮಾ ವಿವಕ್ಷಿತಃ ಇತಿ ಬ್ಯೂಮಃ | ತಥಾ ಹಿ ॥ “ಪ್ರಾಣೋ ಹ ಪಿತಾ ಪ್ರಾಣೋ ಮಾತಾ ಪ್ರಾಣೋ ಭ್ರಾತಾ ಪ್ರಾಣಃ ಸ್ವಸಾ ಪ್ರಾಣ ಆಚಾರ್ಯ ಪ್ರಾಣೋ ಬ್ರಾಹ್ಮಣಃ” (ಛಾಂ. ೭-೧೫-೧) ಇತಿ ಪ್ರಾಣಮೇವ ಸರ್ವಾತ್ಮಾನಂ ಕರೋತಿ | ‘ಯಥಾ ವಾ ಅರಾ

  1. ಪ್ರಾಣವಾದಿಯು ಅತಿವಾದಿಯಂದು ಹಿಂದೆ ಹೇಳಿದೆಯಷ್ಟೆ ; ಆ ಅತಿವಾದಿತ್ವವನ್ನು ಮಾತ್ರವಲ್ಲದೆ ಮುಂದೆ ಹೇಳುವ ಸತ್ಯಾದಿಗಳನ್ನೂ ಪ್ರಾಣೋಪಾಸಕನು ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸುವದಕ್ಕೋಸ್ಕರ ಹಿಂದೆ ಹೇಳಿದ ಅತಿವಾದಿತ್ವವನ್ನೂ ಸೇರಿಸಿಕೊಂಡೇ ಶ್ರುತಿಯು ಹೂರಟಿರುತ್ತದೆ ಎಂದು ಭಾವ.

ಅಧಿ. ೨. ಸೂ. ೮] ಭೂಮದ ಲಕ್ಷಣವೇ ಮುಂತಾದವು ಪ್ರಾಣನಿಗೂ ಹೊಂದುತ್ತವೆ ೩೭೫ ನಾಭೌ ಸಮರ್ಪಿತಾ ಏವಮಸ್ಮಿನ್ ಪ್ರಾಣೇ ಸರ್ವಂ ಸಮರ್ಪಿತಮ್’’ (ಛಾಂ. ೭-೧೫-, ೧) ಇತಿ ಚ ಸರ್ವಾತ್ಮತ್ವಾರನಾಭಿನಿದರ್ಶನಾಭ್ಯಾಂ ಚ ಸಂಭವತಿ ವೈಪುಲ್ಯಾತ್ಮಿಕಾ ಭೂಮರೂಪತಾ ಪ್ರಾಣಸ್ಯ | ತಸ್ಮಾತ್ ಪ್ರಾಣೋ ಭೂಮಾ ಇತಿ ||

(ಭಾಷ್ಯಾರ್ಥ) * (ಆಕ್ಷೇಪ) :- ಪ್ರಾಣನೇ ಭೂಮವೆಂದು ವ್ಯಾಖ್ಯಾನಮಾಡುವದಾದರೆ “ಎಲ್ಲಿ ಮತ್ತೊಂದನ್ನು ಕಾಣುವದಿಲ್ಲವೋ’’ (ಛಾಂ. ೭-೨೪-೧) ಎಂಬೀ ಭೂಮದ ಲಕ್ಷಣಪರವಾಗಿರುವ ವಚನಕ್ಕೆ ಹೇಗೆ ವ್ಯಾಖ್ಯಾನಮಾಡಬೇಕು ?

(ಪರಿಹಾರ) :- ಹೇಳುತ್ತೇವೆ. ಸುಷುಪ್ತಾವಸ್ಥೆಯಲ್ಲಿ ಕರಣಗಳು ಪ್ರಾಣಗ್ರಸ್ತ ವಾಗಲಾಗಿ ನೋಟವೇ ಮುಂತಾದ ವ್ಯವಹಾರವು ತೋಲಗುವದು ಕಂಡುಬಂದಿರುವದ ರಿಂದ ಪ್ರಾಣನಿಗೂ “ಎಲ್ಲಿ ಮತ್ತೊಂದನ್ನು ಕಾಣುವದಿಲ್ಲವೋ” ಎಂಬೀ ಲಕ್ಷಣವು ಆಗಬಹುದು. ಆದ್ದರಿಂದಲೇ ಶ್ರುತಿಯು (ಆಗ ಈ ಪುರುಷನು) ನೋಡುವದಿಲ್ಲ, ಕೇಳುವದಿಲ್ಲ” (ಪ್ರ. ೪-೨) ಎಂದು ಮುಂತಾಗಿರುವ (ವಾಕ್ಯ)ದಿಂದ ಎಲ್ಲಾ ಕರಣವ್ಯಾಪಾರಗಳ ಪ್ರತ್ಯಸ್ತಮಯರೂಪವಾಗಿರುವ ಸುಷುಪ್ಯವಸ್ಥೆಯನ್ನು ಹೇಳಿ “ಈ ಪುರದಲ್ಲಿ ಪ್ರಾಣಾಗ್ನಿಗಳೇ ಎಚ್ಚರವಾಗಿರುತ್ತವೆ” (ಪ್ರ. ೪-೩) ಎಂದು ಅದೇ ಅವಸ್ಥೆಯಲ್ಲಿ ಐದು ವೃತ್ತಿಗಳ ಪ್ರಾಣವು ಎಚ್ಚತ್ತಿರುವದೆಂದು ಹೇಳಿರುವದರಿಂದ ಸುಷುಪ್ಯವಸ್ಥೆಯು ಪ್ರಾಣಪ್ರಧಾನವಾಗಿರುತ್ತದೆ ಎಂದು ತಿಳಿಸುತ್ತದೆ.

ಇನ್ನು “ಯಾವದು ಭೂಮವೋ ಅದೇ ಸುಖವು’ (ಛಾಂ. ೭-೨೪-೧) ಎಂದು ಭೂಮವು ಸುಖವೆಂದು ಶ್ರುತಿಯಲ್ಲಿದೆಯಲ್ಲ, ಅದೂ ವಿರುದ್ಧವಲ್ಲ. ಏಕೆಂದರೆ ಇಲ್ಲಿ ಈ ದೇವನು ಕನಸುಗಳನ್ನು ಕಾಣುವದಿಲ್ಲ ; ಆಗ ಈ ಶರೀರದಲ್ಲಿರುವ ಈ ಸುಖ ವಾಗುವದು’ (ಪ್ರ. ೪-೬) ಎಂದು ಸುಷುಪ್ಯವಸ್ಥೆಯಲ್ಲಿಯೇ ಸುಖವಿರುವದೆಂದು ಶ್ರುತಿಯಲ್ಲಿ ಹೇಳಿದೆ. ಇನ್ನು “ಯಾವದು ಭೂಮವೋ ಅದೇ ಅಮೃತವು’ (ಛಾಂ.೭ ೨೪-೧) ಎಂದಿದೆಯಲ್ಲ, ಅದೂ ಪ್ರಾಣನಿಗೆ ವಿರುದ್ಧವಲ್ಲ ; ಏಕೆಂದರೆ ‘ಪ್ರಾಣನೇ ಅಮೃತವು’ (ಕೌ.೩-೨) ಎಂಬ ಶ್ರುತಿಯಿದೆ.

(ಆಕ್ಷೇಪ) :- ಇನ್ನು ಪ್ರಾಣನೇ ಭೂಮವೆಂಬ ಮತವುಳ್ಳ (ನಿನಗೆ) ‘ಆತ್ಮ ನನ್ನು ಅರಿತವನು ಶೋಕವನ್ನು ದಾಟುತ್ತಾನೆ’ (ಛಾಂ. ೭-೧-೩) ಎಂದು ಆತ್ಮನನ್ನು ಅರಿಯಬೇಕೆಂಬ ಇಚ್ಛೆಯನ್ನು (ತಿಳಿಸುವುದರಿಂದ ಪ್ರಕರಣವನ್ನು ಪ್ರಾರಂಭಿಸಿರುವದು ಹೇಗೆ ಹೊಂದುತ್ತದೆ ?

(ಪರಿಹಾರ) :- ಇಲ್ಲಿ ಪ್ರಾಣನನ್ನೇ ಆತ್ಮನೆಂದು ಹೇಳುವದಕ್ಕೆ ಹೊರಟಿದೆ ಎನ್ನು ತೇವೆ. ಹೇಗೆಂದರೆ, ‘ಪ್ರಾಣನೇ ತಂದೆ, ಪ್ರಾಣನೇ ತಾಯಿ, ಪ್ರಾಣನೇ ಒಡಹುಟ್ಟಿದವ,

೩೭

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಪ್ರಾಣನೇ ಒಡಹುಟ್ಟಿದವಳು, ಪ್ರಾಣನೇ ಆಚಾರ್ಯನು, ಪ್ರಾಣನೇ ಬ್ರಾಹ್ಮಣನು” (ಛಾಂ. ೭-೧೫-೧) ಎಂದು (ಶ್ರುತಿಯು) ಪ್ರಾಣವನ್ನೇ ಸರ್ವಾತ್ಮನನ್ನಾಗಿ ಮಾಡಿದೆ. “ಹೇಗೆ ಹಾರೆಕೋಲುಗಳು ಗುಂಬದಲ್ಲಿ ಸೇರಿಕೊಂಡಿರುತ್ತವೆಯೋ ಹಾಗೆ ಎಲ್ಲವೂ ಈ ಪ್ರಾಣನಲ್ಲಿ ಸೇರಿಕೊಂಡಿರುತ್ತದೆ” (ಛಾಂ. ೭-೧೫-೧) ಎಂದು ಸರ್ವಾತ್ಮತ್ವವನ್ನೂ ಅರನಾಭಿದೃಷ್ಟಾಂತವನ್ನೂ (ಕೊಟ್ಟಿರು)ವದರಿಂದ ಪ್ರಾಣನಿಗೆ ವಿಪುಲತ್ವರೂಪವಾದ ಭೂಮರೂಪತ್ವವು ಹೊಂದುವಹಾಗಿದೆ. ಆದ್ದರಿಂದ ಭೂಮವು ಪ್ರಾಣನು.

ಸಿದ್ಧಾಂತ : ಪ್ರಾಣನಿಗಿಂತ ಬೇರೆಯದಾಗಿ ಭೂಮವನ್ನು ಹೇಳಿದೆ

(ಭಾಷ್ಯ) ೨೩೮. ಏವಂ ಪ್ರಾಪ್ತಮ್ | ತತ ಇದಮುಚ್ಯತೇ | ಪರಮಾತ್ಮವ ಇಹ ಭೂಮಾ ಭವಿತುಮರ್ಹತಿ ನ ಪ್ರಾಣಃ | ಕಸ್ಮಾತ್ ? ಸಂಪ್ರಸಾದಾದದ್ದುಪದೇಶಾತ್ | ಸಂಪ್ರಸಾದ ಇತಿ ಸುಷುಪ್ತಂ ಸ್ಥಾನಮ್ ಉಚ್ಯತೇ | ಸಮ್ಯಕ್ ಪ್ರಸೀದತಿ ಅಸ್ಮಿನ್ ಇತಿ ನಿರ್ವಚನಾತ್ | ಬೃಹದಾರಣ್ಯಕೇ ಚ ಸ್ವಪ್ನಜಾಗರಿತಸ್ಥಾನಾಭ್ಯಾಂ ಸಹ ಪಾಠಾತ್ | ತಸ್ಯಾಂ ಚ ಸಂಪ್ರಸಾದಾವಸ್ಟಾಯಾಂ ಪ್ರಾಣೋ ಜಾಗರ್ತಿತಿ ಪ್ರಾಣೋತ್ರ ಸಂಪ್ರಸಾದೋತಭಿಪ್ರೇಯತೇ | ಪ್ರಾಣಾದೂರ್ಧ್ವಂ ಭೂಮೃ: ಉಪದಿಶ್ಯಮಾನತ್ವಾತ್ ಇತ್ಯರ್ಥಃ | ಪ್ರಾಣ ಏವ ಚೇದ್ ಭೂಮಾ ಸ್ಯಾತ್ ಸ ಏವ ತಸ್ಮಾದೂರ್ಧ್ವಮ್ ಉಪದಿಕ್ಕೇತ ಇತಿ ಅಶಿಷ್ಟಮೇವ ಏತತ್ ಸ್ಮಾತ್ | ನ ಹಿ ನಾಮ್ಮವ ನಾಷ್ಟೋ ಭೂಯ ಇತಿ ನಾಮ್ಮ ಊರ್ಧ್ವಮ್ ಉಪದಿಷ್ಟಮ್, ಕಿಂ ತರ್ಹಿ ನಾರ್ಮೋನ್ಯದರ್ಥಾನ್ನರಮ್ ಉಪದಿಷ್ಟಂ ವಾಗಾಖ್ಯಮ್ ‘ವಾಗ್ವಾವ ನಾಷ್ಟೋ ಭೂಯಸೀ’ ಇತಿ | ತಥಾ ವಾಗಾದಿಭ್ಪಿ ಆ ಪ್ರಾಣಾತ್ ಅರ್ಥಾನ್ನರಮೇವ ತತ್ರ ತತ್ರ ಊರ್ಧ್ವಮ್ ಉಪದಿಷ್ಟಮ್ | ತದ್ವತ್ ಪ್ರಾಣಾದೂರ್ಧ್ವಮ್ ಉಪದಿಶ್ಯಮಾನೋ ಭೂಮಾ ಪ್ರಾಣಾದರ್ಥಾನ್ನರಭೂತೋ ಭವಿತುಮರ್ಹತಿ ||

(ಭಾಷ್ಯಾರ್ಥ) ಹೀಗೆಂದು (ಪೂರ್ವಪಕ್ಷವು) ಬಂದೊದಗುತ್ತದೆ. ಇದಕ್ಕೆ ಈ (ಸಿದ್ಧಾಂತವನ್ನು ) ಹೇಳುತ್ತೇವೆ. ಇಲ್ಲಿ ಪರಮಾತ್ಮನೇ ಭೂಮವಾಗಿರಬೇಕೇ ಹೊರತು ಪ್ರಾಣನಲ್ಲ, ಏಕೆ ? ಎಂದರೆ (ಸಂಪ್ರಸಾದಾದಧ್ರುಪದೇಶಾತ್). ಸಂಪ್ರಸಾದವೆಂದರೆ ಸುಷುಪ್ತಸ್ಥಾನವು. ಏಕೆಂದರೆ ಈ (ಅವಸ್ಥೆಯಲ್ಲಿ ಜೀವನು) ಚೆನ್ನಾಗಿ ಪ್ರಸನ್ನನಾಗುತ್ತಾನೆ’ ಎಂದು (ಈ

  1. ಇಂದ್ರಿಯಗಳಿಗೂ ವಿಷಯಗಳಿಗೂ ಆಗುವ ಸಂಪರ್ಕದಿಂದಾಗಿದ್ದ ಕಾಲುಷ್ಯವನ್ನು ಬಿಟ್ಟಿರುತ್ತಾನೆ.

ಪ್ರಾಣಾದಥಾ’ ತದ್ವತ್ ಪಾರ್ಥಾನ್ನರಮ

ಅಧಿ. ೨. ಸೂ. ೮] ಹೆಚ್ಚಿನ ವಿಷಯದ ಪ್ರಶ್ಲೋತ್ತರವಿಲ್ಲದ್ದು ದೋಷವಲ್ಲ

೩೭೭

ಶಬ್ದದ) ನಿರ್ವಚನವಾಗುತ್ತದೆ. ಬೃಹದಾರಣ್ಯಕದಲ್ಲಿ’ ಸ್ವಪ್ನಜಾಗರಿತಾವಸ್ಥೆಗಳೊಡನೆ (ಇದನ್ನು) ಹೇಳಿರುತ್ತದೆಯಾದ್ದರಿಂದಲೂ (ಹೀಗೆಂದು ತಿಳಿಯಬೇಕು). ಆ ಸಂಪ್ರಸಾದಾವಸ್ಥೆಯಲ್ಲಿ ಪ್ರಾಣನು ಎಚ್ಚರವಾಗಿರುತ್ತಾನಾದ್ದರಿಂದ ಪ್ರಾಣನನ್ನೇ ಇಲ್ಲಿ ಸಂಪ್ರಸಾದನೆಂದು ಕರೆದಿದೆ. (ಆದ್ದರಿಂದ ಸಂಪ್ರಸಾದಾದಧ್ರುಪದೇಶಾತ್ ಎಂದರೆ) ಪ್ರಾಣನಾದಮೇಲೆ ಭೂಮವನ್ನು ಹೇಳಿರುವದರಿಂದ ಎಂದರ್ಥ. ಪ್ರಾಣನೇ ಭೂಮವಾದರೆ ಅವನನ್ನೇ ಅವನಾದಮೇಲೆ ಉಪದೇಶಿಸಿದ ಎಂಬಿದು ಅಯುಕ್ತವೇ ಆದೀತು. ನಾಮಕ್ಕಿಂತ ಹೆಚ್ಚಿನದು ಎಂದು ನಾಮವಾದಮೇಲೆ ನಾಮವನ್ನೇ ಹೇಳಿಲ್ಲ, ಮತ್ತೇನೆಂದರೆ ನಾಮಕ್ಕಿಂತ ಬೇರೆಯಾಗಿರುವ ವಾಕ್ಕಂಬ ಮತ್ತೊಂದು ಪದಾರ್ಥವನ್ನು “ವಾಕ್ಕೇನಾಮಕ್ಕಿಂತ ಹೆಚ್ಚಿನದು” (ಛಾಂ.೭-೨-೧) ಎಂದು ಹೇಳಿರುತ್ತದೆ. ಅಲ್ಲವೆ ? ಹೀಗೆಯೇ ವಾಗಾದಿಗಳಿಗಿಂತಲೂ ಪ್ರಾಣನವರೆಗೂ (ಅವುಗಳಿಗಿಂತ) ಬೇರೆಯಾದ ಪದಾರ್ಥವನ್ನೇ ಅಲ್ಲಲ್ಲಿ (ಆಯಾಪದಾರ್ಥವನ್ನು ಹೇಳಿದ) ಮೇಲೆ ಹೇಳಿರುತ್ತದೆ. ಅದರಂತೆ ಪ್ರಾಣನಾದಮೇಲೆ ಹೇಳಿರುವ ಭೂಮವು ಪ್ರಾಣನಿಗಿಂತ ಬೇರೆಯಾದ ಪದಾರ್ಥವಾಗಿರಬೇಕು.

ಹೆಚ್ಚಿನ ವಿಷಯದ ಪ್ರಶೋತ್ತರವಿಲ್ಲದ್ದು ದೋಷವಲ್ಲ

(ಭಾಷ್ಯ) - ೨೩೯. ನನ್ನಿಹ ನಾಸ್ತಿ ಪ್ರಶ್ನೆ: ಅಸ್ತಿ ಭಗವಃ ಪ್ರಾಣಾದ್ ಭೂಯಃ’ ಇತಿ | ನಾಪಿ ಪ್ರತಿವಚನಮಸ್ತಿ ‘ಪ್ರಾಣಾದ್ಭಾವ ಭೂಯೋಸ್ತಿ’ ಇತಿ | ಕಥಂ ಪ್ರಾಣಾದಧಿ ಭೂಮಾ ಉಪದಿಶ್ಯತೇ ಇತ್ಯುಚ್ಯತೇ ? ಪ್ರಾಣವಿಷಯಮೇವ ಚ ಅತಿವಾದಿತ್ವಮ್ ಉತ್ತರ

ಅನುಕೃಷ್ಯಮಾಣಂ ಪಶ್ಯಾಮಃ - “ಏಷ ತು ವಾ ಅತಿವದತಿ ಯಃ ಸನಾತಿವದತಿ’ (ಛಾಂ. ೭-೧೬-೧) ಇತಿ | ತಸ್ಮಾತ್ ನಾಸ್ತಿ ಪ್ರಾಣಾದಯ್ಯುಪದೇಶಃ ಇತಿ | ಅತ್ತೂಚ್ಯತೇ | ನ ತಾವತ್ ಪ್ರಾಣವಿಷಯಸ್ಕೃವ ಅತಿವಾದಿತ್ವಸ್ಯ ಏತದನು ಕರ್ಷಣಮ್ ಇತಿ ಶಕ್ಯಂ ವಸ್ತುಮ್ | ವಿಶೇಷವಾದಾತ್ ‘ಯಃ ಸನಾತಿವದತಿ’’ ಇತಿ | ನನು ವಿಶೇಷವಾದ್ಯಂ ಪ್ರಾಣವಿಷಯ ಏವ ಭವಿಷ್ಯತಿ | ಕಥಮ್ ? ಯಥಾ ‘ಏಷೋತಿಗ್ನಿಹೋತ್ರೀ ಯಃ ಸತ್ಯಂ ವದತಿ’ ಇತ್ಯುಕ್ತ ನ ಸತ್ಯವದನೇನ ಅಗ್ನಿಹೋತ್ರಿತ್ವಮ್, ಕೇನ ತರ್ಹಿ, ಅಗ್ನಿಹೋತ್ರೇಣೈವ | ಸತ್ಯವದನಂ ‘ತು ಅಗ್ನಿಹೋತ್ರಿ ವಿಶೇಷ ಉಚ್ಯತೇ | ತಥಾ “ಏಷ ತು ವಾ ಅತಿವದತಿ ಯಃ ಸತ್ಯೇನಾತಿವದತಿ’ ಇತ್ಯುಕ್ತನ ಸತ್ಯವದನೇನ ಅತಿವಾದಿತ್ವಮ್, ಕೇನ ತರ್ಹಿ, ಪ್ರಕೃತೇನ.

1.ಬ್ರ.೪-೩-೧೫.

೩೭೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಪ್ರಾಣವಿಜ್ಞಾನೇನೈವ ಸತ್ಯವದನಂತು ಪ್ರಾಣವಿದೋ ವಿಶೇಷೋವಿವಕ್ಷತೇ ಇತಿ ನೇತಿ ಬೂಮಃ | ಶ್ರುತ್ಯರ್ಥಪರಿತ್ಯಾಗಪ್ರಸಜ್ಜಾತ್ | ಶ್ರುತ್ಯಾ ಹಿ ಅತ್ರ ಸತ್ಯವದನೇನ ಅತಿವಾದಿತ್ವಂ ಪ್ರತೀಯತೇ “ಯಃ ಸನಾತಿವದತಿ, ಸೋತಿವದತಿ’ ಇತಿ | ನಾತ್ರ ಪ್ರಾಣವಿಜ್ಞಾನಸ್ಯ ಸಂಕೀರ್ತನಮಸ್ತಿ | ಪ್ರಕರಣಾತ್ ತು ಪ್ರಾಣವಿಜ್ಞಾನಂ ಸಂಬಧೈತ | ತತ್ರ ಪ್ರಕರಣಾನುರೋಧನ ಶ್ರುತಿಃ ಪರಿತ್ಯಕ್ಕಾ ಸ್ಮಾತ್ | ಪ್ರಕೃತವ್ಯಾವೃತ್ಯರ್ಥ

2 ತುಶಬ್ಯೂನಸಂಗಚ್ಛತೇ ‘ಏಷತು ವಾಂತಿವದತಿ’ (ಛಾಂ.೭-೧೬-೧) ಇತಿ |‘‘ಸತ್ಯಂ

  • ತೈವ ವಿಜಿಜ್ಞಾಸಿತವ್ಯಮ್” (ಛಾಂ, ೭-೧೬-೧) ಇತಿ ಚ ಪ್ರಯತ್ನಾವರ ಕರಣಮ್ ಅರ್ಥಾನ್ನರವಿವಕ್ಷಾ ಸೂಚಯತಿ | ತಸ್ಮಾತ್, ಯಥಾ ಏಕವೇದ ಪ್ರಶಂಸಾಯಾಂ ಪ್ರಕೃತಾಯಾಮ್ ‘‘ಏಷ ತು ಮಹಾಬ್ರಾಹ್ಮಣೋ ಯಶ್ಚತುರೋ ವೇದಾನ್ ಅಧೀತೇ? ಇತಿ ಏಕದೇಭ್ಯರ್ಥಾಾರಭೂತಃ ಚತುರ್ವದಃ ಪ್ರಶಸ್ಯತೇ ತಾದೃಗೇತದ್ದ್ರಷ್ಟವ್ಯಮ್ | ನ ಚ ಪ್ರಶ್ನಪ್ರತಿವಚನರೂಪಯ್ಯವ ಅರ್ಥಾನ್ನರವಿ ವಕ್ಷಯಾ ಭವಿತವ್ಯಮ್ ಇತಿ ನಿಯಮೋಸ್ತಿ | ಪ್ರಕೃತಸಂಬತ್ಥಾಸಂಭವಕಾರಿತತ್ವಾತ್ ಅರ್ಥಾನ್ನರವಿವಕ್ಷಾಯಾಃ | ತತ್ರ ಪ್ರಾಣಾಸ್ತ್ರಮ್ ಅನುಶಾಸನಂ ಶ್ರುತ್ವಾ ತೂಟ್ಗಂಭೂತಂ ನಾರದಂ ಸ್ವಯಮೇವ ಸನತ್ಕುಮಾರೋ ವ್ಯುತ್ಪಾದಯತಿ ಯತ್ ಪ್ರಾಣ ವಿಜ್ಞಾನೇನ ವಿಕಾರಾವೃತವಿಷಯೇಣ ಅತಿವಾದಿತ್ವಮ್, ಅನತಿವಾದಿತ್ವಮೇವ ತತ್, ‘‘ಏಷ ತು ವಾ ಅತಿವದತಿ ಯಃ ಸನಾತಿವದತಿ” ಇತಿ | ತತ್ರ ಸತ್ಯಮ್, ಇತಿ ಪರಂ ಬ್ರಹ್ಮ ಉಚ್ಯತೇ | ಪರಮಾರ್ಥರೂಪತ್ವಾತ್ | ‘ಸತ್ಯಂ ಜ್ಞಾನಮನನ್ನಂ ಬ್ರಹ್ಮ’ (ತ್ಯ. ೨-೧) ಇತಿ ಚ ಶ್ರುತ್ಯನ್ತರಾತ್ | ತಥಾ ವ್ಯುತ್ಪಾದಿತಾಯ ನಾರದಾಯ “ಸೋಹಂ ಭಗವಃ ಸನಾತಿವದಾನಿ’’ (ಛಾಂ.೭-೧೬-೧) ಇವಂ ಪ್ರವೃತ್ತಾಯ ವಿಜ್ಞಾನಾದಿಸಾಧನಪರಂಪರಯಾ ಭೂಮಾನಮ್ ಉಪದಿಶತಿ | ತತ್ರ ಯತ್ ಪ್ರಾಣಾದಧಿ ಸತ್ಯಂ ವಕ್ತವ್ಯಂ ಪ್ರತಿಜ್ಞಾತಮ್, ತದೇವ ಇಹ ಭೂಮಾ ಇತ್ಯುಚ್ಯತೇ ಇತಿ ಗಮ್ಯತೇ | ತಸ್ಮಾತ್ ಅಸ್ತಿ ಪ್ರಾಣಾದಧಿ ಭೂಮೃ: ಉಪದೇಶಃ ಇತ್ಯತಃ ಪ್ರಾಣಾ ದನ್ಯಃ ಪರಮಾತ್ಮಾ ಭೂಮಾ ಭವಿತುಮರ್ಹತಿ ||

(ಭಾಷ್ಯಾರ್ಥ) (ಆಕ್ಷೇಪ) :- ಇಲ್ಲಿ ‘ಪೂಜ್ಯರ, ಪ್ರಾಣನಿಗಿಂತ ಹೆಚ್ಚಿನದು ಇದೆಯೆ ?” ಎಂಬ ಪ್ರಶ್ನೆಯಿಲ್ಲ ; “ಪ್ರಾಣಕ್ಕಿಂತಲೂ ಹೆಚ್ಚಿನದು ಇದ” ಎಂಬ ಉತ್ತರವೂ ಇಲ್ಲವಲ್ಲ ! (ಹೀಗಿರುವಲ್ಲಿ) ಪ್ರಾಣನಾದಮೇಲೆ ಭೂಮವನ್ನು ಉಪದೇಶಿಸಿದೆ ಎಂದು ಹೇಳುವದು ಹೇಗೆ (ಸರಿ) ? ಪ್ರಾಣವಿಷಯವೇ ಆಗಿರುವ ಅತಿವಾದಿತ್ವವನ್ನು “ಆದರೆ ಯಾವನು ಸತ್ಯ ದಿಂದ ಅತಿವಾದವನ್ನು ಮಾಡುತ್ತಾನೋ ಇವನೇ (ನಿಜವಾಗಿ) ಅತಿವಾದ ಮಾಡುತ್ತಾನ’

ಅಧಿ. ೨. ಸೂ. ೮] ಹೆಚ್ಚಿನ ವಿಷಯದ ಪ್ರಕ್ಟೋತ್ತರವಿಲ್ಲದ್ದು ದೋಷವಲ್ಲ ೩೭೯ (ಛಾಂ. ೭-೧೬-೧) ಎಂದು ಮುಂದಕ್ಕೂ ಎಳೆದುಕೊಂಡು ಹೇಳಿರುವದು ಕಾಣಬರು ತದೆ. ಆದ್ದರಿಂದ ಪ್ರಾಣನಾದಮೇಲೆ (ಭೂಮದ) ಉಪದೇಶವಿಲ್ಲವಲ್ಲ !

(ಪರಿಹಾರ) :- ಇದಕ್ಕೆ (ಪರಿಹಾರವನ್ನು) ಹೇಳುತ್ತೇವೆ. ಮೊದಲನೆಯದಾಗಿ ಇದು ಪ್ರಾಣವಿಷಯದ ಅತಿವಾದಿತ್ವವನ್ನೇ ಎಳೆದುಕೊಂಡು (ಉಪದೇಶಿಸಿದ್ಧು) ಎಂದು ಹೇಳುವದಕ್ಕೆ ಆಗುವಹಾಗಿಲ್ಲ. ಏಕೆಂದರೆ (ಇಲ್ಲಿ) ‘ಯಾವನು ಸತ್ಯದಿಂದ ಅತಿವಾದ ವನ್ನು ಮಾಡುತ್ತಾನೋ’ ಎಂಬ ವಿಶೇಷವನ್ನು ಹೇಳಿರುತ್ತದೆ. * (ಆಕ್ಷೇಪ) :- ಈ ವಿಶೇಷವಾದವೂ ಪ್ರಾಣವಿಷಯವೇ ಆಗಬಹುದಲ್ಲ | ಹೇಗಂದರೆ ‘ಯಾವನು ಸತ್ಯವನ್ನು ಹೇಳುತ್ತಾನೋ ಅವನೇ ಅಗ್ನಿಹೋತ್ರಿಯು’ ಎಂದರೆ ಸತ್ಯವನ್ನು ಹೇಳುವದರಿಂದ (ಅವನು) ಅಗ್ನಿಹೋತ್ರಿಯಾಗಿರುವದಿಲ್ಲ, ಮತರಿಂದ ಎಂದರೆ ಅಗ್ನಿಹೋತ್ರದಿಂದಲೇ (ಅಗ್ನಿಹೋತ್ರಿಯಾಗಿರುತ್ತಾನೆ). ಸತ್ಯವನ್ನು ಹೇಳುವದೆಂಬುದೋ ಎಂದರೆ ಅಗ್ನಿಹೋತ್ರಿಗೆ ವಿಶೇಷವಾಗಿ ಹೇಳಿದ್ದಾಗಿದೆ, ಹಾಗೆಯೇ “ಆದರೆ ಯಾವನು ಸತ್ಯದಿಂದ ಅತಿವಾದವನ್ನು ಮಾಡುತ್ತಾನೋ ಇವನೇ (ನಿಜವಾಗಿ) ಅತಿವಾದಮಾಡುತ್ತಾನೆ’’ ಎಂದರೆ ಸತ್ಯವನ್ನಾಡಿದ್ದರಿಂದ ಅತಿವಾದಿಯಾಗಿರುವದಿಲ್ಲ. ಮತ್ತೇತರಿಂದ ಎಂದರೆ ಪ್ರಕೃತವಾದ ಪ್ರಾಣವಿದ್ಯಯಿಂದಲೇ. ಸತ್ಯವದನವೋ ಎಂದರೆ ಪ್ರಾಣವಿದನ ವಿಶೇಷವೆಂದು ಹೇಳುವದಕ್ಕೆ (ಶ್ರುತಿ) ಹೊರಟದ್ದು. (ಅಲ್ಲವೆ) ?

(ಪರಿಹಾರ) :- ಅಲ್ಲ ಎನ್ನುತ್ತೇವೆ. ಏಕೆಂದರೆ (ಆಗ) ಶ್ರುತ್ಯರ್ಥವನ್ನು ಬಿಡಬೇಕಾಗುವದು. ಹೇಗೆಂದರೆ ‘ಯಾವನುಸತ್ಯದಿಂದ ಅತಿವಾದವನ್ನು ಮಾಡುವನೋ ಅವನೇ (ನಿಜವಾಗಿ) ಅತಿವಾದಮಾಡುತ್ತಾನೆ” ಎಂಬ ಶ್ರುತಿಯಿಂದ ಇಲ್ಲಿ ಸತ್ಯವದನದಿಂದಲೇ ಅತಿವಾದಿಯಾಗಿರುವನೆಂಬ ಅರಿವಾಗುತ್ತದೆ. ಇಲ್ಲಿ ಪ್ರಾಣವಿದ್ಯ ಯನ್ನು ಹೇಳಿರುವದಿಲ್ಲ. ಪ್ರಕರಣದಿಂದಲಾದರೆ ಪ್ರಾಣವಿಜ್ಞಾನವು (ಇದಕ್ಕೆ) ಸಂಬಂಧಿಸಬಹುದು. ಆಗ ಪ್ರಕರಣಕ್ಕನುಸಾರವಾಗಿ ಶ್ರುತಿಯನ್ನು ಕೈಬಿಟ್ಟಂತಾಗು ವದು. ಇದಲ್ಲದ “ಏಷ ತು ವಾ ಅತಿವದತಿ’ ಎಂಬಲ್ಲಿರುವ ಪ್ರಕೃತವಾದದ್ದನ್ನು ಕೈಬಿಡುವದೆಂಬ ಅರ್ಥವುಳ್ಳ ತು (ಆದರೆ) ಎಂಬ ಮಾತೂ (ನಿಮ್ಮ ಪಕ್ಷದಲ್ಲಿ) ಹೊಂದುವದಿಲ್ಲ. ಆದರೆ ಸತ್ಯವನ್ನೇ ವಿಜಿಜ್ಞಾಸಮಾಡಬೇಕು’ (ಛಾಂ. ೭-೧೬-೧) ಎಂದು ಪ್ರಯತ್ನಾಂತರವನ್ನು ಮಾಡಿರುವದೂ ಮತ್ತೊಂದು ಪದಾರ್ಥವನ್ನು ಹೇಳುವ ತಾತ್ಪರ್ಯ(ವಿದೆ ಎಂಬುದನ್ನು ) ಸೂಚಿಸುತ್ತದೆ. ಆದ್ದರಿಂದ ಹೇಗೆ ಒಂದು ವೇದವನ್ನು (ಅಧ್ಯಯನಮಾಡಿರುವವರನ್ನು) ಹೊಗಳುವದು ಪ್ರಕೃತವಾಗಿರುವಲ್ಲಿ “ಆದರೆ ಯಾವನು ನಾಲ್ಕು ವೇದಗಳನ್ನು ಅಧ್ಯಯನಮಾಡಿರುವನೋ ಅವನು ಮಹಾ

  1. ಪ್ರಕರಣಕ್ಕಿಂತ ಶ್ರುತಿ ಪ್ರಬಲವಾದ್ದರಿಂದ ಹಾಗೆ ಬಿಡುವದು ನ್ಯಾಯವಲ್ಲ.

೩೮೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಬ್ರಾಹ್ಮಣನು” ಎಂದು ಒಂದು , ವೇದದವರಿಗಿಂತ ಬೇರೆಯಾಗಿರುವ ನಾಲ್ಕು ವೇದದವನನ್ನು ಹೊಗಳುತ್ತಾರೆಯೂ ಇದೂ ಹೀಗೆಯೇ ಎಂದು ಅರಿಯಬೇಕು. ಮತ್ತು ಪ್ರಶೋತ್ತರರೂಪದಿಂದಲೇ ಬೇರೊಂದು ಪದಾರ್ಥವನ್ನು ಹೇಳುವದಕ್ಕೆ ಹೊರಡ ಬೇಕೆಂಬ ನಿಯಮವೇನೂ ಇಲ್ಲ ; ಏಕೆಂದರೆ ಮತ್ತೊಂದು ವಿಷಯವನ್ನು ಹೇಳುವದಕ್ಕೆ ಹೂರಟಿದೆ ಎಂಬುದಕ್ಕೆ ಪ್ರಕೃತಕ್ಕೆ ಸಂಬಂಧವಾಗುವಂತಿಲ್ಲವೆಂಬುದೊಂದೇ ಕಾರಣವಾಗಿರುತ್ತದೆ. ಇಲ್ಲಿ ಪ್ರಾಣನವರಗಿನ ಉಪದೇಶವನ್ನು ಕೇಳಿ ಸುಮ್ಮನಾದ ನಾರದನಿಗೆ ಸನತ್ಕುಮಾರನು ತಾನೇ ‘ಕಾರ್ಯವಾದ ‘ಅನೃತದ ವಿಷಯವಾದ ಪ್ರಾಣವಿಜ್ಞಾನದಿಂದಾದ ಅತಿವಾದಿತ್ವವಿದೆಯಲ್ಲ, ಅದು ಅತಿವಾದಿತ್ವವೇ ಅಲ್ಲ ; ‘‘ಆದರೆ ಯಾವನು ಸತ್ಯದಿಂದ ಅತಿವಾದಮಾಡುವನೋ, ಅವನೇ ನಿಜವಾಗಿ ಅತಿ ವಾದವನ್ನು ಮಾಡುವವನು’ ಎಂದು ತಿಳಿಯಹೇಳಿರುತ್ತಾನೆ. ಇಲ್ಲಿ ಸತ್ಯವೆಂಬ (ಮಾತಿನಿಂದ) ಪರಬ್ರಹ್ಮವನ್ನು ಹೇಳಿದೆ ; ಏಕೆಂದರೆ (ಅದು) ಪರಮಾರ್ಥವಾಗಿದೆ. “ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮವು’ (ತ್ಯ. ೨-೧) ಎಂದು ಬೇರೊಂದು ಶ್ರುತಿಯೂ ಇದೆ. ಹಾಗೆ ತಿಳಿಸಲ್ಪಟ್ಟ ನಾರದನು ‘‘ಪೂಜ್ಯರೆ, ಆ ನಾನು ಸತ್ಯದಿಂದಲೇ ಅತಿವಾದಮಾಡಲಿಚ್ಛಿಸುವನು’ (ಛಾಂ. ೭-೧೬-೧) ಎಂದು ಹೊರಡಲು (ಅವನಿಗೆ) ವಿಜ್ಞಾನವೇ ಮುಂತಾದ ಸಾಧನಪರಂಪರೆಯಿಂದ ಭೂಮವನ್ನು ಉಪದೇಶಿಸಿರುತ್ತಾನೆ. (ಆದ್ದರಿಂದ) ಅಲ್ಲಿ ಪ್ರಾಣನಾದ ಮೇಲೆ ಸತ್ಯವನ್ನು ಹೇಳಬೇಕೆಂದು ಪ್ರತಿಜ್ಞೆ

ಮಾಡಿತ್ತಲ್ಲ, ಅದನ್ನೇ ಇಲ್ಲಿ ಭೂಮವೆಂದು ಕರೆದಿದೆ ಎಂದು ನಿಶ್ಚಯವಾಗುತ್ತದೆ. ಆದ್ದರಿಂದ ಪ್ರಾಣನಾದ ಮೇಲೆ ಭೂಮವನ್ನು ಉಪದೇಶಮಾಡಿದ ಎಂಬುದು ಉಂಟು ; ಆದ್ದರಿಂದ ಪ್ರಾಣನಿಗಿಂತ ಬೇರೆಯಾದ ಪರಮಾತ್ಮನೇ ಭೂಮನಾಗಿರಬೇಕು.

ಇಲ್ಲಿ ಹೇಳಿರುವ ಆತ್ಮತ್ಯಾದಿಗಳೂ ಪರಮಾತ್ಮನಿಗೇ ಸಲ್ಲುತ್ತವೆ

(ಭಾಷ್ಯ)

೨೪೦. ಏವಂ ಚ ಇಹ ಆತ್ಮವಿವಿದಿಷಯಾ ಪ್ರಕರಣಸ್ಯ ಉತ್ಥಾನಮ್ ಉಪಪತ್ನಂ ಭವಿಷ್ಯತಿ | ಪ್ರಾಣ ಏವ ಇಹ ಆತ್ಮಾ ವಿವಕ್ಷಿತಃ ಇತದಪಿ ನೋಪಪದ್ಯತೇ | ನ ಹಿ ಪ್ರಾಣಸ್ಯ ಮುಖ್ಯಯಾ ವ್ಯತ್ಯಾ ಆತ್ಮತ್ವಮಸ್ತಿ | ನ ಚ ಅನ್ಯತ್ರ ಪರಮಾತ್ಮಜ್ಞಾನಾತ್ ಶೋಕವಿನಿವೃತ್ತಿರಸ್ತಿ | “ನಾನ್ಯಃ ಪನ್ಹಾ ವಿದ್ಯತೇಯನಾಯ” (ಶ್ವೇ. ೬-೧೫) ಇತಿ ಶ್ರುತ್ಯರಾತ್ | ತಂ ಮಾ ಭಗವಾಇಲ್ನೋಕಸ್ಯ ಪಾರಂ ತಾರಯತು’ (ಛಾಂ. ೭-೧ ೩) ಇತಿ ಚೋಪಕ್ರಮ್ಯ ಉಪಸಂಹರತಿ - '

ತಮೃದಿತಕಷಾಯಾಯ ತಮಸಃ ಪಾರಂ

ಅಧಿ. ೨. ಸೂ. ೮] ಇಲ್ಲಿ ಹೇಳಿರುವ ಆತ್ಮತ್ವಾದಿಗಳೂ ಪರಮಾತ್ಮನಿಗೇ ಸಲ್ಲುತ್ತವೆ ೩೮೧ ದರ್ಶಯತಿ ಭಗವಾನ್ ಸನತ್ಕುಮಾರಃ’ (ಛಾಂ. ೭-೨೬-೨) ಇತಿ | ‘ತಮಃ’ ಇತಿ ಶೋಕಾದಿಕಾರಣಮ್ ಅವಿದ್ಯಾ ಉಚ್ಯತೇ | ಪ್ರಾಣಾಪ್ರೇ ಚ ಅನುಶಾಸನೇ ನ ಪ್ರಾಣಸ್ಯ ಅನ್ಯಾಯತ್ತತಾ ಉಚ್ಯತ | “ಆತ್ಮತಃ ಪ್ರಾಣಃ’ (ಛಾಂ. ೭-೨೬-೧) ಇತಿ ಚ ಬ್ರಾಹ್ಮಣಮ್ | ಪ್ರಕರಣಾನೇ ಪರಮಾತ್ಮವಿವಕ್ಷಾ ಭವಿಷ್ಯತಿ, ಭೂಮಾತು ಪ್ರಾಣ ಏವ ಇತಿ ಚೇತ್ | ನ | ‘ಸ ಭಗವಃ ಕಸ್ಮಿನ್ ಪ್ರತಿಷ್ಠಿತ ಇತಿ ಸ್ವ ಮಹಿಮ್ಮಿ’’ (ಛಾಂ. ೭ ೨೪-೧) ಇತ್ಯಾದಿನಾ ಭೂಮ್ ಏವ ಆ ಪ್ರಕರಣಸಮಾರನುಕರ್ಷಣಾತ್ | ವೈಪುಣ್ಯಾತ್ಮಿಕಾ ಚ ಭೂಮರೂಪತಾ ಸರ್ವಕಾರಣತ್ವಾತ್ ಪರಮಾತ್ಮನಃ ಸುತರಾಮ್ ಉಪಪದ್ಯತೇ ||

(ಭಾಷ್ಯಾರ್ಥ) ಮತ್ತು ಹೀಗಾದರೆ ಆತ್ಮನನ್ನು ತಿಳಿಯಬೇಕೆಂಬ ಇಚ್ಛೆಯನ್ನು (ತಿಳಿಸು) ವದರಿಂದ ಪ್ರಕರಣವನ್ನು ಪ್ರಾರಂಭಿಸುವದು ಯುಕ್ತವಾಗುವದು. ಪ್ರಾಣನೇ ಇಲ್ಲಿ ಆತ್ಮನೆಂದು ವಿವಕ್ಷಿತನಾಗಿರುತ್ತಾನೆ ಎಂಬುದೂ ಸರಿಯಾಗುವದಿಲ್ಲ ; ಏಕೆಂದರೆ ಪ್ರಾಣನಿಗೆ ಮುಖ್ಯವೃತ್ತಿಯಿಂದ ಆತ್ಮತ್ವವಿರುವದಿಲ್ಲ. ಪರಮಾತ್ಮಜ್ಞಾನವನ್ನು ಬಿಟ್ಟು ಮತ್ತೊಂದರಿಂದ ಶೋಕನಾಶವೂ ಆಗುವಹಾಗಿಲ್ಲ ; ಏಕೆಂದರೆ (ಆ ಪುರುಷನ ) ಪ್ರಾಪ್ತಿಗೆ ಮತ್ತೊಂದು ಹಾದಿಯಿರುವದಿಲ್ಲ” (ಶ್ವೇ. ೬-೧೫) ಎಂದು ಬೇರೊಂದು ಶ್ರುತಿ (ಹೇಳುತ್ತದೆ), ಮತ್ತು “ಆ ನನ್ನನ್ನು ಪೂಜ್ಯರಾದ (ತಾವು) ಶೋಕದ ಪಾರವನ್ನು ಸೇರಿಸಬೇಕು’ (ಛಾಂ, ೭-೧-೩) ಎಂದು ಪ್ರಾರಂಭಿಸಿ ಕಷಾಯವನ್ನು ಕಳೆದು ಕೊಂಡಿರುವ ಆ (ನಾರದನಿಗೆ ಭಗವಂತನಾದ ಸನತ್ಕುಮಾರನು ತಮಸ್ಸಿನ ಪಾರವನ್ನು ತೋರಿಸಿಕೊಡುತ್ತಾನೆ’’ (ಛಾಂ. ೭-೨೬-೨) - ಎಂದು ಉಪಸಂಹಾರಮಾಡಿರುತ್ತದೆ. ಶೋಕವೇ ಮುಂತಾದದ್ದಕ್ಕೆ ಕಾರಣವಾಗಿರುವ ಅವಿದ್ಯೆಯನ್ನು ತಮಸ್ಸು ಎಂದಿದೆ. ಉಪದೇಶವು ಪ್ರಾಣನಲ್ಲಿಯೇ ಕೊನೆಗಾಣುವ ಹಾಗಿದ್ದಿದ್ದರೆ ಪ್ರಾಣನು ಮತ್ತೊಬ್ಬನ ಅಧೀನವಾಗಿರುವನೆಂದು ಹೇಳುತ್ತಿರಲಿಲ್ಲ ; ಆದರೆ ‘ಆತ್ಮನಿಂದ ಪ್ರಾಣನು’ (ಛಾಂ.೭ ೨೭-೧) ಎಂದು (ಈ) ಬ್ರಾಹ್ಮಣವು (ಹೇಳುತ್ತಿದೆ) .ಪ್ರಕರಣಾಂತದಲ್ಲಿ ಪರಮಾತ್ಮನ ವಿವಕ್ಷೆಯಿದ) ಎಂದಾಗಲಿ ; (ಇಲ್ಲಿರುವ) ಭೂಮವು ಮಾತ್ರ ಪ್ರಾಣನೇ (ಎನ್ನಬಹುದಲ್ಲ) ! - ಎಂದರೆ ಹಾಗಲ್ಲ. ಏಕೆಂದರೆ ‘ಪೂಜ್ಯರೆ, ಆತನು ಏತರಲ್ಲಿ

  1. ಗೌಣವಾಗಿ ಪ್ರಾಣನೂ ಆತ್ಮನನಿಸುತ್ತಾನಾದರೂ ಮುಖ್ಯಾರ್ಥವನ್ನು ಬಿಡುವದಕ್ಕೆ ಕಾರಣವಿಲ್ಲ ಎಂದು ಭಾವ.

  2. ಈ ಅವಿದ್ಯೆಯನ್ನು ಕಳೆಯುವದು ಆತ್ಮಜ್ಞಾನವೇ ಹೊರತು ಪ್ರಾಣೋಪಾಸನೆಯಲ್ಲ.೩೮೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ನೆಲೆನಿಂತಿರುವನು ? ತನ್ನ ಮಹಿಮಯಲ್ಲಿ’ (ಛಾಂ. ೭-೨೪-೧) ಎಂದು ಮುಂತಾಗಿ ರುವ (ವಾಕ್ಯದಿಂದ) ಪ್ರಕರಣವು ಮುಗಿಯುವವರೆಗೂ ಭೂಮವನ್ನೇ ಅನುಕರ್ಷಣೆ ಮಾಡಿರುತ್ತದೆ. ವಿಪುಲತ್ವರೂಪವಾದ ಭೂಮಸ್ವರೂಪವು ಎಲ್ಲಕ್ಕೂ ಕಾರಣನಾಗಿರು ವದರಿಂದ’ ಪರಮಾತ್ಮನಿಗೆ ಮತ್ತಷ್ಟು ಚೆನ್ನಾಗಿ ಹೊಂದುತ್ತದೆ.?

ಭೂಮದ ಧರ್ಮಗಳೆಲ್ಲ ಪರಮಾತ್ಮನಿಗೇ ಹೊಂದುತ್ತವೆ

ಧರ್ಮೋಪಪಶ್ಚ ||೯|| ೯. ಧರ್ಮಗಳು ಹೊಂದುವದರಿಂದಲೂ (ಭೂಮವು ಪರಮಾತ್ಮನೇ).

(ಭಾಷ್ಯ) ೨೪೧. ಅಪಿ ಚ ಯೇ ಭೂಮಿ ಶೂಯನ್ನೇ ಧರ್ಮಾಃ , ತೇ ಪರಮಾತ್ಮನಿ ಉಪಪದ್ಯ |‘ಯತ್ರ ನಾನ್ಯತೆ ಪಶ್ಯತಿ ನಾನ್ಯ. ಶೃಣೋತಿ ನಾನ್ಯದ್ ವಿಜಾನಾತಿ ಸ ಭೂಮಾ” ಇತಿ ದರ್ಶನಾದಿವ್ಯವಹಾರಾಭಾವಂ ಭೂಮನಿ ಅವಗಮಯತಿ | ಪರಮಾತ್ಮನಿ ಚ ಅಯಂ ದರ್ಶನಾದಿವ್ಯವಹಾರಾಭಾವೋವಗತಃ “ಯತ್ರ ತಸ್ಯ ಸರ್ವಮಾತ್ಮವಾಭೂತ್ ತತ್ಕನ ಕಂ ಪಶ್ಯತ್’’ (ಬೃ. ೪-೫-೧೫) ಇತ್ಯಾದಿ ಶ್ರುತ್ಯರಾತ್ | ಯೋವ್ಯಸೌ ಸುಷುಪ್ತಾವಸ್ಟಾಯಾಂ ದರ್ಶನಾದಿವ್ಯವಹಾರಾಭಾವ ಉಕ್ತಃ, ಸೋSಪಿ ಆತ್ಮನ ಏವ ಅಸತ್ವವಿವಕ್ಷಯಾ ಉಕ್ತಃ, ನ ಪ್ರಾಣ ಸ್ವಭಾವವಿವಕ್ಷಯಾ | ಪರಮಾತ್ಮಪ್ರಕರಣಾತ್ | ಯದಪಿ ತಸ್ಯಾಮ್ ಅವಸ್ಟಾಯಾಂ ಸುಖಮ್ ಉಕ್ತಮ್, ತದಪಿ ಆತ್ಮನ ಏವ ಸುಖರೂಪತ್ವವಿವಕ್ಷಯಾ ಉಕ್ತಮ್ |ಯತ ಆಹ’ಏರ್ಷೋಸ್ಯ ಪರಮ ಆನನ್ನ ಏತಸ್ಯವಾನನ್ದಸ್ಮಾನ್ಯಾನಿ ಭೂತಾನಿ ಮಾತ್ರಾಮುವಜೀವ’ (ಬೃ. ೪-೩-೩೨) ಇತಿ | ಇಹಾಪಿ ‘ಯೋ ವೈ ಭೂಮಾ ತತ್ ಸುಖಂ ನಾಲ್ವೇ ಸುಖಮಸ್ತಿ ಭೂವ ಸುಖಮ್’ (ಛಾಂ. ೭-೨೩-೧) ಇತಿ ಸಾಮಯಸುಖನಿರಾಕರಣೇನ ಬ್ರಹ್ಮವ ಸುಖಂ ಭೂಮಾನಂ ದರ್ಶಯತಿ | “ಯೋ ವೈ ಭೂಮಾ ತದಮೃತಮ್’ (ಛಾಂ. ೭-೨೪-೧) ಇತ್ಯಮೃತತ್ವಮಪಿ ಇಹ ಶೂಯಮಾಣಂ ಪರಮಕಾರಣಂ ಗಮಯತಿ | ವಿಕಾರಾಣಾಮ್ , ಅಮೃತತ್ವಸ್ಯ ಆಪೇಕ್ಷಿಕತ್ವಾತ್, ‘ಅತೋನ್ಮದಾರ್ತಮ್’’ (ಬೃ. ೩-೪-೨) ಇತಿ ಚ ಶ್ರುತ್ಯನರಾತ್ | ತಥಾ ಚ ಸತ್ಯತ್ವಮ್, ಸ್ವಮಹಿಮಪ್ರತಿಷ್ಠಿತತ್ವಮ್, ಸರ್ವಗತತ್ವಮ್,

  1. ಪ್ರಾಣಸಹಿತವಾದ ಸರ್ವಕಾರ್ಯಕ್ಕೂ ಕಾರಣವಾಗಿರುವದರಿಂದ ಎಂದರ್ಥ.

  2. ಪ್ರಾಣನಿಗೆ ಸ್ವಕಾರ್ಯದ ಅಪೇಕ್ಷೆಯಿಂದಾದ ಪುಲ್ಕವಿದ ; ಪರಮಾತ್ಮನಿಗೆ ನಿರತಿಶಯವಾದ ವೈಪಲ್ಯವಿದೆ.

ಅಧಿ. ೨. ಸೂ. ೯] ಭೂಮದ ಧರ್ಮಗಳೆಲ್ಲ ಪರಮಾತ್ಮನಿಗೇ ಹೊಂದುತ್ತವೆ೩೮೩ ಸರ್ವಾತ್ಮತ್ವಮ್ ಇತಿ ಚೈತೇ ಧರ್ಮಾಃ ಶೂಯಮಾಣಾಃ ಪರಮಾತ್ಮವ ಉಪಪದ್ಯ ನಾನ್ಯತ್ರ ತಸ್ಮಾತ್ ಭೂಮಾ ಪರಮಾತ್ಮಾ ಇತಿ ಸಿದ್ಧಮ್ ||

(ಭಾಷ್ಯಾರ್ಥ) ಇದಲ್ಲದೆ ಭೂಮ (ವಿಷಯ)ದಲ್ಲಿ ಯಾವ ಧರ್ಮಗಳನ್ನು ಶ್ರುತಿಯಲ್ಲಿ ಹೇಳಿದೆಯೋ ಅವು ಪರಮಾತ್ಮನಿಗೂ ಹೊಂದುತ್ತವೆ. (ಹೇಗೆಂದರೆ), “ಎಲ್ಲಿ ಮತ್ತೊಂದನ್ನು ಕಾಣುವದಿಲ್ಲವೋ, ಮತ್ತೊಂದನ್ನು ಕೇಳುವದಿಲ್ಲವೋ, ಮತ್ತೊಂದನ್ನು ಅರಿಯುವದಿಲ್ಲವೋ ಅದು ಭೂಮವು’ (ಛಾಂ. ೭-೨೪-೧) ಎಂದು ದರ್ಶನಾದಿ ವ್ಯವಹಾರವು ಭೂಮದಲ್ಲಿರುವದಿಲ್ಲವೆಂದು ಹೇಳಿದೆ(ಯಷ್ಟೆ), ಈ ದರ್ಶನಾದಿ ವ್ಯವಹಾರವಿಲ್ಲದಿರುವಿಕೆಯು ಪರಮಾತ್ಮನಲ್ಲಿದೆ ಎಂದು ನಿಶ್ಚಯ ವಾಗಿರುತ್ತದೆ ; ಏಕೆಂದರೆ ಎಲ್ಲಿಯಾದರೆ ಇವನಿಗೆ ಎಲ್ಲವೂ ಆತ್ಮನೇ ಆಗಿರುವದೂ ಅಲ್ಲಿ ಏತರಿಂದ ಯಾರನ್ನು ಕಾಣಬೇಕು ?” (ಬೃ. ೪-೫-೧೫) ಎಂದು ಮುಂತಾಗಿ ಬೇರೊಂದು ಶ್ರುತಿಯಲ್ಲಿದೆ. ಇನ್ನು ಸುಷುಪ್ತಾವಸ್ಥೆಯಲ್ಲಿ ದರ್ಶನಾದಿವ್ಯವಹಾರ ವಿಲ್ಲವೆಂದು (ಪ್ರ.೪-೨ರಲ್ಲಿ) ಹೇಳಿದೆಯಲ್ಲ. ಅದೂ ಆತ್ಮನು ಅಸಂಗನೆಂದು ತಿಳಿಸು ವದಕ್ಕೆ ಹೇಳಿದೆಯೇ ಹೊರತು ಪ್ರಾಣಸ್ವಭಾವವನ್ನು ತಿಳಿಸಬೇಕೆಂದಲ್ಲ ; ಏಕೆಂದರೆ (ಅದು) ಪರಮಾತ್ಮನ ಪ್ರಕರಣವಾಗಿದೆ. ಇನ್ನು ಆ ಅವಸ್ಥೆಯಲ್ಲಿ ಸುಖವನ್ನು (ಪ್ರ. ೪-೬ ರಲ್ಲಿ) ಹೇಳಿದೆಯಲ್ಲ, ಅದನ್ನೂ ಆತ್ಮನಿಗೇ ಸುಖರೂಪತ್ವವನ್ನು ತಿಳಿಸಬೇಕೆಂದು ಹೇಳಿದೆ. ಏಕೆಂದರೆ (ಬೇರೊಂದುಶ್ರುತಿಯಲ್ಲಿ) ‘ಇದೇ ಇವನ ಪರಮಾನಂದವು ; ಇದೇ ಆನಂದದ ಮಾತ್ರೆಯನ್ನು ಮಿಕ್ಕ ಭೂತಗಳು ಉಪಜೀವಿಸಿಕೊಂಡಿರುತ್ತವೆ.’ (ಬೃ. ೪ ೩-೩೨) ಎಂದು ಹೇಳಿರುತ್ತದೆ. ಇಲ್ಲಿಯೂ “ಯಾವದು ಭೂಮವೋ ಅದೇ ಸುಖವು, ಅಲ್ಪವಾದದ್ದರಲ್ಲಿ ಸುಖವಿಲ್ಲ ಭೂಮವೇ ಸುಖವು’ (ಛಾಂ. ೭-೨೩-೧) ಎಂದು ದೋಷಸಹಿತವಾದ ಸುಖವನ್ನು ನಿರಾಕರಿಸಿ ಬ್ರಹ್ಮವೇ ಸುಖವಾದ ಭೂಮವೆಂದು ತಿಳಿಸಿರುತ್ತದೆ. “ಯಾವದು ಭೂಮವೋ ಅದೇ ಅಮೃತವು’ (ಛಾಂ, ೭-೨೪-೧) ಎಂದು ಅಮೃತತ್ವವನ್ನು ಶ್ರುತಿಯಲ್ಲಿ ಹೇಳಿರುವದೂ (ಭೂಮವು) ಪರಮ ಕಾರಣವೆಂದು ಗೊತ್ತುಪಡಿಸಿಕೊಡುತ್ತದೆ ; ಏಕೆಂದರೆ ಕಾರ್ಯಗಳು ಅಮೃತವಾಗಿರುವ ದೆಂಬುದು ಆಪೇಕ್ಷಿಕವಾಗಿರುತ್ತದೆ. ಇದಕ್ಕಿಂತ ಬೇರೆಯಾದದ್ದು ನಾಶವಾಗತಕ್ಕದ್ದು”

1.ಹಿಂದ ಭಾ. ಭಾ. ೨೩೭ ರಲ್ಲಿ ಪೂರ್ವಪಕ್ಷಿಯು ಹೇಳಿರುವ ಧರ್ಮಗಳು ಪರಮಾತ್ಮನಿಗೇ ಹಚ್ಚು ಒಪ್ಪುತ್ತವೆಯಂದೂ ಇನ್ನೂ ಕೆಲವು ಧರ್ಮಗಳು ಪರಮಾತ್ಮನಿಗೇ ಸಲ್ಲುವವಾಗಿವ ಯಂದೂ ಈಗ ತೋರಿಸುತ್ತಾರೆ.

  1. ಅವು ತನ್ನ ಕಾರ್ಯಗಳ ಅಪೇಕ್ಷೆಯಿಂದ ಅಮೃತವಾಗಿರುತ್ತವೆ.

೩೮೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಬ್ರ, ೩-೪-೨) ಎಂದು ಬೇರೊಂದು ಶ್ರುತಿಯಿರುವದರಿಂದಲೂ (ಹೀಗೆಂದು ತಿಳಿಯಬೇಕು). ಹೀಗೆಯೇ (ಈ) ಶ್ರುತಿಯಲ್ಲಿರುವ ಸತ್ಯತ್ವ (ಛಾಂ. ೭-೧೬-೧), ಸ್ವಮಹಿಮಪ್ರತಿಷ್ಠಿತತ್ವ (ಛಾಂ. ೬-೨೪-೧), ಸರ್ವಗತತ್ವ (ಛಾಂ, ೭-೨೫-೧), ಮತ್ತು ಸರ್ವಾತ್ಮತ್ವ (ಛಾಂ. ೭-೨೫-೨) ಎಂಬೀ ಧರ್ಮಗಳೆಲ್ಲವೂ ಪರಮಾತ್ಮನಿಗೇ ಹೊಂದುತ್ತವೆಯೇ ಹೊರತು ಮತ್ತೊಂದಕ್ಕೆ (ಹೊಂದುವ)ದಿಲ್ಲ. ಆದ್ದರಿಂದ ಭೂಮವು ಪರಮಾತ್ಮನು ಎಂದು ಸಿದ್ಧವಾಯಿತು.

೩. ಅಕ್ಷರಾಧಿಕರಣ (೧೦-೧೨)

(ಬೃಹದಾರಣ್ಯಕ ೩-೮-೮ ರಲ್ಲಿ ಹೇಳಿರುವ ಅಕ್ಷರವು ಬ್ರಹ್ಮವೇ)

ಅಕ್ಷರಮನ್ನರಾಗೃತೇಃ ll೧oll

೧೦. (ಬೃಹದಾರಣ್ಯಕದ) ಅಕ್ಷರವು (ಬ್ರಹ್ಮವೇ), ಏಕೆಂದರೆ (ಅದು) ಅಂಬರದವರೆಗಿನದೆಲ್ಲವನ್ನೂ ಧರಿಸಿರುತ್ತದೆ.

ವಿಷಯವೂ ಸಂಶಯವೂ

(ಭಾಷ್ಯ) ೨೪೨, ಕಸ್ಮಿನ್ನು ಖಾಕಾಶ ಓತಶ್ಚ ಪ್ರೋತಶೃತಿ |” (ಬ. ೩-೮-೭) “ಸಹೋವಾಚೈತತದಕ್ಷರಂಗಾರ್ಗಿ ಬ್ರಾಹ್ಮಣಾ ಅಭಿವದನ್ಯಸ್ಫೂಲಮನಣು’ (ಬೃ. ೩-೮-೮) ಇತ್ಯಾದಿ ಶೂಯತೇ | ತತ್ರ ಸಂಶಯಃ - ಕಿಮ್ ಅಕ್ಷರಶಬ್ದನ ವರ್ಣ ಉಚ್ಯತೇ, ಕಿಂ ವಾ ಪರಮೇಶ್ವರ ಇತಿ ||

(ಭಾಷ್ಯಾರ್ಥ) “ಆಕಾಶವು ಏತರಲ್ಲಿ ಓತವೂ ಪ್ರೋತವೂ (ಆಗಿದೆ) ?” (ಬ್ರ. ೩-೮-೭) “ಆ (ಯಾಜ್ಯವನು) ಇಂತೆಂದನು. ಗಾರ್ಗಿಯ, ಇದೇ ಆ ಅಕ್ಷರವು ; (ಇದನ್ನು )

1.ಭೂಮಶ್ರುತಿ, ಆತ್ಮತ್ಯಾದಿಲಿಂಗಗಳು, ಶೋಕನಾಶಕವಾದ ಆತ್ಮಜಿಜ್ಞಾಸಯಪ್ರಕರಣ - ಇವುಗಳಿರುವದರಿಂದ.

  1. ಹಾಸುಹೊಕ್ಕಾಗಿ ಹಣೆದುಕೊಂಡಿದ.

ಅಧಿ. ೩. ಸೂ. ೧೦] ಪೂರ್ವಪಕ್ಷ : ಓಂಕಾರವೇ ಈ ಅಕ್ಷರವು

2.88

ಬ್ರಾಹ್ಮಣರು ಅಸ್ಕೂಲವು ಅನಣು….. ಎಂದು ಹೇಳುತ್ತಾರೆ’ (ಬೃ. ೩-೭-೮) ಎಂದು ಮುಂತಾಗಿ ಶ್ರುತಿಯಲ್ಲಿದೆ. ಅಲ್ಲಿ ಸಂಶಯವೇನೆಂದರೆ ಅಕ್ಷರಶಬ್ದದಿಂದ ವರ್ಣವನ್ನು ಹೇಳಿದೆಯೆ, ಅಥವಾ ಪರಮೇಶ್ವರನನ್ನು ಹೇಳಿದೆಯೆ ?

ಪೂರ್ವಪಕ್ಷ : ಓಂಕಾರವೇ ಈ ಅಕ್ಷರವು

(ಭಾಷ್ಯ) ೨೪೩. ತತ್ರ “ಅಕ್ಷರಸಮಾಮ್ಯಾಯಃ’ (ಇತ್ಯಾದೌ) ಅಕ್ಷರಶಬ್ದಸ್ಯ ವರ್ಣೆ ಪ್ರಸಿದ್ಧತ್ವಾತ್ ಪ್ರಸಿದ್ಧತಿಕ್ರಮಸ್ಯ ಚ ಅಯುಕ್ತತ್ವಾತ್, “ಓಂಕಾರ ಏವೇದಂ ಸರ್ವಮ್’’ (ಛಾಂ.೨-೨೩-೩) ಇತ್ಯಾದೌ ಚಶ್ರುತ್ಯನ್ತರೇವರ್ಣಸ್ಯಾಪಿ ಉಪಾಸ್ಯನ ಸರ್ವಾತ್ಮಕತ್ವಾವಧಾರಣಾತ್, ವರ್ಣ ಏವ ಅಕ್ಷರ ಶಬ್ದಃ ಇತಿ ||

(ಭಾಷ್ಯಾರ್ಥ) ಇಲ್ಲಿ “ಅಕ್ಷರಸಮಾಮ್ಯಾಯಃ’ (? ಪಾ. ಶೀ) ಮುಂತಾದ (ಪ್ರಯೋಗದಲ್ಲಿ) ಅಕ್ಷರಶಬ್ದವು ವರ್ಣ (ವಾಚಕವೆಂದು) ಪ್ರಸಿದ್ಧವಾಗಿರುವದರಿಂದ ಪ್ರಸಿದ್ಧಿಯನ್ನು ಮಾರುವದು ಸರಿಯಲ್ಲವಾದ್ದರಿಂದಲೂ “ಇದಲ್ಲವೂ ಓಂಕಾರವೇ’ (ಛಾಂ. ೨-೨೩ ೩) ಎಂದು ಮುಂತಾಗಿರುವ ಬೇರೊಂದು ಶ್ರುತಿಯಲ್ಲಿ ವರ್ಣವನ್ನು ಉಪಾಸ್ಯವೆಂಬ ಕಾರಣದಿಂದ ಸರ್ವಾತ್ಮಕವೆಂದು ಒತ್ತಿಹೇಳಿರುವದರಿಂದಲೂ ವರ್ಣವೇ ಅಕ್ಷರಶಬ್ದ (ಕ್ಕೆ ವಾಚ್ಯ) (ಎಂದು ತೋರುತ್ತದೆ).

(ಭಾಷ್ಯ) ೨೪೪, ಏವಂ ಪ್ರಾಪ್ತ ಉಚ್ಯತೇ | ಪರ ಏವ ಆತ್ಮಾ ಅಕ್ಷರಶಬ್ದ ವಾಚ್ಯಃ | ಕಸ್ಮಾತ್ ? ‘ಅಮೃರಾಧ್ಯತೇ’, ಪೃಥಿವ್ಯಾದೇರಾಕಾಶಾನ್ಯಸ್ಯ ವಿಕಾರಜಾತಸ್ಯ ಧಾರಣಾತ್ | ತತ್ರ ಹಿ ಪೃಥಿವ್ಯಾದೇಃ ಸಮಸ್ತವಿಕಾರಜಾತಸ್ಯ ಕಾಲತ್ರಯವಿಭಕ್ತಸ್ಯ ‘ಆಕಾಶ ಏವ ತ ತಂ ಚ ಪ್ರೋತಂ ಚ” (ಬೃ. ೩-೮-೭) ಇತಿ ಆಕಾಶ ಪ್ರತಿಷ್ಠಿತತ್ವಮ್ ಉಕ್ಕಾ “ಕಸ್ಮಿನ್ನು ಖಲ್ವಾಕಾಶ ಓತಶ್ಚ ಪ್ರೋತಶ್ಚ” (ಬೃ. ೩-೮-೭)

  1. ಓಂಕಾರವನ್ನು ಉಪಾಸನೆಮಾಡಬೇಕೆಂದು ಹೇಳಿದೆಯ ?

  2. ಓಂಕಾರವನ್ನು ಅಕ್ಷರವನ್ನುವದು ರೂಢಾರ್ಥದಲ್ಲಿ ಇಟ್ಟುಕೊಂಡಂತೆ ಆಗುತ್ತದೆ ; ಪರಮಾತ್ಮನನ್ನುವದಕ್ಕೆ ಯೌಗಿಕಾರ್ಥವನ್ನು ನಕ್ಷರತಿ (ನಾಶವಾಗುವದಿಲ್ಲ) ಎಂಬ ವ್ಯುತ್ಪತ್ತಿಯನ್ನು ಅನುಸರಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಇವೆರಡರಲ್ಲಿ ರೂಢಿಯೇ ಪ್ರಬಲ,

  3. ಆದ್ದರಿಂದ ಓಂಕಾರವು ಆಕಾಶಾತ್ಮವೂ ಆಗಿದೆಯಂದು ಉಪಾಸನೆಮಾಡಬೇಕು - ಎಂಬುದು ಆಕಾಶವಾಕ್ಯದ ಅಭಿಪ್ರಾಯವೆಂದು ಭಾವ.

೩೮೬

ಬ್ರಹ್ಮಸೂತ್ರಭಾಷ್ಯ

[ಅ. ೧, ಪು. ೩.

ಇತ್ಯನೇನ ಪ್ರಶ್ನೆನ ಇದಮಕ್ಷರಮ್ ಅವತಾರಿತಮ್ | ತಥಾ ಚ ಉಪಸಂಹೃತಮ್ “ಏತಸ್ಮಿನ್ನು ಖಲ್ಯಕ್ಷರೇ ಗಾರ್ಗ್ಯಾಕಾಶ ಓತಶ್ಚ ಪ್ರೋತಶ್ಚ’ (ಬೃ. ೩-೮-೧೧) ಇತಿ | ನ ಚೇಯಮ್ ಅಮೃರಾನ್ಸಧೃತಿಃ ಬ್ರಹ್ಮಣೋನ್ಯತ್ರ ಸಂಭವತಿ | ಯದಪಿ “ಓಂಕಾರ ಏವೇದಂ ಸರ್ವಮ್’’ (ಛಾಂ.೨-೨೩-೩) ಇತಿ, ತದಪಿ ಬ್ರಹ್ಮಪ್ರತಿಪತ್ತಿಸಾಧನಾತ್ ಸ್ತುತ್ಯರ್ಥಂ ದ್ರಷ್ಟವ್ಯಮ್ | ತಸ್ಮಾತ್ ನ ಆರತಿ’, ‘ಅಶ್ರುತೇ’ ಚ ಇತಿ ನಿತ್ಯತ್ವವ್ಯಾಪಿತ್ಸಾ ಭ್ಯಾಮ್ ಅಕ್ಷರಂ ಪರಮೇವ ಬ್ರಹ್ಮ ||

(ಭಾಷ್ಯಾರ್ಥ) | ಹೀಗೆಂಬ (ಪೂರ್ವಪಕ್ಷವು) ಬರಲಾಗಿ (ಸಿದ್ಧಾಂತವನ್ನು) ಹೇಳುತ್ತೇವೆ. ಅಕ್ಷರಶಬ್ದವಾಚ್ಯನಾದವನು ಪರಮಾತ್ಮನೇ. ಏಕ ? ಎಂದರೆ (ಅಮೃರಾಧೃತೇ) ; ಪೃಥಿವಿಯು ಮೊದಲಾಗಿ ಆಕಾಶದವರೆಗಿನ ಕಾರ್ಯಸಮೂಹವನ್ನು (ಅದು) ಧರಿಸಿರುತ್ತದೆಯಾದ್ದರಿಂದ, ಅದು ಹೇಗೆಂದರೆ, ‘‘ಆಕಾಶದಲ್ಲಿಯೇ ಅದು ಓತವೂ ಪ್ರೋತವೂ ಆಗಿದೆ’’ (ಬೃ. ೩-೮-೭) ಎಂಬ (ವಾಕ್ಯದಿಂದ) ಪೃಥಿವಿಯೇ ಮುಂತಾದ ಕಾಲತ್ರಯಪ್ರವಿಭಕ್ತವಾದ ಎಲ್ಲಾ ಕಾರ್ಯಸಮೂಹವೂ ಆಕಾಶದಲ್ಲಿ ನಿಂತಿರುವ ದಂದು ಹೇಳಿದಮೇಲೆ ಅಲ್ಲಿ ಆಕಾಶವು ವಿತರಲ್ಲಿ ಓತವೂ ಪ್ರೋತವೂ ಆಗಿದೆ?’’ (ಬೃ. ೩-೮-೭) ಎಂಬ ಪ್ರಶ್ನೆಯಿಂದ ಈ ಅಕ್ಷರಕ್ಕೆ ಅವತರಣಿಕೆಯನ್ನು (ಹೇಳಿದೆ). ಅದರಂತೆಯೇ ‘ಗಾರ್ಗಿಯೆ, ಈ ಅಕ್ಷರದಲ್ಲಿಯೇ ಆಕಾಶವು ಓತವೂ ಪ್ರೋತವೂ (ಆಗಿರುತ್ತದ)’ (ಬೃ. ೩-೮-೧) ಎಂದು ಉಪಸಂಹಾರಮಾಡಿರುತ್ತದೆ. ಈ ಆಕಾಶಾಂತವಾದದ್ದನ್ನು ಧರಿಸಿರುವದೆಂಬುದು ಬ್ರಹ್ಮವನ್ನು (ಬಿಟ್ಟರೆ) ಮತ್ತೊಂದಕ್ಕೆ

ಹೊಂದುವಹಾಗಿಲ್ಲ. ಇನ್ನು ‘‘ಇದೆಲ್ಲವೂ ಓಂಕಾರವೇ’’ (ಛಾಂ. ೨-೨೩-೩) ಎಂದು

  1. “ಯಾವದು ದ್ಯುಲೋಕದ ಆಚೆ ಇದೆಯೋ ಯಾವದು ಪೃಥಿವಿಗಿಂತ ಈಚೆಗೆ ಮತ್ತು ದ್ಯಾವಾಪೃಥಿವಿಗಳ ನಡುವೆ ಇದೆಯೋ, ಯಾವದು ಭೂತಭವಿಷ್ಯದ್ವರ್ತಮಾನವನ್ನುವರೋ ಅದು ಏತರಲ್ಲಿ ಓತಪ್ರೋತವಾಗಿದೆ?’’ (. ೩-೮-೩) ಎಂಬ ಗಾರ್ಗಿಯ ಪ್ರಶ್ನೆಗೆ ವ್ಯಾಕೃತವಾಗಿರುವ ಈ ಸೂತ್ರಾತ್ಮನು `ಅವ್ಯಾಕೃತ’ ವೆಂಬ ಆಕಾಶದಲ್ಲಿ ಓತಪ್ರೋತವಾಗಿರುತ್ತಾನೆ ಎಂದು ಉತ್ತರವನ್ನು ಕೊಟ್ಟ ಬಳಿಕ ಪ್ರಕೃತಪ್ರಶೋತ್ತರಗಳು ಬಂದಿವೆ.

  2. ಅವ್ಯಾಕೃತಾಕಾಶವು ಏತರಲ್ಲಿ ಓತಪ್ರೋತವಾಗಿದೆ ಎಂಬ ಉಪಕ್ರಮದ ಪ್ರಶ್ನೆಗೆ ಅನುಗುಣವಾಗಿ ಉಪಸಂಹಾರದಲ್ಲಿಯೂ ಅಕ್ಷರದಲ್ಲಿ ಓತಪ್ರೋತವಾಗಿದೆ ಎಂದು ಉತ್ತರವನ್ನು ಹೇಳಿದೆ. ಆದ್ದರಿಂದ ಪೃಥಿವ್ಯಾದಿಯಾಗಿ ಆಕಾಶದವರೆಗಿನದಲ್ಲವೂ ಏತರಲ್ಲಿ ಓತಪ್ರೋತವಾಗಿ ದೆಯೋ ಅದನ್ನೇ ಇಲ್ಲಿ ಹೇಳಬೇಕು ; ಉಪಾಸ್ಯವಾದ ಓಂಕಾರವನ್ನು ಹೇಳುವದಕ್ಕೆ ಕಾರಣವಿಲ್ಲ.

  3. ಏಕೆಂದರೆ ಅವ್ಯಾಕೃತಾಕಾಶದವರೆಗಿನದಲ್ಲವನ್ನೂ ಧರಿಸಿರುವದು ಸರ್ವಕಾರಣವಾಗಿರುವ ಬ್ರಹ್ಮವಲ್ಲದೆ ಮತ್ತೆ ಯಾವದೂ ಆಗಿರುವದಿಲ್ಲ.

ಅಧಿ. ೩. ಸೂ. M] ಅಕ್ಷರವು ಪ್ರಧಾನವಲ್ಲ

೩೮೭

(ಶ್ರುತಿಯನ್ನು ಉದಾಹರಿಸಿತ್ತಲ್ಲ), ಅದೂ (ಓಂಕಾರವು) ಬ್ರಹ್ಮಜ್ಞಾನಕ್ಕೆ’ ಸಾಧನ ವಾಗಿರುವದರಿಂದ (ಅದನ್ನು) ಸ್ತುತಿಮಾಡುವದಕ್ಕೆ (ಬಂದಿದೆ ಎಂದು) ಅರಿಯ ಬೇಕು. ಆದ್ದರಿಂದ ‘ನಾಶವಾಗುವದಿಲ್ಲ’ (ನ ಆರತಿ), ಮತ್ತು (ಎಲ್ಲವನ್ನೂ) ವ್ಯಾಪಿಸಿಕೊಂಡಿದೆ (ಅಚ್ಚು ತೇ) ಎಂಬ (ವ್ಯುತ್ಪತ್ತಿಯಿಂದ) ನಿತ್ಯವೂ ವ್ಯಾಪಿಯೂ ಆಗಿರುವದರಿಂದ (ಈ) ಅಕ್ಷರವು ಪರಬ್ರಹ್ಮವೇ.

ಅಕ್ಷರವು ಪ್ರಧಾನವಲ್ಲ

(ಭಾಷ್ಯ) ೨೪೫. ಸ್ಮಾದೇತತ್ - ಕಾರ್ಯಸ್ಯ ಚೇತ್ ಕಾರಣಾಧೀನತ್ವಮ್ ಅಸ್ಟರಾನ್ನ ಧೃತಿರಭ್ಯುಪಗಮ್ಯತೇ, ಪ್ರಧಾನಕಾರಣವಾದಿನೋSಪಿ ಇಯಮ್ ಉಪಪದ್ಯತೇ | ಕಥಮ್ ಅಮೃರಾನ್ಸಧೃತೇಃ ಬ್ರಹ್ಮತ್ವಪ್ರತಿಪತ್ತಿ: ? ಅತ ಉತ್ತರಂ ಪಠತಿ –

(ಭಾಷ್ಯಾರ್ಥ) (ಪೂರ್ವಪಕ್ಷಿಯ ಅಭಿಪ್ರಾಯವು) ಇದಾಗಿರಬಹುದು : ಕಾರ್ಯವು ಕಾರಣದ ಅಧೀನವಾಗಿರುವದೇ ಅಂಬರಾಂತದೃತಿಯಾದರೆ, ಇದು ಪ್ರಧಾನಕಾರಣವಾದಿಗೂ ಹೊಂದುತ್ತದೆ. (ಹೀಗಿರುವಲ್ಲಿ) ಅಂಬರಾನ್ನದ್ಧತಿಯಿಂದ ಬ್ರಹ್ಮವೆಂಬ ತಿಳಿವಳಿಕೆ (ಯುಂಟಾಗುವದು) ಹೇಗೆ ?

ಇದಕ್ಕೆ (ಸೂತ್ರಕಾರರು) ಉತ್ತರವನ್ನು ಹೇಳುತ್ತಾರೆ :

ಸಾ ಚ ಪ್ರಶಾಸನಾತ್ ||೧೧|| ೧೧. ಆ (ಅಂಬರಾನಗೃತಿಯು ಪರಮೇಶ್ವರನ ಕರ್ಮವೇ) ; ಏಕೆಂದರೆ ಪ್ರಶಾಸನ(ವನ್ನು ಹೇಳಿದೆ.)

  1. ಬ್ರಹ್ಮದ ಉಪಾಸನೆಗ. 2. ಆದರೆ ಇಲ್ಲಿ ಓಂಕಾರದ ಉಪಾಸನೆಯೇನೂ ಪ್ರಕೃತವಾಗಿರುವದಿಲ್ಲ.

  2. ಅಂಬರಾಂತದೃತಿಯು ಓಂಕಾರಕ್ಕೆ ಹೊಂದುವದಿಲ್ಲವಾದ್ದರಿಂದಲೂ ಬ್ರಹ್ಮಕ್ಕೆ ಹೊಂದು ವದರಿಂದಲೂ ರೂಢರ್ಥವನ್ನು ಬಿಟ್ಟು ಈ ಯೌಗಿಕಾರ್ಥವನ್ನು ಸ್ವೀಕರಿಸಬೇಕು ಎಂದು ಭಾವ.

  3. ಏಕೆಂದರೆ ಪ್ರಧಾನವೂ ತನ್ನ ಕಾರ್ಯಗಳನ್ನೆಲ್ಲ ಧರಿಸಿರುತ್ತದೆ. ಆಕಾಶವೆಂಬ ಮಾತಿಗೆ ಭೂತಾಕಾಶವೆಂಬರ್ಥವನ್ನು ಮಾಡಿ ಅದರಲ್ಲಿ ಕಾಲತ್ರಯವಿಭಕ್ತವಾದ ಕಾರ್ಯವೆಲ್ಲವೂ ಇರುತ್ತದೆ ಎಂದು ಪೂರ್ವಪಕ್ಷಿಯು ಶ್ರುತಿಗೆ ಅರ್ಥಮಾಡಿರುತ್ತಾನೆ. ಅಕ್ಷರವೆಂಬ ಮಾತು ಪ್ರಧಾನಕ್ಕೂ

ಯೌಗಿಕವಾಗಿ ಅನ್ವಯಿಸುತ್ತದೆ.

aeses

ಬ್ರಹ್ಮಸೂತ್ರಭಾಷ್ಯ

[ಅ. ೧. ಬಾ. ೩.

(ಭಾಷ್ಯ) ೨೪೬. ಸಾ ಚ ಅಮೃರಾಧೃತಿಃ ಪರಮೇಶ್ವರಸ್ಯೆವ ಕರ್ಮ 1ಕಸ್ಮಾತ್ ? ಪ್ರಶಾ ಸನಾತ್ ಪ್ರಶಾಸನಂ ಹಿ ಇಹ ಶೂಯತೇ °. “ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ ಗಾರ್ಗಿ ಸೂರ್ಯಾಚನ್ನಮಸೌ ವಿಧೃತೌ ತಿಷ್ಠತಃ” (ಬೃ. ೩-೮-೯) ಇತ್ಯಾದಿ | ಪ್ರಶಾಸನಂ ಚ ಪಾರಮೇಶ್ವರಂ ಕರ್ಮ (ನಾಚೇತನಸ್ಯ ಪ್ರಧಾನಸ್ಯ ಪ್ರಶಾಸನಂ ಭವತಿ | ನ ಹಿ ಅಚೇತ ನಾನಾಂ ಘಟಾದಿಕಾರಣಾನಾಂ ಮೃದಾದೀನಾಂ ಘಟಾದಿವಿಷಯಂ ಪ್ರಶಾಸನಮಸ್ತಿ ||

(ಭಾಷ್ಯಾರ್ಥ) ಆ ಅಂಬರಾಂತದೃತಿಯು ಪರಮೇಶ್ವರನ ಕರ್ಮವೇ. ಏಕ ? ಎಂದರೆ ಪ್ರಶಾಸನವನ್ನು (ಹೇಳಿರುವದರಿಂದ). “ಗಾರ್ಗಿಯ, ಈ ಅಕ್ಷರದ ಪ್ರಶಾಸನದಲ್ಲಿ ಸೂರ್ಯಚಂದ್ರರು ಹಿಡಿದು ನಿಲ್ಲಿಸಲ್ಪಟ್ಟಿರುತ್ತಾರೆ.” (ಬೃ. ೩-೮-೯) ಎಂದು ಮುಂತಾಗಿ’ ಪ್ರಶಾಸನವನ್ನು (ಇಲ್ಲಿ) ಹೇಳಿದೆಯಲ್ಲವ ? (ಈ) ಅಪ್ಪಣೆಮಾಡುವ ದೆಂಬುದು ಪರಮೇಶ್ವರನ ಕರ್ಮವು, ಅಚೇತನವಾದ ಪ್ರಧಾನಕ್ಕೆ ಅಪ್ಪಣೆಮಾಡುವದು ಇರುವಹಾಗಿಲ್ಲ ; ಅಚೇತನವಾಗಿರುವ ಗಡಿಗೆಯೇ ಮುಂತಾದವುಗಳಿಗೆ ಕಾರಣವಾಗಿರುವ ಮಣ್ಣು ಮುಂತಾದವುಗಳು ಗಡಿಗೆಯೇ ಮುಂತಾದದ್ದರ ವಿಷಯಕ್ಕೆ ಅಪ್ಪಣೆ ಮಾಡುವದೆಂಬುದು ಇಲ್ಲವಷ್ಟೆ.

ಅನ್ಯಭಾವವ್ಯಾವೃಶ್ಚ ||೧೨|| ೧೨. ಅನ್ಯಭಾವವ್ಯಾವೃತ್ತಿಯಿಂದಲೂ (ಹೀಗೆ).

ಅಕ್ಷರವು ಮತ್ತೆ ಯಾವದೂ ಆಗಲಾರದು

(ಭಾಷ್ಯ) ೨೪೭. ಅನ್ಯಭಾವವ್ಯಾವೃಶ್ಚ ಕಾರಣಾತ್ ಬ್ರಹ್ಮವ ಅಕ್ಷರಶಬ್ದ ವಾಚ್ಯಮ್ | ತವ ಅಷ್ಟರಾನ್ನಧೃತಿಃ ಕರ್ಮ ನಾನ್ಯಸ್ಯ ಕಸ್ಯಚಿತ್ | ಕಿಮಿದಮ್ ಅನ್ಯಭಾವ ವ್ಯಾವೃತ್ಕರಿತಿ ? ಅನ್ಯಸ್ಯ ಭಾವಃ ಅನ್ಯಭಾವಃ | ತಸ್ಮಾದ್ ವ್ಯಾವೃತ್ತಿ; ಅನ್ಯಭಾವ

  1. ಮುಂತಾಗಿ ಎಂಬ ಮಾತಿನಿಂದ ಗ್ರಹಿಸತಕ್ಕದ್ದು ಏನೆಂದರೆ : ದ್ಯಾವಾಪೃಥಿವಿಗಳು ಇದರ ಅಪ್ಪಣೆಯಿಂದಲೇ ನಿಂತಿವ : ನಿಮಿಷಮುಹೂರ್ತವೇ ಮುಂತಾದ ಕಾಲಗಳು ಇದರ ಅಪ್ಪಣೆ ಯಿಂದಲೇ ನಿಂತಿವ ; ಇದರ ಅಪ್ಪಣೆಯಿಂದಲೇ ನದಿಗಳು ಗೊತ್ತಾಗಿ ಕಲವು ಪೂರ್ವಕ್ಕೂ ಕಲವು ಪಶ್ಚಿಮಕ್ಕೂ ಹರಿಯುತ್ತಿವ ; ದಾನಮಾಡುವವರನ್ನು ಜನರು ಹೊಗಳುವದು ಇದರ ಅಪ್ಪಣೆ ಯಿಂದ ; ದೇವತೆಗಳು ಯಜಮಾನನನ್ನೂ ಪಿತೃಗಳು ದರ್ವಿಹೋಮವನ್ನೂ ಅನುಸರಿಸಿ ಕೊಂಡಿರುವದು ಇದರ ಅಪ್ಪಣೆಯಿಂದ.

dese

ಅಧಿ. ೩. ಸೂ. ೧೨] ಅಕ್ಷರವು ಮತ್ತೆ ಯಾವದೂ ಆಗಲಾರದು ವ್ಯಾವೃತ್ತಿ: ಇತಿ | ಏತದುಕ್ತಂ ಭವತಿ | ಯದನ್ಯದ್ ಬ್ರಹ್ಮಣೋಕ್ಷರಶಬ್ದ ವಾಚ್ಯಮ್ ಇಹ ಆಶತೇ ತದ್ಭಾವಾತ್ ಇದಮ್ ಅಮೃರಾವಿಧಾರಣಮ್ ಅಕ್ಷರಂ ವ್ಯಾವರ್ತಯತಿ ಶ್ರುತಿಃ “ತಾ ಏತದಕ್ಷರಂ ಗಾರ್ಗ್ಯದೃಷ್ಟಂ ದ್ರಷ್ಟಶ್ರುತಂ ಸ್ತೋತ್ರಮತಂ ಮನ್ಯವಿಜ್ಞಾತಂ ವಿಜ್ಞಾತೃ’ (ಬೃ. ೩-೮-೧) ಇತಿ | ತತ್ರ

ಅದೃಷ್ಟತಾದಿವ್ಯಪದೇಶಃ ಪ್ರಧಾನಸ್ಯಾಪಿ ಸಂಭವತಿ | ದ್ರಷ್ಟತ್ಯಾದಿವ್ಯಪದೇಶಸ್ತು ನ ಸಂಭವತಿ | ಅಚೇತನಾತ್ | ತಥಾ ‘‘ನಾನ್ಯದತೋsಸ್ತಿ ದ್ರಷ್ಟ ನಾನ್ಯದತೋsಸ್ತಿ ಶೋತೃ ನಾನ್ಯದತೋSಸ್ತಿ ಮನ್ನ ನಾನ್ಯದತೋsಸ್ತಿ ವಿಜ್ಞಾತೃ’ (ಬೃ. ೩-೮-೧೧) ಇತ್ಯಾತ್ಮಭೇದಪ್ರತಿಷೇಧಾತ್ | ನ ಶಾರೀರಸ್ಕಾಪಿ ಉಪಾಧಿಮತಃ ಅಕ್ಷರಶಬ್ದ ವಾಚ್ಯತ್ವಮ್ |“ಅಚಕ್ಷುಷ್ಕಮತ್ತೊತ್ರಮವಾಗಮನಃ’ (ಬೃ. ೩-೮-೮) ಇತಿ ಚ ಉಪಾಧಿಮತ್ತಾಪ್ರತಿಷೇಧಾತ್ | ನ ಹಿ ನಿರುಪಾಧಿಕಃ ಶಾರೀರೋನಾಮ ಭವತಿ | ತಸ್ಮಾತ್ ಪರಮೇವ ಬ್ರಹ್ಮ ಅಕ್ಷರಮ್ ಇತಿ ನಿಶ್ಚಯಃ ||

(ಭಾಷ್ಯಾರ್ಥ) ಅನ್ಯಭಾವವ್ಯಾವೃತ್ತಿ ಎಂಬ ಕಾರಣದಿಂದಲೂ ಬ್ರಹ್ಮವೇ (ಇಲ್ಲಿ) ಅಕ್ಷರ ಶಬ್ದ ವಾಚ್ಯವಾದದ್ದು ; ಅಂಬರಾಂತದೃತಿಯು ಅದರದ್ದೇ ಕರ್ಮವು ಮತ್ತೆ ಯಾರದ್ದೂ ಅಲ್ಲ. ‘ಅನ್ಯಭಾವವ್ಯಾವೃತ್ತಿಯಿಂದ ಎಂದು (ಸೂತ್ರದಲ್ಲಿ ಹೇಳಿದೆಯಲ್ಲ), ಇದು ಯಾವದು ? ಮತ್ತೊಂದರ ಭಾವವು ಅನ್ಯಭಾವವು ; ಅದರಿಂದ ಬೇರ್ಪಡಿಸುವದು ಅನ್ಯಭಾವವ್ಯಾವೃತ್ತಿಯು. (ಇಲ್ಲಿ ) ಇಷ್ಟನ್ನು ಹೇಳಿದಂತಾಯಿತು : ಅಕ್ಷರಶಬ್ದ ವಾಚ್ಯ ವೆಂದು ಬ್ರಹ್ಮಕ್ಕಿಂತ ಬೇರೆಯಾಗಿ (ಯಾವ) ಯಾವದನ್ನು ಇಲ್ಲಿ ಆಶಂಕಿಸಲಾಗುತ್ತ ದೆಯೋ ಅದರ ಸ್ವರೂಪದಿಂದ ಈ ಅಂಬರಾಂತವಾಗಿ ವಿಧಾರಣೆಮಾಡಿಕೊಂಡಿರುವ ಅಕ್ಷರವನ್ನು “ಗಾರ್ಗಿಯ, ಅದೇ ಈ ಅಕ್ಷರವು, ಅದೃಷ್ಟವು, ದ್ರಷ್ಟ ; ಅಶ್ರುತವು, ಶೋತೃ ; ಅಮತವು, ಮಂತ್ರ ; ಅವಿಜ್ಞಾತವು, ವಿಜ್ಞಾತೃ’ (ಬೃ. ೩-೮-೧೧) ಎಂಬ ಶ್ರುತಿಯು ಬೇರ್ಪಡಿಸುತ್ತದೆ. ಇಲ್ಲಿ ಅದೃಷ್ಟ ಎಂದು ಮುಂತಾಗಿ ಹೇಳಿರುವದು ಪ್ರಧಾನಕ್ಕೂ ಆಗುತ್ತದೆ ; ಆದರೆ ದ್ರಷ್ಟ ಎಂದು ಮುಂತಾಗಿ ಹೇಳಿರುವದು (ಪ್ರಧಾನವು) ಅಚೇತನವಾಗಿರುವದರಿಂದ (ಅದಕ್ಕೆ) ಆಗುವಂತಿಲ್ಲ. ಹೀಗೆಯೇ ಇದಕ್ಕಿಂತ ಬೇರೆ ಇಷ್ಟವಿಲ್ಲ, ಇದಕ್ಕಿಂತ ಬೇರೆ ಪ್ರೋತೃವಿಲ್ಲ, ಇದಕ್ಕಿಂತ ಬೇರ ಮಂತೃವಿಲ್ಲ, ಇದಕ್ಕಿಂತ ಬೇರೆ ವಿಜ್ಞಾತೃವಿಲ್ಲ’ (ಬೃ. ೩-೮-೧) ಎಂದು ಆತ್ಮಭೇದವನ್ನು ಅಲ್ಲಗಳೆದಿರುವದರಿಂದ ಉಪಾಧಿಯುಳ್ಳ ಶಾರೀರನೂ ಅಕ್ಷರಶಬ್ದ ವಾಚ್ಯನಲ್ಲ.’

  1. ಶಾರೀರನು ಅಕ್ಷರವೆಂದಾದರೆ ಅಕ್ಷರಕ್ಕಿಂತಲೂ ಬೇರೆ ದ್ರಷ್ಟಗಳು ಇರಬೇಕಾಗು ವದು ; ಏಕೆಂದರೆ ಶಾರೀರರು ಹಲವರು ಇರುತ್ತಾರೆ.

೩೯೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

“ಅಕ್ಷರವು ಚಕ್ಷುಸ್ಸಿಲ್ಲದ್ದು, ಪ್ರೋತೃವಿಲ್ಲದ್ದು, ವಾಕ್ಕಿದ್ದು, ಮನಸ್ಸಿಲ್ಲದ್ದು (ಬೃ. ೩-೮-೮) ಎಂದು (ಅಕ್ಷರಕ್ಕೆ) ಉಪಾಧಿಯನ್ನು ಅಲ್ಲ ಗಳೆದಿರುವದರಿಂದಲೂ (ಶಾರೀರನು ಅಕ್ಷರವಲ್ಲ) ; ಏಕೆಂದರೆ ಯಾವ ಉಪಾಧಿಯೂ ಇಲ್ಲದವನು ಶಾರೀರನೆನಿಸಲಾರನು. ಆದ್ದರಿಂದ ‘ಅಕ್ಷರವು’ ಪರಬ್ರಹ್ಮವೇ ಎಂದು ನಿಶ್ಚಯವಾಯಿತು.

೪. ಈಕ್ಷತಿಕರ್ಮವ್ಯಪದೇಶಾಧಿಕರಣ

(ಪ್ರಶ್ನೆ ೫-೫ ರಲ್ಲಿ ಓಂಕಾರದ ಮೂಲಕವಾಗಿ ಧೈಯವಾದದ್ದು ಬ್ರಹ್ಮ)

ಈಕ್ಷತಿಕರ್ಮವ್ಯಪದೇಶಾತ್ ಸಃ ||೧೩|| ೧೩. ಈಕ್ಷಣಕ್ಕೆ ಕರ್ಮವೆಂದು ಹೇಳಿರುವದರಿಂದ ಆ (ಪರಮಾತ್ಮನೇ ಓಂಕಾರದ ಮೂಲಧೇಯನು).

ವಿಷಯವೂ ಸಂಶಯವೂ

(ಭಾಷ್ಯ) ೨೪೮. “ಏತ ಸತ್ಯಕಾಮ ಪರಂ ಚಾಪರಂ ಚ ಬ್ರಹ್ಮ ಯದೋಂಕಾರಸ್ತಸ್ಮಾದ್ ವಿದ್ವಾನೇತೇನೈವಾಯತನೇನೈಕತರಮನೈತಿ’ (ಪ್ರ. ೫-೨) ಇತಿ ಪ್ರಕೃತ್ಯ ಶೌಯತೇ “ಯಃ ಪುನರೇತಂ ತ್ರಿಮಾತ್ರಣೋಮಿತ್ಯೇತೇನೈವಾಕ್ಸರೇಣ ಪರಂ ಪುರುಷಮಭಿ ಧ್ಯಾಯೇತ” (ಪ್ರ. ೫-೫) ಇತಿ | ಕಿಮ್ ಅಸ್ಮಿನ್ ವಾಕ್ಕೇ ಪರಂ ಬ್ರಹ್ಮ ಅಭಿಧ್ಯಾತವ್ಯಮ್ ಉಪದಿಶ್ಯತೇ ಆಹೋಸ್ಟಿತ್ ಅವರಮ್ ಇತಿ ? “ಏತೇನೈವಾ ಯತನೇನ ಪರಮಪರಂ ಚೈಕತರಮನೈತಿ’ ಇತಿ ಪ್ರಕೃತತ್ವಾತ್ ಸಂಶಯಃ ||

(ಭಾಷ್ಯಾರ್ಥ) “ಸತ್ಯಕಾಮನೆ, ಈ ಪರ(ಬ್ರಹ್ಮವೂ) ಅಪರಬ್ರಹ್ಮವೂ ಇದೆಯಲ್ಲ, ಇದು ಓಂಕಾರವೇ ; ಆದ್ದರಿಂದ (ಹೀಗೆಂದು) ಅರಿತವನು ಇದೇ ಆಯತನದಿಂದಲೇ (ಇವೆರಡರಲ್ಲಿ) ಒಂದನ್ನು ಸೇರುತ್ತಾನೆ’ (ಪ್ರ. ೫-೨) ಎಂದು ಪ್ರಾರಂಭಿಸಿ ‘‘ಆದರೆ ಯಾವನು ಮೂರು ಮಾತ್ರೆಗಳ ಓಮ್ ಎಂಬ ಇದೇ ಅಕ್ಷರದಿಂದ ಈ ಪರಮ ಪುರುಷನನ್ನು ಅಭಿಧ್ಯಾನಮಾಡುವನೋ…’’ (ಪ್ರ. ೫-೫) ಎಂದು ಶ್ರುತಿಯಲ್ಲಿದೆ. ಈ

  1. ಶೈಖ್ಯಸತ್ಯಕಾಮನಿಗೆ ಪಿಪ್ಪಲಾದನು ಹೇಳಿದ ಮಾತಿದು.

ಅಧಿ. ೪. ಸೂ. ೧೩] ಪೂರ್ವಪಕ್ಷ : ಅಪರಬ್ರಹ್ಮವೇ ಓಂಕಾರಧೇಯವು | ೩೯೧ ವಾಕ್ಯದಲ್ಲಿ ಪರಬ್ರಹ್ಮವನ್ನು ಅಭಿಧ್ಯಾನಮಾಡಬೇಕೆಂದು ಹೇಳಿದೆಯ, ಅಥವಾ ಅಪರ (ಬ್ರಹ್ಮವನ್ನು ಅಭಿಧ್ಯಾನಮಾಡಬೇಕೆಂದು ಹೇಳಿದೆಯ) ? ‘ಇದೇ ಆಯತನದಿಂದಲೇ ಪರ, ಅಪರ - ಎಂಬೆರಡರಲ್ಲಿ ಒಂದನ್ನು ಸೇರುತ್ತಾನೆ’ ಎಂದು ಪ್ರಕೃತವಾಗಿರುವದ ರಿಂದ’ (ಈ) ಸಂಶಯವುಂಟಾಗುತ್ತದೆ).

ಪೂರ್ವಪಕ್ಷ : ಅಪರಬ್ರಹ್ಮವೇ ಓಂಕಾರಧೇಯವು

(ಭಾಷ್ಯ) ೨೪೯. ತತ್ರ ಅಪರಮಿದಂ ಬ್ರಹ್ಮ ಇತಿ ಪ್ರಾಪ್ತಮ್ | ಕಸ್ಮಾತ್ ? ‘‘ಸ ತೇಜಸಿ ಸೂರ್ಯೆ ಸಂಪನ್ನಃ’ (ಪ್ರ. ೫-೫), “ಸ ಸಾಮಭಿರುದ್ದೀಯತೇ ಬ್ರಹ್ಮಲೋಕಮ್’ (ಪ್ರ. ೫-೫) ಇತಿ ಚ ತದ್ವಿದಃ ದೇಶಪರಿಚ್ಚಿನ್ನಸ್ಯ ಫಲಸ್ಯ ಉಚ್ಯಮಾನತ್ವಾತ್ | ನ ಹಿ ಪರಬ್ರಹ್ಮವಿತ್ ದೇಶಪರಿಚ್ಛಿನ್ನಂ ಫಲಮ್ ಅಶ್ರುವೀತ ಇತಿ ಯುಕ್ತಮ್ | ಸರ್ವಗತತ್ವಾತ್ ಪರಸ್ಯ ಬ್ರಹ್ಮಣಃ | ನನು ಅಪರಬ್ರಹ್ಮಪರಿಗ್ರಹೇ ಪರಂ ಪುರುಷಂ ಇತಿ ವಿಶೇಷಣಂ ನ ಉಪಪದ್ಯತೇ | ನೈಷ ದೋಷಃ | ಪಿಣ್ಣಾಪೇಕ್ಷಯಾ ಪ್ರಾಣಸ್ಯ ಪರತ್ತೋಪಪತ್ತೇ ಇತಿ ||

(ಭಾಷ್ಯಾರ್ಥ) ಇಲ್ಲಿ ಈ ಬ್ರಹ್ಮವು ಅಪರವು ಎಂದು (ಪೂರ್ವಪಕ್ಷವು) ಬಂದೊದಗುತ್ತದೆ. ಏಕೆ ? ಎಂದರೆ “ಆತನು ತೇಜಸ್ಸಾದ ಸೂರ್ಯನಲ್ಲಿ ಸೇರಿಕೊಳ್ಳುತ್ತಾನೆ’’ (ಪ್ರ. ೫-೫) “ಆತನು ಸಾಮಗಳಿಂದ ಬ್ರಹ್ಮಲೋಕಕ್ಕೆ ಒಯ್ಯಲ್ಪಡುತ್ತಾನೆ’ (ಪ್ರ. ೫-೫) ಎಂದೂ ಆ (ಬ್ರಹ್ಮ)ವನ್ನು ಉಪಾಸನೆಮಾಡಿದವನಿಗೆ ದೇಶಪರಿಚ್ಛಿನ್ನವಾದ ಫಲವನ್ನು ಇಲ್ಲಿ ಹೇಳಿರುತ್ತದೆ. ಪರಬ್ರಹ್ಮವನ್ನು ಅರಿತುಕೊಂಡವನು ದೇಶಪರಿಚ್ಛಿನ್ನವಾದ ಫಲವನ್ನು ಪಡೆಯುವನೆಂಬುದು ಸರಿಯಲ್ಲವೇ ಅಲ್ಲ ; ಏಕೆಂದರೆ ಪರಬ್ರಹ್ಮವು ಸರ್ವಗತ ವಾಗಿರುತ್ತದೆ.”

(ಆಕ್ಷೇಪ) :- ಅಪರಬ್ರಹ್ಮವನ್ನು (ಇಲ್ಲಿ) ತೆಗೆದುಕೊಂಡರೆ (ಈ) ‘ಪರಮ ಪುರುಷನನ್ನು’ ಎಂಬ ವಿಶೇಷಣವು ಹೊಂದುವದಿಲ್ಲವಲ್ಲ !

  1. ಇದುವರೆಗೆ ಉಪಾಸ್ಯವಾದದ್ದು ಬ್ರಹ್ಮವೂ, ಜೀವಾದಿಗಳೂ ? ಎಂಬ ಸಂಶಯವೇ ಬರುತ್ತಿತ್ತು ; ಇಲ್ಲಿ ಪರಾಪರಬ್ರಹ್ಮಗಳೆರಡೂ ಪ್ರಕೃತವಾಗಿರುವದರಿಂದ ಹೀಗೆ ಸಂಶಯ ವುಂಟಾಗಿದೆ.

  2. ಇದು ಜೈಯಬ್ರಹ್ಮವಾಕ್ಯವಲ್ಲವೆಂಬುದನ್ನು ಪೂರ್ವಪಕ್ಷಿಯು ಲೆಕ್ಕಕ್ಕೆ ತಗದು ಕೊಂಡಿಲ್ಲ.೩೯೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಪರಿಹಾರ) :- ಇದೇನೂ ದೋಷವಲ್ಲ. ಏಕೆಂದರೆ ಪಿಂಡದ ಅಪೇಕ್ಷೆಯಿಂದ ಪ್ರಾಣನು’ ಪರನೆಂದಾಗಬಹುದು.

ಸಿದ್ಧಾಂತ : ಪರಬ್ರಹ್ಮವನ್ನೇ ಧ್ಯಾನಮಾಡಬೇಕೆಂದು ಹೇಳಿದೆ

(ಭಾಷ್ಯ) ೨೫೦, ಏವಂ ಪ್ರಾಪ್ತ ಅಭಿಧೀಯತೇ | ಪರಮೇವ ಬ್ರಹ್ಮ ಇಹ ಅಭಿ ಧ್ಯಾತವ್ಯಮ್ ಉಪದಿಶ್ಯತೇ | ಕಸ್ಮಾತ್ ? ಈಕ್ಷತಿಕರ್ಮವ್ಯಪದೇಶಾತ್ | ಈಕ್ಷತಿಃ, ದರ್ಶನಮ್ | ದರ್ಶನವ್ಯಾಷ್ಯಮ್ ಈಕ್ಷತಿಕರ್ಮ ಈಕ್ಷತಿಕರ್ಮನ ಅಸ್ಯ ಅಭಿ ಧ್ಯಾತವ್ಯಸ್ಯ ಪುರುಷಸ್ಯ ವಾಕ್ಯಶೇಷ ವ್ಯಪದೇಶೋ ಭವತಿ |ಸಏತಸ್ಮಾಜೀವಘನಾತ್ ಪರಾತ್ಪರಂ ಪುರಿಶಯಂ ಪುರುಷಮೀಕ್ಷತೇ” (ಪ್ರ. ೫-೫) ಇತಿ | ತತ್ರ ಅಭಿಧ್ಯಾಯತೇಃ ಅತಥಾಭೂತಮಪಿ ವಸ್ತು ಕರ್ಮ ಭವತಿ | ಮನೋರಥಕಲ್ಪಿತಸ್ಯಾಪಿ ಅಭಿಧ್ಯಾಯತಿ ಕರ್ಮತ್ವಾತ್ | ಈಕ್ಷತೇಸ್ತು ತಥಾಭೂತಮೇವ ವಸ್ತು ಲೋಕೇ ಕರ್ಮ ದೃಷ್ಟಮ್‌

ಇತ್ಯತಃ ಪರಮಾತ್ಮನ ಅಯಂ ಸಮ್ಯಗ್ದರ್ಶನವಿಷಯಭೂತಃ ಈಕ್ಷತಿಕರ್ಮನ ವ್ಯಪದಿಷ್ಟ ಇತಿ ಗಮ್ಯತೇ | ಸ ಏವ ಚೇಹ ಪರಪುರುಷಶಬ್ದಾಭ್ಯಾಮ್ ಅಭಿಧ್ಯಾತವ್ಯ: ಪ್ರತ್ಯಭಿಜ್ಞಾಯತೇ | ನನು ಅಭಿಧ್ಯಾನೇ ಪರಃ ಪುರುಷ ಉಕ್ತಃ, ಈಕ್ಷಣೇ ತು ಪರಾತ್ ಪರಃ | ಕಥಮ್ ಇತರಃ ಇತರತ್ರ ಪ್ರತ್ಯಭಿಜ್ಞಾಯತ ಇತಿ ? ಅಪ್ರೋಚ್ಯತೇ | ಪರಪುರುಷಶಬ್ದ ತಾವತ್‌ ಉಭಯತ್ರ: ಸಾಧಾರಣೆ | ನ ಚ ಅತ್ರ ಜೀವಘನ ಶಬ್ಲಿನ ಪ್ರಕೃತಃ ಅಭಿಧ್ಯಾತವಃ ಪರಃ ಪುರುಷಃ ಪರಾಮೃಶ್ಯತೇ | ಯೇನ ತಸ್ಮಾತ್ ಪರಾತ್ ಪರೋಯಮ್ ಈಕ್ಷಿತವಃ ಪುರುಷಃ ಅನ್ಯಃ ಸ್ಯಾತ್ | ಕಸ್ತರ್ಹಿ ಜೀವಘನ ಇತಿ | ಉಚ್ಯತೇ | ಘನೋ ಮೂರ್ತಿ: 1 ಜೀವಲಕ್ಷಣಃ ಘನಃ ಜೀವಘನಃ | ಸೈಷ್ಣವಖಿಲ್ಯವತ್ ಯಃ ಪರಮಾತ್ಮನೋ ಜೀವರೂಪಃ ಖಿಲ್ಯಭಾವಃ ಉಪಾಧಿಕೃತಃ ಪರಶ್ಯ ವಿಷಯೇಯೇಭ್ಯಃ, ಸೋತ್ರ ಜೀವಘನಃ ಇತಿ | ಅಪರ ಆಹ - ‘‘ಸ ಸಾಮಭಿರುದ್ದೀಯತೇ ಬ್ರಹ್ಮಲೋಕಮ್’’ (ಪ್ರ. ೫-೫) ಇತ್ಯತೀತಾನನ್ತರವಾಕ್ಯ ನಿರ್ದಿಷ್ಟ ಯೋ ಬ್ರಹ್ಮಲೋಕಃ, ಪರಶ್ಚ ಲೋಕಾನ್ತರೇಭ್ಯಃ, ಸೋsತ್ರ ‘ಜೀವಘನಃ’

  1. ಪಿಂಡವೆಂದರೆ ಶರೀರವು ; ಸಮಷ್ಟಿ ಸ್ಕೂಲಶರೀರೋಪಾದಿಯುಳ್ಳ ವಿರಾಟ್ಟುರುಷನನ್ನು ಇಲ್ಲಿ ಪಿಂಡವೆಂದಿದ.

  2. ಸಮಷ್ಟಿಪ್ರಾಣೋಪಾಧಿಕನಾದ ಸೂತ್ರಾತ್ಮನು, ಅಥವಾ ಹಿರಣ್ಯಗರ್ಭನು ; ಇವನ ಲೋಕವೇ ಬ್ರಹ್ಮಲೋಕವು. ಇವನನ್ನೇ ಅಪರಬ್ರಹ್ಮವೆಂದಿರುವದು.

  3. ಪರಬ್ರಹ್ಮ, ಅಪರಬ್ರಹ್ಮ - ಇವುಗಳ ವಿಷಯಕ್ಕೆ ಪೀಠಿಕೆಯನ್ನು ನೋಡಿ.

ಅಧಿ. ೪. ಸೂ. ೧೩] ಸಿದ್ಧಾಂತ : ಪರಬ್ರಹ್ಮವನ್ನೇ ಧ್ಯಾನಮಾಡಬೇಕೆಂದು ಹೇಳಿದ ೩೯೩ ಇತ್ಯುಚ್ಯತೇ | ಜೀವಾನಾಂ ಹಿ ಸರ್ವೆಷಾಂ ಕರಣಪರಿವೃತಾನಾಂ ಸರ್ವಕರಣಾತ್ಮನಿ ಹಿರಣ್ಯಗರ್ಭೆ ಬ್ರಹ್ಮಲೋಕನಿವಾಸಿನಿ ಸಂಘಾತೋಪಪತ್ತೇ ಭವತಿ ಬ್ರಹ್ಮಲೋಕೋ ‘ಜೀವಘನಃ’ ತಸ್ಮಾತ್ ಪರೋ ಯಃ ಪರಮಾತ್ಮಾ ಈಕ್ಷಣಕರ್ಮಭೂತಃ ಸ ಏವ

ಅಭಿಧ್ಯಾನೇಪಿ ಕರ್ಮಭೂತಃ ಇತಿ ಗಮ್ಯತೇ ||

(ಭಾಷ್ಯಾರ್ಥ) ಹೀಗೆಂದು (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳು ತೇವೆ : ಪರಬ್ರಹ್ಮವನ್ನೇ ಇಲ್ಲಿ ಅಭಿಧ್ಯಾನಮಾಡಬೇಕೆಂದು ಹೇಳಿದೆ’ (ಎಂದು ತಿಳಿಯಬೇಕು). ಏಕೆ ? ಎಂದರೆ (ಈಕ್ಷತಿಕರ್ಮವ್ಯಪದೇಶಾತ್) ಈಕ್ಷಣಕ್ಕೆ ಕರ್ಮ ವೆಂದು ಹೇಳಿರುವದರಿಂದ. (ಸೂತ್ರದಲ್ಲಿ) ಈಕ್ಷತಿ ಎಂದರೆ ದರ್ಶನವು. ಈಕ್ಷತಿಕರ್ಮ ಎಂದರೆ ದರ್ಶನದಿಂದ ವ್ಯಾಪ್ಯವಾದದ್ದು. ಇಕ್ಷತಿಕರ್ಮವೆಂದು ಈ ಅಭಿಧ್ಯಾನ ಮಾಡಬೇಕಾದ ಪುರುಷನನ್ನು ಆತನು ಈ ಜೀವಘನನೆಂಬ ಪರನಿಗಿಂತ ಪರನಾದ ಪುರಿಶಯನಾದ ಪುರುಷನನ್ನು ಕಾಣುತ್ತಾನೆ” (ಪ್ರ. ೫-೫) ಎಂದು ವಾಕ್ಯಶೇಷದಲ್ಲಿ ಹೇಳಿದೆ. ಇಲ್ಲಿ ಅಭಿಧ್ಯಾನಕ್ಕೆ ನಿಜವಾಗಿಲ್ಲದ ವಸ್ತುವೂ ಕರ್ಮವಾಗಬಹುದು. ಏಕೆಂದರೆ ಮನೋರಥದಿಂದ ಕಲ್ಪಿಸಿಕೊಂಡದ್ದೂ ಅಭಿಧ್ಯಾನಕ್ಕೆ ವಿಷಯವಾಗಬಹುದಾಗಿದೆ. ಆದರೆ ಈಕ್ಷಣಕ್ಕೆ ಸತ್ಯವಾದ ವಸ್ತುವೇ ಕರ್ಮವಾಗಿರುವದು ಕಂಡುಬಂದಿದೆ. ಆದ್ದರಿಂದ ಸಮ್ಯಗ್ದರ್ಶನಕ್ಕೆ ವಿಷಯನಾಗಿರುವ ಪರಮಾತ್ಮನನ್ನೇ ಈಕ್ಷಣಕ್ಕೆ ಕರ್ಮವೆಂದು ಹೇಳಿದ

1.ಪರಬ್ರಹ್ಮವುನಿರ್ವಿಶೇಷವಾದರೂ ಅದನ್ನು ಓಂಕಾರದ ಮೂಲಕ ಧ್ಯಾನಮಾಡಬಹುದು ಎಂದು ಭಾವ. ನಿರ್ಗುಣಬ್ರಹ್ಮವನ್ನು ಉಪಾಸನೆಮಾಡಬಹುದೆಂದು ಸೂತ್ರದಲ್ಲಿ ಹೇಳಿರುವದು ಇದೊಂದೇಕಡ.

  1. ಕಾಣುವದೆಂಬ ಕ್ರಿಯೆಗೆ ವಿಷಯವಾದದ್ದು. 3. ಪ್ರಕರಣದಿಂದ ಸಂದಿಗ್ಧವಾಗಿರುವದನ್ನು ವಾಕ್ಯಶೇಷದಿಂದ ನಿರ್ಣಯಿಸಬೇಕು ಎಂದು

ಭಾವ.

    1. ಶಾಲಗ್ರಾಮಾದಿಗಳನ್ನು ವಿಷ್ಣುವೆಂದು ಧ್ಯಾನಮಾಡುವಂತೆ ಒಂದು ವಸ್ತುವನ್ನು ಮತ್ತೊಂದೆಂದು ಧ್ಯಾನಿಸಬೇಕೆಂದು ವಿಧಿಸಿರಬಹುದು ; ಅಥವಾ ಒಂದು ಮೋಟುಮರವನ್ನು ಮನುಷ್ಯನೆಂದು ತಾನೇ ಭ್ರಾಂತಿಯಿಂದ ಕಲ್ಪಿಸಿಕೊಂಡು ಚಿಂತಿಸಲೂಬಹುದು. ಆದ್ದರಿಂದ ಧ್ಯಾನಕ್ಕೆ ವಿಷಯವಾದದ್ದು ವಸ್ತುವಿಗೆ ಅನುಗುಣವಾಗಿಯೇ ಇರಬೇಕೆಂಬ ನಿಯಮವಿಲ್ಲ.
  1. ಹಗ್ಗದ ಹಾವು ಮುಂತಾದವೂ ಈಕ್ಷಣಕ್ಕೆ ವಿಷಯವಾಗಿರುವಂತೆ ತೋರಿದರೂ ಅಲ್ಲಿ ನಿಜವಾದ ತಕ್ಷಣವಾಗಲಿ ನಿಜವಾದ ವಸ್ತುವಾಗಲಿ ಇರುವದಿಲ್ಲ. ನಿಜವಾದ ಈಕ್ಷಣಕ್ಕೆ ಅನುಗುಣವಾಗಿಯೇ ಅದರ ವಿಷಯವಾದ ವಸ್ತುವಿರಬೇಕೆಂದು ಇಲ್ಲಿ ಹೇಳಿದೆ.

  2. ಸರಿಯಾದ ವೇದಾಂತಜ್ಞಾನದಿಂದ ತಿಳಿಯಬರುವ ಎಂದರ್ಥ ; ವಿಷಯವೇ ಆಗಿರಬೇಕೆಂಬುದರಲ್ಲಿ ತಾತ್ಪರ್ಯವಿಲ್ಲ.

೩೯೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಎಂದು ನಿಶ್ಚಯವಾಗುತ್ತದೆ. ಮತ್ತು ಅವನನ್ನೇ ಇಲ್ಲಿ ಪರ, ಪುರುಷ - ಎಂಬ ಶಬ್ದಗಳಿಂದ ಅಭಿಧ್ಯಾನಮಾಡಬೇಕೆಂದು ಹೇಳಿದೆ ಎಂದು ಗುರುತಿಸಬಹುದಾಗಿದೆ.’

ಪರಾತ್ಪರನೆಂಬ ವಿಶೇಷಣದ ಅರ್ಥ (ಆಕ್ಷೇಪ) :- ಅಭಿಧ್ಯಾನದಲ್ಲಿ ಪರಪುರುಷನನ್ನು ಹೇಳಿದೆ ; ಈಕ್ಷಣದಲ್ಲಿ ಪರಾತ್ಪರ (ಪುರುಷ)ನನ್ನು ಹೇಳಿದ. (ಹೀಗಿರುವಲ್ಲಿ) ಒಂದು ಕಡೆಯಲ್ಲಿ (ಹೇಳಿರುವ ಪರಮಾತ್ಮನನ್ನೇ) ಇನ್ನೊಂದು ಕಡೆಯಲ್ಲಿಯೂ (ಅಭಿಧ್ಯಾನಮಾಡಬೇಕೆಂದು ಹೇಳಿದೆಯಂದು) ಗುರುತಿಸುವದು ಹೇಗೆ ?

(ಪರಿಹಾರ) :- ಮೊದಲನೆಯದಾಗಿ ಪರ, ಪುರುಷ - ಎಂಬ ಶಬ್ದಗಳು ಎರಡು ಕಡೆಗೂ ಸಮಾನವಾಗಿರುತ್ತವೆ. ಇಲ್ಲಿ ಜೀವಘನ ಎಂಬ ಮಾತಿನಿಂದ ಪ್ರಕೃತನಾದ ಅಭಿಧ್ಯಾನಮಾಡತಕ್ಕ ಪರಪುರುಷನನ್ನು ಪರಾಮರ್ಶಿಸಿರುವದೂ ಇಲ್ಲ ; ಹಾಗಿದ್ದರೆ ಆ ಪರನಿಗಿಂತ ಪರನಾದ ಈ ಈಕ್ಷಿತವ್ಯನಾಗಿರುವ ಪುರುಷನು ಬೇರೆ ಎಂದಾಗುತ್ತಿತ್ತು..

(ಪ್ರಶ್ನೆ) :- ಹಾಗಾದರೆ ಜೀವಘನನೆಂದರೆ ಯಾರು ?

(ಉತ್ತರ) :- ಹೇಳುತ್ತೇವೆ (ಕೇಳಿ) . ಘನವೆಂದರೆ ಮೂರ್ತಿಯು. ಜೀವನೆಂಬ ಘನನೇ ಜೀವಘನನು, ಉಪ್ಪಿನ ಹರಳಿನಂತ ಪರಮಾತ್ಮನಿಗೆ ಜೀವರೂಪವಾದ ಖಿಲ್ಯಭಾವವು ಉಪಾಧಿಯಿಂದಾಗಿರುವದಷ್ಟ, ಮತ್ತು ವಿಷಯೇಂದ್ರಿಯಗಳಿಗಿಂತ ಪರ ವಾಗಿಯೂ ಇರುವದಷ್ಟ, ಅದನ್ನು ಇಲ್ಲಿ ಜೀವಘನನು (ಎಂದಿದೆ). (ಇಲ್ಲಿ) ಮತ್ತೊಬ್ಬ (ವ್ಯಾಖ್ಯಾನಕಾರನು) ಹೇಳುತ್ತಾನೇನೆಂದರೆ, ಅವನು ಸಾಮಗಳಿಂದ ಬ್ರಹ್ಮಲೋಕಕ್ಕೆ ಒಯ್ಯಲ್ಪಡುತ್ತಾನ” (ಪ್ರ. ೫-೫) ಎಂದು ಹಿಂದಿನ ಅನಂತರ ವಾಕ್ಯದಲ್ಲಿ ತಿಳಿಸಿರುವ ಬ್ರಹ್ಮಲೋಕವು ಮಿಕ್ಕ ಲೋಕಗಳಿಗಿಂತ ಪರವಾಗಿಯೂ

  1. ‘ಜೀವಘನನೆಂಬ ಪರನಿಗಿಂತ ಪರನಾದ ಪುರುಷನನ್ನು ಕಾಣುತ್ತಾನೆ’ ಎಂದು ಹೇಳಿರುವ ಪುರುಷನನ್ನೇ ಇಲ್ಲಿ ಧ್ಯಾನಮಾಡಬೇಕೆಂದು ವಿಧಿಸಿದೆ ಎಂಬುದಕ್ಕೆ ಎರಡು ಕಡೆಗೂ ಸಮಾನ ವಾಗಿರುವ ಪರ, ಪುರುಷ - ಎಂಬ ಗುರುತುಗಳನ್ನು ಹೇಳಿರುತ್ತಾರೆ.

  2. ಮೊದಲು ಧೈಯನೆಂದು ಹೇಳಿರುವದು ಪರಪುರುಷನು ; ಕಾಣುವ ಪುರುಷನು ಪರಪುರುಷನಿಗಿಂತ ಪರನು - ಎಂದದ್ದರಿಂದ ಮೊದಲು ಅಪರಬ್ರಹ್ಮವನ್ನೂ ಆಮೇಲೆ ಪರ ಬ್ರಹ್ಮವನ್ನೂ ಹೇಳಿದ ಎಂದೇ ತಿಳಿಯಬಾರದು ? ಎಂದು ಆಕ್ಷೇಪ.

  3. ಅಲ್ಪಭಾವವು, ಪರಿಚ್ಛಿನ್ನರೂಪವು, . ೨-೪-೧೨ರ ಸೂಚನೆ.

  4. ಆ ವಾಕ್ಯಕ್ಕೂ ಈ ವಾಕ್ಯಕ್ಕೂ ನಡುವೆ ಮತ್ತೆ ಯಾವ ವಾಕ್ಯವೂ ಇಲ್ಲದ್ದರಿಂದ ಅದು ಅನಂತರವಾಕ್ಯವು.

ಅಧಿ. ೪. ಸೂ. ೧೩] ಪರಮಾತ್ಮನ ಶ್ರುತಿಲಿಂಗಗಳೂ ಇಲ್ಲಿವೆ

೩೯೫

ಇದೆಯಷ್ಟೆ. ಅದನ್ನು ಇಲ್ಲಿ ಜೀವಘನವೆಂದು ಕರೆದಿದೆ. ಕರಣಗಳಿಂದ ಸುತ್ತು ವರಿಯಲ್ಪಟ್ಟಿರುವ ಎಲ್ಲಾ ಜೀವರುಗಳೂ ಸರ್ವಕರಣಾತ್ಮನಾಗಿರುವ ಬ್ರಹ್ಮಲೋಕ ನಿವಾಸಿಯಾದ ಹಿರಣ್ಯಗರ್ಭನಲ್ಲಿ ಒಟ್ಟುಗೂಡಿರುವವೆಂಬುದು ಯುಕ್ತವಾಗಿರುವದ ರಿಂದ ಬ್ರಹ್ಮಲೋಕವು ಜೀವಘನ(ವೆನಿಸುವದು.) ಆ (ಜೀವಘನವಾದ ಪರಕ್ಕಿಂತ) ಪರನಾಗಿ ಈಕ್ಷಣಕ್ಕೆ ಕರ್ಮವಾಗಿರುವ ಪರಮಾತ್ಮನಿದಾನಲ್ಲ, ಅವನೇ ಅಭಿಧ್ಯಾನಕ್ಕೂ (ಇಲ್ಲಿ ) ಕರ್ಮವಾಗಿರುತ್ತಾನೆ ಎಂದು ನಿಶ್ಚಯವಾಗುತ್ತದೆ.”

ಪರಮಾತ್ಮನ ಶ್ರುತಿಲಿಂಗಗಳೂ ಇಲ್ಲಿವೆ

(ಭಾಷ್ಯ) ೨೫೧. ‘ಪರಂ ಪುರುಷಮ್’ ಇತಿ ಚ ವಿಶೇಷಣಂ ಪರಮಾತ್ಮಪರಿಗ್ರಹೇ ಏವ ಅವಕಲ್ಪತೇ | ಪರೋಹಿ ಪುರುಷಃ ಪರಮಾತ್ಮವ ಭವತಿ ಯಸ್ಮಾತ್ ಪರಂ ಕಿಂಚಿದನ್ಯತ್ ನಾಸ್ತಿ ! ‘ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ’ (ಕ. ೧-೩-೧) ಇತಿ ಚ ಶ್ರುತ್ಯನ್ತರಾತ್ | ‘ಪರಂ ಚಾಪರಂ ಚ ಬ್ರಹ್ಮ ಯದೂಂಕಾರಃ’ ಇತಿ ಚ ವಿಭಜ್ಯ ಅನನ್ತರಮ್ ಓಂಕಾರೇಣ ಪರಂ ಪುರುಷಮ್ ಅಭಿಧ್ಯಾತವ್ಯಂ ಬ್ರುವನ್ ಪರಮೇವ ಬ್ರಹ್ಮ ಪರಂ ಪುರುಷಂ ಗಮಯತಿ | ‘ಯಥಾ ಪಾದೋದರಸ್ತ್ರಚಾ ವಿನಿರ್ಮುಚಿತ ಏವಂ ಹ ವೈ ಸ ಪಾದ್ಮನಾ ವಿನಿರ್ಮುಚ್ಯತೇ’’ (ಪ್ರ. ೫-೫) ಇತಿ ಪಾತ್ಮ ವಿನಿರ್ಮೊಕಫಲವಚನಂ ಪರಮಾತ್ಮಾನಮ್ ಇಹ ಅಭಿಧ್ಯಾತವ್ಯಂ ಸೂಚಯತಿ ||

(ಭಾಷ್ಯಾರ್ಥ) ‘ಪರನಾಗಿರುವ ಪುರುಷನನ್ನು’ ಎಂಬ ವಿಶೇಷಣವು ಪರಮಾತ್ಮನನ್ನು ತೆಗೆದು ಕೊಂಡರೆ ಸರಿಯಾಗುತ್ತದೆ. ಏಕೆಂದರೆ ಪರಪುರುಷನು, ಎಂದರೆ ಯಾವನಿಗಿಂತ

  1. ಹಿರಣ್ಯಗರ್ಭನು ಸಮಷ್ಟಿಕರಣಾತ್ಮನು, ಜೀವರು ವ್ಯಷ್ಟಿಕರಣಾತ್ಮರು. ಕಿರಣಗಳಲ್ಲ ಸೂರ್ಯನಲ್ಲಿ ಅಡಕವಾಗಿರುವಂತ ಜೀವರು ಹಿರಣ್ಯಗರ್ಭನಲ್ಲಿ ಅಡಕವಾಗಿರುತ್ತಾರೆ. ಆ ಹಿರಣ್ಯಗರ್ಭನ ಲೋಕವಾದ್ದರಿಂದ ಬ್ರಹ್ಮಲೋಕವನ್ನು ಜೀವಘನವೆಂದು ಗೌಣವೃತ್ತಿಯಿಂದ ಕರೆದಿದೆ ಎಂದು ಭಾವ. ಇಲ್ಲಿ ‘ಅಪರ ಆಹ’ ಎಂದು ಕೊಟ್ಟಿರುವ ಎರಡನೆಯ ವ್ಯಾಖ್ಯಾನವು ಭಾಷ್ಯಕಾರರದೇ ಎಂಬುದು ಉಪನಿಷದ್ಭಾಷ್ಯದಿಂದ ವ್ಯಕ್ತವಾಗುತ್ತದೆ. ಆದರೆ ಮೊದಲನೆಯ ವ್ಯಾಖ್ಯಾನವನ್ನು ಪೂರ್ಣವಾಗಿ ಇಲ್ಲಿ ತಿರಸ್ಕರಿಸಿದೆ ಎಂತ ಕಾಣುವದಿಲ್ಲ.

  2. ತಕ್ಷಣವಾಕ್ಯದಲ್ಲಿರುವ ಪರಾತ್ಪರನೇ ಧ್ಯಾನವಾಕ್ಯದಲ್ಲಿರುವ ಪರಪುರುಷನು ಎಂದು ಗೊತ್ತಾಗುತ್ತದೆ.

೩೯೬

ಬ್ರಹ್ಮಸೂತ್ರಭಾಷ್ಯ

[ಆ. ೧. ಪಾ. ೩.

ಹೆಚ್ಚಾದದ್ದು ಮತ್ತೆ ಯಾವದೂ ಇಲ್ಲವೋ ಆ ಪರಮಾತ್ಮನೇ ಆಗಬೇಕು. “ಪುರುಷ ನಿಗಿಂತ ಹೆಚ್ಚಾದದ್ದು ಯಾವದೂ ಇಲ್ಲ ; ಅದೇ ಕೊನೆಯು, ಅದೇ ಹೆಚ್ಚಿನ ಗತಿಯು’ (ಕ. ೧-೩-೧) ಎಂಬ ಬೇರೊಂದು ಶ್ರುತಿಯಿಂದಲೂ (ಇದು ಸಿದ್ಧವಾಗುತ್ತದೆ). ‘‘ಪರ(ಬ್ರಹ್ಮವೂ) ಅಪರಬ್ರಹ್ಮವೂ (ಈ) ಓಂಕಾರವೆಂಬುದೇ’’(ಪ್ರ.೫-೨) ಎಂದು ವಿಭಾಗಿಸಿ ಆ ಬಳಿಕ ಓಂಕಾರದಿಂದ ಪರಪುರುಷನನ್ನು ಅಭಿಧ್ಯಾನಮಾಡಬೇಕೆಂದು ಹೇಳುವ (ಪಿಪ್ಪಲಾದನು) ಪರಬ್ರಹ್ಮವೇ (ಈ) ಪರಪುರುಷನೆಂದು ತಿಳಿಸಿದಂತಾಗಿದೆ. ‘‘ಹೇಗೆ ಸರ್ಪವು ಪೊರೆಯಿಂದ ಬಿಡುಗಡೆಯಾಗುವದೂ ಹೀಗೆಯೇ ಅವನು ಪಾಪ ದಿಂದ ಬಿಡುಗಡೆಯಾಗುತ್ತಾನೆ’ (ಪ್ರ. ೫-೫) ಎಂದು ಪಾಪದಿಂದ ಬಿಡುಗಡೆ ಯಾಗುವದೆಂಬ ಫಲವನ್ನು ಹೇಳಿರುವದು ಇಲ್ಲಿ ಅಭಿಧ್ಯಾನಮಾಡುವದು ಪರಮಾತ್ಮ ನನ್ನೇ ಎಂದು ತಿಳಿಸುತ್ತದೆ.”

ದೇಶಪರಿಚ್ಚಿನ್ನಫಲವನ್ನೇಕೆ ಹೇಳಿದೆ ?

(ಭಾಷ್ಯ) ೨೫೨. ಅಥ ಯದುಕ್ಕಂ ಪರಮಾತ್ಮಾಭಿಧ್ಯಾಯಿನೋ ನ ದೇಶಪರಿಚ್ಛನ್ನಫಲಂ ಯುಜ್ಯತೇ ಇತಿ | ಅಪ್ರೋಚ್ಯತೇ 1 ತ್ರಿಮಾಣ ಓಂಕಾರೇಣ ಆಲಮೃನೇನ ಪರಮಾತ್ಮಾನಂ ಅಭಿಧ್ಯಾಯತಃ ಫಲಂ ಬ್ರಹ್ಮಲೋಕಪ್ರಾಪ್ತಿ: ಕ್ರಮೇಣ ಚ ಸಮ್ಮ ಗ್ದರ್ಶನೋತ್ಪತ್ತಿ: ಇತಿ ಕ್ರಮಮುಕ್ತಭಿಪ್ರಾಯಮೇತದ್ ಭವಿಷ್ಯತಿ ಇತ್ಯದೋಷಃ ||

(ಭಾಷ್ಯಾರ್ಥ) ಇನ್ನು ಪರಮಾತ್ಮನನ್ನು ಅಭಿಧ್ಯಾನಮಾಡುವವನಿಗೆ ದೇಶಪರಿಚ್ಛಿನ್ನವಾದ ಫಲವು (ಆಗುವದು) ಯುಕ್ತವಲ್ಲ ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ, ಅದಕ್ಕೆ

  1. ಅಪರಬ್ರಹ್ಮವನ್ನು ತೆಗೆದುಕೊಂಡರೆ ಪರ ಎಂಬ ಶಬ್ದಕ್ಕೆ ಗೌಣಾರ್ಥವನ್ನು ಕಲ್ಪಿಸಬೇಕಾಗುವದು.ಸಂಭವವಿರುವ ಕಡೆಯಲ್ಲಿ ಮುಖ್ಯಾರ್ಥವನ್ನು ತೆಗೆದುಕೊಳ್ಳುವದೇ ಯುಕ್ತ - ಎಂದು ಭಾವ.

  2. ಪರಬ್ರಹ್ಮ ಎಂದು ಉಪಕ್ರಮಿಸಿ ಹೇಳುವ ‘ಪರಪುರುಷನು’ ಅಪರಬ್ರಹ್ಮವೆಂದು ತಿಳಿಯುವದುಯುಕ್ತವಾಗಲಾರದು.

3.‘ಧರ್ಮಾಧರ್ಮಗಳ ರೂಪವಾದ ಪಾಪದಿಂದ ಬಿಡುಗಡೆಯಾಗುವದು ಬ್ರಹ್ಮಜ್ಞಾನ ದಿಂದಲ್ಲದೆ ಮತ್ತೇತರಿಂದಲೂ ಆಗಲಾರದು.

ಅಧಿ. ೫. ಸೂ. ೧೪] ವಿಷಯವೂ ಸಂಶಯವೂ

೩೭

ಸಮಾಧಾನವನ್ನು ಹೇಳುತ್ತೇವೆ. ಮೂರು ಮಾತ್ರೆಗಳ ಓಂಕಾರವೆಂಬ ಆಲಂಬನದಿಂದ ಪರಮಾತ್ಮನನ್ನು ಅಭಿಧ್ಯಾನಮಾಡುವವನಿಗೆ ಬ್ರಹ್ಮಲೋಕಪ್ರಾಪ್ತಿಯೂ (ಕಾಲ) ಕ್ರಮದಿಂದ ಸಮ್ಯಗ್ದರ್ಶನವುಂಟಾಗುವದೂ ಫಲವು. ಆದ್ದರಿಂದ ಇದು ಕ್ರಮ

ಮುಕ್ತಿಯ ಅಭಿಪ್ರಾಯದಿಂದ ಹೇಳಿದ್ದಾದ್ದರಿಂದ (ಯಾವ) ದೋಷವೂ ಇಲ್ಲ

೫. ದಹರಾಧಿಕರಣ (೧೪-೨೧) (ಛಾಂದೋಗ್ಯ ೮-೧-೧ ರಲ್ಲಿ ಹೇಳಿರುವ ದಹರಾಕಾಶವು ಬ್ರಹ್ಮವೇ)

ದಹರ ಉತ್ತರೇಭ್ಯಃ ||೧೪|| ೧೪. (ಛಾಂದೋಗ್ಯದಲ್ಲಿ ಹೇಳಿರುವ) ದಹರ (ವಾದ ಆಕಾಶವು) ಮುಂದೆ ಹೇಳುವ (ಕಾರಣಗಳಿಂದ ಪರಮಾತ್ಮನೇ).

ವಿಷಯವೂ ಸಂಶಯವೂ

(ಭಾಷ್ಯ) ೨೫೩. “ಅಥ ಯದಿದಮನ್ ಬ್ರಹ್ಮಪುರೇ ದಹರಂ ಪರೀಕಂ ವೇಶ್ಯ ದಹರೋSಸ್ಮಿನ್ನನ್ತರಾಕಾಶಸ್ತಸ್ಮಿನ್ ಯದನ್ನಸ್ತದನ್ನೇಷ್ಟವಂ ತದ್ಭಾವ ವಿಜಿಜ್ಞಾಸಿ ತವ್ಯಮ್’ (ಛಾಂ. ೮-೧-೧) ಇತ್ಯಾದಿ ವಾಕ್ಯಂ ಸಮಾಮ್ಮಾಯತೇ | ತತ್ರ ರ್ಯೋಯಂ ದಹರೇ ಹೃದಯಪುರೀಕೇ ದಹರ ಆಕಾಶಃ ಶ್ರುತಃ ಸ ಕಿಂ ಭೂತಾಕಾಶಃ, ಅಥವಾ ವಿಜ್ಞಾನಾತ್ಮಾ, ಅಥವಾ ಪರಮಾತ್ಮಾ ಇತಿ ಸಂಶಯ್ಯತೇ ||

  1. ಪ್ರತೀಕದಿಂದ ಎಂದರ್ಥ. ಪ್ರತೀಕೋಪಾಸನೆಯಿಂದ ಬ್ರಹ್ಮಲೋಕವು ಪ್ರಾಪ್ತಿ ಯಾಗಲಾರದೆಂದು ಮುಂದೆ (೪-೩-೧೫ರಲ್ಲಿ) ಹೇಳಿರುವದು ಸಾಮಾನ್ಯನ್ಯಾಯ, ಆದರೆ ಪ್ರತೀಕವಾಗಿರುವ ಓಂಕಾರದಿಂದ ಬ್ರಹ್ಮಲೋಕಪ್ರಾಪ್ತಿಯಾಗುವದೆಂದು ಇಲ್ಲಿ ವಿಶೇಷಶ್ರುತಿಯ ಬೆಂಬಲದಿಂದ ನಿಶ್ಚಯಿಸಬೇಕಾಗಿದೆ.

  2. ಜ್ಞಾನವಿಲ್ಲದ ಪರಬ್ರಹ್ಮದರ್ಶನವಾಗಲಿ ಧರ್ಮಾಧರ್ಮಗಳ ಬಿಡುಗಡೆಯಾಗಲಿ ಆಗುವಹಾಗಿಲ್ಲವಾದ್ದರಿಂದ ‘ಈಕ್ಷತೇ’, ‘ವಿನಿರ್ಮುಚ್ಯತೇ’ ಎಂಬ ಶ್ರುತಿಗಳ ಬಲದಿಂದ ಜ್ಞಾನವೂ ಆಗುವದೆಂದು ನಿಶ್ಚಯಿಸಬೇಕು. ಮುಂದೆ ೪-೩-೧೦ರಲ್ಲಿ ಬ್ರಹ್ಮಲೋಕದಲ್ಲಿ ಜ್ಞಾನವುಂಟಾಗ ಬಹುದಂದು ಹೇಳಿದೆ.

  3. ಇದು ಸದ್ಯೋಮುಕ್ತಿಗೆ ಕಾರಣವಾದ ಸಮ್ಯಗ್ದಾನವಲ್ಲ, ಬರಿಯ ಧ್ಯಾನವು ; ಆದ್ದರಿಂದ ಗತಿಶ್ರುತಿಯಿರುವದು ವಿರುದ್ಧವಲ್ಲ ಎಂದರ್ಥ.

೩೯೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಭಾಷ್ಯಾರ್ಥ) “ಇನ್ನು ಈ ಬ್ರಹ್ಮಪುರದಲ್ಲಿ ದಹರವಾದ’ ಪುಂಡರೀಕ (ರೂಪ)ವಾದ ಈ ಮನೆಯಿದೆಯಲ್ಲ? ಇದರೊಳಗೆ ದಹರವಾದ ಆಕಾಶ (ವಿದೆಯಲ್ಲ), ಅದರೊಳಗೆ ಇರುವದನ್ನು ಹುಡುಕಬೇಕು, ಅದನ್ನೇ ವಿಜಿಜ್ಞಾಸೆಮಾಡಬೇಕು.’’ (ಛಾಂ. ೮-೧-೧) ಮುಂತಾದ (ಶ್ರುತಿ) ವಾಕ್ಯವನ್ನು ಪಠಿಸುತ್ತಾರೆ. ಇಲ್ಲಿ ದಹರವಾದ ಹೃದಯ ಪುಂಡರೀಕದೊಳಗೆ ಈ ದಹರವಾದ ಆಕಾಶ (ವಿದೆಯೆಂದು) ಶ್ರುತಿಯಲ್ಲಿದೆಯಷ್ಟೆ, ಅದೇನು ಭೂತಾಕಾಶವೊ, ಅಥವಾ ವಿಜ್ಞಾನಾತ್ಮನೂ, ಅಥವಾ ಪರಮಾತ್ಮನೊ ? ಎಂದು ಸಂಶಯವಾಗುತ್ತದೆ.

ಸಂಶಯಕ್ಕೆ ಕಾರಣ

(ಭಾಷ್ಯ) ೨೫೪. ಕುತಃ ಸಂಶಯಃ ? ಆಕಾಶಬ್ರಹ್ಮಪುರಶಬ್ದಾಭ್ಯಾಮ್ | ಆಕಾಶಶಬ್ದ ಹಿ ಅಯಂ ಭೂತಾಕಾಶ ಪರಸ್ಮಿಂಶ್ಚ ಪ್ರಯುಜ್ಯಮಾನೋ ದೃಶ್ಯತೇ | ತತ್ರ ಕಿಂ ಭೂತಾಕಾಶ ಏವ ದಹರಃ ಸ್ಯಾತ್ ಕಿಂ ವಾ ಪರಃ ಇತಿ ಸಂಶಯಃ | ತಥಾ ಬ್ರಹ್ಮಪುರಮ್ ಇತಿ ಕಿಂ ಜೀವೋತ್ರ ಬ್ರಹ್ಮನಾಮಾ, ತಸ್ಮಿದಂ ಪುರಂ ಶರೀರಂ ಬ್ರಹ್ಮಪುರಮ್, ಅಥವಾ ಪರಸ್ಯವ ಬ್ರಹ್ಮಣಃ ಪುರಂ ಬ್ರಹ್ಮಪುರಮ್ ಇತಿ ? ತತ್ರ ಜೀವಸ್ಯ ಪರಸ್ಯ ವಾ ಅನ್ಯತರಸ್ಯ ಪುರಸ್ಕಾಮಿನಃ ದಹರಾಕಾಶ ಸಂಶಯಃ ||

(ಭಾಷ್ಯಾರ್ಥ) (ಇ) ಸಂಶಯವೇಕೆ ? ಎಂದರೆ ಆಕಾಶ, ಬ್ರಹ್ಮಪುರ - ಎಂಬ ಶಬ್ದಗಳಿರುವದರಿಂದ, ಈ ಆಕಾಶಶಬ್ದವು ಭೂತಾಕಾಶದಲ್ಲಿಯೂ ಪರಮಾತ್ಮ ನಲ್ಲಿಯೂ ಪ್ರಯುಕ್ತವಾಗಿರುವದು ಕಂಡುಬರುತ್ತದೆ. ಇಲ್ಲಿ ಭೂತಾಕಾಶವೇ (ಈ) ದಹರವಾಗಿರಬಹುದೆ, ಅಥವಾ ಪರಮಾತ್ಮನಾಗಿರಬಹುದ) ? ಎಂದು ಸಂಶಯ (ವಾಗುತ್ತದೆ). ಹೇಗಂದರೆ ಬ್ರಹ್ಮಪುರ ಎಂದಿದೆಯಲ್ಲ, ಇಲ್ಲಿ ಜೀವನೇ ಬ್ರಹ್ಮವೆಂಬ

  1. ಅಲ್ಪವಾದ.

  2. ಹೃದಯಕಮಲವನ್ನು ಮನೆ ಎಂದು ಕರೆದಿರುವದು ಶರೀರವನ್ನು ಪುರವೆಂದು ಕರೆದಿರುವದಕ್ಕೆ ಅನುಗುಣವಾಗಿರುವದಕ್ಕೆ.

3.ಶಾಸ್ತ್ರಾಚಾರ್ಯರಿಂದ ಶ್ರವಣಮಾಡಬೇಕು. 4. ವಿಜ್ಞಾನವನ್ನು, ಎಂದರೆ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕು.

ಅಧಿ. ೫. ಸೂ. ೧೪] ಪೂರ್ವಪಕ್ಷ : ಭೂತಾಕಾಶವು ಅಥವಾ ಜೀವನು ದಹರಾಕಾಶವು ೩೯೯ ಹೆಸರುಳ್ಳವನು, ಅವನಿಗೆ ಈ ಶರೀರವು ಪುರ(ವಾಗಿರುವದರಿಂದ) ಬ್ರಹ್ಮಪುರವು (ಎಂದಿದೆಯೆ), ಅಥವಾ ಪರಬ್ರಹ್ಮದ ಪುರ(ವಾಗಿರುವದರಿಂದ) ಬ್ರಹ್ಮಪುರ (ವೆಂದಿದೆಯೆ) ? ಆ (ಪಕ್ಷ)ದಲ್ಲಿ ಪುರಕ್ಕೆ ಒಡೆಯನಾಗಿರುವ ಜೀವನು ಅಥವಾ ಪರಮಾತ್ಮನು - ಇಬ್ಬರಲ್ಲೊಬ್ಬನು - ದಹರಾಕಾಶವಾಗಿರಬೇಕು ಎಂಬ (ವಿಷಯ)ದಲ್ಲಿ ಸಂಶಯವು.

ಪೂರ್ವಪಕ್ಷ : ಭೂತಾಕಾಶವು ಅಥವಾ ಜೀವನು ದಹರಾಕಾಶವು

(ಭಾಷ್ಯ) ೨೫೫. ತತ್ರ ಆಕಾಶಶಬ್ದ ಭೂತಾಕಾಶೆ ರೂಢತ್ವಾತ್ ಭೂತಾಕಾಶ ಏವ ದಹರಶಬ್ದಃ ಇತಿ ಪ್ರಾಪ್ತಮ್ | ತಸ್ಯ ಚ ದಹರಾಯತನಾಪೇಕ್ಷಯಾ ದಹರತ್ವಮ್ | “ಯಾವಾನ್ನಾ ಅಯಮಾಕಾಶಾವಾವೇರ್ಷೋನರ್ಹದಯ ಆಕಾಶಃ’ (ಛಾಂ. ೮-೧ ೩) ಇತಿ ಚ ಬಾಹ್ಯಾಭ್ಯuರಭಾವಕೃತಭೇದಸ್ಯ ಉಪಮಾನೋಪಮೇಯಭಾವಃ | ದ್ಯಾವಾಪೃಥಿವ್ಯಾದಿ ಚ ತಸ್ಮಿನ್ ಅನ್ನಸಮಾಹಿತಮ್ | ಅವಕಾಶಾತ್ಮನಾ ಆಕಾಶಸ್ಯ ಏಕತ್ವಾತ್ ( ಅಥವಾ ಜೀವೋ ದಹರಃ ಇತಿ ಪ್ರಾಪ್ತಮ್ | ಬ್ರಹ್ಮಪುರಶಬ್ದಾತ್ | ಜೀವಸ್ಯ ಹಿಇದಂ ಪುರಂಸತ್‌ ಶರೀರಂ ಬ್ರಹ್ಮಪುರಮ್ ಇತ್ಯುಚ್ಯತೇ | ತಸ್ಯ ಸ್ವಕರ್ಮಣಾ ಉಪಾರ್ಜಿತತ್ವಾತ್ ಭಕ್ಕಾಚ ತಸ್ಯ ಬ್ರಹ್ಮಶಬ್ದ ವಾಚ್ಯತ್ವಮ್ ನ ಹಿ ಪರಸ್ಯ ಬ್ರಹ್ಮಣಃ ಶರೀರೇಣ ಸ್ವಸ್ವಾಮಿಭಾವಃ ಸಂಬನ್ಲೋಸ್ತಿ | ತತ್ರ ಪುರಸ್ಕಾಮಿನಃ ಪುರೈಕಟೇಶ್

ಅವಸ್ಥಾನಂ ದೃಷ್ಟಂ ಯಥಾ ರಾಜ್ಞಃ | ಮನಉಪಾಧಿಕಶ್ಚ ಜೀವಃ | ಮನಶ್ಚ ಪ್ರಾಯೋಣ ಹೃದಯೇ ಪ್ರತಿಷ್ಠಿತಮ್ ಇತ್ಯತಃ ಜೀವವ ಇದು ಹೃದಯೇ ಅನ್ಯರವಸ್ಥಾನಂ ಸ್ಯಾತ್ | ದಹರತ್ವಮಪಿ ತವ ಆರಾಗೋಪಮಿತತ್ವಾತ್ ಅವಕಲ್ಪತೇ | ಆಕಾಶೋಪಮಿತತ್ವಾದಿ ಚ ಬ್ರಹ್ಮಾಭೇದವಿವಕ್ಷಯಾ ಭವಿಷ್ಯತಿ | ನ ಚ ಅತ್ರ ದಹರಸ್ಯ ಆಕಾಶಸ್ಯ ಅನ್ವೇಷ್ಟತ್ವಂ ವಿಜಿಜ್ಞಾಸಿತವ್ಯತ್ವಂ ಚ ಶೂಯತೇ | ‘‘ತಸ್ಮಿನ್ ಯದನ್ನ;’ ಇತಿ ಪರವಿಶೇಷಣನ ಉಪಾದಾನಾತ್ ಇತಿ ||

(ಭಾಷ್ಯಾರ್ಥ) ಇಲ್ಲಿ ಆಕಾಶಶಬ್ದವು ಭೂತಾಕಾಶದಲ್ಲಿ ರೂಢವಾಗಿರುವದರಿಂದ ಭೂತಾಕಾಶ ವನ್ನೇ ದಹರಶಬ್ದ (ದಿಂದ ಹೇಳಿದೆ) ಎಂದು (ಪೂರ್ವಪಕ್ಷವು) ಬಂದೊದಗುತ್ತದೆ. ಆ (ಭೂತಾಕಾಶವು) ದಹರವಾದ ಆಶ್ರಯದ ಅಪೇಕ್ಷೆಯಿಂದ ದಹರ(ವಾಗಿರುತ್ತದೆ).’

  1. ಅಲ್ಪವಾದ ಹೃದಯದಲ್ಲಿರುವದರಿಂದ ಅಲ್ಪವನಿಸುವದು.

ಇOO

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

“ಈ ಆಕಾಶವು ಎಷ್ಟು (ಪರಿಮಾಣವೋ), ಈ ಹೃದಯದೊಳಗಿರುವ ಆಕಾಶವು ಅಷ್ಟೇ’ (ಛಾಂ. ೮-೧-೩) ಎಂದು ಹೊರಗಿರುವದು, ಒಳಗಿರುವದು - ಎಂಬುದರಿಂದ ಭೇದವಿರುವದರಿಂದ (ಒಂದಕ್ಕ) ಉಪಮಾನೋಪಮೇಯಭಾವವು ಹೊಂದುತ್ತದೆ.’ ದ್ಯಾವಾಪೃಥಿವ್ಯಾದಿಗಳು ಅದರೊಳಗೆ ಇರುತ್ತವೆ (ಎಂದು ಛಾಂ. ೮-೧-೩ ರಲ್ಲಿ ಹೇಳಿರುವದೂ) ಅವಕಾಶರೂಪದಿಂದ (ಈ) ಆಕಾಶವು ಒಂದೇ ಆಗಿರುವದರಿಂದ (ಹೊಂದುತ್ತದ).?

ಅಥವಾ ಜೀವನು ದಹರ(ವಾದ ಆಕಾಶವು) ಎಂಬ (ಪೂರ್ವಪಕ್ಷವು) ಬಂದೊದಗುತ್ತದೆ ; ಏಕೆಂದರೆ (ಇಲ್ಲಿ) ಬ್ರಹ್ಮಪುರ ಎಂಬ ಶಬ್ದವಿದೆ. ಜೀವನ ಪುರವಾಗಿದ್ದುಕೊಂಡಿರುವ ಈ ಶರೀರವನ್ನೇ ಬ್ರಹ್ಮಪುರವೆಂದು ಕರೆದಿದೆ ; ಏಕೆಂದರೆ ಇದು (ಜೀವನು) ತನ್ನ ಕರ್ಮದಿಂದ ಸಂಪಾದಿಸಿದ್ಧಾಗಿದೆ. ಇವನನ್ನು ಬ್ರಹ್ಮವೆಂದು ಕರೆದಿರುವದು ಗೌಣವೃತ್ತಿಯಿಂದ ಪರಬ್ರಹ್ಮಕ್ಕೂ ಶರೀರಕ್ಕೂ ಸ್ವಸ್ವಾಮಿಭಾವ ಸಂಬಂಧವು ಇಲ್ಲವೇ ಇಲ್ಲ. ಇಲ್ಲಿ ಪುರದೊಡೆಯನಾದವನು ರಾಜನಂತೆ ಪುರದ ಒಂದು ಭಾಗದಲ್ಲಿ ಇರುವನೆಂಬುದು ಕಂಡಿದೆ. ಮತ್ತು ಜೀವನು ಮನಸ್ಸೆಂಬ ಉಪಾಧಿ ಯುಳ್ಳವನು ; ಮನಸ್ಸು ಬಲುಮಟ್ಟಿಗೆ ಹೃದಯದಲ್ಲಿದ್ದುಕೊಂಡಿರುತ್ತದೆಯಾದ್ದರಿಂದ ಈ ಹೃದಯದಲ್ಲಿರುತ್ತಾನೆಂದು ಹೇಳಿರುವದು ಜೀವನ (ವಿಷಯ)ದಲ್ಲಿಯೇ ಆಗಿರ ಬೇಕು. ಅವನನ್ನು (ಶ್ರುತಿಯಲ್ಲಿ) ದಬ್ಬಳದ ತುದಿಗೆ ಹೋಲಿಸಿರುವದರಿಂದ ದಹರತ್ವ ವನ್ನು (ಹೇಳುವದೂ) ಅವನಿಗೇ ಹೊಂದುತ್ತದೆ. ಆಕಾಶವನ್ನು (ಅವನಿಗೆ) ಹೋಲಿಸಿರುವದೇ ಮುಂತಾದದ್ದು (ಅವನು) ಬ್ರಹ್ಮಕ್ಕಿಂತ ಬೇರೆಯಲ್ಲವೆಂದು ತಿಳಿಸುವದಕ್ಕೆ (ಎಂದೂ) ಆಗಬಹುದಾಗಿದೆ. ಇದೂ ಅಲ್ಲದ ದಹರವಾದ ಆಕಾಶವನ್ನು ಹುಡುಕಬೇಕೆಂದಾಗಲಿ, ವಿಜಿಜ್ಞಾಸೆಮಾಡಬೇಕೆಂದಾಗಲಿ ಇಲ್ಲಿ ಶ್ರುತಿಯಲ್ಲಿ ಹೇಳಿಲ್ಲ ; ಏಕೆಂದರೆ ಅದರೊಳಗೆ ಇರುವದನ್ನು’ ಎಂದು (ಅದಕ್ಕಿಂತ) ಬೇರೆಯಾದದ್ದರ ವಿಶೇಷಣವಾಗಿ (ಅದನ್ನು) ತೆಗೆದುಕೊಂಡು (ಹೇಳಿದೆ).

  1. ತನ್ನನ್ನೇ ತನಗೆ ಹೋಲಿಸಬಹುದೆ ? ಎಂದರೆ ಉಪಾಧಿಕಲ್ಪಿತವಾದ ಭೇದವನ್ನಿಟ್ಟು ಕೊಂಡು ಹೋಲಿಸಬಹುದು - ಎಂದು ಸಮಾಧಾನವನ್ನು ಹೇಳಿದೆ.

2.ಯಾವದಿದ್ದರೂ ಆಕಾಶದಲ್ಲಿಯೇ ಇರಬೇಕು - ಎಂದು ಇಟ್ಟುಕೊಂಡು ಉಪಾಸನೆಗಾಗಿ ಆಕಾಶವನ್ನು ಹೊಗಳಿದೆ ಎಂದು ಭಾವ.

  1. ಇವನೂ ಬ್ರಹ್ಮದಂತ ಸಚ್ಚಿದ್ರೂಪನೆಂಬ ಕಾರಣದಿಂದ. 4. ಶ್ವೇ. ೫-೮. 5. ಮುಂತಾದದ್ದು ಎಂದರೆ ದ್ಯಾವಾಪೃಥಿವ್ಯಾದಿಗಳು ಅವನಲ್ಲಿರುವದು. 6. ಆಕಾಶವು ತಾನೇ ತನ್ನೊಳಗೆ ಇರಲಾರದು.

)

ಅಧಿ. ೫. ಸೂ. ೧೪] ಸಿದ್ಧಾಂತ : ದಹರಾಕಾಶವು ಬ್ರಹ್ಮವೇ, ಭೂತಾಕಾಶವಲ್ಲ

ಸಿದ್ಧಾಂತ : ದಹರಾಕಾಶವು ಬ್ರಹ್ಮವೇ, ಭೂತಾಕಾಶವಲ್ಲ

(ಭಾಷ್ಯ) ೨೫೬. ಅತ ಉತ್ತರಂ ಬ್ಯೂಮಃ | ಪರಮೇಶ್ವರ ಏವ ಅತ್ರ ದಹರಾಕಾಶ್ ಭವಿತುಮರ್ಹತಿ, ನ ಭೂತಾಕಾಶೋ ಜೀವೋ ವಾ | ಕಸ್ಮಾತ್ ? ಉತ್ತರೇಲ್ನೋ ವಾಕ್ಯಶೇಷಗತೇಭೋ ಹೇತುಭ್ಯ: 1 ತಥಾ ಹಿ ಅನ್ವೇಷ್ಟತಯಾ ವಿಹಿತಸ್ಯ ದಹರಸ್ಯ ಆಕಾಶಸ್ಯ ‘‘ತಂ ಚೇದ್ ಬ್ರೂಯುಃ ” ಇತ್ಯುಪಕ್ರಮ್ಮ “ಕಿಂ ತದತ್ರ ವಿದ್ಯತೇ ಯದನ್ನೇಷ್ಟವಂ ಯಾವ ವಿಜಿಜ್ಞಾಸಿತವ್ಯಮ್’’ (ಛಾಂ. ೮-೧-೨) ಇವಮ್ ಆಕ್ಷೇಪಪೂರ್ವಕಂ ಪ್ರತಿಸಮಾಧಾನವಚನಂ ಭವತಿ “ಸ ಬ್ರೂಯಾದ್ ಯಾವಾನ್ ವಾ ಅಯಮಾಕಾಶಸ್ತಾವಾನೇಷೋನರ್ಹದಯ ಆಕಾಶ ಉಭೇ ಅಸ್ಮಿನ್ ದ್ಯಾವಾಪೃಥಿವೀ ಅನ್ಯರೇವ ಸಮಾಹಿತೇ” (ಛಾಂ. ೮-೧-೩) ಇತ್ಯಾದಿ | ತತ್ರ ಪುಣ್ಡರೀಕದಹರನ ಪ್ರಾಪ್ತದಹರತ್ವಸ್ಯ ಆಕಾಶಸ್ಯ ಪ್ರಸಿದ್ಧಾಕಾಶೆಪಮೈನ ದಹರತ್ವಂ ನಿವರ್ತಯನ್ ಭೂತಾಕಾಶತ್ವಂ ದಹರಸ್ಯ ಆಕಾಶಸ್ಯ ನಿವರ್ತಯತಿ ಇತಿ ಗಮ್ಯತೇ | ಯದ್ಯಪಿ ಆಕಾಶಶಬ್ದಃ ಭೂತಾಕಾಶೇರೂಢಃ, ತಥಾಪಿತೇನೈವ ತಸ್ಯ ಉಪಮಾನೋಪಪದ್ಯತೇ ಇತಿ ಭೂತಾಕಾಶಶಜ್ಞಾ ನಿವರ್ತಿತಾ ಭವತಿ | ನನು ಏಕಸ್ಕಾಪಿ ಆಕಾಶಸ್ಯ ಬಾಹ್ಯಾಭ್ಯವರತ್ವಕಲ್ಪಿತೇನ ಭೇದೇನ ಉಪಮಾನೋಪಮೇಯಭಾವಃ ಸಂಭವತಿ ಇತ್ಯುಕ್ತಮ್ 1 ನೈವಂ ಸಂಭವತಿ | ಅಗತಿಕಾ ಹಿ ಇಯಂ ಗತಿ: ಯತ್‌ ಕಾಲ್ಪನಿಕ ಭೇದಾಶ್ರಯಣಮ್ | ಅಪಿ ಚ ಕಲ್ಪಯಿತ್ವಾಪಿ ಭೇದಮ್ ಉಪಮಾನೋಪಮೇಯ ಭಾವಂ ವರ್ಣಯತಃ ಪರಿಚ್ಛಿನ್ನತ್ವಾತ್ ಅಭ್ಯಸ್ತರಾಕಾಶಸ್ಯ ನ ಬಾಹ್ಯಾಕಾಶಪರಿಮಾಣ ತ್ವಮ್ ಉಪಪತ | ನನು ಪರಮೇಶ್ವರಸ್ಕಾಪಿ ‘ಜ್ಯಾಯಾನಾಕಾಶಾತ್‌’’ (ಶತ. ಬ್ರಾ. ೧೦-೬-೩-೨) ಇತಿಶ್ರುತ್ಯನ್ತರಾತ್ ನೃವ ಆಕಾಶಪರಿಮಾಣತ್ವಮ್ ಉಪಪದ್ಯತೇ ನೈಷ ದೋಷಃ | ಪುಣ್ಡರೀಕವೇಷ್ಟನಪ್ರಾಪ್ತದಹರತ್ವನಿವೃತ್ತಿಪರತ್ವಾತ್ ವಾಕ್ಯಸ್ಯ, ನ ತಾವತ್ಯಪ್ರತಿಪಾದನಪರತ್ಯಮ್ | ಉಭಯಪ್ರತಿಪಾದನೇ ಹಿ ವಾಕ್ಯಂ ಭಿತ | ನ ಚ ಕಲ್ಪಿತಭೇದೇ ಪುಣ್ಡರೀಕವೇಷ್ಟಿತೇ ಆಕಾಶೈಕದೇಶೇ ದ್ಯಾವಾಪೃಥಿವ್ಯಾದೀನಾಮ್ ಅನ್ನಸಮಾಧಾನಮ್ ಉಪಪದ್ಯತೇ | ಏಷ ಆತ್ಮಾಪಹಪಾಟ್ನಾ ವಿಜರೋ ವಿಮೃತ್ಯು ರ್ವಿಶೋಕೋ ವಿಜಿಘಟ್ರೋಪಿಪಾಸಃ ಸತ್ಯಕಾಮಃ ಸತ್ಯಸಂಕಲ್ಪಃ’ (ಛಾಂ. ೮-೧-೫) ಇತಿ ಚ ಆತ್ಮಾಪಹತಾಷ್ಕೃತ್ವಾದಯಶ್ಚ ಗುಣಾ ನ ಭೂತಾಕಾಶ ಸಂಭವ ||

(ಭಾಷ್ಯಾರ್ಥ) ಇದಕ್ಕೆ ಉತ್ತರವನ್ನು ಹೇಳುತ್ತೇವೆ. ಇಲ್ಲಿ ಪರಮೇಶ್ವರನೇ ದಹರಾಕಾಶ೪೦೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ವಾಗಿರಬೇಕು, ಭೂತಾಕಾಶವಾಗಲಿ ಜೀವನಾಗಲಿ (ದಹರವಾಗಲಾರರು) .ಏಕೆ ? ಎಂದರೆ ಮುಂದಿನ ವಾಕ್ಯಶೇಷದಲ್ಲಿರುವ ಹೇತುಗಳಿಂದ. ಹೇಗೆಂದರೆ, ಹುಡುಕ ಬೇಕೆಂದು ವಿಧಿಸಿರುವ ದಹರಾಕಾಶವನ್ನು (ಕುರಿತು) ಆ (ಆಚಾರ್ಯನನ್ನು ಕುರಿತು ಶಿಷ್ಯರು) ಹೀಗೆಂದರೆ” ಎಂದು ಉಪಕ್ರಮಿಸಿ ಇಲ್ಲಿ ಹುಡುಕಬೇಕಾದದ್ದು ಅಥವಾ ಅರಿತುಕೊಳ್ಳಬೇಕಾದದ್ದು ಯಾವದು ಇದೆ ?’’ ಎಂದು ಆಕ್ಷೇಪವನ್ನು ಮಾಡಿಕೊಂಡು “ಅವನು (ಹೀಗೆಂದು) ಹೇಳಬೇಕು. ಈ ಆಕಾಶವು ಎಷ್ಟು ಇದೆಯೋ ಈ ಹೃದಯದೊಳಗಿರುವ ಆಕಾಶವು ಅಷ್ಟಿದೆ ; ಇದರಲ್ಲಿ ದ್ಯಾವಾಪೃಥಿವಿಗಳೆರಡೂ ಒಳಗೇ ಇದ್ದುಕೊಂಡಿರುತ್ತವೆ….” (ಛಾಂ. ೮-೧-೨, ೩) ಎಂದು ಮುಂತಾಗಿ ಪ್ರತಿಸಮಾಧಾನ (ವನ್ನು ಹೇಳಿರುವ ವಾಕ್ಯ) ವಿದೆ. ಅಲ್ಲಿ (ಹೃದಯ) ಕಮಲದ ದಹರತ್ವದಿಂದ ಆಕಾಶಕ್ಕೂ ದಹರತ್ವವು ಬಂದೊದಗಲಾಗಿ ಪ್ರಸಿದ್ಧವಾದ ಆಕಾಶದ ಹೋಲಿಕೆಯಿಂದ (ಆ) ಅಲ್ಪತ್ವವನ್ನು ಅಲ್ಲಗಳೆದಿರುವದರಿಂದ (ಆ) ದಹರಾಕಾಶವು ಭೂತಾಕಾಶ ಎಂಬುದನ್ನು ಅಲ್ಲಗಳೆದಿದೆ ಎಂದು ನಿಶ್ಚಯವಾಗುತ್ತದೆ. ಆಕಾಶವೆಂಬ ಶಬ್ದವೇನೋ ಭೂತಾಕಾಶದಲ್ಲಿಯೇ ರೂಢವಾಗಿದೆ ; ಆದರೆ ಅದನ್ನೇ ಅದಕ್ಕೆ ಹೋಲಿಸುವದೆಂಬುದು ಹೊಂದುವಂತಿಲ್ಲವಾದ್ದರಿಂದ (ಈ ಆಕಾಶವು) ಭೂತಾಕಾಶವೆಂಬ ಶಂಕೆಯನ್ನು ಅಲ್ಲಗಳೆದಂತಾಗಿರುತ್ತದೆ.

(ಆಕ್ಷೇಪ) :- ಆಕಾಶವು ಒಂದೇ ಆಗಿದ್ದರೂ ಒಳಗಿರುವದು, ಹೊರಗಿರುವದು (ಎಂಬ ಕಾರಣದಿಂದ) ಕಲ್ಪಿತವಾಗಿರುವ ಭೇದವಿರುವದರಿಂದ (ಅದೂಂದಕ್ಕ) ಉಪಮಾನೋಪಮೇಯಭಾವವು ಆಗಬಹುದು ಎಂದು (ಪೂರ್ವಪಕ್ಷದಲ್ಲಿ) ಹೇಳಿಲ್ಲ !

(ಸಮಾಧಾನ) :- ಹೀಗಾಗಲಾರದು. ಕಲ್ಪಿತವಾದ ಭೇದವನ್ನು ಇಟ್ಟು, ಕೊಳ್ಳುವದೆಂಬುದಿದೆಯಲ್ಲ, ಇದು ಅಗತಿಕಗತಿಯು, ಇದಲ್ಲದ ಭೇದವನ್ನು ಕಲ್ಪಿಸಿ ದರೂ (ಕಲ್ಪಿತವಾದ ಆಕಾಶಗಳಿಗೆ) ಉಪಮಾನೋಪಮೇಯವನ್ನು ವರ್ಣಿಸುವವನ (ಪಕ್ಷದಲ್ಲಿ) ಒಳಗಿನ ಆಕಾಶವು ಪರಿಚಿನ್ನವಾಗಿರುವದರಿಂದ ಹೊರಗಿನ ಆಕಾಶದ ಪರಿಮಾಣವು (ಅದಕ್ಕೆ) ಹೊಂದಲಾರದು.

(ಪೂರ್ವಪಕ್ಷ) :- ಪರಮೇಶ್ವರನೂ “ಆಕಾಶಕ್ಕಿಂತ ದೊಡ್ಡವನು’ (ಶತ ಬ್ರಾ. ೧೦-೬-೩-೨) ಎಂದು ಶ್ರುತ್ಯಂತರವಿರುವದರಿಂದ ಆಕಾಶದ ಪರಿಮಾಣವು ಅವನಿಗೂ ಹೊಂದಲಾರದಲ್ಲ !

1.ದಹರಾಕಾಶವನ್ನೇ ಹುಡುಕಬೇಕೆಂದು ಇಲ್ಲಿ ವಿಧಿಸಿದೆ, ಅದಕ್ಕಿಂತ ಬೇರೆಯಾದದ್ದನ್ನಲ್ಲ.

2.ಹೃದಯಪುಂಡರೀವೇ ಸಣ್ಣದು, ಅದರಲ್ಲಿರುವ ಆಕಾಶವು ಇನ್ನೂ ಸಣ್ಣದು ; ಅದರಲ್ಲಿ ಹುಡುಕಿ ಅರಿತುಕೊಳ್ಳಬೇಕಾದದ್ದೇನಿದೆ ? - ಎಂದು ಆಕ್ಷೇಪ.

ಅಧಿ. ೫. ಸೂ. ೧೪] ದಹರಾಕಾಶವು ಜೀವನೂ ಅಲ್ಲ

೪೦೩

(ಸಿದ್ಧಾಂತ) :- ಇದೇನೂ ದೋಷವಲ್ಲ. (ಹೃದಯ)ಪುಂಡರೀಕದ ಸುತ್ತುಗಟ್ಟಿನಿಂದ ಬಂದೊದಗಿದ ದಹರತ್ವವನ್ನು ಅಲ್ಲಗಳೆಯುವದರಲ್ಲಿಯೇ (ಈ) ವಾಕ್ಯಕ್ಕೆ ತಾತ್ಪರ್ಯವೇ ಹೊರತು ಅಷ್ಟೇ (ಪರಿಮಾಣದವನೆಂದು) ಹೇಳುವದರಲ್ಲಿ ತಾತ್ಪರ್ಯವಿಲ್ಲ. ಏಕೆಂದರೆ ಎರಡನ್ನೂ ಹೇಳಿದರೆ ವಾಕ್ಯವು ಭಿನ್ನವಾಗುವದು.’

ಇದಲ್ಲದೆ ಕಲ್ಪಿತವಾದ ಭೇದವುಳ್ಳ (ಹೃದಯ) ಪುಂಡರೀಕವು ಸುತ್ತುಗಟ್ಟಿರುವ ಆಕಾಶದ ಒಂದು ಭಾಗದಲ್ಲಿ ದ್ಯಾವಾಪೃಥಿವ್ಯಾದಿಗಳು ಒಳಗಿದ್ದುಕೊಂಡಿರುವದು ಹೊಂದುವದಿಲ್ಲ. “ಈತನೇ ಆತ್ಮನು, ಪಾಪರಹಿತನು, ಮುಪ್ಪಿಲ್ಲದವನು, ಸಾವಿಲ್ಲ ದವನು, ಶೋಕವಿಲ್ಲದವನು, ಹಸಿವಿಲ್ಲದವನು, ನೀರಡಿಕೆಯಿಲ್ಲದವನು, ಸತ್ಯ ಕಾಮನು, ಸತ್ಯಸಂಕಲ್ಪನು….” (ಛಾಂ. ೮-೧-೫) ಎಂದು (ಹೇಳಿರುವ) ಆತ್ಮತ್ವ, ಅಪಹಪಾಹ್ಮತ್ವ - ಮುಂತಾದ ಗುಣಗಳೂ ಭೂತಾಕಾಶಕ್ಕೆ ಹೊಂದುವದಿಲ್ಲ.

ದಹರಾಕಾಶವು ಜೀವನೂ ಅಲ್ಲ

(ಭಾಷ್ಯ) ೨೫೭. ಯದ್ಯಪಿ ಆತ್ಮಶಬ್ಲೂ ಜೀವೇ ಸಂಭವತಿ ತಥಾಪಿ ಇತರೇಭ್ಯಃ ಕಾರಣೀಭೋ ಜೀವಾಶಜ್ಯಾಪಿ ನಿವರ್ತಿತಾ ಭವತಿ | ನ ಹಿ ಉಪಾಧಿಪರಿಚಿನ್ನಸ್ಯ ಆರಾಗೋಪಮಿತಸ್ಯ ಜೀವಸ್ಯ ಪುಣ್ಡರೀಕವೇಷ್ಟನಕೃತಂ ದಹರತ್ವಂ ಶಕ್ಯಂ ನಿವರ್ತಯಿತುಮ್ (ಬ್ರಹ್ಮಾಭೇದವಿವಕ್ಷಯಾ ಜೀವಸ್ಯ ಸರ್ವಗತತ್ವಾದಿ ವಿವಕ್ಷೇತ ಇತಿ ಚೇತ್ | ಯದಾತ್ಮತಯಾ ಜೀವಸ್ಯ ಸರ್ವಗತತ್ವಾದಿ ವಿವಕ್ಷೇತ ತವ ಬ್ರಹ್ಮಣಃ ಸಾಕ್ಷಾತ್ ಸರ್ವಗತತ್ವಾದಿ ವಿವಕ್ಷತಾಮ್ ಇತಿ ಯುಕ್ತಮ್ | ಯದಪ್ಪಕ್ತಮ್ ಬ್ರಹ್ಮಪುರಮ್ ಇತಿ ಜೀವೇನ ಪುರಸ್ಯ ಉಪಲಕ್ಷಿತತ್ವಾತ್ ರಾಜ್ಯ ಇವ ಜೀವವೇದಂ ಪುರಸ್ವಾಮಿನಃ ಪುರೈಕದೇಶವರ್ತಿತ್ವಮ್ ಅಸ್ತು ಇತಿ, ಅತ್ರ ಬೂಮಃ | ಪರಸ್ಯವ ಇದಂ ಬ್ರಹ್ಮಣಃ ಪುರಂ ಸತ್‌ ಶರೀರಂ ಬ್ರಹ್ಮಪುರಮ್ ಇತ್ಯುಚ್ಯತೇ | ಬ್ರಹ್ಮಶಬ್ದಸ್ಯ ತಸ್ಮಿನ್ ಮುಖ್ಯತ್ವಾತ್ | ತಸ್ಯಾಪಿ ಅಸ್ತಿ ಪುರೇಣ ಅನೇನ ಸಂಬದ್ಧ: | ಉಪಲಬ್ಬಧಿಷ್ಠಾನ ತ್ವಾತ್ 1ಸಏತಸ್ಮಾಜೀವಘನಾತ್ ಪರಾತ್ಪರಂ ಪುರಿಶಯಂ ಪುರುಷಮೀಕ್ಷತೇ” (ಪ್ರ. ೫-೫) “ಸ ವಾ ಅಯಂ ಪುರುಷಃ ಸರ್ವಾಸು ಪೂರ್ಮ ಪುರಿಶಯಃ’ (ಬೃ. ೨-೫-೧೮) ಇತ್ಯಾದಿಶ್ರುತಿಭ್ಯಃ | ಅಥವಾ ಜೀವಪುರ ಏವ ಅಸ್ಮಿನ್ ಬ್ರಹ್ಮ ಸಂನಿಹಿತಮ್

  1. ಒಂದು ವಾಕ್ಯಕ್ಕೆ ಒಂದರಲ್ಲಿ ತಾತ್ಪರ್ಯವಿರಬೇಕು ; ಏಕವಾಕ್ಯವು ಕೂಡುತ್ತಿರುವಲ್ಲಿ ಎರಡು ಬೇರೆಬೇರೆಯ ವಾಕ್ಯಗಳೆಂದು ಕಲ್ಪಿಸುವದು ದೋಷವು ಎಂದು ಮಾಮಾಂಸಕರು ಹೇಳುತ್ತಾರೆ.

೪೦೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಉಪಲಕ್ಷತೇ | ಯಥಾ ಶಾಲಗ್ರಾಮೇ ವಿಷ್ಟು: ಸಂನಿಹಿತ ಇತಿ ತದ್ವತ್ | ತದಥೇಹ ಕರ್ಮಜಿತೋ’ ಲೋಕಃ ಕ್ಷೀಯತ ಏವಮೇವಾಮುತ್ರ ಪುಣ್ಯಜಿತೋ ಲೋಕಃ ಕ್ಷೀಯತೇ” (ಛಾಂ. ೮-೧-೬) ಇತಿ ಚ ಕರ್ಮಣಾಮ್ ಅನ್ತವತ್ಸಲತ್ವಮ್ ಉಕ್ಕಾ “ಅಥ ಯ ಇಹಾತ್ಮಾನಮನುವಿದ್ಯ ವಜತಾಂಶ್ಚ ಸತ್ಯಾನ್ ಕಾಮಾಂಸ್ತೇಷಾಂ ಸರ್ವೆಷು ಲೋಕೇಷು ಕಾಮಚಾರೋ ಭವತಿ” (ಛಾಂ. ೮-೧-೬) ಇತಿ ಪ್ರಕೃತದಹರಾಕಾಶವಿಜ್ಞಾನಸ್ಯ ಅನನ್ಯಫಲತ್ವಂ ವದನ್ ಪರಮಾತ್ಮತ್ವಮ್ ಅಸ್ಯ ಸೂಚಯತಿ ||

(ಭಾಷ್ಯಾರ್ಥ) ಆತ್ಮನೆಂಬ ಶಬ್ದವೇನೋ ಜೀವನಿಗೆ ಆಗಬಹುದಾದರೂ ಉಳಿದ ಕಾರಣ ಗಳಿಂದ (ದಹರಾಕಾಶವು) ಜೀವನೆಂಬ ಆಶಂಕೆಯನ್ನು ತೊಲಗಿಸಿದಂತೆ ಆಗುತ್ತದೆ. ಉಪಾಧಿಪರಿಚ್ಛಿನ್ನನಾಗಿ (ಶ್ರುತಿಯು) ದಬ್ಬಳದ ತುದಿಗೆ ಹೋಲಿಸಿರುವ ಜೀವನಿಗೆ (ಹೃದಯ) ಪುಂಡರೀಕದ ಸುತ್ತುಗಟ್ಟಿನಿಂದ ಆಗಿರುವ ದಹರತ್ವವನ್ನು ಕಳೆಯುವದು ಆಗುವದೇ ಇಲ್ಲ.

(ಆಕ್ಷೇಪ) :- ಜೀವನು ಬ್ರಹ್ಮಕ್ಕಿಂತ ಬೇರೆಯಲ್ಲವೆಂಬುದನ್ನು ತಿಳಿಸುವದಕ್ಕಾಗಿ (ಅವನು) ಸರ್ವಗತನೆಂದು ಮುಂತಾಗಿ ಹೇಳಬಹುದಲ್ಲ !

(ಪರಿಹಾರ) :- ಯಾವದರ ಸ್ವರೂಪದಿಂದ ಜೀವನಿಗೆ ಸರ್ವಗತತ್ವಾದಿಗಳನ್ನು ಹೇಳಬೇಕೋ ಅದೇ ಬ್ರಹ್ಮಕ್ಕೆ ನೇರಾಗಿಯೇ ಸರ್ವಗತತ್ವಾದಿಗಳನ್ನು ಹೇಳುವದಕ್ಕೆ ಬಂದಿದೆ ಎಂದಾಗುವದೇ ಯುಕ್ತವು.

ಇನ್ನು ಬ್ರಹ್ಮಪುರವೆಂಬಲ್ಲಿ ಜೀವನಿಂದೊಡಗೂಡಿಯೇ ಪುರವು ಕಂಡುಬರು ತಿರುವದರಿಂದ ರಾಜನಂತ ಪುರದೊಡೆಯನಾದ ಜೀವನೇ ಪುರದ ಒಂದು ಕಡೆ ಯಲ್ಲಿರುವನೆಂದು (ಹೇಳುವ ವಾಕ್ಯ)ವಿದು ಎಂದಾಗಲಿ ಎಂದು (ಭಾ. ಭಾ. ೨೫೪ ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ, ಅದಕ್ಕೆ ಹೇಳುತ್ತೇವೆ. ಪರಬ್ರಹ್ಮ ಪುರ ವಾಗಿರುವದರಿಂದ ಈ ಶರೀರವನ್ನು ಬ್ರಹ್ಮಪುರವೆಂದು ಕರೆದಿದೆ (ಎನ್ನಬೇಕು).

  1. ಇದು ಉಪನಿಷತ್ತಿನಲ್ಲಿರುವ ಪಾಠ ; ಅಲ್ಲಿ ‘ಕರ್ಮಚಿತೋ’ ಎಂದಿಲ್ಲ. . 2. ಜೀವನಿಗೆ ಸೇರಿದ್ದು ಶರೀರವು ಎಂದು ಗೊತ್ತಿರುವದರಿಂದ ಬ್ರಹ್ಮಪುರವೆಂಬ ಮಾತನ್ನು ಜೀವನ ಪುರ ಎಂಬರ್ಥದಲ್ಲಿ ತೆಗೆದುಕೊಳ್ಳಬೇಕು. ಜೀವನು ಶರೀರವನ್ನು ಪೋಷಣೆಯಿಂದ ದೂಡ್ಡದುಮಾಡುವದರಿಂದ (ಬೃಂಹಣಾತ್) ಬ್ರಹ್ಮವನಿಸುವನು. ಬ್ರಹ್ಮಪುರವೆಂದರೆ ಜೀವ ಸ್ವಾಮಿಕವಾದ ಶರೀರವು ಎಂದರ್ಥ • ಎಂದು ಭಾವ.

ಅಧಿ. ೫. ಸೂ. ೧೪] ದಹರಾಕಾಶವು ಅನ್ನೇಷ್ಟ್ರವ್ಯವಲ್ಲವೆಂಬುದು ಸರಿಯಲ್ಲ ೪೦೫

ಏಕೆಂದರೆ ಬ್ರಹ್ಮಶಬ್ದವು ಅದರಲ್ಲಿ ಮುಖ್ಯವಾಗಿದೆ. ಆ (ಬ್ರಹ್ಮಕ್ಕೂ) ಈ ಪುರದ ಸಂಬಂಧವಿದೆ ; ಏಕೆಂದರೆ (ಅದನ್ನು) ಕಾಣುವದಕ್ಕೆ (ಇದು) ಸ್ಥಾನವಾಗಿರುತ್ತದೆ? “ಆತನು ಈ ಪರವಾದ ಜೀವಘನಕ್ಕಿಂತ ಪರನಾದ ಪುರಿಶಯನಾದ ಪುರುಷನನ್ನು ಕಾಣುತ್ತಾನೆ’ (ಪ್ರ. ೫-೫), “ಆ ಈ ಪುರುಷನು ಎಲ್ಲಾ ಪುರಗಳಲ್ಲಿಯೂ ಪುರಿ ಶಯನು’ (ಬೃ. ೨-೫-೧೮) ಮುಂತಾದ ಶ್ರುತಿಗಳಿಂದ (ಇದು ಸಿದ್ಧವಾಗಿರುತ್ತದ), ಅಥವಾ ಹೇಗೆ ಶಾಲಗ್ರಾಮದಲ್ಲಿ ವಿಷ್ಣುವು ಸಂನಿಹಿತವಾಗಿರುತ್ತಾನೋ ಹಾಗೆ ಈ ಜೀವಪುರದಲ್ಲಿಯೇ ಬ್ರಹ್ಮವು ಸಂನಿಹಿತವಾಗಿ ಕಂಡುಬರುತ್ತದೆ (ಎಂದೂ ಹೇಳ ಬಹುದು). ಅದು ಹೇಗೆಂದರೆ, ಹೇಗೆ ಇಲ್ಲಿ ಕರ್ಮಗಳಿಂದ ಗೆದ್ದುಕೊಂಡ ಲೋಕವು ಕ್ಷಯವಾಗುತ್ತದೆಯೋ ಹೀಗೆಯೇ ಅಲ್ಲಿ ಪುಣ್ಯಗಳಿಂದ ಗೆದ್ದುಕೊಂಡ ಲೋಕವು ಕ್ಷಯವಾಗುತ್ತದೆ.” (ಛಾಂ. ೮-೧-೬) ಎಂದು ಕರ್ಮಗಳಿಗೆ ಕೊನೆಗಾಣುವ ಫಲವನ್ನು ಹೇಳಿ “ಇನ್ನು ಯಾರು ಇಲ್ಲಿ ಆತ್ಮನನ್ನೂ ಈ ಸತ್ಯಕಾಮಗಳನ್ನೂ ಅನುವೇದನ ಮಾಡಿಕೊಂಡು ಹೋಗುವರೋ ಅವರಿಗೆ ಎಲ್ಲಾ ಲೋಕಗಳಲ್ಲಿಯೂ ಕಾಮಚಾರ ವಾಗುವದು’ (ಛಾಂ. ೮-೧-೬) ಎಂದು ಪ್ರಕೃತವಾಗಿರುವ ದಹರಾಕಾಶದ ಉಪಾಸನೆಗೆ ಅನಂತವಾದ ಫಲವಾಗುವದೆಂದು ಹೇಳುವದರಿಂದ ಈ (ಆಕಾಶವು) ಪರಮಾತ್ಮನೆಂದು (ಗುರುವು) ಸೂಚಿಸಿರುತ್ತಾನೆ.

ದಹರಾಕಾಶವು ಅನ್ನೇಷ್ಟ್ರವ್ಯವಲ್ಲವೆಂಬುದು ಸರಿಯಲ್ಲ

(ಭಾಷ್ಯ) | ೨೫೮. ಯದಪಿ ಏತದುಕ್ತಮ್ - ನ ದಹರಸ್ಯ ಆಕಾಶಸ್ಯ ಅನ್ನೇಷ್ಟ್ರವ್ಯತ್ವಂ ವಿಜಿಜ್ಞಾಸಿತವ್ಯತ್ವಂ ಚ ಶ್ರುತಮ್, ಪರವಿಶೇಷಣನ ಉಪಾದಾನಾತ್ ಇತಿ | ಅತ್ರ

  1. ಗೌಣಾರ್ಥಕ್ಕಿಂತ ಮುಖ್ಯಾರ್ಥವನ್ನು ತೆಗೆದುಕೊಳ್ಳುವದು ಉಚಿತ.

  2. ಬ್ರಹ್ಮದ ಪುರ ಎಂಬಲ್ಲಿ ಷಷ್ಠಿವಿಭಕ್ತಿಗೆ ಸ್ವಾಮಿಭಾವಸಂಬಂಧವೆಂಬರ್ಥವನ್ನೇ ತೆಗೆದುಕೊಳ್ಳಬೇಕೆಂಬ ನಿಯಮವೇನೂ ಇಲ್ಲ.ಬ್ರಹ್ಮದ ಸಾಕ್ಷಾತ್ಕಾರಕ್ಕೆ ತಕ್ಕ ಸ್ಥಾನ ಎಂಬರ್ಥವನ್ನೂ ಹೇಳಬಹುದು - ಎಂದು ಭಾವ.

  3. ಒಬ್ಬೊಬ್ಬರೂ ತಮ್ಮ ತಮ್ಮ ಹೃದಯದಲ್ಲಿ ಪರಮಾತ್ಮನಿರುವನೆಂದು ಕಂಡುಕೊಳ್ಳ ಬಹುದು ಎಂದು ಭಾವ.

  4. ಈ ಅರ್ಥದಲ್ಲಿ ಶರೀರವು ಜೀವನ ಪುರವೆಂದು ಒಪ್ಪಿಕೊಂಡರೂ ಬ್ರಹ್ಮಸನ್ನಿಧಿಯಿಂದ ಅದಕ್ಕೆ ಬ್ರಹ್ಮಸಂಬಂಧವು ಉಂಟು ಎಂದು ತಿಳಿಯುತ್ತದೆ.

  5. ಶ್ರುತ್ಯಾಚಾರ್ಯರ ಉಪದೇಶಕ್ಕೆ ಅನುಗುಣವಾದ ಅನುಭವಕ್ಕೆ ತಂದುಕೊಂಡು ಎಂದರ್ಥ.

೪೦೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಮಃ | ಯದಿ ಆಕಾಶೋ ನಾನ್ವೇಷ್ಟ್ರವ್ಯನ ಉಕ್ತಃ ಸ್ಯಾತ್, ‘‘ಯಾವಾನ್ ವಾ ಅಯಮಾಕಾಶಾವಾನೇನರ್ಹದಯ ಆಕಾಶಃ’ (ಛಾಂ. ೮-೧-೩) ಇತ್ಯಾದಿ ಆಕಾಶಸ್ವರೂಪಪ್ರದರ್ಶನಂ ನೋಪಯುಜ್ಯತೇ | ನನು ಏತದಪಿ ಅನ್ಯರ್ವತಿ್ರವಸ್ತು ಸದ್ಯಾವಪ್ರದರ್ಶನಾಯ್ಕವ ಪ್ರದರ್ಶ್ಯತೇ “ತಂ ಚೇದ್ ಬ್ರೂಯುರ್ಯದಿದಮಸ್ಮಿನ್ ಬ್ರಹ್ಮಪುರೇದಹರಂ ಪುಣ್ಡರೀಕಂವೇಹ್ಮದಹರೋಸ್ಮಿನ್ನನ್ತರಾಕಾಶಃ ಕಿಂತದತ್ರ ವಿದ್ಯತೇ ಯದನ್ನೇಷ್ಟ್ರವ್ಯಂ ಯಾವ ವಿಜಿಜ್ಞಾಸಿತವ್ಯಮ್’ (ಛಾಂ. ೮-೧-೨) ಇತ್ಯಾಕ್ಷಿಪ್ತ ಪರಿಹಾರಾವಸರೇ ಆಕಾಶೌಪದ್ಯೋಪಕ್ರಮೇಣ ದ್ಯಾವಾಪೃಥಿವ್ಯಾದೀನಾಮ್ ಅನ್ತಃಸಮಾಹಿತತ್ವದರ್ಶನಾತ್ | ನೃತದೇವಮ್ | ಏವಂ ಹಿ ಸತಿ ಯದನ್ನಃಸಮಾಹಿತಂ ದ್ಯಾವಾಪೃಥಿವ್ಯಾದಿ ತದನ್ನೇಷ್ಟ್ರವ್ಯಂ ವಿಜಿಜ್ಞಾಸಿತವ್ಯಂ ಚೋಕ್ತಂ ಸ್ಯಾತ್ | ತತ್ರ ವಾಕ್ಯಶೇಷೋ ನೋಪಪತ | “ಅಸ್ಮಿನ್ ಕಾಮಾಃ ಸಮಾಹಿತಾ ಏಷ ಆತ್ಮಾ ಅಪಹತಪಾಪ್ಪಾ” (ಛಾಂ. ೮-೧-೫) ಇತಿ ಹಿ ಪ್ರಕೃತಂ ದ್ಯಾವಾಪೃಥಿವ್ಯಾದಿ ಸಮಾಧಾನಾಧಾರಮ್ ಆಕಾಶಮ್ ಆಕ್ರಷ್ಯ ಅಥ ಯ ಇಹಾತ್ಮಾನಮನುವಿದ್ಯ ವ್ರಜನೇತಾಂಶ್ಚ ಸತ್ಯಾನ್ ಕಾಮಾನ್’’ (ಛಾಂ. ೮-೧-೬) ಇತಿ ಸಮುಚ್ಚಯಾರ್ಥನ ಚಶಬ್ದನ ಆತ್ಮಾನಂ ಕಾಮಾಧಾರಮ್ ಆಶ್ರಿತಾಂಶ್ಚ ಕಾಮಾನ್ ವಿಜೇಯಾನ್ ವಾಕ್ಯಶೇಷ ದರ್ಶಯತಿ | ತಸ್ಮಾತ್ ವಾಕ್ಕೋಪಕ್ರಮೇSಪಿ ದಹರ ಏವ ಆಕಾಶ ಹೃದಯಪುಣ್ಡರೀಕಾಧಿಷ್ಠಾನಃ ಸಹಾನಸ್ಥ ಸಮಾಹಿತೈಃ ಪೃಥಿವ್ಯಾದಿಭಿಃ ಸತ್ಯ ಕಾಮ್ಯರ್ವಿಜ್ಞೆಯ ಉಕ್ತಃ ಇತಿ ಗಮ್ಮತೇ 1 ಸ ಚ ಉಕ್ರೇಬ್ರೂ ಹೇತುಭ್ಯಃ ಪರಮೇಶ್ವರ ಇತಿ ||

(ಭಾಷ್ಮಾರ್ಥ) ಇನ್ನು “ದಹರಾಕಾಶವನ್ನು ಹುಡುಕಬೇಕೆಂದಾಗಲಿ ಅರಿತುಕೊಳ್ಳಬೇಕೆಂದಾಗಲಿ ಶ್ರುತಿಯಲ್ಲಿ ಹೇಳಿಲ್ಲ ; ಏಕೆಂದರೆ ಅದನ್ನು ಮತ್ತೊಂದಕ್ಕೆ ವಿಶೇಷಣವಾಗಿ ತೆಗೆದು ಕೊಂಡಿದ” ಎಂಬದನ್ನು (ಭಾ. ಭಾ. ೨೫೫ ಪೂರ್ವಪಕ್ಷದಲ್ಲಿ ) ಹೇಳಿತ್ತಷ್ಟ, ಅದಕ್ಕೆ ಹೇಳುತ್ತೇವೆ : ಆಕಾಶವನ್ನು ಹುಡುಕಬೇಕೆಂದು ಹೇಳಿಲ್ಲವಾದರೆ “ಈ ಆಕಾಶವು ಎಷ್ಟಿರುವದೋ ಈ ಹೃದಯದೊಳಗಿನ ಆಕಾಶವೂ ಅಷ್ಟೇ” (ಛಾಂ. ೮-೧-೩) ಎಂದು ಮುಂತಾಗಿ ಆಕಾಶಸ್ವರೂಪವನ್ನು ತಿಳಿಸಿರುವದು ಉಪಯೋಗಕ್ಕೆ ಬರುವದಿಲ್ಲ.

(ಪೂರ್ವಪಕ್ಷಿ) :- ಇದನ್ನೂ ಒಳಗಿರುವ ವಸ್ತು (ನಿಜವಾಗಿ) ಇದೆ ಎಂದು ತಿಳಿಸುವದಕ್ಕಾಗಿಯೇ ತಿಳಿಸಿರುತ್ತದೆ (ಎನ್ನಬಹುದಲ್ಲ) ! ಏಕೆಂದರೆ ಆ (ಆಚಾರ್ಯನನ್ನು ಕುರಿತು ಶಿಷ್ಯರು) ಈ ಬ್ರಹ್ಮಪುರದಲ್ಲಿರುವ ಈ ದಹರವಾದ ಪುಂಡರೀಕವೇಶ್ಯವಿದೆಯಲ್ಲ, ಇದರೊಳಗೆ ದಹರವಾದ ಆಕಾಶವಿದೆಯಷ್ಟ, ಅಲ್ಲಿ

ಅಧಿ. ೫. ಸೂ. ೧೫] ದಹರಾಕಾಶವು ಬ್ರಹ್ಮವೇ ಎಂಬುದಕ್ಕೆ ಹೇತುಗಳು

೪೦೭

ಹುಡುಕಬೇಕಾದದ್ದಾಗಲಿ ಅರಿತುಕೊಳ್ಳಬೇಕಾದದ್ದಾಗಲಿ ಅಂಥದ್ದು ಏನಿದೆ ? - ಎಂದು ಕೇಳಿದರೆ’’ (ಛಾಂ. ೮-೧-೨) ಎಂದು ಆಕ್ಷೇಪಿಸಿ ಪರಿಹರಿಸುವ ಸಮಯದಲ್ಲಿ ಆಕಾಶದ ಹೋಲಿಕೆಯನ್ನು ಪ್ರಾರಂಭಿಸಿ ದ್ಯಾವಾಪೃಥಿವ್ಯಾದಿಗಳು ಒಳಗೆ ಇರುತ್ತವೆ ಎಂದು ತಿಳಿಸಿರುತ್ತದೆ.

(ಸಿದ್ಧಾಂತಿ) :- ಇದು ಹಾಗಲ್ಲ. ಏಕೆಂದರೆ ಈ ಪಕ್ಷದಲ್ಲಿ ದ್ಯಾವಾಪೃಥಿವಿಯೇ ಮುಂತಾಗಿ ಯಾವದು ಒಳಗೆ ಇದೆಯೋ ಅದನ್ನು (ಮಾತ್ರ) ಹುಡುಕಬೇಕು ಮತ್ತು ಅರಿತುಕೊಳ್ಳಬೇಕು - ಎಂದು ಹೇಳಿದಂತೆ ಆಗುವದು. ಆಗ ವಾಕ್ಯಶೇಷವು ಹೊಂದದ ಹೋಗುವದು. ಏಕೆಂದರೆ ಇದರಲ್ಲಿ ಕಾಮಗಳು ಇರುತ್ತವೆ. ಈತನು ಆತ್ಮನು, ಅಪಹಪಾಹ್ಮನು’ (ಛಾಂ. ೮-೧-೫) ಎಂದು ಪ್ರಕೃತವಾಗಿರುವ ದ್ಯಾವಾಪೃಥಿವ್ಯಾದಿ ಗಳಿರುವದಕ್ಕೆ ಆಧಾರವಾಗಿರುವ ಆಕಾಶವನ್ನು ಎಳೆದುಕೊಂಡು ಇನ್ನು ಯಾರು ಇಲ್ಲಿ ಆತ್ಮನನ್ನೂ ಈ ಸತ್ಯಕಾಮಗಳನ್ನೂ ಅನುವೇದನಮಾಡಿಕೊಂಡು ಹೋಗುವರೋ’’ (ಛಾಂ. ೮-೧-೬) ಎಂದು ಸಮುಚ್ಚಯಾರ್ಥಕವಾದ ಚಶಬ್ದದಿಂದ ಕಾಮಾಧಾರನಾದ ಆತ್ಮನನ್ನೂ (ಅವನನ್ನು) ಆಶ್ರಯಿಸಿಕೊಂಡಿರುವ ಕಾಮಗಳನ್ನೂ ಅರಿತುಕೊಳ್ಳ ಬೇಕೆಂದು ವಾಕ್ಯಶೇಷದಲ್ಲಿ ತಿಳಿಸಿರುತ್ತದೆ. ಆದ್ದರಿಂದ ವಾಕ್ಯದ ಉಪಕ್ರಮದಲ್ಲಿಯೂ ಹೃದಯಪುಂಡರೀಕವೆಂಬ ಅಧಿಷ್ಠಾನದಲ್ಲಿರುವ ದಹರವೆಂಬ ಆಕಾಶವನ್ನೇ ಅದ ರೊಳಗಿರುವ ಪೃಥಿವ್ಯಾದಿಗಳೆಂಬ ಸತ್ಯಕಾಮಗಳೊಡನೆ ಅರಿತುಕೊಳ್ಳಬೇಕೆಂದು ಹೇಳಿದೆ’ ಎಂದು ನಿಶ್ಚಯವಾಗುತ್ತದೆ. ಅವನು ಆ (ಆಕಾಶವು) ಹಿಂದೆ ಹೇಳಿರುವ ಕಾರಣಗಳಿಂದ ಪರಮೇಶ್ವರನೇ.

ದಹರಾಕಾಶವು ಬ್ರಹ್ಮವೇ ಎಂಬುದಕ್ಕೆ ಹೇತುಗಳು

ಗತಿಶಬ್ದಾಭ್ಯಾಂ ತಥಾ ಹಿ ದೃಷ್ಟಂ ಲಿಜ್ಞಂ ಚ ||೧೫|| ೧೫. ಗತಿಶಬ್ದಗಳಿರುವದರಿಂದ (ದಹರಾಕಾಶವು ಬ್ರಹ್ಮವು). ಹೀಗೆ ಕಂಡುಬಂದಿದೆ, (ಇದು) ಲಿಂಗವೂ ಆಗಿದೆ.

1.ಆತ್ಮನನ್ನೂ ಕಾಮಗಳನ್ನೂ ಅರಿತುಕೊಂಡು ಹೋಗುವವರಿಗೆ ಇಲ್ಲಿ ಫಲವನ್ನು ಹೇಳಿದೆ.

  1. ಅದರೊಳಗಿರುವದನ್ನು ಎಂದರೆ ಆ ಹೃದಯಪುಂಡರೀಕದಲ್ಲಿರುವದನ್ನು ಎಂದರ್ಥ ; ಆಕಾಶವನ್ನೂ ಅದರಲ್ಲಿರುವ ದ್ಯಾವಾಪೃಥಿವ್ಯಾದಿಗಳನ್ನೂ ಅರಿತುಕೊಳ್ಳಬೇಕೆಂಬುದೇ ಉಪಕ್ರಮವಾಕ್ಯದ ಅರ್ಥವೆಂಬುದನ್ನು ‘ಆತ್ಮಾನಮನುವಿದ್ಯ’ ಎಂಬ ವಾಕ್ಯಶೇಷದ ಬಲದಿಂದ ಗೊತ್ತುಪಡಿಸಬೇಕು.

goes

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಭಾಷ್ಯ) ೨೫೯. ದಹರಃ ಪರಮೇಶ್ವರಃ ಉತ್ತರೇಯ್ಯೋ ಹೇತುಭ್ಯ: ಇತ್ಯುಕ್ತಮ್ | ತ ಏವೋತ್ತರೇ ಹೇತವ ಇದಾನೀಂ ಪ್ರಪಞ್ಚ | ಇತಶ್ಚ ಪರಮೇಶ್ವರ ಏವ ದಹರಃ | ಯಸ್ಮಾತ್ ದಹರವಾಕ್ಯಶೇಷ ಪರಮೇಶ್ವರಸ್ಯವ ಪ್ರತಿಪಾದಕೆ ಗತಿಶಬ್ದ ಭವತಃ | “ಇಮಾಃ ಸರ್ವಾಃ ಪ್ರಜಾ ಅಹರಹರ್ಗಚ್ಛನ್ನ ಏತಂ ಬ್ರಹ್ಮಲೋಕಂ ನ ವಿನ್ನ” (ಛಾಂ. ೮-೩-೨) ಇತಿ | ತತ್ರ ಪ್ರಕೃತಂ ದಹರಂ ಬ್ರಹ್ಮಲೋಕಶಬ್ದನ ಅಭಿಧಾಯ ತದ್ವಿಷಯಾ ಗತಿಃ ಪ್ರಜಾಶಬ್ದ ವಾಚ್ಯಾನಾಂ ಜೀವಾನಾಮ್ ಅಭಿಧೀಯಮಾನಾ ದಹರಸ್ಯ ಬ್ರಹ್ಮತಾಂ ಗಮಯತಿ | ತಥಾ ಹಿ ಅಹರಹರ್ಜಿವಾನಾಂ ಸುಷುಪ್ತಾವಸ್ಟಾಯಾಂ ಬ್ರಹ್ಮವಿಷಯಂ ಗಮನಂ ದೃಷ್ಟಂ ಶ್ರುತ್ಯನ್ನರೇ |‘ಸತಾ ಸೋಮ್ಯ ತದಾ ಸಂಪನ್ನೋ ಭವತಿ’’ (ಛಾಂ. ೬-೮-೧) ಇವಮಾದ್ | ಲೋಕೇಪಿ ಕಿಲ ಗಾಢಂ ಸುಷುಪ್ತಮ್ ಆಚಕ್ಷತೇ ಬ್ರಹ್ಮಭೂತೋ ಬ್ರಹ್ಮತಾಂ ಗತಃ ಇತಿ | ತಥಾ ಬ್ರಹ್ಮಲೋಕಶಬ್ಲೂಪಿ ಪ್ರಕೃತೇ ದಹರೇ ಪ್ರಯುಜ್ಯಮಾನಃ ಜೀವಭೂತಾಕಾಶಶಾಂನಿವರ್ತಯನ್ ಬ್ರಹ್ಮತಾಮ್ ಅಸ್ಯ ಗಮಯತಿ | ನನು ಕಮಲಾಸನಲೋಕಮಪಿ ಬ್ರಹ್ಮಲೋಕಶಬ್ಲೂ ಗಮಯೇತ್ | ಗಮಯೇತ್ ಯದಿ ಬ್ರಹ್ಮಣೋ ಲೋಕಃ ಇತಿ ಷಷ್ಠಿಸಮಾಸವೃತ್ತಾ ವ್ಯುತ್ಪಾದೈತ | ಸಾಮಾನಾಧಿಕರಣ್ಯವೃತ್ತಾ ತು ವ್ಯುತ್ಪಾದ್ಯಮಾನಃ ಬ್ರಹ್ಮವ ಲೋಕೋ ಬ್ರಹ್ಮಲೋಕಃ ಇತಿ ಪರಮೇವ ಬ್ರಹ್ಮ ಗಮಯಿಷ್ಯತಿ 1 ಏತದೇವ ಚ ಅಹರಹಬ್ರ್ರಹ್ಮಲೋಕಗಮನಂ ದೃಷ್ಟಂ ಬ್ರಹ್ಮಲೋಕಶಬ್ದಸ್ಯ ಸಾಮಾನಾಧಿಕರಣ್ಯ ವೃತ್ತಿಪರಿಗ್ರಹೇ ಲಿಜ್ಮ್ | ನ ಹಿ ಅಹರಹಃ ಇಮಾಃ ಪ್ರಜಾಃ ಕಾರ್ಯಬ್ರಹ್ಮಲೋಕಂ ಸತ್ಯಲೋಕಾಖ್ಯಂ ಗಚ್ಚ ಇತಿ ಶಕ್ಯಂ ಕಲ್ಪಯಿತುಮ್ ||

(ಭಾಷ್ಯಾರ್ಥ) ಮುಂದೆ (ಹೇಳಿರುವ) ಹೇತುಗಳಿಂದದಹರ(ವಾದ ಆಕಾಶವು) ಪರಮೇಶ್ವರನೇ ಎಂದು ಹೇಳಿತ್ತು. ಅದೇ ಮುಂದಿನ ಹೇತುಗಳನ್ನು ಈಗ ವಿವರಿಸುತ್ತಾರೆ. ಈ (ಕಾರಣ)ದಿಂದಲೂ ದಹರವು ಪರಮೇಶ್ವರನೇ ; ಏಕೆಂದರೆ ಈ ಪ್ರಜೆಗಳೆಲ್ಲರೂ ದಿನದಿನವೂ ಹೋಗುತ್ತಿದ್ದರೂ ಈ ಬ್ರಹ್ಮಲೋಕವನ್ನು ಪಡೆಯದೆ ಇರುವರು’’ (ಛಾಂ. ೮-೩-೨) ಎಂದು ದಹರವಾಕ್ಯದ ಶೇಷದಲ್ಲಿ ಪರಮೇಶ್ವರನನ್ನು ಹೇಳುವ ಗತಿಶಬ್ದಗಳಿರುತ್ತವೆ. ಇಲ್ಲಿ ಪ್ರಕೃತವಾದ ದಹರವನ್ನು ಬ್ರಹ್ಮಲೋಕವೆಂಬ ಶಬ್ದದಿಂದ ಹೇಳಿ ಅದರ ವಿಷಯವಾದ ಗತಿಯನ್ನು ಪ್ರಜಾಶಬ್ದ ವಾಚ್ಯರಾಗಿರುವ ಜೀವರಿಗೆ

  1. ಗತಿಯೂ ಶಬ್ದವೂ ಇವೆ. ಇವನ್ನು ಮುಂದೆ ವಿವರಿಸಿದೆ.

ಅಧಿ. ೫. ಸೂ. ೧೫] ದಹರಾಕಾಶವು ಬ್ರಹ್ಮವೇ ಎಂಬುದಕ್ಕೆ ಹೇತುಗಳು

೪೦೯

ಹೇಳಿರುವದರಿಂದ ದಹರವು, ಬ್ರಹ್ಮವೆಂದು ಗೊತ್ತುಪಡಿಸಿಕೊಡುತ್ತದೆ. ಇದಕ್ಕನು ಗುಣವಾಗಿ “

ಸೋನೆ ಆಗ ಸತ್ತಿನೊಡನೆ ಸೇರಿದವನಾಗುತ್ತಾನೆ’ (ಛಾಂ. ೬-೮-೧) ಎಂದು ಮುಂತಾಗಿರುವ ಮತ್ತೊಂದು ಶ್ರುತಿ (ವಚನ)ದಲ್ಲಿ ಸುಷುಪ್ತಾವಸ್ಥೆಯಲ್ಲಿ ಜೀವರಿಗೆ ದಿನದಿನವೂ ಬ್ರಹ್ಮವಿಷಯವಾದ ಗಮನವನ್ನು (ಹೇಳಿರುವದು) ಕಂಡು ಬಂದಿದೆ. ಲೋಕದಲ್ಲಿಯೂ ಗಾಢವಾಗಿ ನಿದ್ರಿಸುತ್ತಿರುವವನನ್ನು ಬ್ರಹ್ಮಭೂತ ನಾದನು, ಬ್ರಹ್ಮತ್ವವನ್ನು ಹೊಂದಿದನು ಎಂದು ಹೇಳುತ್ತಾರಲ್ಲವ ?

ಇದರಂತೆ ಬ್ರಹ್ಮಲೋಕ ಎಂಬ ಶಬ್ದವೂ ಪ್ರಕೃತವಾದ ದಹರದಲ್ಲಿ ಪ್ರಯುಕ್ತವಾಗಿರುವದರಿಂದ, (ಇದು) ಜೀವ ಅಥವಾ ಭೂತಾಕಾಶ - (ಎಂಬಿವುಗಳಲ್ಲಿ ಒಂದಾಗಿರಬೇಕೆಂಬ) ಶಂಕೆಯನ್ನು ತೊಲಗಿಸಿ ಈ (ಆಕಾಶವು) ಬ್ರಹ್ಮವಾಗಿರಬೇಕೆಂದು ಗೊತ್ತುಪಡಿಸಿಕೊಡುತ್ತದೆ.*

(ಆಕ್ಷೇಪ) :- ಬ್ರಹ್ಮಲೋಕವೆಂಬ ಶಬ್ದವು ಕಮಲಾಸನ (ಬ್ರಹ್ಮನ) ಲೋಕ ವನ್ನು ತಿಳಿಸಬಹುದಲ್ಲ !

(ಪರಿಹಾರ) :- ಬ್ರಹ್ಮನ ಲೋಕವು’ ಎಂದು ಷಷ್ಠಿಸಮಾಸವೃತ್ತಿಯಿಂದ (ಈ ಶಬ್ದದ) ವ್ಯುತ್ಪತ್ತಿಯನ್ನು ಮಾಡುವದಾದರೆ (ಅದು ಕಮಲಾಸನಲೋಕವನ್ನೂ) ತಿಳಿಸಬಹುದು. ಆದರೆ ‘ಬ್ರಹ್ಮವೆಂಬ ಲೋಕವು’ ಬ್ರಹ್ಮಲೋಕವು ಎಂದು ಸಾಮಾನಾಧಿಕರಣ್ಯವೃತ್ತಿಯಿಂದ ವ್ಯುತ್ಪತ್ತಿಯನ್ನು ಮಾಡಿದರೆ ಪರಬ್ರಹ್ಮವನ್ನೇ ತಿಳಿಸುತ್ತದೆ. ಪ್ರತಿದಿನವೂ ಬ್ರಹ್ಮಲೋಕಕ್ಕೆ ಆಗಮಿಸುವರೆಂದು (ಶ್ರುತಿಯಲ್ಲಿ)

  1. ಬ್ರಹ್ಮಲೋಕಕ್ಕೆ ಜೀವರು ಹೋಗುತ್ತಾರೆಂದು ಗತಿಯನ್ನು ಹೇಳಿದೆ ; ಆದ್ದರಿಂದ ಬ್ರಹ್ಮಲೋಕವೆಂಬ ಈ ದಹರಾಕಾಶವು ಜೀವರಿಗಿಂತ ಬೇರೆಯಾದ ಬ್ರಹ್ಮವು ಎಂದಾಯಿತು.

  2. ‘ದೃಷ್ಟಮ್’ ಎಂಬ ಸೂತ್ರಸ್ಥಶಬ್ದದ ವಿವರಣೆಯಿದು. ಸುಷುಪ್ತಿಕಾಲಕ್ಕೆ ಸತ್ತಿನಲ್ಲಿ ಸೇರಿದವನಾಗುತ್ತಾನೆ ಎಂಬಲ್ಲಿ ಸದೃಹ್ಮವನ್ನು ಹೇಳಿರುವದು ಕಂಡುಬಂದಿದೆ ; ಆದ್ದರಿಂದ ಈ ಉಪಾಸನಾವಾಕ್ಯದಲ್ಲಿಯೂ ಸುಷುಪ್ತಿಕಾಲಕ್ಕೆ ಸೇರುವನೆಂಬ ದಹರವು ಸದೃಹ್ಮವೇ ಎನ್ನಬೇಕು - ಎಂದು ಭಾವ. ಜೇಯವಾಕ್ಯದಲ್ಲಿ ಹೇಳುವ ಬ್ರಹ್ಮಕ್ಕೂ ಉಪಾಸನಾವಾಕ್ಯದಲ್ಲಿ ಹೇಳುವ ಬ್ರಹ್ಮಕ್ಕೂ ಸ್ವರೂಪದಲ್ಲಿ ಯಾವ ತಾರತಮ್ಯವೂ ಇರುವದಿಲ್ಲ. ಪೀಠಿಕೆಯನ್ನು ನೋಡಿ.

  3. ಆಚಾರ್ಯರ ಕಾಲದಲ್ಲಿ ಹೀಗಂದು ಶಿಷ್ಯರು ಹೇಳಿಕೊಳ್ಳುತ್ತಿದ್ದರೆಂದು ತೋರುತ್ತದೆ. ಲೋಕವ್ಯವಹಾರವು ಹೀಗೆಯೇ ದೃಷ್ಟವಾಗಿದೆ - ಎಂದು ಸೂತ್ರಭಾಗಕ್ಕೆ ಇಲ್ಲಿ ಅರ್ಥಮಾಡಿ

ದಂತಾಯಿತು.

  1. ಗತಿಯನ್ನು ಹೇಳಿರುವದಲ್ಲದೆ ಬ್ರಹ್ಮಲೋಕವೆಂಬ ಶಬ್ದವನ್ನು ಪ್ರಯೋಗಿಸಿರುವದೂ ದಹರವು ಬ್ರಹ್ಮವೆಂಬುದಕ್ಕೆ ಲಿಂಗವು, ಭಾಷ್ಯದಲ್ಲಿರುವ ‘ಗಮಯತಿ’ ಎಂಬ ಮಾತು ಸೂತ್ರದ ‘ಲಿಂಗಮ್’ ಎಂಬ ಶಬ್ದವನ್ನು ಸೂಚಿಸುತ್ತದೆ ಎನ್ನಬಹುದು.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಕಂಡುಬಂದಿರುವ ಇದೇ ಬ್ರಹ್ಮಲೋಕಶಬ್ದಕ್ಕೆ ಸಾಮಾನಾಧಿಕರಣ್ಯವೃತ್ತಿಯನ್ನು ತೆಗೆದುಕೊಳ್ಳಬೇಕೆಂಬುದಕ್ಕೆ ಲಿಂಗವಾಗಿರುತ್ತದೆ, ಏಕೆಂದರೆ ದಿನದಿನವೂ ಈ ಪ್ರಜೆ ಗಳು ಸತ್ಯಲೋಕವೆಂಬ ಕಾರ್ಯಬ್ರಹ್ಮಲೋಕಕ್ಕೆ ಹೋಗುತ್ತಾರೆಂದು ಕಲ್ಪಿಸುವದು ಆಗಲಾರದು.

ಧೃತೇಶ್ಚ ಮಹಿಮೈಸ್ಕಾಸ್ಮಿನ್ನುಪಲಬ್ಧಃ ||೧೬|| ೧೬. ಧೃತಿ ಎಂಬ ಮಹಿಮೆಯಿಂದಲೂ (ದಹರವು ಪರಮೇಶ್ವರನೇ) ; ಏಕೆಂದರೆ ಅದು ಈತನಲ್ಲಿ ಕಾಣಬರುತ್ತಿದೆ.

(ಭಾಷ್ಯ) ೨೬೦. ಧೃತೇಶ್ಚ ಹೇತೋಃ ಪರಮೇಶ್ವರ ಏವಾಯಂ ದಹರಃ | ಕಥಮ್ ? “ದಹರೋSಸ್ಮಿನ್ನನ್ತರಾಕಾಶಃ’’ ಇತಿ ಹಿ ಪ್ರಕೃತ್ಯ ಆಕಾಶೌಮ್ಯಪೂರ್ವಕಂ ತಸ್ಮಿನ್ ಸರ್ವಸಮಾಧಾನಮ್ ಉಕ್ಕಾ ತಸ್ಮಿನ್ನೇವ ಚ ಆತ್ಮಶಬ್ದಂ ಪ್ರಯುಜ್ಯ ಅಪಹತಾಷ್ಕೃತ್ಯಾದಿಗುಣಯೋಗಂ ಚ ಉಪದಿಶ್ಯ ತಮೇವ ಅನತಿವೃತ್ತಪ್ರಕರಣಂ ನಿರ್ದಿಶತಿ “ಅಥ ಯ ಆತ್ಮಾ ಸ ಸೇತುರ್ವಿಧೃತಿರೇಷಾಂ ಲೋಕಾನಾಮಸಂಭೇದಾಯ’ (ಛಾಂ. ೮-೪-೧) ಇತಿ | ತತ್ರ ವಿಧೃತಿರಿತಿ ಆತ್ಮಶಬ್ದ ಸಾಮಾನಾಧಿಕರಣ್ಯಾತ್ ವಿಧಾರಯಿತಾ ಉಚ್ಯತೇ | ಕಿಚಃ ಕರ್ತರಿ ಸ್ಮರಣಾತ್ | ಯಥಾ ಉದಕಸಂತಾನಸ್ಯ ವಿಧಾರಯಿತಾ ಲೋಕೇ ಸೇತುಃ ಕ್ಷೇತ್ರಸಂಪದಾಮ್ ಅಸಂಭೇದಾಯ, ಏವಮ್ ಅಯಮ್ ಆತ್ಮಾ ಏಷಾಮ್ ಅಧ್ಯಾತ್ಮಾದಿಭೇದಭಿನ್ನಾನಾಂ ಲೋಕಾನಾಂ ವರ್ಣಾಶ್ರಮಾದೀನಾಂ ಚ ವಿಧಾರಯಿತಾ ಸೇತುಃ ಅಸಂಭೇದಾಯ, ಅಸಂಕರಾಯ ಇತಿ | ಏವಮ್ ಇಹ ಪ್ರಕೃತೇ ದಹರೇ ವಿಧಾರಣಲಕ್ಷಣಂ ಮಹಿಮಾನಂ ದರ್ಶಯತಿ | ಅಯಂ ಚ ಮಹಿಮಾ ಪರಮೇಶ್ವರೇ ಏವ ಶ್ರುತ್ಯನ್ತರಾತ್ ಉಪಲಭ್ಯತೇ “ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ ಗಾರ್ಗಿ ಸೂರ್ಯಾಚನ್ನಮಸೌ ವಿಧೃತೌ ತಿಷ್ಠತಃ’ (ಬೃ. ೩-೮-೯) ಇತ್ಯಾದೇಃ | ತಥಾ ಅನ್ಯಾಪಿ ನಿಶ್ಚಿತೇ ಪರಮೇಶ್ವರವಾಕ್ಕೇ ಶೂಯತೇ “ಏಷ ಸರ್ವಶ್ವರ ಏಷ ಭೂತಾಧಿಪತಿರೇಷ ಭೂತಪಾಲ ಏಷ ಸೇತುರ್ವಿಧರಣ ಏಷಾಂ

  1. ಲಿಂಗಂ ಚ ಎಂಬುದಕ್ಕೆ ಇದೊಂದು ಅರ್ಥವು. ಬ್ರಹ್ಮಲೋಕವೆಂದರೆ ಬ್ರಹ್ಮವೆಂದು ಅರ್ಥಮಾಡುವದಕ್ಕೆ ಜೀವರು ಪ್ರತಿದಿನವೂ ಅಲ್ಲಿಗೆ ಹೋಗುವರೆಂಬುದೊಂದು ಲಿಂಗವು - ಎಂದರ್ಥ. ಮಿಕ್ಕವರು ಬ್ರಹ್ಮಲೋಕಕ್ಕೆ ಹೋದರೂ ಹೂದಂತಲ್ಲ ; ದಹಪಾಸಕನೇ ನಿಜವಾಗಿ ಹೋಗುವವನು ಎಂದು ಶ್ರುತಿಯ ಅರ್ಥ.

ಅಧಿ. ೫. ಸೂ. ೧೬] ದಹರಾಕಾಶವು ಬ್ರಹ್ಮವೇ ಎಂಬುದಕ್ಕೆ ಹೇತುಗಳು

೪೫

ಲೋಕಾನಾಮಸಂಭೇದಾಯ’ (ಬೃ. ೪-೪-೨೨) 1 ಏವಂ ಧೃತೇಶ್‌ ಹೇತೋಃ

ಪರಮೇಶ್ವರ ಏವಾಯಂ ದಹರಃ ||

(ಭಾಷ್ಯಾರ್ಥ) ಧೃತಿ ಎಂಬ ಕಾರಣದಿಂದಲೂ ಈ ದಹರವು ಪರಮೇಶ್ವರನೇ. ಹೇಗೆ ? ಎಂದರೆ “ಇದರಲ್ಲಿ ದಹರವಾದ ಆಕಾಶವಿದೆಯಲ್ಲ’ ಎಂದು ಪ್ರಾರಂಭಿಸಿ, ಆಕಾಶದ ಉಪ ಮಾನವನ್ನು ಕೊಟ್ಟು ಅದರಲ್ಲಿ ಎಲ್ಲವೂ ಇದ್ದುಕೊಂಡಿರುವದೆಂದು ಹೇಳಿ ಅದ ರಲ್ಲಿಯೇ ಆತ್ಮಶಬ್ದವನ್ನು ಪ್ರಯೋಗಿಸಿ, ಅಪಹಪಾಹ್ಮತ್ವವೇ ಮುಂತಾದ ಗುಣಗಳ ಸಂಬಂಧವನ್ನೂ ತಿಳಿಸಿಕೊಟ್ಟು ಪ್ರಕರಣವನ್ನು ಮೀರದ ಆ (ಆಕಾಶ)ವನ್ನೇ “ಇನ್ನು (ಈ) ಆತ್ಮನೆಂಬುವನುಂಟಲ್ಲ, ಇವನೇ ಈ ಲೋಕಗಳು ನಾಶವಾಗದಿರುವದಕ್ಕೆ ಸೇತು, ವಿದೃತಿಯು” (ಛಾಂ. ೮-೪-೧) ಎಂದು ಕರೆದಿರುತ್ತದೆ. ಇಲ್ಲಿ ವಿಧ್ವತಿ ಎಂಬುದು ಆತ್ಮಶಬ್ದದೊಡನೆ ಸಮಾನಾಧಿಕರಣವಾಗಿ (ಪ್ರಯುಕ್ತವಾಗಿರುವದರಿಂದ) ವಿಧಾರಣೆ ಮಾಡಿರುವವನನ್ನು (ಆ ಮಾತಿನಿಂದ) ಹೇಳಿರುತ್ತದೆ ; ಏಕೆಂದರೆ ಕಿಚ್ ಎಂಬ ಪ್ರತ್ಯಯವು ಕರ್ತ (ವನ್ನು ಹೇಳುತ್ತದೆ) ಯೆಂದು ವ್ಯಾಕರಣಸ್ಕೃತಿ ಇದೆ (?). ಲೋಕದಲ್ಲಿ ಸೇತುವು ನೀರಿನ ಪ್ರವಾಹವನ್ನು ತಡೆಗಟ್ಟಿರುವದು ಹೊಲಗಳ (ಪೈರಿನ) ಸಂಪತ್ತು ನಾಶವಾಗದಿರುವದಕ್ಕೆ ಹೇಗೆ ಕಾರಣವಾಗಿರುವದೋ, ಹೀಗೆಯೇ ಈ ಆತ್ಮನು ಈ ಅಧ್ಯಾತ್ಮಾದಿಭೇದಗಳಿಂದ ಭಿನ್ನವಾಗಿರುವ ಲೋಕಗಳೂ ವರ್ಣಾಶ್ರಮಾದಿಗಳೂ ನಾಶವಾಗದಿರುವದಕ್ಕೆ ಎಂದರೆ ಸಂಕರವಾಗದೆ ಇರುವದಕ್ಕೆ, ವಿಧಾರಕನಾದ ಸೇತು (ಎಂದು ಶ್ರುತಿವಾಕ್ಯದ ಅರ್ಥ). ಹೀಗೆ ಇಲ್ಲಿ ಪ್ರಕೃತವಾಗಿರುವ ದಹರದಲ್ಲಿ ವಿಧಾರಣವೆಂಬ ಮಹಿಮೆಯನ್ನು (ಶ್ರುತಿಯು) ಹೇಳಿರುತ್ತದೆ. ಮತ್ತು ಈ ಮಹಿಮೆಯು ಪರಮೇಶ್ವರನಲ್ಲಿಯೇ (ಇದೆಯೆಂದು) “ಗಾರ್ಗಿಯ, ಇದೇ ಅಕ್ಷರದ ಅಪ್ಪಣೆಯಿಂದ ಸೂರ್ಯಚಂದ್ರರು ವಿಧೃತರಾಗಿ ನಿಂತಿರುತ್ತಾರೆ’’ (ಬೃ.೩-೮-೯) ಎಂದು ಮುಂತಾಗಿರುವ ಮತ್ತೊಂದು ಶ್ರುತಿಯಿಂದ ಕಂಡುಬರುತ್ತದೆ. ಹಾಗೆಯೇ ಪರಮೇಶ್ವರವಾಕ್ಯವೆಂದು ನಿಶ್ಚಿತವಾಗಿರುವ ಮತ್ತೊಂದು (ಶ್ರುತಿಯಲ್ಲಿ )ಯೂ

  1. ಇದೆಲ್ಲವೂ ದಹರವು ಪರಮೇಶ್ವರನೇ ಎಂಬುದಕ್ಕೆ ಗುರುತು.

  2. ದಹರವಾಕ್ಯವು ಛಾಂ. ೮-೧ರಲ್ಲಿದೆ ; ಈಗ ಉದಾಹರಿಸುವ ವಾಕ್ಯವು ೮-೪ರಲ್ಲಿದೆ. ಆದ್ದರಿಂದ ಇದು ಮತ್ತೊಂದರ ವಿಷಯವೆಂದು ಶಂಕಿಸಬಹುದಂಬ ಕಾರಣದಿಂದ ಅದೇ ಪ್ರಕರಣದಲ್ಲಿಯೇ ಇದು ಬಂದಿದೆ ಎಂದು ತಿಳಿಸಿದೆ.

  3. ಸೂತ್ರದಲ್ಲಿರುವ ಧೃತಿಶಬ್ದವು ಭಾವಾರ್ಥಕ ಕ್ರೀನ್ ಪ್ರತ್ಯಯಾಂತವೆಂದು ತಿಳಿಸುವದಕ್ಕೆ ಈ ವಿವರಣೆಯನ್ನು ಕೊಟ್ಟಿದೆ.೪೧೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

“ಈತನೇ ಸರ್ವಶ್ವರನು, ಈತನೇ ಭೂತಾಧಿಪತಿಯು, ಈತನೇ ಭೂತಪಾಲನು, ಈತನೇ ಈ ಲೋಕಗಳು ಸಂಭೇದವಾಗದಿರುವದಕ್ಕೆ (ಕಾರಣನಾದ) ವಿಧರಣವಾದ ಸೇತು’ (ಬೃ. ೪-೪-೨೨) ಎಂದು ಹೇಳಿದೆ. ಹೀಗೆ ಧೃತಿ ಎಂಬ ಹೇತುವಿನಿಂದಲೂ ಈ ದಹರವು

ಪರಮೇಶ್ವರನೇ.

ಪ್ರಸಿದ್ಧೇಶ್ಚ ||೧೭|| ೧೭. ಪ್ರಸಿದ್ಧಿಯಿಂದಲೂ (ದಹರಾಕಾಶವು ಪರಮೇಶ್ವರನೇ).

(ಭಾಷ್ಯ) | ೨೬.ಇತಶ್ಚ ಪರಮೇಶ್ವರ ಏವ ದಹರೋಸ್ಮಿನ್ನನ್ತರಾಕಾಶಃ” ಇತ್ಯುಚ್ಯತೇ | ಯತ್ಕಾರಣಮ್ ಆಕಾಶಶಬ್ದಃ ಪರಮೇಶ್ವರೇ ಪ್ರಸಿದ್ಧ: | ಆಕಾಶೋ ವ್ಯ ನಾಮ ನಾಮರೂಪಯೋರ್ನಿವ್ರಹಿತಾ’ (ಛಾಂ. ೮-೧-೪), ‘ಸರ್ವಾಣಿ ಹ ವಾ ಇಮಾನಿ ಭೂತಾನ್ಯಾಕಾಶಾದೇವ ಸಮುತ್ಸದ್ಯ” (ಛಾಂ. ೧-೯-೧) ಇತ್ಯಾದಿ ಪ್ರಯೋಗದರ್ಶನಾತ್ | ಜೀವೇ ತು ನ ಕೈಚಿತ್ ಆಕಾಶಶಬ್ದಃ ಪ್ರಯುಜ್ಯಮಾನೋ ದೃಶ್ಯತೇ | ಭೂತಾಕಾಶಸ್ತು ಸತ್ಯಾಮಪಿ ಆಕಾಶಶಬ್ದ ಪ್ರಸಿದ್ಧ ಉಪಮಾನೋಪಮೇಯ ಭಾವಾದ್ಯಸಂಭವಾತ್ ನ ಗ್ರಹೀತವ್ಯ: ಇತ್ಯುಕ್ತಮ್ ||

(ಭಾಷ್ಯಾರ್ಥ) ಈ (ಕಾರಣ)ದಿಂದಲೂ ಪರಮೇಶ್ವರನನ್ನೇ “ಇದರೊಳಗೆ ಇರುವ ದಹರಾಕಾಶವು” ಎಂದಿದೆ (ಎನ್ನಬೇಕು). ಯಾವ ಕಾರಣದಿಂದಲೆಂದರೆ, ಆಕಾಶಶಬ್ದವು ಪರಮೇಶ್ವರನಲ್ಲಿ ಪ್ರಸಿದ್ಧವಾಗಿರುತ್ತದೆ. ಏಕೆಂದರೆ ‘‘ಆಕಾಶವೊಂದೇ ನಾಮರೂಪ ಗಳನ್ನು ನಿರ್ವಾಹಮಾಡತಕ್ಕದ್ದು” (ಛಾಂ. ೮-೧-೪), “ಈ ಭೂತಗಳೆಲ್ಲವೂ ಆಕಾಶದಿಂದಲೇ ಹುಟ್ಟುತ್ತವೆ” (ಛಾಂ. ೧-೯-೧) - ಮುಂತಾದ ಪ್ರಯೋಗವು ಕಂಡುಬರುತ್ತದೆ. ಜೀವನಲ್ಲಿಯೋ ಎಲ್ಲಿಯೂ ಆಕಾಶಶಬ್ದವು ಪ್ರಯೋಗವಾದದ್ದು ಕಾಣುವದಿಲ್ಲ. ಭೂತಾಕಾಶದಲ್ಲೇನೋ ಆಕಾಶಶಬ್ದದ ಪ್ರಸಿದ್ಧಿಯಿದೆ ; ಆದರೂ ಉಪಮಾನೋಪಮೇಯಭಾವವೇ ಮುಂತಾದವು ಹೊಂದುವದಿಲ್ಲವಾದ್ದರಿಂದ (ಅದನ್ನು ಇಲ್ಲಿ ) ತಗೆದುಕೊಳ್ಳುವಹಾಗಿಲ್ಲವೆಂದು (ಹಿಂದೆ ಭಾ. ಭಾ. ೨೫೬ ರಲ್ಲಿ) ಹೇಳಿದ್ದಾಗಿದೆ.

  1. ಇದು ವೈದಿಕಪ್ರಸಿದ್ಧಿ ; ಲೌಕಿಕಪ್ರಸಿದ್ಧಿಯು ಭೂತಾಕಾಶದಲ್ಲಿಯೇ. 2. ವೇದದಲ್ಲಾಗಲಿ ಲೋಕದಲ್ಲಾಗಲಿ.

೪೧೩

ಅಧಿ. ೫. ಸೂ. ೧೮] ದಹರಾಕಾಶವು ಜೀವನಲ್ಲವೆಂಬುದಕ್ಕೆ ಹೇತುಗಳು

ದಹರಾಕಾಶವು ಜೀವನಲ್ಲವೆಂಬುದಕ್ಕೆ ಹೇತುಗಳು ಇತರಪರಾಮರ್ಶಾತ್ ಸ ಇತಿ ಚೆನ್ನಾಸಂಭವಾತ್ ||೧೮||

೧೮. ಇನ್ನೊಬ್ಬನ ಪರಾಮರ್ಶವಿರುವದರಿಂದ ಅವನು (ಆಕಾಶವಾಗಲಿ) ಎಂದರೆ ಆಗದು. ಏಕೆಂದರೆ ಸಂಭವಿಸುವದಿಲ್ಲ.

(ಭಾಷ್ಯ) ೨೬೨. ಯದಿ ವಾಕ್ಯಶೇಷಬಲೇನ ದಹರ ಇತಿ ಪರಮೇಶ್ವರಃ ಪರಿಗೃಹ್ಮತ, ಅಸ್ತಿ ಇತರಸ್ಯಾಪಿ ಜೀವಸ್ಯ ವಾಕ್ಯಶೇಷೇ ಪರಾಮರ್ಶಃ, “ಅಥ ಯ ಏಷ ಸಂಪ್ರಸಾದೋSಸ್ಮಾಚ್ಛರೀರಾತ್ ಸಮುತ್ಥಾಯ ಪರಂಜ್ಯೋತಿರುಪಸಂಪದ್ಯ ಸ್ಟೇನ ರೂಪೇಣಾಭಿನಿಷ್ಪದತ ಏಷ ಆತಿ ಹೋವಾಚ’ (ಛಾಂ. ೮-೩-೪) ಇತಿ | ಅತ್ರ ಹಿ ಸಂಪ್ರಸಾದಶಬ್ದಃ ಶ್ರುತ್ಯನ್ತರೇ ಸುಷುಪ್ತಾವಸ್ಥಾಯಾಂ ದೃಷ್ಟ್ಯತ್ವಾತ್ ತದವಸ್ಥಾಪನ್ನಂ ಜೀವಂ ಶಕ್ಟೋತ್ಯುಪಸ್ಥಾಪಯಿತುಮ್, ನಾರ್ಥಾನ್ನರಮ್ | ತಥಾ ಶರೀರ ವ್ಯಪಾಶ್ರಯಸ್ಕೃವ ಜೀವಸ್ಯ ಶರೀರಾತ್ ಸಮುತ್ಥಾನಂ ಸಂಭವತಿ | ಯಥಾ ಆಕಾಶವಪಾಶ್ರಯಾಣಾಂ ವಾಯಾದೀನಾಮ್ ಆಕಾಶಾತ್ ಸಮುತ್ಥಾನಂ ತದ್ವತ್ | ಯಥಾ ಚ ಅದೃಷ್ಟೊಪಿ ಲೋಕೇ ಪರಮೇಶ್ವರವಿಷಯಃ ಆಕಾಶಶಬ್ದ; ಪರಮೇಶ್ವರಧರ್ಮಸಮಭಿವ್ಯಾಹಾರಾತ್ “ಆಕಾಶೋ ವೈ ನಾಮ ನಾಮರೂಪ ಯೋರ್ನಿವ್ರಹಿತಾ’ ಇವಮಾದ ಪರಮೇಶ್ವರವಿಷಯೋಃಭ್ಯುಪಗತಃ, ಏವಂ ಜೀವವಿಷಯೋಪಿ ಭವಿಷ್ಯತಿ | ತಸ್ಮಾದ್ ಇತರಪರಾಮರ್ಶಾತ್ “ದಹರೋSಸ್ಮಿ ನನ್ತರಾಕಾಶಃ’ ಇತ್ಯತ್ರ ಸ ಏವ ಜೀವ ಉಚ್ಯತೇ ಇತಿ ಚೇತ್ | ನೃತದೇವಂ ಸ್ಯಾತ್ | ಕಸ್ಮಾತ್ ? ಅಸಂಭವಾತ್ ನ ಹಿಜೀವೋ ಬುದ್ವಾದ್ಯುಪಾಧಿಪರಿಚ್ಛೇದಾಭಿಮಾನೀ ಸನ್ ಆಕಾಶೇನ ಉಪಮೀಯೇತ | ನ ಚ ಉಪಾಧಿಧರ್ಮಾನ್ ಅಭಿಮನ್ಯಮಾನಸ್ಯ ಅಪಹಪಾಹ್ಮತ್ವಾದಯೋ ಧರ್ಮಾಃ ಸಂಭವನ್ತಿ | ಪ್ರಪಞತಂ ಚೈತತ್ ಪ್ರಥಮ ಸೂತ್ರ | ಅತಿರೇಕಾಶಜ್ಯಾಪರಿಹಾರಾಯ ಅತ್ರ ತು ಪುನರುಪನ್ಯಸ್ತಮ್ | ಪರಿಷ್ಯತಿ ಚ ಉಪರಿಷ್ಮಾತ್ “ಅನ್ಯಾರ್ಥಶ್ಚ ಪರಾಮರ್ಶಃ’ (೧-೩-೨೦) ಇತಿ ||

(ಭಾಷ್ಯಾರ್ಥ) ವಾಕ್ಯಶೇಷಬಲದಿಂದ ದಹರವೆಂದರೆ ಪರಮೇಶ್ವರನೆಂದು ಹಿಡಿಯುವದಾದರೆ ಇನ್ನೊಬ್ಬನಿಗೂ ಎಂದರೆ ಜೀವನಿಗೂ “ಇನ್ನು ಯಾವ ಈ ಸಂಪ್ರಸಾದನು ಈ ಶರೀರದಿಂದ ಎದ್ದು ಹೆಚ್ಚಿನ ಜ್ಯೋತಿಯನ್ನು ಸೇರಿ ತನ್ನ ರೂಪದಿಂದ ಸಿದ್ಧನಾಗು

೪೧೪

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೩.

ತಾನಷ್ಟ, ಈತನು ಆತ್ಮನು - ಎಂದನು’ (ಛಾಂ. ೮-೩-೪) ಎಂದು ವಾಕ್ಯಶೇಷದಲ್ಲಿ ಪರಾಮರ್ಶವಿದ. ಹೇಗೆಂದರೆ ಇಲ್ಲಿ ಸಂಪ್ರಸಾದಶಬ್ದವು ಮತ್ತೊಂದು ಶ್ರುತಿಯಲ್ಲಿ ಸುಷುಪ್ತಾವಸ್ಥೆಯಲ್ಲಿ (ಪ್ರಯುಕ್ತವಾಗಿರುವದು) ಕಂಡುಬಂದಿರುವದರಿಂದ ಆ ಅವಸ್ಥೆಯುಳ್ಳ ಜೀವನನ್ನು ನೆನಪಿಗೆ ತರುವದಕ್ಕೆ ಶಕ್ತವಾಗಿದೆಯೇ ಹೊರತು ಮತ್ತೊಂದು ಪದಾರ್ಥವನ್ನು (ತಿಳಿಸುವದಕ್ಕೆ ಶಕ್ತವಾಗಿಲ್ಲ. ಇದರಂತೆ ಶರೀರ ವನ್ನಾಶ್ರಯಿಸಿಕೊಂಡಿರುವ ಜೀವನಿಗೇ ಶರೀರವನ್ನು ಬಿಟ್ಟೇಳುವದೆಂಬುದು ಹೊಂದು ತದೆ. ಆಕಾಶವನ್ನಾಶ್ರಯಿಸಿಕೊಂಡಿರುವ ವಾಯ್ತಾದಿಗಳು ಆಕಾಶವನ್ನು ಬಿಟ್ಟೇಳುವ ದೆಂಬುದು ಹೇಗೆ (ಹೊಂದುತ್ತದೆಯೋ) ಹಾಗಯೇ ಇದು. ಮತ್ತು ಹೇಗೆ ಲೋಕದಲ್ಲಿ ಆಕಾಶಶಬ್ದವು ಪರಮೇಶ್ವರವಿಷಯಕವೆಂದು ಕಂಡುಬಾರದೆ ಇದ್ದರೂ ಪರಮೇಶ್ವರನ ಧರ್ಮಗಳೊಡನ ಹೇಳಿರುವದರಿಂದ “ಆಕಾಶವೆಂಬುದೇ ನಾಮರೂಪಗಳನ್ನು ನಿರ್ವ ಹಿಸತಕ್ಕದ್ದು” (ಛಾಂ. ೮-೧-೪) ಎಂದು ಮುಂತಾಗಿರುವ (ವಾಕ್ಯಗಳಲ್ಲಿ) ಪರಮೇ ಶ್ವರನ ವಿಷಯವಾದದ್ದೆಂದು ಅಂಗೀಕರಿಸಲಾಗಿದೆಯೋ ಹಾಗೆಯೇ ಜೀವನ ವಿಷಯವೂ ಆಗಲಿ. ಆದ್ದರಿಂದ ಇನ್ನೊಬ್ಬನ ಪರಾಮರ್ಶವಿರುವದರಿಂದ ಇದರೊಳಗೆ ಇರುವ ದಹರಾಕಾಶವು’ ಎಂಬಲ್ಲಿ ಅದೇ ಜೀವನನ್ನೇ ಹೇಳಿದೆ (ಎನ್ನೋಣ) ಎಂದರೆ :

(ಸಿದ್ಧಾಂತ) :- ಹೀಗಾಗಲಾರದು. ಏಕೆ ? ಎಂದರೆ ಸಂಭವಿಸುವದಿಲ್ಲ ವಾದ್ದರಿಂದ, ಬುದ್ದಿಯೇ ಮುಂತಾದ ಉಪಾಧಿಗಳ ಪರಿಚ್ಛೇದದಲ್ಲಿ ಅಭಿಮಾನಿ ಯಾಗಿರುವ ಜೀವನನ್ನು ಆಕಾಶಕ್ಕೆ ಹೋಲಿಸುವದು ಆಗಲೇ ಆರದು, ಮತ್ತು

1.ಬ್ರ. ೪-೩-೧೫ರಲ್ಲಿ.

  1. ಶಿಶಿರಋತು ಮುಗಿಯಲು ಗಾಳಿ, ಮೋಡ, ಮಿಂಚು, ಗುಡುಗು - ಇವು ಆಕಾಶವನ್ನು ಬಿಟ್ಟಿದ್ದು ಸೂರ್ಯನ ಜ್ಯೋತಿಯನ್ನು ಪಡೆದು ಮತ್ತೆ ಮಳೆಗಾಲದಲ್ಲಿ ತಮ್ಮ ತಮ್ಮ ರೂಪವನ್ನು ಪಡೆದುಕೊಳ್ಳುವಂತ ಎಂಬ ಹೋಲಿಕೆಯನ್ನು ಛಾಂ. ೮-೧೨-೨ರಲ್ಲಿ ಸಂಪ್ರಸಾದನಿಗೆ ಕೊಟ್ಟಿದೆ. ಆ ದೃಷ್ಟಾಂತಬಲದಿಂದ ಪೂರ್ವಪಕ್ಷಿಯು ಈ ಮಾತನ್ನಾಡಿರುತ್ತಾನೆ.

  2. ಶರೀರದ ಸಂಬಂಧವಿರುವದರಿಂದ ಈ ಜೀವನ ಧರ್ಮದ ಬಲದ ಮೇಲೆ ಆಕಾಶವೆಂದರೆ ಇಲ್ಲಿ ಜೀವನೆಂದೇ ನಿರ್ಣಯಿಸಬಹುದಲ್ಲ ! - ಎಂದು ಶಂಕ.

  3. ಆಕಾಶವೆಂಬ ಶಬ್ದವು ಪ್ರಕೃತವಾಕ್ಯದಲ್ಲಿ ಯಾವದನ್ನು ಹೇಳುತ್ತದೆ ಎಂಬುದು ಸಂದಿಗ್ಧವಾಗಿರುತ್ತದೆಯಾದ್ದರಿಂದ ವಾಕ್ಯಶೇಷದ ಬಲದಿಂದಲೂ ನಿಶ್ಚಿತವಾದ ವೈದಿಕಪ್ರಯೋಗ ದಿಂದಲೂ ಪರಮೇಶ್ವರನನ್ನೇ ಹೇಳುತ್ತದೆ ಎಂದು ಸಿದ್ಧಾಂತಿ ನಿರ್ಣಯಿಸಿರುತ್ತಾನೆ. ಆದರೆ ವಾಕ್ಯಶೇಷದಲ್ಲಿ ಜೀವನ ಪರಾಮರ್ಶವಿರುವದರಿಂದ ಇಲ್ಲಿರುವ ಆಕಾಶ ಶಬ್ದವು ಜೀವವಿಷಯಕವೇ ಆಗಲಿ ಎಂದು ಪೂರ್ವಪಕ್ಷಿಶಂಕಿಸಿರುತ್ತಾನೆ. ಪರಿಚ್ಛಿನ್ನವಾಗಿರುವ ಜೀವನನ್ನು ಅನಂತವಾದ ಆಕಾಶಕ್ಕೆ ಹೋಲಿಸುವದಕ್ಕಾಗಲಾರದು ಎಂಬ ಬಾಧಕವನ್ನು ಈಗ ಸಿದ್ಧಾಂತಿ ತೋರಿಸುತ್ತಿದಾನೆ.

ಅಧಿ. ೫. ಸೂ. ೧೯] ದಹರಾಕಾಶವು ಜೀವನಲ್ಲವೆಂಬುದಕ್ಕೆ ಹೇತುಗಳು ಉಪಾಧಿಗಳ ಧರ್ಮಗಳನ್ನು (ತನ್ನವೆಂದು) ಅಭಿಮಾನಪಡುತ್ತಿರುವವನಿಗೆ ಅಪಹತ ಪಾಹ್ಮತ್ವವೇ ಮುಂತಾದ ಧರ್ಮಗಳೂ ಸಂಭವಿಸುವದಿಲ್ಲ. ಇದನ್ನು ಮೊದಲನೆಯ (೧-೩-೧೪) ಸೂತ್ರದಲ್ಲಿ (ಭಾ.ಭಾ. ೨೫೭ ರಲ್ಲಿ) ವಿಸ್ತರಿಸಿ ಹೇಳಿದ್ದೂ ಆಗಿದೆ. ಆದರೆ ಇನ್ನೊಂದು ಆಶಂಕೆಯನ್ನು ಪರಿಹರಿಸುವದಕ್ಕಾಗಿ ಮತ್ತೆ ಅದನ್ನು ಇಲ್ಲಿ ಹೇಳಿ ಕೊಂಡಿದೆ. ಮುಂದೆ (೧-೩-೨೦ ರಲ್ಲಿ) ‘ಪರಾಮರ್ಶವು ಮತ್ತೊಂದಕ್ಕಾಗಿ’’ ಎಂದು (ಸೂತ್ರಕಾರರು) ಹೇಳಿಯೂ ಇರುತ್ತಾರೆ.

ಉತ್ತರಾಚ್ಚೇದಾವಿರ್ಭೂತಸ್ವರೂಪಸ್ತು ll೧೯|| ೧೯. ಮುಂದಿನ (ವಾಕ್ಯದಿಂದ ದಹರವು ಜೀವನೆನ್ನಬೇಕು) ಎಂದರೆ (ಅಲ್ಲಿ) ಆವಿರ್ಭೂತಸ್ವರೂಪನಾದ (ಜೀವ)ನನ್ನೇ ಹೇಳಿದೆ.

(ಭಾಷ್ಯ) ೨೬೩. ಇತರಪರಾಮರ್ಶಾತ್ ಯಾ ಜೀವಾಶಜ್ಯಾ ಜಾತಾ ಸಾ ಅಸಲಭವಾತ್ ನಿರಾಕೃತಾ | ಅಥ ಇದಾನೀಂ ಮೃತವ ಅಮೃತಸೇಕಾತ್ ಪುನಃ ಸಮುತ್ಸಾನಂ ಜೀವಾಶಣ್ಮಾಯಾಃ ಕ್ರಿಯತೇ ಉತ್ತರಸ್ಮಾತ್ ಪ್ರಾಜಾಪತ್ಯಾದ್ ವಾಕ್ಯಾತ್ | ತತ್ರ ಹಿ ‘ಯ ಆತ್ಮಾಪಹಪಾಪ್ಪಾ….” (ಛಾಂ. ೮-೭-೧) ಇತಿ ಅಪಹಪಾಹ್ಮತ್ಯಾದಿಗುಣಕಮ್ ಆತ್ಮಾನಮ್ ಅನ್ನೇಷ್ಟ್ರವ್ಯಂ ವಿಜಿಜ್ಞಾಸಿತವ್ಯಂ ಚ ಪ್ರತಿಜ್ಞಾಯ “ಯ ಏಷೋಕ್ಷಿಣಿ ಪುರುಷೋ ದೃಶ್ಯ ಏಷ ಆತ್ಮಾ’ (ಛಾಂ. ೮-೭-೪) ಇತಿ ಬ್ರುವನ್ ಅಕ್ಷಿಸ್ಟಂ ದ್ರಷ್ಟಾರಂ ಜೀವಮ್ ಆತ್ಮಾನಂ ನಿರ್ದಿಶತಿ | ಏತಂ ತೈವ ತೇ ಭೂರ್ಯೋನುವ್ಯಾಖ್ಯಾಸ್ಯಾಮಿ’ (ಛಾಂ. ೮-೯-೩, ೮-೧೦-೪, ೮-೧೧-೩) ಇತಿ ಚ ತಮೇವ ಪುನಃಪುನಃ ಪರಾಮೃಶ್ಯ ‘ಯ ಏಷ ಸ್ವಷ್ಟೇ ಮಹೀಯಮಾನಶ್ಚರತ್ಯೇಷ ಆತ್ಮಾ’ (ಛಾಂ. ೮-೧೦-೧) ಇತಿ ! “ತದತತ್ ಸುಪ್ತಃ ಸಮಸ್ತ: ಸಂಪ್ರಸನ್ನಃ ಸ್ವಪ್ನಂ ನ ವಿಜಾನಾತ್ಮಿಷ ಆತ್ಮಾ” (ಛಾಂ. ೮-೧೧-೨) ಇತಿ ಚ ಜೀವಮೇವ ಅವಸ್ಥಾವರಗತಂ ವ್ಯಾಚಷ್ಟೇ | ತಸ್ಯೆವ ಚ ಅಪಹಪಾಹ್ಮತ್ವಾದಿ ದರ್ಶಯತಿ “ಏತದಮ್ಮತಮಭಯಮೇತದ್ ಬ್ರಹ್ಮ’” (ಛಾಂ. ೮-೭-೪, ೮-೮-೩, ೮-೧೦-೧,೮ ೧೧-೧) ಇತಿ | “ನಾಹ ಖಲ್ವಯಮೇವಂ ಸಂಪ್ರತ್ಯಾತ್ಮಾನಂ ಜಾನಾತ್ಯಯ

  1. ಬರಿಯ ವಾಕ್ಯಶೇಷಬಲದಿಂದಲೇ ನಾವು ಆಕಾಶವನ್ನು ಬ್ರಹ್ಮವೆಂದಿಲ್ಲ ; ಬ್ರಹ್ಮದ ಧರ್ಮಗಳೂ ಇಲ್ಲಿವೆ ; ಆ ಧರ್ಮಗಳು ಜೀವನಿಗೆ ಹೊಂದುವದಿಲ್ಲ ಎಂದು ಭಾವ.

  2. ಮುಂದಿನ ಸೂತ್ರದಲ್ಲಿ ಇದನ್ನು ಪರಿಹರಿಸಬೇಕಾಗಿದೆ.

ರಸಾದೋರಸ್ಕಾಚನಬದ್ಧನಿನ್ನಾ ಪೂರ್ವ (ಛಾಂ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಮಹಮತಿ ನೋ ಏವೇಮಾನಿ ಭೂತಾನಿ’ (ಛಾಂ. ೮-೧೧-೧) ಇತಿ ಚ ಸುಷುಪ್ತಾವಸ್ಥಾಯಾಂ ದೋಷಮ್ ಉಪಲಭ್ಯ “ಏತಂ ತೇವ ತೇ ಭೂರ್ಯೋನು ವ್ಯಾಖ್ಯಾಸ್ಯಾಮಿ ನೋ ಏವಾನ್ಯತಸ್ಮಾತ್‌’’ (ಛಾಂ. ೮-೧೧-೩) ಇತಿ ಚ ಉಪಕ್ರಮ್ಮ ಶರೀರಸಂಬದ್ಧ ನಿನ್ಹಾಪೂರ್ವಕಂ (ಛಾಂ. ೮-೧೨-೧), ‘‘ಏಷ ಸಂಪ್ರಸಾರ್ದೋಸ್ಕಾಚ್ಛರೀರಾತ್ ಸಮುತ್ಕಾಯ ಪರಂಜ್ಯೋತಿರುಪಸಂಪದ್ಯ ಸ್ಟೇನ ರೂಪೇಣಾಭಿನಿಷ್ಪದ್ಯತೇ ಸ ಉತ್ತಮಃ ಪುರುಷಃ’ (ಛಾಂ. ೮-೧೨-೩) ಇತಿ ಜೀವಮೇವ ಶರೀರಾತ್ ಸಮುತ್ತಿತಮ್ ಉತ್ತಮಪುರುಷಂ ದರ್ಶಯತಿ | ತಸ್ಮಾತ್ ಅಸ್ತಿ ಸಂಭವೋ ಜೀವೇ ಪಾರಮೇಶ್ವರಾಣಾಂ ಧರ್ಮಾಣಾಮ್ | ಅತಃ ‘‘ದಹರೋSಸ್ಮಿನ್ನನ್ತರಾಕಾಶಃ”

ಇತಿ ಜೀವ ಏವೋಕ್ತ: ಇತಿ ಚೇತ್ ಕಶ್ಚಿದ್ ಬ್ರೂಯಾತ್ ||

(ಭಾಷ್ಯಾರ್ಥ) ಇನ್ನೊಬ್ಬನ ಪರಾಮರ್ಶವಿರುವದರಿಂದ ಜೀವಾಶಂಕೆಯು ಉಂಟಾಯಿತಲ್ಲ, ಅದನ್ನು ಅಸಂಭವವೆಂಬ ಕಾರಣ)ದಿಂದ ನಿರಾಕರಿಸಿದ್ಧಾಯಿತು. ಇನ್ನು ಈಗ, ಸತ್ತವನನ್ನು ಅಮೃತವನ್ನು ಚಿಮುಕಿಸಿ (ಎಬ್ಬಿಸು)ವಂತ ಮುಂದೆ ಬರುವ ಪ್ರಜಾಪತಿ ವಾಕ್ಯದಿಂದ ಜೀವಾಶಂಕೆಯನ್ನು ಮತ್ತೆ ಎಬ್ಬಿಸುವ (ಕೆಲಸವನ್ನು) ಮಾಡಲಾಗುತ್ತದೆ.

ಹೇಗೆಂದರೆ ಆ (ಪ್ರಜಾಪತಿ) ವಾಕ್ಯದಲ್ಲಿ “ಯಾವ ಆತ್ಮನು ಅಪಹತ ಪಾತ್ಮನೋ” (ಛಾಂ. ೮-೭-೧) ಎಂದು ಅಪಹಪಾಹ್ಮತ್ವವೇ ಮುಂತಾದ ಗುಣಗಳುಳ್ಳ ಆತ್ಮನನ್ನು ಹುಡುಕಬೇಕು, ಅರಿತುಕೊಳ್ಳಬೇಕು’ - ಎಂದು ಹೇಳಿ “ಕಣ್ಣಿನಲ್ಲಿ ಯಾವ ಈ ಪುರುಷನು ಕಾಣಿಸುತ್ತಿರುವನಲ್ಲ, ಇವನೇ ಆತ್ಮನು’ (ಛಾಂ. ೮-೭-೪) ಎಂದು ಹೇಳಿರುವದರಿಂದ ಕಣ್ಣಿನಲ್ಲಿರುವ ದ್ರಷ್ಟವಾದ ಜೀವನನ್ನು ಆತ್ಮನೆಂದು (ಪ್ರಜಾಪತಿಯು) ತಿಳಿಸಿರುತ್ತಾನೆ. ಆದರೆ ಇವನನ್ನೇ ನಿನಗೆ ಮತ್ತೂ ವಿವರಿಸಿ ತಿಳಿಸುತ್ತೇನೆ’’ (ಛಾಂ. ೮-೯-೩, ೮-೧೦-೪, ೮-೧-೩) ಎಂದು ಆ (ಜೀವ) ನನ್ನೇ ಮತ್ತೆಮತ್ತೆ ಪರಾಮರ್ಶಿಸಿ “ಯಾವ ಇವನು ಸ್ವಪ್ನದಲ್ಲಿ ಗೌರವಿಸಲ್ಪಟ್ಟವನಾಗಿ ಸಂಚರಿಸುತ್ತಿರುವನೋ, ಇವನೇ ಆತ್ಮನು’ (ಛಾಂ. ೮-೧೧-೧) ಎಂದೂ “ಹೀಗಿರು ವಲ್ಲಿ, ಎಲ್ಲಿ ಈ (ನಿದ್ರೆಯನ್ನು) ನಿದ್ರಿಸುತ್ತಾ ಸಮಸ್ತನಾಗಿ, ಸಂಪ್ರಸನ್ನನಾಗಿ ಕನಸನ್ನು

  1. ಅನುಭವಕ್ಕೆ ತಂದುಕೊಳ್ಳಬೇಕೆಂದು ದಹರವಾಕ್ಯದಲ್ಲಿ ಹೇಳಿರುವದು ಉಪಾಸನೆಯ ಸಾಕ್ಷಾತ್ಕಾರವು ; ಇದು ವಿಜ್ಞಾನರೂಪವಾದ ಅನುಭವ.

  2. ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವ ಎಂದರ್ಥ. 3. ವಾಸನೆಯಿಂದ ಕಾಣುವ ವಿಷಯಗಳನ್ನು ಅನುಭವಿಸುತ್ತಾ ಎಂದರ್ಥ. 4. ಸಂಪೂರ್ಣನಾಗಿ, ಎಲ್ಲಾ ಕರಣಗಳನ್ನೂ ತನ್ನಲ್ಲಿಯೇ ಉಪಸಂಹರಿಸಿಕೊಂಡು. 5. ವಿಷಯಸಂಪರ್ಕದ ಕಾಲುಷ್ಯವಿಲ್ಲದವನಾಗಿ,

ಅಧಿ. ೫. ಸೂ. ೧೯] ಪ್ರಜಾಪತಿವಾಕ್ಯದಲ್ಲಿ ಜೀವನ ಬ್ರಹ್ಮಸ್ವರೂಪವನ್ನು ಹೇಳಿದ ೪೧೭ ಅರಿಯದಿರುವನೋ ಇವನೇ ಆತ್ಮನು’ (ಛಾಂ. ೮-೧೧-೨) ಎಂದೂ ಜೀವನೇ ಬೇರೆಯ ಅವಸ್ಥೆಗಳನ್ನು ಹೊಂದಿರುವನೆಂದು ಹೇಳಿರುತ್ತಾನೆ. “ಇದು ಅಮೃತವು, ಅಭಯವು. ಇದೇ ಬ್ರಹ್ಮವು’ (ಛಾಂ. ೮-೭-೪, ೮-೮-೩, ೮-೧೧-೧) ಎಂದು ಅವನಿಗೇ ಅಪಹಪಾಹ್ಮತ್ವಾದಿ (ಧರ್ಮಗಳನ್ನು ) ಹೇಳಿರುತ್ತಾನೆ. “ಈಗ ಇವನು ನಾನು ಇಂಥವನಾಗಿರುವೆನು ಎಂದು ತನ್ನನ್ನು ಅರಿಯುವದೇ ಇಲ್ಲವಲ್ಲ ! ಈ ಭೂತ ಗಳನ್ನೂ ಅರಿಯುವದೇ ಇಲ್ಲವಲ್ಲ !’ (ಛಾಂ. ೮-೧೧-೨) ಎಂದು ಸುಷುಪ್ತಾವಸ್ತೆ ಯಲ್ಲಿ ದೋಷವನ್ನು ಕಂಡು ಮತ್ತು “ಈತನನ್ನೇ ನಿನಗೆ ಮತ್ತೂ ವಿವರಿಸಿ ಹೇಳುವನು, ಇವನಿಗಿಂತ ಬೇರೆಯಾಗಿ (ಹೇಳುವದೇ) ಇಲ್ಲ” (ಛಾಂ. ೮-೧-೩) ಎಂದು ಉಪಕ್ರಮಿಸಿ ಶರೀರಸಂಬಂಧವನ್ನು ಮೊದಲು ನಿಂದಿಸಿ (ಛಾಂ. ೮-೧೨-೨) “ಈ ಸಂಪ್ರಸಾದನು ಈ ಶರೀರವನ್ನು ಬಿಟ್ಟಿದ್ದು ಹೆಚ್ಚಿನ ಜ್ಯೋತಿಯನ್ನು ಸೇರಿ ತನ್ನ ರೂಪದಿಂದ ಸಿದ್ಧನಾಗುತ್ತಾನೆ, ಅವನು ಉತ್ತಮಪುರುಷನು’ (ಛಾಂ. ೮-೧೨-೩) ಎಂದು ಜೀವನನ್ನೇ ಶರೀರವನ್ನು ಬಿಟ್ಟಿದ್ದ ಉತ್ತಮಪುರುಷನೆಂದು ಕರೆದಿರುತ್ತಾನೆ. ಆದ್ದರಿಂದ ಜೀವನಲ್ಲಿ ಪರಮೇಶ್ವರನ ಧರ್ಮಗಳಿರಬಹುದು. ಆದ್ದರಿಂದ “ಅದರೊಳಗಿರುವ ದಹರವಾದ ಆಕಾಶವು’ ಎಂದು ಜೀವವನ್ನೇ ಹೇಳಿದೆ ಎಂದು

ಯಾರಾದರೂ ಹೇಳಿದರೆ -

ಸಿದ್ಧಾಂತ : ಪ್ರಜಾಪತಿವಾಕ್ಯದಲ್ಲಿ ಜೀವನ ಬ್ರಹ್ಮಸ್ವರೂಪವನ್ನು ಹೇಳಿದೆ

(ಭಾಷ್ಯ) ೨೬೪. ತಂ ಪ್ರತಿಬ್ರೂಯಾತ್ “ಆವಿರ್ಭೂತಸ್ವರೂಪಸ್ತು’ ಇತಿ | ತುಶಬ್ದಃ ಪೂರ್ವಪಕ್ಷವ್ಯಾವೃತ್ಯರ್ಥಃ | ನೋತ್ತರಸ್ಮಾದಪಿ ವಾಕ್ಯಾತ್ ಇಹ ಜೀವಸ್ಯ ಆಶಜ್ಞಾ ಸಂಭವತಿ ಇತ್ಯರ್ಥಃ | ಕಸ್ಮಾತ್ ? ಯತಸ್ತತ್ರಾಪಿ ಆವಿರ್ಭೂತಸ್ವರೂಪೋ ಜೀವೋ ವಿವಕ್ಷತೇ | ಆವಿರ್ಭೂತಂ ಸ್ವರೂಪಮ್ ಅಸ್ಮ ಇತಿ ಆವಿರ್ಭೂತಸ್ವರೂಪಃ | ಭೂತಪೂರ್ವಗತ್ಯಾ ಜೀವವಚನಮ್ | ಏತದುಕ್ತಂ ಭವತಿ | ‘ಯ ಏಷೋಕ್ಷಿಣಿ’ (ಛಾಂ. -೭-೪) ಇತಿ ಅಕ್ಷಿಲಕ್ಷಿತಂ ದ್ರಷ್ಟಾರಂನಿರ್ದಿಶ್ಯ ಉದಶರಾವಬ್ರಾಹ್ಮಣೇನ ಏನಂ ಶರೀರಾತ್ಮತಾಯಾ ವಾವ್ಯ “ಏತಂ ತೈವ ತೇ’ (ಛಾಂ. ೮-೯-೩….) ಇತಿ

  1. ಪ್ರಜಾಪತಿಯು ಮೊದಲು ಇಂದ್ರಿಯಗಳಿಂದ ನೋಡುತ್ತಿರುವ ಜೀವನನ್ನೂ ಆಮೇಲೆ ಕನಸುಕಾಣುತ್ತಿರುವ ಜೀವನನ್ನೂ ಬಳಿಕ ನಿದ್ರಿಸುತ್ತಿರುವ ಜೀವನನ್ನೂ ಆಮೇಲೆ ಶರೀರವನ್ನು ಬಿಟ್ಟಿದ್ದ ಜೀವನನ್ನೂ ಹೇಳಿರುತ್ತಾನೆ. ಈ ಪ್ರಕರಣದಲ್ಲಿ ಬ್ರಹ್ಮವು ಬರುವದಕ್ಕೆ ಕಾರಣವಿಲ್ಲ - ಎಂದು ಪೂರ್ವಪಕ್ಷಿಯ ಅಭಿಪ್ರಾಯ.

೪೧೮

ಬ್ರಹ್ಮಸೂತ್ರಭಾಷ್ಯ

[ಅ. ೧, ಪು. ೩.

ಪುನಃಪುನಸ್ತಮೇವ ವ್ಯಾಖ್ಯೆಯನ ಆಕೃಷ್ಯ ಸ್ವಪ್ನ ಸುಷುಪ್ರೋಪನ್ಯಾಸಕ್ರಮೇಣ “ಪರಂಜ್ಯೋತಿರುವಸಂಪದ್ಯ ಸ್ಟೇನ ರೂಪೇಣಾಭಿನಿಷ್ಪದ್ಯತೇ’ (ಛಾಂ. ೮-೧೨-೩) ಇತಿ ಯದಸ್ಯ ಪಾರಮಾರ್ಥಿಕಂ ಸ್ವರೂಪಂ ಪರಂ ಬ್ರಹ್ಮ ತದ್ರೂಪತಯಾ ಏನಂ ಜೀವಂ ವ್ಯಾಚಷ್ಟೇ, ನ ಜೈವೇನ ರೂಪೇಣ 1 ಯತ್ ಪರಂಜ್ಯೋತಿರುಪಸಂಪತ್ಯವ್ಯಂ ಶ್ರುತಮ್, ತತ್ ಪರಂ ಬ್ರಹ್ಮ । ತಚ್ಚ ಅಪಹಪಾಹ್ಮತ್ಯಾದಿಧರ್ಮಕಮ್, ತದೇವ ಚ ಜೀವಸ್ಯ ಪಾರಮಾರ್ಥಿಕಂ ಸ್ವರೂಪಮ್ ತತ್ವಮಸಿ’ (ಛಾಂ. ೬-೮-೭) ಇತ್ಯಾದಿಶಾಸ್ತ್ರಭ್ಯಃ, ನೇತರತ್ ಉಪಾಧಿಕಲ್ಪಿತಮ್ | ಯಾವದೇವ ಹಿ ಸ್ಟಾಣಾವಿವ ಪುರುಷಬುದ್ಧಿಂ ದೈತಲಕ್ಷಣಾಮ್ ಅವಿದ್ಯಾಂ ನಿವರ್ತಯನ್‌ ಕೂಟಸ್ಥನಿತ್ಯ ದೃಕ್ಷರೂಪಮ್ ಆತ್ಮಾನಮ್ ‘ಅಹಂ ಬ್ರಹ್ಮಾಸ್ಮಿ’ ಇತಿ ನ ಪ್ರತಿಪದ್ಯತೇ ತಾವತ್ ಜೀವಸ್ಯ ಜೀವತ್ವಮ್ |ಯದಾ ತು ದೇಹೇನ್ಸಿಯಮನೋಬುದ್ಧಿಸಜ್ಜಾತಾತ್ ವ್ಯುತ್ಥಾಷ್ಯ ಶ್ರುತ್ಯಾ ಪ್ರತಿಬೋಧ್ಯತೇ “ನಾಸಿ ತ್ವಂ ದೇಹೇಯಮನೋಬುದ್ದಿ ಸಜ್ಜಾತಂ, ನಾಸಿ ಸಂಸಾರೀ, ಕಿಂ ತರ್ಹಿ ತದ್ ಯತೃತ್ಯಮ್ ಸ ಆತ್ಮಾ ಚೈತನ್ಯಮಾತ್ರಸ್ವರೂಪಃ ತತ್ ತ್ವಮಸಿ’ ಇತಿ ತದಾ ಕೂಟಸ್ಥನಿತ್ಯದೃಕ್ಷರೂಪಮ್ ಆತ್ಮಾನಂ ಪ್ರತಿಬುಧ್ಯ ಅಸ್ಮಾತ್ ಶರೀರಾದ್ಯಭಿಮಾನಾತ್ ಸಮುತ್ತಿಷ್ಠನ್ ಸ ಏವ ಕೂಟಸ್ಥನಿತ್ಯದೃಕ್ಷ್ಮರೂಪಃ ಆತ್ಮಾ ಭವತಿ | “ಸ ಯೋ ಹ ವೈ ತತ್ ಪರಮಂ ಬ್ರಹ್ಮ ವೇದ ಬ್ರಹ್ಮವ ಭವತಿ’’ (ಮುಂ. ೩-೨-೯) ಇತ್ಯಾದಿಶ್ರುತಿಭ್ಯಃ | ತದೇವ ಚ ಅಸ್ಯ ಪಾರಮಾರ್ಥಿಕಂ ಸ್ವರೂಪಂ ಯೇನ ಶರೀರಾತ್ ಸಮುತ್ಸಾಯ ಸ್ಟೇನ ರೂಪೇಣ ಅಭಿನಿಷ್ಪದ್ಯತೇ ||

(ಭಾಷ್ಯಾರ್ಥ) | ಅವನಿಗೆ (ಹೀಗ) ಉತ್ತರವನ್ನು ಹೇಳಬೇಕು : ಆವಿರ್ಭೂತಸ್ವರೂಪನನ್ನೇ (ಇಲ್ಲಿ ಹೇಳಿದೆ. ಸೂತ್ರದಲ್ಲಿರುವ) ತುಶಬ್ದವು ಪೂರ್ವಪಕ್ಷವನ್ನು ಅಲ್ಲಗಳೆಯು ವದಕ್ಕೆ. ಮುಂದಿನ (ಪ್ರಜಾಪತಿ) ವಾಕ್ಯದಿಂದಲೂ ಇಲ್ಲಿ (ದಹರಾಕಾಶವು) ಜೀವನೆಂಬ ಆಶಂಕೆಯು ಉಂಟಾಗುವಹಾಗಿಲ್ಲ ಎಂದರ್ಥ. ಏಕ ? ಎಂದರೆ ಅಲ್ಲಿಯೂ ಆವಿರ್ಭೂತ ಸ್ವರೂಪನಾದ ಜೀವನನ್ನು ಹೇಳಬೇಕೆಂದು ಹೊರಟಿದೆಯಾದ್ದರಿಂದ, ಈತನ ಸ್ವರೂಪವು (ಅಲ್ಲಿ) ಹೊರತೋರಿಕೊಳ್ಳುವದರಿಂದ (ಇವನು) ಆವಿರ್ಭೂತಸ್ವರೂಪನು. (ಇವ ನನ್ನು ) ಜೀವನೆಂದಿರುವದು ಭೂತಪೂರ್ವಗತಿಯಿಂದ.’

ಇಲ್ಲಿ ಇಷ್ಟನ್ನು ಹೇಳಿದಂತಾಗಿದೆ : “ಕಣ್ಣಿನಲ್ಲಿ ಯಾವ ಈ (ಪುರುಷನು)” (ಛಾಂ. ೮-೭-೪) ಎಂದು ಕಣ್ಣಿನಲ್ಲಿ ಕಾಣುವ ದ್ರಷ್ಟವನ್ನು ತಿಳಿಸಿ, ನೀರಿನ ಶ್ರಾವೆಯ (ದೃಷ್ಟಾಂತದಲ್ಲಿ ಬ್ರಾಹ್ಮಣದಲ್ಲಿ ಇವನು ಶರೀರಾತ್ಮನೆಂಬ (ಭಾವನೆಯಿಂದ) ತಪ್ಪಿಸಿ,

  1. ಹಿಂದೆ ಜೀವನಾಗಿದ್ದ ಕಾರಣದಿಂದ.

  2. ಛಾಂ. ೮-೮ ರಲ್ಲಿ.

ಅಧಿ. ೫. ಸೂ. ೧೯] ತನ್ನ ರೂಪವನ್ನು ತಾನೇ ಪಡೆಯುವದೆಂದರೆ ಏನು ? ೪೧೯ “ಇವನನ್ನೇ ನಿನಗೆ (ಮತ್ತೂ) ವಿವರಿಸಿ ತಿಳಿಸುತ್ತೇನೆ” (ಛಾಂ. ೮-೬-೩) ಎಂದು ಮತ್ತೆಮತ್ತೆ ಅವನನ್ನೇ ವಿವರಿಸಿ ಹೇಳುವೆನೆಂದು ಎಳೆದುಕೊಂಡು ಸ್ವಪ್ನಸುಷುಪ್ತಿಗಳನ್ನು (ಹೇಳುವ) ಕ್ರಮದಿಂದ ಹೆಚ್ಚಿನ ಜ್ಯೋತಿಯನ್ನು ಸೇರಿ ತನ್ನ ರೂಪದಿಂದ ಸಿದ್ಧನಾಗುತ್ತಾನೆ’ (ಛಾಂ. ೮-೧೨-೩) ಎಂದು ಈ (ಜೀವನ) ಪಾರಮಾರ್ಥಿಕವಾದ ಸ್ವರೂಪವಾದ ಪರಬ್ರಹ್ಮವಿದೆಯಲ್ಲ, ಆ ರೂಪದಿಂದಲೇ ಈ ಜೀವನನ್ನು (ಪ್ರಜಾ ಪತಿಯು) ಹೇಳಿರುತ್ತಾನೆಯೇ ಹೊರತು ಜೀವರೂಪದಿಂದ (ಹೇಳಿ)ಲ್ಲ. (ಇವನು) ಸೇರಬೇಕಾದ ಹೆಚ್ಚಿನ ಜ್ಯೋತಿ ಎಂದು ಯಾವದನ್ನು ಶ್ರುತಿಯಲ್ಲಿ ಹೇಳಿದೆಯೋ ಅದೇ ಬ್ರಹ್ಮವು, ಅದೇ ಅಪಹತಾಷ್ಕೃತ್ವಾದಿಧರ್ಮಗಳುಳ್ಳದ್ದು. ಮತ್ತು ಅದೇ ನೀನಾಗಿರುವೆ” (ಛಾಂ. ೬-೮-೭) ಮುಂತಾದ ಶಾಸ್ತ್ರಗಳ ಪ್ರಮಾಣದಿಂದ, ಅದೇ (ಈ) ಜೀವನ ಪಾರಮಾರ್ಥಿಕರೂಪವೇ ಹೊರತು ಉಪಾಧಿಕಲ್ಪಿತವಾದ ಮತ್ತೊಂದಲ್ಲ. ಎಲ್ಲಿಯವರೆಗೆ ಮೋಟುಮರದಲ್ಲಿ ಮನುಷ್ಯನೆಂಬ ಬುದ್ಧಿಯನ್ನು (ತೊಲಗಿಸು)ವಂತ ದೃತವನ್ನು ತಿಳಿಸುವ ಅವಿದ್ಯೆಯನ್ನು ತೊಲಗಿಸಿ ಕೂಟಸ್ಥನಿತ್ಯನೂ ದೃಕ್ಷರೂಪನೂ ಆಗಿರುವ ತನ್ನನ್ನು ನಾನು ಬ್ರಹ್ಮವಾಗಿರುವನು’ ಎಂದು ಅರಿತುಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಜೀವನ ಜೀವತ್ವ (ವಿರುತ್ತದೆ). ಆದರೆ ಯಾವಾಗ ದೇಹೇಂದ್ರಿಯ ಮನೋಬುದ್ದಿಗಳ ಸಂಘಾತವನ್ನು ಬಿಟ್ಟೆಬ್ಬಿಸಿ “ನೀನು ದೇಹೇಂದ್ರಿಯಮನೋಬುದ್ದಿ ಗಳ ಸಂಘಾತವಲ್ಲ, ಸಂಸಾರಿಯಲ್ಲ, ಮತ್ತೇನೆಂದರೆ ಆ ಸತ್ಯನಾಗಿರುವ, ಆ ಚೈತನ್ಯ ಸ್ವರೂಪನಾದ ಆತ್ಮನಾಗಿರುವದಲ್ಲ, ಅದೇ ನೀನಾಗಿರುವೆ”, ಎಂದು ಶ್ರುತಿಯು ತಿಳಿಸಿ ಕೊಡುವದೋ ಆಗ ಕೂಟಸ್ಕನಿತ್ಯನೂ ದೃಘ್ನರೂಪನೂ ತಾನೆಂದು ಅರಿತುಕೊಂಡು ಈ ಶರೀರವೇ ಮುಂತಾದವುಗಳ ಅಭಿಮಾನವನ್ನು ಬಿಟ್ಟಿದ್ದು ಅದೇ ಕೂಟಸ್ಥನಿತ್ಯದೃಕ್ಷ ರೂಪನಾದ ಆತ್ಮನಾಗುತ್ತಾನೆ. “ಯಾವನಾದರೆ ಆ ಪರಮಬ್ರಹ್ಮವನ್ನು ಅರಿತುಕೊಳ್ಳು ವನೋ ಅವನು ಬ್ರಹ್ಮವೇ ಆಗುತ್ತಾನೆ’ (ಮುಂ. ೩-೨-೯) ಎಂಬಿವೇ ಮುಂತಾದ ಶ್ರುತಿಗಳಿಂದ (ಇದು ಸಿದ್ಧವಾಗುತ್ತದೆ). (ಹೀಗೆ) ಶರೀರವನ್ನು ಬಿಟ್ಟಿದ್ದು ಯಾವ ತನ್ನ ರೂಪದಿಂದ ಸಿದ್ಧನಾಗುತ್ತಾನೋ ಅದೇ ಇವನ ಪಾರಮಾರ್ಥಿಕವಾದ ಸ್ವರೂಪವು.

ತನ್ನ ರೂಪವನ್ನು ತಾನೇ ಪಡೆಯುವದೆಂದರೆ ಏನು ?

(ಭಾಷ್ಯ) ೨೬೫. ಕಥಂ ಪುನಃ ಸ್ವಂ ಚ ರೂಪಂ ಸ್ಟೇನೈವ ಚ ನಿಷ್ಪದ್ಯತೇ ಇತಿ ಸಂಭವತಿ ಕೂಟಸ್ಥನಿತ್ಯಸ್ಯ ? ಸುವರ್ಣಾದೀನಾಂ ತು ದ್ರವ್ಯಾನರಸಂಪರ್ಕಾತ್ ಅಭಿಭೂತ

  1. ಒಂದಾಗುತ್ತಲೊಂದನ್ನು ಹೇಳಿದ ಮೇಲೆ.

೪೨೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಸ್ವರೂಪಾಣಾಮ್ ಅನಭಿವ್ಯಕ್ತಾಸಾಧಾರಣವಿಶೇಷಾಣಾಂ ಕಾರಪ್ರಕ್ಷೇಪಾದಿಭಿಃ ಶೋಧ ಮಾನಾನಾಂ ಸ್ವರೂಪೇಣ ಅಭಿನಿಷ್ಪತ್ತಿ: ಸ್ಮಾತ್ | ತಥಾ ನಕ್ಷತ್ರಾದೀನಾಮ್ ಅಹನಿ ಅಭಿಭೂತಪ್ರಕಾಶಾನಾಮ್ ಅಭಿಭಾವಕವಿಯೋಗೇ ರಾತ್ರ ಸ್ವರೂಪೇಣ ಅಭಿನಿಷ್ಪತ್ತಿ: ಸ್ಮಾತ್ ! ನ ತು ತಥಾ ಆತ್ಮಚೈತನ್ಯ ಜ್ಯೋತಿಷೋ ನಿತ್ಯಸ್ಯ ಕೇನಚಿತ್ ಅಭಿಭವಃ ಸಂಭವತಿ | ಅಸಂಸರ್ಗಿತ್ವಾತ್ ಮ್ಮ ಇವ | ದೃಷ್ಟವಿರೋಧಾಚ್ಚ | ದೃಷ್ಟಿ ಶ್ರುತಿಮತಿವಿಜ್ಞಾತಯೋ ಹಿ ಜೀವಸ್ಯ ಸ್ವರೂಪಮ್ | ತಚ್ಚ ಶರೀರಾತ್ ಅಸಮುತ್ತಿತಸ್ಕಾಪಿ ಜೀವಸ್ಯ ಸದಾ ನಿಷ್ಪನ್ನಮೇವ ದೃಶ್ಯತೇ | ಸರ್ವೊ ಹಿ ಜೀವಃ ಪಶ್ಯನ್, ಶೃಣ್ವನ್, ಮನ್ನಾನೋ, ವಿಜಾನನ್ ವ್ಯವಹರತಿ | ಅನ್ಯಥಾ ವ್ಯವಹಾರಾನುಪಪತ್ತೇ ತಚೇತ್‌ ಶರೀರಾತ್ ಸಮುತ್ತಿತಸ್ಯ ನಿಷ್ಟತ, ಪ್ರಾಕ್ ಸಮುತ್ಸಾನಾದ್ ದೃಷ್ಟೂ ವ್ಯವಹಾರೋ ವಿರುಧೈತ | ಅತಃ ಕಿಮಾತ್ಮಕಮಿದಂ ಶರೀರಾತ್ ಸಮುತ್ಥಾನಮ್, ಕಮಾತ್ಮಿಕಾ ವಾ ಸ್ವರೂಪೇಣ ಅಭಿನಿಷ್ಪತ್ತಿರಿತಿ ?

(ಭಾಷ್ಯಾರ್ಥ) | (ಆಕ್ಷೇಪ) :- ಇನ್ನು ರೂಪವು ತನ್ನದೇ ಆಗಿದೆ, ಮತ್ತು ತನ್ನ (ರೂಪ) ದಿಂದಲೇ ಸಿದ್ಧನಾಗುತ್ತಾನೆ - ಎಂಬುದು ಕೂಟಸ್ಥನಿತ್ಯನಾದ (ಆತ್ಮನಿಗೆ) ಹೇಗೆ (ಹೊಂದುತ್ತದೆ) ? ಮತ್ತೊಂದು ದ್ರವ್ಯದ ಸಂಪರ್ಕದಿಂದ ಸ್ವರೂಪವು ಮಸಕಾಗಿರುವ ಚಿನ್ನವೇ ಮುಂತಾದವುಗಳಿಗಾದರೆ (ಅವುಗಳ) ಅಸಾಧಾರಣವಾದ ವಿಶೇಷ (ರೂಪವು) ಹೊರತೋರಿಕೊಳ್ಳದೆ ಇರುವದರಿಂದ ಉಪ್ಪನ್ನು ಹಾಕುವದೇ ಮುಂತಾದವುಗಳಿಂದ ಶುದ್ದಿಗೊಳಿಸಿದರೆ (ಅವು) ಸ್ವರೂಪದಿಂದ ಸಿದ್ಧವಾಗುವವು ಎಂಬುದು ಆಗಬಹುದು. ಹಾಗೆಯೇ ನಕ್ಷತ್ರಾದಿಗಳಿಗೆ ಹಗಲು ಪ್ರಕಾಶವು ಮಂಕಾಗಿರುವದರಿಂದ ಮಂಕುಗೊಳಿಸಿದ (ಸೂರ್ಯನ ಬೆಳಕು ಹೋಗಲು ಅವು) ರಾತ್ರೆಯಲ್ಲಿ ತಮ್ಮರೂಪದಿಂದ ಸಿದ್ಧವಾಗುವ ಎಂಬುದು ಆಗಬಹುದು. ಆದರೆ ನಿತ್ಯವಾಗಿರುವ ಆತ್ಮಚೈತನ್ಯಜ್ಯೋತಿಯು ವಿತರಿಂದ ಲಾದರೂ ಮಂಕಾಗುವದೆಂಬುದು ಆಗುವಹಾಗಿಲ್ಲ ; ಏಕೆಂದರೆ (ಆ ಜ್ಯೋತಿಯು) ಆಕಾಶದಂತೆ (ಮತ್ತೊಂದರ) ಸಂಬಂಧವಿಲ್ಲದ್ದು.

(ಅನುಭವದಲ್ಲಿ ) ಕಂಡಿರುವದಕ್ಕೆ ವಿರೋಧವಾಗುವದರಿಂದಲೂ (ಈ ವಾದವು * 1. ಸಾಧನಾನುಷ್ಠಾನವನ್ನು ಮಾಡಿದ ಬಳಿಕ ಸಂಸಾರಕಲ್ಮಷವು ಹೋಗುವದೆಂದು ಹೇಳುವ ವಾದಿಗಳ ಪಕ್ಷದಲ್ಲಿ ದೋಷವನ್ನು ಹೇಳುವದಕ್ಕೆ ಈ ದೃಷ್ಟಾಂತವನ್ನು ಕೊಟ್ಟಿದೆ. ೧-೪-೨೧ರಲ್ಲಿ ಕೊಟ್ಟಿರುವ ಔಡುಲೋಮಿಪಕ್ಷದ ತಿರಸ್ಕಾರವಿದನ್ನಬಹುದು.

  1. ಯಾವಾಗಲೂ ಇದ್ದುಕೊಂಡಿರುವ ಚೈತನ್ಯಸ್ವರೂಪವು ಸಂಸಾರದಶೆಯಲ್ಲಿ ಅವಿದ್ಯಾದಿ ಗಳಿಂದ ಮಂಕಾಗಿರುವದೆಂದು ಹೇಳುವವರ ಮತವನ್ನು ಇಲ್ಲಿ ತಳ್ಳಿಹಾಕಿದೆ.

ಅಧಿ. ೫. ಸೂ. ೧೯] ಸಿದ್ಧಾಂತ : ಸ್ವರೂಪದಲ್ಲಿಯೇ ಇರುವ ಜೀವನು

೪೨೧

ಸರಿಯಾಗಿ ಕಾಣುವದಿಲ್ಲ). ಹೇಗೆಂದರೆ, ನೋಡುವದು, ಕೇಳುವದು, ಆಲೋಚಿಸು ವದು, ಅರಿತುಕೊಳ್ಳುವದು - ಇವುಗಳಲ್ಲವೆ, ಜೀವನ ಸ್ವರೂಪವು ? ಅದು ಶರೀರವನ್ನು ಬಿಟ್ಟೇಳದೇ ಇರುವ ಜೀವನಿಗೂ ಯಾವಾಗಲೂ ಸಿದ್ಧವಾಗಿಯೇ (ಇರುವದು) ಕಂಡುಬರುತ್ತದೆ. ಏಕೆಂದರೆ ಪ್ರತಿಯೊಬ್ಬ ಜೀವನೂ ಯಾವಾಗಲೂ ನೋಡುತ್ತಾ ಕೇಳುತ್ತಾ, ಆಲೋಚಿಸುತ್ತಾ ಅರಿಯುತ್ತಾ ವ್ಯವಹಾರಮಾಡುತ್ತಿರುತ್ತಾನೆ ; ಹಾಗಿಲ್ಲ ದಿದ್ದರೆ ವ್ಯವಹಾರವೇ ಆಗುವಹಾಗಿರುವದಿಲ್ಲ. ಆ (ಸ್ವರೂಪವು) ಶರೀರವನ್ನು ಬಿಟ್ಟೆದ್ದವನಿಗೆ ಸಿದ್ಧವಾಗುವ(ದೆನ್ನುವ)ದಾದರೆ, (ಹಾಗೆ) ಬಿಟ್ಟೇಳುವದಕ್ಕೆ ಮುಂಚೆ ಕಾಣುವ ವ್ಯವಹಾರಕ್ಕೆ ವಿರುದ್ಧವಾಗುತ್ತದೆ. ಆದ್ದರಿಂದ ಶರೀರವನ್ನು ಬಿಟ್ಟೇಳುವದೆಂಬ ಇದರ ಸ್ವರೂಪವು ಯಾವದು ? ಸ್ವರೂಪದಿಂದ ಸಿದ್ಧವಾಗುವದು ಎಂಬಿದರ ಸ್ವರೂಪವಾದರೂ ಯಾವದು ?

ಸಿದ್ಧಾಂತ : ಸ್ವರೂಪದಲ್ಲಿಯೇ ಇರುವ ಜೀವನು ವಿದ್ಯೆಯಿಂದ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ

(ಭಾಷ್ಯ) ೨೬೬. ಅತ್ರೋಚ್ಯತೇ | ಪ್ರಾಗ್ ವಿವೇಕವಿಜ್ಞಾನೋತ್ಪತೇಃ ಶರೀರೇನ್ಸಿಯ ಮನೋಬುದ್ಧಿ ವಿಷಯವೇದನೋಪಾಧಿಭಿಃ ಅವಿವಿಕ್ತಮಿವ ಜೀವಸ್ಯ ದೃಷ್ಟಾದಿ ಜ್ಯೋತಿಃ ಸ್ವರೂಪಂ ಭವತಿ ಯಥಾ ಶುದ್ಧಸ್ಯ ಸ್ಪಟಿಕಸ್ಯ ಸ್ವಾಯ್ಸಂಶೌಕೃಂಚ ಸ್ವರೂಪಂ ಪ್ರಾಗ್ ವಿವೇಕಗ್ರಹಣಾತ್ ರಕ್ತನೀಲಾದ್ಯುಪಾಧಿಭಿರವಿವಿಕ್ತಮಿವ ಭವತಿ | ಪ್ರಮಾಣಜನಿತ ವಿವೇಕಗ್ರಹಣಾತ್ತು ಪರಾಚೀನಃ ಸ್ಪಟಿಕಃ ಸ್ಕಾಚ್‌ನ ಶೆಕ್ಸ್ನ ಚ ಸ್ಟೇನ ರೂಪೇಣ ಅಭಿನಿಷ್ಪದ್ಯತೇ ಇತ್ಯುಚ್ಯತೇ ಪ್ರಾಗಪಿ ತಥೈವ ಸನ್ | ತಥಾ ದೇಹಾದ್ಯುಪಾಧ್ಯ ವಿವಿಕ್ತವ ಸತೋ ಜೀವಸ್ಯ ಶ್ರುತಿಕೃತಂ ವಿವೇಕವಿಜ್ಞಾನಂ ಶರೀರಾತ್ ಸಮುತ್ಸಾನಮ್, ವಿವೇಕವಿಜ್ಞಾನಫಲಂ ಸ್ವರೂಪೇಣ ಅಭಿನಿಷ್ಪತ್ತಿ: ಕೇವಲಾತ್ಮ ಸ್ವರೂಪಾವಗತಿಃ | ತಥಾ ವಿವೇಕಾವಿವೇಕಮಾತೇವ ಆತ್ಮನೋಶರೀರತ್ವಂ ಸಶರೀರತ್ವಂ ಚ | ಮyವರ್ಣಾತ್ ‘ಅಶರೀರಂ ಶರೀರೇಷು” (ಕ. ೧-೨-೨೨) ಇತಿ | “ಶರೀರಸೋsಪಿ ಕೌನೇಯ ನ ಕರೋತಿ ನ ಲಿಪ್ಯತೇ” (ಗೀ. ೧೩-೩೧) ಇತಿ ಚ ಸಶರೀರತ್ವಾಶರೀರತ್ವವಿಶೇಷಾಭಾವಸ್ಮರಣಾತ್ | ತಸ್ಮಾತ್ ವಿವೇಕವಿಜ್ಞಾನಾ

  1. ಶರೀರವನ್ನು ಬಿಟ್ಟೇಳುವದೆಂಬುದು ಬೇರೊಂದು ಅವಸ್ಥೆಯಂದು ಪೂರ್ವಪಕ್ಷಿ ಭಾವಿಸಿರುತ್ತಾನೆ.

  2. ‘ಅವಿವಿಕ್ತವ’ ಎಂಬ ಅಚ್ಚಿನ ಪಾಠವು ಸರಿಯಲ್ಲ.ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಭಾವಾತ್ ಅನಾವಿರ್ಭೂತಸ್ವರೂಪಃ ಸನ್ ವಿವೇಕವಿಜ್ಞಾನಾತ್ ಆವಿರ್ಭೂತಸ್ವರೂಪ ಇತ್ಯುಚ್ಯತೇ | ನ ತು ಅನ್ಯಾದೃಶೌ ಆವಿರ್ಭಾವಾನಾವಿರ್ಭಾವ್ ಸ್ವರೂಪಸ್ಯ ಸಂಭವತಃ | ಸ್ವರೂಪಾದೇವ ||

(ಭಾಷ್ಯಾರ್ಥ) ಇದಕ್ಕೆ (ಸಮಾಧಾನವನ್ನು) ಹೇಳುತ್ತೇವೆ : ವಿವೇಕವಿಜ್ಞಾನವುಂಟಾಗುವ ಮುಂಚೆ ಶರೀರ, ಇಂದ್ರಿಯಗಳು, ಮನಸ್ಸು, ಬುದ್ದಿ, ವಿಷಯವೇದನೆ - ಎಂಬ ಉಪಾಧಿಗಳಿಂದ ಜೀವನ ದೃಷ್ಟಿಯೇ ಮುಂತಾಗಿರುವ ಜ್ಯೋತಿಯ ಸ್ವರೂಪವು ವಿಂಗಡವಾಗದಿರುವಂತೆ ಇರುತ್ತದೆ. ಹೇಗೆ ಶುದ್ಧವಾದ ಸ್ಪಟಿಕದ ಸ್ವರೂಪವಾದ ಸ್ವಚ್ಚತ್ವವೂ ಬಿಳುಪೂ ವಿಂಗಡಿಸಿ ಅರಿಯುವದಕ್ಕೆ ಮುಂಚೆ ಕೆಂಪು, ಕಪ್ಪು – ಮುಂತಾದ (ಬಣ್ಣದ) ಉಪಾಧಿಗಳಿಂದ ವಿಂಗಡವಾಗದಂತೆ ಇರುವ ಪ್ರಮಾಣದಿಂದುಂಟಾದ ವಿವೇಕಗ್ರಹಣವಾದ ಬಳಿಕವಾದರೆ ಸ್ಪಟಿಕವು ಮೊದಲೂ ಹಾಗೆಯೇ ಇದ್ದದ್ದೇ ಸ್ವಚ್ಛತ್ವ, ಬಿಳುಪು - ಎಂಬ ತನ್ನ ರೂಪದಿಂದ ಸಿದ್ಧವಾಗುತ್ತದೆ ಎನ್ನುವರೋ’ ಹಾಗೆಯೇ ದೇಹವೇ ಮುಂತಾದ ಉಪಾಧಿಗಳಿಂದ ವಿಂಗಡವಾಗದಂತೆ ಇರುವ ಜೀವನಿಗೆ ಶ್ರುತಿಯಿಂದುಂಟಾದ ವಿವೇಕವಿಜ್ಞಾನವು ಶರೀರವನ್ನು ಬಿಟ್ಟೇಳುವದು, (ಆ) ವಿವೇಕವಿಜ್ಞಾನದ ಫಲವು ಸ್ವರೂಪದಿಂದ ಸಿದ್ಧವಾಗುವದು ಎಂದರೆ ಕೇವಲಾತ್ಮಸ್ವರೂಪವನ್ನು ಗೊತ್ತುಪಡಿಸಿ ಕೂಳ್ಳುವದು. ಹೀಗೆಯೇ ಬರಿಯ ವಿವೇಕ, ಅವಿವೇಕ - ಇವುಗಳಿಂದಲೇ ಆತ್ಮನು ಅಶರೀರನಾಗಿರುವದು ಮತ್ತು ಸಶರೀರನಾಗಿರುವದು. “ಅಶರೀರನಾಗಿ ಶರೀರಗಳಲ್ಲಿ ರುವ’ (ಕ. ೧-೨-೨೨) ಎಂಬ ಮಂತ್ರವರ್ಣದಿಂದಲೂ “ಕೌಂತೇಯನೆ, ಶರೀರ ದಲ್ಲಿದ್ದರೂ ಮಾಡುವದಿಲ್ಲ, ಲಿಪ್ತನಾಗುವದೂ ಇಲ್ಲ” (ಗೀ. ೧೩-೩೧) ಎಂದು ಸಶರೀರತ್ವ, ಅಶರೀರತ್ವ - ಇವುಗಳಲ್ಲಿ ವಿಶೇಷವೇನೂ ಇಲ್ಲವೆಂದು ಹೇಳುವ ಸ್ಮೃತಿ

  1. ಸ್ಪಟಿಕವು ಕೆಂಪಾಗಿ ಕಾಣುವಾಗಲೂ ಕೆಂಪಾಗಿರುವದಿಲ್ಲವಾದರೂ ಅದು ಸ್ವಚ್ಛವಾಗಿ ಬೆಳ್ಳಗಿದೆ ಎಂಬ ವಿವೇಕವುಂಟಾಗಿರುವದಿಲ್ಲ ; ಆದ್ದರಿಂದ ಅದರ ಸ್ವರೂಪವು ವಿಂಗಡ ವಾಗದಿರುವಂತೆ ಇರುತ್ತದೆ ಎಂದಿದ.

  2. ದೃಷ್ಟಾಂತದ ಸ್ಪಟಿಕದಂತ ಜೀವನ ಸ್ವರೂಪವು ದೇಹಾದ್ಯುಪಾಧಿಗಳಿಂದ ವಿವಿಕ್ತ ವಾಗಿಲ್ಲದಂತೆ ಕಾಣುತ್ತಿರುವಾಗಲೂ ವಿಂಗಡವಾಗಿಯೇ ಇರುತ್ತದೆ ; ವಿವೇಕವಿಜ್ಞಾನದಿಂದ ಅದು ವಿಂಗಡವಾಗಿಯೇ ಇದೆ ಎಂಬುದು ತಿಳಿದುಬರುತ್ತದೆ ; ಅಷ್ಟ.

  3. ಅಶರೀರತ್ವವನ್ನು ಹೊಗಳುವ (ಛಾಂ. ೮-೧೨-೧) ವಾಕ್ಯವಾದ ಬಳಿಕ, ಶರೀರವನ್ನು ಬಿಟ್ಟಳುವನೆಂಬ (ಛಾಂ. ೮-೧೨-೩) ಈ ವಾಕ್ಯವು ಬಂದಿರುವದರಿಂದ ಸತ್ತ ಬಳಿಕವೇ ಈ ಫಲವಾಗುವದಂದು ಶಂಕಿಸಿಯಾರೆಂದು ಈ ವಿಚಾರವನ್ನು ಇಲ್ಲಿ ಮಾಡಿದ.

ಅಧಿ. ೫. ಸೂ. ೧೯] ಜೀವನು ಪರಮೇಶ್ವರನಿಗಿಂತ ಭಿನ್ನವಲ್ಲ

೪೨೩

ಯಿಂದಲೂ (ಇದು ಸಿದ್ಧವಾಗುತ್ತದೆ. ಆದ್ದರಿಂದ ವಿವೇಕವಿಜ್ಞಾನವು ಇಲ್ಲದ್ದರಿಂದ ಹೊರತೋರಿಕೊಳ್ಳದ ಸ್ವರೂಪವುಳ್ಳವನಾಗಿದ್ದು ವಿವೇಕವಿಜ್ಞಾನದಿಂದ ಆವಿರ್ಭೂತ ಸ್ವರೂಪ(ನಾದನು) ಎನ್ನಿಸಿಕೊಳ್ಳುತ್ತಾನೆ. ಇಷ್ಟೇ ಹೊರತು ಬೇರೆಯ ತೆರನಾದ ಹೊರತೋರಿಕೊಳ್ಳುವದು, ತೋರಿಕೊಳ್ಳದಿರುವದು- ಇವು ಸ್ವರೂಪಕ್ಕೆ ಸಂಭವಿಸು ವದಿಲ್ಲ ; (ಅದು) ಸ್ವರೂಪವಾಗಿರುವದರಿಂದಲೇ (ಹೀಗಂದು ಏರ್ಪಡುತ್ತದೆ).

ಜೀವನು ಪರಮೇಶ್ವರನಿಗಿಂತ ಭಿನ್ನನಲ್ಲ

(ಭಾಷ್ಯ) ೨೬೭. ಏವಂ ಮಿಥ್ಯಾಜ್ಞಾನಕೃತ ಏವ ಜೀವಪರಮೇಶ್ಚರಯೋರ್ಭದೂ ನ ವಸ್ತುಕೃತಃ | ತ್ರೈಮವತ್ ಅಸಜ್ಜತ್ಯಾವಿಶೇಷಾತ್ | ಕುತಶ್ಚತದೇವಂ ಪ್ರತಿಪತ್ರವ್ಯಮ್ ? | ಯತೋ ‘ಯ ಏಷೋಕ್ಷಿಣಿ ಪುರುಷೋ ದೃಶ್ಯತೇ” ಇತ್ಯುಪದಿಶ್ಯ “ಏತದಮೃತಮಭಯಮೇತದ್ ಬ್ರಹ್ಮ”(ಛಾಂ. ೮-೭-೪) ಇತ್ಯುಪ ದಿಶತಿ | ಯೋ5ಕ್ಷಿಣಿ ಪ್ರಸಿದ್ಧೂ ದ್ರಷ್ಯಾ ದ್ರಷ್ಟನ ವಿಭಾವ್ಯತೇ, ಸಃ, ಅಮೃತಾಭಯ ಲಕ್ಷಣಾದ್ ಬ್ರಹ್ಮಣೋ ಅನ್ಯಶ್ಚಿತ್ ಸ್ಮಾತ್, ತತಃ ಅಮೃತಾಭಯಬ್ರಹ್ಮ ಸಾಮಾನಾಧಿಕರಣ್ಯಂ ನ ಸ್ಮಾತ್, ನಾಪಿ ಪ್ರತಿಜ್ಞಾಯಾತ್ಮಾ ಅಯಮ್ ಅಕ್ಷಿಲಕ್ಷಿತೋ ನಿರ್ದಿಶ್ಯತೇ | ಪ್ರಜಾಪತೇರ್ಮಷಾವಾದಿತ್ವಪ್ರಸಜ್ಜಾತ್ | ತಥಾ ದ್ವಿತೀಯೇಪಿ ಪರ್ಯಾಯೇ “ಯ ಏಷಃ ಸ್ವಷ್ಟೇ ಮಹೀಯಮಾನಶ್ವರತಿ’’ (ಛಾಂ. ೮-೧೦-೧) ಇತಿ ನ ಪ್ರಥಮಪರ್ಯಾಯನಿರ್ದಿಷ್ಮಾತ್ ಅಕ್ಷಿಪುರುಷಾತ್ ದ್ರಷ್ಟುರನ್ನೋ ನಿರ್ದಿಷ್ಟ: | “ಏತಂ ತೈವ ತೇ ಭೂರ್ಯೋನುವ್ಯಾಖ್ಯಾಸ್ಕಾಮಿ” (ಛಾಂ. ೮-೯-೩) ಇತ್ಯುಪ ಕ್ರಮಾತ್ 1 ಕಿಂ ಚ “ಅಹಮದ್ಯ ಸ್ವಷ್ಟೇ ಹಸ್ತಿನಮ್ ಅದ್ರಾಕ್ಷಮ್, ನೇದಾನೀಂ ತಂ

ಪಶ್ಯಾಮಿ’’ ಇತಿ ದೃಷ್ಟಮೇವ ಪ್ರತಿಬುದ್ದ: ಪ್ರತ್ಯಾಚಷ್ಟೇ ದ್ರಷ್ಟಾರಂ ತು ತಮೇವ ಪ್ರತ್ಯಭಿಜಾನಾತಿ ಯ ಏವಾಹಂ ಸ್ವಪ್ನಮ್ ಅದ್ರಾಕ್ಷಮ್, ಸ ಏವಾಹಂ ಜಾಗರಿತಂ ಪಶ್ಯಾಮಿ’ ಇತಿ | ತಥಾ ತೃತೀಯೇಪಿ ಪರ್ಯಾಯೇ “ನಾಹ ಖಯಮೇವಂ ಸಂಪ್ರತ್ಯಾತ್ಮಾನಂ ಜಾನಾತ್ಯಯಮಹಮಸ್ಮಿತಿ ನೋ ಏವೇಮಾನಿ ಭೂತಾನಿ’’ (ಛಾಂ. ೮-೧೧-೧) ಇತಿ ಸುಷುಪ್ತಾವಸ್ಟಾಯಾಂ ವಿಶೇಷವಿಜ್ಞಾನಾಭಾವಮೇವ ದರ್ಶಯತಿ ನ ವಿಜ್ಞಾತಾರಂ ಪ್ರತಿಷೇಧತಿ | ಯತ್ತು ತತ್ರ ‘ವಿನಾಶಮೇವಾಪೀತೋ ಭವತಿ’’ ಇತಿ,

  1. ಸ್ವರೂಪದಲ್ಲಿ ಯಾವ ಹೊಸ ವಿಶೇಷವೂ ನಿಜವಾಗಿ ಉಂಟಾಗುವದಕ್ಕೆ ಅವಕಾಶ ವಿಲ್ಲದ್ದರಿಂದ ಇಲ್ಲಿ ಹೇಳಿರುವ ವಿಶೇಷವು ಜ್ಞಾನಾಜ್ಞಾನಕೃತವೆಂದು ಏರ್ಪಡುತ್ತದೆ ಎಂದು ಭಾವ.

೪೨೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ತದಪಿ ವಿಶೇಷವಿಜ್ಞಾನವಿನಾಶಾಭಿಪ್ರಾಯಮೇವ, ನ ವಿಜ್ಞಾತೃವಿನಾಶಾಭಿಪ್ರಾಯಮ್ | “ನಹಿ ವಿಜ್ಞಾತುರ್ವಿಜ್ಞಾತೇರ್lಪರಿಲೋಪೋ ವಿದ್ಯತೇವಿನಾಶಿತ್ವಾತ್’’ (ಬೃ.೪-೩ ೩೦) ಇತಿ ಶ್ರುತ್ಯನ್ತರಾತ್ | ತಥಾ ಚತುರ್ಥಪಿ ಪರ್ಯಾಯೇ “ಏತಂ ತೈವ ತೇ ಭೂರ್ಯೋನುವ್ಯಾಖ್ಯಾಸ್ಯಾಮಿ ನೋ ಏವಾನ್ಯತಸ್ಮಾತ್’ (ಛಾಂ. ೮-೧೧-೩) ಇತ್ಯುಪಕ್ರಮ್ಮ “ಮಘವನ್ ಮರ್ತ್ಯಂ ವಾ ಇದಂ ಶರೀರಮ್’’ (ಛಾಂ. ೮-೧೨-೧) ಇತ್ಯಾದಿನಾ ಓಪನ ಶರೀರಾಯ್ಕುಪಾಧಿಸಂಬನ್ಗಪ್ರತ್ಯಾಖ್ಯಾನೇನ ಸಂಪ್ರಸಾದ ಶಬ್ಬೊದಿತಂ ಜೀವಮ್ ‘‘ಸ್ಟೇನ ರೂಪೇಣಾಭಿನಿಷ್ಪದ್ಯತೇ’’ (ಛಾಂ. ೮-೧೨-೩) ಇತಿ ಬ್ರಹ್ಮಸ್ವರೂಪಾಪನ್ನಂ ದರ್ಶಯನ್ ನ ಪರಸ್ಮಾದ್ ಬ್ರಹ್ಮಣೋSಮೃತಾಭಯ ಸ್ವರೂಪಾತ್ ಅನ್ಯಂ ಜೀವಂ ದರ್ಶಯತಿ ||

(ಭಾಷ್ಯಾರ್ಥ) ಹೀಗೆ (ನೋಡಿದರೆ) ಜೀವಪರಮೇಶ್ವರರಿಗೆ (ಕಾಣುವ) ಭೇದವು ತಪ್ಪು ತಿಳಿವಳಿಕೆಯಿಂದಾದದ್ದೇ ಹೊರತು ವಸ್ತುವಿನಿಂದಾದದ್ದಲ್ಲ. ಏಕೆಂದರೆ ಆಕಾಶದಂತೆ ಅಸಂಗನಾಗಿರುವದೆಂಬುದು (ಇಬ್ಬರಿಗೂ) ಸಮಾನವಾಗಿದೆ. ಇದು ಹೀಗೆಂದು ಮತ್ತೂ ಯಾವ (ಕಾರಣದಿಂದ) ತಿಳಿಯಬೇಕು ? ಎಂದರೆ ಕಣ್ಣಿನಲ್ಲಿ ಯಾವ ಈ ಪುರುಷನು ಕಾಣುತ್ತಿರುವನಲ್ಲ’ (ಛಾಂ. ೮-೭-೪) ಎಂದು ಉಪದೇಶಿಸಿ “ಇದೇ ಅಮೃತವು, ಅಭಯವು, ಇದು ಬ್ರಹ್ಮವು’ (ಛಾಂ. ೮-೭-೪) ಎಂದು ತಿಳಿಸಿರುತ್ತಾನೆ. ಕಣ್ಣಿ ನಲ್ಲಿರುವನೆಂದು ಪ್ರಸಿದ್ಧನಾಗಿರುವ ದ್ರಷ್ಟವು ದ್ರಷ್ಟವೆಂದು ತೋರುತ್ತಿರುವನಷ್ಟೆ, ಅವನು ಅಮೃತಾಭಯಸ್ವರೂಪವಾದ ಬ್ರಹ್ಮಕ್ಕಿಂತ ಬೇರೆಯಾಗಿದ್ದರೆ ಆಗ (ಆ ಪುರುಷನಿಗೆ) ಅಮೃತಾಭಯಬ್ರಹ್ಮದೊಡನೆ ಸಾಮಾನಾಧಿಕರಣ್ಯವು ಇರುತ್ತಿರಲಿಲ್ಲ, ಪ್ರತಿಚ್ಚಾಯಾತ್ಮನನ್ನೇ ಅಕ್ಷಿಯಲ್ಲಿ ಕಾಣುವ ಈ (ಪುರುಷನೆಂದು) ತಿಳಿಸಿದ (ಎನ್ನುವ ಹಾಗೂ) ಇಲ್ಲ. ಏಕೆಂದರೆ (ಆಗ) ಪ್ರಜಾಪತಿಯು ಸುಳ್ಳುಹೇಳಿದಂತಾಗುವದು. ಹೀಗೆಯೇ ಎರಡನೆಯ ಸಲ “ಯಾವ ಇವನು ಕನಸಿನಲ್ಲಿ ಗೌರವಿಸಲ್ಪಟ್ಟು ಸಂಚರಿಸು

  1. ಜೀವನು ದೇಹಾದಿಸಂಗವುಳ್ಳವನೆಂದಾಗಿದ್ದರೆ ಜೀವೇಶ್ವರಭೇದವು ಸ್ವಾಭಾವಿಕವೆನ್ನ ಬಹುದಾಗಿತ್ತು - ಎಂದು ಭಾವ.

  2. ಆದ್ದರಿಂದ ಈ ಸಾಮಾನಾಧಿಕರಣ್ಯವಚನವು ಜೀವನ ಸಂಸಾರಿತ್ವವನ್ನು ಅಲ್ಲಗಳೆಯು ವದಕ್ಕೆ ಬಂದಿದೆ ಎಂದು ತಿಳಿಯಬೇಕು.

  3. ಅಕ್ಷಿಪುರುಷನು ಛಾಯಾತ್ಮನಲ್ಲವೆಂಬುದಕ್ಕೆ ೧-೨-೧ರಲ್ಲಿಯೇ ಕಾರಣವನ್ನು ಕೊಟ್ಟಿರುತ್ತದೆಯಾದರೂ ಇಲ್ಲಿ ಪ್ರಜಾಪತಿಗೆ ಸುಳ್ಳುಹೇಳಿದ ದೋಷವು ಬರುವದು ಎಂಬ

ಅನಿಷ್ಟವನ್ನು ತಿಳಿಸುವದಕ್ಕಾಗಿ ಮತ್ತೊಮ್ಮೆ ಛಾಯಾತ್ಮನನ್ನು ಶಂಕಿಸಿದೆ.

೪೨೫

ಅಧಿ. ೫. ಸೂ. ೧೯] ಜೀವನು ಪರಮೇಶ್ವರನಿಗಿಂತ ಭಿನ್ನವಲ್ಲ ತಿರುವನೋ (ಇವನೇ ಆತ್ಮನು)” (ಛಾಂ. ೮-೧೦-೧) ಎಂದು ಮೊದಲನೆಯ ಪರ್ಯಾಯದಲ್ಲಿ ಹೇಳಿರುವ ಅಕ್ಷಿಪುರುಷನಾದ ದ್ರಷ್ಟವಿಗಿಂತ ಬೇರೆ (ಒಬ್ಬ)ನನ್ನು ತಿಳಿಸಿರುವದಿಲ್ಲ; ಏಕೆಂದರೆ ‘ಈತನನ್ನೇ ನಿನಗೆ ಮತ್ತೂ ವಿವರಿಸಿ ಹೇಳುವೆನು’ (ಛಾಂ. ೮-೯-೩) ಎಂದು ಉಪಕ್ರಮಿಸಿರುತ್ತದೆ. ಇದಲ್ಲದೆ ನಾನು ಇಂದು ಕನಸಿನಲ್ಲಿ ಆನೆಯನ್ನು ಕಂಡೆನು, ಈಗ ಅದು ಕಾಣಿಸುತ್ತಿಲ್ಲ’ ಎಂದು ಎಚ್ಚತ್ತವನು (ಹಿಂದೆ ತಾನು) ಕಂಡ (ವಸ್ತು)ವನ್ನು ಮಾತ್ರ ಇಲ್ಲವೆನ್ನುತ್ತಾನೆ ; ಆದರೆ ‘ಕನಸನ್ನು ಕಂಡನಲ್ಲ, ಅದೇ ನಾನು ಎಚ್ಚರವನ್ನು ಕಾಣುತ್ತಿದ್ದೇನೆ’ ಎಂದು (ಕನಸನ್ನು) ಕಂಡವನು ತಾನೇ ಎಂದು ಗುರುತಿಸಿ ಅರಿಯುತ್ತಾನೆ. ಹೀಗೆಯೇ ಮೂರನೆಯ ಸಲವೂ “ಈಗ ಇವನು ನಾನು ಇಂಥವನಾಗಿರುವನು ಎಂದು ಅರಿಯುವದೇ ಇಲ್ಲವಲ್ಲ ! ಈ ಭೂತಗಳನ್ನೂ ಅರಿಯುವದೇ ಇಲ್ಲ (ವಲ್ಲ) !’’ (ಛಾಂ. ೮-೧೧-೧) ಎಂದು ಸುಷುಪ್ತಾವಸ್ಥೆಯಲ್ಲಿ ವಿಶೇಷವಿಜ್ಞಾನದ ಅಭಾವವನ್ನು ಮಾತ್ರ ತಿಳಿಸುತ್ತಾನೆಯೇ ಹೊರತು ಅರಿಯುವಾತನು ‘ಇಲ್ಲವೆನ್ನುವದಿಲ್ಲ.?’’ ಇನ್ನು ಅಲ್ಲಿ ‘ವಿನಾಶವನ್ನೇ ಸೇರಿದವನಾಗುತ್ತಾನೆ’’ (ಛಾಂ. ೮ ೧೧-೧) ಎಂದು ಹೇಳಿದೆಯಲ್ಲ, ಅದೂ ವಿಶೇಷವಿಜ್ಞಾನವು ವಿನಾಶ (ವಾಗುವದೆಂಬ) ಅಭಿಪ್ರಾಯದಿಂದ ಹೇಳಿದ್ದೇ ಹೊರತು ಅರಿಯುವಾತನು ವಿನಾಶವಾಗಿರುತ್ತಾನೆಂಬ ಅಭಿಪ್ರಾಯ(ದಿಂದ ಹೇಳಿ )ದ್ದಲ್ಲ. ಏಕೆಂದರೆ ‘ಅರಿಯುವಾತನ ಅರಿವಿಗೆ ಲೋಪ ವೆಂಬುದಿಲ್ಲ, ಏಕೆಂದರೆ (ಅವನು) ಅವಿನಾಶಿಯಾಗಿರುತ್ತಾನೆ’’ (ಬೃ. ೪-೩-೩೦) ಎಂದು ಬೇರೊಂದು ಶ್ರುತಿಯಿದೆ. ಇದರಂತೆ ನಾಲ್ಕನೆಯ ಸಲವೂ ‘‘ಈತನನ್ನೇ ನಿನಗೆ ಮತ್ತೂ ವಿವರಿಸಿ ಹೇಳುವೆನು, ಈತನನ್ನು ಬಿಟ್ಟು ಇನ್ನೊಂದನ್ನು ಹೇಳುವದೇ ಇಲ್ಲ” (ಛಾಂ. ೮-೧೧-೩) ಎಂದು ಉಪಕ್ರಮಿಸಿ ‘‘ಇಂದ್ರನೆ, ಈ ಶರೀರವು ಮರ್ತ್ಯವೇ? (ಛಾಂ. ೮-೧೨-೧) ಎಂದು ಮುಂತಾಗಿರುವ (ವಾಕ್ಯ) ವಿಸ್ತಾರದಿಂದ ಶರೀರವೇ ಮುಂತಾದ ಉಪಾಧಿಗಳ ಸಂಬಂಧವನ್ನು ಅಲ್ಲಗಳೆದು ಸಂಪ್ರಸಾದನೆಂಬ ಶಬ್ದದಿಂದ ಹೇಳಲ್ಪಟ್ಟ ಜೀವನನ್ನು ತನ್ನ ರೂಪದಿಂದ ಸಿದ್ಧನಾಗುತ್ತಾನೆ’ (ಛಾಂ. ೮-೧೨-೩)

    1. ಆದ್ದರಿಂದ ಎಚ್ಚರಕನಸುಗಳೆರಡಕ್ಕೂ ಸಮಾನವಾಗಿರುವ ಜೀವಸ್ವರೂಪವನ್ನು ಇಲ್ಲಿ ಪ್ರಜಾಪತಿಯು ಹೇಳಿರುತ್ತಾನೆಂದಾಯಿತು.
  1. ಇದು ಇಂಥದ್ದು ಎಂದು ತಿಳಿಯುವ ವಿಜ್ಞಾನವು ಸುಷುಪ್ತಿಯಲ್ಲಿಲ್ಲವೆಂದು ಹೇಳಿರುತ್ತಾ ನಾದ್ದರಿಂದ ಅಲ್ಲಿಯೂ ಚಿನ್ಮಾತ್ರರೂಪದಿಂದ ಇರುತ್ತಾನೆಂದು ಹೇಳಿದಂತಾಗಿದೆ.

  2. ಈ ಶ್ರುತಿಯೂ ಸುಷುಪ್ತಿಯ ವಿಷಯಕವಾದದ್ದೇ ; ಆದ್ದರಿಂದ ಪ್ರಕೃತವಾಕ್ಯದಲ್ಲಿ ಹೇಳಿರುವ ನಾಶವು ವಿಶೇಷವಿಜ್ಞಾನದ್ದೇ ಹೊರತು, ಸ್ವರೂಪಜ್ಞಾನದ್ದಲ್ಲ ಎಂದು ಸಿದ್ಧವಾಗು ತದೆ.

೪೨೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಎಂದು ಬ್ರಹ್ಮರೂಪವನ್ನು ಹೊಂದಿರುವನೆಂದು ತಿಳಿಸುವದರಿಂದ ಅಮೃತಾಭಯ ಸ್ವರೂಪವಾದ ಪರಬ್ರಹ್ಮಕ್ಕಿಂತ ಜೀವನು ಬೇರೆಯಲ್ಲವೆಂದು ತಿಳಿಸಿರುತ್ತಾನೆ.

“ಏತಂ ತೈವ’ ಎಂಬಲ್ಲಿ ಪರಮಾತ್ಮಪರಾಮರ್ಶವಿಲ್ಲ

(ಭಾಷ್ಯ) ೨೬೮. ಕೇಚಿತ್ತು ಪರಮಾತ್ಮವಿವಕ್ಷಾಯಾಂ ‘ಏತಂ ತೇವ ತೇ” ಇತಿ ಜೀವಾಕರ್ಷಣಮ್ ಅನ್ಯಾಯ್ಯಂ ಮನ್ಯಮಾನಾ, ‘ಏತಮೇವ ವಾಕ್ಕೋಪಕ್ರಮ ಸೂಚಿತಮ್ ಅಪಹಪಾಹ್ಮತ್ಯಾದಿಗುಣಕಮ್ ಆತ್ಮಾನಂ ತೇ ಭೂರ್ಯೋನುವ್ಯಾಖ್ಯಾ ಸ್ಯಾಮಿ’ ಇತಿ ಕಲ್ಪಯ | ತೇಷಾಮ್ ‘ಏತಮ್’ ಇತಿ ಸಂನಿಹಿತಾವಲಮ್ಮಿನೀ ಸರ್ವನಾಮಶ್ರುತಿಃ ವಿಪ್ರಕೃತ | ಭೂರ್ಯಶ್ರುತಿಶ್ಚ ಉಪರುದ್ರೇತ | ಪರ್ಯಾಯಾನ್ತರಾಭಿಹಿತಸ್ಯ ಪರ್ಯಾಯಾರೇ ಅನಭಿಧೀಯಮಾನಾತ್ | ಏತಂ ತೈವ ತೇ” ಇತಿ ಚ ಪ್ರತಿಜ್ಞಾಯ ಪ್ರಾಕ್ ಚತುರ್ಥಾತ್ ಪರ್ಯಾಯಾತ್‌ ಅನ್ಯಮನ್ಯಂ ವ್ಯಾಚಕ್ಷಾಣಸ್ಯ ಪ್ರಜಾಪತೇಃ ಪ್ರತಾರಕತ್ವಂ ಪ್ರಸಜ್ಜಿತ ತಸ್ಮಾತ್ ಅವಿದ್ಯಾ ಪ್ರತ್ಯುಪಸ್ಥಾಪಿತಮ್ ಅಪಾರಮಾರ್ಥಿಕಂ ಜೈವಂ ರೂಪಂ ಕರ್ತಭೋಕ್ಸರಾಗದ್ವೇಷಾದಿ ದೋಷಕಲುಷಿತಮ್ ಅನೇಕಾನರ್ಥಯೋಗಿ, ತದ್ವಿಲಯನೇನ ತದ್ವಿಪರೀತಮ್ ಅಪಹತಪಾಸ್ಮಾದಿಗುಣಕಂ ಪಾರಮೇಶ್ವರಂ ಸ್ವರೂಪಂ ವಿದ್ಯಯಾ ಪ್ರತಿಪದ್ಯತೇ’ ಸರ್ವಾದಿವಿಲಯನೇನೇವ ರಾದೀನ್ ||

(ಭಾಷ್ಯಾರ್ಥ) - ಆದರೆ ಕೆಲವು ಪರಮಾತ್ಮನನ್ನು ಹೇಳಬೇಕೆಂದು ಹೊರಟಿರುವಲ್ಲಿ “ಏತಂ ತೇವ ತೇ” (ಈತನನ್ನೇ ನಿನಗೆ ಹೇಳುವನು) ಎಂದು ಜೀವಾಕರ್ಷಣೆ (ಮಾಡಿದೆ) ಎಂಬುದು ನ್ಯಾಯವಲ್ಲ ಎಂದಣಿಸಿ ವಾಕ್ಯದ ಉಪಕ್ರಮದಲ್ಲಿ ಸೂಚಿತ ವಾಗಿರುವ ಅಪಹತಾಷ್ಕೃತ್ವವೇ ಮುಂತಾದ ಗುಣಗಳುಳ್ಳ ಇದೇ (ಪರ)ಮಾತ್ಮ ನನ್ನು ನಿನಗೆ ಮತ್ತೂ ಹೇಳುವೆನು - ಎಂದು (ಅರ್ಥವನ್ನು ) ಕಲ್ಪಿಸಿರು

  1. ಸಂಪ್ರಸಾದನನ್ನೇ ಬ್ರಹ್ಮರೂಪವನ್ನು ಹೊಂದಿರುತ್ತಾನೆಂದಿರುವದರಿಂದ ಅವಸ್ಥಾತ್ರಯ ರಹಿತವಾದ ಬ್ರಹ್ಮಸ್ವರೂಪವೇ ಜೀವನದೆಂದು ಹೇಳಿದಂತಾಯಿತು.

  2. ‘ಪ್ರತಿಪಾದ್ಯತೇ’ ಎಂಬ ಪಾಠಕ್ಕಿಂತ ಇದು ಉತ್ತಮವೆಂದು ಕಲ್ಪಿಸಿದೆ. ಅನುವಾದವನ್ನೂ ಅದರ ಟಿಪ್ಪಣಿಯನ್ನೂ ನೋಡಿ.

  3. ಜೀವನು ಶರೀರಪಾತವಾದ ಬಳಿಕ ಉತ್ತಮಪುರುಷನಾಗುವನು ಎಂಬುವರು.

ಅಧಿ. ೫. ಸೂ. ೧೯]

ಜೀವರೂಪವು ಪರಮಾರ್ಥವಲ್ಲ

೪೨೭

ತಾರೆ. ಅವರ (ಪಕ್ಷದಲ್ಲಿ) ಏತತ್’ (ಇವನನ್ನು) ಎಂಬ ಹತ್ತಿರ(ವಿರುವ) ವಸ್ತು ವನ್ನು ವಿಷಯೀಕರಿಸ(ಬೇಕಾದ) ಸರ್ವನಾಮಶ್ರುತಿಯು ದೂರಕ್ಕೆ ಹೋದಂತಾಗು ವದು. ‘ಮತ್ತೂ (ಹೇಳುವೆನು)’ ಎಂಬ ಶ್ರುತಿಗೆ ವಿರೋಧವಾಗುವದು ; ಏಕೆಂದರೆ (ಆ ಪಕ್ಷದಲ್ಲಿ) ಒಂದು ಪರ್ಯಾಯದಲ್ಲಿ ಹೇಳಿದ ಆತ್ಮನನ್ನು ಮತ್ತೊಂದು ಪರ್ಯಾಯದಲ್ಲಿ ಹೇಳಿರುವದಿಲ್ಲ. ಮತ್ತು “ಈತನನ್ನೇ ನಿನಗೆ (ಹೇಳುವನು) ಎಂದು ಪ್ರತಿಜ್ಞೆ ಮಾಡಿ ನಾಲ್ಕನೆಯ ಪರ್ಯಾಯಕ್ಕಿಂತ ಮೊದಲು ಬೇರೆಬೇರೆಯ (ಆತ್ಮನನ್ನು) ಹೇಳುತ್ತಿರುವ ಪ್ರಜಾಪತಿಗೆ ಮೋಸಗಾರಿಕೆಯು ಗಂಟುಬೀಳುವದು. ಆದ್ದರಿಂದ ಅವಿದ್ಯೆಯು ತಂದೊಡ್ಡಿರುವ ಕರ್ತಭೋಕ್ಸರಾಗದ್ವೇಷಾದಿಗಳ ಕಲಂಕವುಳ್ಳ ಅನೇಕಾನರ್ಥಗಳುಳ್ಳ, ಅಪಾರಮಾರ್ಥಿಕವಾದ ಜೀವರೂಪವಿದೆಯಲ್ಲ, ಅದನ್ನು - ಸರ್ವಾದಿಗಳನ್ನು ವಿಲಯಮಾಡಿ ಹಗ್ಗವೇ ಮುಂತಾದವನ್ನು (ತಿಳಿಯುವಂತ) - ವಿದ್ಯ ಯಿಂದ ವಿಲಯಮಾಡಿಕೊಂಡು ಅದಕ್ಕೆ ವಿಪರೀತವಾಗಿರುವ ಅಪಹಪಾಹ್ಮತ್ಯಾದಿ ಗುಣಗಳುಳ್ಳ ಪರಮೇಶ್ವರಸ್ವರೂಪವನ್ನು (ಜೀವನು) ಅರಿತುಕೊಳ್ಳುತ್ತಾನೆ (ಎಂಬುದೇ) ಸರಿಯಾದದ್ದು.’

  1. ಪರಮಾತ್ಮನನ್ನೇ ಹೇಳುವನು, ಜೀವನನ್ನು ಹೇಳುವದಿಲ್ಲ ಎಂದರ್ಥ. ಪರಮಾತ್ಮ ನಲ್ಲದ ಛಾಯಾಪುರುಷ, ಸ್ವಪ್ನಪುರುಷ, ಸುಷುಪ್ತಪುರುಷ - ಇವರನ್ನು ಸ್ಕೂಲಾರುಂಧತೀನ್ಯಾಯ ದಿಂದ ಹೇಳಿದೆ ಎಂದು ಈ ವಾದಿಗಳ ಭಾವ.

  2. ಏತತ್ ಎಂಬ ಶಬ್ದವು ತೀರ ಹತ್ತಿರವಿರುವದನ್ನೂ ಅದಸ್ಶಬ್ದವು ದೂರ ಇರುವದನ್ನೂ ಹೇಳುವದು - ಎಂದು ಸಂಸ್ಕೃತಭಾಷೆಯ ಮರ್ಯಾದೆ.

  3. ಏತತ್ ಎಂಬ ಸರ್ವನಾಮವು ವಾಕ್ಯದಲ್ಲಿ ಹತ್ತಿರವಿರುವ ಜೀವನನ್ನು ಬಿಟ್ಟು ದೂರದಲ್ಲಿರುವ ಪರಮಾತ್ಮನನ್ನು ಪರಾಮರ್ಶಿಸುತ್ತದೆ ಎಂಬುದು ಸರಿಯಲ್ಲ.

  4. ಆದ್ದರಿಂದ ಆಯಾ ಆತ್ಮರನ್ನು ಒಂದೊಂದು ಸಲವೇ ಹೇಳಿದಂತೆ ಆಗುತ್ತದೆ.

  5. ನಾಲ್ಕನೆಯ ಪರ್ಯಾಯದಲ್ಲಿ ಹೇಳಿರುವ ಉತ್ತಮಪುರುಷನು ಮಾತ್ರ ಪರಮಾತ್ಮನು ಎಂದು ಪೂರ್ವಪಕ್ಷಿಯ ಅಭಿಪ್ರಾಯ.

  6. ಹುಸಿತೂರಿಕಯೆಂದು ನಿಶ್ಚಯಿಸಿಕೊಂಡು, ಜೀವರೂಪವನ್ನು ಹುಸಿಯಂದು ತಿಳಿಯು ವದು, ಪರಮಾತ್ಮನನ್ನು ಅರಿತುಕೊಳ್ಳುವದು - ಇವು ಬೇರೆಬೇರೆಯ ಕ್ರಿಯೆಗಳಲ್ಲ.

  7. ಈ ವಾಕ್ಯದ ಭಾಷ್ಯಮೂಲವು ಬರೆದವರ ಕೃತಪ್ಪಿನಿಂದ ಏನೋ ಹೆಚ್ಚು ಕಡಿಮ ಯಾಗಿರಬೇಕೆಂದು ತೋರುತ್ತದೆ. ‘ಪ್ರತಿಪಾದ್ಯತೇ’, ‘ರಜ್ಞಾದೀನ್’ - ಇವೆರಡರಲ್ಲಿ ಒಂದು ಮಾರ್ಪಟ್ಟಿರಬೇಕು. ನಾವು ಪ್ರತಿಪಾದ್ಯತೇ’ ಎಂಬುದನ್ನು ಪ್ರತಿಪದ್ಯತೇ’ ಎಂದು ತಿದ್ದಿಕೊಂಡು ಅನುವಾದಮಾಡಿರುತ್ತೇವೆ. ‘ರಜ್ಞಾದೀನ್’ ಎಂಬುದನ್ನು ‘ರಜ್ಞಾದಿ’ ಎಂದು ತಿದ್ದಿದರೆ ಜೀವ ರೂಪವಿದೆಯಲ್ಲ, ಅದನ್ನು - ಸರ್ಪಾದಿಗಳನ್ನು ವಿಲಯಮಾಡಿ ಹಗ್ಗವೇ ಮುಂತಾದದ್ದನ್ನು ತಿಳಿಸುವಂತ - ವಿಲಯಮಾಡಿ ಅದಕ್ಕೆ ವಿಪರೀತವಾಗಿರುವ ಅಪಹತಪಾತಾದಿಗುಣಗಳುಳ್ಳ ಪರಮೇಶ್ವರಸ್ವರೂಪವನ್ನು ವಿದ್ಯೆಯು ತಿಳಿಸುತ್ತದೆ ಎಂದು ಕನ್ನಡಿಸಬೇಕಾಗುತ್ತದ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಜೀವರೂಪವು ಪರಮಾರ್ಥವಲ್ಲ

(ಭಾಷ್ಯ) ೨೬೯, ಅಪರೇ ತು ವಾದಿನಃ ಪಾರಮಾರ್ಥಿಕಮೇವ ಜೈವಂ ರೂಪಮ್ ಇತಿ ಮನ್ಯ ಅಹ್ಮದೀಯಾಶ್ಚ ಕೇಚಿತ್ | ತೇಷಾಂ ಸರ್ವಷಾಮ್ ಆತ್ಮಕತ್ವಸಮ್ಯಗ್ದರ್ಶನ ಪ್ರತಿಪಕ್ಷಭೂತಾನಾಂ ಪ್ರತಿಬೋಧಾಯ ಇದಂ ಶಾರೀರಕಮ್ ಆರಬ್ಬಮ್, ಏಕ ಏವ ಪರಮೇಶ್ವರಃ ಕೂಟಸ್ಥನಿತ್ಯೋ ವಿಜ್ಞಾನಧಾತುಃ ಅವಿದ್ಯಯಾ, ಮಾಯಯಾ ಮಾಯಾವಿವತ್‌ ಅನೇಕಧಾ ವಿಭಾವ್ಯತೇ, ನಾನ್ನೋ ವಿಜ್ಞಾನಧಾತುರಸ್ತಿ ಇತಿ | ಯತ್ತು ಇದಂ ಪರಮೇಶ್ವರವಾಕ್ಕೇ ಜೀವಮ್ ಆಶಜ್ಯ ಪ್ರತಿಷೇಧತಿ ಸೂತ್ರಕಾರಃ “ನಾಸಂಭವಾತ್” (೧-೩-೧೮) ಇತ್ಯಾದಿನಾ, ತತ್ರ ಅಯಮ್ ಅಭಿಪ್ರಾಯಃ ನಿತ್ಯಶುದ್ಧಬುದ್ಧ ಮುಕ್ತ ಸ್ವಭಾವೇ ಕೂಟಸ್ಥನಿತ್ಯೇ ಏಕಸ್ಮಿನ್ ಅಸಜ್ ಪರಮಾತ್ಮನಿ ತದ್ವಿಪರೀತಂ ಜೈವಂ ರೂಪಂ ಮೋಮೀವ ತಲಮಲಾದಿ ಪರಿಕಲ್ಪಿತಮ್ | ತತ್ ಆತ್ಮಕತ್ವಪ್ರತಿಪಾದನ ಪರ್ವಾಕ್ಕೆ ನ್ಯಾಯೋಪೇತೈಃ ದೈತವಾದಪ್ರತಿಷೇಧೃಶ್ಯ ಅಪನೇಷ್ಯಾಮಿ ಇತಿ ಪರಮಾತ್ಮನೋ ಜೀವಾತ್ ಅನ್ಯತ್ವಂ ದ್ರಢಯತಿ ( ಜೀವಸ್ಯ ತು ನ ಪರಸ್ಮಾತ್ ಅನ್ಯತ್ವಂ ಪ್ರತಿಪಿಪಾದಯಿಷತಿ, ಕಿಂ ತು ಅನುವದತ್ಯೇವ ಅವಿದ್ಯಾಕಲ್ಪಿತಂ ಲೋಕಪ್ರಸಿದ್ಧಂಜೀವಭೇದಮ್ | ಏವಂ ಹಿ ಸ್ವಾಭಾವಿಕಕರ್ತತ್ವಭೋಕೃತ್ವಾನುವಾದೇನ ಪ್ರವೃತ್ತಾ: ಕರ್ಮವಿಧಯೋ ನ ವಿರುಧ್ಯನೇ ಇತಿ ಮನ್ಯತೇ | ಪ್ರತಿಪಾದ್ಯಂ ತು ಶಾಸ್ತ್ರಾರ್ಥಮ್ ಆತ್ಮಕತ್ವಮೇವ ದರ್ಶಯ “ಶಾಸ್ತ್ರದೃಷ್ಟಾ ತೂಪದೇಶೋ ವಾಮದೇವವತ್’ (೧-೧-೩೦) ಇತ್ಯಾದಿನಾ | ವರ್ಣಿತಶ್ಚ ಅಸ್ಮಾಭಿಃ ವಿದ್ವದವಿದೇನ ಕರ್ಮವಿಧಿ ವಿರೋಧಪರಿಹಾರಃ ||

(ಭಾಷ್ಯಾರ್ಥ) ಆದರೆ ಬೇರೆಯ ವಾದಿಗಳು’ ಜೀವನ ರೂಪವು ಪಾರಮಾರ್ಥಿಕವೆಂದೇ ಅಭಿಪ್ರಾಯಪಡುತ್ತಾರೆ, ನಮ್ಮವರೂ ಕಲವರು’ (ಹಾಗೆಂದು ಅಭಿಪ್ರಾಯ ಪಡುತ್ತಾರೆ). ಆತ್ಮಕತ್ವಸಮ್ಮರ್ಶನಕ್ಕೆ ಪ್ರತಿಪಕ್ಷದವರಾಗಿರುವ ಅವರೆಲ್ಲರ ತಿಳಿವಳಿಕೆಗಾಗಿ ಕೂಟಸ್ಥನಿತ್ಯನೂ ವಿಜ್ಞಾನಧಾತುವೂ ಆಗಿರುವ ಪರಮೇಶ್ವರನೊಬ್ಬನೇ

  1. ದೈತಿಗಳು, ವೈಶೇಷಿಕರು, ಮಾಮಾಂಸಕರು - ಮುಂತಾದವರು.

  2. ವೇದಾಂತಿಗಳು ; ಈಗಿನ ವಿಶಿಷ್ಟಾದ್ವತಿಗಳೇ ಮುಂತಾದವರು ಇದರಲ್ಲಿ ಸೇರಿಲ್ಲ. ಪೀಠಿಕೆಯನ್ನು ನೋಡಿ.

ಅಧಿ. ೫. ಸೂ. ೧೯]

ಜೀವರೂಪವು ಪರಮಾರ್ಥವಲ್ಲ

೪೨೯

ಅವಿದ್ಯೆಯಿಂದ - ಮಾಯೆಯಿಂದ ಮಾಯಾವಿಯು (ಅನೇಕ )ವಾಗಿ ಕಾಣುವಂತೆ’ - ಅನೇಕ (ವಿಧ)ವಾಗಿ ಕಾಣುತ್ತಾನೆಯೇ ಹೊರತು ಇನ್ನೊಂದು ವಿಜ್ಞಾನಧಾತುವಿಲ್ಲ - ಎಂದು (ತಿಳಿಸುವ) ಈ ಶಾರೀರಕವನ್ನು ಪ್ರಾರಂಭಿಸಿರುತ್ತದೆ.

ಇನ್ನು ಪರಮೇಶ್ವರವಾಕ್ಯದಲ್ಲಿ (ದಹರಾಕಾಶವು) ಜೀವನಾಗಿರಬಹುದೆಂದು ಆಶಂಕೆಮಾಡಿ “ಹಾಗಲ್ಲ, ಏಕೆಂದರೆ ಸಂಭವಿಸುವದಿಲ್ಲ” (೧-೩-೧೮) ಎಂದು ಮುಂತಾಗಿರುವ ವಾಕ್ಯದಿಂದ ಸೂತ್ರಕಾರರು ಅಲ್ಲಗಳೆದಿರುವರಲ್ಲ, ಅಲ್ಲಿ ಈ ಅಭಿಪ್ರಾಯವಿದೆ : ನಿತ್ಯಶುದ್ಧ ಬುದ್ಧಮುಕ್ತಸ್ವಭಾವದವನಾಗಿ ಕೂಟಸ್ಥನಿತ್ಯನಾಗಿರುವ ಏಕನಾದ ಅಸಂಗನಾದ ಪರಮಾತ್ಮನಲ್ಲಿ ಅದಕ್ಕೆ ವಿಪರೀತವಾಗಿರುವ ಜೀವರೂಪವು - ಆಕಾಶದಲ್ಲಿ ತಳವು ಮಲಿನವಾಗಿರುವದೇ ಮುಂತಾದದ್ದು (ಕಲ್ಪಿತ)ವಾಗಿರುವಂತೆ ಪರಿಕಲ್ಪಿತವಾಗಿರುತ್ತದೆ. ಅದನ್ನು ಆತ್ಮಕತ್ವಪ್ರತಿಪಾದನದಲ್ಲಿ ತಾತ್ಪರ್ಯವುಳ್ಳ ವಾಕ್ಯ ಗಳಿಂದಲೂ ಯುಕ್ತಿಯುಕ್ತವಾದ ದೈತವಾದಖಂಡನೆಗಳಿಂದಲೂ ಪರಿಹರಿಸುವನು ಎಂದು (ಸಂಕಲ್ಪಿಸಿ) ಪರಮಾತ್ಮನು ಜೀವನಿಗಿಂತ ಬೇರೆ ಎಂಬುದನ್ನು ಗಟ್ಟಿಗೊಳಿಸು ತಾರೆ. ಆದರೆ ಜೀವನು ಪರಮಾತ್ಮನಿಗಿಂತ ಬೇರೆ ಎಂಬುದನ್ನು ಪ್ರತಿಪಾದಿಸಬೇಕೆಂಬ ಅಭಿಪ್ರಾಯವೇನೂ (ಅವರಿ)ಗಿರುವದಿಲ್ಲ ; ಮತ್ತೇನೆಂದರೆ ಅವಿದ್ಯಾಕಲ್ಪಿತವಾಗಿರುವ ಲೋಕಪ್ರಸಿದ್ಧವಾಗಿರುವ ಜೀವಭೇದವನ್ನೇ ಸುಮ್ಮನೆ ಅನುವಾದಮಾಡಿಕೊಂಡಿರು ತ್ತಾರೆ. ಹೀಗಾದರೆ ಸ್ವಾಭಾವಿಕವಾಗಿರುವ ಕರ್ತತ್ವಭೂತೃತ್ವವನ್ನು ಅನುವಾದಮಾಡಿ

  1. ಮಾಯೆಯೇ ಅವಿದ್ಯೆ ಎಂಬ ಅಭಿಪ್ರಾಯದಿಂದ ‘ಅವಿದ್ಯಯಾ ಮಾಯಯಾ’ ಎಂದು ಬರದಿದ ಎಂಬ ರತ್ನಪ್ರಭಾನ್ಯಾಯನಿರ್ಣಯವ್ಯಾಖ್ಯಾನಗಳಿಗೆ ಭಾಷ್ಯಾಧಾರವಿಲ್ಲವೆಂಬುದು ಸ್ಪಷ್ಟ ವಾಗಿದೆ. ೨-೧-೧೪ರ ಭಾಷ್ಯವನ್ನೂ ಹಿಂದ೧-೨-೬ (ಭಾ. ಭಾ. ೧೫೮)ನ್ನೂ ನೋಡಿ.

  2. ವೇದಾಂತಫಾಮಾಂಸಾಶಾಸ್ತ್ರವನ್ನು ಎಂದರ್ಥ. ಶಾರೀರಕನ ಅಥವಾ ಜೀವನ ಪರಮಾರ್ಥಸ್ವರೂಪವನ್ನು ನಿರ್ಣಯಿಸುವದರಿಂದ ಈ ಶಾಸ್ತ್ರಕ್ಕೆ ಈ ಹೆಸರು ಬಂದಿದೆ.

  3. ‘ಜೀವನು ದಹರಾಕಾಶವಲ್ಲ’ ಎಂದು ಜೀವನನ್ನು ಸೂತ್ರದಲ್ಲಿ ಅಲ್ಲಗಳೆದಿರುವದರಿಂದ ಬ್ರಹ್ಮಕ್ಕಿಂತ ಬೇರೆಯಾಗಿಜೀವರೂ ಇರಬೇಕಲ್ಲವ? - ಎಂಬ ಶಂಕೆಗೆ ಇಲ್ಲಿ ಪರಿಹಾರವನ್ನು ಹೇಳಿದೆ. ಕಲ್ಪಿತಜೀವರೂಪವುಂಟು, ಪರಮಾರ್ಥವಾಗಿಲ್ಲ ಎಂಬುದು ಉತ್ತರದ ಸಾರ.

  4. ಸಂಸಾರಬಂಧಕ್ಕೆ ಸಿಕ್ಕಿರುವ ಸಕ್ರಿಯನಾದ ಅನೇಕತ್ವವುಳ್ಳ ವಿಷಯಾದಿ ಸಂಗವುಳ್ಳ - ಎಂದರ್ಥ.

  5. ಜೀವನನ್ನು ಅನುವಾದಮಾಡಿಕೊಂಡು ಪರಮಾತ್ಮಸ್ವರೂಪವನ್ನು ತಿಳಿಸುವದೇ ಸೂತ್ರ ಕಾರರ ಉದ್ದೇಶವು ; ಆಕಾಶವು ನೀಲವಾಗಿದೆ ಎಂದು ಕಲ್ಪಿಸುವವರ ದೃಷ್ಟಿಯನ್ನು ಅವಲಂಬಿಸಿ ಈ ನೀಲವಾದ ಆಕಾಶವು ಪರಮಾರ್ಥವಾಗಿ ಯಾವ ಬಣ್ಣವೂ ಇಲ್ಲದ್ದು’ ಎಂದು ಹೇಳುವವನ ವಾಕ್ಯ ದಂತೆಯೇ ಜೀವನಿಷೇಧವಾಕ್ಯಗಳನ್ನು ಗ್ರಹಿಸಬೇಕೆಂದು ಭಾವ. ೧-೨-೬ರ ಭಾ.ಭಾ. ೧೫ಳನ್ನು ನೋಡಿ.

yao

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಕೊಂಡು ಪ್ರವೃತ್ತವಾಗಿರುವ ಕರ್ಮವಿಧಿಗಳು ವಿರುದ್ಧವಾಗದೆ ಇರುವವು’ ಎಂದು (ಅವರ) ಮತವು. ಆದರೆ ತಾವು ಪ್ರತಿಪಾದಿಸಬೇಕೆಂದಿರುವ ಶಾಸ್ತ್ರಾರ್ಥವು ಆತ್ಮಕತ್ವವೇ ಎಂಬುದನ್ನು ಶಾಸ್ತ್ರದೃಷ್ಕಾ ತೂಪದೇಶೋ ವಾಮದೇವವತ್’ (೧-೧-೩೦) ಎಂದು ಮುಂತಾಗಿರುವ (ಸೂತ್ರಗಳಿಂದ) ತಿಳಿಸಿರುತ್ತಾರೆ. ಕರ್ಮ ವಿಧಿಗಳ ವಿರೋಧ(ವಾಗುವದೆಂಬುದಕ್ಕೆ) ಪರಿಹಾರವನ್ನು ನಾವು ಜ್ಞಾನಿಗಳು ಅಜ್ಞಾನಿಗಳು - ಎಂಬ ಭೇದವನ್ನು ಕಲ್ಪಿಸಿ ಹೇಳಿಯೂ ಇರುತ್ತೇವೆ.’

ಅನ್ಯಾರ್ಥಶ್ಚ ಪರಾಮರ್ಶ: ||೨೦|| ೨೦. (ಜೀವ)ಪರಾಮರ್ಶವು ಮತ್ತೊಂದಕ್ಕಾಗಿ.

ದಹರವಾಕ್ಯಶೇಷದಲ್ಲಿ ಜೀವಪರಾಮರ್ಶವೇಕೆ ?

೨೭೦. ಅಥ ಯೋ ದಹರವಾಕ್ಯಶೇಷೇ ಜೀವಪರಾಮರ್ಶ ದರ್ಶಿತಃ “ಅಥ ಯ ಏಷ ಸಂಪ್ರಸಾದಃ” (ಛಾಂ. ೮-೩-೪) ಇತ್ಯಾದಿಃ, ಸ ದಹರೇ ಪರಮೇಶ್ವರೇ ವ್ಯಾಖ್ಯಾಯಮಾನೇ ನ ಜೀವೋಪಾಸನೋಪದೇಶಃ’ ನ ಪ್ರಕೃತವಿಶೇಷೋಪದೇಶಃ ಇತ್ಯರ್ಥಕತ್ವಂ ಪ್ರಾಷ್ಟೋತೀತಿ | ಅತ ಆಹ - ಅನ್ಯಾರ್ಥಿಯಂ ಜೀವಪರಾಮರ್ಶ, ನ ಜೀವಸ್ವರೂಪಪರ್ಯವಸಾಯಿ, ಕಿಂ ತರ್ಹಿ ಪರಮೇಶ್ವರಸ್ವರೂಪಪರ್ಯವ ಸಾಯಿ | ಕಥಮ್ ? ಸಂಪ್ರಸಾದಶಟ್ಟೋದಿತೋ ಜೀವೋ ಜಾಗರಿತವ್ಯವಹಾರೇ ದೇಹೇಯಪಞ್ಞರಾಧ್ಯಕ್ರೋ ಭೂತ್ವಾ ತದ್ವಾಸನಾನಿರ್ಮಿತಾಂಶ್ಚ ಸ್ವಪ್ಪಾನ್ ನಾಡೀ ಚರೋನುಭೂಯ ಶ್ರಾನ್ನ: ಶರಣಂ ಪ್ರೇಪ್ಪು, ಉಭಯರೂಪಾದಪಿ ಶರೀರಾಭಿ ಮಾನಾತ್ ಸಮುತ್ಥಾಯ ಸುಷುಪ್ತಾವಸ್ಥಾಯಾಂ ಪರಂ ಜ್ಯೋತಿಃ ಆಕಾಶಶಬ್ದ ತಂ ಪರಂ ಬ್ರಹ್ಮ ಉಪಸಂಪದ್ಯ ವಿಶೇಷವಿಜ್ಞಾನವತ್ವಂ ಚ ಪರಿತ್ಯಜ್ಯ ಸ್ಟೇನ ರೂಪೇಣ ಅಭಿನಿಷ್ಪದತೇ | ಯದಸ್ಯ ಉಪಸಂಪತ್ತವಂ ಪರಂ ಜ್ಯೋತಿಃ, ಯೇನ ಸ್ಟೇನ ರೂಪೇಣ ಅಯಮ್ ಅಭಿನಿಷ್ಪದ್ಯತೇ, ಸ ಏಷ ಆತ್ಮಾ ಅಪಹಪಾಹ್ಮತ್ಯಾದಿಗುಣಃ ಉಪಾಸ್ಯಃ ಇವಮರ್ಥಯಂ ಜೀವಪರಾಮರ್ಶ: ಪರಮೇಶ್ವರವಾದಿನೋಪಿ ಉಪಪದ್ಯತೇ ||

  1. ಕರ್ಮಕಾಂಡದ ವಾಕ್ಯಗಳಿಗೆ ಕರ್ಮವೆಂಬ ಪುರುಷಾರ್ಥಪಾಯವನ್ನು ಹೇಳುವದರಲ್ಲಿ ತಾತ್ಪರ್ಯವಿದ ; ಅವು ಅನುವಾದಮಾಡಿಕೊಂಡಿರುವ ಜೀವನ ಕರ್ತತ್ವಭೋಕ್ತತ್ವವು ಸತ್ಯವೆಂಬು ದರಲ್ಲಿ ತಾತ್ಪರ್ಯ ವಿಲ್ಲ.ಬ್ರ. ಭಾ. ೨-೧-೨೦.

  2. ಅಧ್ಯಾಸಭಾಷ್ಯ, ಸಮನ್ವಯಸೂತ್ರಭಾಷ್ಯ - ಇವುಗಳಲ್ಲಿ.

ಅಧಿ. ೫. ಸೂ. ೨೧] ದಹರವಾಕ್ಯಶೇಷದಲ್ಲಿ ಜೀವಪರಾಮರ್ಶವೇಕೆ ?

೪೩೧

(ಭಾಷ್ಯಾರ್ಥ) ಇನ್ನು ದಹರವಾಕ್ಯಶೇಷದಲ್ಲಿ ಇನ್ನು ಯಾವ ಈ ಸಂಪ್ರಸಾದನಿರುವನಲ್ಲ…..” (ಛಾಂ. ೮-೩-೪) ಎಂದು ಮುಂತಾಗಿರುವ ಜೀವಪರಾಮರ್ಶವಿದೆಯಲ್ಲ, ಅದು ದಹರಾಕಾಶವು) ಪರಮೇಶ್ವರನೆಂದು ವಿವರಿಸಿದರೆ ಜೀವನನ್ನು ಉಪಾಸನೆಮಾಡ ಬೇಕೆಂದು ಹೇಳಿದ್ದೂ ಅಲ್ಲ, ಪ್ರಕೃತ(ವಾಗಿರುವ ಪರಮೇಶ್ವರನ) ವಿಶೇಷವನ್ನು ಹೇಳಿದ್ದೂ ಅಲ್ಲ,” ಎಂದಾಗಿ ವ್ಯರ್ಥವಾಗುತ್ತದೆಯಲ್ಲ ! ಎಂದರೆ ಅದಕ್ಕೆ ಹೇಳುತ್ತಾರೆ :

ಈ ಜೀವಪರಾಮರ್ಶವು ಮತ್ತೊಂದು ಪ್ರಯೋಜನಕ್ಕಾಗಿ ಹೇಳಿದ್ದು. (ಇದು) ಜೀವಸ್ವರೂಪದಲ್ಲಿಯೇ ಕೊನೆಗಾಣುವದಿಲ್ಲ, ಮತ್ತೇನೆಂದರೆ ಪರಮೇಶ್ವರಸ್ವರೂಪ ದಲ್ಲಿ ಕೊನೆಗಾಣುತ್ತದೆ. ಹೇಗೆಂದರೆ : ಸಂಪ್ರಸಾದ ಎಂಬ ಶಬ್ದದಿಂದ ಹೇಳಿರುವ ಜೀವನು ಎಚ್ಚರದ ವ್ಯವಹಾರದಲ್ಲಿ ದೇಹೇಂದ್ರಿಯಗಳ ಪಂಜರಕ್ಕೆ ಅಧ್ಯಕ್ಷನಾಗಿದ್ದು ಅದರ ವಾಸನೆಯಿಂದುಂಟಾಗಿರುವ ಕನಸುಗಳನ್ನು ನಾಡಿಗಳಲ್ಲಿ ಸಂಚರಿಸುತ್ತಾ ಅನುಭವಿಸಿ, ಆಯಾಸದಿಂದ, (ಒಂದು) ಸುಖಾವಾಸವನ್ನು ಪಡೆಯಬೇಕೆಂದು ಈ ಎರಡು ಬಗೆಯ ಶರೀರಾಭಿಮಾನವನ್ನೂ ಬಿಟ್ಟಿದ್ದು, ಸುಷುಪ್ತಾವಸ್ಥೆಯಲ್ಲಿ ಆಕಾಶವೆಂಬ ಪರಂಜ್ಯೋತಿ ಯಾದ ಪರಬ್ರಹ್ಮವನ್ನು ಸೇರಿಕೊಂಡು, ವಿಶೇಷವಿಜ್ಞಾನಗಳನ್ನು ಬಿಟ್ಟು, ತನ್ನ ರೂಪ ದಿಂದ ಸಿದ್ಧನಾಗುತ್ತಾನೆ. (ಹೀಗೆ) ಇವನು ಸೇರಿಕೊಳ್ಳಬೇಕಾದ ಪರಂಜ್ಯೋತಿ ಯಾವದೋ, ಯಾವ ತನ್ನ ರೂಪದಿಂದ ಇವನು ಸಿದ್ಧನಾಗುತ್ತಾನೋ, ಆ ಈ ಆತ್ಮನನ್ನೇ ಅಪಹಪಾಹ್ಮತ್ವಾದಿಗುಣಗಳುಳ್ಳವನೆಂದು ಉಪಾಸನೆಮಾಡಬೇಕು ಎಂದು ಹೇಳುವದ ಕ್ಕಾಗಿ ಈ ಜೀವಪರಾಮರ್ಶವು (ಎಂದು) ಪರಮೇಶ್ವರವಾದಿಯ (ಪಕ್ಷದಲ್ಲಿಯೂ)

ಹೊಂದುತ್ತದೆ.

  1. ಏಕೆಂದರೆ ಅದು ಸಿದ್ಧಾಂತಿಗೆ ಇಷ್ಟವಲ್ಲ.

  2. ಏಕೆಂದರೆ ಇದು ಜೀವಪರಾಮರ್ಶವೆಂದೇ ಸಿದ್ಧಾಂತಿಯು ಹೇಳುತ್ತಾನೆ. ‘ಪ್ರಕೃತ ವಿಶೇಷವೆಂದರೆ ದಹರಾಕಾಶರೂಪನಾದ ಈಶ್ವರನ ಗುಣವು’ ಎಂದು ರತ್ನಪ್ರಭಾವ್ಯಾಖ್ಯಾನ ; ಪ್ರಕೃತವಾದ ವಿಶೇಷವು, ದಹರಾಕಾಶವು ಎಂದು ನ್ಯಾಯನಿರ್ಣಯವ್ಯಾಖ್ಯಾನವು.

3.ಪರಮೇಶ್ವರನಂಬದಹರೋಪಾಸನೆಯ ವಾಕ್ಯದಲ್ಲಿ ಅಪ್ರಕೃತವಾಗಿ ಅನುಪಯುಕ್ತವಾದ ಜೀವಪರಾಮರ್ಶವನ್ನು ಮಾಡಿದಂತೆ ಆಗುವದರಿಂದ ವ್ಯರ್ಥವಾಗುತ್ತದೆ ಎಂದು ಭಾವ. ದಹರಾಕಾಶವು ಜೀವನಾದರೆ ಸಾರ್ಥಕವಾಗುತ್ತದೆ ಎಂದು ಭಾವ.

  1. ಹಾಗಿದ್ದರೆ ವ್ಯರ್ಥವಾಗುತ್ತಿತ್ತು.

  2. ಸ್ಕೂಲಸೂಕ್ಷ್ಮಶರೀರಾಭಿಮಾನವಲ್ಲದ ಮತ್ತೊಂದು ಶರೀರಾಭಿಮಾನವೂ ಇದೆ ಎಂಬುದು ಭಾಷ್ಯಸಮ್ಮತವಲ್ಲ.೪೩೨

ಬ್ರಹ್ಮಸೂತ್ರಭಾಷ್ಯ

[ಅ. ೧, ಪು. ೩.

ಅಲ್ಪಶ್ರುತೆರಿತಿ ಚೇತ್ ತದುಕ್ತಮ್ ||೨೧|| ೨೧. ಅಲ್ಪಶ್ರುತಿಯಿಂದ (ಪರಮೇಶ್ವರನಲ್ಲ) ಎಂದರೆ ಅದನ್ನು ಹೇಳಿದ್ದಾಗಿದೆ.

ಅಲ್ಪತ್ವಶ್ರುತಿಯು ಪರಮೇಶ್ವರನಿಗೂ ಹೊಂದುತ್ತದೆ

(ಭಾಷ್ಯ) ೨೭೧. ಯದಪ್ಪಕ್ತಮ್ - “ದಹರೋSಸ್ಮಿನ್ನನ್ತರಾಕಾಶಃ” ಇತ್ಯಾಕಾಶಸ್ಯ ಅಲ್ಪತ್ವಂ ಶೂಯಮಾಣಂ ಪರಮೇಶ್ವರೇ ನೋಪಪದ್ಯತೇ | ಜೀವಸ್ಯ ತು ಆರಾದ್ಯೋಪಮಿತಸ್ಯ ಅಲ್ಪತ್ವಮ್ ಅವಕಲ್ಪತೇ ಇತಿ, ತಸ್ಯ ಪರಿಹಾರೋ ವಕ್ತವ್ಯ: | ಉಕ್ರೋ ಹಿ ಅಸ್ತ್ರ ಪರಿಹಾರಃ ಪರಮೇಶ್ವರಸ್ಯ ಆಪೇಕ್ಷಿಕಮಲ್ಪತ್ವಮ್ ಅವಕಲ್ಪತೇ ಇತಿ “ಅರ್ಭಕೌಕಸ್ಮಾತ್ ತಪದೇಶಾಚ್ಚ ನೇತಿ ಚೇನ್ನ ನಿಚಾಯ್ಯಾದೇವಂ ಪ್ರೇಮ ವಚ್ಚ’ (೧-೨-೭) ಇತ್ಯತ್ರ ! ಸ ಏವೇಹ ಪರಿಹಾರ್ರೋನುಸಂಧಾತವ್ಯ: ಇತಿ ಸೂಚಯತಿ | ಶ್ರುವ ಚ ಇದಮಲ್ಪತ್ವಂ ಪ್ರತ್ಯುಕ್ತಂ ಪ್ರಸಿದ್ಧೇನ ಆಕಾಶೇನ ಉಪಮಿಮಾನಯಾ “ಯಾವಾನ್ ವಾ ಅಯಮಾಕಾಶಸ್ತಾವಾನೇರ್ಷೋನರ್ಹದಯ

ಆಕಾಶಃ” (ಛಾಂ. ೮-೧-೩) ಇತಿ ||

(ಭಾಷ್ಯಾರ್ಥ) ಇನ್ನು ಇದರೊಳಗಿರುವ ದಹರಾಕಾಶವು’ ಎಂದು ಆಕಾಶವು ಅಲ್ಪವೆಂದು ಶ್ರುತಿಯಲ್ಲಿದೆಯಲ್ಲ, (ಅದು) ಪರಮೇಶ್ವರನಿಗೆ ಹೊಂದುವದಿಲ್ಲ - ದಬ್ಬಳದ ತುದಿಗೆ ಹೋಲಿಸಿರುವ ಜೀವನಿಗಾದರೆ ಅಲ್ಪತ್ವವು ಹೊಂದುತ್ತದೆ ಎಂದು (ಭಾ.ಭಾ. ೨೫೫) ಹೇಳಿತ್ತಲ್ಲ, ಅದಕ್ಕೆ ಪರಿಹಾರವನ್ನು ಹೇಳಬೇಕು. “ಅರ್ಭಕೌಕನಾದ್ದ ರಿಂದಲೂ ಆ ವ್ಯಪದೇಶವಿರುವದರಿಂದಲೂ ಪರಮಾತ್ಮನಲ್ಲ. ಎಂದರೆ ಹಾಗಲ್ಲ. ಏಕೆಂದರೆ ಹೀಗೆ ನಿಚಾಯ್ಯನಾಗಿರುತ್ತಾನೆ. ಆಕಾಶದಂತ (ಎಂಬ ದೃಷ್ಟಾಂತ)ವೂ ಇದ” (೧-೨-೭) ಎಂಬಲ್ಲಿ ಪರಮೇಶ್ವರನಿಗೂ ಆಪೇಕ್ಷಿಕವಾದ ಅಲ್ಪತ್ವವು ಹೊಂದುತ್ತದೆ ಎಂದು ಇದಕ್ಕೆ ಪರಿಹಾರವನ್ನು ಹೇಳಿಯೇ ಇದೆ. ಅದೇ ಪರಿಹಾರವನ್ನೇ ಇಲ್ಲಿ ಮನದಂದುಕೊಳ್ಳಬೇಕು. ಮತ್ತು ಈ ಆಕಾಶವು ಎಷ್ಟಿದೆಯೋ ಹೃದಯದೊಳಗೆ ಇರುವ ಈ ಆಕಾಶವೂ ಅಷ್ಟೇ’’ (ಛಾಂ. ೮-೧-೩) ಎಂದು

  1. ಉಪಾಧಿಯ ಅಪೇಕ್ಷೆಯಿಂದ.

ಅಧಿ. ೬. ಸೂ. ೨೨] ವಿಷಯವೂ ಸಂಶಯವೂ

೪೩೩

ಪ್ರಸಿದ್ಧವಾದ ಭೂತಾಕಾಶಕ್ಕೆ ಹೋಲಿಸಿರುವದರಿಂದ ಶ್ರುತಿಯೇ ಈ ಅಲ್ಪತ್ವವನ್ನು ತಿರಸ್ಕರಿಸಿಯೂ ಇದೆ.’

೬. ಅನುಕೃತ್ಯಧಿಕರಣ (೨೨-೨೩)

(ಮುಂಡಕ ೨-೨-೧೧ ರಲ್ಲಿ ಹೇಳಿದ ಅನುಕರಣೀಯವಸ್ತು ಬ್ರಹ್ಮವೇ )

ಅನುಕೃತೇಸ್ತಸ್ಯ ಚ ||೨೨|| ೨೨. ಅನುಕೃತಿಯಿಂದಲೂ ಅದರ (ಬೆಳಕಿನಿಂದ ಬೆಳಗುವದರಿಂದಲೂ ಪರಮಾತ್ಮನೇ).

ವಿಷಯವೂ ಸಂಶಯವೂ

(ಭಾಷ್ಯ) ೨೭೨. ‘‘ನ ತತ್ರ ಸೂರ್ಯೊ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾ ಕುತೋSಯಮ: | ತಮೇವ ಭಾನ್ಯಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ 11’ (ಮುಂ. ೨-೨-) ಇತಿ ಸಮಾಮನ ಯತ್ರಯಂಭಾವ್ಯಮನುಭಾತಿ ಸರ್ವಂ ಯಸ್ಯ ಚ ಭಾಸಾ ಸರ್ವಮಿದಂ ವಿಭಾತಿ, ಸ ಕಿಂ ತೇಜೋಧಾತುಃ ಕಶ್ಚಿತ್, ಉತ ಪ್ರಾಜ್ಞ ಆತ್ಮಾ ಇತಿ ವಿಚಿಕಿತ್ಸಾಯಾಂ ತೇಜೋಧಾತುಃ ಇತಿ ತಾವತ್ ಪ್ರಾಪ್ತಮ್ | ಕುತಃ ? ತೇಜೋಧಾತೂನಾಮೇವ ಸೂರ್ಯಾದೀನಾಂ ಭಾನಪ್ರತಿಷೇಧಾತ್ | ತೇಜಃ ಸ್ವಭಾವಕಂ ಹಿ ಚನ್ನತಾರಕಾದಿ ತೇಜಃಸ್ವಭಾವಕ ಏವ ಸೂರ್ಯ ಭಾಸಮಾನೇ ಅಹನಿನ ಭಾಸತೇ ಇತಿ ಪ್ರಸಿದ್ಧಮ್ | ತಥಾ ಸಹ ಸೂರ್ಯಣ ಸರ್ವಮಿದಂ ಚನ್ನತಾರಕಾದಿ ಯಸ್ಮಿನ್ ನ ಭಾಸತೇ ಸೋSಪಿ ತೇಜಃಸ್ವಭಾವ ಏವ ಕಶ್ಚಿತ್ ಇತ್ಯವಗಮ್ಯತೇ | ಅನುಭಾನಮಪಿ ತೇಜಃಸ್ವಭಾವಕೇ ಏವ ಉಪಪದ್ಯತೇ | ಸಮಾನಸ್ವಭಾವಕೇಷು ಅನುಕಾರದರ್ಶನಾತ್ | ಗಚ್ಚನ್ನಮ್ ಅನುಗಚ್ಚತಿ ಇವತ್ | ತಸ್ಮಾತ್ ತೇಜೋ ಧಾತುಃ ಕಶ್ಚಿತ್ ಇತಿ ||

(ಭಾಷ್ಯಾರ್ಥ) “ಅಲ್ಲಿ ಸೂರ್ಯನು ಬೆಳಗುವದಿಲ್ಲ, ಚಂದ್ರ ತಾರಕೆಗಳು ಬೆಳಗುವದಿಲ್ಲ, ಈ

  1. ಸೂತ್ರದಲ್ಲಿರುವ ಉಕ್ತಮ್ ಎಂಬುದಕ್ಕೆ ಪ್ರತ್ಯುತ್ತಮ್ ಎಂದು ಮತ್ತೊಂದು ಅರ್ಥವನ್ನು ಮಾಡಿರುತ್ತದೆ.

  2. ಈ ಸಂಖ್ಯೆಯು ಈ ಗ್ರಂಥಾವಳಿಯ ಮುಂಡಕಪಾಠದ್ದು .

೪೩೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಮಿಂಚುಗಳೂ ಬೆಳಗುವದಿಲ್ಲ. ಇನ್ನು ಈ ಬೆಂಕಿ (ಬೆಳಗುವ ಮಾತು) ಎಲ್ಲಿ ? ಅವನು ಬೆಳಗುವದನ್ನೇ ಅನುಸರಿಸಿ ಎಲ್ಲವೂ ಬೆಳಗುತ್ತಿರುವದು ; ಅವನ ಬೆಳಕಿನಿಂದಲೇ ಇದೆಲ್ಲವೂ ಬೆಳಗುತ್ತಿರುವದು” (ಮುಂ. ೨-೨-೧) ಎಂದು ಪಠಿಸುತ್ತಾರೆ. ಎಲ್ಲಿ ಯಾವದು ಬೆಳಗುವದನ್ನು ಅನುಸರಿಸಿ ಎಲ್ಲವೂ ಬೆಳಗುವದೋ, ಮತ್ತು ಯಾವದರ ಬೆಳಕಿನಿಂದ ಇದಲ್ಲ ಬೆಳಗುತ್ತಿರುವದೋ ಅದೇನು ಯಾವದೋ ಒಂದು ತೇಜೋ ಧಾತುವ, ಅಥವಾ ಪ್ರಾಜ್ಞಾತ್ಮನ ?’ - ಎಂದು ಸಂಶಯವು ಬರಲಾಗಿ -

ಪೂರ್ವಪಕ್ಷ : ತೇಜೋಧಾತುವನ್ನೇ ಇಲ್ಲಿ ಹೇಳಿದೆ ತೇಜೋಧಾತು(ವಿದು) ಎಂದು ಮೊದಲು (ಪೂರ್ವಪಕ್ಷವು) ಬಂದೊದಗು ತದೆ. ಏಕ ? ಎಂದರೆ ತೇಜೋಧಾತುಗಳೇ ಆಗಿರುವ ಸೂರ್ಯಾದಿಗಳು (ಅಲ್ಲಿ) ಬೆಳಗುವದಿಲ್ಲ ಎಂದಿರುವದರಿಂದ ತೇಜಸ್ಸಿನ ಸ್ವಭಾವವುಳ್ಳ ಚಂದ್ರತಾರಕೆಗಳೇ ಮುಂತಾದದ್ದು, ತೇಜಃಸ್ವಭಾವವುಳ್ಳ ಸೂರ್ಯನು ಬೆಳಗುತ್ತಿರುವಲ್ಲಿ ಹಗಲು (ಹೂತ್ತಿನ)ಲ್ಲಿ ಬೆಳಗದೆ ಇರುತ್ತದೆ ಎಂಬುದು ಪ್ರಸಿದ್ಧವಾಗಿರುತ್ತದೆ. ಇದರಂತೆ ಸೂರ್ಯನಿಂದೊಡಗೂಡಿದ ಈ ಚಂದ್ರತಾರಕೆಗಳೇ ಮುಂತಾದದ್ದೆಲ್ಲವೂ ಯಾವದರಲ್ಲಿ

ಬೆಳಗುವದಿಲ್ಲವೋ ಅದು ತೇಜಃಸ್ವಭಾವವುಳ್ಳ ಯಾವದೋ ಒಂದು (ವಸ್ತು) ಎಂದು ನಿಶ್ಚಯವಾಗುತ್ತದೆ. ಅನುಸರಿಸಿ ಬೆಳಗುವದೆಂಬುದೂ ತೇಜಸ್ಸಿನ ಸ್ವಭಾವದ (ವಸ್ತುವಿಗ) ಹೊಂದುತ್ತದೆ ; ಏಕೆಂದರೆ ಒಂದೇ ಸ್ವಭಾವವುಳ್ಳ (ವಸ್ತುಗಳಲ್ಲಿಯೇ ಒಂದನ್ನೊಂದು) ಅನುಕಸರಿಸುವದು ಕಂಡಿರುತ್ತದೆ. ಹೋಗುತ್ತಿರುವವನನ್ನು ಅನುಸರಿಸಿ ಹೋಗುತ್ತಾನೆ - ಎಂಬಂತೆಯೇ (ಇದು). ಆದ್ದರಿಂದ (ಇದು) ಯಾವದೋ ಒಂದು ತೇಜೋಧಾತು.

ಸಿದ್ಧಾಂತ : ಸೂರ್ಯಾದಿಗಳನ್ನು ಬೆಳಗುವದು ಬ್ರಹ್ಮವೇ

(ಭಾಷ್ಯ) ೨೭೩. ಏವಂ ಪ್ರಾಪ್ತ ಬೂಮಃ | ಪ್ರಾಜ್ಞ ಏವ ಅಯಂ ಆತ್ಮಾ ಭವಿತು ಮರ್ಹತಿ | ಕಸ್ಮಾತ್ ? ಅನುಕೃತೇಃ | ಅನುಕರಣಮ್ ಅನುಕೃತಿಃ | ಯದೇತತ್ “ತಮೇವ ಭಾನ್ಯಮನುಭಾತಿ ಸರ್ವಮ್’’ ಇತ್ಯನುಭಾನಮ್, ತತ್ ಪ್ರಾಜ್ಞಪರಿಗ್ರಹ ಅವಕಲ್ಪತೇ | ‘ಭಾರೂಪಃ ಸತ್ಯಸಲ್ಪಃ ’ (ಛಾಂ. ೩-೧೪-೨) ಇತಿ ಹಿ ಪ್ರಾಜ್ಯ ಮಾತ್ಮಾನಮ್ ಆಮನ | ನ ತು ತೇಜೋಧಾತುಂ ಕಂಚಿತ್ ಸೂರ್ಯಾದಯೋ

  1. ಪ್ರಾಜ್ಞನಂದರ ಚಿನ್ಮಾತ್ರನಾಗಿರುವ ಪರಮೇಶ್ವರನು.

ಅಧಿ. ೬. ಸೂ. ೨೨] ಸಿದ್ಧಾಂತ : ಸೂರ್ಯಾದಿಗಳನ್ನು ಬೆಳಗುವದು ಬ್ರಹ್ಮವೇ ೪೩೫ ಅನುಭಾನ್ತಿ ಇತಿ ಪ್ರಸಿದ್ಧಮ್ 1 ಸಮತ್ಕಾಚ್ಚ ತೇಜೋಧಾತೂನಾಂ ಸೂರ್ಯಾದೀನಾಂ ನ ತೇಜೋಧಾತುಮ್ ಅನ್ಯಂ ಪ್ರತಿ ಅಪೇಕ್ಷಾ ಅಸ್ತಿ ಯಂ ಭಾಗ್ತಮ್ ಅನುಭಾಯುಃ | ನ ಹಿ ಪ್ರದೀಪಃ ಪ್ರದೀಪಾರಮ್ ಅನುಭಾತಿ | ಯದಪ್ಪಕ್ತಮ್ ಸಮಾನಸ್ವಭಾವಕೇಷು ಅನುಕಾರೋ ದೃಶ್ಯತೇ ಇತಿ, ನಾಯಮ್ ಏಕಾನ್ನೋ ನಿಯಮಃ | ಭಿನ್ನಸ್ವಭಾವಕೇಷ್ಟಪಿ ಹಿ ಅನುಕಾರೋ ದೃಶ್ಯತೇ | ಯಥಾ ಸುತಪ್ಪೋಯಪಿಣ್ಣಃ ಅಗ್ನನುಕೃತಿಃ, ಅಗ್ನಿಂ ದಹಸ್ತಮ್ ಅನುದಹತಿ | ಭೌಮಂ ವಾ ರಜಃ, ವಾಯುಂ ವಹಸ್ತಮ್ ಅನುವಹತಿ ಇತಿ | ‘ಅನುಕೃತೇ’ ಇತಿ ಅನುಭಾನಮ್ ಅಸುಸೂಚತ್ | ತಸ್ಯ ಚ’ ಇತಿ ಚತುರ್ಥಂ ಪಾದಮ್ ಅಸ್ಯ ಶ್ಲೋಕಸ್ಯ ಸೂಚಯತಿ | ತಸ್ಯ ಭಾಸಾ ಸರ್ವಮಿದಂ ವಿಭಾತಿ’’ ಇತಿ | ತದ್ದೇತುಕಂ ಭಾನಂ ಸೂರ್ಯಾದೇಃ ಉಚ್ಯಮಾನಂ ಪ್ರಾಜ್ಞಮಾತ್ಮಾನಂ ಗಮಯ | ತದ್ದೇವಾ ಜ್ಯೋತಿಷಾಂ ಜ್ಯೋತಿರಾಯುರ್ಯೊಪಾಸತೇ ಮೃತಮ್’ (ಬೃ. ೪-೪-೧೬) ಇತಿ ಹಿ ಪ್ರಾಜ್ಞಮಾತ್ಮಾನಮ್ ಆಮನ ! ತೇಜೋವ್ರರೇಣ ಸೂರ್ಯಾದಿತೇಜೋ ವಿಭಾತಿ ಇತಿ ಅಪ್ರಸಿದ್ಧಮ್ | ವಿರುದ್ದಂ ಚ | ತೇಜೋವ್ರರೇಣ ತೇಜೋನ್ಯರಸ್ಯ ಪ್ರತಿಘಾತಾತ್ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳು ತೇವೆ : ಇದು ಪ್ರಾಜ್ಞನಾದ ಆತ್ಮನೇ ಆಗಿರಬೇಕು. ಏಕೆ ? ಎಂದರೆ ಅನುಕೃತಿ (ಯಿರುವದ)ರಿಂದ, ಅನುಕೃತಿ ಎಂದರೆ ಅನುಸರಿಸುವದು. ಅವನು ಬೆಳಗುವದನ್ನೇ ಅನುಸರಿಸಿ ಎಲ್ಲವೂ ಬೆಳಗುತ್ತದೆ” ಎಂಬೀ ಅನುಸರಿಸಿ ಬೆಳಗುವದಿದೆಯಲ್ಲ, ಇದು ಪ್ರಾಜ್ಞನನ್ನು ತೆಗೆದುಕೊಂಡರೆ ಸರಿಹೋಗುತ್ತದೆ. “ಭಾರೂಪನು, ಸತ್ಯಸಂಕಲ್ಪನು’ (ಛಾಂ. ೩-೧೪-೨) ಎಂದಲ್ಲವೆ, ಪ್ರಾಜ್ಞನಾದ ಆತ್ಮನನ್ನು (ಕುರಿತು) ಪಠಿಸುತ್ತಾರೆ ? ಆದರೆ ತೇಜೋಧಾತು ಯಾವದನ್ನಾದರೂ ಸೂರ್ಯಾದಿಗಳು ಅನುಸರಿಸಿ ಬೆಳಗುತ್ತಾರೆ ಎಂದೇನೂ ಪ್ರಸಿದ್ಧವಾಗಿರುವದಿಲ್ಲ. ತೇಜೋಧಾತುಗಳಾದ ಸೂರ್ಯಾದಿಗಳು (ಒಂದೇ) ಸಮವಾಗಿರುವದರಿಂದ (ಅವಕ್ಕೆ) ಮತ್ತೊಂದು ತೇಜೋಧಾತುವಿನ ಬಯಕೆಯೇ ಇರುವದಿಲ್ಲ. (ಹಾಗಿದ್ದಿದ್ದರೆ) ಅದು ಬೆಳಗುವದನ್ನು ಅನುಸರಿಸಿ (ಅವು) ಬೆಳಗಬಹುದಾಗಿತ್ತು. ಒಂದು ದೊಡ್ಡ ದೀಪವು ಮತ್ತೊಂದು ದೊಡ್ಡ ದೀಪವನ್ನು ಅನುಸರಿಸಿ ಬೆಳಗುವದಿಲ್ಲವಷ್ಟೆ.

ಇನ್ನು ಒಂದೇ ಸ್ವಭಾವ(ದ ವಸ್ತುಗಳಲ್ಲಿಯೇ (ಒಂದನ್ನೊಂದು) ಅನುಕರಿಸು ವದು ಕಂಡಿದೆ ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ ; ಇದೇನೂ ಗೊತ್ತಾದ ನಿಯಮವಲ್ಲ. ಏಕೆಂದರೆ ಬೇರೆ (ಬೇರೆಯ) ಸ್ವಭಾವದ (ವಸ್ತು)ಗಳಲ್ಲಿಯೂ

೪೩೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಅನುಕಾರ(ವಿರುವದು) ಕಂಡುಬರುತ್ತದೆ. ಹೇಗೆಂದರೆ, ಚೆನ್ನಾಗಿ ಕಾಯಿಸಿದ ಕಬ್ಬಿಣದ ತುಂಡು ಬೆಂಕಿಯನ್ನು ಅನುಕರಿಸುತ್ತದೆ, ಬೆಂಕಿಯು ಸುಡುವದನ್ನನುಸರಿಸಿ (ತಾನೂ) ಸುಡುತ್ತದೆ ; ಭೂಮಿಯ ಧೂಳು ಗಾಳಿಯು ಬೀಸುವದನ್ನನುಸರಿಸಿ (ತಾನೂ) ಬೀಸಿಕೊಂಡು ಹೋಗುತ್ತದೆ.

(ಸೂತ್ರದಲ್ಲಿ) ‘ಅನುಕೃತೇಃ’ ಎಂಬುದು ಬೆಳಗುವದನ್ನು ಸೂಚಿಸುತ್ತದೆ. ‘ತಸ್ಯ ಚ’ ಎಂಬುದು “ತಸ್ಯ ಭಾಸಾ ಸರ್ವಮಿದಂ ವಿಭಾತಿ’ ಎಂಬ ಈ ಮಂತ್ರದ ನಾಲ್ಕನೆಯ ಪಾದವನ್ನು ಸೂಚಿಸುತ್ತದೆ. ಅದರ ನಿಮಿತ್ತದಿಂದ ಸೂರ್ಯಾದಿಗಳು ಬೆಳಗುವವೆಂದು (ಇಲ್ಲಿ) ಹೇಳಿರುವದು ಪ್ರಾಜ್ಞನಾದ ಆತ್ಮನನ್ನೇ ತಿಳಿಸಿಕೊಡುತ್ತದೆ. ಜ್ಯೋತಿಗಳಿಗೆಲ್ಲ ಜ್ಯೋತಿಯಾದ ಆ ಅಮೃತವನ್ನು ಆಯುಸ್ಸೆಂದು ದೇವತೆಗಳು ಉಪಾಸನೆಮಾಡುತ್ತಾರೆ? (ಬೃ. ೪-೪-೧೬) ಎಂದಲ್ಲವೆ, ಪ್ರಾಜ್ಞಾತ್ಮನನ್ನು (ಶ್ರುತಿಯಲ್ಲಿ) ಪಠಿಸುತ್ತಾರೆ ? ಸೂರ್ಯನೇ ಮುಂತಾದ ತೇಜಸ್ಸು ಮತ್ತೊಂದು ತೇಜಸ್ಸಿನಿಂದ ಬೆಳಗುತ್ತದೆ ಎಂಬುದು ಪ್ರಸಿದ್ಧವಲ್ಲ ; (ಅದು) ವಿರುದ್ಧವೂ ಆಗಿರುತ್ತದೆ, ಏಕೆಂದರೆ ಒಂದು ತೇಜಸ್ಸಿನಿಂದ ಇನ್ನೊಂದು ತೇಜಸ್ಸು ಮಂಕಾಗುತ್ತದೆ.

ಎಲ್ಲವನ್ನೂ ಬೆಳಗಬಲ್ಲದ್ದು ಪ್ರಕೃತವಾದ ಬ್ರಹ್ಮವು ಮಾತ್ರ

(ಭಾಷ್ಯ) ೨೭೪. ಅಥವಾ ನ ಸೂರ್ಯಾದೀನಾಮೇವ ಶ್ಲೋಕಪರಿಪರಿತಾನಾಮ್ ಇದು ತದ್ದೇತುಕಂ ವಿಭಾನಮ್ ಉಚ್ಯತೇ । ಕಿಂ ತರ್ಹಿ, ‘ಸರ್ವಮಿದಮ್’ ಇತಿ ಅವಿಶೇಷಶ್ರುತೇಃ ಸರ್ವಸ್ಕೃವ ಅಸ್ಯ ನಾಮರೂಪಕ್ರಿಯಾಕಾರಕಫಲಜಾತಸ್ಯ ಯಾ ಅಭಿವ್ಯಕ್ತಿಃ ಸಾ ಬ್ರಹ್ಮಜ್ಯೋತಿಃಸತ್ತಾನಿಮಿತ್ತಾ | ಯಥಾ ಸೂರ್ಯಾದಿಜ್ಯೋತಿಃ ಸಾನಿಮಿತ್ತಾ ಸರ್ವಸ್ಯ ರೂಪಜಾತಸ್ಯ ಅಭಿವ್ಯಕ್ತಿಃ, ತದ್ವತ್ | ನ ತತ್ರ ಸೂರ್ಯೊ ಭಾತಿ’’ ಇತಿ ಚ ತತ್ರಶಬ್ದ ಮಾಹರನ್ ಪ್ರಕೃತಗ್ರಹಣಂ ದರ್ಶಯತಿ ಪ್ರಕೃತಂ ಚ ಬ್ರಹ್ಮ “ಯಸ್ಮಿನ್ ದೈಃ ಪೃಥಿವೀ ಚಾಸ್ತರಿಕ್ಷಮೋತಮ್” (ಮುಂ. ೨-೨-೫) ಇತ್ಯಾದಿನಾ 1 ಅನನ್ತರಂ ಚ “ಹಿರಣ್ಮಯೇ ಪರೇ ಕೋಶ ವಿರಜಂ ಬ್ರಹ್ಮ ನಿಷ್ಕಲಮ್ | ತಚ್ಚುಭ್ರಂ ಜ್ಯೋತಿಷಾಂ ಜ್ಯೋತಿಸ್ತದ್ಯದಾತ್ಮವಿದೋ ವಿದುಃ’ (ಮುಂ. ೨-೨-೧೦) ಇತಿ | ಕಥಂ ತಜ್ಯೋತಿಷಾಂ ಜ್ಯೋತಿಃ ? ಇತ್ಯತಃ ಇದಮುತ್ತಿತಮ್ ‘‘ನ ತತ್ರ ಸೂರ್ಯೊ ಭಾತಿ’’ ಇತಿ | ಯದಪ್ಪಕ್ತಮ್ - ಸೂರ್ಯಾದೀನಾಂ ತೇಜಸಾಂ ಭಾನಪ್ರತಿಷೇಧಃ ತೇಜೋಧಾತಾವೇವ ಅನ್ಯಸ್ಮಿನ್ ಅವಕಲ್ಪವೇ ಸೂರ್ಯ ಇವ ಇತರೇಷಾಮ್ ಇತಿ | ತತ್ರ ತು ಸ ಏವ ತೇಜೋಧಾತುರನ್ನೊ ನ ಸಂಭವತಿ ಇತಿ

ಅಧಿ. ೬. ಸೂ. ೨೨] ಎಲ್ಲವನ್ನೂ ಬೆಳಗಬಲ್ಲದ್ದು ಪ್ರಕೃತವಾದ ಬ್ರಹ್ಮವು ಮಾತ್ರ ೪೩೭ ಉಪಪಾದಿತಮ್ | ಬ್ರಹ್ಮಣ್ಯಪಿ ಚ ಏಷಾಂ ಭಾನಪ್ರತಿಷೇಧಃ ಅವಕಲ್ಪತೇ | ಯತಃ ಯತ್ ಉಪಲಭ್ಯತೇ ತತ್ ಸರ್ವಂ ಬ್ರಹ್ಮವ ಜ್ಯೋತಿಷಾ ಉಪಲಭ್ಯತೇ | ಬ್ರಹ್ಮ ತು ನಾನ ಜ್ಯೋತಿಷಾ ಉಪಲಭ್ಯತೇ ಸ್ವಯಂಜ್ಯೋತಿಃಸ್ವರೂಪತ್ವಾತ್, ಯೇನ ಸೂರ್ಯಾದಯಸ್ತಸ್ಮಿನ್ ಭಾಯುಃ | ಬ್ರಹ್ಮ ಹಿ ಅನ್ಯದ್ ವ್ಯವಕ್ತಿ ನ ತು ಬ್ರಹ್ಮ ಅನ

ವ್ಯಜ್ಯತೇ |“ಆತ್ಮನೈವಾಯಂ ಜ್ಯೋತಿಷಾ ಆಸ್ತೆ’ (ಬೃ. ೪-೩-೬), ‘‘ಅಗ್ನಕ್ಕೂ ನ ಹಿ ಗೃಹ್ಯತೇ’ (ಬೃ. ೪-೨-೪) ಇತ್ಯಾದಿಶ್ರುತಿಭ್ಯಃ ||

(ಭಾಷ್ಯಾರ್ಥ) ಅಥವಾ ಶ್ಲೋಕದಲ್ಲಿ (ಹೆಸರಿಟ್ಟು) ಹೇಳಿರುವ ಸೂರ್ಯಾದಿಗಳು ಮಾತ್ರವೇ ಅದರ ನಿಮಿತ್ತದಿಂದ ಈ ಬೆಳಗುವಿಕೆ (ಯಾಗುವದೆಂದು ಇಲ್ಲಿ ) ಹೇಳಿಲ್ಲ ; ಮತ್ತೇನೆಂದರೆ, ‘ಇದಲ್ಲವೂ’ ಎಂದು ಅವಿಶೇಷವಾಗಿ ಹೇಳಿರುವದರಿಂದ’ ನಾಮ, ರೂಪ, ಕ್ರಿಯಾ, ಕಾರಕ, ಫಲ - ಇವುಗಳ ಸಮೂಹವೆಲ್ಲ ತೋರಿಕೊಳ್ಳುವದಿದೆಯಲ್ಲ, ಅದು ಬ್ರಹ್ಮವೆಂಬ ಬೆಳಕಿನ ಇರವಿನ ನಿಮಿತ್ತವಾದದ್ದು (ಎಂದು ಹೇಳಿದೆ). ಹೇಗೆ ಸೂರ್ಯನೇ ಮುಂತಾದ ಜ್ಯೋತಿಯ ಇರವಿನ ನಿಮಿತ್ತವಾಗಿ ರೂಪಸಮೂಹವೆಲ್ಲವೂ ತೋರಿಕೊಳ್ಳುವದೋ ಹಾಗೆಯೇ (ಇದನ್ನು ತಿಳಿಯಬೇಕು).

ಮತ್ತು ಅಲ್ಲಿ ಸೂರ್ಯನು ಬೆಳಗುವದಿಲ್ಲ” ಎಂದು ‘ತತ್ರ’ (ಅಲ್ಲಿ) ಎಂಬ ಶಬ್ದವನ್ನು ತೆಗೆದುಕೊಂಡಿರುವದರಿಂದ ಪ್ರಕೃತವಾದದ್ದನ್ನೇ ತೆಗೆದುಕೊಳ್ಳಬೇಕೆಂದು ತಿಳಿಸಿರುತ್ತದೆ. “ಯಾವದರಲ್ಲಿ ದ್ಯುಲೋಕವೂ ಪೃಥಿವಿಯೂ ಅಂತರಿಕ್ಷವೂ ಓತವಾಗಿರುವದೋ” (ಮುಂ. ೨-೨-೫) ಮುಂತಾದ (ವಾಕ್ಯದಲ್ಲಿ) ಬ್ರಹ್ಮವೇ ಪ್ರಕೃತವಾಗಿರುತ್ತದೆ. ಮತ್ತು (ಇದಕ್ಕೆ) ಮುಂದ (ಹತ್ತನೆಯ ಮಂತ್ರದಲ್ಲಿಯೇ) ‘‘ಹಿರಣ್ಮಯವಾದ ಹೆಚ್ಚಿನ ಕೋಶದಲ್ಲಿ ರಜಸ್ಸಿಲ್ಲದ ನಿಷ್ಕಲವಾದ ಬ್ರಹ್ಮವು (ಇರುವದು). ಅದು ಶುಕ್ರವಾಗಿರುವದು, ಜ್ಯೋತಿಗಳಿಗೆಲ್ಲ ಜ್ಯೋತಿಯಾಗಿರುವದು, ಯಾವ ಅದನ್ನು ಆತ್ಮವಿದರು ಬಲ್ಲರು” (ಮುಂ. ೨-೨-೧೦) ಎಂದು (ಪ್ರಕೃತ ವಾಗಿದೆ). ಅದು ಜ್ಯೋತಿಗಳಿಗೆಲ್ಲ ಜ್ಯೋತಿ ಎಂಬುದು ಹೇಗೆ ? ಎಂಬ (ಆಕಾಂಕ್ಷೆ

  1. ‘ಇದೆಲ್ಲವನ್ನೂ’ ಎಂಬ ಸಾಮಾನ್ಯವಾಚಕಶಬ್ದವನ್ನು ಬೆಳಕುಗಳೆಲ್ಲವನ್ನೂ ಎಂಬರ್ಥದಲ್ಲಿ ಸಂಕೋಚಪಡಿಸುವದಕ್ಕೆ ಕಾರಣವಿಲ್ಲವೆಂದು ಭಾವ.

  2. ತೇಜೋಧಾತುವೇನೂ ಪ್ರಕೃತವಾಗಿಲ್ಲ. ಪ್ರಕೃತವಾಗಿರುವ ಬ್ರಹ್ಮವನ್ನು ಬಿಟ್ಟು ಅಪ್ರಕೃತವಾಗಿರುವ ತೇಜೋಧಾತುವನ್ನು ತಿಳಿಸಲು ಪ್ರಾರಂಭಿಸಿದೆ ಎಂಬುದು ಸರಿ ಯಲ್ಲ.

೪೩೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಯುಂಟಾಗಲಾಗಿ) ಅದಕ್ಕೆ ಈ “ಅಲ್ಲಿ ಸೂರ್ಯನು ಬೆಳಗುವದಿಲ್ಲ’ ಎಂಬ ವಾಕ್ಯವು ಎದ್ದು ಕೊಂಡಿದೆ.

ಇನ್ನು ಸೂರ್ಯಾದಿತೇಜಸ್ಸುಗಳು (ಅಲ್ಲಿ) ಬೆಳಗುವದಿಲ್ಲವೆಂಬುದು ಸೂರ್ಯ ನಿರುವಾಗ ಬೇರೆಯ ಜ್ಯೋತಿಗಳ ಬೆಳಕಿಲ್ಲದಿರುವಂತೇ ಮತ್ತೊಂದು ತೇಜೋಧಾತುವಿನ (ವಿಷಯ)ದಲ್ಲಿಯೇ ಹೊಂದುತ್ತದೆ ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಲ್ಲ, ಅಲ್ಲಿಯಾದರೆ ಅಂಥ ಮತ್ತೂಂದು ತೇಜೋಧಾತುವೇ ಇರುವಹಾಗಿಲ್ಲ ಎಂದು ತೋರಿಸಿಕೊಟ್ಟದ್ದಾಗಿದೆ. ಬ್ರಹ್ಮದ (ವಿಷಯದಲ್ಲಿಯೂ) ಈ (ಸೂರ್ಯಾದಿಗಳು) ಬೆಳಗುವದಿಲ್ಲವೆಂದು ಹೇಳುವದು ಯುಕ್ತವಾಗಿದೆ. ಏಕೆಂದರೆ ಯಾವ(ಯಾವದು) ತೋರುತ್ತದೆಯೋ ಅದೆಲ್ಲಾ ಬ್ರಹ್ಮವೆಂಬ ಜ್ಯೋತಿಯಿಂದಲೇ ತೋರಿಬರುತ್ತದೆ ; ಆದರೆ ಬ್ರಹ್ಮವು ಮತ್ತೊಂದು ಜ್ಯೋತಿಯಿಂದ ತೋರುವದಿಲ್ಲ. ಏಕೆಂದರೆ ಅದು ಸ್ವಯಂ ಜ್ಯೋತಿಃಸ್ವರೂಪವಾಗಿರುತ್ತದೆ. ಹಾಗೆ (ಅದು ಮತ್ತೊಂದರಿಂದ ತೋರಬಲ್ಲ ದ್ದಾಗಿದ್ದಾಗಿದ್ದರೆ ಸೂರ್ಯಾದಿಗಳು ಅದರ (ವಿಷಯದಲ್ಲಿ ) ಬೆಳಗಬಹುದಾಗಿತ್ತು. ಬ್ರಹ್ಮವೇ ಮತ್ತೊಂದನ್ನು ವ್ಯಕ್ತಗೊಳಿಸುವದೇ ಹೊರತು ಬ್ರಹ್ಮವು ಮತ್ತೊಂದರಿಂದ ವ್ಯಕ್ತವಾಗುವದಿಲ್ಲ. “ಆತ್ಮನೆಂಬ ಜ್ಯೋತಿಯಿಂದಲೇ ಇವನು ಕುಳಿತಿರುತ್ತಾನೆ” (ಬೃ.೪-೩-೬), ಅಗ್ರಹ್ಮನು, ಏಕೆಂದರೆ (ಮತ್ತೊಂದರಿಂದ) ಗ್ರಹಣವಾಗುವದಿಲ್ಲ” (ಬೃ. ೪-೨-೪) ಎಂಬಿವೇ ಮುಂತಾದ ಶ್ರುತಿಗಳಿಂದ ಇದು ಸಿದ್ಧವಾಗುತ್ತದೆ.

ಅಪಿ ಚ ಸ್ಮರ್ಯತೇ ||೨೩|| ೨೩. ಇದಲ್ಲದೆ ಸ್ಮೃತಿಯಲ್ಲಿಯೂ ಹೇಳಿದೆ. ಸ್ಕೃತಿಯಲ್ಲಿಯೂ ಈ ರೂಪವು ವರ್ಣಿತವಾಗಿರುತ್ತದೆ

(ಭಾಷ್ಯ) ೨೭೫. ಅಪಿ ಚ ಇದ್ರಗ್ರೂಪತ್ವಂ ಪ್ರಾಜ್ಞವ ಆತ್ಮನಃ ಸ್ಮರ್ಯತೇ

  1. ಹಿಂದಿನ ಮಂತ್ರದಲ್ಲಿ ಬ್ರಹ್ಮದ ವಿಷಯದ ಆಕಾಂಕ್ಷೆಯಿರುವದರಿಂದ ಅದನ್ನು ಪೂರ್ತಿಗೊಳಿಸುವ ಈ ವಾಕ್ಯವೂ ಬ್ರಹ್ಮರೂಪವೇ ಆಗಿರಬೇಕೆಂದು ನಿಶ್ಚಯವಾಗುತ್ತದೆ.

  2. ಅಂಥ ತೇಜೋಧಾತುವಿದ್ದರಲ್ಲವೆ, ಇದು ತೇಜೋಧಾತುವೂ, ಬ್ರಹ್ಮವೂ ? - ಎಂಬ ಸಂಶಯವಾದರೂ ಬರುತ್ತಿತ್ತು ? ಆದರೆ ಅದೇ ಪ್ರಕೃತದಲ್ಲಿಲ್ಲ.

  3. ಅಲ್ಲಿ ಸೂರ್ಯಾದಿಗಳು ಬೆಳಗುವದಿಲ್ಲವೆಂದರೆ ಬ್ರಹ್ಮವನ್ನು ತೋರಿಸಿಕೊಡಲಾರವು ಎಂದೇ ಅರ್ಥ, ಬ್ರಹ್ಮವಿರುವಲ್ಲಿ ಬೆಳಗುವದಿಲ್ಲ - ಎಂದರ್ಥವಲ್ಲ. ಅಲ್ಲಿ ಎಂಬುದು ವಿಷಯ ಸಪ್ತಮಿ.

ಅಧಿ. ೭. ಸೂ. ೨೪] ವಿಷಯವೂ ಸಂಶಯವೂ

೪೩

ಭಗವದ್ಗೀತಾಸು “ ನ ತಬ್ಬಾಸಯತೇ ಸೂರ್ಯೊ ನ ಶಶಾಜ್ಯೋ ನ ಪಾವಕಃ | ಯದ್ ಗತ್ಸಾ ನ ನಿವರ್ತನೇ ತರ್ ಧಾಮ ಪರಮಂ ಮಮ’ (ಗೀ. ೧೫-೬) ಇತಿ | “ಯದಾದಿತ್ಯಗತಂ ತೇಜೋ ಜಗದ್ಬಾಸಯತೇsಖಿಲಮ್ (ಯಚ್ಚನ್ನಮಸಿಯಚ್ಚಾಗೆ ತತ್ ತೇಜೋ ವಿದ್ದಿ ಮಾಮಕಮ್’ (ಗೀ. ೧೫-೧೨) ಇತಿ ಚ ||

(ಭಾಷ್ಯಾರ್ಥ) ಇದಲ್ಲದೆ ಪ್ರಾಜ್ಞನಾದ ಆತ್ಮನಿಗೇ ಇಂಥ ರೂಪವನ್ನು ಭಗವದ್ಗೀತಗಳಲ್ಲಿ “ಅದನ್ನು ಸೂರ್ಯನು ಬೆಳಗುವದಿಲ್ಲ, ಶಶಾಂಕನೂ (ಬೆಳಗುವ)ದಿಲ್ಲ, ಪಾವಕನೂ (ಬೆಳಗುವ)ದಿಲ್ಲ. ಯಾವ ಸ್ಥಾನವನ್ನು ಸೇರಿದರೆ ಹಿಂತೆರಳುವದಿಲ್ಲವೋ ಅದೇ ನನ್ನ ಪರಮಸ್ಥಾನವು” (ಗೀ. ೧೫-೬) ಎಂದೂ “ಆದಿತ್ಯನಲ್ಲಿರುವ ಯಾವ ತೇಜಸ್ಸು ಜಗತ್ತೆಲ್ಲವನ್ನೂ ಬೆಳಗುತ್ತಿರುವದೋ, ಯಾವದು ಚಂದ್ರನಲ್ಲಿಯೂ ಮತ್ತು ಯಾವದು ಅಗ್ನಿಯಲ್ಲಿಯೂ (ಇರುವದೋ) ಆ ತೇಜಸ್ಸನ್ನು ನನ್ನದೆಂದು ತಿಳಿ” (ಗೀ. ೧೫-೧೨) ಎಂದೂ ಸ್ಮರಿಸಿರುತ್ತದೆ.

೭. ಪ್ರಮಿತಾಧಿಕರಣ (೨೪-೨೫) (ಕಠ ೨-೧-೧೨ ರಲ್ಲಿರುವ ಅಂಗುಷ್ಠಮಾತ್ರಪುರುಷನು ಪರಮಾತ್ಮನೇ)

ಶಬ್ದಾದೇವ ಪ್ರಮಿತಃ ||೨೪|| ೨೪. ಶಬ್ದ (ಪ್ರಮಾಣ)ದಿಂದಲೇ (ಅಂಗುಷ್ಠದ) ಅಳತೆಯವನು (ಪರಮಾತ್ಮನು).

ವಿಷಯವೂ ಸಂಶಯವೂ

(ಭಾಷ್ಯ) ೨೭೬.ಅಜ್ಜುಷ್ಟಮಾತ್ರಃ ಪುರುಷೋ ಮಧ್ಯ ಆತ್ಮನಿ ತಿಷ್ಠತಿ’’ (ಕ.೨-೧-೧೨) ಇತಿ ಶೂಯತೇ | ತಥಾ ಅಬ್ದುಷ್ಟಮಾತ್ರ: ಪುರುಷೋ ಜ್ಯೋತಿರಿವಾಧೂಮಕಃ | ಈಶಾನೋ ಭೂತಭವ್ಯಸ್ಯ ಸ ಏವಾದ್ಯ ಸ ಉ ಶ್ವ ಏತ ತತ್’’ (ಕ.೨-೧-೧೩) ಇತಿ ಚ | ತತ್ರ ಯೋsಯಮ್ ಅಬ್ದುಷ್ಟಮಾತ್ರಃ ಪುರುಷಃ ಶೂಯತೇ, ಸ ಕಿಂ ವಿಜ್ಞಾನಾತ್ಮಾ ಕಿಂ ವಾ ಪರಮಾತ್ಮಾ ಇತಿ ಸಂಶಯಃ ||

  1. ಭಗವದ್ಗೀತೆಯಲ್ಲಿರುವ ಶ್ಲೋಕಗಳಿಗೆ ಗೀತಗಳೆಂದು ಹೆಸರು. ಆದ್ದರಿಂದ ಈ ಗ್ರಂಥವನ್ನು ಬಹುವಚನದಿಂದ ಆಚಾರ್ಯರು ಕರೆಯುತ್ತಾರೆ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಭಾಷ್ಯಾರ್ಥ) “ಅಂಗುಷ್ಠಮಾತ್ರನಾದ ಪುರುಷನು ಆತ್ಮದ ಮಧ್ಯದಲ್ಲಿರುವನು’ (ಕ. ೨-೧ ೧೨) ಎಂದೂ, ಹಾಗೂ “ಅಂಗುಷ್ಕಮಾತ್ರನಾದ ಪುರುಷನು ಹೊಗೆಯಿಲ್ಲದ ಜ್ಯೋತಿಯಂತೆ (ಇರುವನು) ; ಭೂತಭವ್ಯಕ್ಕೆ ಒಡೆಯನು, ಅವನೇ ಇಂದಿಗೂ, ಅವನೇ ನಾಳೆಗೂ, ಇದೇ ಅದು.” (ಕ. ೨-೧-೧೩) ಎಂದು ಶ್ರುತಿಯಲ್ಲಿದೆ. ಅಲ್ಲಿ ಈ ಅಂಗುಷ್ಕಮಾತ್ರಪುರುಷನೆಂದು ಶ್ರುತಿಯಲ್ಲಿ ಹೇಳಿದೆಯಲ್ಲ, ಇವನೇನು ವಿಜ್ಞಾನಾತ್ಮನೆ, ಅಥವಾ ಪರಮಾತ್ಮನ ? - ಎಂದು ಸಂಶಯವು.

ಪೂರ್ವಪಕ್ಷ : ಅಂಗುಷ್ಠಮಾತ್ರನು ವಿಜ್ಞಾನಾತ್ಮನೇ

(ಭಾಷ್ಯ) ೨೭೭. ತತ್ರ ಪರಿಮಾಣೋಪದೇಶಾತ್ ತಾವದ್ ವಿಜ್ಞಾನಾತ್ಮಾ ಇತಿ ಪ್ರಾಪ್ತಮ್ ನ ಹಿ ಅನಾಯಾಮವಿಸ್ತಾರಸ್ಯ ಪರಮಾತ್ಮನಃ ಅಂಗುಷ್ಠಪರಿಮಾಣಮ್ ಉಪಪದ್ಯತೇ | ವಿಜ್ಞಾನಾತ್ಮನಸ್ತು ಉಪಾಧಿಮತ್ಯಾತ್ ಸಂಭವತಿ ಕಯಾಚಿತ್ ಕಲ್ಪನೆಯಾ ಅಜ್ಜುಷ್ಯಮಾತ್ರತ್ವಮ್ 1ಸ್ಕೃತೇಶ ಅಥಸತ್ಯವತಃ ಕಾಯಾತ್ ಪಾಶಬದ್ಧಂ ವಶಂ ಗತಮ್ | ಅಬ್ದುಷ್ಕಮಾತ್ರಂ ಪುರುಷಂ ನಿಶ್ಚಕರ್ಷ ಯವೋ ಬಲಾತ್” (ವನ, ೨೯೭-೧೭) ಇತಿ | ನ ಹಿ ಪರಮೇಶ್ವರೋ ಬಲಾದ್ ಯಮೇನ ನಿಷ್ಕಷ್ಟು ಶಕ್ತಃ | ತೇನ ತತ್ರ ಸಂಸಾರೀ ಅಬ್ದುಷ್ಟಮಾತ್ರೋ ನಿಶ್ಚಿತಃ | ಸ ಏವ ಇಹಾಪಿ ಇತಿ

(ಭಾಷ್ಯಾರ್ಥ) ಇಲ್ಲಿ ಪರಿಮಾಣವನ್ನು ಹೇಳಿರುವದರಿಂದ (ಇವನು) ವಿಜ್ಞಾನಾತ್ಮನೇ ಎಂದು ಮೊದಲು ಬಂದೊದಗುತ್ತದೆ. ಅನಂತವಾದ ಉದ್ದಗಲವುಳ್ಳ ಪರಮಾತ್ಮನಿಗೆ ಹೆಬ್ಬೆರಳಿನ ಪರಿಮಾಣವು ಹೊಂದುವಹಾಗೆಯೇ ಇಲ್ಲ. ವಿಜ್ಞಾನಾತ್ಮನಿಗಾದರೆ ಉಪಾಧಿ ಯಿರುವದರಿಂದ ಯಾವದಾದರೊಂದು ಕಲ್ಪನೆಯಿಂದ ಹೆಬ್ಬೆರಳಿನ ಗಾತ್ರದವನು ಎಂದು (ಹೇಳುವದಕ್ಕೆ) ಆಗುತ್ತದೆ. ಬಳಿಕ ಸತ್ಯವಂತನ ಶರೀರದಿಂದ ಅಂಗುಷ್ಠಮಾತ್ರನಾದ ಪುರುಷನನ್ನು ಪಾಶದಿಂದ ಬಿಗಿದು ವಶಪಡಿಸಿಕೊಂಡು ಯಮನು ಬಲಾತ್ಕಾರದಿಂದ ಎಳದನು’ (ವನ. ೨೯೭-೧೭) ಎಂಬ ಸ್ಮೃತಿ (ವಾಕ್ಯ)ದಿಂದಲೂ (ಇವನು ಜೀವನೇ ಆಗುತ್ತಾನೆ) .ಏಕೆಂದರೆ ಪರಮೇಶ್ವರನನ್ನು ಯಮನು ಬಲಾತ್ಕಾರದಿಂದ ಎಳೆಯುವದಕ್ಕೆ ಆಗುವಹಾಗಿಲ್ಲ ; ಆದ್ದರಿಂದ ಅಲ್ಲಿ ಸಂಸಾರಿಯೇ ಅಂಗುಷ್ಯಮಾತ್ರನು ಎಂದು ನಿಶ್ಚಯ ವಾಗುತ್ತದೆ. ಅವನೇ ಇಲ್ಲಿಯೂ (ಆಗಿರಬೇಕು).

೪೪೧

ಅಧಿ. ೭. ಸೂ. ೨೫] ಸಿದ್ಧಾಂತ : ಅಂಗುಷ್ಯಮಾತ್ರನು ಪರಮಾತ್ಮನೇ

ಸಿದ್ಧಾಂತ : ಅಂಗುಷ್ಠಮಾತ್ರನು ಪರಮಾತ್ಮನೇ

(ಭಾಷ್ಯ) ೨೭೮. ಏವಂ ಪ್ರಾಪ್ತ ಬ್ಯೂಮಃ | ಪರಮಾತ್ಮನ ಅಯಮ್ ಅಬ್ದುಷ್ಟ ಮಾತ್ರಪರಿಮಿತಃ ಪುರುಷೋ ಭವಿತುಮರ್ಹತಿ | ಕಸ್ಮಾತ್ ? ಶಬ್ದಾತ್ | “ಈಶಾನೋ ಭೂತಭವ್ಯಸ್ಯ” ಇತಿ | ನ ಹಿ ಅನ್ಯ: ಪರಮೇಶ್ವರಾತ್ ಭೂತಭವ್ಯಸ್ಯ ನಿರುಶಮ್ ಈಶಿತಾ | ಏತದ್ವ ತತ್” ಇತಿ ಚ ಪ್ರಕೃತಂ ಪೃಷ್ಟಮ್ ಇಹ ಅನುಸಂದಧಾತಿ | ಏತ ತತ್ ಯತ್ ಸೃಷ್ಟಂ ಬ್ರಹ್ಮ ಇತ್ಯರ್ಥಃ | ಸೃಷ್ಟಂ ಚ ಇಹ ಬ್ರಹ್ಮ - “ಅನ್ಯತ್ರ ಧರ್ಮಾದನ್ಯತ್ರಾಧರ್ಮಾದಾಸ್ಮಾತ್ ಕೃತಾಕೃತಾತ್ | ಅನ್ಯತ್ರ ಭೂತಾಚ್ಚ ಭವ್ಯಾಚ್ಚ ಯತ್ ತತ್ ಪಶ್ಯಸಿ ತದ್ವದ” (ಕ. ೧-೨-೧೪) ಇತಿ | ಶಬ್ದಾದೇವ ಇತಿ ಅಭಿಧಾನಶ್ರುತೇರೇವ ‘ಈಶಾನಃ’ ಇತಿ ಪರಮೇಶ್ವರೋSಯಂಗಮ್ಯತೇ ಇತ್ಯರ್ಥಃ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳುತ್ತೇವೆ. ಈ ಹೆಬ್ಬೆರಳಿನ ಗಾತ್ರದ ಪುರುಷನು ಪರಮಾತ್ಮನೇ ಆಗಿರಬೇಕು. ಏಕೆ ? ಎಂದರೆ ‘‘ಭೂತಭವ್ಯಕ್ಕೆ ಒಡೆಯನು’ ಎಂದು ಶಬ್ದವಿರುವದರಿಂದ. ಪರಮೇಶ್ವರನಿಗಿಂತ ಬೇರೆ (ಯಾವನೂ) ಭೂತಭವ್ಯವನ್ನು ನಿರಂಕುಶವಾಗಿ ಆಳುವವನು (ಇರುವದೇ) ಇಲ್ಲ. ಇದಲ್ಲದೆ “ಏತದ್ವ ತತ್’ (ಇದೇ ಅದು) ಎಂದು (ನಚಿಕೇತನು) ಕೇಳಿರುವ ಪ್ರಕೃತವಾದ (ವಸ್ತುವನ್ನು ) ಯಮನು ಇಲ್ಲಿ ಪರಾಮರ್ಶಮಾಡಿರುತ್ತಾನೆ. (ನೀನು) ಕೇಳಿದ ಬ್ರಹ್ಮವಿದೆಯಲ್ಲ, ಇದೇ ಅದು ಎಂದರ್ಥ. ‘ಧರ್ಮಕ್ಕಿಂತ ಬೇರೆಯಾಗಿ

ಭವ್ಯಕ್ಕಿಂತಲೂ ಬೇರೆಯಾಗಿ (ಇರುವ) ಯಾವದನ್ನು ನೀನು ಕಂಡಿರುವೆಯೋ ಅದನ್ನು ಹೇಳು” (ಕ. ೧-೨-೧೪) ಎಂದು ಇಲ್ಲಿ ಬ್ರಹ್ಮನನ್ನು ಕೇಳಿಯೂ ಇರುತ್ತದೆ. ‘ಶಬ್ದದಿಂದಲೇ’ ಎಂದು (ಸೂತ್ರದಲ್ಲಿರುವ ಮಾತಿಗೆ) ಈಶಾನನೆಂಬ ಅಭಿಧಾನಶ್ರುತಿ

ಯಿಂದಲೇ ಇವನು ಪರಮೇಶ್ವರನೆಂದು ನಿಶ್ಚಯವಾಗುತ್ತದೆ ಎಂದರ್ಥ.

  1. ಈಶಾನನು, ಈಶ್ವರನು - ಎಂಬ ಹೆಸರೇ ಇದು ಪರಮೇಶ್ವರನೆಂದು ನಿಶ್ಚಯಿಸು ತದೆ ; ಬರಿಯ ಬ್ರಹ್ಮಧರ್ಮಲಿಂಗದಿಂದ ಗೊತ್ತುಪಡಿಸುವ ಅವಶ್ಯಕತೆಯೇನೂ ಇಲ್ಲ

ಎಂದು ಭಾವ.ಬ್ರಹ್ಮಸೂತ್ರಭಾಷ್ಯ |

[ಅ. ೧. ಪಾ. ೩.

ಹೃದ್ಯಪೇಕ್ಷಯಾ ತು ಮನುಷ್ಯಾಧಿಕಾರತ್ವಾತ್ ||೨೫|| ೨೫. ಹೃದಯದಲ್ಲಿ (ರುವದರ) ಅಪೇಕ್ಷೆಯಿಂದಲೇ (ಈ ಪರಿಮಾಣ ವನ್ನು ಹೇಳಿದೆ). ಏಕೆಂದರೆ (ಶಾಸ್ತ್ರವು) ಮನುಷ್ಕಾಧಿಕಾರವುಳ್ಳದ್ದು.

ಪರಮಾತ್ಮನಿಗೆ ಅಂಗುಷ್ಠಪರಿಮಾಣವು ಹೇಗೆ ?

(ಭಾಷ್ಯ) ೨೭೯. ಕಥಂ ಪುನಃ ಸರ್ವಗತಸ್ಯ ಪರಮಾತ್ಮನಃ ಪರಿಮಾಣೋಪದೇಶಃ ಇತಿ ? ಅತ್ರ ಬೂಮಃ | ಸರ್ವಗತಸ್ಕಾಪಿ ಪರಮಾತ್ಮನೋ ಹೃದಯೇ ಅವಸ್ಥಾನಮ್ ಅಪೇಕ್ಷ ಅಬ್ದುಷ್ಟಮಾತ್ರತ್ವಮಿದಮ್ ಉಚ್ಯತೇ | ಆಕಾಶಕ್ಕೇವ ವಂಶಪರ್ವಾಪೇಕ್ಷಮ್ ಅರತ್ನಮಾತ್ರತ್ವಮ್ 1 ನ ಹಿ ಅಸಾ ಅತಿಮಾತ್ರಸ್ಯ ಪರಮಾತ್ಮನಃ ಅಬ್ದುಷ್ಟ ಮಾತ್ರತ್ವಮ್ ಉಪಪದ್ಯತೇ 1 ನ ಚ ಅನ್ಯಃ ಪರಮಾತ್ಮನಃ ಇಹ ಗ್ರಹಣಮರ್ಹತಿ ಈಶಾನಶಬ್ದಾದಿಭ್ಯಃ ಇತ್ಯುಕ್ತಮ್ | ನನು ಪ್ರತಿಪ್ರಾಣಿಭೇದಂ ಹೃದಯಾನಾಮ್ ಅನವಸ್ಥಿತತ್ವಾತ್ ತದಪೇಕ್ಷಮಪಿ ಅಬ್ದುಷ್ಟಮಾತ್ರತ್ವಂ ನೋಪಪದ್ಯತೇ ಇತಿ | ಅತಃ ಉತ್ತರಮ್ ಉಚ್ಯತೇ - ‘ಮನುಷ್ಯಾಧಿಕಾರತ್ವಾತ್’ ಇತಿ 1 ಶಾಸ್ತ್ರಂ ಹಿ ಅವಿಶೇಷ ಪ್ರವೃತ್ತಮಪಿ ಮನುಷ್ಯಾನೇವ ಅಧಿಕರೋತಿ | ಶಕ್ತತ್ವಾತ್ ಅರ್ಥಿತ್ವಾತ್, ಅಪರ್ಯುದಸ್ತತ್ವಾತ್, ಉಪನಯನಾದಿಶಾಸ್ಕಾಚ್ಚ ಇತಿ ವರ್ಣಿತಮೇತತ್ ಅಧಿಕಾರಲಕ್ಷಣೇ (ಜೈ, ಸೂ. ೬-೧) | ಮನುಷ್ಯಾಣಾಂ ಚ ನಿಯತಪರಿಮಾಣ ಕಾಯಃ ಔಚಿತ್ಯೇನ ನಿಯತಪರಿಮಾಣಮೇವ ಚ ಏಷಾಮ್ ಅಜ್ಜುಷ್ಟಮಾತ್ರಮ್ ಹೃದಯಮ್ | ಅತಃ ಮನುಷ್ಯಾಧಿಕಾರಿತ್ವಾತ್ ಶಾಸ್ತ್ರಸ್ಯ ಮನುಷ್ಯಹೃದಯಾವಸ್ಥಾನಾ ಪೇಕ್ಷಮ್, ಅಬ್ದುಷ್ಟಮಾತ್ರತ್ವಮ್ ಉಪಪನ್ನಂ ಪರಮಾತ್ಮನಃ ||

(ಭಾಷ್ಯಾರ್ಥ) ಸರ್ವಗತನಾಗಿರುವ ಪರಮಾತ್ಮನಿಗೆ (ಹೀಗೆ) ಪರಿಮಾಣವನ್ನು ಹೇಳಿರುವದು ಹೇಗೆ ಸರಿ ? - ಎಂದರೆ ಅದಕ್ಕೆ ಹೇಳುತ್ತೇವೆ : ಪರಮಾತ್ಮನು ಸರ್ವಗತನಾದರೂ ಹೃದಯದಲ್ಲಿರುವದರ ಅಪೇಕ್ಷೆಯಿಂದ ಈ ಅಂಗುಷ್ಠಮಾತ್ರತ್ವವನ್ನು ಹೇಳಿದೆ. ಬಿದುರಿನ ಗೆಣ್ಣುಗಳ ಅಪೇಕ್ಷೆಯಿಂದ ಆಕಾಶಕ್ಕೆ ಚೋಟಿನ ಅಳತೆಯನ್ನು (ಹೇಳು ವಂತೆಯೇ ಇದು). ಏಕೆಂದರೆ ಅಳತೆಯಿಲ್ಲದ ಪರಮಾತ್ಮನಿಗೆ ಮುಖ್ಯವೃತ್ತಿಯಿಂದ ಅಂಗುಷ್ಯಮಾತ್ರತ್ವವು ಹೊಂದುವದಿಲ್ಲ. ಈಶಾನಶಬ್ದವೇ ಮುಂತಾದ (ಕಾರಣ)

ಅಧಿ. ೭. ಸೂ. ೨೫] ಪರಮಾತ್ಮನಿಗೆ ಅಂಗುಷ್ಠಪರಿಮಾಣವು ಹೇಗೆ ?

೪೪೩

ಗಳಿಂದ ಇಲ್ಲಿ ಪರಮಾತ್ಮನನ್ನು ಬಿಟ್ಟು ಮತ್ತೊಬ್ಬರನ್ನು ತೆಗೆದುಕೊಳ್ಳುವದಕ್ಕೆ ಆಗುವಂತೆಯೇ ಇಲ್ಲ ಎಂದು ಮೇಲೆ (ಹೇಳಿರು)ತ್ತೇವೆ.

(ಆಕ್ಷೇಪ) :- ಬೇರೆಬೇರೆಯ ಪ್ರಾಣಿಗಳಿಗೆ ಹೃದಯಗಳು ವ್ಯವಸ್ಥಿತವಾಗಿ (ಇಷ್ಟೇ ಎಂದಿ)ರುವದಿಲ್ಲವಾಗಿ ಅದರ ಅಪೇಕ್ಷೆಯಿಂದಲೂ ಅಂಗುಷ್ಠಮಾತ್ರತ್ವವು ಹೊಂದುವದಿಲ್ಲವಲ್ಲ !

(ಪರಿಹಾರ) :- ಇದಕ್ಕೆ ಉತ್ತರವನ್ನು ಹೇಳುತ್ತೇವೆ. (ಶಾಸ್ತ್ರವು) ಮನುಷ್ಯಾಧಿಕಾರವುಳ್ಳದ್ದಾದ್ದರಿಂದ (ಹೊಂದುತ್ತದೆ). ಶಾಸ್ತ್ರವು ಸಾಮಾನ್ಯವಾಗಿ ಹೊರಟಿರುತ್ತದೆಯಾದರೂ ಮನುಷ್ಯರನ್ನೇ ಅಧಿಕರಿಸುತ್ತದೆ. ಏಕೆಂದರೆ (ಅವರು) ಶಕ್ತರಾಗಿರುತ್ತಾರೆ, ಅರ್ಥಿಗಳಾಗಿರುತ್ತಾರೆ, (ಅವರನ್ನು ಶಾಸ್ತ್ರವು) ಅಡ್ಡಿ ಮಾಡಿಲ್ಲ, ಉಪನಯನಾದಿಶಾಸ್ತ್ರವೂ ಇದೆ ಎಂದು ಇದನ್ನು ಅಧಿಕಾರಲಕ್ಷಣದಲ್ಲಿ (ಜೆ. ಸೂ.೬ ೧) ವರ್ಣಿಸಿರುತ್ತದೆ. ಮನುಷ್ಯರ ಶರೀರವು (ಇಂತಿಷ್ಟೆಂದು) ಗೊತ್ತಾದ ಪರಿಮಾಣ ದ್ದಾಗಿರುತ್ತದೆ. ಅದಕ್ಕೆ ತಕ್ಕಂತೆ ಇವರಿಗೆ ಗೊತ್ತಾದ ಪರಿಮಾಣವುಳ್ಳದ್ದಾಗಿಯೇ (ಇರುವ) ಹೃದಯವು ಅಂಗುಷ್ಯಮಾತ್ರವಾಗಿರುತ್ತದೆ. ಆದ್ದರಿಂದ ಶಾಸ್ತ್ರವು

  1. ಪ್ರಕೃತವಾಗಿರುವದರಿಂದಲೂ ನಚಿಕೇತನು ಇದನ್ನೇ ಕೇಳಿರುವದರಿಂದಲೂ.

  2. ‘ಸ್ವರ್ಗಕಾಮನು ಯಾಗಮಾಡಬೇಕು’ ಎಂಬುದು ಸಾಮಾನ್ಯಶಾಸ್ತ್ರವಾದರೂ ಕೀಳು ಪ್ರಾಣಿಗಳಿಗೆ ವೇದಾರ್ಥಜ್ಞಾನವೇ ಮುಂತಾದ ಸಾಮಗ್ರಿಗಳಿಲ್ಲದ್ದರಿಂದ ಕರ್ಮವನ್ನು ಮಾಡುವ ಶಕ್ತಿಯಿಲ್ಲ, ಮನುಷ್ಯನಿಗೆ ಶಕ್ತಿಯೂ ಉಂಟು.

  3. ಸ್ಥಾವರಪ್ರಾಣಿಗಳಿಗೆ ಫಲದ ಅಪೇಕ್ಷೆಯಿಲ್ಲದ್ದರಿಂದ ಅಧಿಕಾರವಿಲ್ಲ ; ಮನುಷ್ಯನಿಗೆ ಫಲದಲ್ಲಿ ಅಪೇಕ್ಷೆಯೂ ಉಂಟು.

  4. ‘ಶೂದ್ರನು ಯಜ್ಞಕ್ಕೆ ತಕ್ಕವನಲ್ಲ’ ಎಂದು ಶೂದ್ರನನ್ನು ಶಾಸ್ತ್ರವು ನಿವಾರಿಸಿದ. ಮನುಷ್ಯರು ಎಂದರೆ ಮಿಕ್ಕ ಮೂರು ವರ್ಣದವರು ಹೀಗೆ ನಿವಾರಿಸಲ್ಪಟ್ಟಿಲ್ಲ.

5:ಶೂದ್ರನಿಗೆ ಅಧಿಕಾರವಿಲ್ಲವೆನ್ನುವದಕ್ಕೆ ಇದು ಇನ್ನೊಂದು ಕಾರಣ. ಏಕೆಂದರೆ ಅವನಿಗೆ ಶಾಸ್ತ್ರದಲ್ಲಿ ಉಪನಯನವನ್ನು ಹೇಳಿಲ್ಲ.

  1. ಪೂರ್ವಮಿಾಮಾಂಸಾಸೂತ್ರದಲ್ಲಿ ಕರ್ಮಕ್ಕೆ ಅಧಿಕಾರಿಗಳನ್ನು ಗೊತ್ತುಮಾಡುವ ಗ್ರಂಥ ಭಾಗದಲ್ಲಿ.

  2. ಆದ್ದರಿಂದ ಇಲ್ಲಿ ಸೂತ್ರಕಾರರು ‘ಮನುಷ್ಕಾಧಿಕಾರತ್ವಾತ್’ ಎಂದು ಅದನ್ನೇ ಅನುವಾದ ಮಾಡಿಕೊಂಡಿರುತ್ತಾರೆಂದು ಭಾವ.

  3. ಅವರವರ ಅಂಗುಷ್ಟದ ಪರಿಮಾಣವುಳ್ಳದ್ದಾಗಿರುತ್ತದೆ.

೪೪೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಮನುಷ್ಕಾಧಿಕಾರವುಳ್ಳದ್ದಾದ್ದರಿಂದ ಮನುಷ್ಯರ ಹೃದಯದಲ್ಲಿರುವದರ ಅಪೇಕ್ಷೆ ಯಿಂದ ಪರಮಾತ್ಮನು ಅಂಗುಷ್ಕಮಾತ್ರನಾಗಿರುವನೆಂಬುದು ಹೊಂದುತ್ತದೆ.

ಇಲ್ಲಿ ಅಂಗುಷ್ಠಮಾತ್ರತ್ವವನ್ನು ಪ್ರತಿಪಾದಿಸಿಲ್ಲ

(ಭಾಷ್ಯ) ೨೮೦.ಯದಪಿ ಉಕ್ತಮ್ - ಪರಿಮಾಣೋಪದೇಶಾತ್ ಸ್ಮೃತೇಶ್ಚ ಸಂಸಾರ್ಯವ ಅಯಮ್ ಅಬ್ದುಷ್ಟಮಾತ್ರಃ ಪ್ರತ್ಯೇತವಃ ಇತಿ | ತತ್ ಪ್ರತ್ಯುಚ್ಯತೇ - “ಸ ಆತ್ಮಾ ತತ್ ತ್ವಮಸಿ’ (ಛಾಂ. ೬-೮-೭) ಇತ್ಯಾದಿವತ್‌ ಸಂಸಾರಿಣ ಏವ ಸತಃ ಅಬ್ದುಷ್ಯಮಾತ್ರಸ್ಯ ಬ್ರಹ್ಮತ್ವಮಿದಮ್ ಉಪದಿಶ್ಯತೇ ಇತಿ | ದ್ವಿರೂಪಾ ಹಿ ವೇದಾನ್ಯವಾಕ್ಯಾನಾಂ ಪ್ರವೃತ್ತಿಃ, ಕ್ವಚಿತ್ ಪರಮಾತ್ಮಸ್ವರೂಪನಿರೂಪಣಪರಾ, ಕ್ವಚಿತ್ ವಿಜ್ಞಾನಾತ್ಮನಃ ಪರಮಾತ್ಮಕತ್ರೋಪದೇಶಪರಾ | ತದತ್ರ ವಿಜ್ಞಾನಾತ್ಮನಃ ಪರಮಾತ್ಮನಾ ಏಕತ್ವಮ್ ಉಪದಿಶ್ಯತೇ ನ ಅಬ್ದುಷ್ಟಮಾತ್ರತ್ವಂ ಕಸ್ಯಚಿತ್ | ಏತಮೇವ ಅರ್ಥಂ ಪರೇಣ ಸ್ಟುಟೀಕರಿಷ್ಯತಿ - “ಅಬ್ದುಷ್ಕಮಾತ್ರ ಪುರುರ್ಷೋನ್ಯರಾತ್ಮಾ ಸದಾ ಜನಾನಾಂ ಹೃದಯೇ ಸಂನಿವಿಷ್ಟಃ | ತಂ ಸ್ಟಾಚ್ಛರೀರಾತ್ ಪ್ರವೃಹನ್ನು ಇಾದಿವೇಷಿಕಾಂ ಧೈರ್ಯಣ | ತಂ ವಿದ್ಯಾಚ್ಯುಕ್ರಮಮೃತಮ್’’ (ಕ. ೨-೩-೧೭) ಇತಿ ||

(ಭಾಷ್ಯಾರ್ಥ) ಇನ್ನು ಪರಿಮಾಣವನ್ನು ಹೇಳಿರುವದರಿಂದಲೂ ಸ್ಮೃತಿಯು (ಹಾಗೆಂದು ಹೇಳುವ) ದರಿಂದಲೂ ಈ ಅಂಗುಷ್ಯಮಾತ್ರನುಸಂಸಾರಿಯಂದೇ ಅರಿಯಬೇಕು - ಎಂದು (ಪೂರ್ವಪಕ್ಷದಲ್ಲಿ ) ಹೇಳಿತ್ತಷ್ಟ. ಅದಕ್ಕೆ ಉತ್ತರವನ್ನು ಹೇಳುತ್ತೇವೆ : “ಅದೇ ಆತ್ಮನು, ಅದೇ ನೀನಾಗಿರುವೆ’ (ಛಾಂ. ೬-೮-೭) ಎಂಬುದೇ ಮುಂತಾದ (ವಾಕ್ಯಗಳಲ್ಲಿರು ವಂತ) ಸಂಸಾರಿಯೇ ಆಗಿರುವ ಅಂಗುಷ್ಠಮಾತ್ರನಾದ (ಜೀವನಿಗೆ) ಈ ಬ್ರಹ್ಮತ್ವವನ್ನು ಹೇಳಿರುತ್ತದೆ. ಹೇಗೆಂದರೆ ವೇದಾಂತವಾಕ್ಯಗಳ ಪ್ರವೃತ್ತಿಯು ಎರಡು ಬಗೆ : ಕೆಲವು ಕಡೆಗಳಲ್ಲಿ ಪರಮಾತ್ಮನ ಸ್ವರೂಪವನ್ನು ವಿಚಾರಮಾಡಿ (ತಿಳಿಸುವದರಲ್ಲಿ) ತಾತ್ಪರ್ಯವುಳ್ಳದ್ದು, ಕೆಲವು ಕಡೆಗಳಲ್ಲಿ ವಿಜ್ಞಾನಾತ್ಮನಿಗೆ ಪರಮಾತ್ಮನೊಡನೆ

  1. ಇದು ಸಾಮಾನ್ಯವಾಗಿ ಹೇಳಿದ್ದು , ವೇದಾಂತದಲ್ಲಿ ವಿಶೇಷಾಧಿಕಾರವನ್ನು ಮುಂದಿನ ಅಧಿಕರಣಗಳಲ್ಲಿ ಹೇಳಿದೆ.

  2. ‘ಸತ್ಯಂ ಜ್ಞಾನಮನಂತಂ ಬ್ರಹ್ಮ’, ‘ವಿಜ್ಞಾನಮಾನವ್ಹಂ ಬ್ರಹ್ಮ’ - ಮುಂತಾದವುಗಳ ಪ್ರವೃತ್ತಿ ಹೀಗ.

ಅಧಿ. ೮. ಸೂ. ೨೬] ದೇವತೆಗಳಿಗೆ ವಿದ್ಯಾಧಿಕಾರವಿದೆ

೪೪೫

ಐಕ್ಯವನ್ನು ಉಪದೇಶಿಸುವದರಲ್ಲಿ ತಾತ್ಪರ್ಯವುಳ್ಳದ್ದು. ಹೀಗಿರುವದರಿಂದ ಇಲ್ಲಿ ವಿಜ್ಞಾನಾತ್ಮನಿಗೆ ಪರಮಾತ್ಮನೊಡನೆ ಐಕ್ಯವನ್ನು ತಿಳಿಸಿರುತ್ತದೆಯೇ ಹೊರತು ಯಾರಿಗೂ ಅಂಗುಷ್ಕಮಾತ್ರತ್ವವನ್ನು (ಹೇಳಿಲ್ಲ).? ಇದೇ ಅಭಿಪ್ರಾಯವನ್ನೇ (ಶ್ರುತಿಯು) ಮುಂದೆ “ಅಂಗುಷ್ಠಮಾತ್ರಪುರುಷನಾಗಿರುವ ಅಂತರಾತ್ಮನು ಯಾವಾ ಗಲೂ ಜನರ ಹೃದಯದಲ್ಲಿ ಹೊಕ್ಕಿರುವನು. ಆತನನ್ನು ತನ್ನ ಶರೀರದಿಂದ ಮೊಸೆಹುಲ್ಲಿನಿಂದ ಕಡ್ಡಿಯನ್ನು ತೆಗೆಯುವಂತೆ ಧೈರ್ಯದಿಂದ ತೆಗೆಯಬೇಕು. ಆತನನ್ನೇ ಶುದ್ದನೆಂದೂ ಅಮೃತನೆಂದೂ ತಿಳಿಯಬೇಕು” (ಕ. ೨-೩-೧೭) ಎಂದು ಸ್ಪುಟ ಗೊಳಿಸಿರುತ್ತದೆ.

೮. ದೇವತಾಧಿಕರಣ (೨೬-೩೩)

(ದೇವತಾದಿಗಳಿಗೂ ಜ್ಞಾನಾಧಿಕಾರವುಂಟು) ತದುಪರ್ಯಪಿ ಬಾದರಾಯಣಃ ಸಂಭವಾತ್ ||೨೬|| ೨೬. ಅದರ ಮೇಲಿನ(ವರಿಗೂ ಶಾಸ್ತ್ರದಲ್ಲಿ ಅಧಿಕಾರವುಂಟು) ಎಂದು ಬಾದರಾಯಣರು (ಅಭಿಪ್ರಾಯಪಡುತ್ತಾರೆ) : ಏಕೆಂದರೆ (ಅಧಿಕಾರವು) ಸಂಭವಿಸುತ್ತದೆ.

ದೇವತೆಗಳಿಗೆ ವಿದ್ಯಾಧಿಕಾರವಿದೆ

(ಭಾಷ್ಯ) ೨೮೧. ಅಬ್ದುಷ್ಟಮಾತ್ರಶ್ರುತಿಃ ಮನುಷ್ಯಹೃದಯಾಪೇಕ್ಷಯಾ ಮನುಷ್ಕಾಧಿಕಾರ ತ್ವಾತ್ ಶಾಸ್ತ್ರಸ್ಯ ಇತ್ಯುಕ್ತಮ್ | ತತ್ತ್ವಸಜ್ಜನ ಇದಮುಚ್ಯತೇ | ಬಾಢಮ್, ಮನುಷ್ಕಾನ್ ಅಧಿಕರೋತಿ ಶಾಸ್ತ್ರಮ್ |ನತು ಮನುಷ್ಯಾನೇನ ಇತಿ ಇಹ ಬ್ರಹ್ಮಜ್ಞಾನೇ ನಿಯಮೋಸ್ತಿ | ತೇಷಾಂ ಮನುಷ್ಯಾಣಾಮ್ ಉಪರಿಷ್ಮಾತ್ ಯೇ ದೇವಾದಯಃ, ತಾನಪಿ ಅಧಿಕರೋತಿ ಶಾಸ್ತ್ರಮ್ ಇತಿ ಬಾದರಾಯಣ ಆಚಾರ್ಯೊ ಮನ್ಯತೇ | ಕಸ್ಮಾತ್ ? ಸಂಭವಾತ್ ! ಸಂಭವತಿ ಹಿ ತೇಷಾಮಪಿ ಅರ್ಥಿಾದ್ಯಧಿಕಾರ ಕಾರಣಮ್ | ತತ್ರ ಅರ್ಥಿತ್ವಂ ತಾವತ್ ಮೋಕ್ಷವಿಷಯಂ ದೇವಾದೀನಾಮಪಿ ಸಂಭವತಿ

  1. ‘ತತ್ ತ್ವಮಸಿ’, ‘ಅಯಮಾತ್ಮಾ ಬ್ರಹ್ಮ’ ಮುಂತಾದ ವಾಕ್ಯಗಳ ಪ್ರವೃತ್ತಿ ಹೀಗೆ.

  2. ಅಂಗುಷ್ಟಮಾತ್ರನಾಗಿ ಕಾಣುವ ಆತ್ಮನು ತ್ರಿಕಾಲಕ್ಕೂ ಒಡೆಯನಾದ ಪರಮೇಶ್ವರನು ಎಂದು ಶ್ರುತಿಯ ಅರ್ಥ ; ಸೂತ್ರವು ಅಂಗುಷ್ಯಮಾತ್ರನೆಂಬ ವಿಶೇಷಣಕ್ಕೆ ಕಾರಣವನ್ನೂ ಹೇಳಿದ - ಎಂದು ಭಾವ.

೪೪೬

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೩.

ವಿಕಾರವಿಷಯವಿಭೂತ್ಯನಿತ್ಯತ್ಯಾಲೋಚನಾದಿನಿಮಿತ್ತಮ್ | ತಥಾ ಸಾಮರ್ಥ್ಯಮಪಿ ತೇಷಾಂ ಸಂಭವತಿ | ಮನ್ಯಾರ್ಥವಾದೇತಿಹಾಸಪುರಾಣಲೋಕೇಟ್ರೋ ವಿಗ್ರಹ ವಾದ್ಯವಗಮಾತ್ | ನ ಚ ತೇಷಾಂ ಕಶ್ಚಿತ್ ಪ್ರತಿಷೇಧೋSಸ್ತಿ | ನ ಚ ಉಪ ನಯನಶಾಸ್ತ್ರಣ ಏಷಾಮಧಿಕಾರೋ ನಿವರ್ತ್ಕತ | ಉಪನಯನಸ್ಯ ವೇದಾಧ್ಯಯ ನಾರ್ಥತ್ವಾತ್ | ತೇಷಾಂ ಚ ಸ್ವಯಂಪ್ರತಿಭಾತವೇದಾತ್ | ಅಪಿ ಚೈಷಾಂ ವಿದ್ಯಾಗ್ರಹಣಾರ್ಥಂ ಬ್ರಹ್ಮಚರ್ಯಾದಿ ದರ್ಶಯತಿ - “ಏಕಶತಂ ಹ ವೈ ವರ್ಷಾಣಿ ಮಘವಾನ್ ಪ್ರಜಾಪತ ಬ್ರಹ್ಮಚರ್ಯಮುವಾಸ’’ (ಛಾಂ. ೮-೧೧-೩), ‘‘ಭ್ರಗುರ್ವ ವಾರುಣಿಃ | ವರುಣಂ ಪಿತರಮುಪಸಸಾರ | ಅಧೀಹಿ ಭಗವೋ ಬ್ರಹ್ಮತಿ’’ (ತೈ. ೩ ೧) ಇತ್ಯಾದಿ | ಯದಪಿ ಕರ್ಮಸು ಅನಧಿಕಾರಕಾರಣಮುಕ್ತಮ್ (ನ ದೇವಾನಾಂ ದೇವತಾಸ್ತರಾಭಾವಾತ್” (ಜೈ. ಸೂ. ೬-೧-೬) ಇತಿ “ನ ಋಷಿಣಾಮಾರ್ಷೆಯಾ ಇರಾಭಾವಾತ್’ (ಜೈ, ಸೂ. ೬-೧-೭) ಇತಿ | ನ ತದ್ ವಿದ್ಯಾಸ್ವಸ್ತಿ | ನ ಹಿ ಇನ್ನಾದೀನಾಂ ವಿದ್ಯಾಸ್ಟಧಿಕ್ರಿಯಮಾಣಾನಾಮ್ ಇನ್ಹಾದ್ಯುದ್ದೇಶೇನ ಕಿಂಚಿತ್ ಕೃತ್ಯಮಸ್ತಿ | ನ ಚ ಧೃಗ್ವಾದೀನಾಂ ಧೃಗ್ವಾದಿಸಗೋತ್ರತಯಾ | ತಸ್ಮಾತ್ ದೇವಾದೀನಾಮಪಿ ವಿದ್ಯಾಸು ಅಧಿಕಾರಃ ಕೇನ ವಾರ್ಯತೇ ? ದೇವಾದ್ಯಧಿಕಾರೇತಪಿ ಅಜ್ಜುಷ್ಟಮಾತ್ರಶ್ರುತಿಃ ಸ್ವಾುಷ್ಠಾಪೇಕ್ಷಯಾ ನ ವಿರುಧ್ಯತೇ ||

(ಭಾಷ್ಯಾರ್ಥ) ಅಂಗುಷ್ಯಮಾತ್ರಶ್ರುತಿಯು ಮನುಷ್ಯರ ಹೃದಯದ ಅಪೇಕ್ಷೆಯಿಂದ (ಬಂದಿದೆ) ; ಏಕೆಂದರೆ ಶಾಸ್ತ್ರವು ಮನುಷ್ಯರನ್ನು ಅಧಿಕರಿಸಿ (ಹೊರಟಿದ) ಎಂದು (ಹಿಂದ) ಹೇಳಿದ್ದಾಗಿದೆ. ಅದರ ಪ್ರಸಂಗದಿಂದ ಇದನ್ನು ಹೇಳಲಾಗುತ್ತದೆ. ನಿಜ, ಶಾಸ್ತ್ರವು ಮನುಷ್ಯರನ್ನು ಅಧಿಕರಿಸುತ್ತದೆ ; ಆದರೆ ಮನುಷ್ಯರನ್ನೇ ಅಧಿಕರಿಸುತ್ತದೆ ಎಂದು ಈ ಬ್ರಹ್ಮಜ್ಞಾನದಲ್ಲಿ ನಿಯಮವಿಲ್ಲ. ಆ ಮನುಷ್ಯರ ಮೇಲೆ ದೇವತೆಗಳೇ ಮುಂತಾದವರು ಇರುವರಲ್ಲ, ಅವರನ್ನೂ (ಈ) ಶಾಸ್ತ್ರವು ಅಧಿಕರಿಸುತ್ತದೆ’ ಎಂದು ಬಾದರಾಯಣಾಚಾರ್ಯರು ಅಭಿಪ್ರಾಯಪಡುತ್ತಾರೆ. ಏಕೆ ? ಎಂದರೆ ಸಂಭವಿಸು

  1. ಅಧಿಕಾರದ ವಿಚಾರವನ್ನು ಹೇಳುವದಕ್ಕೆ ಹೊರಟಾಗ ನೆನಪಿಗೆ ಬಂದ ದೇವಾದ್ಯಧಿಕಾರ ವಿಚಾರವೂ ಮಾಡತಕ್ಕದ್ದು ಎಂಬುದೇ ಪ್ರಸಂಗವು. ಈ ಅಧಿಕರಣವು ಪ್ರಾಸಂಗಿಕಸಂಗತಿಯಿಂದ ಬಂದದ್ದು , ಹಿಂದಿನಂತ ಸಮನ್ವಯವನ್ನು ಹೇಳುವದಕ್ಕೆ ಬಂದದ್ದಲ್ಲ ಎಂದು ಭಾವ.

  2. ಕರ್ಮಕ್ಕೆ ತೃವರ್ಣಿಕರೇ ಅಧಿಕಾರಿಗಳು ; ಆದರೆ ಜ್ಞಾನಕ್ಕೆ, ಬೇಕಾದ ಸಾಧನಗಳಿದ್ದರೆ ಸಾಕು, ಎಲ್ಲರೂ ಅಧಿಕಾರಿಗಳಾಗುತ್ತಾರೆ - ಎಂದು ಭಾವ. ಜ್ಞಾನಕರ್ಮಸಮುಚ್ಚಯವಾದಕ್ಕೆ ಈ ಅಧಿಕರಣವು ವಿರುದ್ಧವಾಗುತ್ತದೆ.

  3. ಸೂತ್ರಕಾರರೇ ತಮ್ಮ ಹೆಸರನ್ನು ಹೀಗೆ ಹೇಳಿಕೊಳ್ಳುವದು ಸೂತ್ರಗಳ ಶೈಲಿ.

ಅಧಿ. ೮. ಸೂ. ೨೬]

ದೇವತೆಗಳಿಗೆ ವಿದ್ಯಾಧಿಕಾರವಿದ

೪೪೭

ವದರಿಂದ, ಅವರಿಗೂ ಅರ್ಥಿತ್ವವೇ ಮುಂತಾದ ಅಧಿಕಾರಕಾರಣವು ಸಂಭವಿಸುತ್ತದೆ ಯಲ್ಲವೆ ? ಈ (ಕಾರಣ )ಗಳಲ್ಲಿ ಮೊದಲನೆಯದಾಗಿ ಮೋಕ್ಷದಲ್ಲಿ ಅರ್ಥಿತ್ವವು ಕಾರ್ಯದ ವಿಷಯವಾಗಿರುವ ವಿಭೂತಿಗಳು ಅನಿತ್ಯವೆಂಬುದನ್ನು ಆಲೋಚನೆಮಾಡು ವದೇ ಮುಂತಾದ ನಿಮಿತ್ತದಿಂದ ಉಂಟಾಗಬಹುದಾಗಿದೆ. ಇದರಂತೆ ಸಾಮರ್ಥ್ಯವೂ ಅವರಿಗೆ ಇರಬಹುದಾಗಿದೆ ; ಏಕೆಂದರೆ ಮಂತ್ರ, ಅರ್ಥವಾದ, ಇತಿಹಾಸಪುರಾಣಗಳು, ಲೋಕ (ಪ್ರಮಾಣ) - ಇವುಗಳಿಂದ ವಿಗ್ರಹವತ್ಯವೇ ಮುಂತಾದವುಗಳು ಅವರಿಗೆ (ಉಂಟೆಂದು) ತಿಳಿಯಬರುತ್ತದೆ. ಅವರಿಗೆ (ವಿದ್ಯಯ ವಿಷಯಕ್ಕೆ) ಯಾವ (ಅಧಿಕಾರ) ನಿಷೇಧವೂ (ಶಾಸ್ತ್ರದಲ್ಲಿ) ಇರುವದಿಲ್ಲ. ಉಪನಯನಶಾಸ್ತ್ರದಿಂದ ಇವರಿಗೆ ಅಧಿಕಾರವನ್ನು ಅಲ್ಲಗಳೆಯುವದಕ್ಕೂ ಆಗುವ ಹಾಗಿಲ್ಲ. ಏಕೆಂದರೆ ಉಪನಯನವು ವೇದಾಧ್ಯಯನಕ್ಕಾಗಿ (ಬೇಕಾದದ್ದು) ; ಆದರೆ ಆ (ದೇವತೆಗಳು) ಸ್ವಯಂಪ್ರತಿಭಾತವೇದರಾಗಿರುತ್ತಾರೆ. ಇದಲ್ಲದೆ ಇವರು ವಿದ್ಯಾಗ್ರಹಣಕ್ಕಾಗಿ ಬ್ರಹ್ಮ ಚರ್ಯವೇ ಮುಂತಾದದ್ದನ್ನು (ಮಾಡಿದರೆಂದು) ಇಂದ್ರನು ಪ್ರಜಾಪತಿಯಲ್ಲಿ ನೂರೊಂದು ವರ್ಷಗಳು ಬ್ರಹ್ಮಚರ್ಯವಾಸವನ್ನು ಮಾಡಿದನು” (ಛಾಂ. ೮-೧೧-೩), “ವಾರುಣಿ ಭ್ರಗುವಿದ್ದನಲ್ಲ, (ಅವನು) ತಂದೆಯಾದ ವರುಣನ ಬಳಿಗೆ ‘ಪೂಜ್ಯನೆ, ಬ್ರಹ್ಮವನ್ನು ತಿಳಿಸಿಕೊಡು’ ಎಂದು ವಿನಯದಿಂದ ಬಳಿಸಾರಿದನು’ (ತೈ. ೩-೧) ಎಂದು ಮುಂತಾದ (ಶ್ರುತಿಯು) ತಿಳಿಸುತ್ತದೆ. (ಪೂರ್ವಮೀಮಾಂಸದಲ್ಲಿ) ‘ದೇವತೆಗಳಿಗೆ ಅಧಿಕಾರವಿಲ್ಲ, ಏಕೆಂದರೆ (ಉದ್ದೇಶ್ಯವಾದ) ಬೇರೆಯದೇವತೆಗಳಿಲ್ಲ” (ಜೈ.ಸೂ.೬

  1. ತಮಗೆ ಉಂಟಾಗುವ ವಿಭೂತಿಗಳು ಕಾರ್ಯವಾಗಿರುವದರಿಂದ ಅನಿತ್ಯವಾಗಿವ ಎಂಬುದನ್ನು ಮನದಂದುಕೊಳ್ಳುವದೂ ಅದಕ್ಕಿಂತ ಹೆಚ್ಚಿನ ಮೋಕ್ಷವಿದ ಎಂಬ ತಿಳಿವಳಿಕೆಯೂ ವೈರಾಗ್ಯಕ್ಕೆ ಕಾರಣವಾಗಬಹುದು, ಇದು ಋಷಿಗಳಿಗೂ ಅನ್ವಯಿಸುತ್ತದೆ. ೩-೩-೩೨ರ ಭಾಷ್ಯವನ್ನು ನೋಡಿ,

  2. ಶರೀರವಿರುವದು, ಹವಿಸ್ಸನ್ನು ಭೋಗಿಸುವದು, ಐಶ್ವರ್ಯ, ಪ್ರಸನ್ನನಾಗುವದು, ಫಲವನ್ನು ಕೊಡುವದು - ಇವು ವಿಗ್ರಹವತ್ಯಾದಿಗಳು, ಮಂತ್ರಾದಿಪ್ರಮಾಣಗಳನ್ನು ಮುಂದೆ ೩೩ನೆಯ ಸೂತ್ರದಲ್ಲಿ ಕೊಟ್ಟಿದ.

  3. ಶೂದ್ರರನ್ನು ತಿರಸ್ಕರಿಸುವಂತೆ ಶಾಸ್ತ್ರವು ಅವರನ್ನು ತಿರಸ್ಕರಿಸಿಲ್ಲ - ಎಂದು ಭಾವ.

  4. ಉಪನಯನವಿಲ್ಲದಿದ್ದರೆ ಅಧ್ಯಯನವಿಲ್ಲ ; ಅದಿಲ್ಲದೆ ಬ್ರಹ್ಮವಿದ್ಯೆಯೂ ಇಲ್ಲ - ಎಂದು ಆಕ್ಷೇಪಿಸಬಾರದು.

  5. ವೇದವು ತಾನೇ ಅವರ ಶುದ್ಧಬುದ್ದಿಗೆ ಹೊಳೆಯುತ್ತದೆ ಎಂದರ್ಥ.

  6. ಗುರುವಿನ ಬಳಿಗೆ ವಿಧಿಪೂರ್ವಕವಾಗಿ ಶಿಷ್ಯರಾಗಿ ಬರುವದು, ಶುಶೂಷಮಾಡುವದು - ಮುಂತಾದದ್ದನ್ನು.

೪೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ೧-೬), ಋಷಿಗಳಿಗೆ (ಅಧಿಕಾರ)ವಿಲ್ಲ, ಏಕೆಂದರೆ ಬೇರೆಯ ಋಷಿಗಳಿಲ್ಲ” (ಜೈ. ಸೂ. ೬-೧-೭) ಎಂದು ಕರ್ಮಗಳಲ್ಲಿ ಅಧಿಕಾರವಿಲ್ಲವೆಂಬುದಕ್ಕೆ ಯಾವ ಕಾರಣವನ್ನು ಹೇಳಿದೆಯೋ ಆ (ಕಾರಣವು) ವಿದ್ಯೆಗಳಲ್ಲಿರುವದಿಲ್ಲ. ವಿದ್ಯೆಗಳಿಗೆ ಅಧಿಕಾರಿಗಳಾದ ಇಂದ್ರಾದಿಗಳಿಗೆ ಇಂದ್ರಾದಿಗಳನ್ನು ಉದ್ದೇಶಿಸಿ ಮಾಡತಕ್ಕದ್ದು ಯಾವದೂ ಇರುವ ದಿಲ್ಲ’ ; ಭಗ್ಯಾದಿಗಳಿಗೆ ಭ್ರಗ್ನಾದಿಗಳ ಸಗೋತ್ರರಾಗಿ (ಮಾಡತಕ್ಕದ್ದೂ ಯಾವದೂ) ಇರುವದಿಲ್ಲ. ಆದ್ದರಿಂದ ದೇವಾದಿಗಳಿಗೂ ವಿದ್ಯಗಳಲ್ಲಿ ಅಧಿಕಾರ(ವುಂಟೆಂಬುದನ್ನು ) ಯಾರು ಇಲ್ಲವೆನ್ನುವರು ?

ದೇವಾದಿಗಳನ್ನು (ಶಾಸ್ತ್ರವು) ಅಧಿಕರಿಸಿದರೂ ಅಂಗುಷ್ಠಮಾತ್ರಶ್ರುತಿಯು ಅವರವರ ಅಂಗುಷ್ಠಾಪೇಕ್ಷೆಯಿಂದ (ಇರಬಹುದಾದ್ದರಿಂದ) ವಿರುದ್ಧವಾಗುವದಿಲ್ಲ.

ದೇವಾದ್ಯಧಿಕಾರದಲ್ಲಿ ಆಕ್ಷೇಪಸಮಾಧಾನಗಳು ವಿರೋಧಃ ಕರ್ಮಣೀತಿ ಚೇನ್ನಾನೇಕಪ್ರತಿಪತ್ತೇರ್ದಶ್ರನಾತ್ ||೨೭||

೨೭. ಕರ್ಮದಲ್ಲಿ ವಿರೋಧ(ವಾಗುವದು) ಎಂದರೆ ಇಲ್ಲ ; ಏಕೆಂದರೆ ಅನೇಕಪ್ರತಿಪತ್ತಿಯು (ಶ್ರುತಿಯಲ್ಲಿ ) ಕಂಡಿದೆ.

ಆಕ್ಷೇಪ : ಕರ್ಮವಿಷಯದಲ್ಲಿ ವಿರೋಧ

(ಭಾಷ್ಯ) ೨೮೨. ಸ್ಮಾದೇತತ್ | ಯದಿ ವಿಗ್ರಹವತ್ತಾದ್ಯಭ್ಯುವಗಮೇನ ದೇವಾದೀನಾಂ ವಿದ್ಯಾಸು ಅಧಿಕಾರೋ ರ್ವತ, ವಿಗ್ರಹವತ್ಯಾತ್ ಋಗಾದಿವತ್ ಇನ್ನಾದೀನಾಮಪಿ ಸ್ವರೂಪಸನ್ನಿಧಾನೇನ ಕರ್ಮಾಔಭಾವೋಭ್ಯುಪಗಮ್ಮೇತ, ತದಾಚ ವಿರೋಧಃ ಕರ್ಮಣಿ ಸ್ಯಾತ್ | ನ ಹಿ ಇನ್ನಾದೀನಾಂ ಸ್ವರೂಪಸನ್ನಿಧಾನೇನ ಯಾಗೇ ಅಜ್ಜಿಭಾವೋ ದೃಶ್ಯತೇ | ನ ಚ ಸಂಭವತಿ | ಬಹುಷು ಯಾರೇಷು ಯುಗಪತ್ ಏಕಸ್ಯ ಇನ್ನಸ್ಯ ಸ್ವರೂಪಸಂವಿಧಾನತಾನುಪಪತ್ತೇರಿತಿ ಚೇತ್ ||

  1. ಉಪಾಸನೆಗಳನ್ನೂ ಬ್ರಹ್ಮಜ್ಞಾನವನ್ನೂ ಇಲ್ಲಿ ವಿದ್ಯಗಳೆಂದು ಕರೆದಿದೆ. 2. ಈ ವಿಷಯಕ್ಕೆ ಮುಂದೆ ೩೧, ೩೨ನೆಯ ಸೂತ್ರಗಳ ಭಾಷ್ಯವನ್ನು ನೋಡಿ,

  2. ಅಂಗುಷ್ಟಮಾತ್ರತ್ವವು ಪ್ರತಿಪಾದ್ಯವೆಂದು ಇಟ್ಟುಕೊಂಡೇ ಈ ಮಾತನ್ನು ಹೇಳಿದೆ. ಜೀವರೂಪದಿಂದ ಪರಿಚ್ಛಿನ್ನವಾಗಿ ಕಾಣುತ್ತಿರುವ ಪರಮಾತ್ಮನು ನಿಜವಾಗಿ ಅವರಿಚ್ಛಿನ್ನನಾಗಿರುತ್ತಾನೆ ಎಂಬುದೇ ಶ್ರುತಿಯ ಅರ್ಥವೆಂದು ಹಿಂದೆ ಹೇಳಿರುವದನ್ನು ಇಲ್ಲಿಯೂ ಮನದಂದುಕೊಳ್ಳಬೇಕು.

ಅಧಿ. ೮. ಸೂ. ೨೭] ಇಂದ್ರಾದಿಗಳಿಗೆ ಒಬ್ಬೊಬ್ಬರಿಗೂ ಅನೇಕರೂಪಗಳಿರುವವು

೪೪

(ಭಾಷ್ಯಾರ್ಥ) (ಆಕ್ಷೇಪಕನ ಅಭಿಪ್ರಾಯವು) ಇದಾಗಿರಬಹುದು : ದೇವತೆಗಳಿಗೆ ವಿಗ್ರಹ ವತ್ಯವೇ ಮುಂತಾದವುಗಳನ್ನು ಒಪ್ಪಿ (ಅವರಿಗೆ) ವಿದ್ಯೆಗಳಲ್ಲಿ ಅಧಿಕಾರವುಂಟೆಂದು ಹೇಳುವದಾದರೆ, ಶರೀರವಿರುವದರಿಂದ ಋತ್ವಿಜರೇ ಮುಂತಾದವರಂತೆ ಇಂದ್ರಾದಿಗಳೂ ಸ್ವರೂಪದಿಂದ ಹತ್ತಿರವಿದ್ದುಕೊಂಡು ಕರ್ಮಕ್ಕೆ ಅಂಗವಾಗಿರುವರೆಂದು ಒಪ್ಪಿದಂತಾಗು ವದು. ಆಗ ಕರ್ಮವಿಷಯದಲ್ಲಿ ವಿರೋಧವಾಗುವದು. ಏಕೆಂದರೆ ಇಂದ್ರಾದಿಗಳು ಸ್ವರೂಪದಿಂದ ಹತ್ತಿರವಿದ್ದುಕೊಂಡು ಯಾಗದಲ್ಲಿ ಅಂಗವಾಗಿರುವದು ಕಂಡಿಲ್ಲ. (ಹೀಗಿರುವದು) ಸಂಭವಿಸುವದೂ ಇಲ್ಲ ; ಏಕೆಂದರೆ ಅನೇಕ ಯಾಗಗಳಲ್ಲಿ ಒಂದೇ ಕಾಲದಲ್ಲಿ ಒಬ್ಬನೇ ಇಂದ್ರನು ಸ್ವರೂಪದಿಂದ ಹತ್ತಿರವಿರುವದು ಆಗುವದೇ ಇಲ್ಲ.’ ಸಿದ್ಧಾಂತ : ಇಂದ್ರಾದಿಗಳಿಗೆ ಒಬ್ಬೊಬ್ಬರಿಗೂ

ಅನೇಕರೂಪಗಳಿರುವವು

(ಭಾಷ್ಯ) ೨೮೩. ನಾಯಮಸ್ತಿ ವಿರೋಧಃ | ಕಸ್ಮಾತ್ ? ಅನೇಕಪ್ರತಿಪತೇ | ಏಕಸ್ಕಾಪಿ ದೇವತಾತ್ಮನಃ ಯುಗಪತ್ ಅನೇಕಸ್ವರೂಪಪ್ರತಿಪತ್ತಿಃ ಸಂಭವತಿ | ಕಥಮೇತ ದವಗಮ್ಯತೇ ? ದರ್ಶನಾತ್ | ತಥಾ ಹಿ । “ಕತಿ ದೇವಾಃ” ಇತ್ಯುಪಕ್ರಮ್ಮ ‘‘ತ್ರಯಶ್ಚ ಶ್ರೀ ಚ ಶತಾ ತ್ರಯಶ್ಚ ತ್ರೀ ಚ ಸಹಸ್ರಾ” ಇತಿ ನಿರುಚ್ಯ “ಕತಮೇ ತೇ” (ಬ. ೩-೯ ೧) ಇತ್ಯಸ್ಯಾಂ ಪೃಚ್ಛಾಯಾಂ (ಮಹಿಮಾನ ಏವೃಷಾಮೇತೇ ತ್ರಯಂಶವ ದೇವಾ” (ಬೃ. ೩-೯-೨) ಇತಿ ನಿಬ್ರ್ರುವತೀ ಶ್ರುತಿಃ ಏಕೈಕಸ್ಯ ದೇವತಾತ್ಮನೂ

ಯುಗಪತ್ ಅನೇಕರೂಪತಾಂ ದರ್ಶಯತಿ । ತಥಾ ತ್ರಯಸ್ತ್ರಿಂಶತೋಪಿ ಷಡಾದ್ಯನ್ತರ್ಭಾವಕ್ರಮೇಣ ‘‘ಕತಮ ಏಕೋದೇವ ಇತಿ ಪ್ರಾಣಃ’ (ಬೃ. ೩-೯-೯) ಇತಿ ಪ್ರಾಕರೂಪತಾಂ ದೇವಾನಾಂ ದರ್ಶಯ ತಸ್ಯವೈಕಸ್ಯ ಪ್ರಾಣಸ್ಯ ಯುಗಪತ್ ಅನೇಕ ರೂಪತಾಂ ದರ್ಶಯತಿ | ತಥಾ ಸ್ಮತಿರಪಿ - “ಆತ್ಮನೋ ವೈ ಶರೀರಾಣಿ ಬಹೂನಿ

  1. ಜೈ, ಸೂ. ೯-೧-೬ರಿಂದ ೧೦ನೆಯ ಸೂತ್ರದವರೆಗಿನ ಭಾಷ್ಯದಲ್ಲಿ ದೇವತೆಗೆ ವಿಗ್ರಹವತ್ತಾದಿಗಳಿರುವವೆಂಬ ಪಕ್ಷವನ್ನು ಅನುವಾದಮಾಡಿಕೊಂಡು ಖಂಡಿಸಿದೆ.ಜೈ.ಸೂ. ೮-೧ ೩೪ರ ಭಾಷ್ಯದಲ್ಲಿ ಯಾಗವು ದೇವತಾಪೂಜೆಯಂದೂ ದೇವತೆಯು ಅದರ ಫಲವನ್ನು ಕೂಡುವದೆಂದೂ ಹೇಳುವವರ ಮತವನ್ನು ಖಂಡಿಸಿದ.

  2. ಈ ಅಭಿಪ್ರಾಯವನ್ನು ಶಬರಭಾಷ್ಯದಲ್ಲಿ ಸೂಚಿಸಿರುವಂತೆ ಕಾಣುವದಿಲ್ಲ ; ದೇವತಯು ಹವಿರ್ಭೂಜನವನ್ನು ಮಾಡಲಾರದೆಂಬುದಕ್ಕೆ ಇದೊಂದು ಪ್ರಬಲವಾದ ಯುಕ್ತಿ.

೪೫೦

ಬ್ರಹ್ಮಸೂತ್ರಭಾಷ್ಯ

[ಆ. ೧. ಪಾ. ೩. ಭರತರ್ಷಭ | ಯೋಗೀ ಕುರ್ಯಾಧ್ವಲಂ ಪ್ರಾಪ್ಯತೈಶ್ಯ ಸರ್ವಮ್ರಹೀಂ ಚರೇತ್ || ಪ್ರಾಪ್ನುಯಾದ್ ವಿಷಯಾನ್ ಕೃಶ್ಚಿತ್ ಕೃಶ್ಚಿದುಗ್ರಂ ತಪಶ್ಚರೇತ್ | ಸಂಕ್ಷಿಪೇಚ್ಚ ಪುನಸ್ತಾನಿ ಸೂರ್ಯೊ ರಶ್ಮಿಗಣಾನಿವ ||’ (ಮೋ. ಧ. ೩೦೦-೨೬, ೨೭) ಇತ್ತ್ವಂ ಜಾತೀಯಕಾ ಪ್ರಾಪ್ತಾಣಿಮಾದ್ಮಶ್ವರ್ಯಾಣಾಂ ಯೋಗಿನಾಮಪಿ ಯುಗಪತ್ ಅನೇಕ ಶರೀರಯೋಗಂ ದರ್ಶಯತಿ 1 ಕಿಮು ವಕ್ತವ್ಯಮ್ ಆಜಾನಸಿದ್ಧಾನಾಂ ದೇವಾನಾಮ್ | ಅನೇಕರೂಪಪ್ರತಿಪತ್ತಿ ಸಂಭವಾಚ್ಚ ಏಕೈಕದೇವತಾ ಬಹುಭೀ ರೂಪೈ: ಆತ್ಮಾನಂ ಪ್ರವಿಭಜ್ಯ ಬಹುಷು ಯಾರೇಷು ಯುಗಪತ್ ಅಜ್ಜಿಭಾವಂ ಗಚ್ಛತೀತಿ’ ಪಶ್ಚ ನ ದೃಶ್ಯತೇ ಅನ್ತರ್ಧಾನಾದಿಕ್ರಿಯಾಯೋಗಾತ್ ಇತ್ಯುಪಪದ್ಯತೇ ||

(ಭಾಷ್ಯಾರ್ಥ) ಈ ವಿರೋಧವು (ನಮ್ಮ ಮತದಲ್ಲಿರುವದಿಲ್ಲ. ಏಕೆ ? ಎಂದರೆ ಅನೇಕ ಪ್ರತಿಪತ್ತಿಯಿರುವದರಿಂದ, ಒಬ್ಬನೇ ದೇವತಾತ್ಮನು ಒಂದೇ ಕಾಲದಲ್ಲಿ ಅನೇಕ ಸ್ವರೂಪಗಳನ್ನು ಪಡೆಯುವದೂ ಆಗಬಹುದು. ಇದು ಹೇಗೆ ಗೊತ್ತಾಗುತ್ತದೆ ? ಎಂದರೆ ಕಂಡಿರುವದರಿಂದ. ಹೇಗೆಂದರೆ “ದೇವತೆಗಳು ಎಷ್ಟು (ಮಂದಿ) ?’ ಎಂದು ಉಪಕ್ರಮಿಸಿ “ಮೂರೂ (ಮೂರುನೂರು), ಮೂರೂ ಮೂರು ಸಾವಿರ” ಎಂದು ಗೊತ್ತುಮಾಡಿ ಹೇಳಿ ‘‘ಅವರು ಯಾರು ?’’ (ಬೃ, ೩-೯-೧) ಎಂದು ಪ್ರಶ್ನೆ (ಏಳಲು) “ಇವುಗಳು ಇವರ ಮಹಿಮಗಳೇ, ಆದರೆ (ನಿಜವಾಗಿ) ದೇವತೆಗಳು ಮೂವತ್ತು ಮೂವರೇ’ (ಬೃ. ೩-೯-೨) ಎಂದು ಗೊತ್ತುಮಾಡಿ ಹೇಳುವ ಶ್ರುತಿಯೂ ಒಬ್ಬೊಬ್ಬ ದೇವತಾತ್ಮನಿಗೂ ಒಂದೇ ಕಾಲದಲ್ಲಿ ಅನೇಕರೂಪಗಳಿರುವವೆಂದು ತಿಳಿಸುತ್ತದೆ. ಮೂವತ್ತು ಮೂರಕ್ಕೂ ಆರು ಮುಂತಾದ (ಸಂಖ್ಯೆಯಲ್ಲಿ) ಅಡಗಿಸುವ ಕ್ರಮದಿಂದ ಕೊನೆಗೆ “ಒಬ್ಬನೇ ದೇವನು ಯಾರು ? ಪ್ರಾಣನು’ (ಬೃ. ೩-೯-೯) ಎಂದು ಪ್ರಾಣ ನೆಂಬ ಒಂದೇ ರೂಪವನ್ನು ದೇವತೆಗಳಿಗೆ ತಿಳಿಸುವದರಿಂದ (ಶ್ರುತಿಯು) ಅದೇ ಒಬ್ಬ ಪ್ರಾಣನಿಗೆ ಒಂದೇ ಕಾಲದಲ್ಲಿ ಅನೇಕರೂಪಗಳಿವೆ ಎಂದು ತಿಳಿಸುತ್ತದೆ. ಹೀಗೆಯೇ

  1. ಇಲ್ಲಿ ‘ಇತಿ’ಯು ಬೇಕಿಲ್ಲವೆಂದು ತೋರುತ್ತದೆ. 2. ಶ್ರುತಿಯಲ್ಲಿ ಹೇಳಿರುವದು ಕಂಡಿರುವದರಿಂದ ಎಂದರ್ಥ. 3. ಅಷ್ಟವಸುಗಳು, ಏಕಾದಶರುದ್ರರು, ದ್ವಾದಶಾದಿತ್ಯರು, ಇಂದ್ರ, ಪ್ರಜಾಪತಿ. 4. ಅಗ್ನಿ, ಪೃಥಿವಿ, ವಾಯು, ಅಂತರಿಕ್ಷ, ಆದಿತ್ಯ, ದ್ಯು - ಎಂಬ ಆರು.

  2. ಪ್ರಾಣನು ಎಂದರೆ ಸೂತ್ರಾತ್ಮನು ಅಥವಾ ಹಿರಣ್ಯಗರ್ಭನು. ಅವನು ಸಮಷ್ಟಿ ರೂಪದಿಂದ ಒಬ್ಬನೇ ಆಗಿದ್ದುಕೊಂಡೇ ವ್ಯಷಿಗಳ ರೂಪದಿಂದ ಬೇರೆಬೇರೆಯ ದೇವತ

ಯಾಗಿರುವನೆಂದು ವೇದವಾದವು.

ಅಧಿ. ೮. ಸೂ. ೨೭] ಒಬ್ಬ ದೇವತೆಗೇ ಅನೇಕರು ಸ್ವತ್ವ ತ್ಯಾಗವನ್ನು ಮಾಡಬಹುದು ೪೫೧ “ಎಲೈ ಭರತರ್ಷಭನೆ, ಯೋಗಿಯು ತನಗೇ ಅನೇಕ ಶರೀರಗಳನ್ನು ಮಾಡಿಕೊಳ್ಳುವನು, ಬಲವನ್ನು ಪಡೆದುಕೊಂಡು ಆ ಎಲ್ಲಾ (ಶರೀರ)ಗಳಿಂದಲೂ ಭೂಮಿಯನ್ನಲ್ಲ ಸಂಚರಿಸುವನು. ಕೆಲವು (ಶರೀರ)ಗಳಿಂದ ವಿಷಯಗಳನ್ನು ಪಡೆದುಕೊಂಡು ಭೋಗಿಸು)ವನು, ಕೆಲವು (ಶರೀರ)ಗಳಿಂದ ಉಗ್ರವಾದ ತಪಸ್ಸನ್ನು ಮಾಡುತ್ತಿರುವನು, ಮತ್ತೆ ಅವುಗಳನ್ನು ಸೂರ್ಯನು ರಸಮೂಹಗಳನ್ನು (ಎಳೆದುಕೊಳ್ಳುವಂತೆ) ಹಿಂದಕ್ಕೆಳೆದುಕೊಳ್ಳುವನು.” (ಮೋ. ಧ. ೩೦೦-೨೬, ೨೭) ಎಂಬೀ ಜಾತಿಯ ಸ್ಕೃತಿಯೂ ಅಣಿಮಾದ್ಮಶ್ವರ್ಯಗಳನ್ನು ಪಡೆದುಕೊಂಡಿರುವ ಯೋಗಿಗಳಿಗೆ ಕೂಡ ಒಂದೇ ಕಾಲಕ್ಕೆ ಅನೇಕ ಶರೀರಗಳ ಸಂಬಂಧವನ್ನು ತಿಳಿಸುತ್ತದೆ. (ಹೀಗಿರುವಲ್ಲಿ) ಜನ್ಮದಿಂದಲೇ ಸಿದ್ಧರಾಗಿರುವ ದೇವತೆಗಳ (ವಿಷಯಗಳಲ್ಲಿ) ಹೇಳುವದೇನು ?

(ಹೀಗೆ) ಅನೇಕರೂಪಗಳನ್ನು ಹೊಂದಬಹುದಾದ್ದರಿಂದ ಒಂದೊಂದು ದೇವತೆಯೂ ಅನೇಕರೂಪಗಳಿಂದ ತನ್ನನ್ನು (ತಾನು) ವಿಂಗಡಿಸಿಕೊಂಡು ಅನೇಕ ಯಾಗಗಳಲ್ಲಿ ಒಂದೇ ಕಾಲಕ್ಕೆ ಅಂಗಭಾಗವನ್ನು ಹೊಂದುವದಂತಲೂ ಅಂತರ್ಧಾನವೇ ಮುಂತಾದ ಕ್ರಿಯೆಗಳ ಸಂಬಂಧದಿಂದ ಮತ್ತೊಬ್ಬರಿಗೆ ಕಾಣಿಸುವದಿಲ್ಲವಂತಲೂ (ಹೇಳುವದು) ಯುಕ್ತವಾಗಿರುತ್ತದೆ.?

ಒಬ್ಬ ದೇವತೆಗೇ ಅನೇಕರು ಸ್ವತ್ವ ತ್ಯಾಗವನ್ನು ಮಾಡಬಹುದು

(ಭಾಷ್ಯ) ೨೮೪. ಅನೇಕಪ್ರತಿಪತ್ತೇರ್ದಶ್ರನಾತ್’’ ಇತ್ಯಸ್ಯ ಅಪರಾ ವ್ಯಾಖ್ಯಾ - ವಿಗ್ರಹ ವತಾಮಪಿ ಕರ್ಮಾಜ್ಞ ಭಾವಚೋದನಾಸು ಅನೇಕ ಪ್ರತಿಪರ್ದಶ್ಯತೇ | ಕ್ವಚಿತ್ ಏಕೋಪಿ ವಿಗ್ರಹವಾನ್ ಅನೇಕ ಯುಗಪತ್ ಅಭಾವಂ ನ ಗಚ್ಛತಿ | ಯಥಾ ಬಹುಭಿರ್ಭೂಜಯ ನೈಕೋ ಬ್ರಾಹ್ಮಣೋ ಯುಗವದ್ ಭೋಜ್ಯತೇ | ತ್ವಚಿಚ್ಚ ಏಕೋಪಿ ವಿಗ್ರಹವಾನ್ ಅನೇಕತ್ರ ಯುಗವತ್ ಅಜ್ಭಾವಂ ಗಚ್ಛತಿ ಯಥಾ ಬಹುಭಿಃ ನಮಸ್ತುರ್ವಾಣೈಃ ಏಕೋ ಬ್ರಾಹ್ಮಣೋ ನಮಸ್ಕಿಯತೇ | ತದ್ವತ್ ಇಹ ಉದ್ದೇಶ ಪರಿತ್ಯಾಗಾತ್ಮಕತ್ವಾತ್ ಯಾಗಸ್ಯ ವಿಗ್ರಹವತೀಮಪಿ ಏಕಾಂ ದೇವತಾಮ್ ಉದ್ದಿಶ್ಯ ಬಹವಃ ಸ್ವಂ ಸ್ವ೦ದ್ರವ್ಯಂ ಯುಗಪತ್ ಪರಿತ್ಯಕ್ಷ ಇತಿ ವಿಗ್ರಹವ5ಪಿ ದೇವತಾನಾಂ ನ ಕಿಂಚಿತ್ ಕರ್ಮಣಿ ವಿರುಧ್ಯತೇ ||

  1. ಯೋಗಿಗಳು ಹೀಗೆ ಶರೀರಗಳನ್ನು ನಿರ್ಮಿಸಿಕೊಳ್ಳುವದಕ್ಕೆ ಕಾಯವ್ಯೂಹವೆಂದು ಹೆಸರು.೪-೧-೧೫ರ ಭಾಷ್ಯವನ್ನು ನೋಡಿ.

  2. ಇದು ದೇವತೆಗೆ ಇರುವ ಐಶ್ವರ್ಯವನ್ನು ಸೂಚಿಸುವ ವಾಕ್ಯ.೪೫೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಭಾಷ್ಯಾರ್ಥ) “ಅನೇಕಪ್ರತಿಪತ್ತೇರ್ದಶ್ರನಾತ್’ ಎಂಬೀ (ಸೂತ್ರಭಾಗಕ್ಕೆ ಇದು) ಮತ್ತೊಂದು ವ್ಯಾಖ್ಯಾನವು : ಶರೀರವುಳ್ಳವರಿಗೂ ಕರ್ಮಾಂಗತ್ವವನ್ನು (ಹೇಳುವ) ವಾಕ್ಯಗಳಲ್ಲಿ ಅನೇಕಪ್ರತಿಪತ್ತಿಯು ಕಂಡುಬರುತ್ತದೆ. ಕೆಲವು ಕಡೆಗಳಲ್ಲಿ ಒಬ್ಬನೇ ಶರೀರಿಯು ಅನೇಕ ಕಡೆಗಳಲ್ಲಿ ಒಂದೇ ಕಾಲದಲ್ಲಿ ಅಂಗತ್ವವನ್ನು ಹೊಂದುವದಿಲ್ಲ ; ಹೇಗೆಂದರೆ ಅನೇಕರು ಭೋಜನಮಾಡಿಸುತ್ತಿರುವಲ್ಲಿ ಒಬ್ಬನೇ ಬ್ರಾಹ್ಮಣನಿಗೆ (ಎಲ್ಲರೂ) ಒಟ್ಟಿಗೆ ಭೋಜನಮಾಡಿಸುವದು ಆಗುವದಿಲ್ಲ. (ಇನ್ನು) ಕೆಲವು ಕಡೆಗಳಲ್ಲಿ ಒಬ್ಬನೇ ಶರೀರಿಯು ಅನೇಕ ಕಡೆಗಳಲ್ಲಿ ಒಂದೇ ಕಾಲದಲ್ಲಿ ಅಂಗತ್ವವನ್ನು ಹೊಂದುತ್ತಾನ ; ಹೇಗಂದರೆ ಅನೇಕರು ನಮಸ್ಕರಿಸುತ್ತಿರುವಲ್ಲಿ ಒಬ್ಬನೇ ಬ್ರಾಹ್ಮಣನನ್ನು (ಎಲ್ಲರೂ) ಒಂದೇ ಕಾಲದಲ್ಲಿ ನಮಸ್ಕರಿಸಬಹುದು. ಅದರಂತೆ ಇಲ್ಲಿ

ಯಾಗವೆಂದರೆ ಉದ್ದೇಶಪರಿತ್ಯಾಗರೂಪವಾಗಿರುವದರಿಂದ (ದೇವತೆಯು) ಶರೀರ ವುಳ್ಳದ್ದಾದರೂ ಒಂದೇ ದೇವತೆಯನ್ನು ಉದ್ದೇಶಿಸಿ ಬಹುಜನರು ತಮ್ಮ ತಮ್ಮ ದ್ರವ್ಯವನ್ನು ಒಂದೇ ಕಾಲದಲ್ಲಿ ಬಿಡಬಹುದು. ಆದ್ದರಿಂದ ದೇವತೆಗಳಿಗೆ ವಿಗ್ರಹವತ್ಯವಿದ್ದರೂ ಕರ್ಮ (ವಿಷಯದಲ್ಲಿ) ಯಾವ ವಿರೋಧವೂ ಆಗುವಂತಿಲ್ಲ. ಶಬ್ದ ಇತಿ ಚೆನ್ನಾತಃ ಪ್ರಭವಾತ್ ಪ್ರತ್ಯಕ್ಷಾನುಮಾನಾಭ್ಯಾಮ್ ||೨೮||

೨೮. ಶಬ್ದದಲ್ಲಿ (ವಿರೋಧವಾಗುತ್ತದೆ) ಎಂದರೆ, ಇಲ್ಲ, ಏಕೆಂದರೆ ಪ್ರತ್ಯಕ್ಷಾನುಮಾನಗಳಿಂದ ಅದರಿಂದಲೇ (ಜಗತ್ತು) ಹುಟ್ಟುತ್ತದೆ (ಎಂದು ಗೊತ್ತಾಗುತ್ತದೆ).

ಆಕ್ಷೇಪ : ದೇವತೆಗೆ ಶರೀರವಿದ್ದರೆ ವೇದವು ಅನಿತ್ಯವಾಗುತ್ತದೆ

(ಭಾಷ್ಯ) ೨೮೫. ಮಾ ನಾಮ ವಿಗ್ರಹವ ದೇವಾದೀನಾಮ್ ಅಭ್ಯುವಗಮ್ಯಮಾನೇ ಕರ್ಮಣಿ ಕಶ್ಚಿದ್ ವಿರೋಧಃ ಪ್ರಸಣ್ಣ | ಶಚ್ಚೇ ತು ವಿರೋಧಃ ಪ್ರಸಜೇತ |

  1. ಅನೇಕ ಕರ್ಮಗಳಲ್ಲಿ ಒಬ್ಬನೇ ಅಂಗಭಾವವನ್ನು ಹೊಂದುವದು.

  2. ದೇವತೆಯನ್ನುದ್ದೇಶಿಸಿ ತನ್ನ ದ್ರವ್ಯವನ್ನು ಬಿಡುವದೇ ತ್ಯಾಗವು ; ದೇವತೆಯ ಭೋಜನಕ್ಕೆಂದು ಹವಿಸ್ಸನ್ನು ಕೊಡುತ್ತಾರೆಂಬ ಪೂರ್ವಪಕ್ಷವನ್ನು ಜೈ, ಸೂ. ೯-೧-೯ರ ಭಾಷ್ಯ ದಲ್ಲಿ ಖಂಡಿಸಿರುವದು ಈ ನಮ್ಮ ಪಕ್ಷಕ್ಕೇನೂ ಅಡ್ಡಿಯನ್ನು ತರುವದಿಲ್ಲ ಎಂದು ಭಾವ.

ಅಧಿ. ೮. ಸೂ. ೨೮] ನಿತ್ಯಶಬ್ದದಿಂದ ಜಗತ್ತು ಉತ್ಪನ್ನವಾಗುತ್ತದೆ

೪೫೩ ಕಥಮ್ ? ಔತ್ಪತ್ತಿಕಂ ಹಿ ಶಬ್ದಸ್ಯ ಅರ್ಥೆನ ಸಂಬಮ್ ಆಿತ್ಯ ಅನಪೇಕ್ಷಾತ್’ (ಜೈ. ೧-೧-೫) ಇತಿ ವೇದಸ್ಯ ಪ್ರಾಮಾಣ್ಯಂ ಸ್ಥಾಪಿತಮ್ | ಇದಾನೀಂ ತು ವಿಗ್ರಹವತೀ ದೇವತಾ ಅಭ್ಯುಪಗಮ್ಯಮಾನಾ ಯದ್ಯಪಿ ಐಶ್ವರ್ಯಯೋಗಾತ್ ಯುಗಪತ್ ಅನೇಕಕರ್ಮಸಂಬನಿ ಹವೀಂಷಿ ಭುಇಲ್ಲೀತ, ತಥಾಪಿ ವಿಗ್ರಹಯೋಗಾತ್ ಅಹ್ಮದಾದಿವತ್‌ ಜನನಮರಣವತೀ ಸಾ ಇತಿ ನಿತ್ಯಸ್ಯ ಶಬ್ದಸ್ಯ ನಿತ್ಯನ ಅರ್ಥನ ನಿತೈ ಸಂಬನ್ನೇ ಪ್ರತೀಯಮಾನೇ ಯದ್‌ ವೈದಿಕೇ ಶಬ್ದ ಪ್ರಾಮಾಣ್ಯಂ ಸ್ಥಿತಮ್, ತಸ್ಯ ವಿರೋಧಃ ಸ್ಯಾತ್ ||

(ಭಾಷ್ಯಾರ್ಥ) | ದೇವಾದಿಗಳಿಗೆ ಶರೀರವಿರುತ್ತದೆ ಎಂದು ಒಪ್ಪಿದರೆ ಕರ್ಮ(ದ ವಿಷಯ)ದಲ್ಲಿ ಯಾವ ವಿರೋಧವೂ ಅಂಟಿಕೊಳ್ಳದೆ ಇರಬಹುದು. ಆದರೆ ಶಬ್ದ (ದ ವಿಷಯ)ದಲ್ಲಿ ವಿರೋಧವು ಅಂಟಿಕೊಳ್ಳುವದು ಹೇಗೆ ? ಎಂದರೆ ಶಬ್ದಕ್ಕೆ ತನ್ನ ಅರ್ಥದೊಡನೆ ಔತ್ಪತ್ತಿಕಸಂಬಂಧವನ್ನು ಇಟ್ಟುಕೊಂಡು “ಅನಪೇಕ್ಷಾತ್‌’’ (ಜೈ, ೧-೧-೫) ಎಂದು ವೇದದ ಪ್ರಾಮಾಣ್ಯವನ್ನು ಸ್ಥಾಪಿಸಲಾಗಿರುತ್ತದೆ. ಆದರೆ ಈಗ ದೇವತೆಗೆ ಶರೀರವಿದೆಯೆಂದು ಒಪ್ಪಿದರೆ (ಅದು) ಐಶ್ವರ್ಯದ ಸಂಬಂಧದಿಂದ ಒಂದೇ ಕಾಲದಲ್ಲಿ ಅನೇಕಕರ್ಮಗಳ ಸಂಬಂಧವಾದ ಹವಿಸ್ಸುಗಳ ಭೋಜನವನ್ನೇನೋ ಮಾಡಬಹುದು. ಆದರೂ ಶರೀರದ ಸಂಬಂಧವಿರುವದರಿಂದ ನಮ್ಮಂಥವರ ಹಾಗೆ ಹುಟ್ಟು ಸಾವು ಗಳುಳ್ಳದ್ದಾಗುವದು. ಆದ್ದರಿಂದ ನಿತ್ಯವಾದ ಶಬ್ದಕ್ಕೆ ನಿತ್ಯವಾದ ಅರ್ಥದೂಡನೆ ನಿತ್ಯವಾದ ಸಂಬಂಧವು ತೋರುವದರಿಂದ ವೈದಿಕಶಬ್ದದಲ್ಲಿ ಪ್ರಾಮಾಣ್ಯವು ಸಿದ್ಧವಾಗಿತ್ತಲ್ಲ, ಅದಕ್ಕೆ ವಿರೋಧವಾಗುವದು.

ಸಿದ್ಧಾಂತ : ನಿತ್ಯ ಶಬ್ದದಿಂದ ಜಗತ್ತು ಉತ್ಪನ್ನವಾಗುತ್ತದೆ

(ಭಾಷ್ಯ) | ೨೮೬, ಇತಿ ಚೇತ್, ನಾಯಮಸ್ತಿ ವಿರೋಧಃ | ಕಸ್ಮಾತ್ ? ಅತಃ ಪ್ರಭವಾತ್ | ಅತ ಏವ ಹಿ ವೈದಿಕಾತ್ ಶಬ್ದಾತ್ ದೇವಾದಿಕಂ ಜಗತ್ ಪ್ರಭವತಿ |

  1. ಸ್ವಾಭಾವಿಕವಾದ, ಹುಟ್ಟಿದಮೇಲೆ ಹೊಸದಾಗಿ ಉಂಟಾಗುವದಲ್ಲದ ಎಂದರ್ಥ.

  2. ವೇದಪ್ರಾಮಾಣ್ಯವು ಮತ್ತೊಂದು ಪ್ರಮಾಣದ ಅಪೇಕ್ಷೆಯಿಲ್ಲದೆ ಸಿದ್ಧವಾಗುವದರಿಂದ ಎಂದರ್ಥ.

  3. ನಿತ್ಯವಾದ ಶಬ್ದಕ್ಕೂ ನಿತ್ಯವಾದ ಅರ್ಥಕ್ಕೂ ವಾಚ್ಯವಾಚಕಸಂಬಂಧವು ನಿತ್ಯವಾಗಿರುವದರಿಂದ ವೇದವು ತನ್ನ ಅರ್ಥವನ್ನು ತಾನೇ ತಿಳಿಸುತ್ತದೆ, ಮತ್ತೆ ಯಾವ ಪ್ರಮಾಣವನ್ನೂ ಬಯಸುವದಿಲ್ಲ ಎಂದು ಜೈ, ಸೂ. ೧-೧-೫ರಲ್ಲಿ ಸ್ಥಾಪಿತವಾಗಿದೆ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ನನು ‘ಜನ್ಮಾದ್ಯಸ್ಯ ಯತಃ’ (೧-೧-೨) ಇತ್ಯತ್ರ ಬ್ರಹ್ಮಪ್ರಭವಂ ಜಗತಃ ಅವಧಾರಿತಮ್ | ಕಥಮಿಹ ಶಬ್ದಪ್ರಭವಮ್ ಉಚ್ಯತೇ ? ಅಪಿ ಚ ಯದಿ ನಾಮ ವೈದಿಕಾತ್ ಶಬ್ದಾತ್ ಅಸ್ಯ ಪ್ರಭವೋಭ್ಯುಪಗತಃ, ಕಥಮ್ ಏತಾವತಾ ವಿರೋಧಃ ಶಬ್ದ ಪರಿಹೃತಃ ? ಯಾವತಾ ವಸವಃ, ರುದ್ರಾ, ಆದಿತ್ಯಾಃ, ವಿಶ್ವೇ ದೇವಾಃ, ಮರುತಃ – ಇತ್ಯೇತೇ ಅರ್ಥಾ: ಅನಿತ್ಯಾ ಏವ | ಉತ್ಪತ್ತಿಮತ್ಯಾತ್ | ತದನಿತ್ಯ ಚ ತದ್ವಾಚಿನಾಂ ವೈದಿಕಾನಾಂ ವಸ್ವಾದಿಶಬ್ದಾನಾಮ್ ಅನಿತ್ಯತ್ವಂ ಕೇನ ನಿವಾರ್ಯತೇ ? ಪ್ರಸಿದ್ಧಂ ಹಿ ಲೋಕೇ ದೇವದತ್ತಸ್ಯ ಪುತ್ರ ಉತ್ಪನ್ನೇ ‘ಯಜ್ಞದತ್ತ…’ ಇತಿ ತಸ್ಯ ನಾಮ ಕ್ರಿಯತೇ ಇತಿ | ತಸ್ಮಾತ್ ವಿರೋಧ ಏವ ಶಬ್ದ ಇತಿ ಚೇತ್ | ನ | ಗವಾದಿಶಬ್ದಾರ್ಥಸಂಬದ್ಧನಿತ್ಯತ್ವದರ್ಶನಾತ್ | ನ ಹಿ ಗವಾದಿವ್ಯಕ್ತಿನಾಮ್ ಉತ್ಪತ್ತಿ ಮತ್ತೇ ತದಾತೃತೀನಾಮಪಿ ಉತ್ಪತ್ತಿಮಂ ಸ್ಯಾತ್ | ದ್ರವ್ಯಗುಣಕರ್ಮಣಾಂ ಹಿ ವ್ಯಕ್ತಿಯ ಏವ ಉತ್ಸದ್ಯ ನಾಕೃತಯಃ | ಆಕೃತಿಭಿಶ್ಚ ಶಬ್ದಾನಾಂ ಸಂಬದ್ಧ, ನ ವ್ಯಕ್ತಿಭಿಃ | ವ್ಯಕ್ತಿನಾಮ್ ಆನನ್ನಾತ್‌ ಸಂಬದ್ಧಗ್ರಹಣಾನುಪಪಃ | ವ್ಯಕ್ತಿಷು ಉತ್ಪದ್ಯಮಾನಾಸ್ವಪಿ ಆಕೃತೀನಾಂ ನಿತ್ಯತ್ವಾತ್ ನಗವಾದಿಶಶ್ಲೇಷು ಕಶ್ಚಿದ್ ವಿರೋಧೋ ದೃಶ್ಯತೇ | ತಥಾ ದೇವಾದಿವ್ಯಕ್ತಿಪ್ರಭವಾಭ್ಯುಪಗಮೇSಪಿ ಆಕೃತಿನಿತ್ಯತ್ವಾತ್ ನ ಕಶ್ಚಿದ್ ವಸ್ವಾದಿಶಶ್ಲೇಷು ವಿರೋಧಃ ಇತಿ ದ್ರಷ್ಟವ್ಯಮ್ | ಆಕೃತಿವಿಶೇಷಸ್ತು ದೇವಾದೀನಾಂ ಮನಾರ್ಥವಾದಾದಿಭೋ ವಿಗ್ರಹವತ್ತಾದ್ಯವಗಮಾತ್ ಅವಗಸ್ತವ್ಯ: 1 ಸ್ಥಾನವಿಶೇಷ ಸಂಬದ್ಧನಿಮಿತ್ತಾ ಇನ್ನಾದಿಶಬ್ದಾಃ ಸೇನಾಪತ್ಯಾದಿಶಬ್ದವತ್ | ತತಶ್ಚ ಯೋ ಯಸ್ತತ್ತತ್ಸಾನಮ್ ಅಧಿರೋಹತಿ ಸ ಸ ಇನ್ನಾದಿಶಬ್ದಃ ಅಭಿಧೀಯತೇ ಇತಿ ನ ದೋಷೋ ಭವತಿ | ನ ಚೇದಂ ಶಬ್ದಪ್ರಭವತ್ವಂ ಬ್ರಹ್ಮಪ್ರಭವತ್ವವತ್ ಉಪಾದಾನಕಾರಣಾಭಿಪ್ರಾಯೇಣ ಉಚ್ಯತೇ | ಕಥಂ ತರ್ಹಿ, ಸ್ಥಿತೇ ವಾಚಕಾತ್ಮನಾ ನಿತ್ಯೇ ಶಬ್ದ ನಿತ್ಯಾರ್ಥಸಂಬಸ್ಥಿನಿ ಶಬ್ದ ವ್ಯವಹಾರಯೋಗ್ಯಾರ್ಥವ್ಯಕ್ತಿನಿಷ್ಪತ್ತಿ: “ಅತಃ ಪ್ರಭವಃ’ ಇತ್ಯುಚ್ಯತೇ ||

(ಭಾಷ್ಯಾರ್ಥ) ಹೀಗಂದರೆ, (ಅದಕ್ಕೆ ನಮ್ಮ ಸಮಾಧಾನವೇನೆಂದರೆ) ಈ ವಿರೋಧವೂ ಇಲ್ಲ. ಏಕೆ ? ಎಂದರೆ ಇದರಿಂದ ಉಂಟಾಗುವದರಿಂದ. ಇದೇ ವೈದಿಕಶಬ್ದದಿಂದಲೇ ದೇವತೆಗಳೇ ಮುಂತಾದ ಜಗತ್ತು ಉಂಟಾಗುತ್ತದೆ.

(ಆಕ್ಷೇಪ) :- “ಜನ್ಮಾದ್ಯಸ್ಯ ಯತಃ’ (೧-೧-೨) ಎಂಬಲ್ಲಿ ಜಗತ್ತು ಬ್ರಹ್ಮ ದಿಂದ ಉಂಟಾಗುತ್ತದೆ ಎಂದು ನಿರ್ಧರಿಸಲಾಯಿತು. (ಹೀಗಿರುವಲ್ಲಿ ) ಇಲ್ಲಿ ಶಬ್ದದಿಂದ ಉಂಟಾಗುತ್ತದೆ ಎಂದು ಹೇಳುವದು ಹೇಗೆ (ಸರಿ) ? ಇದಲ್ಲದೆ ವೈದಿಕಶಬ್ದದಿಂದ ಈ

ಅಧಿ. ೮. ಸೂ. ೨೮] ನಿತ್ಯಶಬ್ದದಿಂದ ಜಗತ್ತು ಉತ್ಪನ್ನವಾಗುತ್ತದೆ

(ಜಗತ್ತು) ಹುಟ್ಟುವದೆಂದು ಒಪ್ಪಿದರೆ ತಾನೆ ಅಷ್ಟುಮಾತ್ರದಿಂದ ಶಬ್ದ (ವಿಷಯ) ದಲ್ಲಾಗುವ ವಿರೋಧವು ಹೇಗೆ ಪರಿಹೃತವಾಯಿತು ? ಏಕೆಂದರೆ ವಸುಗಳು, ರುದ್ರರು, ಆದಿತ್ಯರು, ವಿಶ್ವೇದೇವತೆಗಳು, ಮರುತ್ತರು - ಎಂಬೀ ಪದಾರ್ಥಗಳು ಹುಟ್ಟುವಿಕೆ ಯುಳ್ಳವಾಗಿರುವದರಿಂದ ಅನಿತ್ಯವೇ (ಆಗುತ್ತವೆ) ; ಅವು ಅನಿತ್ಯವಾದರೆ ಅವುಗಳನ್ನು ತಿಳಿಸುವ ವೇದದಲ್ಲಿರುವ ವಸ್ವಾದಿಶಬ್ದಗಳು ಅನಿತ್ಯವೆಂಬುದನ್ನು ಇಲ್ಲವೆಂಬುದು ಯಾವನಿಂದ ಆದೀತು ? ದೇವದತ್ತನಿಗೆ ಮಗನು ಹುಟ್ಟಿದರೆ ಯಜ್ಞದತ್ತನೆಂದು ಅವನಿಗೆ ಹೆಸರನ್ನಿಡುತ್ತಾರೆ ಎಂದು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ. ಆದ್ದರಿಂದ ಶಬ್ದ ವಿಷಯದಲ್ಲಿ ವಿರೋಧವೇ ಆಗುವದಲ್ಲ !

(ಪರಿಹಾರ) :- ಹಾಗಲ್ಲ. ಏಕೆಂದರೆ ಗೋಶಬ್ದವೇ ಮುಂತಾದವುಗಳಿಗೂ (ಅವುಗಳ) ಅರ್ಥಗಳಿಗೂ ಸಂಬಂಧವು ನಿತ್ಯವಾಗಿರುವದು ಕಂಡುಬಂದಿದೆ. ಹೇಗೆಂದರೆ, ಗವಾದಿವ್ಯಕ್ತಿಗಳು ಹುಟ್ಟುವದಾದರೆ ಅವುಗಳ ಆಕೃತಿಗಳೂ ಹುಟ್ಟುವ ಎಂದು ಆಗಲಾರದು. ದ್ರವ್ಯಗುಣಕರ್ಮಗಳ ವ್ಯಕ್ತಿಗಳು ಮಾತ್ರ ಹುಟ್ಟುವವೇ ಹೊರತು ಆಕೃತಿಗಳು ಹುಟ್ಟುವದೇ ಇಲ್ಲ. ಆಕೃತಿಗಳಿಗೂ ಶಬ್ದಗಳಿಗೂ ಸಂಬಂಧವೇ ಹೊರತು ವ್ಯಕ್ತಿಗಳಿಗೂ (ಅವಕ್ಕೂ) ಸಂಬಂಧವಿರುವದಿಲ್ಲ. ಏಕೆಂದರೆ ವ್ಯಕ್ತಿಗಳು ಅನಂತ ವಾಗಿರುವದರಿಂದ (ಅವುಗಳಿಗೂ ಶಬ್ದಗಳಿಗೂ ಸಂಬಂಧವನ್ನು ಗ್ರಹಿಸುವದು ಆಗಲಾರದು. ವ್ಯಕ್ತಿಗಳು ಹುಟ್ಟುವವಾದರೂ ಆಕೃತಿಗಳು ನಿತ್ಯವಾಗಿರುವದರಿಂದ ಗೋಶಬ್ದವೇ ಮುಂತಾದವುಗಳ ವಿಷಯದಲ್ಲಿ ಯಾವ ವಿರೋಧವೂ ಕಾಣಿಸುವದಿಲ್ಲ. ಇದರಂತೆಯೇ ದೇವತೆಗಳೇ ಮೊದಲಾದವರ ವ್ಯಕ್ತಿಗಳು ಹುಟ್ಟುವವಂದು ಅಂಗೀಕರಿಸಿದರೂ (ಅವರ) ಆಕೃತಿಗಳು ನಿತ್ಯವಾಗಿರುವದರಿಂದ ವಸು ಮುಂತಾದ ಶಬ್ದಗಳಲ್ಲಿ ಯಾವ ವಿರೋಧವೂ ಇಲ್ಲವೆಂದು ತಿಳಿಯಬೇಕು. ದೇವಾದಿಗಳಿಗೂ ಒಂದೊಂದು ಆಕೃತಿಯಿರುವದೆಂಬುದನ್ನು ಮಂತ್ರ, ಅರ್ಥವಾದ - ಮುಂತಾದವುಗಳಿಂದ (ಅವರಿಗೆ) ಶರೀರವಿರುವದೇ ಮುಂತಾದವು ನಿಶ್ಚಯವಾಗಿರುವದರಿಂದ ಗೊತ್ತು ಪಡಿಸಿಕೊಳ್ಳಬೇಕು. ಮತ್ತು ಇಂದ್ರ ಮುಂತಾದ ಶಬ್ದಗಳು ಸೇನಾಪತಿ ಮುಂತಾದ ಶಬ್ದಗಳಂತೆ ಆಯಾ ಸ್ಥಾನಗಳ ಸಂಬಂಧದ ನಿಮಿತ್ತದಿಂದ (ಪ್ರವರ್ತಿಸುತ್ತವೆ). ಆದ್ದರಿಂದ ಯಾವಯಾವನು ಆ ಸ್ಥಾನವನ್ನೇರುವನೋ ಅವನವನನ್ನು ಇಂದ್ರ ಮುಂತಾದ ಶಬ್ದಗಳಿಂದ ಕರೆಯುತ್ತಾರಾಗಿ (ಇಲ್ಲಿ ಯಾವ) ದೋಷವೂ ಇರುವದಿಲ್ಲ.

  1. ದ್ರವ್ಯಗುಣಕರ್ಮಗಳಲ್ಲಿರುವ ಸಾಮಾನ್ಯಕ್ಕೆ ಆಕೃತಿ ಎಂದು ಹೆಸರು. ಶಾ.ಭಾ.೧-೧-೫.

2.ಶಾ.ಭಾ. ೧-೩-೩೩ ನೋಡಿ.

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಇದಲ್ಲದೆ ಶಬ್ದದಿಂದ (ಜಗತ್ತು) ಹುಟ್ಟುವದೆಂಬಿದು ಬ್ರಹ್ಮದಿಂದ ಹುಟ್ಟು ವಂತೆ (ಶಬ್ದವು) ಉಪಾದಾನಕಾರಣವೆಂಬ ಅಭಿಪ್ರಾಯದಿಂದ (ಹೇಳಿದ್ದಲ್ಲ ; ಮತ್ತೆ ಹೇಗೆ ? ಎಂದರೆ ನಿತ್ಯವಾಗಿರುವ ಅರ್ಥಕ್ಕೆ ಸಂಬಂಧಪಟ್ಟ ವಾಚಕಸ್ವರೂಪದಿಂದ ನಿತ್ಯವಾದ ಶಬ್ದವು ಇರುತ್ತಿರುವಲ್ಲಿ ಶಬ್ದ ವ್ಯವಹಾರಕ್ಕೆ ಯೋಗ್ಯವಾದ ಅರ್ಥವ್ಯಕ್ತಿಯು ಉಂಟಾಗುವದನ್ನೇ ‘ಇದರಿಂದ ಹುಟ್ಟುವದು’ ಎಂದು ಕರೆಯುತ್ತಾರೆ.

ಶಬ್ದದಿಂದ ಜಗತ್ತು ಹುಟ್ಟುವದೆಂಬುದಕ್ಕೆ ಶ್ರುತಿಸ್ಕೃತಿಗಳು

(ಭಾಷ್ಯ) ೨೮೭. ಕಥಂ ಪುನರವಗಮ್ಯತೇ ಶಬ್ದಾತ್ ಪ್ರಭವತಿ ಜಗತ್ ಇತಿ ? ಪ್ರತ್ಯಕ್ಷಾನುಮಾನಾಭ್ಯಾಮ್ | ಪ್ರತ್ಯಕ್ಷ ಶ್ರುತಿಃ | ಪ್ರಾಮಾಣ್ಯಂ ಪ್ರತಿ ಅನಪೇಕ್ಷ ತ್ವಾತ್ | ಅನುಮಾನಂ ಸ್ಮತಿಃ | ಪ್ರಾಮಾಣ್ಯಂ ಪ್ರತಿ ಸಾಪೇಕ್ಷತ್ವಾತ್ | ತೇ ಹಿ ಶಬ್ದ ಪೂರ್ವಾ೦ ಸೃಷ್ಟಿಂ ದರ್ಶಯತಃ | ‘ಏತ ಇತಿ ವೈ ಪ್ರಜಾಪತಿರ್ದವಾನಗೃಜತಾ ಸೃಗ್ರಮಿತಿ ಮನುಷ್ಯಾನಿನ್ನವ ಇತಿ ಪಿತ್ಯಂಸ್ತಿರಃಪವಿತ್ರಮಿತಿ ಗ್ರಹಾನಾಶವ ಇತಿ ಸ್ತೋತ್ರಂ ವಿಶ್ವಾನೀತಿ ಶಸ್ತ್ರಮಭಿಸೌಭಗೇತ್ಯನ್ಯಾಃ ಪ್ರಜಾಃ’ (ತಾಂ.ಮ.ಬ್ರಾ. ೬-೯-೧೫) ಇತಿ ಶ್ರುತಿಃ | ತಥಾ ಅನ್ಯತ್ರಾಪಿ ‘ಸ ಮನಸಾ ವಾಚಂ ಮಿಥುನಂ ಸಮಭವತ್’’ (ಬೃ. ೧ ೨-೪) ಇತ್ಯಾದಿನಾ ತತ್ರ ತತ್ರ ಶಬ್ದ ಪೂರ್ವಿಕಾ ಸೃಷ್ಟಿಸಿ ಶ್ರಾವ್ಯತೇ | ತಿರಪಿ - “ಅನಾದಿನಿಧನಾ ನಿತ್ಯಾ ವಾಗುತೃಷ್ಮಾ ಸ್ವಯಂಭುವಾ | ಆದೌ ವೇದಮಯೀ ದಿವ್ಯಾ ಯತಃ ಸರ್ವಾಃ ಪ್ರವೃತ್ತಯಃ |’ (ಮೋ. ಧ. ೨೩೨-೨೪) ಇತಿ | ಉತ್ಸರ್ಗೊಹ್ಮಯಂ ವಾಚಃ ಸಂಪ್ರದಾಯಪ್ರವರ್ತನಾತ್ಮಕೋ ದ್ರಷ್ಟವಃ | ಅನಾದಿನಿ,ನಾಯಾಃ ಅನ್ಯಾದೃಶಸ್ಯ ಉತ್ಸರ್ಗಸ್ಯ ಅಸಂಭವಾತ್ | ತಥಾ “ನಾಮ ರೂಪಂ ಚ ಭೂತಾನಾಂ ಕರ್ಮಣಾಂ ಚ ಪ್ರವರ್ತನಮ್ | ವೇದಶಬ್ದಭ್ಯ ವಿವಾದೆ ನಿರ್ಮಮ ಸ ಮಹೇಶ್ವರಃ’ (ಮೋ. ಧ. ೨೩೨-೨೫) ಇತಿ |‘‘ಸರ್ವಷಾಂ ತು ಸ ನಾಮಾನಿ ಕರ್ಮಾಣಿ ಚ ಪೃಥಕ್‌ಪೃಥಕ್ ವೇದಶಬ್ದಭ್ಯ ವಿವಾದೌ ಪೃಥಕ್ಷಂಸ್ಥಾಶ್ಚ ನಿರ್ಮಮ’ 11 (ಮನು. ೧-೨೧) ಇತಿ ಚ | ಅಪಿ ಚ ಚಿಕೀರ್ಷಿತಮ್ ಅರ್ಥಮ್ ಅನುಷ್ಠನ್ ತಸ್ಯ ವಾಚಕಂ ಶಬ್ದಂ ಪೂರ್ವಂ ತ್ಯಾ ಪಶ್ಚಾತ್ ತಮರ್ಥಮ್ ಅನುತಿಷ್ಠತಿ ಇತಿ ಸರ್ವಷಾಂ ನಃ ಪ್ರತ್ಯಕ್ಷಮೇತತ್ | ತಥಾ ಪ್ರಜಾಪತೇರಪಿ ಸಮ್ಮತಿ

  1. ಆದ್ದರಿಂದ ಶಬ್ದಕ್ಕೂ ಆಕೃತಿಗೂ ಇರುವ ನಿತ್ಯಸಂಬಂಧಕ್ಕೆ ಇದರಿಂದೇನೂ ಹಾನಿಯಿಲ್ಲ. 2. ಈ ಶ್ಲೋಕದ ಉತ್ತರಾರ್ಧವು ಅಚ್ಚಿನ ಭಾರತದಲ್ಲಿಲ್ಲ. 3. ಅಚ್ಚಿನ ಭಾರತದಲ್ಲಿ ರೂಪಾಂತರದಲ್ಲಿದೆ.

ಅಧಿ. ೮. ಸೂ. ೨೮] ಶಬ್ದದಿಂದ ಜಗತ್ತು ಹುಟ್ಟುವದೆಂಬುದಕ್ಕೆ ಶ್ರುತಿಸ್ಮೃತಿಗಳು ೪೫೭ ಸೃಷ್ಟೇಃ ಪೂರ್ವಂ ವೈದಿಕಾಃ ಶಬ್ದಾ: ಮನಸಿ ಪ್ರಾದುರ್ಬಭೂವು | ಪಶ್ಚಾತ್ ತದನುಗತಾನ್ ಅರ್ಥಾನ್ ಸಸರ್ಜ ಇತಿ ಗಮ್ಯತೇ | ತಥಾ ಚ ಶ್ರುತಿ: ‘ಸ ಭೂರಿತಿ ವ್ಯಾಪರತ್ | ಸ ಭೂಮಿಮಸೃಜತ |’ (ತೈ. ಬ್ರಾ. ೨-೨-೪-೨) ಇವಮಾದಿಕಾ ಭೂರಾದಿಶಬ್ದಭ್ಯ ಏವ ಮನಸಿ ಪ್ರಾದುರ್ಭೂತೇಯ್ಯೋ ಭೂರಾದಿಲೋಕಾನ್ ಸೃಷ್ಕಾನ್ ದರ್ಶಯತಿ 11

(ಭಾಷ್ಯಾರ್ಥ) ಇನ್ನು ಶಬ್ದದಿಂದ ಜಗತ್ತು ಉಂಟಾಗುವದೆಂಬುದನ್ನು ಹೇಗೆ ನಿಶ್ಚಯಿಸಬೇಕು ? ಎಂದರೆ ಪ್ರತ್ಯಕ್ಷಾನುಮಾನಗಳಿಂದ ಪ್ರತ್ಯಕ್ಷವೆಂದರೆ ಶ್ರುತಿಯು, ಏಕೆಂದರೆ (ಅದರ) ಪ್ರಾಮಾಣ್ಯಕ್ಕೆ (ಪ್ರಮಾಣಾಂತರದ) ಅಪೇಕ್ಷಯಿರುವದಿಲ್ಲ. ಅನುಮಾನವೆಂದರೆ ಸ್ಕೃತಿಯು. ಏಕೆಂದರೆ (ಅದರ) ಪ್ರಾಮಾಣ್ಯಕ್ಕೆ (ಶ್ರುತಿಯ) ಅಪೇಕ್ಷೆಯಿರುತ್ತದೆ. ಇವೆರಡೂ ಶಬ್ದ ಪೂರ್ವಕವಾಗಿಯೇ ಸೃಷ್ಟಿ (ಯಾಯಿತೆಂದು) ತಿಳಿಸುತ್ತವೆ. “ಏತೇ’ ಎಂದೇ ಪ್ರಜಾಪತಿಯು ದೇವತೆಗಳನ್ನು ಸೃಷ್ಟಿಸಿದನು ; ‘ಅಸ್ತ್ರಗ್ರಮ್’ ಎಂದು ಮನುಷ್ಯರನ್ನು, ‘ಇನ್ಸವಃ’ ಎಂದು ಪಿತೃಗಳನ್ನು, ‘ತಿರಃ ಪವಿತ್ರಮ್’ ಎಂದು ಗ್ರಹಗಳನ್ನು, ‘ಆಶವಃ’ ಎಂದು ಸ್ತೋತ್ರವನ್ನು, ‘ವಿಶ್ವಾನಿ’ ಎಂದು ಶಸ್ತ್ರವನ್ನು, “ಅಭಿಸೌಭಗ’ ಎಂದು ಮಿಕ್ಕ ಪ್ರಜೆಗಳನ್ನು (ಸೃಷ್ಟಿಸಿದನು)’’ ಎಂದು ಶ್ರುತಿ ಇರುವದು. ಹೀಗೆಯೇ ಮತ್ತು ಬೇರೆ (ಕಡೆ)ಯಲ್ಲಿಯೂ “ಅವನು ಮನಸ್ಸಿನಿಂದ ವಾಕ್ಕನ್ನು ಮಿಥುನಭಾವದಿಂದ ಸೇರಿದನು’‘3 (ಬೃ. ೧-೨-೪) ಎಂದು ಮುಂತಾಗಿ ಅಲ್ಲಲ್ಲಿ

1.ಶ್ರುತಿಯ ಅರ್ಥವನ್ನು ವಿವರಿಸುವದರಿಂದಲೇ ಸ್ಮತಿಗೆ ಪ್ರಾಮಾಣ್ಯವು.

  1. “ಏತೇ ಅಸ್ತ್ರಗ್ರಮಿನ್ದವರಃ ಪವಿತ್ರಮಾಶವಃ, ವಿಶ್ವಾಸ್ಯಭಿಸೌಭಗಾ’ ಎಂಬ (ಋ.ಸ. ಮಂ. ೯-೩-೬೨), ಮಂತ್ರದಲ್ಲಿರುವ ಪದಗಳಿಂದ ಸ್ಪಷ್ಟವ್ಯಪದಾರ್ಥಗಳನ್ನು ನೆನಪಿಗೆ ತಂದುಕೊಂಡು ಸೃಷ್ಟಿಸಿದನು. ಏತೇ - ದೇವತೆಗಳು, ಅಸ್ಸಗ್ರಮ್ - ರಕ್ತಪ್ರಧಾನವಾದ ದೇಹದಲ್ಲಿ ರಮಿಸುವ ಮನುಷ್ಯರು, ಇನ್ಸವಃ-ಚಂದ್ರನಲ್ಲಿರುವ ಪಿತೃಗಳು, ತಿರಃ ಪವಿತ್ರಮ್ - ಪವಿತ್ರವಾದ ಸೋಮವನ್ನು ತಮ್ಮಲ್ಲಿ ಕಾಣದಂತೆ ಮಾಡುವ ಗ್ರಹಗಳೆಂಬ ಬಟ್ಟಲುಗಳು. ಆಶವಃ - ಋಕ್ಕುಗಳನ್ನು ಪಡೆಯುವ ಗೀತಿರೂಪವಾದ ಸ್ತೋತ್ರಗಳು, ವಿಶ್ಚಾನಿ - ಸ್ತೋತ್ರಾನಂತರದಲ್ಲಿ ಪ್ರಯೋಗವನ್ನು ಪ್ರವೇಶಿಸುವ ಶಸ್ತ್ರಗಳು (ಸ್ತೋತ್ರವಿಶೇಷಗಳು), ಅಭಿಸೌಭಗ - ಸೌಭಾಗ್ಯಯುಕ್ತವಾದ ಇತರರು ಎಂದಿಂತು ಒಂದೊಂದು ಪದದಿಂದ ಒಂದೊಂದು ಸ್ಪಷ್ಟವ್ಯವನ್ನು ನೆನಸಿಕೊಂಡನು ಎಂದು ಈ ಛಂದೋಗಬ್ರಾಹ್ಮಣವಾಕ್ಯದ ಅರ್ಥವು ಎಂದು ರತ್ನಪ್ರಭಾವ್ಯಾಖ್ಯಾನ.

  2. ಅವನು ಮನಸ್ಸಿನಿಂದ ತಯಾರೂಪವಾದ ವಾಕ್ಕನ್ನು ಕುರಿತು ಆಲೋಚಿಸಿದನು, ಎಂದರೆ ವೇದದಲ್ಲಿ ತಿಳಿಸಿರುವ ಸೃಷ್ಟಿಕ್ರಮವನ್ನು ಮನಸ್ಸಿನಿಂದ ಆಲೋಚಿಸಿದನು ಎಂದರ್ಥ.

೪೫೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಶಬ್ದ ಪೂರ್ವಕವಾದ ಸೃಷ್ಟಿಯನ್ನೇ ಶ್ರುತಿಯಲ್ಲಿ ಹೇಳಿದೆ. “ಆದಿಯಾಗಲಿ ಅಂತವಾಗಲಿ ಇಲ್ಲದ ನಿತ್ಯವಾದ ವೇದರೂಪವಾದ ದಿವ್ಯವಾಕ್ಕನ್ನು ಸ್ವಯಂಭುವು ಮೊದಲು ಉಂಟುಮಾಡಿದನು ; ಅದರಿಂದ ಎಲ್ಲಾ ಪ್ರವೃತ್ತಿಗಳೂ (ಆಗಿರುತ್ತವೆ. ಮೋ.ಛ.೨೩೨ ೨೪) ಎಂದು ಸ್ಮತಿಯೂ (ಇದೆ). ಇಲ್ಲಿ ಹೇಳಿರುವ) ಈ ಉಂಟುಮಾಡುವಿಕೆಯು ಸಂಪ್ರದಾಯಪ್ರವರ್ತನರೂಪವಾದದ್ದೆಂದೇ’ ಅರಿಯಬೇಕು ; ಏಕೆಂದರೆ ಆದ್ಯಂತ ಗಳಿಲ್ಲದ (ವಾಕ್ಕನ್ನು) ಬೇರೆಯ ಬಗೆಯಿಂದ ಉಂಟುಮಾಡುವಿಕೆಯು ಆಗುವಹಾಗಿಲ್ಲ. ಹೀಗೆಯೇ ‘‘ಭೂತಗಳ ನಾಮವನ್ನೂ ರೂಪವನ್ನೂ ಕರ್ಮಗಳ ಪ್ರವೃತ್ತಿಯನ್ನೂ ಆ ಮಹೇಶ್ವರನು ಆದಿಯಲ್ಲಿ ವೇದಶಬ್ದಗಳಿಂದಲೇ ನಿರ್ಮಿಸಿದನು’ (ಮೋ. ಧ. ೨೩೨-೨೫) ಎಂದೂ ಅವನು ಎಲ್ಲರ ಬೇರೆಬೇರೆಯ ನಾಮಗಳನ್ನೂ ಕರ್ಮಗಳನ್ನೂ ಬೇರೆಬೇರೆಯಾದ ಆಕಾರಗಳನ್ನೂ ಆದಿಯಲ್ಲಿ ವೇದಶಬ್ದಗಳಿಂದಲೇ ಸೃಷ್ಟಿಸಿದನು’ (ಮನು. ೧-೨೧) ಎಂದೂ (ಸ್ಕೃತಿಯಲ್ಲಿ ಇರುತ್ತದೆ).

ಇದಲ್ಲದೆ ಮಾಡಬೇಕೆಂದು ಬಯಸಿದ ಕೆಲಸವನ್ನು ಮಾಡುವವನು ಅದರ ವಾಚಕವಾದ ಶಬ್ದವನ್ನು ಮೊದಲು ನೆನಪಿಗೆ ತಂದುಕೊಂಡು ಬಳಿಕ ಆ ಕೆಲಸವನ್ನು ಮಾಡುತ್ತಾನೆಂಬುದು ನಮಗೆಲ್ಲರಿಗೂ ಪ್ರತ್ಯಕ್ಷವಾಗಿರುತ್ತದೆ. ಇದರಂತೆ ಸ್ಪಷ್ಟವಾದ ಪ್ರಜಾಪತಿಗೂ ಸೃಷ್ಟಿಗೆ ಮುಂಚೆ ವೈದಿಕಶಬ್ದಗಳು ಮನಸ್ಸಿನಲ್ಲಿ ತೋರಿಕೊಂಡವು ; ಆ ಬಳಿಕ ಅವುಗಳಿಂದ ಅನುಗತವಾದ ಪದಾರ್ಥಗಳನ್ನು ಸೃಷ್ಟಿಸಿದನು ಎಂದು ನಿಶ್ಚಯ ವಾಗುತ್ತದೆ. ಆದ್ದರಿಂದಲೇ ಅವನು ‘ಭೂಃ’ ಎಂದು ಉಚ್ಚರಿಸಿದನು, ಅವನು ಭೂಮಿ ಯನ್ನು ಸೃಷ್ಟಿಸಿದನು” (ತೈ. ಬ್ರಾ. ೨-೨-೪-೨) ಎಂದು ಮುಂತಾಗಿರುವ ಶ್ರುತಿಯು ಮನಸ್ಸಿನಲ್ಲಿ ಹೊರತೋರಿಕೊಂಡ ಭೂರಾದಿಶಬ್ದಗಳಿಂದಲೇ ಭೂರಾದಿಲೋಕಗಳ ಸೃಷ್ಟಿ (ಯಾಯಿತೆಂದು ತಿಳಿಸುತ್ತದೆ.

ಪೂರ್ವಪಕ್ಷ : ಶಬ್ದವು ಸ್ಫೋಟರೂಪ, ವರ್ಣಗಳು ಅನಿತ್ಯ

(ಭಾಷ್ಯ) ೨೮೮. ಕಿಮಾತ್ಮಕಂ ಪುನಃ ಶಬ್ದಮ್ ಅಭಿಪ್ರೀತ್ಯ ಇದಂ ಶಬ್ದ ಪ್ರಭವತ್ವಮ್ ಉಚ್ಯತೇ ? ಸ್ಕೂಟಮ್ ಇತ್ಯಾಹ | ವರ್ಣಪಕ್ಷ ಹಿತೇಷಾಮ್ ಉತ್ಪನ್ನಪ್ರಧ್ವಂಸಿತ್ಸಾತ್

  1. ಗುರುಶಿಷ್ಯಪರಂಪರೆಯಿಂದ ಒಬ್ಬರಿಗೊಬ್ಬರು ಕೊಡುವ ಸಂಪ್ರದಾಯವು. 2. ಇಲ್ಲದ್ದನ್ನು ಹೊಸದಾಗಿ ಸೃಷ್ಟಿಸುವದು.

  2. ಜಗತ್ತಿನ ನಾಮರೂಪಕರ್ಮಗಳನ್ನು ಎಂದರ್ಥ. ‘ಸಂಸ್ಥಾಃ’ ಎಂದರೆ ಕುಂಬಾರನು ಗಡಿಗೆಯನ್ನೇ ಮಾಡಬೇಕು, ನೇಯ್ದೆಯವನು ಬಟ್ಟೆಯನ್ನೇ ಮಾಡಬೇಕು ಎಂಬ ವ್ಯವಸ್ಥೆಯನ್ನು - ಎಂದು ಕುಲ್ಲೂ ಕವ್ಯಾಖ್ಯಾನದಲ್ಲಿದೆ.

ಅಧಿ. ೮. ಸೂ. ೨೮] ಶಬ್ದವು ಸ್ಫೋಟರೂಪ, ವರ್ಣಗಳು ಅನಿತ್ಯ ನಿತೇಭ್ಯಃ ಶಬ್ದಭ್ಯ: ದೇವಾದಿವ್ಯಕ್ತಿನಾಂ ಪ್ರಭವಃ ಇತಿ ಅನುಪಪನ್ನಂ ಸ್ಯಾತ್ | ಉತ್ಪನ್ನಧ್ವಂಸಿನಶ್ಚ ವರ್ಣಾ: ! ಪ್ರತ್ಯುಚ್ಚಾರಣಮ್ ಅನ್ಯಥಾ ಚ ಅನ್ಯಥಾ ಚ ಪ್ರತೀಯ ಮಾನತ್ವಾತ್ | ತಥಾ ಹಿ | ಅದೃಶ್ಯಮಾನೋSಪಿ ಪುರುಷವಿಶೇಷಃ ಅಧ್ಯಯನಧ್ವನಿ ಶ್ರವಣಾದೇವ ವಿಶೇಷತೋ ನಿರ್ಧಾರ್ಯತೇ ‘ದೇವದತ್ತೋsಯಮ್ ಅಧೀತೇ’, “ಯಜ್ಞದತ್ತೋSಯಮ್ ಅಧೀತೇ’ ಇತಿ | ನ ಚಾಯಂ ವರ್ಣವಿಷಯೋನ್ಯಥಾತ್ಯ ಪ್ರತ್ಯಯ: ಮಿಥ್ಯಾಜ್ಞಾನಮ್ 1 ಬಾಧಕಪ್ರತ್ಯಯಾಭಾವಾತ್ | ನ ಚ ವರ್ಣೆಭ್ಯಃ ಅರ್ಥಾವಗತಿರ್ಯುಕ್ತಾ ! ನ ಹಿ ಏಕೈಕೊ ವರ್ಣ; ಅರ್ಥ೦ ಪ್ರತ್ಯಾಯಯೇತ್ | ವ್ಯಭಿಚಾರಾತ್ | ನ ಚ ವರ್ಣಸಮುದಾಯಪ್ರತ್ಯಯೋಸ್ತಿ | ಕ್ರಮವತ್ತಾದ್ ವರ್ಣಾನಾಮ್ | ಪೂರ್ವಪೂರ್ವವರ್ಣಾನುಭವಜನಿತಸಂಸ್ಕಾರಸಹಿತಃ ಅನ್ನೊ ವರ್ಣ: ಅರ್ಥ೦ ಪ್ರತ್ಯಾಯಯಿಷ್ಯತಿ ಇತಿ ಯದ್ಯುಚೈತ, ತನ್ನ । ಸಂಬಗ್ರಹಣಾಪೇಕ್ಟೋ ಹಿ ಶಬ್ದ : ಸ್ವಯಂ ಪ್ರತೀಯಮಾನಃ ಅರ್ಥ೦ ಪ್ರತ್ಯಾಯಯೇತ್ ಧೂಮಾದಿವತ್‌ | ನ ಚ ಪೂರ್ವಪೂರ್ವವರ್ಣಾನುಭವಜನಿತಸಂಸ್ಕಾರಸಹಿತಸ್ಯ ಅನ್ತವರ್ಣಸ್ಯ ಪ್ರತೀತಿರಸ್ತಿ | ಅಪ್ರತ್ಯಕ್ಷಾತ್ ಸಂಸ್ಕಾರಾಣಾಮ್ | ಕಾರ್ಯಪ್ರತ್ಯಾಯಿ: ಸಂಸ್ಕಾರೈಃ ಸಹಿತಃ ಅನ್ನೊ ವರ್ಣ; ಅರ್ಥಂಪ್ರತ್ಯಾಯಯಿಷ್ಯತಿ ಇತಿ ಚೇತ್ ನ ಸಂಸ್ಕಾರಕಾರ್ಯಸ್ಯಾಪಿ ಸ್ಮರಣಸ್ಯ ಕ್ರಮವರ್ತಿತ್ವಾತ್ | ತಸ್ಮಾತ್ ಸ್ಫೋಟ ಏವ ಶಬ್ದಃ | ಸ ಚ ಏಕೈಕವರ್ಣಪ್ರತ್ಯಯಾ ಹಿತಸಂಸ್ಕಾರಬೀಜೇ ಅನ್ತವರ್ಣಪ್ರತ್ಯಯಜನಿತಪರಿಪಾಕೇ ಪ್ರತ್ಯಯಿನಿ ಏಕಪ್ರತ್ಯಯ ವಿಷಯತಯಾ ಝಟಿತಿ ಪ್ರತ್ಯವಭಾಸತೇ ! ನ ಚಾಯಮ್ ಏಕಪ್ರತ್ಯಯಃ ವರ್ಣವಿಷಯಾ ಸ್ಮತಿಃ | ವರ್ಣಾನಾಮ್ ಅನೇಕತ್ವಾತ್ ಏಕಪ್ರತ್ಯಯ ವಿಷಯಾನುಪಪತ್ತೇ | ತಸ್ಯ ಚ ಪ್ರತ್ಯುಚ್ಚಾರಣಂ ಪ್ರತ್ಯಭಿಜ್ಞಾಯಮಾನತ್ವಾತ್ ನಿತ್ಯತ್ವಮ್ | ಭೇದಪ್ರತ್ಯಯಸ್ಯ ವರ್ಣವಿಷಯತ್ವಾತ್ | ತಸ್ಮಾತ್ ನಿತ್ಯಾತ್ ಶಬ್ದಾತ್ ಸ್ಫೋಟರೂಪಾತ್ ಅಭಿಧಾಯ ಕಾತ್ ಕ್ರಿಯಾಕಾರಕಘಲಲಕ್ಷಣಂ ಜಗತ್

ಅಭಿಧೇಯಭೂತಂ ಪ್ರಭವತಿ ಇತಿ 11

(ಭಾಷ್ಯಾರ್ಥ) (ಪ್ರಶ್ನೆ) :- (ಹಾಗಾದರೆ) ಶಬ್ದವು ಯಾವ ಸ್ವರೂಪದ್ದೆಂದು ಇಟ್ಟುಕೊಂಡು ಈ ಶಬ್ದ ಪ್ರಭವತ್ವವನ್ನು ಹೇಳುತ್ತೀರಿ ?

(ಸ್ಫೋಟವಾದಿ) :- ಸ್ಫೋಟವೆಂದು’ (ಇಟ್ಟುಕೊಂಡು ಹೇಳುತ್ತೇವೆ). 1. ಜಗತ್ತು ಶಬ್ದದಿಂದ ಹುಟ್ಟುವದೆಂಬುದನ್ನು,

  1. ವರ್ಣಗಳಿಗಿಂತ ಬೇರೆಯಾಗಿರುವ ಶಬ್ದವು ; ಅದು ಅರ್ಥವನ್ನು ಸ್ಪುಟಗೊಳಿಸುವದರಿಂದ ಸ್ಕೂಟವನಿಸುತ್ತದೆ ಎಂದು ಭಾವ.

೪೬೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ವರ್ಣ(ಗಳೇ ಶಬ್ದವೆಂಬ) ಪಕ್ಷದಲ್ಲಿ ಅವು ಹುಟ್ಟುತ್ತಲೇ ನಾಶವಾಗುವದರಿಂದ ನಿತ್ಯವಾದ ಶಬ್ದಗಳಿಂದ ದೇವಾದಿಗಳೆಂಬ ವ್ಯಕ್ತಿಗಳು ಹುಟ್ಟುವದೆಂಬುದು ಅಯುಕ್ತ ವಾಗುವದು. ವರ್ಣಗಳು ಹುಟ್ಟುತ್ತಲೇ ನಾಶವಾಗತಕ್ಕವು ; ಏಕೆಂದರೆ ಒಂದೊಂದು ಉಚ್ಚಾರಣೆಯಲ್ಲಿಯೂ (ಅವು) ಬೇರೆಬೇರೆಯಾಗಿ ಕಾಣುತ್ತಿರುತ್ತವೆ. ಹೇಗೆಂದರೆ, (ಅಧ್ಯಯನಮಾಡುತ್ತಿರುವ) ಒಬ್ಬಾನೊಬ್ಬ ಪುರುಷನು ಕಾಣದೆ ಇರುವಾಗಲೂ ಅಧ್ಯಯನದ ಧ್ವನಿಯನ್ನು ಕೇಳುವದರಿಂದಲೇ, ‘ಇಗೋ, ದೇವದತ್ತನು ಅಧ್ಯಯನ ಮಾಡುತ್ತಿದ್ದಾನೆ’, ‘ಇಗೋ, ಯಜ್ಞದತ್ತನು ಅಧ್ಯಯನಮಾಡುತ್ತಿದಾನೆ’ ಎಂದು (ಇವನು) ಇಂಥವನೆಂದು ಗೊತ್ತುಮಾಡುತ್ತಾರೆ. ವರ್ಣಗಳ ವಿಷಯದಲ್ಲಿ ಅವು ಬೇರೆ (ಬೇರೆ) ಯಂದು (ಆಗುವ) ಈ ಅರಿವು ತಪ್ಪುತಿಳಿವಳಿಕೆ (ಎನ್ನುವದಕ್ಕೂ ಬರುವ) ದಿಲ್ಲ. ಏಕೆಂದರೆ (ಈ ತಿಳಿವಳಿಕೆಗೆ) ಬಾಧಕವಾದ ಅರಿವು ಇರುವದಿಲ್ಲ. ವರ್ಣಗಳಿಂದ ಅರ್ಥವನ್ನು ಅರಿಯುವೆವೆಂಬುದು ಯುಕ್ತವೂ ಅಲ್ಲ. ಹೇಗೆಂದರೆ (ಮೊದಲನೆಯ ದಾಗಿ) ಒಂದೊಂದು ವರ್ಣವು ಅರ್ಥವನ್ನು ತಿಳಿಸಲಾರದು ; ಏಕೆಂದರೆ (ಅದರ ಪ್ರತ್ಯಾಯಕತ್ವವು) ವ್ಯಭಿಚರಿತವಾಗುತ್ತದೆ. ವರ್ಣಸಮುದಾಯದ ಪ್ರತ್ಯಯವೂ ಇಲ್ಲ ; ಏಕೆಂದರೆ ವರ್ಣಗಳು ಕ್ರಮವುಳ್ಳವುಗಳಾಗಿರುತ್ತವೆ. ಹಿಂದು ಹಿಂದಿನ ವರ್ಣದ ಅನುಭವದಿಂದುಂಟಾದ ಸಂಸ್ಕಾರದಿಂದೊಡಗೂಡಿದ ಕೊನೆಯ ವರ್ಣವು ಅರ್ಥವನ್ನು ತಿಳಿಸಲಿ, ಎನ್ನವದಾದರೆ ಅದು ಸರಿಯಲ್ಲ. ಶಬ್ದವು ತಾನೂ ತೋರಿಕೊಂಡು, ಸಂಬಂಧಗ್ರಹಣವನ್ನೂ ಅಪೇಕ್ಷಿಸಿಯಲ್ಲವೆ, ಹೊಗೆ ಮುಂತಾದವುಗಳು (ಬೆಂಕಿ ಮುಂತಾದವನ್ನು ತಿಳಿಸು)ವಂತ ಅರ್ಥವನ್ನು ತಿಳಿಸಬೇಕು ? ಆದರೆ ಹಿಂದುಹಿಂದಿನ ವರ್ಣದ ಅನುಭವದಿಂದುಂಟಾದ ಸಂಸ್ಕಾರದಿಂದೊಡಗೂಡಿದ ಅಂತ್ಯವರ್ಣದ ಅರಿವೇ ಇರುವದಿಲ್ಲ ; ಏಕೆಂದರೆ ಸಂಸ್ಕಾರಗಳು ಅಪ್ರತ್ಯಕ್ಷವಾಗಿರುತ್ತವೆ. ಕಾರ್ಯದಿಂದ

  1. ಈ ವರ್ಣಗಳು ಬೇರೆಬೇರೆಯಲ್ಲ ಎಂಬ ಬಾಧಕಪ್ರತ್ಯಯವುಂಟಾಗಿದ್ದರೆ ಅವು ಬೇರೆಬೇರಯಂದಾಗುವ ಈ ಅರಿವು ಭ್ರಾಂತಿಯಂದಾಗುತ್ತಿತ್ತು.

  2. ಕಮಲ ಎಂಬ ಶಬ್ದದಲ್ಲಿ ಕ ಎಂಬುದು ತಾವರೆಯನ್ನು ಹೇಳುತ್ತದೆ ಎನ್ನುವದಕ್ಕಿಲ್ಲ ; ಏಕೆಂದರೆ ಕಂಟಕ ಎಂಬ ಶಬ್ದದಲ್ಲಿ ಅದಕ್ಕೆ ಮುಳ್ಳು ಎಂಬ ಮತ್ತೊಂದು ಅರ್ಥವೆಂದು ಕಲ್ಪಿಸಬೇಕಾಗಿರುವದರಿಂದ ಇಂಥ ವರ್ಣಕ್ಕೆ ಇಂಥ ಅರ್ಥವೆಂಬ ನಿಯಮವಿಲ್ಲದೆ ಹೋಗುತ್ತದೆ - ಎಂದರ್ಥ. ಒಂದೇ ವರ್ಣವು ವಸ್ತುವನ್ನು ಹೇಳಿದರೆ ಮಿಕ್ಕ ವರ್ಣಗಳು ವ್ಯರ್ಥವೂ ಆಗುತ್ತವೆ ಎಂದು ಭಾವ.

  3. ಆದ್ದರಿಂದ ವರ್ಣಗಳು ಒಟ್ಟಿಗೆ ಸೇರಿರುವ ಸಂಭವವೇ ಇಲ್ಲ. 4. ವರ್ಣದ ಅನುಭವವು ಇಲ್ಲದಿದ್ದರೂ ಅದರ ಸಂಸ್ಕಾರವಿರುತ್ತದೆ ; ಹಿಂದಿನ ವರ್ಣಗಳ ಸಂಸ್ಕಾರವೂ ಅಂತ್ಯವರ್ಣವೂ ಸೇರಿದ ಸಮುದಾಯವಿರಬಹುದು - ಎಂದು ಅಭಿಪ್ರಾಯ.

  4. ಇದ್ದರೆ ಅದರಿಂದ ಅರ್ಥವು ತೋರುತ್ತದೆ ಎನ್ನಬಹುದಾಗಿತ್ತು.

ಅಧಿ. ೮. ಸೂ. ೨೮] ಸಿದ್ಧಾಂತ : ಶಬ್ದವೆಂದರೆ ವರ್ಣಗಳೇ

೪೬೧

ತಿಳಿದುಬರುವ ಸಂಸ್ಕಾರದಿಂದೊಡಗೂಡಿದ ಅಂತ್ಯವರ್ಣವು ಅರ್ಥವನ್ನು ತಿಳಿಸಲಿ, ಎಂದರೆ ಹಾಗಲ್ಲ ; ಏಕೆಂದರೆ ಸಂಸ್ಕಾರದ ಕಾರ್ಯವಾದ ಸ್ಮರಣೆಯೂ ಕ್ರಮ ವುಳ್ಳದ್ದಾಗಿಯೇ ಇರುತ್ತದೆ.?

ಆದ್ದರಿಂದ ಸ್ಫೋಟವೇ ಶಬ್ದವು. ಅದು ಒಂದೊಂದು ವರ್ಣದ ಅನುಭವ ದಿಂದುಂಟಾದ ಸಂಸ್ಕಾರವೆಂಬ ಬೀಜವುಳ್ಳದ್ದೂ ಕೊನೆಯವರ್ಣದ ಪ್ರತ್ಯಯ ದಿಂದುಂಟಾದ ಪರಿಪಾಕವುಳ್ಳದ್ದೂ ಆದ ಅಂತಃಕರಣದಲ್ಲಿ ಒಂದೆಂಬ ಪ್ರತ್ಯಯಕ್ಕೆ ವಿಷಯವಾಗಿ ಚಟ್ಟನೆ ತೋರಿಕೊಳ್ಳುತ್ತದೆ. ಈ ಒಂದೆಂಬ ಅರಿವು ವರ್ಣಗಳ ವಿಷಯವಾದ ಸ್ಮೃತಿಯಲ್ಲ ; ಏಕೆಂದರೆ ವರ್ಣಗಳು ಅನೇಕವಾಗಿರುವದರಿಂದ (ಅವು) ಒಂದೆಂಬ ಅರಿವಿಗೆ ವಿಷಯವಾಗಲಾರವು. ಆ (ಸ್ಫೋಟವು) ಒಂದೊಂದು ಉಚ್ಚಾ - ರಣೆಯ (ಸಮಯದ)ಲ್ಲಿಯೂ (ಇದೇ ಅದು ಎಂದು) ಗೊತ್ತಾಗಿ ತಿಳಿಯಬರುತ್ತಿರು ವದರಿಂದ ನಿತ್ಯವಾಗಿರುತ್ತದೆ. ಏಕೆಂದರೆ ಬೇರೆಬೇರೆ ಎಂಬ ಅರಿವಿಗೆ ವರ್ಣಗಳು ವಿಷಯವಾಗಿರುತ್ತವೆ ; ಆದ್ದರಿಂದ ಸ್ಫೋಟರೂಪವಾದ ಅಭಿಧಾಯಕವಾದ ನಿತ್ಯವಾದ ಶಬ್ದದಿಂದ ಅಭಿಧೇಯವಾದ ಕ್ರಿಯಾಕಾರಕಘಲರೂಪವಾದ ಜಗತ್ತು ಉಂಟಾಗುತ್ತದೆ. ಸಿದ್ಧಾಂತ : ಶಬ್ದವೆಂದರೆ ವರ್ಣಗಳೇ

(ಭಾಷ್ಯ) | ೨೮೯. “ವರ್ಣಾ ಏವ ತು ಶಬ್ದಃ ಇತಿ ಭಗವಾನ್ ಉಪವರ್ಷ” | ನನು ಉತ್ಪನ್ನಪ್ರಧ್ವಂಸಿತ್ವಂ ವರ್ಣಾನಾಮ್ ಉಕ್ತಮ್ | ತನ್ನ । ತ ಏವ ಇತಿ ಪ್ರತ್ಯಭಿಜ್ಞಾನಾತ್ | ಸಾದೃಶ್ಯಾತ್ ಪ್ರತ್ಯಭಿಜ್ಞಾನಂ ಕೇಶಾದಿಷ್ಟಿವ ಇತಿ ಚೇತ್ | ನ | ಪ್ರತ್ಯಭಿಜ್ಞಾನಸ್ಯ ಪ್ರಮಾಣಾನ್ಯರೇಣ ಬಾಧಾನುಪಪಃ | ಪ್ರತ್ಯಭಿಜ್ಞಾನಮ್ ಆಕೃತಿನಿಮಿತ್ತಮ್ ಇತಿ ಚೇತ್ | ನ | ವ್ಯಕ್ತಿಪ್ರತ್ಯಭಿಜ್ಞಾನಾತ್ | ಯದಿ ಹಿ ಪ್ರತ್ಯುಚ್ಚಾರಣಂ ಗವಾದಿವ್ಯಕ್ತಿವತ್‌ ಅನ್ಯಾ ಅನ್ಯಾ: ವರ್ಣವ್ಯಕ್ತಯಃ ಪ್ರತೀಯರನ್ ತತಃ ಆಕೃತಿನಿಮಿತ್ತಂ ಪ್ರತ್ಯಭಿಜ್ಞಾನಂ ಸ್ಯಾತ್ | ನ ತು ಏತದಸ್ತಿ | ವರ್ಣವ್ಯಕ್ತಿಯ ಏವ ಹಿ ಪ್ರತ್ಯುಚ್ಚಾರಣಂ ಪ್ರತ್ಯಭಿಜ್ಞಾಯನೇ, ‘ದ್ವಿರ್ಗೊಶಬ್ದಃ ಉಚ್ಚಾರಿತಃ’ ಇತಿ ಹಿ ಪ್ರತಿಪತ್ತಿಃ, ನ ತು ದ್ವ ಗೋಶಬ್ದ’ ಇತಿ ||

  1. ಸಂಸ್ಕಾರದ ಅರಿವು ಉಂಟಾಗದಿದ್ದರೂ ಅದರ ಕಾರ್ಯವಾದ ಸ್ಮರಣೆಯ ಅರಿವು ಆಗಬಹುದಲ್ಲ ! - ಎಂದು ಶಂಕ.

  2. ಆದ್ದರಿಂದ ಸ್ಮರಣೆಗಳೂ ಅಂತ್ಯವರ್ಣದ ಜೊತೆಯಲ್ಲಿರುವಂತಿಲ್ಲ. 3. ಅದು ವರ್ಣಗಳಲ್ಲಕ್ಕಿಂತಲೂ ಭಿನ್ನವಾಗಿಯೇ ಇರುತ್ತದೆ.೪೬೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

(ಭಾಷ್ಯಾರ್ಥ) ಆದರೆ ವರ್ಣಗಳೇ ಶಬ್ದವು ಎಂದು ಭಗವಂತನಾದ ಉಪವರ್ಷನು (ಅಭಿಪ್ರಾಯಪಟ್ಟಿರುತ್ತಾನೆ).

(ಆಕ್ಷೇಪ) :- ವರ್ಣಗಳು ಹುಟ್ಟುತ್ತಲೇ ನಾಶವಾಗುವವೆಂದು (ಇದಕ್ಕೆ ಆಕ್ಷೇಪವನ್ನು) ಹೇಳಿತ್ತಲ್ಲ !

(ಪರಿಹಾರ) :- ಅದು (ಸರಿ)ಯಲ್ಲ. ಏಕೆಂದರೆ ‘ಅವೇ (ಇವು)’ ಎಂದು ಪ್ರತ್ಯಭಿಜ್ಞಾನವಾಗುತ್ತದೆ.’

(ಆಕ್ಷೇಪ) :- ತಲೆಗೂದಲು ಮುಂತಾ(ದವುಗಳ ಅರಿವಿ)ನಂತೆ ಸಾದೃಶ್ಯ ದಿಂದ (ಈ) ಪ್ರತ್ಯಭಿಜ್ಞಾನ(ವಾಗಬಹುದು).

(ಪರಿಹಾರ) :- ಹಾಗಲ್ಲ. ಏಕೆಂದರೆ ಪ್ರತ್ಯಭಿಜ್ಞಾನವು ಮತ್ತೊಂದು ಪ್ರಮಾಣದಿಂದ ಬಾಧಿತ(ವಾಗುವದೆಂಬುದು) ಸರಿಯಲ್ಲ.

(ಆಕ್ಷೇಪ) :- (ಈ) ಪ್ರತ್ಯಭಿಜ್ಞಾನವು (ವರ್ಣಗಳ) ಆಕೃತಿಯ ನಿಮಿತ್ತ ದಿಂದ (ಆಗುತ್ತದೆ ಎನ್ನಬಹುದು).

(ಪರಿಹಾರ) :- ಹಾಗಲ್ಲ. ಏಕೆಂದರೆ (ಇಲ್ಲಿ) ವ್ಯಕ್ತಿಗಳ ಪ್ರತ್ಯಭಿಜ್ಞಾನ ವಾಗುತ್ತದೆ. ಪ್ರತಿಯೊಂದು ಉಚ್ಚಾರಣೆಯಲ್ಲಿಯೂ ಗವಾದಿವ್ಯಕ್ತಿಗಳಂತೆ ಬೇರೆ (ಬೇರೆಯ) ವರ್ಣವ್ಯಕ್ತಿಗಳು ತೋರಿದ್ದರೆ ಆಗ ಆಕೃತಿನಿಮಿತ್ತದಿಂದ ಪ್ರತ್ಯಭಿಜ್ಞಾನ (ವಾಗಬಹುದೆಂದು) ಆಗುತ್ತಿತ್ತು. ಆದರೆ ಇದಿಲ್ಲ. ವರ್ಣವ್ಯಕ್ತಿಗಳೇ ಅಲ್ಲವೆ,

  1. ಜೈ, ಸೂ. ೧-೧-೫ರ ಭಾಷ್ಯದಲ್ಲಿ ಶಬರಸ್ವಾಮಿಗಳು ಈ ಉಪವರ್ಷಮತವನ್ನು ಉದಾಹರಿಸಿ ವರ್ಣವ್ಯತಿರಿಕ್ತವಾದ ಶಬ್ದವಿದೆ ಎಂಬ ಮತವನ್ನು ಖಂಡಿಸಿರುತ್ತಾರೆ ; ಪ್ರಕೃತಭಾಷ್ಯವು ಶಬರಭಾಷ್ಯವನ್ನು ಅವಲಂಬಿಸಿ ಬರೆದದ್ದು. ವ್ಯವಹಾರದಲ್ಲಿ ಮಿಮಾಂಸಕರ ಮತವನ್ನೇ ವೇದಾಂತಿಗಳೂ ಒಪ್ಪುತ್ತಾರೆ. ಉಪವರ್ಷಾಚಾರ್ಯನ ವಿಷಯಕ್ಕೆ ಎರಡನೆಯ ಸಂಪುಟದ ಪೀಠಿಕೆಯನ್ನು ನೋಡಿರಿ.

  2. ಅದೇ ಇದು ಎಂದಾಗುವ ಅರಿವಿಗೆ ಪ್ರತ್ಯಭಿಜ್ಞಾನವೆಂದು ಹೆಸರು. ಆಗ ಉಚ್ಚರಿಸಿದ ಗಕಾರವೇ ಇದು ಎಂದು ಗುರುತಿಸುವ ಅರಿವಾಗುವದರಿಂದ ವರ್ಣಗಳಿಗೆ ನಾಶವಿಲ್ಲ ಎಂದು ಭಾವ.

  3. ಅದೇ ಗಕಾರವಿದು ಎಂದು ನಿಶ್ಚಯವಾಗಿ ಗೊತ್ತುಮಾಡಿಕೊಡುವ ಪ್ರತ್ಯಭಿಜ್ಞಾ ಪ್ರತ್ಯಕ್ಷವನ್ನು ಇದು ಸಾದೃಶ್ಯದಿಂದ ಹೀಗೆ ತೋರುತ್ತಿದೆ ಎಂಬ ಅನುಮಾನದಿಂದ ಬಾಧಿಸುವದು ಸರಿಯಲ್ಲ.

  4. ಗೋವುಗಳು ಬೇರೆಬೇರೆಯಾದರೂ ಗೋತ್ವವೆಂಬ ಆಕೃತಿಯು ಒಂದೇ ಆಗಿರುತ್ತದೆ. ಆದ್ದರಿಂದ ಅದೇ ಇದು ಎಂದಾಗುವ ಪ್ರತ್ಯಭಿಜ್ಞೆಗೆ ಗೋತ್ಪಾದಿಗಳ ಏಕತ್ವಜ್ಞಾನವೇ ಮೂಲ, ನಿಜವಾಗಿ ವರ್ಣಗಳು ಬೇರೆಬೇರೆಯೇ ಎಂದು ಭಾವ.

ಅಧಿ. ೮. ಸೂ. ೨೮] ವರ್ಣಗಳು ಬೇರೆಬೇರೆ ಎಂದು ತೋರುವದಕ್ಕೆ ನಿಮಿತ್ತ

೪೬ ಕಿ.

ಒಂದೊಂದು ಉಚ್ಚಾರಣೆಯಲ್ಲಿಯೂ (ಅದೇ ಇದೆಂದು) ಗೊತ್ತಾಗಿ ತಿಳಿಯ ಬರುತ್ತವೆ ? ‘ಗೋಶಬ್ದವನ್ನು ಎರಡು ಸಲ ಉಚ್ಚರಿಸಿದನು’ - ಎಂದೇ ಅರಿವಾ (ಗುತ್ತದೆಯೇ ಹೊರತು ಎರಡು ಗೋಶಬ್ದಗಳನ್ನು (ಉಚ್ಚರಿಸಿದನು) ಎಂದೇನೂ (ಅರಿವಾಗುವ)ದಿಲ್ಲ.

ವರ್ಣಗಳು ಬೇರೆಬೇರೆ ಎಂದು ತೋರುವದಕ್ಕೆ ನಿಮಿತ್ತ

(ಭಾಷ್ಯ) ೨೯೦. ನನು ವರ್ಣಾ ಅಪಿ ಉಚ್ಚಾರಣಭೇದೇನ ಭಿನ್ನಾಃ ಪ್ರತೀಯನೇ ದೇವ ದತ್ತಯಜ್ಞದತ್ತಯೋಃ ಅಧ್ಯಯನಧ್ವನಿಶ್ರವಣಾದೇವ ಭೇದಪ್ರತೀತೇ? ಇತ್ಯುಕ್ತಮ್ | ಅತ್ರ ಅಭಿಧೀಯತೇ | ಸತಿ ವರ್ಣವಿಷಯೇ ನಿಶ್ಚಿತೇ ಪ್ರತ್ಯಭಿಜ್ಞಾನೇ ಸಂಯೋಗ ವಿಭಾಗಾಭಿವ್ಯಜ್ಯತ್ವಾತ್ ವರ್ಣಾನಾಮ್ ಅಭಿವ್ಯಜ್ಞಕವೃಚಿತ್ರನಿಮಿತ್ತ: ಅಯಂ ವರ್ಣ ವಿಷಯಃ ವಿಚಿತ್ರ ಪ್ರತ್ಯಯಃ ನ ಸ್ವರೂಪನಿಮಿತ್ತ: ಅಪಿ ಚ ವರ್ಣವ್ಯಕ್ತಿಭೇದವಾದಿನಾಪಿ ಪ್ರತ್ಯಭಿಜ್ಞಾನಸಿದ್ಧಯೇ ವರ್ಣಾಕೃತಯಃ ಕಲ್ಪಯಿತಾ: 1 ತಾಸು ಚ ಪರೋಪಾಧಿಕೋ ಭೇದಪ್ರತ್ಯಯಃ ಇತಿ ಅಭ್ಯುಪಗಸ್ತವ್ಯಮ್ | ತತ್ ವರಂ ವರ್ಣವ್ಯಕ್ತಿಷ್ಟೇವ ಪರೋಪಾಧಿಕೋ ಭೇದಪ್ರತ್ಯಯಃ ಸ್ವರೂಪನಿಮಿತ್ತಂ ಚ ಪ್ರತ್ಯಭಿಜ್ಞಾನಮ್ ಇತಿ ಕಲ್ಪನಾಲಾಘವಮ್ | ಏಷ ಏವ ಚ ವರ್ಣವಿಷಯಸ್ಯ ಭೇದಪ್ರತ್ಯಯಸ್ಕ ಬಾಧಕಃ ಪ್ರತ್ಯಯಃ, ಯತ್ ಪ್ರತ್ಯಭಿಜ್ಞಾನಮ್ | ಕಥಂ ಹಿ ಏಕಸ್ಮಿನ್ ಕಾಲೇ ಬಹೂನಾಮ್ ಉಚ್ಚಾರಯತಾಮ್ ಏಕ ಏವ ಸನ್ ಗಕಾರಃ ಯುಗಪತ್ ಅನೇಕರೂಪಃ ಸ್ಯಾತ್, ಉದಾತ್ತಶ್ಚ ಅನುದಾತ್ತಶ್ಚ ಸ್ವರಿತಶ್ಚ, ಸಾನುನಾಸಿಕಶ್ಚ ನಿರನುನಾಸಿಕಶ್ಚ ಇತಿ | ಅಥವಾ ಧ್ವನಿಕೃತೋsಯಂ ಪ್ರತ್ಯಯಭೇದೋ ನ ವರ್ಣಕೃತಃ ಇತ್ಯದೋಷಃ | ಕಃ ಪುನರಯಂ ಧ್ವನಿರ್ನಾಮ ? ಯೋ ದೂರಾತ್ ಆಕರ್ಣಯತಃ ವರ್ಣವಿವೇಕಮ್ ಅಪ್ರತಿಪದ್ಯ ಮಾನಸ್ಯ ಕರ್ಣಪಥಂ ಅವತರತಿ | ಪ್ರತ್ಯಾಸೀದತಶ್ಚ ಪಟುಮೃದುತ್ವಾದಿಭೇದಂ ವರ್ಣೆಷು ಆಸಣ್ಮಯತಿ | ತನ್ನಿಬದ್ಧನಾಶ್ಚ ಉದಾತ್ತಾದಯೋ ವಿಶೇಷಾಃ, ನ ವರ್ಣಸ್ವರೂಪನಿಬನ್ದನಾಃ | ವರ್ಣಾನಾಂ ಪ್ರತ್ಯುಚ್ಛಾರಣಮ್ ಪ್ರತ್ಯಭಿಜ್ಞಾಯ ಮಾನತ್ವಾತ್ | ಏವಂ ಚ ಸತಿ ಸಾಲಮೃನಾ ಉದಾತ್ತಾದಿಪ್ರತ್ಯಯಾ ಭವಿಷ್ಯ | ಇತರಥಾ ಹಿ ವರ್ಣಾನಾಂ ಪ್ರತ್ಯಭಿಜ್ಞಾಯಮಾನಾನಾಂ ನಿರ್ಭದತ್ವಾತ್ ಸಂಯೋಗ ವಿಭಾಗಕೃತಾಃ ಉದಾತ್ತಾದಿವಿಶೇಷಾಃ ಕರನ್ | ಸಂಯೋಗವಿಭಾಗಾನಾಂ ಚ ಅಪ್ರತ್ಯಕ್ಷಾತ್ ನ ತದಾಶ್ರಯಾ ವಿಶೇಷಾಃ ವರ್ಣೆಷು ಅಧ್ಯವಸಿತುಂ ಶಕ್ಯ ಇತ್ಯತಃ ನಿರಾಲಮೃನಾ ಏವ ಏತೇ ಉದಾತ್ತಾದಿಪ್ರತ್ಯಯಾಃ ಸ್ಯುಃ | ಅಪಿ ಚ ನೈವ

೪೬೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಏತದಭಿನಿವೇಷ್ಟವ್ಯಮ್ ಉದಾತ್ತಾದಿಭೇದೇನ ವರ್ಣಾನಾಂ ಪ್ರತ್ಯಭಿಜ್ಞಾಯ ಮಾನಾನಾಂ ಭೇದೋ ಭವೇತ್ ಇತಿ ನ ಹಿ ಅನ್ಯಸ್ಯ ಭೇದೇನ ಅನ್ಯಸ್ಯ ಅಭಿದ್ಯಮಾನಸ್ಯ ಭೇದೋ ಭವಿತುಮರ್ಹತಿ | ನ ಹಿ ವ್ಯಕ್ತಿಭೇದೇನ ಜಾತಿಂ ಭಿನ್ನಾಂ ಮನ್ಯನ್ತೇ ||

(ಭಾಷ್ಯಾರ್ಥ) (ಆಕ್ಷೇಪ) :- ವರ್ಣಗಳೂ ಬೇರೆಬೇರೆಯ ಉಚ್ಚಾರಣೆಯಲ್ಲಿ ಬೇರೆಬೇರೆ ಯಾಗಿ ತೋರುತ್ತವೆಯಲ್ಲವೆ ? ಏಕೆಂದರೆ ದೇವದತ್ತ, ಯಜ್ಞದತ್ತ - (ಇಬ್ಬರೂ) ಮಾಡುವ ಅಧ್ಯಯನದ ಧ್ವನಿಯನ್ನು ಕೇಳುವದರಿಂದಲೇ (ವರ್ಣಗಳು) ಬೇರೆ ಬೇರೆಯಾಗಿ ತೋರುತ್ತವೆ ಎಂದು (ಹಿಂದೆ) ಹೇಳಿದ್ದೆವಲ್ಲ !

(ಪರಿಹಾರ) :- ಇದಕ್ಕೆ (ಸಮಾಧಾನವನ್ನು) ಹೇಳುತ್ತೇವೆ. ವರ್ಣವಿಷಯದ ಪ್ರತ್ಯಭಿಜ್ಞಾನ(ವಿದೆಂದು) ನಿಶ್ಚಯವಾಗುವದರಿಂದ, ವರ್ಣಗಳು ಸಂಯೋಗವಿಭಾಗ ಗಳಿಂದ ಅಭಿವ್ಯಕ್ತವಾಗುವ (ಕಾರಣ)ದಿಂದ ಅಭಿವ್ಯಂಜಕ (ವಾಯುವಿನ) ವೈಚಿತ್ರ್ಯದ ನಿಮಿತ್ತದಿಂದ ವರ್ಣವಿಷಯದಲ್ಲಿ ಈ ಬೇರೆಬೇರೆಯದೆಂಬ ಪ್ರತ್ಯಯವಾಗುವದೇ ಹೊರತು (ವರ್ಣಗಳ) ಸ್ವರೂಪದ ನಿಮಿತ್ತದಿಂದ ಆಗುವದಿಲ್ಲ (ಎನ್ನಬೇಕು). ಇದಲ್ಲದೆ ವರ್ಣವ್ಯಕ್ತಿಗಳು ಬೇರೆಬೇರೆ ಎಂಬ ವಾದಿಯೂ ಪ್ರತ್ಯಭಿಜ್ಞಾನದ ಸಿದ್ಧಿಗಾಗಿ ವರ್ಣಗಳ ಆಕೃತಿಗಳನ್ನು ಕಲ್ಪಿಸಬೇಕಾಗುವದು ; ಮತ್ತು (ಹಾಗೆ ಕಲ್ಪಿಸಿದ) ಆ (ಆಕೃತಿ) ಗಳಲ್ಲಿ ಮತ್ತೊಂದು ಉಪಾಧಿಯಿಂದ ಬೇರೆಬೇರೆ ಎಂಬ ಅರಿವಾಗುತ್ತದೆ ಎಂದು ಇಟ್ಟುಕೊಳ್ಳಬೇಕಾಗುವದು. ಆದ್ದರಿಂದ (ಅದಕ್ಕಿಂತ) ವರ್ಣವ್ಯಕ್ತಿಗಳಲ್ಲಿಯೇ ಮತ್ತೊಂದು ಉಪಾಧಿಯಿಂದ ಭೇದಪ್ರತ್ಯಯವಾಗುವದೆಂದೂ (ಅವುಗಳ) ಸ್ವರೂಪ ನಿಮಿತ್ತದಿಂದ ಪ್ರತ್ಯಭಿಜ್ಞಾನ(ವಾಗುವ)ದಂದೂ ಕಲ್ಪನೆಯಲ್ಲಿ ಲಾಘವವನ್ನು (ಇಟ್ಟು ಕೊಳ್ಳುವದೇ) ಮೇಲು.” ಭೇದಪ್ರತ್ಯಯವು ವರ್ಣವಿಷಯವಾದದ್ದು ಎಂಬುದಕ್ಕೆ (ಅದೇ ವರ್ಣವಿದು ಎಂಬ) ಪ್ರತ್ಯಭಿಜ್ಞಾನವೆಂಬುದೇ ಬಾಧಕವಾಗಿರುತ್ತದೆ. (ಹಾಗಿಲ್ಲ ದಿದ್ದರೆ) ಒಂದೇ ಕಾಲದಲ್ಲಿ ಅನೇಕರು ಉಚ್ಚರಿಸುತ್ತಿರುವಲ್ಲಿ ಗಕಾರವು (ತಾನು ಒಂದೇ ಆಗಿದ್ದು ಕೊಂಡೇ ಉದಾತ್ತವೂ ಅನುದಾತ್ತವೂ ಸ್ವರಿತವೂ ಸಾನುನಾಸಿಕವೂ ನಿರನುನಾಸಿಕವೂ (ಆಗಿದೆ) ಎಂದು ಒಂದೇಕಾಲಕ್ಕೆ ಅನೇಕರೂಪವುಳ್ಳದ್ದಾಗುವದು

  1. ವಾಯುವಿಗೂ ಅಕ್ಷರಗಳು ತೋರಿಕೊಳ್ಳುವ ತಾಲ್ಯಾದಿಸ್ಥಾನಗಳಿಗೂ ಸಂಯೋಗವೂ ವಿಭಾಗವೂ ಆಗುವದರಿಂದ ಈ ಭೇದಜ್ಞಾನವಾಗುತ್ತದೆ ಎಂದರ್ಥ.

  2. ಗಕಾರಗಳನ್ನೂ ಕಲ್ಪಿಸಿ ಗತ್ವವನ್ನೂ ಕಲ್ಪಿಸಿ ಗತ್ವದಲ್ಲಿ ಬೇರೊಂದು ಉಪಾಧಿಯಿಂದ ಭೇದಜ್ಞಾನವಾಗುವದಂದು ಕಲ್ಪಿಸುವದರಲ್ಲಿ ಗೌರವವಿದೆ ; ಒಂದೇ ಗಕಾರವೇ ಉಪಾಧಿವಶದಿಂದ ಬೇರೆಬೇರೆಯಾಗಿ ತೋರುತ್ತದೆ ಎಂದು ಕಲ್ಪಿಸುವದರಲ್ಲಿ ಲಾಘವವಿದೆ.

೪೬೫

ಅಧಿ. ೮. ಸೂ. ೨೮] ವರ್ಣಗಳು ಬೇರೆಬೇರೆ ಎಂದು ತೋರುವದಕ್ಕೆ ನಿಮಿತ್ತ ಹೇಗೆತಾನೆ (ಸರಿ ಹೋದೀತು)’? ಅಥವಾ ಈ ಪ್ರತ್ಯಯಭೇದವು ಧ್ವನಿಯಿಂದಾದದ್ದು, ವರ್ಣನಿಮಿತ್ತವಾದದ್ದಲ್ಲ ; ಆದ್ದರಿಂದ (ಈ ನಮ್ಮ ವಾದದಲ್ಲಿ ಯಾವ ) ದೋಷವೂ

ಇಲ್ಲ.3

(ಪ್ರಶ್ನೆ) :- ಹಾಗಾದರೆ ಈ ಧ್ವನಿ ಎಂಬುದು ಯಾವದು ?

(ಉತ್ತರ) :- ದೂರದಿಂದ ಕೇಳುವಾಗ ವರ್ಣವನ್ನು (ಇಂಥದ್ದೆಂದು) ವಿಂಗಡಿಸಿ ಅರಿಯದೆ ಇರುವವನ ಕಿವಿಯ ಬದಿಗೆ ಬೀಳುವದಲ್ಲ, ಹತ್ತಿರಹತ್ತಿರಕ್ಕೆ ಬರುತ್ತಿರುವಾಗ ಗಟ್ಟಿ, ಮೆದು - ಎಂಬುದೇ ಮುಂತಾದ ಭೇದಗಳನ್ನು ವರ್ಣಗಳಿಗೆ ಅಂಟಿಸುವದಲ್ಲ, (ಅದೇ ಧ್ವನಿಯು) . ಅದರ ನಿಮಿತ್ತದಿಂದಲೇ ಉದಾತ್ತಾದಿವಿಶೇಷಗಳು (ತೋರುವವೇ ಹೊರತು) ವರ್ಣಗಳ ಸ್ವರೂಪದ ನಿಮಿತ್ತದಿಂದ (ತೋರುವದಿಲ್ಲ) ; ಏಕೆಂದರೆ ವರ್ಣ ಗಳನ್ನು ಪ್ರತಿಯೊಂದು ಉಚ್ಚಾರಣೆಯಲ್ಲಿಯೂ (ಅವೇ) ಎಂದು ಗುರುತುಹಿಡಿಯು ತೇವೆ. ಮತ್ತು ಹೀಗಾದರೆ ಉದಾತ್ತವೇ ಮುಂತಾದ ಪ್ರತ್ಯಯಗಳಿಗೆ ವಿಷಯವಿದೆ ಎಂದಾಗುವದು. ಹಾಗಿಲ್ಲದಿದ್ದರೆ (ಅವೇ) ಎಂದು ಗುರುತುಹಿಡಿಯುವ ವರ್ಣಗಳಲ್ಲಿ (ಯಾವ) ಭೇದವೂ ಇಲ್ಲದಿರುವದರಿಂದ ಉದಾತ್ತಾದಿವಿಶೇಷಗಳು ಸಂಯೋಗವಿಭಾಗ ಗಳಿಂದಾಗುವವೆಂದು ಕಲ್ಪಿಸಬೇಕಾಗುವದು. ಮತ್ತು ಸಂಯೋಗವಿಭಾಗಗಳು ಪ್ರತ್ಯಕ್ಷ ವಲ್ಲವಾದ್ದರಿಂದ ಅವುಗಳನ್ನು ಆಶ್ರಯಿಸಿರುವ ವಿಶೇಷಗಳು ವರ್ಣಗಳಲ್ಲಿ (ವ ಎಂದು) ನಿಶ್ಚಯಿಸುವದು ಆಗಲಾರದು ; ಆದ್ದರಿಂದ ಈ ಉದಾತ್ತಾದಿಪ್ರತ್ಯಯಗಳು ನಿರ್ವಿಷಯವಾಗಿಯೇ ಇರಬೇಕಾಗುವದು. ಇದೂ ಅಲ್ಲದೆ ಉದಾತ್ತವೇ ಮುಂತಾದ

1.ರತ್ನಪ್ರಭಾತ್ಯಾಯನಿರ್ಣಯಗಳನ್ನನುಸರಿಸಿ ಈ ವಾಕ್ಯವನ್ನು ಕನ್ನಡಿಸಿದೆ.ಗಕಾರವು ಒಂದೇ ಎಂದು ಪ್ರತ್ಯಭಿಜ್ಞೆಯಿಂದ ನಿಶ್ಚಿತವಾಗಿರುವದರಿಂದ ಅದರಲ್ಲಿ ತೋರುವ ಭೇದವು ಔಪಾಧಿಕವೆಂದು ಕಲ್ಪಿಸುವದೇ ಯುಕ್ತ - ಎಂಬುದು ಆ ವ್ಯಾಖ್ಯಾನಕಾರರ ಅರ್ಥ. ಭಾಮತೀ ವ್ಯಾಖ್ಯಾನದಲ್ಲಿ ಇದು ಪ್ರತ್ಯಭಿಜ್ಞಾನದ ವಿಷಯಕ್ಕೆ ಶಂಕೆ ; ಮುಂದಿನ ವಾಕ್ಯವು ಇದಕ್ಕೆ ಪರಿಹಾರ.

  1. ವರ್ಣಗಳಲ್ಲಿ ಇದು ಉದಾತ್ತವು, ಇದು ಅನುದಾತ್ತವು - ಎಂದು ಮುಂತಾಗಿ ಆಗುವ ಬೇರೆಬೇರೆಯ ಜ್ಞಾನವು.

  2. ವರ್ಣಸ್ವರೂಪದಲ್ಲಿ ಯಾವ ಭೇದವೂ ಇಲ್ಲದ್ದರಿಂದ ವರ್ಣಗಳೇ ಶಬ್ದವೆಂಬ ಪಕ್ಷದಲ್ಲಿ ಶಬ್ದವು ಅನಿತ್ಯವಾಗುವದಿಲ್ಲ.

  3. ಧ್ವನಿಯೇ ವರ್ಣಗಳಲ್ಲಿ ತೋರಿಬರುವ ಉದಾತ್ತಾದಿಭೇದಕ್ಕೆ ನಿಮಿತ್ತವೆಂದು ಒಪ್ಪಿದರೆ.

  4. ವಾಯುವಾಗಲಿ, ವಾಯುಸಂಯೋಗವಾಗಲಿ, ವಾಯುವಿಭಾಗವಾಗಲಿ, ಶ್ರಾವಣ ಪ್ರತ್ಯಕ್ಷವಲ್ಲ.

೪೬೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಭೇದದಿಂದ ಅವೇ ಇವೆಂದು ಗುರುತಿಸಿ ಅರಿಯುವದಕ್ಕಾಗುವ ವರ್ಣಗಳಲ್ಲಿ ಭೇದ ವುಂಟಾಗುವದೆಂದು ಹಠವನ್ನು ಹಿಡಿಯಲೇಬಾರದು. ಏಕೆಂದರೆ ಒಂದರ ಭೇದದಿಂದ ಅಭಿನ್ನವಾಗಿರುವ ಮತ್ತೊಂದಕ್ಕೆ ಭೇದವು ಉಂಟಾಗಲಾರದು. ವ್ಯಕ್ತಿಯು ಬೇರೆಬೇರೆ ಯಾದರೆ ಜಾತಿಯೂ ಭಿನ್ನವಾಯಿತೆಂದು (ಯಾರೂ) ಭಾವಿಸುವದಿಲ್ಲವಷ್ಟೆ.

‘‘ಒಂದು ಶಬ್ದ” ಎಂಬ ಬುದ್ದಿಗೆ ವರ್ಣಗಳೇ ವಿಷಯ

(ಭಾಷ್ಯ) ೨೯೧.ವರ್ಣಭ್ಯಶ್ಚ ಅರ್ಥಪ್ರತೀತೇ? ಸಂಭವಾತ್ ಸ್ಫೋಟಕಲ್ಪನಾ ಅನರ್ಥಿಕಾ | ನ ಕಲ್ಪಯಾಮ್ಯಹಂ ಸ್ಫೋಟಮ್, ಪ್ರತ್ಯಕ್ಷಮೇವ ತೋನಮ್ ಅವಗಚ್ಛಾಮಿ | ಏಕೈಕವರ್ಣಗ್ರಹಣಾಹಿತಸಂಸ್ಕಾರಾಯಾಂ ಬುದ್ದಾ ಝಟಿತಿ ಪ್ರತ್ಯವಭಾಸನಾತ್ ಇತಿ ಚೇತ್ | ನ | ಅಸ್ಯಾ ಅಪಿ ಬುದ್ಧರ್ವಣ್ರವಿಷಯತ್ವಾತ್ | ಏಕವರ್ಣ ಗ್ರಹಣೋತ್ತರಕಾಲಾ ಹಿ ಇಯಮ್ ಏಕಾ ಬುದ್ದಿ: ಗೌರಿತಿ ಸಮಸ್ತ ವರ್ಣವಿಷಯಾ, ನಾರ್ಥಾನ್ನರವಿಷಯಾ | ಕಥಮೇತತ್ ಅವಗಮ್ಮತೇ ? ಯತಃ ಅಸ್ಕಾಮಪಿ ಬುದ್ದ ಗಕಾರಾದಯೋ ವರ್ಣಾಃ ಅನುವರ್ತನ ತುದಕಾರಾದಯಃ | ಯದಿ ಹಿಅಸ್ಕಾ ಬುದ್ಧಃ ಗಕಾರಾದಿಭ್ಯರ್ಥಾವರಂ ಸ್ಪೋಟೋ ವಿಷಯಃ ಸ್ಯಾತ್, ತತೋ ದಕಾರಾದಯ ಇವ ಗಕಾರಾದಯೋಪಿ ಅಸ್ಕಾ ಬುದ್ದೇರ್ವ್ಯಾವರ್ತರನ್ | ನ ತು ತಥಾ ಅಸ್ತಿ | ತಸ್ಮಾತ್ ಇಯಮೇಕಬುದ್ದಿ: ವರ್ಣವಿಷಯ್ಯವ ಸ್ಮತಿಃ | ನನು ಅನೇಕತ್ವಾದ್ ವರ್ಣಾನಾಂ ನೈಕಬುದ್ಧಿ ವಿಷಯತಾ ಉಪಪದ್ಯತ ಇತ್ಯುಕ್ತಮ್ | ತತ್ ಪ್ರತಿ ಬ್ಯೂಮಃ | ಸಂಭವತಿ ಅನೇಕಸ್ಕಾಪಿ ಏಕಬುದ್ದಿ ವಿಷಯತ್ವಮ್ | ಪಜ್, ವನಮ್, ಸೇನಾ, ದಶ, ಶತಮ್, ಸಹಸ್ರಮ್ ಇತ್ಯಾದಿದರ್ಶನಾತ್ | ಯಾ ತು ಗೌರಿತಿ ಏಕೋಯಂ ಶಬ್ದಃ ಇತಿ ಬುದ್ಧಿ, ಸಾ ಬಹುವ ವರ್ಣಷು ಏಕಾರ್ಥಾವಚ್ಛೇದ ನಿಬನ್ಧನಾ ಔಪಚಾರಿಕೀ ವನಸೇನಾದಿಬುದ್ಧಿವದೇವ | ಅತ್ರಾಹ - ಯದಿ ವರ್ಣಾ ಏವ ಸಾಮನ ಏಕಬುದ್ಧಿ ವಿಷಯತಾಮ್ ಆಪದ್ಯಮಾನಾಃ ಪದಂ ಸ್ಯುಃ, ತತೋ ಜಾರಾ ರಾಜಾ, ಕಪಿಸಿ, ಏಕಃ, ಇತ್ಯಾದಿಷು ಪದವಿಶೇಷಪ್ರತಿಪತ್ತಿರ್ನ ಸ್ಮಾತ್, ತ ಏವ ಹಿ ವರ್ಣಾಃ ಇತರತ್ರ ಚ ಇತರತ್ರ ಚ ಪ್ರತ್ಯವಭಾಸ ಇತಿ | ಅತ್ರ ವದಾಮಃ | ಸತ್ಯಪಿ ಸಮಸ್ತವರ್ಣಪ್ರತ್ಯವಮರ್ಶ ಯಥಾ ಕ್ರಮಾನುರೋಧಿನ್ಯ ಏವ ‘ಪಿಪಿಲಿಕಾಃ ಪಜ್ಬುದ್ಧಿಮ್ ಆರೋಹ, ಏವಂ ಕ್ರಮಾನುರೋಧಿನ ಏವ ವರ್ಣಾಃ

  1. ಹಸುಗಳು ಬೇರೆಬೇರೆಯಾದರೂ ಗೋತ್ವವೆಂಬ ಜಾತಿಯು ಅವಕ್ಕೆಲ್ಲ ಸಮಾನ ವಾಗಿರುತ್ತದೆ.

ಅಧಿ. ೮. ಸೂ. ೨೮] ‘‘ಒಂದು ಶಬ್ದ” ಎಂಬ ಬುದ್ಧಿಗೆ ವರ್ಣಗಳೇ ವಿಷಯ ೪೬೭ ಪದಬುದ್ಧಿಮ್ ಆರೋಗ್ಯ | ತತ್ರ ವರ್ಣಾನಾಮ್ ಅವಿಶೇಷೇಪಿ ಕ್ರಮವಿಶೇಷಕ್ರತಾ ಪದವಿಶೇಷಪ್ರತಿಪತ್ತಿ ನ ವಿರುಧ್ಯತೇ | ವೃದ್ಧವ್ಯವಹಾರೇ ಚ ಇಮೇ ವರ್ಣಾಃ ಕ್ರಮಾದ್ಯನುಗೃಹೀತಾಃ ಗೃಹೀತಾರ್ಥವಿಶೇಷಸಂಬಸ್ಥಾಃ ಸನ್ನಃ ಸ್ವವ್ಯವಹಾರೇಪಿ ಏಕೈಕವರ್ಣಗ್ರಹಣಾನನ್ತರಂ ಸಮಸ್ತಪ್ರತ್ಯವಮರ್ಶಿನ್ಯಾಂ ಬುದ್ಧ ತಾದೃಶಾ ಏವ ಪ್ರತ್ಯವಭಾಸಮಾನಾಃ, ತಂ ತಮ್ ಅರ್ಥಮ್ ಅವ್ಯಭಿಚಾರೇಣ ಪ್ರತ್ಯಾಯಯಿಷ್ಯ ಇತಿ ವರ್ಣವಾದಿನೋ ಲಫೀಯಸೀ ಕಲ್ಪನಾ | ಸ್ಫೋಟವಾದಿನಸ್ತು ದೃಷ್ಟಹಾನಿಃ ಅದೃಷ್ಟ ಕಲ್ಪನಾ ಚ | ವರ್ಣಾಶ್ಚ ಇಮೇ ಕ್ರಮೇಣ ಗೃಹ್ಯಮಾಣಾಃ ಸ್ಫೋಟಂ ವ್ಯಣ್ಣ ಯ, ಸ ಸ್ಪೋಟೋರ್ಥಂ ವ್ಯವಕ್ತಿ ಇತಿ ಗರೀಯಸೀ ಕಲ್ಪನಾ ಸ್ಯಾತ್ | ಅಥಾಪಿ ನಾಮ ಪ್ರತ್ಯುಚ್ಚಾರಣಮ್ ಅನ್ನೇ ವರ್ಣಾಃ ಸ್ಯುಃ, ತಥಾಪಿ ಪ್ರತ್ಯಭಿಜ್ಞಾಲಮ್ಮನ ಭಾವೇನ ವರ್ಣಸಾಮಾನ್ಯಾನಾಮ್ ಅವಶ್ಯಾಭ್ಯುಪಗವ್ರವ್ಯತ್ವಾತ್ ಯಾ ವರ್ಣೆಷು ಅರ್ಥಪ್ರತಿಪಾದನಪ್ರಕ್ರಿಯಾ ರಚಿತಾ ಸಾ ಸಾಮಾನ್ಯಷು ಸಂಚಾರಯಿತವ್ಯಾ | ತತಶ್ಚ ನಿತ್ಯೇಭ್ಯಃ ಶಬ್ದಭ್ರೂ ದೇವಾದಿವ್ಯಕ್ತಿನಾಂ ಪ್ರಭವಃ ಇತಿ ಅವಿರುದ್ಧಮ್ ||

(ಭಾಷ್ಯಾರ್ಥ) ಮತ್ತು ವರ್ಣಗಳಿಂದಲೇ ಅರ್ಥವು ತೋರಬಹುದಾಗಿರುವದರಿಂದ ಸ್ಫೋಟ ವನ್ನು ಕಲ್ಪಿಸುವದು ವ್ಯರ್ಥವು.

(ಸ್ಫೋಟವಾದಿ) :- ನಾನು ಸ್ಕೂಟವನ್ನು ಕಲ್ಪಿಸುತ್ತಿಲ್ಲ, ಆದರೆ ಅದನ್ನು ಪ್ರತ್ಯಕ್ಷವಾಗಿಯೇ ಅರಿಯುತ್ತಿದೇನೆ. ಏಕೆಂದರೆ ಒಂದೊಂದು ವರ್ಣವನ್ನು ಅರಿತದ್ದ ರಿಂದಾದ ಸಂಸ್ಕಾರವುಳ್ಳ ಬುದ್ಧಿಯಲ್ಲಿ (ಸ್ಫೋಟವು ತಾನೇ) ತಟ್ಟನೆ ಹೊಳೆಯು ತದೆ.

(ಸಿದ್ಧಾಂತ) :- ಇಲ್ಲ. ಏಕೆಂದರೆ ಈ (ಶಬ್ದ )ಬುದ್ದಿಯೂ ವರ್ಣ (ಗಳ) ವಿಷಯದ್ದಾಗಿರುತ್ತದೆ. ಒಂದೊಂದು ವರ್ಣವನ್ನು ಅರಿತಮೇಲೆಯ ಆಗುವ (ಗೌಃ) ಗೋವೆಂಬ ಈ ಒಂದು ಬುದ್ದಿಯೂ (ಒಟ್ಟು) ಎಲ್ಲಾ ವರ್ಣಗಳ ವಿಷಯದಲ್ಲಿ (ಉಂಟಾಗುವದೇ ಹೊರತು) ಮತ್ತೊಂದು ವಸ್ತುವಿನ ವಿಷಯವಾಗಿ ಉಂಟಾಗುವ)ದಿಲ್ಲ.

(ಸ್ಫೋಟವಾದಿ) :- ಇದು ಹೇಗೆ ಗೊತ್ತಾಯಿತು ?

(ಸಿದ್ಧಾಂತಿ) :- ಏಕೆಂದರೆ ಈ ಬುದ್ದಿಯಲ್ಲಿಯೂ ಗಕಾರಾದಿವರ್ಣಗಳು ಅನುಸರಿಸಿಕೊಂಡೇ ಬಂದಿರುತ್ತವೆಯೇ ಹೊರತು ದಕಾರಾದಿಗಳು ಬಂದಿರುವದಿಲ್ಲ. ಈ ಬುದ್ದಿಗೆ ಗಕಾರಾದಿಗಳನ್ನು ಬಿಟ್ಟು ಬೇರೊಂದು ವಸ್ತುವಾದ ಸ್ಕೂಟವು ವಿಷಯ ವಾಗಿದ್ದರೆ ಆಗ ದಕಾರಾದಿಗಳಂತ ಗಕಾರಾದಿಗಳೂ ಈ ಬುದ್ದಿಯನ್ನು ಬಿಟ್ಟುಹೋಗ

೪೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಬೇಕಾಗಿತ್ತು. ಆದರೆ ಹಾಗಿಲ್ಲ. ಆದ್ದರಿಂದ ಈ ಒಂದೆಂಬ ಬುದ್ದಿಯು ವರ್ಣಗಳ ವಿಷಯವಾಗಿಯೇ (ಆಗಿರುವ) ಸ್ಮತಿಯು.

(ಸ್ಫೋಟವಾದಿ) :- ವರ್ಣಗಳು ಅನೇಕವಾಗಿರುವದರಿಂದ (ಅವು) ಒಂದೆಂಬ ಬುದ್ದಿಗೆ ವಿಷಯವಾಗಲಾರವೆಂದು ಹೇಳಿದ್ದೇನಲ್ಲ !

(ಸಿದ್ಧಾಂತಿ) :- ಅದಕ್ಕೆ ಉತ್ತರವನ್ನು ಹೇಳುತ್ತೇವೆ. ಅನೇಕವಾಗಿರುವದಕ್ಕೂ ಒಂದಂಬ ಬುದ್ದಿಗೆ ವಿಷಯವಾಗಿರುವದೆಂಬುದು ಹೊಂದುತ್ತದೆ. ಏಕೆಂದರೆ ಸಾಲು, ಕಾಡು, ಸೇನೆ, ಹತ್ತು, ನೂರು, ಸಾವಿರ - ಮುಂತಾದ (ಬುದ್ಧಿಗಳೂ) ಕಾಣಬರುತ್ತವೆ. ಗೌಃ ಎಂಬುದು ಒಂದೇ ಶಬ್ದವು ಎಂಬ ಬುದ್ದಿಯಿದೆಯಲ್ಲ, ಅದಾದರೋ ವನ, ಸೇನೆ - ಮುಂತಾದ ಬುದ್ದಿಗಳಂತೆಯೇ ಅನೇಕ ವರ್ಣಗಳಲ್ಲಿಯೇ ಒಂದೇ ಅರ್ಥವನ್ನು ತಿಳಿಸುವ ನಿಮಿತ್ತದಿಂದ ಆಗಿರುವ ಗೌಣ(ಬುದ್ದಿಯು).’

  • (ಆಕ್ಷೇಪ) :- ಇಲ್ಲಿ (ಆಕ್ಷೇಪಕನು) ಹೇಳುತ್ತಾನೇನೆಂದರೆ, ವರ್ಣಗಳೇ ಒಟ್ಟುಗೂಡಿ ಒಂದೆಂಬ ಬುದ್ಧಿಗೆ ವಿಷಯವಾಗಿ ಪದವಾಗುತ್ತವೆಯಾದರೆ, ಆಗ ಜಾರಾ, ರಾಜಾ, ಕಪಿಃ, ಏಕಃ – ಮುಂತಾದವುಗಳಲ್ಲಿ (ಇದು) ಬೇರೆಬೇರೆಯ ಪದ ಎಂಬ ಅರಿವು ಆಗದಹೋಗಬೇಕಾಗುವದು. ಏಕೆಂದರೆ ಅವೇ ವರ್ಣಗಳೇ ಅಲ್ಲಿಯೂ ಇಲ್ಲಿಯೂ ತೋರುತ್ತಿರುತ್ತವೆ.

(ಪರಿಹಾರ) :- ಇದಕ್ಕೆ (ಪರಿಹಾರವನ್ನು) ಹೇಳುತ್ತೇವೆ. ಒಟ್ಟು ವರ್ಣಗಳ ಪರಾಮರ್ಶವೇ (ಎರಡು ಕಡೆಯಲ್ಲಿಯೂ) ಇದ್ದರೂ ಹೇಗೆ ಕ್ರಮವನ್ನನುಸರಿಸಿರುವ ಇರುವೆಗಳೇ ಸಾಲು ಎಂಬ ಬುದ್ದಿಗೆ ಹತ್ತುವವೋ ಹಾಗೆಯೇ (ಒಂದಾನೊಂದು) ಕ್ರಮವನ್ನನುಸರಿಸಿರುವ ವರ್ಣಗಳೇ ಪದ ಎಂಬ ಬುದ್ಧಿಗೆ ಹತ್ತುವವು. (ಹೀಗಿರು)ವಲ್ಲಿ ಎರಡು (ಕಡೆಯಲ್ಲಿಯೂ) ವರ್ಣಗಳು ಬೇರೆಯಲ್ಲದಿದ್ದರೂ ಒಂದೊಂದು ಕ್ರಮ ದಿಂದಾಗಿ ಒಂದೊಂದು ಪದವೆಂಬ ಬುದ್ದಿ (ಯುಂಟಾಗುವದು) ವಿರುದ್ಧವಲ್ಲ. ಮತ್ತು ದೊಡ್ಡವರ ವ್ಯವಹಾರದಲ್ಲಿ ಈ ವರ್ಣಗಳು ಕ್ರಮವೇ ಮುಂತಾದವುಗಳ ಅನುಗ್ರಹದಿಂದ ಒಂದೊಂದು ಅರ್ಥದೊಡನೆ ಸಂಬಂಧವುಳ್ಳವೆಂದು ತಿಳಿದುಬರುವದ ರಿಂದ ತನ್ನ ವ್ಯವಹಾರದಲ್ಲಿಯೂ ಒಂದೊಂದು ವರ್ಣವನ್ನು ಗ್ರಹಿಸಿದ ಬಳಿಕ ಎಲ್ಲವನ್ನೂ ಪರಾಮರ್ಶಿಸುವ ಬುದ್ದಿಯಲ್ಲಿ ಹಾಗೆಯೇ ತೋರುವದರಿಂದ ಆಯಾ

  1. ವರ್ಣಗಳು ಅನೇಕವಾಗಿರುವದರಿಂದ ಅವುಗಳಿಂದ ‘ಇವು ಅನೇಕ’ ಎಂಬ ಬುದ್ದಿ ಯುಂಟಾಗಬೇಕಾದರೂ ಒಂದೇ ವಸ್ತುವನ್ನು ತಿಳಿಸುವದರಿಂದ ಇದು ಒಂದು ಪದ’ ಎಂದು ಗೌಣವ್ಯವಹಾರವಾಗಿರುತ್ತದೆ ಎಂದು ಭಾವ.

2.ಜಾರಾಎಂಬುದು ವರ್ಣಗಳ ಒಂದು ಕ್ರಮದಿಂದ ಒಂದುಪದವಾಗಿದೆ ;ರಾಜಾ ಎಂಬುದು ಮತ್ತೊಂದು ಕ್ರಮದಿಂದ ಮತ್ತೊಂದು ಪದವಾಗಿದೆ.

ಅಧಿ. ೮. ಸೂ. ೨೯] ಜಗತ್ತು ಶಬ್ದ ಪ್ರಭವವೆಂಬ ವಾದದಿಂದ ವೇದನಿತ್ಯತ್ವಕ್ಕೆ ಬಲ ೪೬೯ ಅರ್ಥವನ್ನು ತಪ್ಪದೆ ತಿಳಿಸುತ್ತವೆ’ - ಎಂಬುದರಿಂದ ವರ್ಣವಾದಿಯ ಕಲ್ಪನೆಯು ಲಘುತರವಾಗಿರುತ್ತದೆ. ಆದರೆ ಸ್ಫೋಟವಾದಿಗೆ ಕಂಡದ್ದನ್ನು ಬಿಡುವದು, ಮತ್ತು ಕಾಣದೆ ಇದ್ದದ್ದನ್ನು ಕಲ್ಪಿಸುವದು’ - (ಎಂಬ ದೋಷವುಂಟಾಗುವದು) ; ಮತ್ತು ಈ ವರ್ಣಗಳು (ಒಂದು) ಕ್ರಮದಿಂದ ತಿಳಿಯಬಂದಾಗ ಸ್ಫೋಟವನ್ನು ಅಭಿವ್ಯಕ್ತಿ ಗೊಳಿಸುವವೆಂದೂ ಆ ಸ್ಫೋಟವು ಅರ್ಥವನ್ನು ತೋರಿಸುವದೆಂದೂ (ಹೇಳಬೇಕಾಗಿರು ವದರಿಂದ) ಗುರುತರವಾದ ಕಲ್ಪನೆಯು (ಬೇಕಾಗುವದು.

ಒಂದು ವೇಳೆ, ಒಂದೊಂದು ಉಚ್ಚಾರಣೆಯಲ್ಲಿ (ಯೂ) ಬೇರೆಬೇರೆಯ ವರ್ಣಗಳೇ ಉಂಟಾಗುವವು ಎಂದಾದರೂ ಆಗಲೂ (ಅವೇ ಇವು) ಎಂಬ ಪ್ರತ್ಯಭಿಜ್ಞೆಗೆ ವಿಷಯವಾಗಿ ವರ್ಣಸಾಮಾನ್ಯಗಳನ್ನು ಅವಶ್ಯವಾಗಿ ಒಪ್ಪಲೇಬೇಕಾಗುವದರಿಂದ, ವರ್ಣಗಳು ಅರ್ಥವನ್ನು ತಿಳಿಸುವವೆಂಬ ಪ್ರಕ್ರಿಯೆಯನ್ನು (ಮೇಲೆ) ರಚಿಸಿತ್ತಲ್ಲ, ಆ (ಪ್ರಕ್ರಿಯೆ)ಯನ್ನು ಸಾಮಾನ್ಯಗಳಿಗೆ ಸೇರಿಸಬಹುದು. ಅದರಿಂದಲೂ ನಿತ್ಯವಾದ ಶಬ್ದಗಳಿಂದ ದೇವಾದಿವ್ಯಕ್ತಿಗಳು ಉಂಟಾಗುವವೆಂಬುದು ವಿರುದ್ಧವಲ್ಲ.

ಜಗತ್ತು ಶಬ್ದ ಪ್ರಭವವೆಂಬ ವಾದದಿಂದ ವೇದನಿತ್ಯತ್ವಕ್ಕೆ ಬಲ

  • ಅತ ಏವ ಚ ನಿತ್ಯತ್ವಮ್ ||೨೯|| ೨೯. ಆದ್ದರಿಂದಲೇ (ವೇದಕ್ಕೆ) ನಿತ್ಯತ್ವವು.
  1. ಒಬ್ಬನು ಉಚ್ಚರಿಸಿದ ಒಂದು ಕ್ರಮವುಳ್ಳ ಇಂತಿಷ್ಟು ಸಂಖ್ಯೆಯ ವರ್ಣಗಳಿಂದ ಮತ್ತೊಬ್ಬನು ಇಂಥ ಪದಾರ್ಥವೆಂದು ಅರ್ಥಮಾಡಿಕೊಂಡನೆಂದು ಅವನ ವ್ಯವಹಾರದಿಂದ ಗೊತ್ತಾಗುವದರಿಂದ ತಾನು, ಮತ್ತೊಬ್ಬರು ಉಚ್ಚರಿಸಿರುವ ವರ್ಣಗಳನ್ನು ಕೇಳುವಾಗಲೂ ಅದೇ ವಸ್ತುವೇ ಆ ವರ್ಣಗಳ ಅರ್ಥವೆಂದು ಗ್ರಹಿಸುತ್ತಾನೆ ಎಂದು ಅರ್ಥ.

  2. ವರ್ಣಗಳು ಅರ್ಥವನ್ನು ತಿಳಿಸುವವೆಂದು ಕಂಡಿರುವದನ್ನು ಬಿಡುವದು, ಕಾಣದಿದ್ದ ಸ್ಫೋಟವನ್ನು ಕಲ್ಪಿಸುವದು.

  3. ವರ್ಣಗಳು ಅರ್ಥಬೋಧಕವಾಗಿವೆಯಾದ್ದರಿಂದ ಸ್ಕೂಟವು ಬೇಕಾಗಿಲ್ಲ ಎಂದು ಮುಂತಾಗಿ ಮೇಲೆ ಹೇಳಿರುವ ಯುಕ್ತಿಯನ್ನು ವರ್ಣಸಾಮಾನ್ಯಗಳಿಗೆ ಹೊಂದಿಸಿಕೊಳ್ಳಬಹುದು ಎಂದು ಭಾವ. ಇಲ್ಲಿ ವರ್ಣಗಳು ಅನಿತ್ಯವೆಂದು ಒಪ್ಪಿದರೂ ವೈಯಾಕರಣರು ಹೇಳುವ ಸ್ಫೋಟಕ್ಕೆ ಅವಕಾಶವಿಲ್ಲ ಎಂದು ಹೇಳಿರುವದು ಪ್ರೌಢವಾದವು.

  4. ಶಬ್ದಗಳಂದರ ವರ್ಣಸಾಮಾನ್ಯಗಳು ಎಂದರೂ ಸ್ಕೂಟವಾದಿಯು ವರ್ಣಗಳು ಅನಿತ್ಯವೆಂದು ಆರೋಪಿಸಿದ್ಧ ದೋಷವು ಹತ್ತುವದಿಲ್ಲ ; ಆಗಲೂ ಶಬ್ದಪ್ರಭವತ್ವವಾದವು ಅವಿರುದ್ಧವಾಗಿರುತ್ತದೆ ಎಂದರ್ಥ.

೪೭೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. (ಭಾಷ್ಯ) ೨೯೨. ಸ್ವತyಸ್ಯ ಕರ್ತುಃ ಅಸ್ಮರಣಾದಿಭಿಃ ಸ್ಥಿತೇ ವೇದಸ್ಯ ನಿತ್ಯ ದೇವಾದಿ ವ್ಯಕ್ತಿಪ್ರಭವಾಭ್ಯುಪಗಮೇನ ತಸ್ಯ ವಿರೋಧಮ್ ಆಶಜ್ಯ “ಅತಃ ಪ್ರಭವಾತ್’’ ಇತಿ ಪರಿಹೃತ್ಯ ಇದಾನೀಂ ತದೇವ ವೇದನಿತ್ಯತ್ವಂ ಸ್ಥಿತಂ ದೃಢಯತಿ “ಅತ ಏವ ಚ ನಿತ್ಯತ್ವಮ್’ ಇತಿ | ಅತ ಏವ ನಿಯತಾಕೃತೇರ್ದೆವಾದೇ ಜಗತಃ ವೇದಶಬ್ದ ಪ್ರಭವತ್ಪಾತ್ ವೇದಶಬ್ದ ನಿತ್ಯತ್ವಮಪಿ ಪ್ರತ್ಯೇತವ್ಯಮ್ | ತಥಾ ಚ ಮನ್ಯವರ್ಣಃ “ಯಜೇನ ವಾಚಃ ಪದವೀಯಮಾಯನ್ ತಾಮನ್ಯವಿನ್ಗನ್ ಋಷಿಷು ಪ್ರವಿಷ್ಕಾಮ್’ (ಋ. ಸಂ. ೧೦-೭೧-೩) ಇತಿ ಸ್ಥಿತಾಮೇವ ವಾಚಮ್ ಅನುವಿನ್ನಾಂ ದರ್ಶಯತಿ | ವೇದವ್ಯಾಸಶ್ಚ ಏವಮೇವ ಸ್ಮರತಿ “ಯುಗಾನ್ತೇನರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ | ಲೇಭಿರೇ ತಪಸಾ ಪೂರ್ವಮನುಜ್ಞಾತಾಃ ಸ್ವಯಂಭುವಾ” || (ಮೋ. ಧ. ೨೧೦-೧೯) ಇತಿ ||

(ಭಾಷ್ಯಾರ್ಥ) ಸ್ವತಂತ್ರವಾದ ಕರ್ತವನ್ನು ಸ್ಮರಿಸದಿರುವದು ಮುಂತಾದ ಕಾರಣಗಳಿಂದ ವೇದವು ನಿತ್ಯವೆಂಬುದು ಸಿದ್ಧವಾಗಿರುವಲ್ಲಿ ದೇವತೆಗಳೇ ಮುಂತಾದ ವ್ಯಕ್ತಿಗಳು ಹುಟ್ಟುವರೆಂದು ಒಪ್ಪಿದರೆ ಅದಕ್ಕೆ ವಿರೋಧವಾಗುವದೆಂದು) ಶಂಕಿಸಿ “ಅತಃ ಪ್ರಭವಾತ್’’ (ಶಬ್ದದಿಂದ ಹುಟ್ಟುವದರಿಂದ ವಿರೋಧವಿಲ್ಲ) ಎಂದು (ಆ ಶಂಕೆಯನ್ನು ) ಪರಿಹರಿಸಿ (ಮೊದಲು) ಸಿದ್ಧವಾಗಿದ್ದ ಅದೇ ವೇದನಿತ್ಯತ್ವವನ್ನು “ಆದ್ದರಿಂದಲೇ (ವೇದಕ್ಕೆ) ನಿತ್ಯತ್ವವು’ ಎಂದು ಈಗ ಗಟ್ಟಿಗೊಳಿಸಿರುತ್ತದೆ. ಆದ್ದರಿಂದಲೇ, ಎಂದರೆ ಗೊತ್ತಾದ ಆಕೃತಿಯುಳ್ಳ ದೇವಾದಿ ಜಗತ್ತು ವೇದಶಬ್ದದಿಂದ ಹುಟ್ಟುವದರಿಂದಲೇ ವೇದಶಬ್ದವು ನಿತ್ಯವಾಗಿದೆ ಎಂದೂ ತಿಳಿಯಬೇಕು. ಆದ್ದರಿಂದಲೇ ಮಂತ್ರವರ್ಣವು “ಯಜ್ಞದಿಂದ (ವೇದ)ವಾಕ್ಕನ್ನು ಪಡೆಯುವ ಯೋಗ್ಯತೆಯನ್ನು ಹೊಂದಿದರು ; (ಆ ಯೋಗ್ಯತೆ ಯಿಂದ) ಋಷಿಗಳಲ್ಲಿ ಪ್ರವಿಷ್ಟವಾಗಿದ್ದ ಆ (ವಾಕ್ಕನ್ನು) ಪಡೆದುಕೊಂಡರು” (ಋ.

  1. ವೇದವನ್ನು ರಚಿಸಿದವನ ಹೆಸರನ್ನು ಅಧ್ಯಯನಮಾಡಿದವರು ನೆನಪಿಟ್ಟಿಲ್ಲ, ಶಿಷ್ಯನು ಅಧ್ಯಯನಮಾಡುವ ಮೊದಲು ಗುರುವು ಅಧ್ಯಯನಮಾಡಿರಲೇಬೇಕಾಗಿದೆ. ಆದ್ದರಿಂದಲೂ ವೇದದಲ್ಲಿ ಅನಿತ್ಯಪದಾರ್ಥಗಳನ್ನು ಹೇಳಿದೆ ಎಂಬುದಕ್ಕೆ ಪ್ರಮಾಣವಿಲ್ಲ.

  2. ವೇದವು ನಿತ್ಯ, ಅಪೌರುಷೇಯ - ಎಂದು ಮಿಾಮಾಂಸದಲ್ಲಿ ಜೆ. ಸೂ. ೧-೧-೨೭ರಿಂದ ೩೧ರ ವರೆಗಿನ ಭಾಗದಲ್ಲಿ ಸಿದ್ಧವಾಗಿದೆ. ಇದನ್ನು ವ್ಯವಹಾರದೃಷ್ಟಿಯಿಂದ ಇಲ್ಲಿ ಅಂಗೀಕರಿಸಿದೆ. ವೇದನಿತ್ಯತ್ವವನ್ನು ಆಚಾರ್ಯರು ಸಾಧಿಸಿರುವ ಬಗೆಯನ್ನು ತ್ಯ.ಭಾ. ೨-೩ರ ಭಾಷ್ಯದಲ್ಲಿ (ಭಾ.ಭಾ. ೧೩೩, ೧೩೪) ಕಾಣಬಹುದು.

ಅಧಿ. ೮. ಸೂ. ೩೦] ಸೃಷ್ಟಿಪ್ರಲಯವಾದವೂ ಶಬ್ದ ವಿಷಯಕ್ಕೆ ವಿರುದ್ಧವಲ್ಲ ೪೭೧ ೧೦-೭೧-೩) ಎಂದು ಇದ್ದುಕೊಂಡೇ ಇದ್ದ (ವೇದ)ವಾಕ್ಕನ್ನು ಪಡೆದುಕೊಂಡರೆಂದು ತಿಳಿಸಿದೆ. ವೇದ ವ್ಯಾಸರೂ “ಯುಗಾಂತದಲ್ಲಿ ಮರೆಯಾಗಿದ್ದ ಇತಿಹಾಸಸಹಿತವಾದ ವೇದಗಳನ್ನು ಮಹರ್ಷಿಗಳು ಪೂರ್ವದಲ್ಲಿ ಸ್ವಯಂಭುವಿನ ಅನುಜ್ಞೆಯಂತೆ ತಪಸ್ಸಿನಿಂದ ಪಡೆದು ಕೊಂಡರು’’ (ಮೋ. ಧ. ೨೧೦-೧೯) ಎಂದು ಹೀಗೆಯೇ ಸ್ಮರಿಸಿರುತ್ತಾರೆ.’

ಸೃಷ್ಟಿಪ್ರಲಯವಾದವೂ ಶಬ್ದ ವಿಷಯಕ್ಕೆ ವಿರುದ್ದವಲ್ಲ ಸಮಾನನಾಮರೂಪತ್ವಾಚ್ಯಾವೃತ್ತಾವಶ್ಯವಿರೋಧೋ ದರ್ಶನಾತ್ ಸ್ಮೃತೇಶ್ಚ 11೩oll

೩೦. ಸಮಾನನಾಮರೂಪಗಳುಳ್ಳದ್ದಾಗಿರುವದರಿಂದ (ಸೃಷ್ಟಿಪ್ರಲಯ ಗಳ) ಆವೃತ್ತಿಯಾದರೂ ವಿರೋಧವಿಲ್ಲ ; ಏಕೆಂದರೆ ಶ್ರುತಿಯಿಂದಲೂ ಸ್ಕೃತಿಯಿಂದಲೂ (ಹಾಗೆಂದು ಸಿದ್ಧವಾಗುತ್ತದೆ).

(ಭಾಷ್ಯ) ೨೯೩. ಅಥಾಪಿ ಸ್ಮಾತ್ - ಯದಿ ಪಶ್ಚಾದಿವ್ಯಕ್ತಿವತ್ ದೇವಾದಿವ್ಯಕ್ತಯೋSಪಿ ಸತ್ಯವ ಉತ್ಪರನ್ ನಿರುದ್ಯೋರಂಶ್ಚ, ತತಃ ಅಭಿಧಾನಾಭಿಧೇಯಾಭಿಧಾತೃ ವ್ಯವಹಾರಾವಿಚ್ಛೇದಾತ್ ಸಂಬನ್ಧನಿತ್ಯನ ವಿರೋಧಃ ಶಬ್ದ ಪರಿಹಿಯೇತ | ಯದಾ ತು ಖಲು ಸಕಲಂ ತೈಲೋಕ್ಯಂ ಪರಿತ್ಯಕ್ತನಾಮರೂಪಂ ನಿರ್ಲೆಪಂ ಪ್ರಲೀಯತೇ ಪ್ರಭವತಿ ಚ ಅಭಿನವಮ್ ಇತಿ ಶ್ರುತಿಸ್ಮೃತಿವಾದಾ ವದ ತದಾ ಕಥಮ್ ಅವಿರೋಧಃ ಇತಿ ? ತತ್ರ ಇದಮ್ ಅಭಿಧೀಯತೇ - “ಸಮಾನನಾಮರೂಪತ್ವಾತ್’’ ಇತಿ | ತದಾಪಿ ಸಂಸಾರಸ್ಯ ಅನಾದಿತ್ವಂ ತಾವತ್ ಅಭ್ಯುಪಗವ್ರಮ್ | ಪ್ರತಿಪಾದಯಿಷ್ಯತಿ ಚಾಚಾರ್ಯಃ ಸಂಸಾರಸ್ಯ ಅನಾದಿತ್ವಮ್ ‘‘ಉಪಪದ್ಯತೇ ಚಾಪ್ಪುಪಲಭ್ಯತೇ ಚ’ (೨ ೧-೩೬) ಇತಿ | ಅನಾದೌ ಚ ಸಂಸಾರೇ ಯ ಸ್ಥಾಪಪ್ರಬೋಧಯೋ ಪ್ರಲಯ ಪ್ರಭವಶ್ರವಣೇsಪಿ ಪೂರ್ವಪ್ರಬೋಧವದುತ್ತರಪ್ರಬೋಧೋSಪಿ ವ್ಯವಹಾರಾತ್ ನ ಕಶ್ಚಿದ್ ವಿರೋಧಃ, ಏವಂ ಕಲ್ಮಾನರಪ್ರಭವಪ್ರಲಯಯೋರಪಿ ಇತಿ ದ್ರಷ್ಟವ್ಯಮ್ | ಸ್ಟಾಪಪ್ರಬೋಧಯೋಶ್ಚ ಪ್ರಲಯಪ್ರಭವೇ ಶೂಯೇತೇ “ಯದಾ ಸುಪ್ತ: ಸ್ವಪ್ನಂ ನ ಕಂಚನ ಪಶ್ಯತ್ಯಥಾಸ್ಮಿನ್ ಪ್ರಾಣ ಏಕಧಾ ಭವತಿ ತನಂ ವಾಕ್ ಸರ್ವೆನರ್ಾಮಭಿಃ

  1. ಶ್ರುತಿಯನ್ನನುಸರಿಸಿಯೇ ಭಾರತವೂ ಹೇಳಿರುವದರಿಂದ ಅದು ಸ್ಮೃತಿಯು ಎಂಬುದನ್ನು ಇಲ್ಲಿ ಸೂಚಿಸಿದ.೪೭೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಸಹಾತಿ ಚಕ್ಷುಃ ಸರ್ವ ರೂಪೈಃ ಸಹಾತಿ ಸ್ತೋತ್ರಂ ಸರ್ವಃ ಶಬೈ: ಸಹಾತಿ ಮನಃ ಸರ್ವಧ್ಯರ್ಾನೈ: ಸಹಾತಿ ಸ ಯದಾ ಪ್ರತಿಬುಧ್ಯತೇ ಯಥಾಗೋರ್ಜ್ವಲತಃ ಸರ್ವಾ ದಿಶೋ ವಿಸ್ಸುಲಿಜ್ಞಾ ವಿಪ್ರತಿಷ್ಠರನ್ನೇವಮೇವೈತಸ್ಮಾದಾತ್ಮನಃ ಸರ್ವ ಪ್ರಾಣಾಃ ಯಥಾಯತನಂ ವಿಪ್ರತಿಷ್ಠನೇ ಪ್ರಾಣೇಭೋ ದೇವಾ ದೇವೇಭೋ ಲೋಕಾಃ ’ (ಕೌ. ೩-೩) ಇತಿ |

(ಭಾಷ್ಯಾರ್ಥ) ಇನ್ನು ಹೀಗೂ (ಪೂರ್ವಪಕ್ಷಿಯ ಅಭಿಪ್ರಾಯ)ವಿರಬಹುದು : ಪಶುಗಳೇ ಮುಂತಾದ ವ್ಯಕ್ತಿಗಳಂತೆ ದೇವಾದಿವ್ಯಕ್ತಿಗಳೂ ಸಂತತವಾಗಿಯೇ ಹುಟ್ಟುವವೆಂದೂ ನಾಶವಾಗುವವವೆಂದೂ ಆಗಿದ್ದರೆ, ಆಗ ಅಭಿಧಾನ, ಅಭಿಧೇಯ, ಅಭಿಧಾತೃ’ - ಎಂಬ ವ್ಯವಹಾರವು ಕಡಿವಡೆಯದೆ ಇರುವದರಿಂದ (ಶಬ್ದಾರ್ಥಗಳ) ಸಂಬಂಧವು ನಿತ್ಯ ವಾಗಿರುವದರಿಂದ ಶಬ್ದ ವಿಷಯದಲ್ಲಿ (ಉಂಟಾಗುವ) ವಿರೋಧವನ್ನು ಪರಿಹಾರ ಮಾಡಬಹುದಾಗಿತ್ತು. ಆದರೆ ಯಾವಾಗಲಾದರೆ ಸಕಲಲೋಕ್ಯವೂ ನಾಮರೂಪ ಗಳನ್ನು ಬಿಟ್ಟು ಸ್ವಲ್ಪವೂ ಉಳಿಯದಂತೆ ಪ್ರಲಯವಾಗುವವೆಂದೂ ಹೊಸದು ಹುಟ್ಟುವದೆಂದೂ ಶ್ರುತಿಸ್ಮೃತಿವಾದಗಳು ಹೇಳುತ್ತಿರುವವೋ, ಆಗ ವಿರೋಧವಿಲ್ಲ (ವೆನ್ನುವದು) ಹೇಗೆ ?

(ಪರಿಹಾರ) :- ಈ (ವಿಷಯ)ದಲ್ಲಿ ‘ಸಮಾನನಾಮರೂಪಗಳುಳ್ಳದ್ದಾದ್ದ ರಿಂದ’ ಎಂಬ (ಪರಿಹಾರವನ್ನು) ಹೇಳುತ್ತೇವೆ. ಆಗಲೂ ಸಂಸಾರವು ಅನಾದಿ ಎಂಬು ದನ್ನು ಮೊದಲು ಒಪ್ಪಬೇಕು. (ಸೂತ್ರಕಾರರಾದ) ಆಚಾರ್ಯರು “ಉಪಪದ್ಯತೇ ಚಾಪ್ಪಪಲಭ್ಯತೇ ಚ” (೨-೧-೩೬) ಎಂದು ಸಂಸಾರಕ್ಕೆ ಅನಾದಿತ್ವವನ್ನು ಮುಂದೆ ಪ್ರತಿಪಾದಿಸಿಯೂ ಇರುತ್ತಾರೆ. (ಹೀಗೆ) ಸಂಸಾರವು ಅನಾದಿಯಾಗಿರುವಲ್ಲಿ, ಹೇಗೆ ತನಿಗಿದ್ರ ಮತ್ತು ಎಚ್ಚರ - ಇವುಗಳಲ್ಲಿ ಪ್ರಲಯೋತ್ಪತ್ತಿಗಳನ್ನು ಶ್ರುತಿಯಲ್ಲಿ ಹೇಳಿ ದ್ದಾಗ್ಯೂ ಹಿಂದಿನ ಎಚ್ಚರದಂತೆ ಮುಂದಿನ ಎಚ್ಚರದಲ್ಲಿಯೂ ವ್ಯವಹಾರವಿರುವದರಿಂದ (ಯಾವ) ವಿರೋಧವೂ ಇರುವದಿಲ್ಲವೋ ಹಾಗೆಯೇ ಮತ್ತೊಂದು ಕಲ್ಪದಲ್ಲಿ ಆಗುವ

  1. ವ್ಯಕ್ತಿಗಳಿಲ್ಲವೆಂಬ ಕಾಲವೇ ಇಲ್ಲದೆ. 2. ಹೆಸರು, ಹೆಸರಿಸುವ ವಸ್ತು, ಹೆಸರಿಟ್ಟು ಕರೆಯುವವನು.

  2. ಸುಷುಪ್ತಿಯಲ್ಲಿ ಪ್ರಲಯವಾದರೂ ಎಚ್ಚರದಲ್ಲಿ ಅದೇ ಜಗತ್ತು ಕಾಣಬರುತ್ತದೆ ಯಾದ್ದರಿಂದ ಅಲ್ಲಿ ಶಬ್ದಾರ್ಥಸಂಬಂಧದ ನಿತ್ಯತ್ವಕ್ಕೆ ಯಾವ ವಿರೋಧವೂ ಬರುವದಿಲ್ಲ. ಪ್ರಲಯವನ್ನು ಒಪ್ಪದ ಮಿಮಾಂಸಕರು ಕೂಡ ಸುಷುಪ್ತಿಯನ್ನು ಒಪ್ಪಲೇಬೇಕಾದ್ದರಿಂದ ಈ ದೃಷ್ಟಾಂತವನ್ನು ಕೊಟ್ಟಿದ.

ಅಧಿ. ೮. ಸೂ. ೩೦] ಹೊಸ ಕಲ್ಪದಲ್ಲಿ ಹಿಂದಿನ ಕಲ್ಪದ ಸ್ಮರಣೆಯೂ ಇರಬಹುದು ೪೭೩

ಸೃಷ್ಟಿಪ್ರಲಯಗಳ (ವಿಷಯ)ದಲ್ಲಿ (ಯೂ ವಿರೋಧವಿಲ್ಲ) ಎಂದು ತಿಳಿಯಬೇಕು. ತನಿನಿದ್ರೆ, ಎಚ್ಚರ - ಇವುಗಳಲ್ಲಿ ಪ್ರಲಯವೂ ಉತ್ಪತ್ತಿಯೂ ಆಗುವವೆಂದು “ಯಾವಾಗ ನಿದ್ರಿಸಿದವನು ಯಾವ ಕನಸನ್ನೂ ಕಾಣುವದಿಲ್ಲವೋ, ಆಗ ಈ ಪ್ರಾಣನಲ್ಲಿಯೇ ಒಂದಾಗುತ್ತಾನೆ. ಆಗ ಇವನನ್ನು ವಾಕ್ಕು ಎಲ್ಲಾ ನಾಮಗಳೊಡನೆ (ಸೇರಿಕೊಂಡು) ಲಯವಾಗುತ್ತದೆ ; ಚಕ್ಷುಸ್ಸು ಎಲ್ಲಾ ರೂಪಗಳೊಡನೆ ಲಯವಾಗುತ್ತದೆ ; ಪ್ರೋತ್ರವು ಎಲ್ಲಾ ಶಬ್ದಗಳೊಡನೆ ಲಯವಾಗುತ್ತದೆ; ಮನಸ್ಸು ಎಲ್ಲಾ ಧ್ಯಾನಗಳೊಡನೆ ಲಯವಾಗುತ್ತದೆ. ಅವನು ಯಾವಾಗ ಎಚ್ಚರುವನೋ (ಆಗ) ಹೇಗೆ ಉರಿಯುವ ಬೆಂಕಿಯಿಂದ ಎಲ್ಲಾ ಕಡೆಗಳಿಗೂ ಕಿಡಿಗಳು ಹಾರಿಬರುವವೋ ಹಾಗೆಯೇ ಈ ಆತ್ಮನಿಂದ ಎಲ್ಲಾ ಪ್ರಾಣಿಗಳೂ ತಮ್ಮ ತಮ್ಮ ಸ್ಥಾನಕ್ಕೆ ಹೊರಟು ಬಂದು ಸೇರುವವು ; ಪ್ರಾಣಗಳಾದ ಬಳಿಕ ದೇವತೆಗಳೂ ದೇವತೆಗಳಾದ ಬಳಿಕ ಲೋಕಗಳೂ (ಹೊರಟುಬರುವವು)” ಎಂದು (ಕೌ, ೩-೩) ಶ್ರುತಿಯಲ್ಲಿ ಹೇಳಿದೆ. - . ಹೊಸ ಕಲ್ಪದಲ್ಲಿ ಹಿಂದಿನ ಕಲ್ಪದ ಸ್ಮರಣೆಯೂ ಇರಬಹುದು

(ಭಾಷ್ಯ) ೨೯೪, ಸ್ಯಾದೇತತ್ - ಸ್ಟಾಪೇ ಪುರುಷಾನ್ಯರವ್ಯವಹಾರಾವಿಚ್ಛೇದಾತ್ ಸ್ವಯಂ ಚ ಸುಪ್ತಪ್ರಬುದ್ಧಸ್ಯ ಪೂರ್ವಪ್ರಬೋಧವ್ಯವಹಾರಾನುಸಸ್ಥಾನಸ೦ಭವಾತ್ ಅವಿರುದ್ಧಮ್ | ಮಹಾಪ್ರಲಯೇ ತು ಸರ್ವವ್ಯವಹಾರೋಚ್ಛೇದಾತ್, ಜನ್ಮಾನರ ವ್ಯವಹಾರವಚ್ಚ ಕಲ್ಮಾನರವ್ಯವಹಾರಸ್ಯ ಅನುಸಣ್ಣಾತುಮ್ ಅಶಕ್ಯತ್ವಾತ್ ವೈಷಮ್ಯಮ್ ಇತಿ | ನೈಷ ದೋಷಃ | ಸತ್ಯಪಿ ಸರ್ವವ್ಯವಹಾರೋಚ್ಛೇದಿನಿ ಮಹಾಪ್ರಲಯ ಪರಮೇಶ್ವರಾನುಗ್ರಹಾತ್ ಈಶ್ವರಾಣಾಂ ಹಿರಣ್ಯಗರ್ಭಾದೀನಾಂ ಕಲ್ಮಾನರ ವ್ಯವಹಾರಾನುಸಸ್ಥಾನೋಪಪಃ | ಯದ್ಯಪಿ ಪ್ರಾಕೃತಾಃ ಪ್ರಾಣಿಯೋ ನ ಜನ್ಮಾನರ ವ್ಯವಹಾರಮ್ ಅನುಸನ್ದಧಾನಾ ದೃಶ್ಯ ಇತಿ , ತಥಾಪಿ ನ ಪ್ರಾಕೃತವತ್ ಈಶ್ವರಾಣಾಂ ಭವಿತವ್ಯಮ್ | ತಥಾ ಹಿ ಪ್ರಾಣಿತ್ಪಾವಿಶೇಷೋಪಿ ಮನುಷ್ಯಾದಿಸ್ತಮೃಪರ್ಯನೇಷು ಜ್ಞಾನೈಶ್ವರ್ಯಾದಿಪ್ರತಿಬದ್ಧ: ಪರೇಣ ಪರೇಣ ಭೂಯಾನ್ ಭವನ್ ದೃಶ್ಯತೇ | ತಥಾ ಮನುಷ್ಕಾದಿಷ್ಟೇವ ಹಿರಣ್ಯಗರ್ಭಪರ್ಯನೇಷು ಜ್ಞಾನೈಶ್ವರ್ಯಾದ್ಯಭಿವ್ಯಕ್ತಿರಪಿ

  1. ಪರಮಾತ್ಮನಲ್ಲಿಯೇ ಎಂದರ್ಥ. ತನಿನಿದ್ರೆಯಲ್ಲಿ ಹೊರಗಿನ ಜಗತ್ತು ಹಾಗೆಯೇ ಹೊರಗೆ ಇರುವದೆಂದು ಸಾಮಾನ್ಯರ ದೃಷ್ಟಿಗೆ ತೋರಿದರೂ ಶ್ರುತಿಯ ದೃಷ್ಟಿಯಲ್ಲಿ ಆಗ ಎಲ್ಲವೂ ಪರಮಾತ್ಮನಲ್ಲಿಯೇ ಸೇರಿಕೊಂಡಿರುತ್ತದೆ.

  2. ಎಲ್ಲಾ ಕರಣಗಳೂ ಎಂದರ್ಥ. 3. ಇಲ್ಲಿ ‘ಇತಿ’ ಇಲ್ಲದಿದ್ದರೂ ಸಾಗುತ್ತಿತ್ತು.

೪೭೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಪರೇಣ ಪರೇಣ ಭೂಯಸೀ ಭವತಿ ಇತ್ಯೇತತ್ ಶ್ರುತಿಸ್ಮೃತಿವಾದೇಷು ಅಸಕೃತ್ ಅನುಶ್ರಿಯಮಾಣಂ ನ ಶಕ್ಯಂ ನಾಸ್ತಿ ಇತಿ ವದಿತುಮ್ | ತತಶ್ಚ ಅತೀತಕಲ್ಪಾನುಷ್ಠಿತ ಪ್ರಕೃಷ್ಟ ಜ್ಞಾನಕರ್ಮಣಾಮ್ ಈಶ್ವರಾಣಾಂ ಹಿರಣ್ಯಗರ್ಭಾದೀನಾಂ ವರ್ತಮಾನ ಕಲ್ಪಾದೌ ಪ್ರಾದುರ್ಭವತಾಂ ಪರಮೇಶ್ವರಾನುಗೃಹೀತಾನಾಂ ಸುಪ್ತಪ್ರತಿಬುದ್ದವತ್ ಕಲ್ಪಾನರವ್ಯವಹಾರಾನುಸಸ್ಥಾನೋಪಪತ್ತಿ: ತಥಾ ಚ ಶ್ರುತಿಃ - “ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಕೃ 1 ತಗ್ಂ ಹ ದೇವಮಾತ್ಮಬುದ್ಧಿ ಪ್ರಕಾಶಂ ಮುಮುಕ್ಷುರ್ವೆ ಶರಣಮಹಂ ಪ್ರಪದ್ಯೆ’ (ಶ್ವೇ. ೬-೧೮) ಇತಿ ! ಸ್ಮರನ್ತಿ ಚ ಶೌನಕಾದಯಃ ಮಧುಚ್ಛನ್ನಪ್ರಭೌತಿಭಿರ್ಋಷಿಭಿಃ ದಾಶತಯ್ಯೋ ದೃಷ್ಮಾ: ಇತಿ | ಪ್ರತಿವೇದಂ ಚ ಏವಮೇವ ಕಾಣ್ಣರ್ಷ್ಯಾದಯಃ ಸ್ಮರ್ಯನೇ | ಶ್ರುತಿರಪಿ ಋಷಿಜ್ಞಾನಪೂರ್ವಕಮೇವ ಮನೋಣ ಅನುಷ್ಠಾನಂ ದರ್ಶಯತಿ - “ಯೋ ಹ ವಾ ಅವಿದಿತಾರ್ಷೆಯಚ್ಛನ್ನೋದೈವತಬ್ರಾಹ್ಮಣೇನ ಮಣ ಯಾಜಯತಿ ವಾಧ್ಯಾಪಯತಿ ವಾ ಸ್ಟಾಣುಂ ವೈ ಯಚ್ಛತಿ ಗರ್ತಂ ವಾ ಪ್ರತಿಪದ್ಯತೇ” ಇತ್ಯುಪಕ್ರಮ್ಮ “ತಸ್ಮಾದೇತಾನಿ ಮ ಮ ವಿದ್ಯಾತ್’’ (ಆರ್ಷಯ ಬ್ರಾ. ೧) ಇತಿ ||

(ಭಾಷ್ಯಾರ್ಥ) | (ಆಕ್ಷೇಪ) :- (ಪೂರ್ವಪಕ್ಷಿಯ ಮತವು) ಹೀಗಿರಬಹುದು :- ಸುಷುಪ್ತಿ ಯಲ್ಲಿ ಮಿಕ್ಕ ಪುರುಷರ ವ್ಯವಹಾರವು ಕಡಿದುಹೋಗದೆ ಇರುವದರಿಂದಲೂ ನಿದ್ರಿಸಿ ಎಚ್ಚತ್ತ ತನಗೂ ಹಿಂದಿನ ಎಚ್ಚರದ ನೆನಪು ಇರಬಹುದಾದ್ದರಿಂದಲೂ’ (ಶಬ್ದ ವಿಷಯದಲ್ಲಿ ಈ ವಾದವು) ವಿರುದ್ಧವಾಗುವದಿಲ್ಲ. ಆದರೆ ಮಹಾಪ್ರಲಯದಲ್ಲಿ ಎಲ್ಲಾ ವ್ಯವಹಾರವೂ ನಾಶವಾಗುವದರಿಂದಲೂ ಮತ್ತೊಂದು ಜನ್ಮದ ವ್ಯವಹಾರವನ್ನು ನೆನಪಿಡುವದಕ್ಕಾಗ)ದಂತೆ ಕಲ್ಪಾಂತರದ ವ್ಯವಹಾರವನ್ನು ನೆನಪಿಡುವದೂ ಆಗಲಾರ ದ್ವಾದ್ದರಿಂದ (ದೃಷ್ಟಾಂತಕ್ಕೂ ದಾರ್ಷ್ಮಾಂತಿಕಕ್ಕೂ) ಹೆಚ್ಚು ಕಡಿಮೆಯಿದೆ.

(ಪರಿಹಾರ) :- ಇದು ದೋಷವಲ್ಲ. ಎಲ್ಲಾ ವ್ಯವಹಾರವನ್ನೂ ನಾಶಗೊಳಿಸುವ ಮಹಾಪ್ರಲಯವು ಆದ ಬಳಿಕವೂ ಪರಮೇಶ್ವರನ ಅನುಗ್ರಹದಿಂದ ಈಶ್ವರರಾಗಿರುವ ಹಿರಣ್ಯಗರ್ಭನೇ ಮೊದಲಾದವರಿಗೆ ಕಲ್ಪಾಂತರದ ವ್ಯವಹಾರದ ನೆನಪು ಇರಬಹು ದಾಗಿದೆ. ಸಾಮಾನ್ಯಜೀವರು ಜನ್ಮಾಂತರದ ವ್ಯವಹಾರವನ್ನು ನೆನಪಿಗೆ ತಂದುಕೊಳ್ಳು

  1. ಇದು ಎಚ್ಚರದ ದೃಷ್ಟಿಯಿಂದ ಮಾಡಿರುವ ಆಕ್ಷೇಪವು.

  2. ಆದ್ದರಿಂದಲೇ ಅವರು ಆ ನನಪಿನ ಬಲದಿಂದ ಮತ್ತೆ ಸೃಷ್ಟಿಮಾಡುತ್ತಾರೆಂದು ಶ್ರುತಿಯಲ್ಲಿ ಹೇಳಿದೆ:

ಅಧಿ. ೮. ಸೂ. ೩೦] ಹೊಸ ಕಲ್ಪದಲ್ಲಿ ಹಿಂದಿನ ಕಲ್ಪದ ಸ್ಮರಣೆಯೂ ಇರಬಹುದು ೪೭೫ ವದು ಕಂಡುಬರುವದಿಲ್ಲವಾದರೂ ಈಶ್ವರರಾದವರು ಸಾಮಾನ್ಯರಂತೆ ಇರಬೇಕೆಂಬುದು (ಸರಿ)ಯಲ್ಲ. ಆದ್ದರಿಂದಲೇ ಪ್ರಾಣಿತ್ವವು ಸಮಾನವಾಗಿದ್ದರೂ ಮನುಷ್ಯರಿಂದ ಮೊದಲಾಗಿ ಸ್ತಂಬದವರೆಗಿನ (ಪ್ರಾಣಿಗಳಿಗೆ) ಜ್ಞಾನ, ಐಶ್ವರ್ಯ - ಮುಂತಾದವುಗಳಿಗೆ ಇರುವ ಅಡ್ಡಿಯು ಮುಂದುಮುಂದಕ್ಕೆ (ಹೋದಂತೆ) ಹೆಚ್ಚು (ಹೆಚ್ಚಾಗಿರುವದು) ಕಂಡುಬರುತ್ತದೆ. ಹಾಗೆಯೇ (ಅದೇ) ಮನುಷ್ಯರು ಮೊದಲಾಗಿ ಹಿರಣ್ಯಗರ್ಭನವರೆಗೆ ಜ್ಞಾನ, ಐಶ್ವರ್ಯ - ಮುಂತಾದದ್ದು ತೋರಿಕೊಳ್ಳುವದೂ ಮುಂದುಮುಂದಕ್ಕೆ (ಹೋದಂತೆ) ಹೆಚ್ಚು (ಹೆಚ್ಚಾಗಿರುವ)ದಂದು ಶ್ರುತಿಸ್ಮೃತಿವಾದಗಳಲ್ಲಿ ಮತ್ತೆಮತ್ತೆ ಹೇಳಿರುವದೂ ಇಲ್ಲವೆಂದು ಹೇಳುವದು ಆಗಲಾರದು. ಮತ್ತು ಹೀಗಿರುವದರಿಂದ ಹಿಂದಿನ ಕಲ್ಪದಲ್ಲಿ ಅನುಷ್ಠಾನಮಾಡಿದ್ದ ಹೆಚ್ಚಿನ ಜ್ಞಾನಕರ್ಮಗಳುಳ್ಳ ಈಶ್ವರರಾದ ಹಿರಣ್ಯಗರ್ಭನೇ ಮೊದಲಾದವರಿಗೆ ಈಗಿನ ಕಲ್ಪದ ಆದಿಯಲ್ಲಿ (ಅವರು) ಹುಟ್ಟುವಾಗ ಪರಮೇಶ್ವರನ ಅನುಗ್ರಹದಿಂದ ನಿದ್ರಿಸಿ ಎಚ್ಚತ್ತವರಿಗೆ (ಹಿಂದಿನ ಎಚ್ಚರದ ನೆನಪಾಗು ವಂತೆ) ಕಲ್ಪಾಂತರವ್ಯವಹಾರವನ್ನು ನೆನಪಿಗೆ ತಂದುಕೊಳ್ಳುವದು ಆಗಬಹುದಾಗಿರು ತದೆ. ಆದ್ದರಿಂದಲೇ ಶ್ರುತಿಯು “ಯಾವನು ಬ್ರಹ್ಮನನ್ನು ಮೊದಲು ಸೃಷ್ಟಿಸುವನೋ

ಯಾವನೇ ಅವನಿಗೆ ವೇದಗಳನ್ನು ಕಳುಹಿಸಿಕೊಡುವನೋ, ಆ ಆತ್ಮ ಬುದ್ಧಿಯನ್ನು ಪ್ರಕಾಶಗೊಳಿಸುವ ದೇವನನ್ನು ಮುಮುಕ್ಷುವಾದ ನಾನು ಶರಣುಹೊಂದಿರುತ್ತೇನೆ” (ಶ್ವೇ. ೬-೧೮) ಎಂದು (ಹೇಳುತ್ತದೆ). ಮಧುಚಂದನೇ ಮುಂತಾದ ಋಷಿಗಳು ಹತ್ತು (ಮಂಡಲದ ಋಕ್ಕುಗಳನ್ನೂ) ಕಂಡುಹಿಡಿದರು - ಎಂದು ಶೌನಕನೇ ಮೊದಲಾದವರು ಹೇಳಿರುತ್ತಾರೆ. ಪ್ರತಿವೇದದಲ್ಲಿಯೂ ಹೀಗೆಯೇ ಕಾಂಡರ್ಷಿಗಳೇ

ಮುಂತಾದವರನ್ನು ಸ್ಮೃತಿಗಳಲ್ಲಿ ಹೇಳಿರುತ್ತದೆ. ಶ್ರುತಿಯೂ “ಯಾವನು ಮಂತ್ರದ ಋಷಿಸಂಬಂಧ, ಛಂದಸ್ಸು, ದೇವತೆ, ಬ್ರಾಹ್ಮಣ - ಇವುಗಳನ್ನು ಅರಿಯದೆ ಯಾಗ ಮಾಡಿಸುತ್ತಾನೋ ಅಧ್ಯಯನಮಾಡಿಸುತ್ತಾನೋ (ಅವನು) ಸ್ಟಾಣುವನ್ನು ಸೇರುತ್ತಾನೆ,

  1. ವಿಜ್ಞಾನಾದಿಗಳ ತಾರತಮ್ಯವು ಜೀವರುಗಳಲ್ಲಿರುವದರಿಂದ.

  2. ಉಪಾಸನೆಯ ಮತ್ತು ಕರ್ಮದ ಸಂಸ್ಕಾರವುಳ್ಳ ಎಂದರ್ಥ. ಇವುಗಳ ಫಲವಾಗಿ ಈಶ್ವರನ ಅನುಗ್ರಹದಿಂದ ಅವರಿಗೆ ಹಿಂದಿನ ಕಲ್ಪದ ಸ್ಮರಣೆಯುಂಟಾಗುತ್ತದೆ.

3.ಹಿರಣ್ಯಗರ್ಭನಿಗೆ ಪರಮೇಶ್ವರನ ಅನುಗ್ರಹದಿಂದ ಈ ಕಲ್ಪದಲ್ಲಿ ಅಧ್ಯಯನವಿಲ್ಲದೆಯೇ ವೇದಸ್ಮರಣೆಯುಂಟಾಗುವದಕ್ಕೆ ಪ್ರಮಾಣವಿದು.

  1. ಸರ್ವಾನುಕ್ರಮಣಿಯಲ್ಲಿ ಋಗೈದದ ವಿಷಯವಾಗಿ ಹೀಗೆಂದು ಹೇಳಿದೆ. ಋಷಿಗಳಿಗೂ ಕಲ್ಪಾಂತರದ ಸ್ಮರಣೆಯಾಗುತ್ತದೆ ಎಂಬುದಕ್ಕೆ ಪ್ರಮಾಣವಿದು.

  2. ಯಜುರ್ವೇದಕ್ಕೆ ಒಂಬತ್ತು ಕಾಂಡರ್ಷಿಗಳನ್ನು ಸ್ಮೃತಿಕಾರರು ತಿಳಿಸಿರುತ್ತಾರ.

೪೭೬

ಬ್ರಹ್ಮಸೂತ್ರಭಾಷ್ಯ

  • [ಅ. ೧, ಪು. ೩. ಗರ್ತವನ್ನಾದರೂ ಹೊಂದುತ್ತಾನೆ’ ಎಂದು ಉಪಕ್ರಮಿಸಿ “ಆದ್ದರಿಂದ ಇವುಗಳನ್ನು ಮಂತ್ರಮಂತ್ರದಲ್ಲಿಯೂ ತಿಳಿದಿರಬೇಕು’ (ಆರ್ಷೇಯ ಬ್ರಾ. ೧) ಎಂದು ಋಷಿಜ್ಞಾನ ಪೂರ್ವಕವಾಗಿಯೇ ಮಂತ್ರದಿಂದ ಅನುಷ್ಠಾನಮಾಡಬೇಕೆಂದು ತಿಳಿಸುತ್ತದೆ.

ಸಮಾನನಾಮರೂಪಗಳ ಸೃಷ್ಟಿಯಾಗುವದೆಂಬುದಕ್ಕೆ ಯುಕ್ತಿಗಳು

(ಭಾಷ್ಯ) ೨೯೫, ಪ್ರಾಣಿನಾಂ ಚ ಸುಖಪ್ರಾಪ್ತಯೇ ಧರ್ಮೊ ವಿಧೀಯತೇ ದುಃಖ ಪರಿಹಾರಾಯ ಚ ಅಧರ್ಮಃ ಪ್ರತಿಷಿಧ್ಯತೇ | ದೃಷ್ಟಾನುಶ್ರವಿಕಸುಖದುಃಖವಿಷಯೌ ಚ ರಾಗದ್ವೇಷ ಭವತಃ, ನ ವಿಲಕ್ಷಣವಿಷ ಇತ್ಯತಃ ಧರ್ಮಾಧರ್ಮಫಲಭೂತಾ ಉತ್ತರಾ ಸೃಷ್ಟಿಸಿ ನಿಷ್ಪದ್ಯಮಾನಾ ಪೂರ್ವಸೃಷ್ಟಿಸದೃಶೈವ ನಿಷ್ಪದ್ಯತೇ ಸ್ಮೃತಿಶ್ಚ ಭವತಿ - ‘ತೇಷಾಂ ಯೇ ಯಾನಿ ಕರ್ಮಾಣಿ ಪ್ರಾಕೃಹ್ಮಾಂ ಪ್ರತಿವೇದಿರೇ | ತಾನೈವ ತೇ ಪ್ರಪದ್ಯ ಸೃಜ್ಯಮಾನಾಃ ಪುನಃಪುನಃ || ಹಿಂಸ್ರಾಹಿಂಸ್ರ ಮೃದುತ್ತೂರೇ ಧರ್ಮಾ ಧರ್ಮ್‌ ಕೃತಾಕೃತೇ | ತದ್ಭಾವಿತಾಃ ಪ್ರಪದ್ಯ ತಸ್ಮಾತ್ ತಸ್ಯ ರೋಚತೇ ||’ (ಮೋ. ಧ. ೨೩೨-೧೬, ೧೭) ಇತಿ | ಪ್ರಲೀಯಮಾನಮಪಿ ಚೇದಂ ಜಗತ್ಸವ ಶೇಷಮೇವ ಪ್ರಲೀಯತೇ | ಶಕ್ತಿಮೂಲಮೇವ ಚ ಪ್ರಭವತಿ | ಇತರಥಾ ಆಕಸ್ಮಿಕತ್ವ ಪ್ರಸಜ್ಜಾತ್ | ನ ಚ ಅನೇಕಾಕಾರಾಃ ಶಕ್ತಯಃ ಶಕ್ಯಾಃ ಕಲ್ಪಯಿತುಮ್ | ತತಕ್ಕ ವಿಚ್ಛಿದ ವಿಚ್ಛಿದ್ಯಾಪಿ ಉದ್ಭವತಾಂ ಭೂರಾದಿಲೋಕಪ್ರವಾಹಾಣಾಮ್, ದೇವರ್ಯ ಜೂನುಷ್ಯಲಕ್ಷಣಾನಾಂ ಚ ಪ್ರಾಣಿನಿಕಾಯಪ್ರವಾಹಾಣಾಮ್ ವರ್ಣಾಶ್ರಮಧರ್ಮ ಫಲವ್ಯವಸ್ಥಾನಾಂ ಚ ಅನಾದೌ ಸಂಸಾರೇ ನಿಯತತ್ವಮ್ ಇನ್ಸಿಯವಿಷಯಸಂಬಂಧ ನಿಯತತ್ವವತ್ ಪ್ರತ್ಯೇತವ್ಯಮ್ 1 ನ ಹಿ ಇಯವಿಷಯಸಂಬನ್ಹಾದೇರ್ವ್ಯವಹಾರಸ್ಯ ಪ್ರತಿಸರ್ಗಮ್ ಅನ್ಯಥಾತ್ವಂ ಷಷ್ಟೇಯವಿಷಯಕಲ್ಪಂ ಶಕ್ಯಮ್ ಉತ್ತೇಕ್ಷಿತಮ್ | ಅತಶ್ಚ ಸರ್ವಕಲ್ಪಾನಾಂ ತುಲ್ಯವ್ಯವಹಾರತ್ವಾತ್ ಕಲ್ಮಾನರವ್ಯವಹಾರಾನುಸಸ್ಥಾನ ಕ್ಷಮಾಚ ಈಶ್ವರಾಣಾಮ್, ಸಮಾನನಾಮರೂಪಾ ಏವ ಪ್ರತಿಸರ್ಗ೦ ವಿಶೇಷಾಃ

  1. ಮೋಟುಮರವಾಗಿ ಹುಟ್ಟುತ್ತಾನೆ, ಅಥವಾ ನರಕದ ಗುಂಡಿಯೊಳಕ್ಕೆ ಬೀಳುತ್ತಾನೆ ಎಂದರ್ಥ.

  2. ಋಷಿಗಳಿಗೆ ಹಿಂದಿನ ಕಲ್ಪದ ಮಂತ್ರದ ಸ್ಮರಣೆಯು ಈ ಕಲ್ಪದಲ್ಲಿ ಆಗುತ್ತದೆ ಎಂಬುದಕ್ಕೆ ಶ್ರುತಿಸ್ಕೃತಿಗಳ ಆಧಾರವಿದ ಎಂದಂತ ಆಯಿತು.

  3. ಈ ಶ್ಲೋಕಗಳು ವಿ. ಪು. ೧-೫-೬೧, ೬೨ರಲ್ಲಿಯೂ ಇವೆ. ಭಾಷ್ಯಕಾರರು ಯಾವ ಗ್ರಂಥದಿಂದ ಉದಾಹರಿಸಿರುತ್ತಾರೋ ತಿಳಿಯದು.

ಅಧಿ. ೮. ಸೂ. ೩೦] ಸಮಾನನಾಮರೂಪಗಳ ಸೃಷ್ಟಿಯಾಗುವದೆಂಬುದಕ್ಕೆ ಯುಕ್ತಿಗಳು ೪೭೭ ಪ್ರಾದುರ್ಭವ 1 ಸಮಾನನಾಮರೂಪತ್ವಾಚ್ಚ ಆವೃತ್ತಾವಪಿ ಮಹಾಸರ್ಗಮಹಾ ಪ್ರಲಯಲಕ್ಷಣಾಯಾಂ ಜಗತೋsಭ್ಯುಪಗಮ್ಯಮಾನಾಯಾಂ ನ ಕಶ್ಚಿತ್ ಶಬ್ದ ಪ್ರಾಮಾ ಹ್ಮಾದಿವಿರೋಧ: 11

(ಭಾಷ್ಯಾರ್ಥ) ಜೀವರುಗಳಿಗೆ ಸುಖಪ್ರಾಪ್ತಿಗಾಗಿ ಧರ್ಮವನ್ನು ವಿಧಿಸಿರುತ್ತದೆ ; ಮತ್ತು ದುಃಖಪರಿಹಾರಕ್ಕಾಗಿ ಅಧರ್ಮವನ್ನು ಪ್ರತಿಷೇಧಿಸಿರುತ್ತದೆ. (ಈ ಲೋಕದಲ್ಲಿ ) ಕಂಡ (ಮತ್ತು ಶಾಸ್ತ್ರದಿಂದ) ಕೇಳಿರುವ ಸುಖದುಃಖಗಳ ವಿಷಯದಲ್ಲಿಯೇ ರಾಗದ್ವೇಷ ಗಳುಂಟಾಗುವವೇ ಹೊರತು ಬೇರೆಯ ಸ್ವಭಾವದ (ಸುಖದುಃಖಗಳ) ವಿಷಯದಲ್ಲಿ ಆಗಲಾರವು. ಆದ್ದರಿಂದ ಧರ್ಮಾಧರ್ಮಗಳ ಫಲವಾಗಿ ಉಂಟಾಗುವ ಮುಂದಿನ ಸೃಷ್ಟಿಯು ಹಿಂದಿನ ಸೃಷ್ಟಿಯಂತೆಯೇ ಉಂಟಾಗುತ್ತದೆ (ಎನ್ನಬೇಕು). (ಹಾಗೆಂದು ಹೇಳುವ) ಸ್ಮತಿಯೂ ಇದೆ : “ಅವುಗಳಲ್ಲಿ ಯಾರು ಯಾವ ಕರ್ಮಗಳನ್ನು ಹಿಂದಿನ ಸೃಷ್ಟಿಯಲ್ಲಿ ಹೊಂದಿಕೊಂಡಿದ್ದರೋ, ಮತ್ತೆಮತ್ತೆ ಸೃಷ್ಟಿಯಾದಾಗಲೂ ಅವರು ಅದನ್ನೇ ಹೊಂದಿಕೊಳ್ಳುತ್ತಾರೆ. ಹಿಂಸಾಕರವಾದ ಅಥವಾ ಅಹಿಂಸಾಕರವಾದ, ಮೃದುವಾದ ಅಥವಾ ಕ್ರೂರವಾದ (ಜನ್ಮಗಳನ್ನೂ) ಧರ್ಮಾಧರ್ಮಗಳನ್ನೂ ಸತ್ಯಾವೃತಗಳನ್ನೂ ಅದೇ ಭಾವನೆಯಿಂದ ಕೂಡಿ ಪಡೆದುಕೊಳ್ಳುತ್ತಾರೆ ; ಆದ್ದರಿಂದ ಅದದು ಅವನವನಿಗೆ ಇಷ್ಟವಾಗಿರುತ್ತದೆ’’ (ಮೋ. ಧ. ೨೩೨-೧೬, ೧೭).ಈ ಜಗತ್ತು ಪ್ರಲಯವಾಗುವಾಗಲೂ (ತನ್ನ) ಶಕ್ತಿಯನ್ನು ಉಳಿಸಿಕೊಂಡೇ ಪ್ರಲಯವಾಗುತ್ತದೆ ; ಶಕ್ತಿಯೆಂಬ ಮೂಲದಿಂದಲೇ ಹುಟ್ಟುತ್ತದೆ (ಎನ್ನಬೇಕು). ಏಕೆಂದರೆ ಹಾಗಿಲ್ಲದಿದ್ದರೆ ಯಾವ (ಕಾರಣವೂ) ಇಲ್ಲದೆಯೇ (ಸೃಷ್ಟಿಪ್ರಲಯಗಳು) ಆಗುವವೆನ್ನಬೇಕಾದೀತು.

  1. ಎಂದಿಗೂ ಕಂಡು ಕೇಳದ ಸುಖವನ್ನು ಬಯಸುವದಾಗಲಿ ದುಃಖವನ್ನು ದ್ವೇಷಿಸು ವದಾಗಲಿ ಆಗುವಂತಿಲ್ಲ.

  2. ಹಾಗಿಲ್ಲದಿದ್ದರೆ ಈಗಿನ ಸೃಷ್ಟಿಯು ಹಿಂದಿನ ಕಲ್ಪದ ಪ್ರಾಣಿಗಳ ಧರ್ಮಾಧರ್ಮಗಳ ಫಲವಾಗಲಾರದು ; ಏಕೆಂದರೆ ತಮಗೆ ಗೊತ್ತಿಲ್ಲದ ಈ ಕಲ್ಪದ ಭೋಗವನ್ನು ಆ ಕಲ್ಪದ ಪ್ರಾಣಿಗಳು ಬಯಸಿದ್ಧವೆಂದು ಹೇಳುವದಕ್ಕಾಗುವದಿಲ್ಲ.

  3. ಜಗತ್ತಿಗೆ ಮತ್ತೆ ಅದೇ ಆಕಾರದಲ್ಲಿ ಹುಟ್ಟುವದಕ್ಕೆ ಬೇಕಾದ ಶಕ್ತಿಯು ಪ್ರಲಯ ದಲ್ಲಿಯೂ ಉಳಿದಿರುತ್ತದೆ ಎಂದರ್ಥ. ಜಗತ್ತು ಮಿಥ್ಯ ಎಂಬ ಸಿದ್ಧಾಂತಕ್ಕೆ ಇದು ವಿರುದ್ಧವಲ್ಲ. ೨-೧-೯ರ ಭಾಷ್ಯದಲ್ಲಿ ಇದು ಸ್ಪಷ್ಟವಾಗುವದು.

  4. ಶಕ್ತಿರೂಪವಾಗಿ ಕಾರಣರೂಪದಿಂದ ಉಳಿದುಕೊಳ್ಳುವದೇ ಪ್ರಲಯವು, ಶಕ್ತಿ ಯಿಂದ ಕಾರ್ಯರೂಪದಿಂದ ತೋರಿಕೊಳ್ಳುವದೇ ಸೃಷ್ಟಿಯು ಎನ್ನದಿದ್ದರೆ ಅಕೃತಾಭ್ಯಾಗಮ, ಕೃತವಿತ್ರಣಾಶ - ಎಂಬ ದೋಷವು ಬರುವದು, ಮೋಕ್ಷಶಾಸ್ತ್ರವು ವ್ಯರ್ಥವಾಗುವದು. ಗೀ, ಭಾ. ೮-೧೯ ನೋಡಿ.

೪೭೫

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಈ ‘ಶಕ್ತಿಗಳು ಅನೇಕಾಕಾರವಾಗಿರುತ್ತವೆ ಎಂದು ಕಲ್ಪಿಸುವದಕ್ಕೂ ಆಗಲಾರದು.’ ಆದ್ದರಿಂದಲೂ ಭೂರಾದಿಲೋಕಗಳ ಪ್ರವಾಹಗಳು, ದೇವತೆಗಳು, ತಿರ್ಯಗ್ಧಂತುಗಳು, ಮನುಷ್ಯರು - ಎಂಬ ಪ್ರಾಣಿರಾಶಿಗಳ ಪ್ರವಾಹಗಳೂ ವರ್ಣಾಶ್ರಮಧರ್ಮಫಲಗಳ ವ್ಯವಸ್ಥೆಗಳೂ ಬಿಟ್ಟುಬಿಟ್ಟು ಹುಟ್ಟುತ್ತಿದ್ದರೂ ಅನಾದಿಯಾದ ಸಂಸಾರದಲ್ಲಿ ಇಂದ್ರಿಯ ವಿಷಯಗಳ ಸಂಬಂಧದಂತೆ ನಿಯತವಾಗಿಯೇ ಇರುವವೆಂದು ತಿಳಿಯಬೇಕು.” ಇಂದ್ರಿಯವಿಷಯಸಂಬಂಧವೇ ಮುಂತಾದ ವ್ಯವಹಾರವು ಒಂದೊಂದು ಸೃಷ್ಟಿಗೂ ಆರನೆಯ ಇಂದ್ರಿಯದ ವಿಷಯದಂತೆ ಬೇರೆಯ ತೆರನಾಗಿಯೇ ಇರುವದೆಂದು ಊಹಿಸುವದಕ್ಕೆ ಆಗಲಾರದಷ್ಟ.

ಆದ್ದರಿಂದ (ಹೀಗೆ) ಎಲ್ಲಾ ಕಲ್ಪಗಳಲ್ಲಿಯೂ ಒಂದೇ ಬಗೆಯ ವ್ಯವಹಾರ ವಿರುವದರಿಂದಲೂ ಈಶ್ವರರಾದವರು ಕಲ್ಪಾಂತರದ ವ್ಯವಹಾರವನ್ನು ನೆನಪಿಡುವದಕ್ಕೆ ಶಕ್ತರಾಗಿರುವದರಿಂದಲೂ ಒಂದೊಂದು ಸೃಷ್ಟಿಯಲ್ಲಿಯೂ (ವಸ್ತು) ವಿಶೇಷಗಳು ಸಮಾನನಾಮರೂಪಗಳಾಗಿಯೇ ಉಂಟಾಗುತ್ತಿರುವವು. (ಹೀಗೆ) ಸಮಾನನಾಮರೂಪ ವಾಗಿರುವದರಿಂದ ಮಹಾಸರ್ಗಮಹಾಪ್ರಲಯರೂಪವಾದ ಆವೃತ್ತಿಯು ಜಗತ್ತಿಗೆ (ಆಗುವದೆಂದು) ಒಪ್ಪಿಕೊಂಡರೂ ಶಬ್ದ ಪ್ರಾಮಾಣ್ಯವೇ ಮುಂತಾದದ್ದರ (ವಿಷಯ) ದಲ್ಲಿ ಯಾವ ವಿರೋಧವೂ ಇರುವದಿಲ್ಲ.

ಸೃಷ್ಟಿಗಳು ಸಮಾನನಾಮರೂಪಗಳೆಂಬುದಕ್ಕೆ ಶ್ರುತಿಸ್ಕೃತಿಗಳು

(ಭಾಷ್ಯ) ೨೯೬. ಸಮಾನನಾಮರೂಪತಾಂ ಚ ಶ್ರುತಿಸ್ಮತೀ ದರ್ಶಯತಃ - ‘ಸೂರ್ಯಾ

  1. ಒಂದೊಂದು ಕಾರಣಶಕ್ತಿಗೂ ಅನೇಕ ಆಕಾರಗಳು ಉಂಟು ; ಆದ್ದರಿಂದ ಒಂದೊಂದು ಸೃಷ್ಟಿಯಲ್ಲಿ ಒಂದೊಂದು ಬಗೆಯ ಕಾರ್ಯವನ್ನುಂಟುಮಾಡಬಹುದು ಎಂದು ಕಲ್ಪಿಸುವದಕ್ಕೆ ಆಗುವದಿಲ್ಲ ಎಂದಭಿಪ್ರಾಯ. ಅವಿದ್ಯೆಗಿಂತ ವ್ಯತಿರಿಕ್ತವಾದ ಶಕ್ತಿಗಳಿಲ್ಲ ಎಂಬ ನ್ಯಾ. ವಿ. ಮತ್ತು ರ. ಪ್ರ. ವ್ಯಾಖ್ಯಾನವು ಪ್ರಕೃತಕ್ಕೆ ಹೊಂದುವದಿಲ್ಲ.

  2. ಮೇಲಿನ ಲೋಕಗಳೂ ಕಳಗಿನ ಲೋಕಗಳೂ ಪ್ರವಾಹರೂಪದಿಂದ ಪ್ರತಿಸೃಷ್ಟಿ ಯಲ್ಲಿಯೂ ಒಂದೇ ರೂಪವಾಗಿ ಉಂಟಾಗುತ್ತಿರುವವು. ಒಂದು ಕಲ್ಪದಲ್ಲಿ ಪ್ರೋತೃವು ಶಬ್ದವನ್ನು ಗ್ರಹಿಸುವದು, ಇನ್ನೊಂದರಲ್ಲಿ ಸ್ಪರ್ಶವನ್ನು ಗ್ರಹಿಸುವದು - ಎಂಬುದಿಲ್ಲ. ಇದರಂತೆಯೇ ಲೋಕಾದಿಗಳೂ ವ್ಯವಸ್ಥಿತವಾಗಿರುವವು.

  3. ಪ್ರತ್ಯಕ್ಷ, ಅನುಮಾನ - ಮುಂತಾದ ಪ್ರಮಾಣಪ್ರಮೇಯವ್ಯವಹಾರವು ಪ್ರತಿಸರ್ಗಕ್ಕೂ ಬೇರೆಬೇರೆಯಾಗುವದಿಲ್ಲ.

  4. ಆರನೆಯದೊಂದು ಜ್ಞಾನೇಂದ್ರಿಯವನ್ನಾಗಲಿ ಅದಕ್ಕೆ ತಕ್ಕ ಆರನೆಯ ವಿಷಯ ವನ್ನಾಗಲಿ ಊಹಿಸುವದಕ್ಕೆ ಬರುವದಿಲ್ಲ.

ಅಧಿ. ೮. ಸೂ. ೩೦] ಸೃಷ್ಟಿಗಳು ಸಮಾನನಾಮರೂಪಗಳೆಂಬುದಕ್ಕೆ ಶ್ರುತಿಸ್ಕೃತಿಗಳು ೪೭೯ ಚನ್ನಮಸೌ ಧಾತಾ ಯಥಾಪೂರ್ವಮಕಲ್ಪಯತ್ | ದಿವಂ ಚ ಪೃಥಿವೀಂ ಚಾನ್ನರಿಕ್ಷಮಥೋ ಸ್ವಃ’ (ಖ.ಸಂ.೧೦-೧೯೦-೩) ಇತಿ | ಯಥಾ ಪೂರ್ವಸ್ಮಿನ್ ಕಲ್ಲೇ ಸೂರ್ಯಾಚನ್ನಮಃಪ್ರಧೃತಿ ಜಗತ್ ಕ್ಸ್ಪ್ತಂ ತಥಾ ಅಸ್ಮಿನ್ನಪಿ ಕಲ್ಲೇ

ಪರಮೇಶ್ವರೋಲಕಲ್ಪಯತ್ ಇತ್ಯರ್ಥ: | ತಥಾ “ಅಗ್ನಿರ್ವಾ ಅಕಾಮಯತ | ಅನ್ನಾದೋ ದೇವಾನಾಗ್ಂ ಸ್ಯಾಮಿತಿ ! ಸ ಏತಮಗ್ನಯೇ ಕೃತ್ತಿಕಾಭ್ಯಃ ಪುರೋಡಾಶ ಮಷ್ಕಾಕಪಾಲಂ ನಿರವಪತ್’ (ತೈ. ಬ್ರಾ. ೩-೧-೪-೧) ಇತಿ ನಕ್ಷತ್ರಷಿವಿಧೆ ಯೋಗ್ನಿ: ನಿರವಪದ್ ಯಸ್ಮ ವಾ ಆಗ್ನಯೇ ನಿರವಪತ್, ತಯೋಃ ಸಮಾನನಾಮ ರೂಪತಾಂ ದರ್ಶಯವಂಜಾತೀಯಕಾ ಶ್ರುತಿಃ ಇಹ ಉದಾಹರ್ತವ್ಯಾ ಸ್ಮರಪಿ - “ಋಷೀಣಾಂ ನಾಮಧೇಯಾನಿ ಯಾಶ್ಚ ವೇದೇಷು ದೃಷ್ಟಯಃ | ಶರ್ವಯ್ರನೇ ಪ್ರಸೂತಾನಾಂ ತಾನೈವೈದ್ಯೋ ದದಾತ್ಯಜಃ” || (ಮೋ. ಧ. ೨೩೨-೨೬), ಯಥರ್ತುಷ್ಟತು ವಿಜ್ಞಾನಿ ನಾನಾರೂಪಾಣಿ ಪರ್ಯಯೇ | ದೃಶ್ಯ ತಾನಿ ತಾನೈವ ತಥಾಭಾವಾ ಯುಗಾದಿಷು’ ’’ (ಮೋ. ಧ. ೨೩೨-೪೦), ‘ಯಥಾಭಿ ಮಾನಿನೋSತೀತಾಸ್ತುಲ್ಯಾಸ್ತೆ ಸಾಂಪ್ರತೈರಿಹ | ದೇವಾ ದೇವೈರತೀತೈರ್ಹಿ ರೂಪ ರ್ನಾಮಭಿರೇವ ಚ || (ಮೋ. ಧ. ೨೩೨ ?) ಇತ್ಯೇವಂಜಾತೀಯಕಾ ದ್ರಷ್ಟವ್ಯಾ 10

(ಭಾಷ್ಯಾರ್ಥ) (ಸೃಷ್ಟಿಗಳಲ್ಲಿ ವಿಶೇಷಗಳು) ಸಮಾನನಾಮರೂಪವುಳ್ಳವಾಗಿಯೇ (ಇರುವ ಎಂಬುದನ್ನು) ಶ್ರುತಿಸ್ಕೃತಿಗಳು ತಿಳಿಸುತ್ತವೆ. “ಧಾತನು ಸೂರ್ಯಚಂದ್ರರನ್ನೂ ದ್ಯುಲೋಕವನ್ನೂ ಪೃಥಿವಿಯನ್ನೂ ಅಂತರಿಕ್ಷವನ್ನೂ ಮತ್ತು ಸ್ವರ್ಲೋಕವನ್ನೂ ಎಂದಿ ನಂತೆ ಉಂಟುಮಾಡಿದನು’’ (ಋ.೧೦-೧೯೦-೩) ಎಂದು (ಶ್ರುತಿ ಹೇಳುತ್ತದೆ) .ಹೇಗೆ ಹಿಂದಿನ ಕಲ್ಪದಲ್ಲಿ ಸೂರ್ಯಚಂದ್ರರೇ ಮುಂತಾದ ಜಗತ್ತು ಸೃಷ್ಟವಾಗಿತ್ತೋ, ಅದರಂತೆಯೇ ಈ ಕಲ್ಪದಲ್ಲಿಯೂ ಪರಮೇಶ್ವರನು ಉಂಟುಮಾಡಿದನು ಎಂದು (ಶ್ರುತಿಯ) ಅರ್ಥ.ಹೀಗೆಯೇ ‘‘ಅಗ್ನಿಯೇ ಕಾಮಿಸಿದನೇನೆಂದರೆ ‘(ನಾನು) ದೇವತೆಗಳ ಅನ್ನಾದನಾಗಬೇಕು’ ; (ಅದಕ್ಕಾಗಿ) ಅವನು ಈ ಅಷ್ಟಾಕಪಾಲದ ಪುರೋಡಾಶ

  1. ನಾಮಧೇಯಾನಿ ಚರ್ಷಿಣಾಂ ಯಾಶ್ಚ ವೇದೇಷು ಸೃಷ್ಟಯಃ | ಶರ್ವಯ್ರನೇ ಸುಜಾತಾನಾಮಭೋ ವಿದಧಾತ್ಯಜಃ || (೨೩೨-೨೬ ) ಎಂದು ಅಚ್ಚಿನ ಭಾರತದ ಪಾಠ.

  2. ‘ತಥಾ ಬ್ರಹ್ಮಾಹವಾದಿಷು’ ಅಚ್ಚಿನ ಪಾಠ. ಈ ಶ್ಲೋಕವು ವಿಷ್ಣುಪುರಾಣ ೧-೫-೬೬ ರಲ್ಲಿ ಭಾಷ್ಯದಂತೆಯೇ ಇದ.

  3. ಅಂತರಿಕ್ಷದ ಮೇಲುಗಡೆ ಇರುವ ಲೋಕವನ್ನು ದ್ಯುಲೋಕವಂದೂ ಸ್ವರ್ಗವನ್ನು ಸ್ವರ್ಲೋಕವೆಂದೂ ಕರೆದಿದೆ ಎಂದು ತೋರುತ್ತದ.

Geo

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ವನ್ನು ’ ಅಗ್ನಿಗೂ ಕೃತ್ತಿಕಾದೇವತೆಗೂ ಒಪ್ಪಿಸಿದನು’ (ತೈ. ಬ್ರಾ. ೩-೧-೪-೧) ಎಂದು ನಕ್ಷತೋಷ್ಟಿ ವಿಧಿಯಲ್ಲಿ ಯಾವ ಅಗ್ನಿಯು ಒಪ್ಪಿಸಿದನೋ, ಮತ್ತು ಯಾವ ಅಗ್ನಿಗೆ ಒಪ್ಪಿಸಿದನೋ ಅವರಿಬ್ಬರಿಗೂ ಸಮಾನನಾಮರೂಪಗಳನ್ನೇ ಹೇಳಿರುತ್ತದೆಯಾದ್ದರಿಂದ ಈ ಜಾತಿಯ ಶ್ರುತಿಯನ್ನೂ ಇಲ್ಲಿ ಉದಾಹರಿಸಬಹುದು. ‘ಋಷಿಗಳಿಗೆ ಯಾವ ಯಾವ ಹೆಸರುಗಳಿ(ರುವವೋ)’ ವೇದಗಳ (ವಿಷಯದಲ್ಲಿ ಅವರಿಗೆ) ಯಾವ ದೃಷ್ಟಿಗಳಿರು ವವೋ, ಪ್ರಲಯಾಂತದಲ್ಲಿ ಹುಟ್ಟುವಾಗ ಅವರಿಗೆ ಅವುಗಳನ್ನೇ ಬ್ರಹ್ಮನು ಕೊಡು ತಾನೆ. ಹೇಗೆ ಋತುಗಳಲ್ಲಿ ಆಯಾ ಋತುಚಿಹ್ನೆಗಳೇ (ಆಯಾ) ಪರ್ಯಾಯದಲ್ಲಿ ಕಂಡುಬರುವವೋ ಹಾಗೆಯೇ (ಬೇರೆಬೇರೆಯ) ಯುಗಾದಿಗಳಲ್ಲಿ (ಆಯಾ) ವಸ್ತು ಗಳು (ಉಂಟಾಗುವವು. ಮೋ, ಧ, ೨೩೨-೨೬-೪೦) ಹೇಗೆ ಆಗಿಹೋಗಿರುವ ಅಭಿಮಾನಿದೇವತೆಗಳು ಈಗಿನವರೊಡನ ಸಮಾನರಾಗಿರುವರೋ (ಹಾಗೆಯೇ) ಇಲ್ಲಿಯ ದೇವತೆಗಳೂ ಆಗಿಹೋಗಿರುವ ದೇವತೆಗಳೊಡನೆ ರೂಪಗಳಿಂದಲೂ ನಾಮಗಳಿಂದಲೂ ಸಮಾನರಾಗಿರುವರು” – ಎಂಬೀ ಜಾತಿಯ ಸ್ಮತಿಯನ್ನೂ ಇಲ್ಲಿ ಊಹಿಸಬೇಕು.

ಮಧ್ವಾದಿಷ್ಟ ಸಂಭವಾದನಧಿಕಾರಂ ಜೈಮಿನಿಃ ||೩೧|| ೩೧. ಮಧು(ವಿದ್ಯೆ)ಯೇ ಮುಂತಾದದ್ದರಲ್ಲಿ ಸಂಭವಿಸುವದಿಲ್ಲವಾದ್ದ ರಿಂದ (ದೇವತೆಗಳಿಗೆ ಬ್ರಹ್ಮವಿದ್ಯೆಯಲ್ಲಿ) ಅಧಿಕಾರವಿಲ್ಲ ಎಂದು ಜೈಮಿನಿ (ಅಭಿಪ್ರಾಯಪಡುತ್ತಾನೆ).

ದೇವಾದಿಗಳ ಅಧಿಕಾರದ ವಿಷಯಕ್ಕೆ ಆಕ್ಷೇಪ

(ಭಾಷ್ಯ) ೨೯೭. ಇಹ ದೇವಾದೀನಾಮಪಿ ಬ್ರಹ್ಮವಿದ್ಯಾಯಾಮ್ ಅಸ್ತ್ರಧಿಕಾರಃ ಇತಿ

  1. ಎಂಟು ಹಂಚಿಪಿಲಿಕೆಗಳ ಮೇಲೆ ಇಟ್ಟಿರುವ, ಮಂತ್ರದಿಂದ ಸಂಸ್ಕರಿಸಿರುವ ಕುದುರೆಯ ಗೊರಸಿನ ಗಾತ್ರದ ಆಮೆಯ ಆಕಾರದ ಹಿಟ್ಟಿನ ಮುದ್ದೆಯನ್ನು.

  2. ‘ಕೃತ್ತಿಕಾಭ್ಯಃ’ ಎಂದು ಕೃತ್ತಿಕಾದೇವತೆಗೆ ಬಹುವಚನವನ್ನು ಪ್ರಯೋಗಿಸಿರುವದು ನಕ್ಷತ್ರಗಳು ಅನೇಕವಾಗಿರುವದರಿಂದ,

  3. ದೃಷ್ಟಿ ಎಂದರೆ ಮಂತ್ರಗಳನ್ನು ಕಂಡುಕೊಳ್ಳುವದು.

  4. ದೇವತೆಗಳ ನಾಮ, ರೂಪ, ಆಯಾ ಇಂದ್ರಿಯಗಳಲ್ಲಿ ಅಭಿಮಾನ - ಇವೆಲ್ಲವೂ ಪ್ರತಿಸೃಷ್ಟಿಯಲ್ಲಿಯೂ ಸಮಾನವಾಗಿರುವವೆಂದು ಕೊನೆಯ ವಾಕ್ಯದ ತಾತ್ಪರ್ಯ. ಹೀಗಿರುವದ ರಿಂದ ಮೇಲೆ ಹೇಳಿರುವಂತ ಶಬ್ಬವಿಷಯದಲ್ಲಿ ಯಾವ ವಿರೋಧವೂ ಇಲ್ಲ. ಆದ್ದರಿಂದ ದೇವಾದಿಗಳಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವುಂಟೆಂದು ಹೇಳಿದ್ದು ಸರಿಯೇ ಎಂದು ಭಾವ.

ಅಧಿ. ೮. ಸೂ. ೩೧] ದೇವಾದಿಗಳ ಅಧಿಕಾರದ ವಿಷಯಕ್ಕೆ ಆಕ್ಷೇಪ

೪೮೧

ಯತ್ ಪ್ರತಿಜ್ಞಾತಮ್, ತತ್ ಪರ್ಯಾವರ್ತ್ಯತೇ | ದೇವಾದೀನಾಮ್ ಅನಧಿಕಾರಂ ಜೈಮಿನಿರಾಚಾರ್ಯೊ ಮನ್ಯತೇ | ಕಸ್ಮಾತ್ ? ಮಧ್ವಾದಿಷು ಅಸಂಭವಾತ್ | ಬ್ರಹ್ಮವಿದ್ಯಾಯಾಮ್ ಅಧಿಕಾರಾಭ್ಯುಪಗಮೇ ಹಿ ವಿದ್ಯಾತ್ವಾವಿಶೇಷಾತ್ ಮಧ್ವಾದಿ ವಿದ್ಯಾಸ್ವಪಿ ಅಧಿಕಾರೋಭ್ಯವಗತ ನ ಚೈವಂ ಸಂಭವತಿ | ಕಥಮ್ ? “ಅಸೆ

ವಾ ಆದಿತ್ಯೋ ದೇವಮಧು’ (ಛಾಂ. ೩-೧-೧) ಇತ್ಯತ್ರ ಮನುಷ್ಯಾ: ಆದಿತ್ಯಂ ಮಧ್ಯಧ್ಯಾಸೇನ ಉಪಾಸೀರನ್ | ದೇವಾದಿಷು ಹಿ ಉಪಾಸಕೇಷು ಅಭ್ಯುಪಗಮ್ಮ ಮಾನೇಷು ಆದಿತ್ಯಃ ಕಮ್ ಅನ್ಯಮ್ ಆದಿತ್ಯಮ್ ಉಪಾಸೀತ ? ಪುನಶ್ಚ ಆದಿತ್ಯವ್ಯಪಾಶ್ರಯಾಣಿ ಪಞ್ಚ ರೋಹಿತಾದೀನಿ ಅಮೃತಾನಿ ಉಪಕ್ರಮ್ಮ ವಸವಃ, ರುದ್ರಾ, ಆದಿತ್ಯಾಃ, ಮರುತಃ, ಸಾಧ್ಯಾಶ್ಚ ಪಞ್ಚ ದೇವಗಣಾಃ ಕ್ರಮೇಣ ತತ್ತದಮ್ಮತಮ್ ಉಪಜೀವ ಇತ್ಯುಪದಿಶ್ಯ ‘‘ಸ ಯ ಏತದೇವಮಮೃತಂ ವೇದ ವಸೂನಾಮೇಕೋ ಭೂತಾಗ್ನಿದೈವ ಮುಖೇನೈತದೇವಾಮೃತಂ ದೃಷ್ಯಾ ತೃಪ್ತಿ’ (ಛಾಂ. ೩-೬-೩ …) ಇತ್ಯಾದಿನಾ ವಸ್ವಾಮ್ಯುಪಜೀವ್ಯಾನಿ ಅಮೃತಾನಿ ವಿಜಾನತಾಂ ವಸ್ವಾದಿಮಹಿಮಪ್ರಾಪ್ತಿಂ ದರ್ಶಯತಿ 1 ವಸ್ವಾದಯಸ್ತು ಕಾನನ್ಯಾನ್ ವಸ್ವಾದೀನ್ ಅಮೃತೋಪಜೀವಿನೋ ವಿಜಾನೀಯು: ? ಕಂ ವಾ ಅನ್ಯಂ ವಸ್ವಾದಿಮಹಿಮಾನಂ ಪ್ರೇಪೈಯುಃ ? ತಥಾ “ಅಗ್ನಿ: ಪಾದೋ ವಾಯುಃ ಪಾದ ಆದಿತ್ಯಃ ಪಾದೋ ದಿಶಃ ಪಾದಃ” (ಛಾಂ. ೩-೧೮-೨) “ವಾಯುರ್ವಾವ ಸಂವರ್ಗ:’ (ಛಾಂ. ೪-೩-೧), ‘‘ಆದಿತ್ಯೋ ಬ್ರಹ್ಮತ್ಯಾದೇಶಃ’’ (ಛಾಂ. ೩-೧೯-೧) ಇತ್ಯಾದಿಷು ದೇವತಾತ್ಯೋಪಾಸನೇಷು ನ ತೇಷಾಮೇವ ದೇವತಾತ್ಮನಾಮ್ ಅಧಿಕಾರಃ ಸಂಭವತಿ | ತಥಾ “ಇಮಾವೇವ ಗೋತಮ ಭರದ್ವಾಜಾವಯಮೇವ ಗೋತಮೋsಯಂ ಭರದ್ವಾಜ’ (ಬೃ. ೨-೨-೪) ಇತ್ಯಾದಿಷು ಋಷಿಸಂಬಶ್ಲೇಷು ಉಪಾಸನೇಷು ನ ತೇಷಾಮೇವ ಋಷಿಣಾಮ್ ಅಧಿಕಾರಃ ಸಂಭವತಿ ||

(ಭಾಷ್ಯಾರ್ಥ) ಇಲ್ಲಿ ದೇವಾದಿಗಳಿಗೂ ಬ್ರಹ್ಮವಿದ್ಯೆಯಲ್ಲಿ ಅಧಿಕಾರ(ವುಂಟು) ಎಂದು ಹೇಳಿತ್ತಲ್ಲ, ಅದನ್ನು ಅಲ್ಲಗಳೆಯಲಾಗುತ್ತದೆ.

ದೇವಾದಿಗಳಿಗೆ ಅಧಿಕಾರವಿಲ್ಲವೆಂದು ಜೈಮಿನ್ಯಾಚಾರ್ಯನು ಅಭಿಪ್ರಾಯ ಪಡುತ್ತಾನೆ. ಏಕೆ ? ಎಂದರೆ ಮಧ್ಯಾದಿಗಳಲ್ಲಿ ಸಂಭವಿಸುವದಿಲ್ಲವಾದ್ದರಿಂದ, ಬ್ರಹ್ಮವಿದ್ಯೆಯಲ್ಲಿ (ಅವರಿಗೆ) ಅಧಿಕಾರವನ್ನು ಒಪ್ಪಿದರೆ, (ಅವೂ) ವಿದ್ಯೆಗಳೆಂಬುದು ಸಮಾನವಾಗಿರುವದರಿಂದ ಮಧ್ಯಾದಿವಿದ್ಯಗಳಲ್ಲಿಯೂ ಅಧಿಕಾರವನ್ನು ಒಪ್ಪಬೇಕಾಗು೪೮೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ವದು. ಆದರೆ ಹಾಗೆ ಆಗುವದಿಲ್ಲ. (ಅದು) ಹೇಗೆ ? ಎಂದರೆ, “ಈ ಆದಿತ್ಯನೇ ದೇವಮಧು’ (ಛಾಂ. ೩-೧-೧) ಎಂಬಲ್ಲಿ ಮನುಷ್ಯರು ಆದಿತ್ಯನನ್ನು ಮಧುವೆಂದು ಅಧ್ಯಾಸಮಾಡಿಕೊಂಡು’ ಉಪಾಸನೆಮಾಡಬಹುದು. ದೇವಾದಿಗಳನ್ನು ಉಪಾಸಕರೆಂದು ಒಪ್ಪಿದರೆ ಆದಿತ್ಯನು ಬೇರೆಯ ಯಾವ ಆದಿತ್ಯನನ್ನು ಉಪಾಸನೆಮಾಡಬೇಕು ?

(ಆ ಮಧುವಿದ್ಯೆಯಲ್ಲಿ) ಮತ್ತು ಆದಿತ್ಯನನ್ನು ಆಶ್ರಯಿಸಿಕೊಂಡಿರುವ ರೋಹಿತವೇ ಮುಂತಾದ ಐದು ಅಮೃತವನ್ನು ಉಪಕ್ರಮಿಸಿ (ಛಾಂ. ೩-೧-೪, ೩-೨ ೩, ೩-೩-೩, ೩-೪-೨, ೩-೫-೩) ವಸುಗಳು (ಛಾಂ. ೩-೬-೧), ರುದ್ರರು (ಛಾಂ. ೩-೭-೧) ಆದಿತ್ಯರು (ಛಾಂ. ೩-೮-೧), ಮರುತ್ತರು (ಛಾಂ. ೩-೯-೧), ಸಾಧ್ಯರು (ಛಾಂ. ೩-೧೦-೧) ಎಂಬ ಐದು ದೇವಗಣಗಳು ಕ್ರಮವಾಗಿ ಆಯಾ ಅಮೃತವನ್ನು ಉಪಜೀವಿಸಿಕೊಂಡಿರುತ್ತಾರೆ ಎಂದು ಉಪದೇಶಿಸಿ “ಯಾವನು ಹೀಗೆ ಈ ಅಮೃತವನ್ನು ಅರಿತುಕೊಳ್ಳುವನೋ (ಅವನು) ವಸುಗಳಲ್ಲಿ ಒಂದಾಗಿ ಅಗ್ನಿ ಎಂಬ ಮುಖದಿಂದಲೇ ಅದೇ ಅಮೃತವನ್ನು ಕಂಡು ತೃಪ್ತನಾಗುತ್ತಾನೆ” (ಛಾಂ. ೩-೬-೩ ….) ಎಂದು ಮುಂತಾದ (ವಾಕ್ಯ)ದಿಂದ ವಸ್ಸಾದಿಗಳು ಉಪಜೀವಿಸಿಕೊಂಡಿರುವ ಅಮೃತಗಳನ್ನು ಅರಿತುಕೊಂಡವರಿಗೆ ವಸುಗಳೇ ಮುಂತಾದವರ ಮಹಿಮಯ ಪ್ರಾಪ್ತಿ (ಯಾಗುವ ದೆಂದು) ತಿಳಿಸಿರುತ್ತದೆ. ಆದರೆ ವಸ್ಯಾದಿಗಳು (ತಮಗಿಂತ) ಬೇರೆಯಾಗಿ ಅಮೃತೋಪ ಜೀವಿಗಳಾದ ಯಾವ ವಸ್ಯಾದಿಗಳನ್ನು ಅರಿತುಕೊಂಡಾರು ? ಅಥವಾ ಮತ್ತೆ ಬೇರೆ ಯಾವ ವಸ್ವಾದಿಗಳ ಮಹಿಮೆಯನ್ನು ಪಡೆದುಕೊಂಡಾರು ?

ಹೀಗೆಯೇ (ಚತುಷ್ಪಾದೃಹ್ಮಕ್ಕೆ) ಅಗ್ನಿಯು ಪಾದವು, ವಾಯುವು ಪಾದವು, ಆದಿತ್ಯನು ಪಾದವು, ದಿಕ್ಕುಗಳು ಪಾದವು” (ಛಾಂ. ೩-೧೮-೨), “ವಾಯುವೇ ಸಂವರ್ಗವು’ (ಛಾಂ. ೪-೩-೧), ‘ಆದಿತ್ಯನೇ ಬ್ರಹ್ಮವು ಎಂಬುದು ಆದೇಶವು,” (ಛಾಂ. ೩-೧೯-೧) ಎಂಬುದೇ ಮುಂತಾದ ದೇವತಾತ್ಯೋಪಾಸನೆಗಳಲ್ಲಿ ಅದೇ ದೇವತಾತ್ಮರಿಗೆ ಅಧಿಕಾರವು ಉಂಟಾಗುವಹಾಗಿಲ್ಲ. ಹಾಗೆಯೇ “ಇವುಗಳೇ ಗೋತಮ ಭರದ್ವಾಜರು ; ಇದೇ ಗೋತಮನು, ಇದೇ ಭರದ್ವಾಜನು’ (ಬೃ. ೨-೨-೪) ಎಂದು ಮುಂತಾಗಿರುವ ಋಷಿಗಳ ಸಂಬಂಧದ ಉಪಾಸನೆಗಳಲ್ಲಿ ಅದೇ ಋಷಿಗಳಿಗೆ ಅಧಿಕಾರವು ಉಂಟಾಗುವಹಾಗಿಲ್ಲ.

  1. ಶಾಸ್ತ್ರದಲ್ಲಿ ಹೇಳಿರುವಂತ ಮಧುವೆಂಬ ದೃಷ್ಟಿಯನ್ನು ಇಟ್ಟುಕೊಂಡು ಎಂದರ್ಥ. ಭ್ರಾಂತಿಯಿಂದ ತಿಳಿದುಕೊಂಡು ಎಂದರ್ಥವಲ್ಲ.

  2. ಉಪಾಸನೆಯಿಂದ ಸಾಕ್ಷಾತ್ಕಾರಮಾಡಿಕೊಳ್ಳುವನೋ ಎಂದರ್ಥ. 3. ತನ್ನೊಳಗೆ ಅಗ್ನಾದಿಗಳನ್ನು ಸೇರಿಸಿಕೊಳ್ಳುವ ದೇವತ. 4. ಉಪದೇಶವು.

  3. ಕಿವಿಗಳೇ.

ಅಧಿ. ೮. ಸೂ. ೩೨] ಆದಿತ್ಯಾದಿಗಳು ಅಚೇತನ

೪೮೩ ಜ್ಯೋತಿಷಿ ಭಾವಾಚ್ಚ 11೩೨11 ೩೨. ಜ್ಯೋತಿಯಲ್ಲಿ (ಈ ಶಬ್ದಗಳ ಪ್ರಯೋಗವು) ಇರುವದರಿಂದಲೂ (ಅಧಿಕಾರವಿಲ್ಲ).

ಆದಿತ್ಯಾದಿಗಳು ಅಚೇತನ

(ಭಾಷ್ಯ) ೨೯೮, ಕುತಶ್ಚ ದೇವಾನಾಮ್ ಅನಧಿಕಾರಃ ? ಯದಿದಂ ಜ್ಯೋತಿರ್ಮಣ್ಣಲಂ ದುಸ್ಥಾನಮ್ ಅಹೋರಾತ್ರಾಭ್ಯಾಂ ಬಮ್ಮಮತ್ ಜಗತ್ ಅವಭಾಸಯತಿ ತಸ್ಮಿನ್ ಆದಿತ್ಯಾದಯೋ ದೇವತಾವಚನಾಃ ಶಬ್ದಾಃ ಪ್ರಯುಜ್ಯಕ್ಕೇ | ಲೋಕಪ್ರಸಿದ್ಧ ವಾಕ್ಯಶೇಷಪ್ರಸಿದ್ಧೇಶ್ಚ | ನ ಚ ಜ್ಯೋತಿರ್ಮಣ್ಣಲಸ್ಯ ಹೃದಯಾದಿನಾ ವಿಗ್ರಹೇಣ ಚೇತನತಯಾ ಅರ್ಥಿತ್ಪಾದನಾ ವಾ ಯೋಗೋವಗನ್ನುಂ ಶಕ್ಯತೇ | ಮೈದಾದಿವತ್ ಅಚೇತನತ್ವಾವಗಮಾತ್ | ಏತೇನ ಅಗ್ವಾದಯೋ ವ್ಯಾಖ್ಯಾತಾಃ ||

(ಭಾಷ್ಯಾರ್ಥ) ದೇವಾದಿಗಳಿಗೆ ಅಧಿಕಾರವಿಲ್ಲವೆಂಬುದಕ್ಕೆ ಮತ್ತು ಯಾವ ಕಾರಣವಿದೆ ಎಂದರೆ, ಆಕಾಶದ ಮೇಲುಗಡೆಯಲ್ಲಿ ಹಗಲೂ ಇರುಳೂ’ ತಿರುಗುತ್ತಾ ಜಗತ್ತನ್ನು ಬೆಳಗುತ್ತಿರುವ ಈ ಜ್ಯೋತಿರ್ಮಂಡಲವಿದೆಯಲ್ಲ, ಇದರಲ್ಲಿಯೇ ದೇವತಾ ವಾಚಕಗಳಾದ ಆದಿತ್ಯಾದಿ ಶಬ್ದಗಳನ್ನು ಪ್ರಯೋಗಿಸಿರುತ್ತದೆ. ಲೋಕಪ್ರಸಿದ್ಧಿಯಿಂದಲೂ ವಾಕ್ಯಶೇಷಪ್ರಸಿದ್ಧಿ ಯಿಂದಲೂ (ಹೀಗೆಂದು ನಿಶ್ಚಯಿಸಬಹುದು). ಜ್ಯೋತಿರ್ಮಂಡಲಕ್ಕೆ ಹೃದಯವೇ ಮುಂತಾದವುಗಳಿಂದ ಕೂಡಿದ ಶರೀರದ, ಚೈತನ್ಯದ ಅಥವಾ ಅರ್ಥತ್ಯಾದಿಗಳ ಸಂಬಂಧವುಂಟೆಂದು ನಿಶ್ಚಯಿಸುವದು ಆಗಲಾರದು ; ಏಕೆಂದರೆ (ಅದು) ಮಣ್ಣು ಮುಂತಾದವುಗಳಂತೆ ಅಚೇತನವೆಂದು ನಿಶ್ಚಯವಾಗುತ್ತದೆ. ಇದರಿಂದ ಅಗ್ನಿ ಮುಂತಾದವುಗಳೂ (ಅನಧಿಕಾರಿಗಳಂದು) ಹೇಳಿದಂತೆ ಆಯಿತು.

  1. ಒಂದು ಕಡೆಯಲ್ಲಿ ರಾತ್ರಿಯಾಗಿರುವಾಗ ಇನ್ನೊಂದು ಕಡೆಯಲ್ಲಿ ಸೂರ್ಯನ ಬೆಳಕಿರುತ್ತದೆ.

  2. ವಾಕ್ಯಶೇಷದಲ್ಲಿ ರಶ್ಮಿಗಳನ್ನು ಹೇಳಿರುವದರಿಂದಲೂ (ಛಾಂ. ೩-೧-೨) ಉದಯಾಸ್ತ್ರ ಮಯಗಳನ್ನು ಹೇಳಿರುವದರಿಂದಲೂ (ಛಾಂ. ೩-೬-೪) ಇದು ಸೂರ್ಯಮಂಡಲದ ವಿಷಯ ವೆಂದು ನಿಶ್ಚಯವಾಗುತ್ತದೆ.

  3. ಆದ್ದರಿಂದ ಬ್ರಹ್ಮವಿದ್ಯೆಗೆ ಅಧಿಕಾರಿಯಂದು ಕಲ್ಪಿಸುವ ಚೇತನದೇವತೆಯೇ ಇಲ್ಲ. 4. ಅಗ್ನಿ ಮುಂತಾದ ಶಬ್ದಗಳೂ ಬೆಂಕಿಯೇ ಮುಂತಾದ ಅಚೇತನವಸ್ತುಗಳನ್ನು ಹೇಳುತ್ತವೆ.

ಇಳಿ

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ದೇವತೆಗಳು ಚೇತನವುಳ್ಳವರೆಂಬುದಕ್ಕೆ ಪ್ರಮಾಣವಿಲ್ಲ

(ಭಾಷ್ಯ) ೨೯೯, ಸ್ಮಾದೇತತ್ | ಮನ್ಯಾರ್ಥವಾದೇತಿಹಾಸಪುರಾಣಲೋಕೇಲ್ನೋ ದೇವಾದೀನಾಂ ವಿಗ್ರಹವತ್ತಾದ್ಯವಗಮಾತ್ ಅಯಮ್ ಅದೋಷಃ ಇತಿ | ನೇತ್ಯುಚ್ಯತೇ ! ನ ಹಿ ತಾವತ್ ಲೋಕೋ ನಾಮ ಕಿಂಚಿತ್ ಸ್ವತಂ ಪ್ರಮಾಣಮಸ್ತಿ | ಪ್ರತ್ಯಕ್ಷಾದಿಭ್ಯ ಏವ ಹಿ ಅವಿಚಾರಿತವಿಶೇಷೇಭ್ಯಃ ಪ್ರಮಾಣೇಭ್ಯಃ ಪ್ರಸಿಧ್ಯನ್ ಅರ್ಥ ಲೋಕಾತ್ ಪ್ರಸಿದ್ಧತಿ ಇತ್ಯುಚ್ಯತೇ | ನ ಚ ಅತ್ರ ಪ್ರತ್ಯಕ್ಷಾದೀನಾಮ್ ಅನ್ಯತಮಂ ಪ್ರಮಾಣಮ್ ಅಸ್ತಿ | ಇತಿಹಾಸಪುರಾಣಮಪಿ ಪೌರುಷೇಯತ್ವಾತ್ ಪ್ರಮಾಣಾನರಮೂಲಮ್ ಆಕಾಸ್ಮೃತಿ | ಅರ್ಥವಾದಾ ಅಪಿ ವಿಧಿನಾ ಏಕವಾಕ್ಯಾತ್ ಸ್ತುತ್ಯರ್ಥಾಃ ಸನ್ನೋ ನ ಪಾರ್ಥಗರ್ಥ್ಯನ ದೇವಾದೀನಾಂ ವಿಗ್ರಹಾದಿಸದ್ಭಾವೇ ಕಾರಣಭಾವಂ ಪ್ರತಿಪದ್ಯ | ಮನ್ನಾ ಅಪಿ ಶ್ರುತ್ಯಾದಿವಿನಿಯುಕ್ತಾಃ ಪ್ರಯೋಗಸಮವಾಯಿನೋಭಿಧಾನಾರ್ಥಾಃ ನ ಕಸ್ಯಚಿತ್ ಅರ್ಥಸ್ಯ ಪ್ರಮಾಣಮ್ ಇತ್ಯಾಚಕ್ಷತೇ | ತಸ್ಮಾತ್ ಅಭಾವೋ ದೇವಾದೀನಾಮ್ ಅಧಿಕಾರಸ್ಯ ||

(ಭಾಷ್ಯಾರ್ಥ) (ಸಿದ್ಧಾಂತಿಯ ಅಭಿಪ್ರಾಯವು) ಇದಾಗಿರಬಹುದು : ಮಂತ್ರಗಳು, ಅರ್ಥವಾದ ಗಳು, ಇತಿಹಾಸಪುರಾಣಲೋಕಗಳೆಂಬ (ಪ್ರಮಾಣ)ಗಳಿಂದ ದೇವಾದಿಗಳಿಗೆ ವಿಗ್ರಹ ವತ್ಯವೇ ಮುಂತಾದದ್ದುಂಟೆಂದು ನಿಶ್ಚಯವಾಗುವದರಿಂದ (ಸಿದ್ಧಾಂತದಲ್ಲಿ) ದೋಷವಿಲ್ಲ.

(ಆದರೆ ನಾವು) ಇದು ಸರಿಯಲ್ಲ ಎನ್ನುತ್ತೇವೆ. ಏಕೆಂದರೆ ಮೊದಲನೆಯದಾಗಿ ಲೋಕವೆಂಬ ಸ್ವತಂತ್ರವಾದ ಯಾವ ಪ್ರಮಾಣವೂ ಇರುವದಿಲ್ಲ. ಇಂಥದ್ದೊಂದು ವಿಚಾರಮಾಡಿ (ನಿಶ್ಚಯವಾಗದೆ ಇರುವ) ಪ್ರತ್ಯಕ್ಷಾದಿಪ್ರಮಾಣಗಳಿಂದ ಪ್ರಸಿದ್ಧ

  1. ಮಂತ್ರಗಳಲ್ಲಿಯೂ ಅರ್ಥವಾದಗಳಲ್ಲಿಯೂ ದೇವತೆಗೆ ಕೈ, ಮುಷ್ಟಿ, ಕೊರಳು - ಮುಂತಾದ ಅವಯವಗಳನ್ನು ಹೇಳಿದೆ ; ದೇವತೆಯು ಹವಿಸ್ಸನ್ನು ಭೋಗಿಸುವದೆಂದೂ ಎಲ್ಲವನ್ನೂ ಆಳುವ ಐಶ್ವರ್ಯವುಳ್ಳದ್ದೆಂದೂ ಪ್ರಸನ್ನವಾಗಿ ಕರ್ಮಫಲವನ್ನು ಕೂಡುವದೆಂದೂ ಹೇಳಿದೆ. ಇತಿಹಾಸಪುರಾಣಗಳಲ್ಲಿ ದೇವತೆಗಳು ಚೇತನರಂದು ತಿಳಿಸಿದೆ. ಲೋಕದಲ್ಲಿ ಜನರು ಯಮನಿಗೆ ದಂಡ, ವರುಣನಿಗೆ ಪಾಶ, ಇಂದ್ರನಿಗೆ ವಜ್ರ - ಹೀಗೆ ಆಯುಧಗಳನ್ನು ಚಿತ್ರಗಳಲ್ಲಿ ಬರೆದು ತೋರಿಸುತ್ತಾರೆ. ಆದ್ದರಿಂದ ಚೇತನರಾದ ದೇವತೆಗಳು ಉಂಟು - ಎಂದು ಭಾವ. ಜೈ.ಸೂ.೯-೧

೬ರಿಂದ ೮ರವರೆಗಿನ ಪೂರ್ವಪಕ್ಷವಿದು. 0

ಅಧಿ. ೮. ಸೂ. ೩೩] ದೇವತೆಗಳು ಚೇತನವುಳ್ಳವರೆಂಬುದಕ್ಕೆ ಪ್ರಮಾಣವಿಲ್ಲ

೪೮೫

ವಾಗಿರುವ ವಿಷಯವನ್ನೇ ಲೋಕದಿಂದ ಪ್ರಸಿದ್ಧವಾಗಿದೆ ಎನ್ನುತ್ತಾರೆ ; ಆದರೆ ಇಲ್ಲಿ ಪ್ರತ್ಯಕ್ಷಾದಿಗಳಲ್ಲಿ ಯಾವದೊಂದು ಪ್ರಮಾಣವೂ ಇರುವದಿಲ್ಲ. ಇತಿಹಾಸಪುರಾಣವೂ ಪೌರುಷೇಯವಾಗಿರುವದರಿಂದ ತನಗೆ ಮೂಲವಾಗಿರುವ ಪ್ರಮಾಣಾಂತರವನ್ನು ಬಯಸುತ್ತದೆ. ಅರ್ಥವಾದಗಳೂ ವಿಧಿಯೊಡನೆ ಏಕವಾಕ್ಯವಾಗಿ ಸ್ತುತ್ಯರ್ಥವಾಗಿರುವ ದರಿಂದ ಬೇರೆಯ ಅರ್ಥವುಳ್ಳವಾಗಿ ದೇವಾದಿಗಳಿಗೆ ವಿಗ್ರಹಾದಿಗಳು ಉಂಟೆಂಬುದಕ್ಕೆ ಕಾರಣತ್ವವನ್ನು ಪಡೆಯಲಾರವು. ಮಂತ್ರಗಳೂ ಶ್ರುತಿಯೇ ಮುಂತಾದವುಗಳಿಂದ (ಕರ್ಮಗಳಲ್ಲಿ ) ವಿನಿಯುಕ್ತವಾಗಿರುವದರಿಂದ ಪ್ರಯೋಗಸಂಬದ್ಧವಾಗಿರುವದನ್ನೇ ಹೇಳುತ್ತವೆಯೇ ಹೊರತು ಯಾವದೊಂದು ವಸ್ತುವಿಗೂ ಪ್ರಮಾಣವಲ್ಲ (ಎಂದು ಮೀಮಾಂಸಕರು) ಹೇಳುತ್ತಾರೆ. ಆದ್ದರಿಂದ ದೇವಾದಿಗಳಿಗೆ ಅಧಿಕಾರವಿಲ್ಲ.”

ಭಾವಂ ತು ಬಾದರಾಯಣೋSಸ್ತಿ ಹಿ |೩೩||. ೩೩. ಆದರೆ (ದೇವಾದಿಗಳಿಗೂ ಅಧಿಕಾರ)ವಿದೆ ಎಂದು ಬಾದರಾಯಣನು (ಅಭಿಪ್ರಾಯಪಡುತ್ತಾನೆ) ; ಏಕೆಂದರೆ (ಅದು) ಉಂಟು.

  1. ಪ್ರತ್ಯಕ್ಷ, ಅನುಮಾನ, ಉಪಮಾನ, ಅರ್ಥಾಪತ್ತಿ - ಇವುಗಳಲ್ಲಿ.

  2. ಪೌರುಷೇಯಗ್ರಂಥಕ್ಕೆ ಕರ್ತವಾದ ಪುರುಷನ ದೋಷವು ಅಂಟಿಕೊಂಡಿರುವದರಿಂದ ಅದು ವೇದದಂತ ನಿರಪೇಕ್ಷವಾಗಿ ಪ್ರಮಾಣವಾಗಲಾರದು.

  3. ಲೌಕಿಕವಸ್ತುವಾದರೆ ಪ್ರತ್ಯಕ್ಷಾದಿಗಳನ್ನೂ ಅಲೌಕಿಕವಾದರೆ ವೇದವಚನವನ್ನೂ ಬಯಸುತ್ತವ.

  4. ಪ್ರಮಾಣತ್ವವನ್ನು ಎಂದರ್ಥ. ಅರ್ಥವಾದಕ್ಕೂ ಸ್ವತಂತ್ರವಾಗಿ ಬೇರೊಂದು ಅರ್ಥವನ್ನು ಕಲ್ಪಿಸಿದರೆ ವಾಕ್ಯಭೇದವಾಗುವದಂದು ಭಾವ. ಜೈ. ೯-೧-೯ರಲ್ಲಿ ದೇವತೆಗಳಿಗೆ ವಿಗ್ರಹವತ್ಯಾದಿಗಳುಂಟೆಂಬುದನ್ನು ವಿಸ್ತಾರವಾಗಿ ಖಂಡಿಸಿರುವದನ್ನು ನೋಡಿರಿ.

5: ಶ್ರುತಿಲಿಂಗಾದಿಗಳಿಂದ ಈ ಮಂತ್ರವನ್ನು ಈ ಕರ್ಮಕ್ಕೆ ವಿನಿಯೋಗಿಸಬೇಕು ಎಂದು ತಿಳಿಯಬರುತ್ತದೆ.

  1. ಪ್ರಯೋಗವಿಧಿಯಿಂದ ಮಂತ್ರಗಳು ಗೊತ್ತಾಗುತ್ತವೆ. ಆದ್ದರಿಂದ ಅವು ಪ್ರಯೋಗಕ್ಕೆ ಸಂಬದ್ಧವಾದ ಕರ್ಮವನ್ನಾಗಲಿ ವಸ್ತುವನ್ನಾಗಲಿ ಹೇಳಬಹುದು ; ಪ್ರಯೋಗಸಂಬದ್ಧವಲ್ಲದ ಅದೃಷ್ಟವಾಗಿರುವ ದೇವತಾದಿಗಳನ್ನು ಹೇಳಲಾರವು. ದೇವತೆಗಳಿರಬೇಕೆಂಬುದಿಷ್ಟೇ ಇಲ್ಲಿ ಬೇಕಲ್ಲದ ಅವರಿಗೆ ವಿಗ್ರಹವತ್ಯಾದಿಗಳೂ ಇರಬೇಕೆಂಬುದೂ ಅವಶ್ಯವಲ್ಲ.

  2. ಶಬ್ದವೇ ದೇವತ, ಬೇರೆಯ ದೇವತೆಯೇ ಇಲ್ಲ ಎಂಬ ಪಕ್ಷವು ಕೂಡ ಶಾ, ಭಾ. ೧೦-೪-೨೩ರಲ್ಲಿ ಕಾಣಬರುತ್ತದೆ.

೪೮೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಸಿದ್ಧಾಂತ : ದೇವಾದಿಗಳಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವುಂಟು

(ಭಾಷ್ಯ) ೩೦೦. ತುಶಬ್ದಃ ಪೂರ್ವಪಕ್ಷ ವ್ಯಾವರ್ತಯತಿ | ಬಾದರಾಯಣಸ್ತು ಆಚಾರ್ಯ: ಭಾವಮ್ ಅಧಿಕಾರಸ್ಯ ದೇವಾದೀನಾಮಪಿ ಮನ್ಯತೇ | ಯದ್ಯಪಿ ಮಧ್ವಾದಿವಿದ್ಯಾಸು ದೇವತಾದಿವ್ಯಾಮಿಶ್ರಾಸು ಅಸಂಭವೋSಧಿಕಾರಸ್ಯ, ತಥಾಪಿ ಅಸ್ತಿ ಹಿ ಶುದ್ಧಾಯಾಂ ಬ್ರಹ್ಮವಿದ್ಯಾಯಾಂ ಸಂಭವಃ | ಅರ್ಥಿತ್ವಸಾಮರ್ಥ್ಯಾಪ್ರತಿಷೇಧಾ ದ್ಯಪೇಕ್ಷಾತ್ ಅಧಿಕಾರಸ್ಯ 1 ನ ಚ ಕ್ವಚಿತ್ ಅಸಂಭವಃ ಇತ್ಯೇತಾವತಾ ಯತ್ರ ಸಂಭವಃ ತತ್ರಾಪಿ ಅಧಿಕಾರೋಪೋದ್ರೇತ | ಮನುಷ್ಯಾಣಾಮಪಿ ನ ಸರ್ವೆಷಾಂ ಬ್ರಾಹ್ಮಣಾದೀನಾಂ ಸರ್ವೆಷು ರಾಜಸೂಯಾದಿಷು ಅಧಿಕಾರಃ ಸಂಭವತಿ | ತತ್ರ

ಯೋ ನ್ಯಾಯಃ ಸೋತತ್ರಾಪಿ ಭವಿಷ್ಯತಿ 1||

(ಭಾಷ್ಯಾರ್ಥ)

ಬಾದರಾಯಣಾಚಾರ್ಯರು ದೇವಾದಿಗಳಿಗೆ ಅಧಿಕಾರವು ಉಂಟೆಂದು ಅಭಿಪ್ರಾಯ ಪಡುತ್ತಾರೆ. ಮಧು (ವಿದ್ಯಯೇ) ಮುಂತಾದ ವಿದ್ಯೆಗಳು ದೇವತಾದಿಮಿಶ್ರವಾಗಿರು ವದರಿಂದ (ಅವುಗಳಲ್ಲೇನೋ) ಅಧಿಕಾರವು ಸಂಭವಿಸುವದಿಲ್ಲ. ಆದರೂ ಶುದ್ಧವಾದ ಬ್ರಹ್ಮವಿದ್ಯೆಯಲ್ಲಿ ಅಧಿಕಾರದ ಸಂಭವವು ಉಂಟೇ ಉಂಟು ; ಏಕೆಂದರೆ ಅಧಿಕಾರಕ್ಕೆ ಅರ್ಥಿತ್ವ, ಸಾಮರ್ಥ್ಯ, ಪ್ರತಿಷೇಧಿಸದೆ ಇರುವದು - ಮುಂತಾದವುಗಳು ಬೇಕು. ಎಲ್ಲಿಯೂ ಒಂದು ಕಡೆ ಅಸಂಭವವೆಂಬಿಷ್ಟರಿಂದ ಎಲ್ಲಿ ಸಂಭವವಿದೆಯೋ ಅಲ್ಲಿಯೂ ಅಧಿಕಾರವನ್ನು ಅಲ್ಲಗಳೆಯುವದು ಆಗಲಾರದು. ಮನುಷ್ಯರಲ್ಲಿ ಬ್ರಾಹ್ಮಣರೇ ಮುಂತಾದ ಎಲ್ಲರಿಗೂ ರಾಜಸೂಯವೇ ಮುಂತಾದ ಎಲ್ಲಾ (ಕರ್ಮಗಳಲ್ಲಿಯೂ) ಅಧಿಕಾರವು ಸಂಭವಿಸುವದಿಲ್ಲ. ಅಲ್ಲಿ ಯಾವ ನ್ಯಾಯವೋ ಅದು ಇಲ್ಲಿಯೂ ಆಗಬಹುದಾಗಿದೆ.*

  1. “ಅಸ್ತಿ ಹಿ’ ಎಂಬುದರ ಅರ್ಥವಿದು. 2.ನಿರ್ಗುಣಬ್ರಹ್ಮಜ್ಞಾನದಲ್ಲಿ. 3. ಹೀಗಂದು ಮಿಾಮಾಂಸಕರೂ ಒಪ್ಪಿರುತ್ತಾರೆ.

  2. ಅಸ್ತಿ ಹಿ ಎಂಬುದಕ್ಕೆ ಶ್ರುತಿಸ್ಮೃತಿವಚನವೂ ಇದೆ ಎಂದು ಮತ್ತೊಂದು .ವ್ಯಾಖ್ಯಾನ.

ಅಧಿ. ೮. ಸೂ. ೩೩] ದೇವಾದಿಗಳಿಗೆ ಅಧಿಕಾರವನ್ನು ಸೂಚಿಸುವ ವಚನಗಳು ೪೮೭ ದೇವಾದಿಗಳಿಗೆ ಅಧಿಕಾರವನ್ನು ಸೂಚಿಸುವ ವಚನಗಳು

  • (ಭಾಷ್ಯ) ೩೦೧. ಬ್ರಹ್ಮವಿದ್ಯಾಂ ಚ ಪ್ರಕೃತ್ಯ ಭವತಿ ದರ್ಶನಂ ಶ್ವೇತಂ ದೇವಾದ್ಯಧಿಕಾರಸ್ಯ ಸೂಚಕಮ್ - ‘ತದ್ ಯೋ ಯೋ ದೇವಾನಾಂ ಪ್ರತ್ಯಬುಧ್ಯತ ಸ ಏವ ತದಭವತ್ ತಥರ್ಷಿಣಾಂ ತಥಾ ಮನುಷ್ಯಾಣಾಮ್’’ (ಬೃ. ೧-೪-೧೦) ಇತಿ | ‘ತೇ ಹೋಚುರ್ಹಾ ತಮಾತ್ಮಾನಮನ್ನಿಚ್ಛಾಮೋ ಯಮಾತ್ಮಾನಮನ್ಶಿಷ್ಯ ಸರ್ವಾಂಶ್ಚ ಲೋಕಾನಾಸ್ಪೋತಿ ಸರ್ವಾಂಶ್ಚ ಕಾಮಾನಿತೀನ್ನೋ ಹೈವ ದೇವಾನಾಮಭಿಪ್ರವಮ್ರಾಜ ವಿರೋಚನೋsಸುರಾಣಾಮ್’’ (ಛಾಂ. ೮-೭-೨) ಇತ್ಯಾದಿ ಚ 1 ಸ್ಮಾರ್ತಮಪಿ ಗಾನ್ಧರ್ವಯಾಜ್ಞವಲ್ಕಸಂವಾದಾದಿ ||

(ಭಾಷ್ಯಾರ್ಥ) ಮತ್ತು ಬ್ರಹ್ಮವಿದ್ಯೆಯ ಪ್ರಕರಣದಲ್ಲಿ ಅದನ್ನು ದೇವತೆಗಳಲ್ಲಿ ಯಾವ ಯಾವನು ಅರಿತುಕೊಂಡನೋ ಅವನೇ ಅದಾದನು ; ಋಷಿಗಳಲ್ಲಿಯೂ ಹಾಗೆಯೇ, ಮನುಷ್ಯರಲ್ಲಿಯೂ ಹಾಗೆಯೇ’ (ಬೃ. ೧-೪-೧೦) ಎಂದೂ ಆ (ದೇವಾಸುರರು) ಇಂತೆಂದರು : ಯಾವ ಆತ್ಮನನ್ನು ಹುಡುಕಿ (ಅರಿತವನು) ಎಲ್ಲಾ ಲೋಕಗಳನ್ನೂ ಎಲ್ಲಾ ಕಾಮಗಳನ್ನೂ ಪಡೆದುಕೊಳ್ಳುತ್ತಾನೋ ಆ ಆತ್ಮನನ್ನು ಹುಡುಕೋಣ, ಎಂದು ದೇವತೆಗಳಲ್ಲಿ ಇಂದ್ರನೇ ಹೊರಟನು, ಅಸುರರಲ್ಲಿ ವಿರೋಚನನು (ಹೊರಟನು)” (ಛಾಂ. ೮-೭-೨) ಎಂದು ಮುಂತಾಗಿಯೂ ದೇವಾದಿಗಳಿಗೆ ಅಧಿಕಾರವನ್ನು ಸೂಚಿಸುವ ಶ್ರುತಿಯ ದರ್ಶನವೂ ಇರುತ್ತದೆ. ಗಂಧರ್ವನಿಗೂ ಯಾಜ್ಞವಲ್ಕನಿಗೂ (ಆದ) ಸಂವಾದವೇ ಮುಂತಾದ ಸ್ಮಾರ್ತದರ್ಶನವೂ ಇದೆ.’

ಆದಿತ್ಯಾದಿಗಳು ಚೇತನರೆಂಬುದಕ್ಕೆ ಪ್ರಮಾಣ

(ಭಾಷ್ಯ) ೩೦೨, ಯದಪ್ಪಕ್ತಮ್ ‘ಜ್ಯೋತಿಷಿ ಭಾವಾಚ್ಚ’ ಇತಿ | ಅತ್ರ ಬೊಮಃ - ಜ್ಯೋತಿರಾದಿವಿಷಯಾ ಅಪಿ ಆದಿತ್ಯಾದಯಃ ದೇವತಾವಚನಾಃ ಶಬ್ದಾ;

  1. ವಿಶ್ವಾವಸುವೆಂಬ ಗಂಧರ್ವರಾಜನು ಕೇಳಿದ ಪ್ರಶ್ನೆಗೆ ಯಾಜ್ಞವಲ್ಕನು ಉತ್ತರವನ್ನು ಹೇಳಿದನು ಎಂದು ಮೋ. ಧ. ೩೧೮-೨೬ರಿಂದ ಹಿಡಿದು ಕೆಲವು ಶ್ಲೋಕಗಳಲ್ಲಿ ತಿಳಿಸಿದೆ. ಇದ ರಿಂದ ಗಂಧರ್ವನೂ ತತ್ವಿಚಾರವನ್ನು ಮಾಡಿದನಂದಾಯಿತು.

೪೮೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಚೇತನಾವತ್ರಮ್ ಐಶ್ವರ್ಯಾದ್ಯುಪೇತಂ ತಂ ತಂ ದೇವತಾತ್ಮಾನಂ ಸಮರ್ಪಯಸ್ತಿ | ಮಾರ್ಥವಾದಾದಿಷು ತಥಾ ವ್ಯವಹಾರಾತ್ | ಅಸ್ತಿ ಹಿ ಐಶ್ವರ್ಯಯೋಗಾತ್ ದೇವತಾನಾಂ ಜ್ಯೋತಿರಾದ್ಯಾತ್ಮಭಿಶ್ಚ ಅವಸ್ಥಾತುಂ ಯಥೇಷ್ಟಂ ಚ ತಂ ತಂ ವಿಗ್ರಹಂ ಗ್ರಹೀತುಂ ಸಾಮರ್ಥ್ಯಮ್ | ತಥಾ ಹಿ ಶೂಯತೇ ಸುಬ್ರಹ್ಮಣ್ಯಾರ್ಥವಾದೇ - “ಮೇಧಾತಿಥೇರ್ಮೆನೇತಿ ಮೇಧಾತಿಥಿಂಹ ಕಾಣಾಯನಮಿನ್ದ ಮೇಷೋ ಭೂತ್ವಾ ಜಹಾರ’’ (ಷಡ್ರಿಂಶ. ಬ್ರಾ. ೧-೧) ಇತಿ | ಸ್ಮರ್ಯತೇ ಚ ‘‘ಆದಿತ್ಯಃ ಪುರುಷೋ ಭೂತ್ಯಾ ಕುಮುಪಜಗಾಮ ಹ’ (?)’ ಇತಿ | ಮೈದಾದಿಷ್ಟಪಿ ಚೇತನಾ ಅಧಿಷ್ಠಾತಾರೋಭ್ಯುಪಗಮ್ಮ - “ಮೃದಬ್ರವೀತ್’ (ಶತ, ಬ್ರಾ, ೬-೧-೩-೨) “ಆಪೋಬ್ರುವನ್’ (ಶತ, ಬ್ರಾ, ೬-೧-೩-೪) ಇತ್ಯಾದಿದರ್ಶನಾತ್ | ಜ್ಯೋತಿ ರಾದೇಸ್ತು ಭೂತಧಾತೋ? ಆದಿತ್ಯಾದಿಷು ಅಚೇತನತ್ವಮ್ ಅಭ್ಯುಪಗಮ್ಯತೇ | ಚೇತನಾಸ್ತು ಅಧಿಷ್ಠಾತಾರೋ ದೇವತಾತ್ಮಾನಃ | ಮನ್ಯಾರ್ಥವಾದಾದಿವ್ಯವಹಾರಾತ್ ಇತ್ಯುಕ್ತಮ್ ||

(ಭಾಷ್ಯಾರ್ಥ) ಇನ್ನು ಜ್ಯೋತಿಷಿ ಭಾವಾಚ್ಚ” (ಜ್ಯೋತಿಯಲ್ಲಿ ಈ ಶಬ್ದಪ್ರಯೋಗವಿದೆ) ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಲ್ಲ, ಅದಕ್ಕೆ ಹೇಳುತ್ತೇವೆ. ಆದಿತ್ಯಾದಿದೇವತಾ ವಾಚಕ (ಶಬ್ದಗಳು) ಜ್ಯೋತಿಯೇ ಮುಂತಾದದ್ದರ ವಿಷಯವಾಗಿರುವವಾದರೂ ಚೇತನವುಳ್ಳ ಐಶ್ವರ್ಯವೇ ಮುಂತಾದವುಗಳಿಂದೊಡಗೂಡಿದ ಆಯಾ ದೇವತಾತ್ಮ ನನ್ನೂ ತಿಳಿಸುತ್ತವೆ (ಎಂದೊಪ್ಪಬೇಕು) ; ಏಕೆಂದರೆ ಮಂತ್ರಗಳು, ಅರ್ಥವಾದಗಳು, ಮುಂತಾದವುಗಳಲ್ಲಿ ಹಾಗೆ ವ್ಯವಹಾರವನ್ನು ಮಾಡಿರುತ್ತದೆ. ಐಶ್ವರ್ಯದ ಸಂಬಂಧ ದಿಂದ ದೇವತೆಗಳಿಗೆ ಜ್ಯೋತಿರಾದಿರೂಪದಿಂದ ಇದ್ದುಕೊಂಡಿರುವದಕ್ಕೂ (ಅದೇ ಕಾಲದಲ್ಲಿ) ಇಷ್ಟಬಂದಂತೆ ಆಯಾ ಶರೀರವನ್ನು ಧರಿಸಿರುವದಕ್ಕೂ ಸಾಮರ್ಥ್ಯವು ಇದ್ದೇ ಇರುತ್ತದೆ. ಆದ್ದರಿಂದ ಸುಬ್ರಹ್ಮಣ್ಯಾರ್ಥವಾದದಲ್ಲಿ ‘ಮೇಧಾತಿಥಿಯ ಮೇಷನೆ’, ಎಂದು (ಹೇಳಿದೆಯಷ್ಟ, ಅದರ ಅಭಿಪ್ರಾಯವೇನೆಂದರೆ) “ಕಾಣ್ಯಾಯನ ಮೇಧಾತಿಥಿಯನ್ನು ಇಂದ್ರನು ಮೇಷನಾಗಿ ಅಪಹರಿಸಿದನು’ ಎಂದರ್ಥ (ಷಡ್ರಿಂಶ.ಬ್ರಾ. ೧-೧) ಎಂದು ಶ್ರುತಿಯಲ್ಲಿ ಹೇಳಿರುತ್ತದೆ. “ಆದಿತ್ಯನು ಮನುಷ್ಯನಾಗಿ ಕುಂತಿಯ

  1. ಈ ವಾಕ್ಯದ ಅನುವಾದದ ಕಳಗಿನ ಟಿಪ್ಪಣಿಯನ್ನು ನೋಡಿರಿ. 2. ಇದು ಮಹಾಭಾರತದಲ್ಲಿ ನಮಗೆ ಸಿಕ್ಕಿಲ್ಲ. 3. ಅಸ್ತಿ ಹಿ ಎಂಬುದಕ್ಕೆ ಮತ್ತೊಂದು ವ್ಯಾಖ್ಯಾನವಿದು. 4. ಇದು ಯಾವ ಶ್ರುತಿಯ ವ್ಯಾಖ್ಯಾನವೆಂಬುದು ತಿಳಿಯದು. ಜೈ, ಸೂ. ೯-೧-೪೨ರ

ಅಧಿ. ೮. ಸೂ. ೩೩] ಅನ್ಯಾರ್ಥವಾಗಿರುವ ಮಂತ್ರಾದಿಗಳೂ ದೇವತೆಯನ್ನು ಹೇಳಬಹುದು ೪೮೯ ಬಳಿಗೆ ಬಂದನು’ (?) ಎಂದು ಸ್ಮೃತಿಯಲ್ಲಿಯೂ ಇದೆ. ಮಣ್ಣು ಮುಂತಾದವು ಗಳಲ್ಲಿಯೂ ಚೇತನರಾದ ಅಧಿಷ್ಠಾತೃ (ದೇವತೆಗಳುಂಟೆಂದು ನಾವು) ಒಪ್ಪುತ್ತೇವೆ ; ಏಕೆಂದರೆ ‘ಮಣ್ಣು ಹೇಳಿತು’ (ಶತ. ಬ್ರಾ, ೬-೧-೩-೨), ‘ಅಪ್ಪು ಹೇಳಿತು’ (ಶತ. ಬ್ರಾ, ೬-೧-೩-೪) ಎಂದು ಮುಂತಾಗಿ (ಶ್ರುತಿಯಲ್ಲಿರುವದು) ಕಂಡುಬರುತ್ತದೆ. ಆದಿತ್ಯಾದಿಗಳಲ್ಲಿರುವ ಜ್ಯೋತಿಯೇ ಮುಂತಾದ ಭೂತಧಾತುವಿಗಾದರೋ ಅಚೇತನತ್ವ ವನ್ನು ಒಪ್ಪಿಯೇ ಇರುತ್ತೇವೆ. (ಅವುಗಳ) ಅಧಿಷ್ಠಾತೃಗಳಾದ ದೇವತಾತ್ಮರುಗಳು ಮಾತ್ರ ಚೇತನ(ರೂಪರು) ; ಏಕೆಂದರೆ ಮಂತ್ರಗಳು, ಅರ್ಥವಾದಗಳು - ಮುಂತಾದವುಗಳಲ್ಲಿ (ಹಾಗೆಂದು) ವ್ಯವಹಾರವಿದೆ ಎಂದು ಹೇಳಿದ್ದಾಗಿದೆ.

ಅನ್ಯಾರ್ಥವಾಗಿರುವ ಮಂತ್ರಾದಿಗಳೂ

ದೇವತೆಯನ್ನು ಹೇಳಬಹುದು

(ಭಾಷ್ಯ) - ೩೦೩. ಯದಪ್ಪಕ್ತಮ್ - ಮನ್ನಾರ್ಥವಾದಯೋರನ್ಯಾರ್ಥತ್ವಾತ್ ನ ದೇವತಾವಿಗ್ರಹಾದಿಪ್ರಕಾಶನಸಾಮರ್ಥ್ಯಮ್ ಇತಿ | ಅತ್ರ ಬ್ಯೂಮಃ | ಪ್ರತ್ಯಯಾ ಪ್ರತ್ಯಯ್ ಹಿ ಸದ್ಭಾವಾಸದ್ಭಾವಯೋಃ ಕಾರಣಮ್, ನಾನ್ಯಾರ್ಥತ್ವಮ್ ಅನನ್ಯಾರ್ಥತ್ವಂ ವಾ | ತಥಾ ಹಿ ಅನ್ಯಾರ್ಥಮಪಿ ಪ್ರಸ್ಥಿತಃ ಪಥಿ ಪತಿತಂ ತೃಣಪರ್ಣಾದಿ ಅಸ್ತೀವ ಪ್ರತಿಪದ್ಯತೇ | ಅತ್ರಾಹ - ವಿಷಮ ಉಪನ್ಯಾಸಃ | ತತ್ರ ಹಿ

ಭಾಷ್ಯದಲ್ಲಿ ‘ಸುಬ್ರಹ್ಮಣ್ಯನಿಗದವು’ ಜ್ಯೋತಿಷ್ಟೋಮದಲ್ಲಿದೆ ಎಂದು ಬರೆದಿದೆ. ತೈತ್ತಿರೀಯ ಆರಣ್ಯಕದಲ್ಲಿ ಈ ಆಹ್ವಾನಮಂತ್ರವು ಹೀಗಿದೆ: ‘‘ಸುಬ್ರಹ್ಮಣೋಗ್ಂ ಸುಬ್ರಹ್ಮಣೋಗ್ರ ಸುಬ್ರಹ್ಮಣ್ಯಮ್ | ಇನ್ಸಾಗಚ್ಛ ಹರಿವ ಆಗಚ್ಛ ಮೇಧಾತಿಥೇಃ | ಮೇಷ ವೃಷಣಶ್ವಸ್ಯ ಮೇನೇ ಗೌರಾವಸ್ಕನ್ನಹಲ್ಕಾಯ್ದೆ ಜಾರ ಕೌಶಿಕಬ್ರಾಹ್ಮಣಗೌತಮಬ್ರುವಾಣ ||’ (ತೈ.ಆ.೧ ೧೨-೫೮, ೫೯) ಬ್ರಾಹ್ಮಣವಾಕ್ಯವನ್ನು ಸಾಯಣಭಾಷ್ಯದಲ್ಲಿ ಹೀಗೆ ಬರೆದಿದೆ : “ಹರಿವ ಆಗಬೇತಿ ಪೂರ್ವಪಕ್ಷಾಪರವ ವಾ ಇನ್ನಸ್ಯ ಹರೀ ತಾಭ್ಯಾಂ ದ್ವೇಷ ಸರ್ವಂ ಹರತೀತಿ | ಮೇಧಾತಿಥೇರ್ಮಣೇತಿ ಮೇಧಾತಿಥಿಂ ಕಾಣ್ವಾಯನಿಂ ಮೇಷೋ ಭೂತ್ವಾ ಜಹಾರ | ವೃಷಣಶ್ವಸ್ಯ ಮೇನ ಇತಿ ವೃಷಣಶ್ವಸ್ಯ ಮೇನಕಾ ನಾಮ ದುಹಿತಾ ತಾಮಿವೃಶ್ಚಕಮೇ | ಗೌರಾವಸ್ಕತಿ ಗೌರಮ್ಮಗೋ ಭೂತ್ವಾ ರಾಜಾನಂ ಪಿಬತಿ |’ ಇದೇ ವಾಕ್ಯವು ಜೈ. ೯-೧-೪೩ರ ಭಾಷ್ಯದಲ್ಲಿ ಉದಾಹೃತವಾಗಿದ್ದು ಸ್ವಲ್ಪ ಹೆಚ್ಚು ಕಡಿಮಯಾಗಿದೆ.

  1. ಆದ್ದರಿಂದ ಸೂರ್ಯನು ಚೇತನನೆಂದಾಯಿತು. 2. ಆದ್ದರಿಂದ ಆದಿತ್ಯಾದಿಗಳು ಮೈದಾದಿಗಳಂತ ಅಚೇತನರೆಂಬ ಅನುಮಾನವು ಸಲ್ಲದು.

೪೯೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ತೃಣಪರ್ಣಾದಿವಿಷಯಂ ಪ್ರತ್ಯಕ್ಷ ಪ್ರವೃತ್ತಮಸ್ತಿ ಯೇನ ತದಸ್ತಿತ್ವಂ ಪ್ರತಿಪದ್ಯತೇ | ಅತ್ರ ಪುನರ್ವಿದ್ಯುದ್ದೇಶೈಕವಾಕ್ಯಭಾವೇನ ಸ್ತುತ್ಯರ್ಥ ಅರ್ಥವಾದೇ ನ ಪಾರ್ಥಗರ್ಥೈನ ವೃತ್ರಾಸ್ತವಿಷಯಾ’ ಪ್ರವೃತ್ತಿ: ಶಕ್ಯಾಧ್ಯವಸಾತುಮ್ । ನ ಹಿ ಮಹಾವಾಕ್ಕೆ ಅರ್ಥಪ್ರತ್ಯಾಯಕೇ, ಅವಾಸ್ತರವಾಕ್ಯಸ್ಯ ಪೃಥಕೃತ್ಯಾಯಕತ್ವಮಸ್ತಿ | ಯಥಾ ನ ಸುರಾಂ ಪಿಬೇತ್’ ಇತಿ ನಞತಿ ವಾಕ್ಯ ಪದತ್ರಯಸಂಬದ್ಧಾತ್ ಸುರಾಪಾನಪ್ರತಿಷೇಧ ಏವ ಏಕೋರ್ಥೈವಗಮ್ಯತೇ ನ ಪುನಃ ‘ಸುರಾಂ ಪಿಬೇತ್’ ಇತಿ ಪದಯಸಂಬಾತ್ ಸುರಾಪಾನವಿಧಿರಪಿ ಇತಿ | ಅಪ್ರೋಚ್ಯತೇ | ವಿಷಮ ಉಪನ್ಯಾಸಃ | ಯುಕ್ತಂ ಯತ್ ಸುರಾಪಾನಪ್ರತಿಷೇಧೇ ಪದಾನ್ವಯಸ್ಯ ಏಕತ್ವಾತ್

ಅವಾಸ್ತರವಾಕ್ಯಾರ್ಥಸ್ಯ ಅಗ್ರಹಣಮ್ | ವಿದ್ಯುದ್ದೇಶಾರ್ಥವಾದಯೋಸ್ತು ಅರ್ಥವಾದಸ್ಥಾನಿ ಪದಾನಿ ಪೃಥಗನ್ವಯವೃತ್ತಾನವಿಷಯಂ ಪ್ರತಿಪದ್ಯ ಅನನ್ತರಂ ಕೈಮರ್ಥ್ಯವಶೇನ ಕಾಮಂ ವಿಧೇಃ ಸ್ರಾವಕತ್ವಂ ಪ್ರತಿಪದ್ಯ ! ಯಥಾ ಹಿ ವಾಯವ್ಯಂ ಶ್ವೇತಮಾಲಭೇತ ಭೂತಿಕಾಮಃ’ (ತೈ. ಸಂ. ೨-೧-೧) ಇತ್ಯತ್ರ ವಿಧ್ಯುದ್ದೇಶವರ್ತಿನಾಂ ವಾಯವ್ಯಾದಿಪದಾನಾಂ ವಿಧಿನಾ ಸಂಬನ್ದಃ, ನೈವಂ ವಾಯುರ್ವೆ ಕೋಪಿಷ್ಠಾ ದೇವತಾ ವಾಯುಮೇವ ಸ್ಟೇನ ಭಾಗಧೇಯೇನೋಪಧಾವತಿ ಸ ಏವ್ಯನಂ ಭೂತಂ ಗಮಯತಿ’ (ತೈ. ಸಂ.೨-೧-೧) ಇತ್ಯೇಷಾಮ್ ಅರ್ಥವಾದಗತಾನಾಂ ಪದಾನಾಮ್ ನ ಹಿ ಭವತಿ “ವಾಯುರ್ವಾ ಆಲಭೇತ’ ಇತಿ’, ‘ಕ್ಷೇಪಿಷ್ಠಾ ದೇವತಾ ವಾ ಆಲಭೇತ’ ಇತ್ಯಾದಿ | ವಾಯುಸ್ವಭಾವಸಂಕೀರ್ತನೇನ ತು ಅವಾಸ್ತರಮ್ ಅನ್ವಯಂ ಪ್ರತಿಪದ್ಯ ಏವಂವಿಶಿಷ್ಟ ದೈವತ್ಯಮಿದಂ ಕರ್ಮ’ ಇತಿ ವಿಧಿಂ ಸ್ತುವನ್ತಿ | ತದ್ ಯತ್ರ ಯೋವಾನ್ತರವಾಕ್ಯಾರ್ಥ ಪ್ರಮಾಣಾನರಗೋಚರೋ ಭವತಿ ತತ್ರ ತದನುವಾದೇನ ಅರ್ಥವಾದಃ ಪ್ರವರ್ತತೇ | ಯತ್ರ ಪ್ರಮಾಣಾನ್ತರವಿರುದ್ಧ; ತತ್ರ ಗುಣವಾದೇನ | ಯತ್ರ ತು ತದುಭಯಂ ನಾಸ್ತಿ, ತತ್ರ ಕಿಂ ಪ್ರಮಾಣಾನ್ತರಾಭಾವಾದ್ ಗುಣವಾದಃ ಸ್ಮಾತ್, ಆಹೋಸ್ಟಿತ್ ಪ್ರಮಾಣಾರಾವಿರೋಧಾದ್ ವಿದ್ಯಮಾನವಾದಃ ? ಇತಿ ಪ್ರತೀತಿಶರಃ ವಿದ್ಯ

ಮಾನವಾದ ಆಶ್ರಯಣಿಯೋ’ ನ ಗುಣವಾದಃ | ಏತೇನ ಮನ್ನೂ ವ್ಯಾಖ್ಯಾತಃ | ಅಪಿ ಚ ವಿಧಿಭಿರೇವ ಇನ್ನಾದಿದೈವತ್ಯಾನಿ ಹವೀಂಷಿ ಚೋದಯದ್ಭ: ಅಪೇಕ್ಷಿತಮ್ ಇನ್ನಾದೀನಾಂ ಸ್ವರೂಪಮ್ | ನ ಒ ಸ್ವರೂಪರಹಿತಾ ಇನ್ನಾದಯಃ ಚೇತಸಿ ಆರೋಪಯಿತುಂ ಶಕ್ಯನೇ | ನ ಚ ಚೇತಸಿ ಅನಾರೂಢಾಯ್ ತಸ್ಯೆ ತಸ್ಕೃ ದೇವತಾಯ್ಕೆ ಹವಿಃ ಪ್ರದಾತುಂ ಶಕ್ಯತೇ | ಶ್ರಾವಯತಿ ಚ ‘‘ಯಸ್ಕೃ ದೇವತಾಯ್ಕೆ ಹವಿರ್ಗಹೀತಂ

  1. ಇಲ್ಲಿ ‘ವೃತಾರ್ಥ’ ಎಂದೇ ಭಾಷ್ಯಕಾರರು ಬರದಿದ್ದರೂ ಇರಬಹುದೆಂದು ಕಾಣುತ್ತದೆ. 2. ಇಲ್ಲಿ ‘ಇತಿ’ ಇಲ್ಲದಿದ್ದರೂ ಸಾಗುತ್ತಿತ್ತೆಂದು ಕಾಣುತ್ತಿದೆ.

ಅಧಿ. ೮. ಸೂ. ೩೩]ಅನ್ಯಾರ್ಥವಾಗಿರುವ ಮಂತ್ರಾದಿಗಳೂ ದೇವತೆಯನ್ನು ಹೇಳಬಹುದು ೪೯೧ ಸ್ಯಾತ್ ತಾಂ ಧ್ಯಾಯೇದ್ ವಷಟ್ಕರಿಷ್ಯನ್’ (ಐ. ಬ್ರಾ. ೩-೮-೧) ಇತಿ 1 ನ ಚ ಶಬ್ದಮಾತ್ರಮ್ ಅರ್ಥಸ್ವರೂಪಂ ಸಂಭವತಿ | ಶಬ್ದಾರ್ಥಯೋರ್ಭೆದಾತ್ | ತತ್ರ ಯಾದೃಶಂ ಮನ್ಯಾರ್ಥವಾದಯೋಃ ಇಾದೀನಾಂ ಸ್ವರೂಪಮ್, ನ ತತ್ ತಾದೃಶಂ ಶಬ್ದ ಪ್ರಮಾಣಕೇನ ಪ್ರತ್ಯಾಖ್ಯಾತುಂ ಯುಕ್ತಮ್ | ಇತಿಹಾಸಪುರಾಣಮಪಿ ವ್ಯಾಖ್ಯಾನೇನ ಮಾರ್ಗಣ ಸಂಭವನ್ಯಾರ್ಥವಾದಮೂಲತ್ಪಾತ್ ಪ್ರಭವತಿ ದೇವತಾವಿಗ್ರಹಾದಿಸಾಧಯಿತುಮ್ ||

(ಭಾಷ್ಯಾರ್ಥ) ಇನ್ನು ಮಂತ್ರಾರ್ಥವಾದಗಳಿಗೆ ಬೇರೆಯ ತಾತ್ಪರ್ಯವಿರುವದರಿಂದ ದೇವತೆಗಳಿಗೆ ವಿಗ್ರಹಾದಿಗಳಿರುವವೆಂಬುದನ್ನು ತಿಳಿಸುವ ಸಾಮರ್ಥ್ಯವಿಲ್ಲ ಎಂದು (ಪೂರ್ವಪಕ್ಷ ದಲ್ಲಿ) ಹೇಳಿತ್ತಷ್ಟೆ. ಅದಕ್ಕೆ ಹೇಳುತ್ತೇವೆ : (ಶಬ್ದದಿಂದ) ಜ್ಞಾನವಾಗುವದು, ಅಥವಾ ಆಗದಿರುವದು - ಇವು (ವಸ್ತು) ಇರುವದಕ್ಕೂ ಇಲ್ಲದ್ದಕ್ಕೂ ಕಾರಣವೇ ಹೊರತು ಮತ್ತೊಂದಕ್ಕಾಗಿ ಬಂದಿರುವದು, ಅಥವಾ ಮತ್ತೊಂದಕ್ಕಾಗಿ ಬಾರದಿರುವದು - ಎಂಬುದಲ್ಲ. ಆದ್ದರಿಂದಲೇ ಮತ್ತೊಂದಕ್ಕೋಸ್ಕರ ಹೊರಟವನೂ ದಾರಿಯಲ್ಲಿ ಬಿದ್ದಿರುವ ಹುಲ್ಲುಕಡ್ಡಿ, ಎಲೆ - ಮುಂತಾದದ್ದನ್ನು ಇದೆಯಂದೇ ತಿಳಿಯುತ್ತಾನೆ.

(ಆಕ್ಷೇಪ) :- ಇಲ್ಲಿ (ಪೂರ್ವಪಕ್ಷಿ) ಹೇಳುತ್ತಾನೆ. ದೃಷ್ಟಾಂತವು ಸಮನಲ್ಲ. ಏಕೆಂದರೆ ಆ (ದೃಷ್ಟಾಂತ)ದಲ್ಲಿ ತೃಣಪರ್ಣಾದಿವಿಷಯದಲ್ಲಿ ಪ್ರತ್ಯಕ್ಷವು ಪ್ರವೃತ್ತ ವಾಗಿರುತ್ತದೆ ; ಅದರಿಂದ ಅದು ಇದೆ ಎಂದು ನಿಶ್ಚಯಿಸಿಕೊಳ್ಳುತ್ತಾನೆ. ಆದರೆ ಇಲ್ಲಿಯೋ ಎಂದರೆ ವಿಧಿವಾಕ್ಯದೊಡನೆ ಏಕವಾಕ್ಯತೆ ಇರುವದರಿಂದ ಅರ್ಥವಾದವು ಸ್ತುತಿಗಾಗಿ (ಬಂದಿದೆ ಎಂದಾಗಿರು) ವಲ್ಲಿ (ಅದಕ್ಕೆ) ಬೇರೊಂದು ಅರ್ಥವನ್ನು (ಕೊಟ್ಟು) ಇರುವ ವಸ್ತುವಿನ ವಿಷಯದಲ್ಲಿ ಪ್ರವೃತ್ತಿ (ಯುಂಟೆಂದು) ನಿಶ್ಚಯಿಸು ವದು ಆಗಲಾರದು. ಮಹಾವಾಕ್ಯವು ಅರ್ಥವನ್ನು ತಿಳಿಸುವಲ್ಲಿ ಅವಾಂತರವಾಕ್ಯಕ್ಕೂ ಬೇರೆಯಾಗಿ (ಅರ್ಥವನ್ನು) ತಿಳಿಸುವದೆಂಬುದು ಇರುವದೇ ಇಲ್ಲ. ಹೇಗೆಂದರೆ ‘ನ ಸುರಾಂ ಪಿಬೇತ್” (ಹಂಡವನ್ನು ಕುಡಿಯತಕ್ಕದ್ದಲ್ಲ) ಎಂದು ನಞಶಬ್ದವುಳ್ಳ ವಾಕ್ಯದಲ್ಲಿ ಮೂರು ಪದಗಳ ಸಂಬಂಧದಿಂದ ಸುರಾಪಾನಪ್ರತಿಷೇಧವೆಂಬ ಒಂದೇ ಅರ್ಥವೇ ಗೊತ್ತಾಗುವದೇ ಹೊರತು ‘ಸುರಾಂ ಪಿಬೇತ್’ (ಹಂಡವನ್ನು ಕುಡಿಯ

  1. ಪರಾರ್ಥವಾಗಿರುವ ವಾಕ್ಯವೂ ತನ್ನ ಅರ್ಥವನ್ನು ಬೇರೆಯಾಗಿ ತಿಳಿಸುವ ಹಾಗಿದ್ದರೆ ಆ ವಿಷಯದಲ್ಲಿ ಪ್ರಮಾಣವೇ ಎಂದರ್ಥ.

  2. ಒಟ್ಟುವಾಕ್ಯ. 3. ಉಪವಾಕ್ಯ, ಒಳವಾಕ್ಯ.೪೯೨ .

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ತಕ್ಕದ್ದು ) ಎಂದು ಎರಡು ಪದಗಳ ಸಂಬಂಧದಿಂದ ಸುರಾಪಾನವಿಧಿಯನ್ನೂ (ನಿಶ್ಚಯಿಸುವದಕ್ಕೆ) ಆಗುವದಿಲ್ಲ.

(ಪರಿಹಾರ) :- ಇದಕ್ಕೆ ಹೇಳುತ್ತೇವೆ. ದೃಷ್ಟಾಂತವು ಸಮನಲ್ಲ. ಸುರಾಪಾನ ಪ್ರತಿಷೇಧವಿಷಯದಲ್ಲಿ ಪದಾನ್ವಯವು ಒಂದೇ ಆಗಿರುವದರಿಂದ ಅವಾಂತರವಾಕ್ಯ ದಿಂದ ಅರ್ಥವನ್ನು ಗ್ರಹಿಸಬಾರದೆಂಬುದು ಯುಕ್ತವಾಗಿರುತ್ತದೆ. ಆದರೆ ವಿಧಿವಾಕ್ಯ, ಅರ್ಥವಾದ - ಇವುಗಳ ವಿಷಯದಲ್ಲಿಯೋ ಎಂದರೆ ಅರ್ಥವಾದದಲ್ಲಿರುವ ಪದಗಳು ಭೂತವಸ್ತುವಿಷಯದಲ್ಲಿ ಬೇರೆ ಅನ್ವಯವನ್ನು ಪಡೆದು ಆಮೇಲೆ ಕೈಮರ್ಥ್ಯವಶದಿಂದ ಅವಶ್ಯವಾಗಿ ವಿಧಿಯನ್ನು ಹೊಗಳುವ (ಸ್ವರೂಪ) ವನ್ನು ಪಡೆದುಕೊಳ್ಳಬಹುದು. ಹೇಗೆ “ವಾಯವ್ಯಂ ಶ್ವೇತಮಾಲಭೇತ ಭೂತಕಾಮಃ” ಭೂತಕಾಮನಾದವನು ವಾಯು ದೇವತಾಕವಾಗಿ ಬಿಳಿಯ ಪಶುವನ್ನು ಬಲಿಕೊಡಬೇಕು. (ತೈ. ಸಂ.೨-೧-೧) ಎಂಬಲ್ಲಿ ವಿದ್ಯುದ್ದೇಶ (ವಾಕ್ಯದಲ್ಲಿರುವ ವಾಯವ್ಯ’ವೇ ಮುಂತಾದ ಪದಗಳಿಗೆ ವಿಧಿಯೊಡನೆ ಸಂಬಂಧವಿರುತ್ತದೆಯೋ, “ವಾಯುರ್ವ ಕೋಪಿಷ್ಠಾದೇವತಾ ವಾಯುಮೇವ ಸ್ಟೇನ ಭಾಗಧೇಯೇನೋಪಧಾವತಿ ಸ ಏವೈನಂ ಭೂತಂ ಗಮಯತಿ’ (ತೈ. ಸಂ. ೨-೧-೧ ವಾಯುವೇ ಕ್ಷಿಪ್ರತಮವಾದ ದೇವತೆಯು ; ವಾಯುವನ್ನೇ ತನ್ನ ಭಾಗದಿಂದ ಬಳಿ ಸಾರುತ್ತಾನೆ, ಆತನೇ ಇವನನ್ನು ಭೂತಿಯನ್ನು ಹೊಂದಿಸುತ್ತಾನೆ) ಎಂಬ ಅರ್ಥ ವಾದದಲ್ಲಿರುವ ಈ ಪದಗಳಿಗೂ ಹಾಗೆ (ವಿಧಿಯೊಡನೆ) ಸಂಬಂಧವಿರುವದಿಲ್ಲ. “ವಾಯುರ್ವಾ ಆಲಭೇತ’ (ವಾಯುವೇ ಬಲಿಯೊಪ್ಪಿಸಬೇಕು) ಎಂದಾಗಲಿ, “ಕ್ಷೇಪಿಷ್ಠಾ ವಾ ದೇವತಾ ಆಲಭೇತ’ (ಕ್ಷಿಪ್ರವಾದ ದೇವತೆಯೇ ಬಲಿಯೊಪ್ಪಿಸಬೇಕು) ಎಂದು ಮುಂತಾಗಿಯಾಗಲಿ (ಅನ್ವಯ)ವಾಗುವದೇ ಇಲ್ಲ. ಆದರೆ ವಾಯುವಿನ ಸ್ವಭಾವವನ್ನು ಹೇಳುವದರ ಮೂಲಕ ಅವಾಂತರವಾದ ಅನ್ವಯವನ್ನು ಹೊಂದಿ’ ‘ಇಂಥ ವಿಶಿಷ್ಟ ದೇವತೆಯುಳ್ಳದ್ದು ಈ ಕರ್ಮವು’ ಎಂದು ವಿಧಿಯನ್ನು ಹೊಗಳು ತವೆ. ಆದ್ದರಿಂದ ಎಲ್ಲಿ ಆ ಅವಾಂತರವಾಕ್ಯದ ಅರ್ಥವು ಮತ್ತೊಂದು ಪ್ರಮಾಣಕ್ಕೆ ವಿಷಯವಾಗಿರುವದೋ ಅಲ್ಲಿ ಅದನ್ನು ಅನುವಾದಮಾಡಿಕೊಂಡು ಅರ್ಥವಾದವು ಪ್ರವರ್ತಿಸುತ್ತದೆ ; ಎಲ್ಲಿ ಇನ್ನೊಂದು ಪ್ರಮಾಣಕ್ಕೆ ವಿರುದ್ಧವಾಗಿರುವದೋ ಅಲ್ಲಿ

  1. ಏತಕ್ಕೋಸ್ಕರ ? – ಎಂಬ ಆಕಾಂಕ್ಷೆಯಿಂದ.

  2. ಒಳವಾಕ್ಯದಲ್ಲಿ ಒಂದು ಅನ್ವಯವನ್ನು ಹೊಂದಿದ ಬಳಿಕವೇ ವಿಧಿಗೆ ಸಂಬಂಧ ಪಡಬೇಕು ಎಂದರ್ಥ.

  3. “ಅಗ್ನಿರ್ಹಿಮಸ್ಯ ಭೇಷಜಮ್’ ಎಂಬ ವಾಕ್ಯವು ತಿಳಿಸುವ - ಬೆಂಕಿಯು ಚಳಿಯನ್ನು ಕಳೆಯುವದಂಬ - ಅರ್ಥವು ಬೇರೊಂದು ಪ್ರಮಾಣದಿಂದ ತಿಳಿಯಬರುವದರಿಂದ, ಇದು ಅನುವಾದವು.

ಅಧಿ. ೮. ಸೂ. ೩೩]ಅನ್ಯಾರ್ಥವಾಗಿರುವ ಮಂತ್ರಾದಿಗಳೂ ದೇವತೆಯನ್ನು ಹೇಳಬಹುದು ೪೯೩

ಗುಣವಾದದಿಂದ’ ಪ್ರವರ್ತಿಸುತ್ತದೆ. ಎಲ್ಲಿ ಇವೆರಡೂ ಇಲ್ಲವೋ ಅಲ್ಲಿ ಪ್ರಮಾಣಾಂತರ ವಿಲ್ಲದ್ದರಿಂದ ಗುಣವಾದವಾಗಬೇಕೊ, ಅಥವಾ ಪ್ರಮಾಣಾಂತರಕ್ಕೆ ವಿರೋಧವಿಲ್ಲದ್ದ ರಿಂದ ವಿದ್ಯಮಾನವಾದವಾಗಬೇಕೊ ? - ಎಂಬ (ಶಂಕೆಯುಂಟಾಗಲು) ಪ್ರತೀತಿಶರಣ ರಾದವರು ವಿದ್ಯಮಾನವಾದವನ್ನೇ ಇಟ್ಟುಕೊಳ್ಳಬೇಕೇ ಹೊರತು ಗುಣವಾದವನ್ನು (ಇಟ್ಟುಕೊಳ್ಳಬಾರದು). ಇದರಿಂದ ಮಂತ್ರ(ವಿಚಾರವನ್ನೂ) ವಿವರಿಸಿದಂತೆ ಆಯಿತು.

ಇದಲ್ಲದೆ ಇಂದ್ರನೇ ಮುಂತಾದ ದೇವತೆಗಳಿಗೆ ಹವಿಸ್ಸನ್ನು (ಕೊಡಬೇಕೆಂದು) ವಿಧಿಸುವ ವಿಧಿಗಳೇ ಇಂದ್ರಾದಿದೇವತೆಗಳಿಗೆ ಸ್ವರೂಪವಿರಬೇಕೆಂದು ಬಯಸುತ್ತವೆ. ಏಕೆಂದರೆ ಸ್ವರೂಪವಿಲ್ಲದ ಇಂದ್ರಾದಿಗಳನ್ನು ಚಿತ್ರದಲ್ಲಿ ಹತ್ತಿಸಿಕೊಳ್ಳುವದಕ್ಕೆ ಆಗಲಾರದು. ಚಿತ್ರದಲ್ಲಿ ಹತ್ತಿಸಿಕೊಳ್ಳದೆ ಇರುವ ಆಯಾ ದೇವತೆಗೆ ಹವಿಸ್ಸನ್ನು ಕೊಡುವದೂ ಆಗುವದಿಲ್ಲ. ಯಾವ ದೇವತೆಗೋಸ್ಕರ ಹವಿಸ್ಸನ್ನು ಗ್ರಹಿಸಲಾಗು ವದೋ ಆ (ದೇವತೆಯನ್ನು ) ವಷಟ್ಕಾರವನ್ನು ಹೇಳುತ್ತಾ (ಮನಸ್ಸಿನಲ್ಲಿ) ಧ್ಯಾನಿಸ ಬೇಕು.’’ (ಐ.ಬ್ರಾ.೩-೮-೧) ಎಂದುಶ್ರುತಿಯಲ್ಲಿ ಹೇಳಿಯೂ ಇದೆ. ಬರಿಯ ಶಬ್ದವೇ ಪದಾರ್ಥದ ಸ್ವರೂಪವಾಗುವಂತಿಲ್ಲ ; ಏಕೆಂದರೆ ಶಬ್ದಾರ್ಥಗಳಿಗೆ ಭೇದವಿರು ತ್ತದೆ.* ಹೀಗಿರುವಲ್ಲಿ ಮಂತ್ರಾರ್ಥವಾದಗಳಲ್ಲಿ ಇಂದ್ರಾದಿಗಳಿಗೆ ಯಾವ ಸ್ವರೂಪವು ನಿಶ್ಚಿತವಾಗಿರುತ್ತದೆಯೋ, ಅಂಥ ಆ (ಸ್ವರೂಪ)ವನ್ನು ತಿರಸ್ಕರಿಸುವದು ಶಬ್ದವನ್ನು ಪ್ರಮಾಣವೆಂದು ಹಿಡಿದಿರುವವರಿಗೆ ಯುಕ್ತವಲ್ಲ ; ಇತಿಹಾಸಪುರಾಣವುಕೂಡ (ನಾವು) ವಿವರಿಸಿರುವ ಮಾರ್ಗದಿಂದ ಮಂತ್ರಾರ್ಥವಾದಗಳೆಂಬ ಸಂಭಾವಿತವಾದ (ಶ್ರುತಿ)ಮೂಲವುಳ್ಳದ್ದಾದ್ದರಿಂದ ದೇವತಾವಿಗ್ರಹಾದಿಗಳನ್ನು ಸಾಧಿಸಿಕೊಡುವದಕ್ಕೆ ಶಕ್ತವಾಗಿರುತ್ತದೆ.

  1. ‘ಆದಿತ್ಯೋ ಯೂಪಃ’ ಎಂಬ ವಾಕ್ಯವು ತಿಳಿಸುವ - ಯೂಪವು ಸೂರ್ಯನೆಂಬ - ಅರ್ಥವು ಪ್ರಮಾಣಾಂತರಕ್ಕೆ ವಿರುದ್ಧವಾಗಿರುವದರಿಂದ ಸೂರ್ಯನಂತ ಹೊಳೆಯುತ್ತದೆ ಎಂದು ತಿಳಿಸುವ ಗುಣವಾದವಿದು.

2: ಶಬ್ದಪ್ರಮಾಣದಿಂದ ತಿಳಿಯಬಂದದ್ದು ಯಥಾರ್ಥವೆಂದು ಒಪ್ಪುವವರು.

  1. ದೇವತೆಗಳಿಗೆ ವಿಗ್ರಹವತ್ಯಾದಿಗಳನ್ನು ತಿಳಿಸುವ ವಾಕ್ಯಗಳು ಪ್ರಮಾಣಾಂತರಸಿದ್ಧ ವಾದದ್ದನ್ನಾಗಲಿ ವಿರುದ್ಧವಾದದ್ದನ್ನಾಗಲಿ ಹೇಳುವದಿಲ್ಲ ; ಆದ್ದರಿಂದ ದೇವತೆಗಳಿಗೆ ವಿಗ್ರಹಾದಿ ಗಳುಂಟೆಂದು ವಾಕ್ಯಾನುಸಾರವಾಗಿ ಭೂತಾರ್ಥವಾದವೆಂದೇ ತಿಳಿಯಬೇಕು.

  2. ಶಬ್ದವೇ ದೇವತ ಎಂಬ ಮೀಮಾಂಸಕರ ಮತವನ್ನು ಇಲ್ಲಿ ತಿರಸ್ಕರಿಸಿದ. ಜೈ. ೧೦-೪-೨೩ ರ ಭಾಷ್ಯವನ್ನು ನೋಡಿ,

  3. ಪೂರ್ವಮೀಮಾಂಸಕರು ಮುಂತಾದವರಿಗೆ,

ಇಲ್ಲ

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ದೇವತಾದಿಗಳಿಗೆ ಸ್ವರೂಪವುಂಟೆಂಬುದಕ್ಕೆ ಪ್ರತ್ಯಕ್ಷಾದಿಪ್ರಮಾಣ

(ಭಾಷ್ಯ) ೩೦೪. ಪ್ರತ್ಯಕ್ಷಾದಿಮೂಲಮಪಿ ಸಂಭವತಿ | ಭವತಿ ಹಿ ಅಸ್ಮಾಕಮ್ ಅಪ್ರತ್ಯಕ್ಷಮಪಿ ಚಿರನ್ನನಾನಾಂ ಪ್ರತ್ಯಕ್ಷಮ್ | ತಥಾ ಚ ವ್ಯಾಸಾದಯೋ ದೇವಾದಿಭಿಃ ಪ್ರತ್ಯಕ್ಷ ವ್ಯವಹರನ್ತಿ ಇತಿ ಸ್ಮರ್ಯತೇ | ಯಸ್ತು ಬ್ರೂಯಾತ್ ಇದಾನೀಂತನಾನಾಮಿವ ಪೂರ್ವಷಾಮಪಿ ನಾಸ್ತಿ ದೇವಾದಿಭಿರ್ವ್ಯವಹರ್ತು ಸಾಮರ್ಥ್ಯಮ್ ಇತಿ, ಸ ಜಗವೈಚಿತ್ರ್ಯಂ ಪ್ರತಿಷೇಧೇತ್ | ಇದಾನೀಮಿವ ಚ ನಾನ್ಯದಾಪಿ ಸಾರ್ವಭೌಮಃ ಕ್ಷತ್ರಿಯೋಸ್ತಿ ಇತಿ ಬ್ರೂಯಾತ್ | ತತಶ್ಚ ರಾಜಸೂಯಾದಿಚೋದನಾ ಉಪ ರುತ್ವಾತ್ - ಇದಾನೀಮಿವ ಚ ಕಾಲಾನ್ನರೇಪಿ ಅವ್ಯವಸ್ಥಿತಪ್ರಾಯಾನ್ ವರ್ಣಾ ಶ್ರಮಧರ್ಮಾನ್ ಪ್ರತಿಜಾನೀತ | ತತಶ್ಯ ವ್ಯವಸ್ಥಾವಿಧಾಯಿ ಶಾಸ್ತ್ರಮ್ ಅನರ್ಥಕಂ ಸ್ಮಾತ್ | ತಸ್ಮಾತ್ ಧರ್ಮೊತ್ಕರ್ಷವಶಾತ್ ಚಿರನಾಃ ದೇವಾದಿಭಿಃ ಪ್ರತ್ಯಕ್ಷಂ ವ್ಯವಜದ್ರು: ಇತಿ ಶಿಷ್ಯತೇ | ಅಪಿ ಚ ಸ್ಮರನ್ತಿ - “ಸ್ವಾಧ್ಯಾಯಾದಿಷ್ಟದೇವತಾ ಸಂಪ್ರಯೋಗಃ’ (ಯೋ. ಸೂ. ೨-೪೪) ಇತ್ಯಾದಿ | ಯೋಗೋSಪಿ ಅಣಿಮಾ ದೈಶ್ವರ್ಯಪ್ರಾಪ್ತಿಫಲಃ ಸ್ಮರ್ಯಮಾಣಃ ನ ಶಕ್ಯತೇ ಸಾಹಸಮಾಣ ಪ್ರತ್ಯಾಖ್ಯಾತುಮ್ | ಶ್ರುತಿಶ್ಚ ಯೋಗಮಾಹಾತ್ಮಂ ಪ್ರಖ್ಯಾಪಯತಿ - “ಪೃಥಿವ್ಯಪೇಜೋನಿಲಗೇ ಸಮುಶ್ಚಿತೇ ಪಾತ್ಮಕೇ ಯೋಗಗುಣೇ ಪ್ರವೃತ್ತೇ | ನ ತಸ್ಯ ರೋಗೋ ನ ಜರಾ ನ ಮೃತ್ಯುಃ ಪ್ರಾಪ್ತಸ್ಯ ಯೋಗಾಗ್ನಿಮಯಂ ಶರೀರಮ್’’ (ಶ್ವೇ. ೨-೧೨) ಇತಿ | ಋಷಿಣಾಮಪಿ ಮyಬ್ರಾಹ್ಮಣದರ್ಶಿನಾಂ ಸಾಮರ್ಥ್ಯಮ್ ನಾಸ್ಮದೀಯೇನ ಸಾಮರ್ಥ್ಯನ ಉಪಮಾತುಂ ಯುಕ್ತಮ್ | ತಸ್ಮಾತ್ ಸಮೂಲಮ್ ಇತಿಹಾಸಪುರಾಣಮ್ | ಲೋಕಪ್ರಸಿದ್ಧಿರಪಿ ನ ಸತಿ ಸಂಭವೇ ನಿರಾಲಮೃನಾ ಅಧ್ಯವಸಾತುಂ ಯುಕ್ತಾ ||

(ಭಾಷ್ಯಾರ್ಥ) (ಇತಿಹಾಸಪುರಾಣಕ್ಕೆ) ಪ್ರತ್ಯಕ್ಷವೇ ಮುಂತಾದ ಮೂಲವೂ ಇರಬಹುದಾಗಿದೆ. ನಮಗ ಅಪ್ರತ್ಯಕ್ಷವಾದದ್ದು ಕೂಡ ಹಿಂದಿನವರಿಗೆ ಪ್ರತ್ಯಕ್ಷವಾಗಿರುತ್ತದೆ. ಆದ್ದರಿಂದಲೇ ವ್ಯಾಸಾದಿಗಳು ದೇವಾದಿಗಳೊಡನೆ ಪ್ರತ್ಯಕ್ಷವಾಗಿ ವ್ಯವಹಾರಮಾಡುತ್ತಿದ್ದರೆಂದು ಸ್ಕೃತಿಯಲ್ಲಿದೆ. ಯಾವನಾದರೆ ಈಗಿನವರಂತ ಹಿಂದಿನವರಿಗೂ ದೇವಾದಿಗಳೊಡನೆ ವ್ಯವಹರಿಸುವ ಸಾಮರ್ಥ್ಯವಿರಲಿಲ್ಲ ಎನ್ನುವನೋ, ಅವನು ಜಗತ್ತಿನ ವೈಚಿತ್ರ್ಯವನ್ನು ಅಲ್ಲಗಳೆದಾನು. ಈಗಿನಂತೆ ಮತ್ತೆಯಾವಾಗಲೂ ಸಾರ್ವಭೌಮನಾದ ಕೃತಿಯನು

ಅಧಿ. ೮. ಸೂ. ೩೩] ದೇವತಾದಿಗಳಿಗೆ ಸ್ವರೂಪವುಂಟೆಂಬುದಕ್ಕೆ ಪ್ರತ್ಯಕ್ಷಾದಿಪ್ರಮಾಣ ೪೯೫ ಇರಲಿಲ್ಲ ಎಂದಾನು ; ಅದರಿಂದ ರಾಜಸೂಯವೇ ಮುಂತಾದ ವಿಧಿಯೂ ವಿರುದ್ಧವಾದೀತು. ಮತ್ತು (ಅಂಥವನು) ಈಗಿನಂತೆ ಮತ್ತೊಂದು ಕಾಲದಲ್ಲಿಯೂ ವರ್ಣಾಶ್ರಮಧರ್ಮಗಳು ಅವ್ಯವಸ್ಥಿತಪ್ರಾಯವಾಗಿದ್ದವೆಂದು ಪ್ರತಿಜ್ಞೆ ಮಾಡಿಯಾನು ; ಅದರಿಂದ (ವರ್ಣಾಶ್ರಮ)ವ್ಯವಸ್ಥೆಯನ್ನು ವಿಧಿಸುವ ಶಾಸ್ತ್ರವು ವ್ಯರ್ಥವಾದೀತು. ಆದ್ದರಿಂದ ಧರ್ಮದ ಅತಿಶಯದಿಂದ ಹಿಂದಿನವರು ದೇವಾದಿಗಳೊಡನೆ ಪ್ರತ್ಯಕ್ಷವಾಗಿ ವ್ಯವಹರಿಸುತ್ತಿದ್ದರು ಎಂಬುದೇ ಯುಕ್ತವಾಗಿರುತ್ತದೆ. ಇದೂ ಅಲ್ಲದೆ, ಮಂತ್ರಜಪ ದಿಂದ ಇಷ್ಟದೇವತೆಯ ಪ್ರತ್ಯಕ್ಷವು” (ಯೋ. ಸೂ. ೨-೪೪) ಎಂದು ಮುಂತಾಗಿ (ಯೋಗ)ಸ್ಕೃತಿಯಲ್ಲಿ ಹೇಳಿರುತ್ತದೆ. ಅಣಿಮಾ ಮುಂತಾದ ಐಶ್ವರ್ಯಪ್ರಾಪ್ತಿಯೆಂಬ ಫಲವುಳ್ಳದ್ದೆಂದು ಸ್ಮೃತಿಯಲ್ಲಿ ಹೇಳಿರುವ ಯೋಗವನ್ನು ಸಾಹಸಮಾತ್ರದಿಂದ ತಿರಸ್ಕರಿಸು ವದು ಆಗಲಾರದು. “ಪಂಚಾತ್ಮಕವಾದ ಪೃಥಿವ್ಯಜೋsನಿಲಾಕಾಶ (ಸಮೂಹವು) ಎದ್ದುಕೊಳ್ಳಲಾಗಿ, ಯೋಗಗುಣವು ಉಂಟಾಗಲಾಗಿ ಆ ಯೋಗಾಗ್ನಿಮಯವಾದ ಶರೀರವನ್ನು ಹೊಂದಿದವನಿಗೆ ರೋಗವಿಲ್ಲ, ಮುಪ್ಪಿಲ್ಲ, ಸಾವಿಲ್ಲ’’ (ಶ್ವೇ. ೨-೧೨) ಎಂದು ಶ್ರುತಿಯೂ ಯೋಗದ ಮಾಹಾತ್ಮವನ್ನು ಕೊಂಡಾಡುತ್ತದೆ. ಮಂತ್ರಬ್ರಾಹ್ಮಣ ಗಳನ್ನು ಕಂಡುಹಿಡಿದ ವಿಶಷಿಗಳ ಸಾಮರ್ಥ್ಯವನ್ನು ನಮ್ಮ ಸಾಮರ್ಥ್ಯಕ್ಕೆ ಹೋಲಿಸುವದೂ ಯುಕ್ತವಲ್ಲ. ಆದ್ದರಿಂದ ಇತಿಹಾಸಪುರಾಣಗಳಿಗೆ ಮೂಲವುಂಟು. ಲೋಕಪ್ರಸಿದ್ಧಿ ಯನ್ನು ಕೂಡ ಸಂಭವವಿರುವಲ್ಲಿ (ಅದು) ನಿರ್ವಿಷಯವೆಂದು ನಿಶ್ಚಯಿಸುವದು ಯುಕ್ತವಲ್ಲ.

ಉಪಸಂಹಾರ : ದೇವತಾದಿಗಳಿಗೆ ವಿದ್ಯೆಯಲ್ಲಿ ಅಧಿಕಾರವುಂಟು

(ಭಾಷ್ಯ) ೩೦೫. ತಸ್ಮಾತ್ ಉಪಪನ್ನಃ ಮನ್ನಾದಿಟ್ಟೋ ದೇವಾದೀನಾಂ ವಿಗ್ರಹವಾದ

  1. ಯೋಗವು ಶ್ರುತ್ಯವಿರುದ್ಧವಾದ ಕಡೆಯಲ್ಲಿ ಪ್ರಮಾಣವೆಂಬುದನ್ನು ‘ಸ್ಮತಿ’ ಎಂಬ ಶಬ್ದವು ಸೂಚಿಸುತ್ತದೆ.

  2. ಅಂಗಾಲಿನಿಂದ ಮೊಳಕಾಲವರೆಗೆ ಪೃಥ್ವಿ, ಮೊಳಕಾಲಿಂದ ಹೊಕ್ಕುಳವರೆಗೆ ಅಪ್ಪು, ಹೊಕ್ಕುಳಿನಿಂದ ಕುತ್ತಿಗೆಯವರೆಗೆ ತೇಜಸ್ಸು, ಕುತ್ತಿಗೆಯಿಂದ ಕೂದಲು ಹುಟ್ಟುವ ಸ್ಥಳದವರೆಗೆ ವಾಯು, ಅಲ್ಲಿಂದ ಬ್ರಹ್ಮರಂಧ್ರದವರೆಗೆ ಆಕಾಶ - ಹೀಗೆ ಪಂಚಭೂತಾತ್ಮಕ ಸಮುದಾಯವನ್ನು ಧಾರಣೆಯಿಂದ ವಶಗೊಳಿಸಿಕೊಂಡು, ಅಣಿಮಾದಿಯೋಗವುಂಟಾಗಲು, ಯೋಗಾಭಿವ್ಯಕ್ತವಾದ ತೇಜೋಮಯಶರೀರವನ್ನು ಪಡೆದವನಿಗೆ ಮುತ್ತು - ಮುಂತಾದವುಗಳ ಸಂಬಂಧವಿಲ್ಲ ಎಂದು ಶ್ರುತಿಯ ಅರ್ಥ. ನ್ಯಾ.ನಿ. ವ್ಯಾಖ್ಯಾನ.

೪೯೬

ಬ್ರಹ್ಮಸೂತ್ರಭಾಷ್ಯ

[ಅ.೧. ಪಾ. ೩.

ವಗಮಃ | ತತಶ್ಚ ಅರ್ಥಿತ್ಪಾದಿಸಂಭವಾತ್ ಉಪಪನ್ನೋ ದೇವಾದೀನಾಮಪಿ ಬ್ರಹ್ಮ ವಿದ್ಯಾಯಾಮ್ ಅಧಿಕಾರಃ | ಕ್ರಮಮುಕ್ತಿದರ್ಶನಾನ್ಯಪಿ ಏವಮೇವೋಪಪದ್ಯ ||

(ಭಾಷ್ಯಾರ್ಥ) ಆದ್ದರಿಂದ ಮಂತ್ರಾದಿ (ಪ್ರಮಾಣ)ಗಳಿಂದ ದೇವಾದಿಗಳಿಗೆ ವಿಗ್ರಹವತ್ಯವೇ ಮುಂತಾದದ್ದುಂಟೆಂದು ನಿಶ್ಚಯಿಸುವದು ಯುಕ್ತವಾಗಿದೆ ಮತ್ತು ಅದರಿಂದ ಅರ್ಥಿತ್ವವೇ ಮುಂತಾದವುಗಳು (ಅವರಿಗೆ) ಇರಬಹುದಾಗುವದರಿಂದ ದೇವಾದಿಗಳಿಗೂ ಬ್ರಹ್ಮ ವಿದ್ಯೆಯಲ್ಲಿ ಅಧಿಕಾರವುಂಟು (ಎಂದು ನಿಶ್ಚಯಿಸಬೇಕು). ಕ್ರಮಮುಕ್ತಿಯನ್ನು ಹೇಳುವ ಶ್ರುತಿಗಳೂ ಹೀಗಾದರೇ ಯುಕ್ತವಾಗುತ್ತವೆ.

೯. ಅಪಶೂದ್ರಾಧಿಕರಣ (೩೪-೩೮)

(ಶೂದ್ರರಿಗೆ ವೇದಮೂಲಕವಾಗಿ ಜ್ಞಾನಾಧಿಕಾರವಿಲ್ಲ)

ಶುಗಸ್ಯ ತದನಾದರಶ್ರವಣಾತ್ ತದಾದ್ರವಣಾತ್ ಸೂಚ್ಯತೇ ಹಿ ||೩೪||

೩೪. ಆ ಅನಾದರಶ್ರವಣದಿಂದ ಇವನಿಗೆ ಶೋಕವುಂಟಾಯಿತು). ಏಕೆಂದರ ತದಾದ್ರವಣದಿಂದ ಸೂಚಿತವಾಗುತ್ತದೆ.

ಪೂರ್ವಪಕ್ಷ : ಶೂದ್ರನಿಗೂ ವಿದ್ಯೆಯಲ್ಲಿ ಅಧಿಕಾರವುಂಟು

(ಭಾಷ್ಯ) ೩೦೬. ಯಥಾ ಮನುಷ್ಯಾಧಿಕಾರನಿಯಮಮ್ ಅಪೋದ್ಯ ದೇವಾದೀನಾಮಪಿ ವಿದ್ಯಾಸು ಅಧಿಕಾರ ಉಕ್ತಃ, ತಥೈವ ದ್ವಿಜಾತ್ಯಧಿಕಾರನಿಯಮಾಪವಾದೇನ ಶೂದ್ರಸ್ಯಾಪಿ ಅಧಿಕಾರಃ ಸ್ಯಾತ್ ಇತ್ಯೇತಾಮ್ ಆಶಜ್ಯಾಂ ನಿವರ್ತಯಿತುಮ್ ಇದಮಧಿಕರಣಂ ಆರಭ್ಯತೇ | ತತ್ರ ಶೂದ್ರಸ್ಯಾಪಿ ಅಧಿಕಾರಃ ಸ್ಯಾತ್ ಇತಿ ತಾವತ್ ಪ್ರಾಪ್ತಮ್ | ಅರ್ಥಿತ್ವಸಾಮರ್ಥ್ಯಯೋಃ ಸಂಭವಾತ್ | ತಸ್ಮಾತ್ತೂದ್ರೋ ಯಜ್ನವಲ್ಫ್ವ?” (ತೈ. ಸಂ. ೭-೧-೧-೬) ಇತಿವತ್ ‘‘ಶೂದ್ರೋ ವಿದ್ಯಾಯಾಮನವಕ್ಸ್ಪ್ತ ;’’ ಇತಿ ಚ ನಿಷೇಧಾಶ್ರವಣಾತ್ | ಯಚ್ಚ ಕರ್ಮಸು ಅನಧಿಕಾರಕಾರಣಂ ಶೂದ್ರಸ್ಯ ಅನಗ್ನಿತ್ವಮ್ ನ ತದ್ವಿದ್ಯಾಸು ಅಧಿಕಾರಸ್ಯ ಅಪವಾದಕಂ ಲಿಜ್ಮ್ ನ ಹಿ ಆಹವನೀಯಾದಿರಹಿತೇನ

  1. ಬ್ರಹ್ಮಲೋಕಾದಿಗಳನ್ನು ಪಡೆದವರಿಗೆ ಜ್ಞಾನದಿಂದ ಮುಕ್ತಿಯಾಗುವದೆಂದು ಹೇಳಿರುವದರಿಂದಲೂ ದೇವಾದಿಗಳಿಗೆ ಅಧಿಕಾರವುಂಟೆಂದಾಗುತ್ತದೆ ಎಂದು ಭಾವ.

ಅಧಿ. ೯. ಸೂ. ೩೪] ಪೂರ್ವಪಕ್ಷ : ಶೂದ್ರನಿಗೂ ವಿದ್ಯೆಯಲ್ಲಿ ಅಧಿಕಾರವುಂಟು ೪೯೭

ವಿದ್ಯಾ ವೇದಿತುಂ ನ ಶಕ್ಯತೇ | ಭವತಿ ಚ ಲಿಙ್ಗಂ ಶೂದ್ರಾಧಿಕಾರಸ್ಯ ಉಪೋದ್ಘಲಕಮ್ | ಸಂವರ್ಗವಿದ್ಯಾಯಾಂ ಹಿ ಜಾನಶ್ರುತಿಂ ಪೌತ್ರಾಯಣಂ ಶುಶೂಷಂ ಶೂದ್ರಶಚ್ಚನ ಪರಾಮಶತಿ - “ಆಹ ಹಾರೇತ್ಸಾ ಶೂದ್ರ ತವೈವ ಸಹ ಗೋಭಿರಸ್ತು’’ (ಛಾಂ. ೪-೨ ೩) ಇತಿ | ವಿದುರಪ್ರವೃತಯಶ್ಚ ಶೂದ್ರಯೋನಿಪ್ರಭವಾ ಅಪಿ ವಿಶಿಷ್ಟವಿಜ್ಞಾನ ಸಂಪನ್ನಾಃ ಸ್ಮರ್ಯನೇ | ತಸ್ಮಾತ್ ಅಧಿಕ್ರಿಯತೇ ಶೂದ್ರೋ ವಿದ್ಯಾಸು ಇತಿ ||

(ಭಾಷ್ಯಾರ್ಥ) ಹೇಗೆ ಮನುಷ್ಯರಿಗೇ ಅಧಿಕಾರವೆಂಬ ನಿಯಮವನ್ನು ಅಲ್ಲಗಳೆದು ದೇವಾದಿ ಗಳಿಗೂ ವಿದ್ಯೆಗಳಲ್ಲಿ ಅಧಿಕಾರವನ್ನು ಹೇಳಲಾಯಿತೋ ಹಾಗೆಯೇ ದ್ವಿಜಾತಿಗಳಿಗೇ ಅಧಿಕಾರವೆಂಬ ನಿಯಮವನ್ನು ಅಲ್ಲಗಳೆದು ಶೂದ್ರನಿಗೂ ಅಧಿಕಾರವಿರಬಹುದಲ್ಲ ! - ಎಂಬೀ ಆಶಂಕೆಯನ್ನು ಕಳೆಯುವದಕ್ಕೆ ಈ ಅಧಿಕರಣವನ್ನು ಆರಂಭಿಸಲಾಗಿದೆ.

ಇಲ್ಲಿ ಶೂದ್ರನಿಗೂ ಅಧಿಕಾರವಿರಬಹುದೆಂದು ಮೊದಲು (ಪೂರ್ವಪಕ್ಷವು) ಬಂದೊದಗುತ್ತದೆ. ಏಕೆಂದರೆ ಅರ್ಥಿತ್ವಸಾಮರ್ಥ್ಯಗಳು (ಅವನಿಗೂ) ಇರಬಹು ದಾಗಿರುತ್ತದೆ. ಆದ್ದರಿಂದ ಶೂದ್ರನುಯಜ್ಞಕ್ಕೆ ತಕ್ಕವನಲ್ಲ’’ (ತೈ. ಸಂ.೭-೧-೧-೬) ಎಂಬಂತೆ “ಶೂದ್ರನು ವಿದ್ಯೆಗೆ ತಕ್ಕವನಲ್ಲ’ ಎಂಬ ನಿಷೇಧವು ಶ್ರುತಿಯಲ್ಲಿಲ್ಲ ವಾದ್ದರಿಂದ (ಅಧಿಕಾರವಿರಬಹುದು. ಇನ್ನು ಶೂದ್ರನಿಗೆ ಕರ್ಮಗಳಲ್ಲಿ ಅಧಿಕಾರ ವಿಲ್ಲವೆಂಬುದಕ್ಕೆ ಅಗ್ನಿಯಿಲ್ಲವೆಂಬ ಕಾರಣವಿದೆಯಲ್ಲ, ಅದು ವಿದ್ಯಗಳಲ್ಲಿ ಅಧಿಕಾರ ವನ್ನು ಅಲ್ಲಗಳೆಯುವಂಥ ಲಿಂಗವಲ್ಲ. ಏಕೆಂದರೆ ಆಹವನೀಯವೇ ಮುಂತಾದ (ಅಗ್ನಿ)ಯಿಲ್ಲದವನಿಗೆ ವಿದ್ಯೆಯನ್ನು ಅರಿತುಕೊಳ್ಳುವದು ಆಗಲಾರದೆಂಬುದಿಲ್ಲ.

ಇದಲ್ಲದೆ ಶೂದ್ರನಿಗೆ ಅಧಿಕಾರ(ವುಂಟೆಂಬುದಕ್ಕೆ) ಉಪೋದ್ಘಲಕವಾದ

  1. ಹಿಂದ ೧-೩-೩೩ ಭಾ. ಭಾ. ೩೦೦ರಲ್ಲಿ ದೇವತಾದಿಗಳು ಮಧ್ಯಾದಿವಿದ್ಯಗಳಲ್ಲಿ ಅನಧಿಕಾರಿಗಳಾದರೂ ಬ್ರಹ್ಮವಿದ್ಯೆಯಲ್ಲಿ ಅಧಿಕಾರಿಗಳಾಗಲಿ ಎಂದದ್ದು ಪ್ರೌಢವಾದ ; ಸಗುಣವಿದ ಗಳಲ್ಲಿಯೂ ಅಧಿಕಾರವಿಲ್ಲವೆಂಬುದರಲ್ಲಿ ತಾತ್ಪರ್ಯವಿಲ್ಲ ಎಂದು ವಿದ್ಯಾಸು’ ಎಂಬ ಬಹುವಚನ ದಿಂದ ಗೊತ್ತಾಗುತ್ತದೆ. ಆದಿತ್ಯಾದಿಗಳಿಗೆ ಆದಿತ್ಯಾದಿಸಂಬಂಧವಿರುವ ಉಪಾಸನಗಳಲ್ಲಿ ಅಧಿಕಾರ ವಿಲ್ಲದಿದ್ದರೂ ಅಂಥ ಸಂಬಂಧವಿಲ್ಲದ ಸಗುಣವಿದ್ಯಗಳಲ್ಲಿ ಅಧಿಕಾರವಿರಬಹುದು ಎಂದು ಭಾವವಿರಬಹುದು.

  2. ಶೂದ್ರನೂ ಮೋಕ್ಷಕಾರಣವಾದ ಜ್ಞಾನವನ್ನು ಬಯಸುತ್ತಾನೆ ; ವಿಚಾರವನ್ನು ಮಾಡು ವದಕ್ಕೆ ಅವನಿಗೂ ಸಾಮರ್ಥ್ಯವಿರಬಹುದು.

  3. ಜೈ. ಸೂ. ೬-೧-೨೬ರ ಭಾಷ್ಯವನ್ನು ನೋಡಿ, ವಸಂತದಲ್ಲಿ ಬ್ರಾಹ್ಮಣನು ಅಗ್ನಿಯನ್ನು ಆಧಾನಮಾಡಬೇಕು. ಗ್ರೀಷ್ಮದಲ್ಲಿ ಕ್ಷತ್ರಿಯನು, ಶರದೃತುವಿನಲ್ಲಿ ವೃಶ್ಯನು ಆಧಾನಮಾಡಬೇಕು - ಎಂದು ವೇದವಿಧಿಯಿದೆ. ಶೂದ್ರನಿಗೆ ಹೀಗೆ ಅಗ್ನಿಯಿಲ್ಲ.

೪೯೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಲಿಂಗವೂ (ಶ್ರುತಿಯಲ್ಲಿ) ಇದೆ. ಹೇಗೆಂದರೆ ಸಂವರ್ಗವಿದ್ಯೆಯಲ್ಲಿ ಶ್ರವಣಕ್ಕೆ ಬಂದಿರುವ ಪೌತ್ರಾಯಣಜಾನಶ್ರುತಿಯನ್ನು (ರಕ್ಟನು) “ಎಲಾ ಶೂದ್ರ, ಹಾರದೊಡನೆ ಕೂಡಿದ ಧನವು, ಗೋಗಳೊಡನೆ, ನಿನಗೇ ಇರಲಿ’’ (ಛಾಂ.೪-೨-೩) ಎಂದು ಶೂದ್ರಶಬ್ದದಿಂದ ಪರಾಮರ್ಶಿಸಿರುತ್ತಾನೆ. ವಿದುರನೇ ಮುಂತಾದವರು ಶೂದ್ರಯೋನಿಯಲ್ಲಿ ಹುಟ್ಟಿದವ ರಾದರೂ ಅಸಾಧಾರಣವಿಜ್ಞಾನದಿಂದೊಡಗೂಡಿದವರಾಗಿದ್ದಾರೆಂದು ಸ್ಮೃತಿಯಲ್ಲಿದೆ. ಆದ್ದರಿಂದ ಶೂದ್ರನು ವಿದ್ಯೆಗಳಲ್ಲಿ ಅಧಿಕಾರಿಯಾಗಿರುತ್ತಾನೆ.

ಸಿದ್ಧಾಂತ : ಶೂದ್ರನಿಗೆ ವೈದಿಕವಿದ್ಯೆಯಲ್ಲಿ ಅಧಿಕಾರವಿಲ್ಲ

(ಭಾಷ್ಯ) ೩೦೭. ಏವಂ ಪ್ರಾಪ್ತ ಬ್ಯೂಮಃ ನ ಶೂದ್ರಸ್ಯ ಅಧಿಕಾರಃ | ವೇದಾಧ್ಯಯನಾ ಭಾವಾತ್ | ಅಧೀತವೇದೋ ಹಿ ವಿದಿತವೇದಾರ್ಥ ವೇದಾರ್ಥಷು ಅಧಿಕ್ರಿಯತೇ | ನ ಚ ಶೂದ್ರಸ್ಯ ವೇದಾಧ್ಯಯನಮ್ ಅಸ್ತಿ | ಉಪನಯನಪೂರ್ವಕಾದ್ ವೇದಾಧ್ಯಯನಸ್ಯ | ಉಪನಯನಸ್ಯ ಚ ವರ್ಣತ್ರಯವಿಷಯತ್ವಾತ್ | ಯತ್ತು ಅರ್ಥಿತ್ವಮ್, ನ ತತ್ ಅಸತಿ ಸಾಮರ್ಥ್ಯ ಅಧಿಕಾರಕಾರಣಂ ಭವತಿ ಸಾಮರ್ಥ್ಯಮಪಿ ನ ಲೌಕಿಕಂ ಕೇವಲಮ್ ಅಧಿಕಾರಕಾರಣಂ ಭವತಿ | ಶಾಸ್ತ್ರೀಯೇ ಅರ್ಥ ಶಾಸ್ತ್ರೀಯಸ್ಯ ಸಾಮರ್ಥ್ಯಸ್ಯ ಅಪೇಕ್ಷಿತತ್ವಾತ್ | ಶಾಸ್ತ್ರೀಯಸ್ಯ ಚ ಸಾಮರ್ಥ್ಯಸ್ಯ ಅಧ್ಯಯನ ನಿರಾಕರಣೇನ ನಿರಾಕೃತತ್ವಾತ್ | ಯಚ್ಚ ಇದಂ ಶೂದ್ರೂ ಯಜೇನವಕ್ಸ್ಪ್ತ;” (ತ್ಯ, ಸಂ. ೭-೧-೧-೬) ಇತಿ, ತತ್ ನ್ಯಾಯಪೂರ್ವಕತ್ವಾತ್ ವಿದ್ಯಾಯಾಮಪಿ ಅನವಕ್ಸ್‌ವತ್ವಮ್ ದ್ಯೋತಯತಿ | ನ್ಯಾಯಸ್ಯ ಸಾಧಾರಣತ್ವಾತ್ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳು ತೇವ ; ಶೂದ್ರನಿಗೆ ಅಧಿಕಾರವಿಲ್ಲ ; ಏಕೆಂದರೆ (ಅವನಿಗೆ) ವೇದಾಧ್ಯಯನವಿಲ್ಲ. ವೇದವನ್ನು ಅಧ್ಯಯನಮಾಡಿ ವೇದಾರ್ಥವನ್ನು ತಿಳಿದುಕೊಂಡವನಲ್ಲವೆ, ವೇದಾರ್ಥ ಗಳಲ್ಲಿ ಅಧಿಕಾರಿಯಾಗುತ್ತಾನೆ ? ಶೂದ್ರನಿಗೆ ವೇದಾಧ್ಯಯನವೇ ಇಲ್ಲ ; ಏಕೆಂದರೆ ವೇದಾಧ್ಯಯನವು ಉಪನಯನಪೂರ್ವಕವಾಗಿ (ಆಗ) ತಕ್ಕದ್ದು, ಉಪನಯನವು ವರ್ಣತ್ರಯದವರ ವಿಷಯವಾಗಿರುತ್ತದೆ. ಇನ್ನು ಅರ್ಥಿತ್ವವಿದೆಯಲ್ಲ, ಅದು

  1. ಕರ್ಮ, ಉಪಾಸನೆ, ಜ್ಞಾನ - ಇವುಗಳಲ್ಲಿ.

  2. ಬ್ರಾಹ್ಮಣನಿಗೆ ವಸಂತದಲ್ಲಿ, ಕ್ಷತ್ರಿಯನಿಗೆ ಗ್ರೀಷ್ಮದಲ್ಲಿ, ವೈಶ್ಯನಿಗೆ ಶರದೃತುವಿನಲ್ಲಿ ಉಪನಯನಮಾಡಿಸಬೇಕು - ಎಂದು ಮೂರು ವರ್ಣದವರಿಗೆ ಮಾತ್ರ ಉಪನಯನವಿದೆ.

ಅಧಿ. ೯. ಸೂ. ೩೪] ಸಂವರ್ಗವಿದ್ಯೆಯಲ್ಲಿ ಶೂದ್ರನ ವಿಚಾರವಿಲ್ಲ

೪೯೯ ಸಾಮರ್ಥ್ಯವಿಲ್ಲದೆ ಅಧಿಕಾರಕ್ಕೆ ಕಾರಣವಾಗುವದಿಲ್ಲ ; ಸಾಮರ್ಥ್ಯವೂ ಬರಿಯ ಲೌಕಿಕವಾದರೆ ಅಧಿಕಾರಕ್ಕೆ ಕಾರಣವಾಗುವದಿಲ್ಲ ; ಏಕೆಂದರೆ ಶಾಸ್ತ್ರೀಯವಾದ ವಿಷಯದಲ್ಲಿ ಶಾಸ್ತ್ರೀಯವಾದ ಸಾಮರ್ಥ್ಯವು ಬೇಕಾಗುತ್ತದೆ. ಶಾಸ್ತ್ರೀಯವಾದ ಸಾಮರ್ಥ್ಯವನ್ನು ಅಧ್ಯಯನವನ್ನು ನಿರಾಕರಣೆಮಾಡಿ ನಿರಾಕರಿಸಿದ್ಧಾಗಿದೆ. ಇನ್ನು “ಶೂದ್ರನು ಯಜ್ಞಕ್ಕೆ ತಕ್ಕವನಲ್ಲ’’ (ತೈ. ಸಂ.೭-೧-೧-೬) ಎಂಬುದಿದೆಯಲ್ಲ, ಅದು ನ್ಯಾಯಪೂರ್ವಕವಾಗಿರುವದರಿಂದ (ಶೂದ್ರನು) ವಿದ್ಯೆಗೂ ತಕ್ಕವನಲ್ಲವೆಂಬು ದನ್ನೇ ತೋರಿಸುತ್ತದೆ ; ಏಕೆಂದರೆ ನ್ಯಾಯವು (ಎರಡಕ್ಕೂ) ಸಮಾನವಾಗಿರುತ್ತದೆ.

ಸಂವರ್ಗವಿದ್ಯೆಯಲ್ಲಿ ಶೂದ್ರನ ವಿಚಾರವಿಲ್ಲ

(ಭಾಷ್ಯ) ೩೦೮. ಯತ್ಪುನಃ ಸಂವರ್ಗವಿದ್ಯಾಯಾಂ ಶೂದ್ರಶಬ್ದಶ್ರವಣಂ ಲಿಪ್ಟಿಂ ಮನಸೇ, ನ ತಲ್ಲಿಙ್ಗಮ್ | ನ್ಯಾಯಾಭಾವಾತ್ | ನ್ಯಾಯೋ ಹಿ ಲಿಜ್ಞದರ್ಶನಂ ದ್ಯೋತಕಂ ಭವತಿ | ನ ಚಾತ್ರ ನ್ಯಾಯೋsಸ್ತಿ | ಕಾಮಂ ಚ ಅಯಂ ಶೂದ್ರಶಬ್ದಃ ಸಂವರ್ಗವಿದ್ಯಾಯಾಮೇವ ಏಕಸ್ಯಾಂ ಶೂದ್ರಮ್ ಅಧಿಕುರ್ಯಾತ್ ತದ್ವಿಷಯತ್ವಾತ್, ನ ಸರ್ವಾಸು ವಿದ್ಯಾಸು 1 ಅರ್ಥವಾದಸ್ಯತ್ವಾತ್ತು ನ ಕ್ವಚಿದಪಿ ಅಯಂ ಶೂದ್ರಮ್ ಅಧಿಕರ್ತುಮ್ ಉತೃಹತೇ | ಶಕ್ಯತೇ ಚ ಅಯಂ ಶೂದ್ರಶಬ್ಲೂಧಿಕೃತವಿಷಯೂ ಯೋಜಯಿತುಮ್ | ಕಥಮಿತಿ ? ಉಚ್ಯತೇ | “ಕಮ್ಮರ ಏನಮೇತತ್ಸವ್ರಂ ಸಯುಗ್ಯಾನಮಿವ ರೈಕ್ಟಮಾತೃ” (ಛಾಂ. ೪-೧-೩) ಇತ್ಯಸ್ಮಾತ್ ಹಂಸವಾಕ್ಯಾತ್ ಆತ್ಮನೋJನಾದರಂಶ್ರುತವತೋ ಜಾನಶ್ರುತೇಃ ಪೌತ್ರಾಯಣಸ್ಯ ಶುಗುತ್ತೇದೇ ತಾಮ್ ಋಷಿಃ ರೈಕ್ಷ: ಶೂದ್ರಶಬ್ದನ ಅನೇನ ಸೂಚಯಾಂಬಭೂವ ಆತ್ಮನಃ ಪರೋಕ್ಷತಾಖ್ಯಾಶನಾಯ ಇತಿ ಗಮ್ಯತೇ ಜಾತಿಶೂದ್ರ ಅನಧಿಕಾರಾತ್ | ಕಥಂ ಪುನಃ

  1. ಶಾಸ್ತ್ರವಚನವಿಲ್ಲದಿದ್ದರೂ ತಾನೇ ಉಪನಯನವನ್ನು ಮಾಡಿಕೊಳ್ಳಲಿ, ತಾನೇ ಅಧ್ಯಯನವನ್ನು ಮಾಡಲಿ - ಎಂದು ಯಾರಾದರೂ ಶಂಕಿಸಬಹುದು. ಆದರೆ ಅದು ಲೌಕಿಕ ಸಾಮರ್ಥ್ಯವಾದಿತೇ ಹೊರತು ಶಾಸ್ತ್ರೀಯಸಾಮರ್ಥ್ಯವಾಗದು. ಜೈ, ಸೂ. ೬-೧-೩೪, ೩೬, ೩೭. ಇವುಗಳ ಭಾಷ್ಯವನ್ನು ನೋಡಿ,

  2. ಉಪನಯನವಿಲ್ಲದ್ದರಿಂದ ಅಧ್ಯಯನವಿಲ್ಲ ; ಅಧ್ಯಯನವಿಲ್ಲದ್ದರಿಂದ ಯಜ್ಞವಿಲ್ಲ ಎಂಬುದು ನ್ಯಾಯವು. ಈ ವಾಕ್ಯದಲ್ಲಿ ಬ್ರಾಹ್ಮಣಾದಿವರ್ಣತ್ರಯದವರನ್ನು ಸೃಷ್ಟಿಮಾಡಿದ ಬಳಿಕ ಪ್ರಜಾಪತಿಯು ಆಯಾ ದೇವತೆಗಳನ್ನು ಸೃಷ್ಟಿಮಾಡಿದನೆಂದೂ ಆದರೆ ಶೂದ್ರನನ್ನು ಸೃಷ್ಟಿಸಿದ ಬಳಿಕ ದೇವತೆಗಳನ್ನು ಸೃಷ್ಟಿಸಲಿಲ್ಲವಾದ್ದರಿಂದ ಶೂದ್ರನು ಯಜ್ಞಕ್ಕೆ ಅರ್ಹನಲ್ಲವೆಂದೂ ಹೇಳಿದೆ.

೫೦೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ, ೩.

ಶೂದ್ರಶಬ್ದನ ಶುಕ್ ಉತ್ಪನ್ನಾ ಸೂಚ್ಯತ ಇತಿ ? ಉಚ್ಯತೇ | ತದಾದ್ರವ ಣಾತ್ | ಶುಚಮ್ ಅಭಿದುದ್ರಾವ, ಶುಚಾ ವಾ ಅಭಿದುದ್ರುವೇ ಶುಚಾ ವಾ ರೈಸ್ಟಮ್ ಅಭಿದುದ್ರಾವೇತಿ ಶೂದ್ರಃ | ಅವಯವಾರ್ಥಸಂಭವಾತ್, ರೂಢರ್ಥಸ್ಯ ಚ ಅಸಂಭವಾತ್ | ದೃಶ್ಯತೇ ಚ ಅಯಮರ್ಥಃ ಅಸ್ಕಾಮ್ ಆಖ್ಯಾಯಿಕಾಯಾಮ್ ||

(ಭಾಷ್ಯಾರ್ಥ) ಇನ್ನು ಸಂವರ್ಗವಿದ್ಯೆಯಲ್ಲಿ ಶೂದ್ರಶಬ್ದವು ಶ್ರುತಿಯಲ್ಲಿದೆಯಲ್ಲ, (ಅದು ಈ ವಿಷಯಕ್ಕೆ) ಲಿಂಗವೆಂದು ಎಣಿಸಿರುವೆಯಷ್ಟ, ಅದು ನಿಜವಾಗಿ ಲಿಂಗವಲ್ಲ ; ಏಕೆಂದರೆ (ಅದಕ್ಕೆ) ನ್ಯಾಯವಿಲ್ಲ. ನ್ಯಾಯಪೂರ್ವಕವಾಗಿ ಹೇಳಿದ (ವಿಷಯ)ದಲ್ಲವೆ, ಲಿಂಗವನ್ನು (ವೇದದಲ್ಲಿ) ಕಂಡದ್ದು ದ್ಯೋತಕವಾಗುವದು ? ಆದರೆ ಇಲ್ಲಿ ನ್ಯಾಯ ವಿಲ್ಲ.’ ಈ ಶೂದ್ರಶಬ್ದವು ಸಂವರ್ಗವಿದ್ಯೆಯಲ್ಲೊಂದರಲ್ಲಿ ಶೂದ್ರನಿಗೆ ಅಧಿಕಾರವನ್ನು ಕೊಟ್ಟರೂ ಕೊಡಬಹುದು ; ಏಕೆಂದರೆ (ಅದು) ಅವನ ವಿಷಯದ್ದಾಗಿದೆ. (ಆದರೆ) ಎಲ್ಲಾ ವಿದ್ಯಗಳಲ್ಲಿಯೂ (ಅಧಿಕಾರವನ್ನು ಕೊಡ)ಲಾರದು. ಆದರೆ (ಈ ಶಬ್ದವು) ಅರ್ಥವಾದದಲ್ಲಿರುವದರಿಂದ ಯಾವ (ವಿದ್ಯ) ಯಲ್ಲಿಯೂ ಈ ಶಬ್ದವು (ಶೂದ್ರನಿಗೆ ಅಧಿಕಾರವನ್ನು ) ಕೊಡಲಾರದು. ಇದಲ್ಲದೆ ಈ ಶೂದ್ರಶಬ್ದವನ್ನು ಅಧಿಕೃತನಾದವನ ವಿಷಯದಲ್ಲಿಯೇ ಹೊಂದಿಸುವದಕ್ಕೂ ಬರುತ್ತದೆ. ಹೇಗೆ ? ಎಂದರೆ ಹೇಳುವೆವು : “ಎಲಾ, ಇವನು ಯಾವನಾಗಿರುವನೆಂದು ಬಂಡಿಯೊಡನಿರುವ ರೈಶ್ವನಂತ (ಇವನನ್ನು ಎಣಿಸಿ) ಈ (ಮಾತ)ನ್ನಾಡುತ್ತಿರುವ ?” (ಛಾಂ. ೪-೧-೩) ಎಂಬೀ ಹಂಸವಚನ ದಿಂದ ತನ್ನ ಅನಾದರವನ್ನು ಕೇಳಿದ ಜಾನಶ್ರುತಿ ಪೌತ್ರಾಯಣನಿಗೆ ಶೋಕವು ಉಂಟಾಯಿತು. ಅದನ್ನು ಋಷಿಯಾದ ರಕ್ಟನು ತಾನು ಪರೋಕ್ಷಜ್ಞಾನಿಯಂದು

  1. ಶೂದ್ರನಿಗೇ ಹೇಳಿದ್ದು ಈ ವಿದ್ಯೆ ಎಂಬುದಕ್ಕೆ ಯಾವ ಯುಕ್ತಿಯೂ ಇಲ್ಲ.

  2. ಅರ್ಥವಾದವು ಅನ್ಯಪರವಾದರೂ ತನ್ನ ಸ್ವತಂತ್ರವಾದ ಅವಾಂತರಾರ್ಥವನ್ನೂ ಹೇಳಬಹುದೆಂದು ಹಿಂದ ಭಾ. ಭಾ. ೩೦೩ರಲ್ಲಿ ಹೇಳಿದೆಯಾದರೂ ಇಲ್ಲಿ ಯಾವ ಅರ್ಥವನ್ನೂ ಹೇಳುವಂತಿಲ್ಲವೆಂದು ಭಾವ.

  3. ಹಂಸರೂಪರಾದ ಋಷಿಗಳು ಜಾನಶ್ರುತಿಯು ಬಹುದಾನವನ್ನು ಮಾಡುತ್ತಿದ್ದದ್ದನ್ನು ಕಂಡು ಅವನ ಮೇಲಿನ ಕರುಣೆಯಿಂದ ಅರಮನೆಯ ಉಪ್ಪರಿಗೆಯಮೇಲೆ ಹಾರಿಹೋಗುತ್ತಿರುವಲ್ಲಿ ಒಂದು ಹಂಸವು ಇನ್ನೊಂದನ್ನು ಕುರಿತು ‘ಎಲಾ, ಜಾನಶ್ರುತಿಯ ಅನ್ನದಾನಮಹಿಮೆಯ ಪ್ರಭಾವದ ಜ್ಯೋತಿಯ ಕಡೆಗೆ ಕಾಲುನೀಡಬೇಡ, ಸುಟ್ಟಿತು” ಎನ್ನಲು ಆ ಇನ್ನೊಂದು ಹಂಸವು ನುಡಿದ

ಮರುಮಾತಿದು.

ಅಧಿ. ೯. ಸೂ. ೩೫] ಜಾನಶ್ರುತಿಯು ಕ್ಷತ್ರಿಯನೆಂಬುದಕ್ಕೆ ಗುರುತು

೫೦೧

ತೋರಿಸುವದಕ್ಕಾಗಿ ಈ ಶೂದ್ರಶಬ್ದದಿಂದ ಸೂಚಿಸಿದನು ಎಂದು ನಿಶ್ಚಯವಾಗುತ್ತದೆ ; ಏಕೆಂದರೆ ಜಾತಿಶೂದ್ರನ ಪ್ರಕರಣವಿದಲ್ಲ. ಶೋಕವುಂಟಾಯಿತೆಂಬುದನ್ನು ಶೂದ್ರ ಶಬ್ದದಿಂದ ಹೇಗೆ ಸೂಚಿಸಿದೆ ? - ಎಂದರೆ ಹೇಳುವೆವು. (ತದಾದ್ರವಣಾತ್) ತದಾದ್ರವಣದಿಂದ. (ಶುಚಮ್ ಅಭಿದುದ್ರಾವ) ಶೋಕವನ್ನು ಓಡಿಬಂದು ಸೇರಿದನು, (ಶುಚಾ ವಾ ಅಭಿದುದ್ರುವೇ) ಅಥವಾ ಶೋಕದಿಂದ ಓಡಿದನು. (ಶುಚಾ ವಾ ರಕ್ಟಮ್ ಅಭಿದುದ್ರಾವ) ಅಥವಾ ಶೋಕದಿಂದ ರಕ್ಟನನ್ನು ಬಳಿಸಾರಿದನು ; ಆದ್ದರಿಂದ (ಇವನು) ಶೂದ್ರನು (ಎಂದು ಸೂಚಿಸುತ್ತದೆ ಎನ್ನಬೇಕು). ಏಕೆಂದರೆ (ಈ ಶಬ್ದದ) ಅವಯವಾರ್ಥವು (ಇಲ್ಲಿ) ಹೊಂದುತ್ತದೆ, ಮತ್ತು ರೂಢರ್ಥವು ಹೊಂದುವದಿಲ್ಲ.” ಈ ವಿಷಯವು ಈ ಕಥೆಯಲ್ಲಿ ಕಂಡುಬರುತ್ತಲೂ ಇದೆ.

ಜಾನಶ್ರುತಿಯು ಕ್ಷತ್ರಿಯನೆಂಬುದಕ್ಕೆ ಗುರುತು ಕ್ಷತ್ರಿಯತ್ವಗತೇಶ್ಲೋತ್ತರತ್ರ ಚೈತ್ರರಥನ ಲಿಜ್ಯಾತ್ ||೩೫||

೩೫. ಮುಂದೆ ಚೈತ್ರರಥನೊಡನೆ (ಹೇಳಿರುವ) ಲಿಂಗದಿಂದ ಕ್ಷತ್ರಿಯ ನೆಂದು ನಿಶ್ಚಯವಾಗುವದರಿಂದಲೂ (ಹೀಗೆ).

(ಭಾಷ್ಯ) ೩೦೯. ಇತಶ್ಚ ನ ಜಾತಿಶೂದ್ರೋ ಜಾನಶ್ರುತಿಃ | ಯತ್ಕಾರಣಂ ಪ್ರಕರಣ ನಿರೂಪಣೇನ ಕ್ಷತ್ರಿಯತ್ವಮ್ ಅಸ್ಯ ಉತ್ತರತ್ರ ಚೈತ್ರರಥನ ಅಭಿಪ್ರತಾರಿಣಾ ಕ್ಷತ್ರಿಯೇಣ ಸಮಭಿವ್ಯಾಹಾರಾತ್ ಲಿಜ್ಞಾತ್ ಗಮ್ಯತೇ | ಉತ್ತರತ್ರ ಹಿ ಸಂವರ್ಗ ವಿದ್ಯಾವಾಕ್ಯಶೇಷ ಚೈತ್ರರಥಿಃ ಅಭಿಪ್ರತಾರೀ ಕ್ಷತ್ರಿಯಃ ಸಂಕೀರ್ತ್ಯತೇ - ಅಥ ಹ ಶೌನಕಂ ಚ ಕಾಪೇಯಮಭಿಪ್ರತಾರಿಣಂ ಚ ಕಾಕ್ಷಸೇನಿಂ ಪರಿವಿಷ್ಯಮಾಸೌ ಬ್ರಹ್ಮಚಾರೀ ಬಿಭಿಕ್ಷೆ” (ಛಾಂ. ೪-೩-೫) ಇತಿ | ಚೈತ್ರರಥಿತ್ವಂ ಚಾಭಿಪ್ರತಾರಿಣಃ ಕಾಪೇಯ

  1. ಜಾನಶ್ರುತಿಯು ಕ್ಷತ್ರಿಯನೆಂಬುದಕ್ಕೆ ಇಲ್ಲಿ ಗುರುತುಗಳಿವೆ ; ಆದ್ದರಿಂದ ಜಾತಿಶೂದ್ರನ ಪ್ರಕರಣವಲ್ಲ ಎಂದರ್ಥ. ‘ಜಾತಿಶೂದ್ರನಿಗೆ ಅಧಿಕಾರವಿಲ್ಲ’ ಎಂದು ಈ ವಾಕ್ಯವನ್ನು ಕನ್ನಡಿಸು ವದು ಸರಿಯಲ್ಲ ; ಏಕೆಂದರೆ ಶೂದ್ರನಿಗೆ ಅಧಿಕಾರವಿದೆಯ ಇಲ್ಲವೆ ? - ಎಂಬುದೇ ಇಲ್ಲಿ ವಿವಾದ ವಿಷಯ.

  2. ರೂಢರ್ಥವೆಂದರೆ ಜಾನಶ್ರುತಿಯು ಶೂದ್ರನೆಂಬುದು ಜಾನಶ್ರುತಿಯ ವರ್ಣನೆಗೆ ಹೊಂದುವದಿಲ್ಲ . ಅವಯವಾರ್ಥವು ಎಂದರೆ ಜಾನಶ್ರುತಿಗೆ ಶೋಕವಾಯಿತಂಬುದು.

  3. ಈ ವಿಷಯವು ಎಂದರೆ ಜಾನಶ್ರುತಿಯು ಶೂದ್ರನಾಗಿರಲಾರನು, ಅವನಿಗೆ ಶೋಕ ವಾದ್ದರಿಂದಲೇ ಶೂದ್ರನೆಂದು ಕರೆದಿರಬೇಕು ಎನ್ನುವದು.809

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಯೋಗಾದವಗಸ್ತವ್ಯಮ್ | ಕಾಪೇಯಯೋಗೋ ಹಿ ಚಿತ್ರರಥಸ್ಯ ಅವಗತಃ “ಏತೇನ ವೈ ಚಿತ್ರರಥಂ ಕಾಪೇಯಾ ಅಯಾಜಯನ್’ (ತಾಂ, ಬ್ರಾ, ೨೦-೧೨-೫) ಸಮಾನಾನ್ವಯಾನಾಂ ಚ ಪ್ರಾಯೇಣ ಸಮಾನಾನ್ವಯಾ ಯಾಜಕಾ ಭವನ್ತಿ | “ತಸ್ಮಾಚ್ಛತ್ರರಥಿರ್ನಾಮೃಕಃ ಕ್ಷತ್ರಪತಿರಜಾಯತ’ (ತಾಂ. ಬ್ರಾ. ೨೦-೧೨-೧೫ ?) ಇತಿ ಚ ಕ್ಷತ್ರಪತಿತ್ಪಾವಗಮಾತ್ ಕ್ಷತ್ರಿಯತ್ವಮಸ್ಯ ಅವಗಸ್ತವ್ಯಮ್ | ತೇನ ಕ್ಷತ್ರಿಯೇಣ ಅಭಿಪ್ರತಾರಿಣಾ ಸಹ ಸಮಾನಾಯಾಂ ವಿದ್ಯಾಯಾಂ ಸಂಕೀರ್ತನಂ ಜಾನಶ್ರುತೇರಪಿ ಕ್ಷತ್ರಿಯತ್ವಂ ಸೂಚಯತಿ | ಸಮಾನಾನಾಮೇವ ಹಿ ಪ್ರಾಯೆಣ ಸಮಭಿವ್ಯಾಹಾರಾ ಭವನ್ತಿ ! ಕ್ಷತ್ರಪ್ರೇಷಣಾಶ್ವರ್ಯಯೋಗಾಚ ಜಾನಶ್ರುತೇಃ ಕ್ಷತ್ರಿಯತ್ವಾವಗತಿಃ | ಅತಃ ನ ಶೂದ್ರಸ್ಯ ಅಧಿಕಾರಃ ||

(ಭಾಷ್ಯಾರ್ಥ) ಈ ಕಾರಣದಿಂದಲೂ ಜಾನಶ್ರುತಿಯು ಜಾತಿಶೂದ್ರನಲ್ಲ. ಯಾವಕಾರಣದಿಂದ ಎಂದರೆ (ಈ) ಪ್ರಕರಣವನ್ನು ಪರೀಕ್ಷಿಸುವದರಿಂದ ಇವನು ಕ್ಷತ್ರಿಯನೆಂಬುದು ಮುಂದೆ ಕ್ಷತ್ರಿಯನಾದ ಚೈತ್ರರಥನೊಡನೆ, ಎಂದರೆ ಅಭಿಪ್ರತಾರಿಯೊಡನೆ ಜೊತೆಯಲ್ಲಿ ಹೇಳಿರುವ ಲಿಂಗದಿಂದ’ ನಿಶ್ಚಯವಾಗುತ್ತದೆ. ಮುಂದೆ ಸಂವರ್ಗವಿದ್ಯೆಯ ವಾಕ್ಯಶೇಷ ದಲ್ಲಿ “ಆ ಬಳಿಕ ಶೌನಕಕಾಪೇಯನನ್ನೂ ಅಭಿಪ್ರತಾರಿ ಕಾಕ್ಷಸೇನಿಯನ್ನೂ (ಅಡಿಗೆ ಯವನು ಅವರಿಗೆ) ಬಡಿಸುತ್ತಿದ್ದಾಗ ಬ್ರಹ್ಮಚಾರಿಯು ಭಿಕ್ಷೆಬೇಡಿದನು’ (ಛಾಂ. ೪-೩-೫) ಎಂದು ಅಭಿಪ್ರತಾರಿ ಎಂಬ ಕ್ಷತ್ರಿಯನಾದ ಚೈತ್ರರಥಿಯನ್ನು ಹೇಳಿರುತ್ತದೆ. ಅಭಿಪ್ರತಾರಿಯು ಚೈತ್ರರಥಿ ಎಂಬುದನ್ನು ಕಾಪೇಯನ ಸಂಬಂಧದಿಂದ ನಿಶ್ಚಯಿಸ ಬೇಕಾಗಿದೆ. “ಈ (ಯಾಗದಿಂದ) ಚಿತ್ರರಥನನ್ನು ಕಾಪೇಯರು ಯಾಜನಮಾಡಿಸಿ ದರು’ (ತಾಂ, ಬ್ರಾ, ೨೦-೧೨-೫) ಎಂಬಲ್ಲಿ ಚಿತ್ರರಥನಿಗೆ ಕಾಪೇಯಸಂಬಂಧವು ನಿಶ್ಚಯವಾಗಿರುತ್ತದೆ. ಅದೇ ವಂಶದವರಿಗೆ ಬಲುಮಟ್ಟಿಗೆ ಅದೇ ವಂಶದವರೇ

ಯಾಜಕರಾಗಿರುತ್ತಾರೆ. “ಅವನಿಂದ ಚೈತ್ರರಥಿ ಎಂಬ ಒಬ್ಬ ಕ್ಷತ್ರಪತಿಯು

  1. ಅಭಿಪ್ರತಾರಿಯೊಡನೆ ಇವನನ್ನು ಹೇಳಿದೆ ಎಂದು ಅಕ್ಷರಾರ್ಥವನ್ನು ತೆಗೆದುಕೊಳ್ಳ ಬಾರದು. ಮುಂದ ಇದು ಸ್ಪಷ್ಟವಾಗುವದು.

  2. ಸೂತ್ರದಲ್ಲಿರುವ ಚೈತ್ರರಥನೆಂಬ ಮಾತು ಚೈತ್ರರಥಿ ಎಂಬದರ ಬದಲಾಗಿ ಬಂದಿರುತ್ತದೆ.

  3. ಚಿತ್ರರಥನಿಗೆ ಕಾಪೇಯರು ಯಾಜಕರೆಂದದ್ದರಿಂದ ಚಿತ್ರರಥಿಗೂ ಕಾಪೇಯರು ಯಾಜಕರಾದರು.

  4. ಆದ್ದರಿಂದ ಕಾಪೇಯರೂಡನೆ ಇಲ್ಲಿ ಹೇಳಿದ ಅಭಿಪ್ರತಾರಿಯು ಚೈತ್ರರಥಿಯಾದನು.

ಅಧಿ. ೯. ಸೂ. ೩೫] ಜಾನಶ್ರುತಿಯು ಕ್ಷತ್ರಿಯನೆಂಬುದಕ್ಕೆ ಗುರುತು

೫೦೩

ಹುಟ್ಟಿದನು’ (ತಾಂ. ಬ್ರಾ. ೨೦-೧೨-೧೫)’ ಎಂಬಲ್ಲಿ ಕ್ಷತ್ರಪತಿಯಂದು ನಿಶ್ಚಯ ವಾಗುವದರಿಂದಲೂ ಇವನು ಕ್ಷತ್ರಿಯನೆಂದು ಅರಿಯಬೇಕು. ಆ ಕ್ಷತ್ರಿಯನಾದ ಅಭಿಪ್ರತಾರಿಯೊಡನೆ ಅದೇ (ಸಂವರ್ಗ)ವಿದ್ಯೆಯಲ್ಲಿ ಹೇಳಿರುವದು ಜಾನಶ್ರುತಿಯು ಕ್ಷತ್ರಿಯನೆಂಬುದನ್ನು ಸೂಚಿಸುತ್ತದೆ. ಸಮಾನರಾದವರನ್ನೇ ಅಲ್ಲವೆ, ಬಲುಮಟ್ಟಿಗೆ ಒಟ್ಟಿಗೆ ಹೇಳುವ (ವಾಕ್ಯ)ಗಳು ಬರುವವು 22 ಕ್ಷತೃವನ್ನು ಕಳುಹಿಸಿಕೊಟ್ಟಿದ್ದು ಮುಂತಾದ ಐಶ್ವರ್ಯದ ಸಂಬಂಧದಿಂದಲೂ ಜಾನಶ್ರುತಿಯು ಕ್ಷತ್ರಿಯನೆಂದು ನಿಶ್ಚಯವಾಗುತ್ತದೆ. ಆದ್ದರಿಂದ ಶೂದ್ರನಿಗೆ (ಬ್ರಹ್ಮವಿದ್ಯೆಯಲ್ಲಿ) ಅಧಿಕಾರವಿಲ್ಲ.

ಸಂಸ್ಕಾರಪರಾಮರ್ಶಾತ್ ತದಭಾವಾಭಿಲಾಪಾಚ್ಚ ||೩೬||

೩೬. ಸಂಸ್ಕಾರವನ್ನು ಪರಾಮರ್ಶಿಸಿರುವದರಿಂದಲೂ (ಶೂದ್ರನಿಗೆ) ಅದು ಇಲ್ಲವೆಂದು ಹೇಳಿರುವದರಿಂದಲೂ (ಹೀಗೆ).

ಶೂದ್ರನಿಗೆ ಸಂಸ್ಕಾರವಿಲ್ಲ

(ಭಾಷ್ಯ) ೩೧೦, ಇತಶ್ಚ ನ ಶೂದ್ರಸ್ಯ ಅಧಿಕಾರಃ | ಯದ್ ವಿದ್ಯಾಪ್ರದೇಶೇಷು

  1. ಚಿತ್ರರಥನು ಕ್ಷತ್ರಿಯನಾದ್ದರಿಂದ ಅವನ ವಂಶದವನಾದ ಚೈತ್ರರಥಿಯೂ ಕ್ಷತ್ರಿಯನು ಎಂದು ಭಾವ. ಇಲ್ಲಿ ಕೊಟ್ಟಿರುವ ಮೂಲವಾಕ್ಯವು ತಾಂಡ್ಯಬ್ರಾಹ್ಮಣದಲ್ಲಿ “ತಸ್ಮಾತ್ ಚೈತ್ರರಥೀನಾಮಕಃ ಕ್ಷತ್ರಪತಿರ್ಜಾಯತೇ’’ ಎಂದಿದ ; ಆದಕಾರಣದಿಂದ ಈಗಲೂ ಚಿತ್ರರಥನ ವಂಶದವರಲ್ಲಿ ಒಬ್ಬ ರಾಜನೇ ಕ್ಷತ್ರಪತಿಯಾಗುತ್ತಾನೆ, ಬಲಾಧಿಪತಿಯಾಗಿರುತ್ತಾನೆ - ಎಂದು ಆ ವಾಕ್ಯಕ್ಕೆ ಭಾಷ್ಯವಿದ, ವಾಕ್ಯದ ನಿಜವಾದ ರೂಪವು ಯಾವದೋ, ಭಾಷ್ಯಕಾರರು ಮತ್ತ ಯಾವದಾದರೊಂದು ಬೇರೆಯ ಕಡೆಯಿಂದಲೇ ಈ ವಾಕ್ಯವನ್ನು ಉದಾಹರಿಸಿರುತ್ತಾರೋ ತಿಳಿಯದು.

  2. ಈ ಸೂತ್ರದ ಭಾಷ್ಯದಲ್ಲಿ ಜಾನಶ್ರುತಿಯು ಕ್ಷತ್ರಿಯನನ್ನುವದಕ್ಕೆ ಕೊಟ್ಟಿರುವ ಮುಖ್ಯಹೇತು ಅಭಿಪ್ರತಾರಿಯು ಚೈತ್ರರಥಿ ಎಂಬ ಕ್ಷತ್ರಿಯನೆಂಬುದು. ಇದನ್ನು ಸಿದ್ಧಪಡಿಸುವ ಯುಕ್ತಿಗಳು ಯಾವವೂ ಅಷ್ಟು ಪ್ರಬಲವಾಗಿರುವಂತೆ ಕಾಣುವದಿಲ್ಲ. ಪ್ರಾಯಣ ಎಂಬ ಮಾತು ಈ ದೌರ್ಬಲ್ಯವನ್ನು ಸೂಚಿಸುವದಿಲ್ಲವೆ ? ಎಂಬುದನ್ನು ವಿದ್ವಾಂಸರು ವಿಮರ್ಶಿಸಬೇಕು.

_3.ಸೂತನನ್ನು.

  1. ಇದು ಸೂತ್ರದಲ್ಲಿರುವ ಚಕಾರದ ಅರ್ಥವೆಂದು ಭಾವಿಸಬಹುದು. ಇದೊಂದೇ ಇಲ್ಲಿ ಪ್ರಬಲವಾಗಿರುವಯುಕ್ತಿ. ಇಲ್ಲಿ ಮುಂತಾದ’ ಎಂಬ ಮಾತಿನಿಂದ ಗೋವುಗಳನ್ನು ದಾನಕ್ಕೆ ತಂದದ್ದೇ ಮುಂತಾದದ್ದನ್ನು ಊಹಿಸಬೇಕು.

೫೦೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಉಪನಯನಾದಯಃ ಸಂಸ್ಕಾರಾಃ ಪರಾಮೃಶ್ಯ ‘ತಂ ಹೋಪನಿ’’ (ಶತ. ಬ್ರಾ. ೧೧-೫-೩-೧೩), “ಅಧೀಹಿ ಭಗವ ಇತಿ ಹೋಪಸಸಾದ’ (ಛಾಂ, ೭-೧-೧), ‘‘ಬ್ರಹ್ಮಪರಾ ಬ್ರಹ್ಮನಿಷ್ಠಾಃ ಪರಂ ಬ್ರಹ್ಮಾಸ್ಟೇಷಮಾಣಾಃ ಏಷ ಹ ವೈ ತತ್ ಸರ್ವಂ ವಕ್ಷತೀತಿ ತೇ ಹ ಸಮಿತ್ಪಾಣಯೋ ಭಗವನ್ನಂ ಪಿಪ್ಪಲಾದಮುಪಸನ್ನಾ’ (ಪ್ರ. ೧-೧) ಇತಿ ಚ | ‘ತಾನ್ ಹಾನುಪನೀಯ್ಕೆವ’ (ಛಾಂ. ೫-೧೧-೭) ಇತ್ಯಪಿ ಪ್ರದರ್ಶಿತೈವ ಉಪನಯನಪ್ರಾಪ್ತಿರ್ಭವತಿ | ಶೂದ್ರಸ್ಯ ಸಂಸ್ಕಾರಾಭಾವೋಭಿಲಪ್ಯತೇ, ‘‘ಶೂದ್ರ ಶ್ಚತುರ್ಥ ವರ್ಣ ಏಕಜಾತಿ” (ಗೌ, ಧ, ೨-೧-೫೧) ಇತಿ ಏಕಜಾತಿತ್ವ ಸ್ಮರಣಾತ್ ‘ನಶೂದ್ರೇ ಪಾತಕಂ ಕಿಂಚಿನ್ನ ಚ ಸಂಸ್ಕಾರಮರ್ಹತಿ’ (ಮನು.೧೦-೧೨೬)

ಇತ್ಯಾದಿಭಿಶ್ಚ ||

(ಭಾಷ್ಯಾರ್ಥ) ಈ (ಕಾರಣ)ದಿಂದಲೂ ಶೂದ್ರನಿಗೆ ಅಧಿಕಾರವಿಲ್ಲ. ಏಕೆಂದರೆ ವಿದ್ಯೆಗಳನ್ನು (ಹೇಳುವ) ಸ್ಥಲಗಳಲ್ಲಿ ಉಪನಯನವೇ ಮುಂತಾದ ಸಂಸ್ಕಾರಗಳು ಆತನಿಗೆ ಉಪನಯನವನ್ನು ಮಾಡಿಸಿದನು’ (ಶತ. ಬ್ರಾ. ೫-೫-೩-೧೩) ಎಂದೂ ಅಧೀಹಿ ಭಗವಃ’ (ಪೂಜ್ಯನ, ತತ್ತ್ವವನ್ನು ಹೇಳಿಕೊಡು) ಎಂಬ (ಮಂತ್ರವನ್ನುಚ್ಚರಿಸುತ್ತಾ) ಬಳಿಸಾರಿದನು (ಛಾಂ. ೭-೧-೧) ಎಂದೂ ‘ಬ್ರಹ್ಮಪರರಾಗಿ ಬ್ರಹ್ಮನಿಷ್ಠರಾಗಿ ಪರ ಬ್ರಹ್ಮವನ್ನು ಹುಡುಕಿಕೊಂಡು ಈತನೇ ಅದೆಲ್ಲವನ್ನೂ ಹೇಳುವನು ಎಂದು ಅವರು ಸಮಿತ್ತಾಣಿಗಳಾಗಿ ಭಗವಂತನಾದ ಪಿಪ್ಪಲಾದನನ್ನು ಬಳಿಸಾರಿದರು’ (ಪ್ರ. ೧-೧) ಎಂದೂ ಪರಾಮರ್ಶವಾಗಿರುತ್ತವೆ. ಅವರನ್ನು ಉಪನಯನಮಾಡದಯೇ (ಇದನ್ನು ಹೇಳಿದನು. ಛಾಂ. ೫-೧-೭) ಎಂಬಲ್ಲಿಯೂ ಉಪನಯನವು ಬಂದೊದಗಿತ್ತೆಂಬು ದನ್ನು ತಿಳಿಸಿದಂತೆಯೇ ಆಗಿದೆ.

ಆದರೆ ಶೂದ್ರನಿಗೆ ಸಂಸ್ಕಾರವಿಲ್ಲವೆಂದು ‘ಶೂದ್ರನು ನಾಲ್ಕನೆಯ ವರ್ಣದವನು, (ಅವನು) ಏಕಜಾತಿಯು” (ಗೌ. ಧ. ೨-೧-೫೧) ಎಂದು ಅವನು ಒಂದೇ ಜನ್ಮ

  1. ಮೈಸೂರು ಸಂಸ್ಕರಣದ ಗೌತಮಸೂತ್ರದಲ್ಲಿ ಇದನ್ನು ಎರಡು ಸೂತ್ರಗಳಾಗಿ ಓಡದಿದ.

  2. ವಿದ್ಯೆಗಾಗಿ ಉಪನಯನ, ವಿಧಿವತ್ತಾಗಿ ಗುರುವಿನ ಉಪಸ, ಮಂತ್ರೋಚ್ಚಾರ - ಇವುಗಳು ಯಾವವೂ ಶೂದ್ರನಿಗಿಲ್ಲ.

  3. ಅಶ್ವಪತಿಯು ಕ್ಷತ್ರಿಯನಾದ್ದರಿಂದ ಬ್ರಾಹ್ಮಣರಿಗೆ ಉಪನಯನಮಾಡಿಸದೆಯೇ ವೃಶ್ಯಾನರವಿದ್ಯೆಯನ್ನು ತಿಳಿಸಿಕೊಟ್ಟನು ಎಂದು ಶ್ರುತಿಯು ಹೇಳುವದರಿಂದ ಇಂಥ ಸಂದರ್ಭದಲ್ಲಿ ಉಪನಯನವು ಅವಶ್ಯವೆಂದು ಸೂಚಿಸಿದಂತೆ ಆಯಿತು ಎಂದು ಅರ್ಥ.

ಅಧಿ. ೯. ಸೂ. ೩೭] ಶೂದ್ರನಿಗೆ ವಿದ್ಯಾಧಿಕಾರವಿಲ್ಲವೆಂಬುದಕ್ಕೆ ಬೇರೆಯ ಕಾರಣಗಳು ೫೦೫

ವುಳ್ಳವನು’ ಎಂದು ಸ್ಮತಿಯಿರುವದರಿಂದಲೂ “ಶೂದ್ರನ ವಿಷಯದಲ್ಲಿ ಯಾವದೂ ಪಾಪವಲ್ಲ, (ಅವನು) ಸಂಸ್ಕಾರಕ್ಕೂ ತಕ್ಕವನಲ್ಲ’ (ಮನು. ೧೦-೧೨೬) ಇದೇ ‘ಮುಂತಾದ (ವಚನ)ಗಳಿಂದಲೂ (ಗೊತ್ತಾಗುತ್ತದೆ).

ತದಭಾವನಿರ್ಧಾರಣೇ ಚ ಪ್ರವೃತ್ತೇ ||೩೭|| ೩೭. ಅವನಲ್ಲವೆಂದು ನಿಶ್ಚಯಿಸಿದ ಬಳಿಕ (ಉಪನಯನಕ್ಕೆ) ತೊಡಗಿರುವದರಿಂದಲೂ (ಹೀಗೆ).

ಶೂದ್ರನಿಗೆ ವಿದ್ಯಾಧಿಕಾರವಿಲ್ಲವೆಂಬುದಕ್ಕೆ ಬೇರೆಯ ಕಾರಣಗಳು

(ಭಾಷ್ಯ) ೩೧೧. ಇತಶ್ಚ ನ ಶೂದ್ರಸ್ಯ ಅಧಿಕಾರಃ | ಯತ್ ಸತ್ಯವಚನೇನ ಶೂದ್ರತ್ವಾಭಾವೇ ನಿರ್ಧಾರಿತೇ ಜಾಬಾಲಂ ಗೌತಮಃ ಉಪನೇತುಮ್ ಅನುಶಾಸಿತುಂ ಚ ಪ್ರವವೃತೇ “ನೈತದಬ್ರಾಹ್ಮಣೋ ವಿವಕ್ತುಮರ್ಹತಿ ಸಮಿಧಂ ಸೋಮಾಹರೋಪ ತಾ ನೇಷ್ಟೇ ನ ಸತ್ಯಾದಗಾ’ (ಛಾಂ. ೪-೪-೫) ಇತಿ ಶ್ರುತಿಲಿಜ್ಜಾತ್ ||

(ಭಾಷ್ಯಾರ್ಥ) ಈ ಕಾರಣದಿಂದಲೂ ಶೂದ್ರನಿಗೆ ಅಧಿಕಾರವಿಲ್ಲ ; ಏಕೆಂದರೆ ಸತ್ಯವನ್ನು ಆಡಿದ್ದರಿಂದ ಶೂದ್ರನಲ್ಲವೆಂದು ನಿಶ್ಚಯಿಸಿದ ಬಳಿಕ ಜಾಬಾಲನನ್ನು ಗೌತಮನು ಉಪನಯನಮಾಡುವದಕ್ಕೂ (ಅವನಿಗೆ) ಉಪದೇಶಮಾಡುವದಕ್ಕೂ ಹೂರಟನು. “ಅಬ್ರಾಹ್ಮಣನು ಇದನ್ನು ಹೇಳಲಾರನು ; ಸೋಮ್ಯ, ಸಮಿತ್ತನ್ನು ತೆಗೆದುಕೊಂಡು ಬಾ, ನಿನಗೆ ಉಪನಯನಮಾಡುವನು, (ನೀನು) ಸತ್ಯವನ್ನು (ಬಿಟ್ಟು ಹೋಗಿರುವದಿಲ್ಲ’ (ಛಾಂ. ೪-೪-೫) ಎಂಬ ಶ್ರುತಿಲಿಂಗದಿಂದ (ಹೀಗೆಂದು ಗೊತ್ತಾಗುತ್ತದೆ).

  • ಶ್ರವಣಾಧ್ಯಯನಾರ್ಥಪ್ರತಿಷೇಧಾತ್ ಸ್ಮೃತೇಶ್ಚ ||೩೮||

೩೮. ಶ್ರವಣ, ಅಧ್ಯಯನ, ಅರ್ಥ - ಇವುಗಳನ್ನು ಕೂಡದೆಂದಿರುವ ಸ್ಕೃತಿಯಿಂದಲೂ (ಹೀಗೆ).

(ಭಾಷ) ೩೧೨. ಇತಶ್ಚ ನ ಶೂದ್ರಸ್ಯ ಅಧಿಕಾರಃ | ಯದಸ್ಯ ಸ್ಮೃತೇಃ ಶ್ರವಣಾ 1. ದ್ವಿಜನಲ್ಲ, ಉಪನಯನಾದಿ ಸಂಸ್ಕಾರಗಳಿಗೆ ತಕ್ಕವನಲ್ಲ ಎಂದರ್ಥ.

‘೫೦೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಧ್ಯಯನಾರ್ಥಪ್ರತಿಷೇಧೋ ಭವತಿ | ವೇದಶ್ರವಣಪ್ರತಿಷೇಧಃ, ವೇದಾಧ್ಯಯನ ಪ್ರತಿಷೇಧಃ ತದರ್ಥಜ್ಞಾನಾನುಷ್ಠಾನಯೋಶ್ಚ ಪ್ರತಿಷೇಧಃ ಶೂದ್ರಸ್ಯ ಸ್ಮರ್ಯತೇ | ಶ್ರವಣಪ್ರತಿಷೇಧಸ್ತಾವತ್ “ಅಥಾಸ್ಯ ವೇದಮುಪಶೃಣ್ಮತಸ್ಯಪುಜತುಭ್ಯಾಂ ಪ್ರೋತ್ರ ಪ್ರತಿಪೂರಣಮ್’’ (ಗೌ. ಧ. ೨-೩-೪) ಇತಿ | ಪು ಹ ವಾ ಏತದ್ಮಶಾನಂ ಯಚೂದ್ರಸ್ತಸ್ಮಾತ್ತೂದ್ರಸಮೀಪೇ ನಾಲ್ವೇತವ್ಯಮ್” (?) ಇತಿ ಚ | ಅತ ವಿವಾಧ್ಯಯನಪ್ರತಿಷೇಧಃ | ಯಸ್ಯ ಹಿ ಸಮೀರ್ಪೇಪಿ ನಾದ್ರೇತವ್ಯಂ ಭವತಿ ಸ ಕಥಮಶ್ರುತಮ್ ಅಧೀಯೇತ ? ಭವತಿ ಚ ವೇದೋಚ್ಚಾರಣೆ’ ಜಿಹ್ವಾಚ್ಛೇದೋ ಧಾರಣೆ ಶರೀರಭೇದಃ’ (ಗೌ. ಧ. ೨-೩-೪) ಇತಿ | ಅತ ಏವ ಚ ಅರ್ಥಾತ್ ಅರ್ಥಜ್ಞಾನಾನುಷ್ಠಾನಯೋಃ ಪ್ರತಿಷೇಧೋ ಭವತಿ ‘ನ ಶೂದ್ರಾಯ ಮತಿಂ ದದ್ಯಾತ್’ (ಮನು. ೪-೮೦) “ದ್ವಿಜಾತೀನಾಮಧ್ಯಯನಮಿಜ್ಯಾ ದಾನಮ್’ (ಗೌ. ಧ. ೨-೧ ೧) ಇತಿ ಚ ||

(ಭಾಷ್ಯಾರ್ಥ) ಈ ಕಾರಣದಿಂದಲೂ ಶೂದ್ರನಿಗೆ ಅಧಿಕಾರವಿಲ್ಲ ; ಏಕೆಂದರೆ ಸ್ಮೃತಿಯಲ್ಲಿ ಶ್ರವಣಾಧ್ಯಯನಾರ್ಥದ ಪ್ರತಿಷೇಧವಿರುತ್ತದೆ. ಶೂದ್ರನು ವೇದವನ್ನು ಶ್ರವಣಮಾಡ ಕೂಡದೆಂದಿರುವದು, ವೇದಾಧ್ಯಯನವನ್ನು ಮಾಡಕೂಡದೆಂದಿರುವದು, ಅರ್ಥವನ್ನು ತಿಳಿದುಕೊಳ್ಳುವದೂ ಅನುಷ್ಠಾನಮಾಡುವದೂ ಕೂಡದೆಂದಿರುವದು- (ಇವೆಲ್ಲ) ಸ್ಕೃತಿಯಲ್ಲಿದೆ. ಮೊದಲನೆಯದಾಗಿ ಶ್ರವಣಪ್ರತಿಷೇಧವು (ಹೇಗೆಂದರೆ) : “ಇನ್ನು ಇವನು ವೇದವನ್ನು ಉಪಶ್ರವಣಮಾಡಿದರೆ (ಕರಗಿಸಿದ) ಸೀಸ, ಅರಗು- ಇವುಗಳಿಂದ ಕಿವಿಯನ್ನು ತುಂಬಬೇಕು’’ (ಗೌ. ಧ. ೨-೩-೪) ಎಂದೂ ‘ಶೂದ್ರನೆಂಬವನಿದಾನಲ್ಲ, ಅವನು ಕಾಲುಳ್ಳ ಸ್ಮಶಾನವು ; ಆದ್ದರಿಂದ ಶೂದ್ರನ ಬಳಿಯಲ್ಲಿ ಅಧ್ಯಯನಮಾಡ ಬಾರದು’ (?) ಎಂದೂ (ಇದ). ಆದ್ದರಿಂದಲೇ ಅಧ್ಯಯನವನ್ನೂ ಪ್ರತಿಷೇಧಿಸಿದೆ

  1. ಅಚ್ಚಿನ ಗೌ.ಧ. ಸೂತ್ರದಲ್ಲಿ ‘ವೇದೋಚ್ಚಾರಣೇ’ ಎಂದು ಪಾಠವಿಲ್ಲ, ‘ಉದಾಹರಣೆ’ ಎಂದಿದೆ.

  2. ‘ಪದ್ದು’ ಎಂದು ಶಾಂಕರಭಾಷ್ಯದಲ್ಲಿರುವ ಪಾಠಕ್ಕೆ ನ್ಯಾ. ವಿ. ಮತ್ತು ರ.ಪ್ರ. ವ್ಯಾಖ್ಯಾನಗಳಂತ ಅರ್ಥವಿದು. ಆದರೆ ಜೈ, ಸೂ. ೬-೧-೩೮ರ ಭಾಷ್ಯದಲ್ಲಿ ‘ಯದು’ ಎಂಬ ಪಾಠವಿದೆ. ಭಾಮತೀವ್ಯಾಖ್ಯಾನದಲ್ಲಾಗಲಿ ಅದರ ಉಪವ್ಯಾಖ್ಯಾನಗಳಲ್ಲಾಗಲಿ ಈ ವಾಕ್ಯದ ಪರಾಮರ್ಶವಿಲ್ಲ.

  3. ಈ ವಾಕ್ಯದ ಹಿಂದುಮುಂದಿನ ವಾಕ್ಯಗಳು ಸ್ಮೃತಿವಾಕ್ಯಗಳಾಗಿರುವದರಿಂದಲೂ ಈ ಸೂತ್ರವೂ ಸ್ಮೃತಿಯನ್ನೇ ಪರಾಮರ್ಶಿಸಿರುವದರಿಂದಲೂ ಇದು ಸ್ಮೃತಿವಾಕ್ಯವೆಂದು ಭಾಷ್ಯಕಾರರು ಉದಾಹರಿಸಿರಬೇಕೆಂದು ತೋರುತ್ತದೆ. ಆದರೆ ನಮಗೆ ಸಿಕ್ಕಿರುವ ಯಾವ ಸ್ಮೃತಿಯಲ್ಲಿಯೂ

ಅಧಿ. ೯. ಸೂ. ೩೮] ಶೂದ್ರರಿಗೂ ಬ್ರಹ್ಮಜ್ಞಾನಕ್ಕೆ ಅಧಿಕಾರ

೫೦೭

(ಎನ್ನಬೇಕು). ಏಕೆಂದರೆ ಯಾವನ ಬಳಿಯಲ್ಲಿಯೂ ಅಧ್ಯಯನಮಾಡಬಾರ ದಾಗಿರುವದೋ ಅವನು ಶ್ರವಣಮಾಡದಿರುವದನ್ನು ಹೇಗೆ ಅಧ್ಯಯನಮಾಡಿಯಾನು ? “ವೇದೋಚ್ಚಾರಣೆಯನ್ನು ಮಾಡಿದರೆ ನಾಲಗೆಯನ್ನು ಕತ್ತರಿಸಬೇಕು ; (ಪಾಠಮಾಡಿ) ಧರಿಸಿದ್ಧರೆ ಶರೀರವನ್ನು ಕತ್ತರಿಸಿಬಿಡಬೇಕು’’ (ಗೌ. ಧ. ೨-೩-೪) ಎಂದೂ (ಸ್ಕೃತಿ) ಇದೆ. ಆದ್ದರಿಂದಲೇ ಅರ್ಥಜ್ಞಾನ, ಅನುಷ್ಠಾನ- ಇವೆರಡನ್ನೂ ಅರ್ಥವಶದಿಂದ ಪ್ರತಿಷೇಧಮಾಡಿದಂತಾಗುತ್ತದೆ. ‘ಶೂದ್ರನಿಗೆ (ವೇದಾರ್ಥದ) ತಿಳಿವಳಿಕೆಯನ್ನು ಕೊಡಬಾರದು’ (ಮನು. ೪-೮೦), ದ್ವಿಜಾತಿಯವರಿಗೆ ಅಧ್ಯಯನ, ಯಾಗ, ದಾನ (- ಇವು ಧರ್ಮಗಳು)” (ಗೌ. ಧ. ೨-೧-೧) ಎಂದೂ (ಸ್ಮತಿಯಿದೆ).

ಶೂದ್ರರಿಗೂ ಬ್ರಹ್ಮಜ್ಞಾನಕ್ಕೆ ಅಧಿಕಾರ

(ಭಾಷ್ಯ) ೩೧೬. ಯೇಷಾಂ ಪುನಃ ಪೂರ್ವಕೃತಸಂಸ್ಕಾರವಶಾತ್ ವಿದುರ ಧರ್ಮವ್ಯಾಧ ಪ್ರಕೃತೀನಾಂ ಜ್ಞಾನೋತ್ಪತ್ತಿ, ತೇಷಾಂ ನ ಶಕ್ಯತೇ ಫಲಪ್ರಾಪ್ತಿ: ಪ್ರತಿಷೇದ್ದುಮ್ | ಜ್ಞಾನಸ್ಯ ಐಕಾನ್ತಕಫಲಶ್ಚಾತ್, ‘ಶ್ರಾವಯೇಚ್ಚತುರೋ ವರ್ಣಾನ್’ (ಮೋ, ಧ. ೩೨೭-೪೯) ಇತಿ ಚ ಇತಿಹಾಸಪುರಾಣಾಧಿಗಮ್ ಚಾತುರ್ವಣ್ರಸ್ಯ ಅಧಿಕಾರ ಸ್ಮರಣಾತ್ | ವೇದಪೂರ್ವಕಸ್ತು ನಾಸ್ತಿ ಅಧಿಕಾರಃ ಶೂದ್ರಾಣಾಮ್ ಇತಿ ಸ್ಥಿತಮ್ ||

(ಭಾಷ್ಯಾರ್ಥ) ಆದರೆ ವಿದುರ, ಧರ್ಮವ್ಯಾಧ - ಮುಂತಾದ ಯಾರಿಗೆ ಹಿಂದೆ ಮಾಡಿದ (ಕರ್ಮಗಳ) ಸಂಸ್ಕಾರದ ವಶದಿಂದ ಜ್ಞಾನವು ಉಂಟಾಗಿರುವದೋ ಅವರಿಗೆ ಫಲವು ದೂರಕಿರುವದೆಂಬುದನ್ನು ಇಲ್ಲವೆನ್ನುವದಕ್ಕಾಗಲಾರದು. ಏಕೆಂದರೆ ಜ್ಞಾನಕ್ಕೆ ಫಲವು ಗೊತ್ತಾಗಿ ಆಗಿಯೇ ತೀರುತ್ತದೆ. ನಾಲ್ಕು ವರ್ಣದವರಿಗೂ ಶ್ರವಣಮಾಡಿಸಬೇಕು.” (ಮೋ. ಧ. ೩೨೭-೪೯) ಎಂದು ಇತಿಹಾಸಪುರಾಣಗಳನ್ನು (ಅರಿತುಕೊಳ್ಳುವ) ವಿಷಯದಲ್ಲಿ ನಾಲ್ಕು ವರ್ಣಕ್ಕೂ ಅಧಿಕಾರವಿದೆಯೆಂದು) ಸ್ಮತಿಯಿರುವದರಿಂದಲೂ

ಈ ವಾಕ್ಯವು ಕಾಣಿಸುವದಿಲ್ಲ. ಜೈ, ಸೂ. ೬-೧-೩೮ರ ಭಾಷ್ಯದಲ್ಲಿ ಉದಾಹರಿಸಿರುವ ವಾಕ್ಯವು ‘ಯದ್ಯುವಾ…. ನಾಯಮ್’’ ಎಂದಿದೆ. ಆ ವಾಕ್ಯವು ಸ್ಮೃತಿ ಎಂದು ಉದಾಹೃತವಾಗಿರುವ ದೆಂದು ಹೇಳುವದಕ್ಕೆ ಆಗುವದಿಲ್ಲ.

  1. ವೇದಾಧ್ಯಯನನಿಷೇಧದಿಂದಲೇ ತತ್ತೂರ್ವಕವಾದ ಜ್ಞಾನ, ಅನುಷ್ಟಾನ - ಇವುಗಳನ್ನೂ ನಿಷೇಧಿಸಿದಂತೆ ಆಗಿರುತ್ತದೆ.

  2. ಇಂಥ ಜಾತಿಯವರ ಜ್ಞಾನಕ್ಕೆ ಮೋಕ್ಷವಿಲ್ಲ ಎಂದು ನಿಯಮಿಸುವದಕ್ಕೆ ಆಗುವದಿಲ್ಲ.

೫೦೮

ಬ್ರಹ್ಮಸೂತ್ರಭಾಷ್ಯ |

[ಅ. ೧. ಪಾ. ೩.

(ಜ್ಞಾನಮೂಲಕವಾಗಿ ಶೂದ್ರನಿಗೆ ಮುಕ್ತಿಯುಂಟು). ವೇದಪೂರ್ವಕವಾಗಿ ಮಾತ್ರ (ಬ್ರಹ್ಮವಿದ್ಯೆಯಲ್ಲಿ) ಶೂದ್ರನಿಗೆ ಅಧಿಕಾರವಿಲ್ಲ ಎಂದು ಈ (ಅಧಿಕರಣದಲ್ಲಿ) ಸಿದ್ಧವಾಗಿರುತ್ತದೆ.

೧೦. ಕಂಪನಾಧಿಕರಣ

(ಕಠೋಪನಿಷತ್ತಿನ ೨-೩-೨ರಲ್ಲಿರುವ ಪ್ರಾಣನು ಬ್ರಹ್ಮವೇ)

ಕಮ್ರನಾತ್ ||೩೯|| ೩೯: ಕಂಪಿಸುವಿಕೆಯನ್ನು (ಹೇಳಿರುವದ)ರಿಂದ (ಪ್ರಾಣವು ಬ್ರಹ್ಮವು).

ವಿಷಯವೂ ಸಂಶಯವೂ

೩೧೪. ಅವಸಿತಃ ಪ್ರಾಸಜ್ ಕೋSಧಿಕಾರವಿಚಾರಃ ಪ್ರಕೃತಾಮೇವ ಇದಾನೀಂ ವಾಕ್ಯಾರ್ಥವಿಚಾರಣಾಂ ಪ್ರವರ್ತಯಿಷ್ಯಾಮಃ | “ಯದಿದಂ ಕಿಂಚ ಜಗತ್ ಸರ್ವಂ ಪ್ರಾಣ ಏಜತಿ ನಿಃಸೃತಮ್ ! ಮಹದ್ವಯಂ ವಜ್ರಮುದ್ಯತಂ ಯ ಏತದ್ವಿದುರಮೃತಾಸ್ತ್ರ ಭವನ್ತಿ |’ (ಕಾ. ೨-೩-೨) ಇತ್ಯೇತದ್ ವಾಕ್ಯಂ ‘ಏಜ್ಯ ಕಮ್ಮನೇ’ ಇತಿಧಾತ್ವರ್ಥಾನು ಗಮಾತ್ ಲಕ್ಷಿತಮ್ | ಅಸ್ಮಿನ್ ವಾಕ್ಕೇ ಸರ್ವಮಿದಂ ಜಗತ್ ಪ್ರಾಣಾಶ್ರಯಂ ಸ್ಪಷ್ಣತೇ, ಮಹಚ್ಚ ಕಿಂಚಿದ್ ಭಯಕಾರಣಂ ವಜ್ರಶಬ್ಲಿತಮ್ ಉದ್ಯಮ್, ತದ್ವಿಜ್ಞಾನಾಚ್ಚ ಅಮೃತತ್ವಪ್ರಾಪ್ತಿಃ ಇತಿ ಶ್ಲೋಯತೇ | ತತ್ರ ಕೋSಸೌ ಪ್ರಾಣಃ, ಕಿಂ ತದ್ ಭಯಾನಕ ವಜ್ರಮ್ ಇತ್ಯಪ್ರತಿಪತೈರ್ವಿಚಾರೇ ಕ್ರಿಯಮಾಣೇ -

(ಭಾಷ್ಯಾರ್ಥ) ಪ್ರಸಂಗದಿಂದ ಬಂದ ಅಧಿಕಾರವಿಚಾರವು ಮುಗಿಯಿತು. ಈಗ ಪ್ರಕೃತವಾಗಿ ರುವ ವಾಕ್ಯದ ಅರ್ಥವಿಚಾರವನ್ನೇ (ಮುಂದಕ್ಕೆ) ನಡೆಯಿಸುವವು.

“ಯಾವ ಈ ಜಗತ್ತಲ್ಲವೂ (ಯಾವ) ಪ್ರಾಣ(ನಿರುವದರಿಂದಲೇ) ಹೊರಕ್ಕೆ ಬಂದು ಕಂಪಿಸುತ್ತಿರುವದೋ, (ಯಾವದು) ದೊಡ್ಡ ಭಯವೋ ಎತ್ತಿದ ವಜ್ರವೋ, ಯಾರು ಅದನ್ನು ಅರಿತುಕೊಳ್ಳುವರೋ (ಅವರು) ಅಮೃತರಾಗುವರು” (ಕ. ೨-೩ ೨) ಎಂಬೀ ವಾಕ್ಯವು ವಿಜೃ ಕಮ್ಮನೇ ಎಂಬ ಧಾತ್ವರ್ಥವನ್ನನುಸರಿಸಿ (ಸೂತ್ರದಲ್ಲಿ)

  1. ಇತಿಹಾಸಪುರಾಣಗಳಲ್ಲಿ ವೇದೋಪದೇಶವೇ ಇರುವದರಿಂದ ಬ್ರಹ್ಮಾತ್ಮಜ್ಞಾನವು ಆ ಮೂಲಕವೂ ಆಗಬಹುದು.

ಅಧಿ. ೧೦. ಸೂ. ೩೯] ವಾಯು, ವಜ್ರ ಎಂಬಿವು ಆಯಾ ಹೆಸರಿನ ವಸ್ತುಗಳು ೫೦೯ ಲಕ್ಷಿತವಾಗಿರುತ್ತದೆ. ಈ (ಶ್ರುತಿ)ವಾಕ್ಯದಲ್ಲಿ ಈ ಜಗತ್ತೆಲ್ಲವೂ ಪ್ರಾಣನನ್ನು ಆಶ್ರಯಿಸಿ ಕೊಂಡು ವ್ಯಾಪಾರಮಾಡುತ್ತಿರುವದು ; ಮತ್ತು ಭಯಕ್ಕೆ ಕಾರಣವಾಗಿ ವಜ್ರ ಎಂಬ ಹೆಸರಿನಿಂದ ಕರೆಯಲ್ಪಟ್ಟಿರುವ ಯಾವದೋ ಒಂದು ದೊಡ್ಡ (ವಸ್ತುವು) ಮೇಲಕ್ಕೆ ಲ್ಪಟ್ಟಿರುತ್ತದೆ, ಮತ್ತು ಅದರ ವಿಜ್ಞಾನದಿಂದ ಅಮೃತತ್ವವು ದೊರಕುತ್ತದೆ - ಎಂದು ಹೇಳಲ್ಪಟ್ಟಿರುತ್ತದೆ. ಇಲ್ಲಿ ಈ ಪ್ರಾಣನು ಯಾರು ? ಆ ಭಯಾನಕವಾದ ವಜ್ರವು

ಯಾವದು ? - ಎಂಬುದು ತಿಳಿಯದಿರುವದರಿಂದ ವಿಚಾರವನ್ನು ಮಾಡಿದರೆ -

ಪೂರ್ವಪಕ್ಷ : ವಾಯು, ವಜ್ರ ಎಂಬಿವು ಆಯಾ ಹೆಸರಿನ ವಸ್ತುಗಳು

  • (ಭಾಷ್ಯ) ೩೧೫. ಪ್ರಾಪ್ತಂ ತಾವತ್ ಪ್ರಸಿದ್ಧಃ ಪಞ್ಚವೃತ್ತಿರ್ವಾಯುಃ ಪ್ರಾಣಃ ಇತಿ | ಪ್ರಸಿದ್ಧರೇವ ಚ ಅಶನಿರ್ವಜಂ ಸ್ಯಾತ್ | ವಾಯೋಶ್ಚ ಇದಂ ಮಾಹಾತ್ಮ ಸಂಕೀರ್ತ್ಯತೇ | ಕಥಮ್ ? ಸರ್ವಮಿದಂ ಜಗತ್ ಪಞ್ಚವೃತ್ ವಾಯ್ ಪ್ರಾಣಶಬ್ಲಿತೇ ಪ್ರತಿಷ್ಠಾಯ ಏಜತಿ | ವಾಯುನಿಮಿತ್ತಮೇವ ಚ ಮಹದ್ ಭಯಾನಕಂ ವಜ್ರಮ್ ಉದ್ಯಮೃತೇ | ವಾಯ್ ಹಿ ಪರ್ಜನ್ಯಭಾವೇನ ವಿವರ್ತಮಾನೇ ವಿದ್ಯುತ್‌ನಯಿತ್ತು ವೃಷ್ಟಶನಯ: ವಿವರ್ತ ಇತ್ಯಾಚಕ್ಷತೇ | ವಾಯುವಿಜ್ಞಾನಾದೇವ ಚ ಇದಮ್ ಅಮೃತತ್ವಮ್ | ತಥಾ ಹಿ ಶ್ರುತ್ಯನ್ತರಮ್ - ‘ವಾಯುರೇವ ವ್ಯಷ್ಟಿರ್ವಾಯುಃ ಸಮಷ್ಟಿರಪಪುನರ್ಮತ್ಯುಂ ಜಯತಿ ಯ ಏವಂ ವೇದ” (ಬೃ. ೩-೩-೨) ಇತಿ | ತಸ್ಮಾತ್ ವಾಯುರಯಮ್ ಇಹ ಪ್ರತಿಪತ್ರವ್ಯ: ಇತಿ ||

(ಭಾಷ್ಯಾರ್ಥ) (ಲೋಕ ಪ್ರಸಿದ್ಧಿಯಿಂದ ಐದು ವೃತ್ತಿಗಳ ವಾಯುವು ಪ್ರಾಣನು ಎಂಬ (ಪೂರ್ವಪಕ್ಷವು) ಮೊದಲು ಬಂದೊದಗುತ್ತದೆ. ಪ್ರಸಿದ್ಧಿಯಿಂದಲೇ ವಜ್ರವೆಂದರೆ ಸಿಡಿಲು ಆಗಿರಬೇಕು. ಮತ್ತು ವಾಯುವಿಗೇ ಈ ಮಾಹಾತ್ಮವನ್ನು ಹೇಳಿರುತ್ತದೆ. ಹೇಗೆ ? ಎಂದರೆ, ಈ ಜಗತ್ತೆಲ್ಲವೂ ಪ್ರಾಣನೆಂಬ ಶಬ್ದದಿಂದ ಹೇಳಿರುವ ಐದು ವೃತ್ತಿಗಳ ವಾಯುವಿನಲ್ಲಿ ಇದ್ದುಕೊಂಡೇ (ತನ್ನ ) ಕೆಲಸವನ್ನು ಮಾಡುತ್ತಿರುವದು, ವಾಯು (ವೆಂಬ) ನಿಮಿತ್ತದಿಂದಲೇ ದೊಡ್ಡ ಭಯಂಕರವಾದ ವಜ್ರವು ಎತ್ತಿಹಿಡಿಯಲ್ಪಡು ತದೆ. ವಾಯುವು ಮೋಡದ ರೂಪದಿಂದ ಮಾರ್ಪಡಲಾಗಿ ಮಿಂಚು, ಗುಡುಗು, ಮಳ,

  1. ವಿಷಯವಾಕ್ಯವಾಗಿ ಲಕ್ಷಣೆಯಿಂದ ಸೂಚಿತವಾಗಿದೆ.

೫೦

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಸಿಡಿಲು (ಇವುಗಳೂ) ಉಂಟಾಗುವವು ಎಂದು (ಜನರು) ಹೇಳುತ್ತಾರಲ್ಲವೆ ? ಈ (ವಾಕ್ಯದಲ್ಲಿ ಹೇಳಿರುವ) ಅಮೃತತ್ವವೂ ವಾಯುವಿನ ಜ್ಞಾನದಿಂದಲೇ (ಆಗುತ್ತದೆ). ಹಾಗೆಂದಲ್ಲವೆ, “ವಾಯುವೇ ವ್ಯಷ್ಟಿಯು, ವಾಯುವೇ ಸಮಷ್ಟಿಯು ; ಯಾವನು ಹೀಗೆಂದು ತಿಳಿಯುವನೋ ಅವನು ಪುನರ್ಮತ್ಯುವನ್ನು ಜಯಿಸುವನು’’’ (ಬೃ. ೩-೩ ೨) ಎಂಬ ಬೇರೊಂದು ಶ್ರುತಿ (ಹೇಳಿರುತ್ತದೆ) ? ಆದ್ದರಿಂದ ಈ (ಪ್ರಾಣನು) ವಾಯು ಎಂದು ಇಲ್ಲಿ ತಿಳಿದುಕೊಳ್ಳಬೇಕು.

ಸಿದ್ಧಾಂತ : ಪ್ರಾಣವೂ ವಜ್ರವೂ ಬ್ರಹ್ಮವೇ

(ಭಾಷ್ಯ) ೩೧೬. ಏವಂ ಪ್ರಾಪ್ತ ಬೂಮಃ | ಬ್ರಹ್ಮವೇದಮ್ ಇಹ ಪ್ರತಿಪವ್ಯಮ್ | ಕುತಃ ? ಪೂರ್ವೋತ್ತರಾಲೋಚನಾತ್ | ಪೂರ್ವೋತ್ತರಯೋರ್ಹಿ ಗ್ರಭಾಗಯೋಃ ಬ್ರಹ್ಮವ ನಿರ್ದಿಶ್ಯಮಾನಮ್ ಉಪಲಭಾಮಹೇ | ಇದೈವ ಕಥಮ್ ಅಕಸ್ಮಾತ್ ಅನ್ಯರಾಲೇ ವಾಯುಂ ನಿರ್ದಿಶ್ಯಮಾನಂ ಪ್ರತಿಪದ್ಮಮಹಿ ? ಪೂರ್ವತ್ರ ತಾವತ್ - ‘‘ತದೇವ ಶುಕ್ರಂ ತದೃಹ್ಮ ತದೇವಾಮೃತಮುಚ್ಯತೇ | ತಸ್ಮಿಲ್ಲೋಕಾಃ ಶ್ರಿತಾಃ ಸರ್ವೆ ತದು ನಾತ್ಯೇತಿ ಕಶ್ಚನ’ (ಕ. ೨-೩-೧) ಇತಿ ಬ್ರಹ್ಮ ನಿರ್ದಿಷ್ಟಮ್ | ತದೇವ ಇಹಾಪಿ ಸಂವಿಧಾನಾತ್‌ ಜಗತ್ಸರ್ವಂ ಪ್ರಾಣೇ ಏಜತಿ ಇತಿ ಚ ಲೊಕಾಶ್ರಯ ವತ್ಯಪ್ರತ್ಯಭಿಜ್ಞಾನಾತ್‌ ನಿರ್ದಿಷ್ಟಮ್ ಇತಿ ಗಮ್ಯತೇ | ಪ್ರಾಣಶಕ್ಟೋಪ್ಯಂ ಪರಮಾತ್ಮವ ಪ್ರಯುಕ್ತ: ‘ಪ್ರಾಣಸ್ಯ ಪ್ರಾಣಮ್’ (ಬೃ. ೪-೪-೧೮) ಇತಿ ದರ್ಶನಾತ್ | ವಿಜಯಿತೃತ್ವಮಪೀದಂ ಪರಮಾತ್ಮನ ಏವ ಉಪಪದ್ಯತೇ ನ ವಾಯುಮಾತ್ರಸ್ಯ | ತಥಾ ಚ ಉಕ್ತಮ್ (ನ ಪ್ರಾಣೇನ ನಾಪಾನೇನ ಮರ್ತ್ತೊ ಜೀವತಿ ಕಶ್ಚನ | ಇತರೇಣ ತು ಜೀವನಿ ಯಸ್ಮಿನ್ನೇತಾವುಪಾಶ್ರಿತ’’ (ಕ. ೨-೨-೫) ಇತಿ | ಉತ್ತರಾಪಿ ‘‘ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ ಭಯಾದಿಸ್ಪೃಶ್ಯ ವಾಯುಶ್ಚ ಮೃತ್ಯುರ್ಧಾವತಿ ಪಞ್ಚಮಃ’ (ಕ. ೨-೩-೩) ಇತಿ ಬ್ರಹ್ಮವ ನಿರ್ದೆಕೃತೇ ನ ವಾಯುಃ | ಸವಾಯುಕಸ್ಯ ಜಗತೋ ಭಯ ಹೇತುತ್ವಾಭಿಧಾನಾತ್ | ತದೇವ ಇಹಾಪಿ ಸಂವಿಧಾನಾತ್ ‘ಮಹದ್ವಯಮ್’, ‘ವಜ್ರಮುದ್ಯತಮ್‌’ ಇತಿ ಚ ಭಯಹೇತುತ್ವ ಪ್ರತ್ಯಭಿಜ್ಞಾನಾತ್ ನಿರ್ದಿಷ್ಟಮ್ ಇತಿ ಗಮ್ಯತೇ | ವಜ್ರಶಬ್ದಸ್ಮಯಂ

  1. ಈ ಶ್ರುತಿಯು ಸೂತ್ರಾತ್ಮನ ವಿಷಯದಲ್ಲಿ ಹೇಳಿದೆ. ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ – ಎಂಬ ಮೂರು ರೂಪದಿಂದಲೂ ವಾಯುವೇ ಇರುವದರಿಂದ ವಾಯುವನ್ನೇ ಹೀಗೆ ಉಪಾಸನಮಾಡಬೇಕು ಎಂಬುದು ಪೂರ್ವಪಕ್ಷಿಯ ಭಾವ.

ಅಧಿ. ೧೦. ಸೂ. ೩೯] ಸಿದ್ಧಾಂತ : ಪ್ರಾಣವೂ ವಜ್ರವೂ ಬ್ರಹ್ಮವೇ

೫೫

ಭಯಹೇತುತ್ವಸಾಮಾನ್ಮಾತ್ ಪ್ರಯುಕ್ತ: | ಯಥಾ ಹಿ ವಜ್ರಮುದ್ಯತಂ ಮಮೈವ ಶಿರಸಿ ನಿಪತೇಶ್ ಯದ್ಯಹಮ್ ಅಸ್ಯ ಶಾಸನಂ ನ ಕುರ್ಯಾಮ್ ಇತ್ಯನೇನ ಭಯೇನ ಜನಃ ನಿಯಮೇನ ರಾಜಾದಿಶಾಸನೇ ಪ್ರವರ್ತತೇ ಏವಮ್ ಇದಮ್ ಅಗ್ನಿವಾಯು ಸೂರ್ಯಾದಿಕಂ ಜಗತ್ ಅಸ್ಮಾದೇವ ಬ್ರಹ್ಮಣೋ ಬಿಭ್ರತ್, ನಿಯಮೇವ ಸ್ವವ್ಯಾಪಾರೇ ಪ್ರವರ್ತತೇ ಇತಿ ಭಯಾನಕಂ ವಜೋಪಮಿತಂ ಬ್ರಹ್ಮ । ತಥಾ ಚ ಬ್ರಹ್ಮವಿಷಯಂ ಶ್ರುತ್ಯವರಮ್ - ‘‘ಭೀಷಾಸ್ಮಾದ್ ವಾತಃ ಪವತೇ | ಭೀಷೋದೇತಿ ಸೂರ್ಯ: | ಭೀಷಾಸ್ಮಾದಗ್ನಿಶ್ಚನ್ಯಶ್ಚ | ಮೃತ್ಯುರ್ಧಾವತಿ ಪಞ್ಚಮಃ’ || (ತೈ. ೨-೮) ಇತಿ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಇದಕ್ಕೆ ಈ ಸಿದ್ಧಾಂತವನ್ನು ) ಹೇಳುತ್ತೇವೆ. ಇಲ್ಲಿ ಇದು ಬ್ರಹ್ಮವೆಂದೇ ತಿಳಿಯಬೇಕು. ಏಕೆ ? ಎಂದರೆ ಹಿಂದು ಮುಂದಿನ (ಸಂದರ್ಭವನ್ನು ) ಆಲೋಚಿಸುವದರಿಂದ (ಹಾಗೆಂದು) ಸಿದ್ಧವಾಗುತ್ತದೆ. ಹಿಂದುಮುಂದಿನ ಗ್ರಂಥಭಾಗಗಳಲ್ಲಿ ಬ್ರಹ್ಮವನ್ನೇ ತಿಳಿಸಿರುವದು ಕಂಡುಬರುತ್ತದೆ . ಯಲ್ಲವೆ ? (ಹೀಗಿರುವಲ್ಲಿ) ಇಲ್ಲಿ ಮಾತ್ರ ಹೇಗೆ ಇದ್ದಕ್ಕಿದ್ದ ಹಾಗೆ ನಡುವೆ ವಾಯು ವನ್ನು ಹೇಳಿದೆ ಎಂದು ತಿಳಿಯೋಣ ? ಮೊದಲನೆಯದಾಗಿ ಹಿಂದಿನ (ಗ್ರಂಥದಲ್ಲಿ) “ಅದೇ ಶುದ್ಧವಾದದ್ದು, ಅದೇ ಬ್ರಹ್ಮವು, ಅದೇ ಅಮೃತವೆನಿಸುವದು. ಅದರಲ್ಲಿ ಎಲ್ಲಾ ಲೋಕಗಳೂ ಆಶ್ರಯಿಸಿರುವವು. ಅದನ್ನು ಯಾವನೂ ಮೀರಿ ಹೋಗಲಾರನು.’ (ಕ. ೨-೩-೧) ಎಂದು ಬ್ರಹ್ಮವನ್ನು ತಿಳಿಸಿದ ; ಇಲ್ಲಿಯೂ ಸಂನಿಧಿಯಿಂದಲೂ ‘ಜಗತ್ತೆಲ್ಲವೂ ಪ್ರಾಣನಲ್ಲಿ ಅಲುಗಾಡುತ್ತಿರುವದು’ ಎಂದು ಲೋಕಗಳಿಗೂ ಆಶ್ರಯವಾಗಿರುವದೆಂಬ ಹೆಗ್ಗುರುತಿನಿಂದಲೂ ಅದನ್ನೇ ತಿಳಿಸಿದೆ ಎಂದು ನಿಶ್ಚಯವಾಗುತ್ತದೆ.

ಈ ಪ್ರಾಣಶಬ್ದವನ್ನು ಪರಮಾತ್ಮನಲ್ಲಿಯೇ ಉಪಯೋಗಿಸಿದೆ ; ಏಕೆಂದರೆ “ಪ್ರಾಣಕ್ಕೂ ಪ್ರ್ರಾಣವು’ (ಬೃ. ೪-೪-೧೮) ಎಂದು (ಈ ಶಬ್ದವನ್ನು ಈ ಅರ್ಥದಲ್ಲಿ ಪ್ರಯೋಗಿಸಿರುವದು) ಕಂಡುಬರುತ್ತದೆ. ಈ ಅಲುಗಾಡುವದೆಂಬುದೂ ಪರಮಾತ್ಮ ನಿಗೇ ಹೊಂದುತ್ತದೆಯೇ ಹೊರತು ಬರಿಯ ವಾಯುವಿಗೆ (ಹೊಂದುವದಿಲ್ಲ). ಆದ್ದರಿಂದಲೇ “ಯಾವ ಮರ್ತ್ಯನಾಗಲಿ ಪ್ರಾಣದಿಂದ ಜೀವಿಸಿರುವದಿಲ್ಲ, ಅಪಾನ ದಿಂದಲೂ (ಜೀವಿಸಿರುವದಿಲ್ಲ). ಯಾವನಲ್ಲಿ ಇವೆರಡೂ ಆಶ್ರಯಿಸಿಕೊಂಡಿರುವವೋ

  1. ‘ತಸ್ಮಿನ್ ಲೋಕಾಃ ಶ್ರಿತಾಃ ಸರ್ವ’ ಎಂಬುದನ್ನೇ ‘ಜಗತ್ಸರ್ವಂ ಪ್ರಾಣ ಏಜತಿ’ ಎಂದು ಬೇರೆ ಮಾತಿನಿಂದ ಹೇಳಿದ ಎಂದು ಭಾವ.ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಆ ಇನ್ನೊಬ್ಬನಿಂದ ಜೀವಿಸಿರುತ್ತಾರೆ’ (ಕ. ೨-೨-೫) ಎಂದು ಹೇಳಿದೆ. (ಈವಾಕ್ಯದ) ಮುಂದೆಯೂ ಈತನ ಭಯದಿಂದ ಅಗ್ನಿಯು ಸುಡುತ್ತಾನೆ, ಭಯದಿಂದ ಸೂರ್ಯನು ಬಿಸಿಲು ಕಾಯಿಸುತ್ತಾನೆ ; ಇಂದ್ರನೂ ವಾಯುವೂ (ಈತನ ಭಯದಿಂದಲೇ ಕೆಲಸ ಮಾಡುತ್ತಾರೆ). ಐದನೆಯವನಾದ ಮೃತ್ಯುವೂ ಓಡುತ್ತಾನೆ (ಕ. ೨-೩-೩) ಎಂದು ಬ್ರಹ್ಮವನ್ನೇ ತಿಳಿಸಲಾಗಿದೆಯೇ ಹೊರತು ವಾಯುವನ್ನಲ್ಲ. ಏಕೆಂದರೆ ವಾಯು ಸಹಿತವಾದ ಜಗತ್ತಿಗೇ ಭಯಹೇತುವೆಂದು (ಇಲ್ಲಿ ) ತಿಳಿಸಿರುತ್ತದೆ. ಅದನ್ನೇ ಇಲ್ಲಿಯೂ ಸಂನಿಧಿಯಿಂದ ಭಯಕ್ಕೆ ಕಾರಣವೆಂಬ ಗುರುತಿರುವದರಿಂದ ಮಹದ್ಭಯವೆಂದೂ ಉದ್ಯತವಾದ ವಜ್ರವೆಂದೂ ತಿಳಿಸಿದ ಎಂದು ಗೊತ್ತಾಗುತ್ತದೆ.

ಈ ವಜ್ರಶಬ್ದವು ಕೂಡ ಭಯಕ್ಕೆ ಕಾರಣವಾಗಿರುವದೆಂಬ ಹೋಲಿಕೆಯಿಂದ (ಬ್ರಹ್ಮವನ್ನು ತಿಳಿಸುವದಕ್ಕೆ) ಪ್ರಯೋಗಿಸಿರುತ್ತದೆ. ಹೇಗೆ ಎತ್ತಿದ ವಜ್ರಾಯುಧವು ಈತನ ಅಪ್ಪಣೆಯನ್ನು ನಾನು ಪಾಲಿಸದಿದ್ದರೆ, ನನ್ನ ತಲೆಯಮೇಲೆಯೇ ಬಿದ್ದೀತು ಎಂಬೀ ಭಯದಿಂದ ಗೊತ್ತಾಗಿ ರಾಜನೇ ಮೊದಲಾದವರ ಅಪ್ಪಣೆಯಂತೆ ಜನರು ನಡೆಯುವರೋ, ಹಾಗೆ ಈ ಅಗ್ನಿ, ವಾಯು, ಸೂರ್ಯ - ಮುಂತಾದ ಜಗತ್ತು ಇದೇ ಬ್ರಹ್ಮಕ್ಕೆ ಹೆದರಿಕೊಂಡು ಗೊತ್ತಾಗಿ ತನ್ನ ವ್ಯಾಪಾರದಲ್ಲಿ ತೊಡಗಿರುತ್ತದೆಯಾದ್ದರಿಂದ ಬ್ರಹ್ಮವು ಭಯಂಕರವಾದ ವಜ್ರದಂತಿರುವದು. ಆದ್ದರಿಂದಲೇ ‘‘ಈತನ ಭಯದಿಂದ ವಾಯು ಬೀಸುತ್ತಾನೆ, ಭಯದಿಂದ ಸೂರ್ಯನು ಹುಟ್ಟುತ್ತಾನೆ. ಈತನ ಭಯದಿಂದ ಅಗ್ನಿಯೂ ಇಂದ್ರನೂ (ಕೆಲಸಮಾಡುತ್ತಾರೆ), ಮೃತ್ಯು ಐದನೆಯವನಾಗಿ ಓಡುತ್ತಾನೆ? (ತೈ. ೨-೮) ಎಂದು ಬ್ರಹ್ಮವಿಷಯಕವಾದ ಬೇರೊಂದು ಶ್ರುತಿಯಿದೆ.

ಅಮೃತತ್ವಫಲವೂ ಇದು ಬ್ರಹ್ಮವೆಂದು ತಿಳಿಸುತ್ತದೆ

(ಭಾಷ್ಯ) ೩೧೭. ಅಮೃತತ್ವಫಲಶ್ರವಣಾದಪಿ ಬ್ರಹ್ಮವೇದಮ್ ಇತಿ ಗಮ್ಯತೇ | ಬ್ರಹ್ಮಜ್ಞಾನಾದ್ ಹಿ ಅಮೃತತ್ವಪ್ರಾಪ್ತಿ: | ‘ತಮೇವ ವಿದಿತ್ವಾತಿಮೃತ್ಯುಮೇತಿ ನಾನ್ಯಃ ಪನ್ಹಾ ವಿದ್ಯತೇಯನಾಯ” (ಶ್ವೇ. ೬-೧೫) ಇತಿ ಮyವರ್ಣಾತ್ | ಯತ್ತು ವಾಯುವಿಜ್ಞಾನಾತ್ ಕ್ವಚಿತ್ ಅಮೃತತ್ವಮ್ ಅಭಿಹಿತಮ್, ತತ್ ಆಪೇಕ್ಷಿಕಮ್ | ತತ್ವ ಪ್ರಕರಣಾವರಕರಣೇನ ಪರಮಾತ್ಮಾನಮ್ ಅಭಿಧಾಯ “ಅತೋನ್ಯ ದಾರ್ತಮ್’ (ಬೃ. ೩-೪-೨) ಇತಿ ವಾಯ್ಯಾದೇರಾರ್ತತ್ವಾಭಿಧಾನಾತ್ ||

  1. ಲೋಕಾಶ್ರಯತ್ನವನ್ನು ಹಿಂದೆ ಹೇಳಿರುವಂತ ಭಯಕಾರಣತ್ವವನ್ನು ಮುಂದಿನ ಮಂತ್ರದಲ್ಲಿ ಪರಮಾತ್ಮನ ವಿಷಯದಲ್ಲಿಯೇ ಹೇಳಿದೆ ಎಂದು ಭಾವ.

೫೫೧a

ಅಧಿ. ೧೦. ಸೂ. ೩೯] ಅಮೃತತ್ವಫಲವೂ ಇದು ಬ್ರಹ್ಮವೆಂದು ತಿಳಿಸುತ್ತದೆ

(ಭಾಷ್ಯಾರ್ಥ) ಅಮೃತತ್ವವೆಂಬ ಫಲವನ್ನು ಶ್ರುತಿಯಲ್ಲಿ ಹೇಳಿರುವದರಿಂದಲೂ ಇದು ಬ್ರಹ್ಮವೇ ಎಂದು ಗೊತ್ತಾಗುತ್ತದೆ. ಬ್ರಹ್ಮಜ್ಞಾನದಿಂದಲೇ ಅಮೃತತ್ವದ ಪ್ರಾಪ್ತಿ ಯಾಗುವದು. ಏಕೆಂದರೆ ಆತನನ್ನೇ ಅರಿತುಕೊಂಡರೆ ಅತಿಮೃತ್ಯುವನ್ನು ಹೊಂದುತ್ತಾನೆ, (ಅದನ್ನು) ಹೊಂದುವದಕ್ಕೆ ಮತ್ತೆ ಯಾವ ಹಾದಿಯೂ ಇರುವದಿಲ್ಲ” (ಶ್ವೇ. ೬-೧೫) ಎಂದು ಮಂತ್ರವರ್ಣವಿದೆ. ಇನ್ನು ವಾಯುವಿನ ಉಪಾಸನೆಯಿಂದ ಒಂದು ಕಡೆಯಲ್ಲಿ ಅಮೃತತ್ವವನ್ನು ಹೇಳಿದೆಯಲ್ಲ, ಅದು ಆಪೇಕ್ಷಿಕವಾದ (ಅಮೃತತ್ವವು) ; ಏಕೆಂದರೆ ಅಲ್ಲಿಯೇ ಮತ್ತೊಂದು ಪ್ರಕರಣವನ್ನು ಮಾಡಿ ಪರಮಾತ್ಮನನ್ನು ಹೇಳಿ “ಇದಕ್ಕಿಂತ ಬೇರೆಯಾದದ್ದು ನಾಶವಾಗತಕ್ಕದ್ದು’ (ಬೃ. ೩-೪-೨) ಎಂದು ವಾಯಾದಿಗಳು ನಾಶವಾಗತಕ್ಕದ್ದೆಂದು ಹೇಳಿದೆ.

(ಭಾಷ್ಯ) ೩೧೮. ಪ್ರಕರಣಾದಪಿ ಅತ್ರ ಪರಮಾತ್ಮನಿಶ್ಚಯಃ | “ಅನ್ಯತ್ರ ಧರ್ಮಾ ದನ್ಯತ್ರಾಧರ್ಮಾದನ್ಯತಾಸ್ಮಾತ್ ಕೃತಾಕೃತಾತ್ | ಅನ್ಯತ್ರ ಭೂತಾಚ್ಚ ಭವ್ಯಾಚ್ಚ ಯತ್ತತ್ ಪಶ್ಯಸಿ ತದ್ವದ” (ಕ. ೧-೨-೧೪) ಇತಿ ಪರಮಾತ್ಮನಃ ಸೃಷ್ಟತಾತ್ ||

(ಭಾಷ್ಯಾರ್ಥ) ಪ್ರಕರಣದಿಂದಲೂ ಇಲ್ಲಿ (ಇದು) ಪರಮಾತ್ಮನೇ ಎಂದು ನಿಶ್ಚಯವಾಗುತ್ತದೆ. ಏಕೆಂದರೆ, ‘ಧರ್ಮಕ್ಕಿಂತ ಬೇರೆಯಾಗಿ ಅಧರ್ಮಕ್ಕಿಂತ ಬೇರೆಯಾಗಿ ಈ ಕೃತಾಕೃತ ಕ್ಕಿಂತ ಬೇರೆಯಾಗಿ ಭೂತಕ್ಕಿಂತಲೂ ಭವ್ಯಕ್ಕಿಂತಲೂ ಬೇರೆಯಾಗಿ ಯಾವದನ್ನು ನೀನು ಕಂಡಿರುವೆಯೋ ಅದನ್ನು ಹೇಳು” (ಕ. ೧-೨-೧೪) ಎಂದು ಪರಮಾತ್ಮನನ್ನೇ (ಈ ಪ್ರಕರಣದಲ್ಲಿ ಕೇಳಲಾಗಿದೆ.

೧೧. ಜ್ಯೋತಿರಧಿಕರಣ (ಛಾಂ. ೮-೧೨-೩ ರಲ್ಲಿರುವ ಜ್ಯೋತಿಯು ಬ್ರಹ್ಮವೇ)

ಜೊತಿರ್ದಶ್ರನಾತ್ ||೪೦ll ೪೦. ಜ್ಯೋತಿಯು (ಬ್ರಹ್ಮವೇ) ; ಏಕೆಂದರೆ (ಹಾಗೆಂದು) ಕಂಡಿದೆ.

1.ಬ್ರ. ೩-೩-೨ರಲ್ಲಿ. 2. ಇಲ್ಲಿ ‘ಅಪಪುನರ್ಮತ್ಯುಮ್’ ಎಂದಿದ ; ಆದ್ದರಿಂದ ಪರಮಮೃತ್ಯುವನ್ನು ದಾಟುತ್ತಾನೆ ಎಂಬ ಅಭಿಪ್ರಾಯವಿಲ್ಲ ಎಂದು ಭಾವತೀವ್ಯಾಖ್ಯಾನ. ಭಾಷ್ಯದಲ್ಲಿ ಈ ಸೂಚನೆಯಿಲ್ಲ. 3. ಕಾರ್ಯಕಾರಣಗಳಿಗಿಂತ.

ಬ್ರಹ್ಮಸೂತ್ರಭಾಷ್ಯ

[ಆ. ೧, ಪು. ೩.

ವಿಷಯವೂ ಸಂಶಯವೂ

(ಭಾಷ್ಯ) ೩೧೯. “ಏಷ ಸಂಪ್ರಸಾದೋSಸ್ಮಾಚ್ಛರೀರಾದ್ ಸಮುತ್ಥಾಯ ಪರಂ ಜ್ಯೋತಿರುಪಸಂಪದ್ಯ ಸ್ಟೇನ ರೂಪೇಣಾಭಿನಿಷ್ಪದ್ಯತೇ” (ಛಾಂ. ೮-೧೨-೩) ಇತಿ ಶ್ರಯತೇ | ತತ್ರ ಸಂಶಯ್ಯತೇ - ಕಿಂ ಜ್ಯೋತಿಃಶಬ್ದಂ ಚಕ್ಷುರ್ವಿಷಯ

ತಮೋಪಹಂ ತೇಜಃ, ಕಿಂ ವಾ ಪರಂ ಬ್ರಹ್ಮ ಇತಿ ?

(ಭಾಷ್ಯಾರ್ಥ) “ಈ ಸಂಪ್ರಸಾದನು ಶರೀರದಿಂದ ಎದ್ದು ಹೆಚ್ಚಿನ ಜ್ಯೋತಿಯನ್ನು ಸೇರಿ ತನ್ನ ರೂಪದಿಂದ ಸಿದ್ಧನಾಗುತ್ತಾನೆ’ (ಛಾಂ. ೮-೧೨-೩) ಎಂದು ಶ್ರುತಿಯಲ್ಲಿದೆ. (ಅಲ್ಲಿ ಹೀಗೆ) ಸಂಶಯವುಂಟಾಗುತ್ತದೆ : ಇಲ್ಲಿ ಜ್ಯೋತಿ ಎಂಬ ಹೆಸರಿನ (ಪದಾರ್ಥವು) ಕಣ್ಣಿಗೆ ವಿಷಯವಾದ (ವಸ್ತುವಿನ) ಕತ್ತಲೆಯನ್ನು ಕಳೆದುಹಾಕುವ ಬೆಳಕೆ, ಅಥವಾ

ಪರಬ್ರಹ್ಮವೆ ?

ಪೂರ್ವಪಕ್ಷ : ತೇಜಸ್ಸೆಂದರೆ ಇಲ್ಲಿ ಬೆಳಕು

(ಭಾಷ್ಯ) ೩೨೦. ಕಿಂ ತಾವತ್ ಪ್ರಾಪ್ತಮ್ ? ಪ್ರಸಿದ್ಧಮೇವ ತೇಜೋ ಜ್ಯೋತಿಃಶಬ್ದ ಮಿತಿ ( ಕುತಃ ? ತತ್ರ ಜ್ಯೋತಿಃಶಬ್ದಸ್ಯ ರೂಢತ್ವಾತ್ | ‘ಜ್ಯೋತಿಶ್ಚರಣಾಭಿಧಾನಾತ್’ (೧-೧-೨೪) ಇತ್ಯತ್ರ ಹಿ ಪ್ರಕರಣಾತ್ ಜ್ಯೋತಿಃಶಬ್ದ; ಸ್ವಾರ್ಥಂ ಪರಿತ್ಯಜ್ಯ ಬ್ರಹ್ಮಣಿ ವರ್ತತೇ 1 ನ ಚ ಇಹ ತದ್ವತ್‌ ಕಿಂಚಿತ್ ಸ್ವಾರ್ಥಪರಿತ್ಯಾಗೇ ಕಾರಣಂ ದೃಶ್ಯತೇ | ತಥಾ ಚ ನಾಡೀಖಣ್ಣೆ - “ಅಥ ಯತ್ತತದಸ್ಮಾಚ್ಛರೀರಾ ದುತ್ಕಾಮತ್ಯಥೇತೃರೇವ ರಶ್ಮಿಭಿರೂರ್ಧ್ವಮಾಕ್ರಮತೇ” (ಛಾಂ. ೮-೬-೫) ಇತಿ ಮುಮುಕ್ಟೋಃ ಆದಿತ್ಯಪ್ರಾಪ್ತಿರಭಿಹಿತಾ | ತಸ್ಮಾತ್ ಪ್ರಸಿದ್ಧಮೇವ ತೇಜೋ ಜ್ಯೋತಿಃಶಬ್ದಮ್ ಇತಿ ||

(ಭಾಷ್ಯಾರ್ಥ) (ಇಲ್ಲಿ) ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದೆ ? ಪ್ರಸಿದ್ಧವಾಗಿರುವ ಬೆಳಕೇ ಜ್ಯೋತಿಃಶಬ್ದದಿಂದ ಹೇಳಿರುವ (ಪದಾರ್ಥವು). ಏಕೆ ? ಎಂದರೆ ಜ್ಯೋತಿ ಎಂಬ ಶಬ್ದವು ಅದರ (ವಿಷಯದ)ಲ್ಲಿ ರೂಢವಾಗಿ ರುತ್ತದೆಯಾದ್ದರಿಂದ, ‘ಜ್ಯೋತಿಶ್ಚರಣಾಭಿಧಾನಾತ್’ (೧-೧-೨೪) ಎಂಬಲ್ಲಿ

ಅಧಿ. ೧. ಸೂ. ೪೦] ಪೂರ್ವಪಕ್ಷ : ತೇಜಸ್ಸೆಂದರೆ ಇಲ್ಲಿ ಬೆಳಕು

೫೧೫

ಪ್ರಕರಣದಿಂದಲ್ಲವೆ, ಜ್ಯೋತಿ ಎಂಬ ಶಬ್ದವು ತನ್ನ ಅರ್ಥವನ್ನು ಬಿಟ್ಟು, ಬ್ರಹ್ಮ ದಲ್ಲಿ ವೃತ್ತಿಯುಳ್ಳದ್ದಾಗಿರುತ್ತದೆ (ಎಂದು ತೀರ್ಮಾನಿಸಲಾಯಿತು) ? ಆದರೆ ಇಲ್ಲಿ ಅದರಂತೆ (ಜ್ಯೋತಿಃಶಬ್ದವು) ತನ್ನ ಅರ್ಥವನ್ನು ಬಿಡಬೇಕೆಂಬುದಕ್ಕೆ ಯಾವ ಕಾರಣವೂ ಕಾಣುವದಿಲ್ಲ. ಆದ್ದರಿಂದಲೇ ನಾಡೀಖಂಡದಲ್ಲಿ ಇನ್ನು ಯಾವಾಗ ಈ ಶರೀರವನ್ನು ಬಿಟ್ಟು, ಮೇಲಕ್ಕೇರುವನೋ ಆಗ ಇದೇ ರಶ್ಮಿಗಳ ಮೂಲಕ ವಾಗಿ ಮೇಲಕ್ಕೆ ಏರುತ್ತಾನೆ ; (ಅವನು ಓಂ ! ಎಂದು ಮೇಲಕ್ಕೆ ಹೋಗುತ್ತಾನೆ, ಅವನು ಮನಸ್ಸು ಹಾಕುವಷ್ಟರಲ್ಲಿ ಆದಿತ್ಯನನ್ನು ಸೇರುತ್ತಾನೆ. (ಛಾಂ. ೮-೬-೫) ಎಂದು ಮುಮುಕ್ಷುವಿಗೆ ಆದಿತ್ಯಪ್ರಾಪ್ತಿಯನ್ನು ಹೇಳಿರುತ್ತದೆ. ಆದ್ದರಿಂದ ಪ್ರಸಿದ್ಧವಾಗಿರುವ ಬೆಳಕನ್ನೇ ಜ್ಯೋತಿಃಶಬ್ದ (ದಿಂದ ಇಲ್ಲಿ ಹೇಳಿರುತ್ತದೆ).

ಸಿದ್ಧಾಂತ : ಈ ಜ್ಯೋತಿಯು ಬ್ರಹ್ಮವೇ

(ಭಾಷ್ಯ). ೩೨೧. ಏವಂ ಪ್ರಾಪ್ತ ಬ್ಯೂಮಃ | ಪರಮೇವ ಬ್ರಹ್ಮ ಜ್ಯೋತಿಃಶಬ್ಬಮ್ | ಕಸ್ಮಾತ್ ? ದರ್ಶನಾತ್ | ತಸ್ಯ ಹಿ ಇಹ ಪ್ರಕರಣೇ ವಕ್ತವ್ಯನ ಅನುವೃತ್ತಿ ರ್ದಶ್ಯತೇ | “ಯ ಆತ್ಮಾಪಹತಪಾಪ್ಪಾ’ (ಛಾಂ. ೮-೭-೧) ಇತಿ ಅಪಹತ ಪಾಸ್ಮತ್ಯಾದಿಗುಣಕಸ್ಯ ಆತ್ಮನಃ ಪ್ರಕರಣಾದೌ ಅನ್ವೇಷ್ಟ್ರವ್ಯನ ವಿಜಿಜ್ಞಾಸಿತವ್ಯನ ಚ ಪ್ರತಿಜ್ಞಾನಾತ್ | ಏತಂ ತೈವ ತೇ ಭೂರ್ಯೋನುವ್ಯಾಖ್ಯಾಸ್ಯಾಮಿ’ (ಛಾಂ. ೮-೯-೩) ಇತಿ ಚ ಅನುಸಂಧಾನಾತ್ | ‘ಅಶರೀರಂ ವಾವ ಸನ್ನಂ ನ ಪ್ರಿಯಾಪ್ರಿಯೇ ಸ್ಪಶತಃ” (ಛಾಂ. ೮-೧೨-೧) ಇತಿ ಚ ಅಶರೀರತಾಯ ಜ್ಯೋತಿಃಸಂಪತ್ತೇರಸ್ಯ ಅಭಿಧಾನಾತ್ ಬ್ರಹ್ಮಭಾವಾಚ್ಚ ಅನ್ಯತ್ರ ಅಶರೀರತಾನುಪಪತ್ತೆ | ‘ಪರಂಜ್ಯೋತಿಃ” (ಛಾಂ. ೮-೧೨-೩), “ಸ ಉತ್ತಮಃ ಪುರುಷಃ’ (ಛಾಂ. ೮-೧೨-೩) ಇತಿ ಚ ವಿಶೇಷಣಾತ್ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಇದಕ್ಕೆ ಸಿದ್ಧಾಂತವನ್ನು ) ಹೇಳುತ್ತೇವೆ : ಪರಬ್ರಹ್ಮವೇ (ಇಲ್ಲಿ) ಜ್ಯೋತಿಃಶಬ್ದ (ದಿಂದ ಹೇಳಿರತಕ್ಕದ್ದು ).

  1. ಸುಷುಮ್ಮಾನಾಡಿಯ ಮೂಲಕವಾಗಿ ಉತೃಮಣಮಾಡುವವನು ಅಮೃತತ್ವವನ್ನು ಪಡೆಯುವನೆಂದು ತಿಳಿಸುವ ೮-೬ನೆಯ ಖಂಡದಲ್ಲಿ ಎಂದರ್ಥ.

  2. “ಸ ಉತ್ತಮಪುರುಷಃ’ ಎಂದೇ ಉಪನಿಷತ್ತಿನಲ್ಲಿ ಪಾಠವಿದ. ಲೇಖಕರ ಪ್ರಮಾದದಿಂದ ಸವಿಸರ್ಗಪಾಠ ಬಂದಿರಬಹುದು.

೫೬.

ಬ್ರಹ್ಮಸೂತ್ರಭಾಷ್ಯ

[ಅ೧. ಪಾ. ೩.

ಏಕ ? ಎಂದರೆ (ಹಾಗೆಂದು) ಕಂಡಿರುವದರಿಂದ, ಆ (ಪರಬ್ರಹ್ಮ) ಅಲ್ಲವೆ, ಈ ಪ್ರಕರಣದಲ್ಲಿ ಹೇಳತಕ್ಕದ್ದೆಂದು ಅನುವೃತ್ತಿಯು ಕಂಡುಬರುತ್ತದೆ ? “ಅಪಹತ ಪಾದ್ಮನಾದ ಆತ್ಮನಿದಾನಲ್ಲ, (ಅವನನ್ನು ಹುಡುಕಬೇಕು, ಅರಿತುಕೊಳ್ಳಬೇಕು)” (ಛಾಂ. ೮-೭-೧) ಎಂದು ಅಪಹಪಾಹ್ಮತ್ವವೇ ಮುಂತಾದ ಗುಣಗಳುಳ್ಳ ಆತ್ಮನನ್ನೇ (ಈ) ಪ್ರಕರಣದ ಆದಿಯಲ್ಲಿ ಹುಡುಕಬೇಕೆಂದೂ, ಅರಿತುಕೊಳ್ಳಬೇಕೆಂದೂ ಪ್ರತಿಜ್ಞೆ ಮಾಡಿರುವದರಿಂದಲೂ “ಈತನನ್ನೇ ನಿನಗೆ ಮತ್ತೆ ವಿವರಿಸಿ ಹೇಳುವನು’ (ಛಾಂ. ೮-೯-೩) ಎಂದು ಪರಾಮರ್ಶಿಸಿರುವದರಿಂದಲೂ “ಅಶರೀರನೇ ಆಗಿರು ವಾತನನ್ನು ಪ್ರಿಯಾಪ್ರಿಯಗಳು ಸೋಂಕುವದಿಲ್ಲ” (ಛಾಂ. ೮-೧೨-೧) ಎಂದು ಅಶರೀರಕ್ಕಾಗಿ ಜ್ಯೋತಿಃಸಂಪತ್ತಿಯನ್ನು ಹೇಳಿರುವದರಿಂದಲೂ ಬ್ರಹ್ಮಭಾವಕ್ಕಿಂತ ಬೇರೆಯಾಗಿ ಎಲ್ಲಿಯೂ ಅಶರೀರತ್ವವೆಂಬುದು ಹೊಂದುವಹಾಗಿಲ್ಲವಾದ್ದರಿಂದಲೂ “ಹೆಚ್ಚಿನ ಜ್ಯೋತಿಯು’ (ಛಾಂ. ೮-೧೨-೩) (ಎಂದೂ) “ಅವನು ಉತ್ತಮ ಪುರುಷನು’ (ಛಾಂ. ೮-೧೨-೩) ಎಂದೂ (ಜ್ಯೋತಿಗೆ) ವಿಶೇಷಣವನ್ನು ಕೊಟ್ಟಿರು ವದರಿಂದಲೂ (ಹೀಗೆಂದು ನಿಶ್ಚಯಿಸಬೇಕು).

ನಾಡೀಖಂಡದಲ್ಲಿ ಹೇಳಿರುವದು ಸಾಪೇಕ್ಷಮುಕ್ಕಿ

(ಭಾಷ್ಯ) ೩೨೨.ಯತ್ತು ಉಕ್ತಮ್ ಮುಮುಕ್ಕೋ: ಆದಿತ್ಯಪ್ರಾಪ್ತಿ: ಅಭಿಹಿತಾ ಇತಿ ನಾಸೌ ಅತ್ಯನ್ತಿಕೊ ಮೋಕ್ಷ | ಗತ್ಯುತ್ಯಾಸಂಬಸ್ಥಾತ್ । ನ ಹಿ ಆತ್ಯನಿಕೇ ಮೋಕ್ಷೆ ಗತ್ಯುತ್ಕಾ ಸ್ತಃ ಇತಿ ವಕ್ಷಾಮ: ||

(ಭಾಷ್ಯಾರ್ಥ) ಇನ್ನು ಮುಮುಕ್ಷುವಿಗೆ (ನಾಡೀಖಂಡದಲ್ಲಿ) ಆದಿತ್ಯಪ್ರಾಪ್ತಿಯನ್ನು ಹೇಳಿದೆ ಎಂದು (ಪೂರ್ವಪಕ್ಷದಲ್ಲಿ ) ಹೇಳಿತ್ತಷ್ಟೆ, ಇದು ಆತ್ಯಂತಿಕಮುಕ್ತಿಯಲ್ಲ ; ಏಕೆಂದರೆ

  1. ತಾತ್ಪರ್ಯದಿಂದ ಹೇಳತಕ್ಕದ್ದೆಂದು ಉಪಕ್ರಮದಿಂದ ಕೊನೆಯವರೆಗೂ ಕಂಡು ಬರುತ್ತದೆ.

  2. ಇವು ಆತ್ಮನ ಸ್ವರೂಪಕ್ಕೆ ಸೇರಿಲ್ಲವಾದ್ದರಿಂದ ನಿಜವಾಗಿ ಗುಣಗಳಲ್ಲ ಎಂಬುದನ್ನು ೪-೪-೬ರ ಭಾಷ್ಯದಲ್ಲಿ ಸ್ಪಷ್ಟಪಡಿಸಿರುತ್ತದೆ.

  3. ‘ಆತ್ಯಂತಿಕಮುಕ್ತಿ’ ಎಂದರೆ ಜ್ಞಾನವಾದ ಕೂಡಲೆ ಆಗುವ ಪುನರಾವೃತ್ತಿಯಿಲ್ಲದ ಮುಕ್ತಿ : ಇದನ್ನು ಸದ್ಯೋಮುಕ್ತಿ ಎಂದೂ ಕರೆಯುವರು. ಮುಖ್ಯಾರ್ಥದಲ್ಲಿ ಇದೇ ಮುಕ್ತಿ. ಪ್ರಕೃತದಲ್ಲಿ ಹೇಳಿರುವದು ಆಪೇಕ್ಷಿಕಮುಕ್ತಿ ಎಂದರೆ ಇತರ ಸದ್ಧತಿಗಳಿಗೆ ಹೋಲಿಸಿದರೆ ಹೆಚ್ಚು ಕಾಲವಿರುವದರಿಂದ ಮುಕ್ತಿ ಎನಿಸಿದ.

ಅಧಿ. ೧೨. ಸೂ. ೪೧] ನಾಡೀಖಂಡದಲ್ಲಿ ಹೇಳಿರುವದು ಸಾಪೇಕ್ಷಮುಕ್ತಿ ೫೧೭ (ಅಲ್ಲಿ ) ಗತಿ, ಉತ್ಕಾಂತಿ - ಇವುಗಳ ಸಂಬಂಧವಿರುತ್ತದೆ. ಆತ್ಯಂತಿಕಮೋಕ್ಷದಲ್ಲಿ ಗತ್ಯುತ್ಕಾಂತಿಗಳು ಇಲ್ಲವೆಂದು (ಮುಂದೆ) ತಿಳಿಸುವೆವು.’

೧೨. ಅರ್ಥಾಂತರತ್ವವ್ಯಪದೇಶಾಧಿಕರಣ (ಛಾಂ. ೮-೧೪-೧ ರಲ್ಲಿ ಹೇಳಿರುವ ಆಕಾಶವು ಬ್ರಹ್ಮವೇ)

ಆಕಾಶೋSರ್ಥಾನ್ತರತ್ಪಾದಿವ್ಯಪದೇಶಾತ್ ||೪೧ll ೪೧. (ಛಾಂದೋಗ್ಯ ೮-೧೪-೧ ರಲ್ಲಿ) ಆಕಾಶವೆಂದರೆ (ಬ್ರಹ್ಮವೇ) ; ಏಕೆಂದರೆ ಅರ್ಥಾಂತರತ್ವವೇ ಮುಂತಾದದ್ದನ್ನು ಹೇಳಿದೆ.

ವಿಷಯವೂ ಸಂಶಯವೂ

(ಭಾಷ್ಯ) ೩೨೩. “ಆಕಾಶೋ ವೈ ನಾಮ ನಾಮರೂಪಯೋರ್ನಿವ್ರಹಿತಾ ತೇ ಯದನ್ನರಾ ತದ್ ಬ್ರಹ್ಮ ತದಮೃತಂಸ ಆತ್ಮಾ” (ಛಾಂ.೮-೧೪-೧) ಇತಿ ಶೂಯತೇ ತತ್ ಕಿಮ್ ಆಕಾಶಶಬ್ದಂ ಪರಂ ಬ್ರಹ್ಮ, ಕಿಂ ವಾ ಪ್ರಸಿದ್ಧಮೇವ ಭೂತಾಕಾಶಮ್ ಇತಿ ವಿಚಾರೇ -

(ಭಾಷ್ಯಾರ್ಥ) “ಆಕಾಶವೆಂಬುದೇ ನಾಮರೂಪಗಳನ್ನು ನಿರ್ವಾಹಮಾಡತಕ್ಕದ್ದು. ಅವುಗಳು ಯಾವದರೊಳಗೆ ಇರುವವೋ ಅದು ಬ್ರಹ್ಮವು, ಅದೇ ಅಮೃತವು, ಅದೇ ಆತ್ಮನು. (ಛಾಂ. ೮-೧೪-೧) ಎಂದು ಶ್ರುತಿಯಿದೆ. ಆ ಆಕಾಶಶಬ್ದ (ವಾಚ್ಯವಾದದ್ದು ) ಪರಬ್ರಹ್ಮವೊ, ಅಥವಾ ಪ್ರಸಿದ್ಧವೇ ಆಗಿರುವ ಭೂತಾಕಾಶವೊ ? - ಎಂದು ವಿಚಾರವಾಗಲಾಗಿ -

ಪೂರ್ವಪಕ್ಷ : ಇಲ್ಲಿ ಹೇಳಿರುವದು ಭೂತಾಕಾಶವೇ

(ಭಾಷ್ಯ) ೩೨೪. ಭೂತಪರಿಗ್ರಹೋ ಯುಕ್ತ: | ಆಕಾಶಶಬ್ದಸ್ಯ ತಸ್ಮಿನ್ ರೂಢತ್ವಾತ್, ನಾಮರೂಪನಿರ್ವಹಣಸ್ಯ ಚ ಅವಕಾಶದಾನದ್ವಾರೇಣ ತಸ್ಮಿನ್ ಯೋಜಯಿತುಂ ಶಕ್ತ್ವಾತ್,ಸ್ಪಷ್ಟತಾದೇಶ್ಚ ಸ್ಪಷ್ಟಸ್ಯ ಬ್ರಹ್ಮಲಿಜ್ಞಸ್ಯ ಅಶ್ರವಣಾತ್ ಇತಿ ||

  1. ಮುಂದ೪-೨-೧೩, ೪-೩-೭, ೪-೩-೧೪ - ಇವುಗಳ ಭಾಷ್ಯವನ್ನು ನೋಡಿರಿ.

೫೧೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. (ಭಾಷ್ಯಾರ್ಥ) ಭೂತವನ್ನು ತೆಗೆದುಕೊಳ್ಳುವದೇ ಯುಕ್ತವು. ಏಕೆಂದರೆ ಆಕಾಶಶಬ್ದವು ಅದರಲ್ಲಿ ರೂಢವಾಗಿರುತ್ತದೆ ; ನಾಮರೂಪಗಳ ನಿರ್ವಾಹವೆಂಬಿದನ್ನು, ಅವಕಾಶವನ್ನು ಕೊಡು ವದರ ಮೂಲಕ ಅದಕ್ಕೆ ಹೊಂದಿಸಬಹುದಾಗಿರುತ್ತದೆ ; (ಜಗತ್ತನ್ನು) ಸೃಷ್ಟಿಸುವದೇ ಮುಂತಾದ ಸ್ಪಷ್ಟವಾದ ಬ್ರಹ್ಮಲಿಂಗವು ಶ್ರುತಿಯಲ್ಲಿಲ್ಲವೂ ಇಲ್ಲ.

ಸಿದ್ಧಾಂತ : ಅರ್ಥಾಂತರತ್ವವನ್ನು ಹೇಳುವದರಿಂದ ಇದು ಬ್ರಹ್ಮ

(ಭಾಷ್ಯ) ೩೨೫. ಏವಂ ಪ್ರಾಪ್ತ ಇದಮುಚ್ಯತೇ - ಪರಮೇವ ಬ್ರಹ್ಮ ಇಹ ಆಕಾಶಶಬ್ದಂ ಭವಿತುಮರ್ಹತಿ | ಕಸ್ಮಾತ್ ? ಅರ್ಥಾನ್ನರತ್ವಾದಿವ್ಯಪದೇಶಾತ್ | ‘ತೇ ಯದನ್ನರಾ ತದ್ವಹ್ಮ’” ಇತಿ ಹಿ ನಾಮರೂಪಾಭ್ಯಾಮ್ ಅರ್ಥಾನ್ನರಭೂತಮ್ ಆಕಾಶಂ ವ್ಯಪ ದಿಶತಿ | ನ ಚ ಬ್ರಹ್ಮಣೋನ್ಮತ್ ನಾಮರೂಪಾಭ್ಯಾಮ್ ಅರ್ಥಾನ್ನರಂ ಸಂಭವತಿ | ಸರ್ವಸ್ಯ ವಿಕಾರಜಾತಸ್ಯ ನಾಮರೂಪಾಭ್ಯಾಮೇವ ವ್ಯಾಕೃತತ್ವಾತ್ 1 ನಾಮರೂಪ ಯೋರಪಿ ನಿರ್ವಹಣಂ ನಿರುಶಂ ನ ಬ್ರಹ್ಮರ್ಣೋನ್ಯತ್ರ ಸಂಭವತಿ | ಅನೇನ ಜೀವೇನಾತ್ಮನಾನುಪ್ರವಿಶ್ಯ ನಾಮರೂಪೇ ವ್ಯಾಕರವಾಣಿ’ (ಛಾಂ. ೬-೩-೨) ಇತ್ಯಾದಿ ಬ್ರಹ್ಮಕರ್ತಕತ್ವಶ್ರವಣಾತ್ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ ಈ (ಸಿದ್ಧಾಂತವನ್ನು) ಹೇಳುತ್ತೇವ : ಇಲ್ಲಿ ಆಕಾಶ ಎಂಬ ಶಬ್ದ (ದಿಂದ ಹೇಳಿರುವದು) ಪರಬ್ರಹ್ಮವೇ ಆಗಿರಬೇಕು. ಏಕೆ ? ಎಂದರೆ ಅರ್ಥಾಂತರತ್ವವೇ ಮುಂತಾದದ್ದನ್ನು ಹೇಳಿರುವದರಿಂದ. “ಅವುಗಳಿಗಿಂತ ಬೇರೆಯಾವದಿದೆಯೋ ಅದುಬ್ರಹ್ಮವು’ ಎಂದು ನಾಮರೂಪಗಳಿಗಿಂತ ಆಕಾಶವು ಬೇರೆ ಎಂದು ಹೇಳಿದೆಯಲ್ಲವೆ ? ಬ್ರಹ್ಮವನ್ನು ಬಿಟ್ಟರೆ ಮತ್ತೆ ಯಾವದೂ ನಾಮರೂಪಗಳಿಗಿಂತ ಬೇರೆಯಾದದ್ದು ಇರುವಹಾಗಿಲ್ಲ - ; ಏಕೆಂದರೆ ಕಾರ್ಯಸಮೂಹವೆಲ್ಲವೂ ನಾಮರೂಪಗಳಿಂದಲೇ ವ್ಯಾಕೃತವಾಗಿರುತ್ತದೆ, ನಾಮ ರೂಪಗಳನ್ನು ತಡೆಯಿಲ್ಲದ ನಿರ್ವಾಹಮಾಡತಕ್ಕದ್ದು ಬ್ರಹ್ಮಕ್ಕಿಂತ ಬೇರೆಯಾಗಿ ಯಾವದರಲ್ಲಿಯೂ ಇರುವದಿಲ್ಲ. “ಈ ಜೀವವೆಂಬ ರೂಪದಿಂದ ಅನುಪ್ರವೇಶಮಾಡಿ ನಾಮರೂಪಗಳನ್ನು ವ್ಯಾಕರಣಮಾಡುವೆನು’ (ಛಾಂ. ೬-೩-೨) ಎಂದು ಮುಂತಾ ಗಿರುವ (ವಾಕ್ಯದಿಂದ ನಾಮರೂಪವ್ಯಾಕರಣವು) ಬ್ರಹ್ಮಕತ೯ಕವೆಂದೇ ಶ್ರುತಿಯಲ್ಲಿ ರುವದರಿಂದಲೂ ಹೀಗೆ.

ಅಧಿ. ೧೨. ಸೂ.೪೧] ಇದು ಬ್ರಹ್ಮವೆಂಬುದಕ್ಕೆ ಮತ್ತೆ ಕೆಲವು ಲಿಂಗಗಳು ೫೧೯ ಇದು ಬ್ರಹ್ಮವೆಂಬುದಕ್ಕೆ ಮತ್ತೆ ಕೆಲವು ಲಿಂಗಗಳು

(ಭಾಷ್ಯ) ೩೨೬. ನನು ಜೀವಸ್ಯಾಪಿ ಪ್ರತ್ಯಕ್ಷ ನಾಮರೂಪವಿಷಯಂ ನಿರ್ವೊ ತ್ವಮಸ್ತಿ 1 ಬಾಢಮ್ ಅಸ್ತಿ ! ಅಭೇದಸ್ತು ಇಹ ವಿವಕ್ಷಿತಃ | ನಾಮರೂಪ ನಿರ್ವಹಣಾಭಿಧಾನಾದೇವ ಚ ಸ್ಪಷ್ಟತ್ಯಾದಿ ಬ್ರಹ್ಮಲಿಮ್ ಅಭಿಹಿತಂ ಭವತಿ | “ತದೃಹ್ಮ ತದಮೃತಂ ಸ ಆತ್ಮಾ’ (ಛಾಂ. ೮-೧೪-೧) ಇತಿ ಚ ಬ್ರಹ್ಮವಾದಸ್ಯ ಲಿಜ್ಞಾನಿ | ‘ಆಕಾಶಸ್ತಜ್ಞಾತ್’ (೧-೧-೨೨) ಇತ್ಯಸೆವ ಅಯಂ ಪ್ರಪಞ್ಞಃ ||

(ಭಾಷ್ಯಾರ್ಥ) (ಆಕ್ಷೇಪ) :- ಜೀವನಿಗೂ ನಾಮರೂಪಗಳನ್ನು ನಿರ್ವಾಹಮಾಡುವದೆಂಬುದು ಇದೆ ಎಂಬುದು ಪ್ರತ್ಯಕ್ಷವಾಗಿದೆಯಲ್ಲ !

(ಪರಿಹಾರ) :- ಇದೆ, ನಿಜ. ಆದರೆ (ಜೀವಬ್ರಹ್ಮರಿಗೆ) ಅಭೇದವನ್ನೇ ಇಲ್ಲಿ ತಿಳಿಸಬೇಕೆಂದಿರುತ್ತದೆ.’

ನಾಮರೂಪಗಳ ನಿರ್ವಹಣವನ್ನು ಹೇಳಿರುವದರಿಂದಲೇ ಸ್ಪಷ್ಟತ್ವವೇ ಮುಂತಾದ ಬ್ರಹ್ಮಲಿಂಗವನ್ನು ಹೇಳಿದಂತೆ ಆಯಿತು. ಅದೇ ಬ್ರಹ್ಮವು, ಅದೇ ಅಮೃತವು, ಅದೇ ಆತ್ಮನು’ ಎಂದು (ಇಲ್ಲಿ ಹೇಳಿರುವವೂ) ಬ್ರಹ್ಮವಾದಕ್ಕೆ ಲಿಂಗಗಳಾಗಿರುತ್ತವೆ. ‘ಆಕಾಶಸ್ತಜ್ಞಾತ್’ (೧-೧-೨೨) ಎಂಬ (ಅಧಿಕರಣ)ದ್ದೇ ಇದು ವಿವರ (ವಾಗಿರುತ್ತದೆ).

೧೩. ಸುಷುಪ್ಪುತ್ಕಾಂತ್ಯಧಿಕರಣ ೪೨-೪೩ (ಬೃಹದಾರಣ್ಯಕದಲ್ಲಿ ಹೇಳಿರುವ ವಿಜ್ಞಾನಮಯಪುರುಷನು ಬ್ರಹ್ಮವು)

ಸುಷುಪ್ಪುತ್ಯಾನ್ಯೂರ್ಛದೇನ |೪೨||

  1. ಆದ್ದರಿಂದ ಜೀವರೂಪದಲ್ಲಿ ಬ್ರಹ್ಮವೇ ನಾಮರೂಪಗಳನ್ನು ವ್ಯಾಕರಣಮಾಡುತ್ತದೆ. 2. ಸ್ಪಷ್ಟತ್ಯಾದಿಗಳನ್ನು ಹೇಳಿಲ್ಲ ಎಂಬ ಪೂರ್ವಪಕ್ಷಕ್ಕೆ ಸಮಾಧಾನವಿದು. 3. ಆಕಾಶಕ್ಕೆ ಇವು ಲಿಂಗಗಳಾಗಲಾರವು ಎಂದಭಿಪ್ರಾಯ.

  2. ಆ ಸೂತ್ರದ ಭಾಷ್ಯದಲ್ಲಿ ಈ ವಾಕ್ಯವು ಬ್ರಹ್ಮಪರವೆಂದು ಸಿದ್ಧವಾಗಿಟ್ಟುಕೊಂಡಿತ್ತು. ಈಗ ಅದನ್ನು ಸ್ಪಷ್ಟಪಡಿಸಿದೆ. ಬ್ರಹ್ಮ, ಅಮೃತ, ಆತ್ಮ - ಎಂಬ ಮಾತುಗಳಿಂದ ಇದು ಬ್ರಹ್ಮವೆಂದು ಸ್ಪಷ್ಟಪಡಿಸಿದೆ.

೫೨೦

ಬ್ರಹ್ಮಸೂತ್ರಭಾಷ್ಯ

[ಅ. ೧, ಪು. ೩.

೪೨. ಸುಷುಪ್ಪುತ್ಕಾಂತಿಗಳಲ್ಲಿ (ಜೀವನಿಗಿಂತ) ಬೇರೆಯಾಗಿ (ಉಪ ದೇಶಿಸಿರುವದರಿಂದ ಇದು ಬ್ರಹ್ಮವೇ) .

ವಿಷಯವೂ ಸಂಶಯವೂ

(ಭಾಷ್ಯ) ೩೨೭. ‘ವ್ಯಪದೇಶಾತ್‌’ ಇತ್ಯನುವರ್ತತೇ | ಬೃಹದಾರಣ್ಯಕೇ ಷಷ್ಟೇ ಪ್ರಪಾಠಕೇ “ಕತಮ ಆತ್ಮೀತಿ ಯೋsಯಂ ವಿಜ್ಞಾನಮಯಃ ಪ್ರಾಣೇಷು ಹೃದ್ಯನ್ತರ್ಜ್ಯೋತಿಃ ಪುರುಷಃ’ (ಬೃ. ೪-೩-೭) ಇತ್ಯುಪಕ್ರಮ್ಮ ಭೂಯಾನ್ ಆತ್ಮವಿಷಯಃ ಪ್ರಪಞ್ಞ ಕೃತಃ | - ತತ್ ಕಿಂ ಸಂಸಾರಿಸ್ವರೂಪಮಾತ್ರಾನ್ಸಾಖ್ಯಾನಪರಂ ವಾಕ್ಯಮ್, ಉತ ಅಸಂಸಾರಿಸ್ಟರೂಪಪ್ರತಿಪಾದನಪರಮ್ ? ಇತಿ ಸಂಶಯಃ ||

(ಭಾಷ್ಯಾರ್ಥ) ‘ವ್ಯಪದೇಶಾತ್’ ಎಂಬ (ಮಾತು ಹಿಂದಿನ ಸೂತ್ರದಿಂದ ಇಲ್ಲಿಯೂ) ಅನುಸರಿಸಿಕೊಂಡು ಬಂದಿರುತ್ತದೆ. ಬೃಹದಾರಣ್ಯಕದ ಆರನೆಯ’ ಪ್ರಪಾಠಕದಲ್ಲಿ “ಆತ್ಮನೆಂದರೆ ಯಾವನು ? ಪ್ರಾಣಗಳಲ್ಲಿರುವ ವಿಜ್ಞಾನಮಯನಾದ ಹೃದಯ ದೊಳಗಿರುವ ಜ್ಯೋತಿಯಾದ ಈ ಪುರುಷನಿದಾನಲ್ಲ, (ಅವನೇ)” (ಬೃ. ೪-೩-೭) ಎಂದು ಉಪಕ್ರಮಿಸಿ ಆತ್ಮನನ್ನು ಕುರಿತು ವಿವರಣೆಯನ್ನು ಮಾಡಿರುತ್ತದೆ. ಅದು ಆತ್ಮನ ಸಂಸಾರಿಸ್ವರೂಪವನ್ನು ಮಾತ್ರ ಅನುವಾದಮಾಡಿದ ವಾಕ್ಯವೊ, ಅಥವಾ ಅಸಂಸಾರಿಸ್ವರೂಪವನ್ನು ಪ್ರತಿಪಾದನೆಮಾಡುವದರಲ್ಲಿ ತಾತ್ಪರ್ಯವುಳ್ಳದ್ದೂ ? - ಎಂದು ಸಂಶಯವು.

ಪೂರ್ವಪಕ್ಷ : ಇದು ಸಂಸಾರಿಸ್ಟರೂಪವರ್ಣನೆ

(ಭಾಷ್ಯ) ೩೨೮. ಕಿಂ ತಾವತ್ ಪ್ರಾಪ್ತಮ್ ? ಸಂಸಾರಿಸ್ವರೂಪಮಾತ್ರವಿಷಯಮೇವ ಇತಿ | ಕುತಃ ? ಉಪಕ್ರಮೋಪಸಂಹಾರಾಭ್ಯಾಮ್ | ಉಪಕ್ರಮೇ “ಯೋsಯಂ ವಿಜ್ಞಾನಮಯಃ ಪ್ರಾಣೇಷು” ಇತಿ ಶಾರೀರಲಿಜ್ಞಾತ್, ಉಪಸಂಹಾರೇ ಚ ‘‘ಸ ವಾ ಏಷ ಮಹಾನಜ ಆತ್ಮಾ ಯೋsಯಂ ವಿಜ್ಞಾನಮಯಃ ಪ್ರಾಣೇಷು’ (ಬೃ. ೪-೪-೨೨)

  1. ಆರಣ್ಯಕಶ್ರಮದಿಂದ ಆರನೆಯ ಅಧ್ಯಾಯ ; ಉಪನಿಷತೃಮದಿಂದ ನಾಲ್ಕನೆಯ ಅಧ್ಯಾಯ.

೫೨೧

ಅಧಿ. ೧೩. ಸೂ. ೪೨] ಪೂರ್ವಪಕ್ಷ : ಇದು ಸಂಸಾರಿಸ್ವರೂಪವರ್ಣನೆ ಇತಿ ತದಪರಿತ್ಯಾಗಾತ್, ಮಧೈಪಿ ಬುದ್ಧಾನ್ಯಾದ್ಯವಸ್ಕೋಪನ್ಯಾಸೇನ ತಸ್ಮವ ಪ್ರಪಞ್ಚನಾತ್ ಇತಿ ||

(ಭಾಷ್ಯಾರ್ಥ) ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದೆ ? (ಇದು) ಸಂಸಾರಿ ಸ್ವರೂಪಮಾತ್ರದ ವಿಷಯದ (ವಾಕ್ಯವು) ಎಂದು (ತೋರುತ್ತದೆ). ಏಕೆ ? ಎಂದರೆ ಉಪಕ್ರಮೋಪಸಂಹಾರಗಳಿಂದ, ಉಪಕ್ರಮದಲ್ಲಿ “ಪ್ರಾಣಗಳೊಳಗೆ ಈ ವಿಜ್ಞಾನ ಮಯನಿರುವನಲ್ಲ’’ ಎಂದು ಶಾರೀರನ ಲಿಂಗವಿರುವದರಿಂದಲೂ ಉಪಸಂಹಾರದಲ್ಲಿ “ಪ್ರಾಣಗಳೊಳಗೆ ಈ ವಿಜ್ಞಾನಮಯನಿರುವನಲ್ಲ, ಅವನೇ ಈ ದೊಡ್ಡ, ಅಜನಾದ ಆತ್ಮನು’ (ಬೃ. ೪-೪-೨೨) ಎಂದು ಆ (ಲಿಂಗ)ವನ್ನು ಬಿಡದೆ ಇರುವದರಿಂದಲೂ ನಡುವೆಯೂ ಎಚ್ಚರವೇ ಮುಂತಾದ ಅವಸ್ಥೆಗಳನ್ನು ಹೇಳಿ ಅದನ್ನೇ ವಿಸ್ತರಿಸಿರು ವದರಿಂದಲೂ (ಹೀಗೆಂದು ನಿಶ್ಚಯವಾಗುತ್ತದೆ).

ಸಿದ್ಧಾಂತ : ಇದು ಪರಮೇಶ್ವರನನ್ನು ತಿಳಿಸುವ ವಾಕ್ಯ

(ಭಾಷ್ಯ) ೩೨೯. ಏವಂ ಪ್ರಾಪ್ತ ಬ್ಯೂಮಃ | ಪರಮೇಶ್ವರೋಪದೇಶಪರಮೇವೇದಂ ವಾಕ್ಯಮ್ ನ ಶಾರೀರಮಾತ್ರಾನ್ಸಾಖ್ಯಾನಪರಮ್ | ಕಸ್ಮಾತ್ ? ಸುಷುಪ್ತ ಉತ್ಕಾ ಚ ಶಾರೀರಾದ್ ಭೇದೇನ ಪರಮೇಶ್ವರಸ್ಯ ವ್ಯಪದೇಶಾತ್ | ಸುಷುಪ್ತ ತಾವತ್ “ಅಯಂ ಪುರುಷಃ ಪ್ರಾಜ್ಞನಾತ್ಮನಾ ಸಂಪರಿಷ್ಟಕ್ಕೂ ನ ಬಾಹ್ಯಂ ಕಿಂಚನ ವೇದ ನಾಸ್ತರಮ್’’ (ಬೃ. ೪-೩-೨೧) ಇತಿ ಶಾರೀರಾದ್ ಭೇದೇನ ಪರಮೇಶ್ವರಂ ವ್ಯಪ ದಿಶತಿ | ತತ್ರ ಪುರುಷಃ ಶಾರೀರಃ ಸ್ಯಾತ್ | ತಸ್ಯ ವೇದಿತೃತ್ವಾತ್ | ಬಾಹ್ಯಾಭ್ಯನ್ನರ ವೇದನಪ್ರಸಜ್ಜಿ ಸತಿ ತತ್ತ್ವನಿಷೇಧಸಂಭವಾತ್ | ಪ್ರಾಜ್ಞಃ ಪರಮೇಶ್ವರಃ | ಸರ್ವಜ್ಞ ಲಕ್ಷಣಯಾ ಪ್ರಜ್ಞಯಾ ನಿತ್ಯಮ್ ಅವಿಯೋಗಾತ್ 1 ತಥಾ ಉತ್ಯಾನಾವಪಿ ಅಯಂ ಶಾರೀರ ಆತ್ಮಾ ಪ್ರಾಜ್ಞನಾತ್ಮನಾವಾರೂಢ ಉತ್ಸರ್ಜನ್ ಯಾತಿ’ (ಬೃ. ೪-೩-೩೫) ಇತಿ ಜೀವಾವ್‌ ಭೇದೇನ ಪರಮೇಶ್ವರಂ ವ್ಯಪದಿಶತಿ | ತತ್ರಾಪಿ ಶಾರೀರೋ ಜೀವಃ ಸ್ಮಾತ್ ( ಶರೀರಸ್ವಾಮಿತ್ವಾತ್ | ಪ್ರಾಜ್ಞಸ್ತು ಸ ಏವ ಪರಮೇಶ್ವರಃ | ತಸ್ಮಾತ್ ಸುಷುಪ್ಪತ್ಮಾನ್ನೊ ಭೇದೇನ ವ್ಯಪದೇಶಾತ್ ಪರಮೇಶ್ವರ ಏವ ಅತ್ರ ವಿವಕ್ಷಿತಃ ಇತಿ ಗಮ್ಯತೇ ||

(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು) ಹೇಳುತ್ತೇವೆ.೫೨೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಈ ವಾಕ್ಯವು ಪರಮೇಶ್ವರನನ್ನು ತಿಳಿಸುವದರಲ್ಲಿಯೇ ತಾತ್ಪರ್ಯವುಳ್ಳದ್ದೇ ಹೊರತು ಬರಿಯ ಶಾರೀರನನ್ನು ಅನುವಾದಮಾಡುವದರಲ್ಲಿ ತಾತ್ಪರ್ಯವುಳ್ಳದ್ದಲ್ಲ. ಏಕೆ ? - ಎಂದರೆ ಸುಷುಪ್ತಿಯಲ್ಲಿಯೂ ಉತ್ಕಾಂತಿಯಲ್ಲಿಯೂ ಶಾರೀರನಿಗಿಂತ ಬೇರೆಯಾಗಿ ಪರಮೇಶ್ವರನನ್ನು ಹೇಳಿರುವದರಿಂದ. ಮೊದಲನೆಯದಾಗಿ ಸುಷುಪ್ತಿಯಲ್ಲಿ ಈ ಪುರುಷನು ಪ್ರಾಜ್ಞನೆಂಬ ಆತ್ಮನಿಂದ ಆಲಿಂಗಿತನಾಗಿ ಹೊರಗಿನದೇನನ್ನೂ ಅರಿಯದೆ ಇರುತ್ತಾನೆ, ಒಳಗಿನದನ್ನೂ (ಅರಿಯದೆ) (ಇರುತ್ತಾನೆ) (ಬೃ. ೪-೩-೨೧)” ಎಂದು ಶಾರೀರನಿಗಿಂತ ಬೇರೆಯಾಗಿ ಪರಮೇಶ್ವರನನ್ನು ಹೇಳಿರುತ್ತದೆ. ಅಲ್ಲಿ ‘ಪುರುಷ’ನೆಂದರೆ ಶಾರೀರನಾಗಿರಬೇಕು, ಏಕೆಂದರೆ (ಅವನು) ಅರಿಯುವವನಾಗಿರುವದರಿಂದ ಹೊರಗೂ ಒಳಗೂ ಅರಿಯುವ ಪ್ರಸಂಗವು (ಅವನಿಗೆ) ಇರುವದರಿಂದಲೇ ಅದನ್ನು ಅಲ್ಲಗಳೆದಿರುವದು ಹೊಂದುತ್ತದೆ. ಪ್ರಾಜ್ಞನೆಂದರೆ ಪರಮೇಶ್ವರನು, ಏಕೆಂದರೆ ಸರ್ವಜ್ಞ ಸ್ವರೂಪವಾದ ಪ್ರಜ್ಞೆಯನ್ನು (ಬಿಟ್ಟು ಅವನು) ಯಾವಾಗಲೂ ಅಗಲಿರುವದಿಲ್ಲ. ಇದರಂತೆ ಉತ್ಮಾನ್ತಿಯಲ್ಲಿಯೂ ‘ಈ ಶಾರೀರ ಆತ್ಮನು ಪ್ರಾಜ್ಞಾತ್ಮ ನಿಂದ ಅನ್ವಾರೂಢನಾಗಿ (ಕೂಗುಗಳನ್ನು) ಹಾಕಿಕೊಳ್ಳುತ್ತಾ ಹೋಗುತ್ತಾನೆ’ (ಬೃ. ೪ ೩-೩೫) ಎಂದುಜೀವನಿಗಿಂತ ಬೇರೆಯಾಗಿ ಪರಮೇಶ್ವರನನ್ನು ಹೇಳಿರುತ್ತದೆ. ಅಲ್ಲಿಯೂ ಶಾರೀರನೆಂದರೆ ಜೀವನಾಗಿರಬೇಕು ; ಏಕೆಂದರೆ (ಅವನು) ಶರೀರಕ್ಕೆ ಒಡೆಯನಾಗಿರುತ್ತಾನೆ. ಪ್ರಾಜ್ಞನಾದರೋ ಅದೇ ಪರಮೇಶ್ವರನು. ಆದ್ದರಿಂದ (ಹೀಗೆ) ಸುಷುಪ್ಪುತ್ಕಾಂತಿಗಳಲ್ಲಿ ಬೇರೆಯಾಗಿ ಹೇಳಿರುವದರಿಂದ ಪರಮೇಶ್ವರನೇ ವಿವಕ್ಷಿತ ನಾಗಿರುತ್ತಾನೆ ಎಂದು ಗೊತ್ತಾಗುತ್ತದೆ.

ಶಾರೀರಾತ್ಮಲಿಂಗಗಳಿಗೆ ಗತಿ

(ಭಾಷ್ಯ) ೩೩೦. ಯದುಕ್ತಮ್ ಆದ್ಯಮದ್ವೇಷು ಶಾರೀರಲಿಜ್ಞಾ ತತ್ಪರತ್ವಮ್ ಅಸ್ಕ ವಾಕ್ಯಸ್ಯ ಇತಿ | ಅತ್ರ ಬ್ಯೂಮಃ | ಉಪಕ್ರಮೇ ತಾವತ್ ‘‘ಯೋsಯಂ ವಿಜ್ಞಾನಮಯಃ

  1. ಸಂಸಾರಿಸ್ವರೂಪಕ್ಕಿಂತ ಬೇರೆಯಾದ ಅಸಂಸಾರಿಸ್ವರೂಪವನ್ನು ಹೇಳಿರುವದರಿಂದ ಎಂದರ್ಥ ; ಜೀವನಿಗಿಂತ ಪರಮೇಶ್ವರನು ಬೇರೆ ಎಂದು ಹೇಳಿರುವರಿಂದ ಎಂದೇನೂ ಅಭಿಪ್ರಾಯವಿಲ್ಲ,

  2. ಪ್ರಜ್ಞೆಯು ಎಂದರೆ ಚೈತನ್ಯವು ಅವನ ಸ್ವರೂಪವೇ ಆಗಿರುತ್ತದೆಯಾದ್ದರಿಂದ ಅವನು ಪ್ರಾಜ್ಞನು ಎಂದರ್ಥ. ಸುಷುಪ್ತಿಯಲ್ಲಿರುವ ಆತ್ಮಸ್ವರೂಪವು ಪ್ರಾಯಿಕವಾಗಿ ಅಜ್ಜನಾಗಿರು ವದರಿಂದ ಪ್ರಾಜ್ಯ ಎಂಬ ಹೆಸರು ಅದಕ್ಕೆ ಬಂದಿದೆ ಎಂಬ ಈಚಿನ ಕಲವರು ವೇದಾಂತಿಗಳ ಅಭಿಪ್ರಾಯವು ಭಾಷ್ಯಸಮ್ಮತವಲ್ಲ. ಮಾಂ. ಭಾ. ೫ನ್ನು ನೋಡಿ.

ಅಧಿ. ೧೩. ಸೂ. ೪೨] ಶಾರೀರಾತ್ಮಲಿಂಗಗಳಿಗೆ ಗತಿ ಪ್ರಾಣೇಷು’ ಇತಿ ನ ಸಂಸಾರಿಸ್ವರೂಪಂ ವಿವಕ್ಷಿತಮ್, ಕಿಂ ತರ್ಹಿ ಅನೂದ್ಯ ಸಂಸಾರಿ ಸ್ವರೂಪಂ ಪರೇಣ ಬ್ರಹ್ಮಣಾ ಅಸ್ಯ ಏಕತಾಂ ವಿವಕ್ಷತಿ | ಯತೋ “ಧ್ಯಾಯತೀವ ಲೇಲಾಯತೀವ’ (ಬೃ. ೪-೩-೭) ಇವಮಾದುತ್ತರಗ್ರಪ್ರವೃತ್ತಿ: ಸಂಸಾರಿ ಧರ್ಮನಿರಾಕರಣಪರಾ ಲಕ್ಷತೇ | ತಥಾ ಉಪಸಂಹಾರೇsಪಿ ಯಥೋಪಕ್ರಮಮೇವ ಉಪಸಂಹರತಿ - “ಸ ವಾ ಏಷ ಮಹಾನಜ ಆತ್ಮಾ ಯೋSಯಂ ವಿಜ್ಞಾನಮಯಃ ಪ್ರಾಣೇಷು” (ಬೃ. ೪-೪-೨೨) ಇತಿ | ಯೋSಯಂ ವಿಜ್ಞಾನಮಯಃ ಪ್ರಾಣೇಷು ಸಂಸಾರೀ ಲಕ್ಷ್ಮತೇ ಸ ವಾ ಏಷ ಮಹಾನಜ ಆತ್ಮಾ ಪರಮೇಶ್ವರಃ ಏವ ಅಸ್ಮಾಭಿಃ ಪ್ರತಿಪಾದಿತಃ ಇತ್ಯರ್ಥಃ 11

(ಭಾಷ್ಯಾರ್ಥ) | ಮೊದಲುಕೊನೆನಡುವೆಗಳಲ್ಲಿ ಶಾರೀರನ ಲಿಂಗವಿರುವದರಿಂದ ಈ ವಾಕ್ಯವು ಅವನ(ನ್ನು ಹೇಳುವದರಲ್ಲಿ) ತಾತ್ಪರ್ಯವುಳ್ಳದ್ದು ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟೆ, ಅದಕ್ಕೆ ಹೇಳುತ್ತೇವೆ : ಮೊದಲನೆಯದಾಗಿ ಉಪಕ್ರಮದಲ್ಲಿ ಪ್ರಾಣ ಗಳೊಳಗೆ ಈ ವಿಜ್ಞಾನಮಯನಿರುವನಲ್ಲ’’ ಎಂಬ (ವಾಕ್ಯದಲ್ಲಿ) ಸಂಸಾರಿಸ್ವರೂಪವು ವಿವಕ್ಷಿತವಾಗಿಲ್ಲ ; ಮತ್ತೇನೆಂದರೆ ಸಂಸಾರಿಸ್ವರೂಪವನ್ನು ಅನುವಾದಮಾಡಿಕೊಂಡು ಇವನಿಗೂ ಪರಬ್ರಹ್ಮಕ್ಕೂ ಐಕ್ಯವನ್ನು ಹೇಳಬೇಕೆಂದು ಹೊರಟಿರುತ್ತದೆ (ಎಂದು ಅರಿಯಬೇಕು). ಏಕೆಂದರೆ “ಚಿಂತಿಸುವಂತೆಯೂ ಸಂಚರಿಸುವಂತೆಯೂ ಇರು ತ್ತಾನೆ’’ (ಬೃ. ೪-೩-೭) ಇದೇ ಮುಂತಾದ ಮುಂದಿನ ಗ್ರಂಥವು ಸಂಸಾರಿಧರ್ಮವನ್ನು ನಿರಾಕರಿಸುವ ತಾತ್ಪರ್ಯದಿಂದ ಹೊರಟಿರುವಂತೆ ಕಂಡುಬರುತ್ತದೆ, ಹೀಗೆಯೇ ಉಪಸಂಹಾರದಲ್ಲಿಯೂ ‘ಪ್ರಾಣಗಳೊಳಗೆ ಈ ವಿಜ್ಞಾನಮಯನಿರುವನಲ್ಲ, ಅವನೇ ಈ ದೂಡ್ಡ, ಅಜನಾದ, ಆತ್ಮನು’’ (ಬೃ. ೪-೪-೨೨) ಎಂದು ಉಪಕ್ರಮದಂತೆಯೇ ಮುಗಿಸಿರುತ್ತದೆ. ಪ್ರಾಣಗಳೊಡನೆ ಈ ವಿಜ್ಞಾನಮಯನು ಸಂಸಾರಿಯಾಗಿ ಕಾಣುತ್ತಿರು ವನಲ್ಲ, ಅವನೇ ಈ ನಾವು ತಿಳಿಸಿರುವ ದೊಡ್ಡ, ಅಜನಾದ, ಆತ್ಮನು, (ಅವನು) ಪರಮೇಶ್ವರನೇ ಎಂದರ್ಥ.

ಅವಸ್ಥೆಗಳನ್ನು ಹೇಳಿರುವದು ಅಸಂಸಾರಿತ್ವವನ್ನು ತಿಳಿಸುವದಕ್ಕೆ

(ಭಾಷ್ಯ) ೩೩೧. ಯಸ್ತು ಮಧ್ಯೆ ಬುದ್ಧಾನ್ಯಾದ್ಯವಸ್ಕೋಪನ್ಯಾಸಾತ್ ಸಂಸಾರಿಸ್ವರೂಪ

  1. ಅಂತೆ ಎಂದಿರುವದರಿಂದ ಪರಮಾರ್ಥವಾಗಿ ಆತ್ಮನಿಗೆ ಜ್ಞಾನೇಂದ್ರಿಯಕರ್ಮಂದ್ರಿಯ ವ್ಯಾಪಾರರೂಪವಾದ ಸಂಸಾರವು ಇಲ್ಲ ಎಂದಂತೆ ಆಯಿತು.

೫೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ವಿವಕ್ಷಾ ಮನ್ಯತೇ ಸ ಪ್ರಾಚೀಮಪಿ ದಿಶಂ ಪ್ರಸ್ಥಾಪಿತಃ ಪ್ರತೀಚೀಮಪಿ ದಿಶಂ ಪ್ರತಿ ಷೇತ | ಯತೋ ನ ಬುದ್ಧಾನ್ಯಾದ್ಯವಸ್ಕೋಪನ್ಯಾಸೇನ ಅವಸ್ಥಾವತ್ಯಂ ಸಂಸಾರಿತ್ವಂ ವಾ ವಿವಕ್ಷತಿ | ಕಿಂ ತರ್ಹಿ ಅವಸ್ಟಾರಹಿತತ್ವಮ್ ಅಸಂಸಾರಿತ್ವಂ ಚ | ಕಥಮೇತತ್ ಅವಗಮ್ಯತೇ ? ಯದ್ “ಅತ ಊರ್ಧ್ವಂ ವಿಮೋಕ್ಷಾಯ್ವ ಬೃಹಿ’ (ಬೃ.೪-೩-೧೪, ೧೫, ೧೬) ಇತಿ ಪದೇ ಪದೇ ಪೃಚ್ಛತಿ, ಯಚ್ಚ “ಅನಾಗತಸ್ತೇನ ಭವತ್ಯಸಜ್ಯೋ

ಹ್ಯಂ ಪುರುಷಃ’ (೧.೪-೩-೧೫, ೧೬) ಇತಿ ಪದೇ ಪದೇ ಪ್ರತಿವಕ್ತಿ |‘ಅನಾಗತಂ ಪುಣೇನಾನಾಗತಂ ಪಾಪೇನ ತೀರ್ಥೋ ಹಿ ತದಾ ಸರ್ವಾಇಕಾನ್ ಹೃದಯಸ್ಯ ಭವತಿ’’ (ಬೃ. ೪-೩-೨೨) ಇತಿ ಚ | ತಸ್ಮಾತ್ ಅಸಂಸಾರಿಸ್ವರೂಪ ಪ್ರತಿಪಾದನಪರಮೇವ ಏತದ್ವಾಕ್ಯಮ್ ಇತ್ಯವಗಸ್ತವ್ಯಮ್ ||

  • (ಭಾಷ್ಯಾರ್ಥ) ಯಾವನಾದರೆ ನಡುವೆ ಎಚ್ಚರವೇ ಮುಂತಾದ ಅವಸ್ಥೆಗಳನ್ನು ಹೇಳಿರುವದರಿಂದ ಸಂಸಾರಿಸ್ವರೂಪವನ್ನು ಹೇಳಬೇಕೆಂದು ಹೊರಟಿದೆ ಎಂದು ತಿಳಿಯುತ್ತಾನೋ, ಅವನು ಪೂರ್ವದಿಕ್ಕಿಗೆ (ತಿರುಗಿಸಿ) ಹೊರಡಿಸಿದರೂ ಪಶ್ಚಿಮದಿಕ್ಕಿಗೆ ಹೊರಟಾನು. ಏಕೆಂದರೆ ಎಚ್ಚರವೇ ಮುಂತಾದ ಅವಸ್ಥೆಗಳನ್ನು ಹೇಳಿರುವದರಿಂದ ಶ್ರುತಿಯು (ಆತ್ಮನಿಗೆ) ಅವಸ್ಥಾವತ್ನವನ್ನಾಗಲಿ ಸಂಸಾರಿತ್ವವನ್ನಾಗಲಿ ಹೇಳಬೇಕೆಂದು ಹೊರಟಿಲ್ಲ ; ಮತ್ತೇ ನಂದರ ಅವಸ್ಥಾರಹಿತನೆಂದೂ ಅಸಂಸಾರಿಯೆಂದೂ (ಹೇಳುವದಕ್ಕೆ ಹೊರಟಿದೆ). ಇದು ಹೇಗೆ ಗೊತ್ತಾಯಿತು ? ಎಂದರೆ “ಇನ್ನುಮೇಲೆ ವಿಮೋಕ್ಷಕ್ಕೆ (ಉಪಾಯ ವನ್ನು) ಹೇಳು” (ಬೃ. ೪-೩-೧೪, ೧೫, ೧೬) ಎಂದು ಮತ್ತೆಮತ್ತೆ (ಜನಕನು) ಕೇಳಿರುತ್ತಾನೆ. ಅದರಿಂದ ಅಂಟಿಕೊಳ್ಳದೆ ಇರುತ್ತಾನೆ, ಈ ಪುರುಷನು ಅಸಂಗ ನಲ್ಲವ ?” (ಬೃ. ೪-೩-೧೫, ೧೬) ಎಂದೂ “ಪುಣ್ಯದಿಂದ ಅಂಟಿಕೊಳ್ಳದೆ, ಪಾಪದಿಂದ ಅಂಟಿಕೊಳ್ಳದೆ, ಆಗ ಹೃದಯದ ಶೋಕಗಳನ್ನೆಲ್ಲ ದಾಟಿರು
  1. ಶ್ರುತಿಯು ಹೇಳುವದಕ್ಕೆ ಅತ್ಯಂತವಿರುದ್ಧವಾಗಿ ಪೂರ್ವಪಕ್ಷಿಯು ತಿಳಿದುಕೊಂಡಿರು ತಾನೆ ಎಂದು ಅಭಿಪ್ರಾಯ.
    1. ಅವಸ್ಥೆಗಳು ಬೇರ್ಪಡುತ್ತಿದ್ದರೂ ಆತ್ಮನ ಚೈತನ್ಯಸ್ವರೂಪವು ಇದ್ದಂತೆ ಇರುವದರಿಂದ ಅವಸ್ಥೆಗಳಾಗಲಿ, ಯಾವದಾದರೊಂದು ಅವಸ್ಥೆಯಲ್ಲಿ ಕಾಣುವ ಸಂಸಾರಿತ್ವವಾಗಲಿ - ಆತ್ಮನಿಗೆ ನಿಜವಾಗಿ ಅಂಟಿಕೊಂಡಿರುವದಿಲ್ಲ ಎಂದು ತಿಳಿಸುವದೇ ಅವಸ್ಥಾಶ್ರುತಿಯ ಉದ್ದೇಶವೆಂದು ಭಾವ. ಮಾಂ. ಭಾ. ೭ (ಭಾ. ಭಾ. ೪೧).
  1. ಆದ್ದರಿಂದ ಇಲ್ಲಿ ಸಂಸಾರಿತ್ವವು ವಿವಕ್ಷಿತವಲ್ಲ.

ಅಧಿ. ೧೩. ಸೂ. ೪೩] ಇದು ಅಸಂಸಾರಿತ್ವವರ್ಣನೆ ಎಂಬುದಕ್ಕೆ ಬೇರೆಯ ಲಿಂಗಗಳು ೫೨೫ ತಾನಲ್ಲವೆ ?” (ಬೃ. ೪-೩-೨೨) ಎಂದೂ ಮತ್ತೆಮತ್ತೆ (ಯಾಜ್ಞವಲ್ಕನು) ಉತ್ತರಕೊಟ್ಟಿರುತ್ತಾನೆ.’

ಆದ್ದರಿಂದ ಈ ವಾಕ್ಯವು ಅಸಂಸಾರಿಸ್ವರೂಪವನ್ನು ಪ್ರತಿಪಾದನಮಾಡುವದ ರಲ್ಲಿಯೇ ತಾತ್ಪರ್ಯವುಳ್ಳದ್ದು ಎಂದು ನಿಶ್ಚಯಿಸಬೇಕು.

ಪತ್ಯಾದಿಶದ್ದೇಭ್ಯಃ ||೪೩! ೪೩. ಪತ್ಯಾದಿಶಬ್ದಗಳಿಂದಲೂ (ಹೀಗೆಂದು ತಿಳಿಯಬೇಕು).

ಇದು ಅಸಂಸಾರಿತ್ವವರ್ಣನೆ ಎಂಬುದಕ್ಕೆ ಬೇರೆಯ ಲಿಂಗಗಳು

(ಭಾಷ್ಯ) ೩೩೨. ಇತಶ್ಚ ಅಸಂಸಾರಿಸ್ವರೂಪಪ್ರತಿಪಾದನಪರಮೇವ ಏತದ್ವಾಕ್ಯಮ್ ಇತ್ಯವಗಸ್ತವ್ಯಮ್ | ಯದಸ್ಮಿನ್ ವಾಕ್ಕೇ ಪತ್ಯಾದಯಃ ಶಬ್ದಾ ಅಸಂಸಾರಿಸ್ವರೂಪ ಪ್ರತಿಪಾದನಪರಾಃ ಸಂಸಾರಿಸ್ವಭಾವಪ್ರತಿಷೇಧನಾಶ್ಚ ಭವನ್ತಿ | “ಸರ್ವಸ್ಯ ವಶೀ ಸರ್ವಸ್ಮಶಾನಃ ಸರ್ವಸ್ಯಾಧಿಪತಿ’ (ಬೃ. ೪-೪-೨೨) ಇವರಜಾತೀಯಕಾರಿ ಅಸಂಸಾರಿಸ್ವಭಾವಪ್ರತಿಪಾದನಪರಾಃ | ‘ಸ ನ ಸಾಧುನಾ ಕರ್ಮಣಾ ಭೂಯಾನ್ನೋ ಏವಾಸಾಧುನಾ ಕನೀಯಾನ್’’ (ಬೃ. ೪-೪-೨೨) ಇತ್ಯವಂಜಾತೀಯಕಾಃ ಸಂಸಾರಿ ಸ್ವಭಾವಪ್ರತಿಷೇಧನಾಃ | ತಸ್ಮಾತ್ ಅಸಂಸಾರೀ ಪರಮೇಶ್ವರ ಇಹೋಕ: ಇತ್ಯವ ಗಮ್ಯತೇ 11 |

(ಭಾಷ್ಯಾರ್ಥ) ಈ (ಕಾರಣ)ದಿಂದಲೂ ಅಸಂಸಾರಿಸ್ವರೂಪವನ್ನು ಪ್ರತಿಪಾದನಮಾಡುವದ ರಲ್ಲಿಯೇ ಈ ವಾಕ್ಯಕ್ಕೆ ತಾತ್ಪರ್ಯವಿದೆ ಎಂದು ನಿರ್ಣಯಿಸಬೇಕು. ಏಕೆಂದರೆ ಈ ವಾಕ್ಯದಲ್ಲಿ ‘ಪತಿ’ ಮುಂತಾದ ಅಸಂಸಾರಿಸ್ವರೂಪವನ್ನು ಪ್ರತಿಪಾದಿಸುವ ಶಬ್ದ ಗಳೂ ಸಂಸಾರಿಸ್ವಭಾವವನ್ನು ಅಲ್ಲಗಳೆಯುವ (ಶಬ್ದಗಳೂ) ಇರುತ್ತವೆ. “ಸರ್ವವನ್ನೂ ವಶದಲ್ಲಿಟ್ಟುಕೊಂಡಿರುವವನು, ಸರ್ವವನ್ನೂ ಆಳುವವನು, ಸರ್ವಕ್ಕೂ ಅಧಿಪತಿಯು’ (ಬೃ. ೪-೪-೨೨) ಎಂಬೀ ಜಾತಿಯವು ಅಸಂಸಾರಿಸ್ವಭಾವವನ್ನು

  1. ಆದ್ದರಿಂದ ಪುಣ್ಯಾಪುಣ್ಯಸಂಬಂಧವಿಲ್ಲದ ಆತ್ಮನನ್ನೇ ಇಲ್ಲಿ ಹೇಳಬೇಕೆಂದು ಹೊರಟಿದ ಎಂದಾಯಿತು. ಆತ್ಮನಿಗೆ ಅವಸ್ಥೆಯ ಧರ್ಮಗಳು ಸೇರಿರುವದಿಲ್ಲವೆಂದು ತಿಳಿಸುವದೇ ಶ್ರುತಿಯ ಉದ್ದೇಶವೇ ಹೊರತು ಅವಸ್ಥಾವತ್ಯವನ್ನು ಹೇಳುವದಲ್ಲ ಎಂದು ಇದರಿಂದ ಗೊತ್ತಾಗುತ್ತದೆ.

೫೨೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ತಿಳಿಸುವದರಲ್ಲಿ ತಾತ್ಪರ್ಯವುಳ್ಳವು : “ಅವನು ಒಳ್ಳೆಯಕರ್ಮದಿಂದ ದೊಡ್ಡವ ನಾಗುವದಿಲ್ಲ, ಕೆಟ್ಟ ಕರ್ಮದಿಂದಲೂ ಸಣ್ಣವನಾಗುವದೇ ಇಲ್ಲ’ (ಬೃ. ೪-೪-೨೨) ಎಂಬೀ ಜಾತಿಯವು ಸಂಸಾರಿಸ್ವಭಾವವನ್ನು ಅಲ್ಲಗಳೆಯುವ (ವಾಕ್ಯಗಳು).

ಆದ್ದರಿಂದ ಇಲ್ಲಿ ಅಸಂಸಾರಿಯಾದ ಪರಮೇಶ್ವರನನ್ನೇ ಹೇಳಿದೆ ಎಂದಾ

ಯಿತು.

ಅಧಿಕರಣಗಳ ಸಾರ

೧. ದ್ಯುಚ್ಛಾದ್ಯಧಿಕರಣ ವಿಷಯವೂ ಸಂಶಯವೂ : “ಯಸ್ಮಿನ್ ದೈಃ ಪೃಥಿವೀ ಚಾಸ್ತರಿಕ್ಷಮ್….” (ಮುಂ. ೨ ೨-೫) ಎಂಬ ಮುಂಡಕವಾಕ್ಯದಲ್ಲಿ ದ್ಯುಲೋಕಾದಿಗಳಿಗೆ ಆಶ್ರಯವಂದು ಹೇಳಿರುವದು ಪರಬ್ರಹ್ಮವೊ, ಬೇರೊಂದು ಪದಾರ್ಥವೊ ?

ಪೂರ್ವಪಕ್ಷ : ಇದನ್ನು ಸೇತುವೆಂದು ಕರೆದಿರುವದರಿಂದ ಇದು ಬ್ರಹ್ಮವಾಗಲಾರದು. ಎಲ್ಲಕ್ಕೂ ಕಾರಣವೆಂದು ಸಾಂಖ್ಯರು ಒಪ್ಪಿರುವ ಪ್ರಧಾನ, ಅಥವಾ ಎಲ್ಲವನ್ನೂ ಹಿಡಿದೆತ್ತಿರುವನೆಂದು ಶ್ರುತಿಯಲ್ಲಿ ಹೇಳಿರುವ ಸಮಷ್ಟಿವಾಯು ಅಥವಾ ಭೋಕ್ತವಾದ ಶಾರೀರ - ಇವುಗಳಲ್ಲಿ ಯಾವದೋ ಒಂದನ್ನು ಇಲ್ಲಿ ಹೇಳಿದೆ ಎನ್ನಬಹುದು.

ಸಿದ್ಧಾಂತ : ಇಲ್ಲಿ ‘ತಮೇವೈಕಂ ಜಾನಥ ಆತ್ಮಾನಮ್’ ಎಂದು ಆತ್ಮಶಬ್ದ ವಿರುವದರಿಂದಲೂ ಸದ್ರೂಪವಾದ ಬ್ರಹ್ಮವೇ ಜಗತ್ತಿಗೆ ಆಶ್ರಯವೆಂದು ಛಾಂದೋಗ್ಯದಲ್ಲಿ ಹೇಳಿರುವದರಿಂದಲೂ ಇದು ಬ್ರಹ್ಮವೇ. ಇಲ್ಲಿ ಆಶ್ರಯಾಶ್ರಯಿಭಾವವು ವಿವಕ್ಷಿತವಾಗಿಲ್ಲ. ಕಾರ್ಯಪ್ರಪಂಚವನ್ನು ಲಯಮಾಡಿ ಆತ್ಮನೊಬ್ಬನನ್ನೇ ತಿಳಿದುಕೊಳ್ಳಬೇಕೆಂದು ಹೇಳಿದ. ಸೇತು ಎಂಬುದು ಎಲ್ಲವನ್ನೂ ತಡೆದಿಟ್ಟಿರುವದೆಂಬ ಬ್ರಹ್ಮಧರ್ಮವನ್ನು ಹೇಳುತ್ತದೆ ; ಅಥವಾ ಆತ್ಮಜ್ಞಾನವನ್ನೂ ಅನಾತ್ಮಗಳ ಮಾತುಗಳನ್ನು ಬಿಡುವಿಕೆಯನ್ನೂ ಅಮೃತಕ್ಕೆ ಸೇತು ಎಂದು ಹೇಳಿದೆ. ಆದ್ದರಿಂದ ಸೇತುಶ್ರುತಿಯು ಬ್ರಹ್ಮವಾದಕ್ಕೆ ಅಡ್ಡಿಯಲ್ಲ. ರಾಗಾದಿಕೇಶಗಳಿಂದ ಮುಕ್ತರಾದವರೇ ಇದನ್ನು ಪಡೆದುಕೊಳ್ಳಬಹುದೆಂದು ಹೇಳಿರುವದರಿಂದಲೂ ಇದು ಬ್ರಹ್ಮವೇ. ಅಚೇತನವಾದ ಪ್ರಧಾನವನ್ನು ತಿಳಿಸುವ ಶಬ್ದವು ಯಾವದೂ ಇಲ್ಲಿಲ್ಲ ; ಚೇತನವನ್ನು ತಿಳಿಸುವ ಸರ್ವಜ್ಞನೆಂಬ ಶಬ್ದವು ಇದೆ. ಆದ್ದರಿಂದ ಇದು ಪ್ರಧಾನವಲ್ಲ. ವಾಯುವಾಚಕವಾದ ಶಬ್ದವು ಯಾವದೂ ಇಲ್ಲದ್ದರಿಂದ ಇದು ವಾಯುವೂ ಅಲ್ಲ. ಜೀವನನ್ನು ಅನುವಾದಮಾಡಿಕೊಂಡು ಅವನಿಗಿಂತ ಬೇರೆಯಾಗಿರುವ ಈಶ್ವರನನ್ನು ಹೇಳಿರುವದರಿಂದ ಇಲ್ಲಿ ಜೀವನನ್ನೂ ಹೇಳಿಲ್ಲ.

೨. ಭೂಮಾಧಿಕರಣ

ವಿಷಯವೂ ಸಂಶಯವೂ : ಛಾಂದೋಗ್ಯದಲ್ಲಿ “ಯತ್ರ ನಾತ್ ಪಶ್ಯತಿ ನಾನ್ಯಶೃಣೋತಿ…..’’ ಎಂಬ ವಾಕ್ಯದಲ್ಲಿ ಹೇಳಿರುವ ಭೂಮವು ಪ್ರಾಣನೊ, ಪರಬ್ರಹ್ಮವೂ ?

ಪೂರ್ವಪಕ್ಷ : ಇಲ್ಲಿ ಒಂದಕ್ಕಿಂತ ಒಂದು ಹೆಚ್ಚಿನದನ್ನು ಕೇಳುತ್ತಲೂ ಹೇಳುತ್ತಲೂ ಬಂದಿದೆ. ಪ್ರಾಣವನ್ನು ಹೇಳಿದಮೇಲೆ ಪ್ರಾಣನಿಗಿಂತ ಹೆಚ್ಚಿನದು ಇದೆಯ ? ಎಂದು ಕೇಳಿಲ್ಲ.

೫೨೮

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಇಂಥದ್ದೊಂದು ಇದೆ ಎಂದು ಉತ್ತರವನ್ನೂ ಕೊಟ್ಟಿಲ್ಲ. ಭೂಮಕ್ಕ ಹೇಳಿರುವ ದ್ವಿತೀಯ ವಸ್ತುವಿಲ್ಲದಿರುವದೇ ಮುಂತಾದ ಧರ್ಮಗಳು ಸುಷುವ್ಯವಸ್ಥೆಯಲ್ಲಿರುವ ಪ್ರಾಣನಿಗೂ ಹೊಂದುತ್ತದೆ. ಆದ್ದರಿಂದ ಪ್ರಾಣನೇ ಭೂಮವು.

ಸಿದ್ಧಾಂತ : ನಾಮಾದಿಗಳಿಗಿಂತ ಮುಂದೆ ಹೇಳಿರುವ ವಾಕ್ಕು ಮುಂತಾದವುಗಳು ಅದಕ್ಕಿಂತ ಬೇರೆಯಾಗಿರುವಂತ ಪ್ರಾಣನಿಗಿಂತ ಮುಂದೆ ಹೇಳಿರುವ ಭೂಮವು ಪ್ರಾಣನಿಗಿಂತ ಬೇರೆ ಯಾಗಿರಬೇಕೆಂದು ಏರ್ಪಡುತ್ತದ. “ಏಷ ತು ವಾ ಅತಿವದತಿ ಯಃ ಸನಾತಿವದತಿ” ಎಂಬ ವಾಕ್ಯದಲ್ಲಿ ಹೇಳಿರುವ ಅತಿವಾದಿತ್ವವು ಸತ್ಯದಿಂದ ಅತಿವಾದಿಯಾಗಿರುವವನಿಗೆ ಹೊಂದುತ್ತದೆಯೇ ಹೊರತು ಪ್ರಾಣವಿಜ್ಞಾನಿಗೆ ಹೊಂದುವದಿಲ್ಲ. ಇಲ್ಲಿ ‘ತು’ ಎಂಬ ಶಬ್ದವು ಪ್ರಕರಣಭೇದವನ್ನು ಸೂಚಿಸುತ್ತದೆ. ಇಲ್ಲಿ ಹೇಳಿರುವ ಆತ್ಮತ್ಯಾದಿಗಳೂ ಶೋಕನಾಶಕತ್ವವೂ ಮಿಕ್ಕ ಧರ್ಮಗಳೂ

ಪರಮಾತ್ಮನಿಗೇ ಹೊಂದುತ್ತವೆ. ಆದ್ದರಿಂದ ಭೂಮವು ಪರಮಾತ್ಮನೇ.

೩. ಅಕ್ಷರಾಧಿಕರಣ

ವಿಷಯವೂ ಸಂಶಯವೂ : ಬೃಹದಾರಣ್ಯಕದ ‘‘ಸ ಹೋವಾಚೈತತದಕ್ಷರಂ ಗಾರ್ಗಿ (೩-೮-೮) ಎಂಬ ವಾಕ್ಯದಲ್ಲಿ ಹೇಳಿರುವ ಅಕ್ಷರವು ಓಂಕಾರವೆ, ಪರಮೇಶ್ವರನ ?

ಪೂರ್ವಪಕ್ಷ : ಅಕ್ಷರಶಬ್ದವು ವರ್ಣದಲ್ಲಿ ರೂಢವಾಗಿರುವದರಿಂದಲೂ ಓಂಕಾರವನ್ನು ಶ್ರುತಿಯಲ್ಲಿ ಉಪಾಸನೆಗಾಗಿ ಸರ್ವಾತ್ಮಕವೆಂದು ಹೊಗಳಿರುವದು ಕಂಡಿರುವದರಿಂದಲೂ ಓಂಕಾರವೇ ಈ ಅಕ್ಷರವು.

  • ಸಿದ್ಧಾಂತ : ಅವ್ಯಾಹೃತಾಕಾಶದವರೆಗಿನದೆಲ್ಲವೂ ಈ ಅಕ್ಷರದಲ್ಲಿ ಓತಪ್ರೋತವಾಗಿರು ವದಂದು ಹೇಳಿರುವದರಿಂದ ಬ್ರಹ್ಮವೇ ಅಕ್ಷರವು. ಓಂಕಾರವನ್ನು ಸರ್ವಾತ್ಮಕವೆಂದು ಶ್ರುತಿ ಯಲ್ಲಿ ಹೊಗಳಿರುವದು ನಿಜ ; ಆದರೆ ಹಾಗೆ ಹೂಗಳಿರುವದು ಓಂಕಾರವು ಬ್ರಹ್ಮಜ್ಞಾನಕ್ಕೆ ಉಪಾಯವೆಂಬ ಕಾರಣದಿಂದ, ನಾಶವಾಗುವದಿಲ್ಲ, ಎಲ್ಲವನ್ನೂ ವ್ಯಾಪಿಸಿಕೊಂಡಿದೆ ಎಂಬರ್ಥ ದಲ್ಲಿ ಅಕ್ಷರ ಎಂಬ ಹೆಸರು ಬ್ರಹ್ಮಕ್ಕೂ ಸಲ್ಲುತ್ತದೆ. ಸೂರ್ಯಚಂದ್ರಾದಿಗಳನ್ನೂ ಇದು ತನ್ನ ಅಪ್ಪಣೆಯಂತ ನಡೆಸುತ್ತದೆ ಎಂದು ಹೇಳಿರುವದರಿಂದ ಇದು ಚೇತನವು, ಅಚೇತನವಾದ ಪ್ರಧಾನವಲ್ಲ. ಇದಕ್ಕಿಂತ ಬೇರೆ ದ್ರಷ್ಟವಿಲ್ಲ’ ಎಂದು ಆತ್ಮಭೇದವನ್ನು ಅಲ್ಲಗಳೆದಿರು ವದರಿಂದಲೂ ಚಕ್ಷುರಾದಿಗಳಿಲ್ಲವೆಂದು ಉಪಾಧಿಗಳನ್ನು ಅಲ್ಲಗಳೆದಿರುವದರಿಂದಲೂ ಇದು ಜೀವನೂ ಅಲ್ಲ.

೪. ಈಕ್ಷತಿಕರ್ಮವ್ಯಪದೇಶಾಧಿಕರಣ ವಿಷಯವೂ ಸಂಶಯವೂ : “ಯಃ ಪುನರೇತಂ ತ್ರಿಮಾಣೋಮಿತ್ಯೇತೇನೈವಾಕ್ಸರೇಣ ಪರಂ ಪುರುಷಮಭಿಧ್ಯಾಯೀತ’ (ಪ್ರ. ೫-೫) ಎಂಬ ಪ್ರಶ್ಲೋಪನಿಷತ್ತಿನ ವಾಕ್ಯದಲ್ಲಿ ಅಭಿಧ್ಯಾನಕ್ಕೆ ಕರ್ಮವು ಪರಬ್ರಹ್ಮವೂ, ಅಪರಬ್ರಹ್ಮವೊ ?

೫೨೯

ಅ. ೧. ಪಾ. ೩.]

ಅಧಿಕರಣಗಳ ಸಾರ

ಪೂರ್ವಪಕ್ಷ : ಇದು ಅಪರಬ್ರಹ್ಮವೇ. ಏಕೆಂದರೆ ಸೂರ್ಯನಲ್ಲಿ ಸೇರಿಕೊಳ್ಳುವದು, ಬ್ರಹ್ಮಲೋಕಕ್ಕೆ ಹೋಗುವದು - ಎಂಬ ದೇಶಪರಿಚ್ಛಿನ್ನವಾದ ಫಲವನ್ನು ಇಲ್ಲಿ ಹೇಳಿರುತ್ತದೆ. “ಪರಂ ಪುರುಷಮ್’ ಎಂಬಲ್ಲಿ ಪರ ಎಂಬ ವಿಶೇಷಣವಿರುವದು ನಿಜ ; ಆದರ ವಿರಾಟ್ಟುರುಷನ ಅಪೇಕ್ಷೆಯಿಂದ ಅಪರಬ್ರಹ್ಮವೂ ಪರವೆನಿಸಬಹುದಾಗಿದೆ.

ಸಿದ್ಧಾಂತ : ಇದು ಪರಬ್ರಹ್ಮವೇ. ಏಕೆಂದರೆ ‘ಪರಾತ್ಪರಂ ಪುರುಷಮೀಕ್ಷತೇ’ (೫-೫) ಎಂದು ನೋಡುವದೆಂಬ ಕ್ರಿಯೆಗೆ ಕರ್ಮವೆಂದು ಪುರುಷನನ್ನು ಹೇಳಿರುತ್ತದೆ. ‘‘ಜೀವಘನನಾದ ಪರನಿಗಿಂತ ಪರನಾದ ಪುರುಷನನ್ನು ಕಾಣುತ್ತಾನೆ’’ ಎಂಬ ವಾಕ್ಯವಿದೆಯಷ್ಟೆ : ಅದಕ್ಕೆ ಜೀವಘನನಿಗಿಂತ ಅಥವಾ ಬ್ರಹ್ಮಲೋಕಕ್ಕಿಂತ ಹೆಚ್ಚಿನವನಾದ ಪುರುಷನನ್ನು ಕಾಣುತ್ತಾನೆ ಎಂದರ್ಥ. ಫಲವಾಕ್ಯದಲ್ಲಿ “ಪರಪುರುಷನನ್ನು ಕಾಣುತ್ತಾನೆ” ಎಂದು ಹೇಳಿರುವದರಿಂದ ಅವನನ್ನೇ ಅಭಿಧ್ಯಾನಮಾಡಬೇಕೆಂದು ಪ್ರಕೃತಶ್ರುತಿಯಲ್ಲಿ ಹೇಳಿದೆ ಎಂದು ತಿಳಿಯುವದೇ ಯುಕ್ತ. ಓಂಕಾರದ ಮೂಲಕವಾಗಿ ಮಾಡುವ ಧ್ಯಾನವಿದಾದ್ದರಿಂದ, ಬ್ರಹ್ಮಲೋಕಕ್ಕೆ ಹೋಗಿ ಅಲ್ಲಿ ಜ್ಞಾನವನ್ನು ಪಡೆದು ಕ್ರಮಮುಕ್ತಿಯನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಇಲ್ಲಿ ದೇಶಪರಿಚ್ಛಿನ್ನವಾದ ಫಲವನ್ನು ಹೇಳಿರುವದು ಸಿದ್ಧಾಂತಕ್ಕೆ ವಿರುದ್ಧವಲ್ಲ.

೫. ದಹರಾಧಿಕರಣ

ವಿಷಯವೂ ಸಂಶಯವೂ : “ಅಥ ಯದಿದಮನ್ ಬ್ರಹ್ಮಪುರೇ ದಹರಂ ಪರೀಕಂ ವೇಶ್ನ ದಹರೋSಸ್ಮಿನ್ನನ್ತರಾಕಾಶಃ’ (ಛಾಂ. ೮-೧-೧) ಎಂದು ಉಪಾಸ್ಯವಾಗಿ ಹೇಳಿರುವ ದಹರಾಕಾಶವು ಭೂತಾಕಾಶವ, ವಿಜ್ಞಾನಾತ್ಮನೆ, ಅಥವಾ ಪರಮಾತ್ಮನ ?

ಪೂರ್ವಪಕ್ಷ : ಆಕಾಶಶಬ್ದವು ಭೂತಾಕಾಶದಲ್ಲಿ ರೂಢವಾಗಿರುವದರಿಂದ ಭೂತಾಕಾಶ ವನ್ನೇ ಇಲ್ಲಿ ಹೇಳಿದೆ. ಆಧ್ಯಾತ್ಮಿಕ, ಆಧಿಭೌತಿಕ - ಎಂಬ ಭೇದದಿಂದ ಆಕಾಶವನ್ನೇ ಆಕಾಶಕ್ಕೆ ಹೋಲಿಸಬಹುದಾದ್ದರಿಂದ ಹೃದಯಾಕಾಶವನ್ನು ಹೊರಗಿನ ಆಕಾಶಕ್ಕೆ ಹೋಲಿಸಿರುವ ವಾಕ್ಯ ವೇನೂ ಈ ನಮ್ಮ ಮತಕ್ಕೆ ವಿರುದ್ಧವಲ್ಲ. ಅಥವಾ ಜೀವನೇ ದಹರಾಕಾಶವು. ಶರೀರವನ್ನು ‘ಬ್ರಹ್ಮಪುರ’ ಎಂದು ಇಲ್ಲಿ ಕರೆದಿರುವದು ಜೀವನಿಗೆ ಹೊಂದುತ್ತದೆ, ಶರೀರದ ಒಡೆತನ ವಿಲ್ಲದ ಬ್ರಹ್ಮಕ್ಕೆ ಹೊಂದುವದಿಲ್ಲ. ಜೀವನನ್ನು ಬ್ರಹ್ಮವೆಂದು ಕರೆದಿರುವದೂ ಆಕಾಶಕ್ಕೆ ಹೊಲಿಸಿರುವ ಅವನು ಬ್ರಹ್ಮಕ್ಕಿಂತ ಬೇರೆಯಲ್ಲ ಎಂದು ತಿಳಿಸುವದಕ್ಕೆ, ಜೀವನಿಗೆ ಮನಸ್ಸು ಉಪಾಧಿಯಾಗಿರುವದರಿಂದಲೂ ಮನಸ್ಸು ಬಲುಮಟ್ಟಿಗೆ ಹೃದಯದಲ್ಲಿಯೇ ಇರುವದ ರಿಂದಲೂ ದಹರಾಕಾಶರೂಪನಾದ ಜೀವನು ಹೃದಯದೊಳಗೆ ಇರುತ್ತಾನೆಂದು ಹೇಳಿರುವದೂ ಹೊಂದುತ್ತದೆ. ಇದೂ ಅಲ್ಲದ ಪ್ರಕೃತವಾಕ್ಯದಲ್ಲಿ ಆಕಾಶವನ್ನು ಉಪಾಸನಮಾಡಬೇಕೆಂದೇನೂ ಹೇಳಿಲ್ಲ ; ಅದರಲ್ಲಿರುವದನ್ನು ಉಪಾಸನೆಮಾಡಬೇಕೆಂದಿದೆ. ಆದ್ದರಿಂದ ಜೀವನೇ ದಹರವು, ಅದರಲ್ಲಿರುವ ಬ್ರಹ್ಮವನ್ನು ಉಪಾಸನೆಮಾಡಬೇಕು ಎಂದೂ ವಾಕ್ಯಕ್ಕೆ ಅರ್ಥವನ್ನು ಮಾಡಬಹುದು.

೫೬o

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩. ಸಿದ್ಧಾಂತ : ಬ್ರಹ್ಮವೇ ದಹರಾಕಾಶವು. ಏಕೆಂದರೆ ‘ಹೃದಯವು ದಹರವಾಗಿದೆ. ಅದರಲ್ಲಿರುವ ಆಕಾಶವು ಇನ್ನೂ ಅಲ್ಪವಾಗಿದೆ ; ಅಲ್ಲಿ ಉಪಾಸನೆಮಾಡತಕ್ಕದ್ದು ಯಾವದಿದೆ ?’ ಎಂಬ ಆಕ್ಷೇಪವನ್ನು ತೆಗೆದು ಅದರಲ್ಲಿ ದ್ಯಾವಾಪೃಥಿವಿಗಳೆರಡೂ ಇವ - ಎಂದು ಮುಂತಾಗಿ ಅಲ್ಪತ್ವಪರಿಹಾರವನ್ನು ಹೇಳಿರುವದರಿಂದ ಇದು ಭೂತಾಕಾಶವಾಗಲಾರದು. ಕಿತಭೇದವನ್ನು ಆಕಾಶಕ್ಕೆ ಒಪ್ಪಿದರೂ ಹೃದಯದ ಆಕಾಶವು ಹೊರಗಿನ ಆಕಾಶಕ್ಕೆ ಸಮವಾಗಲಾರದು. ಆದ್ದರಿಂದ ದಹರಾಕಾಶವು ಭೂತಾಕಾಶವೆಂದಿಟ್ಟುಕೊಂಡರೆ ಈ ಎರಡು ಆಕಾಶಗಳೂ ಸಮವಾಗಿರುತ್ತವೆ ಎಂದಿರುವ ಶ್ರುತಿಯೂ ಹೂಂದುಗೆಯಾಗುವದಿಲ್ಲ. ಜೀವನೂ ದಹರಾಕಾಶವಲ್ಲ. ಏಕೆಂದರೆ ಜೀವನು ಪರಿಚ್ಛಿನ್ನವಾಗಿರುತ್ತಾನಾದ್ದರಿಂದ ಅಲ್ಪತ್ವವನ್ನು ಅಲ್ಲಗಳೆದು ದಹರವು ಹೊರಗಿನ ಆಕಾಶಕ್ಕೆ ಸಮವೆಂದು ಹೇಳುವ ಶ್ರುತಿಯು ಜೀವನ ವಿಷಯದಲ್ಲಿ ಹೊಂದುಗಡೆಯಾಗದ ಹೋಗುತ್ತದೆ. ಬ್ರಹ್ಮವು ಹೃದಯದಲ್ಲಿ ಸಾಕ್ಷಾತ್ಕಾರವಾಗುವದರಿಂದ, ಅಥವಾ ಶಾಲಿಗ್ರಾಮದಲ್ಲಿ ವಿಷ್ಣುವಿನಂತೆ ಅಲ್ಲಿ ಉಪಾಸ್ಯವಾಗಿರುವದರಿಂದ, ಹೃದಯವನ್ನು ಬ್ರಹ್ಮಪುರವೆಂದು ಮುಖ್ಯಾರ್ಥದಲ್ಲಿಯೇ ಕರೆಯಬಹುದಾಗಿದೆ. ದಹರಾಕಾಶವು ಉಪಾಸ್ಯವಲ್ಲ ಎಂದು ಪೂರ್ವಪಕ್ಷಿ ಹೇಳಿರುವದು ಸರಿಯಲ್ಲ. ಏಕೆಂದರೆ ದಹರಾಕಾಶವೇ ಆತ್ಮನು ; ಆ ಆತ್ಮನನ್ನೂ ದಹರದಲ್ಲಿರುವ ಸತ್ಯಕಾಮತ್ಯಾದಿಗಳನ್ನೂ ಉಪಾಸನೆಯಿಂದ ಸಾಕ್ಷಾತ್ಕರಿಸಿಕೊಂಡವರಿಗೆ ಎಲ್ಲಾ ಲೋಕಗಳಲ್ಲಿಯೂ ಕಾಮಚಾರವುಂಟಾಗುವದು ಎಂದು ಶ್ರುತಿಯಲ್ಲಿದೆ. ಪ್ರಕೃತವಾದ ದಹರವನ್ನು ಬ್ರಹ್ಮ ಲೋಕವೆಂದು ಕರೆದಿರುತ್ತದೆ ; ಅದು ಲೋಕಗಳು ನಾಶವಾಗದಿರುವಂತೆ ನೋಡಿಕೊಳ್ಳುವ ವಿದ್ಧತಿಯಾಗಿದೆ ಎಂದು ಹೊಗಳಿರುವದೂ ಇದು ಬ್ರಹ್ಮವೇ ಎಂಬುದಕ್ಕೆ ಬೆಂಬಲವಾದ ಲಿಂಗವು. ಆಕಾಶಶಬ್ದವು ಶ್ರುತಿಯಲ್ಲಿ ಬ್ರಹ್ಮವೆಂಬರ್ಥದಲ್ಲಿ ಪ್ರಸಿದ್ಧವಾಗಿರುತ್ತದೆಯಾದ್ದರಿಂದಲೂ ಇದು ಬ್ರಹ್ಮವೇ. ಆಕಾಶದ ಹೋಲಿಕೆ, ಅಪಹಪಾಹ್ಮತ್ಯಾದಿಗಳು - ಯಾವವೂ ಜೀವನಿಗೆ ಹೊಂದುವದಿಲ್ಲ ‘ಮುಂದ ಪ್ರಜಾಪತಿವಾಕ್ಯದಲ್ಲಿ ಅವಸ್ಥಾತ್ರಯಪರೀಕ್ಷೆಯ ಮೂಲಕವಾಗಿ ಜೀವನಲ್ಲಿ ಅಪಹಪಾಹ್ಮತ್ವವೇ ಮುಂತಾದವುಗಳು ಇರುವವೆಂದು ತೋರಿಸಿಕೊಟ್ಟಿರುವದು ನಿಜ ; ಆದರೆ ಆ ವಾಕ್ಯವು ಜೀವನನ್ನು ಅವಸ್ಥಾತೀತವಾದ ಬ್ರಹ್ಮಸ್ವರೂಪದಿಂದ ತಿಳಿಸುವದಕ್ಕೆ ಬಂದಿರುತ್ತದೆ. ಬ್ರಹ್ಮವು ಸರ್ವಗತವಾಗಿರುವದರಿಂದ ದಹರಾಕಾಶವು ಹೇಗಾದೀತೆಂದು ಶಂಕಿಸಬಾರದು ; ಏಕೆಂದರೆ ಉಪಾಸನೆಗಾಗಿ ಅದನ್ನು ಉಪಾಧಿವಶದಿಂದ ದಹರಾಕಾಶವೆಂದು ಶ್ರುತಿಯು ತಿಳಿಸಿರುತ್ತದೆ.

೬. ಅನುಕೃತ್ಯಧಿಕರಣ

ವಿಷಯವೂ ಸಂಶಯವೂ : “ನ ತತ್ರ ಸೂರ್ಯೊ ಭಾತಿ ನ ಚನ್ನತಾರಕಂ ನೇಮಾ ವಿದ್ಯುತ್‌ ಭಾನ್ನಿ ಕುತೂಯಮಗ್ರಿ: | ತಮೇವ ಭಾನ್ಯಮನುಭಾತಿ ಸರ್ವಂ ತಸ್ಯ ಭಾಸಾ ಸರ್ವ ಮಿದಂ ವಿಭಾತಿ’’ (ಮುಂ. ೨-೨-೧೧) ಎಂಬ ಮುಂಡಕವಾಕ್ಯದಲ್ಲಿ ಅದು ಬೆಳಗುವದನ್ನನುಸರಿಸಿ ಎಲ್ಲವೂ ಬೆಳಗುತ್ತದೆ, ಅದರ ಬೆಳಕಿನಿಂದ ಎಲ್ಲವೂ ಬೆಳಗುತ್ತದೆ - ಎಂದು ವರ್ಣಿಸಿರುವದು ಯಾವದಾದರೊಂದು ತೇಜೋಧಾತುವೆ, ಅಥವಾ ಚೈತನ್ಯರೂಪನಾದ ಪರಮಾತ್ಮನ ?

ಅ. ೧. ಪಾ. ೩.]

ಅಧಿಕರಣಗಳ ಸಾರ

೫೩೧

ಪೂರ್ವಪಕ್ಷ : “ಅಲ್ಲಿ ಸೂರ್ಯನು ಬೆಳಗುವದಿಲ್ಲ’ ಎಂದು ಮುಂತಾಗಿ ತೇಜೋಧಾತು ಗಳನ್ನೇ ಬೆಳಗುವದಿಲ್ಲವೆಂದು ಹೇಳಿರುವದರಿಂದಲೂ ತೇಜೋಧಾತುಗಳು ತೇಜೋಧಾತುವನ್ನೇ ಅನುಸರಿಸಿ ಬೆಳಗುವವೆಂಬುದು ಯುಕ್ತವಾಗಿರುವದರಿಂದಲೂ ಇದು ತೇಜೋಧಾತುವೇ.

ಸಿದ್ಧಾಂತ : ಇದು ಪರಮಾತ್ಮನೇ. ಒಂದು ದೀಪವು ಮತ್ತೊಂದು ದೀಪವನ್ನನುಸರಿಸಿ ಬೆಳಗುವದಿಲ್ಲವಾದ್ದರಿಂದ ತೇಜೋಧಾತುಗಳು ಅನುಸರಿಸಿ ಬೆಳಗುವದಕ್ಕೆ ಮತ್ತೊಂದು ತೇಜೋಧಾತು ಬೇಕೆನ್ನುವದು ಸರಿಯಲ್ಲ. ಒಂದು ತೇಜಸ್ಸಿನಿಂದ ಮತ್ತೊಂದು ಮಂಕಾಗುವದು ಕಂಡಿದೆಯೇ ಹೊರತು ಅದನ್ನನುಸರಿಸಿ ಬೆಳಗುವದು ಕಂಡಿಲ್ಲ. ಪರಮಾತ್ಮನು ಭಾರೂಪನೆಂದು ಶ್ರುತ್ಯಂತರದಲ್ಲಿದೆ. ಕಬ್ಬಿಣವು ಭಿನ್ನಸ್ವಭಾವಕವಾದ ಅಗ್ನಿಯನ್ನನುಸರಿಸಿ ಸುಡುವದು ಕಂಡು ಬರುವದರಿಂದ ಭಿನ್ನಸ್ವಭಾವಕನಾದ ಚಿದಾತ್ಮನನ್ನನುಸರಿಸಿ ಸೂರ್ಯಾದಿಗಳು ಬೆಳಗುವದೆಂಬುದು ವಿರುದ್ಧವಲ್ಲ. ಅದರ ಬೆಳಕಿನಿಂದ ಎಲ್ಲವೂ ಬೆಳಗುತ್ತದೆ’ ಎಂದಿರುವದರಿಂದ ಸೂರ್ಯಾದಿಗಳು ಮಾತ್ರ ಅದರಿಂದ ಬೆಳಗುತ್ತಾರೆಂದು ಕಲ್ಪಿಸುವದು ಸರಿಯಲ್ಲ. ಬ್ರಹ್ಮಚೈತನ್ಯವು ಎಲ್ಲವನ್ನೂ ತೋರಿಸಿಕೊಡುತ್ತದೆ, ಅದನ್ನು ಯಾವದೂ ತೋರಿಸಿಕೊಡಲಾರದು ; ಆದ್ದರಿಂದ ಅದನ್ನು ಸೂರ್ಯಾದಿಗಳು ಬೆಳಗುವದಿಲ್ಲ ಎಂಬುದು ಯುಕ್ತವಾಗಿದೆ. ಭಗವದ್ಗೀತೆಯಲ್ಲಿಯೂ ಪ್ರಾಜ್ಞಾತ್ಮನಿಗೆ ಇಂಥ ಪ್ರಕಾಶರೂಪವನ್ನು ಹೇಳಿದೆ.

  • ೭. ಪ್ರಮಿತಾಧಿಕರಣ

ವಿಷಯವೂ ಸಂಶಯವೂ : “ಅಂಗುಷ್ಯಮಾತ್ರಃ ಪುರುಷಃ’ (ಕ. ೨-೧-೧೨, ೨-೧-೧೩) ಎಂಬ ಕಠವಾಕ್ಯಗಳಲ್ಲಿ ಹೇಳಿರುವ ಪುರುಷನು ಜೀವನೂ, ಪರಮಾತ್ಮನೂ ?

ಪೂರ್ವಪಕ್ಷ : ಪರಿಮಾಣವು ಸೋಪಾಧಿಕನಾದ ಜೀವನಿಗೆ ಒಪ್ಪುತ್ತದೆಯೇ ಹೊರತು ಅನಂತನಾದ ಪರಮಾತ್ಮನಿಗೆ ಒಪ್ಪುವದಿಲ್ಲ, ಆದ್ದರಿಂದ ಇವನು ಜೀವನೇ.

ಸಿದ್ಧಾಂತ : ವಾಕ್ಯಶೇಷದಲ್ಲಿ ‘ಭೂತಭವ್ಯಕ್ಕೆ ಈಶಾನನು’ ಎಂದು ಬ್ರಹ್ಮವನ್ನು ತಿಳಿಸುವ ಈಶಾನನೆಂಬ ಶಬ್ದವೇ ಇರುವದರಿಂದಲೂ ‘ಇದೇ ಅದು’ ಎಂದು ಪ್ರಕೃತವಾದ ಬ್ರಹ್ಮವನ್ನೇ ಪರಾಮರ್ಶಿಸಿರುವದರಿಂದಲೂ ಇದು ಬ್ರಹ್ಮವೇ. ಶಾಸ್ತ್ರಾಧಿಕಾರಿಗಳಾದ ಮನುಷ್ಯರ ಹೃದಯವೆಂಬ ಉಪಾಧಿಯ ವಶದಿಂದ ಅಲ್ಲಿರುವ ಪರಮಾತ್ಮನಿಗೂ ಅಂಗುಷ್ಠ ಪರಿಮಾಣವನ್ನು ಹೇಳಿರುತ್ತದೆ ಯಾದ್ದರಿಂದ ಪರಮಾತ್ಮನ ಅನಂತತ್ವಕ್ಕೆ ಹಾನಿಯಿಲ್ಲ. ಜೀವನು ಅಂಗುಷ್ಠಮಾತ್ರನಾದರೂ ಪರಮಾರ್ಥವಾಗಿ ಪರಮಾತ್ಮನೇ ಎಂಬುದನ್ನು ಈ ಶ್ರುತಿಯು ತಿಳಿಸುತ್ತದೆಯಾದ್ದರಿಂದ ಯಾರಿಗೂ ಪರಿಮಾಣವನ್ನು ಹೇಳುವದಕ್ಕೆ ಬಂದಿರುವದೇ ಇಲ್ಲ.

೮. ದೇವತಾಧಿಕರಣ ವಿಷಯವೂ ಸಂಶಯವೂ : ಶಾಸ್ತ್ರವು ಮನುಷ್ಯರಿಗೆ ಎಂದು ಹಿಂದಿನ ಸೂತ್ರದಲ್ಲಿ ಹೇಳಿದೆ. ಮನುಷ್ಯರಿಗೆ ಮಾತ್ರವೇ ಈ ಶಾಸ್ತ್ರದಲ್ಲಿ ಅಧಿಕಾರವೂ, ದೇವಾದಿಗಳಿಗೂ ಉಂಟೆ ?೫೬೨

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಪೂರ್ವಪಕ್ಷ : ದೇವತೆಗಳಿಗೆ ಶರೀರಾದಿಗಳಿಲ್ಲ. ಶರೀರಾದಿಗಳು ಅವರಿಗಿದ್ದರೆ ಅವರು ಎಲ್ಲಾ ಕರ್ಮಗಳಲ್ಲಿಯೂ ಸಂನಿಹಿತರಾಗಿದ್ದು ಕರ್ಮಕ್ಕೆ ಅಂಗವಾಗಿರುವರೆಂದು ಒಪ್ಪಬೇಕಾಗು ವದು, ಅದನ್ನು ಯಾರೂ ಕಂಡಿಲ್ಲ. ಶರೀರವಿದ್ದರೆ ಅವರಿಗೆ ಜನನ ಮರಣಗಳು ಉಂಟು ಎಂದಾಗುವದು. ಆಗ ನಿತ್ಯವಾದ ಶಬ್ದಕ್ಕೂ ನಿತ್ಯವಾದ ಅರ್ಥಕ್ಕೂ ನಿತ್ಯಸಂಬಂಧವಿರುತ್ತದೆ ಎಂಬ ಸಿದ್ಧಾಂತಕ್ಕೆ ಹಾನಿ ಬರುವದು ; ಪ್ರಲಯದಲ್ಲಿ ಎಲ್ಲವೂ ವಿಶೇಷವಾಗಿ ನಾಶವಾಗುವದರಿಂದಲೂ

ಈ ಸಿದ್ಧಾಂತಕ್ಕೆ ಹಾನಿಯಾಗುವದು. ಆದಿತ್ಯಾದಿ ದೇವತೆಗಳಿಗೆ ಆದಿತ್ಯಾದಿಗಳನ್ನು ಉಪಾಸನೆ ಮಾಡುವ ಮಧ್ಯಾದಿ ವಿದ್ಯೆಗಳಲ್ಲಿ ಅಧಿಕಾರವೂ ಇರುವಹಾಗಿಲ್ಲ. ನಿಜವಾಗಿ ನೋಡಿದರೆ ಸೂರ್ಯ ಮಂಡಲಕ್ಕಿಂತ ಬೇರೆಯಾದ ಆದಿತ್ಯನೆಂಬ ದೇವತೆಯೇ ಇಲ್ಲ. ಈ ಎಲ್ಲಾ ಕಾರಣಗಳಿಂದ ದೇವಾದಿಗಳಿಗೆ ಅಧಿಕಾರವಿಲ್ಲ.

ಸಿದ್ಧಾಂತ : ದೇವತೆಗಳಿಗೆ ಶರೀರವುಂಟೆಂದು ಮಂತ್ರ, ಅರ್ಥವಾದ, ಇತಿಹಾಸ, ಪುರಾಣ, ಲೋಕಪ್ರಸಿದ್ಧಿ - ಇವುಗಳಿಂದ ಸಿದ್ಧವಾಗುತ್ತದೆ. ಅವರಿಗೆ ಅರ್ಥಿಾದಿರೂಪವಾದ ಅಧಿಕಾರ ಕಾರಣವೂ ಉಂಟು. ಆದ್ದರಿಂದ ಅವರಿಗೂ ವಿದ್ಯೆಯಲ್ಲಿ ಅಧಿಕಾರವಿದೆ. ಉಪನಯನ ವಿಲ್ಲದಿದ್ದರೂ ಅವರು ಸ್ವಯಂಪ್ರತಿಭಾತವೇದರಾಗಿರುವದರಿಂದ ಅಧಿಕಾರಕ್ಕೆ ಯಾವ ಅಡ್ಡಿಯೂ ಇರುವದಿಲ್ಲ.

ದೇವತೆಗಳಿಗೆ ಶರೀರಾದಿಗಳುಂಟು ಎಂದು ತಿಳಿದಮಾತ್ರದಿಂದ ಕರ್ಮವಿಷಯದಲ್ಲಿ ಯಾವ ವಿರೋಧವೂ ಇರುವದಿಲ್ಲ ; ಏಕೆಂದರ ದೇವತೆಯು ತನಗೆ ಸಹಜವಾಗಿರುವ ಸಿದ್ಧಿಯಿಂದ ಒಂದೇ ಕಾಲದಲ್ಲಿ ಅನೇಕ ರೂಪಗಳನ್ನು ಧರಿಸಿ ಅನೇಕ ಯಾಗಗಳಲ್ಲಿ ಅಂಗವಾಗಬಹುದು, ತನಗೆ ಅಂತರ್ಧಾನಾದಿಶಕ್ತಿಯಿರುವದರಿಂದ ಮತ್ತೊಬ್ಬರಿಗೆ ಕಾಣಿಸದೆಯೂ ಇರಬಹುದು. ಇದಲ್ಲದೆ ಯಾಗವೆಂದರೆ ದೇವತೆಗಳನ್ನುದ್ದೇಶಿಸಿ ಮಾಡುವ ವ್ಯತ್ಯಾಗವು ; ಆದ್ದರಿಂದ ಒಬ್ಬ ದೇವತೆಯನ್ನುದ್ದೇಶಿಸಿ ಅನೇಕರು ಏಕಕಾಲದಲ್ಲಿ ತಮ್ಮ ತಮ್ಮ ದ್ರವ್ಯವನ್ನು ತ್ಯಾಗಮಾಡುವದಕ್ಕೆ ಅಡ್ಡಿಯಿರುವದಿಲ್ಲ. ಇದರಂತ ಶಬ್ದ ವಿಷಯದಲ್ಲಿಯೂ ಯಾವ ವಿರೋಧವೂ ಇಲ್ಲ. ಏಕೆಂದರೆ ಇಂದ್ರಾದಿವ್ಯಕ್ತಿಗಳು ಹುಟ್ಟುವವಾದರೂ ಅವುಗಳ ಆಕೃತಿಗಳು ಹುಟ್ಟುವದಿಲ್ಲ ; ಆದ್ದರಿಂದ ಶಬ್ದಾರ್ಥಸಂಬಂಧವು ನಿತ್ಯವಾಗಿರುವದೆಂಬ ಸಿದ್ಧಾಂತಕ್ಕೆ ಇದು ವಿರುದ್ಧವಾಗುವದಿಲ್ಲ, ವೇದನಿತ್ಯತ್ವಕ್ಕೂ ವಿರುದ್ಧವಾಗುವದಿಲ್ಲ. ವೇದಶಬ್ದಗಳನ್ನು ಸ್ಮರಿಸಿಕೊಂಡೇ ಸೃಷ್ಟಿಕರ್ತನು ಸೃಷ್ಟಿಸುವನೆಂದು ವೇದವು ಹೇಳುತ್ತಿರುವದರಿಂದಲೂ ಸೃಷ್ಟಿಪ್ರಲಯಗಳು ಮತ್ತೆಮತ್ತೆ ಆಗುತ್ತಿರುವವಾದರೂ ಪ್ರತಿಯೊಂದು ಸೃಷ್ಟಿಯಲ್ಲಿಯೂ ಸಮಾನನಾಮರೂಪಗಳ ವಸ್ತುಗಳ ಸೃಷ್ಟಿಯಾಗುತ್ತಿರುವದರಿಂದಲೂ ಸಿದ್ಧಾಂತದಲ್ಲಿ ಯಾವ ವಿರೋಧವೂ ಇರುವದಿಲ್ಲ.

ಆದಿತ್ಯಾದಿಸಂಬಂಧವಾದ ಮಧ್ವಾದಿವಿದ್ಯಗಳಲ್ಲಿ ಆದಿತ್ಯಾದಿಗಳಿಗೆ ಅಧಿಕಾರವಿಲ್ಲದಿದ್ದರೂ ಶುದ್ಧಬ್ರಹ್ಮವಿದ್ಯೆಯಲ್ಲಿ ಅಧಿಕಾರವಿರುವದಕ್ಕೆ ಅಡ್ಡಿಯಿರುವದಿಲ್ಲ. ದೇವತೆಗಳಿಗೂ ಋಷಿಗಳಿಗೂ ವಿದ್ಯೆಯಲ್ಲಿ ಅಧಿಕಾರವುಂಟೆಂದು ಸೂಚಿಸುವ ಶ್ರುತಿವಾಕ್ಯವೂ ಇದೆ. ಆದಿತ್ಯಾದಿಶಬ್ದಗಳು ಸೂರ್ಯಮಂಡಲವೇ ಮುಂತಾದವುಗಳನ್ನು ಹೇಳುವವೆಂಬುದು ನಿಜ. ಆದರೆ ಚೇತನಾವಂತರಾದ ದೇವತೆಗಳನ್ನು ಅವು ಹೇಳುವವೆಂಬುದು ಮಂತ್ರಾರ್ಥವಾದಗಳಿಂದ ತಿಳಿದುಬರುತ್ತದೆ.

ಅ. ೧. ಪಾ. ೩.]

ಅಧಿಕರಣಗಳ ಸಾರ

೫೩೩

ಅರ್ಥವಾದವೇ ಮುಂತಾದ ವಾಕ್ಯಗಳು ಅನ್ಯಪರವಾಗಿದ್ದರೂ ಅವಾಂತರತಾತ್ಪರ್ಯದಿಂದ ತಮ್ಮ ತಮ್ಮ ಅರ್ಥವನ್ನು ತಿಳಿಸಬಹುದು. ಹಿಂದಿನ ಕಾಲದವರು ದೇವತೆಗಳೊಡನೆ ವ್ಯವಹಾರ ಮಾಡುತ್ತಿದ್ದರೆಂದೂ ಸ್ಮೃತಿಯಲ್ಲಿದೆ. ಆದ್ದರಿಂದ ದೇವತೆಗಳಿದ್ದಾರೆ ; ಅವರಿಗೆ ಬ್ರಹ್ಮವಿದ್ಯ ಯಲ್ಲಿ ಅಧಿಕಾರವುಂಟು.

೯. ಅಪಶೂದ್ರಾಧಿಕರಣ

ವಿಷಯವೂ ಸಂಶಯವೂ : ದೇವತಾಧಿಕಾರಪ್ರಸಂಗದಿಂದ ಈ ವಿಚಾರವು ಬಂದಿರುತ್ತದೆ. ಉಪನಯನವಿಲ್ಲದ ಅಮನುಷ್ಯರಾದ ದೇವತೆಗಳಿಗೂ ಅಧಿಕಾರವಿರುವದಾದರೆ ಶೂದ್ರರಿಗೂ

ಇರಬಹುದೆಂದು ತೋರುತ್ತದೆ. ಶೂದ್ರರಿಗೆ ಬ್ರಹ್ಮವಿದ್ಯೆಯಲ್ಲಿ ಅಧಿಕಾರವುಂಟೆ, ಇಲ್ಲವೆ ?

ಪೂರ್ವಪಕ್ಷ : ಶೂದ್ರನಿಗೆ ವಿದ್ಯೆಯಲ್ಲಿ ಅಧಿಕಾರವಿಲ್ಲವೆಂದು ಶ್ರುತಿಯಲ್ಲಿ ಹೇಳಿಲ್ಲ. ಶೂದ್ರನಿಗೆ ಅಗ್ನಿಯಿಲ್ಲದ್ದರಿಂದ ಯಜ್ಞದಲ್ಲಿ ಅಧಿಕಾರವಿಲ್ಲವೆಂದು ಶ್ರುತಿಯಲ್ಲಿ ಹೇಳಿದ್ದು ಯುಕ್ತ ; ಆದರೆ ಅಗ್ನಿಯು ವಿದ್ಯೆಗೆ ಬೇಕಿರುವದಿಲ್ಲ. ಸಂವರ್ಗವಿದ್ಯೆಯಲ್ಲಿ ಬ್ರಹ್ಮವಿದ್ಯೆಯನ್ನು ಶೂದ್ರನಿಗೆ ಉಪದೇಶಿಸಿದ ಸಂದರ್ಭವಿದೆ. ಶೂದ್ರನಿಗೆ ಅರ್ಥತ್ವಸಾಮರ್ಥ್ಯಗಳು ಇರಬಹು ದಾಗಿದೆ. ಶೂದ್ರಯೋನಿಯಲ್ಲಿ ಹುಟ್ಟಿದ ವಿದುರನೇ ಮುಂತಾದವರು ಮಹಾಜ್ಞಾನಿಗಳಾಗಿದ್ದ ರೆಂದು ಸ್ಮೃತಿಯಲ್ಲಿದೆ. ಆದ್ದರಿಂದ ಶೂದ್ರನಿಗೂ ಅಧಿಕಾರವುಂಟು.

ಸಿದ್ಧಾಂತ : ಶೂದ್ರನಿಗೆ ಅಧಿಕಾರವಿಲ್ಲ. ಏಕೆಂದರೆ ಅವನಿಗೆ ವೇದಾಧ್ಯಯನವಿಲ್ಲದ್ದರಿಂದ ಶಾಸ್ತ್ರೀಯವಾದ ಸಾಮರ್ಥ್ಯವಿಲ್ಲ ; ಆದ್ದರಿಂದ ಬರಿಯ ಅರ್ಥಿತ್ವವು ಪ್ರಯೋಜನಕ್ಕೆ ಬರುವದಿಲ್ಲ. ಶೂದ್ರನಿಗೆ ಯಜ್ಞದಲ್ಲಿ ಅಧಿಕಾರವಿಲ್ಲವೆಂಬುದಕ್ಕೆ ವೇದಾಧ್ಯಯನವಿಲ್ಲವೆಂಬ ನ್ಯಾಯವಿರು ತದೆ ; ಈ ನ್ಯಾಯವು ವಿದ್ಯೆಗೂ ಅಧಿಕಾರವಿಲ್ಲವೆಂಬುದಕ್ಕೆ ದ್ಯೋತಕವಾಗಬಹುದಾಗಿದೆ.

ಸಂವರ್ಗವಿದ್ಯೆಯಲ್ಲಿರುವ ಶೂದ್ರಶಬ್ದವು ಅಧಿಕಾರವನ್ನು ಸೂಚಿಸುವ ಲಿಂಗವಾಗ ಲಾರದು ; ಏಕೆಂದರೆ ಅದಕ್ಕೆ ಬೆಂಬಲವಾಗಿ ನ್ಯಾಯವಿರುವದಿಲ್ಲ. ಕ್ಷತ್ರಿಯನಾದ್ದರಿಂದ ಅಧಿಕಾರಿಯಾಗಿದ್ದ ಜಾನಶ್ರುತಿಯನ್ನೇ ರೈಕ್ಷನು ಶೂದ್ರನೆಂದು ಶೋಕದಿಂದ ತನ್ನ ಬಳಿಗೆ ಬಂದನೆಂಬುದು ತನಗೆ ತಿಳಿದಿರುವದೆಂಬ ಪರೋಕ್ಷಜ್ಞಾನವನ್ನು ಹೊರಪಡಿಸುವದಕ್ಕಾಗಿ ಕರೆದಿರುತ್ತಾನೆ - ಎಂದು ಈ ಶೂದ್ರಶಬ್ದವನ್ನು ಯೌಗಿಕಾರ್ಥದಲ್ಲಿಯೇ ಹೊಂದಿಸಿಕೊಳ್ಳುವದಕ್ಕೂ ಬರುತ್ತದೆ. ಕತೃಷಣವೇ ಮುಂತಾದ ಗುರುತುಗಳಿಂದ ಜಾನಶ್ರುತಿಯು ಕ್ಷತ್ರಿಯನೆಂಬುದು ಸ್ಪಷ್ಟವಾಗಿರುತ್ತದೆ. ಆದ್ದರಿಂದ ಶೂದ್ರನಿಗೆ ವಿದ್ಯೆಯಲ್ಲಿ ಅಧಿಕಾರವುಂಟೆಂಬುದಕ್ಕೆ ಶ್ರುತಿಯ ಲಿಂಗವಿಲ್ಲ. ಬ್ರಹ್ಮವಿದ್ಯೆಯನ್ನು ಉಪದೇಶಿಸುವಾಗ ಉವನಯನಾದಿಸಂಸ್ಕಾರಗಳನ್ನು ಮಾಡಿಸಿದ ಪರಾಮರ್ಶವು ಶ್ರುತಿಯಲ್ಲಿದೆ ; ಶೂದ್ರನು ಶ್ರವಣಾಧ್ಯಯನಾದಿಗಳನ್ನು ಮಾಡಕೂಡದೆಂಬ ನಿಷೇಧವೂ ಸ್ಮೃತಿಯಲ್ಲಿದೆ.

ವಿದುರಾದಿಗಳು ಜ್ಞಾನಿಗಳಾಗಿದ್ದರೆಂಬುದನ್ನು ನಾವು ಅಲ್ಲಗಳೆಯುವದಿಲ್ಲ. ಶೂದ್ರರಿಗೂ ಜ್ಞಾನದ ಫಲವು ಅವಶ್ಯವಾಗಿ ಉಂಟಾಗುತ್ತದೆ. ಇತಿಹಾಸಪುರಾಣವನ್ನು ಶ್ರವಣಮಾಡುವದಕ್ಕೆ

೫೩೪

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಶೂದ್ರನಿಗೂ ಅಧಿಕಾರವುಂಟು ; ಆದ್ದರಿಂದ ಅವುಗಳ ಮೂಲಕವಾಗಿ ಅವರಿಗೂ ಜ್ಞಾನವೂ ಅದರ

ಫಲವೂ ಉಂಟಾಗಬಹುದು.

೧೦. ಕಂಪನಾಧಿಕರಣ

ವಿಷಯವೂ ಸಂಶಯವೂ : ‘ಯದಿದಂ ಕಿಂ ಚ ಜಗತ್ಸರ್ವಂ ಪ್ರಾಣ ಏಜತಿ ನಿಃಸೃತಮ್ | ಮಹದ್ವಯಂ ವಜ್ರಮುದ್ಯತಂ ಯ ಏತದ್ವಿದುರಮೃತಾಸ್ತ್ರ ಭವನ್ತಿ |” (ಕ. ೨-೩-೨) ಎಂಬಲ್ಲಿ ಹೇಳಿದ ಪ್ರಾಣವೂ ವಜ್ರವೂ ಯಾವದು ?

ಪೂರ್ವಪಕ್ಷ : ಪಂಚವೃತ್ತಿಗಳುಳ್ಳ ವಾಯುವೇ ಪ್ರಾಣ, ಸಿಡಿಲೇ ವಜ್ರ ; ವಾಯು ವನ್ನಾಶ್ರಯಿಸಿ ಎಲ್ಲವೂ ಅಲುಗಾಡುತ್ತದೆಯಂದೂ ವಾಯುವು ಮೋಡವಾಗುವಾಗ ಸಿಡಿಲೇ ಉಂಟಾಗುವದೆಂದೂ ಇಲ್ಲಿ ವಾಯುವಿನ ಮಹಾತ್ಮಿಯನ್ನು ಹೇಳಿದೆ. ವಾಯುವಿನ ಉಪಾಸನೆ ಯಿಂದಲೇ ಅಮೃತತ್ವವನ್ನು ಇಲ್ಲಿ ಹೇಳಿದೆ, “ವಾಯುಜ್ಞಾನದಿಂದ ಪುನರ್ಮತ್ಯುವನ್ನು ಜಯಿಸುತ್ತಾರೆ” ಎಂಬ ಬೃಹದಾರಣ್ಯಕ ವಾಕ್ಯವೂ ಇದಕ್ಕೆ ಅನುಗುಣವಾಗಿದೆ.

ಸಿದ್ಧಾಂತ : ಹಿಂದುಮುಂದಿನ ಗ್ರಂಥಭಾಗದಲ್ಲಿ ಬ್ರಹ್ಮವನ್ನೇ ಹೇಳಿರುವದರಿಂದ ಇಲ್ಲಿಯೂ ಪ್ರಾಣ, ವಜ್ರ - ಎಂಬ ಮಾತುಗಳಿಂದ ಬ್ರಹ್ಮವನ್ನೇ ಹೇಳಿದ ಎಂಬುದು ಯುಕ್ತ. “ಪ್ರಾಣಸ್ಯ ಪ್ರಾಣಮ್’ ಮುಂತಾದ ಶ್ರುತಿಗಳಲ್ಲಿ ಪ್ರಾಣಶಬ್ದವನ್ನು ಬ್ರಹ್ಮವೆಂಬರ್ಥದಲ್ಲಿ ಉಪಯೋಗಿಸಿರುತ್ತದೆ. ಪ್ರಾಣನಲ್ಲಿದ್ದುಕೊಂಡು ಅಲುಗಾಡುತ್ತದೆ ಎಂದರೆ ಪರಮಾತ್ಮನನ್ನು ಆಶ್ರಯಿಸಿಕೊಂಡು ಬಾಳುತ್ತದೆ ಎಂದರ್ಥ. ಮುಂದ (೨-೨-೫) ಇದಕ್ಕೆ ಬೆಂಬಲವನ್ನು ಕೊಡುವ ವಾಕ್ಯವಿದೆ. ವಜ್ರವೆಂಬುದು ಭಯಹೇತುತ್ವವನ್ನು ತಿಳಿಸುತ್ತದೆ. ಬ್ರಹ್ಮವೇ ಭಯಹೇತು ಎಂದು ಮುಂದ (೨-೬-೩) ಹೇಳಿಯೂ ಇದೆ. ಅಮೃತತ್ವವೆಂಬ ಫಲವನ್ನು ಹೇಳಿರುವದರಿಂದಲೂ ಇದು ಬ್ರಹ್ಮವಿಷಯದ ವಾಕ್ಯವನ್ನಬೇಕು. ವಾಯುಜ್ಞಾನದಿಂದ ಆಗುವ ಅಮೃತತ್ವವು ಆಪೇಕ್ಷಿಕ ವಾದ್ದರಿಂದ ಮುಖ್ಯಾರ್ಥದ ಅಮೃತತ್ವವನ್ನು ಬಿಟ್ಟು, ಅದನ್ನು ಗ್ರಹಿಸುವದು ಯುಕ್ತವಾಗುವದಿಲ್ಲ. ಈ ಪ್ರಕರಣವು ಬ್ರಹ್ಮದೇ ಆದ್ದರಿಂದಲೂ ಈ ವಾಕ್ಯವು ಬ್ರಹ್ಮವನ್ನು ಹೇಳುತ್ತದೆ ಎಂದು ನಿಶ್ಚಯಿಸಬೇಕು.

೧೧. ಜ್ಯೋತಿರಧಿಕರಣ

ವಿಷಯವೂ ಸಂಶಯವೂ : “ಏಷ ಸಂಪ್ರಸಾದೋSಸ್ಮಾಟ್ರರೀರಾತ್ ಸಮುತ್ತಾಯ ಪರಂಜ್ಯೋತಿರುಪಸಂಪದ್ಯ ಸ್ಟೇನ ರೂಪೇಣಾಭಿನಿಷ್ಪದ್ಯತೇ’ (ಛಾಂ. ೮-೧೨-೩) ಎಂಬ ಪ್ರಜಾಪತಿವಾಕ್ಯದಲ್ಲಿ ಜ್ಯೋತಿಯಂಬುದು ಬೆಳಕೆ, ಅಥವಾ ಪರಬ್ರಹ್ಮವ ?

ಪೂರ್ವಪಕ್ಷ : ಇದು ಪ್ರಸಿದ್ಧವಾದ ಬೆಳಕೇ. ಇಲ್ಲಿ ಬೆಳಕೆಂಬ ರೂಢಿಯ ಅರ್ಥವನ್ನು ಬಿಡಬೇಕೆಂಬುದಕ್ಕೆ ಪ್ರಕರಣವೇ ಮುಂತಾದ ಯಾವ ಕಾರಣವೂ ಇರುವದಿಲ್ಲ. ಹಿಂದಿನ

ಅ. ೧. ಪಾ. ೩.]

ಅಧಿಕರಣಗಳ ಸಾರ

೫೫

ನಾಡೀಖಂಡದಲ್ಲಿ ಮುಮುಕ್ಷುವಾದವನಿಗೆ ಆದಿತ್ಯಪ್ರಾಪ್ತಿಯನ್ನು ಹೇಳಿರುವದೂ ಇಲ್ಲಿ ಜ್ಯೋತಿ ಎಂದರೆ ಬೆಳಕೇ ಎಂಬುದಕ್ಕೆ ಸಾಧಕವಾಗಿರುತ್ತದೆ.

ಸಿದ್ಧಾಂತ : ಇಲ್ಲಿ ಜ್ಯೋತಿ ಎಂದರೆ ಬ್ರಹ್ಮವೇ. ಏಕೆಂದರೆ ಇದು ಬ್ರಹ್ಮದ ವಿಷಯವನ್ನು ಹೇಳುವ ಪ್ರಕರಣವೆಂಬುದನ್ನು ಉಪಕ್ರಮದಲ್ಲಿ ಅಪಹತಾಷ್ಕೃತ್ಯಾದಿಗುಣಗಳುಳ್ಳ ಆತ್ಮನನ್ನು ಹುಡುಕಿ ಅರಿಯಬೇಕೆಂದು ಹೇಳಿರುವದು, “ಇವನನ್ನೇ ನಿನಗೆ ಮತ್ತೂ ಹೇಳುತ್ತೇನೆ” ಎಂದು ಪರಾಮರ್ಶಿಸಿರುವದು, ಜ್ಯೋತಿಯನ್ನು ಸೇರುವದು ಅಶರೀರತ್ವಕ್ಕೋಸ್ಕರ ಎಂಬುದನ್ನು ಅಶರೀರನಿಗೆ ಪ್ರಿಯಾಪ್ರಿಯಗಳ ಸೋಂಕಿಲ್ಲವೆಂಬ ವಾಕ್ಯದಿಂದ ತಿಳಿಸಿರುವದು - ಇವುಗಳಿಂದ ಗೊತ್ತುಮಾಡಬಹುದಾಗಿದೆ. ‘ಪರಂ ಜ್ಯೋತಿಃ’ (‘ಉತ್ತಮಃ ಪುರುಷಃ’ ಎಂಬ ವಿಶೇಷಣಗಳೂ ಇದು ಬ್ರಹ್ಮವೆಂಬುದಕ್ಕೆ ಲಿಂಗವಾಗಿವೆ. ಆದಿತ್ಯಪ್ರಾಪ್ತಿಯನ್ನು ಹೇಳುವ ವಾಕ್ಯವು ಆತ್ಯಂತಿಕ ಮೋಕ್ಷವಿಷಯವಲ್ಲ ; ಪ್ರಕೃತವಾಕ್ಯವು ಆತ್ಯಂತಿಕಮುಕ್ತಿಯನ್ನು ಕೊಡುವ ಬ್ರಹ್ಮಜ್ಞಾನದ

ವಾಕ್ಯವು. ಆದ್ದರಿಂದ ಪೂರ್ವಾಪರವಿರೋಧವಿಲ್ಲ.

೧೨. ಅರ್ಥಾಂತರವ್ಯಪದೇಶಾಧಿಕರಣ

ವಿಷಯವೂ ಸಂಶಯವೂ : ““ಆಕಾಶೋ ವೈ ನಾಮ ನಾಮರೂಪಯೋರ್ನಿವ್ರಹಿತಾ ತೇ ಯದನ್ನರಾ ತಹ್ಮ ತದಮೃತಂ ಸ ಆತ್ಮಾ’’ (ಛಾಂ. ೮-೧೪-೧) ಎಂಬ ವಾಕ್ಯದಲ್ಲಿರುವ ಆಕಾಶವು ಪರಬ್ರಹ್ಮವೂ, ಭೂತಾಕಾಶವೊ ?

ಪೂರ್ವಪಕ್ಷ : ಆಕಾಶಶಬ್ದವು ಭೂತಾಕಾಶದಲ್ಲಿಯೇ ರೂಢವಾಗಿರುವದರಿಂದಲೂ ನಾಮ ರೂಪನಿರ್ವಹಣವೆಂಬುದು ಅವಕಾಶವನ್ನು ಕೊಡುವದರ ಮೂಲಕ ಆಕಾಶಕ್ಕೂ ಹೂಂದು ವದರಿಂದಲೂ ಇದು ಭೂತಾಕಾಶವೇ. ಇದು ಬ್ರಹ್ಮವೆಂಬುದಕ್ಕೆ ಸ್ಪಷ್ಟವಾದ ಬ್ರಹ್ಮಲಿಂಗವು ಯಾವದೂ ಇಲ್ಲ.

ಸಿದ್ಧಾಂತ : ಇದು ಪರಬ್ರಹ್ಮವೇ. ಏಕೆಂದರೆ ಈ ಆಕಾಶವು ನಾಮರೂಪಗಳಿಗಿಂತ ಬೇರೆಯಾಗಿರುವ ವಸ್ತುವೆಂದು ಹೇಳಿದೆ. ಬ್ರಹ್ಮವನ್ನು ಬಿಟ್ಟರೆ ಮತ್ತೆ ಯಾವದೂ ನಾಮ ರೂಪಗಳಿಗಿಂತ ಬೇರೆಯಾಗಿರಲಾರದು. ನಾಮರೂಪನಿರ್ವಹಣವೂ ಬ್ರಹ್ಮ ನಿರಂಕುಶವಾಗಿ ಹೊಂದುತ್ತದೆ. ಜೀವನಿಗೂ ನಾಮರೂಪನಿರ್ವಹಣವು ಕಂಡಿದೆಯಾದರೂ ಬ್ರಹ್ಮವೇ ಜೀವ ರೂಪದಿಂದ ನಾಮರೂಪನಿರ್ವಾಹವನ್ನು ಮಾಡುತ್ತಿರುವದಂದು ಹೇಳುವದಕ್ಕೆ ಶ್ರುತಿಯು ಬಂದಿರುವದರಿಂದ ಅದೇನೂ ಬ್ರಹ್ಮವಾದಕ್ಕೆ ಬಾಧಕವಲ್ಲ. ಈ ನಾಮರೂಪನಿರ್ವಾಹವನ್ನು ಹೇಳಿದ್ದರಿಂದಲೇ ಸ್ಪಷ್ಟತ್ಪಾದಿಗಳನ್ನೂ ಹೇಳಿದಂತೆ ಆಗಿದೆ. ಅದು ಬ್ರಹ್ಮವು, ಅದು ಅಮೃತವು, ಅದು ಆತ್ಮನು’ ಎಂದು ಹೇಳಿರುವದೂ ಬ್ರಹ್ಮವಾದಕ್ಕೆ ಲಿಂಗಗಳಾಗಿರುತ್ತವೆ.

೧೩. ಸುಷುಪ್ಪುತ್ಕಾಂತ್ಯಧಿಕರಣ ವಿಷಯವೂ ಸಂಶಯವೂ : ಬೃಹದಾರಣ್ಯಕೋಪನಿಷತ್ತಿನಲ್ಲಿ ‘ಕತಮ ಆತ್ಮತಿ

೫೩೬

ಬ್ರಹ್ಮಸೂತ್ರಭಾಷ್ಯ

[ಅ. ೧. ಪಾ. ೩.

ಯೋsಯಂ ವಿಜ್ಞಾನಮಯಃ ಪ್ರಾಣೇಷು’ (ಬೃ. ೪-೩-೭) ಎಂದು ಮೊದಲಾಗಿರುವ ಆತ್ಮನಿರೂಪಣೆಯು ಸಂಸಾರಿಸ್ವರೂಪವನ್ನು ಅನುವಾದಮಾಡುತ್ತದೆಯೋ, ಅಥವಾ ಅಸಂಸಾರಿ ಸ್ವರೂಪವನ್ನು ತಿಳಿಸಿಕೊಡುತ್ತದೆಯ ?

ಪೂರ್ವಪಕ್ಷ : ಉಪಕ್ರಮದಲ್ಲಿಯೂ ಉಪಸಂಹಾರದಲ್ಲಿಯೂ “ವಿಜ್ಞಾನಮಯಃ ಪ್ರಾಣೇಷು’ (ಬೃ. ೪-೩-೭, ೪-೪-೨೨) ಎಂಬ ವಿಶೇಷಣವಿರುವದರಿಂದಲೂ ನಡುವ ಜಾಗರಿತಾದ್ಯವಸ್ಥೆಗಳನ್ನು ಹೇಳಿರುವದರಿಂದಲೂ ಇದು ಜೀವನ ವರ್ಣನ.

ಸಿದ್ಧಾಂತ : ಇದು ಅಸಂಸಾರಿಯಾದ ಪರಮೇಶ್ವರನ ಸ್ವರೂಪವನ್ನು ತಿಳಿಸುತ್ತದೆ. ಏಕೆಂದರೆ ಸುಷುಪ್ತಿ, ಉತ್ಕಾಂತಿ - ಇವುಗಳಲ್ಲಿ ಜೀವನಿಗಿಂತ ವ್ಯತಿರಿಕ್ತನೆಂದು ಪರಮೇಶ್ವರನನ್ನು ತಿಳಿಸಿದ. ಹೇಗೆಂದರೆ, ಸುಷುಪ್ತಿಯಲ್ಲಿ “ಈ ಪುರುಷನು ಪ್ರಾಜ್ಞನಿಂದ ಆಲಿಂಗಿತನಾಗಿರುವದರಿಂದ ಒಳಗುಹೂರಗುಗಳನ್ನು ಅರಿಯದ ಇರುತ್ತಾನೆ’’ ಎಂದಿದೆ. ಇಲ್ಲಿ ಪುರುಷನೆಂದರೆ ಜೀವನು ; ಏಕೆಂದರೆ ಅವನೇ ಜ್ಞಾತೃಸ್ವಭಾವವುಳ್ಳವನು. ಇದರಂತೆ ಉತ್ಕಾಂತಿಯಲ್ಲಿ ಈ ಶಾರೀರನಾದ ಆತ್ಮನು ಪ್ರಾಜ್ಞನಿಂದ ಅನ್ನಾರೂಢನಾಗಿ ಕೂಗುಹಾಕುತ್ತಾ ಹೋಗುವನು’ ಎಂದಿದ. ಇಲ್ಲಿ ಶಾರೀರನಂದರ ಶರೀರಸ್ವಾಮಿಯಾದ ಜೀವನು. ಈ ಎರಡು ಸಂದರ್ಭಗಳಲ್ಲಿಯೂ ಜೀವವ್ಯತಿರಿಕ್ತವಾದ ಪ್ರಾಜ್ಞಸ್ವರೂಪವನ್ನು ತಿಳಿಸಿದೆ. ಇಲ್ಲಿ ಪ್ರಾಜ್ಞನೆಂದರೆ ಪರಮೇಶ್ವರನು ; ಏಕೆಂದರೆ ಸರ್ವಜ್ಞತ್ವಸ್ವರೂಪವಾದ ಪ್ರಜ್ಞೆಯು ಯಾವಾಗಲೂ ಅವನ ಸ್ವರೂಪವಾಗಿರುತ್ತದೆ. ಉಪಕ್ರಮದಲ್ಲಿಯೂ ಉಪಸಂಹಾರದಲ್ಲಿಯೂ ಸಂಸಾರಿಸ್ವರೂಪವನ್ನು ವರ್ಣಿಸಿರುವದು ನಿಜ ; ಆದರೆ ಶ್ರುತಿಯು ಆ ಸ್ವರೂಪವನ್ನು ಅನುವಾದಮಾಡಿಕೊಂಡು ಪ್ರಾಜ್ಞನಾದ ಪರಮೇಶ್ವರನಿಗೂ ಅವನಿಗೂ ಐಕ್ಯವನ್ನು ಹೇಳುವದಕ್ಕೆ ಹೊರಟಿದೆ. ಉಪಕ್ರಮದಲ್ಲಿ “ಧ್ಯಾಯತೀವ ಲೇಲಾ ಯತೀವ” ಎಂದು ಜ್ಞಾನಕರ್ಮೇಂದ್ರಿಯಗಳ ವ್ಯಾಪಾರಗಳು ಆತ್ಮನಿಗೆ ಸೇರಿಲ್ಲವೆಂದಿದೆ ; ಉಪ ಸಂಹಾರದಲ್ಲಿ ಈ ವಿಜ್ಞಾನಮಯನೇ ‘ಮಹಾನ್, ಅಜ, ಆತ್ಮ” ಎಂದು ಬಣ್ಣಿಸಿದ. ನಡುವೆ ಅವಸ್ಥಾತ್ರಯವನ್ನು ಹೇಳಿರುವದೂ ಅವಸ್ಥಾರಹಿತವಾದ ಅಸಂಸಾರಿಸ್ವರೂಪವನ್ನು ತಿಳಿಸುವದಕ್ಕೇ ಎಂಬುದು ‘ವಿಮೋಕ್ಷಕ್ಕೇ ಹೇಳು” ಎಂಬ ಜನಕನ ಪ್ರಶ್ನೆಯಿಂದಲೂ ‘‘ಪುಣ್ಯಪಾಪಗಳಿಂದ ಅನಾಗತನಾಗಿರುತ್ತಾನೆ” ಎಂಬ ಯಾಜ್ಞವಲ್ಯನ ಉತ್ತರದಿಂದಲೂ ವ್ಯಕ್ತವಾಗುತ್ತದೆ. ಈ ಆತ್ಮನು “ಎಲ್ಲವನ್ನೂ ತನ್ನ ವಶದಲ್ಲಿಟ್ಟುಕೊಂಡಿರುತ್ತಾನೆ, ಎಲ್ಲಕ್ಕೂ ಒಡೆಯನು, ಎಲ್ಲಕ್ಕೂ ಅಧಿಪತಿಯು, ಒಳ್ಳೆಯ ಕರ್ಮದಿಂದ ಹೆಚ್ಚುವದಿಲ್ಲ, ಕೆಟ್ಟದ್ದರಿಂದ ಕುಗ್ಗುವದಿಲ್ಲ” ಎಂದು ಅಸಂಸಾರಿಸ್ವಭಾವವನ್ನು ತಿಳಿಸುವ ಮತ್ತು ಸಂಸಾರಿಸ್ವಭಾವವನ್ನು ಅಲ್ಲಗಳೆಯುವ ಮಾತುಗಳೂ ಇದು ಅಸಂಸಾರಿಯಾದ ಪರಮೇಶ್ವರನನ್ನು ಹೇಳುವ ವಾಕ್ಯವೆಂಬುದನ್ನು ಬಲಪಡಿಸುತ್ತವೆ.