ಒಂದನೆಯ ಅಧ್ಯಾಯ - ಎರಡನೆಯ ಪಾದ (ಅಸ್ಪಷ್ಟಬ್ರಹ್ಮಲಿಂಗವಾಕ್ಯಗಳ ವಿಚಾರ) ಮುಂದಿನ ಗ್ರಂಥದ ಸಂಬಂಧ
(ಭಾಷ್ಯ) ೧೪೫. ಪ್ರಥಮೇ ಪಾದೇ ‘ಜನ್ಮಾದ್ಯಸ್ಯ ಯತಃ’ (೧-೧-೨) ಇತಿ ಆಕಾಶಾದೇ? ಸಮಸ್ತಸ್ಯ ಜಗತಃ ಜನ್ಮಾದಿಕಾರಣಂ ಬ್ರಹ್ಮ ಇತ್ಯುಕ್ತಮ್ | ತಸ್ಯ ಸಮಸ್ತಜಗತ್ಕಾರಣಸ್ಯ ಬ್ರಹ್ಮಣೋ ವ್ಯಾಪಿತ್ವಮ್, ನಿತ್ಯತ್ವಮ್, ಸರ್ವಜ್ಞತ್ವಮ್, ಸರ್ವಶಕ್ತಿತ್ವಮ್, ಸರ್ವಾತ್ಮತ್ವಮ್ ಇತ್ಯೇವಂಜಾತೀಯಕಾ ಧರ್ಮಾ ಉಕ್ತಾ ಏವ ಭವನ್ತಿ | ಅರ್ಥಾನ್ನರ ಪ್ರಸಿದ್ಧಾನಾಂ ಚ ತೇಷಾಂಚಿತ್ ಶಬ್ದಾನಾಂ ಬ್ರಹ್ಮವಿಷಯತ್ವಹೇತುಪ್ರತಿಪಾದನೇನ ಕಾನಿಚಿತ್ ವಾಕ್ಯಾನಿ ಸ್ಪಷ್ಟಬ್ರಹ್ಮಲಿಜ್ಞಾನಿ ಸಹ್ಯಮಾನಾನಿ ಬ್ರಹ್ಮಪರತಯಾ ನಿರ್ಣಿತಾನಿ | ಪುನರಪಿ ಅನ್ಯಾನಿ ವಾಕ್ಕಾನಿ ಅಸ್ಪಷ್ಟಬ್ರಹ್ಮಲಿಜ್ಞಾನಿ ಸಂದಿಹ - ಕಿಂ ಪರಂ ಬ್ರಹ್ಮ ಪ್ರತಿಪಾದಯ, ಆಹೋಸ್ಟಿತ್ ಅರ್ಥಾನ್ನರಂ ಕಿಂಚಿತ್ ? ಇತಿ | ತನ್ನಿರ್ಣಯಾಯ ದ್ವಿತೀಯತೃತೀಯಪಾದೌ ಆರಭೇತೇ ||
(ಭಾಷ್ಯಾರ್ಥ) ಮೊದಲನೆಯ ಪಾದದಲ್ಲಿ “ಜನ್ಮಾದ್ಯಸ್ಯ ಯತಃ” (೧-೧-೨) ಎಂದು ಆಕಾಶವೇ ಮುಂತಾದ ಸಮಸ್ತಜಗತ್ತಿನ ಜನ್ಮಾದಿಗೆ ಬ್ರಹ್ಮವು ಕಾರಣವು ಎಂದು ಹೇಳಿದ್ದಾಗಿದೆ. ಸಮಸ್ತಜಗತ್ಕಾರಣವಾದ ಈ ಬ್ರಹ್ಮಕ್ಕೆ ವ್ಯಾಪಿತ್ವ, ನಿತ್ಯತ್ವ, ಸರ್ವಜ್ಞತ್ವ, ಸರ್ವಶಕ್ತಿತ್ವ, ಸರ್ವಾತ್ಮತ್ವ, - ಎಂಬೀ ಜಾತಿಯ ಧರ್ಮಗಳನ್ನು ಹೇಳಿದಂತೆಯೇ ಆಗಿರುತ್ತದೆ. ಬೇರೆಯ ವಸ್ತುಗಳಲ್ಲಿ (ವಾಚಕಗಳೆಂದು) ಪ್ರಸಿದ್ಧವಾಗಿರುವ ಕೆಲವು ಶಬ್ದಗಳಿಗೆ ಬ್ರಹ್ಮವೇ ವಿಷಯ’ ಎಂಬುದಕ್ಕೆ ಹೇತುವನ್ನು ತಿಳಿಸಿ ಸ್ಪಷ್ಟವಾದ
-
ಕಾರಣವು ಕಾರ್ಯವನ್ನೆಲ್ಲ ವ್ಯಾಪಿಸಿರಬೇಕು, ಕಾರಣರಹಿತವಾದದ್ದು ನಿತ್ಯವಾಗಿರಬೇಕು, ಚೇತನಾಚೇತನರೂಪವಾಗಿರುವ ಕ್ರಿಯಾಕಾರಕಘಲರೂಪವಾದ ಜಗತ್ತಿಗೆ ಕಾರಣವಾಗಿರುವದರಿಂದ ಸರ್ವಜ್ಞನೂ, ಸರ್ವಶಕ್ತಿಯುತವೂ ಆಗಿರಬೇಕು. ಸರ್ವವಸ್ತುಗಳೂ ಇದಕ್ಕೆ ಕಾರ್ಯವಾಗಿರುವದ ರಿಂದ ಇದು ಸರ್ವಾತ್ಮವಾಗಿರಬೇಕು ಎಂದು ಹೇಳಿದಂತೆ ಆಯಿತು.
-
ಸತ್ತು, ಪುರುಷ, ಆಕಾಶ, ಪ್ರಾಣ, ಜ್ಯೋತಿ - ಇಂಥ ಶಬ್ದಗಳಿಗೆ ರೂಢಿಯಲ್ಲಿರುವ ಅರ್ಥವು ಬೇರೆಯಾದರೂ ಇವು ಬ್ರಹ್ಮವನ್ನೇ ಹೇಳುತ್ತವ – ಎಂದು ಹಿಂದೆ ತಿಳಿಸಿದ್ಧಾಗಿದ.
ಅಧಿ. ೧. ಸೂ. ೧]
ವಿಷಯವೂ ಸಂಶಯವೂ
೨೪೫
ಬ್ರಹ್ಮಲಿಂಗಗಳುಳ್ಳ ಕೆಲವು ವಾಕ್ಯಗಳಲ್ಲಿ ಸಂದೇಹವು ಬರುವದರಿಂದ’ (ಅವು) ಬ್ರಹ್ಮಪರವೆಂದು ನಿರ್ಣಯಿಸಿದ್ಧಾಗಿದೆ. (ಈಗ) ಮತ್ತೂ ಬೇರೆಯ (ಕೆಲವು) ಅಸ್ಪಷ್ಟ ವಾದ ಬ್ರಹ್ಮಲಿಂಗಗಳುಳ್ಳ ವಾಕ್ಯಗಳಲ್ಲಿ (ಅವು) ಪರಬ್ರಹ್ಮವನ್ನು ತಿಳಿಸುತ್ತವೆಯೊ, ಅಥವಾ ಮತ್ತೆ ಯಾವದಾದರೊಂದು ವಸ್ತುವನ್ನು ತಿಳಿಸುತ್ತವೆಯೋ ? - ಎಂದು ಸಂದೇಹವಾಗುತ್ತದೆ. ಅವುಗಳ ನಿರ್ಣಯಕ್ಕಾಗಿ ಎರಡನೆಯ ಮೂರನೆಯ ಪಾದ ಗಳನ್ನು ಆರಂಭಿಸಿರುತ್ತದೆ.
೧. ಸರ್ವತ್ರ ಪ್ರಸಿದ್ಧಿ ಕರಣ (೧-೮) (ಛಾಂದೋಗ್ಯದ ೩-೧೪ ರಲ್ಲಿರುವ ಮನೋಮಯನು ಬ್ರಹ್ಮವೇ)
ಸರ್ವತ್ರ ಪ್ರಸಿದ್ಧೋಪದೇಶಾತ್ IIoll ೧. ಎಲ್ಲೆಲ್ಲಿಯೂ ಪ್ರಸಿದ್ಧವಾಗಿರುವದನ್ನೇ ಉಪದೇಶಿಸಿರುವದರಿಂದ (ಮನೋಮಯನು ಬ್ರಹ್ಮವೇ).
ವಿಷಯವೂ ಸಂಶಯವೂ
(ಭಾಷ್ಯ) ೧೪೬. ಇದಮ್ ಆಮ್ರಾಯತೇ ಸರ್ವಂ ಖಲ್ವಿದಂ ಬ್ರಹ್ಮ ತಜ್ಜಲಾನ್ ಇತಿಶಾಸ್ತ್ರ ಉಪಾಸೀತ | ಅಥ ಖಲು ಕ್ರತುಮಯಃ ಪುರುಷೋ ಯಥಾಕ್ರತುರಸ್ಮಿಲ್ಲೊಕೇ ಪುರುಷೋ ಭವತಿ ತಥೇತಃ ಪ್ರೇತ್ಯ ಭವತಿ ಸ ಕ್ರತುಂ ಕುರ್ವಿತ’ (ಛಾಂ. ೩-೧೪-೧), “ಮನೋಮಯಃ ಪ್ರಾಣಶರೀರೋ ಭಾರೂಪಃ’ (ಛಾರಿ. ೩-೧೪-೨) ಇತ್ಯಾದಿ | ತತ್ರ ಸಂಶಯಃ | ಕಿಮ್ ಇಹ ಮನೋಮಯಾದಿಭಿರ್ಧಮ್ರಃ ಶಾರೀರ ಆತ್ಮಾ ಉಪಾಸ್ಯನ ಉಪದಿಶ್ಯತೇ ಆಹೋಸ್ಟಿತ್ ಪರಂ ಬ್ರಹ್ಮ ? ಇತಿ ||
(ಭಾಷ್ಯಾರ್ಥ) ಇದು ಶ್ರುತಿಯಲ್ಲಿದೆ. ಇದೆಲ್ಲವೂ ತಜ್ಜಲಾನ್ ಆಗಿರುವದರಿಂದ ಬ್ರಹ್ಮವೇ
-
ಇವು ಬ್ರಹ್ಮದ ಧರ್ಮಗಳೇ ಎಂದು ಗೊತ್ತಾಗುವಂತೆ ಇರುವ ಧರ್ಮಗಳಿದ್ದರೂ ಬೇರೆಯ ಪದಾರ್ಥಗಳ ಧರ್ಮಗಳೂ ವಾಕ್ಯದಲ್ಲಿರುವದರಿಂದ ಸಂಶಯವುಂಟಾಗುತ್ತದೆ.
-
ಬ್ರಹ್ಮವನ್ನು ಹೇಳುತ್ತವೆಯೋ ಇಲ್ಲವೋ ? ಬೇರೆಯ ವಸ್ತುಗಳ ಧರ್ಮವನ್ನು ತಿಳಿಸುವ ಶಬ್ದಗಳಿರುವದರಿಂದ ಇವು ಬ್ರಹ್ಮ ಪರವಲ್ಲವೆಂದೇಕ ನಿರ್ಣಯಿಸಬಾರದು ? ಎಂಬುದು ಸಂಶಯದ ಆಕಾರವು.
೨೪೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಅಲ್ಲವ ? ಆದ್ದರಿಂದ ಶಾಂತನಾಗಿ ಉಪಾಸನಮಾಡಬೇಕು. ಇನ್ನು (ಈ) ಪುರುಷನು ಕ್ರತುಮಯನಾಗಿರುತ್ತಾನೆ; ಪುರುಷನು ಈ ಲೋಕದಲ್ಲಿ ಎಂಥ ಕ್ರತುವುಳ್ಳವನಾಗಿರು ವನೋ ಅದರಂತೆಯೇ ಇಲ್ಲಿಂದ ಹೊರಟುಹೋದ ಬಳಿಕ (ಪರಲೋಕದಲ್ಲಿ ಫಲ)ವಾಗುವದು. ಅವನು ಕ್ರತುವನ್ನು ಮಾಡಬೇಕು’ (ಛಾಂ. ೩-೧೪-೧), ‘‘ಮನೋಮಯನು, ಪ್ರಾಣಶರೀರನು, ಭಾರೂಪನು’ (ಛಾಂ. ೩-೧೪-೨) ಇತ್ಯಾದಿ. ಇಲ್ಲಿ ಸಂಶಯವೇನೆಂದರೆ ಇಲ್ಲಿ ಮನೋಮಯತ್ವವೇ ಮುಂತಾದ ಧರ್ಮಗಳಿಂದ ಶಾರೀರಾತ್ಮನನ್ನು ಉಪಾಸನೆಮಾಡಬೇಕೆಂದು ತಿಳಿಸಿದೆಯ, ಅಥವಾ ಪರಬ್ರಹ್ಮವನ್ನು (ತಿಳಿಸಿದಯ) ?
ಪೂರ್ವಪಕ್ಷ : ಶಾಂಡಿಲ್ಯವಿದ್ಯೆಯ ಮನೋಮಯನು ಶಾರೀರನೇ
(ಭಾಷ್ಯ) ೧೪೭. ಕಿಂ ತಾವತ್ ಪ್ರಾಪ್ತಮ್ ? ಶಾರೀರ ಇತಿ | ಕುತಃ ? ತಸ್ಯ ಹಿ ಕಾರ್ಯಕರಣಾಧಿಪತೇಃ ಪ್ರಸಿದ್ಧೋ ಮನಆದಿಭಿಃ ಸಂಬದ್ಧಃ ನ ಪರಸ್ಯ ಬ್ರಹ್ಮಣಃ | “ಅಪ್ರಾಣೋ ಹೈಮನಾಃ ಶುಭ್ರ:’ (ಮುಂ. ೨-೧-೨) ಇತ್ಯಾದಿಶ್ರುತಿಭ್ಯಃ | ನನು “ಸರ್ವಂ ಖಲ್ವಿದಂ ಬ್ರಹ್ಮ’ ಇತಿ ಸ್ವಶದ್ದೇನೈವ ಬ್ರಹ್ಮ ಉಪಾತ್ತಮ್ | ಕಥಮಿಹ ಶಾರೀರ ಆತ್ಮಾ ಉಪಾಸ್ಯ ಇತಿ ಆಶಜ್ಯತೇ ? ನೈಷ ದೂಷಃ | ನೇದಂ ವಾಕ್ಯಂ ಬ್ರಹ್ಮಪಾಸನಾವಿಧಿಪರಮ್, ಕಿಂ ತರ್ಹಿ ಶಮವಿಧಿಪರಮ್ | ಯತ್ಕಾರಣಂ ‘ಸರ್ವಂ ಖಲ್ವಿದಂ ಬ್ರಹ್ಮ ತಜ್ಜಲಾನಿತಿ ಶಾಸ್ತ್ರ ಉಪಾಸೀತ’’ ಇತ್ಯಾಹ | ಏತದುಕ್ತಂ ಭವತಿ - ಯಸ್ಮಾತ್ ಸರ್ವಮಿದಂ ವಿಕಾರಜಾತಂ ಬ್ರಹ್ಮವ ತಜ್ಜತ್ವಾತ್, ತಲ್ಲತ್ವಾತ್,
- ಸತ್ಯಸಂಕಲ್ಪನು, ಆಕಾಶಾತ್ಮನು, ಸರ್ವಕರ್ಮನು, ಸರ್ವಕಾಮನು, ಸರ್ವಗಂಧನು, ಸರ್ವರಸನು, ಇದಲ್ಲವನ್ನೂ ವ್ಯಾಪಿಸಿಕೊಂಡಿರುವವನು, ಅವಾಕಿಯು, ಅನಾದರನು. (೨) ; ಈ ಹೃದಯದೊಳಗೆ ಇರುವ ನನ್ನ ಆತ್ಮನು ಬತ್ತದ ಕಾಳಿಗಿಂತ, ಜವೆಗೋಧಿಯ ಕಾಳಿಗಿಂತ, ಸಾಸುವೆಯ ಕಾಳಿಗಿಂತ, ಸಾವೆಯಕಾಳಿಗಿಂತ ಅಥವಾ ಸಾವೆಯಕ್ಕಿಯ ಕಾಳಿಗಿಂತ ಸಣ್ಣವನು ; ಈ ಹೃದಯದೊಳಗೆ ಇರುವ ನನ್ನ ಆತ್ಮನು ಪೃಥಿವಿಗಿಂತ ದೊಡ್ಡವನು, ಅಂತರಿಕ್ಷಕ್ಕಿಂತ ದೊಡ್ಡವನು, ದ್ಯುಲೋಕ ಕ್ಕಿಂತ ದೊಡ್ಡವನು, ಈ ಲೋಕಗಳಿಗಿಂತ ದೊಡ್ಡವನು. (೩) ಸರ್ವಕರ್ಮನು, ಸರ್ವ ಕಾಮನು, ಸರ್ವಗಂಧನು, ಸರ್ವರಸನು, ಇದಲ್ಲವನ್ನೂ ವ್ಯಾಪಿಸಿಕೊಂಡಿರುವವನು, ಅವಾಕಿಯು, ಅನಾದರನು ; ಈತನು ಹೃದಯದೊಳಗಿರುವ ನನ್ನ ಆತ್ಮನು, ಇದೇ ಬ್ರಹ್ಮವು ; ಇದನ್ನು ಇಲ್ಲಿಂದ ಹೊರಟುಹೋಗಿ ಸೇರುವವನಾಗಿರುವನು ಎಂದು ಯಾವನಿಗೆ ನಿಶ್ಚಿತವಾಗಿರುವ ಸಂಶಯವಿರುವದಿಲ್ಲವೋ (ಅವನು ಸೇರುವನು). ಹೀಗೆಂದು ಶಾಂಡಿಲ್ಯನು (ಹೇಳಿದನು) - ಇಲ್ಲಿಯವರೆಗಿನ ವಾಕ್ಯವನ್ನು ಇತ್ಯಾದಿ ಎಂದು ಸಂಗ್ರಹಿಸಿದೆ.
ಅಧಿ. ೧. ಸೂ. ೧] ಪೂರ್ವಪಕ್ಷ : ಶಾಂಡಿಲ್ಯವಿದ್ಯಯ ಮನೋಮಯನು ಶಾರೀರನೇ ೨೪೭
ತದನತ್ವಾಚ ನ ಚ ಸರ್ವಸ್ಯ ಏಕಾತ್ಮತ್ತೇ ರಾಗಾದಯಃ ಸಂಭವನ್ತಿ, ತಸ್ಮಾತ್ ಶಾಸ್ತ್ರ ಉಪಾಸೀತ ಇತಿ | ನ ಚ ಶಮವಿಧಿಪರ ಸತಿ ಅನೇನ ವಾಕ್ಯನ ಬ್ರಹ್ಮಪಾಸನಂ ನಿಯನ್ನುಂ ಶಕ್ಯತೇ | ಉಪಾಸನಂ ತು ‘ಸ ಕ್ರತುಂ ಕುರ್ವಿತ’ ಇತ್ಯನೇನ ವಿಧೀ ಯತೇ | ಕ್ರತುಃ, ಸಂಕಲ್ಪ, ಧ್ಯಾನಮ್ ಇತ್ಯರ್ಥಃ | ತಸ್ಯ ಚ ವಿಷಯನ ಯತೇ ‘ಮನೋಮಯಃ ಪ್ರಾಣಶರೀರಃ’ ಇತಿ ಜೀವಲಿಜ್ಮ್ | ಅತೋ ಬ್ಯೂಮೋ ಜೀವವಿಷಯಮ್ ಏತದುಪಾಸನಮ್ ಇತಿ ||
(ಭಾಷ್ಯಾರ್ಥ) ಮೊದಲು ಏನು ಬಂದೊದಗುತ್ತದೆ ಎಂದರೆ ಶಾರೀರನೇ (ಉಪಾಸ್ಯ ನೆಂದು ತೋರುತ್ತದೆ). ಏಕೆ ? (ಏಕೆಂದರೆ), ಕಾರ್ಯಕರಣಗಳಿಗೆ ಒಡೆಯನಾಗಿರುವ ಅವನಿಗೇ ಮನಸ್ಸೇ ಮುಂತಾದವುಗಳ ಸಂಬಂಧವು ಪ್ರಸಿದ್ಧವಾಗಿರುತ್ತದೆ, ಪರಬ್ರಹ್ಮಕ್ಕೆ (ಸಂಬಂಧವು ಪ್ರಸಿದ್ಧವಾಗಿಲ್ಲ. ಏಕೆಂದರೆ (ಪರಮಾತ್ಮನು) “ಅಪ್ರಾಣನು, ಅಮನನು, ಶುಭ್ರನು’ (ಮುಂ. ೨-೧-೨) ಮುಂತಾದ ಶ್ರುತಿಗಳು (ಹಾಗೆನ್ನುತ್ತವೆ).
(ಆಕ್ಷೇಪ) :- “ಇದೆಲ್ಲವೂ ಬ್ರಹ್ಮವೇ” ಎಂದು ಬ್ರಹ್ಮವನ್ನು ತನ್ನ ಶಬ್ದ ದಿಂದಲೇ (ಶ್ರುತಿಯಲ್ಲಿ) ತೆಗೆದುಕೊಂಡಿರುತ್ತದೆ; (ಹೀಗಿರುವಲ್ಲಿ) ಇಲ್ಲಿ ಶಾರೀರಾತ್ಮ ನನ್ನು ಉಪಾಸನೆಮಾಡಬೇಕೆಂದು ಆಶಂಕೆಮಾಡುವದು ಹೇಗೆ ?
(ಪರಿಹಾರ) :- ಇದು ದೋಷವಲ್ಲ. ಈ ವಾಕ್ಯವು ಬ್ರಹ್ಮಪಾಸನೆಯನ್ನು ವಿಧಿಸುವ ತಾತ್ಪರ್ಯವುಳ್ಳದ್ದಲ್ಲ. ಮತ್ತೇನೆಂದರೆ ಶಮವನ್ನು ವಿಧಿಸುವದರಲ್ಲಿ ತಾತ್ಪರ್ಯವುಳ್ಳದ್ದು. ಯಾವ ಕಾರಣದಿಂದ (ಹೀಗೆನ್ನುವೆವೆಂದರೆ) ಇದೆಲ್ಲವೂ ತಜ್ಜಲಾನ್ ಆಗಿರುವದರಿಂದ ಬ್ರಹ್ಮವೇ; ಆದ್ದರಿಂದ ಶಾಂತನಾಗಿ ಉಪಾಸನೆ ಮಾಡಬೇಕು’ ಎಂದು ಹೇಳುತ್ತಿದೆ. ಇಲ್ಲಿ ಇಷ್ಟನ್ನು ಹೇಳಿದಂತೆ ಆಯಿತು; ಈ ಕಾರ್ಯಸಮೂಹವೆಲ್ಲವೂ ಅದರಿಂದ ಹುಟ್ಟಿರುವದರಿಂದಲೂ (ತಜ್ಞ), ಅದರಲ್ಲಿ ಲಯವಾಗುವದರಿಂದಲೂ (ತಲ್ಲ), ಅದರಲ್ಲಿಯೇ ಇದ್ದು (ತನ್ನ) ವ್ಯಾಪಾರವನ್ನು ಮಾಡಿಕೊಂಡಿರುವದರಿಂದಲೂ (ತದನ) ಬ್ರಹ್ಮವೇ ಆಗಿರುವದಷ್ಟ, ಎಲ್ಲವೂ ಒಂದೇ ಆಗಿದ್ದರೆ ರಾಗಾದಿಗಳು ಸಂಭವಿಸುವದೂ ಇಲ್ಲವಷ್ಟೆ; ಆದ್ದರಿಂದ ಶಾಂತನಾಗಿ ಉಪಾಸನೆ ಮಾಡಬೇಕು. (ಇದು) ಶಮವಿಧಿಪರವೆಂದಾದರೆ ಈ ವಾಕ್ಯದಿಂದ ಬ್ರಹ್ಮವನ್ನೇ ಉಪಾಸನೆ (ಮಾಡಬೇಕೆಂದು) ನಿಯಮಿಸುವದಕ್ಕೆ ಆಗಲಾರದು. ಉಪಾಸನೆ ಯನ್ನಾದರೋ ‘ಸ ಕ್ರತುಂ ಕುರ್ವಿತ’ (ಅವನು ಕ್ರತುವನ್ನು ಮಾಡಬೇಕು) ಎಂಬ
- ಕಾರ್ಯವು ಕಾರಣಕ್ಕಿಂತ ಭಿನ್ನವಲ್ಲವಾದ್ದರಿಂದ ಎಲ್ಲವೂ ಬ್ರಹ್ಮವೇ. 2. ಏಕೆಂದರೆ ಆಗ ವಾಕ್ಯಭೇದವಾಗುವದು, ಏಕವಾಕ್ಯತ ತಪ್ಪುವದು ಎಂದು ಭಾವ.
೨೪೮
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
(ವಾಕ್ಯದಿಂದ) ವಿಧಿಸಿರುತ್ತದೆ. ಕ್ರತು ಎಂದರೆ ಸಂಕಲ್ಪವು, ಧ್ಯಾನವು ಎಂದರ್ಥ. ಅದಕ್ಕೆ ವಿಷಯವಾಗಿ ‘ಮನೋಮಯನು, ಪ್ರಾಣಶರೀರನು’ ಎಂದು ಜೀವಲಿಂಗವನ್ನು ಶ್ರುತಿ (ಯಲ್ಲಿ ಹೇಳಿದೆ). ಆದ್ದರಿಂದ ಈ ಉಪಾಸನೆಯು ಜೀವವಿಷಯಕವಾದದ್ದು ಎಂದು ಹೇಳುತ್ತೇವೆ.
ಶ್ರುತಿಯಲ್ಲಿರುವ ಬ್ರಹ್ಮಲಿಂಗಗಳೆಂಬವೂ ಜೀವಲಿಂಗಗಳೇ
(ಭಾಷ್ಯ) ೧೪೮. “ಸರ್ವಕರ್ಮಾ , ಸರ್ವಕಾಮ:’ (ಛಾಂ. ೩-೧೪-೨) ಇತ್ಯಾದಪಿ ಶೂಯಮಾಣಂ ಪರ್ಯಾಯೇಣ ಜೀವವಿಷಯಮ್ ಉಪಪದ್ಯತೇ | ಏಷ ಮ
ಆತ್ಮಾನರ್ಹದರ್ಯೇಣೀಯಾನ್ ವೀರ್ವಾಯವಾದ್ಯಾ’ (ಛಾಂ.೩-೧೪-೨) ಇತಿ ಚ ಹೃದಯಾಯತನತ್ವಮ್ ಅಣೀಯಂ ಚ ಆರಾಗ್ರಮಾತ್ರಸ್ಯ ಜೀವಸ್ಯ ಅವಕಲ್ಪತೇ ನ ಅಪರಿಚ್ಛಿನ್ನಸ್ಯ ಬ್ರಹ್ಮಣಃ | ನನು ‘ಜ್ಯಾಯಾನ್ ಪೃಥಿವ್ಯಾಃ’ (ಛಾಂ. ೩-೧೪-೩) ಇತ್ಯಾದಪಿ ನ ಪರಿಚ್ಛಿನ್ನೇ ಅವಕಲ್ಪತೇ ಇತಿ | ಅತ್ರ ಬೂಮಃ | ನ ತಾವತ್ ಅಣೀಯಸ್ಕೃಂ ಜ್ಯಾಯಸ್ಯಂ ಚ ಉಭಯಮ್ ಏಕಸ್ಮಿನ್ ಸಮಾಶ್ರಯಿತುಂ ಶಕ್ಯಮ್ | ವಿರೋಧಾತ್ | ಅನ್ಯತರಾಶ್ರಯಣೇ ಚ ಪ್ರಥಮಶ್ರುತತ್ವಾತ್ ಅಣೀಯಂ ಯುಕ್ತಮ್ ಆಶ್ರಯಿತುಮ್ ಜ್ಯಾಯಸ್ಯಂ ತು ಬ್ರಹ್ಮಭಾವಾಪೇಕ್ಷಯಾ ಭವಿಷ್ಯತಿ ಇತಿ। ನಿಶ್ಚಿತೇ ಚ ಜೀವವಿಷಯ ಯತ್ ಅನ್ನೇ ಬ್ರಹ್ಮಸಂಕೀರ್ತನಮ್ ‘ಏತದ್ರಹ್ಮ” (ಛಾಂ.೩-೧೪-೪) ಇತಿ, ತದಪಿ ಪ್ರಕೃತಪರಾಮರ್ಶಾರ್ಥತ್ವಾತ್ ಜೀವವಿಷಯಮೇವ ತಸ್ಮಾತ್ ಮನೋಮಯಾದಿಭಿರ್ಧಮ್ರತಿ ಜೀವ ಉಪಾಸ್ಯಇತಿ ||
(ಭಾಷ್ಯಾರ್ಥ) ‘ಸರ್ವಕರ್ಮನು, ಸರ್ವಕಾಮನು’ (ಛಾಂ. ೩-೧೪-೨) ಮುಂತಾದದ್ದು
-
“ಸರ್ವಂ ಖಲ್ವಿದಂ ಬ್ರಹ್ಮ………” ಎಂಬ ವಾಕ್ಯದಲ್ಲಿ ವಿಧಿಯು ಶಮವಿಷಯಕವಾದ್ದರಿಂದ ಬ್ರಹ್ಮವನ್ನು ಉಪಾಸನಮಾಡಬೇಕೆಂದು ಸಿದ್ಧಿಸುವದಿಲ್ಲ ; ಸರ್ವಂ ಖಲು ಎಂಬುದು ಶಮವೇಕಿರಬೇಕು ಎಂಬುದಕ್ಕೆ ಹೇತುವನ್ನು ಹೇಳುತ್ತದೆ. ಈ ವಾಕ್ಯದಲ್ಲಿ ವಿಧಿ ಇದ್ದರೂ ವಿಹಿತವಾಗಿರುವ ವಿಷಯವು ಇಂಥದ್ದೊಂದು ಸ್ಪಷ್ಟವಾಗಿರುವದಿಲ್ಲ ಎಂದು ಭಾವ.
-
ಉಪನಿಷತ್ತಿನ ಭಾಷ್ಯದಲ್ಲಿ ಕೂತು ಎಂದರೆ ನಿಶ್ಚಯವು, ಅಧ್ಯವಸಾಯವು, ಹೀಗೇ ಬೇರೆಯಲ್ಲ ಎಂಬ ಅಲುಗಾಡದ ಪ್ರತ್ಯಯವು ಎಂದಿದೆ. ಇಲ್ಲಿ ಹೇಳಿರುವ ಸಂಕಲ್ಪವೂ ಅಥವಾ ಧ್ಯಾನವೂ ಅಲುಗಾಡದ ಶ್ರದ್ದೆಯೊಡಗೂಡಿದ ಉಪಾಸನೆಯೇ ಎಂದು ಭಾವ.
-
ಉಪಾಸ್ಯವನ್ನು ವರ್ಣಿಸುವಾಗ ಯಾವ ಬ್ರಹ್ಮಲಿಂಗವನ್ನೂ ಹೇಳಿಲ್ಲ ಎಂದು ಭಾವ.
ಅಧಿ. ೧. ಸೂ. ೧] ಶ್ರುತಿಯಲ್ಲಿರುವ ಬ್ರಹ್ಮಲಿಂಗಗಳೆಂಬವೂ ಜೀವಲಿಂಗಗಳೇ
೨೪೯
ಒಂದೊಂದಾಗಿ ಜೀವನ ವಿಷಯದಲ್ಲಿಯೂ ಆಗ)ಬಹುದಾಗಿದೆ. “ಈ ಹೃದಯ ದೊಳಗಿರುವ ಈ ನನ್ನ ಆತ್ಮನು ಬತ್ತದ (ಕಾಳಿಗಿಂತಲೂ) ಜವೆಯ (ಕಾಳಿಗಿಂತಲೂ) …. ಅಣುವಾಗಿರುವವನು" (ಛಾಂ. ೩-೧೪-೨) ಎಂದು ಹೃದಯವೆಂಬ ಆಶ್ರಯ ವುಳ್ಳವನಾಗಿರುವದೂ ಬಹಳ ಅಣುವಾಗಿರುವದೂ ದಬ್ಬಳದ ತುದಿಯಷ್ಟು (ಸಣ್ಣ ದಾಗಿರುವ) ಪ್ರಮಾಣದ ಜೀವನಿಗೆ ಹೊಂದುವದೇ ಹೊರತು ಅಪರಿಚ್ಛಿನ್ನವಾಗಿರುವ ಬ್ರಹ್ಮಕ್ಕೆ (ಹೊಂದುವ)ದಿಲ್ಲ.
- (ಆಕ್ಷೇಪ) :- (ಪೃಥಿವಿಗಿಂತ ದೊಡ್ಡವನು” (ಛಾಂ. ೩-೧೪-೩) ಎಂದು ಮುಂತಾಗಿರುವ (ವಿಶೇಷಣ)ವೂ ಪರಿಚ್ಛಿನ್ನವಾಗಿರುವ ಜೀವನಿಗೆ ಹೊಂದುವ ದಿಲ್ಲವಲ್ಲ !
(ಪರಿಹಾರ) :- ಇದಕ್ಕೆ (ಉತ್ತರ)ವನ್ನು ಹೇಳುತ್ತೇವೆ. ಮೊದಲನೆಯದಾಗಿ ಹೆಚ್ಚು ಅಣುವಾಗಿರುವದು ಹೆಚ್ಚು ದೊಡ್ಡವನಾಗಿರುವದು - (ಈ) ಎರಡೂ ಒಬ್ಬನಲ್ಲಿಯೇ (ಇದೆ ಎಂದು) ಇಟ್ಟುಕೊಳ್ಳುವದಕ್ಕೆ ಬರುವಹಾಗಿಲ್ಲ; ಏಕೆಂದರೆ (ಇವೆರಡಕ್ಕೂ ಪರಸ್ಪರ) ವಿರೋಧವಿದೆ. ಎರಡರಲ್ಲಿ ಒಂದನ್ನೇ ಆಶ್ರಯಿಸುವದಾದರೆ ಮೊದಲು ಶ್ರುತಿಯಲ್ಲಿರುವದರಿಂದ ಅನೇಯಸ್ಯವನ್ನೇ ಇಟ್ಟುಕೊಳ್ಳುವದು ಯುಕ್ತವು. ಜ್ಯಾಯಸ್ಯವೋ ಎಂದರೆ (ಜೀವನಿಗೆ ಮುಂದೆ ಬರುವ) ಬ್ರಹ್ಮ ಭಾವದ ಅಪೇಕ್ಷೆಯಿಂದ ಆಗಬಹುದು. (ಹೀಗೆ ವಾಕ್ಯವು) ಜೀವವಿಷಯವೆಂದು ನಿಶ್ಚಯವಾಗಿರುವದರಿಂದ ಕೊನೆಯಲ್ಲಿ ಇದು ಬ್ರಹ್ಮವು’ (ಛಾಂ.೩-೧೪-೪) ಎಂದು ಬ್ರಹ್ಮವನ್ನು ಹೇಳಿದೆ ಯಲ್ಲ, ಅದೂ ಪ್ರಕೃತವಾದದ್ದನ್ನು ಪರಾಮರ್ಶಿಸುವದರಿಂದ ಜೀವವಿಷಯವೇ (ಆಗುತ್ತದೆ). ಆದ್ದರಿಂದ ಮನೋಮಯತ್ವವೇ ಮುಂತಾದ ಧರ್ಮಗಳಿಂದ ಉಪಾಸ್ಯವಾಗಿರುವದು ಜೀವನೇ.
-
ಜೀವನು ಎಲ್ಲಾ ಕರ್ಮಗಳನ್ನೂ ಒಟ್ಟಿಗೆ ಮಾಡಲಾರನಾದರೂ ಒಂದೊಂದಾಗಿ ಮಾಡಬಹುದು ; ಎಲ್ಲಾ ಕಾಮಗಳನ್ನೂ ಒಟ್ಟಿಗೆ ಪಡೆಯಲಾರನಾದರೂ ಕ್ರಮದಿಂದ ಎಲ್ಲವನ್ನೂ ಪಡೆಯಬಹುದು.
-
ಶ್ವೇ. ೬-೮.
-
ಎಲ್ಲಾ ವಿಶೇಷಣಗಳೂ ಬ್ರಹ್ಮಕ್ಕೆ ಹೊಂದುವದಿಲ್ಲವೆಂಬುದು ದೋಷವಾದರೂ ಎಲ್ಲವೂ ಜೀವನಿಗೂ ಹೊಂದುವದಿಲ್ಲವಲ್ಲ ! - ಎಂದು ಶಂಕ.
-
ಯಾವಯಾವದು ಬ್ರಹ್ಮಲಿಂಗವೆಂದು ಹೇಳುವಿರೋ ಅದನ್ನೆಲ್ಲ ಜೀವನಿಗೂ ಭವಿಷ್ಯದೃಷ್ಟಿಯಿಂದ ಹೇಳಬಹುದು - ಎಂಬುದು ಪೂರ್ವಪಕ್ಷಿಯ ಆಶಯ.
-
ಏತತ್ ಎಂಬ ಸರ್ವನಾಮವು ಪ್ರಕೃತಪರಾಮರ್ಶಿ; ಪ್ರಕೃತವಾಗಿರುವವನು ಮನೋಮಯನಾದ ಜೀವನು.
೨೫೦
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಸಿದ್ಧಾಂತ : ಇಲ್ಲಿ ಉಪಾಸ್ಯನಾದ ಮನೋಮಯನು ಬ್ರಹ್ಮವೇ
೧೪೯. ಏವಂ ಪ್ರಾಪ್ತ ಬೂಮಃ | ಪರಮೇವ ಬ್ರಹ್ಮ ಮನೋಮಯಾದಿ ಭಿರ್ಧಮ್ರಃ ಉಪಾಸ್ಯಮ್ | ಕುತ: ? ಸರ್ವತ್ರ | ಪ್ರಸಿದ್ಧೋಪದೇಶಾತ್ | ಯತ್ ಸರ್ವೆಷು ವೇದಾನ್ತೇಷು ಪ್ರಸಿದ್ಧಂ ಬ್ರಹ್ಮಶಬ್ದಸ್ಯ ಆಲಮೃನಂ ಜಗತ್ಕಾರಣಮ್, ಇಹ ಚ ‘ಸರ್ವಂ ಖಲ್ವಿದಂ ಬ್ರಹ್ಮ” ಇತಿ ವಾಕ್ಕೋಪಕ್ರಮೇ ಶ್ರುತಮ್, ತದೇವ ಮನೋ ಮಯಾದಿಧರ್ಮೆ: ವಿಶಿಷ್ಟಮ್ ಉಪದಿಶ್ಯತೇ ಇತಿ ಯುಕ್ತಮ್ | ಏವಂ ಚ ಪ್ರಕೃತ ಹಾನಾಪ್ರಕೃತಪ್ರಕ್ರಿಯೇ ನ ಭವಿಷ್ಯತಃ | ನನು ವಾಕ್ಕೋಪಕ್ರಮೇ ಶಮವಿಧಿವಿವಕ್ಷಯಾ ಬ್ರಹ್ಮ ನಿರ್ದಿಷ್ಟಮ್, ನ ಸ್ವವಿವಕ್ಷಯಾ ಇತ್ಯುಕ್ತಮ್ | ಅತ್ರೋಚ್ಯತೇ | ಯದ್ಯಪಿ ಶಮವಿಧಿವಿವಕ್ಷಯಾ ಬ್ರಹ್ಮ ನಿರ್ದಿಷ್ಟಮ್, ತಥಾಪಿ ಮನೋಮಯತ್ವಾದಿಷು ಉಪದಿಶ್ಯಮಾನೇಷು ತದೇವ ಬ್ರಹ್ಮ ಸಂನಿಹಿತಮ್ ಭವತಿ | ಜೀವಸ್ತು ನ ಸಂನಿಹಿತಃ,
ನ ಚ ಸ್ವಶನ ಉಪಾತ್ತ ಇತಿ ವೈಷಮ್ಯಮ್ ||
(ಭಾಷ್ಯಾರ್ಥ) ಹೀಗೆಂದು (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು ) ಹೇಳುತ್ತೇವೆ. (ಇಲ್ಲಿ) ಮನೋಮಯವೇ ಮುಂತಾದ ಧರ್ಮಗಳಿಂದ ಉಪಾಸ್ಯ (ವೆಂದು ಹೇಳಿರುವದು) ಪರಬ್ರಹ್ಮವೇ. ಏಕೆ ? ಎಂದರೆ ಎಲ್ಲೆಲ್ಲಿಯೂ ಪ್ರಸಿದ್ಧವಾಗಿರುವದನ್ನು ಹೇಳಿರುವದರಿಂದ, ಸರ್ವವೇದಾಂತಗಳಲ್ಲಿಯೂ ಯಾವದು ಬ್ರಹ್ಮಶಬ್ದಕ್ಕೆ ವಿಷಯ ವಾದ ಜಗತ್ಕಾರಣವು ಪ್ರಸಿದ್ಧವಾಗಿರುತ್ತದೆಯೋ (ಯಾವದನ್ನು ) ಇಲ್ಲಿಯೂ ಇದೆ ಲ್ಲವೂ ಬ್ರಹ್ಮವೇ’’ ಎಂದು ವಾಕ್ಯದ ಉಪಕ್ರಮದಲ್ಲಿ ಶ್ರುತಿಯಲ್ಲಿ ಹೇಳಿದೆಯೋ, ಅದನ್ನೇ ಮನೋಮಯಾದಿಧರ್ಮಗಳಿಂದ ವಿಶಿಷ್ಟವಾಗಿ (ಉಪಾಸನೆಗಾಗಿ) ತಿಳಿಸಿ ಕೊಟ್ಟಿದೆ ಎಂಬುದು ಯುಕ್ತವು. ಹೀಗಾದರೆ ಪ್ರಕೃತವನ್ನು ಕೈಬಿಡುವದು, ಅಪ್ರಕೃತವನ್ನು
ಪ್ರಾರಂಭಿಸುವದು (ಎಂಬ ದೋಷ)ಗಳು ಆಗುವದಿಲ್ಲ.’
(ಪೂರ್ವಪಕ್ಷ :- ವಾಕ್ಯದ ಉಪಕ್ರಮದಲ್ಲಿ ಶ್ರಮವಿಧಿಯನ್ನು ತಿಳಿಸುವ
- ಇದೆಲ್ಲವೂ ಬ್ರಹ್ಮವು ಎಂದು ಪ್ರಕೃತವಾಗಿರುವಲ್ಲಿ ‘ಮನೋಮಯಃ’ ಎಂದು ಅಪ್ರಕೃತನಾದ ಜೀವನನ್ನು ಹೇಳುವದಕ್ಕೆ ಪ್ರಾರಂಭಿಸಿದ ಎಂಬ ದೋಷವು ಪೂರ್ವಪಕ್ಷದಲ್ಲಿ ಇರುತ್ತದೆ ಎಂದು ಭಾವ. ಇಲ್ಲಿ ಹಿಂದ ಗಾಯತ್ರೀವಾಕ್ಯದಲ್ಲಿ ‘ಗಾಯತ್ರೀ ವಾ’ (೩-೧೨-೧) ಎಂಬ ಖಂಡದಲ್ಲಿ ಪ್ರಕೃತವಾಗಿರುವ ಬ್ರಹ್ಮದ ಅನುವೃತ್ತಿಯು ಹದಿಮೂರನೆಯ ಖಂಡದಲ್ಲಿರುವ ಜ್ಯೋತಿರ್ವಾಹ್ಯದಂತ ಈ ಶಾಂಡಿಲ್ಯವಿದ್ಯೆಯಲ್ಲಿಯೂ ಇದೆ ಎಂದು (ಭಾ. ಭಾ. ೧೨೭) ರಲ್ಲಿ
ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಬೇಕು.
ಅಧಿ. ೧. ಸೂ. ೨] ಇಲ್ಲಿ ಹೇಳಿರುವ ಗುಣಗಳು ಬ್ರಹ್ಮಕ್ಕೆ ಹೊಂದುತ್ತವೆ
೨೫೧
ಅಭಿಪ್ರಾಯದಿಂದ ಬ್ರಹ್ಮವನ್ನು ತಿಳಿಸಿದೆಯೇ ಹೊರತು ಅದನ್ನೇ ಹೇಳಬೇಕೆಂಬ ಅಭಿಪ್ರಾಯದಿಂದಲ್ಲ ಎಂದು ಹೇಳಿದ್ದೆವಲ್ಲ !!
(ಪರಿಹಾರ) :- ಇದಕ್ಕೆ (ಉತ್ತರವನ್ನು) ಹೇಳುತ್ತೇವೆ. (ಅಲ್ಲಿ) ಶಮವಿಧಿಯನ್ನು ಹೇಳಬೇಕೆಂದು ಬ್ರಹ್ಮವನ್ನು ತಿಳಿಸಿದೆಯಂದಾಗಲಿ ; ಆದರೂ (ಇಲ್ಲಿ) ಮನೋಮಯಾದಿಗಳನ್ನು ತಿಳಿಸುವಾಗ ಅದೇ ಬ್ರಹ್ಮವೇ ಸನ್ನಿಹಿತವಾಗಿರು ತದೆ. ಜೀವನಾದರೋ ಸಂನಿಹಿತನೂ ಆಗಿರುವದಿಲ್ಲ, ತನ್ನ ಶಬ್ದದಿಂದ ಅವನನ್ನು (ಶ್ರುತಿಯಲ್ಲಿ) ತೆಗೆದುಕೊಂಡೂ ಇರುವದಿಲ್ಲ. ಹೀಗೆ (ಇಬ್ಬರಿಗೂ) ಹೆಚ್ಚು ಕಡಿಮೆಯಿದೆ.
ಇಲ್ಲಿ ಹೇಳಿರುವ ಗುಣಗಳು ಬ್ರಹ್ಮಕ್ಕೆ ಹೊಂದುತ್ತವೆ
ವಿವಕ್ಷಿತಗುಣೋಪಪಶ್ಚ ||೨|| ೨. ವಿವಕ್ಷಿತವಾದ ಗುಣಗಳು ಹೊಂದುವದರಿಂದಲೂ (ಮನೋ ಮಯನು ಬ್ರಹ್ಮವೇ).
ವಿವಕ್ಷಿತವೆಂದರೇನು ?
(ಭಾಷ್ಯ) ೧೫೦. ವಸ್ತುಮ್ ಇಷ್ಮಾ: ವಿವಕ್ಷಿತಾಃ | ಯದ್ಯಪಿ ಅಪೌರುಷೇಯೇ ವೇದೇ ವಸ್ತುರಭಾವಾತ್ ನ ಇಚ್ಛಾರ್ಥ ಸಂಭವತಿ, ತಥಾಪಿ ಉಪಾದಾನೇನ ಫಲೇನ ಉಪಚರ್ಯತೇ | ಲೋಕೇ ಹಿ ಯತ್ ಶಬ್ದಾಭಿಹಿತಮ್ ಉಪಾದೇಯಂ ಭವತಿ ತತ್ ವಿವಕ್ಷಿತಮ್ ಇತ್ಯುಚ್ಯತೇ | ಯತ್ ಅನುಪಾದೇಯಮ್, ತತ್ ಅವಿವಕ್ಷಿತಮ್ ಇತಿ | ತದ್ವತ್ ವೇರ್ದೇಪಿ ಉಪಾದೇಯನ ಅಭಿಹಿತಂ ವಿವಕ್ಷಿತಂ ಭವತಿ, ಇತರತ್ ಅವಿವಕ್ಷಿತಮ್ | ಉಪಾದಾನಾನುಪಾದಾನೇ ತು ವೇದವಾಕ್ಯತಾತ್ಪರ್ಯಾತಾತ್ಪರ್ಯಾ ಭ್ಯಾಮ್ ಅವಗಮ್ಮೇತೇ ||
(ಭಾಷ್ಯಾರ್ಥ) ಹೇಳುವದಕ್ಕೆ ಇಷ್ಟವಾದವು ವಿವಕ್ಷಿತ(ವೆನಿಸುವವು), ಅಪೌರುಷೇಯವಾದ
- ಬ್ರಹ್ಮವು ಸ್ವಪ್ರಧಾನವಲ್ಲದಿರುವಾಗ ಅದರ ಉಪಾಸನೆಯನ್ನು ಇಲ್ಲಿ ವಿಧಿಸಿದ ಎನ್ನುವದು ಹೇಗೆ ? - ಎಂದು ಶಂಕ.೨೫೨
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ವೇದದಲ್ಲಿ ವಕ್ರವಿಲ್ಲದ್ದರಿಂದ ಇಚ್ಛೆಯಂಬ ಅರ್ಥವು ಹೊಂದುವದಿಲ್ಲವೆಂಬುದು ನಿಜ ; ಆದರೂ ತೆಗೆದುಕೊಳ್ಳುವದೆಂಬ ಫಲದಿಂದ (ವಿವಕ್ಷಿತವೆಂಬ ಮಾತನ್ನು ) ಉಪಚಾರಕ್ಕೆ (ಪ್ರಯೋಗಿಸಿ)ರುತ್ತದೆ. ಲೋಕದಲ್ಲಿ ಶಬ್ದದಿಂದ ಹೇಳಿದ್ದು ಯಾವದು ತೆಗೆದುಕೊಳ್ಳತಕ್ಕದ್ದಾಗಿರುವದೋ ಅದನ್ನು ವಿವಕ್ಷಿತವೆನ್ನುತ್ತಾರೆ ; ಯಾವದು ತೆಗೆದುಕೊಳ್ಳತಕ್ಕದ್ದಲ್ಲವೋ ಅದನ್ನು ಅವಿವಕ್ಷಿತವೆನ್ನುತ್ತಾರಲ್ಲವೆ ? ಅದರಂತೆ ವೇದದಲ್ಲಿಯೂ ತೆಗೆದುಕೊಳ್ಳತಕ್ಕದ್ದೆಂದು ಹೇಳಿರುವದು ವಿವಕ್ಷಿತವಾಗಿರುತ್ತದೆ ; (ಅದಕ್ಕಿಂತ) ಬೇರೆ ಯಾದದ್ದು ಅವಿವಕ್ಷಿತ(ವಾಗಿರುತ್ತದೆ). ತೆಗೆದುಕೊಳ್ಳತಕ್ಕದ್ದು, ತೆಗೆದುಕೊಳ್ಳದಿರುವದು - ಎಂಬಿವಾದರೋ ವೇದವಾಕ್ಯದ ತಾತ್ಪರ್ಯ, ಅತಾತ್ಪರ್ಯ’ - ಇವುಗಳಿಂದ ಗೊತ್ತುಪಡಿಸತಕ್ಕವಾಗಿರುತ್ತವೆ.
ವಿವಕ್ಷಿತಗುಣಗಳು ಬ್ರಹ್ಮಕ್ಕೆ ಹೊಂದುತ್ತವೆ
(ಭಾಷ್ಯ) ೧೫೧. ತದಿಹ ಯೇ ವಿವಕ್ಷಿತಾ ಗುಣಾಃ, ಉಪಾಸನಾಯಾಮ್ ಉಪಾದೇಯನ ಉಪದಿಷ್ಮಾ: ಸತ್ಯಸಂಕಲ್ಪತ್ವ ಪ್ರವೃತಯಃ, ತೇ ಪರಸ್ಮಿನ್ ಬ್ರಹ್ಮಣಿ ಉಪಪದ್ಯ | ಸತ್ಯಸಂಕಲ್ಪತ್ವಂ ಹಿ ಸೃಷ್ಟಿಸ್ಥಿತಿಸಂಹಾರೇಷು ಅಪ್ರತಿಬದ್ಧಶಕ್ತಿತ್ವಾತ್ ಪರಮಾತ್ಮನ ಏವ ಅವಕಲ್ಬತೇ 1 ಪರಮಾತ್ಮಗುಣನ ಚ ‘ಯ ಆತ್ಮಾಪಹತಪಾದ್ಮಾ" (ಛಾಂ. ೮-೭ ೧) ಇತ್ಯತ್ರ ‘ಸತ್ಯಕಾಮಃ ಸತ್ಯಸಂಕಲ್ಪ: ಇತಿ ಶ್ರುತಮ್ | ಆಕಾಶಾತ್ಮಾ ಇತಿ ಆಕಾಶವತ್ ಆತ್ಮಾ ಅಸ್ಯೆ ಇತ್ಯರ್ಥಃ ಸರ್ವಗತತ್ವಾದಿಭಿಃ ಧರ್ಮಃ ಸಂಭವತಿ ಆಕಾಶನ ಸಾಮ್ಯಂ ಬ್ರಹ್ಮಣಃ | ‘ಜ್ಯಾಯಾನ್ ಪೃಥಿವ್ಯಾಃ’ ಇತ್ಯಾದಿನಾ ಚ ಏತದೇವ ದರ್ಶಯತಿ | ಯದಾಪಿ ಆಕಾಶಃ ಆತ್ಮಾ ಅಸ್ಯ ಇತಿ ವ್ಯಾಖ್ಯಾಯತೇ, ತದಾಪಿ ಸಂಭವತಿ ಸರ್ವಜಗತ್ಕಾರಣಸ್ಯ, ಸರ್ವಾತ್ಮನೋ ಬ್ರಹ್ಮಣಃ ಆಕಾಶಾತ್ಮತ್ವಮ್ | ಅತ ಏವ ‘ಸರ್ವಕರ್ಮಾ’ ಇತ್ಯಾದಿ | ಏವಮ್ ಇಹ ಉಪಾಸ್ಯತಯಾ ವಿವಕ್ಷಿತಾ ಗುಣಾಃ ಬ್ರಹ್ಮಣಿ ಉಪಪದ್ಯ ||
-
ತಾತ್ಪರ್ಯ, ಅತಾತ್ಪರ್ಯ - ಇವುಗಳನ್ನು ಉಪಕ್ರಮಾದಿಲಿಂಗಗಳಿಂದ ಗೊತ್ತುಪಡಿಸ ಬೇಕಾಗುವದು.
-
ಸತ್ಯಸಂಕಲ್ಪ ಎಂಬ ಶಬ್ದವನ್ನು ಭಾವಪ್ರಧಾನವಾಗಿ ನಿರ್ದೆಶಿಸಿರುತ್ತದೆಯೋ, ‘ಸತ್ಯಸಂಕಲ್ಪತ್ವ’ ಎಂದೇ ಆಚಾರ್ಯರು ಬರೆದಿದ್ದರೋ ತಿಳಿಯದು.
-
‘ಆಕಾಶಾತ್ಮಾದಿನಾ’ ಎಂಬ ಅಚ್ಚಿನ ಪಾಠದಲ್ಲಿ ಆದಿನಾ’ ಹೆಚ್ಚು.
-
ಅಚ್ಚಿನಲ್ಲಿ ‘ಯಸ್ಯ’ ಎಂದಿದೆ ; ಆಚಾರ್ಯರು ಇಲ್ಲಿ ‘ಅಸ್ಮ’ ಎಂದೇ ಬರದಿರಬೇಕೆಂದು ತೋರುತ್ತದೆ.
೨೫೩
ಅಧಿ. ೧. ಸೂ. ೨] ಮನೋಮಯಾದಿಲಿಂಗಗಳ ಗತಿ
(ಭಾಷ್ಯಾರ್ಥ) ಹೀಗಿರುವದರಿಂದ ಇಲ್ಲಿ ವಿವಕ್ಷಿತವಾದ, ಎಂದರೆ ಉಪಾಸನೆಯಲ್ಲಿ ತೆಗೆದು ಕೊಳ್ಳಬೇಕೆಂದು ತಿಳಿಸಿರುವ ಸತ್ಯಸಂಕಲ್ಪತ್ವವೇ ಮುಂತಾದ ಗುಣಗಳಿವೆಯಲ್ಲ, ಅವು ಪರಬ್ರಹ್ಮದಲ್ಲಿ ಹೊಂದುಗಡೆಯಾಗುತ್ತವೆ. ಹೇಗೆಂದರೆ, ಸತ್ಯಸಂಕಲ್ಪವು ಸೃಷ್ಟಿಸ್ಥಿತಿ ಸಂಹಾರಗಳಲ್ಲಿ (ಯಾವ) ಅಡ್ಡಿಯೂ ಇಲ್ಲದ ಶಕ್ತಿಯುಳ್ಳವನಾಗಿರುವದರಿಂದ ಪರಮಾತ್ಮನಿಗೇ ಹೊಂದುತ್ತದೆ. “ಯ ಆತ್ಮಾಪಹಪಾಪ್ಪಾ” (ಛಾಂ. ೮-೭-೧) ಎಂಬಲ್ಲಿ “ಸತ್ಯಕಾಮನು, ಸತ್ಯಸಂಕಲ್ಪನು’ ಎಂದು (ಇದನ್ನು ) ಪರಮಾತ್ಮನ ಗುಣವೆಂದು ಶ್ರುತಿಯಲ್ಲಿಯೂ ಹೇಳಿದೆ. ‘ಆಕಾಶಾತ್ಮನು’ ಎಂಬುದಕ್ಕೆ ಆಕಾಶದಂತೆ ಇರುವ ಆತ್ಮನು ಈತನದು ಎಂದರ್ಥ. ಸರ್ವಗತತ್ವವೇ ಮುಂತಾದ ಧರ್ಮ ಗಳಿರುವದರಿಂದ ಬ್ರಹ್ಮಕ್ಕೆ ಆಕಾಶದ ಸಾಮ್ಯವಿರುತ್ತದೆ. ‘ಪೃಥಿವಿಗಿಂತ ದೊಡ್ಡವನು’ ಮುಂತಾದ (ಶ್ರುತಿಭಾಗ)ದಿಂದ ಇದನ್ನೇ ತಿಳಿಸಿಕೊಟ್ಟಿರುತ್ತದೆ. ಯಾವಾಗ ಆಕಾಶವೇ ಈತನಿಗೆ ಆತ್ಮವು ಎಂದು ವ್ಯಾಖ್ಯಾನಮಾಡುವವೋ ಆಗಲೂ ಸರ್ವಜಗತ್ತಿಗೂ ಕಾರಣವಾಗಿರುವ ಸರ್ವಾತ್ಮವಾಗಿರುವ ಬ್ರಹ್ಮಕ್ಕೆ ಆಕಾಶಾತ್ಮತ್ವವು ಹೊಂದುತ್ತದೆ. ಆದ್ದರಿಂದಲೇ ‘ಸರ್ವಕರ್ಮನು’ ಮುಂತಾದದ್ದು (ಬ್ರಹ್ಮಕ್ಕೆ ಹೊಂದುತ್ತದೆ). ಹೀಗೆ ಇಲ್ಲಿ ಉಪಾಸ್ಯವೆಂದು ವಿವಕ್ಷಿತವಾಗಿರುವ ಗುಣಗಳು ಬ್ರಹ್ಮಕ್ಕೆ ಹೊಂದುತ್ತವೆ.
ಮನೋಮಯಾದಿಲಿಂಗಗಳ ಗತಿ
(ಭಾಷ್ಯ) ೧೫೨. ಮತ್ತು ಉಕ್ತಮ್ (ಮನೋಮಯಃ ಪ್ರಾಣಶರೀರಃ’ ಇತಿ ಜೀವ - ಲಿಜ್ಞಂ ನ ತದ್ ಬ್ರಹ್ಮಣಿ ಉಪಪದ್ಯತೇ ಇತಿ, ತದಪಿ ಬ್ರಹ್ಮಣಿ ಉಪಪದ್ಯತೇ ಇತಿ ಬೂಮಃ | ಸರ್ವಾತ್ಮತ್ವಾದ್ ಹಿ ಬ್ರಹ್ಮಣಃ ಜೀವಸಂಬದ್ದೀನಿ ಮನೋಮಯತ್ವಾದೀನಿ ಬ್ರಹ್ಮಸಂಬದ್ದೀನಿ ಭವನ್ತಿ | ತಥಾ ಚ ಬ್ರಹ್ಮವಿಷಯೇ ಶ್ರುತಿಸ್ಮತೀ ಭವತಃ - ‘ತ್ವಂ ಸ್ತ್ರೀ
ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ 1 ತ್ವಂ ಜೀರ್ಣೋ ದಣೇನ ವಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ’ || (ಶ್ವೇ. ೪-೩) ಇತಿ, ‘ಸರ್ವತಃ ಪಾಣಿಪಾದಂ ತತ್ ಸರ್ವತೋ5ಕ್ಷಿಶಿರೋಮುಖಮ್ | ಸರ್ವತಃ ಶ್ರುತಿಮಲ್ಲೊಕೇ ಸರ್ವಮಾವೃತ್ಯ ತಿಷ್ಠತಿ ||’ (ಗೀ. ೧೩-೧೩) ಇತಿ ಚ | ಅಪ್ರಾಣೋ ಹಮನಾಃ
1.ಸರ್ವಗತತ್ವ, ನಿತ್ಯತ್ವ, ಸೂಕ್ಷ್ಮತ್ವ - ಮುಂತಾದ ಧರ್ಮಗಳು ಆಕಾಶದಲ್ಲಿ ಇತರ ಭೂತಗಳ ಅಪೇಕ್ಷೆಯಿಂದ, ಆತ್ಮನಲ್ಲಿ ನಿರಪೇಕ್ಷವಾಗಿವ.
- ಆಕಾಶದಂತ ಸರ್ವಗತನು - ಎಂದು ಮುಂತಾಗಿರುವ ಸಾಮ್ಯವನ್ನೇ.
୭୫
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨. ಶುಭ್ರ’ (ಮುಂ. ೨-೧-೨) ಇತಿ ಶ್ರುತಿಃ ಶುದ್ಧ ಬ್ರಹ್ಮವಿಷಯಾ ಇಯಂ ತು ‘ಮನೋಮಯಃ ಪ್ರಾಣಶರೀರಃ’ ಇತಿ ಸಗುಣಬ್ರಹ್ಮವಿಷಯಾ - ಇತಿ ವಿಶೇಷಃ | ಅತಃ ವಿವಕ್ಷಿತಗುಣೋಪಪತೇಃ ಪರಮೇವ ಬ್ರಹ್ಮ ಇಹ ಉಪಾಸ್ಯನ ಉಪದಿಷ್ಟಮ್ ಇತಿ ಗಮ್ಯತೇ ||
(ಭಾಷ್ಯಾರ್ಥ) ಇನ್ನು ‘ಮನೋಮಯನು,’ ‘ಪ್ರಾಣರೂಪನು’ (ಛಾಂ. ೩-೧೪-೨) ಎಂಬುದು ಜೀವಲಿಂಗವು, ಅದು ಬ್ರಹ್ಮಕ್ಕೆ ಹೊಂದುಗೆಯಾಗುವದಿಲ್ಲ ಎಂದು (ಪೂರ್ವಪಕ್ಷ ದಲ್ಲಿ) ಹೇಳಿತ್ತಷ್ಟ ; ಅದೂ ಬ್ರಹ್ಮಕ್ಕೆ ಹೊಂದುತ್ತದೆ ಎಂದು ಹೇಳುತ್ತೇವೆ. ಹೇಗೆಂದರೆ ಬ್ರಹ್ಮವು ಸರ್ವಾತ್ಮವಾಗಿರುವದರಿಂದ ಜೀವಸಂಬದ್ದಗಳಾದ ಮನೋಮಯಾದಿಗಳು ಬ್ರಹ್ಮಸಂಬದ್ಧವೂ ಆಗುತ್ತವೆ. ಆದ್ದರಿಂದಲೇ ಬ್ರಹ್ಮದ ವಿಷಯದಲ್ಲಿ ನೀನು ಸ್ತ್ರೀಯು, ನೀನು ಪುರುಷನು, ನೀನೇ ಕುಮಾರನು ಅಥವಾ ಕುಮಾರಿಯು ; ನೀನು ಮುದುಕನಾಗಿ ಕೋಲನ್ನು (ಹಿಡಿದುಕೊಂಡು) ಓಡಾಡುವೆ, ನೀನು ಹುಟ್ಟಿ ವಿಶ್ವತೋಮುಖನಾಗಿರುವೆ’ (ಶ್ವೇ. ೪-೩) ಎಂದೂ ಅದು ಎಲ್ಲಾ ಕಡೆಯಲ್ಲಿಯೂ ಕೈಕಾಲುಗಳುಳ್ಳದ್ದು, ಎಲ್ಲಾ ಕಡೆಗಳಲ್ಲಿಯೂ ಕಣ್ಣು ತಲೆಬಾಯಿಗಳುಳ್ಳದ್ದು, ಎಲ್ಲಾ ಕಡೆ ಯಲ್ಲಿಯೂ ಕಿವಿಯುಳ್ಳದ್ದು, ಲೋಕದಲ್ಲಿ ಎಲ್ಲವನ್ನೂ ಆವರಿಸಿಕೊಂಡಿರುವದು" (ಗೀ. ೧೩-೧೩) ಎಂದೂ ಶ್ರುತಿಸ್ಕೃತಿಗಳಿರುವವು. “ಅಪ್ರಾಣನು, ಅಮನನು, ಶುಭನು’ (ಮುಂ.೨-೧-೨) ಎಂಬುದು ಶುದ್ಧ ಬ್ರಹ್ಮವಿಷಯಕವಾದದ್ದು, “ಮನೋ ಮಯನು, ಪ್ರಾಣಶರೀರನು’ ಎಂಬ ಇದಾದರೋ ಸಗುಣಬ್ರಹ್ಮವಿಷಯಕವಾದದ್ದು . ಇದೇ (ಇಲ್ಲಿರುವ) ವಿಶೇಷವು. ಆದ್ದರಿಂದ ವಿವಕ್ಷಿತವಾದ ಗುಣಗಳು ಹೊಂದುವದ ರಿಂದ (ಇಲ್ಲಿ) ಪರಬ್ರಹ್ಮವನ್ನೇ ಉಪಾಸ್ಯವಾಗಿ ಉಪದೇಶಿಸಿರುತ್ತದೆ ಎಂದು ನಿಶ್ಚಯವಾಯಿತು.
ಮನೋಮಯನು ಜೀವನಲ್ಲವೆಂಬುದಕ್ಕೆ ಯುಕ್ತಿಗಳು
ಅನುವಪತ್ತೇಸ್ತು ನ ಶಾರೀರಃ ||೩||
1.ಎಲ್ಲವೂ ಬ್ರಹ್ಮದ ಕಾರ್ಯವಾಗಿರುವದರಿಂದ ಯಾವದರ ಧರ್ಮವನ್ನಾದರೂ ಬ್ರಹ್ಮದ ಧರ್ಮವೆಂದು ಹೇಳಬಹುದಾಗುವದು. ಆಗ ಮತ್ತೊಂದರ ಧರ್ಮವೆಂಬ ವ್ಯವಹಾರವೇ ಇಲ್ಲವಾಗುವದಿಲ್ಲವ ? - ಎಂದು ಶಂಕಿಸಬಾರದು. ಬ್ರಹ್ಮದ ಧರ್ಮವೆಂದು ವಿವಕ್ಷಿತವಾಗಿದ್ದರೆ ಉಪಾಸನೆಗಾಗಿ ಅದನ್ನು ಬ್ರಹ್ಮಧರ್ಮವೆಂದು ಭಾವಿಸಬೇಕು ; ಅವಿವಕ್ಷಿತವಾಗಿರುವ ಧರ್ಮಗಳು .
ಅಬ್ರಹ್ಮದವು ಎಂಬ ವ್ಯವಸ್ಥೆಯು ಅದೈತಸಿದ್ಧಾಂತದಲ್ಲಿಯೂ ಇರುತ್ತದೆ.
ಅಧಿ. ೧. ಸೂ. ೩]
ಶಾರೀರನೆಂಬುದರ ಅಭಿಪ್ರಾಯ
೨೫೫
(
೩. ಆದರೆ (ಇವು) ಹೊಂದದೆ ಇರುವದರಿಂದ (ಮನೋಮಯನು ) ಶಾರೀರನಲ್ಲ.
(ಭಾಷ್ಯ) ೧೫೩. ಪೂರ್ವಣ ಸೂತ್ರೇಣ ಬ್ರಹ್ಮಣಿ ವಿವಕ್ಷಿತಾನಾಂ ಗುಣಾನಾಮ್ ಉಪ ಪ: ಉಕ್ತಾ | ಅನೇನ ತು ಶಾರೀರೇ ತೇಷಾಮ್ ಅನುಪಪತ್ತಿಃ ಉಚ್ಯತೇ | ತುಶಬ್ಲೂವಧಾರಣಾರ್ಥಃ | ಬ್ರಹ್ಮವ ಉಕ್ರೇನ ನ್ಯಾಯೇನ ಮನೋಮಯಾದಿ ಗುಣಮ್, ನ ತು ಶಾರೀರೋ ಜೀವೋ ಮನೋಮಯಾದಿಗುಣಃ | ಯತ್ಕಾರಣಂ “ಸತ್ಯಸಂಕಲ್ಪಃ, ಆಕಾಶಾತ್ಮಾ, ಅವಾಕೀ, ಅನಾದರಃ, ಜ್ಯಾಯಾನ್ ಪೃಥಿವ್ಯಾ’’ ಇತಿ ಚೈವಂಜಾತೀಯಕಾ ಗುಣಾಃ ನ ಶಾರೀರೇ ಆಸ್ಟ್‌ನ ಉಪಪದ್ಯ 11
(ಭಾಷ್ಯಾರ್ಥ) ಹಿಂದಿನ ಸೂತ್ರದಲ್ಲಿ ವಿವಕ್ಷಿತವಾದ ಗುಣಗಳು ಬ್ರಹ್ಮಕ್ಕೆ ಹೊಂದುತ್ತವೆ ಎಂದು ಹೇಳಿರುತ್ತದೆ. ಈ (ಸೂತ್ರದಲ್ಲಾದರೋ ಅವು ಶಾರೀರನಿಗೆ ಹೊಂದುವದಿಲ್ಲ ವೆಂದು ಹೇಳಲಾಗುತ್ತದೆ. (ಇಲ್ಲಿರುವ) ತುಶಬ್ದವು ಅವಧಾರಣೆಗಾಗಿ (ಬಂದಿದ). ಮೇಲೆ ಹೇಳಿರುವ ಯುಕ್ತಿಯಿಂದ ಬ್ರಹ್ಮವೇ ಮನೋಮಯಾದಿಗುಣಗಳುಳ್ಳದ್ದೇ ಹೊರತು, ಶಾರೀರನು ಎಂದರೆ ಜೀವನು, ಮನೋಮಯಾದಿಗುಣಗಳುಳ್ಳವನಲ್ಲ.! ಯಾವ ಕಾರಣದಿಂದ ಎಂದರೆ ‘ಸತ್ಯಸಂಕಲ್ಪನು, “ಆಕಾಶಾತ್ಮನು,’ ‘ಅವಾಕಿಯು,? *ಅನಾದರನು’ ಮತ್ತು ‘ಪೃಥಿವಿಗಿಂತ ದೊಡ್ಡವನು’ ಎಂಬೀ ಬಗೆಯ ಗುಣಗಳು
ಶಾರೀರನಿಗೆ ಸರಿಯಾಗಿ ಹೊಂದುವದಿಲ್ಲ.
ಶಾರೀರನೆಂಬುದರ ಅಭಿಪ್ರಾಯ
(ಭಾಷ್ಯ) ೧೫೪. ಶಾರೀರಃ ಇತಿ | ಶರೀರೇ ಭವಃ ಇತ್ಯರ್ಥ: | ನನು ಈಶ್ವರೋಪಿ ಶರೀರೇ ಭವತಿ | ಸತ್ಯಂ ಶರೀರೇ ಭವತಿ, ನ ತು ಶರೀರೇ ಏವ ಭವತಿ | ‘ಜ್ಯಾಯಾನ್ ಪೃಥಿವ್ಯಾ ಜ್ಯಾಯಾನರಿಕ್ಷಾತ್,’ ‘ಆಕಾಶವತ್ಸರ್ವಗತಶ್ಚ ನಿತ್ಯಃ’ (ಶತ ಬ್ರಾ.
-
ಜೀವನು ಮನೋಮಯನೆಂದು ಪ್ರಸಿದ್ಧವಾಗಿರುವದರಿಂದ ಅವನು ಮನೋಮಯ ನಲ್ಲವೆಂಬದೇನೂ ವಿವಕ್ಷಿತವಲ್ಲ ; ಮನೋಮಯಾದಿಗುಣಗಳುಳ್ಳವನೆಂದು ಉಪಾಸನಮಾಡ ಬೇಕೆಂದು ಇಲ್ಲಿ ಹೇಳಿರುವದು ಜೀವನನ್ನ ಎಂಬಿದೇ ಅಭಿಪ್ರಾಯವು.
-
ವಾಕ್ಕಿಲ್ಲದವನು. 3. ಹೊಸದಾಗಿ ಏನನ್ನಾದರೂ ಪಡೆಯುವ ಸಂಭ್ರಮವಿಲ್ಲದವನು.
೨೫೬
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
೧೦-೬-೩-೨) ಇತಿ ಚ ವ್ಯಾಪಿತೃಶ್ರವಣಾತ್ | ಜೀವಸ್ತು ಶರೀರೇ ಏವ ಭವತಿ | ತಸ್ಯ ಭೋಗಾಧಿಷ್ಠಾನಾತ್ ಶರೀರಾದನ್ಯತ್ರ ವ್ಯತ್ಯಭಾವಾತ್ ||
(ಭಾಷ್ಮಾರ್ಥ) ಶಾರೀರನು ಎಂದರೆ ಶರೀರದಲ್ಲಿರುವವನು ಎಂದರ್ಥ. (ಆಕ್ಷೇಪ) :- ಈಶ್ವರನೂ ಶರೀರದಲ್ಲಿರುತ್ತಾನಲ್ಲ !
(ಪರಿಹಾರ) :- ನಿಜ, ಶರೀರದಲ್ಲಿರುತ್ತಾನೆ ; ಆದರೆ ಶರೀರದಲ್ಲಿಯೇ ಇರುವದಿಲ್ಲ. ಏಕೆಂದರೆ ‘ಪೃಥಿವಿಗಿಂತ ದೊಡ್ಡವನು, ಅಂತರಿಕ್ಷಕ್ಕಿಂತ ದೊಡ್ಡವನು” (ಛಾಂ.೩-೧೪-೩), ಆಕಾಶದಂತ ಸರ್ವಗತನೂ ನಿತ್ಯನೂ ಆಗಿರುತ್ತಾನೆ’’ (ಶತ. ಬ್ರಾ. ೧೦-೬-೩-೨) ಎಂದು (ಅವನು ಸರ್ವವ್ಯಾಪಿ ಎಂದು ಶ್ರುತಿಯಲ್ಲಿದೆ. ಜೀವ ನಾದರೋ ಶರೀರದಲ್ಲಿಯೇ ಇರುತ್ತಾನೆ ; ಏಕೆಂದರೆ ಅವನಿಗೆ ಭೋಗಕ್ಕಾಶ್ರಯ ವಾಗಿರುವ ಶರೀರಕ್ಕಿಂತ ಬೇರೆಯ ಕಡೆಯಲ್ಲಿ ವ್ಯಾಪಾರವಿರುವದಿಲ್ಲ.
ಕರ್ಮಕರ್ತವ್ಯಪದೇಶಾಚ್ಚ |೪|| ೪. ಕರ್ಮಕರ್ತವ್ಯಪದೇಶವಿರುವದರಿಂದಲೂ (ಈ ಮನೋಮಯನು ಶಾರೀರನಲ್ಲ).
(ಭಾಷ್ಯ) ೧೫೫. ಇತಶ್ಚ ನ ಶಾರೀರೋ ಮನೋಮಯಾದಿಗುಣಃ | ಯಸ್ಮಾತ್ ಕರ್ಮಕರ್ತವ್ಯಪದೇಶೋ ಭವತಿ “ಏತಮಿತಃ ಪ್ರೇತ್ಯಾಭಿಸಂಭವಿತಾಸ್ಮಿ" (ಛಾಂ. ೩ ೧೪-೪) ಇತಿ | ‘ಏತಮ್’ ಇತಿ ಪ್ರಕೃತಂ ಮನೋಮಯಾದಿಗುಣಮ್ ಉಪಾಸ್ಯಮಾತ್ಮಾನಂ ಕರ್ಮನ ಪ್ರಾತೃತ್ವನ ವ್ಯಪದಿಶತಿ | ಅಭಿಸಂಭವಿತಾಸ್ಮಿ’ ಇತಿ ಶಾರೀರಮ್ ಉಪಾಸಕಂ ಕರ್ತನ ಪ್ರಾಪಕತ್ವನ | ಅಭಿಸಂಭವಿತಾಸ್ಮಿ’ ಇತಿ ಪ್ರಾಪ್ತಾ ಅಸ್ಮಿ ಇತ್ಯರ್ಥಃ | ನ ಚ ಸತ್ಯಾಂ ಗತೆ ಏಕಸ್ಯ ಕರ್ಮಕರ್ತವ್ಯಪದೇಶ ಯುಕ್ತಃ | ತಥಾ ಉಪಾಖ್ಯೋಪಾಸಕಭಾವೋSಪಿ ಭೇದಾಧಿಷ್ಠಾನ ಏವ | ತಸ್ಮಾದಪಿ ನ ಶಾರೀರೋ ಮನೋಮಯಾದಿವಿಶಿಷ್ಟ: ||
(ಭಾಷ್ಯಾರ್ಥ) | ಈ ಕಾರಣದಿಂದಲೂ ಶಾರೀರನು (ಇಲ್ಲಿ ಹೇಳಿರುವ) ಮನೋಮಯಾದಿ ಗುಣಗಳುಳ್ಳ (ಉಪಾಸ್ಯನಲ್ಲ). ಏಕೆಂದರೆ (ಇಲ್ಲಿ ) “ಈತನನ್ನು ಇಲ್ಲಿಂದ ಹೊರಟು ಹೋಗಿ ಸೇರುವವನಾಗಿರುವನು" (ಛಾಂ. ೩-೧೪-೪) ಎಂದು ಕರ್ಮಕರ್ತ
ಅಧಿ. ೧. ಸೂ. ೫]
ಶಾರೀರನೆಂಬುದರ ಅಭಿಪ್ರಾಯ
೨೫೭
ವ್ಯಪದೇಶವಿರುತ್ತದೆ. ‘ಏತಮ್’ (ಈತನನ್ನು) ಎಂದು ಪ್ರಕೃತನಾಗಿರುವ ಮನೋ ಮಯಾದಿಗುಣವುಳ್ಳ ಉಪಾಸ್ಯನಾದ ಆತ್ಮನನ್ನು ಕರ್ಮವಾಗಿ, ಪ್ರಾಸ್ಮನೆಂದು ಹೇಳಿರುತ್ತದೆ. ಅಭಿಸಂಭವಿತಾಸ್ಮಿ’ (ಸೇರುವವನಾಗಿರುವೆನು) ಎಂದು ಉಪಾಸಕನಾದ ಶಾರೀರನನ್ನು ಕರ್ತವಾಗಿ, ಪ್ರಾಪಕನಾಗಿ, ಹೇಳಿರುತ್ತದೆ. ‘ಅಭಿಸಂಭವಿತಾಸ್ಮಿ’ ಎಂದರೆ ಪಡೆಯುವವನಾಗಿರುವೆನು ಎಂದರ್ಥ. (ಬೇರೆಯ) ಗತಿಯಿರುವಲ್ಲಿ ಒಬ್ಬನೇ ಕರ್ಮವು ಮತ್ತು ಕರ್ತ ಎಂದು ಹೇಳುವದು ಸರಿಯಲ್ಲ. ಇದರಂತೆ ಉಪಾಖ್ಯೋಪಾಸಕಭಾವವೂ ಭೇದವನ್ನಾಶ್ರಯಿಸಿಯೇ ಇರುತ್ತದೆ. ಆದ್ದರಿಂದಲೂ (ಇಲ್ಲಿರುವ) ಮನೋಮಯ ತ್ಯಾದಿ(ಧರ್ಮ)ಗಳಿಂದ ವಿಶಿಷ್ಟನು ಶಾರೀರನಲ್ಲ.
ಶಬ್ದವಿಶೇಷಾತ್ ||೫|| ೫. ಶಬ್ದವಿಶೇಷವಿರುವದರಿಂದಲೂ (ಇವನು ಶಾರೀರನಲ್ಲ).
(ಭಾಷ್ಯ) ೧೫೬. ಇತಶ್ಚ ಶಾರೀರಾದನ್ನೋ ಮನೋಮಯಾದಿಗುಣಃ | ಯಸ್ಮಾತ್ ಶಬ್ದ ವಿಶೇಷೋ ಭವತಿ ಸಮಾನಪ್ರಕರಣೇ ಶ್ರುತ್ಯನ್ತರೇ - ‘ಯಥಾ ಪ್ರೀಹಿರ್ವಾ ಯವೋ ವಾ ಶ್ಯಾಮಾಕೋ ವಾ ಶ್ಯಾಮಾಕತಣ್ಣುಲೋ ವೈವಮಯಮನ್ತರಾತ್ಮನ್ ಪುರುಷೋ ಹಿರಣ್ಮಯಃ ’ (ಶತ. ಬ್ರಾ. ೧೦-೬-೩-೨) ಇತಿ | ಶಾರೀರಸ್ಯಾತ್ಮನೋ ಯಃ ಶಬ್ದಃ ಅಭಿಧಾಯಕಃ ಸಪ್ತಮ್ಯ: ‘ಅನ್ತರಾತ್ಮನ್’ ಇತಿ, ತಸ್ಮಾತ್ ವಿಶಿಷ್ಟ ಅನ್ಯಃ ಪ್ರಥಮಾನ್ತ: ಪುರುಷಶಬ್ಲೊ ಮನೋಮಯಾದಿವಿಶಿಷ್ಟಸ್ಯ ಆತ್ಮನೋಭಿ ಧಾಯಕಃ | ತಸ್ಮಾತ್ ತಯೋರ್ಭೆದೋSಧಿಗಮ್ಯತೇ ||
(ಭಾಷ್ಯಾರ್ಥ) ಈ ಕಾರಣದಿಂದಲೂ ಮನೋಮಯಾದಿಗುಣಗಳುಳ್ಳವನು ಶಾರೀರಾತ್ಮ ನಿಗಿಂತ ಬೇರೆಯೇ. ಏಕೆಂದರೆ ಬೇರೊಂದು ಶ್ರುತಿಯಲ್ಲಿ ಇದೇ ಬಗೆಯ ಪ್ರಕರಣ ದಲ್ಲಿ “ಬತ್ತದ ಕಾಳಾಗಲಿ, ಜವೆಯ ಕಾಳಾಗಲಿ, ಸಾವೆಯ ಕಾಳಾಗಲಿ, ಸಾವೆಯಕ್ಕಿಯ ಕಾಳಾಗಲಿ ಹೇಗೆ (ಸಣ್ಣದಾಗಿ) ಇರುವದೋ ಹೀಗೆಯೇ ಈ ಆತ್ಮನೊಳಗಿರುವ ಹಿರಣ್ಮಯ ಪುರುಷನೂ ಇರುವನು” (ಶತ. ಬ್ರಾ. ೧೦-೬-೩-೨) ಎಂಬ ಶಬ್ದ ವಿಶೇಷವು ಇರುತ್ತದೆ. ಶಾರೀರಾತ್ಮನನ್ನು ಹೇಳುವ ಸಪ್ತಮ್ಯಂತವಾದ “ಅಂತರಾತ್ಮನ್’ ಎಂಬ ಶಬ್ದವಿದೆಯಲ್ಲ, ಅದಕ್ಕಿಂತ ಬೇರೆಯಾದ ಪ್ರಥಮಾಂತ ವಾದ ಪುರುಷಶಬ್ದವು ಮನೋಮಯಾದಿವಿಶಿಷ್ಯನಾದ ಆತ್ಮನನ್ನು ಹೇಳುವ
೨೫೮
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. ವಿಶಿಷ್ಟವಾದ ವಾಚಕವಾಗಿರುತ್ತದೆ. ಆದ್ದರಿಂದ ಅವರಿಬ್ಬರಿಗೂ ಭೇದವಿದೆ ಎಂದು ನಿಶ್ಚಯವಾಗುತ್ತದೆ.’
ಸ್ಮೃತೇಶ್ಚ ||೬|| ೬. ಸ್ಮತಿಯಿಂದಲೂ (ಇದು ಸಿದ್ಧವಾಗುತ್ತದೆ).
(ಭಾಷ್ಯ) ೧೫೭. ಸ್ಮೃತಿಶ್ಚ ಶಾರೀರಪರಮಾತ್ಮನೋರ್ಭೆದಂ ದರ್ಶಯತಿ - “ಈಶ್ವರಃ ಸರ್ವಭೂತಾನಾಂ ಹೃದ್ದೇಶೇಂರ್ಜುನ ತಿಷ್ಠತಿ | ಭ್ರಾಮಯನ್ ಸರ್ವಭೂತಾನಿ ಯಾರೂಢಾನಿ ಮಾಯಯಾ 11” (ಗೀ, ೧೮-೬೧) ಇತ್ಯಾದ್ಯಾ ||
(ಭಾಷ್ಯಾರ್ಥ) “ಅರ್ಜುನನೆ, ಸರ್ವಭೂತಗಳ ಪ್ರದೇಶದಲ್ಲಿಯೂ ಈಶ್ವರನು ಯಂತ್ರಾರೂಢ ರಾಗಿರುವ ಸರ್ವಭೂತಗಳನ್ನೂ ಮಾಯೆಯಿಂದ ಭ್ರಾಂತಿಗೊಳಿಸುತ್ತಾ ಇದ್ದು ಕೊಂಡಿರುವನು” (ಗೀ, ೧೮-೬೧) ಎಂದು ಮುಂತಾಗಿರುವ ಸ್ಮತಿಯೂ ಶಾರೀರ ಪರಮಾತ್ಮರಿಗೆ ಭೇದವನ್ನು ತಿಳಿಸುತ್ತದೆ.
ಶಾರೀರನೆಂದರೆ ಯಾರು ?
(ಭಾಷ್ಯ) ೧೫೮. ಅತ್ರಾಹ - ಕಃ ಪುನರಯಂ ಶಾರೀರೋ ನಾಮ ಪರಮಾತ್ಮನೋನ್ಯಃ , ಯಃ ಪ್ರತಿಷಿಧ್ಯತೇ “ಅನುಪಪತ್ತೇಸ್ತುನಶಾರೀರಃ’ (೧-೨-೩) ಇತ್ಯಾದಿನಾ? ಶ್ರುತಿಸ್ತು - ‘ನಾನ್ಮೂಲತೋಸ್ತಿ ಇಷ್ಮಾ ನಾನ್ನೋತೋSಸ್ತಿ ಪ್ರೋತಾ’’ (ಬೃ. ೩-೭-೨೩) ಇವಂಜಾತೀಯಕಾ ಪರಮಾತ್ಮನೋನ್ಯಮ್ ಆತ್ಮಾನಂ ವಾರಯತಿ । ತಥಾ ಸ್ಮತಿರಪಿ - “ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ ಸರ್ವಕ್ಷೇತೇಷು ಭಾರತ’ (ಗೀ. ೧೩-೨) ಇತ್ಯವಂಜಾತೀಯಕಾ ಇತಿ | ಅಪ್ರೋಚ್ಯತೇ | ಸತ್ಯಮೇತತ್ | ಪರ ಏವ ಆತ್ಮಾ ದೇಹೇಯಮನೋಬುದುಪಾಧಿಭಿಃ ಪರಿಚ್ಛದ್ಯಮಾನಃ ಬಾಲೈಃ ಶಾರೀರ ಇತ್ಯುಪಚರ್ಯತೇ | ಯಥಾ ಘಟಕರಕಾದ್ರುಪಾಧಿವಶಾತ್ ಅಪರಿಚಿನ್ನಮಪಿ ನಭಃ
- ಜೀವನಿಗಿಂತ ಬೇರೆಯಾಗಿ ಈಶ್ವರನು ಇರುತ್ತಾನೆಂದು ನಿಶ್ಚಯವಾಗುತ್ತದೆ ಎಂದರ್ಥ. ಈಶ್ವರನಿಗಿಂತ ಬೇರೆಯಾದ ಜೀವನೆಂಬುವನು ಮತ್ತೆ ಬೇರೆಯಿಲ್ಲ ; ಏಕೆಂದರೆ ಜೀವತ್ವವೇ ಕಲ್ಪಿತವಾಗಿರುತ್ತದೆ. ಭಾ. ಭಾ. ೭೧, ೧೦೪ - ಇವುಗಳನ್ನು ನೋಡಿರಿ.
ಅಧಿ. ೧. ಸೂ. 2]
ಅಲ್ಪಪ್ರದೇಶತ್ವ ಅಣುತ್ವ ಇವುಗಳಿಗೆ ಗತಿ
೨೫೯
ಪರಿಚ್ಛಿನ್ನವತ್ ಅವಭಾಸತೇ, ತದ್ವತ್ | ತದಪೇಕ್ಷಯಾ ಚ ಕರ್ಮಕರ್ತತ್ವಾದಿ ಭೇದವ್ಯವಹಾರೊ ನ ವಿರುಧ್ಯತೇ ಪ್ರಾಕ್ ‘ತತ್ವಮಸಿ’ ಇತಿ ಆತ್ಮಕತ್ರೋಪದೇಶ ಗ್ರಹಣಾತ್ ! ಗೃಹೀತೇ ತು ಆತ್ಮಕತೈ ಬಣ್ಣ ಮೋಕ್ಷಾದಿಸರ್ವವ್ಯವಹಾರಪರಿ ಸಮಾಪ್ತಿರೇವ ಸ್ಯಾತ್ ||
(ಭಾಷ್ಯಾರ್ಥ) ಇಲ್ಲಿ (ಆಕ್ಷೇಪಕನು) ಕೇಳುತ್ತಾನೇನೆಂದರೆ : ಪರಮಾತ್ಮನಿಗಿಂತ ಬೇರೆಯಾಗಿರುವ ಶಾರೀರನೆಂಬುವನನ್ನು, “ಅನುಪಪತ್ತೇಸ್ತು ನ ಶಾರೀರಃ’ ಎಂದು ಮುಂತಾಗಿ ಅಲ್ಲಗಳೆದಿದೆಯಲ್ಲ, ಅವನು ಯಾರು ? “ಇವನಿಗಿಂತ ಬೇರೆಯಾದ ದ್ರಷ್ಟವಿಲ್ಲ, ಇವನಿಗಿಂತ ಬೇರೆಯಾದ ಶೋತೃವಿಲ್ಲ” (ಬೃ. ೩-೭-೨೩) ಎಂಬೀ ಜಾತಿಯ ಶ್ರುತಿಯಾದರೋ ಪರಮಾತ್ಮನಿಗಿಂತ ಬೇರೆಯಾದ ಆತ್ಮನನ್ನು ಇಲ್ಲ ಎಂದಿರುತ್ತದೆ. “ಎಲೈ ಭಾರತನೆ, ಎಲ್ಲಾ ಕ್ಷೇತ್ರಗಳಲ್ಲಿಯೂ (ಇರುವ) ಕ್ಷೇತ್ರಜ್ಞನನ್ನು ನಾನೆಂದು ತಿಳಿ’ (ಗೀ. ೧೩-೨) ಎಂಬ ಜಾತಿಯ ಸ್ಮತಿಯೂ (ಬೇರೆಯ ಆತ್ಮನು ಇಲ್ಲವೆಂದಿರುತ್ತದೆ)ಯಲ್ಲ !
(ಸಮಾಧಾನ) :- ಇದಕ್ಕೆ ಹೇಳುತ್ತೇವೆ. ಇದು ನಿಜವೇ. ಪರಮಾತ್ಮನೇ ದೇಹ, ಇಂದ್ರಿಯ, ಮನಸ್ಸು, ಬುದ್ಧಿ - ಎಂಬ ಉಪಾಧಿಗಳಿಂದ ಅಳತೆಗೆ ಸಿಕ್ಕಿ ಬಾಲಕರಿಂದ ಶಾರೀರ ಎನ್ನಿಸಿಕೊಳ್ಳುತ್ತಾನೆ. ಹೇಗೆ ಗಡಿಗೆ, ಕುಡಿಕೆ ಮುಂತಾದ ಉಪಾಧಿಗಳ ವಶದಿಂದ ಅಳತೆಗೆ ಸಿಕ್ಕದ ಆಕಾಶವು ಕೂಡ ಅಳತೆಗೆ ಸಿಕ್ಕಿರುವಂತೆ ಕಾಣುತ್ತದೆಯೋ, ಅದರಂತೆಯೇ ಇದು. ಅದರ ಅಪೇಕ್ಷೆಯಿಂದ (ಆತ್ಮನಿಗ) ಕರ್ಮಕರ್ತತ್ವವೇ ಮುಂತಾದ ಭೇದ ವ್ಯವಹಾರವು ‘ತತ್ತ್ವಮಸಿ’’ (ಅದೇ ನೀನು) ಎಂಬ ಆತ್ಮಕತ್ವವನ್ನು ಗ್ರಹಿಸುವದಕ್ಕಿಂತ ಮುಂಚೆ (ಆಗಿರುವದು) ವಿರುದ್ಧವಲ್ಲ. ಆತ್ಮಕತ್ವವನ್ನು ಗ್ರಹಿಸಿದ ಮೇಲೋ ಎಂದರೆ ಬಂಧ, ಮೋಕ್ಷ - ಮುಂತಾದ ವ್ಯವಹಾರವೆಲ್ಲವೂ ಮುಗಿದೇ ಹೋಗುವದು.
ಪರಮಾತ್ಮನಿಗೆ ಅಲ್ಪಪ್ರದೇಶವನ್ನೂ ಅಣುತ್ವವನ್ನೂ
ಹೇಳಿರುವದಕ್ಕೆ ಕಾರಣ ಅರ್ಭಕೌಕಸ್ಮಾತ್ ತಪದೇಶಾಚ್ಚ ನೇತಿ ಚೆನ್ನ ನಿಚಾಯ್ಯಾದೇವಂ ಮೋಮವಚ್ಚ ||೭|| ೭. ಅರ್ಭಕೌಕನಾದ್ದರಿಂದಲೂ ಆ ವ್ಯಪದೇಶವಿರುವದರಿಂದಲೂ
- ೧೪೩ ನೆಯ ಭಾ. ಭಾ. ವನ್ನು ನೋಡಿ.
೨೬೦
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
(ಪರಮಾತ್ಮನಲ್ಲ, ಎಂದರೆ ಹಾಗಲ್ಲ. ಏಕೆಂದರೆ ಹೀಗೆ ನಿಚಾಯ್ಯನಾಗಿರು ತಾನೆ. ಆಕಾಶದಂತೆ (ಎಂಬ ದೃಷ್ಟಾಂತ)ವೂ ಇದೆ.
(ಭಾಷ್ಯ) ೧೫೯, ಅರ್ಭಕಮ್ ಅಲ್ಪಮ್, ಓಕೋ ನೀಡಮ್ | ಏಷ ಮ ಆತ್ಮಾನ್ತರ್ಹದಯ’ ಇತಿ ಪರಿಚ್ಛಿನ್ನಾಯತನತ್ವಾತ್, ಸ್ವಶಪ್ಪೇನ ಚ ಅಣೀಯಾನ್
ಹೇರ್ವಾ ಯವಾದ್ವಾ” ಇತಿ ಅಣೀಯವ್ಯಪದೇಶಾತ್, ಶಾರೀರ ಏವ - ಆರಾಗ್ರ ಮಾತ್ರೋ ಜೀವಃ ಇಹ ಉಪದಿಶ್ಯತೇ, ನ ಸರ್ವಗತಃ ಪರಮಾತ್ಮಾ ಇತಿ ಯದುಕ್ತಮ್, ತತ್ ಪರಿಹರ್ತವ್ಯಮ್ | ಅತ್ರೋಚ್ಯತೇ - ನಾಯಂ ದೋಷಃ | ನ ತಾವತ್ ಪರಿಚ್ಚಿನ್ನದೇಶಸ್ಯ ಸರ್ವಗತತ್ವವ್ಯಪದೇಶಃ ಕಥಮಪಿ ಉಪಪದ್ಯತೇ | ಸರ್ವಗತಸ್ಯ ತು ಸರ್ವದೇಶೇಷು ವಿದ್ಯಮಾನತ್ವಾತ್ ಪರಿಚ್ಛಿನ್ನದೇಶವ್ಯಪದೇಶೋಪಿ ಕಯಾಚಿತ್ ಅಪೇಕ್ಷಯಾ ಸಂಭವತಿ | ಯಥಾ ಸಮಸ್ತವಸುಧಾಧಿಪತಿರಪಿ ಹಿ ಸನ್ ‘ಅಯೋಧ್ಯಾಧಿಪತಿಃ’ ಇತಿ ವ್ಯಪದಿಶ್ಯತೇ | ಕಯಾ ಪುನರಪೇಕ್ಷಯಾ ಸರ್ವಗತಃ ಸನ್ ಈಶ್ವರಃ ಅರ್ಭಕೌಕಾ ಅಣಿಯಾಂಶ್ಚ ವ್ಯಪದಿಶ್ಯತ ಇತಿ ? ನಿಚಾಯ್ಯಾದೇವಮ್ ಇತಿ ಬೂಮಃ | ಏವಮ್ ಅಣೀಯಾದಿಗುಣಗಣೋಪೇತಃ ಈಶ್ವರಃ ತತ್ರ ಹೃದಯಪುಣ್ಡರೀಕೇ ನಿಚಾಯ್ಯ: ದ್ರಷ್ಟವ್ಯ: ಉಪದಿಶ್ಯತೇ | ಯಥಾ ಶಾಲಗ್ರಾಮ್ ಹರಿಃ | ತತ್ರ ಅಸ್ಯ ಬುದ್ಧಿವಿಜ್ಞಾನಂ ಗ್ರಾಹಕಮ್ 1 ಸರ್ವಗತೋಪಿ ಈಶ್ವರಃ ತತ್ರ ಉಪಾಸ್ಯಮಾನಃ ಪ್ರಸೀದತಿ | ಪ್ರೋಮವಚ್ಚ ಏತತ್ ದ್ರಷ್ಟವ್ಯಮ್ | ಯಥಾ ಸರ್ವಗತಮಪಿ ಸತ್ ಮೋಮ ಸೂಚೀಪಾಶಾದ್ಯಪೇಕ್ಷಯಾ ಅರ್ಭಕೌಕಃ ಅಣಿಯಶ್ಚ ವ್ಯಪದಿಶ್ಯತೇ, ಏವಂ ಬ್ರಹ್ಮಾಪಿ | ತದೇವಂ ನಿಚಾಯ್ಯತ್ವಾಪೇಕ್ಷ ಬ್ರಹ್ಮಣೋರ್ಭಕೌಕಸ್ಟಮ್ ಅಣೀಯಸ್ಕಂ ಚ ನ ಪಾರಮಾರ್ಥಿಕಮ್ | ತತ್ರ ಯದಾಶಸ್ಮಿತೇ ಹೃದಯಾಯತನತ್ವಾತ್ ಬ್ರಹ್ಮಣಃ, ಹೃದಯಾಯತನಾನಾಂ ಚ ಪ್ರತಿಶರೀರಂ ಭಿನ್ನತ್ವಾತ್ ಭಿನ್ನಾಯತನಾನಾಂ ಚ ಶುಕಾದೀನಾಮ್ ಅನೇಕತ್ವ - ಸಾವಯವಾನಿತ್ಯತ್ವಾದಿದೋಷದರ್ಶನಾತ್ ಬ್ರಹ್ಮಣೋಪಿ ತತ್ರಸಜ್ಜಿ: ಇತಿ, ತದಪಿ ಪರಿಹೃತಂ ಭವತಿ ||
(ಭಾಷ್ಯಾರ್ಥ) ಅರ್ಭಕವಾದದ್ದು ಎಂದರೆ ಅಲ್ಪವಾದದ್ದು ; ಓಕ ಎಂದರೆ ಆಶ್ರಯವು “ಈ ಹೃದಯದೊಳಗಿನ ನನ್ನ ಆತ್ಮನು’ ಎಂದು ಪರಿಚ್ಛಿನ್ನವಾದ ಆಶ್ರಯ (ವನ್ನು ಹೇಳಿರುವದರಿಂದಲೂ) ‘‘ಬತ್ತದ ಕಾಳಿಗಿಂತಲೂ ಜವೆಗಿಂತಲೂ…..(ಸಣ್ಣವನು)” ಎಂದು ತನ್ನನ್ನು ಹೇಳುವ ಮಾತಿನಿಂದ (ಆತ್ಮನು) ಬಹಳ ಅಣುವಾಗಿರುವನೆಂದು
ಅಧಿ. ೧. ಸೂ. ೭]
ಅಲ್ಪಪ್ರದೇಶತ್ವ ಅಣುತ್ವ ಇವುಗಳಿಗೆ ಗತಿ
೨೬೧
ಹೇಳಿರುವದರಿಂದಲೂ ಶಾರೀರನನ್ನೇ (ಎಂದರೆ) ದಬ್ಬಳದ ತುದಿಯಷ್ಟು ಪರಿಮಿತಿಯ ಜೀವನನ್ನೇ ಇಲ್ಲಿ ಹೇಳಿರುತ್ತದೆ, ಸರ್ವಗತನಾದ ಪರಮಾತ್ಮನನ್ನು ಹೇಳಿಲ್ಲ - ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಲ್ಲ, ಅದನ್ನು ಪರಿಹರಿಸಿಕೊಳ್ಳಬೇಕಷ್ಟೆ, ಅದಕ್ಕೆ (ಈ ಸಮಾಧಾನವನ್ನು) ಹೇಳುತ್ತೇವೆ :
ಇದು ದೋಷವಲ್ಲ. ಅಳತೆಯ ಪ್ರದೇಶವುಳ್ಳ (ಜೀವನಿಗೆ) ಸರ್ವಗತತ್ವವನ್ನು ಹೇಳುವದಂತೂ ಹೇಗೂ ಹೊಂದುವದಿಲ್ಲ. ಆದರೆ ಸರ್ವಗತನಾಗಿರುವ (ಪರ ಮಾತ್ಮನು) ಎಲ್ಲಾ ಪ್ರದೇಶಗಳಲ್ಲಿಯೂ ಇರುವದರಿಂದ ಅಳತೆಯ ಪ್ರದೇಶ ದಲ್ಲಿರುವನೆಂದು (ಹೇಳುವದೂ) ಯಾವದೋ ಒಂದು ಅಪೇಕ್ಷೆಯಿಂದ ಆಗಬಹು ದಾಗುತ್ತದೆ. ಹೇಗೆ ಇಡಿಯ ಭೂಮಂಡಲದ ಅಧಿಪತಿಯಾಗಿರುವವನನ್ನು ಕೂಡ “ಅಯೋಧ್ಯಾಧಿಪತಿ’ ಎಂದು ಕರೆಯುತ್ತಾರೋ ಹಾಗೆ.
(ಪ್ರಶ್ನೆ ) :- ಹಾಗಾದರೆ ಏತರ ಅಪೇಕ್ಷೆಯಿಂದ ಸರ್ವಗತನಾಗಿರುವ ಈಶ್ವರನನ್ನು ಅರ್ಭಕೌಕನೆಂದೂ ಅಣೀಯಸನೆಂದೂ ಹೇಳಿದೆ ?
(ಉತ್ತರ) :- ಹೀಗೆ ನಿಚಾಯ್ಯನಾಗಿರುವದರಿಂದ - ಎಂದು ಹೇಳುತ್ತೇವೆ. ಹೀಗೆ ಅಣೀಯವೇ ಮುಂತಾದ ಗುಣಗಣಗಳಿಂದ ಕೂಡಿದ ಈಶ್ವರನು ಹೃದಯ ಪುಂಡರೀಕದಲ್ಲಿ ನಿಚಾಯ್ಯನಾಗಿರುತ್ತಾನೆ, (ಎಂದರೆ) ಉಪಾಸ್ಯನಾಗಿರುತ್ತಾನೆ ಎಂದು (ಇಲ್ಲಿ ತಿಳಿಸಿರುತ್ತದೆ. ಶಾಲಗ್ರಾಮದಲ್ಲಿ ಹರಿಯು ಹೇಗೆ (ಉಪಾಸ್ಯನಾಗಿರು ತಾನೋ) ಹಾಗೆ. ಆ (ಹೃದಯವುಂಡರೀಕ)ದಲ್ಲಿ ಈ (ಪರಮಾತ್ಮನನ್ನು) ಗ್ರಹಿಸು ವದು ಬುದ್ದಿವಿಜ್ಞಾನವು. ಈಶ್ವರನು ಸರ್ವಗತನಾಗಿದ್ದರೂ ಅಲ್ಲಿ ಉಪಾಸನೆಮಾಡಿದರೆ ಪ್ರಸನ್ನನಾಗುತ್ತಾನೆ.
ಆಕಾಶದಂತೆಯೂ ಇದನ್ನು ತಿಳಿದುಕೊಳ್ಳಬೇಕು. ಆಕಾಶವು ಸರ್ವಗತ ವಾಗಿದ್ದರೂ ಸೂಜಿ, ದಾಳ - ಮುಂತಾದವುಗಳ ಅಪೇಕ್ಷೆಯಿಂದ ಅಲ್ಪವಾದ ಆಶ್ರಯ ವುಳ್ಳದ್ದೆಂದೂ ಆಣುತರ (ಪ್ರಮಾಣ )ದ್ದೆಂದೂ ಹೇಗೆ ಹೇಳುವರೋ ಬ್ರಹ್ಮವೂ ಹಾಗೆಯೇ (ಅಲ್ಪಾಶ್ರಯವುಳ್ಳದ್ದೆಂದೂ ಅಣುತರಪ್ರಮಾಣವುಳ್ಳದ್ದೆಂದೂ ಉಕ್ತ ವಾಗಿದೆ). ಆದ್ದರಿಂದ ಹೀಗೆ ಉಪಾಸನೆಯ ಅಪೇಕ್ಷೆಯಿಂದ ಬ್ರಹ್ಮವು ಅಲ್ಪಾಶ್ರಯ
-
ಶ್ವೇ. ೫-೮ ರ ಸೂಚನೆ.
-
ಸರ್ವವ್ಯಾಪಕನಾದ ವಿಷ್ಣುವನ್ನು ಶಾಲಗ್ರಾಮದಲ್ಲಿ ಉಪಾಸನೆಮಾಡಬೇಕೆಂದು ಹೇಳಿರುವಂತೆ ಹೃದಯದಲ್ಲಿ ಪರಮೇಶ್ವರನನ್ನು ಉಪಾಸನೆಮಾಡಬೇಕೆಂದು ಹೇಳಿದ ಎಂದು ಭಾವ.
-
ಹೃದಯದಲ್ಲಿ ಉಪಾಸನೆಮಾಡುವದರ ಫಲವೇನು ?- ಎಂದರೆ ಧ್ಯಾನರೂಪವಾದ ಅಂತಃಕರಣವೃತ್ತಿಯಿಂದ ಅಲ್ಲಿ ಸಾಕ್ಷಾತ್ಕಾರವಾಗುವದೇ ಫಲವು ಎಂದರ್ಥ.೨೬೨
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ವುಳ್ಳದ್ದೂ ಅಣುತರವೂ (ಆಗಿರುವದೇ ಹೊರತು) ನಿಜವಾಗಿಯೂ ಹಾಗಿಲ್ಲ. ಹೀಗಿರುವಲ್ಲಿ ಬ್ರಹ್ಮಕ್ಕೆ ಹೃದಯವು ಆಶ್ರಯವಾಗಿರುವದರಿಂದಲೂ, ಹೃದಯಾಶ್ರಯ ಗಳು ಒಂದೊಂದು ಶರೀರಕ್ಕೂ ಬೇರೆಬೇರೆಯಾಗಿರುವದರಿಂದಲೂ ಬೇರೆಬೇರೆಯ ಆಶ್ರಯಗಳುಳ್ಳ ಗಿಣಿಯ ಮುಂತಾದವುಗಳಲ್ಲಿ ಅನೇಕವಾಗಿರುವದು, ಸಾವಯವ ವಾಗಿರುವದು, ಅನಿತ್ಯವಾಗಿರುವದು - ಮುಂತಾದ ದೋಷಗಳು ಕಂಡು ಬರುವದರಿಂದ ಬ್ರಹ್ಮಕ್ಕೂ ಆದೋಷಗಳು ಬರುವವುಎಂದು ಶಂಕಿಸುವರಲ್ಲ, ಅದನ್ನೂ ಪರಿಹರಿಸಿದಂತೆ ಆಯಿತು.?
ಈಶ್ವರನಿಗೆ ಸುಖದುಃಖಾದಿಗಳ ಅನುಭವವೇಕಿಲ್ಲ ?
ಸಂಭೋಗಪ್ರಾಪ್ತಿರಿತಿ ಚೇನ್ನ ವೈಶೇಷ್ಯಾತ್ ||೮|| ೮. (ಈಶ್ವರನಿಗೂ ಸಂಸಾರ) ಸಂಭೋಗ ಉಂಟಾಗುವದು, ಎಂದರೆ ಹಾಗಲ್ಲ, ಏಕೆಂದರೆ ವೈಶೇಷ್ಯವಿದೆ. ಪೂರ್ವಪಕ್ಷ : ಸಿದ್ಧಾಂತದಲ್ಲಿ ಈಶ್ವರನಿಗಿಂತ ಬೇರೆ ಸಂಸಾರಿಯಿಲ್ಲ
(ಭಾಷ್ಯ) ೧೬೦. ಮವತ್ ಸರ್ವಗತಸ್ಯ ಬ್ರಹ್ಮಣಃ ಸರ್ವಪ್ರಾಣಿಹೃದಯ ಸಂಬನ್ಸಾತ್, ಚಿದ್ರೂಪತಯಾ ಚ ಶಾರೀರಾತ್ ಅವಿಶಿಷ್ಟತ್ವಾತ್, ಸುಖದುಃಖಾದಿ ಸಂಭೋಗೋತವ್ಯವಿಶಿಷ್ಟ ಪ್ರಸಜೇತ | ಏಕತ್ವಾಚ್ಚ ನಹಿ ಪರಸ್ಮಾತ್ ಆತ್ಮ ನೋನ್ಯಃ ಕಶ್ಚಿದಾತ್ಮಾ ಸಂಸಾರೀ ವಿದ್ಯತೇ | “ನಾನೋತೋಸ್ತಿ ವಿಜ್ಞಾತಾ” (ಬೃ. ೩-೭-೨೩) ಇತ್ಯಾದಿಶ್ರುತಿಭ್ಯಃ | ತಸ್ಮಾತ್ ಪರವ ಸಂಸಾರಸಂಭೋಗ ಪ್ರಾಪ್ತಿ: 11
(ಭಾಷ್ಯಾರ್ಥ) ಆಕಾಶದಂತ ಸರ್ವಗತವಾಗಿರುವ ಬ್ರಹ್ಮವು ಎಲ್ಲಾ ಪ್ರಾಣಿಗಳ ಹೃದಯಕ್ಕೂ 1. ಅರ್ಭಕೌಕಸ್ಮವೂ ಅಣೀಯವೂ ಅಪರಮಾರ್ಥವಾಗಿರುವದರಿಂದ ಎಂದರ್ಥ.
- ಅನುಮಾನದಲ್ಲಿ ಕೊಟ್ಟಿರುವ ದೃಷ್ಟಾಂತದಲ್ಲಿ ಒಂದೊಂದು ಗಿಣಿಗೂ ಒಂದೊಂದು ಪಂಜರವು ನಿಜವಾಗಿ ಆಶ್ರಯವಾಗಿರುತ್ತದೆ. ಆದರೆ ಬ್ರಹ್ಮವು ನಿಜವಾಗಿ ಹೃದಯವೆಂಬ ಆಶ್ರಯದಲ್ಲಿಲ್ಲ ; ಒಂದೂಂದು ಹೃದಯಕ್ಕೂ ಇಷ್ಟಿಷ್ಟು ಎಂದು ಹಂಚಿಕೊಂಡೂ ಅದು ಇರುವದಿಲ್ಲ. ಆದ್ದರಿಂದ ಅನುಮಾನವು ಸರಿಯಲ್ಲ ಎಂದು ಭಾವ.
ಅಧಿ. ೧. ಸೂ. ೮] ಸಿದ್ಧಾಂತ : ಪರಮಾತ್ಮನಲ್ಲಿರುವ ವಿಶೇಷ
೨೬೩
ಸಂಬಂಧಪಟ್ಟಿರು)ವದರಿಂದಲೂ ಚಿದ್ರೂಪವಾಗಿರುವದರಿಂದ ಶಾರೀರನಿಗಿಂತ (ಬೇರೆ ಯಾವ) ವಿಶೇಷವೂ ಇಲ್ಲದ್ದಾದ್ದರಿಂದಲೂ ಸುಖದುಃಖಗಳ ಸಂಭೋಗವೂ (ಇವೆರಡಕ್ಕೂ) ಸಮಾನವಾಗಿರಬೇಕಾಗುವದು. ಒಂದೇ ಆಗಿರುವದರಿಂದಲೂ ಸಂಭೋಗವು ಇರಬೇಕಾಗುವದು. ಪರಮಾತ್ಮನಿಗಿಂತ ಬೇರೆಯಾಗಿ ಸಂಸಾರಿಯಾದ ಆತ್ಮನು ಮತ್ಯಾರೂ ಇರುವದೇ ಇಲ್ಲ.“ಈತನಿಗಿಂತ ಬೇರೆಯಾದ ವಿಜ್ಞಾತೃವಿಲ್ಲ.” (ಬೃ. ೩-೭-೨೩) ಮುಂತಾದ ಶ್ರುತಿಗಳಿಂದ (ಹೀಗೆಂದು ಸಿದ್ಧವಾಗಿರುತ್ತದೆ). ಆದ್ದರಿಂದ ಪರಮಾತ್ಮನಿಗೇ ಸಂಸಾರಸಂಭೋಗವು ಬಂದೊದಗುವದು.’
ಸಿದ್ಧಾಂತ : ಪರಮಾತ್ಮನಲ್ಲಿರುವ ವಿಶೇಷ
(ಭಾಷ್ಯ) ೧೬೧. ಇತಿ ಚೇತ್ | ನ | ವೈಶೇಷ್ಯಾತ್ | ನ ತಾವತ್ ಸರ್ವಪ್ರಾಣಿಹೃದಯ ಸಂಬನ್ಸಾತ್ ಶಾರೀರವತ್ ಬ್ರಹ್ಮಣಃ ಸಂಭೋಗಪ್ರಸಜ್ಜಿ: 1 ವೈಶೇಷ್ಯಾತ್ | ವಿಶೇಷ ಹಿ ಭವತಿ ಶಾರೀರಪರಮೇಶ್ಚರಯೋಃ | ಏಕಃ ಕರ್ತಾ ಭೋಕ್ತಾ ಧರ್ಮಾಧರ್ಮಸಾಧನಃ ಸುಖದುಃಖಾದಿಮಾಂಶ್ಚ | ಏಕಸ್ತದ್ವಿಪರೀತಃ ಅಪಹಪಾಹ್ಮತ್ವಾದಿಗುಣಃ’ 1 ಏತಸ್ಮಾತ್ ಅನಯೋರ್ವಿಶೇಷಾತ್ ಏಕಸ್ಯ ಭೋಗಃ, ನೇತರಸ್ಯ | ಯದಿ ಚ ಸಂವಿಧಾನಮಾತ್ರಣ ವಸ್ತುಶಕ್ತಿಮ್ ಅನಾಶಿತ್ಯ ಕಾರ್ಯಸಂಬದ್ಧ: ಅಭ್ಯುಪಗಮ್ಮತ, ಆಕಾಶಾದೀನಾಮಪಿ ದಾಹಾದಿಪ್ರಸಜ್ಜ; 1 ಸರ್ವಗತಾನೇಕಾತ್ಮವಾದಿನಾಮಪಿ ಸಮೌ ಏತ ಚೋದ್ಯ ಪರಿಹಾರ ||
(ಭಾಷ್ಯಾರ್ಥ) ಹೀಗೆಂದರೆ (ಅದು ಸರಿ)ಯಲ್ಲ. ಏಕೆಂದರೆ ವೈಶೇಷ್ಯವಿದೆ. ಮೂಲನೆಯದಾಗಿ ಸರ್ವಪ್ರಾಣಿಗಳ ಹೃದಯದ ಸಂಬಂಧದಿಂದ ಶಾರೀರನಂತ ಬ್ರಹ್ಮಕ್ಕೂ (ಸಂಸಾರ) ಸಂಭೋಗವು ಬಂದೊದಗಲಾರದು. ಏಕೆಂದರೆ ವೈಶೇಷ್ಯವಿದೆ. ಶಾರೀರಪರಮೇಶ್ವರರಿಗೆ ವಿಶೇಷವಿರುತ್ತದೆಯಲ್ಲವೆ ? (ಹೇಗೆಂದರೆ) ಒಬ್ಬನು ಕರ್ತನು, ಭೋಕ್ತನು, ಧರ್ಮಾ ಧರ್ಮಗಳೆಂಬ ಸಾಧನಗಳುಳ್ಳವನು, ಮತ್ತು ಸುಖದುಃಖಾದಿಗಳುಳ್ಳವನು ; ಇನ್ನೊಬ್ಬನು ಅದಕ್ಕೆ ವಿಪರೀತವಾಗಿರುವವನು, ಅಪಹತಾಷ್ಕೃತ್ವವೇ ಮುಂತಾದ
- ಜೀವೇಶ್ವರರ ಐಕ್ಯವನ್ನು ಒಪ್ಪುವ ಮತದಲ್ಲಿ ಈಶ್ವರನಿಗೂ ಸಂಸಾರವುಂಟೆಂದಾಗುವ ದೆಂಬ ದೋಷವನ್ನು (ಗೀ, ಭಾ. ೧೩-೨, ಭಾ. ಭಾ. ೭೫೮-೭೭೦, ೧, ಭಾ. ೨-೧-೨೦) ತೈ. ಭಾ. ೨- (ಭಾ. ಭಾ. ೨೦೯) ಇವುಗಳಲ್ಲಿ ಒಡ್ಡಿ ಪರಿಹರಿಸಿದ.
೨೬೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಗುಣಗಳುಳ್ಳವನು. ಇಬ್ಬರಿಗೂ ಈ ವಿಶೇಷವಿರುವದರಿಂದ ಒಬ್ಬನಿಗೆ (ಸಂಸಾರ) ಭೋಗ(ವುಂಟು), ಇನ್ನೊಬ್ಬನಿಗಿಲ್ಲ. ಸಂನಿಧಿಮಾತ್ರದಿಂದಲೇ ವಸ್ತುವಿನ ಶಕ್ತಿಯನ್ನು ಲೆಕ್ಕಿಸದೆ ಕಾರ್ಯದ ಸಂಬಂಧವನ್ನು ಇಟ್ಟುಕೊಳ್ಳುವದಾದರೆ, ಆಕಾಶವೇ ಮುಂತಾದವು ಗಳಿಗೂ ಸುಡುವಿಕೆಯೇ ಮುಂತಾದವು ಆಗಬೇಕಾದೀತು. ಸರ್ವಗತರಾಗಿರುವ ಅನೇಕಾತ್ಮವಾದಿಗಳಿಗೂ ಈ ಚೋದ್ಯಪರಿಹಾರಗಳು ಸಮವಾಗಿರುತ್ತವೆ.?
ಸಂಸಾರಿತ್ವವು ಅವಿದ್ಯಾಕಲ್ಪಿತವಾಗಿರುವದರಿಂದ ಪರಮಾತ್ಮನಿಗಿಲ್ಲ
(ಭಾಷ್ಯ) ೧೬೨. ಯದಪಿ ಏಕತ್ವಾತ್ ಬ್ರಹ್ಮಣಃ ಆತ್ಮಾನ್ತರಾಭಾವಾತ್ ಶಾರೀರಸ್ಯ ಭೋಗೇನ ಬ್ರಹ್ಮಣೇ ಭೋಗಪ್ರಸಙ್ಗಃ ಇತಿ | ಅತ್ರ ವದಾಮಃ – ಇದಂ ತಾವತ್ ದೇವಾನಾಂಪ್ರಿಯಃ ಪ್ರಷ್ಟವ್ಯ: 1 ಕಥಮಯಂ ತ್ವಯಾ ಆತ್ಮಾನ್ತರಾಭಾವೋಧ್ಯವಸಿತಃ ಇತಿ | ‘‘ತತ್ತ್ವಮಸಿ’’ (ಛಾಂ. ೬-೮-೭), ‘ಅಹಂ ಬ್ರಹ್ಮಾಸ್ಮಿ’’ (ಬೃ. ೧-೪-೧೦), “ನಾನ್ನೋತೋಸ್ತಿ ವಿಜ್ಞಾತಾ” (ಬೃ. ೩-೭-೨೩) ಇತ್ಯಾದಿಶಾಭ್ಯ: ಇತಿ ಚೇತ್ | ಯಥಾಶಾಸ್ತ್ರಂ ತರ್ಹಿ ಶಾಸ್ತ್ರೀಯೋSರ್ಥ: ಪ್ರತಿಪತ್ರವ್ಯಃ, ನ ತತ್ರ ಅರ್ಧಜರತೀಯಂ ಲಭ್ಯಮ್ | ಶಾಸ್ತ್ರಂ ಚ ‘ತತ್ತ್ವಮಸಿ’ ಇತಿ ಅಪಹತ ಪಾಸ್ಮತ್ಯಾದಿವಿಶೇಷಣಂ ಬ್ರಹ್ಮ ಶಾರೀರಸ್ಯ ಆತ್ಮನ ಉಪದಿಶತ್ ಶಾರೀರಸ್ಯೆವ ತಾವತ್ ಉಪಭೋಕೃತ್ವಂ ವಾರಯತಿ | ಕುತಸ್ತದುಪಭೋಗೇನ ಬ್ರಹ್ಮಣ ಉಪಭೋಗಪ್ರಸಜ್ಜಿ: ಅಥ ಅಗೃಹೀತಂ ಶಾರೀರಸ್ಯ ಬ್ರಹ್ಮಣಾ ಏಕತ್ವಮ್, ತದಾ ಮಿಥ್ಯಾಜ್ಞಾನನಿಮಿತ್ತ ಶಾರೀರಸ್ಕೋಪಭೋಗ 1 ನ ತೇನ ಪರಮಾರ್ಥರೂಪಸ್ಯ ಬ್ರಹ್ಮಣಃ ಸಂಸ್ಪರ್ಶ: ! ನ ಹಿ ಬಾಲ್ಯ: ತಲಮಲಿನತಾದಿಭಿರ್ವ್ಯೂಟ್ಟ ವಿಕಲ್ಪಮಾನೇ ತಲಮಲಿನತಾದಿವಿಶಿಷ್ಟಮೇವ ಪರಮಾರ್ಥತೋ ವೌಮ ಭವತಿ | ತದಾಹ - ‘ನ ವೈಶೇಷ್ಮಾತ್’ ಇತಿ | ನೈಕಪಿ ಶಾರೀರಸ್ಯ ಉಪಭೋಗೇನ ಬ್ರಹ್ಮಣಃ ಉಪಭೋಗಪ್ರಸಜ್ಜಿ: | ವೈಶೇಷ್ಯಾತ್ | ವಿಶೇಷೋ ಹಿ ಭವತಿ ಮಿಥಾಜ್ಞಾನ
-
ಆಕಾಶವನ್ನು ಬೆಂಕಿಯು ಸುಡಲಾರದು, ಏಕೆಂದರೆ ಅದಕ್ಕೆ ದಾಹೃತ್ವಯೋಗ್ಯತೆಯಿಲ್ಲ. ಸನ್ನಿಧಿಮಾತ್ರದಿಂದ ಕಾರ್ಯವಾಗುವದೆಂದರೆ ಬೆಂಕಿಯ ಸಂಬಂಧದಿಂದ ಆಕಾಶವೂ ಸುಟ್ಟು ಹೋಗಬೇಕಾಗುವದು. ಇದು ಪೂರ್ವಪಕ್ಷಿಗೂ ಒಪ್ಪಿಲ್ಲ ; ಆದ್ದರಿಂದ ಪೂರ್ವಪಕ್ಷವು ಸರಿಯಲ್ಲ.
-
ಆಯಾ ಆತ್ಮನ ಕರ್ಮದಿಂದ ಅವನವನಿಗೇ ಭೋಗವಾಗುತ್ತದೆ ; ಅದೇ ಸ್ಥಲದಲ್ಲಿ ಸನ್ನಿಹಿತನಾಗಿದ್ದರೂ ಬೇರೆಯ ಆತ್ಮರಿಗೆ ಆಗುವದಿಲ್ಲ ಎಂದೇ ಅವರೂ ಹೇಳಬೇಕಾಗುವದು ಎಂದರ್ಥ. ಈ ಪರಿಹಾರವು ನಿರ್ದುಷ್ಟವೆಂಬ ಅಭಿಪ್ರಾಯವು ಆಚಾರ್ಯರಿಗಿಲ್ಲ. ೨-೩-೫೦ ರಿಂದ ೫೩ ರ ವರೆಗಿನ ಸೂತ್ರಗಳ ಭಾಷ್ಯವನ್ನು ನೋಡಿ.
ಅಧಿ. ೧. ಸೂ. ೮] ಸಂಸಾರಿತ್ವವು ಅವಿದ್ಯಾಕಲ್ಪಿತವಾಗಿರುವದರಿಂದ ಪರಮಾತ್ಮನಿಗಿಲ್ಲ ೨೬೫ ಸಮ್ಯಗ್ಲಾನಯೋಃ | ಮಿಥ್ಯಾಜ್ಞಾನಕಲ್ಪಿತ ಉಪಭೋಗ, ಸಮ್ಯಗ್ದಾನದೃಷ್ಟಮ್ ಏಕತ್ವಮ್ ನ ಚ ಮಿಥ್ಯಾಜ್ಞಾನಕಿತೇನ ಉಪಭೋಗೇನ ಸಮ್ಯಗ್ದಾನದೃಷ್ಟಂ ವಸ್ತು ಸಂಸ್ಪಶ್ಯತೇ | ತಸ್ಮಾತ್ ನೋಪಭೋಗಗಸ್ಟೋಪಿ ಶಕ್ಯ ಈಶ್ವರಸ್ಯ ಕಲ್ಪಯಿತುಮ್ ||
(ಭಾಷ್ಯಾರ್ಥ) ಇನ್ನು ಬ್ರಹ್ಮವು ಒಂದೇ ಆಗಿರುವದರಿಂದ ಬೇರೆ (ಯಾವ) ಆತ್ಮನೂ ಇಲ್ಲದ್ದರಿಂದ ಶಾರೀರನ ಭೋಗದಿಂದ ಬ್ರಹ್ಮಕ್ಕೆ ಭೋಗವುಂಟಾಗಬೇಕಾಗುವದು ಎಂದು (ಪೂರ್ವಪಕ್ಷಿಯು ಹೇಳಿದ್ದನಷ್ಟೆ), ಅದಕ್ಕೆ ಹೇಳುತ್ತೇವೆ. ಮೊದಲು (ಆ) ಮೂರ್ಖನನ್ನು ಬೇರೆ (ಯಾವ) ಆತ್ಮನೂ ಇಲ್ಲವೆಂಬುದನ್ನು ನೀನು ಹೇಗೆ ನಿಶ್ಚಯಿಸಿದೆ?” ಎಂದು ಕೇಳಬೇಕು. ಅದು ನೀನಾಗಿರುವೆ” (ಛಾಂ.೬-೮-೭), “ನಾನು ಬ್ರಹ್ಮವಾಗಿರುವೆನು’ (ಬೃ. ೧-೪-೧೦), ‘ಇವನಿಗಿಂತ ಬೇರೆಯ ವಿಜ್ಞಾ ವಿಲ್ಲ” (ಬೃ. ೩-೭-೨೩) ಮುಂತಾದ ಶಾಸ್ತ್ರಗಳಿಂದ (ನಿಶ್ಚಯಿಸಿದನು) ಎಂದರೆ, ಹಾಗಾದರೆ ಶಾಸ್ತ್ರದಲ್ಲಿರುವಂತೆಯೇ ಶಾಸ್ತ್ರೀಯವಾದ (ಈ) ವಿಷಯವನ್ನು ಅರಿಯಬೇಕೇ ಹೊರತು ಈ ವಿಷಯದಲ್ಲಿ ಅರ್ಧಜರತೀಯವು ಸಿಕ್ಕುವಂತಿಲ್ಲ.’ ಶಾಸ್ತ್ರವಾದರೋ “ಅದು ನೀನಾಗಿರುವೆ’’ (ಛಾಂ. ೬-೮-೭) ಎಂದು ಅಪಹತ ಪಾಹ್ಮತ್ವವೇ ಮುಂತಾದ ವಿಶೇಷಣವುಳ್ಳಬ್ರಹ್ಮವನ್ನು ಶಾರೀರನ ಆತ್ಮನೆಂದು ಉಪದೇಶಿಸುವದರಿಂದ ಶಾರೀರನಿಗೇ ಮೊದಲು ಉಪಭೋತೃತ್ವವಿಲ್ಲವೆನ್ನುತ್ತಿದೆ. (ಹೀಗಿರುವಲ್ಲಿ ) ಅವನ ಉಪಭೋಗದಿಂದ ಬ್ರಹ್ಮಕ್ಕ ಉಪಭೋಗ (ವಾದೀತು) ಎಂಬ ಪ್ರಸಂಗವೆಲ್ಲಿ (ಬಂತು) ? ಹೀಗಲ್ಲದೆ ಶಾರೀರನು ಬ್ರಹ್ಮದಲ್ಲಿಯೇ ಒಂದಾಗಿರುವನೆಂಬುದನ್ನು (ಇನ್ನೂ) ಗ್ರಹಿಸಿಲ್ಲ (ಎಂದಾದರೆ) ಆಗ ಮಿಥ್ಯಾಜ್ಞಾನ ನಿಮಿತ್ತದಿಂದ ಶಾರೀರನಿಗೆ ಉಪಭೋಗವುಂಟಾಗಿರುತ್ತದೆ); ಪರಮಾರ್ಥರೂಪ ವಾದ ಬ್ರಹ್ಮಕ್ಕ ಅದರ ಸೋಂಕಿರುವದಿಲ್ಲ, ಹುಡುಗರು ಆಕಾಶದ ತಲವು ಮಲಿನವಾಗಿರು ವದು (ಎಂದು) ಮುಂತಾಗಿ ವಿಕಲ್ಪಿಸಿದರೆ, ಆಕಾಶವು ನಿಜವಾಗಿ ತಲಮಲಿನತಾದಿ
C
.
.
-
ಪ್ರಮಾಣಾಂತರಗೋಚರವಲ್ಲದ ವಿಷಯವನ್ನು,
-
ಹೇಂಟೆಯ ಮುಂತಾದವುಗಳಲ್ಲಿ ಅರ್ಧವನ್ನು ಅಡಿಗಮಾಡುವದು, ಇನ್ನರ್ಧವನ್ನು ಮರಿಹಾಕುವದಕ್ಕೆ ಇಟ್ಟುಕೊಳ್ಳುವದು - ಇದು ಆಗಲಾರದು. ಇದರಂತೆ ಇಲ್ಲಿ ಏಕತ್ವವೂ ಬೇಕು, ಉಪಭೋಗವೂ ಬೇಕು - ಎಂದರೆ ಆಗಲಾರದು ಎಂದರ್ಥ. ಅರ್ಧಜರತೀಯನ್ಯಾಯವನ್ನು ಆನಂದಗಿರಿವ್ಯಾಖ್ಯಾನದಲ್ಲಿ ಹೀಗೆ ವಿವರಿಸಿದ. ಮುದುಕಿಯ ಮುಖವನ್ನು ಮಾತ್ರ ಕಾಮಿಸುತ್ತಾನೆ, ಶರೀರಗಳನ್ನಲ್ಲ - ಎಂದು ಈ ನ್ಯಾಯವನ್ನು ರತ್ನಪ್ರಭಾವ್ಯಾಖ್ಯಾನದಲ್ಲಿ ವಿವರಿಸಿದೆ.
-
ಗೀ, ಭಾ. ೧೩-೨ (ಭಾ. ಭಾ. ೭೫೯).
೨೬೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. ಗಳಿಂದ ಕೂಡಿಕೊಂಡೇ ಇರುವದಿಲ್ಲವಷ್ಟೆ, ಇದನ್ನೇ (ಸೂತ್ರಕಾರರು) ‘ನವೈಶೇಷ್ಯಾತ್’ (ಹಾಗಲ್ಲ, ಏಕೆಂದರೆ ವೈಶೇಷ್ಯವಿದೆ) ಎಂದು ಹೇಳಿರುತ್ತಾರೆ. (ಬ್ರಹ್ಮದೊಡನೆ) ಏಕತ್ವವಿದ್ದರೂ ಜೀವನ ಉಪಭೋಗದಿಂದ ಬ್ರಹ್ಮಕ್ಕೆ ಉಪಭೋಗದ ಪ್ರಸಂಗ ವಿರುವದಿಲ್ಲ. (ಏಕೆಂದರೆ) ವಿಶೇಷತೆಯಿರುವದರಿಂದ, ಮಿಥ್ಯಾಜ್ಞಾನ’ ಸಮ್ಯಗ್ವಾನ - ಇವುಗಳಿಗೆ ವಿಶೇಷವಿರುವದಲ್ಲವೆ ? ಉಪಭೋಗವು ಮಿಥ್ಯಾಜ್ಞಾನದಿಂದ ಕಲ್ಪಿತ ವಾಗಿರುತ್ತದೆ, ಏಕತ್ವವು ಸಮ್ಮಣ್ಣಾನದಿಂದ ಕಂಡದ್ದಾಗಿರುತ್ತದೆ. ಆದರೆ ಮಿಥ್ಯಾ ಜ್ಞಾನದಿಂದ ಕಲ್ಪಿತವಾದ ಉಪಭೋಗವು ಸಮ್ಯಗ್ದಾನದಿಂದ ಕಂಡ ವಸ್ತುವನ್ನು ಸೋಂಕಲಾರದು. ಆದ್ದರಿಂದ ಈಶ್ವರನಿಗೆ ಉಪಭೋಗದ ವಾಸನೆಯನ್ನು ಕೂಡ ಕಲ್ಪಿಸುವದು ಆಗಲಾರದು.
೨. ಅತ್ಯಧಿಕರಣ (೯-೧೦) (ಕಠ ೧-೨-೨೫ ರಲ್ಲಿರುವ ಅತೃವು ಬ್ರಹ್ಮವೇ)
ಅತ್ತಾ ಚರಾಚರಗ್ರಹಣಾತ್ ||೯|| ೯. (ಕಠದಲ್ಲಿರುವ) ಅತೃವು (ಬ್ರಹ್ಮವು) ; ಏಕೆಂದರೆ (ಅಲ್ಲಿ) ಚರಾಚರಗಳ ಗ್ರಹಣವಿದೆ.
ವಿಷಯವೂ ಸಂಶಯವೂ
(ಭಾಷ್ಯ) ೧೬೩. ಕಠವಲೀಷು ಪಠ್ಯತೇ - ‘ಯಸ್ಯ ಬ್ರಹ್ಮ ಚ ಕ್ಷತ್ರಂ ಚೋಭೇ ಭವತ ಓದನಃ | ಮೃತ್ಯುರ್ಯಸ್ಕೋಪಸೇಚನಂ ಕ ಇತ್ತಾ ವೇದ ಯತ್ರ ಸಃ’ (ಕ. ೧-೨-೨೫) ಇತಿ | ಅತ್ರ ಕಶ್ಚಿದೋದನೋಪಸೇಚನಸೂಚಿತಃ ಅತ್ತಾ ಪ್ರತೀಯತೇ | ತತ್ರ ಕಿಮ್ ಅಗ್ನಿ ಅತ್ತಾ ಸ್ಮಾತ್, ಉತ ಜೀವಃ, ಅಥವಾ ಪರಮಾತ್ಮಾ ಇತಿ ಸಂಶಯಃ |
-
ಶಾರೀರಪರಮೇಶ್ವರರಿಗೆ ವಿಶೇಷವಿದೆ ಎಂದು ಸೂತ್ರಕ್ಕೆ ಅರ್ಥವನ್ನು ಮೊದಲು ಮಾಡಿತ್ತು. ಇದು ವರ್ಣಕಾಂತರ.
-
ಯಾವದರಲ್ಲಿ ಯಾವದನ್ನು ಅಧ್ಯಾಸಮಾಡುತ್ತಾರೋ ಅದರ ಗುಣವಾಗಲಿ ದೋಷವಾಗಲಿ ಆ ವಸ್ತುವಿಗೆ ಅಣುಮಾತ್ರವೂ ಸೋಕುವದಿಲ್ಲ ಎಂದು ಅಧ್ಯಾಸಭಾಷ್ಯದಲ್ಲಿ (ಭಾ. ಭಾ. ೪) ಹೇಳಿರುವದನ್ನು ಇಲ್ಲಿ ಲಕ್ಷಕ್ಕೆ ತರಬೇಕು. ಗೀ, ಭಾ. ೧೩-೨ (ಭಾ. ಭಾ. ೭೬೭) ದಲ್ಲಿ ಇದೇ ಅಭಿಪ್ರಾಯವಿದೆ.
ಅಧಿ. ೨. ಸೂ. ೯] ಪೂರ್ವಪಕ್ಷ : ಈ ಅತೃವು ಅಗ್ನಿಯೋ ಜೀವನೋ ಆಗಿರಬೇಕು ೨೬೭ ವಿಶೇಷಾನವಧಾರಣಾತ್ | ತಯಾಣಾಂ ಚ ಅಗ್ನಿಜೀವಪರಮಾತ್ಮನಾಮ್ ಅಸ್ಮಿನ್ ಗ್ರನ್ನೇ ಪ್ರಶ್ನೆಪನ್ಯಾಸೋಪಲಭೇ ||
(ಭಾಷ್ಯಾರ್ಥ) ಕಠವಲ್ಲಿಗಳಲ್ಲಿ “ಯಾವನಿಗೆ ಬ್ರಹ್ಮವೂ ಕತ್ರವೂ ಎರಡೂ ಊಟವಾಗಿರು ವವೋ, ಯಾವನಿಗೆ ಮೃತ್ಯುವು ಉಪ್ಪಿನಕಾಯಿಯಾಗಿರುವದೋ ಆತನು ಎಲ್ಲಿರುವ ನೆಂಬುದನ್ನು ಯಾವನು ಹೀಗೆ ಅರಿತಿರುವನು ?’’ (೧-೨-೨೫) ಎಂದು ಹೇಳಿದೆ. ಇಲ್ಲಿ ಊಟ, ಉಪ್ಪಿನಕಾಯಿ - ಇವುಗಳಿಂದ ಉಪಸೂಚಿತನಾದ ಯಾವನೋ ಒಬ್ಬ ಅತೃವು ತಿಳಿದುಬರುತ್ತಾನೆ. ಇಲ್ಲಿ ಅವು ಅಗ್ನಿಯಾಗಿರಬಹುದೆ, ಅಥವಾ ಜೀವನೆ, ಅಥವಾ ಪರಮಾತ್ಮನೆ ? - ಎಂಬುದು ಸಂಶಯವು. ಏಕೆಂದರೆ ಇಂಥವನೇ ಎಂದು (ಇಲ್ಲಿ) ಒತ್ತಿ ಹೇಳಿರುವದಿಲ್ಲ. ಮತ್ತು ಅಗ್ನಿ, ಜೀವ, ಪರಮಾತ್ಮ - (ಈ) ಮೂವರನ್ನೂ ಕುರಿತು ಕೇಳಿರುವದೂ ಹೇಳಿರುವದೂ ಈ ಗ್ರಂಥದಲ್ಲಿ ಕಂಡುಬರುತ್ತದೆ.
ಪೂರ್ವಪಕ್ಷ : ಈ ಅತೃವು ಅಗ್ನಿಯೋ ಜೀವನೋ ಆಗಿರಬೇಕು
(ಭಾಷ್ಯ) ೧೬೪. ಕಿಂ ತಾವತ್ ಪ್ರಾಪ್ತಮ್ ? ಅಗ್ನಿರತ್ತಾ ಇತಿ | ಕುತಃ ? ‘‘ಅಗ್ನಿರನ್ನಾದಃ” (ಬೃ. ೧-೪-೬) ಇತಿ ಶ್ರುತಿಪ್ರಸಿದ್ಧಿಭ್ಯಾಮ್ | ಜೀವೋ ವಾ ಅತ್ತಾ ಸ್ಮಾತ್ | ‘ತಯೋ ರನ್ಯ: ಪಿಪ್ಪಲಂ ಸ್ವಾದ್ವತಿ’ (ಮುಂ. ೩-೧-೧) ಇತಿ ದರ್ಶನಾತ್ | ನ ಪರಮಾತ್ಮಾ | “ಅನಸ್ಸನ್ನನ್ನೋ ಅಭಿಚಾರಶೀತಿ’ (ಮುಂ. ೩-೧-೧) ಇತಿ ದರ್ಶನಾತ್ ಇತಿ ||
(ಭಾಷ್ಯಾರ್ಥ) ಇಲ್ಲಿ ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದೆ ? ಎಂದರೆ ಅತೃವು ಅಗ್ನಿಯೇ ಎಂದು (ಕಾಣುತ್ತದೆ). ಏಕೆಂದರೆ “ಅಗ್ನಿಯು ಅನಾದನು’ (ಬೃ. ೧-೪-೬)
-
ಕಠೋಪನಿಷತ್ತಿನ ಆರು ವಿಭಾಗಗಳಿಗೆ ವಲ್ಲಿಗಳೆಂದು ಹೆಸರು. 2. ಊಟಕ್ಕೆ ಒಬ್ಬ ಊಟಮಾಡುವವನು ಬೇಕು.
-
“ಸ ತ್ವಮಗ್ನಿಮ್’ (ಕ. ೧-೧-೧೩) ಎಂದು ಅಗ್ನಿಯ ವಿಷಯವನ್ನೂ “ಯೇಯಂ ಪ್ರೇತೇ” (ಕ. ೧-೧-೨೦) ಎಂದು ಜೀವನ ವಿಷಯವನ್ನೂ ಅನ್ಯತ್ರ ಧರ್ಮಾತ್’’ (ಕ. ೧-೨ ೧೪) ಎಂದು ಪರಮಾತ್ಮನ ವಿಷಯವನ್ನೂ ನಚಿಕೇತನು ಕೇಳಿರುತ್ತಾನೆ. ಮುಂದೆ ೧-೪-೬ ರ ಭಾಷ್ಯವನ್ನು ನೋಡಿ.
೨೬೮
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. ಎಂದು ಶ್ರುತಿಯೂ ಲೋಕಪ್ರಸಿದ್ಧಿಯೂ ಇವೆ.’ ಅಥವಾ (ಈ) ಅತೃವು ಜೀವ ನಾಗಬಹುದು. ಏಕೆಂದರೆ ಅವುಗಳಲ್ಲಿ ಒಂದು (ಹಕ್ಕಿಯು) ಪಿಪ್ಪಲವನ್ನು ಸವಿದು ತಿನ್ನುತ್ತದೆ” (ಮುಂ. ೩-೧-೧) ಎಂದು (ಶ್ರುತಿಯಲ್ಲಿರುವದ) ಕಂಡುಬಂದಿದೆ. ಇವನು ಪರಮಾತ್ಮನಲ್ಲ ; ಏಕೆಂದರೆ ಇನ್ನೊಂದು ತಿನ್ನದೆ ನೋಡುತ್ತಿರುತ್ತದೆ’’ (ಮುಂ. ೩-೧-೧) ಎಂದು (ಶ್ರುತಿಯಲ್ಲಿರುವದು) ಕಂಡುಬಂದಿದೆ.
ಸಿದ್ಧಾಂತ : ಪರಮಾತ್ಮನೇ ಜಗತ್ಸಂಹಾರಕರೂಪ ಅತ್ತ
(ಭಾಷ್ಯ) ೧೬೫, ಏವಂ ಪ್ರಾಪ್ತ ಬ್ಯೂಮಃ | ಅತ್ತಾ ಅತ್ರ ಪರಮಾತ್ಮಾ ಭವಿತು ಮರ್ಹತಿ | ಕುತಃ ? ಚರಾಚರಗ್ರಹಣಾತ್ 1 ಚರಾಚರಂ ಹಿ ಸ್ಥಾವರಜಜ್ಜಿಮಂ ಮೃತ್ಯೋಪಸೇಚನಮ್ ಇಹ ಆದ್ಯತೈನ ಪ್ರತೀಯತೇ | ತಾದೃಶಸ್ಯ ಚ ಆದ್ಯಸ್ಯ ನ ಪರಮಾತ್ಮನೋನ್ಯಃ ಕಾರ್ಡ್ಸ್‌ನ ಅತ್ತಾ ಸಂಭವತಿ | ಪರಮಾತ್ಮಾ ತು ವಿಕಾರಜಾತಂ ಸಂಹರನ್ ಸರ್ವಮ್ ಅತ್ತಿ ಇತ್ಯುಪಪದ್ಯತೇ | ನನು ಇಹ ಚರಾಚರಗ್ರಹಣಂ ನೋಪಲಭ್ಯತೇ | ಕಥಂ ಸಿದ್ಧವತ್ ಚರಾಚರಗ್ರಹಣಂ ಹೇತುನ ಉಪಾದೀಯತೇ ? ನೈಷ ದೋಷಃ | ಮೃತ್ಯೋಪಸೇಚನನ ಸರ್ವಸ್ಯ ಪ್ರಾಣಿನಿಕಾಯಸ್ಯ ಪ್ರತೀಯ ಮಾನತ್ವಾತ್ | ಬ್ರಹ್ಮಕ್ಷತ್ರಯೋಶ್ಚ ಪ್ರಾಧಾನ್ಯಾತ್ ಪ್ರದರ್ಶನಾರ್ಥಕ್ಕೋಪಪತೇಃ | ಯತ್ತು ಪರಮಾತ್ಮನೋSಪಿ ನಾತೃತ್ವಂ ಸಂಭವತಿ | ಅನಸ್ಸನ್ನನ್ನೊಭಿಚಾರಶೀತಿ’ ಇತಿ ದರ್ಶನಾತ್ ಇತಿ | ಅಪ್ರೋಚ್ಯತೇ - ಕರ್ಮಫಲಭೋಗಸ್ಯ ಪ್ರತಿಷೇಧಕಮ್ ಏತದ್ ದರ್ಶನಮ್ | ತಸ್ಯ ಸಂನಿಹಿತತ್ವಾತ್ | ನ ವಿಕಾರಸಂಹಾರಸ್ಯ ಪ್ರತಿಷೇಧಕಮ್ | ಸರ್ವವೇದಾನ್ತೇಷು ಸೃಷ್ಟಿಸ್ಥಿತಿಸಂಹಾರಕಾರಣನ ಬ್ರಹ್ಮಣಃ ಪ್ರಸಿದ್ಧತ್ವಾತ್ | ತಸ್ಮಾತ್ ಪರಮಾತ್ಮವ ಇಹ ಅತ್ತಾ ಭವಿತುಮರ್ಹತಿ ||
(ಭಾಷ್ಯಾರ್ಥ) | ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು ) ಹೇಳುತ್ತೇವೆ. ಇಲ್ಲಿರುವ ಅತ್ಮವು ಪರಮಾತ್ಮನಾಗಿರಬೇಕು. ಏಕೆ ? ಎಂದರೆ ಚರಾಚರದ ಗ್ರಹಣವಿರು ವದರಿಂದ. ಚರಾಚರವನ್ನು ಎಂದರೆ ಸ್ಥಾವರಜಂಗಮವನ್ನು ಮೃತ್ಯುವೆಂಬ ಉಪ್ಪಿನಕಾಯಿ (ಯೊಡನೆ) ಇಲ್ಲಿ ಆದ್ಯವಾಗಿ (ಹೇಳಿರುವದು) ಕಾಣುತ್ತದೆಯಲ್ಲವ ? ಅಂಥ ಆದ್ಯ
- ನಚಿಕೇತನು ಕೇಳಿರುವದು ವಿರಾಟ್ಟುರುಷನ ವಿಷಯವಾದರೂ ಆ ಪುರುಷನೇ ಅಗ್ನಿರೂಪದಿಂದಿರುತ್ತಾನೆಂದು ಶ್ರುತಿಪ್ರಸಿದ್ಧಿ.
ಅಧಿ. ೨. ಸೂ. ೧೦]
ಪರಮಾತ್ಮನೇ ಜಗತ್ಸಂಹಾರಕರೂಪ ಅತ್ಯ
೨೬೯
ವನ್ನು ಪರಮಾತ್ಮನ ಹೊರತು ಬೇರೆ ಯಾವನೂ ಪರಿಪೂರ್ಣವಾಗಿ ತಿನ್ನುವವನು ಇರುವಹಾಗಿಲ್ಲ. ಪರಮಾತ್ಮನಾದರೋ ಕಾರ್ಯಸಮೂಹವನ್ನು ಸಂಹಾರಮಾಡುವದ ರಿಂದ (ಅದನ್ನೆಲ್ಲವನ್ನೂ ತಿನ್ನುತ್ತಾನೆ ಎಂಬುದು ಯುಕ್ತವಾಗಿದೆ.
(ಆಕ್ಷೇಪ) :- ಇಲ್ಲಿ ಚರಾಚರಗ್ರಹಣವು ಕಾಣಿಸುವದಿಲ್ಲವಲ್ಲ ! (ಹೀಗಿರು ವಲ್ಲಿ) ಸಿದ್ಧವಾಗಿರುವಂತೆ ಚರಾಚರಗ್ರಹಣವನ್ನು ಹೇತುವಾಗಿ ತಿಳಿದುಕೊಂಡಿರು ವದು ಹೇಗೆ (ಸರಿ) ?
(ಪರಿಹಾರ):- ಇದೇನೂ ದೋಷವಲ್ಲ. ಮೃತ್ಯುವು ಉಪ್ಪಿನಕಾಯಿಯಾಗಿರು ವುದರಿಂದ ಎಲ್ಲಾ ಜೀವರಾಶಿಯೂ (ಅನ್ನವೆಂದು) ತೋರಿಬರುತ್ತದೆ. ಬ್ರಹ್ಮಕ್ಷತ್ರಗ (ಳೆರಡನ್ನೇ ಹೇಳಿರುವದು ಅವು) ಮುಖ್ಯವಾಗಿರುವದರಿಂದ ಉಪಲಕ್ಷಣವಾಗಿ (ಹೇಳಿದೆ) ಎಂಬುದು ಹೊಂದುತ್ತದೆ. ಇನ್ನು ಪರಮಾತ್ಮನಿಗೂ (ಈ) ಅತೃತ್ವವು ಹೊಂದುವಹಾಗಿಲ್ಲ ; ಏಕೆಂದರೆ ಇನ್ನೊಂದು (ಹಕ್ಕಿಯು) ತಿನ್ನದೆ ನೋಡುತ್ತಿರು ಇದೆ” (ಮುಂ. ೩-೧-೧) ಎಂದು (ಶ್ರುತಿಯಲ್ಲಿರುವದು) ಕಂಡುಬರುತ್ತದೆ ಎಂದು (ಪೂರ್ವಪಕ್ಷದಲ್ಲಿ ಹೇಳಿತ್ತಷ್ಟೆ), ಅದಕ್ಕೆ (ಈ ಸಮಾಧಾನವನ್ನು) ಹೇಳುತ್ತೇವೆ : ಈ ಶ್ರುತಿಯು ಕರ್ಮಫಲಭೋಗವನ್ನು (ಮಾತ್ರ) ಅಲ್ಲಗಳೆಯುತ್ತದೆ, ಏಕೆಂದರೆ ಅದೇ (ಆ) ಸನ್ನಿಧಿಯಲ್ಲಿರುತ್ತದೆ. (ಇಷ್ಟೇ ಹೊರತು ಇದು) ಕಾರ್ಯ (ಗಳನ್ನೆಲ್ಲ ಪರಮಾತ್ಮನು) ಸಂಹಾರಮಾಡುವನೆಂಬುದನ್ನು ಇಲ್ಲವೆನ್ನುವದಿಲ್ಲ. ಏಕೆಂದರೆ ಸರ್ವವೇದಾಂತಗಳಲ್ಲಿಯೂ (ಜಗತ್ತಿನ) ಸೃಷ್ಟಿಸ್ಥಿತಿಸಂಹಾರಗಳಿಗೆ ಕಾರಣವೆಂದೇ ಬ್ರಹ್ಮವು ಪ್ರಸಿದ್ಧವಾಗಿರುತ್ತದೆ. ಆದ್ದರಿಂದ (ಇಲ್ಲಿ ಹೇಳಿರುವ) ಅತ್ಯವು ಪರಮಾತ್ಮನೇ ಆಗಿರಬೇಕು.
ಪ್ರಕರಣಾಚ್ಚ Il೧oll ೧೦. ಪ್ರಕರಣದಿಂದಲೂ (ಹೀಗೆಂದು ನಿಶ್ಚಯಿಸಬೇಕು).
(ಭಾಷ್ಯ) ೧೬೬. ಇತಶ್ಚ ಪರಮಾತ್ಮವ ಇಹ ಅತ್ತಾ ಭವಿತುಮರ್ಹತಿ | ಯತ್ಕಾರಣಂ ಪ್ರಕರಣಮಿದಂ ಪರಮಾತ್ಮನಃ ‘‘ನ ಜಾಯತೇ ಪ್ರಿಯತೇ ವಾ ವಿಪಶ್ಚಿತ್’ (ಕ. ೧ ೨-೧೮) ಇತ್ಯಾದಿ ಪ್ರಕೃತಗ್ರಹಣಂ ಚ ನ್ಯಾಯ್ಯಮ್ | “ಕ ಇತ್ಸಾ ವೇದ ಯತ್ರ ಸಃ” (ಕ. ೧-೨-೨೫) ಇತಿ ಚ ದುರ್ವಿಜ್ಞಾನತ್ವಂ ಪರಮಾತ್ಮಲಿಜ್ಮ್ ||
- ಸಂಹಾರವೆಂಬ ಅತೃತ್ವವು ಭೋಕೃತ್ವವಲ್ಲ, ಏಕೆಂದರೆ ಪರಮಾತ್ಮನಿಗೆ ಅದರಲ್ಲಿ ಅಭಿಮಾನವಿಲ್ಲ.
೨೭೦
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. (ಭಾಷ್ಯಾರ್ಥ) ಈ (ಕಾರಣ)ದಿಂದಲೂ ಪರಮಾತ್ಮನೇ ಇಲ್ಲಿ ಅತೃವಾಗಿರಬೇಕು. ಯಾವ ಕಾರಣದಿಂದ ಎಂದರೆ ‘ಜ್ಞಾನಸ್ವರೂಪನಾದ (ಈತನು) ಹುಟ್ಟುವದಿಲ್ಲ, ಸಾಯು ವದೂ ಇಲ್ಲ……” (ಕ. ೧-೨-೧೮) ಎಂದು ಮುಂತಾಗಿರುವ ಇದು ಪರಮಾತ್ಮನ ಪ್ರಕರಣವು. ಪ್ರಕೃತವಾದದ್ದನ್ನು ಗ್ರಹಿಸುವದು ಯುಕ್ತವೂ ಆಗಿದೆ. “ಆತನು ಎಲ್ಲಿರುವನೆಂಬುದನ್ನು ಹೀಗೆ ಯಾವನು ಅರಿತಾನು ? (ಕ. ೧-೨-೨೪) ಎಂದು (ಈತನನ್ನು) ಅರಿಯುವದು ಕಷ್ಟವೆಂದು (ತಿಳಿಸಿರುವದೂ) ಪರಮಾತ್ಮನ ಲಿಂಗ ವಾಗಿರುತ್ತದೆ.
. ೩. ಗುಹಾಪ್ರವಿಷ್ಕಾಧಿಕರಣ (೧೧-೧೨) (ಕಠ ೧-೩-೧ ರಲ್ಲಿ ಹೇಳಿರುವ ಗುಹಾಪ್ರವಿಷ್ಟರು ಜೀವಪರಮಾತ್ಮರು)
ಗುಹಾಂ ಪ್ರವಿಷ್ಕಾವಾತ್ಮಾನೌ ಹಿ ತದ್ದರ್ಶನಾತ್ |lmall
೧. ಗುಹೆಯನ್ನು ಹೊಕ್ಕವರು (ಇಬ್ಬರೂ) ಆತ್ಮರು ; ಏಕೆಂದರೆ ಹಾಗೆಂದು ಕಂಡಿರುತ್ತದೆ.
ವಿಷಯವೂ ಸಂಶಯವೂ
(ಭಾಷ್ಯ) ೧೬೭. ಕಠವಷ್ಟೇವ ಪಠ್ಯತೇ - ‘‘ಋತಂ ಪಿಬನೌ ಸುಕೃತಸ್ಯ ಲೋಕೇ ಗುಹಾಂ ಪ್ರವಿಷ್ಟೇ ಪರಮೇ ಪರಾರ್ಧ | ಛಾಯಾತಪ್ರೌ ಬ್ರಹ್ಮವಿದೋ ವದನ್ತಿ ಪಞಾಗ್ನಯೋ ಯೇ ಚ ತ್ರಿಣಾಚಿಕೇತಾಃ’ (ಕ. ೧-೩-೧) ಇತಿ | ತತ್ರ ಸಂಶಯಃ || ಕಿಮಿಹ ಬುದ್ದಿಜೀವ್ ನಿರ್ದಿಷ್ಟ ಉತ ಜೀವಪರಮಾತ್ಮಾನೌ ಇತಿ | ಯದಿ ಬುದ್ಧಿಜೀವ್, ತತಃ ಬುದ್ಧಿಪ್ರಧಾನಾತ್ ಕಾರ್ಯಕರಣಸಜ್ಜಾತಾತ್ ವಿಲಕ್ಷಣೋ ಜೀವಃ ಪ್ರತಿಪಾದಿತೋ ಭವತಿ | ತದಪಿ ಇಹ ಪ್ರತಿಪಾದಯಿತವ್ಯಮ್ | “ಯೇಯಂ ಪ್ರೇತೇ
-
ಅಗ್ನಿಜೀವರುಗಳ ಪ್ರಕರಣವಲ್ಲ.
-
“ನಾವಿರತೋ ದುಶ್ಚರಿತಾತ್’ ಎಂಬ ಹಿಂದಿನ ಮಂತ್ರದಲ್ಲಿ ಹೇಳಿರುವ ಸಾಧನ ಸಂಪತ್ತುಳ್ಳವನಂತೆ ಎಂದರ್ಥ. ಜ್ಞಾನಕ್ಕೆ ಪ್ರತಿಷಿದ್ಧ ತ್ಯಾಗವೂ ಶಮಾದಿಗಳೂ ಅತ್ಯವಶ್ಯವೆಂದು
ಭಾವ.
- ಪ್ರಕರಣವಾಗಲಿ ಲಿಂಗವಾಗಲಿ ಇಲ್ಲದ್ದರಿಂದ ಅಗ್ನಿಜೀವರುಗಳಲ್ಲ.
ಅಧಿ. ೩. ಸೂ. M] ಸಂಶಯದ ವಿಷಯಕ್ಕೆ ಆಕ್ಷೇಪಸಮಾಧಾನಗಳು
೨೭೧ ವಿಚಿಕಿತ್ಸಾ ಮನುರ್ಷ್ಕತ್ಯೇಕೇ ನಾಯಮಸ್ತಿತಿ ಚೈಕೇ | ಏತದ್ವಿದ್ಯಾಮನು ಶಿಷ್ಟಯಾಹಂ ವರಾಣಾಮೇಷ ವರದೃತೀಯಃ’ (ಕ. ೧-೧-೨೦) ಇತಿ ಸೃಷ್ಟತಾತ್ 1 ಅಥ ಜೀವಪರಮಾತ್ಮಾನೌ, ತತಃ ಜೀವಾದ್ವಿಲಕ್ಷಣಃ ಪರಮಾತ್ಮಾ ಪ್ರತಿಪಾದಿತೋ ಭವತಿ ತದಪಿ ಇಹ ಪ್ರತಿಪಾದಯಿತವ್ಯಮ್ | “ಅನ್ಯತ್ರ ಧರ್ಮಾ ದನ್ಯತ್ರಾಧರ್ಮಾದನ್ಯತಾಸ್ಮಾತ್ ಕೃತಾಕೃತಾತ್ | ಅನ್ಯತ್ರ ಭೂತಾಚ್ಚ ಭವ್ಯಾಚ್ಚ ಯತ್ ತತ್ ಪಶ್ಯಸಿ ತದ್ ವದ !’’ (ಕ. ೧-೨-೧೪) ಇತಿ ಪೃಷ್ಯತ್ಯಾತ್ ||
(ಭಾಷ್ಯಾರ್ಥ) ಕಠವಲ್ಲಿಗಳಲ್ಲಿಯೇ ಹೇಳಿರುವದೇನೆಂದರೆ : ‘ಸುಕೃತದಲೋಕದಲ್ಲಿ ಋತವನ್ನು ಪಾನಮಾಡುತ್ತಾ ಹೆಚ್ಚಿನ ಪರಾರ್ಧದಲ್ಲಿ ಗುಹೆಯನ್ನು ಹೊಕ್ಕಿರುವ (ಇಬ್ಬರನ್ನು ) ನೆರಳುಬಿಸಿಲುಗಳೆಂದು ಬ್ರಹ್ಮವಿದರೂ ಪಂಚಾಗ್ನಿಗಳೂ ಮತ್ತು ತ್ರಿಷಾಚಿಕೇತರಾಗಿರುವರಲ್ಲ (ಅವರೂ) ಹೇಳುವರು” (ಕ. ೧-೩-೧). ಇಲ್ಲಿ ಸಂಶಯವೇನೆಂದರೆ, ಇಲ್ಲಿ ಬುದ್ದಿಜೀವರುಗಳನ್ನು ಹೇಳಿದೆಯ, ಜೀವಪರಮಾತ್ಮರನ್ನು (ಹೇಳಿದೆಯೆ) ? ಬುದ್ದಿಜೀವರುಗಳನ್ನು (ಹೇಳಿದೆ ಎಂದಾದರೆ) ಆಗ ಬುದ್ದಿ ಪ್ರಧಾನವಾದ ಕಾರ್ಯಕರಣಸಂಘಾತಕ್ಕಿಂತ ವಿಲಕ್ಷಣವಾದ ಜೀವನನ್ನು ತಿಳಿಸಿಕೊಟ್ಟಂತೆ ಆಗುತ್ತದೆ. ಅದನ್ನೂ ಇಲ್ಲಿ ತಿಳಿಸಿಕೊಡಬೇಕಾಗಿದೆ. ಏಕೆಂದರೆ ‘ಸತ್ತ ಮನುಷ್ಯನ ವಿಷಯದಲ್ಲಿ ಇವನು ಇರುತ್ತಾನೆಂದು ಕೆಲವರು, ಇರುವದಿಲ್ಲವೆಂದು ಕೆಲವರು - ಹೀಗೆ ಸಂಶಯವಿರುವದಷ್ಮೆ, ನಿನ್ನಿಂದ ಅನುಶಿಷ್ಟನಾಗಿ ನಾನು ಇದನ್ನು ಅರಿತುಕೊಳ್ಳಬೇಕು. ವರಗಳಲ್ಲಿ ಈ ವರವು ಮೂರನೆಯದು” (ಕ. ೧-೧-೨೦) ಎಂದು (ನಚಿಕೇತನು) ಕೇಳಿಕೊಂಡಿರುತ್ತಾನೆ. ಹಾಗಲ್ಲದೆ ಜೀವಪರಮಾತ್ಮರು ಎಂದಾದರೆ, ಆಗ ಜೀವನಿಗಿಂತ ವಿಲಕ್ಷಣನಾದ ಪರಮಾತ್ಮನನ್ನು ತಿಳಿಸಿಕೊಟ್ಟಂತೆ ಆಗುತ್ತದೆ. ಅದನ್ನೂ ಇಲ್ಲಿ ತಿಳಿಸಿಕೊಡಬೇಕಾಗಿದೆ. ಏಕೆಂದರೆ “ಧರ್ಮಕ್ಕಿಂತ ಬೇರೆಯಾಗಿ ಅಧರ್ಮಕ್ಕಿಂತ ಬೇರೆಯಾಗಿ ಈ ಕೃತಾಕೃತಕ್ಕಿಂತ ಬೇರೆಯಾಗಿ ಭೂತಕ್ಕಿಂತಲೂ ಭವ್ಯಕ್ಕಿಂತಲೂ ಬೇರೆ(ಯಾಗಿರುವ) ಯಾವದನ್ನು ನೀನು ಕಂಡಿರುವೆಯೋ ಅದನ್ನು ನೀನು ಹೇಳು” (ಕ. ೧-೨-೧೪) ಎಂದು (ನಚಿಕೇತನು) ಕೇಳಿಕೊಂಡಿರುತ್ತಾನೆ.
ಸಂಶಯದ ವಿಷಯಕ್ಕೆ ಆಕ್ಷೇಪಸಮಾಧಾನಗಳು
(ಭಾಷ್ಯ) ೧೬೮. ಅತ್ರಾಹ ಆಕ್ಷೇಪ್ಪಾ - ಉಭಾವಪಿ ಏತೇ ಪಕ್ಷ ನ ಸಂಭವತಃ | ಕಸ್ಮಾತ್ ? ಋತಪಾನಂ ಕರ್ಮಫಲೋಪಭೋಗಃ | ‘ಸುಕೃತಸ್ಯ ಲೋಕೇ’ ಇತಿ೨೭೨
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಅಜ್ಞಾತ್ | ತತ್ ಚೇತನಸ್ಯ ಕ್ಷೇತ್ರಜ್ಞಸ್ಯ ಸಂಭವತಿ, ನಾಚೇತನಾಯಾ ಬುದ್ಧಃ | ಪಿಬ ಇತಿ ಚ ದ್ವಿವಚನೇನ ದ್ವಯೋ ಪಾನಂ ದರ್ಶಯತಿ ಶ್ರುತಿಃ | ಅತೋ ಬುದ್ದಿ ಕ್ಷೇತ್ರಜ್ಞಪಕ್ಷಸ್ತಾವತ್ ನ ಸಂಭವತಿ | ಅತ ಏವ ಕ್ಷೇತ್ರಜ್ಞಪರಮಾತ್ಮಪಕ್ಟೋSಪಿ ನ ಸಂಭವತಿ | ಚೇತನೇಪಿ ಪರಮಾತ್ಮನಿ ಋತಪಾನಾಸಂಭವಾತ್ |’’ ‘ಅನಶ್ನನ್ನನ್ನೋ ಅಭಿಚಾರಶೀತಿ’’ ಇತಿ ಮನವರ್ಣಾದಿತಿ | ಅತ್ರೋಚ್ಯತೇ 1 ನೈಷ ದೋಷಃ | ‘ಛತ್ರಿ ಗಚ್ಛನ್ತಿ’ ಇತಿ ಏಕೇನಾಪಿ ಛತ್ರಣಾ ಬಲೂನಾಂ ಛತ್ರಿಕ್ಟೋಪಚಾರದರ್ಶನಾತ್ | ಏವಮ್ ಏಕೇನಾಪಿ ಪಿಬತಾ ದೌ ಪಿಬನ್ಸ್ ಉಚ್ಯತೇ | ಯದ್ವಾ ಜೀವಸ್ತಾವತ್ ಪಿಬತಿ, ಈಶ್ವರಸ್ತು ಪಾಯಯತಿ | ಪಾಯ ಯನ್ನಪಿ ‘ಪಿಬತಿ’ ಇತ್ಯುಚ್ಯತೇ | ಪಾಚಯಿತರ್ಯಪಿ ಪಕೃತ್ವಪ್ರಸಿದ್ಧಿದರ್ಶನಾತ್ | ಬುದ್ದಿ ಕ್ಷೇತ್ರಜ್ಞಪರಿಗ್ರಹೋಪಿ ಸಂಭವತಿ | ಕರಣೇ ಕರ್ತಕ್ಕೋಪಚಾರಾತ್ | ‘ಏಧಾಂಸಿ ಪಚನ್ನಿ’ ಇತಿ ಪ್ರಯೋಗದರ್ಶನಾತ್ | ನ ಚ ಅಧ್ಯಾತ್ಮಾಧಿಕಾರೇ ಅನ್ಯ ಕೌಚಿತ್ ದ್ವ, ಋತಂ ಪಿಬನ್ನೆ ಸಂಭವತಃ | ತಸ್ಮಾತ್ ಬುದ್ಧಿಜೀವ್ ಸ್ಮಾತಾಮ್, ಜೀವಪರಮಾತ್ಮಾನೌ ವಾ ಇತಿ ಸಂಶಯಃ ||
(ಭಾಷ್ಯಾರ್ಥ) ಇಲ್ಲಿ ಆಕ್ಷೇಪಕನು ಹೇಳುತ್ತಾನೇನೆಂದರೆ : ಈ ಎರಡು ಪಕ್ಷಗಳೂ ಹೊಂದುವ ಹಾಗಿಲ್ಲ. ಏಕೆಂದರೆ, ಋತಪಾನವೆಂದರೆ ಕರ್ಮದ ಫಲವನ್ನು ಉಪಯೋಗಿಸುವದು. ‘ಸುಕೃತದ ಲೋಕದಲ್ಲಿ’ ಎಂಬ ಲಿಂಗವಿರುವದರಿಂದ (ಈ ಅರ್ಥವನ್ನು ಮಾಡ ಬೇಕಾಗಿದ). ಅದು ಚೇತನನಾದ ಕ್ಷೇತ್ರಜ್ಞನಿಗೆ ಹೊಂದುತ್ತದೆಯೇ ಹೊರತು ಅಚೇತನವಾದ ಬುದ್ಧಿಗೆ (ಹೊಂದು)ವದಿಲ್ಲ. ಮತ್ತು ಪಿಬನ್ಸ್ (ಪಾನಮಾಡುವವ ರಾಗಿ) ಎಂದು ದ್ವಿವಚನವನ್ನು ಉಪಯೋಗಿಸಿರುವದರಿಂದ ಇಬ್ಬರು ಪಾನ (ಮಾಡುವವರೆಂದು) ಶ್ರುತಿಯು ತೀಳಿಸುತ್ತದೆ. ಆದ್ದರಿಂದ ಮೊದಲನೆಯದಾಗಿ ಬುದ್ಧಿ ಕ್ಷೇತ್ರಜ್ಞರು (ಋತಪಾನವನ್ನು ಮಾಡುವವರು) ಎಂಬ ಪಕ್ಷವು ಹೊಂದುವದಿಲ್ಲ. ಆದ್ದರಿಂದಲೇ ಕ್ಷೇತ್ರಜ್ಞಪರಮಾತ್ಮರು (ಋತಪಾನವನ್ನು ಮಾಡುವವರು) ಎಂಬ ಪಕ್ಷವೂ ಹೊಂದುವಹಾಗಿಲ್ಲ. ಏಕೆಂದರೆ ಪರಮಾತ್ಮನು ಚೇತನನಾದರೂ “ಇನ್ನೊಂದು (ಹಕ್ಕಿಯು) ತಿನ್ನದೆ ನೋಡುತ್ತಾ ಇರುತ್ತದೆ”. (ಮುಂ.) ಎಂದು ಮಂತ್ರವರ್ಣವಿರುವದರಿಂದ (ಅವನಿಗೆ) ಋತಪಾನವು ಹೊಂದುವಹಾಗಿಲ್ಲ.
ಈ (ಪೂರ್ವಪಕ್ಷಕ್ಕೆ ನಾವು) ಹೇಳುವ (ಸಮಾಧಾನ)ವೇನೆಂದರೆ, ಇದು (ಈ) ಪಕ್ಷಗಳ ದೋಷವಲ್ಲ. ಏಕೆಂದರೆ ‘ಕೊಡೆಯವರು ಹೋಗುತ್ತಿದಾರೆ’ ಎಂದು ಒಬ್ಬನೇ ಕೊಡೆಯವನು ಇದ್ದರೂ ಬಲುಮಂದಿಯನ್ನು ಕೊಡೆಯವರು ಎಂದು
ಅಧಿ. ೩. ಸೂ. ] ಪೂರ್ವಪಕ್ಷ : ಗುಹಾಪ್ರವಿಷ್ಟರೆಂದರೆ ಬುದ್ಧಿ ಕ್ಷೇತ್ರಜ್ಞರು ೨೭೩ ಕರೆಯುವದು ಕಂಡುಬರುತ್ತದೆ. ಇದರಂತೆ ಒಬ್ಬನು ಕುಡಿಯುತ್ತಿದ್ದರೂ ಇಬ್ಬರನ್ನು “ಕುಡಿಯುವವರು’ ಎಂದು ಹೇಳಿದೆ (ಎನ್ನಬಹುದು). ಅಥವಾ ಜೀವನಂತೂ ಕುಡಿಯುತ್ತಾನೆ, ಈಶ್ವರನಾದರೋ ಕುಡಿಸುತ್ತಾನೆ. ಕುಡಿಸುವವನಾದರೂ (ಈಶ್ವರ ನನ್ನು) ‘ಕುಡಿಯುತ್ತಾನೆ’ ಎಂದಿದೆ (ಎಂದಾದರೂ ಹೇಳಬಹುದು). ಏಕೆಂದರೆ ಅಡಿಗೆಮಾಡಿಸುವವನನ್ನೂ ಅಡಿಗೆಮಾಡುವವನು (ಎಂದು) ಕರೆಯುವ ಪ್ರಸಿದ್ಧಿಯು ಕಂಡುಬರುತ್ತದೆ. (ಇಲ್ಲಿ) ಬುದ್ದಿ ಕ್ಷೇತ್ರಜ್ಞರು (ಋತಪಾನವನ್ನು ಮಾಡುವವರು ಎಂದು) ಇಟ್ಟುಕೊಂಡರೂ ಆಗುತ್ತದೆ. ಏಕೆಂದರೆ ಕಟ್ಟಿಗೆಗಳು ಬೇಯಿಸುತ್ತವೆ’ ಎಂಬ ಪ್ರಯೋಗವೂ ಕಂಡುಬರುವದರಿಂದ ಕರಣವಾದ (ಬುದ್ದಿಯಲ್ಲಿಯೂ) ಕರ್ತತ್ವ ವನ್ನು ಉಪಚಾರಕ್ಕೆ (ಹೇಳಿದೆ ಎನ್ನಬಹುದು). (ಇದಲ್ಲದ) ಅಧ್ಯಾತ್ಮಪ್ರಕರಣದಲ್ಲಿ ಋತಪಾನವನ್ನು ಮಾಡುವವರು ಬೇರೆಯಿಬ್ಬರು ಮತ್ತೆ ಯಾರೂ ಇರುವಹಾಗಿಲ್ಲ. ಆದ್ದರಿಂದ (ಇವರು) ಬುದ್ದಿಜೀವರಾಗಬೇಕೊ, ಅಥವಾ ಜೀವಪರಮಾತ್ಮ (ರಾಗ ಬೇಕೊ) ? - ಎಂದು ಸಂಶಯ (ಉಂಟಾಗುವದು ಯುಕ್ತವಾಗಿದೆ).
ಪೂರ್ವಪಕ್ಷ : ಗುಹಾಪ್ರವಿಷ್ಟರೆಂದರೆ ಬುದ್ದಿ ಕ್ಷೇತ್ರಜ್ಞರು
(ಭಾಷ್ಯ) ೧೬೯. ಕಿಂ ತಾವತ್ ಪ್ರಾಪ್ತಮ್ ? ಬುದ್ದಿ ಕ್ಷೇತ್ರಜ್ಞಾ ಇತಿ ಕುತಃ ? ‘ಗುಹಾಂ ಪ್ರವಿಷ್’ ಇತಿ ವಿಶೇಷಣಾತ್ | ಯದಿ ಶರೀರಂ ಗುಹಾ, ಯದಿ ವಾ ಹೃದಯಂ, ಉಭಯಥಾಪಿ ಬುದ್ದಿ ಕ್ಷೇತ್ರಜ್ಞ ಗುಹಾಂ ಪ್ರವಿಷ್ ಉಪಪತೇ ನ ಚ ಸತಿ ಸಂಭವೇ ಸರ್ವಗತಸ್ಯ ಬ್ರಹ್ಮಣಃ ವಿಶಿಷ್ಟ ದೇಶತ್ವಂ ಯುಕ್ತಂ ಕಲ್ಪಯಿತುಮ್ | ‘ಸುಕೃತಸ್ಯ ಲೋಕೇ’ ಇತಿ ಚ ಕರ್ಮಗೋಚರಾನತಿಕ್ರಮಂ ದರ್ಶಯತಿ | ಪರಮಾತ್ಮಾ ತು ನ ಸುಕೃತಸ್ಯ ವಾ ದುಷ್ಟತಸ್ಯ ವಾ ಗೋಚರೇ ವರ್ತತೇ । ನ ಕರ್ಮಣಾ ವರ್ಧತೇ
-
‘ಛತ್ರಿಣಃ’ ಎಂದರೆ ಇವರ ಗುಂಪಿನಲ್ಲಿ ಕೊಡೆಯಿದೆ ಎಂದೂ ಅರ್ಥವಾಗಬಹುದು. ಛತ್ರಮ್ ಏಷಾಮ್ ಅಸ್ತಿ, ಛತ್ರಾಣಿ ಏಷಾಂ ಸನ್ನಿ - ಎಂದು ಎರಡು ಬಗೆಯಲ್ಲಿಯೂ ಇದನ್ನು ಸಂದರ್ಭಾನುಸಾರವಾಗಿ ಬಿಡಿಸಬಹುದು. ಇದರಂತೆ ‘ಪಿಬನ್ಸ್. ಎಂಬ ಮಾತನ್ನೂ ತಿಳಿದುಕೊಳ್ಳ ಬಹುದೆಂಬ ಭಾವ. ಛನ್ಯಾಯವನ್ನು ಜೈ. ಸೂ. ೪-೭-೧೨ರ ಭಾಷ್ಯದಲ್ಲಿ ಉಪಯೋಗಿಸಿದ.
-
ಅಡಿಗೆಯನ್ನು ಮಾಡುವನೆಂದು ಒಪ್ಪಿಕೊಂಡು ಪರಿಚಾರಕರಿಂದ ಅಡಿಗೆಯನ್ನು ಮಾಡಿಸುವವನನ್ನೂ ‘ಪಾಚಕನು’ (ಅಡಿಗೆಮಾಡುವವನು) ಎನ್ನವರು. ಸೇನೆಯ ಮೂಲಕವಾಗಿ ಯುದ್ಧ ಮಾಡುವ ರಾಜನನ್ನೂ ಯುದ್ಧ ಮಾಡುವವನು ಎನ್ನುವರು. ಹೀಗೆ ಕಾರಯಿತೃವಿನಲ್ಲಿ ಕರ್ತತ್ವವನ್ನು ಹೇಳುವ ಮಾತನ್ನು ಪ್ರಯೋಗಿಸುವದುಂಟು.
೨೭೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ನೋ ಕನೀಯಾನ್’’ (ಬೃ. ೪-೪-೨೩ ? ತೈ. ಬ್ರಾ. ೩-೧೨-೫೫) ಇತಿ ಶ್ರುತೇ | “ಛಾಯಾ ತಪ್’ ಇತಿ ಚ ಚೇತನಾಚೇತನಯೋರ್ನಿದ್ರಶಃ ಉಪಪದ್ಯತೇ | ಛಾಯಾತಪವತ್ ಪರಸ್ಪರವಿಲಕ್ಷಣತ್ವಾತ್ | ತಸ್ಮಾದ್ ಬುದ್ದಿ ಕ್ಷೇತ್ರಜ್ಞಾ ಇಹ ಉಚ್ಯಾತಾಮ್ ಇತಿ ||
(ಭಾಷ್ಯಾರ್ಥ) ಮೊದಲು ಯಾವ (ಪಕ್ಷವು) ಬಂದೊದಗುತ್ತದೆ ? ಎಂದರೆ, ಬುದ್ದಿ ಕ್ಷೇತ್ರಜ್ಞರೇ (ಗುಹಾಪ್ರವಿಷ್ಟರು) ಎಂದು (ತೋರುತ್ತದೆ.) ಏಕೆ ? ಎಂದರೆ ‘ಗುಹೆಯನ್ನು ಹೊಕ್ಕವರು’ ಎಂಬ ವಿಶೇಷಣವಿರುವದರಿಂದ ಶರೀರವೇ ಗುಹೆಯಾಗಲಿ, ಹೃದಯವೇ ಗುಹೆಯಾಗಲಿ, ಎರಡು ಪ್ರಕಾರದಿಂದಲೂ ಬುದ್ದಿ ಕ್ಷೇತ್ರಜ್ಞರೇ ಗುಹೆಯನ್ನು ಹೊಕ್ಕಿರು ವವರು ಎಂಬುದು ಯುಕ್ತವಾಗಿದೆ. (ಇನ್ನೊಂದರ) ಸಂಭವವಿರುವಲ್ಲಿ ಸರ್ವಗತ ವಾಗಿರುವ ಬ್ರಹ್ಮವು (ಒಂದಾನೊಂದು) ಗೊತ್ತಾದ ದೇಶದಲ್ಲಿದೆ ಎಂದು ಕಲ್ಪಿಸು ವದು ಯುಕ್ತವೂ ಅಲ್ಲ. ಇದೂ ಅಲ್ಲದೆ ‘ಸುಕೃತದ ಲೋಕದಲ್ಲಿ’ (ಋತವನ್ನು ಪಾನಮಾಡುವವನು)’ ಎಂದು ಕರ್ಮಗೋಚರ (ವಾಗಿರುವ ಕ್ಷೇತ್ರವನ್ನು) ಮೀರಿಲ್ಲ ವಂದು (ಶ್ರುತಿ) ತಿಳಿಸುತ್ತದ. ಪರಮಾತ್ಮನೋ ಎಂದರೆ ಸುಕೃತದ ಅಥವಾ ದುಷ್ಕೃತದ ಗೋಚರದಲ್ಲಿರುವದಿಲ್ಲ. ‘‘ಕರ್ಮದಿಂದ ಬೆಳೆಯುವದಿಲ್ಲ, ಕುಗ್ಗುವವನೂ ಆಗುವ ದಿಲ್ಲ’ (ಬೃ. ೪-೪-೨೩ ? ತ್ಯ. ಬ್ರಾ. ೩-೧೨-೫೫) ಎಂಬ ಶ್ರುತಿಯಿಂದ (ಇದು ಸಿದ್ಧವಾಗುತ್ತದೆ). ‘ನೆರಳುಬಿಸಿಲುಗಳು’ ಎಂದು ಚೇತನಾಚೇತನರನ್ನು ತಿಳಿಸುವದು ಯುಕ್ತವಾಗಿರುತ್ತದೆ ; ಏಕೆಂದರೆ (ಅವು) ನೆರಳುಬಿಸಿಲುಗಳಂತೆ ಒಂದಕ್ಕಿಂತ ಒಂದು ವಿಲಕ್ಷಣವಾಗಿರುತ್ತವೆ. ಆದ್ದರಿಂದ ಇಲ್ಲಿ ಬುದ್ಧಿಜೀವರುಗಳನ್ನು ಹೇಳಿರಬೇಕು. ಸಿದ್ಧಾಂತ : ಜೀವಪರಮಾತ್ಮರನ್ನೇ ಗುಹಾಪ್ರವಿಷ್ಟರೆಂದಿದೆ
(ಭಾಷ್ಯ) ೧೭೦. ಏವಂ ಪ್ರಾಪ್ತ ಬೂಮಃ | ವಿಜ್ಞಾನಾತ್ಮಪರಮಾತ್ಮಾನೌ ಇಹ
- ‘ಸುಕೃತಸ್ಯ ಲೋಕೇ’ ಎಂಬುದಕ್ಕೆ ಕರ್ಮದ ಕ್ಷೇತ್ರದಲ್ಲಿ ಎಂಬ ಅರ್ಥವನ್ನು ಇಲ್ಲಿ ತೆಗೆದಿರುವಂತೆ ಇದೆ. ಈ ಭಾಷ್ಯದ ಆಧಾರದಿಂದಲೇ ನಾವು ಸುಕೃತದ ಲೋಕದಲ್ಲಿ ಎಂದು ಕನ್ನಡಿಸಿರುವದು, ಉಪನಿಷದ್ಭಾಷ್ಯದಲ್ಲಿ ಸುಕೃತಸ್ಯ ಎಂಬುದನ್ನು ಋತಂ ಎಂಬುದರೂಡನ
ಅನ್ವಯಿಸಿರುತ್ತದೆ. ಈ ಹೆಚ್ಚು ಕಡಿಮಗ ಕಾರಣವೇನೋ ತಿಳಿಯದು.
- ಜೀವಾತ್ಮಪರಮಾತ್ಮರನ್ನು ತೆಗೆದುಕೊಂಡರೆ ಈ ವೈಲಕ್ಷಣ್ಯವು ಸಿಕ್ಕುವದಿಲ್ಲ ಎಂದು ಭಾವ.
ತೀಯಃ ಅನ್ನಿಷತ್ ಗೋರ್ದ್ವಿತೀಯೊನಸ್ವಭಾವೇಷ್ಟೇವ
ಅಧಿ. ೩. ಸೂ. M] ಪೂರ್ವಪಕ್ಷದ ಯುಕ್ತಿಗೆ ಸಮಾಧಾನ
೨೭೫
ಉಚ್ಯಾತಾಮ್ | ಕಸ್ಮಾತ್ ? ಆತ್ಮಾನ್ ಹಿ ತ ಉಭಾವಪಿ ಚೇತನ್
ಸಮಾನಸ್ವಭಾವ್ | ಸಂಖ್ಯಾಶ್ರವಣೇ ಚ ಸಮಾನಸ್ವಭಾವೇವ ಲೋಕೇ ಪ್ರತೀತಿರ್ದಶ್ಯತೇ | ‘ಅಸ್ಯ ಗೋರ್ದ್ಭತೀರ್ಯೋತ್ಯೇಷ್ಟ್ರವ್ಯಃ’ ಇತ್ಯ ಗೌರವ ದ್ವಿತೀಯಃ ಅಗ್ಗಿಷ್ಯತೇ, ನಾಶ್ಚ: ಪುರುಷೋ ವಾ 1 ತದಿಹ ಋತಪಾನೇನ ಲಿಚ್ಚನ ನಿಶ್ಚಿತೇ ವಿಜ್ಞಾನಾತ್ಮನಿ ದ್ವಿತೀಯಾನ್ವೇಷಣಾಯಾಂ ಸಮಾನಸ್ವಭಾವಕ್ಕೇತನಃ ಪರಮಾತ್ಮನ ಪ್ರತೀಯತೇ ||
(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಇದಕ್ಕೆ ಉತ್ತರವನ್ನು ) ಹೇಳುವೆವು. ಇಲ್ಲಿ ವಿಜ್ಞಾನಾತ್ಮಪರಮಾತ್ಮರನ್ನು ಹೇಳಿರಬೇಕು. ಏಕೆ ? ಎಂದರೆ, ಅವರಿಬ್ಬರೂ ಆತ್ಮರುಗಳಾಗಿ ಚೇತನರಾಗಿ ಸಮಾನವಾದ ಸ್ವಭಾವವುಳ್ಳವರಾಗಿರು ವದರಿಂದ, ಲೋಕದಲ್ಲಿ ಸಂಖ್ಯೆಯನ್ನು (ಹೇಳಿರುವದನ್ನು ) ಕೇಳಿದರೆ, ಸಮಾನವಾದ ಸ್ವಭಾವವುಳ್ಳವುಗಳ ವಿಷಯದ ಪ್ರತೀತಿಯೇ ಆಗುವದು ಕಂಡುಬಂದಿರುತ್ತಿದೆ. (ಹೇಗೆಂದರೆ, ‘ಈ ಎತ್ತಿಗೆ ಎರಡನೆಯದನ್ನು ಹುಡುಕಬೇಕು’ ಎಂದರೆ ಎರಡನೆಯ ಎತ್ತನ್ನೇ ಹುಡುಕುತ್ತಾರೆಯೇ ಹೊರತು ಕುದುರೆಯನ್ನಾಗಲಿ ಮನುಷ್ಯನನ್ನಾಗಲಿ ಹುಡುಕುವದಿಲ್ಲ. ಆದ್ದರಿಂದ ಋತಪಾನವೆಂಬ ಲಿಂಗದಿಂದ ವಿಜ್ಞಾನಾತ್ಮ (ನೊಬ್ಬ) ನೆಂದು ನಿಶ್ಚಯವಾದಮೇಲೆ, ಎರಡನೆಯದನ್ನು ಹುಡುಕಬೇಕಾಗಿರುವಲ್ಲಿ (ಅವನಿಗೆ) ಸಮಾನವಾದ ಸ್ವಭಾವವುಳ್ಳ ಚೇತನನಾದ ಪರಮಾತ್ಮನೇ (ಮನಸ್ಸಿಗೆ) ತೋರುತ್ತಾನ. ಪೂರ್ವಪಕ್ಷದ ಯುಕ್ತಿಗೆ ಸಮಾಧಾನ
(ಭಾಷ್ಯ) ೧೭೧. ನನು ಉಕ್ತಮ್ ಗುಹಾಹಿತತ್ವದರ್ಶನಾತ್ ನ ಪರಮಾತ್ಮಾ ಪ್ರತ್ಯೇತವ್ಯ: ಇತಿ | ಗುಹಾಂತತ್ವದರ್ಶನಾದೇವ ಪರಮಾತ್ಮಾ ಪ್ರತ್ಯೇತವಃ ಇತಿ ವದಾಮಃ | ಗುಹಾಹಿತತ್ವಂ ತು ಶ್ರುತಿಸ್ಕೃತಿಷ್ಟಸಕೃತ್ ಪರಮಾತ್ಮನ ಏವ ದೃಶ್ಯತೇ 1 “ಗುಹಾಹಿತಂ ಗಹ್ಯರೇಷ್ಠಮ್ ಪುರಾಣಮ್” (ಕ. ೧-೨-೧೨), ‘ಯೋ ವೇದ ನಿಹಿತಂ ಗುಹಾಯಾಂ ಪರಮೇ ತ್ರೈಮನ್’’ (ತೈ. ೨-೧), ‘ಆತ್ಮಾನಮನ್ನಿಚ್ಛ ಗುಹಾಂ ಪ್ರವಿಷ್ಟಮ್’’
- ‘ಆತ್ಮಾನೌ ಹಿ’ ಎಂಬ ಸೂತ್ರಭಾಗಕ್ಕೆ ಜೀವಪರಮಾತ್ಮರಿಬ್ಬರನ್ನೂ ಹೇಳಿದ ಎಂದು ಅಭಿಪ್ರಾಯವಿಲ್ಲ. ಒಬ್ಬನು ಜೀವನೆಂದು ಗೊತ್ತಾಗಿರುವದನ್ನು ಅನುವಾದಮಾಡಿಕೊಂಡು ಅವನಿಗೆ ಸಮಾವಸ್ಯಭಾವನಾಗಿರುವದರಿಂದ ಎರಡನೆಯವನಾದ ಪರಮಾತ್ಮನನ್ನೇ ಶ್ರುತಿಯಲ್ಲಿ ಪ್ರತಿಪಾದಿ ಸಿದೆ ಎಂದು ಅಭಿಪ್ರಾಯ.
೨೭೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
(ಮೋ.ಧ.೧೭೫-೩೮) ಇತ್ಯಾದ್ಯಾಸು ಸರ್ವಗತಸ್ಯಾಪಿ ಬ್ರಹ್ಮಣಃ ಉಪಲಬ್ಬರ್ಥ್ ದೇಶವಿಶೇಷೋಪದೇಶೋ ನ ವಿರುಧ್ಯತೇ ಇತದಪಿ ಉಕ್ತಮೇವ | ಸುಕೃತಲೋಕವರ್ತಿತ್ವಂ ತು ಛತ್ರಿತ್ವವತ್ ಏಕಸ್ಮಿನ್ನಪಿ ವರ್ತಮಾನಮ್ ಉಭಯೋ ರವಿರುದ್ದಮ್ | ‘ಛಾಯಾತಪ್’ ಇತ್ಯಪಿ ಅನಿರುದ್ಧಮ್ | ಛಾಯಾತಪವತ್ ಪರಸ್ಪರ ವಿಲಕ್ಷಣತ್ವಾತ್ ಸಂಸಾರಿತ್ಪಾಸಂಸಾರಿತ್ವಯಃ | ಅವಿದ್ಯಾಕೃತತ್ವಾತ್ ಸಂಸಾರಿತ್ವಸ್ಯ, ಪಾರಮಾರ್ಥಿಕಾಚ್ಚ ಅಸಂಸಾರಿತ್ವಸ್ಯ | ತಸ್ಮಾತ್ ವಿಜ್ಞಾನಾತ್ಮಪರಮಾತ್ಮಾನೌ ಗುಹಾಂ ಪ್ರವಿಷ್ಟೇ ಗೃಹ್ಮತೇ ||
(ಭಾಷ್ಯಾರ್ಥ) ಆಕ್ಷೇಪ :- ಗುಹಾಹಿತರಾಗಿರುವರೆಂದು ಶ್ರುತಿಯಲ್ಲಿರುವದರಿಂದ (ಇಲ್ಲಿ ) ಪರಮಾತ್ಮನೆಂದು ತಿಳಿಯತಕ್ಕದ್ದಲ್ಲ ಎಂದು ಪೂರ್ವಪಕ್ಷದಲ್ಲಿ ಹೇಳಿತ್ತಲ್ಲ !
(ಪರಿಹಾರ) : ಗುಹಾಹಿತರಾಗಿರುವರೆಂದು ಶ್ರುತಿಯಲ್ಲಿರುವದರಿಂದಲೇ ಪರಮಾತ್ಮನೆಂದು ತಿಳಿಯತಕ್ಕದ್ದು ಎನ್ನುತ್ತೇವೆ. ಗುಹಾಹಿತನಾಗಿರುವದೆಂಬುದು “ಗುಹಾಹಿತನಾದ ಗಹ್ವರದಲ್ಲಿರುವ ಪುರಾಣನಾದ (ದೇವನನ್ನು) (ಕ. ೧-೨-೧೨),” ಗುಹೆಯಲ್ಲಿ ಪರಮಾಕಾಶದಲ್ಲಿ ನಿಹಿತನಾಗಿರುವ (ಬ್ರಹ್ಮವನ್ನು) ಯಾವನು ಅರಿತು ಕೊಳ್ಳುವನೋ….” (ತೈ.೨-೧), ‘ಗುಹೆಯನ್ನು ಹೊಕ್ಕಿರುವ ಆತ್ಮನನ್ನು ಹುಡುಕು” (ಮೋ. ಧ. ೧೭೫-೩೮) ಮುಂತಾದ ಶ್ರುತಿಸ್ಕೃತಿಗಳಲ್ಲಿ ಪರಮಾತ್ಮನ (ವಿಷಯ ದಲ್ಲಿಯ) ಮತ್ತೆಮತ್ತೆ (ಹೇಳಿರುವದು) ಕಂಡುಬರುತ್ತದೆ. ಬ್ರಹ್ಮವು ಸರ್ವಗತವಾಗಿದ್ದರೂ ಜ್ಞಾನಕ್ಕಾಗಿ (ಒಂದಾನೊಂದು) ಗೊತ್ತಾದ ದೇಶವನ್ನು ಉಪದೇಶಿಸುವದು ವಿರುದ್ಧವಲ್ಲ ಎಂಬದನ್ನು (ಹಿಂದೆ) ಹೇಳಿಯೇ ಇದೆ. ಸುಕೃತಲೋಕದಲ್ಲಿರುವದೋ ಎಂದರೆ ಛತ್ರಿತ್ವದಂತ ಒಬ್ಬನಲ್ಲಿದ್ದರೂ ಇಬ್ಬರಿಗೂ (ಆಗುವದು) ವಿರುದ್ಧವಲ್ಲ. ‘ನೆರಳುಬಿಸಿಲುಗಳಂತ’ ಎಂಬುದೂ (ಈ ಪಕ್ಷದಲ್ಲಿ) ವಿರುದ್ಧವಲ್ಲ. ಏಕೆಂದರೆ ಸಂಸಾರಿತ್ವ, ಅಸಂಸಾರಿತ್ವ - ಇವು ನೆರಳುಬಿಸಿಲುಗಳಂತ ಒಂದಕ್ಕಿಂತ ಒಂದು ವಿಲಕ್ಷಣವಾಗಿರುತ್ತವೆ. (ಹೇಗೆಂದರೆ) ಸಂಸಾರಿತ್ವವು ಅವಿದ್ಯಾಕೃತ ವಾಗಿರುತ್ತದ, ಅಸಂಸಾರಿತ್ವವೆಂಬುದು ಪಾರಮಾರ್ಥಿಕವಾಗಿರುತ್ತದೆ. ಆದ್ದರಿಂದ (ಇಲ್ಲಿ) ಗುಹೆಯನ್ನು ಹೊಕ್ಕವರು ಎಂದರೆ ವಿಜ್ಞಾನಾತ್ಮಪರಮಾತ್ಮರನ್ನು ತೆಗೆದುಕೊಳ್ಳಬೇಕು.
- ‘ತದ್ದರ್ಶನಾತ್’ ಎಂಬ ಸೂತ್ರಭಾಗದ ಅರ್ಥವಿದು. ‘ದರ್ಶನ’ ಎಂಬ ಮಾತನ್ನು ಸೂತ್ರದಲ್ಲಿ ಶ್ರುತಿಯಂಬರ್ಥದಲ್ಲಿ ಬಹಳವಾಗಿ ಉಪಯೋಗಿಸಿದೆ.
ಅಧಿ. ೩. ಸೂ. ೧೨] ಇಲ್ಲಿ ಜೀವಪರಮಾತ್ಮರ ವಿಶೇಷಣಗಳೇ ಇವೆ
೨೭೭
೨೭೭
ಇಲ್ಲಿ ಜೀವಪರಮಾತ್ಮರ ವಿಶೇಷಣಗಳೇ ಇವೆ
ವಿಶೇಷಣಾಚ್ಚ Il೧೨|| ೧೨. ವಿಶೇಷಣದಿಂದಲೂ (ಹೀಗೆಂದು ತಿಳಿಯಬೇಕು.)
(ಭಾಷ್ಯ) ೧೭೨. ಕುತಶ್ಚ ವಿಜ್ಞಾನಾತ್ಮಪರಮಾತ್ಮಾನೌ ಗೃಹ್ಮತೇ ? (ವಿಶೇಷಣಾಚ್ಚ) ವಿಶೇಷಣಂ ಚ ವಿಜ್ಞಾನಾತ್ಮಪರಮಾತ್ಮನೋರೇವ ಭವತಿ | ಆತ್ಮಾನಂ ರಥಿನಂ ವಿದ್ದಿ ಶರೀರಂ ರಥಮೇವ ತು” (ಕ. ೧-೩-೩) ಇತ್ಯಾದಿನಾ ಪರೇಣ ಗ್ರನ ರಥಿರಥಾದಿ ರೂಪಕಕಲ್ಪನಯಾ ವಿಜ್ಞಾನಾತ್ಮಾನಂ ರಥಿನಂ ಸಂಸಾರಮೋಕ್ಷಯೋರ್ಗಾರಂ ಕಲ್ಪಯತಿ 1,’ ‘ಸೋಧ್ವನಃ ಪಾರಮಾಪ್ಪೋತಿ ತದ್ವಿಷ್ಟೂ ಪರಮಂ ಪದಮ್’ (ಕ. ೧-೩-೬) ಇತಿ ಚ ಪರಮಾತ್ಮಾನಂ ಗಸ್ತವ್ಯಮ್ | ತಥಾ ‘ತಂ ದುರ್ದಶ್ರ೦ ಗೂಢಮನುಪ್ರವಿಷ್ಟಂ ಗುಹಾಂತಂ ಗಹ್ವರೇಷ್ಠಂ ಪುರಾಣಮ್ | ಅಧ್ಯಾತ್ಮಯೋಗಾಧಿ ಗಮೇನ ದೇವಂ ಮಾ ಧೀರೋ ಹರ್ಷಶೋಕೌ ಜಹಾತಿ 11’’ (ಕ. ೧-೨-೧೨) ಇತಿ ಪೂರ್ವಸ್ಮಿನ್ನಪಿ ಗ್ರಷ್ಟೇ ಮನ್ನಮಸ್ತವ್ಯನ ಏತಾವೇವ ವಿಶೇಷಿತಾ | ಪ್ರಕರಣಂ ಚೇದಂ ಪರಮಾತ್ಮನಃ | ಬ್ರಹ್ಮವಿದೋ ವದನ್ತಿ” (ಕ. ೧-೩-೧) ಇತಿ ಚ ವಕ ವಿಶೇಷೋಪಾದಾನಂ ಪರಮಾತ್ಮಪರಿಗ್ರಹೇ ಘಟತೇ | ತಸ್ಮಾತ್ ಇಹ ಜೀವ ಪರಮಾತ್ಮಾನೌ ಉಚ್ಯಾತಾಮ್ ||
(ಭಾಷ್ಯಾರ್ಥ) (ಇಲ್ಲಿ) ವಿಜ್ಞಾನಾತ್ಮಪರಮಾತ್ಮರನ್ನೇ ತೆಗೆದುಕೊಳ್ಳಬೇಕೆಂಬುದು ಮತ್ತೂ ಯಾವ (ಕಾರಣದಿಂದ) ? ಎಂದರೆ (ವಿಶೇಷಣವಿರುವದರಿಂದ, ಇಲ್ಲಿರುವ) ವಿಶೇಷಣವು ಕೂಡ ಜೀವಪರಮಾತ್ಮರುಗಳಿಗೇ ಆಗುತ್ತದೆ. “ಆತ್ಮನನ್ನು ರಥಿಯಂದು ತಿಳಿ, ಶರೀರವನ್ನು ರಥವೆಂದೇ (ತಿಳಿ)’’ (ಕ. ೧-೩-೩) ಮುಂತಾದ ಮುಂದಿನ ಗ್ರಂಥದಿಂದ ರಥಿ, ರಥ - ಮುಂತಾದ ರೂಪಕವನ್ನು ಕಲ್ಪಿಸುವದರಿಂದ ವಿಜ್ಞಾನಾತ್ಮ ನನ್ನು ರಥಿಯೆಂದು ಸಂಸಾರಮೋಕ್ಷಗಳನ್ನು (ಪಡೆಯುವ) ಗಂತೃವೆಂದು ಕಲ್ಪಿಸಿರುತ್ತದೆ. ಮತ್ತು ಅವನು ದಾರಿಯ ಕೊನೆಯನ್ನು, ಆ ವಿಷ್ಣುವಿನ ಪರಮಪದವನ್ನು ಪಡೆಯುತ್ತಾನೆ’ (ಕ. ೧-೩-೯) ಎಂದು ಪರಮಾತ್ಮನನ್ನು ಗಂತವ್ಯವೆಂದು
- ಅವತಾರಿಣಿಕೆಯಾದ ಬಳಿಕ ಆಚಾರ್ಯರು ಬರೆದುಕೊಂಡಿರುವ ಸೂತ್ರವನ್ನು ಹೀಗ ಕಂಸದಲ್ಲಿ ತೋರಿಸಿದ.
೨೭೮
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
(ಕಲ್ಪಿಸಿರುತ್ತದೆ), ಹಾಗೂ ‘ಆ ದುರ್ದಶ್ರನಾದ, ಗೂಢವನ್ನು ಹೊಕ್ಕಿರುವ, ಗುಹಾಹಿತನಾದ ಗಹ್ವರದಲ್ಲಿರುವ ಪುರಾಣನಾದ ದೇವನನ್ನು ಅಧ್ಯಾತ್ಮಯೋಗದ ಪ್ರಾಪ್ತಿಯಿಂದ ತಿಳಿದುಕೊಂಡ ಧೀರನು ಹರ್ಷಶೋಕಗಳನ್ನು ಬಿಡುತ್ತಾನೆ? (ಕ. ೧-೨-೧೨) ಎಂದು (ಈ) ಹಿಂದಿನ ಗ್ರಂಥದಲ್ಲಿಯೂ (ಜೀವನು) ಮಂತ್ರ, (ಪರಮಾತ್ಮನು) ಮಂತವ್ಯ - ಎಂದು ಈ (ಇಬ್ಬರನ್ನೇ) ವಿಶೇಷಿಸಿರುತ್ತದೆ. ಇದು ಪರಮಾತ್ಮನ ಪ್ರಕರಣವೂ ಆಗಿದ. (ಈ ವಾಕ್ಯದಲ್ಲಿ) ‘ಬ್ರಹ್ಮವಿದರು ಹೇಳುವರು ಎಂಬೀ ವಕೃವಿಶೇಷವನ್ನು ತೆಗೆದುಕೊಂಡು (ಹೇಳಿ )ರುವದೂ (ಇ) ಪರಮಾತ್ಮ ನನ್ನು ತೆಗೆದುಕೊಂಡರೆ ಹೊಂದುತ್ತದೆ. ಆದ್ದರಿಂದ ಇಲ್ಲಿ ಜೀವಪರಮಾತ್ಮರನ್ನೇ ಹೇಳಿರಬೇಕು.*
“ದ್ವಾ ಸುಪರ್ಣಾ’ ಎಂಬ ಮಂತ್ರಕ್ಕೆ ಈ ನ್ಯಾಯವು
ಹೊಂದುತ್ತದೆಯೆ ?
(ಭಾಷ್ಯ) ೧೭೩. ಏಷ ಏವ ನ್ಯಾಯಃ “ದ್ಯಾ ಸುಪರ್ಣಾ ಸಯುಜಾ ಸಖಾಯಾ’ (ಮುಂ. ೩-೧-೧) ಇವಮಾದಿಷ್ಟಪಿ | ತತ್ರಾಪಿ ಹಿ ಅಧ್ಯಾತ್ಮಾಧಿಕಾರಾತ್ ನ ಪ್ರಾಕೃತ ಸುವರ್ಣೆ ಉಚ್ಯತೇ | ‘ತಯೋರನ್ಯ: ಪಿಪ್ಪಲಂ ಸ್ಟಾದ್ವತ್ತಿ’ (ಮುಂ. ೩-೧-೧) ಇತಿ ಅದನಲಿಜ್ಞಾತ್ ವಿಜ್ಞಾನಾತ್ಮಾಭವತಿ | ಅನಸ್ಸನ್ನನ್ನೋ ಅಭಿಚಾರಶೀತಿ’ (ಮುಂ. ೩-೧-೧) ಇತಿ ಅನಶನಚೇತನತ್ವಾಭ್ಯಾಂ ಪರಮಾತ್ಮಾ | ಅನನ್ತರೇ ಚ ಮನ್ನೇ ತಾವೇವ ದ್ರಷ್ಟ್ರದ್ರಷ್ಟವಭಾವೇನ ವಿಶಿನಷ್ಟಿ - “ಸಮಾನೇ ವೃಕ್ಷ ಪುರುಷೋ ನಿಮಗ್ನ; ಅನೀಶಯಾ ಶೋಚತಿ ಮುಹ್ಯಮಾನಃ | ಜುಷ್ಟರಿ ಯದಾ ಪಶ್ಯತ್ಯ, ಮೀಶಮ್ ಅಸ್ಕ ಮಹಿಮಾನಮಿತಿ ವೀತಶೋಕಃ’ (ಮುಂ. ೩-೧-೨) ಇತಿ ||
-
ಗಂತೃಗಂತವ್ಯಭಾವವೂ ಮಂತೃಮಂತವ್ಯಭಾವವೂ ಜೀವಪರಮಾತ್ಮರಿಗಿದೆ, ಬುದ್ಧಿಜೀವರುಗಳಿಗೆ ಇಲ್ಲ.
-
‘ವಿಶೇಷಣಾಚ್ಚ’ ಎಂಬಲ್ಲಿರುವ ಚ ಶಬ್ದದ ಅರ್ಥವಿದು. 3. ‘ವಿಶೇಷಣಾತ್’ ಎಂಬುದಕ್ಕೆ ಇನ್ನೊಂದರ್ಥವಿದೆಂದು ಭಾವಿಸಬಹುದು.
-
ಇಲ್ಲಿ ಬುದ್ದಿವ್ಯತಿರಿಕ್ತಜೀವನನ್ನೂ ಹೇಳತಕ್ಕದ್ದು ಅವಶ್ಯವಾದರೂ ಮರಣಾನಂತರ ದಲ್ಲಿರುವ ಜೀವನನ್ನು ೨-೫-೬, ೭ರಲ್ಲಿ ಹೇಳಿದೆ. ಪ್ರಕೃತದಲ್ಲಿ ಜೀವನ ಪರಮಾರ್ಥರೂಪವನ್ನೇ ತಿಳಿಸಿದ ಎಂಬುದಕ್ಕೆ ಮೇಲೆ ಕೊಟ್ಟಿರುವ ಅನೇಕಯುಕ್ತಿಗಳಿವೆ ಎಂದು ಭಾವ.
ಅಧಿ. ೩. ಸೂ. ೧೨] ‘ದ್ವಾ ಸುಪರ್ಣಾ’ ಎಂಬಲ್ಲಿ ಈ ನ್ಯಾಯವು ಹೊಂದುತ್ತದೆಯ ? ೨೭೯
(ಭಾಷ್ಯಾರ್ಥ) “ದ್ವಾ ಸುಪರ್ಣಾ ಸಯುಜಾ ಸಖಾಯಾ’ ಒಟ್ಟಿಗೆ ಇರುವ ಗೆಳೆಯರಾದ ಎರಡು ಪಕ್ಷಿಗಳು (ಮುಂ. ೩-೧-೧) ಮುಂತಾದ (ಸ್ಥಳ)ಗಳಲ್ಲಿಯೂ ಇದೇ ನ್ಯಾಯವು ಹೊಂದುತ್ತದೆ. ಏಕೆಂದರೆ ಅಲ್ಲಿಯೂ ಅಧ್ಯಾತ್ಮಪ್ರಕರಣವಿರುವದರಿಂದ ಸಾಮಾನ್ಯವಾದ ಪಕ್ಷಿಗಳನ್ನು ಹೇಳಿರುತ್ತದೆ (ಎನ್ನುವದ)ಕ್ಕಿಲ್ಲ. ಅವುಗಳಲ್ಲಿ ಒಂದು ಪಿಪ್ಪಲವನ್ನು ಸವಿದು ತಿನ್ನುತ್ತದೆ’(ಮುಂ. ೩-೧-೧) ಎಂದು ತಿನ್ನುವದೆಂಬ ಲಿಂಗವಿರುವದರಿಂದ (ಒಂದು ಪಕ್ಷಿಎಂದರೆ) ವಿಜ್ಞಾನಾತ್ಮನಾಗಿರುವದು ; “ಇನ್ನೊಂದು ತಿನ್ನದೆ ನೋಡು ತ್ತಿರುತ್ತದೆ’ (ಮುಂ. ೩-೧-೧) ಎಂಬಲ್ಲಿ ತಿನ್ನದೆ ಇರುವದು, ಚೇತನವಾಗಿರುವದು (ಎಂಬ ಲಿಂಗ)ಗಳಿಂದ (ಇನ್ನೊಂದು ಪಕ್ಷಿಯು) ಪರಮಾತ್ಮನಾಗಿರುವದು. ಮುಂದಿನ ಮಂತ್ರದಲ್ಲಿ ಒಂದೇ ವೃಕ್ಷದಲ್ಲಿ ಪುರುಷನು ನಿಮಗ್ನನಾಗಿ ಅನೀಶೆಯಿಂದ ಮೋಹಗೊಂಡು ಶೋಕಿಸುತ್ತಿರುವನು. ಭಜಿಸಲ್ಪಟ್ಟ (ತನಗಿಂತ) ಬೇರೆಯಾದ ಈಶ್ವರನನ್ನು ಇವನ ಮಹಿಮೆಯನ್ನು ಹೀಗೆಂದು ಯಾವಾಗ ಕಂಡುಕೊಳ್ಳುವನೋ (ಆಗ) ಶೋಕವಿಲ್ಲದವನಾಗುವನು’ (ಮುಂ.೩-೧-೨) ಎಂದು ಆ ಇಬ್ಬರನ್ನೇ ದ್ರಷ್ಟ್ರದ್ರಷ್ಟವಭಾವದಿಂದ ವಿಶೇಷಿಸಿರುತ್ತದೆ.”
(ಭಾಷ್ಯ) ೧೭೪. ಅಪರ ಆಹ - “ದ್ವಾ ಸುಪರ್ಣಾ’ ಇತಿ ನೇಯಮ್ ಋಕ್ ಅಸ್ಯ ಅಧಿಕರಣಸ್ಯ ಸಿದ್ಧಾನಂ ಭಜತೇ | ಪೈಜ್ ರಹಸ್ಯಬ್ರಾಹ್ಮಣೇನ ಅನ್ಯಥಾ ವ್ಯಾಖ್ಯಾತ ತ್ವಾತ್ | ‘ತಯೋರನ್ಯ: ಪಿಪ್ಪಲಂ ಸ್ವಾತಿ ಸುಮನಶ್ನನ್ನನ್ನೋ ಅಭಿಚಾರ ಶೀತೀತ್ಯನಶ್ಚನ್ನಭಿಪಶ್ಯತಿ ಜ್ಞಸ್ತಾವೇತ ಸತ್ಯಕ್ಷೇತ್ರಜ್ಞ” (?) ಇತಿ | ಸತ್ಯಶಬ್ದ ಜೀವಃ, ಕ್ಷೇತ್ರಜ್ಞಶಬ್ದಃ ಪರಮಾತ್ಮಾ ಇತಿ ಯದುಚ್ಯತೇ, ತನ್ನ ! ಸತ್ಯ ಕ್ಷೇತ್ರಜ್ಞಶಬ್ದಯೋರನ್ತಃಕರಣಶಾರೀರಪರತಯಾ ಪ್ರಸಿದ್ಧತ್ವಾತ್ | ತತ್ವವ ಚ ವ್ಯಾಖ್ಯಾತತ್ವಾತ್ - “ತದೇತತ್ ಸತ್ಯಂ ಯೇನ ಸ್ವಪ್ನಂ ಪಶ್ಯತಿ | ಅಥ ಯೋSಯಂ ಶಾರೀರ ಉಪದ್ರಷ್ಮಾ ಸ ಕ್ಷೇತ್ರಜ್ಞಸ್ತಾವೇತ್ ಸತ್ಯಕ್ಷೇತ್ರ ’ (?) ಇತಿ | ನಾಪಿ ಅಸ್ಯ ಅಧಿಕರಣಸ್ಯ ಪೂರ್ವಪಕ್ಷ ಭಜತೇ ! ನ ಹಿ ಅತ್ರ ಶಾರೀರಃ ಕ್ಷೇತ್ರಜ್ಞಃ ಕರ್ತತ್ವ ಭೋಕ್ತತ್ವಾದಿನಾ ಸಂಸಾರಧರ್ಮಣೋಪೇತೋ ವಿವಕ್ಷತೇ | ಕಥಂ ತರ್ಹಿ ಸರ್ವ ಸಂಸಾರಧರ್ಮಾತೀತೋ ಬ್ರಹ್ಮಸ್ವಭಾವಶೈತನ್ಯಮಾತ್ರಸ್ವರೂಪಃ | “ಅನಶನ್ನನ್ನೂ ಅಭಿಚಾಕಶೀತೀತ್ಯನಶ್ಚನ್ನಮ್ಮೊಭಿಪಶ್ಯತಿ ಜ್ಞ’’ (?) ಇತಿ ವಚನಾತ್ | ‘ತತ್ಯ
- ‘ಆತ್ಮಾನ್ ಒ’ ಎಂಬ ಸೂತ್ರಭಾಗದ ಅಭಿಪ್ರಾಯವಿದು. 2. ‘ವಿಶೇಷಣಾಚ್ಚ’ ಎಂಬುದರ ಅಭಿಪ್ರಾಯವಿದು.
೨೮೦
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. ಮಸಿ’ (ಛಾಂ. ೬-೮-೭), ‘ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ" (ಗೀ. ೧೩-೨) ಇತ್ಯಾದಿ ಶ್ರುತಿಸ್ಮತಿಭ್ಯಶ್ಚ | ತಾವತಾ ಚ ವಿದ್ಯೋಪಸಂಹಾರದರ್ಶನಮ್ ಏವಮೇವ ಅವಕಲ್ಪತೇ 1 “ತಾವೇ ಸತ್ಯ ಕ್ಷೇತ್ರಜ್ಞಾ ನ ಹ ವಾ ಏವಂವಿದಿ ಕಿಂಚನ ರಜ ಆಧ್ವಂಸತೇ” (?) ಇತ್ಯಾದಿ |
(ಭಾಷ್ಯಾರ್ಥ) (ಇಲ್ಲಿ ಮತ್ತೊಬ್ಬ (ವ್ಯಾಖ್ಯಾನಕಾರನು) ಹೇಳುತ್ತಾನೇನೆಂದರೆ “ದ್ವಾ ಸುಪರ್ಣಾ’ ಎಂಬೀ ಋಕ್ಕಿಗೆ ಈ ಅಧಿಕರಣದ ಸಿದ್ಧಾಂತವು ದೊರೆಯುವದಿಲ್ಲ. ಏಕೆಂದರೆ ವ್ಯಂಗಿರಹಸ್ಯಬ್ರಾಹ್ಮಣದಲ್ಲಿ (ಮಂತ್ರದ ಅರ್ಥವನ್ನು) ಬೇರೆಯ ರೀತಿ ಯಲ್ಲಿ (ಎಂದರೆ) “ಅವುಗಳಲ್ಲಿ ಒಂದು ಪಿಪ್ಪಲವನ್ನು ಸವಿದು ತಿನ್ನುತ್ತದೆ ಎಂದರೆ ಸತ್ಯವು, ಇನ್ನೊಂದು ತಿನ್ನದೆ ನೋಡುತ್ತದೆ ಎಂದರೆ ಜ್ಞನು ; ಆ ಈ (ಎರಡೂ) ಸತ್ಯ ಕ್ಷೇತ್ರಜ್ಞರು’ (?) ಎಂದು ವಿವರಿಸಿರುತ್ತದೆ. ಇಲ್ಲಿ ಸತ್ಯವೆಂಬ ಶಬ್ದದಿಂದ ಹೇಳಿರುವದು ಜೀವನು, ಕ್ಷೇತ್ರಜ್ಞನೆಂದರೆ ಪರಮಾತ್ಮನು ಎಂದು (ನೀವು) ಹೇಳುವದಾದರೆ ಅದು ಸರಿಯಲ್ಲ ; ಏಕೆಂದರೆ ಸತ್ಯ, ಕ್ಷೇತ್ರಜ್ಞ - ಎಂಬ ಶಬ್ದಗಳು ಅಂತಃಕರಣ, ಜೀವ - (ಇವರನ್ನು) ಹೇಳುವದೆಂದು ಪ್ರಸಿದ್ಧವಾಗಿರುತ್ತದೆ. ಮತ್ತೆ ಅದೇ (ರಹಸ್ಯ ಬ್ರಾಹ್ಮಣ)ದಲ್ಲಿ “ಯಾವದರಿಂದ ಕನಸನ್ನು ಕಾಣುತ್ತಾರೋ ಆ ಇದೇ ಸತ್ಯವು ; ಇನ್ನು ಯಾವ ಈ ಉಪದ್ರಷ್ಟವಾದ ಶಾರೀರನುಂಟೋ ಅವನು ಕ್ಷೇತ್ರಜ್ಞನು. ಆ ಇವರಡೂ ಸತ್ಯ ಕ್ಷೇತ್ರಜ್ಞರು’ (?) ಎಂದು ವ್ಯಾಖ್ಯಾನ ಮಾಡಿರುತ್ತದೆ. (ಆ ಋಕ್ಕಿಗ) ಈ ಅಧಿಕರಣದ ಪೂರ್ವಪಕ್ಷವೂ ದೊರೆಯಲಾರದು. ಏಕೆಂದರೆ ಇಲ್ಲಿ ಶಾರೀರನಾದ ಕ್ಷೇತ್ರಜ್ಞನು ಕರ್ತತ್ವಭೋಕ್ತತ್ವವೇ ಮುಂತಾದ ಸಂಸಾರಧರ್ಮಗಳಿಂದ ಕೂಡಿರುವನೆಂದು ಹೇಳುವದಕ್ಕೆ ಹೊರಟಿರುವದಿಲ್ಲ : ಮತ್ತೆ ಹೇಗೆಂದರೆ ಎಲ್ಲಾ ಸಂಸಾರಧರ್ಮಗಳನ್ನೂ ಮೀರಿ ಬ್ರಹ್ಮಸ್ವಭಾವವಾಗಿರುವ ಚೈತನ್ಯ ಮಾತ್ರಸ್ವರೂಪನೆಂದು (ಹೇಳುವದಕ್ಕೆ ಹೊರಟಿರುತ್ತದೆ). ಏಕೆಂದರೆ ಇನ್ನೊಂದು ತಿನ್ನದೆ ನೋಡುತ್ತಿರುತ್ತದೆ ಎಂದಿದೆಯಲ್ಲ, (ಅಲ್ಲಿ) ತಿನ್ನದೆ ನೋಡುತ್ತಿರುವವನು ಜ್ಞನು’ (?) ಎಂದು (ಪೈಂಗಿರಹಸ್ಯದ) ವಚನವಿದೆ. ಅದೇ ನೀನಾಗಿರುವ (ಛಾಂ. ೬-೮-೭), ‘ಕ್ಷೇತ್ರಜ್ಞನನ್ನು ನಾನೆಂದು ತಿಳಿ’’ (ಗೀ. ೧೩-೨) ಎಂದು ಮುಂತಾಗಿರುವ
- ಈ ಪಕ್ಷದಿಂದ ಹಿಂದೆ ಹೇಳಿರುವ ಜೀವಪರಮೇಶ್ವರಪಕ್ಷವು ಖಂಡಿತವಾಗಿದೆ ಎಂದು ವ್ಯಾಖ್ಯಾನಕಾರರುಗಳ ಅಭಿಪ್ರಾಯವು. ಆದರೆ ಆತ್ಮಾನೌ ಎಂಬ ಸೂತ್ರಾಕ್ಷರಕ್ಕೆ ಮೊದಲನೆಯ ವ್ಯಾಖ್ಯಾನವೇ ಹೊಂದುತ್ತದೆ. ಉಪನಿಷದ್ಭಾಷ್ಯದಲ್ಲಿಯೂ ೧-೩-೭, ೩-೩-೩೪ ಈ ಸೂತ್ರಗಳ ಭಾಷ್ಯದಲ್ಲಿಯೂ ಈ ಪಕ್ಷವನ್ನು ಅಂಗೀಕರಿಸಿರುತ್ತದೆ.
ಅಧಿ. ೩. ಸೂ. ೧೨] ಅಂತಃಕರಣಕ್ಕೆ ಭೋಕೃತ್ವವನ್ನು ಹೇಳಿರುವದರ ಅಭಿಪ್ರಾಯ ೨೮೧ ಶ್ರುತಿಸ್ಕೃತಿಗಳಿಂದಲೂ (ಇದು ಸಿದ್ಧವಾಗುತ್ತದೆ). “ಆ ಈ ಇಬ್ಬರು ಸತ್ಯಕ್ಷೇತ್ರಜ್ಞರು. ಹೀಗೆಂದು ತಿಳಿದವನಿಗೆ ಯಾವ ರಜಕ್ಕೂ ಅಂಟಿಕೊಳ್ಳುವದಿಲ್ಲ” (?). ಎಂದು ಮುಂತಾಗಿ ಅಷ್ಟರಿಂದಲೇ (ಬ್ರಹ್ಮ)ವಿದ್ಯೆಯನ್ನು ಉಪಸಂಹಾರಮಾಡಿರುವದೂ ಹೀಗೆಯೇ ಹೊಂದುತ್ತದೆ.
ಅಂತಃಕರಣಕ್ಕೆ ಭೋಕೃತ್ವವನ್ನು ಹೇಳಿರುವದರ ಅಭಿಪ್ರಾಯ
(ಭಾಷ್ಯ) ೧೭೫. ಕಥಂ ಪುನರನ್ ಪಕ್ಷೇ “ತಯೋರನ್ಯ: ಪಿಪ್ಪಲಂ ಸ್ವಾತಿ ಸತ್ಯಮ್’’ (?) ಇತಿ ಅಚೇತನೇ ಸತ್ ಭೂಕೃತ್ವವಚನಮ್ ಇತಿ ? ಉಚ್ಯತೇ | ನೇಯಂ ಶ್ರುತಿಃ ಅಚೇತನಸ್ಯ ಸತ್ಯಸ್ಯ ಭೋಕೃತ್ವಂ ವಕ್ಷಾಮಿ ಇತಿ ಪ್ರವೃತ್ತಾ, ಕಿಂ ತರ್ಹಿ, ಚೇತನಸ್ಯ ಕ್ಷೇತ್ರಜ್ಞಸ್ಯ ಅಭೋಕೃತ್ವಂ ಬ್ರಹ್ಮಸ್ವಭಾವತಾಂ ಚ ವಕ್ಷಾಮಿ ಇತಿ | ತದರ್ಥಂ ಸುಖಾದಿವಿಕ್ರಿಯಾವತಿ ಸ ಭೋಕೃತ್ವಮ್ ಅಧ್ಯಾರೋಪಯತಿ | ಇದಂ ಹಿ ಕರ್ತತ್ವಂ `ಭೋಕ್ತತ್ವಮ್ ಚ ಸತ್ಯಕ್ಷೇತ್ರಜ್ಞಯೋಃ ಇತರೇತರಸ್ವಭಾವಾವಿವೇಕಕೃತಂ ಕಲ್ಪತೇ | ಪರಮಾರ್ಥತಸ್ತು ನಾನ್ಯತರಸ್ಯಾಪಿ ಸಂಭವತಿ | ಅಚೇತನತ್ವಾತ್ ಸತ್ಯಸ್ಯ, ಅವಿಕ್ರಿಯಾತ್ಪಾಚ್ಚ ಕ್ಷೇತ್ರಜ್ಞಸ್ಯ | ಅವಿದ್ಯಾಪ್ರತ್ಯುಪಸ್ಥಾಪಿತಸ್ವಭಾವತ್ವಾಚ್ಚ ಸಸ್ಯ ಸುತರಾಂ ನ ಸಂಭವತಿ | ತಥಾ ಚ ಶ್ರುತಿಃ “ಯತ್ರ ವಾ ಅನ್ಯದಿವ ಸ್ಮಾತ್ ತತ್ರಾನ್ನೋನ್ಯತ್ ಪಶೈತ್’’ (ಬೃ. ೪-೩-೩೧) ಇತ್ಯಾದಿನಾ ಸ್ವಪ್ನದೃಷ್ಟಹಾದಿ - ವ್ಯವಹಾರವತ್ ಅವಿದ್ಯಾವಿಷಯೇ ಏವ ಕರ್ತತ್ವಾದಿವ್ಯವಹಾರಂ ದರ್ಶಯತಿ | “ಯತ್ರ ತ್ವಸ್ಯ ಸರ್ವಮಾನ್ನೈವಾಭೂತ್ ತನ ಕಂ ಪಕ್ಕೇತ್’ (ಬೃ. ೪-೫-೧೫) ಇತ್ಯಾದಿನಾ ಚ ವಿವೇಕಿನಃ ಕರ್ತತ್ವಾದಿವ್ಯವಹಾರಾಭಾವಂ ದರ್ಶಯತಿ ||
(ಭಾಷ್ಯಾರ್ಥ) | (ಆಕ್ಷೇಪ) :- ಆದರೆ ಈ ಪಕ್ಷದಲ್ಲಿ “ಅವೆರಡರಲ್ಲಿ ಒಂದು ಪಿಪ್ಪಲವನ್ನು ಸವಿದು ತಿನ್ನುತ್ತದೆ - ಎಂಬುದು ಸತ್ಯವು” (ಪೈಂ. ?) ಎಂದು ಅಚೇತನವಾದ ಸತ್ಯಕ್ಕೆ ಭೋಕ್ತವನ್ನು ಹೇಳಿರುವದು ಹೇಗೆ ?
(ಪರಿಹಾರ) :- ಈ ಶ್ರುತಿಯು ಅಚೇತನವಾದ ಸತ್ಯಕ್ಕೆ ಭೋಕೃತ್ಯವನ್ನು ಹೇಳುವೆನೆಂದು ಹೊರಟಿರುವದಿಲ್ಲ ; ಮತ್ತೇನೆಂದರೆ ಚೇತನವಾದ ಕ್ಷೇತ್ರಜ್ಞನಿಗೆ ಅಭೋಕೃತ್ಯವನ್ನೂ ಬ್ರಹ್ಮಸ್ವಭಾವತ್ವವನ್ನೂ ಹೇಳುವೆನೆಂದು (ಹೊರಟಿರುತ್ತದೆ). ಅದಕ್ಕಾಗಿ ಸುಖಾದಿವಿಕಾರಗಳುಳ್ಳ ಸತ್ಯದಲ್ಲಿ ಭೋಕೃತ್ವವನ್ನು ಅಧ್ಯಾರೋಪ೨೮೨
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಮಾಡಿರುತ್ತದೆ. ಏಕೆಂದರೆ ಈ ಕರ್ತತ್ವವೂ ಭೋಕೃತ್ವವೂ ಸತ್ಯಕ್ಷೇತ್ರಜ್ಞರ ಪರಸ್ಪರಸ್ವಭಾವವನ್ನು ವಿಂಗಡಿಸಿ ತಿಳಿದುಕೊಳ್ಳದ್ದರಿಂದ ಕಲ್ಪಿತವಾಗಿರುತ್ತದೆ. ನಿಜವಾಗಿ ನೋಡಿದರೋ (ಅದು) ಇವೆರಡರಲ್ಲಿ ಒಂದಕ್ಕೂ ಹೊಂದುವಹಾಗಿರುವದಿಲ್ಲ.” ಏಕೆಂದರೆ ಸತ್ಯವು ಅಚೇತನವಾಗಿರುತ್ತದೆ; ಕ್ಷೇತ್ರಜ್ಞನು ಅವಿಕಾರ್ಯನಾಗಿರುತ್ತಾನೆ. (ಸತ್ಯವು) ಅವಿದ್ಯೆಯು ಮುಂದೊಡ್ಡಿದ ಸ್ವಭಾವದ್ದಾದ್ದರಿಂದ ಸತ್ಯಕ್ಕಂತೂ ಸ್ವಲ್ಪವೂ ಹೊಂದುವದಿಲ್ಲ. ಆದ್ದರಿಂದಲೇ ಶ್ರುತಿಯು “ಎಲ್ಲಿಯಾದರೂ, ಮತ್ತೊಂದಿರುವಂತೆ ಇರುವದೋ ಅಲ್ಲಿ ಒಬ್ಬನು ಮತ್ತೊಂದನ್ನು ಕಂಡಾನು’ (. ೪-೩-೩೧) - ಎಂದು ಮುಂತಾಗಿರುವ (ವಾಕ್ಯ)ದಿಂದ ಕನಸಿನಲ್ಲಿ ಕಂಡ ಆನೆಯೇ ಮುಂತಾದವುಗಳಂತೆ ಅವಿದ್ಯಾವಿಷಯದಲ್ಲಿಯೇ ಕರ್ತತ್ವಾದಿವ್ಯವಹಾರವಿರುವದೆಂದು ತಿಳಿಸುತ್ತದೆ. ಆದರೆ ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿರುವದೋ ಅಲ್ಲಿ ವಿತರಿಂದ ಯಾರನ್ನು ಕಂಡಾನು ?’’ (ಬೃ. ೪-೫-೧೫) ಎಂದು ಮುಂತಾಗಿರುವ (ವಾಕ್ಯ)ದಿಂದ ವಿವೇಕಿಗೆ ಕರ್ತತ್ವವೇ ಮುಂತಾದ ವ್ಯವಹಾರವೇ ಇಲ್ಲವೆಂದು ತಿಳಿಸುತ್ತದೆ.
೪. ಅಂತರಾಧಿಕರಣ (೧೩-೧೭) (ಛಾಂದೋಗ್ಯ ೪-೧೫ ರಲ್ಲಿರುವ ಅಕ್ಷಿಪುರುಷನು ಬ್ರಹ್ಮವೇ )
ಅಂತರ ಉಪಪತ್ತೇ: l೧೩|| ೧೩. (ಕಣ್ಣಿನ) ಒಳಗಿರುವ (ಪುರುಷನು ಬ್ರಹ್ಮವೇ) ; ಏಕೆಂದರೆ (ಗುಣಗಳು) ಹೊಂದುತ್ತವೆ.
ವಿಷಯವೂ ಸಂಶಯವೂ
(ಭಾಷ್ಯ) ೧೭೬. “ಯ ಏಷೋಕ್ಷಿಣಿ ಪುರುಷೋ ದೃಶ್ಯತೇ ಏಷ ಆತ್ಮತಿ
-
ಸಾಂಖ್ಯರ ಪ್ರಕ್ರಿಯೆಯನ್ನು ಅನುಸರಿಸಿ ಆತ್ಮಸ್ವರೂಪವನ್ನು ವಿವೇಚನಮಾಡುವಾಗ ವೇದಾಂತಿಗಳು ಶರೀರಪ್ರಾಣಾದಿಗಳಿಗೆ ಕೆಲಕೆಲವು ಧರ್ಮಗಳನ್ನು ಅಧ್ಯಾರೋಪಮಾಡುವದು ಪರಮಸಿದ್ಧಾಂತವಲ್ಲವೆಂಬುದಕ್ಕೆ ಇದೊಂದು ಗಮಕವು.
-
ಸೂತ್ರದ ಮೊದಲನೆಯ ವ್ಯಾಖ್ಯಾನದಲ್ಲಿ ಜೀವನಲ್ಲಿ ಲೋಕಸಿದ್ಧವಾಗಿರುವ ಭೂಕೃತ್ವವನ್ನು ಅನುವಾದಮಾಡಿಕೊಂಡು ಪರಮಾತ್ಮನು ಅಭೂತೃವಂದಿದೆ. ಎರಡನೆಯ ವ್ಯಾಖ್ಯಾನದಲ್ಲಿ ಕ್ಷೇತ್ರಜ್ಞನಿಗೆ ಔಪಾಧಿಕವಾಗಿ ಕರ್ತತ್ವವು ತೋರಿದರೂ ಅದು ಪರಮಾರ್ಥವಾಗಿಲ್ಲ ಎಂದು ಹೇಳಿದ.
ಅಧಿ. ೪. ಸೂ. ೧೩] ಛಾಯಾತ್ಮಾದಿಗಳನ್ನೇ ಇಲ್ಲಿ ತಿಳಿಸಿದೆ
೨೮೩
ಹೋವಾಚೈತದಮೃತಮಭಯಮೇತದೃಹ್ಮತಿ | ತದ್ಯದ್ಯವ್ಯಸ್ಮಿನ್ ಸರ್ಪಿವೋ್ರದಕಂ ವಾ ಸಿಞ್ಞತಿ ವರ್ತ್ಮನೀ ಏವ ಗಚ್ಚತಿ’ (ಛಾಂ. ೪-೧೫-೧) ಇತ್ಯಾದಿ ಶೂಯತೇ ತತ್ರ ಸಂಶಯಃ ಕಿಮಯಂ ಪ್ರತಿಬಿಮ್ಹಾತ್ಮಾ ಅಕ್ಷಧಿಕರಣೋ ನಿರ್ದಿಶ್ಯತೇ, ಅಥವಾ ವಿಜ್ಞಾನಾತ್ಮಾ ಉತ ದೇವತಾತ್ಮಾ ಇನ್ಸಿಯಸ್ಯ ಅಧಿಷ್ಠಾತಾ, ಅಥವಾ ಈಶ್ವರಃ ಇತಿ ||
(ಭಾಷ್ಯಾರ್ಥ) “ಕಣ್ಣಿನಲ್ಲಿ ಯಾವ ಈ ಪುರುಷನು ಕಾಣಿಸುತ್ತಾನೋ, ಇವನೇ ಆತ್ಮನು ಎಂದು, ಇದೇ ಅಮೃತವು, ಅಭಯವು, ಇದೇ ಬ್ರಹ್ಮವು - ಎಂದು ಹೇಳಿದನು. ಆ ಈ (ಸ್ಥಾನ) ದಲ್ಲಿ (ಕರಗಿಸಿದ) ತುಪ್ಪವನ್ನಾಗಲಿ ನೀರನ್ನಾಗಲಿ ಚಿಮುಕಿಸಿದರೆ (ಅದು) ಎರಡು ಕೊನೆಗಳನ್ನೇ ಸೇರುವದು” (ಛಾಂ. ೪-೧೫-೧) ಎಂದು ಮುಂತಾಗಿ’ ಶ್ರುತಿಯಲ್ಲಿದೆ. ಅಲ್ಲಿ ಸಂಶಯವೇನೆಂದರೆ, ಈ (ವಾಕ್ಯದಲ್ಲಿ) ಕಣ್ಣಿನಲ್ಲಿ ಈ ಪ್ರತಿಬಿಂಬಾತ್ಮನನ್ನೇ ತಿಳಿಸಿದೆಯೆ, ಅಥವಾ ವಿಜ್ಞಾನಾತ್ಮನನ್ನು, ಇಲ್ಲವೆ ಇಂದ್ರಿಯಕ್ಕೆ ಅಧಿಷ್ಠಾತೃವಾದ ದೇವತಾತ್ಮನನ್ನು (ತಿಳಿಸಿದೆಯೆ), ಅಥವಾ ಈಶ್ವರನನ್ನು ತಿಳಿಸಿದೆಯೆ ?
ಪೂರ್ವಪಕ್ಷ : ಛಾಯಾತ್ಮಾದಿಗಳನ್ನೇ ಇಲ್ಲಿ ತಿಳಿಸಿದೆ
(ಭಾಷ್ಯ) ೧೭೭. ಕಿಂ ತಾವತ್ ಪ್ರಾಪ್ತಮ್ ? ಛಾಯಾತ್ಮಾ ಪುರುಷಪ್ರತಿರೂಪಃ ಇತಿ | ಕುತಃ ? ತಸ್ಯ ದೃಶ್ಯಮಾನತ್ವಪ್ರಸಿದ್ಧ ‘ಯ ಏರ್ಷೋಕ್ಷಿಣಿ ಪುರುಷೋ ದೃಶ್ಯತೇ’ ಇತಿ ಚ ಪ್ರಸಿದ್ಧ ವತ್ ಉಪದೇಶಾತ್ | ವಿಜ್ಞಾನಾತ್ಮನೋ ವಾ ಅಯಂ ನಿರ್ದೆಶಃ ಇತಿ ಯುಕ್ತಮ್ | ಸ ಹಿ ಚಕ್ಷುಷಾ ರೂಪಂ ಪಶ್ಯನ್ ಚಕ್ಷುಷಿ ಸನ್ನಿಹಿತೋ ಭವತಿ | ಆತ್ಮಶಬ್ದ ಶ್ಯ ಅಸ್ಮಿನ್ ಪಕ್ಷೇ ಅನುಕೂಲೋ ಭವತಿ | ಆದಿತ್ಯಪುರುಷೋ ವಾ
- ಇದು ಸತ್ಯಕಾಮನು ಉಪಕೋಸಲನಿಗೆ ಹೇಳಿರುವ ಉಪಾಸನೆಯು. ಇದಕ್ಕೆ ಉಪಕೋಸಲವಿದೆ ಎಂದು ಹೆಸರು. ವಾಕ್ಯಶೇಷಕ್ಕೆ ಅರ್ಥವು ಹೀಗಿರುವದು. “ಈತನನ್ನು ಸಂಯQಾಮನೆನ್ನುವರು ; ಏಕೆಂದರೆ ಈತನನ್ನು ಎಲ್ಲಾ ಕಾಮಗಳೂ ಬಂದು ಸೇರುತ್ತವೆ. ಯಾವನು ಹೀಗಂದು ಅರಿಯುವನೋ ಅವನನ್ನು ಎಲ್ಲಾ ಕಾಮಗಳೂ ಬಂದು ಸೇರುವವು. ಈತನೇ ಕಾಮನು, ಏಕೆಂದರೆ ಈತನೇ ಎಲ್ಲಾ ಕಾಮಗಳನ್ನೂ ಒಯ್ದು ಕೊಡುತ್ತಾನ ; ಯಾವನು ಹೀಗಂದು ಅರಿಯುವನೋ ಅವನು ಎಲ್ಲಾ ಕಾಮಗಳನ್ನೂ ಒಯ್ದು ಕೊಡುತ್ತಾನೆ. ಈತನೇ ಭಾಮನೀ, ಏಕೆಂದರೆ ಈತನೇ ಲೋಕಗಳಲ್ಲಿಯೂ ಬೆಳಗುತ್ತಿರುವನು, ಯಾವನು ಹೀಗೆಂದು ಅರಿಯು ವನೋ ಆತನು ಎಲ್ಲಾ ಲೋಕಗಳಲ್ಲಿಯೂ ಬೆಳಗುವನು’ ಇದರ ಮುಂದಿನ ವಾಕ್ಯವನ್ನು ಮುಂದೆ ಕನ್ನಡಿಸಿ ಟಿಪ್ಪಣಿಯಲ್ಲಿ ಕೊಡಲಾಗುವದು.
೨೮೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಚಕ್ಷುರ್ಷೋನುಗ್ರಾಹಕಃ ಪ್ರತೀಯತೇ |“ರಶ್ಮಿಭಿರೇಷೋsಸ್ಮಿನ್ ಪ್ರತಿಷ್ಠಿತಃ’ (ಬೃ. ೫ ೫-೨) ಇತಿ ಶ್ರುತೇಃ | ಅಮೃತತ್ವಾದೀನಾಂ ಚ ದೇವತಾತ್ಮನ್ಯಪಿ ಕಥಂಚಿತ್ ಸಂಭವಾತ್ | ನೇಶ್ವರಃ | ಸ್ಥಾನವಿಶೇಷನಿರ್ದೆಶಾತ್ ಇತಿ ||
(ಭಾಷ್ಯಾರ್ಥ) ಇಲ್ಲಿ ಮೊದಲು ಒದಗುವ (ಪೂರ್ವಪಕ್ಷವು) ಯಾವದು ? ಪುರುಷನ ಪ್ರತಿಬಿಂಬವಾದ ಛಾಯಾತ್ಮನನ್ನು (ಇಲ್ಲಿ ತಿಳಿಸಿದ), ಏಕೆ ? ಎಂದರೆ ಅವನು (ಮತ್ತೊಬ್ಬರಿಗೆ) ಕಂಡುಬರುತ್ತಾನೆಂಬುದು ಪ್ರಸಿದ್ಧವಾಗಿರುತ್ತದೆ. ಮತ್ತು ಯಾವ ಈ ಪುರುಷನು ಕಣ್ಣಿನಲ್ಲಿ ಕಾಣಿಸುತ್ತಾನೋ’ ಎಂಬ ವಾಕ್ಯವು (ಅವನು ಎಲ್ಲರಿಗೂ) ಪ್ರಸಿದ್ಧನಾಗಿರುವಂತೆ ಉಪದೇಶಮಾಡಿರುತ್ತದೆ. ಅಥವಾ ಇದು ವಿಜ್ಞಾನಾತ್ಮನನ್ನು ತಿಳಿಸಿದ್ಧು ಎಂದು (ಹೇಳುವದು) ಯುಕ್ತವು. ಏಕೆಂದರೆ ಆ (ವಿಜ್ಞಾನಾತ್ಮನು) ಕಣ್ಣಿನಿಂದ ರೂಪವನ್ನು ನೋಡುತ್ತಾ ಕಣ್ಣಿನಲ್ಲಿ ಸಂನಿಹಿತನಾಗಿರುತ್ತಾನೆ. ಈ ಪಕ್ಷದಲ್ಲಿ ಆತ್ಮನೆಂಬ ಮಾತೂ ಅನುಕೂಲವಾಗಿರುತ್ತದೆ. ಅಥವಾ ಕಣ್ಣಿಗೆ ಅನುಗ್ರಾಹಕ ನಾಗಿರುವ ಆದಿತ್ಯಪುರುಷನು (ಈ ಮಂತ್ರದಲ್ಲಿ) ತಿಳಿಯಬರುತ್ತಾನೆ (ಎಂದಾದರೂ ಹೇಳಬಹುದು). “ಈತನು ಕಿರಣಗಳಿಂದ ಇದರಲ್ಲಿ ಇದ್ದುಕೊಂಡಿರುತ್ತಾನೆ” (ಬೃ. ೫-೫-೨) ಎಂದು ಶ್ರುತಿಯಿದೆ. ಅಮೃತನಾಗಿರುವದು ಮುಂತಾದ (ವಿಶೇಷಣಗಳು ಈ) ದೇವತಾತ್ಮನಲ್ಲಿಯೂ ಹೇಗೋ (ಒಂದು ರೀತಿಯಲ್ಲಿ) ಆಗಬಹುದಾಗಿದೆ. (ಹೀಗೆ ಛಾಯಾತ್ಮಾದಿಗಳಲ್ಲಿ ಒಬ್ಬನನ್ನು ಇಲ್ಲಿ ಹೇಳಿದೆ ಎಂದು ತಿಳಿಯಬೇಕೇ ಹೊರತು) ಈಶ್ವರನನ್ನು ಹೇಳಿದೆ ಎನ್ನುವ) ಹಾಗಿಲ್ಲ ; ಏಕೆಂದರೆ (ಈ ಪುರುಷನಿಗೆ ಒಂದು) ಗೊತ್ತಾದ ಸ್ಥಾನವನ್ನು ಹೇಳಿದೆ.
1.ಹಿಂದ ‘ಪಿಬನ್ಸ್’ ಎಂಬ ಶ್ರುತಿಗೆ ಅನುಗುಣವಾಗಿ ಮುಂದಿನ ಗುಹಾಪ್ರವೇಶಾದಿಗಳನ್ನೂ ಹೊಂದಿಸಿದಂತೆ ಇಲ್ಲಿಯೂ ‘ದೃಶ್ಯತೇ’ ಎಂಬ ಮೊದಲಿರುವ ಶಬ್ದಕ್ಕೆ ಅನುಗುಣವಾಗಿ ಮಿಕ್ಕದ್ದನ್ನು ಹೊಂದಿಸಬೇಕೆಂದು ಪೂರ್ವಪಕ್ಷಿಯ ಆಶಯ.
-
ಇದು ಛಾಯಾತ್ಮನಿಗೆ ಹೊಂದುವದಿಲ್ಲ ಎಂದು ಜೀವವಾದಿಯ ಭಾವ. 3.ಗೌಣವಾಗಿ,
-
ಇಲ್ಲಿ ಮುಖ್ಯವಾಗಿ ಪ್ರತಿಬಿಂಬಾತ್ಮವನ್ನೇ ಪೂರ್ವಪಕ್ಷಿಯು ಹಿಡಿದಿದ್ದಾನೆ. ಜೀವನನ್ನೂ ಆದಿತ್ಯನನ್ನೂ ಹೇಳಿರುವದಕ್ಕೆ ೧೭ನೆಯ ಸೂತ್ರದಲ್ಲಿ ಪರಿಹಾರಾಂತರವನ್ನು ಹೇಳುವದೇ ಉದ್ದೇಶ ; ಏಕಂದರ ‘ಅಂತಸ್ತದ್ಧರ್ಮೊಪದೇಶಾತ್’ (೧-೧-೨೦) ಎಂಬ ಸೂತ್ರದಲ್ಲಿಯೇ ಜೀವದೇವತೆಗಳನ್ನು ನಿರಾಕರಿಸಿದ್ಧಾಗಿದ; ದೃಶ್ಯತೇ ಎಂಬುದು ಮುಖ್ಯಾರ್ಥದಲ್ಲಿ ಅವರಿಗೆ ಹೊಂದುವದೂ ಇಲ್ಲ.
ಅಧಿ. ೪. ಸೂ. ೧೩] ಇಲ್ಲಿರುವ ಧರ್ಮಗಳು ಬ್ರಹ್ಮ ಹೊಂದುತ್ತವೆ
೨೮೫
geses
ಸಿದ್ಧಾಂತ : ಇಲ್ಲಿರುವ ಧರ್ಮಗಳು ಬ್ರಹ್ಮಕ್ಕೆ ಹೊಂದುತ್ತವೆ
ಭಾಷ್ಯ) ೧೭೮. ಏವಂ ಪ್ರಾಪ್ತ ಬೂಮಃ | ಪರಮೇಶ್ವರ ಏವ ಅಕ್ಷಿಣ್ಯಭ್ಯಸ್ತರಃ ಪುರುಷಃ ಇಹ ಉಪದಿಷ್ಟ: ಇತಿ | ಕಸ್ಮಾತ್ ? ಉಪಪತ್ತೆಃ 1 ಉಪಪದ್ಯತೇ ಹಿ ಪರಮೇಶ್ವರೇ ಗುಣಜಾತಮ್ ಇಹ ಉಪದಿಶ್ಯಮಾನಮ್ | ಆತ್ಮತ್ವಂ ತಾವತ್ ಮುಖ್ಯಯಾ ವೃತ್ತಾ ಪರಮೇಶ್ವರೇ ಉಪಪದ್ಯತೇ |“ಸ ಆತ್ಮಾ ತತ್ತ್ವಮಸಿ’ (ಛಾಂ. ೬-೮-೭) ಇತಿ ಶ್ರುತೇಃ | ಅಮೃತತ್ವಾಭಯ ಚ ತಸ್ಮಿನ್ ಅಸಕೃತ್ ಶ್ರುತೌ ಶೂಯೇತೇ | ತಥಾ ಪರಮೇಶ್ವರಾನುರೂಪಮ್ ಏತದಕ್ಷಿಸ್ಥಾನಮ್ | ಯಥಾ ಹಿ ಪರಮೇಶ್ವರಃ ಸರ್ವದೋಷೋರಲಿಪ್ತಃ, ಅಪಹತಾಷ್ಕೃತ್ವಾದಿಶ್ರವಣಾತ್ | ತಥಾ ಅಕ್ಷಿಸ್ಥಾನಂ ಸರ್ವಲೇಪರಹಿತಮ್ ಉಪದಿಷ್ಟಮ್ | ‘ತದ್ ಯದ್ಯತ್ಯಸ್ಮಿನ್ ಸರ್ಪಿವೊ್ರದಕಂ ವಾ ಸಿಞ್ಞತಿ ವರ್ತ್ಮನೀ ಏವ ಗಚ್ಛತಿ’ ಇತಿ ಶ್ರುತೇ | ಸಂಯಾಮತ್ಯಾದಿಗುಣೋಪದೇಶಶ್ಚ ತಸ್ಮಿನ್ ಅವಕಲ್ಪತೇ | ಏತಂ ಸಂಯಾಮ ಇತ್ಯಾಚಕ್ಷತೇ ಏತಂ ಹಿ ಸರ್ವಾಣಿ ವಾಮಾನ್ಯಭಿಸಂಯ’’ (ಛಾಂ. ೪-೧೫-೨), ‘ಏಷ ಉ ಏವ ವಾಮನೀರೇಷ ಹಿ ಸರ್ವಾಣಿ ವಾಮಾನಿ ನಯತಿ’ (ಛಾಂ. ೪-೧೫-೩), “ಏಷ ಉ ಏವ ಭಾಮರೇಷ ಹಿ ಸರ್ವೆಷು ಲೋಕೇಷು ಭಾತಿ’ (ಛಾಂ. ೪-೧೫-೪) ಇತಿ ಚ | ಅತ ಉಪಪತ್ತೇ ಅನ್ನರಃ ಪರಮೇಶ್ವರಃ ||
(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಸಿದ್ಧಾಂತವನ್ನು ) ಹೇಳುತ್ತೇವೆ. ಪರಮೇಶ್ವರನನ್ನೇ ಇಲ್ಲಿ ಕಣ್ಣಿನೊಳಗಿರುವ ಪುರುಷನೆಂದು ಹೇಳಿರುವದು. ಏಕೆ ? ಎಂದರೆ, ಹೊಂದುವದರಿಂದ, ಇಲ್ಲಿ ಹೇಳಿರುವ ಗುಣಸಮೂಹವು ಪರಮೇಶ್ವರನಿಗೆ ಹೊಂದುತ್ತದೆಯಲ್ಲವೆ ? (ಅದು) ಹೇಗೆಂದರೆ, ಆತ್ಮನೆಂಬುದು ಮುಖ್ಯವೃತ್ತಿಯಿಂದ ಪರಮೇಶ್ವರನಿಗೇ ಹೊಂದುತ್ತದೆ ; ಏಕೆಂದರೆ ಅದೇ ಆತ್ಮನು, ಅದೇ ನೀನಾಗಿರುವ (ಛಾಂ. ೬-೮-೭) ಎಂದು ಶ್ರುತಿಯಿದೆ. ಅಮೃತವಾಗಿರುವದು, ಅಭಯವಾಗಿರುವದು - ಇವೆರಡನ್ನೂ ಆ (ಬ್ರಹ್ಮಕ್ಕೆ) ಹಲವು ಸಲ ಶ್ರುತಿಯಲ್ಲಿ ಹೇಳಿರುತ್ತದೆ. ಇದರಂತೆ ಈ
-
‘ದೃಶ್ಯತೇ’ ಎಂಬ ಲಿಂಗವನ್ನು ಬಿಟ್ಟರೆ ಇಲ್ಲಿ ಛಾಯಾತ್ಮನನ್ನು ಹೇಳುವ ಮಾತು ಯಾವದೂ ಇಲ್ಲ. ಆತ್ಮ ಎಂಬುದು ಶ್ರುತಿಯಾದ್ದರಿಂದ ಈ ಲಿಂಗಕ್ಕಿಂತಲೂ ಪ್ರಬಲ, ‘ಬ್ರಹ್ಮ’ ಎಂಬ ಶ್ರುತಿಯೂ ಹೀಗೆಯೇ.
-
ಇವು ಬ್ರಹ್ಮಕ್ಕ ಅಸಾಧಾರಣಲಿಂಗಗಳು.
೨೮೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಕಣ್ಣೆಂಬ ಸ್ಥಾನವು ಪರಮೇಶ್ವರನಿಗೆ ಅನುಗುಣವಾಗಿದೆ. ಹೇಗೆಂದರೆ ಪರಮೇಶ್ವರನು “ಅಪಹಪಾಹ್ಮನು’ ಎಂದು ಮುಂತಾದ ಶ್ರುತಿಯ (ಪ್ರಮಾಣದಿಂದ) ಹೇಗೆ ಯಾವ ದೋಷಗಳ ಅಂಟೂ ಇಲ್ಲದವನೋ, ಹಾಗೆಯೇ (ಈ) ಅಕ್ಷಿಸ್ಥಾನವೂ ಯಾವ ದೋಷದ (ಅಂಟೂ) ಇಲ್ಲದ್ದೆಂದು (ಇಲ್ಲಿ ತಿಳಿಸಿದ. “ಆ ಈ (ಕಣ್ಣಿನಲ್ಲಿ ತುಪ್ಪವನ್ನಾಗಲಿ ನೀರನ್ನಾಗಲಿ ಚಿಮುಕಿಸಿದರೂ (ಅದು ಕಣ್ಣಿನ) ಕೊನೆಗಳನ್ನೇ ಸೇರುತ್ತದೆ’ ಎಂಬ ಶ್ರುತಿಯಿಂದ (ಇದು ಸಿದ್ಧವಾಗುತ್ತದೆ). ಈತನನ್ನು ಸಂಯದ್ಯಾಮನೆಂದು ಕರೆಯುತ್ತಾರೆ ; ಏಕೆಂದರೆ ಈತನನ್ನು ಎಲ್ಲಾ ವಾಮಗಳೂ ಬಂದುಸೇರುತ್ತವೆ’’ (ಛಾಂ. ೪-೧೫-೨) ಎಂದೂ ಈತನೇ ವಾಮನೀ ; ಏಕೆಂದರೆ ಈತನೇ ಎಲ್ಲಾ ವಾಮಗಳನ್ನೂ ಒಯ್ದು ಕೊಡುತ್ತಾನೆ'3 (ಛಾಂ. ೪-೧೫-೩) ಎಂದೂ ಈತನೇ ಭಾಮನೀ ; ಏಕೆಂದರೆ ಈತನೇ ಎಲ್ಲಾ ಲೋಕಗಳಲ್ಲಿಯೂ ಬೆಳಗುತ್ತಿರು ವನು'14 (ಛಾಂ. ೪-೧೫-೪) ಎಂದೂ ಸಂಯಾಮತ್ವವೇ ಮುಂತಾದ ಗುಣಗಳನ್ನು ಹೇಳಿರುವದೂ ಆ (ಪರಮೇಶ್ವರನಿಗೆ) ಹೊಂದುತ್ತದೆ. ಆದ್ದರಿಂದ (ಇದೆಲ್ಲವೂ ಪರಮೇಶ್ವರನಿಗ) ಹೊಂದುವದರಿಂದ (ಕಣ್ಣಿನ) ಒಳಗಿನ (ಪುರುಷನು) ಪರಮೇಶ್ವರನೇ.
ಬ್ರಹ್ಮಕ್ಕೆ ಉಪಾಸನೆಗಾಗಿ ಸ್ಥಾನಾದಿಗಳನ್ನು ಉಪದೇಶಿಸಿದೆ
ಸ್ಟಾನಾದಿವ್ಯಪದೇಶಾಚ್ಚ ||೧೪|| ೧೪. ಸ್ಟಾನಾದಿಗಳನ್ನು ಹೇಳಿರುವದರಿಂದಲೂ (ಹೀಗೆ).
(ಭಾಷ್ಯ) ೧೭೯. ಕಥಂ ಪುನಃ ಆಕಾಶವತ್ ಸರ್ವಗತಸ್ಯ ಬ್ರಹ್ಮಣಃ ಅಕ್ಷಲ್ಪಸ್ಥಾನಮ್ ಉಪಪದ್ಯತೇ ಇತಿ ? ಅಪ್ರೋಚ್ಯತೇ | ಭವೇದೇಷಾ ಅನವಕ್ಷಿಪ್ತಿಃ ಯದಿ ಏತದೇವ ಏಕಂ ಸ್ಥಾನಮ್ ಅಸ್ಯ ನಿರ್ದಿಷ್ಟಂ ಭವೇತ್ | ಸನ್ನಿ ಹಿ ಅನ್ಯಾನ್ಯಪಿ ಪೃಥಿವ್ಯಾದೀನಿ ಸ್ಥಾನಾನಿ ಅಸ್ಯ ನಿರ್ದಿಷ್ಟಾನಿ “ಯಃ ಪೃಥಿವ್ಯಾಂ ತಿಷ್ಠನ್’’ (ಬೃ. ೩-೭-೩) ಇತ್ಯಾದಿನಾ | ತೇಷು
-
ನಿತ್ಯಶುದ್ಧತ್ವವು ಪರಮೇಶ್ವರನಿಗೆ ಅಸಾಧಾರಣಲಿಂಗವು. 2. ವಾಮಗಳೆಂದರೆ ಕಾಮಿತವಾದ ವಸ್ತುಗಳು ; ಪರಮೇಶ್ವರನು ಸತ್ಯಕಾಮನು. 3. ಜೀವರುಗಳಿಗೆ ಕರ್ಮಫಲಗಳನ್ನು ಕೂಡಬಲ್ಲವನು ಪರಮೇಶ್ವರನೇ.
-
ಸೂರ್ಯಾದಿಗಳೂ ಪರಮೇಶ್ವರನ ಬೆಳಕನ್ನನುಸರಿಸಿಯೇ ಬೆಳಗುವರೆಂದು ಶ್ರುತಿ ಸ್ಕೃತಿಗಳಲ್ಲಿದೆ. ಇದುವರೆಗೆ ಹೇಳಿದ ಲಿಂಗಗಳಲ್ಲಿ ಬ್ರಹ್ಮಕ್ಕ ಹೊಂದುತ್ತವೆ.
ಅಧಿ. ೪. ಸೂ. ೧೪] ಬ್ರಹ್ಮಕ್ಕೆ ಉಪಾಸನೆಗಾಗಿ ಸ್ಥಾನಾದಿಗಳನ್ನು ಉಪದೇಶಿಸಿದ ೨೮೭ ಹಿ ಚಕ್ಷುರಪಿ ನಿರ್ದಿಷ್ಟಮ್ “ಯಶ್ಚಕ್ಷುಷಿ ತಿಷ್ಟನ್’ (ಬೃ. ೩-೭-೧೮) ಇತಿ ! “ಸ್ಟಾನಾದಿವ್ಯಪದೇಶಾತ್’’ ಇತಿ ಆದಿಗ್ರಹಣೇನ ಏತದ್ ದರ್ಶಯತಿ - ನ ಕೇವಲಂ ಸ್ಥಾನಮೇವ ಏಕಮ್ ಅನುಚಿತಂ ಬ್ರಹ್ಮಣೇ ನಿರ್ದಿಶ್ಯಮಾನಂ ದೃಶ್ಯತೇ, ಕಿಂ ತರ್ಹಿ ನಾಮ, ರೂಪಮ್ - ಇವಂಜಾತೀಯಕಮಪಿ ಅನಾಮರೂಪಸ್ಯ ಬ್ರಹ್ಮಣಃ ಅನುಚಿತಂ ನಿರ್ದಿಶ್ಯಮಾನಂ ದೃಶ್ಯತೇ - “ತಸ್ಕೋದಿತಿ ನಾಮ’ (ಛಾಂ. ೧-೬-೭), “ಹಿರಣ್ಯಸ್ಮಶ್ರು:’ (ಛಾಂ. ೧-೬-೬) ಇತ್ಯಾದಿ | ನಿರ್ಗುಣಮಪಿ ಸದ್ ಬ್ರಹ್ಮ ನಾಮರೂಪಗತೈರ್ಗುಣೈಃ ಸಗುಣಮ್ ಉಪಾಸನಾರ್ಥಂ ತತ್ರ ತತ್ರ ಉಪದಿಶ್ಯತೇ ಇತ್ಯೇತದಪಿ ಉಕ್ತಮೇವ | ಸರ್ವಗತಾಪಿ ಬ್ರಹ್ಮಣ ಉಪಲಭ್ಯರ್ಥಂ ಸ್ಥಾನ ವಿಶೇಷೋ ನ ವಿರುಧ್ಯತೇ, ಶಾಲಗ್ರಾಮ ಇವ ವಿಷ್ಟೋ, ಇತ್ಯೇತದಪ್ಪಕ್ತಮೇವ ||
(ಭಾಷ್ಯಾರ್ಥ) (ಆಕ್ಷೇಪ) :- ಆದರೆ ಆಕಾಶದಂತೆ ಸರ್ವಗತವಾಗಿರುವ ಬ್ರಹ್ಮಕ್ಕೆ ಕಣ್ಣಂಬ ಅಲ್ಪಸ್ಥಾನವನ್ನು (ಹೇಳಿರುವದು) ಹೇಗೆ ಹೊಂದುತ್ತದೆ ?
(ಸಮಾಧಾನ) :- ಇದಕ್ಕೆ (ಉತ್ತರವನ್ನು) ಹೇಳುತ್ತೇವೆ. ಇದೊಂದೇ ಸ್ಥಾನ ವನ್ನು ಈ (ಬ್ರಹ್ಮಕ್ಕೆ) ಹೇಳಿದ್ದರೆ ಇದು ಅನುಪಪತ್ತಿಯಾಗುತ್ತಿತ್ತು. (ಆದರೆ) “ಯಾವನು ಪೃಥಿವಿಯಲ್ಲಿ ಇರುವವನಾಗಿ” (ಬೃ. ೩-೭-೩) ಎಂದು ಮುಂತಾದ (ಶ್ರುತಿ)ಯಲ್ಲಿ ಈ (ಬ್ರಹ್ಮಕ್ಕೆ) ಹೇಳಿರುವ ಪೃಥಿವಿಯೇ ಮುಂತಾದ (ಇನ್ನೂ ) ಬೇರೆಯ ಸ್ಥಾನಗಳೂ ಇವೆಯಷ್ಟೆ, ಆ (ಸ್ಥಾನ)ಗಳಲ್ಲಿ “ಯಾವನು ಕಣ್ಣಿನಲ್ಲಿರುವ ವನಾಗಿ’ (ಬೃ. ೩-೭-೧೮) ಎಂದು ಕಣ್ಣನ್ನೂ ಹೇಳಿರುತ್ತದೆ.?
‘ಸ್ಟಾನಾದಿವ್ಯಪದೇಶಾತ್’ ಎಂಬಲ್ಲಿ ‘ಆದಿ’ (ಮುಂತಾದ) ಎಂಬ (ಮಾತನ್ನು) ಹಿಡಿದಿರುವದರಿಂದ ಈ (ಅಭಿಪ್ರಾಯವನ್ನು) ತಿಳಿಸಿದಂತೆ (ಆಯಿತು. ಏನೆಂದರೆ) : ಸ್ಥಾನವೊಂದನ್ನೇ ಅನುಚಿತವಾಗಿ ಬ್ರಹ್ಮಕ್ಕೆ (ಶ್ರುತಿಯಲ್ಲಿ) ಹೇಳಿರು ವದು ಕಂಡುಬರುವದಿಲ್ಲ, ಮತ್ತೇನೆಂದರೆ ಅವನಿಗೆ ಉತ್ ಎಂದು ಹೆಸರು? (ಛಾಂ. ೧-೬-೭), ಚಿನ್ನದ ಗಡ್ಡಮೀಸೆಗಳುಳ್ಳವನು’ (ಛಾಂ. ೧-೬-೬) ಎಂದು ಮುಂತಾಗಿ ನಾಮ, ರೂಪ - ಎಂಬೀ ಜಾತಿಯ (ಬೇರೆಯ ಧರ್ಮಗಳನ್ನು) ಹೆಸರು,
- ದೊಡ್ಡ ವಸ್ತುವಿಗೆ ಸಣ್ಣ ಸ್ಥಾನವನ್ನು ಹೇಳಿದ ಎಂಬುದು ಹೊಂದುವದಿಲ್ಲವಲ್ಲ ! ಛಾಯಾತ್ಮನಿಗಾದರೆ ಹೊಂದುತ್ತದೆ - ಎಂದು ಆಕ್ಷೇಪಕನ ಭಾವ.
2.ಅಲ್ಪವಾದ ಕಣ್ಣೆಂಬ ಒಂದೇ ಸ್ಥಾನವನ್ನು ಬ್ರಹ್ಮಕ್ಕೆ ಹೇಳಿಲ್ಲ, ಇನ್ನೂ ಹಲವು ಸ್ಥಾನಗಳನ್ನು ಹೇಳಿದ ; ಆದ್ದರಿಂದ ಬ್ರಹ್ಮವು ಎಲ್ಲಾ ಕಡೆಯಲ್ಲಿಯೂ ಇರುವದೆಂಬುದಕ್ಕೆ ಅಕ್ಷಿಸ್ನಾನವೇನೂ ಅಡ್ಡಿಯಾಗುವದಿಲ್ಲ ಎಂದು ಭಾವ.
geses
ಬ್ರಹ್ಮಸೂತ್ರಭಾಷ್ಯ
[ಆ. ೧. ಮಾ. ೨.
ಆಕಾರಗಳಿಲ್ಲದ ಬ್ರಹ್ಮಕ್ಕೆ ಅನುಚಿತವಾಗಿ ಹೇಳಿರುವದು ಕಂಡುಬರುತ್ತದೆ.’ ಬ್ರಹ್ಮವು ನಿರ್ಗುಣವಾಗಿದ್ದುಕೊಂಡಿದ್ದರೂ ನಾಮರೂಪಗಳಿಗೆ ಸೇರಿದ ಗುಣಗಳಿಂದ ಸಗುಣವಾಗಿದೆಯೆಂದು ಉಪಾಸನೆಗಾಗಿ ಅಲ್ಲಲ್ಲಿ (ಶ್ರುತಿಯಲ್ಲಿ) ಉಪದೇಶಿಸಿರುತ್ತದೆ ಎಂಬುದನ್ನು (ಹಿಂದ) ಹೇಳಿಯೇ ಇದೆ. ಬ್ರಹ್ಮವು ಸರ್ವಗತವಾಗಿದ್ದರೂ, ವಿಷ್ಣುವಿಗೆ ಶಾಲಗ್ರಾಮದಂತೆ, ಉಪಾಸನೆಗಾಗಿ (ಅದಕ್ಕೆ) ಒಂದು ಗೊತ್ತಾದ ಸ್ಥಾನವನ್ನು (ಹೇಳುವದು) ವಿರುದ್ಧವಲ್ಲ ಎಂಬದನ್ನೂ (ಹಿಂದೆ) ಹೇಳಿಯೇ ಇದೆ.”
ಸುಖವಿಶಿಷ್ಮಾಭಿಧಾನಾದೇವ ಚ ||೧೫|| ೧೫. ಮತ್ತು ಸುಖವಿಶಿಷ್ಟವಾದ (ಬ್ರಹ್ಮವನ್ನು) ಹೇಳಿರುವದರಿಂದಲೇ (ಈ ಪುರುಷನು ಬ್ರಹ್ಮವೆಂದು ನಿಶ್ಚಯವಾಗುತ್ತದೆ.)
ಪ್ರಕರಣದಿಂದಲೂ ಅಕ್ಷಿಪುರುಷನು ಬ್ರಹ್ಮವೆಂದೇ ತಿಳಿಯಬೇಕು
(ಭಾಷ್ಯ) ೧೮೦. ಅಪಿ ಚ ನೃವಾತ್ರ ವಿವದಿತವ್ಯಮ್ ಕಿಂ ಬ್ರಹ್ಮ ಅಸ್ಮಿನ್ ವಾಕ್ಕೇ ಅಭಿಧೀಯತೇ ನ ವಾ ಇತಿ 1 ಸುಖವಿಶಿಷ್ಟಾಭಿಧಾನಾದೇವ ಬ್ರಹ್ಮತ್ವಂ ಸಿದ್ಧಮ್ | ಸುಖವಿಶಿಷ್ಟಂ ಹಿ ಬ್ರಹ್ಮ ಯದ್ ವಾಕ್ಕೋಪಕ್ರಮೇ ಪ್ರಕ್ರಾಮ್ ‘‘ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ’” (ಛಾಂ. ೪-೧೦-೪) ಇತಿ, ತದೇವ ಇಹ ಅಭಿಹಿತಮ್, ಪ್ರಕೃತಪರಿಗ್ರಹಸ್ಯ ನ್ಯಾಯ್ಯತ್ವಾತ್ ಆಚಾರ್ಯಸ್ತು ತೇ ಗತಿಂ ವಕ್ತಾ’ (ಛಾಂ. ೪ ೧೪-೧೦) ಇತಿ ಚ ಗತಿಮಾತ್ರಾಭಿಧಾನಪ್ರತಿಜ್ಞಾನಾತ್ ||
(ಭಾಷ್ಯಾರ್ಥ) ಇದಲ್ಲದೆ ಈ ವಾಕ್ಯದಲ್ಲಿ ಬ್ರಹ್ಮವನ್ನು ಹೇಳಿದೆಯೆ, ಇಲ್ಲವೆ ? - ಎಂಬೀ (ವಿಷಯ)ದಲ್ಲಿ ವಿವಾದವನ್ನು (ಮಾಡತಕ್ಕದ್ದೇ) ಅಲ್ಲ, (ಏಕೆಂದರೆ) ಸುಖವಿಶಿಷ್ಟ ವಾದದ್ದನ್ನು ಹೇಳಿರುವದರಿಂದಲೇ (ಇದು) ಬ್ರಹ್ಮವೆಂದು ಸಿದ್ಧವಾಗುತ್ತದೆ. ಹೇಗೆಂದರೆ “ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ’” (ಛಾಂ. ೪-೧೦-೪) ಎಂದು ಸುಖವಿಶಿಷ್ಟವಾದ ಯಾವ ಬ್ರಹ್ಮವನ್ನು ವಾಕ್ಯದ ಉಪಕ್ರಮದಲ್ಲಿ (ಹೇಳುವದಕ್ಕೆ)
- ಹಾಗಾದರೆ ಇದೆಲ್ಲವೂ ಅನುಚಿತವೆಂದೇ ಆಗಲಿ ಎಂಬ ಆಕ್ಷೇಪಕ್ಕೆ ಮುಂದಿನವಾಕ್ಯದಲ್ಲಿ ಸಮಾಧಾನವನ್ನು ಹೇಳಿದೆ.
2.೧-೧-೨೦ (ಭಾ.ಭಾ. ೧೧೫) ;೧-೨-೨ (ಭಾ.ಭಾ. ೧೫೨) ಮುಂತಾದ ಸ್ಥಲಗಳಲ್ಲಿ ಸಮಾಧಾನವನ್ನು ಹೇಳಿರುವದರಿಂದ ಇಲ್ಲಿ ಮತ್ತೆ ಆಕ್ಷೇಪವು ತಲೆಯತ್ತುವ ಹಾಗಿಲ್ಲ ಎಂದು ಭಾವ.
ಅಧಿ. ೪. ಸೂ. ೧೫] ಇದು ಬ್ರಹ್ಮದ ಪ್ರಕರಣವೆಂಬುದು ಹೇಗೆ ?
೨೮೯
ಮೊದಲುಮಾಡಿದೆಯೋ ಅದನ್ನೇ ಇಲ್ಲಿ ಹೇಳಿರುತ್ತದೆ (ಎನ್ನಬೇಕು) ; ಏಕೆಂದರೆ ಪ್ರಕೃತವಾದದ್ದನ್ನೇ ತೆಗೆದುಕೊಳ್ಳುವದು ನ್ಯಾಯವಾಗಿರುತ್ತದೆ. ಆದರೆ ಆಚಾರ್ಯನು ನಿನಗೆ ಗತಿಯನ್ನು ಹೇಳುವನು’ (ಛಾಂ. ೪-೧೪-೧) ಎಂದು (ಮುಂದೆ) ಗತಿಯನ್ನು ಮಾತ್ರ ಹೇಳುವನೆಂದು ತಿಳಿಸಿರುವದರಿಂದಲೂ (ಬ್ರಹ್ಮವು ಪ್ರಕೃತವಾಗಿದೆಯೆಂದು ತಿಳಿಯಬೇಕು.)
ಇದು ಬ್ರಹ್ಮದ ಪ್ರಕರಣವೆಂಬುದು ಹೇಗೆ ?
(ಭಾಷ್ಯ) ೧೮೧, ಕಥಂ ಪುನರ್ವಾಕೋಪಕ್ರಮೇ ಸುಖವಿಶಿಷ್ಟಂ ಬ್ರಹ್ಮ ವಿಜ್ಞಾಯತೇ ಇತಿ ? ಉಚ್ಯತೇ | ‘ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ’ ಇತ್ಯೇತದ್ ಅಗ್ನಿನಾಂ ವಚನಂ ಶ್ರುತ್ವಾ ಉಪಕೋಸಲ ಉವಾಚ ‘‘ವಿಜಾನಾಮ್ಯಹಂ ಯತ್ ಪ್ರಾಣೋ ಬ್ರಹ್ಮ ಕಂ ಚ ತು ಖಂ ಚ ನ ವಿಜಾನಾಮಿ" 11 (ಛಾಂ. ೪-೧೦-೫) ಇತಿ | ತತ್ರ ಇದಂ ಪ್ರತಿವಚನಮ್ ‘ಯದ್ ವಾವ ಕಂ ತದೇವ ಖಂ ಯದೇವ ಖಂ ತದೇವ ಕಮ್’’ (ಛಾಂ. ೪-೧೦-೫) ಇತಿ | ತತ್ರ ಖಂಶಯ್ಯೋ ಭೂತಾಕಾಶೆ ನಿರೂಢ ಲೋಕೇ | ಯದಿ ತಸ್ಯ ವಿಶೇಷಣನ ಕಂಶಬ್ದಃ ಸುಖವಾಚೇ ನೋವಾದೀಯೇತ, ತಥಾ ಸತಿ ಕೇವಲೇ ಭೂತಾಕಾಶೀ ಬ್ರಹ್ಮಶಬ್ಲೊ ನಾಮಾದಿಷ್ಟಿವಪ್ರತೀಕಾಭಿಪ್ರಾಯಣಪ್ರಯುಕ್ತ ಇತಿ ಪ್ರತೀತಿಃ ಸ್ಯಾತ್, ತಥಾ ಕಂಶಬ್ದಸ್ಯ ವಿಷಯೇಯಸಂಪರ್ಕಜನಿತೇ ಸಾಮಯ ಸುಖೇ ಪ್ರಸಿದ್ಧ ತ್ವಾತ್ ಯದಿ ತಸ್ಯ ಖಂಶಬ್ಲೂ ವಿಶೇಷಣನ ನೋವಾದೀಯೇತ ಲೌಕಿಕಂ ಸುಖಂ ಬ್ರಹ್ಮ ಇತಿ ಪ್ರತೀತಿಃ ಸ್ಯಾತ್ | ಇತರೇತರವಿಶೇಷಿತೌ ತು ಕಂಖಂಶ ಸುಖಾತ್ಮಕಂ ಬ್ರಹ್ಮ ಗಮಯತಃ | ತತ್ರ ದ್ವಿತೀಯೇ ಬ್ರಹ್ಮಶಬ್ದ ಅನುಪಾದೀಯಮಾನೇ ‘ಕಂ ಖಂ ಬ್ರಹ್ಮ’ ಇತ್ಯೇವ ಉಚ್ಯಮಾನೇ ಕಂಶಬ್ದಸ್ಯ ವಿಶೇಷಣತ್ತೇನೈವ ಉಪಯುಕ್ತತ್ವಾತ್, ಸುಖಸ್ಯ ಗುಣಸ್ಯ ಅಧೇಯತ್ವಂ ಸ್ಯಾತ್ | ತನ್ಮಾಭೂತ್ ಇತಿ ಉಭಯೋಃ ಕಂಖಂಶಬ್ದಯೋಃ ಬ್ರಹ್ಮಶಬ್ದ ಶಿರಸ್ಯಂ ಕಂ ಬ್ರಹ್ಮ
-
ಉಪಕೋಸಲ ಕಾಮಲಾಯನನು ಸತ್ಯಕಾಮ ಜಾಬಾಲನಲ್ಲಿ ಬ್ರಹ್ಮಚರ್ಯದಿಂದ ಇದ್ದನು. ಹನ್ನೆರಡು ವರ್ಷಗಳು ಆಚಾರ್ಯನನ್ನು ಸೇವಿಸಿದರೂ ಆತನು ಇವನಿಗ ವಿದ್ಯಾಭ್ಯಾಸವನ್ನು ಪೂರ್ತಿ ಹೇಳಿಸಲಿಲ್ಲ. ಬಹಳ ವ್ಯಥೆಪಡುತ್ತಿದ್ದ ಉಪಕೋಸಲನಿಗೆ ಅವನ ಸೇವೆಯಿಂದ ಪ್ರಸನ್ನ ರಾಗಿದ್ದ ಅಗ್ನಿಗಳು ಮಾಡಿದ ಉಪದೇಶದ ವಾಕ್ಯವಿದು. ಇದೇ ಪ್ರಕೃತವಾಕ್ಯದ ಪ್ರಕರಣದ ಪ್ರಾರಂಭವು.
-
ಅಗ್ನಿಗಳು ಉಪದೇಶಿಸಿರುವ ಬ್ರಹ್ಮವಿದ್ಯೆಯನ್ನು ಅನುಷ್ಟಾನಮಾಡಿದ ಉಪಾಸಕನಿಗೇ ಆಚಾರ್ಯನು ಮುಂದ ಗತಿಯನ್ನು ಹೇಳಿರುತ್ತಾನೆ. ಆದ್ದರಿಂದಲೂ ಅಕ್ಷಿಪುರುಷನು ಬ್ರಹ್ಮವು.
೨೯೦
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಖಂ ಬ್ರಹ್ಮ ಇತಿ’’ | ಇಷ್ಟಂ ಹಿ ಸುಖಸ್ಕಾಪಿ ಗುಣಸ್ಯ ಗುಣಿವದ್ ಧೈಯತ್ವಮ್ | ತದೇವರ ವಾಕ್ಕೋಪಕ್ರಮೇ ಸುಖವಿಶಿಷ್ಟಂ ಬ್ರಹ್ಮ ಉಪದಿಷ್ಟಮ್ ||
(ಭಾಷ್ಯಾರ್ಥ) | ಪ್ರಶ್ನೆ :- ಹಾಗಾದರೆ ವಾಕ್ಯದ ಉಪಕ್ರಮದಲ್ಲಿ ಸುಖವಿಶಿಷ್ಟವಾದ (ಬ್ರಹ್ಮ ವನ್ನು ಹೇಳಿದೆಯಂದು) ಹೇಗೆ ಗೊತ್ತಾಗುತ್ತದೆ ?
(ಉತ್ತರ) :- ಹೇಳುತ್ತೇವೆ, (ಕೇಳು). “ಪ್ರಾಣವು ಬ್ರಹ್ಮವು, ಕಂ (ಸುಖವು) ಬ್ರಹ್ಮವು, ಖಂ (ಆಕಾಶವು) ಬ್ರಹ್ಮವು’ ಎಂಬ ಅಗ್ನಿಗಳ ವಚನವನ್ನು ಕೇಳಿದ ಉಪಕೋಸಲನು “ಪ್ರಾಣವು ಬ್ರಹ್ಮವೆಂಬುದನ್ನು ನಾನು ಬಲ್ಲೆನು ; ಆದರೆ ಕಂ ಎಂಬುದು (ಬ್ರಹ್ಮವೆಂಬುದನ್ನೂ) ಖಂ ಎಂಬುದು (ಬ್ರಹ್ಮವೆಂಬುದನ್ನೂ) ಅರಿಯೆನು’ (ಛಾಂ. ೪-೧೦-೫) ಎಂದನು. ಅದಕ್ಕೆ ಇದು (ಅಗ್ನಿಗಳ) ಉತ್ತರವು : “ಯಾವದು ಕಂ ಎಂಬುದೂ ಅದೇ ಖಂ ಎಂಬುದು; ಯಾವದು ಖಂ ಎಂಬುದೋ ಅದೇ ಕಂ ಎಂಬುದು. ಇಲ್ಲಿ ಖಂ ಎಂಬ ಶಬ್ದವು ಲೋಕದಲ್ಲಿ ಭೂತಾಕಾಶದಲ್ಲಿ ರೂಢವಾಗಿರುತ್ತದೆ. ಅದಕ್ಕೆ ವಿಶೇಷಣವಾಗಿ ಸುಖವಾಚಕವಾದ ಕಂಶಬ್ದವನ್ನು ತೆಗೆದುಕೊಳ್ಳದೆಹೋಗಿದ್ದರೆ ಆ (ಪಕ್ಷದಲ್ಲಿ) ನಾಮಾದಿಗಳಲ್ಲಿ ಹೇಗೋ ಹಾಗೆ ಬರಿಯ ಭೂತಾಕಾಶ (ವನ್ನು ತಿಳಿಸುವದಕ್ಕೇ ಅದು ಬ್ರಹ್ಮಕ್ಕೆ) ಪ್ರತೀಕವೆಂಬ ಅಭಿಪ್ರಾಯದಿಂದ ಬ್ರಹ್ಮಶಬ್ದವನ್ನು ಪ್ರಯೋಗಿಸಿದೆ ಎಂಬ ಅರಿವು ಆಗುತ್ತಿತ್ತು. ಹೀಗೆಯೇ ಕಂಶಬ್ದವು ವಿಷಯೇಂದ್ರಿಯಗಳ ಸಂಯೋಗದಿಂದ ಉಂಟಾಗುವ ದೋಷಯುಕ್ತಸುಖ(ವನ್ನು ತಿಳಿಸುವದೆಂದು) ಪ್ರಸಿದ್ಧವಾಗಿರುವದರಿಂದ, ಅದಕ್ಕೆ ಖಂಶಬ್ದವನ್ನು ವಿಶೇಷಣವಾಗಿ ತೆಗೆದುಕೊಳ್ಳದಿದ್ದರೆ ಲೌಕಿಕಸುಖವೇ ಬ್ರಹ್ಮವು ಎಂಬ ಅರಿವು ಆಗುತ್ತಿತ್ತು. (ಇದಕ್ಕೆ ಬದಲು) ಕಂಖಂಶಬ್ದಗಳನ್ನು ಒಂದಕ್ಕೊಂದು ವಿಶೇಷಣವಾಗಿ (ಮಾಡಿದರೂ, ಎಂದರೆ) ಸುಖರೂಪವಾದ ಬ್ರಹ್ಮವನ್ನು ತಿಳಿಸುತ್ತವೆ. ಇಲ್ಲಿ ಎರಡನೆಯ ಬ್ರಹ್ಮಶಬ್ದವನ್ನು ತೆಗೆದುಕೊಳ್ಳದ ‘ಕಂ ಖಂ ಬ್ರಹ್ಮ’ ಎಂದಿಷ್ಟೇ ಹೇಳಿದ್ದರ ಕಂಶಬ್ದವು ವಿಶೇಷಣವಾಗಿಯೇ ಉಪಯೋಗವಾಗಿರುವದರಿಂದ ಸುಖವೆಂಬ ಗುಣವನ್ನು ಧ್ಯಾನಮಾಡತಕ್ಕದ್ದಲ್ಲ ಎಂದಾಗುತ್ತಿತ್ತು ; ಹಾಗಾಗಬಾರದು ಎಂದು
ಬಿ
,
-
ಪ್ರಾಣನು ಅಥವಾ ಸೂತ್ರಾತ್ಮನು ಬ್ರಹ್ಮವಾಗಬಹುದು ; ಆದರೆ ವಿಷಯಸುಖವೂ ಆಕಾಶವೂ ಬ್ರಹ್ಮವೆಂಬುದು ಹೇಗೆ ?- ಎಂದು ಪ್ರಶ್ನ,
-
ಒಂದು ವಸ್ತುವನ್ನು ತಿಳಿಸುವ ದೃಷ್ಟಿಯನ್ನು ಮತ್ತೊಂದರಲ್ಲಿಡುವದು ಪ್ರತೀಕೋ ಪಾಸನೆ, ‘ಖಂ ಬ್ರಹ್ಮ’ ಎಂದಿಷ್ಟೇ ಹೇಳಿದ್ದರೆ ಆಕಾಶವನ್ನು ಬ್ರಹ್ಮದೃಷ್ಟಿಯಿಂದ ಉಪಾಸನ ಮಾಡಬೇಕೆಂದು ಪ್ರತೀಕೋಪಾಸನೆಯನ್ನು ಹೇಳಿದಂತಾಗುತ್ತಿತ್ತು ಎಂದು ಭಾಷ್ಯವಾಕ್ಯಾರ್ಥ.
ಅಧಿ. ೪. ಸೂ. ೧೫] ಸತ್ಯಕಾಮನು ಪ್ರಕೃತಬ್ರಹ್ಮವನ್ನೇ ಹೇಳಿರುತ್ತಾನೆಯೆ ? ೨೯೧ ಕಂಖಂಶಬ್ದಗಳೆರಡಕ್ಕೂ ಬ್ರಹ್ಮಶಬ್ದವನ್ನು ಮುಂದೆ ಹಾಕಿ ಕಂ ಬ್ರಹ್ಮ ಖಂ ಬ್ರಹ್ಮ” ಎಂದು (ಹೇಳಿರುತ್ತದೆ). ಏಕೆಂದರೆ ಗುಣಿಯಾದ ಬ್ರಹ್ಮದಂತ ಗುಣವಾದ ಸುಖ ವನ್ನೂ ಧ್ಯಾನಮಾಡಬೇಕೆಂಬುದು (ಈ ಶ್ರುತಿಗೆ) ಇಷ್ಟವಾಗಿರುತ್ತದೆ. ಅಂತು ಹೀಗೆ ವಾಕ್ಯದ ಉಪಕ್ರಮದಲ್ಲಿ ಸುಖವಿಶಿಷ್ಟವಾದ ಬ್ರಹ್ಮವನ್ನು ಉಪದೇಶಿಸಿರುತ್ತದೆ.
ಸತ್ಯಕಾಮನು ಪ್ರಕೃತಬ್ರಹ್ಮವನ್ನೇ ಹೇಳಿರುತ್ತಾನೆಯೆ ?
(ಭಾಷ್ಯ) ೧೮೨. ಪ್ರತ್ಯೇಕಂ ಚ ಗಾರ್ಹಪತ್ಯಾದಯೋಗ್ನಯಃ ಸ್ವಂ ಸ್ವಂ ಮಹಿಮಾನಮ್ ಉಪದಿಶ್ಯ “ಏಷಾ ಸೋಮ್ಯ ತೇಸ್ಮದ್ವಿದ್ಯಾತ್ಮವಿದ್ಯಾ ಚ’ (ಛಾಂ. ೪-೧೪-೧) ಇತಿ ಉಪಸಂಹರನ್ನ: ಪೂರ್ವತ್ರ ಬ್ರಹ್ಮ ನಿರ್ದಿಷ್ಟಮ್ ಇತಿ ಜ್ಞಾಪಯ |“ಆಚಾರ್ಯಸ್ತು ತೇ ಗತಿಂ ವಕ್ತಾ’ (ಛಾಂ. ೪-೧೪-೧) ಇತಿ ಗತಿಮಾತ್ರಾಭಿಧಾನಪ್ರತಿಜ್ಞಾನಮ್ ಅರ್ಥಾನ್ನರವಿವಕ್ಷಾ ವಾರಯತಿ | “ಯಥಾ ಪುಷ್ಕರಪಲಾಶ ಆಪೋ ನ ಶಿಷ್ಯನ ಏವಮೇವಂವಿದಿ ಪಾಪಂ ಕರ್ಮ ನ ಶಿಷ್ಯತೇ’ (ಛಾಂ.೪-೧೪-೩) ಇತಿ ಚ ಅಕ್ಷಿಸ್ಥಾನಂ ಪುರುಷಂ ವಿಜಾನತಃ ಪಾಪೇನ ಅನುಪಘಾತಂ ಬ್ರುವನ್ ಅಕ್ಷಿಸ್ಥಾನಸ್ಯ ಪುರುಷಸ್ಯ ಬ್ರಹ್ಮತ್ವಂ ದರ್ಶಯತಿ | ತಸ್ಮಾತ್ ಪ್ರಕೃತವ ಬ್ರಹ್ಮಣಃ, ಅಕ್ಷಿಸ್ಥಾನತಾಂ ಸಂಯಡ್ವಾಮಾದಿಗುಣತಾಂ ಚ ಉಕ್ಕಾ ಅರ್ಚಿರಾದಿಕಾಂ ತದ್ವಿದೋ ಗತಿಂ ವಕ್ಷಾಮಿ ಇತ್ಯುಪಕ್ರಮತೇ “ಯ ಏಷೋಕ್ಷಿಣಿ ಪುರುಷೋ ದೃಶ್ಯ ಏಷ ಆತಿ ಹೋವಾಚ’’ (ಛಾಂ. ೪-೧೫-೧) ಇತಿ ||
(ಭಾಷ್ಯಾರ್ಥ) ಗಾರ್ಹಪತ್ಯವೇ ಮುಂತಾದ ಅಗ್ನಿಗಳು ಒಂದೊಂದಾಗಿ ತಮ್ಮ ತಮ್ಮ ಮಹಿಮ ಯನ್ನು ಉಪದೇಶಿಸಿ ‘‘ಸೋಮ್ಯನೆ, ನಿನಗೆ ಈ ನಮ್ಮ ವಿದ್ಯೆಯನ್ನೂ ಆತ್ಮವಿದ್ಯೆಯನ್ನೂ (ಹೇಳಿರುತ್ತೇವೆ.)’ (ಛಾಂ. ೪-೧೪-೧) ಎಂದು ಉಪಸಂಹಾರಮಾಡಿರುವದರಿಂದ
1.ಯಾವಗುಣವುಳ್ಳದ್ದೆಂದು ಬ್ರಹ್ಮವನ್ನು ಉಪಾಸನಮಾಡಬೇಕೆಂದು ವಿಧಿಸಿರುತ್ತದೆಯೋ ಆ ಗುಣವನ್ನೂ ಉಪಾಸನೆಮಾಡಬೇಕೆಂದೂ ಹಾಗೆ ಉಪಾಸನಮಾಡಿದರೇ ಉಕ್ತಫಲ ಎಂದೂ ಶ್ರುತಿಯ ಅಭಿಪ್ರಾಯ.
- ಅಗ್ನಿಗಳು ಒಟ್ಟುಗೂಡಿ ಬ್ರಹ್ಮವಿದ್ಯೆಯನ್ನು ಉಪದೇಶಿಸಿದವು. ಬಳಿಕ ಗಾರ್ಹಪತ್ಯವು ಪೃಥಿವಿ, ಅಗ್ನಿ, ಅನ್ನ, ಆದಿತ್ಯ - ಇವು ನನ್ನ ತನುಗಳು, ಆದಿತ್ಯನಲ್ಲಿರುವ ಈ ಪುರುಷನೇ ನಾನು (೪-೧-೧) ಎಂದೂ ಅನ್ನಾಹಾರ್ಯಪಚನವು ಅಪ್ಪು, ದಿಕ್ಕುಗಳು, ನಕ್ಷತ್ರಗಳು, ಚಂದ್ರ - ಇವು ನನ್ನ ತನುಗಳು, ಚಂದ್ರನಲ್ಲಿರುವ ಈ ಪುರುಷನೇ ನಾನು (೪-೧೨-೧) ಎಂದೂ ಆಹವನೀಯವು೨೯೨
ಬ್ರಹ್ಮಸೂತ್ರಭಾಷ್ಯ
[ಅ.೧. ಪಾ. ೨. ಹಿಂದಿನ (ವಾಕ್ಯದಲ್ಲಿ ಬ್ರಹ್ಮವನ್ನು ಹೇಳಿದೆ ಎಂದು ತಿಳಿಸಿಕೊಟ್ಟಿರುತ್ತವೆ. ಆದರೆ ಆಚಾರ್ಯನು ನಿನಗೆ ಗತಿಯನ್ನು ಹೇಳುವನು’ (ಛಾಂ. ೪-೧೪-೧) ಎಂದು (ಮುಂದ) ಗತಿಮಾತ್ರವನ್ನು ಹೇಳುವನೆಂದು ತಿಳಿಸಿರುವದು ಮತ್ತೊಂದು ವಿಷಯ ವನ್ನು ತಿಳಿಸುವ ಅಭಿಪ್ರಾಯ(ವಿದೆಯಂಬುದನ್ನು) ಅಲ್ಲಗಳೆಯುತ್ತದೆ. ಮತ್ತು ‘‘ಹೇಗೆ ಕಮಲದಲಿಗೆ ನೀರು ಅಂಟುವದಿಲ್ಲವೋ, ಹಾಗೆಯೇ ಹೀಗೆಂದು ಉಪಾಸನೆ ಮಾಡಿದವನಿಗೆ ಪಾಪಕರ್ಮವು ಅಂಟುವದಿಲ್ಲ” (ಛಾಂ. ೪-೧೪-೩) ಎಂದು ಕಣ್ಣೆಂಬ ಸ್ಥಾನದಲ್ಲಿರುವ ಪುರುಷನನ್ನು ಉಪಾಸನೆಮಾಡುವವನಿಗೆ ಪಾಪದ ಹೂಡೆತವಿಲ್ಲವೆಂದು ಹೇಳುವದರಿಂದ (ಸತ್ಯಕಾಮನು) ಅಕ್ಷಿಸ್ಥಾನದ ಪುರುಷನು ಬ್ರಹ್ಮವೆಂದು ತಿಳಿಸಿರು ತಾನ. ಆದ್ದರಿಂದ ಪ್ರಕೃತವೇ ಆಗಿರುವ ಬ್ರಹ್ಮಕ್ಕೆ ಕಣ್ಣೆಂಬ ಸ್ಥಾನವನ್ನೂ ಸಂಯಡ್ವಾಮ ತ್ವವೇ ಮುಂತಾದ ಗುಣಗಳನ್ನೂ ಹೇಳಿ ಅದನ್ನು - ಉಪಾಸನೆಮಾಡಿದವನಿಗೆ ಅರ್ಚಿರಾದಿಗತಿಯನ್ನು ಹೇಳೋಣವೆಂದು ಕಣ್ಣಿನಲ್ಲಿ ಯಾವ ಈ ಪುರುಷನು ಕಾಣುವನೋ ಇವನೇ ಆತ್ಮನು” (ಛಾಂ. ೪-೧೫-೧) ಎಂದು ಉಪಕ್ರಮಿಸಿರುತ್ತಾನೆ (ಎಂದು ಸಿದ್ಧವಾಯಿತು.)
ಶ್ರುತೋಪನಿಷತ್ನಗತ್ಯಭಿಧಾನಾಚ್ಚ ||೧೬|| ೧೬. ಉಪಾಸನೆಯನ್ನು ಶ್ರವಣಮಾಡಿದವನ ಗತಿಯನ್ನು ಹೇಳಿರುವದ ರಿಂದಲೂ (ಅಕ್ಷಿಪುರುಷನು ಬ್ರಹ್ಮವೇ).
ದೇವಯಾನಗತಿಯನ್ನು ಹೇಳಿರುವದರಿಂದ ಇದು ಬ್ರಹ್ಮವೇ
(ಭಾಷ್ಯ) ೧೮೩. ಇತಶ್ಚ ಅಕ್ಷಿಸ್ಥಾನಃ ಪುರುಷಃ ಪರಮೇಶ್ವರಃ | ಯಸ್ಮಾತ್ ಪ್ರಾಣ, ಆಕಾಶ, ದ್ಯುಲೋಕ, ವಿದ್ಯುತ್ತು - ಇವು ನನ್ನ ತನುಗಳು, ವಿದ್ಯುತ್ತಿನಲ್ಲಿರುವ ಈ ಪುರುಷನೇ ನಾನು (೪-೧೩-೧) ಎಂದೂ ತಮ್ಮ ತಮ್ಮ ಮಹಿಮೆಯನ್ನು ಪ್ರತ್ಯೇಕವಾಗಿ ಹೇಳಿ ‘ಬೇರೆಬೇರೆಯಾಗಿ ನಾವು ಹೇಳಿರುವದು ನಮ್ಮನಮ್ಮ ಅಗ್ನಿವಿದ ; ಮೊದಲು ನಾವೆಲ್ಲರೂ ಸೇರಿ ಹೇಳಿರುವದು ಆತ್ಮವಿದ್ಯ’ ಎಂದು ಉಪಸಂಹಾರಮಾಡಿವೆ.
-
ಅಗ್ನಿಗಳು ಹೇಳಿದ್ದು ಆತ್ಮವಿದ್ಯೆ, ಸತ್ಯಕಾಮನು ಹೇಳಿದ್ದು ಛಾಯಾತ್ಮ ವಿದ್ಯೆ - ಎಂದು ಬೇರೆಬೇರೆಯಾಗಿರಬಾರದೇಕೆ ? • ಎಂಬ ಆರೋಪಕ್ಕೆ ಪರಿಹಾರವಿದು.
-
ಏಕೆಂದರೆ ಪಾಪಪುಣ್ಯಗಳ ಸಂಬಂಧವಿಲ್ಲದಿರುವದು ಬ್ರಹ್ಮಕ್ಕೆ ಮಾತ್ರ.
-
ಈ ಸ್ಥಾನವೂ ಗುಣಗಳೂ ಉಪಾಸ್ಯವಾಗಿರುತ್ತವೆಯಾದ್ದರಿಂದ ಇವಿಲ್ಲದ ವಿದ್ಯಯು ಪೂರ್ತಿಯಾಗುವದಿಲ್ಲ.
ಅಧಿ. ೪. ಸೂ. ೧೬] ದೇವಯಾನಗತಿಯನ್ನು ಹೇಳಿರುವದರಿಂದ ಇದು ಬ್ರಹ್ಮವೇ
೨೯೩
ಶ್ರುತೋಪನಿಷತ್ಕಸ್ಯ ಶ್ರುತರಹಸ್ಯವಿಜ್ಞಾನಸ್ಯ ಬ್ರಹ್ಮವಿದಃ ಯಾ ಗತಿ: ದೇವಯಾನಾಖ್ಯಾ ಪ್ರಸಿದ್ಧಾ ಶ್ರುತೌ - “ಅಥೋತ್ತರೇಣ ತಪಸಾ ಬ್ರಹ್ಮಚರ್ಯಣ ಶ್ರದ್ಧಯಾ ವಿದ್ಯಯಾತ್ಮಾನಮನ್ನಿಷ್ಕಾದಿತ್ಯಮಭಿಜಯನೇ | ಏತ ಪ್ರಾಣಾನಾಮಾಯತನ ಮೇತದಮೃತಮಭಯಮೇತತ್ ಪರಾಯಣಮೇತಸ್ಮಾನ್ನ ಪುನರಾವರ್ತನೇ’ (ಪ್ರ. ೧-೧೦) ಇತಿ | ಸ್ಮತಾವಪಿ “ಅಗ್ನಿರ್ಜ್ಯೋತಿರಹಃ ಶುಕ್ಕ: ಷಣ್ಮಾಸಾ ಉತ್ತರಾ ಯಣಮ್ | ತತ್ರ ಪ್ರಯಾತಾ ಗಚ್ಛ ಬ್ರಹ್ಮ ಬ್ರಹ್ಮವಿದೂ ಜನಾಃ’ (ಗೀ. ೮-೨೪) ಇತಿ | ಸೈವ ಇಹ ಅಕ್ಷಿಪುರುಷವಿದೋಭಿಧೀಯಮಾನಾ ದೃಶ್ಯತೇ | ಅಥ ಯದು ಚೈವಾಸ್ಮಿಞ್ಞವ್ಯಂ ಕುರ್ವ ಯದಿ ಚ ನಾರ್ಚಿಷಮೇವಾಭಿಸಂಭವನ್ತಿ’ ಇತ್ಯುಪಕ್ರ “ಆದಿತ್ಯಾಚ್ಚನ್ನಮಸಂ ಚನ್ನಮಸೋ ವಿದ್ಯುತಂ ತತ್ಪುರುಷೋಮಾನವಃ ಸ ಏನಾನ್ ಬ್ರಹ್ಮ ಗಮಯತೇಷ ದೇವಪಥ ಬ್ರಹ್ಮಪಥ ಏತೇನ ಪ್ರತಿಪದ್ಯಮಾನಾ ಇಮಂ ಮಾನವಮಾವರ್ತ೦ ನಾವರ್ತನೇ’ (ಛಾಂ. ೪-೧೫-೫) ಇತಿ | ತದಿಹ ಬ್ರಹ್ಮ ವಿದ್ವಿಷಯಯಾ ಪ್ರಸಿದ್ಧಯಾ ಗಾ ಅಕ್ಷಿಸ್ಥಾನಸ್ಯ ಬ್ರಹ್ಮತ್ವಂ ನಿಶ್ಮೀಯತೇ ||
(ಭಾಷ್ಯಾರ್ಥ) ಈ (ಕಾರಣ)ದಿಂದಲೂ ಅಕ್ಷಿಸ್ಥಾನದಲ್ಲಿರುವ ಪುರುಷನು ಪರಮೇಶ್ವರನೇ. ಏಕೆಂದರೆ ಶ್ರುತೋಪನಿಷತ್ಕನಿಗೆ ಎಂದರೆ ರಹಸ್ಯವಾದ ಜ್ಞಾನವನ್ನು ಶ್ರವಣಮಾಡಿರುವ ಬ್ರಹ್ಮಜ್ಞಾನಿಗೆ “ಇನ್ನು ಉತ್ತರ(ಮಾರ್ಗ)ದಿಂದ (ಹೋಗುವವರು) ತಪಸ್ಸಿನಿಂದಲೂ ಬ್ರಹ್ಮಚರ್ಯೆಯಿಂದಲೂ ಶ್ರದ್ದೆಯಿಂದಲೂ ವಿದ್ಯೆಯಿಂದಲೂ ಆತ್ಮನನ್ನು ಹುಡುಕುವವರಾಗಿ ಆದಿತ್ಯನನ್ನು ಗೆದ್ದು ಕೊಳ್ಳವರು. ಇದೇ ಪ್ರಾಣಿಗಳಿಗೆ ನೆಲೆ ; ಇದು ಅಮೃತವು, ಅಭಯವು ; ಇದು ಪರಾಯಣವು. ಇದರಿಂದ ಮತ್ತೆ ಹಿಂತಿರುಗುವದಿಲ್ಲ” (ಪ್ರ. ೧-೧೦) ಎಂದು ಶ್ರುತಿಯಲ್ಲಿಯೂ “ಅಗ್ನಿ, ಜ್ಯೋತಿ, ಅಹಸ್ಸು, ಶುಕ್ಕ (ಪಕ್ಷ), ಉತ್ತರಾಯಣ - ಎಂಬ ಆರು ಮಾಸಗಳು - ಇದರಲ್ಲಿ ಪ್ರಯಾಣಮಾಡಿದ ಬ್ರಹ್ಮ ವಿದರಾದ ಜನರು ಬ್ರಹ್ಮವನ್ನು ಸೇರುತ್ತಾರೆ” (ಗೀ. ೮-೨೪) ಎಂದು ಸ್ಕೃತಿಯಲ್ಲಿಯೂ ಯಾವ ದೇವಯಾನವೆಂಬ ಗತಿಯು ಪ್ರಸಿದ್ಧವಾಗಿರುತ್ತದೆಯೋ ಅದೇ (ಗತಿಯನ್ನ) ಇಲ್ಲಿ “ಇನ್ನು ಈತನಿಗೆ ಶವಕರ್ಮವನ್ನು ಮಾಡಲಿ ಬಿಡಲಿ, (ಇಂಥ ಉಪಾಸಕರು) ಅರ್ಚಿಯನ್ನೇ ಸೇರುವರು’- ಎಂದು ಉಪಕ್ರಮಿಸಿ ಆದಿತ್ಯನಿಂದ ಚಂದ್ರನನ್ನು, ಚಂದ್ರನಿಂದ ವಿದ್ಯುತ್ತನ್ನೂ (ಸೇರುವರು). ಅಲ್ಲಿ ಅಮಾನುಷಪುರುಷನು (ಬರು
-
ಉಪಾಸಕನಿಗೆ.
-
ಈ ಗತಿಯ ವಿಚಾರವನ್ನು ಮುಂದೆ ೪-೩-೧ ರಿಂದ ೬ ರವರೆಗಿನ ಸೂತ್ರಗಳಲ್ಲಿ ಮಾಡಿರುತ್ತದೆ.
೨೯೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ವನು) ; ಅವನು ಇವರನ್ನು ಬ್ರಹ್ಮವನ್ನು ಸೇರಿಸುವನು. ಇದೇ ದೇವಪಥವು, ಬ್ರಹ್ಮಪಥವು : ಇದರಿಂದ (ಬ್ರಹ್ಮವನ್ನು) ಸೇರುವವರು ಈ ಮಾನವ ಆವರ್ತವನ್ನು (ಮತ್ತೆ ಸೇರಿ) ಸುತ್ತುವದಿಲ್ಲ’ (ಛಾಂ. ೪-೧೫-೫) ಎಂದು ಅಕ್ಷಿಪುರುಷೋಪಾಸಕನಿಗೆ ಹೇಳಿರುವದು ಕಂಡುಬರುತ್ತದೆ. ಆದ್ದರಿಂದ ಇಲ್ಲಿ (ಹೇಳಿರುವ) ಬ್ರಹ್ಮಪಾಸಕನ ವಿಷಯವಾದ ಪ್ರಸಿದ್ಧವಾದ ಗತಿಯಿಂದ ಅಕ್ಷಿಸ್ಥಾನದಲ್ಲಿರುವ ಪುರುಷನು) ಬ್ರಹ್ಮವೇ ಎಂದು ನಿಶ್ಚಯವಾಗುತ್ತದೆ.
ಅನವಸ್ಥಿತೇರಸಂಭವಾಚ್ಚ ನೇತರಃ ||೧೭|| ೧೭. ನಿಲ್ಲದಿರುವದರಿಂದಲೂ ಹೊಂದುವದಿಲ್ಲವಾದ್ದರಿಂದಲೂ ಇನ್ನೊಬ್ಬನಲ್ಲ.
ಛಾಯಾತ್ಮಾದಿಗಳಿಗೆ ನಿಲುಗಡೆಯಿಲ್ಲ, ಗುಣಗಳು ಹೊಂದುವದೂ ಇಲ್ಲ
(ಭಾಷ್ಯ) ೧೮೪. ಯುನರುಕ್ತಮ್ - ಛಾಯಾತ್ಮಾ, ವಿಜ್ಞಾನಾತ್ಮಾ, ದೇವತಾತ್ಮಾ ವಾ ಸ್ಮಾತ್ ಅಕ್ಷಿಸ್ಥಾನಃ ಇತಿ | ಅಪ್ರೋಚ್ಯತೇ | ನ ಛಾಯಾತ್ಮಾದಿಃ ಇತರಃ ಇಹ ಗ್ರಹಣಮರ್ಹತಿ | ಕಸ್ಮಾತ್ ? ಅನವಸ್ಥಿತೇ ! ನ ತಾವತ್ ಛಾಯಾತ್ಮನಃ ಚಕ್ಷುಷಿ ನಿತ್ಯಮ್ ಅವಸ್ಥಾನಂ ಸಂಭವತಿ | ಯದೈವ ಹಿ ಕಶ್ಚಿತ್ ಪುರುಷಃ ಚಕ್ಷುರಾಸೀದತಿ ತದಾ ಚಕ್ಷುಷಿ ಪುರುಷಚ್ಚಾಯಾ ದೃಶ್ಯತೇ, ಅಪಗತೇ ತಸ್ಮಿನ್ ನ ದೃಶ್ಯತೇ ‘ಯ ಏಷೋಕ್ಷಿಣಿ ಪುರುಷಃ’ ಇತಿ ಚ ಶ್ರುತಿ: ಸಂವಿಧಾನಾತ್ ಸ್ವಚಕ್ಷುಷಿ ದೃಶ್ಯಮಾನಂ ಪುರುಷಮ್ ಉಪಾಸ್ಯನ ಉಪದಿಶತಿ | ನ ಚ ಉಪಾಸನಾಕಾಲೇ ಛಾಯಾಕರಂ ಕಂಚಿತ್ ಪುರುಷಂ ಚಕ್ಷುಸಮೀಪೇ ಸಂವಿಧಾಪ್ಯ ಉಪಾಸ್ತೇ ಇತಿ ಯುಕ್ತಂ ಕಲ್ಪಯಿತುಮ್ | “ಅಸ್ಮವ ಶರೀರಸ್ಯ ನಾಶಮನ್ವೇಷ ನಶ್ಯತಿ’ (ಛಾಂ. ೮-೯-೧) ಇತಿ ಶ್ರುತಿಃ ಛಾಯಾತ್ಮನೋSಪಿ ಅನವಸ್ಥಿತತ್ವಂ ದರ್ಶಯತಿ | ಅಸಂಭವಾಚ್ಚ ತಸ್ಮಿನ್ ಅಮೃತತ್ವಾದೀನಾಂ ಗುಣಾನಾಂ ನ ಛಾಯಾತ್ಮನಿ ಪ್ರತೀತಿಃ ||
- ಅಗ್ನಿವಿದ್ಯೆಗೂ ಬ್ರಹ್ಮದ ಒಂದೊಂದು ಗುಣವನ್ನು ಉಪಾಸನಮಾಡುವವರಿಗೂ ಬೇರೆಬೇರಯ ಫಲವನ್ನು ಹೇಳಿ ಕೊನೆಯಲ್ಲಿ ಅಕ್ಷಿಪುರುಷನ ವಿದ್ಯಗೆ ಈ ಗತಿಯನ್ನು ಹೇಳಿರುತ್ತದೆ. ಆದ್ದರಿಂದ ಬ್ರಹ್ಮವಿದ್ಯೆಯನ್ನೇ ಇಲ್ಲಿ ಹೇಳಿದೆ ಎಂದು ಗೊತ್ತಾಗುತ್ತದೆ.
೨೯೫
ಅಧಿ. ೪. ಸೂ. ೧೭] ವಿಜ್ಞಾನಾತ್ಮನೂ ಅಕ್ಷಿಪುರುಷನಲ್ಲ
(ಭಾಷ್ಮಾರ್ಥ) ಇನ್ನು ಅಕ್ಷಿಸ್ಥಾನ (ಪುರುಷ)ನು ಛಾಯಾತ್ಮನೋ, ವಿಜ್ಞಾನಾತ್ಮನೋ, ದೇವತಾ ತ್ಮನೋ ಆಗಿರಬಹುದು ಎಂದು (ಪೂರ್ವಪಕ್ಷದಲ್ಲಿ ) ಹೇಳಿತ್ತಷ್ಟ, ಇದಕ್ಕೆ ಹೇಳುತ್ತೇವೆ: ಛಾಯಾತ್ಮನೇ ಮುಂತಾದ ಇನ್ನೊಬ್ಬನನ್ನು ಇಲ್ಲಿ ತೆಗೆದುಕೊಳ್ಳಬಾರದು. ಏಕೆ ಎಂದರೆ, ನಿಲ್ಲದ ಇರುವದರಿಂದ, ಮೊದಲನೆಯದಾಗಿ ಛಾಯಾತ್ಮನು ಯಾವಾಗಲೂ ಕಣ್ಣಿನಲ್ಲಿ ನಿಂತಿರುವದು ಆಗುವಹಾಗಿಲ್ಲ. ಏಕೆಂದರೆ ಯಾವಾಗ ಯಾವನಾದರೊಬ್ಬ ಪುರುಷನು ಕಣ್ಣಿನ ಬಳಿ ಇರುತ್ತಾನೋ ಆಗ ಮಾತ್ರ ಕಣ್ಣಿನಲ್ಲಿ ಪುರುಷನ ನೆರಳು ಕಾಣಿಸುತ್ತದೆ; ಅವನು ಹೊರಟುಹೋದರೆ ಕಾಣಿಸುವದಿಲ್ಲ. ಕಣ್ಣಿನಲ್ಲಿ ಯಾವ ಈ ಪುರುಷನು ಕಾಣಿಸುತ್ತಾನೋ ಎಂದು (ಈ) ಶ್ರುತಿಯು ತನ್ನ ಕಣ್ಣಿನಲ್ಲಿ ಕಾಣುವ ಪುರುಷನು’ ಹತ್ತಿರದಲ್ಲಿರುವದರಿಂದ (ಅವನನ್ನೇ) ಉಪಾಸನೆ ಮಾಡಬೇಕೆಂದು ತಿಳಿಸುತ್ತದೆ (ಎಂಬುದು ಯುಕ್ತವು).? ಉಪಾಸನಾಕಾಲದಲ್ಲಿ ನರಳನ್ನುಂಟುಮಾಡುವ ಯಾವ ನಾದರೊಬ್ಬ ಪುರುಷನನ್ನು ಕಣ್ಣಿನ ಹತ್ತಿರ ಇಟ್ಟುಕೊಂಡು ಉಪಾಸನೆಮಾಡುತ್ತಾನೆ ಎಂದು ಕಲ್ಪಿಸುವದೂ ಯುಕ್ತವಾಗುವದಿಲ್ಲ. “ಇದೇ ಶರೀರವು ನಾಶವಾದದ್ದನ್ನು ಅನುಸರಿಸಿ ಇದು ನಾಶವಾಗುತ್ತದೆ’’ (ಛಾಂ. ೮-೯-೧) ಎಂಬ ಶ್ರುತಿಯು ಛಾಯಾತ್ಮನು (ಯಾವಾಗಲೂ) ನಿಲ್ಲುವದಿಲ್ಲ ಎಂದು ತಿಳಿಸುತ್ತದೆ. ಆ (ಛಾಯಾಪುರುಷ)ನಿಗೆ ಅಮೃತತ್ವವೇ ಮುಂತಾದ ಗುಣಗಳು ಹೊಂದುವದಿಲ್ಲವಾದ್ದರಿಂದಲೂ ಛಾಯಾತ್ಮನ ವಿಷಯದಲ್ಲಿ (ಅವನೇ ಅಕ್ಷಿಪುರುಷನೆಂಬ) ಅಭಿಪ್ರಾಯವು (ಉಂಟಾಗುವಹಾಗಿಲ್ಲ.
-
ಒಬ್ಬನಿದ್ದರೆ ಮಾತ್ರ ನಿಂತಿರುವ ಈ ನರಳನ್ನು ಯಾವಾಗಲೂ ಉಪಾಸನಮಾಡುವದಕ್ಕೆ ಆಗುವದಿಲ್ಲ ; ಉಪಾಸನೆಗೆ ವಿಚ್ಛತ್ತಿ ಬರುತ್ತದೆ. ಹಾಗಾಗಬಾರದು.
-
ಮತ್ತೊಬ್ಬರ ಕಣ್ಣಿನಲ್ಲಿ ಕಾಣುವ ನೆರಳನ್ನೇ ಉಪಾಸನೆಮಾಡಬಹುದಲ್ಲ ! - ಎಂಬ ಶಂಕೆಗೆ ಪರಿಹಾರವಿದು. ‘ಏಷಃ’ ಎಂಬ ಸರ್ವನಾಮವು ಹತ್ತಿರವಿರುವ ಪುರುಷನನ್ನೇ ಹೇಳುತ್ತದೆ. ‘ದೃಶ್ಯತೇ’ ಎಂದರೆ ಕಾಣಿಸುತ್ತದೆ ಎಂದು ಅರ್ಥ ; ತನಗೇ ಕಾಣಿಸಬೇಕೆಂಬ ನಿಯಮವೇನೂ
ಇಲ್ಲವೆಂದು ಭಾವ.
-
ಮತ್ತೊಬ್ಬರ ಕಣ್ಣಿನಲ್ಲಿ ಕಾಣುವ ನೆರಳನ್ನುಪಯೋಗಿಸುವದಕ್ಕೆ ಅವರು ಯಾವಾಗಲೂ ಹತ್ತಿರವಿರಬೇಕಾಗುವದು. ಇಲ್ಲದಿದ್ದರೆ ಉಪಾಸನೆಗೆ ವಿಚಿತ್ರಿ ಬರುತ್ತದೆ - ಎಂದು ಭಾವ.
-
‘ಅನವಸ್ಥಿತೇಃ’ ಎಂಬುದಕ್ಕೆ ಅನಿತ್ಯವಾಗಿರುವದರಿಂದ ಎಂಬ ಮತ್ತೊಂದು ಅರ್ಥವನ್ನು ಮಾಡಿದ.
-
ಅಮೃತತ್ವ, ಅಭಯ, ಆತ್ಮತ್ವ, ಬ್ರಹ್ಮತ್ವ, ಸಂಯಡ್ವಾಮತ್ನ, ವಾಮನೀತ್ವ, ಭಾಮನೀತ್ವ - ಎಂಬಿವು.
5
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ವಿಜ್ಞಾನಾತ್ಮನೂ ಅಕ್ಷಿಪುರುಷನಲ್ಲ
(ಭಾಷ್ಯ) ೧೮೫. ತಥಾ ವಿಜ್ಞಾನಾತ್ಮನೋSಪಿ ಸಾಧಾರಣೇ ಕೃಶರೀರೇನ್ಸಿಯಸಂಬನ್ನೇ ಸತಿ ಚಕ್ಷುಷ್ಟೇವ ಅವಸ್ಥಿತತ್ವಂ ವಕ್ತುಂ ನ ಶಕ್ಯಮ್ | ಬ್ರಹ್ಮಣಸ್ತು ವ್ಯಾಪಿನೋಪಿ ದೃಷ್ಟ ಉಪಲಭ್ಯರ್ಥಿ ಹೃದಯಾದಿಕೇಶವಿಶೇಷಸಂಬದ್ಧಃ ! ಸಮಾನಪ್ಪ ವಿಜ್ಞಾನಾತ್ಮvಪಿ ಅಮೃತತ್ವಾದೀನಾಂ ಗುಣಾನಾಮ್ ಅಸಂಬದ್ಧಃ | ಯದ್ಯಪಿ ವಿಜ್ಞಾನಾತ್ಮಾ ಪರಮಾತ್ಮನೋನನ್ಯ ಏವ, ತಥಾಪಿ ಅವಿದ್ಯಾಕಾಮಕರ್ಮಕೃತಂ ತಸ್ಮಿನ್ ಮರ್ತ್ಯತ್ವಮ್ ಅಧ್ಯಾರೋಪಿತಂ ಭಯಂ ಚ ಇತಿ ಅಮೃತತ್ವಾಭಯ ನೋಪಪತೇ | ಸಂಯಲ್ವಾಮಾದಯಶ್ಚ ಏತಸ್ಮಿನ್ ಅನೈಶ್ವರ್ಯಾತ್ ಅನುಪಪನ್ನಾ ಏವ 11
(ಭಾಷ್ಯಾರ್ಥ) ಇದರಂತೆ ವಿಜ್ಞಾನಾತ್ಮನಿಗೂ ಎಲ್ಲಾ ಶರೀರೇಂದ್ರಿಯಗಳೊಡನೆ ಸಂಬಂಧ (ವಿರುವದು) ಸಮಾನವಾಗಿರುವಲ್ಲಿ ಕಣ್ಣಿನಲ್ಲಿಯೇ ಇರುತ್ತಾನೆಂದು ಹೇಳುವದಕ್ಕಾಗ ಲಾರದು.’ ಬ್ರಹ್ಮವು (ಸರ್ವ)ವ್ಯಾಪಿಯಾಗಿದ್ದರೂ ಉಪಾಸನೆಗಾಗಿ ಹೃದಯವೇ ಮುಂತಾದ ಗೊತ್ತಾದ ಸ್ಥಳದ ಸಂಬಂಧವಿರಬಹುದೆಂದು ಶ್ರುತಿಯಲ್ಲಿ) ಕಂಡಿರುತ್ತದೆ. ಅಮೃತತ್ವವೇ ಮುಂತಾದ (ಗುಣ)ಗಳ ಸಂಬಂಧವು ಇಲ್ಲವೆಂಬುದು ವಿಜ್ಞಾನಾತ್ಮ ನಿಗೂ ಸಮಾನವಾಗಿರುತ್ತದೆ. (ಹೇಗೆಂದರೆ) ವಿಜ್ಞಾನಾತ್ಮನು ಪರಮಾತ್ಮನಿಗಿಂತ ಬೇರೆ ಯಲ್ಲವೇ ಅಲ್ಲವೆಂಬುದೇನೂ (ನಿಜ) ; ಆದರೂ ಅವನಲ್ಲಿ ಅವಿದ್ಯಾಕಾಮಕರ್ಮ ಗಳಿಂದಾಗುವ ಮರ್ತ್ಯತ್ವವೂ ಭಯವೂ ಅಧ್ಯಾರೋಪಿತವಾಗಿರುತ್ತವೆಯಾದ್ದರಿಂದ
-
ಇದು ‘ಅನವಸ್ಥಿತೇ’ ಎಂಬ ಸೂತ್ರಭಾಗದ ಅಭಿಪ್ರಾಯ. ಬಲಗಣ್ಣಿನಲ್ಲಿ ಜೀವನಿರುತ್ತಾನೆಂದು ಶ್ರುತಿಯಲ್ಲಿ ಹೇಳಿರುವದು ಉಪಲಕ್ಷಣಕ್ಕಾಗಿ, ಕಣ್ಣಿನಲ್ಲಿ ಮಾತ್ರವೇ ಇರುವನೆಂದು ಅದರ ಅರ್ಥವಲ್ಲ.
-
‘ಅಸಂಭವಾಚ್ಚ’ ಎಂಬ ಸೂತ್ರಭಾಗದ ಅಭಿಪ್ರಾಯವಿದು. ಆಚಾರ್ಯರು ಇಲ್ಲಿ “ಅಸಂಬದ್ಧಃ’ ಎಂಬುದರ ಬದಲು ‘ಅಸಂಭವಃ’ ಎಂದೇ ಬರದಿದ್ದರೂ ಬರದಿರಬಹುದಂದು ಊಹಿಸುವದಕ್ಕಡೆಯಿದೆ.
-
ಜೀವನೂ ಪರಮಾತ್ಮನೂ ಒಂದೇ ಆಗಿರುವಲ್ಲಿ ಜೀವನಿಗೆ ಪರಮಾತ್ಮನ ಧರ್ಮಗಳು ಏಕ ಹೊಂದುವದಿಲ್ಲ ? ಎಂಬ ಶಂಕೆಯನ್ನು ತೆಗೆದು ಇಲ್ಲಿ ಪರಿಹಾರವನ್ನು ಹೇಳಿದೆ. ಜೀವನಿಗಿರುವ ಸಂಸಾರಭೋಗವು ಪರಮಾತ್ಮನಿಗೇಕಿಲ್ಲ ?- ಎಂಬ ಶಂಕೆಗೆ ಭಾ. ಭಾ. ೧೬೨ ರಲ್ಲಿ ಕೊಟ್ಟಿರುವ ಪರಿಹಾರವನ್ನು ನೋಡಿ.
೨೯೭
ಅಧಿ. ೪. ಸೂ. ೧೭] ಆದಿತ್ಯನಿಗೆ ಆತ್ಮತ್ಯಾದಿಗಳು ಹೊಂದುವದಿಲ್ಲ
ಅಮೃತತ್ವವೂ ಅಭಯತ್ವವೂ ಹೊಂದುವದಿಲ್ಲ. ಈಶ್ವರತ್ವವಿಲ್ಲದ್ದರಿಂದ ಸಂಯ ದ್ಯಾಮತ್ವವೇ ಮುಂತಾದವುಗಳೂ ಇವನಿಗೆ ಹೊಂದುವದೇ ಇಲ್ಲ.
ಆದಿತ್ಯನಿಗೆ ಆತ್ಮತ್ಯಾದಿಗಳು ಹೊಂದುವದಿಲ್ಲ
(ಭಾಷ್ಯ) ೧೮೬.ದೇವತಾತ್ಮನನ್ನು ‘ರಶ್ಮಿಭಿರೇಸ್ಮಿ ನ್ ಪ್ರತಿಷ್ಠಿತಃ’ (ಬೃ. ೫-೫-೨) ಇತಿ ಶ್ರುತೇರ್ಯದಪಿ ಚಕ್ಷುಷಿ ಅವಸ್ಥಾನಂ ಸ್ಯಾತ್, ತಥಾಪಿ ಆತ್ಮತ್ವಂ ತಾವತ್ ನ ಸಂಭವತಿ 1 ಪರಾಗ್ಯೂಪತ್ವಾತ್ | ಅಮೃತತ್ವಾದಯೋSಪಿ ನ ಸಂಭವನ್ತಿ | ಉತ್ಪತ್ತಿ ಪ್ರಲಯಶ್ರವಣಾತ್ | ಅಮರತ್ವಮಪಿ ದೇವಾನಾಂ ಚಿರಕಾಲಾವಸ್ಥಾನಾಪೇಕ್ಷಮ್ | ಐಶ್ವರ್ಯಮಪಿ ಪರಮೇಶ್ವರಾಯತ್ತಮ್, ನ ಸ್ವಾಭಾವಿಕಮ್ | ಭೀಷಾಸ್ಮಾದ್ವಾತಃ ಪವತೇ | ಭೀಷೋದೇತಿ ಸೂರ್ಯಃ | ಭೀಷಾಸ್ಮಾದಗ್ನಿಶ್ವೇಶ್ಚ | ಮೃತ್ಯುರ್ಧಾವತಿ ಪಞ್ಚಮಃ’ (ತೈ. ೨-೮) ಇತಿ ಮyವರ್ಣಾತ್ ||
(ಭಾಷ್ಯಾರ್ಥ) ದೇವತಾತ್ಮನಿಗಾದರೋ ‘‘ಈತನು ಈ (ಚಕ್ಷುಸ್ಸಿನಲ್ಲಿ ) ರಶ್ಮಿಗಳಿಂದ ನಿಂತಿರು ತಾನೆ” (ಬೃ. ೫-೫-೨) ಎಂಬ ಶ್ರುತಿಯ (ಪ್ರಮಾಣ) ದಿಂದ ಕಣ್ಣಿನಲ್ಲಿರುವಿಕೆ ಯೇನೋ ಆಗಬಹುದು ; ಆದರೂ ಮೊದಲನೆಯದಾಗಿ ಆತ್ಮತ್ವವು ಹೊಂದುವದಿಲ್ಲ, ಏಕೆಂದರೆ (ಆದಿತ್ಯನು) ಹೊರಗಿರುವ ಸ್ವರೂಪದವನಾಗಿರುತ್ತಾನೆ. ಅಮೃತತ್ವವೇ ಮುಂತಾದ (ಗುಣ)ಗಳೂ ಹೊಂದುವದಿಲ್ಲ ; ಏಕೆಂದರೆ (ಅವನಿಗೆ) ಉತ್ಪತ್ತಿ ಪ್ರಲಯ ಗಳನ್ನು ಶ್ರುತಿಯಲ್ಲಿ ಹೇಳಿದೆ. ದೇವತೆಗಳು ಅಮರರು ಎಂಬುದೂ ಬಹುಕಾಲದವರೆಗೆ ಇರುವರೆಂಬುದರ ಅಪೇಕ್ಷೆಯಿಂದ ಹೇಳಿದ್ದು. ಅವರಿಗಿರುವ ಐಶ್ವರ್ಯವೂ
- ಎಲ್ಲವನ್ನೂ ಆಳುವ ಸ್ವಾತಂತ್ರ್ಯವಿಲ್ಲದ್ದರಿಂದ,
2.ಜೀವದೇವತೆಗಳನ್ನು ಹಿಂದ೧-೧-೨೦, ೨೧ರಲ್ಲಿಯೇ ನಿರಾಕರಿಸಿತ್ತು. ಈಗ ಅನವಸ್ಥಿತಿ ಮತ್ತು ಬ್ರಹ್ಮಧರ್ಮಾಸಂಭವ - ಎಂಬಿವುಗಳನ್ನು ಸ್ಪಷ್ಟಪಡಿಸುವದಕ್ಕಾಗಿ ಮತ್ತೆ ಆ ಪೂರ್ವಪಕ್ಷವನ್ನು ಎತ್ತಿದೆ. ಹಾಗಿಲ್ಲದಿದ್ದರೆ ‘ದೃಶ್ಯತೇ’ ಎಂಬ ಪೂರ್ವಪಕ್ಷದ ಲಿಂಗವು ಅವರಿಗೂ ಮುಖ್ಯವೃತ್ತಿಯಲ್ಲಿಲ್ಲವಾಗಿ ಅವರನ್ನು ತಗೆದುಕೊಳ್ಳುವ ಕಾರಣವೇ ಇಲ್ಲ.
-
ಛಾಂ. ೩-೧೯-೩ರಲ್ಲಿ ಸೂರ್ಯನಿಗೆ ಉತ್ಪತ್ತಿಯನ್ನು ಹೇಳಿದ ; ಛಾಂ. ೪-೩-೧ರಲ್ಲಿ ಸೂರ್ಯನಿಗೆ ವಾಯುವಿನಲ್ಲಿ ಪ್ರಲಯವನ್ನು ಹೇಳಿದೆ. ಇದರಂತ ಬೇರೆ ಶ್ರುತಿಗಳನ್ನೂ ಉದಾಹರಿಸಬಹುದು.
-
ಪ್ರಲಯವಾಗುವವರೆಗೆ ಇರುವ ಚಿರಕಾಲಸ್ಥಿತಿಗೆ ಅಮೃತತ್ವವೆಂದು ಹೆಸರು ಎಂದು
೨೯೮
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಪರಮೇಶ್ವರನ ಅಧೀನವಾಗಿರುವದೇ ಹೊರತು ಸ್ವಾಭಾವಿಕವಲ್ಲ ; ಏಕೆಂದರೆ ಈತನ ಭಯದಿಂದ ವಾಯುವು ಬೀಸುತ್ತಾನೆ ; ಭಯದಿಂದ ಸೂರ್ಯನು ಉದಯಿಸುತ್ತಾನೆ ; ಈತನ ಭಯದಿಂದ ಅಗ್ನಿಯೂ ಇಂದ್ರನೂ (ಕೆಲಸಮಾಡುತ್ತಾರೆ), ಐದನೆಯವ ನಾದ ಮೃತ್ಯುವು ಓಡುತ್ತಾನೆ’ (ತೈ. ೨-೮) ಎಂಬ ಮಂತ್ರವರ್ಣದಿಂದ (ಹೀಗೆಂದು ನಿಶ್ಚಯವಾಗುತ್ತದೆ).
ದೃಶ್ಯತೇ ಎಂಬ ಶ್ರುತಿಗೆ ಗತಿ
- (ಭಾಷ್ಯ) ೧೮೭.ತಸ್ಮಾತ್ ಪರಮೇಶ್ವರ ವಿವಾಯಮ್ ಅಕ್ಷಿಸ್ಥಾನಃ ಪ್ರತ್ಯೇತವಃ ಅಸ್ಮಿಂಶ್ಚ ಪಕ್ಷೇ ‘ದೃಶ್ಯತೇ’ ಇತಿ ಪ್ರಸಿದ್ಧವದುಪಾದಾನಂ ಶಾಸ್ವಾದ್ಯಪೇಕ್ಷ ವಿದ್ವದ್ವಿಷಯಂ ಪ್ರರೋಚನಾರ್ಥಮ್ ಇತಿ ವ್ಯಾಖ್ಯ ಮ್ ||
(ಭಾಷ್ಯಾರ್ಥ) | ಆದ್ದರಿಂದ ಈ ಅಕ್ಷಿಸ್ಥಾನದಲ್ಲಿರುವ (ಪುರುಷನು) ಪರಮೇಶ್ವರನೇ ಎಂದು ತಿಳಿಯಬೇಕು. ಈ ಪಕ್ಷದಲ್ಲಿ ‘ದೃಶ್ಯತೇ” (ಕಾಣಿಸುತ್ತಾನೆ ಎಂದು ಪ್ರಸಿದ್ಧವಾಗಿರು ವಂತೆ (ತಿಳಿಸುವ ಮಾತನ್ನು) ತೆಗೆದುಕೊಂಡಿರುವದನ್ನು ಶಾಸ್ತ್ರಾದ್ಯಪೇಕ್ಷವಾಗಿರುವ ಜ್ಞಾನಿಗಳ ವಿಷಯವು, (ಈ ವಿದ್ಯೆಯಲ್ಲಿ ) ಅಭಿರುಚಿಯುಂಟಾಗಲೆಂದು (ಹೇಳಿದ್ದು ) ಎಂದು ವಿವರಿಸಬೇಕು.
೫. ಅಂತರ್ಯಾಮ್ಯಧಿಕರಣ (ಸೂ. ೧೮-೨೦)
(ಬೃ. ೩-೭-೩ ರಿಂದ ೨೩ ರವರೆಗೆ ಹೇಳಿರುವ ಅಂತರ್ಯಾಮಿಯು ಬ್ರಹ್ಮವು)
ಅನ್ವರ್ಯಾಮ್ಯಧಿವಾದಿಷು ತದ್ಧರ್ಮವ್ಯಪದೇಶಾತ್ ||೧೮||
೧೮. ಅಧಿದೈವಾದಿಗಳಲ್ಲಿರುವ ಅಂತರ್ಯಾಮಿಯು (ಬ್ರಹ್ಮವು) ; ಏಕೆಂದರೆ ಅದರ ಧರ್ಮಗಳನ್ನು ಹೇಳಿದೆ. ಪುರಾಣವಚನವಿದೆ. ಛಾಂ. ೫-೯-೨ರ ಭಾಷ್ಯವನ್ನು ನೋಡಿ. ಆ ದೃಷ್ಟಿಯಿಂದ ದೇವತೆಯ ಸ್ಥಾನವೂ ಗೌಣವಾಗಿ ಅಮೃತವೆನಿಸಬಹುದು.
- ಶಾಸ್ತ್ರಾಚಾರ್ಯರ ಉಪದೇಶವನ್ನು ಪಡೆದ ಬ್ರಹ್ಮಚರ್ಯಾದಿಸಾಧನಸಂಪನ್ನರಾದ ವಿವೇಕಿಗಳಿಗೆ ಈ ಪುರುಷನು ಕಾಣಿಸುತ್ತಾನೆ ಎಂದರ್ಥ. ಪುರುಷನು ಜ್ಞಾನಿಗಳಿಗೆ ಕಾಣಿಸುವನೆಂದು ಹೊಗಳಿರುವದು ಉಪಾಸನೆಯಲ್ಲಿ ಆದರವನ್ನುಂಟುಮಾಡುವದಕ್ಕೆ ಎಂದು ಅಭಿಪ್ರಾಯ.
ಅಧಿ. ೫. ಸೂ. ೧೮]
ವಿಷಯವೂ ಸಂಶಯವೂ
ವಿಷಯವೂ ಸಂಶಯವೂ
(ಭಾಷ್ಯ) ೧೮೮. ‘ಯ ಇಮಂ ಚ ಲೋಕಂ ಪರಂ ಚ ಲೋಕಂ ಸರ್ವಾಣಿ ಚ ಭೂತಾನಿ ಯೋವ್ರರೋ ಯಮಯತಿ’’ (ಬೃ. ೩-೭-೧) ಇತ್ಯುಪಕ್ರಮ್ಮ, ಶೂಯತೇ “ಯಃ ಪೃಥಿವ್ಯಾಂ ತಿಷ್ಠನ್ ಪೃಥಿವ್ಯಾ ಅನ್ನರೋ ಯಂ ಪೃಥಿವೀ ನ ವೇದ ಯಸ್ಯ ಪೃಥಿವೀ
ಶರೀರಂ ಯಃ ಪೃಥಿವೀಮನ್ತರೋ ಯಮಯತೇಷ ತ ಆತ್ಮಾನ್ತರ್ಯಾಮೃಮೃತಃ" (ಬೃ. ೩-೭-೩) ಇತ್ಯಾದಿ | ಅತ್ರ ಅಧಿದೈವತಮ್, ಅಧಿಲೋಕಮ್, ಅಧಿವೇದಮ್, ಅಧಿಯಜ್ಞಮ್, ಅಧಿಭೂತಮ್, ಅಧ್ಯಾತ್ಮಂ ಚ ಕಶ್ಚಿತ್ ಅರವಸ್ಥಿತೋ ಯಮಯಿತಾ ಅನ್ವರ್ಯಾ ಮೀ ಇತಿ ಶೂಯತೇ | ಸ ಕಿಮ್ ಅಧಿದೈವಾಭಿಮಾನೀ ದೇವತಾತ್ಮಾ ಕಶ್ಚಿತ್, ಕಿಂ ವಾ ಪ್ರಾಪ್ತಾಣಿಮಾದ್ಮಶ್ವರ್ಯಃ ಕಶ್ಚಿದ್ ಯೋಗೀ, ಕಿಂ ವಾ ಪರಮಾತ್ಮಾ, ಕಿಂ ವಾ ಅರ್ಥಾನ್ನರಂ ಕಿಂಚಿತ್ ? ಇತಿ ಅಪೂರ್ವಸಂಜ್ಞಾದರ್ಶನಾತ್ ಸಂಶಯಃ ||
(ಭಾಷ್ಯಾರ್ಥ) “ಯಾವನು ಈ ಲೋಕವನ್ನೂ ಪರಲೋಕವನ್ನೂ ಎಲ್ಲಾ ಭೂತಗಳನ್ನೂ ಒಳಗಿದ್ದುಕೊಂಡು ಕಟ್ಟಿನಲ್ಲಿಟ್ಟಿರುತ್ತಾನೋ’’ (ಬೃ. ೩-೭-೧) ಎಂದು ಪ್ರಾರಂಭಿಸಿ ಯಾವನು ಪೃಥಿವಿಯಲ್ಲಿದ್ದುಕೊಂಡು ಪೃಥಿವಿಗೂ ಒಳಗಿರುವನೋ, ಯಾವನನ್ನು ಪೃಥಿವಿಯು ಅರಿಯದೋ, ಯಾವನಿಗೆ ತೃಥಿವಿಯು ಶರೀರವೋ, ಯಾವನು ಪೃಥಿವಿಯನ್ನು ಒಳಗಿದ್ದುಕೊಂಡು ಕಟ್ಟಿನಲ್ಲಿಟ್ಟುಕೊಂಡಿರುವನೋ, ಇವನೇ ನಿನ್ನ ಆತ್ಮನು, ಅಂತರ್ಯಾಮಿಯು, ಅಮೃತನು’ (ಬೃ. ೩-೭-೩) ಎಂದು ಮುಂತಾಗಿ
ಅಧಿಭೂತ, ಅಧ್ಯಾತ್ಮ - (ಇವುಗಳಲ್ಲಿ) ಒಳಗೆ ಇದ್ದುಕೊಂಡು (ಎಲ್ಲವನ್ನೂ)
- ‘ಯಃ ಪೃಥಿವ್ಯಾಮ್’ (ಬೃ. ೩-೭-೩) ಎಂದು ಮುಂತಾಗಿ ‘ಯಃ ಸ್ತನಯಿತ್ತಾ’’ (?) ಎಂಬವರೆಗೆ ಅಧಿದೈವತವು; ‘‘ಯಃ ಸರ್ವಷು ಲೋಕೇಷು’ (?) ಎಂಬುದು ಅಧಿಲೋಕವು ; “ಯಃ ಸರ್ವಷು ವೇದೇಷು’ ಎಂಬುದು ಅಧಿವೇದವು ; “ಯಃ ಸರ್ವಷು ಯಮು” (?) ಎಂಬುದು ಅಧಿಯಜ್ಞವು ; “ಯಃ ಸರ್ವಷು ಭೂತೇಷು’ (ಬೃ. ೩-೭-೧೫) ಎಂಬುದು ಅಧಿಭೂತವು ; “ಯಃ ಪ್ರಾಣೇ ತಿಷ್ಠನ್’ (ಬೃ, ೩-೭-೧೬) ಎಂದು ಮುಂತಾಗಿ ‘ಯ ಆತ್ಮನಿ ತಿಷ್ಠನ್’ (?) ಎಂಬವರೆಗಿನದು ಅಧ್ಯಾತ್ಮವು. ಇಲ್ಲಿ (?) ಹೀಗೆ ಸಂಶಯಚಿಹ್ನೆ ಹಾಕಿರುವದು ಮಾಧ್ಯಂದಿನಪಾಠವು. ನಾವು ಹಾಕಿರುವ ಸಂಖ್ಯೆ ಮಾತ್ರ ಕಾಣ್ಯಪಾಠದಂತ, ಸೂತ್ರದಲ್ಲಿ ಮಾಧ್ಯಂದಿನ ಪಾಠವನ್ನೇ ಉದಾಹರಿಸಿದ ಎಂಬುದು ಸ್ಪಷ್ಟ.
೩o0
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
ಕಟ್ಟಿನಲ್ಲಿಟ್ಟುಕೊಂಡಿರುವ ಯಾವನೋ ಒಬ್ಬ ಅಂತರ್ಯಾಮಿಯು (ಇದಾನೆಂದು) ಶ್ರುತಿಯಲ್ಲಿರುತ್ತದೆ. ಅವನು ಅಧಿದೈವವೇ ಮುಂತಾದವುಗಳ ಅಭಿಮಾನಿಯಾದ ಯಾವ ನಾದರೊಬ್ಬ ದೇವತಾತ್ಮನೆ, ಅಥವಾ ಅಣಿಮಾದ್ಮಶ್ವರ್ಯಗಳನ್ನು ಹೊಂದಿರುವ
ಯಾವನಾದರೊಬ್ಬ ಯೋಗಿಯೆ, ಅಥವಾ ಪರಮಾತ್ಮನ, ಅಥವಾ ಮತ್ತೆ ಯಾವದೋ ಒಂದು ಬೇರೆಯ ಪದಾರ್ಥವೆ ? ಎಂದು - (ಅಂತರ್ಯಾಮಿ ಎಂಬ) ಅಪೂರ್ವವಾದ ಹೆಸರು (ಇಲ್ಲಿ ) ಕಾಣುತ್ತಿರುವದರಿಂದ ಸಂಶಯವು.
ಪೂರ್ವಪಕ್ಷ : ಅಂತರ್ಯಾಮಿಯು ಒಬ್ಬ ದೇವತೆ,
ಅಥವಾ ಯೋಗಿ
(ಭಾಷ್ಯ) ೧೮೯. ಕಿಂತಾವನ್ನಃ ಪ್ರತಿಭಾತಿ ? ಸಂಜ್ಞಾಯಾಅಪ್ರಸಿದ್ಧತ್ವಾತ್,ಸಂಜ್ನೋಪಿ ಅಪ್ರಸಿದ್ಧೇನ ಅರ್ಥಾನ್ನರೇಣ ಕೇನಚಿತ್ ಭವಿತವ್ಯಮ್ ಇತಿ | ಅಥವಾ ನಾನಿರೂಪಿತರೂಪಮ್ ಅರ್ಥಾವರಂ ಶಕ್ಯಮಸ್ತಿ ಅಭ್ಯುಪಗಸ್ತುಮ್ | ಅನ್ವರ್ಯಾಮಿ ಶಬ್ದಶ್ಚ ಅನ್ವರ್ಯಮನಯೋಗೇನ ಪ್ರವೃತ್ತ, ನಾತ್ಯನಮ್ ಅಪ್ರಸಿದ್ಧಃ | ತಸ್ಮಾತ್ ಪೃಥಿವ್ಯಾದ್ಯಭಿಮಾನೀ ಕಶ್ಚಿದ್ ದೇವೋರ್ಯಾಮೀ ಸ್ಮಾತ್ | ತಥಾ ಚ ಶೂಯತೇ ‘ಪೃಥಿವಯಸ್ಮಾಯತನಮಗ್ನಿರ್ಲೋಕೋ ಮನೋಜ್ಯೋತಿಃ’ (ಬೃ. ೩-೯-೧೦) ಇತ್ಯಾದಿ ಸ ಚ ಕಾರ್ಯಕರಣವತ್ಮಾತ್ ಪೃಥಿವ್ಯಾದೀನ್ ಅನ್ನಸ್ತಿಷ್ಠನ್ ಯಮಯತೀತಿ ಯುಕ್ತಂ ದೇವತಾತ್ಮನೋ ಯಮಯಿತೃತ್ವಮ್ | ಯೋಗಿನೋ ವಾ ಕಸ್ಯಚಿತ್ ಸಿದ್ಧಸ್ಯ ಸರ್ವಾನುಪ್ರವೇಶೇನ ಯಮಯಿತೃತ್ವಂ ಸ್ಯಾತ್ | ನ ತು ಪರಮಾತ್ಮಾ ಪ್ರತೀಯೇತ | ಅಕಾರ್ಯಕರಣತ್ವಾತ್ ಇತಿ ||
(ಭಾಷ್ಯಾರ್ಥ) | ಮೊದಲು ನಮಗೆ ಯಾವ (ಪೂರ್ವಪಕ್ಷವು ತೋರುತ್ತದೆ ? (ಅಂತರ್ಯಾಮಿ ಎಂಬ) ಹೆಸರು ಅಪ್ರಸಿದ್ಧವಾದದ್ದಾದ್ದರಿಂದ (ಈ) ಹೆಸರಿನ (ವಸ್ತುವೂ) ಅಪ್ರಸಿದ್ಧ ವಾದ (ಇವೆಲ್ಲಕ್ಕಿಂತ) ಬೇರೆಯಾದ ಯಾವದೋ ಒಂದು ಪದಾರ್ಥವಾಗಿರಬೇಕು ಎಂದು ತೋರುತ್ತದೆ. ಅಥವಾ (ಇಂಥದ್ದೆಂದು) ಗೊತ್ತುಮಾಡದೆ ಇರುವ ಸ್ವರೂಪದ ಮತ್ತೊಂದು ಪದಾರ್ಥವು ಇದೆ ಎಂದು ಒಪ್ಪುವದಾಗಲಾರದು. ಅಂತರ್ಯಾಮಿ’ ಎಂಬ
ಕಾರಣವಿಲ್ಲದ ಕಲ್ಪಿಸುವದು ಯುಕ್ತವೂ ಅಲ್ಲ.
ಅಧಿ. ೫. ಸೂ. ೧೮] ಪರಮಾತ್ಮನ ಧರ್ಮಗಳನ್ನು ಇಲ್ಲಿ ಹೇಳಿದೆ
೩೦೧
ಶಬ್ದವುಕೂಡ ಒಳಗಿದ್ದು ಕಟ್ಟುಮಾಡುವದೆಂಬ ಯೋಗದಿಂದ ಪ್ರವೃತ್ತವಾಗಿರುವದ ರಿಂದ ಅತ್ಯಂತವಾಗಿ ಅಪ್ರಸಿದ್ಧವಲ್ಲ. ಆದ್ದರಿಂದ ಪೃಥಿವಿಯೇ ಮುಂತಾದದ್ದಕ್ಕೆ ಅಭಿಮಾನಿಯಾಗಿರುವ ಯಾವದೋ ಒಂದು ದೇವತೆಯು ಅಂತರ್ಯಾಮಿಯಾಗಿರ ಬೇಕು. ಹಾಗೆಂದು “ಯಾವನಿಗೆ ಪೃಥಿವಿಯೇ ಆಶ್ರಯವೋ, ಅಗ್ನಿಯು ಲೋಕವೋ, ಮನಸ್ಸು ಜ್ಯೋತಿಯೋ…..” (ಬೃ. ೩-೯-೧೦) ಎಂದು ಮುಂತಾಗಿ ಶ್ರುತಿಯೂ ಹೇಳುತ್ತದೆ. ಆ (ದೇವತಾತ್ಮನು) ಕಾರ್ಯಕರಣಗಳುಳ್ಳವನಾಗಿರುವದರಿಂದ ಪೃಥಿ ವ್ಯಾದಿಗಳನ್ನು ಒಳಗಿದ್ದುಕೊಂಡು ಕಟ್ಟುಮಾಡುತ್ತಾನೆ ಎಂಬ (ಕಾರಣದಿಂದ ದೇವತಾತ್ಮನಿಗೆ ಯಮನಮಾಡುವದೆಂಬುದು ಹೊಂದಬಹುದು. ಅಥವಾ ಯಾವನೋ ಒಬ್ಬ ಸಿದ್ಧನಾದ ಯೋಗಿಯು ಎಲ್ಲರನ್ನೂ ಒಳಹೊಕ್ಕಿರುವದರಿಂದ (ಅವನಿಗೆ) ಯಮನಮಾಡುವದೆಂಬುದು ಹೊಂದಬಹುದು. ಆದರೆ ಪರಮಾತ್ಮನನ್ನು ಮಾತ್ರ (ಇಲ್ಲಿ ಅಂತರ್ಯಾಮಿ ಎಂದು) ತಿಳಿಯುವದಕ್ಕಾಗಲಾರದು ; ಏಕೆಂದರೆ (ಅವನಿಗೆ) ಕಾರ್ಯಕರಣಗಳಿರುವದಿಲ್ಲ.
ಪರಮಾತ್ಮನ ಧರ್ಮಗಳನ್ನು ಹೇಳಿರುವದರಿಂದ
ಅವನೇ ಅಂತರ್ಯಾಮಿ
(ಭಾಷ್ಯ) ೧೯೦. ಏವಂ ಪ್ರಾಪ್ತ ಇದಮುಚ್ಯತೇ - ಯೋಗ್ತರ್ಯಾಮೀ ಅಧಿದೈವಾದಿಷು ಶ್ರಯತೇ ಸ ಪರಮಾತ್ಮನ ಸ್ಮಾತ್ ನಾನ್ಯಃ ಇತಿ | ಕುತಃ ? ತದ್ಧರ್ಮವ್ಯಪದೇಶಾತ್ | ತಸ್ಯ ಹಿ ಪರಮಾತ್ಮನೋ ಧರ್ಮಾ ಇಹ ನಿರ್ದಿಶ್ಯಮಾನಾಃ ದೃಶ್ಯ | ಪೃಥಿವ್ಯಾದಿ ತಾವತ್ ಅಧಿದೈವಾದಿಭೇದಭಿನ್ನಂ ಸಮಸ್ತಂ ವಿಕಾರಜಾತಮ್ ಅನ್ನಸ್ತಿಷ್ಟನ್
-
‘ಅನ್ನರ್ಯಮಯತಿ ಇತಿ ಅನ್ವರ್ಯಾಮೀ’ ಎಂಬ ಅವಯವಾರ್ಥವಿರುವದರಿಂದ ಇದು ಯೌಗಿಕಶಬ್ದವು. ಹೊಸದಾದ ರೂಢಶಬ್ದವಲ್ಲ.
-
ಪೃಥಿವಿಯಂಬ ಶರೀರವುಳ್ಳ, ಅಗ್ನಿಯಂಬ ಕಣ್ಣುಳ್ಳ, ಮನಸ್ಸಿನಿಂದ ಸಂಕಲ್ಪ ಮಾಡುವ ದೇವನಿರುವನಲ್ಲ (ಅವನನ್ನು ತಿಳಿದುಕೊಳ್ಳಬೇಕು) ಎಂದು ಶ್ರುತಿಯ ಅರ್ಥ.
-
ಯೋಗಿಯು ತನ್ನ ಕರಣಗಳ ಮೂಲಕ ಎಲ್ಲರ ಶರೀರದಲ್ಲಿಯೂ ವ್ಯಾಪಾರ ಮಾಡುವ, ಸಿದ್ಧಿಯನ್ನು ಹೊಂದಿರುತ್ತಾನೆಂದು ಕಲ್ಪಿಸುವದಕ್ಕೆ ಬರುತ್ತದೆ.
-
ಶರೀರಿಯು ಶರೀರವನ್ನೂ ಕರಣಗಳ ಮೂಲಕ ಮತ್ತೊಂದು ವಸ್ತುವನ್ನೂ ನಿಯಮದಲ್ಲಿಟ್ಟುಕೊಳ್ಳಬಹುದು. ಯಾವ ಶರೀರವೂ ಕರಣವೂ ಇಲ್ಲದ ಆತ್ಮನು ಹೇಗೆ ತಾನ
ಯಮನವೆಂಬ ಕ್ರಿಯೆಯನ್ನು ಮಾಡಿಯಾನು ? - ಎಂದು ಭಾವ.೩೦೨
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨. ಯಮಯತಿ ಇತಿ ಪರಮಾತ್ಮನೋ ಯಮಯಿತೃತ್ವಂ ಧರ್ಮ: ಉಪಪದ್ಯತೇ | ಸರ್ವವಿಕಾರಕಾರಣಕ್ಕೇ ಸತಿ ಸರ್ವಶಕ್ಕುಪಪತ್ತೇ | ಏಷ ತ ಆತ್ಮಾನ್ತರ್ಯಾಮ್ಮ ಮೃತಃ’ ಇತಿ ಚಾತ್ಮಾಮೃತ ಮುಖ್ಯ ಪರಮಾತ್ಮನ ಉಪಪತೇ | “ಯಂ ಪೃಥಿವೀ ನ ವೇದ” ಇತಿ ಚ ಪೃಥಿವೀದೇವತಾಯಾ ಅವಿಷ್ಟೇಯಮ್ ಅನ್ತರ್ಯಾಮಿಣಂ ಬ್ರುವನ್ ದೇವತಾತ್ಮನೋನ್ಯಮ್ ಅನ್ತರ್ಯಾಮಿಣಂ ದರ್ಶಯತಿ | ಪೃಥಿವೀದೇವತಾ ಹಿ ‘ಅಹಮಸ್ಮಿ ಪೃಥಿವೀ’, ಇತಿ ಆತ್ಮಾನಂ ವಿಜಾನೀಯಾತ್ | ತಥಾ ‘ಅದೃಷ್ಟ’, “ಅಶ್ರುತಃ’ (ಬೃ.೩-೭-೨೩) ಇತ್ಯಾದಿ ವ್ಯಪದೇಶಃ ರೂಪಾದಿವಿಹೀನತ್ವಾತ್
ಪರಮಾತ್ಮನ ಉಪಪದ್ಯತೇ ಇತಿ ||
(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ ಈ (ಸಿದ್ಧಾಂತವನ್ನು) ಹೇಳುತ್ತೇವೆ. ಅಧಿದೈವಾದಿಗಳಲ್ಲಿ ಅಂತರ್ಯಾಮಿ (ಯೊಬ್ಬನಿರುವನೆಂದು ಈ) ಶ್ರುತಿಯಲ್ಲಿದೆಯಲ್ಲ, ಅವನು ಪರಮಾತ್ಮನೇ ಆಗಬಹುದೇ ಹೊರತು ಮತ್ತೊಬ್ಬನಲ್ಲ. ಏಕೆ ? ಎಂದರೆ ಅವನ ಧರ್ಮಗಳನ್ನು ಹೇಳಿರುವದರಿಂದ, ಆ ಪರಮಾತ್ಮನ ಧರ್ಮ ಗಳನ್ನೇ ಇಲ್ಲಿ ತಿಳಿಸಿರುವದು ಕಾಣಬರುತ್ತದೆ. ಮೊದಲನೆಯದಾಗಿ ಪೃಥಿವಿಯೇ ಮುಂತಾದ ಅಧಿದೈವಾದಿಪ್ರಕಾರದಿಂದ ಬೇರೆಬೇರೆಯಾಗಿರುವ ಕಾರ್ಯಸಮೂಹ ವನ್ನೆಲ್ಲ ಒಳಗಿದ್ದುಕೊಂಡು ಕಟ್ಟುಮಾಡುವನಾದ್ದರಿಂದ ಯಮಯಿತೃತ್ವವೆಂಬ ಧರ್ಮವು ಪರಮಾತ್ಮನಿಗೆ ಹೊಂದುತ್ತದ ; ಏಕೆಂದರೆ ಎಲ್ಲಾ ಕಾರ್ಯಗಳಿಗೂ (ಅವನು) ಕಾರಣನಾಗಿರುವದರಿಂದ (ಅವನಲ್ಲಿ) ಎಲ್ಲಾ ಶಕ್ತಿಗಳೂ’ (ಇರಬಹು ದಂಬುದು) ಯುಕ್ತವಾಗಿರುತ್ತದೆ. “ಇವನೇ ನಿನ್ನ ಆತ್ಮನು, ಅಂತರ್ಯಾಮಿಯು, ಅಮೃತನು” (ಬೃ. ೩-೭-೩) ಎಂದು ಹೇಳಿರುವ ಆತ್ಮತ್ವವೂ ಅಮೃತತ್ವವೂ ಮುಖ್ಯ (ವಾದ ಅರ್ಥದಲ್ಲಿ) : ಪರಮಾತ್ಮನಿಗೇ ಹೊಂದುತ್ತವೆ. ಯಾವನನ್ನು ಪ್ರಥಿವಿ ಅರಿಯದೂ’ (ಬೃ. ೩-೭ ೩) ಎಂದು ಪೃಥಿವೀದೇವತೆಗೆ ಅಂತರ್ಯಾಮಿಯನ್ನು ಅರಿಯುವದಾಗದೆಂದು (ಯಾಜ್ಞವಲ್ಕನು) ಹೇಳಿರುವದರಿಂದ ದೇವತಾತ್ಮ ನಿಗಿಂತಲೂ ಅಂತರ್ಯಾಮಿಯು ಬೇರೆ ಎಂದು ತಿಳಿಸಿರುತ್ತಾನೆ ; ಏಕೆಂದರೆ ಪೃಥಿವೀ ದೇವತೆಯು ‘ನಾನು ಪೃಥಿವಿಯಾಗಿರುವನು’ ಎಂದು ತನ್ನನ್ನು (ತಾನು) ಅರಿತುಕೊಳ್ಳ ಬಹುದಾಗಿದೆ. ಇದರಂತೆ ‘ಅದೃಷ್ಟ’, ‘ಅಶ್ರುತಃ’ (ಬೃ. ೩-೭-೨೩) ಎಂದು ಮುಂತಾಗಿ ಹೇಳಿರುವದೂ ರೂವಾದಿಗಳಿಲ್ಲದ್ದರಿಂದ ಪರಮಾತ್ಮನಿಗೇ ಹೊಂದುತ್ತದೆ.
- ಆಯಾ ಕಾರ್ಯಗಳನ್ನು ಕಟ್ಟುಮಾಡುವ ಶಕ್ತಿಗಳಲ್ಲ.
ಅಧಿ. ೫. ಸೂ. ೧೯] ಪ್ರಧಾನವು ಅಂತರ್ಯಾಮಿಯಾಗಲಾರದು
&o&
ಪರಮಾತ್ಮನಿಗೆ ಮತ್ತೊಬ್ಬರನ್ನು ಕಟ್ಟಿನಲ್ಲಿಡುವದಕ್ಕೆ
ಕಾರ್ಯಕರಣಗಳು ಬೇಡ
(ಭಾಷ್ಯ) ೧೯೧. ಮತ್ತು ಅಕಾರ್ಯಕರಣಸ್ಯ ಪರಮಾತ್ಮನಃ ಯಮಯಿತೃತ್ವಂ ನೋಪಪದ್ಯತೇ ಇತಿ | ನೈಷ ದೋಷಃ | ಯಾನ್ ನಿಯಚ್ಛತಿ ತತ್ಕಾರ್ಯ ಕರಣ್ಯರೇವ ತಸ್ಯ ಕಾರ್ಯಕರಣವನ್ನೊಪಪತೇಃ | ತಸ್ಯಾಪ್ಯನ್ನೋ ನಿಯಗ್ತಾ ಇತಿ ಅನವಸ್ಥಾದೋಷಶ್ಚ ನ ಸಂಭವತಿ | ಭೇದಾಭಾವಾತ್ | ಭೇದೇ ಹಿ ಸತಿ ಅನವಸ್ಥಾದೋಷೋಪಪತ್ತಿಃ | ತಸ್ಮಾತ್ ಪರಮಾತ್ಮನ ಅನ್ವರ್ಯಾಮೀ ||
(ಭಾಷ್ಯಾರ್ಥ) ಆದರೆ ಕಾರ್ಯಕರಣಗಳಿಲ್ಲದ ಪರಮಾತ್ಮನಿಗೆ ಯಮಯಿತೃತ್ವವು ಹೊಂದು ವದಿಲ್ಲ ಎಂದು (ಪೂರ್ವಪಕ್ಷಿಯು ಹೇಳಿದ್ದ) ನಷ್ಟೆ, ಅದೇನೂ (ಸಿದ್ಧಾಂತದಲ್ಲಿ) ದೋಷವಲ್ಲ. ಏಕೆಂದರೆ ಯಾರನ್ನು ಕಟ್ಟಿನಲ್ಲಿಡಬೇಕೋ ಅವರ ಕಾರ್ಯಕರಣ ಗಳಿಂದಲೇ ಆ (ಪರಮಾತ್ಮನೂ) ಕಾರ್ಯಕರಣವಂತನಾಗಬಹುದಾಗಿದೆ. ಅವನಿಗೂ (ಒಬ್ಬ) ಬೇರೆಯ ನಿಯಂತನು, (ಅವನಿಗೆ ಮತ್ತೊಬ್ಬನು - ಎಂದು) ಹೀಗೆ ಅನ ವಸ್ಥಾದೋಷವೂ ಆಗುವದಿಲ್ಲ ; ಏಕೆಂದರೆ ಭೇದವಿರುವದಿಲ್ಲ. ಭೇದವಿದ್ದರಲ್ಲವೆ, ಅನವಸ್ಥಾದೋಷವು ಹೊಂದುತ್ತದೆ ? ಆದ್ದರಿಂದ ಪರಮಾತ್ಮನೇ ಅಂತರ್ಯಾಮಿಯು.
ನ ಚ ಸ್ಮಾರ್ತಮತದ್ಧರ್ಮಾಭಿಲಾಪಾತ್ ||೧೯|| ೧೯. ಸ್ಕೃತಿಯಲ್ಲಿ (ಹೇಳಿರುವ) ಪ್ರಧಾನವೂ ಅಂತರ್ಯಾಮಿಯಲ್ಲ ; ಏಕೆಂದರೆ ಅದರದಲ್ಲದ ಧರ್ಮಗಳನ್ನು ಹೇಳಿರುತ್ತದೆ.
1.ಶರೀರಾದಿಗಳನ್ನು ಸ್ವಾಧೀನದಲ್ಲಿಟ್ಟುಕೊಂಡಿರುವ ಜೀವನಿಗಿಂತ ಬೇರೆಯಾಗಿ ಅವನನ್ನು ಸ್ವಾಧೀನದಲ್ಲಿಟ್ಟುಕೊಂಡಿರುವ ಅಂತರ್ಯಾಮಿಯನ್ನು ಹೇಳಿದ್ದರೆ ಅವನಿಗಿಂತ ಬೇರೆಯಾಗಿ ಮತ್ತೊಬ್ಬ ನಿಯಂತ್ಯವನ್ನು ಒಪ್ಪಬೇಕಾಗಿಬಂದು ಅನವಸ್ಥೆಯಾಗುತ್ತಿತ್ತು. ಆದರೆ ಪರಮಾತ್ಮನಿಗಿಂತ ಬೇರೆಯಾಗಿ ದ್ರಷ್ಟವೇ ಇಲ್ಲವೆಂದು ಶ್ರುತಿ ಹೇಳುತ್ತಿದ. (ಬೃ. ೩-೮-೧೧) ಒಬ್ಬನೇ ಆತ್ಮನಾದರೆ ನಿಯಂತೃನಿಯಂತಭೇದವು ಹೇಗಾಗುತ್ತದೆ ? ಎಂದರೆ ಅವಿದ್ಯೆಯಿಂದ ಎಂದು ಮುಂದ ೨೦ನೆಯ ಸೂತ್ರದ ಭಾಷ್ಯದಲ್ಲಿ ಸಮಾಧಾನವನ್ನು ಹೇಳಲಾಗುವದು.
೩o
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
ಪ್ರಧಾನವು ಅಂತರ್ಯಾಮಿಯಾಗಲಾರದು
(ಭಾಷ್ಯ) ೧೯೨. ಸ್ಮಾದೇತತ್ | ಅದೃಷ್ಟತ್ವಾದಯೋ ಧರ್ಮಾಃ ಸಾಂಖ್ಯಸ್ಕೃತಿಕಲ್ಪಿತಸ್ಯ ಪ್ರಧಾನಸ್ಯಾಪಿ ಉಪಪದ್ಯ | ರೂಪಾದಿಹೀನತಯಾ ತಸ್ಯ ತೈರಭ್ಯುಪರಮಾತ್ | “ಅಪ್ರತರ್ಕ್ಕಮವಿಜೇಯಂ ಪ್ರಸುಪ್ತಮಿವ ಸರ್ವತಃ’ (ಮನು. ೧-೫) ಇತಿ ಹಿ ಸ್ಮರನ್ತಿ ತಸ್ಯಾಪಿ ನಿಯತೃತ್ವಂ ಸರ್ವವಿಕಾರಕಾರಣತ್ವಾತ್ ಉಪಪದ್ಯತೇ | ತಸ್ಮಾತ್ ಪ್ರಧಾನಮ್ ಅನ್ವರ್ಯಾಮಿಶಬ್ದಂ ಸ್ಯಾತ್ ! ‘ಈಕ್ಷತೇರ್ನಾಶಬ್ದಮ್’ (೧-೧-೫) ಇತ್ಯತ್ರ ನಿರಾಕೃತಮಪಿ ಸತ್ ಪ್ರಧಾನಮ್ ಇಹ ಅದೃಷ್ಟ ತ್ಯಾದಿವ್ಯಪದೇಶಸಂಭವೇನ ಪುನರಾಶಜ್ಯತೇ | ಅತಃ ಉತ್ತರಮ್ ಉಚ್ಯತೇ | ನ ಚ ಸ್ಮಾರ್ತ೦ ಪ್ರಧಾನಮ್ ಅನ್ವರ್ಯಾಮಿಶಬ್ದಂ ಭವಿತುಮರ್ಹತಿ | ಕಸ್ಮಾತ್ ? ಅತದ್ಧರ್ಮಾಭಿಲಾಪಾತ್ | ಯದ್ಯಪಿ ಅದೃಷ್ಟ ತ್ಯಾದಿವ್ಯಪದೇಶಃ ಪ್ರಧಾನಸ್ಯ ಸಂಭವತಿ, ತಥಾಪಿ ನ ದ್ರಷ್ಟತ್ಯಾದಿ ವ್ಯಪದೇಶಃ ಸಂಭವತಿ | ಪ್ರಧಾನಸ್ಯ ಅಚೇತನನ ತೈರಭ್ಯುಪರಮಾತ್ | “ಅದೃಷ್ಟೂ ದ್ರಷ್ಟಾಶ್ರುತಃ ಶ್ವೇತಾಮತೋ ಮಾವಿಜ್ಞಾತೋ ವಿಜ್ಞಾತಾ” (ಬೃ. ೩-೭-೨೩) ಇತಿ ಹಿ ವಾಕ್ಯಶೇಷಃ ಇಹ ಭವತಿ | ಆತ್ಮತ್ವಮಪಿ ನ ಪ್ರಧಾನಸ್ಯ ಉಪಪದ್ಯತೇ 11
(ಭಾಷ್ಯಾರ್ಥ) ಈ (ಮತವು ಪೂರ್ವಪಕ್ಷದಲ್ಲಿರ) ಬಹುದು: ಅದೃಷ್ಟಿತ್ವವೇ ಮುಂತಾದ ಧರ್ಮಗಳು ಸಾಂಖ್ಯಸ್ಕೃತಿಯಲ್ಲಿ ಕಲ್ಪಿತವಾಗಿರುವ ಪ್ರಧಾನಕ್ಕೂ ಹೊಂದುತ್ತವೆ. ಏಕೆಂದರೆ ಅದು ರೂಪಾದಿಗಳಿಲ್ಲದ್ದೆಂದು ಅವರು ಒಪ್ಪಿರುತ್ತಾರೆ. ‘ತರ್ಕವನ್ನು ಮಾಡುವದಕ್ಕೆ ಬಾರದ್ದು, ಅರಿಯುವದಕ್ಕೆ ಆಗದ್ದು, ಎಲ್ಲೆಲ್ಲಿಯೂ ನಿದ್ರಿಸುವಂತಿರು ವದು” (ಮನು. ೧-೫) ಎಂದಲ್ಲವೆ, ಸ್ಮೃತಿಕಾರರು ಹೇಳುತ್ತಾರೆ ? ತನ್ನ ಎಲ್ಲಾ ಕಾರ್ಯಗಳಿಗೂ ಕಾರಣವಾಗಿರುವದರಿಂದ ಅದಕ್ಕೂ ನಿಯಂತೃತ್ವವು ಹೊಂದುತ್ತದೆ.” ಆದ್ದರಿಂದ ಪ್ರಧಾನವು ‘ಅಂತರ್ಯಾಮಿ’ ಎಂಬ ಶಬ್ದದಿಂದ (ಹೇಳಿದ್ದು) ಆಗಬಹುದಲ್ಲ !
‘ಈಕ್ಷತೇರ್ನಾಶಬ್ದಮ್’ (೧-೧-೫) ಎಂಬಲ್ಲಿ ಪ್ರಧಾನವು ನಿರಾಕೃತವಾಗಿ
-
ಪ್ರಧಾನವು ಅನುಮಾನದಿಂದ ಕಲ್ಪಿತವಾಗಿರುವ ಜಗತ್ಕಾರಣವು, ಶ್ರುತಿಯಲ್ಲಿ ಹೇಳಿರುವ ಕಾರಣವಲ್ಲ.
-
ಕಾರ್ಯವನ್ನು ಕಾರಣವು ನಿಯಮಮಾಡುತ್ತದೆ.
ಅಧಿ. ೫. ಸೂ. ೧೯] ಪ್ರಧಾನವು ಅಂತರ್ಯಾಮಿಯಾಗಲಾರದು
20%
ದ್ದರೂ ಇಲ್ಲಿ (ಅದಕ್ಕೆ) ಅದೃಷ್ಟತ್ವವೇ ಮುಂತಾದ (ಧರ್ಮಗಳನ್ನು) ಹೇಳಿರುವದು ಹೊಂದಬಹುದಾದ್ದರಿಂದ (ಅಂತರ್ಯಾಮಿಯು ಪ್ರಧಾನವಾಗಬಹುದು ಎಂದು) ಮತ್ತೆ ಶಂಕಿಸಿರುತ್ತದೆ.
ಇದಕ್ಕೆ (ಈಗ ಉತ್ತರವನ್ನು) ಹೇಳಲಾಗುತ್ತದೆ. ಸ್ಕೃತಿಯಲ್ಲಿ ಹೇಳಿರುವ ಪ್ರಧಾನವು ಅಂತರ್ಯಾಮಿಶಬ್ದವಾಚ್ಯವಾಗಲಾರದು. ಏಕೆ ? ಎಂದರೆ ಅದರದಲ್ಲದ ಧರ್ಮಗಳನ್ನು (ಇಲ್ಲಿ ಹೇಳಿರುವದರಿಂದ ಅದೃಷ್ಟಿತ್ವವೇ ಮುಂತಾದ (ಧರ್ಮ ಗಳನ್ನು) ಹೇಳಿರುವದೇನೋ ಪ್ರಧಾನಕ್ಕೆ ಆಗಬಹುದು ; ಆದರೆ ದ್ರಷ್ಟತ್ವವೇ ಮುಂತಾದವುಗಳನ್ನು ಹೇಳಿರುವದು (ಅದಕ್ಕೆ) ಆಗುವದಿಲ್ಲ ; ಏಕೆಂದರೆ ಪ್ರಧಾನವು ಅಚೇತನವು ಎಂದು ಆ (ಸಾಂಖ್ಯರು) ಇಟ್ಟುಕೊಂಡಿರುತ್ತಾರೆ. ‘ಅದೃಷ್ಟವಾದ ದ್ರಷ್ಟ ಅಶ್ರುತವಾದ ಶೋತೃ, ಅಮತವಾದ ಮಂತೃ, ಅವಿಜ್ಞಾತವಾದ ವಿಜ್ಞಾ” (ಬೃ. ೩-೭-೨೩) ಎಂದಲ್ಲವೆ, ವಾಕ್ಯಶೇಷವಿದೆ ? ಆತ್ಮತ್ವವೂ ಪ್ರಧಾನಕ್ಕೆ ಹೊಂದುವದಿಲ್ಲ. ಶಾರೀರನೂ ಅಂತರ್ಯಾಮಿಯಾಗಲಾರನು
(ಭಾಷ್ಯ) ೧೯೩. ಯದಿ ಪ್ರಧಾನಮ್ ಆತ್ಮತ್ವದ್ರಷ್ಟತ್ವಾದ್ಯಸಂಭವಾತ್ ನಾನ್ತರ್ಯಾಮೀ ಅಭ್ಯುವಗಮ್ಯತೇ, ಶಾರೀರಸ್ತರ್ಹಿ ಅನ್ವರ್ಯಾಮೀ ಭವತು | ಶಾರೀರೋ ಹಿ ಚೇತನತ್ವಾತ್ ದ್ರಷ್ಮಾ ಶೋತಾ ಮನ್ನಾ ವಿಜ್ಞಾತಾ ಚ ಭವತಿ | ಆತ್ಮಾ ಚ | ಪ್ರತ್ಯಕ್ಕಾತ್ | ಅಮೃತಶ್ಚ | ಧರ್ಮಾಧರ್ಮಫಲೋಪಭೋಗೋಪಪಃ | ಅದೃಷ್ಟಾದಯಶ್ಚ ಧರ್ಮಾಃ ಶಾರೀರೇ ಪ್ರಸಿದ್ಧಾಃ | ದರ್ಶನಾದಿಕ್ರಿಯಾಯಾಃ ಕರ್ತರಿ ಪ್ರವೃತ್ತಿವಿರೋಧಾತ್ | “ನ ದೃಷ್ಟದ್ರ್ರಹ್ಮಾರಂ ಪಶ್ಯ’’ (ಬೃ. ೩-೪-೨) ಇತ್ಯಾದಿಶ್ರುತಿಭ್ಯಶ್ಚ | ತಸ್ಯ ಚ ಕಾರ್ಯಕರಣಸಜ್ಞಾತಮ್ ಅನ್ನರ್ಯಮಯಿತುಂ ಶೀಲಮ್ 1 ಭೋಕೃತ್ವಾತ್ | ತಸ್ಮಾತ್ ಶಾರೀರೋರ್ಯಾಮೀ ಇತಿ | ಅತಃ ಉತ್ತರಂ ಘಠತಿ -
(ಭಾಷ್ಯಾರ್ಥ) ಆಕ್ಷೇಪ :- ಆತ್ಮತ್ವ, ದ್ರಷ್ಟತ್ವವೇ ಮುಂತಾದ (ಧರ್ಮಗಳು) ಹೊಂದದಿರುವದರಿಂದ ಪ್ರಧಾನವು ಅಂತರ್ಯಾಮಿ (ಎಂಬುದನ್ನು) ಒಪ್ಪಲಾಗದಿರ ಬಹುದು ; ಹಾಗಾದರೆ ಶಾರೀರನು ಅಂತರ್ಯಾಮಿಯಾಗಲಿ ! ಏಕೆಂದರೆ, ಶಾರೀರನು ಚೇತನನಾಗಿರುವದರಿಂದ ದ್ರಷ್ಟವೂ ಶೋತೃವೂ ಮಂತೃವೂ ವಿಜ್ಞಾತೃವೂ ಆಗಿರುತ್ತಾನೆ ; ಒಳಗಿರುವದರಿಂದ ಆತ್ಮನೂ ಆಗಿರುತ್ತಾನೆ ; ಧರ್ಮಾಧರ್ಮಗಳ
೩೦೬
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
ಫಲಗಳನ್ನು (ಅವನು) ಅನುಭವಿಸುವದು ಹೊಂದುವದಕ್ಕಾಗಿ ಅವನು ಅಮೃತನೂ (ಆಗಿರುತ್ತಾನ).ಅದೃಷ್ಟಿತ್ವವೇ ಮುಂತಾದ ಧರ್ಮಗಳು ಶಾರೀರನಲ್ಲಿ ಪ್ರಸಿದ್ಧ ವಾಗಿರುತ್ತವೆ; ಏಕೆಂದರೆ ನೋಡುವದು ಮುಂತಾದ ಕ್ರಿಯೆಯು (ತನ್ನ ) ಕರ್ತವಾದ (ಶಾರೀರನಲ್ಲಿ) ವ್ಯಾಪಾರಮಾಡುವದು ವಿರೋಧವಾಗಿರುತ್ತದೆ. ‘ದೃಷ್ಟಿಯ ದ್ರಷ್ಟ ವನ್ನು (ನೀನು) ನೋಡಲಾರೆ’ (ಬೃ. ೩-೪-೨) ಮುಂತಾದ ಶ್ರುತಿಗಳ (ಪ್ರಮಾಣ) ದಿಂದಲೂ (ಶಾರೀರನಿಗೆ ಅದೃಷ್ಟಾದಿಧರ್ಮಗಳು ಹೊಂದುತ್ತವೆ). ಮತ್ತು ಅವನಿಗೆ ಕಾರ್ಯಕರಣಸಂಘಾತವನ್ನು (ಅದರ) ಒಳಗಿದ್ದುಕೊಂಡು ಕಟ್ಟಿನಲ್ಲಿಟ್ಟುಕೊಂಡಿರು ವದು ಸ್ವಭಾವವು ; ಏಕೆಂದರೆ (ಅವನೇ) ಭೋಕ್ತವಾಗಿರುತ್ತಾನೆ. ಆದ್ದರಿಂದ ಶಾರೀರನೇ ಅಂತರ್ಯಾಮಿಯು.
ಈ (ಶಂಕೆಗೆ) ಉತ್ತರವನ್ನು ಹೇಳುತ್ತಾರೆ : ಶಾರೀರಕ್ಕೂಭಯೇsಪಿ ಹಿ ಭೇದೇನ್ಯನಮಧೀಯತೇ ||೨೦ll
೨೦. ಶಾರೀರನೂ (ಅಂತರ್ಯಾಮಿಯಲ್ಲ) ; ಏಕೆಂದರೆ ಎರಡು (ಶಾಖೆಯವರೂ) ಇವನನ್ನು ಬೇರೆಯಾಗಿ ಹೇಳುತ್ತಿದ್ದಾರೆ.
(ಭಾಷ್ಯ) ೧೯೪. ನ ಇತಿ ಪೂರ್ವಸೂತ್ರಾತ್ ಅನುವರ್ತತೇ ಶಾರೀರಶ್ಚ ನ ಅನ್ತರ್ಯಾಮೀ ಇಷ್ಯತೇ | ಕಸ್ಮಾತ್ ? ಯದ್ಯಪಿ ದ್ರಷ್ಟಾದಯೋ ಧರ್ಮಾಸ್ತಸ್ಯ ಸಂಭವನ್ತಿ, ತಥಾಪಿ ಘಟಾಕಾಶವತ್ ಉಪಾಧಿಪರಿಚ್ಛಿನ್ನತ್ವಾತ್ ನ ಕಾತ್ಮ೯ನ ಪೃಥಿವ್ಯಾದಿಷು ಅನ್ಯರವಸ್ಥಾತುಂ ನಿಯನ್ನುಂ ಚ ಶಕ್ಟೋತಿ | ಅಪಿ ಚ ಉಭಯಪಿ ಹಿ ಶಾಖಿನಃ ಕಾಣ್ಯಾ: ಮಾಧ್ಯನಾಶ್ಚ ಅರ್ಯಾಮಿ ಭೇದೇನ ಏನಂ ಶಾರೀರಂ ಪೃಥಿವ್ಯಾದಿವತ್ ಅಧಿಷ್ಠಾನನ ನಿಯಮ್ಮನ ಚ ಅಧೀಯತೇ |“ಯೋ ವಿಜ್ಞಾನೇ ತಿಷ್ಠನ್’ (ಬೃ. ೩-೭-೨೨) ಇತಿ ಕಾಣ್ಯಾಃ | “ಯ ಆತ್ಮನಿ ತಿಷ್ಠನ್’’ (?) ಇತಿ ಮಾಧ್ಯನಾಃ | ‘ಯ ಆತ್ಮನಿ ತಿಷ್ಟನ್’ ಇತ್ಯಂಸ್ಯಾವತ್ ಪಾಠ ಭವತಿ ಆತ್ಮ ಶಬ್ದಃ ಶಾರೀರಸ್ಯ ವಾಚಕಃ | ಯೋ ವಿಜ್ಞಾನೇ ತಿಷ್ಠನ್” ಇತ್ಯಸ್ಮಿನ್ನಪಿ ಪಾಠ ವಿಜ್ಞಾನಶಬ್ದನ ಶಾರೀರ ಉಚ್ಯತೇ | ವಿಜ್ಞಾನಮಯೋ ಹಿ ಶಾರೀರಃ | ತಸ್ಮಾತ್ ಶಾರೀರಾದ, ಈಶ್ವರಃ ಅನ್ವರ್ಯಾಮೀ ಇತಿ ಸಿದ್ಧಮ್ ||
-
ಈ ಜನ್ಮದಲ್ಲಿ ಮಾಡಿದ ಕರ್ಮದ ಫಲವನ್ನು ಜನ್ಮಾಂತರದಲ್ಲಿ ಅನುಭವಿಸಬೇಕಾಗಿರು ವದರಿಂದ ಅಮೃತನು, ನಿತ್ಯನು.
-
ಕ್ರಿಯೆಯು ಕರ್ತವಿಗಿಂತ ಬೇರೆಯಾದ ಕರ್ಮದಲ್ಲಿ ವ್ಯಾಪಾರವನ್ನು ಮಾಡಬೇಕು ; ಕರ್ತವಿನ ಕ್ರಿಯೆಯು ಕರ್ತವನ್ನೇ ವ್ಯಾಪಿಸಲಾರದು.
ಅಧಿ. ೫. ಸೂ. ೨೦] ಶಾರೀರಾಂತರ್ಯಾಮಿಗಳು ಭಿನ್ನರೂ, ಅಭಿನ್ನರೂ ?
೩೦೭
(ಭಾಷ್ಯಾರ್ಥ) ‘ನ’ (ಅಲ್ಲ) ಎಂಬ (ಮಾತು) ಹಿಂದಿನ ಸೂತ್ರದಿಂದ ಅನುಸರಿಸಿಕೊಂಡು ಬಂದಿರುತ್ತದೆ. ಶಾರೀರನೂ ಅಂತರ್ಯಾಮಿ ಎಂದು ಒಪ್ಪುವಹಾಗಿಲ್ಲ. ಏಕೆ ? ಎಂದರೆ, ಅವನಿಗೆ ದ್ರಷ್ಟತ್ಯಾದಿಧರ್ಮಗಳೇನೋ ಹೊಂದುತ್ತವೆ ; ಆದರೂ ಘಟಾಕಾಶದಂತ ಉಪಾಧಿಪರಿಚ್ಛಿನ್ನನಾಗಿರುವದರಿಂದ ಪೃಥಿವ್ಯಾದಿಗಳಲ್ಲಿ ಪೂರ್ತಿಯಾಗಿ ಒಳಗೆ ಇದ್ದು ಕೊಂಡಿರುವದಕ್ಕಾಗಲಿ (ಅವುಗಳನ್ನು) ಕಟ್ಟಿನಲ್ಲಿಟ್ಟುಕೊಳ್ಳುವದಕ್ಕಾಗಲಿ (ಅವನು) ಶಕ್ತನಲ್ಲ. ಇದಲ್ಲದೆ ಕಾಣೂರು, ಮಾಧ್ಯಂದಿನರು - ಈ ಎರಡೂ ಶಾಖೆಯವರು ಅಂತರ್ಯಾಮಿಗಿಂತ ಬೇರೆಯಾಗಿ ಈ ಶಾರೀರನನ್ನು ಪೃಥಿವಿ ಮುಂತಾದವುಗಳಂತೆಯೇ (ಇವನು ಅಂತರ್ಯಾಮಿಗೆ) ಅಧಿಷ್ಠಾನವೆಂದೂ ನಿಯಮ್ಮನೆಂದೂ ಹೇಳುತ್ತಾರೆ. “ಯೋ ವಿಜ್ಞಾನೇ ತಿಷ್ಠನ್’ ಯಾವನು ವಿಜ್ಞಾನದಲ್ಲಿದ್ದುಕೊಂಡು (ಬೃ. ೩-೭-೨೨) ಎಂದು ಕಾರು (ಹೇಳುತ್ತಾರೆ) ; “ಯ ಆತ್ಮನಿ ತಿಷ್ಟನ್’ (ಯಾವನು ಆತ್ಮನಲ್ಲಿದ್ದುಕೊಂಡು) ಎಂದು ಮಾಧ್ಯಂದಿನರು (ಹೇಳುತ್ತಾರೆ). ಮೊದಲನೆಯದಾಗಿ “ಯಾವನು ಆತ್ಮನಲ್ಲಿದ್ದುಕೊಂಡು’ ಎಂಬ (ಮಾಧ್ಯಂದಿನ) ಪಾಠದಲ್ಲಿ ಆತ್ಮಶಬ್ದವು ಶಾರೀರನನ್ನು ಹೇಳತಕ್ಕದ್ದಾಗಿದೆ. “ಯಾವನು ವಿಜ್ಞಾನದಲ್ಲಿದ್ದುಕೊಂಡು” ಎಂಬ (ಕಾ) ಪಾಠದಲ್ಲಿಯೂ ವಿಜ್ಞಾನಶಬ್ದದಿಂದ ಶಾರೀರನನ್ನೇ ಹೇಳಿರುತ್ತದೆ ; ಏಕೆಂದರೆ ಶಾರೀರನು ವಿಜ್ಞಾನಮಯನು. ಆದ್ದರಿಂದ ಶಾರೀರನಿಗಿಂತ ಬೇರೆಯಾಗಿರುವ ಈಶ್ವರನೇ ಅಂತರ್ಯಾಮಿ ಎಂದು ಸಿದ್ಧವಾಯಿತು.
ಶಾರೀರಾಂತರ್ಯಾಮಿಗಳು ಭಿನ್ನರೊ, ಅಭಿನ್ನರೊ ?
(ಭಾಷ್ಯ) ೧೯೫. ಕಥಂ ಪುನಃ ಏಕಸ್ಮಿನ್ ದೇಹೇ ದೈ ದ್ರಷ್ಟಾರ್ ಉಪಪದ್ಯತೇ, ಯಶ್ಚಾಯಮ್ ಈಶ್ವರೋರ್ಯಾಮೀ, ಯಶ್ಚಾಯಮ್ ಇತರಃ ಶಾರೀರಃ ? ಕಾ
1ಒಂದು ಶರೀರದಲ್ಲಿ ಮಾತ್ರವೇ ಇರುವವನು ಪೃಥಿವ್ಯಾದಿಗಳಲ್ಲಿ ಇರುವ ಹಾಗಿಲ್ಲ ; ಒಂದು ಘಟಾಕಾಶವು ಎಲ್ಲಾ ಘಟಗಳಲ್ಲಿಯೂ ಇರಲಾರದಂತೆಯೇ ಇದು. ತನ್ನ ಶರೀರಾದಿಗಳೇ ಪೂರ್ಣವಾಗಿ ಇವನ ಕಟ್ಟಿನಲ್ಲಿರುವದಿಲ್ಲ.
- ಆತ್ಮನೆಂಬ ಶಾರೀರನು ಅಧಿಷ್ಠಾನವು, ಇರುವ ಸ್ಥಳವು ; ಈಶ್ವರನೆಂಬ ಅಂತ ರ್ಯಾಮಿಯು ಅಧಿಷ್ಠಾತೃ, ಅದರಲ್ಲಿರುವವನು - ಎಂದೂ ಆತ್ಮನೆಂಬ ಶಾರೀರನು ನಿಯಮ್ಮನು, ಕಟ್ಟಿನಲ್ಲಿರುವವನು, ಈಶ್ವರನೆಂಬ ಅಂತರ್ಯಾಮಿಯು ನಿಯಾಮಕನು, ಕಟ್ಟಿನಲ್ಲಿಟ್ಟಿರುವವನು - ಎಂದೂ ಶ್ರುತಿಯಿಂದ ಸಿದ್ಧವಾಗುತ್ತದೆ. ಆದ್ದರಿಂದ ಅಂತರ್ಯಾಮಿಯು ಶಾರೀರನಿಗಿಂತ ಬೇರೆಯಾಗಿರುತ್ತಾನೆಂದಾಯಿತು.
aoe
ಬ್ರಹ್ಮಸೂತ್ರಭಾಷ್ಯ |
[ಅ. ೧. ಪಾ. ೨. ಪುನರಿಹ ಅನುಪಪತ್ತಿ: ? “ನಾನ್ಶಿತೋSಸ್ತಿ ದ್ರಷ್ಟಾ” (ಬ. ೩-೭-೨೩) ಇತ್ಯಾದಿಶ್ರುತಿವಚನಂ ವಿರುದ್ಯೋತ | ಅತ್ರ ಹಿ ಪ್ರಕೃತಾತ್ ಅನ್ತರ್ಯಾಮಿಣಃ ಅನ್ಯಂ ದ್ರಷ್ಟಾರಂ ಪ್ರೋತಾರಂ ಮನ್ನಾರಂ ವಿಜ್ಞಾತಾರಂ ಚ ಆತ್ಮಾನಂ ಪ್ರತಿಷೇಧತಿ | ನಿಯನ್ಯನ್ತರಪ್ರತಿಷೇಧಾರ್ಥಮೇತದ್ವಚನಂ ಇತಿ ಚೇತ್ | ನ | ನಿಯಾನರಾ ಪ್ರಸಜ್ಞಾತ್, ಅವಿಶೇಷಶ್ರವಣಾಚ್ಚ | ಅ ಚ್ಯತೇ | ಅವಿದ್ಯಾಪ್ರತ್ಯುಪಸ್ಥಾಪಿತ ಕಾರ್ಯಕರಣೋಪಾಧಿನಿಮಿತ್ತೋಯಂ ಶಾರೀರಾನ್ತರ್ಯಾಮಿರ್ಭದವ್ಯಪ ದೇಶಃ ನ ಪಾರಮಾರ್ಥಿಕಃ | ಏಕೋ ಹಿ ಪ್ರತ್ಯಗಾತ್ಮಾ ಭವತಿ, ನ ದೌ ಪ್ರತ್ಯಗಾತ್ಮಾನೌ ಸಂಭವತಃ | ಏಕವ ತು ಭೇದವ್ಯವಹಾರಃ ಉಪಾಧಿಕೃತಃ, ಯಥಾ ‘ಘಟಾಕಾಶಃ’, ‘ಮಹಾಕಾಶಃ’ ಇತಿ | ತತಶ್ಚ ಜ್ಞಾತೃಯಾದಿಭೇದಶ್ರುತಯಃ, ಪ್ರತ್ಯಕ್ಷಾದೀನಿ ಚ ಪ್ರಮಾಣಾನಿ, ಸಂಸಾರಾನುಭವಃ, ವಿಧಿಪ್ರತಿಷೇಧಶಾಸ್ತ್ರಂ ಚ ಇತಿ ಸರ್ವಮೇತತ್ ಉಪಪದ್ಯತೇ | ತಥಾ ಚ ಶ್ರುತಿಃ “ಯತ್ರ ಹಿ ದೈತಮಿವ ಭವತಿ ತದಿತರ ಇತರಂ
ಪಶ್ಯತಿ’ (ಬೃ. ೪-೫-೧೫) ಇತಿ ಅವಿದ್ಯಾವಿಷಯೇ ಸರ್ವಂ ವ್ಯವಹಾರಂ ದರ್ಶ . ಯತಿ |‘ಯತ್ರ ತಸ್ಯ ಸರ್ವಮಾತ್ಮವಾಭೂತ್ ತತ್ಕನ ಕಂ ಪಶ್ಯತ್’’ (ಬೃ. ೪-೫ ೧೫) ಇತಿ ವಿದ್ಯಾವಿಷಯೇ ಸರ್ವಂ ವ್ಯವಹಾರಂ ವಾರಯತಿ ||
(ಭಾಷ್ಯಾರ್ಥ) (ಆಕ್ಷೇಪ) :- ಹಾಗಾದರೆ ಒಂದೇ ದೇಹದಲ್ಲಿ ಇಬ್ಬರು ದ್ರಷ್ಟಗಳು - ಈಶ್ವರನೆಂಬ ಅಂತರ್ಯಾಮಿಯಿರುವನಲ್ಲ ಇವನೊಬ್ಬ, ಮತ್ತು (ಇವನಿಗಿಂತ) ಬೇರೆಯಾಗಿರುವ ಶಾರೀರನೆಂಬ ಇವನೊಬ್ಬನು - (ಹೀಗೆ) . (ಇರುವದೆಂಬುದು) ಹೊಂದುವದು ಹೇಗೆ ?
(ಪ್ರಶ್ನ) :- ಇಲ್ಲಿ ಹೂಂದುಗಡೆಯಿಲ್ಲವೆಂಬುದು ಯಾವದು ?
(ಉತ್ತರ) :- (ಹೀಗಾದರೆ) ಇವನಿಗಿಂತ ಬೇರೆಯ ದ್ರಷ್ಟವಿಲ್ಲ’ (ಬೃ. ೩-೭-೨೩) ಮುಂತಾದ ಶ್ರುತಿವಚನಕ್ಕೆ ವಿರೋಧವಾಗುತ್ತದೆ. ಏಕೆಂದರೆ ಇಲ್ಲಿ ಪ್ರಕೃತನಾಗಿರುವ ಅಂತರ್ಯಾಮಿಗಿಂತ ಬೇರೆಯಾಗಿರುವ ದ್ರಷ್ಟವೂ ಪ್ರೋತೃವೂ ಮಂತೃವೂ ವಿಜ್ಞಾತೃವೂ ಆಗಿರುವ ಆತ್ಮನು ಇಲ್ಲವೆಂದಿರುತ್ತದೆ.
(ಪ್ರಶ್ನ) :- ಈ ವಚನವು ಮತ್ತೊಬ್ಬ ನಿಯಂತ್ಯವಿಲ್ಲ ಎನ್ನುವದಕ್ಕೆ (ಬಂದಿದ) ಎಂದರೂ ?
-
ಪ್ರಕೃತಶ್ರುತಿಯಲ್ಲಿರುವ ಶಾರೀರಾಂತರ್ಯಾಮಿಭೇದವು ನಿಜವೆಂದಿಟ್ಟುಕೊಂಡರೆ ಬೇರೆ ಇಷ್ಟವಿಲ್ಲ ಎಂಬ ಶ್ರುತಿಗೆ ವಿರುದ್ಧವಾಗುವದು.
-
‘ಬೇರೆ ದ್ರಷ್ಟವಿಲ್ಲ’ ಎಂಬ ಶ್ರುತಿಗೆ ಪ್ರಕೃತಶ್ರುತಿಗೆ ವಿರುದ್ಧ ವಾಗದಂತ ಅರ್ಥ
ಅಧಿ. ೬. ಸೂ.೨೧] ಶಾರೀರಾಂತರ್ಯಾಮಿಗಳು ಭಿನ್ನರೂ, ಅಭಿನ್ನರೊ ? ೩೦೯
(ಉತ್ತರ) :- ಹಾಗಾಗದು. ಏಕೆಂದರೆ ಮತ್ತೊಬ್ಬ ನಿಯಂತೃವಿನ ಪ್ರಸಕ್ತಿಯೇ ಇಲ್ಲಿಲ್ಲ, ಮತ್ತು (ಇವನಿಗಿಂತ ಯಾವ ಬೇರೆಯ ದ್ರಷ್ಟವೂ ಇಲ್ಲ ಎಂದು ಮುಂತಾಗಿ) ಅವಿಶೇಷವಾಗಿಯೇ ಶ್ರುತಿಯಲ್ಲಿ ಹೇಳಿದೆ.’
(ಆಕ್ಷೇಪಕ್ಕೆ ಪರಿಹಾರ) :- ಇದಕ್ಕೆ (ಈ ಪರಿಹಾರವನ್ನು ಹೇಳುತ್ತೇವೆ. ಅವಿದ್ಯೆಯು ತಂದೊಡ್ಡಿರುವ ಕಾರ್ಯಕರಣಗಳೆಂಬ ಉಪಾಧಿಯ ನಿಮಿತ್ತದಿಂದ ಈ ಶಾರೀರಾಂತರ್ಯಾಮಿಗಳ ಭೇದವನ್ನು ಹೇಳಿರುತ್ತಾರೆಯೇ ಹೊರತು ಪರಮಾರ್ಥವಾಗಿ (ಹೇಳಿ)ಲ್ಲ. ಏಕೆಂದರೆ ಒಳಗಿನ ಆತ್ಮನೆಂದರೆ ಒಬ್ಬನಿದ್ದಾನೇ ಹೊರತು ಇಬ್ಬರು ಒಳಗಿನಾತ್ಮರು ಇರಲಾರರು. ಒಬ್ಬನಿಗೇ (ಹೀಗೆ) ಭೇದವ್ಯವಹಾರವಾಗಿರುವದು “ಘಟಾಕಾಶ’, ‘ಮಹಾಕಾಶ’ - ಎಂಬಂತೆ ಉಪಾಧಿಯಿಂದಾಗಿರುತ್ತದೆ. ಇದರಿಂದ ಜ್ಞಾತೃಯಾದಿಭೇದವನ್ನು ಹೇಳುವ) ಶ್ರುತಿಗಳು, ಪ್ರತ್ಯಕ್ಷಾದಿಪ್ರಮಾಣಗಳು, ಸಂಸಾರಾನುಭವ, ವಿಧಿಪ್ರತಿಷೇಧಶಾಸ್ತ್ರ .. ಇದೆಲ್ಲವೂ ಹೂಂದುಗಡೆಯಾಗುತ್ತದೆ. ಹೀಗಿರುವದರಿಂದಲೇ ಶ್ರುತಿಯು “ಎಲ್ಲಿ ದೈತವಿರುವಂತೆ ಇರುವದೋ ಅಲ್ಲಿ ಒಬ್ಬನು ಇನ್ನೊಬ್ಬನನ್ನು ಕಾಣುತ್ತಾನೆ’ (ಬೃ. ೪-೫-೧೫) ಎಂದು ಅವಿದ್ಯಾವಿಷಯದಲ್ಲಿ ಎಲ್ಲಾ ವ್ಯವಹಾರವೂ (ಉಂಟೆಂದು) ತಿಳಿಸುತ್ತದೆ ; ಆದರೆ ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿರುವದೋ, ಅಲ್ಲಿ ಏತರಿಂದ ಯಾರನ್ನು ಕಂಡಾನು ?’’ (ಬೃ. ೪-೫-೧೫) ಎಂದು ವಿದ್ಯಾವಿಷಯದಲ್ಲಿ ಎಲ್ಲಾ ವ್ಯವಹಾರವನ್ನೂ ಅಲ್ಲಗಳೆದಿರುತ್ತದೆ.
೬. ಅದೃಶ್ಯತ್ವಾಧಿಕರಣ (೨೧-೨೩)
(ಮುಂಡಕ ೧-೧-೬ರಲ್ಲಿ ಹೇಳಿರುವ ಅಕ್ಷರವು ಬ್ರಹ್ಮವೇ) ಅದೃಶ್ಯತ್ಯಾದಿಗುಣಕೋ ಧರ್ಮೊಕ್ತಃ ||೨೧||
ಮಾಡುವದಕ್ಕೆ ಮಾಡಿದ ಪ್ರಯತ್ನವಿದು. ಈ ವ್ಯಾಖ್ಯಾನವನ್ನು ಈಚಿನ ಭಾಷ್ಯಕಾರರುಗಳು ಕೆಲವರು ಇಟ್ಟುಕೊಂಡಿರುತ್ತಾರೆ.
1.ಬೇರೆ ಅಂತರ್ಯಾಮಿಯಿಲ್ಲ ಎಂದು ಹೇಳಿಲ್ಲ, ಬೇರೆ ಯಾವ ದ್ರಷ್ಟವೂ ಇಲ್ಲ - ಎಂದು ಹೇಳಿದೆ ; ಆದ್ದರಿಂದ ಸಾಮಾನ್ಯಶ್ರುತಿಗೆ ವಿಶೇಷಾರ್ಥವನ್ನು ಹೇಳುವದು ಸರಿಯಲ್ಲ ಎಂದು ಅಭಿಪ್ರಾಯ.
-
ಶ್ರುತಿಗೆ ಯುಕ್ತಿಯ ಬೆಂಬಲವೂ ಇದೆ ಎಂದು ಭಾವ.
-
ಇಲ್ಲಿ ಹೇಳಿರುವದೆಲ್ಲವೂ ಆತ್ಮಾನಾತ್ಮರ ಅಧ್ಯಾಸವೆಂಬ ಅವಿದ್ಯೆಯಿಂದ ಆಗಿರುವ ವ್ಯವಹಾರವು. ಇದಕ್ಕಾಗಿಯೇ ಶಾಸ್ತ್ರದ ಆದಿಯಲ್ಲಿ ವ್ಯವಹಾರವೆಲ್ಲವೂ ಆವಿದ್ಯಕವೆಂದು ಸಾಧಿಸುವ ಉಪೋದ್ಘಾತವನ್ನು ಭಾಷ್ಯಕಾರರು ಬರೆದಿರುವದು.
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨. ೨೧. ಅದ್ರಶ್ಯಾದಿಗುಣಗಳುಳ್ಳವನು (ಪರಮೇಶ್ವರನೇ), ಏಕೆಂದರೆ (ಅವನ) ಧರ್ಮಗಳನ್ನು ಹೇಳಿದೆ.
ವಿಷಯವೂ ಸಂಶಯವೂ
(ಭಾಷ್ಯ) ೧೯೬. “ಅಥ ಪರಾ ಯಯಾ ತದಕ್ಷರಮಧಿಗಮ್ಯತೇ’’ (ಮುಂ. ೧-೧-೫) “ಯತ್ ತದಡೇಶ್ಯಮಗ್ರಾಹ್ಯಮಗೋತ್ರಮವರ್ಣಮಚಕ್ಷುಶೋತ್ರಂ ತದಪಾಣಿ ಪಾದಮ್ 1 ನಿತ್ಯಂ ವಿಭುಂ ಸರ್ವಗತಂ ಸುಸೂಕ್ಷ್ಮಂ ತದವ್ಯಯಂ ಯದ್ಯತಯೋನಿಂ ಪರಿಪಶ್ಯನಿ ಧೀರಾಃ’ (ಮುಂ. ೧-೧-೬) ಇತಿ ಶೂಯತೇ | ತತ್ರ ಸಂಶಯಃ - ಕಿಮಯಮ್ ಅದ್ರಶ್ಯತ್ಯಾದಿಗುಣಕೋ ಭೂತಯೋನಿಃ ಪ್ರಧಾನಂ ಸ್ಯಾತ್, ಉತ ಶಾರೀರಃ, ಆಹೋಸ್ಟಿತ್ ಪರಮೇಶ್ವರಃ ಇತಿ 11
(ಭಾಷ್ಯಾರ್ಥ) “ಇನ್ನು ಪರ(ವಿದ್ಯ) ; ಇದರಿಂದ ಆ ಅಕ್ಷರವನ್ನು ತಿಳಿಯುವದಕ್ಕಾಗುತ್ತದೆ” (ಮುಂ. ೧-೧-೫). “ಯಾವ ಆ (ಅಕ್ಷರವು) ಅದೃಶ್ಯವಾದದ್ದು, ಅಗ್ರಾಹ್ಯವು, ಅಗೋತ್ರವು, ಅವರ್ಣವು, ಅಚಕ್ಷುಸ್ತೋತ್ರವು, ಅದು ಅಪಾಣಿಪಾದವು, ನಿತ್ಯವು, ವಿಭು, ಸರ್ವಗತವು, ಸುಸೂಕ್ಷ್ಮವು, ಅದು ಅವ್ಯಯವಾದದ್ದು. ಯಾವ (ಈ) ಭೂತ ಯೋನಿಯನ್ನು ಧೀರರು ಎಲ್ಲೆಲ್ಲಿಯೂ ಕಾಣುತ್ತಾರೆ” (ಮುಂ. ೧-೧-೬) ಎಂದು ಶ್ರುತಿಯಲ್ಲಿದೆ. ಅಲ್ಲಿ ಈ ಅದೃಶ್ಯಾದಿಗುಣವುಳ್ಳ ಭೂತಯೋನಿಯು ಪ್ರಧಾನ ವಾಗಿರಬಹುದೆ, ಅಥವಾ ಶಾರೀರನೆ, ಇಲ್ಲವೆ ಪರಮೇಶ್ವರನೆ ? - ಎಂಬುದು ಸಂಶಯವು.
ಪೂರ್ವಪಕ್ಷ ಈ ಭೂತಯೋನಿಯು ಪ್ರಧಾನ, ಅಥವಾ ಜೀವ
(ಭಾಷ್ಯ) ೧೯೭. ತತ್ರ ಪ್ರಧಾನಮ್ ಅಚೇತನಂ ಭೂತಯೋನಿಃ ಇತಿ ಯುಕ್ತಮ್ | ಅಚೇತನಾನಾಮೇವ ತದ್ದಷ್ಮಾನ ಉಪಾದಾನಾತ್, ‘ಯಥರ್ಣನಾಭಿಃ ಸೃಜತೇ ಗೃಹ್ಮತೇ ಚ ಯಥಾ ಪೃಥಿವ್ಯಾಮೋಷಧಯಃ ಸಂಭವನ್ತಿ | ಯಥಾ ಸತಃ ಪುರುಷಾತ್ ಕೇಶಿಮಾನಿ ತಥಾಕ್ಷರಾತ್ ಸಂಭವತೀಹ ವಿಶ್ವಮ್ ” (ಮುಂ. ೧-೧-೭)
- ‘ಅದ್ರಶ್ಯಮ್’ ಎಂಬ ಮಾತು ‘ಅದೃಶ್ಯಮ್’ ಎಂಬುದಕ್ಕೆ ವೈದಿಕರೂಪ.
ಅಧಿ. ೬. ಸೂ. ೨೧] ಈ ಭೂತಯೋನಿಯು ಪ್ರಧಾನ, ಅಥವಾ ಜೀವ
೩೫
ಇತಿ | ನನು ಊರ್ಣನಾಭಿಃ ಪುರುಷಶ್ಚ ಚೇತನೌ ಇಹ ದೃಷ್ಯಾವನ ಉಪಾತ್ತ 1ನೇತಿ ಬೂಮಃ 1ನಹಿ ಕೇವಲಸ್ಯ ಚೇತನಸ್ಯ ತತ್ರ ಸೂತ್ರಯೋನಿತ್ವಂ ಕೇಶಲೋಮ ಯೋನಿತ್ವಂ ಚಾಸ್ತಿ | ಚೇತನಾಧಿಷ್ಠಿತಂ ಹಿ ಅಚೇತನಮ್ ಊರ್ಣನಾಭಿಶರೀರಂ ಸೂತ್ರಸ್ಯ ಯೋನಿಃ | ಪುರುಷಶರೀರಂ ಚ ಕೇಶಲೋಮ್ಯಾಮ್ ಇತಿ ಪ್ರಸಿದ್ಧಮ್ | ಅಪಿ ಚ ಪೂರ್ವತ್ರ ಅದೃಷ್ಟಶ್ವಾದ್ಯಭಿಲಾಪಸಂಭವೇಪಿ ದ್ರಷ್ಟತ್ವಾದ್ಯಭಿಲಾಪಾಸಂಭವಾತ್ ನ ಪ್ರಧಾನಮ್ ಅಭ್ಯುಪಗತಮ್ | ಇಹ ತು ಅದೃಶ್ಯತ್ವಾದಯೋ ಧರ್ಮಾಃ ಪ್ರಧಾನೇ ಸಂಭವನ್ತಿ ! ನ ಚಾತ್ರ ವಿರುಧ್ಯಮಾನೋ ಧರ್ಮಃ ಕಶ್ಚಿತ್ ಅಭಿಲಪ್ಯತೇ | ನನು ‘ಯಃ ಸರ್ವಜ್ಞಃ ಸರ್ವವಿತ್’’ (ಮುಂ. ೧-೧-೯) ಇತ್ಯಯಂ ವಾಕ್ಯಶೇಷಃ ಅಚೇತನೇ ಪ್ರಧಾನೇ ನ ಸಂಭವತಿ | ಕಥಂ ಪ್ರಧಾನಂ ಭೂತಯೋನಿಃ ಪ್ರತಿಜ್ಞಾಯತೇ ಇತಿ ? ಅಪ್ರೋಚ್ಯತೇ |‘ಯಯಾ ತದಕ್ಷರಮಧಿಗಮ್ಯತೇ’, ‘ಯತ್ತದದ್ರಶ್ಯಮ್’’ - ಇತಿ ಅಕ್ಷರಶಸ್ಸೇನ ಅದೃಶ್ಯಾದಿಗುಣಕಂ ಭೂತಯೋನಿಂ ಶ್ರಾವಯಿತ್ವಾ ಪುನರನ್ನೇ ಶ್ರಾವಯಿಷ್ಯತಿ - “ಅಕ್ಷರಾತ್ ಪರತಃ ಪರಃ’ (ಮುಂ. ೨-೧-೨) ಇತಿ | ತತ್ರ ಯಃ ಪರೋಕ್ಷರಾತ್ ಶ್ರುತಃ ಸ ಸರ್ವಜ್ಞಃ ಸರ್ವವಿತ್ ಸಂಭವಿಷ್ಯತಿ | ಪ್ರಧಾನಮೇವ ತು ಅಕ್ಷರಶಬ್ದ ನಿರ್ದಿಷ್ಟಂ ಭೂತಯೋನಿಃ | ಯದಾ ತು ಯೋನಿಶಬ್ಲೊ ನಿಮಿತ್ತವಾಚೀ, ತದಾ ಶಾರೀರೋSಪಿ ಭೂತಯೋನಿಃ ಸ್ಯಾತ್ | ಧರ್ಮಾಧರ್ಮಾಭ್ಯಾಂ ಭೂತಜಾತಸ್ಯ ಉಪಾರ್ಜನಾತ್ ಇತಿ ||
(ಭಾಷ್ಯಾರ್ಥ) ಇಲ್ಲಿ ಅಚೇತನವಾದ ಪ್ರಧಾನವೇ ಭೂತಯೋನಿ ಎಂಬುದು ಯುಕ್ತವು. ಏಕೆಂದರೆ “ಹೇಗೆ ಜೇಡರಹುಳು (ದಾರವನ್ನು ಸೃಷ್ಟಿಸುತ್ತಲೂ ಹಿಂತೆಗೆದು ಕೊಳ್ಳುತ್ತಲೂ ಇರುವದೂ, ಹೇಗೆ ಪೃಥಿವಿಯಲ್ಲಿ ಗಿಡಮರಗಳು ಉಂಟಾಗುವವೋ, ಹೇಗೆ ಇರುವ ಮನುಷ್ಯನಿಂದ ಕೇಶಗಳೂ ಲೋಮಗಳೂ ಹುಟ್ಟುವವೋ, ಹಾಗೆ ಅಕ್ಷರ ದಿಂದ ಇಲ್ಲಿ ಎಲ್ಲವೂ ಉಂಟಾಗುತ್ತದೆ’ (ಮುಂ. ೧-೧-೭) ಎಂದು ಅಚೇತನವಾದ (ವಸ್ತುಗಳನ್ನೇ) ಆ (ಭೂತಯೋನಿ)ಗೆ ದೃಷ್ಟಾಂತವಾಗಿ ತೆಗೆದುಕೊಂಡಿದೆ.’
(ಆಕ್ಷೇಪ) :- ಜೇಡರಹುಳು ಮತ್ತು ಮನುಷ್ಯ (ಎಂಬ) ಚೇತನ (ವಸ್ತು)ಗಳನ್ನೇ ಇಲ್ಲಿ ದೃಷ್ಟಾಂತವಾಗಿ ತೆಗೆದುಕೊಂಡಿದೆಯಲ್ಲ !
(ಪರಿಹಾರ) :- ಇಲ್ಲವೆನ್ನುತ್ತೇವೆ. ಏಕೆಂದರೆ ಆ (ದೃಷ್ಟಾಂತ)ದಲ್ಲಿ ಬರಿಯ ಚೇತನವು ದಾರಕ್ಕೆ ಕಾರಣವಾಗಿ ಅಥವಾ ಕೇಶಲೋಮಗಳಿಗೆ ಕಾರಣವಾಗಿ ಇರುವ ದಿಲ್ಲ. ಚೇತನಕ್ಕೆ ಒಳಪಟ್ಟ, ಅಚೇತನವಾದ ಜೇಡರಹುಳುವಿನ ಶರೀರವೇ ದಾರಕ್ಕೆ
- ಜಡದಿಂದ ಜಡವು ಹುಟ್ಟುವದಂಬುದು ಯುಕ್ತಿಯುಕ್ತವೂ ಆಗಿರುತ್ತದೆ ಎಂದು ಭಾವ.೩೧೨
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಕಾರಣವಾಗಿದೆ, ಮತ್ತು ಮನುಷ್ಯನ ಶರೀರವೇ ಕೇಶಲೋಮಗಳಿಗೆ (ಕಾರಣವು) ಎಂಬುದು ಪ್ರಸಿದ್ಧವಾಗಿರುತ್ತದೆ.
ಇದಲ್ಲದೆ ಹಿಂದಿನ (ಅಧಿಕರಣ)ದಲ್ಲಿ ಅದೃಷ್ಟಿತ್ವವೇ ಮುಂತಾದವನ್ನು ಹೇಳಿರುವದು ಹೊಂದಿದರೂ ದ್ರಷ್ಟತ್ವವೇ ಮುಂತಾದ (ವಿಶೇಷಣಗಳನ್ನು ) ಹೇಳಿರುವದು ಹೊಂದುವದಿಲ್ಲವಾದ್ದರಿಂದ ಪ್ರಧಾನವು (ಅಂತರ್ಯಾಮಿ ಎಂಬುದನ್ನು ಸಿದ್ಧಾಂತಿಯು) ಒಪ್ಪಲಿಲ್ಲ. ಇಲ್ಲಿಯಾದರೋ ಅದೃಶ್ಯಾದಿಧರ್ಮಗಳು ಪ್ರಧಾನಕ್ಕೆ ಹೊಂದುತ್ತವೆ ; (ಅದಕ್ಕೆ) ವಿರುದ್ಧವಾಗಿರುವ ಯಾವ ಧರ್ಮವನ್ನೂ ಇಲ್ಲಿ ಹೇಳಿರುವದೂ ಇಲ್ಲ.
(ಆಕ್ಷೇಪ) :- “ಯಾವನು ಸರ್ವಜ್ಞನೋ ಸರ್ವವಿತ್ತೋ” (ಮುಂ. ೧-೧-೯) ಎಂಬೀ ವಾಕ್ಯಶೇಷವು ಅಚೇತನವಾದ ಪ್ರಧಾನಕ್ಕೆ ಹೊಂದುವದಿಲ್ಲವಲ್ಲ ! (ಹೀಗಿರು ವಲ್ಲಿ) ಪ್ರಧಾನವು ಭೂತಯೋನಿ ಎಂದು ಹೇಗೆ ಹೇಳುತ್ತೀರಿ ?
(ಪರಿಹಾರ) :- ಇದಕ್ಕೆ ಹೇಳುತ್ತೇವೆ. ಇದರಿಂದ ಆ ಅಕ್ಷರವನ್ನು ತಿಳಿಯುವದಕ್ಕಾಗುತ್ತದ” (ಮುಂ. ೧-೧-೫), “ಯಾವ ಅದು ಅದೃಶ್ಯವಾದದ್ದು’’ (ಮುಂ. ೧-೧-೬) ಎಂದು ಅಕ್ಷರಶಬ್ದದಿಂದ ಅದೃಶ್ಯವೇ ಮುಂತಾದ ಗುಣಗಳುಳ್ಳ ಭೂತಯೋನಿಯನ್ನು ಹೇಳಿ, ಮತ್ತೆ ಕೊನೆಯಲ್ಲಿ ಹೆಚ್ಚಿನ ಅಕ್ಷರಕ್ಕಿಂತ ಹೆಚ್ಚಿನವನು” (ಮುಂ. ೨-೧-೨) ಎಂದು ಹೇಳಲಾಗಿದೆ. ಅಲ್ಲಿ ಅಕ್ಷರಕ್ಕಿಂತ ಹೆಚ್ಚಿನವನು ಎಂದು ಯಾರನ್ನು ಹೇಳಿದೆಯೋ ಅವನು ಸರ್ವಜ್ಞನೂ ಸರ್ವವಿತ್ತೂ ಆಗಲಿ ; ಆದರ (ಈ) ಅಕ್ಷರಶಬ್ದದಿಂದ ತಿಳಿಸಿರುವ ಭೂತಯೋನಿಯು ಪ್ರಧಾನವೇ (ಸರಿ).
ಯಾವಾಗಲಾದರೆ ಯೋನಿ ಎಂಬ ಶಬ್ದವು ನಿಮಿತ್ತವಾಚಕವೆಂದು (ಅಂಗೀಕರಿಸು ವವೋ)’ ಆಗ ಶಾರೀರನೂ ಭೂತಯೋನಿಯಾಗಬಹುದು. ಏಕೆಂದರೆ (ಅವನು ತನ್ನ ) ಧರ್ಮಾಧರ್ಮಗಳಿಂದ ಭೂತಸಮೂಹವನ್ನು ಸಂಪಾದಿಸಿಕೊಳ್ಳುತ್ತಾನೆ.
ಸಿದ್ಧಾಂತ : ಈ ಭೂತಯೋನಿಯು ಪರಮೇಶ್ವರನೇ, ಏಕೆಂದರೆ ಅವನ ಧರ್ಮಗಳನ್ನು ಹೇಳಿದೆ
(ಭಾಷ್ಯ) ೧೯೮, ಏವಂ ಪ್ರಾಪ್ತ ಅಭಿಧೀಯತೇ | ಯೋsಯಮ್ ಅದೃಶ್ಯತ್ವಾದಿ 1. ಇದುವರೆಗೆ ಅದು ಉಪಾದಾನವಾಚಕವೆಂದೇ ಇಟ್ಟುಕೊಂಡಿದೆ. 2. ಜೀವರುಗಳು ಮಾಡಿದ ಧರ್ಮಾಧರ್ಮಗಳ ಫಲವಾಗಿ ಜಗತ್ತು ಉಂಟಾಗಿದೆ ಎಂದು
ಭಾವ.
ಅಧಿ. ೬. ಸೂ. ೨೧] ಇಲ್ಲಿ ಪರಮೇಶ್ವರ ಧರ್ಮಗಳನ್ನು ಹೇಳಿದೆ
೩೧೬
ಗುಣಕೋ ಭೂತಯೋನಿಃ, ಸ ಪರಮೇಶ್ವರ ಏವ ಸ್ಮಾತ್, ನಾನ್ಯಃ ಇತಿ | ಕಥಮೇತತ್ ಅವಗಮ್ಯತೇ ? ಧರ್ಮೊಕ್ಕೆ 1 ಪರಮೇಶ್ವರಸ್ಯ ಹಿ ಧರ್ಮ; ಇಹ ಉಚ್ಯಮಾನೋ ದೃಶ್ಯತೇ - “ಯಃ ಸರ್ವಜ್ಞಃ ಸರ್ವವಿತ್” (ಮುಂ. ೧-೧-೯) ಇತಿ | ನ ಹಿ ಪ್ರಧಾನಸ್ಯ ಅಚೇತನಸ್ಯ ಶಾರೀರಸ್ಯ ವಾ ಉಪಾಧಿಪರಿಚಿನ್ನದೃಷ್ಟಃ ಸರ್ವಜ್ಞತ್ವಂ ಸರ್ವವಿತ್ರಂ ವಾ ಸಂಭವತಿ | ನನು ಅಕ್ಷರಶಬ್ದ ನಿರ್ದಿಷ್ಮಾತ್ ಭೂತಯೋನೇ ಪರಸೈವ ತತ್ ಸರ್ವಜ್ಞತ್ವಂ ಸರ್ವವಿತ್ಯಂ ಚ ನ ಭೂತಯೋನಿವಿಷಯಮ್ ಇತ್ಯುಕ್ತಮ್ | ಅತ್ರೋಚ್ಯತೇ | ನೈವಂ ಸಂಭವತಿ | ಯತ್ಕಾರಣಂ “ಅಕ್ಷರಾತ್ ಸಂಭವತೀಹ ವಿಶ್ವಮ್’ (ಮುಂ. ೧-೧-೭) ಇತಿ ಪ್ರಕೃತಂ ಭೂತಯೋನಿಮ್ ಇಹ ಜಾಯಮಾನಪ್ರಕೃತಿನ ನಿರ್ದಿಶ್ಯ ಅನನ್ತರ ಮಪಿ ಜಾಯಮಾನಪ್ರಕೃತಿತ್ತೇನೈವ ಸರ್ವಜ್ಞಂ ನಿರ್ದಿಶತಿ - “ ಯಃ ಸರ್ವಜ್ಞಃ ಸರ್ವ ವಿದ್ಯಸ್ಯ ಜ್ಞಾನಮಯಂ ತಪಃ | ತಸ್ಮಾದೇತದ್ ಬ್ರಹ್ಮ ನಾಮ ರೂಪಮನ್ನಂ ಚ ಜಾಯತೇ” (ಮುಂ. ೧-೧-೯) ಇತಿ | ತಸ್ಮಾತ್ ನಿರ್ದಶಸಾಮ್ಮೇನ ಪ್ರತ್ಯಭಿ ಜ್ಞಾಯಮಾನತ್ವಾತ್ ಪ್ರಕೃತವ ಅಕ್ಷರಸ್ಯ ಭೂತಯೋನೇ ಸರ್ವಜ್ಞತ್ವಂ ಸರ್ವವಿ೦ಚ ಧರ್ಮಃ ಉಚ್ಯತೇ ಇತಿ ಗಮ್ಯತೇ |“ಅಕ್ಷರಾತ್ ಪರತಃ ಪರಃ” (ಮುಂ. ೨-೧-೨) ಇತ್ಯಾಪಿ ನ ಪ್ರಕೃತಾತ್ ಭೂತ ಯೋನೇಃ ಅಕ್ಷರಾತ್ ಪರಃ ಕಶ್ಚಿತ್ ಅಭಿಧೀಯತೇ | ಕಥಮೇತತ್ ಅವಗಮ್ಯತೇ ? “ಯೇನಾಕ್ಷರಂ ಪುರುಷಂ ವೇದ ಸತ್ಯಂ ಪ್ರೋವಾಚ ತಾಂ ತತೋ ಬ್ರಹ್ಮವಿದ್ಯಾಮ್’ (ಮುಂ. ೧-೨-೧೩) ಇತಿ ಪ್ರಕೃತ್ಯ ತವಾಕ್ಷರಸ್ಯ ಭೂತಯೋನೇ ಅದೃಶ್ಯತಾದಿಗುಣಕಸ್ಯ ವಕ್ತವ್ಯನ ಪ್ರತಿಜ್ಞಾ ತತ್ವಾತ್ | ಕಥಂ ತರ್ಹಿ ಅಕ್ಷರಾತ್ ಪರತಃ ಪರಃ’ ಇತಿ ವ್ಯಪದಿಶ್ಯತೇ ಇತಿ ? ಉತ್ತರ ಸೂತ್ರ ತದ್ ವಕ್ಸಾಮಃ ||
(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ (ಇದಕ್ಕೆ ಹೀಗೆಂದು) ಹೇಳು ತೇವೆ. ಅದೃಶ್ಯತ್ವವೇ ಮುಂತಾದ ಗುಣಗಳುಳ್ಳ ಯಾವ ಈ ಭೂತಯೋನಿಯನ್ನು ಹೇಳಿದೆಯೋ) ಇವನು ಪರಮೇಶ್ವರನೇ ಆಗಬೇಕೇ ಹೊರತು ಮತ್ತೊಬ್ಬ(ನಾಗ) ಲಾರನು. ಇದು ಹೇಗೆ ನಿಶ್ಚಯವಾಗುತ್ತದೆ ? ಎಂದರೆ (ಅವನ) ಧರ್ಮ ಗಳನ್ನು ಹೇಳಿರುವದರಿಂದ. “ಯಾವನು ಸರ್ವಜ್ಞ ಸರ್ವವಿತ್ತೋ’’ (ಮುಂ. ೧-೧-೯) ಎಂದು ಪರಮೇಶ್ವರನ ಧರ್ಮವನ್ನಲ್ಲವೆ, ಇಲ್ಲಿ ಹೇಳಿರುವದು ಕಂಡುಬರುತ್ತದೆ ? ಅಚೇತನವಾದ ಪ್ರಧಾನಕ್ಕಾಗಲಿ, ಉಪಾಧಿಯ ಅಳತೆಗೆ ಕಟ್ಟು
೩೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. ಬಿದ್ದಿರುವ ದೃಷ್ಟಿಯುಳ್ಳ ಶಾರೀರನಿಗಾಗಲಿ ಸರ್ವಜ್ಞತ್ವವು ಅಥವಾ ಸರ್ವವಿತ್ಯವು ಹೊಂದುವಹಾಗಿಲ್ಲವಷ್ಟ ?
(ಪೂರ್ವಪಕ್ಷಿ) :- ಅಕ್ಷರಶಬ್ದದಿಂದ ಹೇಳಿರುವ ಭೂತಯೋನಿಗಿಂತಲೂ ಹೆಚ್ಚಿನವನಾದ (ಬೇರೊಬ್ಬನಿಗೇ ಈ) ಸರ್ವಜ್ಞತ್ವವನ್ನೂ ಸರ್ವವಿತ್ರ್ಯವನ್ನೂ (ಹೇಳಿದೆ, ಅದು) ಭೂತಯೋನಿಯ ವಿಷಯವಲ್ಲ - ಎಂದು (ನಾವು) ಹೇಳಿದ್ದೆ ವಲ್ಲ !
(ಸಿದ್ಧಾಂತ) :- ಹೀಗೆ ಹೊಂದುವದಿಲ್ಲ. ಯಾವ ಕಾರಣದಿಂದ ಎಂದರೆ, “ಅಕ್ಷರದಿಂದ ಇಲ್ಲಿ ಎಲ್ಲವೂ ಉಂಟಾಗುತ್ತದೆ” (ಮುಂ. ೧-೧-೭) ಎಂದು ಪ್ರಕೃತ ನಾಗಿರುವ ಭೂತಯೋನಿಯನ್ನು ಹುಟ್ಟುವದಕ್ಕೆಲ್ಲ ಮೂಲಕಾರಣವೆಂದು ತಿಳಿಸಿ, ಆ ಬಳಿಕವೂ “ಯಾವನು ಸರ್ವಜ್ಞನೋ ಸರ್ವವಿತ್ತೋ ಯಾವನ ತಪಸ್ಸು ಜ್ಞಾನಮಯ ವಾಗಿರುವದೋ, ಆತನಿಂದ ಈ ಬ್ರಹ್ಮವೂ ನಾಮವೂ ರೂಪವೂ ಅನ್ನವೂ ಉಂಟಾ ಗುತ್ತದೆ’ (ಮುಂ. ೧-೧-೯) ಎಂದು ಸರ್ವಜ್ಞನನ್ನೂ ಹುಟ್ಟುವದಕ್ಕೆಲ್ಲ ಮೂಲ ಕಾರಣವಂದೇ (ಶ್ರುತಿಯು) ತಿಳಿಸುತ್ತದೆ. ಆದ್ದರಿಂದ (ಹೀಗೆ) ನಿರ್ದಶವು ಸಮಾನ ವಾಗಿರುವದರಿಂದ ಅದೇ ಎಂದು ಗುರುತಿಸಬಹುದಾದ್ದರಿಂದ ಪ್ರಕೃತವಾಗಿರುವ ಅಕ್ಷರವೆಂಬ ಭೂತಯೋನಿಗೇ ಸರ್ವಜ್ಞತ್ವವೂ ಸರ್ವವಿತ್ಯವೂ ಧರ್ಮವೆಂದು ಹೇಳಿದೆ ಎಂದು ಗೊತ್ತಾಗುತ್ತದೆ.
“ಹೆಚ್ಚಿನ ಅಕ್ಷರಕ್ಕಿಂತ ಹೆಚ್ಚಿನವನಾಗಿರುವ’ (ಮುಂ. ೨-೧-೨) ಎಂಬ ಲ್ಲಿಯೂ ಪ್ರಕೃತವಾಗಿರುವ ಭೂತಯೋನಿಯಾದ ಅಕ್ಷರಕ್ಕಿಂತ ಹೆಚ್ಚಿನವನಾದ ಯಾವನನ್ನೂ ಹೇಳಿರುವದಿಲ್ಲ. ಇದು ಹೇಗೆ ಗೊತ್ತು ? ಎಂದರೆ “ಯಾವದರಿಂದ ಸತ್ಯವಾಗಿರುವ ಅಕ್ಷರವೆಂಬ ಪುರುಷನನ್ನು ತಿಳಿಯುವನೋ ಆ ಬ್ರಹ್ಮವಿದ್ಯೆಯನ್ನು ತತ್ಯದಿಂದ ತಿಳಿಸಬೇಕು’(ಮುಂ. ೧-೨-೧೩) ಎಂದು ಪ್ರಾರಂಭಿಸಿ ಅದೃಶ್ಯತ್ವಾದಿ ಗುಣಗಳುಳ್ಳ ಅದೇ ಭೂತಯೋನಿಯನ್ನೇ ಹೇಳಲಾಗುವದೆಂದು ತಿಳಿಸಿರುವದರಿಂದ (ಹೀಗಂದು ಗೊತ್ತಾಗುತ್ತದೆ).
(ಆಕ್ಷೇಪ) :- “ಹೆಚ್ಚಿನ ಅಕ್ಷರಕ್ಕಿಂತಲೂ ಹೆಚ್ಚಿನವನು’ (ಮುಂ. ೨-೧-೨) ಎಂದು ಹೇಳಿರುವದು ಹೇಗೆ ?
-
ಸರ್ವಜ್ಞತ್ವವು ಎಂದರೆ ಎಲ್ಲವನ್ನೂ ಸಾಮಾನ್ಯವಾಗಿ ಅರಿಯುವದು, ಸರ್ವವಿತ್ರ್ಯವು ಎಂದರೆ ಒಂದೊಂದನ್ನೂ ಬೇರೆಬೇರೆಯಾಗಿ ಅರಿಯುವದು.
-
ಹುಟ್ಟುವದಕ್ಕೆ ಕಾರಣವಾಗಿರುವದಂದೇ ಎರಡು ಕಡೆಯಲ್ಲಿಯೂ ತಿಳಿಸಿರುವದರಿಂದ.
-
ಇಲ್ಲಿ ಅಕ್ಷರವೇ ಬೇರೆ, ಅದಕ್ಕಿಂತ ಹೆಚ್ಚಿನವನೇ ಬೇರ - ಎಂದು ಕಾಣುತ್ತದೆಯಲ್ಲ ! .. ಎಂದು ಶಂಕ.
ಅಧಿ. ೬. ಸೂ. ೨೧] ಪರವಿದ್ಯೆ ಎಂಬ ಹೆಸರೂ ಇದು ಬ್ರಹ್ಮವೆಂದು ತಿಳಿಸುತ್ತದೆ
(ಉತ್ತರ) :- ಇದನ್ನು ಮುಂದಿನ ಸೂತ್ರದಲ್ಲಿ ಹೇಳುವೆವು. ಪರವಿದ್ಯೆ ಎಂಬ ಹೆಸರೂ ಇದು ಬ್ರಹ್ಮವೆಂದು ತಿಳಿಸುತ್ತದೆ
(ಭಾಷ್ಯ) | ೧೯೯. ಅಪಿ ಚ ಅತ್ರ ದ್ವೇ ವಿದ್ಯೆ ವೇದಿತವೇ ಉಕ್ಕೇ ‘ಪರಾ ಚೈವಾಪರಾ ಚ’ (ಮುಂ. ೧-೧-೪) ಇತಿ | ತತ್ರ ಅಪರಾಮ್ ಋಗ್ವದಾದಿಲಕ್ಷಣಾಂ ವಿದ್ಯಾಮ್ ಉಕ್ಕಾ ಬ್ರವೀತಿ - “ಅಥ ಪರಾ ಯಯಾ ತದಕ್ಷರಮಧಿಗಮ್ಯತೇ” (ಮುಂ. ೧-೧-೫) ಇತ್ಯಾದಿ | ತತ್ರ ಪರಸ್ಮಾ ವಿದ್ಯಾಯಾ ವಿಷಯನ ಅಕ್ಷರಂ ಶ್ರುತಮ್ |‘ಯದಿ ಪುನಃ ಪರಮೇಶ್ವರಾತ್ ಅನ್ಯತ್ ಅದೃಶ್ಯತ್ಯಾದಿಗುಣಕಮ್ ಅಕ್ಷರಂ ಪರಿಕಲ್ಪಿತ, ನೇಯಂ ಪರಾ ವಿದ್ಯಾ ಸ್ಯಾತ್ | ಪರಾಪರವಿಭಾಗೋ ಹೈಯಂ ವಿದ್ಯಯೋಃ ಅಭ್ಯುದಯ ನಿಃಶ್ರೇಯಸಫಲತಯಾ ಪರಿಕಲ್ಪತೇ | ನ ಚ ಪ್ರಧಾನವಿದ್ಯಾ ನಿಃಶ್ರೇಯಸಫಲಾ ಕೇನ ಚಿತ್ ಅಭ್ಯುಪಗಮ್ಯತೇ | ತಿಸ್ತಶ್ಚ ವಿದ್ಯಾಃ ಪ್ರತಿಜ್ಞಾಯೇರನ್ ತ್ವತ್ಪಕ್ಷ, ಅಕ್ಷರಾತ್ ಭೂತಯೋನೇಃ ಪರಸ್ಯ ಪರಮಾತ್ಮನಃ ಪ್ರತಿಪಾದ್ಯಮಾನತ್ವಾತ್ |ದ್ವೇ ಏವ ತು ವಿದ್ಯೆ ವೇದಿತವೇ ಇಹ ನಿರ್ದಿಷ್ಟ | ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ” (ಮುಂ. ೧-೧-೩) ಇತಿ ಚ ಏಕವಿಜ್ಞಾನೇನ ಸರ್ವವಿಜ್ಞಾನಾಪೇಕ್ಷಣಂ ಸರ್ವಾತ್ಮಕೇ ಬ್ರಹ್ಮಣಿ ವಿವಕ್ಷಮಾಣೇ ಅವಕಲ್ಪತೇ ನ ಅಚೇತನಮಾತೃಕಾಯತನೇ ಪ್ರಧಾನೇ, ಭೋಗ್ಯವ್ಯತಿರಿಕ್ತ ವಾ ಭೋಕ್ತರಿ | ಅಪಿ ಚ “ಸ ಬ್ರಹ್ಮವಿದ್ಯಾಂ ಸರ್ವವಿದ್ಯಾಪ್ರತಿಷ್ಠಾಮಥರ್ವಾಯ ಜೇಷ್ಠಪುತ್ರಾಯ ಪ್ರಾಹ” ಇತಿ ಬ್ರಹ್ಮವಿದ್ಯಾರಿ ಪ್ರಾಧಾನ್ಯನ ಉಪಕ್ರಮ್ಮ ಪರಾಪರವಿಭಾಗೇನ ಪರಾಂ ವಿದ್ಯಾಮ್ ಅಕ್ಷರಾಧಿಗಮನೀಂ ದರ್ಶಯನ್ ತಸ್ಯಾ ಬ್ರಹ್ಮವಿದ್ಯಾತ್ವಂ ದರ್ಶಯತಿ | ಸಾ ಚ ಬ್ರಹ್ಮವಿದ್ಯಾಸಮಾಖ್ಯಾ ತದಧಿಗಮ್ಯಸ್ಯ ಅಕ್ಷರಸ್ಯ ಅಬ್ರಹ್ಮತ್ವ ಬಾಧಿತಾ ಸ್ಯಾತ್ | ಅಪರಾ ಋಗ್ವದಾದಿಲಕ್ಷಣಾ ಕರ್ಮವಿದ್ಯಾ ಬ್ರಹ್ಮವಿದ್ಯೋಪಕ್ರಮೇ ಉಪನ್ಯಸ್ಯತೇ ಬ್ರಹ್ಮವಿದ್ಯಾಪ್ರಶಂಸಾಯ | ‘ಪ್ಲವಾ ಹೃತೇ ಅದೃಢಾ ಯಜ್ಞರೂಪಾ ಅಷ್ಟಾದಶೋಕಮವರಂ ಯೇಷು ಕರ್ಮ | ಏತಚ್ಛೇಯೋ ಯೇಭಿನವ್ವನಿ ಮೂಢಾ ಜರಾಮೃತ್ಯುಂ ತೇ ಪುನರೇವಾಪಿ ಯನ್ನಿ” (ಮುಂ. ೧-೨-೭) ಇವಮಾದಿನಿನ್ಹಾ ವಚನಾತ್, ನಿತ್ಯಾ ಚ ಅಪರಾರಿ ವಿದ್ಯಾಂ ತತೋ ವಿರಕ್ತಸ್ಯ ಪರವಿದ್ಯಾಧಿಕಾರಂ ದರ್ಶಯತಿ - “ಪರೀಕ್ಷ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ ನಿರ್ವದಮಾಯಾನ್ನಾಕೃತಃ ಕೃತೇನ ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್ ಸಮಿತ್ರಾಣಿಃ ಸ್ತೋತ್ರಿಯಂ ಬ್ರಹ್ಮನಿಷ್ಠಮ್ ||” (ಮುಂ. ೧-೨-೧೨) ಇತಿ ||
೩೧೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
(ಭಾಷ್ಯಾರ್ಥ) ಇದೂ ಅಲ್ಲದೆ, ಇಲ್ಲಿ ‘ಪರ’ ಮತ್ತು ‘ಅಪರ’ ಎಂದು ಎರಡು ವಿದ್ಯೆಗಳನ್ನು ತಿಳಿಯಬೇಕೆಂದು (ಮುಂ. ೧-೧-೪) ಹೇಳಿದೆ. ಇವುಗಳಲ್ಲಿ ಋಗ್ವದಾದಿರೂಪವಾದ ಅಪರವಿದ್ಯೆಯನ್ನು ಹೇಳಿ “ಇನ್ನು ಪರವಿದ್ಯೆ, ಅದರಿಂದ ಆ ಅಕ್ಷರವನ್ನು ತಿಳಿಯುವದಕ್ಕಾಗುತ್ತದೆ” (ಮುಂ. ೧-೧-೫) ಎಂದು ಮುಂತಾಗಿ ಹೇಳಿರುತ್ತದೆ. ಇಲ್ಲಿ ಪರವಿದ್ಯೆಗೆ ವಿಷಯವೆಂದು ಅಕ್ಷರವನ್ನು ಹೇಳಿರುತ್ತದೆ. (ಹೀಗಿರುವಲ್ಲಿ) ಪರಮೇಶ್ವರ ನಿಗಿಂತ ಬೇರೆ (ಯಾವದೋ ಒಂದು) ಅದೃಶ್ಯತ್ಯಾದಿಗುಣವುಳ್ಳ ಅಕ್ಷರವು ಎಂದು ಕಲ್ಪಿಸುವದಾದರೆ, ಇದು ಪರವಿದ್ಯಯಾಗಲಾರದು. ಹೇಗಂದರೆ ವಿದ್ಯೆಗಳನ್ನು ಪರ, ಅಷದ - ಎಂದು (ವಿಂಗಡಿಸುವ) ಈ ವಿಭಾಗವನ್ನು ಅಭ್ಯುದಯ, ನಿಃಶ್ರೇಯಸ - ಎಂಬ ಫಲಕ್ಕಲ್ಲವೆ, ಕಲ್ಪಿಸಿರುವದು ? ಪ್ರಧಾನವಿಗೆ ನಿಃಶ್ರೇಯಸವು ಫಲವೆಂದು ಯಾರೂ ಒಪ್ಪಿರುವದಿಲ್ಲ. (ಪೂರ್ವಪಕ್ಷಿಯಾದ) ನಿನ್ನ ಪಕ್ಷದಲ್ಲಿ ಮೂರು ವಿದ್ಯಗಳನ್ನು (ಹೇಳುತ್ತೇವೆಂದು) ಪ್ರತಿಜ್ಞೆ ಮಾಡಿದಂತೆ ಆಗುತ್ತದೆ ! ಏಕೆಂದರೆ ಅಕ್ಷರವೆಂಬ ಭೂತ ಯೋನಿಗಿಂತ ಹೆಚ್ಚಿನ ಪರಮಾತ್ಮನನ್ನು (ಮುಂದ) ತಿಳಿಸಲಾಗುತ್ತದ (ಎಂಬುದು ನಿನ್ನ ಪಕ್ಷವು). ಆದರೆ ಎರಡೇ ವಿದ್ಯಗಳು ತಿಳಿಯತಕ್ಕವು ಎಂದು ಇಲ್ಲಿ ತಿಳಿಸಿರುತ್ತದೆ.
ಮತ್ತು ‘‘ಪೂಜ್ಯನೆ, ಯಾವದನ್ನು ಅರಿತುಕೊಂಡರೆ ಇದೆಲ್ಲವನ್ನೂ ಅರಿತದ್ದಾಗುವದು ?” (ಮುಂ. ೧-೧-೩) ಎಂದು ಒಂದರ ಅರಿವಿನಿಂದ ಎಲ್ಲದರ ಅರಿವನ್ನೂ ಬಯಸಿರುವದು ಸರ್ವಾತ್ಮಕವಾದ ಬ್ರಹ್ಮವನ್ನು ಹೇಳಬೇಕೆಂದಿದ್ದರೆ ಸರಿಯಾಗುತ್ತದೆಯೇ ಹೊರತು ಅಚೇತನಮಾತ್ರಕ್ಕೆ ಒಂದೇ ಆಶ್ರಯವಾಗಿರುವ ಪ್ರಧಾನವನ್ನಾಗಲಿ ಭೋಗ್ಯವ್ಯತಿರಿಕ್ತವಾದ ಭೋಕ್ತವನ್ನಾಗಲಿ (ಹೇಳಬೇಕೆಂದಿದ್ದರೆ ಸರಿಯಾಗುವ)ದಿಲ್ಲ. ಇದಲ್ಲದೆ “ಆತನು ಎಲ್ಲಾ ವಿದ್ಯೆಗಳಿಗೂ ಪ್ರತಿಷ್ಠೆಯಾಗಿರುವ ಬ್ರಹ್ಮವಿದ್ಯೆಯನ್ನು ಅಥರ್ವನೆಂಬ ಹಿರಿಯಮಗನಿಗೆ ಹೇಳಿಕೊಟ್ಟನು’’ (ಮುಂ. ೧-೧ ೧) ಎಂದು ಬ್ರಹ್ಮವಿದ್ಯೆಯನ್ನೇ ಮುಖ್ಯವಾಗಿ ಪ್ರಾರಂಭಿಸಿ, (ವಿದ್ಯಗಳನ್ನು ) ಪರ, ಅಪರ - ಎಂದು ವಿಂಗಡಿಸಿ ಪರವಿದ್ಯೆಯು ಅಕ್ಷರವನ್ನು ತಿಳಿಸಿಕೊಡುತ್ತದೆ ಎಂದು ತಿಳಿಸಿರುವದರಿಂದ ಆ (ಪರವಿದ್ಯೆಯು) ಬ್ರಹ್ಮವಿದ್ಯೆ - ಎಂದು ತಿಳಿಸಿದಂತಾಗಿದೆ. ಆ ಬ್ರಹ್ಮವಿದ್ಯೆ ಎಂಬ ಸಮಾಖ್ಯೆಯು ಆ (ವಿದ್ಯೆಯಿಂದ) ತಿಳಿಯಬರುವದು
-
‘ತತ್ಪಕ್ಷ’ ಎಂಬ ಮಾತು ಹಿಂದಿನ ವಾಕ್ಯಕ್ಕೂ ಮುಂದಿನ ವಾಕ್ಯಕ್ಕೂ ಸಮವಾಗಿಯೇ ಅನ್ವಯವಾಗುವಂತೆ ಇದೆ.
-
ಒಂದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುವದೆಂಬುದೂ ಇದು ಬ್ರಹ್ಮವಂಬದಕ್ಕೆ ಒಂದು ಗುರುತು.
ಅಧಿ. ೬. ಸೂ. ೨೧] ದೃಷ್ಟಾಂತಬಲದಿಂದ ಬ್ರಹ್ಮವನ್ನು ನಿರಾಕರಿಸುವದು ಸರಿಯಲ್ಲ ೩೧೭
ಬ್ರಹ್ಮವಲ್ಲದೆಹೋದರೆ ಬಾಧಿತವಾಗುವದು. ಋಗ್ವದಾದಿರೂಪವಾದ ಅವರ (ವಿದ್ಯೆಯಾದ) ಕರ್ಮವಿದ್ಯೆಯನ್ನು ಬ್ರಹ್ಮವಿದ್ಯೆಯ ಮೊದಲಲ್ಲಿ, (ಆ) ಬ್ರಹ್ಮವಿದ್ಯೆ ಯನ್ನು ಹೊಗಳುವದಕ್ಕಾಗಿ ಹೇಳಿದೆ (ಎನ್ನಬೇಕು). ಏಕೆಂದರೆ ಈ ಹದಿನೆಂಟು ಯಜ್ಞರೂಪಗಳು ಹಗುರವಾಗಿರುವವು, ಗಟ್ಟಿಯಲ್ಲ, ಅವುಗಳಲ್ಲಿ ಕೀಳುಕರ್ಮವು ಉಕ್ತವಾಗಿರುತ್ತದೆ. ಇದನ್ನು ಶ್ರೇಯಸ್ಸೆಂದು ಯಾವ ಮೂಢರು ಹಿಗ್ಗುವರೋ ಅವರು ಜರಾಮೃತ್ಯುವನ್ನು ಮತ್ತೆ ಹೊಂದುವರು’ (ಮುಂ. ೧-೨-೩) ಎಂದು ಮುಂತಾಗಿ (ಕರ್ಮವನ್ನು ) ನಿಂದಿಸಿರುವ ವಚನವು (ಅಲ್ಲಿರುತ್ತದೆ). ಮತ್ತು ಅಪರವಿದ್ಯೆಯನ್ನು ನಿಂದಿಸಿ ಅದರಲ್ಲಿ ವಿರಕ್ತನಾದವನಿಗೇ ಪರವಿದ್ಯೆಯಲ್ಲಿ ಅಧಿಕಾರವೆಂಬುದನ್ನು ‘‘ಕರ್ಮದಿಂದ ಆಗಿರುವ ಲೋಕಗಳನ್ನು ಪರೀಕ್ಷಿಸಿ ಬ್ರಾಹ್ಮಣನು ‘ಅಕೃತವಾದದ್ದು ಕೃತದಿಂದ ಆಗುವದಿಲ್ಲ’ ಎಂದು ನಿರ್ವದವನ್ನು ಹೊಂದಬೇಕು. ಅದನ್ನು ಅರಿಯು ವದಕ್ಕಾಗಿ ಅವನು ಸಮಿತ್ಪಾಣಿಯಾಗಿ ಪ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಗುರುವನ್ನೇ ಬಳಿಸಾರಬೇಕು’’ (ಮುಂ. ೧-೨-೧೨) ಎಂದು ತಿಳಿಸಿರುತ್ತದೆ.?
ದೃಷ್ಟಾಂತಬಲದಿಂದ ಬ್ರಹ್ಮವನ್ನು ನಿರಾಕರಿಸುವದು ಸರಿಯಲ್ಲ
(ಭಾಷ್ಯ) ೨೦೦. ಯತ್ತು ಉಕ್ತಮ್ ಅಚೇತನಾನಾಂ ಪೃಥಿವ್ಯಾದೀನಾಂ ದೃಷ್ಯಾವನೋ ಪಾದಾನಾತ್ ದಾರ್ಷ್ಮಾಕೇನಾಪಿ ಅಚೇತನೇನ ಭೂತಯೋನಿನಾ ಭವಿತವ್ಯಮ್ ಇತಿ | ತತ್ ಅಯುಕ್ತಮ್ | ನ ಹಿ ದೃಷ್ಟಾನ್ನದಾರ್ಷ್ಯಾನಿಕಯೋಃ ಅತ್ಯನ್ತಸಾಮ್ಮನ ಭವಿತವ್ಯಮ್ ಇತಿ ನಿಯಮೋಸ್ತಿ | ಅಪಿ ಚ ಸ್ಫೂಲಾಃ ಪೃಥಿವ್ಯಾದಯಃ ದೃಷ್ಯಾವನ ಉಪಾತ್ತಾ: ಇತಿ ನ ಸ್ಕೂಲ ಏವ ದಾರ್ಷ್ಮಾಕೋ ಭೂತಯೋನಿಃ ಅಭ್ಯುವಗಮ್ಯತೇ | ತಸ್ಮಾತ್ ಅದೃಶ್ಯತ್ಯಾದಿಗುಣಕೋ ಭೂತಯೋನಿಃ ಪರಮೇಶ್ವರ ಏವ ||
(ಭಾಷ್ಯಾರ್ಥ) ಇನ್ನು ಅಚೇತನವಾದ ಪೃಥಿವಿಯೇ ಮುಂತಾದವುಗಳನ್ನು ದೃಷ್ಟಾಂತವಾಗಿ ತೆಗೆದುಕೊಂಡಿರುವದರಿಂದ ದಾರ್ಷ್ಯಾಂತಿಕವಾದ ಭೂತಯೋನಿಯೂ ಅಚೇತನ ವಾಗಿರಬೇಕು ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ. ಅದು ಅಯುಕ್ತವು. ಏಕೆಂದರೆ
-
ಬ್ರಹ್ಮವಿದ್ಯೆ ಎಂಬ ಸಮಾಖ್ಯೆಯೂ ಪರವಿದ್ಯೆಗೆ ವಿಷಯವಾದ ಭೂತಯೋನಿಯು ಬ್ರಹ್ಮವೇ ಎಂಬುದನ್ನು ತಿಳಿಸುತ್ತದೆ.
-
ಆದ್ದರಿಂದ ಬ್ರಹ್ಮವಿದ್ಯೆಯನ್ನು ಹೊಗಳುವದಕ್ಕೆ ಅಪರವಿದ್ಯಯಾದ ಕರ್ಮವಿದ್ಯೆಯನ್ನು ಇಲ್ಲಿ ಪ್ರಸ್ತಾಪಿಸಿದ ಎಂದಾಯಿತು.
೩೧೮
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ದೃಷ್ಟಾಂತದಾರ್ಷ್ಮಾಂತಿಕಗಳಿಗೆ ಅತ್ಯಂತವಾಗಿ ಹೋಲಿಕೆಯೇ ಇರಬೇಕೆಂಬ ನಿಯಮ ವಿರುವದಿಲ್ಲ. ಇದಲ್ಲದೆ ಪೃಥಿವಿಯ ಮುಂತಾದ ಸ್ಕೂಲ (ಪದಾರ್ಥ)ಗಳನ್ನು ದೃಷ್ಟಾಂತವಾಗಿ ತೆಗೆದುಕೊಂಡಿರುತ್ತದೆ ಎಂಬ (ಕಾರಣದಿಂದ) ಭೂತಯೋನಿಯೂ ಸ್ಕೂಲವೇ (ಆಗಿರಬೇಕೆಂದು ನೀವೂ) ಒಪ್ಪುವದಿಲ್ಲ. ಆದ್ದರಿಂದ ಅದೃಶ್ಯತ್ವವೇ
ಮುಂತಾದ ಗುಣಗಳುಳ್ಳ ಭೂತಯೋನಿಯು ಪರಮೇಶ್ವರನೇ.
ವಿಶೇಷಣಭೇದವ್ಯಪದೇಶಾಭ್ಯಾಂ ಚ ನೇತರಾ ||೨೨|| ೨೨. ವಿಶೇಷಣಭೇದವ್ಯಪದೇಶಗಳಿಂದ ಮಿಕ್ಕ ಎರಡೂ ಅಲ್ಲ (ವೆನ್ನ ಬೇಕು).
ಜೀವನೂ ಪ್ರಧಾನವೂ ಭೂತಯೋನಿಯಲ್ಲವೆಂಬುದೇಕೆ ?
(ಭಾಷ್ಯ) ೨೦೧. ಇತಶ್ಚ ಪರಮೇಶ್ವರ ಏವ ಭೂತಯೋನಿಃ, ನೇತರ ಶಾರೀರಃ ಪ್ರಧಾನಂ ವಾ | ಕಸ್ಮಾತ್ ?. ವಿಶೇಷಣಭೇದವ್ಯಪದೇಶಾಭ್ಯಾಮ್ | ವಿಶಿನಷ್ಟಿ ಹಿ ಪ್ರಕೃತಂ ಭೂತಯೋನಿಂ ಶಾರೀರಾತ್ ವಿಲಕ್ಷಣನ - ‘‘ದಿವ್ಯೂ ಹ್ಯಮೂರ್ತಃ ಪುರುಷಃ ಸ ಬಾಹ್ಯಾಭ್ಯನ್ನರೋ ಹ್ಮಜಃ | ಅಪ್ರಾಣೋ ಹೈಮನಾಃ ಶುಭ್ರ’’ (ಮುಂ. ೨-೧-೨) ಇತಿ | ನ ತತ್ ದಿವ್ಯತ್ವಾದಿವಿಶೇಷಣಮ್ ಅವಿದ್ಯಾಪ್ರತ್ಯುಪಸ್ಥಾಪಿತನಾಮರೂಪ ಪರಿಚ್ಛೇದಾಭಿಮಾನಿನಃ ತದ್ಧರ್ಮಾನ್ ಸ್ಟಾತ್ಮನಿ ಕಲ್ಪಯತಃ ಶಾರೀರಸ್ಯ ಉಪ ಪದ್ಯತೇ | ತಸ್ಮಾತ್ ಸಾಕ್ಷಾತ್ ಔಪನಿಷದಃ ಪುರುಷಃ ಇಹ ಉಚ್ಯತೇ | ತಥಾ ಪ್ರಧಾನಾದಪಿ ಪ್ರಕೃತಂ ಭೂತಯೋನಿಂ ಭೇದೇನ ವ್ಯವದಿಶತಿ - “ಅಕ್ಷರಾತ್ ಪರತಃ ಪರಃ” (ಮುಂ. ೨-೧-೨) ಇತಿ | ಅಕ್ಷರಮ್ ಅವ್ಯಾಹೃತಂ ನಾಮರೂಪಬೀಜ ಶಕ್ತಿರೂಪಮ್ ಭೂತಸೂಕ್ಷ್ಮಮ್ ಈಶ್ವರಾಶ್ರಯಮ್ ತವ ಉಪಾಧಿಭೂತಮ್ ಸರ್ವಸ್ಮಾತ್ ವಿಕಾರಾತ್ ಪರಃ ಯೋSವಿಕಾರಃ, ತಸ್ಮಾತ್ ಪರತಃ ಪರಃ ಇತಿ ಭೇದೇನ ವ್ಯಪದೇಶಾತ್ ಪರಮಾತ್ಮಾನಮ್ ಇಹ ವಿವಕ್ಷಿತಂ ದರ್ಶಯತಿ ನಾತ್ರ ಪ್ರಧಾನಂ ನಾಮ
-
ಇದ್ದರೆ ದೃಷ್ಟಾಂತ, ದಾರ್ಷ್ಮಾಂತಿಕ - ಎಂಬ ಭೇದವೇ ಇಲ್ಲವಾಗುತ್ತದೆ.
-
ಒಪ್ಪಿದರೆ ಪ್ರಧಾನವು ಕಾರ್ಯಗಳಲ್ಲಕ್ಕಿಂತಲೂ ಸೂಕ್ಷ್ಮವಾಗಿರುವ ಅವ್ಯಕ್ತವೆಂಬ ಸಿದ್ಧಾಂತವು ಹೋಗಬೇಕಾಗುವದು. ಆದ್ದರಿಂದ ಕಾರ್ಯಕಾರಣಗಳಿಗೆ ಸಾಲಕ್ಷಣವೇ ಇರಬೇಕಾದ ದ್ವಿಲ್ಲವೆಂಬುದನ್ನು ತಿಳಿಸುವಮಟ್ಟಿಗೆ ದೃಷ್ಟಾಂತವನ್ನುಪಯೋಗಿಸಿದ ಎಂದು ಹೇಳುವದೇ ಯುಕ್ತ - ಎಂದು ಭಾವ.
ಅಧಿ. ೬. ಸೂ. ೨೨] ಜೀವನೂ ಪ್ರಧಾನವೂ ಭೂತಯೋನಿಯಲ್ಲವೆಂಬುದೇಕೆ ? ೩೧೯ ಕಿಂಚಿತ್ ಸ್ವತಂ ತಮ್ ಅಭ್ಯುಪಗಮ್ಮ ತಸ್ಮಾದ್ ಭೇದವ್ಯಪದೇಶಃ ಉಚ್ಯತೇ | ಕಿಂ ತರ್ಹಿ ಯದಿ ಪ್ರಧಾನಮಪಿ ಕಲ್ಪಮಾನಂ ಶ್ರುತ್ಯವಿರೋಧೇನ ಅವ್ಯಾಕೃತಾದಿ ಶಬ್ದ ವಾಚ್ಯಂ ಭೂತಸೂಕ್ಷ್ಮಂ ಪರಿಕಲ್ಪಿತ ಪರಿಕಲ್ಪತಾಮ್ | ತಸ್ಮಾದ್ ಭೇದ ವ್ಯಪದೇಶಾತ್ ಪರಮೇಶ್ವರೋ ಭೂತಯೋರ್ನಿ ಇತ್ಯೇತತ್ ಇಹ ಪ್ರತಿಪಾದ್ಯತೇ ||
(ಭಾಷ್ಯಾರ್ಥ) ಈ (ಕಾರಣ)ದಿಂದಲೂ ಪರಮೇಶ್ವರನೇ ಭೂತಯೋನಿಯು ; ಬೇರೆಯವ ರಲ್ಲ, ಎಂದರೆ ಶಾರೀರನಾಗಲಿ ಪ್ರಧಾನವಾಗಲಿ (ಅಲ್ಲ). ಏಕೆ ? ಎಂದರೆ ವಿಶೇಷಣ ಭೇದವ್ಯಪದೇಶಗಳಿ (ರುವದ)ರಿಂದ. ಹೇಗೆಂದರೆ, ಪ್ರಕೃತವಾಗಿರುವ ಭೂತ ಯೋನಿಯು ಶಾರೀರನಿಗಿಂತ ಬೇರೆಯ ಸ್ವಭಾವದವನೆಂಬ ವಿಶೇಷಣವನ್ನು (ಶ್ರುತಿಯು) ಕೊಟ್ಟಿರುತ್ತದೆ. “ದಿವ್ಯನು, ಏಕೆಂದರೆ ಅಮೂರ್ತನಾದ ಪುರುಷನು, ಒಳಗುಹೊರಗುಗಳಿಂದ ಕೂಡಿ ಅಜನಾಗಿರುವವನು, ಅಪ್ರಾಣನು, ಅಮನನು, ಶುಭನು’ (ಮುಂ. ೨-೧-೨) ಎಂದು (ಹೇಳಿದ). ಈ ದಿವ್ಯತ್ವವೇ ಮುಂತಾದ ವಿಶೇಷಣವು ಅವಿದ್ಯೆಯು ತಂದೊಡ್ಡಿದ ನಾಮರೂಪಗಳ ಕಟ್ಟಿಗೆ ಅಭಿಮಾನಿಯಾಗಿ ಅದರ ಧರ್ಮಗಳನ್ನು ತನ್ನ ಆತ್ಮನಲ್ಲಿ ಕಲ್ಪಿಸಿಕೊಂಡಿರುವ ಶಾರೀರನಿಗೆ ಹೊಂದು ವದಿಲ್ಲವಷ್ಟೆ. ಆದ್ದರಿಂದ ಔಪನಿಷದಪುರುಷನನ್ನೇ ನೇರಾಗಿ ಇಲ್ಲಿ ಹೇಳಿರುತ್ತದೆ.
- ಇದರಂತ ಪ್ರಕೃತನಾಗಿರುವ ಭೂತಯೋನಿಯನ್ನು ಹೆಚ್ಚಿನ ಅಕ್ಷರಕ್ಕಿಂತ ಹೆಚ್ಚಿನವನು’ (ಮುಂ. ೨-೧-೨) ಎಂದು ಪ್ರಧಾನಕ್ಕಿಂತ ಬೇರೆ ಎಂದು ಹೇಳಿರುತ್ತದೆ. ಅಕ್ಷರವೆಂದರೆ ಈಶ್ವರನನ್ನು ಆಶ್ರಯಿಸಿಕೊಂಡು ಆತನಿಗೇ ಉಪಾಧಿಯಾಗಿರುವ ನಾಮ ರೂಪಗಳ ಬೀಜಶಕ್ತಿಯ ರೂಪವಾದ ಭೂತಸೂಕ್ಷ್ಮವಾದ ಅವ್ಯಾಹೃತವು(ತನ್ನ )
1.ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮರೂಪಗಳ ಕಾರ್ಯವಾದ ಶರೀರವನ್ನೇ ತಾನೆಂದು ತಿಳಿದಿರುವವನು ಶಾರೀರನು. ಅವನಿಗೆ ಶ್ರುತಿಯಲ್ಲಿ ಹೇಳಿದ ಯಾವ ವಿಶೇಷಣವೂ ಹೂಂದು
ವದಿಲ್ಲ.,
-
ಶಾರೀರನು ಅಹಂಪ್ರತ್ಯಯವಿಷಯನು ; ಅವನಿಗೂ ಸಾಕ್ಷಿಯಾಗಿರುವ ಆತ್ಮನು ಔಪನಿಷದಪುರುಷನು. ಭಾ. ಭಾ. ೫ಳನ್ನು ನೋಡಿ.
-
ಅವ್ಯಾಹೃತವೆಂದರೆ ಅವಿದ್ಯಾಶಕ್ತಿಯು, ಅದು ಅನೇಕವಾಗಿರುತ್ತದೆ. ಅದು ಈಶ್ವರಾಶ್ರಯ ವೆಂದರೆ ಜೀವನನ್ನು ಆಶ್ರಯಿಸಿ ಈಶ್ವರನನ್ನು ವಿಷಯವಾಗಿ ಮಾಡಿಕೊಂಡಿರುತ್ತದೆ ; ಜೀವರೂಪ ನಾದ ಈಶ್ವರನಿಗೇ ಅದು ಉಪಾಧಿಯಾಗಿರುವದು ಎಂದು ವಾಚಸ್ಪತಿಮಿಶ್ರರ ವ್ಯಾಖ್ಯಾನಪ್ರಸ್ಥಾನವು. ಇವರು ನಾನಾಜೀವವಾದಿಗಳು, ಚಿದ್ಘಾತುವಿನಲ್ಲಿಯ ಅವ್ಯಾಹೃತವು ಸಂಬಂಧಿಸಿರುವದರಿಂದ ಜೀವತ್ವವುಂಟಾಗಿದೆ ; ಆಶ್ರಯವೆಂದರ ವಿಷಯವೆಂಬ ವ್ಯಾಖ್ಯಾನವು ತಪ್ಪು ಎಂಬುದು ಏಕಜೀವ
೩೨೦
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಎಲ್ಲಾ ಕಾರ್ಯಗಳಿಗಿಂತಲೂ ಯಾವದು ಹೆಚ್ಚಿನದೂ, ಕಾರ್ಯವಲ್ಲವೋ, ಆ ಹೆಚ್ಚಿನ (ಅಕ್ಷರಕ್ಕಿಂತ)’ ಹೆಚ್ಚಿನದು - ಎಂದು ಬೇರೆಯಾಗಿ ತಿಳಿಸಿರುವದರಿಂದ ಪರಮಾತ್ಮನನ್ನೇ ಇಲ್ಲಿ ಹೇಳಬೇಕೆಂದಿರುವದು ಎಂದು ತಿಳಿಸಿರುತ್ತದೆ. ಇಲ್ಲಿ ಪ್ರಧಾನವೆಂಬ ಸ್ವತಂತ್ರವಾದ ಯಾವದೋ ಒಂದು ತತ್ವವನ್ನು ಒಪ್ಪಿ, ಅದಕ್ಕಿಂತ ಬೇರೆಯಾಗಿ ತಿಳಿಸಿದ ಎಂದು ಹೇಳಿಲ್ಲ’ ; ಮತ್ತೇನೆಂದರೆ ಪ್ರಧಾನವನ್ನು ಕಲ್ಪಿಸುವಾಗ ಶ್ರುತಿಗೆ ಅವಿರೋಧವಾಗಿ ಅವ್ಯಾಹೃತವೆಂಬ ಶಬ್ದದಿಂದ ಹೇಳಲ್ಪಡುವ ಭೂತಸೂಕ್ಷ್ಮವೆಂದು ಕಲ್ಪಿಸುವದಾದರೆ (ಅವಶ್ಯವಾಗಿ) ಕಲ್ಪಿಸಬಹುದು. ಅದಕ್ಕಿಂತ ಬೇರೆಯಾಗಿ ತಿಳಿಸಿರುವದರಿಂದ ಪರಮೇಶ್ವರನೇ ಭೂತಯೋನಿಯು ಎಂಬದನ್ನೇ ಇಲ್ಲಿ ಹೇಳಿರುತ್ತದೆ.
ರೂಪೋಪನ್ಯಾಸಾಚ್ಚ |೨೩|| ೨೩. ರೂಪವನ್ನು ಹೇಳಿರುವದರಿಂದಲೂ (ಭೂತಯೋನಿಯು ಪರಮೇಶ್ವರನೇ).
ಸರ್ವಾತ್ಮಕನಾಗಿರುವದರಿಂದಲೂ ಇದು ಪರಮೇಶ್ವರನೇ
ವೃತ್ತಿಕಾರರ ಮತ
(ಭಾಷ್ಯ) ೨೦೨. ಕುತಶ್ಚ ಪರಮೇಶ್ವರೋ ಭೂತಯೋನಿಃ ? (ರೂಪೋಪನ್ಯಾಸಾಚ್ಚ) 15
ವಾದಿಗಳ ಮತವು. ರತ್ನಪ್ರಭಾನ್ಯಾಯನಿರ್ಣಯವ್ಯಾಖ್ಯಾನಗಳನ್ನು ನೋಡಿ. ಈ ಮತಭೇದ ವಿಷಯಕ್ಕೆ ಪೀಠಿಕೆಯನ್ನು ನೋಡಿ.
-
‘ತಸ್ಮಾತ್ ಅಕ್ಷರಾತ್’ ಎಂದೇ ಭಾಷ್ಯಕಾರರು ಬರೆದಿದ್ದರೂ ಬರೆದಿರಬಹುದೆಂದು ತೋರುವದು.
-
ಹಾಗೆ ಹೇಳಿದ್ದರೆ ಶ್ರುತಿಗೆ ಪ್ರಧಾನವೂ ಸಮ್ಮತವೆಂಬ ಅನಿಷ್ಟಪ್ರಾಪ್ತಿಯಾಗುತ್ತಿತ್ತು. 3. ಭೂತಸೂಕ್ಷ್ಮವೆಂದರೆ ಲಯವಾಗಿರುವ ಭೂತಗಳ ಸಂಸ್ಕಾರವು.
-
ಅದರಲ್ಲಿ ಎಲ್ಲಾ ಕಾರ್ಯವೂ ಇದ್ದುಕೊಂಡಿರುವದರಿಂದ ಅದಕ್ಕೆ ‘ಪ್ರಧಾನ’ವೆಂಬ ಹೆಸರೂ ಇರಬಹುದು. ‘ಪ್ರಧೀಯತೇ ಅಸ್ಮಿತಿ ಪ್ರಧಾನಮ್’ ಎಂದು ವ್ಯುತ್ಪತ್ತಿಯು. ಅವ್ಯಾಕೃತದ ವಿಷಯಕ್ಕೆ ೧-೪-೩ರ ಭಾಷ್ಯವನ್ನು ನೋಡಿ.
-
ಅವತರಣಿಕೆಗೂ ಸೂತ್ರಕ್ಕೂ ಸಂಬಂಧವನ್ನು ತೋರಿಸುವದಕ್ಕಾಗಿ ಹೀಗೆ ಕಂಸದಲ್ಲಿ ಬರದುಕೊಂಡಿದೆ. ಅವತರಣಿಕೆಯ ವಾಕ್ಯಗಳನ್ನು ಬೇರೆ ಒಂದು ಸಾಲಿನಲ್ಲಿ ಬರೆಯುವದಕ್ಕಿಂತ ಹೀಗೆ ಭಾಷ್ಯದೊಡನೆ ಸೇರಿಸಿಕೊಳ್ಳುವದರಲ್ಲಿ ಸೌಕರ್ಯವು ತೋರಿದ ಕಡೆಗಳಲ್ಲೆಲ್ಲ ಹೀಗೆಯೇ ಬರದುಕೂಂಡಿದೆ.
ಅಧಿ. ೬. ಸೂ. ೨೩] ಇದು ಭೂತಯೋನಿಯ ರೂಪವೆಂಬುದಕ್ಕೆ ಗಮಕ
೩೨೧
ಅಪಿ ಚ - “ಅಕ್ಷರಾತ್ ಪರತಃ ಪರಃ’ (ಮುಂ. ೨-೧-೨) ಇತ್ಯಸ್ಯ ಅನನ್ತರಮ್ “ಏತಾಸ್ಮಾಜ್ಜಾಯತೇ ಪ್ರಾಣಃ’ (ಮುಂ. ೨-೧-೩) ಇತಿ ಪ್ರಾಣಪ್ರಧೃತೀನಾಂ ಪೃಥಿವೀಪರ್ಯನ್ಯಾನಾಂ ತತ್ಯಾನಾಂ ಸರ್ಗಮ್ ಉಕ್ಕಾ ತವ ಭೂತಯೋನೇಃ ಸರ್ವವಿಕಾರಾತ್ಮಕಂ ರೂಪಮ್ ಉಪನ್ಯಸ್ಯಮಾನಂ ಪಶ್ಯಾಮಃ - “ಅಗ್ನಿಮೂರ್ಧಾ ಚಕ್ಷುಷಿ ಚನ್ನಸೂರ್ಯೊ ದಿಶಃ ಪ್ರೋತೇ ವಾಗ್ವಿವೃತಾಶ್ಚ ವೇದಾಃ | ವಾಯುಃ ಪ್ರಾಣೋ ಹೃದಯಂ ವಿಶ್ವಮಸ್ಯ ಪದ್ಘಾಂ ಪೃಥಿವೀ ಹೇಷ ಸರ್ವಭೂತಾರಾತ್ಮಾ’ (ಮುಂ. ೨-೧-೪) ಇತಿ | ತಚ್ಚ ಪರಮೇಶ್ವರಸ್ಯೆವ ಉಚಿತಮ್ | ಸರ್ವವಿಕಾರ ಕಾರಣತ್ವಾತ್ 1 ನ ಶಾರೀರಸ್ಯ ತನುಮಹಿಮ್ಮ: | ನಾಪಿ ಪ್ರಧಾನಸ್ಯ ಅಯಂ ರೂಪೋಪ ವ್ಯಾಸಃ ಸಂಭವತಿ 1 ಸರ್ವಭೂತಾನ್ತರಾತ್ಮತ್ಯಾಸಂಭವಾತ್ | ತಸ್ಮಾತ್ ಪರಮೇಶ್ವರ ಏವ ಭೂತಯೋನಿಃ ನೇತರೇ ಇತಿ ಗಮ್ಯತೇ ||
(ಭಾಷ್ಯಾರ್ಥ) ಮತ್ತೂ ಏತರಿಂದ (ಈ) ಭೂತಯೋನಿಯು ಪರಮೇಶ್ವರನೇ (ಎನ್ನಬೇಕು) ? ಎಂದರೆ (ರೂಪೋಪನ್ಯಾಸದಿಂದ) .ಇದಲ್ಲದೆ ಹೆಚ್ಚಿನ ಅಕ್ಷರಕ್ಕಿಂತಲೂ ಹೆಚ್ಚಿನವನು’ (ಮುಂ. ೨-೧-೨) ಎಂಬಿದರ ಅನಂತರದಲ್ಲಿ ಇವನಿಂದ ಪ್ರಾಣನು ಹುಟ್ಟುತ್ತಾನೆ’’ (ಮುಂ. ೨-೧-೩) ಎಂದು ಪ್ರಾಣನೇ ಮುಂತಾಗಿ ಪೃಥಿವಿಯವರೆಗಿನ ತತ್ವಗಳ ಸೃಷ್ಟಿಯನ್ನು ಹೇಳಿ ಅದೇ ಭೂತಯೋನಿಗೆ ಸರ್ವಕಾರ್ಯಗಳ ಸ್ವರೂಪ ನಾಗಿರುವ ರೂಪವನ್ನು ಅಗ್ನಿಯು ಮೂರ್ಧವು, ಚಂದ್ರಸೂರ್ಯರು ಕಣ್ಣುಗಳು, ದಿಕ್ಕುಗಳು ಶೂತ್ರಗಳು, ವಿವರವಾದ ವೇದಗಳು ವಾಕ್ಕು, ವಾಯುವು ಪ್ರಾಣನು, ವಿಶ್ವವು ಈತನ ಹೃದಯವು, ಪೃಥಿವಿಯು ಪಾದಗಳಿಂದಾಗಿರುವದು - (ಹೀಗೆ) ಈತನು ಸರ್ವಭೂತಗಳಿಗೂ ಅಂತರಾತ್ಮನು’ (ಮುಂ.೩-೧-೪) ಎಂದು ತಿಳಿಸಿರುವದು ನಮಗೆ ಕಾಣಿಸುತ್ತದೆ. ಆ (ರೂಪವು) ಪರಮೇಶ್ವರನಿಗೇ ತಕ್ಕದ್ದಾಗಿರುತ್ತದೆ. ಏಕೆಂದರೆ (ಆತನು) ಎಲ್ಲಾ ಕಾರ್ಯಗಳಿಗೂ ಕಾರಣವಾಗಿರುತ್ತಾನೆ’ ; ಅಲ್ಪ ಮಹಿಮಯ ಶಾರೀರ ನಿಗೆ (ಇದು) ತಕ್ಕದ್ದಲ್ಲ. ಈ ರೂಪೋಪನ್ಯಾಸವು ಪ್ರಧಾನಕ್ಕೂ ಹೊಂದುವದಿಲ್ಲ, ಏಕೆಂದರೆ (ಅದು) ಸರ್ವಭೂತಗಳಿಗೂ ಅಂತರಾತ್ಮವೆಂಬುದು ಹೊಂದುವಹಾಗಿಲ್ಲ. ಆದ್ದರಿಂದ ಭೂತಯೋನಿಯು ಪರಮೇಶ್ವರನೇ ಹೊರತು ಮಿಕ್ಕೆರಡಲ್ಲ ಎಂದು ನಿಶ್ಚಯವಾಗುತ್ತದೆ.
- ಕಾರಣವೇ ಕಾರ್ಯರೂಪವಾಗಿರುತ್ತದೆಯಾದ್ದರಿಂದ ಭೂತಯೋನಿಯೇ ಅಗ್ನಾದಿಗಳ ರೂಪವಾಗಿರುತ್ತಾನೆ ಎಂದರ್ಥ.ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಇದು ಭೂತಯೋನಿಯ ರೂಪವೆಂಬುದಕ್ಕೆ ಗಮಕ
(ಭಾಷ್ಯ) ೨೦೩. ಕಥಂ ಪುನಃ ಭೂತಯೋನೇರಯಂ ರೂಪೋಪನ್ಯಾಸಃ ಇತಿ ಗಮ್ಯತೇ ? ಪ್ರಕರಣಾತ್ | ‘ಏಷಃ’ ಇತಿ ಚ ಪ್ರಕೃತಾನುಕರ್ಷಣಾತ್ | ಭೂತಯೋನಿಂ ಹಿ ಪ್ರಕೃತ್ಯ “ಏತಸ್ಮಾಜ್ಞಾಯತೇ ಪ್ರಾಣಃ”, (ಮುಂ. ೨-೧-೩) ‘ಏಷ ಸರ್ವಭೂತಾನ್ತರಾತ್ಮಾ” (ಮುಂ. ೨-೧-೪) ಇತಿ ವಚನಂ ಭೂತಯೋನಿವಿಷಯಮೇವ ಭವತಿ | ಯಥಾ ಉಪಾಧ್ಯಾಯಂ ಪ್ರಕೃತ್ಯ ಏತಸ್ಮಾದಧೀಷ್ಟ, ವಿಷ ವೇದವೇದಾಜ್ಞಪಾರಗಃ’ ಇತಿ ವಚನಮ್ ಉಪಾಧ್ಯಾಯವಿಷಯಂ ಭವತಿ ತದ್ವತ್ | ಕಥಂ ಪುನಃ ಅದೃಶ್ಯಾದಿ ಗುಣಕಸ್ಯ ಭೂತಯೋನೇಃ ವಿಗ್ರಹವದ್ರೂಪಂ ಸಂಭವತಿ ? ಸರ್ವಾತ್ಮತ್ವವಿವಕ್ಷಯಾ ಇದಮುಚ್ಯತೇ ನ ತು ವಿಗ್ರಹವತ್ಯವಿವಕ್ಷಯಾ ಇತಿ ಅದೋಷಃ | ಅಹಮನ್ನಮ್’ “ಅಹಮನ್ನಾದಃ’ (ತೈ. ೩-೧೦) ಇತ್ಯಾದಿವತ್ ||
(ಭಾಷ್ಯಾರ್ಥ) (ಪ್ರಶ್ನ) :- ಇದು ಭೂತಯೋನಿಯ ರೂಪದ ಉಪನ್ಯಾಸವೆಂದು ಹೇಗೆ ನಿಶ್ಚಯವಾಗುತ್ತದೆ ?
(ಉತ್ತರ) :- ಪ್ರಕರಣದಿಂದಲೂ ‘ಈತನು’ ಎಂದು ಪ್ರಕೃತವಾದದ್ದನ್ನು ಪರಾಮರ್ಶಿಸಿರುವದರಿಂದಲೂ (ಹೀಗೆಂದು ಗೊತ್ತಾಗುತ್ತದೆ). ಭೂತಯೋನಿಯ ಪ್ರಕರಣದಲ್ಲಿ “ಇವನಿಂದ ಪ್ರಾಣನು ಹುಟ್ಟುತ್ತಾನೆ’ (ಮುಂ. ೨-೧-೩), ‘ಈತನು ಸರ್ವಭೂತಗಳಿಗೂ ಅಂತರಾತ್ಮನು’ (ಮುಂ. ೨-೧-೪) ಎಂದು ಹೇಳಿರುವದು ಭೂತಯೋನಿವಿಷಯವುತಾನ, ಆಗಬೇಕು ? ಉಪಾಧ್ಯಾಯನ ಪ್ರಕರಣದಲ್ಲಿ “ಈತ ನಿಂದ (ವೇದವನ್ನು) ಕಲಿತುಕೊ, ಈತನು ವೇದವೇದಾಂಗಪಾರಗನು’ ಎಂದು ಹೇಳುವದು ಹೇಗೆ ಉಪಾಧ್ಯಾಯನ ವಿಷಯವೇ ಆಗಿರುವದೋ ಹಾಗೆಯೇ (ಇದು).
(ಆಕ್ಷೇಪ) :- ಅದೃಶ್ಯತ್ವವೇ ಮುಂತಾದ ಗುಣಗಳುಳ್ಳ ಭೂತಯೋನಿಗೆ ಶರೀರದಿಂದ ಕೂಡಿದ ರೂಪವು ಹೇಗೆ ಹೊಂದುತ್ತದೆ ?
(ಪರಿಹಾರ) :- ‘ನಾನು ಅನ್ನವು’, ‘ನಾನು ಅನ್ನಾದನು’ (ತೈ.೩-೧೦) ಎಂಬುದೇ ಮುಂತಾದದ್ದರಂತೆ (ಭೂತಯೋನಿಯು) ಸರ್ವಾತ್ಮನಾಗಿರುವನೆಂದು ತಿಳಿಸುವದಕ್ಕೆ ಇದನ್ನು ಹೇಳಿದೆಯೇ ಹೊರತು (ಇದಕ್ಕೆ) ಶರೀರವಿದೆ ಎಂಬುದನ್ನು ತಿಳಿಸುವದಕ್ಕಲ್ಲ. ಆದ್ದರಿಂದ ಇದು ದೋಷವಲ್ಲ.
೩೨೩
ಅಧಿ. ೬. ಸೂ. ೨೩] ರೂಪೋಪನ್ಯಾಸದ ವಿಷಯಕ್ಕೆ ಸಿದ್ಧಾಂತ
ರೂಪೋಪನ್ಯಾಸದ ವಿಷಯಕ್ಕೆ ಸಿದ್ಧಾಂತ
(ಭಾಷ್ಯ) ೨೦೪. ಅನ್ಯ ಪುನರ್ಮನನ್ನೇ - ನಾಯಂ ಭೂತಯೋನೇ ರೂಪೋಪನ್ಯಾಸಃ | ಜಾಯಮಾನನ ಉಪನ್ಯಾಸಾತ್ | ಏತಸ್ಮಾಜ್ಞಾಯತೇ ಪ್ರಾಣೋ ಮನಃ ಸರ್ವೆನ್ಸಿಯಾಣಿ ಚ | ಖಂ ವಾಯುರ್ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ’ (ಮುಂ. ೨-೧-೩) ಇತಿ ಹಿ ಪೂರ್ವತ್ರ ಪ್ರಾಣಾದಿಪೃಥಿವ್ಯಂ ತತ್ಯಜಾತಂ ಜಾಯಮಾನನ ನಿರದಿಕ್ಷತ್ | ಉತ್ತರಾಪಿ ಚ ತಸ್ಮಾದಗ್ನಿಃ ಸಮಿಧೋ ಯಸ್ಯ ಸೂರ್ಯಃ ’ (ಮುಂ.೨-೧-೫) ಇವಮಾದಿ “ಅತಶ್ಚ ಸರ್ವಾ ಓಷಧಯೋ ರಸಶ್ಚ’’ (ಮುಂ. ೨-೧-೯) ಇವಮನ್ವಂ ಜಾಯಮಾನತ್ತೇನೈವ ನಿರ್ದೆಕೃತಿ | ಇಹೈವ ಕಥಮ್ ಅಕಸ್ಮಾತ್ ಅನ್ನರಾಲೇ ಭೂತಯೋನೇ ರೂಪಮ್ ಉಪನ್ಯಸೇತ್ ? ಸರ್ವಾತ್ಮತ್ವಮಪಿ ಸೃಷ್ಟಿ೦ ಪರಿಸಮಾಪ್ಯ ಉಪದೇಕೃತಿ - “ಪುರುಷ ಏವೇದಂ ವಿಶ್ವಂ ಕರ್ಮ’’ (ಮುಂ. ೨-೧-೧೦) ಇತ್ಯಾದಿನಾ 1 ಶ್ರುತಿಸ್ಮತೋಶ್ಚ ತೈಲೋಕ್ಯಶರೀರಸ್ಯ ಪ್ರಜಾಪತೇಃ ಜನ್ಮಾದಿ ನಿರ್ದಿಶ್ಯಮಾನಮ್ ಉಪಲಭಾಮಹೇ - ‘‘ಹಿರಣ್ಯಗರ್ಭ: ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ | ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕ ದೇವಾಯ ಹವಿಷಾ ವಿಧೇಮ’ (ಋ. ೧೦-೧೨೧-೧) ಇತಿ | ಸಮವರ್ತತ ಇತಿ ಅಜಾಯತ ಇತ್ಯರ್ಥ: 1 ತಥಾ “ಸ ವೈಶರೀರೀ ಪ್ರಥಮಃಸ ವೈ ಪುರುಷ ಉಚ್ಯತೇ | ಆದಿಕರ್ತಾ ಸ ಭೂತಾನಾಂ ಬ್ರಹ್ಮಾಗ್ರೇ ಸಮವರ್ತತ’ (?)’ ಇತಿ ಚ | ವಿಕಾರಪುರುಷಸ್ಯಾಪಿ ಸರ್ವಭೂತಾನ್ತರಾತ್ಮತ್ವಂ ಸಂಭವತಿ | ಪ್ರಾಣಾತ್ಮನಾ ಸರ್ವ ಭೂತಾನಾಮ್ ಅಧ್ಯಾತ್ಮಮ್ ಅವಸ್ಥಾನಾತ್ | ಅಸ್ಮಿನ್ ಪಕ್ಷ ‘ಪುರುಷ ಏವೇದಂ ವಿಶ್ವಂ ಕರ್ಮ’ (ಮುಂ. ೨-೧-೧೦) ಇತ್ಯಾದಿ ಸರ್ವರೂಪೋಪನ್ಯಾಸಃ ಪರಮೇಶ್ವರ ಪ್ರತಿಪತ್ತಿಹೇತುಃ ಇತಿ ವ್ಯಾಖ್ಯ ಮ್ ||
(ಭಾಷ್ಯಾರ್ಥ) ಇನ್ನು ಕೆಲವರು ಅಭಿಪ್ರಾಯಪಡುವದೇನೆಂದರೆ : ಇದು ಭೂತಯೋನಿಯ
- ಈ ವಾಕ್ಯವು ಮಾರ್ಕಂಡೇಯಪುರಾಣದಲ್ಲಿರುವದಂದು ಕೆಲವರು ಶೋಧಿಸಿ ಕಂಡುಹಿಡಿದಿರುತ್ತಾರೆ ; ಆದರೆ ಆ ಪುರಾಣವನ್ನು ಆಚಾರ್ಯರು ಅಷ್ಟಾಗಿ ಭಾಷ್ಯದಲ್ಲಿ ಎಲ್ಲಿಯೂ ಉದಾಹರಿಸಿಲ್ಲ. ಇದು ಮುದ್ರಿತಪುಸ್ತಕದಲ್ಲಿ ಕಾಣದ ಇರುವ ಮನುಸ್ಮೃತಿವಾಕ್ಯವೋ ಮಹಾಭಾರತ
ದಲ್ಲಿದೆಯೋ ತಿಳಿಯದು.
- ಇದು ಭಾಷ್ಯಕಾರರ ಮತವಲ್ಲವೆಂದು ಕಲ್ಪತರುಪರಿಮಳದಲ್ಲಿ ಹೇಳಿರುವದು ಮೂಲವ್ಯಾಖ್ಯಾನವಾದ ಭಾಮತಿಗೂ ಮುಂಡಕೋಪನಿಷದ್ಭಾಷ್ಯಕ್ಕೂ ವಿರುದ್ಧವಾಗಿದೆ.
೩೨೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ರೂಪದ ಉಪನ್ಯಾಸವಲ್ಲ, ಏಕೆಂದರೆ (ಇದನ್ನು) ಹುಟ್ಟುವದೆಂದು ಹೇಳಿರುತ್ತದೆ.
ಅಪ್ಪು, ಎಲ್ಲವನ್ನೂ ಧರಿಸಿಕೊಂಡಿರುವ ಪೃಥಿವಿ - ಇವುಗಳೂ ಹುಟ್ಟುತ್ತವೆ’’ (ಮುಂ. ೨-೧-೩) ಎಂದಲ್ಲವೆ, (ಇದರ) ಹಿಂದೆ ಪ್ರಾಣನು ಮೊದಲಾಗಿ ಪೃಥಿವಿಯವರೆಗೆ ಇರುವ ತತ್ಸಮೂಹವನ್ನು ಹುಟ್ಟುವದೆಂದೇ ತಿಳಿಸಿರುತ್ತದೆ ? ಮುಂದೆಯೂ “ಯಾವನಿಗೆ ಸೂರ್ಯನೇ ಸಮಿತ್ತೋ ಆ ಅಗ್ನಿಯೂ ಆತನಿಂದಲೇ (ಹುಟ್ಟುತ್ತಾನೆ)” (ಮುಂ. ೨-೧-೫) ಎಂಬಲ್ಲಿಂದ “ಈತನಿಂದಲೇ ಎಲ್ಲಾ ಓಷಧಿಗಳೂ ರಸವೂ (ಆಗಿರುವವು)’’ (ಮುಂ.೨-೧-೯) ಎಂಬವರೆಗೂ (ಎಲ್ಲವನ್ನೂ) ಹುಟ್ಟುವದೆಂದೇ ತಿಳಿಸಲಾಗುತ್ತದೆ. (ಹೀಗಿರುವಲ್ಲಿ) ನಡುವೆ ಇಲ್ಲಿ ಮಾತ್ರ ತಟ್ಟನೆ ಹೇಗೆ ಭೂತ ಯೋನಿಯ ರೂಪವನ್ನು ತಿಳಿಸೀತು ? ಸೃಷ್ಟಿಯನ್ನು (ಹೇಳಿ) ಮುಗಿಸಿದ ಬಳಿಕ (ಭೂತಯೋನಿಯ) ಸರ್ವಾತ್ಮತ್ವವನ್ನೂ “ಕರ್ಮ…. ಇದೆಲ್ಲವೂ ಪುರುಷನೇ’ (ಮುಂ. ೨-೧-೧೦) ಎಂದು ಮುಂತಾಗಿ (ಮುಂದೆ) ಉಪದೇಶಿಸಲಾಗುತ್ತದೆ.’ ಮತ್ತು ಶ್ರುತಿಸ್ಕೃತಿಗಳಲ್ಲಿ ತೈಲೋಕ್ಯಶರೀರಿಯಾದ ಪ್ರಜಾಪತಿಗೆ ಜನ್ಮಾದಿಗಳನ್ನು ತಿಳಿಸಿರುವದನ್ನು ಕಾಣುತ್ತಿದ್ದೇವೆ - ‘‘ಹಿರಣ್ಯಗರ್ಭನು ಮೊದಲು ಉಂಟಾದನು ; ಹುಟ್ಟಿದವನಾಗಿ ಅವನು ಭೂತ(ಗಳ ಗುಂಪಿಗೆ) ತಾನೊಬ್ಬನೇ ಒಡೆಯನಾದನು. ಆತನು ಈ ಪೃಥಿವಿಯನ್ನೂ ಮತ್ತು ದ್ಯುಲೋಕವನ್ನೂ ಧರಿಸಿದನು. (ಆ) ಒಬ್ಬ ದೇವನಿಗೇ ಹವಿಸ್ಸಿನಿಂದ (ಪರಿಚರ್ಯೆಯನ್ನು) ಮಾಡುವವು” ಎಂದೂ (ಋ. ಸಂ. ೧೦-೧೨೧-೧) - ಇಲ್ಲಿ ಸಮವರ್ತತ ಎಂದರೆ ಹುಟ್ಟಿದನು ಎಂದರ್ಥ. ಹಾಗೆಯೇ
-
“ಅಗ್ನಿರ್ಮೂಧರ್ಾ” ಎಂಬುದು ಸರ್ವಾತ್ಮತ್ವವನ್ನು ಹೇಳುತ್ತದೆ ಎಂದು ಸಿದ್ಧವಾದರೆ, ಇದು ಪರಮಾತ್ಮಪ್ರಕರಣವಾದ್ದರಿಂದ ಮಂತ್ರದಲ್ಲಿರುವದು ಪರಮಾತ್ಮನ ರೂಪವರ್ಣನೆ ಎಂದು ಹೇಳಬಹುದು. ಪರಮಾತ್ಮನಿಂದ ಹುಟ್ಟುವ ವಸ್ತುವನ್ನು ಹೇಳಿದರೂ ಪರಮಾತ್ಮ ಪ್ರಕರಣಕ್ಕೆ ಬಾಧಕವಿಲ್ಲದಿರುವದರಿಂದ ಹಿಂದುಮುಂದಿನ ವಾಕ್ಯಗಳಿಗೆ ಅನುಗುಣವಾಗಿ ಭಾಷ್ಯ ಕಾರರು ವ್ಯಾಖ್ಯಾನಮಾಡಿರುತ್ತಾರೆ.
-
‘ಕ’ ಎಂಬುದಕ್ಕೆ ಪ್ರಜಾಪತಿಗೆ ಎಂಬ ಅರ್ಥವನ್ನು ನ್ಯಾಯನಿರ್ಣಯದಲ್ಲಿ ಹೇಳಿದೆ ; ಪ್ರಜಾಪತಿಗ ಎಂಬರ್ಥದಲ್ಲಿ ಕಶಬ್ದವು ಸರ್ವನಾಮವಲ್ಲದ್ದರಿಂದ ಏಕಸ್ಮ ಎಂಬುದರ ರೂಪಾಂತರವಿದೆಂದು ಭಾವಿಸಿ ರತ್ನಪ್ರಭಾವ್ಯಾಖ್ಯಾನದಲ್ಲಿ ಕೊಟ್ಟಿರುವ ಅರ್ಥವನ್ನು ನಾವು ಇಲ್ಲಿ ಹಾಕಿರುತ್ತೇವೆ. “ನಾವು ಹವಿಸ್ಸಿನಿಂದ ಆರಾಧಿಸುತ್ತಿರುವದು ಯಾವ ದೇವನನ್ನು ? (ಎಂದರೆ ಈತನನ್ನೇ)” ಎಂದೂ ಅಧ್ಯಾಹಾರಪೂರ್ವಕವಾಗಿ ಅರ್ಥವನ್ನು ಹೇಳಬಹುದೆಂದು ತೋರುತ್ತದೆ.
ಅಧಿ. ೭. ಸೂ. ೨೪]
ವಿಷಯವೂ ಸಂಶಯವೂ
೩೨೫
“ಆತನೇ ಮೊದಲನೆಯ ಶರೀರಿಯು, ಆತನೇ ಪುರುಷನೆನಿಸುತ್ತಾನೆ. ಭೂತಗಳಿಗೆ ಆದಿಕರ್ತನಾದ ಆ ಬ್ರಹ್ಮನು ಮೊದಲು ಉಂಟಾದನು’ (?) ಎಂದೂ ತೈಲೋಕ್ಯ ಶರೀರನಾದ ಪ್ರಜಾಪತಿಗೆ ಜನ್ಮವೇ ಮುಂತಾದದ್ದನ್ನು ಹೇಳಿರುವದು ನಮಗೆ ತೋರಿಬರುತ್ತದೆ. ಕಾರ್ಯಪುರುಷನಾದ (ಪ್ರಜಾಪತಿಗೂ) ಸರ್ವಭೂತಗಳಿಗೂ
ಅಂತರಾತ್ಮನಾಗಿರುವದೆಂಬುದು ಹೊಂದುತ್ತದೆ ; ಏಕೆಂದರೆ (ಅವನು) ಪ್ರಾಣರೂಪದಿಂದ ಎಲ್ಲ ಭೂತಗಳ ಅಧ್ಯಾತ್ಮದಲ್ಲಿರುತ್ತಾನೆ. ಈ ಪಕ್ಷದಲ್ಲಿ ‘‘ಕರ್ಮ…. ಇದೆಲ್ಲವೂ ಪುರುಷನೇ’’ (ಮುಂ. ೨-೧-೧೦) ಎಂದು ಮುಂತಾಗಿ ಸರ್ವರೂಪವುಳ್ಳವನೆಂದು ಹೇಳಿರುವದು ಪರಮೇಶ್ವರನೆಂದು ತಿಳಿಯುವದಕ್ಕೆ ಕಾರಣ(ವಾಗಿದೆ ಎಂದು ರೂಪೋಪನ್ಯಾಸಾಚ್ಚ ಎಂಬ ಸೂತ್ರಕ್ಕೆ) ವ್ಯಾಖ್ಯಾನವನ್ನು ಮಾಡಬೇಕು.
೭. ವೈಶ್ವಾನರಾಧಿಕರಣ (೨೪-೩೨) (ಛಾಂದೋಗ್ಯ ೫-೧೮-೧, ೨ ರಲ್ಲಿರುವ ವೈಶ್ವಾನರನು ಬ್ರಹ್ಮವೇ)
ವೈಶ್ವಾನರಃ ಸಾಧಾರಣಶಬ್ದ ವಿಶೇಷಾತ್ ||೨೪|| ೨೪. ವೈಶ್ವಾನರನು (ಬ್ರಹ್ಮವೇ), ಏಕೆಂದರೆ ಸಾಧಾರಣಶಬ್ದಗಳಿಗೆ ವಿಶೇಷವಿದೆ.
ವಿಷಯವೂ ಸಂಶಯವೂ
(ಭಾಷ್ಯ) ೨೦೫. “ಕೋ ನ ಆತ್ಮಾ ಕಿಂ ಬ್ರಹ್ಮ’” (ಛಾಂ. ೫-೧-೧) ಇತಿ,
1.ಹಿರಣ್ಯಗರ್ಭನಿಂದ ಹುಟ್ಟುವ ವಿರಾಟ್ಟುರುಷನಿಗೆ ಎಂದರ್ಥ. ಇಲ್ಲಿ ಹಿರಣ್ಯಗರ್ಭನನ್ನೂ ವಿರಾಟ್ಟುರುಷನನ್ನೂ ಒಂದೆಂದೇ ಭಾವಿಸಿದೆ ಎಂದು ತೋರುತ್ತದೆ.
2.ಸರ್ವಕರಣಾತ್ಮನಾಗಿ,
- ಪ್ರಾಣಿಗಳ ಶರೀರದಲ್ಲಿದ್ದುಕೊಂಡು ದ್ರಷ್ಟ, ಶೋತೃ, ಮಂತ್ರ, ವಿಜ್ಞಾತ - ಎಂದು ತೋರಿಕೊಳ್ಳುತ್ತಾನೆ ಎಂದರ್ಥ. ಶರೀರಕ್ಕೂ ನಿಜವಾದ ಆತ್ಮನಿಗೂ ನಡುವೆ ಇರುವದರಿಂದ ಲಿಂಗಶರೀರವು ಅಂತರಾತ್ಮನು ಎಂದು ಮುಂ. ಭಾ. ೨-೧-೯ರಲ್ಲಿ ವಿವರಿಸಿದೆ. ವಿರಾಟ್ಟುರುಷನು ಕೂಡ ಪರಮಾತ್ಮನಿಂದಲೇ ಹುಟ್ಟುತ್ತಾನೆ, ಪರಮಾತ್ಮಮಯನಾಗಿರುತ್ತಾನೆ ಎಂಬುದು ಮಂತ್ರದ
ಒಟ್ಟರ್ಥವು ಎಂದು ಭಾವ.
೩೨೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨. “ಆತ್ಮಾನಮೇವೇಮಂ ವೈಶ್ವಾನರಂ ಸಂಪ್ರತ್ಯಷಿ ತಮೇವ ನೋ ಬ್ರೂಹಿ” (ಛಾಂ. ೫-೧೧-೬) ಇತಿ ಚ ಉಪಕ್ರಮ್ಮ ದ್ಯುಸೂರ್ಯವಾಯಾಕಾಶವಾರಿಪೃಥಿವೀನಾಂ ಸುತೇಜಸ್ಯಾದಿಗುಣಯೋಗಮ್ ಏಕೈಕೋಪಾಸನನಿನ್ಗಯಾ ಚ ವೈಶ್ವಾನರಂಪ್ರತಿ ವಿಷಾಂ ಮೂರ್ಧಾದಿಭಾವಮ್ ಉಪದಿಶ್ಯ ಆಮ್ಮಾಯತೇ - “ಯಸ್ಕೃತಮೇವಂ ಪ್ರಾದೇಶಮಾತ್ರಮಭಿವಿಮಾನಮಾತ್ಮಾನಂ ವೈಶ್ವಾನರಮುಪಾಸ್ತೆ ಸ ಸರ್ವೆಷು ಲೋಕೇಷು ಸರ್ವೆಷು ಭೂತೇಷು ಸರ್ವೆಷ್ಟಾತ್ಮಸ್ವನ್ನಮತಿ | ತಸ್ಯ ಹ ವಾ ಏತಸ್ಯಾSSತ್ಮನೋ ವೈಶ್ವಾನರಸ್ಯ ಮೂರ್ಧವ ಸುತೇಜಾಶ್ಚಕ್ಷುರ್ವಿಶ್ವರೂಪಃ ಪ್ರಾಣಃ ಪೃಥಗ್ವರ್ತ್ಮಾತ್ಮಾ ಸಂದೇಹೋ ಬಹು ಬಸ್ತಿರೇವ ರಯಿಃ ಪೃಥಿವ ಪಾದಾವುರ ಏವ ವೇದಿರ್ಲೊಮಾನಿ ಬರ್ಹಿಹ್ರದಯಂ ಗಾರ್ಹಪತ್ಯೋ ಮನೋನ್ಸಾಹಾರ್ಯ ಪಚನ ಆಸ್ಯಮಾಹವನೀಯಃ’ (ಛಾಂ. ೫-೧೮-೧, ೨) ಇತ್ಯಾದಿ | ತತ್ರ ಸಂಶಯಃ - ಕಿಂ ವೈಶ್ವಾನರಶಚ್ಚನ ಜಾಠರೋಗ್ನಿಃ ಉಪದಿಶ್ಯತೇ, ಉತ ಭೂತಾಗ್ನಿಃ, ಅಥ ತದಭಿಮಾನಿ ದೇವತಾ, ಅಥವಾ ಶಾರೀರ ಆಹೋಸ್ಟಿತ್ ಪರಮೇಶ್ವರಃ ಇತಿ | ಕಿಂ ಪುನರತ್ರ ಸಂಶಯಕಾರಣಮ್ ? ವೈಶ್ವಾನರಃ ಇತಿ ಜಾಠರಭೂತಾಗ್ನಿದೇವತಾನಾಂ ಸಾಧಾರಣಶಬ್ದ ಪ್ರಯೋಗಾತ್, ಆತ್ಮಾಇತಿ ಚ ಶಾರೀರಪರಮೇಶ್ವರಯೋಃ | ತತ್ರ ಕಸ್ಯ ಉಪಾದಾನಂ ನ್ಯಾಯ್ಯಮ್, ಕಸ್ಯ ವಾ ಹಾನಮ್ ? ಇತಿ ಭವತಿ ಸಂಶಯಃ ||
(ಭಾಷ್ಯಾರ್ಥ)
ತಿರುವ ; (ಆದ್ದರಿಂದ) ಅವನನ್ನೇ ನಮಗೆ ಹೇಳು’ (ಛಾಂ. ೫-೧೧-೬) ಎಂದೂ ಉಪಕ್ರಮಿಸಿ ದ್ಯುಲೋಕ, ಸೂರ್ಯ, ವಾಯು, ಆಕಾಶ, ಅಪ್ಪು, ಪೃಥಿವಿ - ಇವು ಗಳಿಗೆ ಸುತೇಜಸ್ಯವೇ ಮುಂತಾದ ಗುಣಗಳ ಸಂಬಂಧವನ್ನೂ ಒಂದೊಂದನ್ನೇ (ಬೇರೆಯಾಗಿ) ಉಪಾಸನೆಮಾಡುವದನ್ನು ನಿಂದಿಸಿ ವೈಶ್ವಾನರನಿಗೆ ಇವು ಮೂರ್ಧಾದಿ ಗಳಾಗಿರುವವೆಂಬುದನ್ನೂ ಉಪದೇಶಿಸಿ “ಆದರೆ ಯಾವಾತನು ಈ ಹೀಗಿರುವ
1.ಸುನೇಜ, ವಿಶ್ವರೂಪತ್ವ, ಪೃಥರ್ಗ್ಯಾತ್ಮತ್ವ, ಬಹುಲ, ರಯಿತ್ವ, ಪ್ರತಿಷ್ಠಾತೃತ್ವ - ಎಂಬ ಗುಣಗಳನ್ನು. ಮುಂದೆ ಉದಾಹರಿಸಿರುವ ಶ್ರುತಿಯ ಅನುವಾದದ ಟಿಪ್ಪಣಿಯಲ್ಲಿ ಇವು ಗಳನ್ನು ವಿವರಿಸಿದೆ.
ಮಾಡುತ್ತಿದ್ದ ದ್ಯುಲೋಕಾದಿಗಳು ವೈಶ್ವಾನರನಿಗೆ ಅವಯವಮಾತ್ರವಾಗಿರುವದರಿಂದ ಈ ಒಂದೂಂದು ಅವಯವವನ್ನೇ ಪೂರ್ಣವೈಶ್ವಾನರನೆಂದು ನೀವು ಉಪಾಸನೆಮಾಡುತ್ತಿದ್ದು
ಅಧಿ. ೭. ಸೂ. ೨೪] ಪೂ. ಪ. ವೈಶ್ವಾನರನೆಂದರೆ ಅಗ್ನಿ, ದೇವತೆ ಅಥವಾ ಶರೀರ
೩೨೭
ಪ್ರಾದೇಶಮಾತ್ರನಾದ, ಅಭಿವಿಮಾನನಾದ’ ಆತ್ಮನಾದ, ವೈಶ್ವಾನರನನ್ನು ಉಪಾಸನೆ ಮಾಡುತ್ತಾನೋ, ಅವನು ಸರ್ವಲೋಕಗಳಲ್ಲಿಯೂ ಸರ್ವಭೂತಗಳಲ್ಲಿಯೂ ಸರ್ವ
ಆತ್ಮನಾದ ವೈಶ್ವಾನರನಿಗೆ ಸುತೇಜವು ಮೂರ್ಧವೇ, ವಿಶ್ವರೂಪನು ಕಣ್ಣು, ಪೃಥಗ್ವರ್ತ್ಮಾತ್ಮನು ಪ್ರಾಣವು, ಬಹುಲವು ಸಂದೇಹವು, ರಯಿಯು’ ಬಸ್ತಿಯೇ ಪೃಥಿವಿಯೇ ಪಾದಗಳು ; ವೇದಿಯ ಎದೆಯು, ಲೋಮಗಳು ಬರ್ಹಿಯು ಗಾರ್ಹಪತ್ಯವು ಹೃದಯವು, ಅನ್ನಾಹಾರ್ಯಪಚನವು ಮನಸ್ಸು, ಆಹವನೀಯವು ಮುಖವು’ (ಛಾಂ. ೫-೧೮-೨) ಎಂದು ಮುಂತಾಗಿ ಶ್ರುತಿಯಲ್ಲಿ ಹೇಳಿದೆ.
ಇಲ್ಲಿ ಸಂಶಯವೇನೆಂದರೆ ವೈಶ್ವಾನರ ಎಂಬ ಶಬ್ದದಿಂದ ಹೊಟ್ಟೆಯಲ್ಲಿರುವ ಅಗ್ನಿಯನ್ನು ಉಪದೇಶಿಸಿದೆಯೆ, ಇಲ್ಲದಿದ್ದರೆ ಭೂತಾಗ್ನಿಯನ್ನು, ಇಲ್ಲವೆ ಅದಕ್ಕೆ ಅಭಿಮಾನಿಯಾದ ದೇವತೆಯನ್ನು, ಅಥವಾ ಶಾರೀರನನ್ನು, ಅದಲ್ಲದಿದ್ದರೆ ಪರಮೇಶ್ವರನನ್ನು (ಉಪದೇಶಿಸಿಯ) ?
(ಪ್ರಶ್ನೆ) :- ಇಲ್ಲಿ ಸಂಶಯಕ್ಕೆ ಕಾರಣವಾದರೂ ಏನು ?
‘ವೈಶ್ವಾನರ’ ಎಂಬ ಶಬ್ದವನ್ನು ಪ್ರಯೋಗಿಸಿರುವದರಿಂದಲೂ ಶಾರೀರಪರಮೇಶ್ವರರಿಗೆ (ಸಾಧಾರಣವಾಗಿರುವ) ಆತ್ಮ ಎಂಬ (ಶಬ್ದವನ್ನು ಪ್ರಯೋಗಿಸಿರುವದರಿಂದಲೂ
ಪೂರ್ಣವೈಶ್ವಾನರನನ್ನು ಅರಿತುಕೊಳ್ಳುವದಕ್ಕೆ ನನ್ನ ಬಳಿಗೆ ಬರದೆ ಇದ್ದಿದ್ದರೆ ನಿಮಗೆ ಕ್ರಮವಾಗಿ
ಎಂಬ ದುಷ್ಪಲಗಳು ಆಗುತ್ತಿದ್ದವು’ ಎಂದು ವ್ಯಸ್ತೋಪಾಸನೆಯನ್ನು ನಿಂದಿಸಿರುತ್ತಾನೆ.
-
ಈ ಶಬ್ದಕ್ಕೆ ಅರ್ಥವನ್ನು ಮುಂದೆ ಭಾ. ಭಾ. ೨೧೯ರಲ್ಲಿ ಕೊಟ್ಟಿದೆ. 2. ಒಳ್ಳೆಯ ಕಾಂತಿಯುಳ್ಳ ದ್ಯುಲೋಕವು. 3. ನಾನಾರೂಪಗಳುಳ್ಳ ಸೂರ್ಯನು. 4. ಬೇರೆಬೇರೆಕಡೆಗಳಲ್ಲಿ ಗತಿಯುಳ್ಳ ಸ್ವಭಾವದ ವಾಯು. 5. ವ್ಯಾಪಿತ್ವಗುಣವುಳ್ಳ ಆಕಾಶವು. 6. ಸೊಂಟವು. 7. ಧನವನ್ನು ಕೊಡುವ ಉದಕವು. 8. ಮೂತ್ರಸ್ಥಾನವು.
-
ಇಲ್ಲಿಂದ ಮುಂದಕ್ಕೆ ವೈಶ್ವಾನರೂಪಾಸಕನ ಭೋಜನವನ್ನು ಅಗ್ನಿಹೋತ್ರವಂದು ಸಂಪಾದನೆಮಾಡುವ ಉಪಾಸನೆಯನ್ನೂ ಹೇಳಿರುತ್ತದೆ.
10.ಹರಡಿದ ದರ್ಭೆಗಳು.
೩೨೮
ಬ್ರಹ್ಮಸೂತ್ರಭಾಷ್ಯ . [ಅ. ೧. ಪಾ. ೨. ಸಂಶಯಕ್ಕೆ ಕಾರಣವಿದೆ). ಇಲ್ಲಿ ಯಾವದನ್ನು ತೆಗೆದುಕೊಳ್ಳುವದು ನ್ಯಾಯವು ?
ಯಾವದನ್ನು ಬಿಡುವದು (ನ್ಯಾಯವು) ?- ಎಂದು ಸಂಶಯ(ವಾಗುತ್ತದೆ).
ಪೂರ್ವಪಕ್ಷ : ಅಗ್ನಿ, ದೇವತೆ, ಶಾರೀರ - ಇವರಲ್ಲಿ
ಒಬ್ಬನು ವೈಶ್ವಾನರನು
(ಭಾಷ್ಯ) ೨೦೬. ಕಿಂ ತಾವತ್ ಪ್ರಾಪ್ತಮ್ ? ಜಾಠರೋಗ್ನಿ: ಇತಿ | ಕುತಃ ? ತತ್ರ ಹಿ ವಿಶೇಷೇಣ ಕ್ವಚಿತ್ ಪ್ರಯೋಗೋ ದೃಶ್ಯತೇ - ‘‘ಅಯಮಗ್ನಿರ್ವೆಶ್ವಾನರೋ ಯೋSಯ ಮನ್ತಃ ಪುರುಷೇ ಯೇನೇದಮನ್ನಂ ಪಚ್ಯತೇ ಯದಿದಮದ್ಯತೇ” (ಬೃ. ೫-೯-೧) ಇತ್ಯಾದೌ | ಅಗ್ನಿಮಾಂ ವಾ ಸ್ಮಾತ್ | ಸಾಮಾನೈನಾಪಿ ಪ್ರಯೋಗದರ್ಶನಾತ್ - “ವಿಶ್ವಸ್ಮಾ ಅಗ್ನಿಂ ಭುವನಾಯ ದೇವಾ ವೈಶ್ವಾನರಂ ಕೇತುಮಹಾಮಕೃನ್’ (ಋ. ೧೦-೮೮-೧೨) ಇತ್ಯಾದಿ | ಅಗ್ನಿಶರೀರಾ ವಾ ದೇವತಾ ಸ್ಮಾತ್ | ತಸ್ಯಾಮಪಿ ಪ್ರಯೋಗದರ್ಶನಾತ್ - ವೈಶ್ವಾನರಸ್ಯ ಸುಮತ್ ಸ್ಮಾಮ ರಾಜಾ ಹಿ ಕಂ ಭುವನಾ ನಾಮಭಿಃ ’ (ಋ. ೧-೯೮-೧, ತೈ, ಸಂ. ೧-೫-೧೧) ಇವಮಾದ್ಯಾಯಾಃ ಶ್ರುತೀರ್ದವತಾಯಾಮ್ ಐಶ್ವರ್ಯಾದ್ಯುಪೇತಾಯಾಂ ಸಂಭವಾತ್ 1 ಅಥ ಆತ್ಮಶಬ್ದ ಸಾಮಾನಾಧಿಕರಣ್ಯಾತ್ ಉಪಕ್ರಮೇ ಚ ‘ಕೋ ನ ಆತ್ಮಾ ಕಿಂ ಬ್ರಹ್ಮ’ ಇತಿ ಕೇವಲಾತ್ಮಶಬ್ದ ಪ್ರಯೋಗಾತ್, ಆತ್ಮಶಬ್ದವಶೇನ ಚ ವೈಶ್ವಾನರಶಬ್ದಃ ಪರಿಣೇಯಃ ಇತ್ಯುಚ್ಯತೇ, ತಥಾಪಿ ಶಾರೀರ ಆತ್ಮಾ ಸ್ಮಾತ್ 1 ತಸ್ಯ ಭೋಕೃತ್ವನ ವೈಶ್ವಾನರಸಂನಿಕರ್ಷಾತ್ | ‘ಪ್ರಾದೇಶಮಾತ್ರಮ್’’ ಇತಿ ಚ ವಿಶೇಷಣಸ್ಯ, ತಸ್ಮಿನ್
(ಭಾಷ್ಯಾರ್ಥ) ಮೊದಲು ಯಾವ (ಪೂರ್ವಪಕ್ಷವು) ಬಂದೊದಗುತ್ತದೆ ? ಜಾಠರಾಗ್ನಿಯೇ (ವೈಶ್ವಾನರನು), ಏಕೆ ? ಎಂದರೆ ತಿನ್ನತಕ್ಕ ಈ ಅನ್ನವು ಯಾವದರಿಂದ ಪಕ್ಷವಾಗುವದೂ, ಯಾವದು ಪುರುಷನ ಒಳಗಡೆಯಿರುವದೋ, (ಆ) ಈ ಅಗ್ನಿಯೇ ವೈಶ್ವಾನರನು” (ಬೃ. ೫-೯-೧) ಎಂದು ಮುಂತಾಗಿರುವ ವಾಕ್ಯ (ದಲ್ಲಿ) ಅದರಲ್ಲಿಯೇ (ವೈಶ್ವಾನರಶಬ್ದದ) ವಿಶೇಷವಾದ ಪ್ರಯೋಗವನ್ನು (ಮಾಡಿರುವದು) ಕೆಲವು ಕಡೆಯಲ್ಲಿ ಕಂಡುಬರುತ್ತದೆ. ಅಥವಾ ಬರಿಯ ಅಗ್ನಿಯೇ (ವೈಶ್ವಾನರ) ನಾಗಿರಬಹುದು ; ಏಕೆಂದರೆ “ದೇವತೆಗಳು ವೈಶ್ವಾನರಾಗ್ನಿಯನ್ನು ಭುವನಕ್ಕೆಲ್ಲ ಹಗಲುಗಳ ಗುರುತಾಗಿ ಮಾಡಿದರು” (ಋ. ೧೦-೮೮-೧) ಮುಂತಾದ (ಕಡೆ)ಯಲ್ಲಿ
ಅಧಿ. ೭. ಸೂ. ೨೪] ವಿಶೇಷಲಿಂಗವಿರುವದರಿಂದ ಈ ವೈಶ್ವಾನರನು ಬ್ರಹ್ಮವೇ
೩೨೯
ಸಾಮಾನ್ಯರೂಪದಿಂದ (ಬರಿಯ ಅಗ್ನಿಯನ್ನು ತಿಳಿಸುವದಕ್ಕೂ ವೈಶ್ವಾನರಶಬ್ದವನ್ನು ) ಪ್ರಯೋಗಿಸಿರುವದು ಕಂಡುಬರುತ್ತದೆ. ಅಗ್ನಿಯೆಂಬ ಶರೀರವುಳ್ಳ ದೇವತೆ(ಯೇ ವೈಶ್ವಾನರನು) ಎಂದಾದರೂ ಆಗಬಹುದು ; ಏಕೆಂದರೆ ಆ (ದೇವತೆಯಲ್ಲಿಯೂ ಈ
ವಂತಾಗಲಿ ! ಏಕೆಂದರೆ ಅವನು ಭುವನಗಳಿಗೆಲ್ಲ ರಾಜನು, ಸುಖಪ್ರದನು, ಅಭಿಮುಖ ವಾದ ಶ್ರೀಯುಳ್ಳವನು” (ಋ. ೧-೯೮-೧) ಎಂಬಿವೇ ಮುಂತಾದ ಶ್ರುತಿಯು ಐಶ್ವರ್ಯವೇ ಮುಂತಾದವುಗಳುಳ್ಳ’ ದೇವತೆಯಲ್ಲಿ (ಪ್ರಯೋಗವಾಗಿದೆ ಎಂದರೇ) ಹೊಂದುತ್ತದೆ.
ಹಾಗಿಲ್ಲವೆ ಆತ್ಮಶಬ್ದದ ಸಾಮಾನಾಧಿಕರಣ್ಯವಿರುವದರಿಂದಲೂ ಉಪಕ್ರಮ ದಲ್ಲಿ ನಮ್ಮ ಆತ್ಮನು ಯಾರು ? ಬ್ರಹ್ಮವು ಯಾವದು ?’ ಎಂದು ಬರಿಯ ಆತ್ಮಶಬ್ದವನ್ನೇ ಪ್ರಯೋಗಿಸಿರುವದು ಕಂಡುಬಂದಿರುವದರಿಂದಲೂ, ಆತ್ಮಶಬ್ದಕ್ಕೆ ತಕ್ಕಂತೆ ವೈಶ್ವಾನರಶಬ್ದ (ದ ಅರ್ಥವನ್ನು ) ತಿರುಗಿಸಿಕೊಳ್ಳಬೇಕು ಎನ್ನುವದಾದರೆ, ಹಾಗಾದರೂ ಶಾರೀರನು (ವೈಶ್ವಾನರನೆಂಬ) ಆತ್ಮನಾಗಬಹುದು ; ಏಕೆಂದರೆ ಅವನು ಭೋಕ್ತವಾಗಿರುವದರಿಂದ ವೈಶ್ವಾನರನಿಗೆ ಸಮೀಪವಾಗಿರುತ್ತಾನೆ. ‘ಪ್ರಾದೇಶಮಾತ್ರ ನಾದ’ ಎಂಬ ವಿಶೇಷಣವೂ ಉಪಾಧಿಪರಿಚ್ಛಿನ್ನವಾಗಿರುವ ಆ (ಶಾರೀರನಿಗೇ ) ಹೊಂದುತ್ತದೆ. ಆದ್ದರಿಂದ ಈಶ್ವರನು ವೈಶ್ವಾನರನಲ್ಲ.
ಸಿದ್ಧಾಂತ : ವಿಶೇಷಲಿಂಗವಿರುವದರಿಂದ ಈ ವೈಶ್ವಾನರನು ಬ್ರಹ್ಮವೇ
(ಭಾಷ್ಯ) ೨೦೭. ಏವಂ ಪ್ರಾಪ್ತ ತತ ಇದಮುಚ್ಯತೇ - ವೈಶ್ವಾನರಃ ಪರಮಾತ್ಮಾ
1.ಜ್ಞಾನ, ಸುಖಪ್ರದತ್ವ - ಮುಂತಾದವುಗಳು ಬರಿಯ ಅಗ್ನಿಗಹೊಂದುವದಿಲ್ಲ ; ದೇವತೆಗೆ ಹೊಂದುತ್ತದೆ.
-
“ಆತ್ಮನಾದ ವೈಶ್ವಾನರನನ್ನು ಉಪಾಸನಮಾಡುತ್ತಾನೋ’’ ಎಂದು ವಾಕ್ಯದಲ್ಲಿ ಸಾಮಾನಾಧಿಕರಣ್ಯವಿರುವದರಿಂದ ಇಲ್ಲಿ ಅಗ್ನಿಯನ್ನು ತೆಗೆದುಕೊಳ್ಳುವದಾಗುವದಿಲ್ಲ.
-
ವೈಶ್ವಾನರಶಬ್ದವಿಲ್ಲದ ಆತ್ಮಶಬ್ದವನ್ನು ಮಾತ್ರವೇ.
-
ಜಾಠರಾಗ್ನಿಯೇ ಮುಂತಾದವುಗಳನ್ನು ಪ್ರತ್ಯಗಾತ್ಮನೆಂದು ಹೇಳುವದು ಸರಿಯಲ್ಲ ಏಕೆಂದರೆ ಅವು ಅನಾತ್ಮವಾಗಿವೆ. ಉಪಾಸನೆಯಲ್ಲಿ ಹೇಳಿದ್ದು ಯಥಾರ್ಥವಲ್ಲವೆಂದು ಅನವಶ್ಯ ವಾಗಿ ತಿಳಿಯಬಾರದೆಂಬುದಕ್ಕೆ ಬೃ, ಭಾ. ೧-೩-೧ರಲ್ಲಿರುವ ಪ್ರಾಣೋಪಾಸನಾವಿವರವನ್ನು ನೋಡಿ.
೩೩೦
ಬ್ರಹ್ಮಸೂತ್ರಭಾಷ್ಯ |
[ಅ. ೧. ಮಾ. ೨.
ಭವಿತುಮರ್ಹತಿ ಇತಿ 1 ಕುತಃ ? ಸಾಧಾರಣಶವಿಶೇಷಾತ್ | ಸಾಧಾರಣಶಬ್ದಯೋಃ ವಿಶೇಷಃ ಸಾಧಾರಣಶಬ್ದ ವಿಶೇಷಃ | ಯದ್ಯಪಿ ಏತ್ ಉಭಾವಪಿ ಆತ್ಮವೈಶ್ವಾನರಶಬ್ಲಾ ಸಾಧಾರಣಶಬ್ದ ! ವೈಶ್ವಾನರಶಬ್ದಸ್ತು ತ್ರಯಸ್ಯ ಸಾಧಾರಣಃ ಆತ್ಮಶಬ್ದಶ್ಚ ಯಸ್ಯ |
“ತಸ್ಯ ಹವಾ ಏತಸ್ಯಾತ್ಮನೋ ವೈಶ್ವಾನರಸ್ಯ ಮೂರ್ಧವ ಸುತೇಜಾ’’ ಇತ್ಯಾದಿ: 1 ಅತ್ರ ಹಿ ಪರಮೇಶ್ವರ ಏವ ದ್ಯುಮೂರ್ಧಾದಿವಿಶಿಷ್ಟ ಅವಸ್ಥಾವರಗತಃ ಪ್ರತ್ಯಗಾತ್ಮನ ಉಪನ್ಯಸ್ತ: ಆಧ್ಯಾನಾಯ ಇತಿ ಗಮ್ಯತೇ | ಕಾರಣತ್ವಾತ್ | ಕಾರಣಕ್ಯ ಹಿ ಸರ್ವಾಭಿಃ ಕಾರ್ಯಗತಾಭಿರವಸ್ಥಾಭಿಃ ಅವಸ್ಥಾವತ್ತಾತ್ ದ್ಯುಲೋಕಾದ್ಯವಯವತ್ವಮ್ ಉಪ ಪದ್ಯತೇ | “ಸ ಸರ್ವೆಷು ಲೋಕೇಷು ಸರ್ವಷು ಭೂತೇಷು ಸರ್ವಷ್ಟಾ ತ್ಮಸ್ವನ್ನಮು’ ಇತಿ ಚ ಸರ್ವಲೋಕಾದ್ಯಾಶ್ರಯಂ ಫಲಂ ಶೂಯಮಾಣಂ ಪರಮ ಕಾರಣಪರಿಗ್ರಹ ಸಂಭವತಿ | ಏವಂ ಹಾಸ್ಯ ಸರ್ವ ಪಾದ್ಮಾನಃ ಪ್ರದೂಯ” (ಛಾಂ. ೫-೨೪-೩) ಇತಿ ಚ ತದ್ವಿದಃ ಸರ್ವಪಾಪದಾಹಶ್ರವಣಮ್, “ಕೋ ನ ಆತ್ಮಾ ಕಿಂ ಬ್ರಹ್ಮ” ಇತಿ ಚ ಆತ್ಮಬ್ರಹ್ಮಶಬ್ದಾಭ್ಯಾಮ್ ಉಪಕ್ರಮಃ - ಇವಮ್ ಏತಾನಿ ಲಿಜ್ಞಾನಿ ಪರಮೇಶ್ವರಮೇವ ಅವಗಮಯ | ತಸ್ಮಾತ್ ಪರಮೇಶ್ವರ ಏವ ವೈಶ್ವಾನರಃ ||
(ಭಾಷ್ಯಾರ್ಥ) ಹೀಗೆಂಬ (ಪೂರ್ವಪಕ್ಷವು) ಬಂದೊದಗಲಾಗಿ ಇದಕ್ಕೆ ಈ (ಸಿದ್ಧಾಂತ)ವನ್ನು ಹೇಳುತ್ತೇವೆ : (ಇಲ್ಲಿರುವ) ವೈಶ್ವಾನರನು ಪರಮಾತ್ಮನಾಗಿರಬೇಕು. ಏಕೆ ? ಎಂದರೆ ಸಾಧಾರಣಶಬ್ದ ವಿಶೇಷವಿರುವದರಿಂದ, ಸಾಧಾರಣಶಬ್ದವಿಶೇಷವು ಎಂದರೆ ಸಾಧಾರಣ ಶಬ್ದಗಳ ವಿಶೇಷವು, ಆತ್ಮ, ವೈಶ್ವಾನರ - ಎಂಬೀ ಎರಡೂ ಸಾಧಾರಣಶಬ್ದಗಳೇ ; ವೈಶ್ವಾನರಶಬ್ದವೋ ಮೂರಕ್ಕೆ ಸಾಧಾರಣ(ವಾಗಿದ), ಆತ್ಮಶಬ್ದವೂ ಎರಡಕ್ಕೇ (ಸಾಧಾರಣವಾಗಿದೆ) - ಹೀಗಿದ್ದರೂ ಆ ಈ ಆತ್ಮನಾದ ವೈಶ್ವಾನರನಿಗೆ ಸುತೇಜವು ಮೂರ್ಧವೇ’’ (ಛಾಂ. ೫-೧೮-೨) ಎಂದು ಮುಂತಾಗಿ ವಿಶೇಷವು ಕಂಡುಬರುತ್ತದೆ ; ಅದರಿಂದ ಆ (ಎರಡೂ) ಪರಮೇಶ್ವರನ ಪರವೆಂದು ಅಂಗೀಕರಿಸುತ್ತೇವೆ. ಏಕೆಂದರೆ ಇಲ್ಲಿ ದ್ಯುಮೂರ್ಧತ್ವವೇ ಮುಂತಾದವುಗಳಿಂದ ಕೂಡಿ ಅವಸ್ಥಾಂತರವನ್ನು ಹೊಂದಿ ರುವ’ ಪರಮೇಶ್ವರನನ್ನೇ ಉಪಾಸನೆಗಾಗಿ ಪ್ರತ್ಯಗಾತ್ಮನೆಂದು ಹೇಳಿದೆ ಎಂದು ನಿಶ್ಚಯಿಸ ಬಹುದಾಗಿದೆ. ಏಕೆಂದರೆ (ಅವನು) ಕಾರಣವಾಗಿರುತ್ತಾನೆ. ಕಾರ್ಯಗತವಾದ ಅವಸ್ಥೆ
- ಕಾರ್ಯವಾದ ವಿರಾಟ್ಟುರುಷನ ಅವಸ್ಥೆಯನ್ನು ಹೊಂದಿರುವ
ಅಧಿ. ೭. ಸೂ. ೨೫] ಸ್ಮತಿಯೂ ಇಲ್ಲಿ ಪರಮೇಶ್ವರರೂಪವನ್ನು ಹೇಳುತ್ತದೆ ೩೩೧ ಗಳಲ್ಲವೂ ಕಾರಣಕ್ಕೇ ಅವಸ್ಥೆಗಳಾಗಿರುವದರಿಂದ ದ್ಯುಲೋಕವೇ ಮುಂತಾದ ಅವಯವಗಳೂ (ಪರಮೇಶ್ವರನವೆಂಬುದು) ಯುಕ್ತವಾಗಿರುತ್ತದೆ. ಅವನು ಸರ್ವ ಲೋಕಗಳಲ್ಲಿಯೂ ಸರ್ವಭೂತಗಳಲ್ಲಿಯೂ ಸರ್ವ ಆತ್ಮರುಗಳಲ್ಲಿಯೂ ಅನ್ನವನ್ನು ತಿನ್ನುತ್ತಾನೆ’ (ಛಾಂ. ೫-೧೮-೧) ಎಂದೂ ಸರ್ವಲೋಕಗಳೇ ಮುಂತಾದವನ್ನು ಆಶ್ರಯಿಸಿರುವ ಫಲವು ಶ್ರುತಿಯಲ್ಲಿರುವದು ಪರಮಕಾರಣನಾಗಿರುವ (ಪರ ಮೇಶ್ವರನನ್ನು) ತೆಗೆದುಕೊಂಡರೇ ಹೊಂದುತ್ತದೆ. ಹೀಗೆಯೇ ಈ (ಜ್ಞಾನಿಯ) ಪಾಪಗಳೆಲ್ಲವೂ ಸುಟ್ಟುಹೋಗುತ್ತವೆ’’ (ಛಾಂ. ೫-೨೪-೩) ಎಂದು ಆ ಉಪಾಸಕನಿಗೆ ಸರ್ವಪಾಪಗಳೂ ಸುಟ್ಟುಹೋಗುವವೆಂದು ಶ್ರುತಿಯಲ್ಲಿರುವದು, “ನಮ್ಮ ಆತ್ಮನು ಯಾರು ? ಬ್ರಹ್ಮವು ಯಾವದು ?” (ಛಾಂ. ೫-೧-೧) ಎಂದು ಆತ್ಮಬ್ರಹ್ಮ ಶಬ್ದಗಳಿಂದ ಉಪಕ್ರಮಿಸಿರುವದು - ಎಂದೀ ಪರಿಯ ಈ ಲಿಂಗಗಳು ಪರಮೇಶ್ವರ ನನ್ನೇ (ವೈಶ್ವಾನರನೆಂದು) ನಿಶ್ಚಯಿಸಿಕೊಡುತ್ತವೆ, ಆದ್ದರಿಂದ ಪರಮೇಶ್ವರನೇ ವೈಶ್ವಾನರನು.
ಸ್ಮತಿಯೂ ಇಲ್ಲಿ ವರ್ಣಿತವಾಗಿರುವ ಪರಮೇಶ್ವರರೂಪವನ್ನು ಹೇಳುತ್ತದೆ
ಸ್ಮರ್ಯಮಾಣಮನುಮಾನಂ ಸ್ಮಾದಿತಿ ||೨೫|| ೨೫. ಸ್ಮೃತಿಯಲ್ಲಿರುವದು (ಇದಕ್ಕೆ) ಅನುಮಾನವಾಗಬಹುದಾದ ರಿಂದ (ವೈಶ್ವಾನರನು ಪರಮೇಶ್ವರನೇ.)
- ಹಿಂದಿನ ಅಧಿಕರಣದಲ್ಲಿ ‘ಅಗ್ನಿರ್ಮೂಧರ್ಾ’ ಎಂದು ಮುಂತಾಗಿರುವ ವಿರಾಟ್ಟುರುಷನ ವರ್ಣನೆಯು ಪರಮೇಶ್ವರನ ರೂಪದ ಉಪನ್ಯಾಸವಲ್ಲ ಎಂದು ಭಾಷ್ಯಕಾರರು ಹೇಳಿರುತ್ತಾರಷ್ಟ, ಇಲ್ಲಿ ಪರಮೇಶ್ವರನಿಗೇ ದ್ಯುಲೋಕಾದ್ಯವಯವಗಳನ್ನು ಕಲ್ಪಿಸಿರುವಂತೆ ಅಲ್ಲಿಯೂ ಸರ್ವಾತ್ಮತ್ವವನ್ನು ತಿಳಿಸುವದಕ್ಕೆ ಆ ರೂಪವನ್ನು ಹೇಳಬಹುದಲ್ಲ ! - ಎಂಬ ಶಂಕೆಯನ್ನು ಕಲ್ಪತರುಪರಿಮಳದಲ್ಲಿ ತೆಗೆದಿದೆ. ಇಲ್ಲಿ ದ್ಯುಮೂರ್ಧತಾದಿಗಳು ವಿರಾಟ್ಟುರುಷನವೇ ಆದರೂ ಗೌಣವಾಗಿ ಪರಮೇಶ್ವರನದಂದು ಉಪಾಸನೆಗಾಗಿ ಕಲ್ಪಿಸಿರುತ್ತದೆ. ಅಲ್ಲಿ ರೂಪೋಪನ್ಯಾಸವು ವಿರಾಟ್ಟುರುಷನದೇ ಎಂದು ಹೇಳಿದರೂ ಪರಮೇಶ್ವರನಿಗೆ ಕಾರಣವೂ ಸಾರ್ವಾತ್ಮವೂ ಸಿದ್ಧಿಸುವದರಿಂದಲೂ ವಿರಾಟ್ಟುರುಷನ ರೂಪವನ್ನು ಮಾತ್ರ ಪರಮೇಶ್ವರನದೆಂದು ಸಂಕೋಚಿಸಿ ಹೇಳುವದಕ್ಕೆ ಇಲ್ಲಿಯಂತ ಅಲ್ಲಿ ಉಪಾಸನೆಯೇನೂ ವಿವಕ್ಷಿತವಲ್ಲವಾದ್ದರಿಂದಲೂ ಹುಟ್ಟುವ ವಸ್ತುಗಳನ್ನೇ ಹೇಳಿರುವ ಸನ್ನಿಧಿಗೆ ಅನುಗುಣವಾಗಿ ಆ ರೂಪವರ್ಣನೆಯನ್ನು ಹುಟ್ಟುವ ವಿರಾಟ್ಟುರುಷನದೇ ಎಂದು ತೀರ್ಮಾನಿಸಿರುವದು ಯುಕ್ತವಾಗಿದೆ ಎಂದು ತೋರುತ್ತದೆ.ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
(ಭಾಷ್ಯ) ೨೦೮. ಇತಶ್ಚ ಪರಮೇಶ್ವರ ಏವ ವೈಶ್ವಾನರಃ | ಯಸ್ಮಾತ್ ಪರಮೇಶ್ವರಸ್ಯೆವ ಅಗ್ನಿರಾಸ್ಕಂ ಡೈರ್ಮೂಧರ್ಾ - ಇತೀದೃಶಂ ತೈಲೋಕ್ಯಾತ್ಮಕಂ ರೂಪಂ ಸ್ಮರ್ಯತೇ “ಯಸ್ಕಾರಾಗ್ಯಂ ದ್ಯರ್ಮೂಧರ್ಾ ಖಂ ನಾಭಿಶ್ಚರಣ್ ಕ್ಷಿತಿ: | ಸೂರ್ಯಶ್ಚಕ್ಷುರ್ದಿಶಃ ಶೋತ್ರಂ ತಸ್ಕೃ ಲೋಕಾತ್ಮನೇ ನಮಃ ||” (ಮೂ. ೪೭-೬೮) ಇತಿ | ಏತತ್ ಸ್ಮರ್ಯಮಾಣಂ ರೂಪಂ ಮೂಲಭೂತಾಂ ಶ್ರುತಿಮ್ ಅನುಮಾಪಯತ್ ಅಸ್ಯ ವೈಶ್ವಾನರಶಬ್ದಸ್ಯ ಪರಮೇಶ್ವರಪರ ಅನುಮಾನಮ್ ಲಿಂ ಗಮಕಂ ಸ್ಮಾತ್ ಇತ್ಯರ್ಥಃ | ಇತಿಶ ಹೇತ್ವರ್ಥಃ | ಯಸ್ಮಾತ್ ಇದಂ ಗಮಕಂ ತಸ್ಮಾದಪಿ ವೈಶ್ವಾನರಃ ಪರಮಾತ್ಮವ ಇತ್ಯರ್ಥಃ | ಯದ್ಯಪಿ ಸ್ತುತಿರಿಯಂ ತಸ್ಕೃ ಲೋಕಾತ್ಮನೇ ನಮಃ’ ಇತಿ | ಸ್ತುತಿತ್ವಮಪಿ ನಾಸತಿ ಮೂಲಭೂತೇ ವೇದವಾಕ್ಯ ಸಮ್ಯಕ್ ಇದ್ರಶೇನ ರೂಪೇಣ ಸಂಭವತಿ | “ದ್ಯಾಂ ಮೂರ್ಧಾನಂ ಯಸ್ಯ ವಿಪ್ರಾ ವದನ್ತಿ ಖಂ ವೈ ನಾಭಿಂ ಚನ್ನಸೂರ್ಯ್ ಚ ನೇತೇ | ದಿಶಃ ಶೂತ್ರ ವಿದ್ದಿ ಪಾದೌ ಕ್ಷಿತಿಂ ಚ ಸೋಚಿನ್ನಾತ್ಮಾ ಸರ್ವಭೂತಪ್ರಣೀತಾ !” (?) ಇತ್ಯವಂಜಾತೀಯಕಾ ಚ ಸ್ಮತಿ ಇಹ ಉದಾ
ಹರ್ತವ್ಯಾ ||
(ಭಾಷ್ಯಾರ್ಥ) ಈ (ಕಾರಣ)ದಿಂದಲೂ ವೈಶ್ವಾನರನು ಪರಮೇಶ್ವರನೇ ; ಏಕೆಂದರೆ, ಪರಮೇಶ್ವರನಿಗೇ ಅಗ್ನಿಯು ಬಾಯಿ, ದ್ಯುಲೋಕವು ಮೂರ್ಧ - ಎಂಬೀ ಬಗೆಯ ತೈಲೋಕ್ಯಾತ್ಮಕರೂಪವನ್ನು “ಯಸ್ಕಾರಾಸ್ಯಂ ಡೈರ್ಮೂಧರ್ಾ ಖಂ ನಾಭಿಶ್ಚರಣೆ ಕ್ಷಿತಿಃ | ಸೂರ್ಯಶ್ಚಕ್ಷುರ್ದಿಶಃ ಪ್ರೋತ್ರಂ ತಸ್ಕೃ ಲೋಕಾತ್ಮನೇ ನಮಃ” ಯಾವನಿಗೆ ಅಗ್ನಿಯು ಮುಖವೋ, ದ್ಯುಲೋಕವು ತಲೆಯೋ, ಆಕಾಶವು ಹೊಕ್ಕುಳೋ, ಭೂಮಿಯು ಕಾಲುಗಳೂ, ಸೂರ್ಯನು ಕಣೋ, ದಿಕ್ಕುಗಳು ಕಿವಿಯೋ ಅಂಥ ಲೋಕಾತ್ಮನಿಗೆ ನಮಸ್ಕಾರ ! (ಮೋ. ಧ. ೪೭-೬೮) ಎಂದು ಸ್ಕೃತಿಯಲ್ಲಿ ಹೇಳಿದೆ. ಈ ಸ್ಕೃತಿಯಲ್ಲಿ ಹೇಳಿರುವ ರೂಪವು ಮೂಲವಾಗಿರುವ ಶ್ರುತಿಯನ್ನು ಅನುಮಾನದಿಂದ (ತಿಳಿಸುವ)ದರಿಂದ ಈ ವೈಶ್ವಾನರಶಬ್ದವು ಪರಮೇಶ್ವರಪರವೆಂಬುದಕ್ಕೆ ಅನು ಮಾನವು, ಎಂದರೆ ಲಿಂಗವು, ಗಮಕವಾಗಿರುವದು ಎಂದರ್ಥ. ಇಲ್ಲಿರುವ ‘ಇತಿ’ ಎಂಬ ಶಬ್ದಕ್ಕೆ ಹೇತುವೆಂದು ಅರ್ಥ. ಇದು ಗಮಕವಾಗಿದೆಯಲ್ಲವ ? ಆದ್ದರಿಂದಲೂ ವೈಶ್ವಾನರನು ಪರಮಾತ್ಮನೇ ಎಂದರ್ಥ. “ತ ಲೋಕಾತ್ಮನೇ ನಮಃ’’ ಈ (ಸ್ಕೃತಿವಾಕ್ಯವು) ಸ್ತುತಿಯೇ ಆದರೂ ಮೂಲಭೂತವಾದ ವೇದವಚನವಿಲ್ಲದ ಇಂಥ
ಅಧಿ. ೭. ಸೂ. ೨೬] ಶಬ್ದಾದಿಗಳೂ ಅಂತಃಪ್ರತಿಷ್ಠಾನವೂ ಈಶ್ವರನಿಗೆ ಹೊಂದುವದಿಲ್ಲ ೩೩೩ ರೂಪದಿಂದ ಸ್ತುತಿತ್ವವೂ (ಇಷ್ಟ) ಚೆನ್ನಾಗಿ ಹೊಂದುವಹಾಗಿಲ್ಲ. “ಯಾವನಿಗೆ ದ್ಯುಲೋಕವು ಮೂರ್ಧವು, ಆಕಾಶವು ಹೊಕ್ಕುಳು, ಚಂದ್ರಸೂರ್ಯರು ಕಣ್ಣುಗಳು, ಎಂದು ವಿಪ್ರರು ಹೇಳುವರೋ, (ಆತನಿಗೆ) ದಿಕ್ಕುಗಳು ಕಿವಿಗಳು ಭೂಮಿಯು ಕಾಲುಗಳು ಎಂದು ತಿಳಿ. ಆತನೇ ಎಲ್ಲಾ ಭೂತಗಳನ್ನೂ ನಡೆಯಿಸುವ ಅಚಿಂತ್ಯಾ ತ್ಮನು’(?) ಎಂಬೀ ಜಾತಿಯ ಸ್ಮತಿಯನ್ನೂ ಇಲ್ಲಿ ಉದಾಹರಿಸಬೇಕು.
ಶಬ್ದಾದಿಭೋವ್ರಪ್ರತಿಷ್ಠಾನಾಚ್ಚ ನೇತಿ ಚೇನ್ನ ತಥಾದೃಷ್ಟಪ ದೇಶಾದಸಂಭವಾತ್ ಪುರುಷಮಪಿ ಚೈನಮಧೀಯತೇ ||೨೬||
೨೬ . ಶಬ್ದವೇ ಮುಂತಾದವುಗಳಿಂದಲೂ, ಒಳಗೆ ಇದ್ದುಕೊಂಡಿರುವದ ರಿಂದಲೂ (ಪರಮೇಶ್ವರ)ನಲ್ಲ, ಎಂದರೆ ಹಾಗಲ್ಲ ; ಏಕೆಂದರೆ ಅಂಥ ದೃಷ್ಟಿ ಯನ್ನು ಉಪದೇಶಿಸಿರುತ್ತದೆ ; (ದ್ಯುಲೋಕಾದಿಗಳು ಮೂರ್ಧಾದಿಗಳಾಗಿರು ವದು ಜಾಠರಾಗ್ನಾದಿಗಳಿಗೆ) ಹೊಂದುವದಿಲ್ಲ, ಮತ್ತು ಇವನನ್ನು ಪುರುಷ ನೆಂದೂ ಪಠಿಸುತ್ತಾರೆ.
ಪೂರ್ವಪಕ್ಷ : ಶಬ್ದಾದಿಗಳೂ ಅಂತಃಪ್ರತಿಷ್ಠಾನವೂ ಈಶ್ವರನಿಗೆ ಹೊಂದುವದಿಲ್ಲ
(ಭಾಷ್ಯ) ೨೦೯, ಅತ್ರ ಆಹ - ನ ಪರಮೇಶ್ವರೋ ವೈಶ್ವಾನರೋ ಭವಿತುಮರ್ಹತಿ ! ಕುತಃ ? ಶಬ್ದಾದಿಭ್ಯಃ, ಅನ್ನಪ್ರತಿಷ್ಠಾನಾಚ್ಚ | ಶಬ್ದಸ್ತಾವತ್ ವೈಶ್ವಾನರಶಬ್ದ; ನ ಪರಮೇಶ್ವರೇ ಸಂಭವತಿ | ಅರ್ಥಾನ್ನರೇ ರೂಢತ್ವಾತ್ | ತಥಾ ಅಗ್ನಿಶಬ್ದ; “ಸ ಏಷೋತಿಗ್ನಿರ್ವಶ್ವಾನರಃ’ (ಶತ, ಬ್ರಾ, ೧೦-೬-೧-೧) ಇತಿ | ಆದಿಶಬ್ದಾತ್ “ಹೃದಯಂ ಗಾರ್ಹಪತ್ಯ;’ (ಛಾಂ. ೫-೧೮-೨) ಇತ್ಯಾದಿ ತಾಪ್ರಕಲ್ಪನಮ್
- ಇದು ಸ್ತುತಿಯಾದರೂ ಪರಮಾತ್ಮನಿಗೆ ಬೇರೆಬೇರೆಯ ಅವಯವಗಳನ್ನು ಹೀಗೆ ಕಲ್ಪಿಸಿ ಹೇಳುವದಕ್ಕೆ ಆಧಾರವಾದ ಶ್ರುತಿಯಿರಬೇಕು ; ಏಕೆಂದರೆ ಮನುಷ್ಯಮಾತ್ರನಿಗೆ ಇಂಥ ರೂಪವು ಪರಮಾತ್ಮನದಂದು ಕಲ್ಪಿಸುವ ಶಕ್ತಿಯಿಲ್ಲ. ಸ್ತುತಿಯಾದ್ದರಿಂದ ಇದು ಹೀಗಿಲ್ಲ ಎಂದು ಕಲ್ಪಿಸುವದಕ್ಕೂ ಕಾರಣವಿಲ್ಲ ; ಏಕೆಂದರೆ ಬಾಧಕವಿಲ್ಲದಿದ್ದರೆ ಇರುವ ರೂಪವನ್ನೇ ಸ್ತುತಿಯಲ್ಲಿ ಹೇಳಿದೆ ಎಂದು ಕಲ್ಪಿಸುವದೇ ಯುಕ್ತ.
-
- ಈ ವಾಕ್ಯವೂ ಭಾರತದಲ್ಲಿ ಎಲ್ಲಿಯೋ ಇರಬಹುದು. ಇದು ಸ್ತುತಿರೂಪವಲ್ಲದ ಸ್ಮೃತಿ.
೩೩೪
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
“ತಡ್ಯದ್ಭಕ್ತಂ ಪ್ರಥಮಮಾಗಚೈತ್ ತದ್ರೋಮೀಯಮ್’’ (ಛಾಂ. ೫-೧೦-೧) ಇತ್ಯಾದಿನಾ ಚ ಪ್ರಾಣಾಹುತ್ಯಧಿಕರಣತಾಸಂಕೀರ್ತನಮ್ | ಏತೇಯ್ಯೋ ಹೇತುಭ್ಯ: ಜಾಠರೋ ವೈಶ್ವಾನರಃ ಪ್ರತ್ಯೇತವ್ಯ: 1 ತಥಾ ಅನ್ಯಪ್ರತಿಷ್ಠಾನಮಪಿ ಶೌಯತೇ - ‘‘ಪುರುರ್ಷೇಃ ಪ್ರತಿಷ್ಠಿತಂ ವೇದ” (ಶತ. ಬ್ರಾ. ೧೦-೬-೧-೧೧) ಇತಿ | ತಚ್ಚ ಜಾಠರೇ ಸಂಭವತಿ | ಯದಪ್ಪಕ್ತಮ್ ‘‘ಮೂರ್ಧವ ಸುತೇರ್ಜಾ’ ಇತ್ಯಾದೇ ವಿಶೇಷಾತ್ ಕಾರಣಾತ್ ಪರಮಾತ್ಮಾ ವೈಶ್ವಾನರಃ ಇತಿ | ಅತ್ರ ಬೂಮಃ - ಕುತೋಷ ನಿರ್ಣಯಃ ಯತ್ ಉಭಯಥಾಪಿ ವಿಶೇಷಪ್ರತಿಭಾನೇ ಸತಿ ಪರಮೇಶ್ವರವಿಷಯ ಏವ ವಿಶೇಷ ಆಶ್ರಯಣೀಯಃ, ನ ಜಾಠರವಿಷಯಃ ಇತಿ ? ಅಥವಾ ಭೂತಾಗ್ನಿಃ ಅನ್ನರ್ಬಹಿಶ್ಚ ಅವತಿಷ್ಠಮಾನವ ನಿರ್ದೆಶೋ ಭವಿಷ್ಯತಿ | ತಸ್ಯಾಪಿ ಹಿ ದ್ಯುಲೋಕಾದಿ ಸಂಬತ್ತೋ ಮಾವರ್ಣಾತ್ ಅವಗಮ್ಮತೇ ‘ಯೋ ಭಾನುನಾ ಪೃಥಿವೀಂ ದ್ಯಾಮು ತೇಮಾಮಾತತಾನ ರೋದಸೀ ಅನ್ನರಿಕ್ಷಮ್’’ (ಋ. ಸಂ. ೧೦-೮೮-೩) ಇತ್ಯಾದೌ | ಅಥವಾ ತಚ್ಚರೀರಾಯಾ ದೇವತಾಯಾ ಐಶ್ವರ್ಯಯೋಗಾತ್ ದ್ಯುಲೋಕಾದ್ಯವಯ ವತ್ವಂ ಭವಿಷ್ಯತಿ | ತಸ್ಮಾತ್ ನ ಪರಮೇಶ್ವರೋ ವೈಶ್ವಾನರಃ ಇತಿ ||
(ಭಾಷ್ಯಾರ್ಥ) ಇಲ್ಲಿ ಪೂರ್ವಪಕ್ಷಿಯು ಹೇಳುತ್ತಾನೇನೆಂದರೆ ; (ಈ) ವೈಶ್ವಾನರನು ಪರ ಮೇಶ್ವರನಾಗಿರಲಾರನು. ಏಕ ? ಎಂದರೆ ಶಬ್ದಾದಿಗಳಿಂದಲೂ ಅಂತಃಪ್ರತಿಷ್ಠಾನ ದಿಂದಲೂ (ಹಾಗೆಂದು ತಿಳಿಯಬೇಕಾಗಿದೆ). ಮೊದಲನೆಯದಾಗಿ ಶಬ್ದವು, ಎಂದರ ವೈಶ್ವಾನರಶಬ್ದವು, ಪರಮೇಶ್ವರನಿಗೆ ಹೊಂದುವದಿಲ್ಲ ; ಏಕೆಂದರೆ (ಅದು) ಮತ್ತೊಂದು ಪದಾರ್ಥವನ್ನು ಹೇಳುವ ರೂಢ(ಶಬ್ದವಾಗಿದೆ). ಹೀಗೆಯೇ ಅಗ್ನಿಶಬ್ದವು (ಕೂಡ) “ಆ ಈ ಅಗ್ನಿಯು ವೈಶ್ವಾನರನು’ (ಶತ. ಬ್ರಾ. ೧೦-೬-೧-೫) ಎಂದು (ಬೇರೊಂದು ಅರ್ಥವನ್ನು ಹೇಳುವ ರೂಢಶಬ್ದವಾಗಿದೆ. ಸೂತ್ರದಲ್ಲಿ ಶಬ್ದಾದಿ ಎಂದು) ಆದಿಶಬ್ದವಿರುವದರಿಂದ ‘‘ಗಾರ್ಹಪತ್ಯವು ಹೃದಯವು” (ಛಾಂ. ೫-೧೮-೨) ಎಂದು ಮುಂತಾದ ಅಗ್ನಿತಯದ ಕಲ್ಪನೆ, “ಹೀಗಿರುವಲ್ಲಿ, ಯಾವ ಅನ್ನವು ಮೊದಲು ಬರುತ್ತದೆಯೋ ಅದನ್ನು ಹೋಮಮಾಡಬೇಕು’ (ಛಾಂ. ೫-೧೯-೧) ಎಂದು ಮುಂತಾಗಿರುವ (ವಾಕ್ಯ)ದಿಂದ ಪ್ರಾಣಾಹುತಿಗೆ ಅಧಿಕರಣವೆಂದು ಹೇಳಿರುವದು - (ಇವುಗಳನ್ನು ತೆಗೆದುಕೊಳ್ಳಬೇಕು.) ಈ ಹೇತುಗಳಿಂದ ಜಾಠರಾಗ್ನಿಯೇ ವೈಶ್ವಾನರನು ಎಂದು ತಿಳಿಯಬೇಕು. ಹೀಗೆಯೇ “ಪುರುಷನಲ್ಲಿ ಒಳಗೆ ಇರುವನೆಂದು ತಿಳಿಯು
- ರೂಢಿಯನ್ನು ಬಿಟ್ಟು ಯೌಗಿಕಾರ್ಥವನ್ನು ತೆಗೆದುಕೊಳ್ಳುವದಕ್ಕೆ ಕಾರಣವಿಲ್ಲ ಎಂದರ್ಥ.
ಅಧಿ. ೭. ಸೂ. ೨೬] ಪರಮೇಶ್ವರನ ಉಪಾಸನೆಗಾಗಿ ಜಾಠರಾಗ್ನಿಯನ್ನುಪದೇಶಿಸಿದ ೩೩೫ ತಾನೋ’’ (ಶತ. ಬ್ರಾ. ೧೦-೬-೧-೧೧) ಎಂದು ಅಂತಃಪ್ರತಿಷ್ಠಾನವನ್ನೂ ಶ್ರುತಿಯಲ್ಲಿ ಹೇಳಿದೆ. ಇದೂ ಜಾಠರಾಗ್ನಿಗೇ ಹೊಂದುತ್ತದೆ. ಇನ್ನು ‘ಸುತೇಜವೇ ಮೂರ್ಧವು’’ ಎಂಬುದೇ ಮುಂತಾದ ವಿಶೇಷ ಕಾರಣದಿಂದ ವೈಶ್ವಾನರನು ಪರಮಾತ್ಮನೇ ಎಂದು (೧-೨-೧೪ರಲ್ಲಿ) ಹೇಳಿದಿರಷ್ಟೆ. ಅದಕ್ಕೆ ನಾವು ಹೇಳುವದೇನೆಂದರೆ : ಎರಡು ಪ್ರಕಾರ ದಿಂದಲೂ ವಿಶೇಷವು ತೋರುತ್ತಿರುವಲ್ಲಿ ಪರಮೇಶ್ವರನ ವಿಷಯದ್ದೆಂದೇ ವಿಶೇಷ ವನ್ನು ಆಶ್ರಯಿಸಬೇಕೇ ಹೊರತು ಜಾಠರಾಗ್ನಿಯ ವಿಷಯದ್ದೆಂದು (ಇಟ್ಟುಕೊಳ್ಳ) ಬಾರದು ಎಂಬೀ ನಿರ್ಣಯ(ವನ್ನು ) ಏತರಿಂದ ಮಾಡುತ್ತೀರಿ ?
ಅಥವಾ ಒಳಗೂ ಹೊರಗೂ ಇರುತ್ತಿರುವ ಭೂತಾಗ್ನಿಯನ್ನೇ ಈ (ವೈಶ್ವಾನರ ನೆಂಬ) ನಿರ್ದೆಶವು (ತಿಳಿಸುತ್ತದೆ ಎಂದಾಗಲಿ). ಏಕೆಂದರೆ ಆ (ಭೂತಾಗ್ನಿಗೂ “ಯಾವದು (ತನ್ನ ) ಕಾಂತಿಯಿಂದ ಭೂಮಿಯನ್ನೂ ಈ ಸ್ವರ್ಗವನ್ನೂ (ದ್ಯಾವಾ ಪೃಥಿವಿಗಳೆಂಬ) ರೋದಸ್ಸುಗಳನ್ನೂ ಅಂತರಿಕ್ಷವನ್ನೂ ಹಬ್ಬಿಕೊಂಡಿರುವದೋ …..” (ಋ. ಸಂ. ೧೦-೮೮-೩) ಎಂದು ಮುಂತಾಗಿರುವ ಮಂತ್ರವರ್ಣದಲ್ಲಿ ದ್ಯುಲೋಕಾದಿ ಗಳ ಸಂಬಂಧವಿರುವದೆಂದು ನಿಶ್ಚಯವಾಗುತ್ತದೆ.
ಅಥವಾ ಈ (ಅಗ್ನಿಯಂಬ) ಶರೀರವುಳ್ಳ ದೇವತೆಗೆ ಐಶ್ವರ್ಯದ ಸಂಬಂಧದಿಂದ “ದ್ಯುಲೋಕವೇ ಮುಂತಾದ ಅವಯವ ಗಳಿರುವವೆಂದು ಆಗಬಹುದು. ಆದ್ದ
ರಿಂದ ವೈಶ್ವಾನರನು ಪರಮೇಶ್ವರನಲ್ಲ.
ಸಿದ್ಧಾಂತ : ಪರಮೇಶ್ವರನ ಉಪಾಸನೆಗಾಗಿ ಜಾಠರಾಗ್ನಿಯನ್ನುಪದೇಶಿಸಿದೆ
(ಭಾಷ್ಯ) ೨೧೦. ಅತ್ರೋಚ್ಯತೇ - ‘ನ, ತಥಾದೃಷ್ಟುಪದೇಶಾತ್’ ಇತಿ | ನ ಶಬ್ದಾದಿಭ್ಯಃ ಕಾರಣೇಭ್ಯಃ ಪರಮೇಶ್ವರಸ್ಯ ಪ್ರತ್ಯಾಖ್ಯಾನಂ ಯುಕ್ತಮ್ | ಕುತಃ ? ತಥಾ ಜಾಠರಾಪರಿತ್ಯಾಗೇನ ದೃಷ್ಟುಪದೇಶಾತ್ | ಪರಮೇಶ್ವರದೃಷ್ಟಿರ್ಹಿ ಜಾಠರೇ ವೈಶ್ವಾನರೇ ಇಹ ಉಪದಿಶ್ಯತೇ | ‘ಮನೋ ಬ್ರಹ್ಮತ್ಯುಪಾಸೀತ’ ಇತ್ಯಾದಿವತ್ |
-
ಜಾಠರಾಗ್ನಿಗೂ ಪರಮೇಶ್ವರನಿಗೂ ಸಮವಾಗಿಯೇ ಹೊಂದುತ್ತಿರುವಾಗ,
-
ನಿರ್ಣಯಕ್ಕೆ ಯಾವ ವಿಶೇಷಕಾರಣವೂ ಇರುವದಿಲ್ಲವಾದ್ದರಿಂದಲೂ ಜಾಠರಾಗ್ನಿಯ ಅಂಗಗಳೇ ಇಲ್ಲಿ ಕಾಣುತ್ತಿರುವದರಿಂದಲೂ ಜಾಠರಾಗ್ನಿಯನ್ನೇ ವೈಶ್ವಾನರನೆಂದು ತಗೆದುಕೊಳ್ಳು ವದು ಯುಕ್ತ ಎಂದು ಭಾವ.
೩೩೬
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨.
ಅಥವಾ ಜಾಠರವೈಶ್ವಾನರೋಪಾಧಿಃ ಪರಮೇಶ್ವರಃ ಇಹ ದ್ರಷ್ಟವ್ಯನ ಉಪ ದಿಶ್ಯತೇ “ಮನೋಮಯಃ ಪ್ರಾಣಶರೀರೋ ಭಾರೂಪಃ’ (ಛಾಂ. ೩-೧೪-೨) ಇತ್ಯಾದಿವತ್ | ಯದಿ ಚೇಹ ಪರಮೇಶ್ವರೋ ನ ವಿವಕ್ಷೇತ ಕೇವಲ ಏವ ಜಾಠರೋಗ್ನಿರ್ವಿವಕ್ಷೇತ, ತತಃ “ಮೂರ್ಧವ ಸುತೇಜಾಃ’ ಇತ್ಯಾದೇ ವಿಶೇಷಸ್ಯ ಅಸಂಭವ ಏವ ಸ್ಯಾತ್ | ಯಥಾ ತು ದೇವತಾಭೂತಾಗ್ನಿವಪಾಶ್ರಯೇಣಾಪಿ ಅಯಂ ವಿಶೇಷ: ಉಪಪಾದಯಿತುಂ ನ ಶಕ್ಯತೇ ತಥಾ ಉತ್ತರಸೂತೇ ವಕ್ಷಾಮಃ | ಯದಿ ಚ ಕೇವಲ ಏವ ಜಾಠರೋ ವಿವಕ್ಷೇತ, ಪುರುರ್ಷೇಸ್ತಪ್ರತಿಷ್ಠಿತತ್ವಂ ಕೇವಲಂ ತಸ್ಯ ಸ್ಮಾತ್, ನ ತು ಪುರುಷತ್ವಮ್ | ಪುರುಷಮಪಿ ಚೈನಮಧೀಯತೇ ವಾಜಸನೇಯಿನಃ “ಸ ಏಷೋsಸ್ಮಿರ್ವೆಶ್ವಾನರೋ ಯತ್ಪುರುಷಃ ಸ ಯೋ ಹೃತಮೇವಮಗ್ನಿಂ ವೈಶ್ವಾನರಂ ಪುರುಷವಿಧಂ ಪುರುಷನಃಪ್ರತಿಷ್ಠಿತಂ ವೇದ” (ಶತ, ಬ್ರಾ, ೧೦-೬-೧-೧೧) ಇತಿ | ಪರಮೇಶ್ವರಸ್ಯ ತು ಸರ್ವಾತ್ಮತ್ವಾತ್ ಪುರುಷತ್ವಮ್, ಪುರುಷೇಣನ್ನಪ್ರತಿಷ್ಠಿತತ್ವಂ ಚ ಉಭಯಮ್ ಉಪಪದ್ಯತೇ | ಯೇ ತು ‘ಪುರುಷವಿಧಮಪಿ ಚೈನಮಧೀಯತೇ’ ಇತಿ ಸೂತ್ರಾವಯವಂ ಪಠನ್ತಿ, ತೇಷಾಮ್ ಏಷೋsರ್ಥ: - ಕೇವಲಜಾಠರಪರಿಗ್ರಹೇ ಪುರುಷೇತನ್ಯಪ್ರತಿಷ್ಠಿ ತತ್ವಂ ಕೇವಲಂ ಸ್ಯಾತ್, ನ ಪುರುಷವಿಧತ್ವಮ್ | ಪುರುಷವಿಧಮಪಿ ಚೈನಮ್ ಅಧೀಯತೇ ವಾಜಸನೇಯಿನಃ - ‘ಪುರುಷವಿಧಂ ಪುರುಷೇತನ್ಯಪ್ರತಿಷ್ಠಿತಂ ವೇದ” ಇತಿ | ಪುರುಷವಿಧತ್ವಂ ಚ ಪ್ರಕರಣಾತ್ ಯತ್ ಅಧಿದೈವತಂ ದ್ಯುಮೂರ್ಧತ್ಯಾದಿ ಪೃಥಿವೀಪ್ರತಿಷ್ಠಿತತ್ವಾನಮ್, ಯಚ್ಚ ಅಧ್ಯಾತ್ಮ ಪ್ರಸಿದ್ಧಂ ಮೂರ್ಧತ್ವಾದಿ ಚುಬುಕಪ್ರತಿಷ್ಠಿತತ್ಕಾವ್ಯಮ್, ತತ್ ಪರಿಗೃಹ್ಯತೇ ||
(ಭಾಷ್ಯಾರ್ಥ) ಇದಕ್ಕೆ (ಉತ್ತರವನ್ನು) ಹೇಳುತ್ತೇವೆ ; ಹಾಗಲ್ಲ. ಏಕೆಂದರೆ ಹಾಗಿರುವ ದೃಷ್ಟಿಯನ್ನು ಉಪದೇಶಿಸಿರುತ್ತದೆ. ಶಬ್ದವೇ ಮುಂತಾದ ಕಾರಣಗಳಿಂದ ಪರಮೇಶ್ವರನು (ವೈಶ್ವಾನರ )ನಲ್ಲ ಎನ್ನುವದು ಸರಿಯಾಗಿಲ್ಲ. ಏಕ ? ಎಂದರ ಹಾಗಿರುವ ಜಾಠರಾಗ್ನಿಯನ್ನು ಬಿಡದಿರುವ ದೃಷ್ಟಿಯನ್ನು ಉಪದೇಶಿಸಿರುತ್ತದೆ. ಇಲ್ಲಿ “ಮನಸ್ಸನ್ನು ಬ್ರಹ್ಮವೆಂದು ಉಪಾಸನೆಮಾಡಬೇಕು’ (ಛಾಂ. ೩-೧೮-೧) ಮುಂತಾ ದವುಗಳಂತ ಜಾಠರವೈಶ್ವಾನರನಲ್ಲಿ ಪರಮೇಶ್ವರದೃಷ್ಟಿಯನ್ನೇ ಉಪದೇಶಿಸಿರುತ್ತದೆ.’ ಅಥವಾ “ಮನೋಮಯನು, ಪ್ರಾಣಶರೀರನು, ಭಾರೂಪನು’ (ಛಾಂ. ೩-೧೪-೨)
- ಜಾಠರಾಗ್ನಿಯು ಪರಮೇಶ್ವರನಿಗೆ ಪ್ರತೀಕವೆಂದು ಅಭಿಪ್ರಾಯ.
ಅಧಿ. ೭. ಸೂ. ೨೭] ಅಗ್ನಿದೇವತೆಗೆ ಅಥವಾ ಭೂತಕ್ಕೆ ಈ ಧರ್ಮವು ಹೊಂದುವದಿಲ್ಲ ೩೩೭ ಮುಂತಾದ ಕಡೆಯಲ್ಲಿ ಹೇಗೋ ಹಾಗೆ ಜಾಠರವೈಶ್ವಾನರ ಎಂಬ ಉಪಾಧಿಯುಳ್ಳ ಪರಮೇಶ್ವರನನ್ನು ಉಪಾಸನೆಮಾಡಬೇಕೆಂದು ಉಪದೇಶಿಸಿರುತ್ತದೆ.
ಇದಲ್ಲದೆ ಇಲ್ಲಿ ಪರಮೇಶ್ವರನನ್ನು ಹೇಳಬೇಕೆಂಬ ಅಭಿಪ್ರಾಯವಿಲ್ಲವೆಂದೂ ಬರಿಯ ಜಾಠರಾಗ್ನಿಯೇ ವಿವಕ್ಷಿತವಾಗಿರುವದೆಂದೂ (ಹೇಳುವ)ದಾದರೆ, ಆಗ ‘ಸುತೇಜವೇ ಮೂರ್ಧವು’ ಎಂದು ಮುಂತಾದ ವಿಶೇಷವು (ಅದಕ್ಕೆ) ಹೊಂದುವದಿಲ್ಲ ವೆಂದೇ ಆಗುವದು. ದೇವತೆಯನ್ನೂ ಭೂತಾಗ್ನಿಯನ್ನೂ ಆಶ್ರಯಿಸಿದರೂ ಈ ವಿಶೇಷವನ್ನು ಹೊಂದಿಸುವದು ಆಗುವದಿಲ್ಲವೆಂಬುದು ಹೇಗೆಂಬುದನ್ನು ಮುಂದಿನ ಸೂತ್ರದಲ್ಲಿ ಹೇಳುವೆವು. ಮತ್ತು ಬರಿಯ ಜಾಠರಾಗ್ನಿಯೇ ವಿವಕ್ಷಿತವಾಗಿದ್ದರೆ ಪುರುಷನಲ್ಲಿ ಒಳಗೆ ಇರುವದೆಂಬುದೊಂದೇ ಅದಕ್ಕೆ ಆಗುವದೇ ಹೊರತು (ಅದು) ಪುರುಷನೆಂದು ಆಗುವದಿಲ್ಲ. “ಆ ಈ ಅಗ್ನಿವೈಶ್ವಾನರನು ಪುರುಷನು, ಯಾವನು ಈ ಅಗ್ನಿವೈಶ್ವಾನರನನ್ನು ಪುರುಷವಿದನೆಂದೂ ಪುರುಷನಲ್ಲಿ ಒಳಗೆ ಇರುವವನೆಂದೂ ಹೀಗೆ ತಿಳಿಯುವನೋ……..” (ಶತ. ಬ್ರಾ. ೧೦-೬-೧-೫) ಎಂದು ವಾಜಸನೇಯಿಗಳು ಇವನನ್ನು ಪುರುಷನೆಂದೂ ಅಧ್ಯಯನದಲ್ಲಿ ಕರೆದಿರು)ತ್ತಾರೆ. ಪರಮೇಶ್ವರನಾದರೋ ಸರ್ವಾತ್ಮನಾದ್ದರಿಂದ (ಅವನಿಗೆ) ಪುರುಷನಾಗಿರುವಿಕೆ, ಪುರುಷನೊಳಗೆ ಇದ್ದುಕೊಂಡಿರುವದು - ಈ ಎರಡೂ ಹೊಂದುತ್ತದೆ.
ಯಾರಾದರೆ “ಪುರುಷವಿಧಮಪಿ ಚೈನಮಧೀಯತೇ’ ಎಂದು ಸೂತ್ರಾವಯವದ ಪಾಠವನ್ನಿಟ್ಟುಕೊಂಡಿರುವರೋ, ಅವರಿಗೆ ಇದು (ಅದರ) ಅರ್ಥವು : ಬರಿಯ ಜಾಠರಾಗ್ನಿಯನ್ನೇ (ಇಲ್ಲಿ) ಹಿಡಿದರೆ ಪುರುಷನಲ್ಲಿ ಒಳಗೆ ಇರುವದೆಂಬುದು ಮಾತ್ರ (ಅದಕ್ಕೆ) ಆಗುವದೇ ಹೊರತು ಪುರುಷವಿಧವಾಗಿರುವದೆಂಬುದು (ಹೊಂದುವ) ದಿಲ್ಲ. ವಾಜಸನೇಯಿಗಳು ‘ಪುರುಷವಿದನೆಂದೂ ಪುರುಷನಲ್ಲಿ ಒಳಗೆ ಇದ್ದು ಕೊಂಡಿರು ವನೆಂದೂ (ಯಾವನು) ತಿಳಿಯುವನೋ ………” ಎಂದು ಈ (ವೈಶ್ವಾನರನನ್ನು ) ಪುರುಷವಿಧನಂದೂ ಅಧ್ಯಯನದಲ್ಲಿ (ಕರೆದಿರುತ್ತಾರೆ. ಪುರುಷವಿಧನಾಗಿರುವದು ಎಂದರೆ (ಈ) ಪ್ರಕರಣದಂತೆ ಅಧಿದೈವತವಾಗಿ ದ್ಯುಲೋಕವೆಂಬ ಮೂರ್ಧವುಳ್ಳವ ನಾಗಿರುವನೆಂಬುದರಿಂದ ಹಿಡಿದು ಪ್ರಥಿವಿಯಲ್ಲಿ ಪ್ರತಿಷ್ಠಿತನಾಗಿರುವನೆಂಬವರೆಗಿನ (ಧರ್ಮವು), ಮತ್ತು ಅಧ್ಯಾತ್ಮವಾಗಿ ಮೂರ್ಧವುಳ್ಳವನಾಗಿರುವದರಿಂದ ಹಿಡಿದು
-
ಜಾಠರಾಗ್ನಿಯು ಪರಮೇಶ್ವರನಿಗೆ ಉಪಾಧಿಯಾದ್ದರಿಂದ ತದ್ವಿಶಿಷ್ಟನಾದ ಪರಮೇಶ್ವರ ನನ್ನ ಉಪಾಸನಮಾಡಬೇಕೆಂದು ಹೇಳಿದ ಎಂದರ್ಥ.
-
ಪರಮೇಶ್ವರನ ಪ್ರತೀಕವೂ ಅಲ್ಲದ, ಉಪಾಧಿಯೂ ಅಲ್ಲದ ಎಂದರ್ಥ. 3. ಏಕಂದರ ಜಾಠರಾಗ್ನಿಗೆ ದ್ಯುಲೋಕವು ಮೂರ್ಧವಾಗಲಾರದು - ಇತ್ಯಾದಿ.
220
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಚುಬುಕದಲ್ಲಿದ್ದುಕೊಂಡಿರುವದರವರೆಗಿನ (ಧರ್ಮವೆಂದು ಶ್ರುತಿ) ಪ್ರಸಿದ್ಧವಾಗಿದೆ ಯಲ್ಲ, ಅದು - (ಇವೆರಡನ್ನೂ) ಪರಿಗ್ರಹಿಸಬೇಕು.’
ಅತ ಏವ ನ ದೇವತಾ ಭೂತಂ ಚ ||೨೭|| ೨೭. ಆದ್ದರಿಂದಲೇ ದೇವತೆಯಾಗಲಿ ಭೂತವಾಗಲಿ (ವೈಶ್ವಾನರ )ನಲ್ಲ. ಅಗ್ನಿದೇವತೆಗೆ ಅಥವಾ ಭೂತಕ್ಕೆ ಈ ಧರ್ಮವು ಹೊಂದುವದಿಲ್ಲ
(ಭಾಷ್ಯ) ೨೧೧. ಯತ್ ಪುನರುಕ್ತಮ್ - ಭೂತಾಗ್ನರಪಿ ಮನ್ತವರ್ಣೆ ದ್ಯುಲೋಕಾದಿ ಸಂಬನ್ನದರ್ಶನಾತ್ “ಮೂರ್ಧವ ಸುತೇರ್ಜಾ’ ಇತ್ಯಾದ್ಯವಯವಕಲ್ಪನಂ ತಸ್ಮವ ಭವಿಷ್ಯತಿ ಇತಿ ತಚ್ಛರೀರಾಯಾ ದೇವತಾಯಾ ವಾ ಐಶ್ವರ್ಯಯೋಗಾತ್ ಇತಿ, ತತ್ ಪರಿಹರ್ತವ್ಯಮ್ | ಅತ್ರೋಚ್ಯತೇ - ಅತ ಏವ ಉಕ್ತದ್ರೂ ಹೇತುಭ್ಯಃ ನ ದೇವತಾ ವೈಶ್ವಾನರಃ | ತಥಾ ಭೂತಾಗ್ನಿರಪಿ ನ ವೈಶ್ವಾನರಃ ನ ಹಿ ಭೂತಾಗ್ನಃ ಔಷ್ಟ ಪ್ರಕಾಶಮಾತ್ರಾತ್ಮಕಸ್ಯ ದ್ಯುಮೂರ್ಧಾದಿಕಲ್ಪನಾ ಉಪಪದ್ಯತೇ | ವಿಕಾರಸ್ಯ ವಿಕಾರಾನ್ತರಾತ್ಮತ್ಯಾಸಂಭವಾತ್ | ತಥಾ ದೇವತಾಯಾಃ ಸತ್ಯಪಿ ಐಶ್ವರ್ಯಯೋಗೇ ನ ದ್ಯುಮೂರ್ಧಾದಿಕಲ್ಪನಾ ಸಂಭವತಿ | ಅಕಾರಣತ್ವಾತ್, ಪರಮೇಶ್ವರಾಧೀನೈಶ್ವರ್ಯ ತ್ವಾಚ | ಆತ್ಮಶಬ್ದಾ ಸಂಭವಶ್ಚ ಸರ್ವಷ್ಟೇಷು ಪಕ್ಷೇಷು ಸ್ಥಿತ ಏವ ||
(ಭಾಷ್ಯಾರ್ಥ) ಇನ್ನು ಭೂತಾಗ್ನಿಗೂ ಮಂತ್ರವರ್ಣದಲ್ಲಿ ದ್ಯುಲೋಕಾದಿಗಳ ಸಂಬಂಧವನ್ನು ಹೇಳಿರುವದು ಕಂಡುಬಂದಿರುವದರಿಂದ ಸುತೇಜವೇ ಮೂರ್ಧವು ಎಂದು ಮುಂತಾಗಿ ಅವಯವಗಳನ್ನು ಕಲ್ಪಿಸಿರುವದು ಅದಕ್ಕೇ ಆಗಲಿ ; ಅದನ್ನು ಶರೀರವಾಗಿ (ಮಾಡಿ ಕೂಂಡಿ)ರುವದೇವತೆಗೆ ಐಶ್ವರ್ಯದ ಸಂಬಂಧವಿರುವದರಿಂದ (ಅದಕ್ಕಾದರೂ ಆಗಲಿ) ಎಂದು (ಪೂರ್ವಪಕ್ಷದಲ್ಲಿ) ಹೇಳಿತ್ತಷ್ಟ, ಅದನ್ನು ಪರಿಹರಿಸಬೇಕಷ್ಟೆ. ಆ (ವಿಷಯ)ದಲ್ಲಿ (ಇದನ್ನು) ಹೇಳುತ್ತೇವೆ ; ಆದ್ದರಿಂದಲೇ ಎಂದರೆ (ಮೇಲೆ) ಹೇಳಿರುವ ಕಾರಣಗಳಿಂದಲೇ ದೇವತೆಯು ವೈಶ್ವಾನರನಲ್ಲ. ಹಾಗೆಯೇ ಭೂತಾಗ್ನಿಯೂ
-
ಇದೂ ಪರಮೇಶ್ವರನಿಗೆ ಮಾತ್ರ ಹೊಂದುತ್ತದೆ.
-
ಇಲ್ಲಿ ‘ಇತಿ’ ಯು ಬೇಕಿಲ್ಲ, ಅಥವಾ ಮುಂದೆ ‘ಐಶ್ವರ್ಯಯೋಗಾತ್ ಇತಿ ಚ’ ಎಂದಾದರೂ ಇರಬೇಕು ಎಂದು ತೋರುತ್ತದೆ. ಮೂಲಭಾಷ್ಯವು ಹೇಗಿತ್ತೋ ತಿಳಿಯದು.
-
ದ್ಯುಮೂರ್ಧತ್ವವೇ ಮುಂತಾದ ವಿಶೇಷವು ಹೊಂದುವದಿಲ್ಲ, ಪುರುಷತ್ವವು ಹೊಂದುವದಿಲ್ಲ, ಪುರುಷವಿಧತ್ವವೂ ಹೊಂದುವದಿಲ್ಲ - ಎಂಬ ಕಾರಣಗಳಿಂದ.
ಅಧಿ. ೭. ಸೂ. ೨೮] ಇಲ್ಲಿ ನೇರಾಗಿ ಪರಮೇಶ್ವರೋಪಾಸನೆಯನ್ನೇ ಹೇಳಿದ ೩೩೯ ವೈಶ್ವಾನರನಲ್ಲ. ಏಕೆಂದರೆ ಬರಿಯ ಬಿಸಿಬೆಳಕುಗಳ ಸ್ವರೂಪವಾಗಿರುವ ಭೂತಾಗ್ನಿಗೆ ದ್ಯುಮೂರ್ಧತ್ಯಾದಿಕಲ್ಪನೆಯು ಹೊಂದುವದಿಲ್ಲ ; ಏಕೆಂದರೆ (ಒಂದು) ಕಾರ್ಯವು ಇನ್ನೊಂದು ಕಾರ್ಯದ ರೂಪವಾಗಿರುವದೆಂಬುದು ಹೊಂದುವದಿಲ್ಲ. ಇದರಂತೆ ದೇವತೆಗೆ ಐಶ್ವರ್ಯದ ಸಂಬಂಧವಿದ್ದರೂ ದ್ಯುಮೂರ್ಧತಾದಿ ಕಲ್ಪನೆಯು ಹೊಂದುವ ದಿಲ್ಲ. ಏಕೆಂದರೆ (ಅದು) ಕಾರಣವಾಗಿರುವದಿಲ್ಲ. ಮತ್ತು ಪರಮೇಶ್ವರನಿಗೆ ಅಧೀನ ವಾಗಿರುವ ಐಶ್ವರ್ಯವೇ (ದೇವತೆಗೆ ಇರುತ್ತದೆ). ಈ ಪಕ್ಷಗಳಲ್ಲೆಲ್ಲ ಆತ್ಮಶಬ್ದವು ಹೊಂದುವದಿಲ್ಲವೆಂಬ (ದೋಷ)ವೂ ಇದ್ದೇ ಇರುತ್ತದೆ.
ಸಾಕ್ಷಾದಪ್ಪವಿರೋಧಂ ಜೈಮಿನಿಃ ||೨೮|| ೨೮. ನೇರಾಗಿಯೇ (ಪರಮೇಶ್ವರೋಪಾಸನೆಯನ್ನು ಹೇಳಿದೆ ಯೆಂದರೂ) ಯಾವ ವಿರೋಧವೂ ಇಲ್ಲವೆಂದೇ ಜೈಮಿನೀ (ಎಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ)
ಮತಾಂತರ : ಇಲ್ಲಿ ನೇರಾಗಿ ಪರಮೇಶ್ವರೋಪಾಸನೆಯನ್ನೇ ಹೇಳಿದೆ
(ಭಾಷ್ಯ) ೨೧೨. ಪೂರ್ವ೦ ಜಾಠರಾಗ್ನಿಪ್ರತೀಕಃ ಜಾಠರಾಗ್ಯುಪಾಧಿಕೋ ವಾ ಪರಮೇಶ್ವರಃ ಉಪಾಸ್ಯ: ಇತ್ಯುಕ್ತಮ್ ಅನ್ನಪ್ರತಿಷ್ಠಿತತ್ವಾದ್ಯನುರೋಧೇನ | ಇದಾನೀಂ ತು ವಿನ್ಯವ ಪ್ರತೀಕೋಪಾಧಿಕಲ್ಪನಾಭ್ಯಾಂ ಸಾಕ್ಷಾದಪಿ ಪರಮೇಶ್ವರೋಪಾಸನಪರಿಗ್ರಹ ನ ಕಶ್ಚಿದ್ ವಿರೋಧಃ ಇತಿ ಜೈಮಿನಿರಾಚಾರ್ಯೊ ಮನ್ಯತೇ | ನನು ಜಾಠರಾಗ್ನಪರಿಗ್ರಹ ಅನ್ನಪ್ರತಿಷ್ಠಿತತ್ವವಚನಂ ಶಬ್ದಾದೀನಿ ಚ ಕಾರಣಾನಿ ವಿರುಧೀರನ್ ಇತಿ | ಅತ್ರೋಚ್ಯತೇ | ಅನ್ನಪ್ರತಿಷ್ಠಿತತ್ವವಚನಂ ತಾವತ್ ನ ವಿರುಧ್ಯತೇ । ನ ಹಿ ಇಹ
-
ಆದರೆ ಕಾರಣವು ಎಲ್ಲಾ ಕಾರ್ಯಗಳ ರೂಪದಲ್ಲಿಯೂ ಇರಬಹುದು. “ಅಗ್ನಿಯಿಂದ ಅಪ್ಪು ಆಯಿತು’ ಎಂದು ಮುಂತಾಗಿ ಕಾರ್ಯಗಳಿಗೇ ಪರಸ್ಪರವಾಗಿ ಕಾರ್ಯಕಾರಣಭಾವವನ್ನು ಶ್ರುತಿಯಲ್ಲಿ ಹೇಳಿದ್ದರೂ ಪರಮಾತ್ಮನೇ ಆಯಾ ರೂಪದಿಂದ ಕಾರಣನು ಎಂದು ಆ ವಚನಗಳ ಅಭಿಪ್ರಾಯವೆಂದು ಭಾವ. ಮುಂದ ೨-೩-೧೩ರ ಭಾಷ್ಯವನ್ನು ನೋಡಿ.
-
ಏಕೆಂದರೆ ಸರ್ವಜಗತ್ಕಾರಣತ್ವರೂಪವಾದ ಐಶ್ವರ್ಯವು ಪರಮೇಶ್ವರನಿಗೆ ಹೂರತು ಮತ್ತ ಯಾರಿಗೂ ಇರುವದಿಲ್ಲ. ಮುಂದ ೪-೪-೧೨ರ ಭಾಷ್ಯವನ್ನು ನೋಡಿ.
3.ಜಾಠರಾಗ್ನಿಯಾಗಲಿ ಭೂತಾಗ್ನಿಯಾಗಲಿ ದೇವತೆಯಾಗಲಿ ಎಲ್ಲರ ಆತ್ಮನಾಗಲಾರದು.
೩೪೦
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
‘ಪುರುಷವಿಧಂ ಪುರುಷೇತನ್ತಃಪ್ರತಿಷ್ಠಿತಂ ವೇದ” ಇತಿ ಜಾಠರಾಗ್ನಭಿಪ್ರಾಯಣ ಇದಮುಚ್ಯತೇ | ತಸ್ಯ ಅಪ್ರಕೃತತ್ವಾತ್ ಅಸಂಶಬ್ದ ತತ್ವಾಚ | ಕಥಂ ತರ್ಹಿ ? ಯತ್ ಪ್ರಕೃತಂ ಮೂರ್ಧಾದಿಚುಬುಕಾನೇಷು ಪುರುಷಾವಯವೇಷು ಪುರುಷವಿಧತ್ವಂ ಕಲ್ಪಿತಮ್ ತದಭಿಪ್ರಾಯಣ ಇದಮುಚ್ಯತೇ ‘ಪುರುಷವಿಧಂ ಪುರುಷೇಪ್ರತಿಷ್ಠಿತಂ ವೇದ” ಇತಿ | ಯಥಾ ವೃಕ್ಷ ಶಾಖಾಂ ಪ್ರತಿಷ್ಠಿತಾಂ ಪಶ್ಯತಿ ಇತಿ, ತದ್ವತ್ | ಅಥವಾ ಯಃ ಪ್ರಕೃತಃ ಪರಮಾತ್ಮಾ ಅಧ್ಯಾತ್ಮಮ್ ಅಧಿದೈವತಂ ಚ ಪುರುಷವಿಧತ್ಯೋಪಾಧಿ: ತಸ್ಯ ಯತ್ ಕೇವಲಂ ಸಾಕ್ಷಿರೂಪಮ್ ತದಭಿಪ್ರಾಯೇಣ ಇದಮುಚ್ಯತೇ - ಪುರುರ್ಷೇಸ್ತಪ್ರತಿಷ್ಠಿತಂ ವೇದ” ಇತಿ ||
(ಭಾಷ್ಯಾರ್ಥ) (ಈ) ಮೊದಲು ಜಾಠರಾಗ್ನಿ ಎಂಬ ಪ್ರತೀಕವುಳ್ಳ ಅಥವಾ ಜಾಠರಾಗ್ನಿ ಎಂಬ ಉಪಾಧಿಯುಳ್ಳ ಪರಮೇಶ್ವರನನ್ನು ಉಪಾಸನೆಮಾಡಬೇಕೆಂದು (ಶ್ರುತಿಯಲ್ಲಿ ಹೇಳಿದೆ) ಎಂದು ಅಂತಃಪ್ರತಿಷ್ಠಿತತ್ವವೇ ಮುಂತಾದದ್ದನ್ನು ಅನುಸರಿಸಿ ಹೇಳಿತ್ತು. ಆದರೆ ಈಗ ಪ್ರತೀಕೋಪಾಧಿಕಲ್ಪನೆಗಳನ್ನು ಬಿಟ್ಟೇ ನೇರಾಗಿಯೂ ಪರಮೇಶ್ವರನ ಉಪಾಸನೆಯನ್ನು (ಇಲ್ಲಿ) ಹಿಡಿದರೂ ಯಾವ ವಿರೋಧವೂ ಇಲ್ಲ ಎಂದು ಜೈಮಿನಿ’ ಎಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ.
(ಆಕ್ಷೇಪ) :- ಜಾಠರಾಗ್ನಿಯನ್ನು ಹಿಡಿಯದಿದ್ದರೆ ಅಂತಃಪ್ರತಿಷ್ಠಿತನಾಗಿರುವನೆಂಬ ಮಾತೂ ಶಬ್ದಾದಿಗಳೆಂಬ ಕಾರಣಗಳೂ ವಿರುದ್ಧವಾಗುವದಿಲ್ಲವೆ ?
(ಪರಿಹಾರ) :- ಇದಕ್ಕೆ ಪರಿಹಾರವನ್ನು ಹೇಳುತ್ತೇವೆ. ಮೊದಲನೆಯದಾಗಿ ಅಂತಃಪ್ರತಿಷ್ಠಿತನಾಗಿರುವನೆಂಬ ವಚನವು ವಿರುದ್ಧವಾಗುವದಿಲ್ಲ. ಏಕೆಂದರೆ ಇಲ್ಲಿ ‘ಪುರುಷವಿದನೆಂದೂ ಪುರುಷನಲ್ಲಿ ಒಳಗೆ ಇದ್ದುಕೊಂಡಿರುವನೆಂದೂ (ಯಾವನು) ತಿಳಿಯುವನೋ’’ (ಶತ ಬ್ರಾ.) ಎಂದು ಜಾಠರಾಗ್ನಿಯನ್ನು (ತಿಳಿಸುವ) ಅಭಿಪ್ರಾಯ ದಿಂದ ಹೇಳಿರುವದಿಲ್ಲ. ಏಕೆಂದರೆ ಆ (ಜಾಠರಾಗ್ನಿಯು) ಇಲ್ಲಿ ಪ್ರಕೃತವಾಗಿರುವದೂ ಇಲ್ಲ. (ಅದನ್ನು) ಶಬ್ದದಿಂದ ಹೇಳಿರುವದೂ ಇಲ್ಲ. ಮತ್ತೇನೆಂದರೆ, ಮೂರ್ಧವು ಮೊದಲಾಗಿ ಗಲ್ಲದವರೆಗಿನ ಪುರುಷನ ಅವಯವಗಳಲ್ಲಿ ಪುರುಷವಿಧತ್ವವನ್ನು ಕಲ್ಪಿಸಿರುವದು ಪ್ರಕೃತವಾಗಿದೆಯಲ್ಲ, ಅದರ ಅಭಿಪ್ರಾಯದಿಂದ ‘‘ಪುರುಷವಿದನೆಂದೂ ಪುರುಷನಲ್ಲಿ ಒಳಗೆ ಇದ್ದುಕೊಂಡಿರುವನೆಂದೂ (ಯಾವನು) ತಿಳಿಯುವನೋ’’ ಎಂದು. ಹೇಳಿದೆ. “ಮರದಲ್ಲಿ ಕೊಂಬೆ ಇರುವದನ್ನು ತಿಳಿಯುತ್ತಾನೆ” ಎಂದು ಹೇಗೆ
- ಈ ಜೈಮಿನಿ ಯಾರೆಂಬುದು ತಿಳಿಯದು. ಕರ್ಮವೇ ಫಲದಾತೃವಂದೂ ಈಶ್ವರನು ಬೇರೆಯಾಗಿಲ್ಲವೆಂದೂ ಹೇಳುವ ಆಚಾರ್ಯನಿವನಲ್ಲವೆಂಬುದು ಸ್ಪಷ್ಟವಾಗಿಯೇ ಇದ.
ಅಧಿ. ೭. ಸೂ. ೨೮] ವೈಶ್ವಾನರ, ಅಗ್ನಿ - ಎಂಬ ಹೆಸರು, ಗಾರ್ಹಪತ್ಯಾದಿಕಲ್ಪನೆಗೂ ಗತಿ ೩೪೧ (ಹೇಳುವರೋ) ಅದರಂತೆಯೇ ಇದು. ಅಥವಾ ಅಧ್ಯಾತ್ಮವಾಗಿಯೂ ಅಧಿದೈವ ವಾಗಿಯೂ ಪುರುಷವಿಧತ್ವವೆಂಬ ಉಪಾಧಿಯುಳ್ಳ ಪರಮಾತ್ಮನು ಪ್ರಕೃತನಾಗಿರು ವನಷ್ಟೆ, ಅವನ ಕೇವಲ ಸಾಕ್ಷಿರೂಪವಿದೆಯಲ್ಲ, ಅದನ್ನು (ತಿಳಿಸುವ) ಅಭಿಪ್ರಾಯ ದಿಂದ (ಪುರುಷವಿದನೆಂದೂ) ಪುರುಷನಲ್ಲಿ ಒಳಗೆ ಇದ್ದುಕೊಂಡಿರುವನೆಂದೂ (ಯಾವನು) ತಿಳಿಯುತ್ತಾನೋ’’ ಎಂದು ಹೇಳಿದೆ.
ವೈಶ್ವಾನರ, ಅಗ್ನಿ - ಎಂಬ ಹೆಸರುಗಳಿಗೂ
ಗಾರ್ಹಪತ್ಯಾದಿಕಲ್ಪನೆಗೂ ಗತಿ
(ಭಾಷ್ಯ) ೨೧೩. ನಿಶ್ಚಿತೇ ಚ ಪೂರ್ವಾಪರಾಲೋಚನವಶೇನ ಪರಮಾತ್ಮಪರಿಗ್ರಹ ತದ್ವಿಷಯ ಏವ ವೈಶ್ವಾನರಶಬ್ದ : ಕೇನಚಿತ್ ಯೋಗೇನ ವರ್ತಿಷ್ಯತೇ 1 ವಿಶ್ವಶ್ಯಾಯಂ ನರಶ್ಚ ಇತಿ, ವಿಶ್ಲೇಷಾಂ ವಾ ಅಯಂ ನರಃ, ವಿಶ್ವೇ ವಾ ನರಾ ಅಸ್ಯ ಇತಿ ವಿಶ್ವಾನರಃ ಪರಮಾತ್ಮಾ 1 ಸರ್ವಾತ್ಮತ್ವಾತ್ | ವಿಶ್ವಾನರ ಏವ ವೈಶ್ವಾನರಃ | ತದ್ಧಿತಃ ಅನನ್ಯಾರ್ಥ, ರಾಕ್ಷಸವಾಯಸಾದಿವತ್ | ಅಗ್ನಿಶಬ್ಲೂಪಿ ಅಗ್ರಣೀತ್ಪಾದಿಯೋಗಾಶ್ರಯಣೇನ ಪರಮಾತ್ಮವಿಷಯ ಏವ ಭವಿಷ್ಯತಿ | ಗಾರ್ಹಪತ್ಯಾದಿಕಲ್ಪನಂ ಪ್ರಾಣಾಹುತ್ಯಧಿಕರಣತ್ವಂ ಚ ಪರಮಾತ್ಮನೋSಪಿ ಸರ್ವಾತ್ಮತ್ವಾತ್ ಉಪಪದ್ಯತೇ ||
(ಭಾಷ್ಯಾರ್ಥ) ಹಿಂದುಮುಂದಿನ (ಸಂದರ್ಭವನ್ನು ) ಆಲೋಚನೆ (ಮಾಡಿದ್ದರ) ವಶದಿಂದ ಪರಮಾತ್ಮನನ್ನೇ (ಇಲ್ಲಿ) ತೆಗೆದುಕೊಳ್ಳಬೇಕೆಂದು ನಿಶ್ಚಯವಾದಮೇಲೆ ವೈಶ್ವಾನರ ಎಂಬ ಶಬ್ದವೂ ಯಾವದಾದರೊಂದು ಯೋಗದಿಂದ ಆ (ಪರಮೇಶ್ವರನ) ವಿಷಯ
-
ಈ ಕಲ್ಪನೆಗೆ ಮೂಲವಾದ ಶ್ರುತಿಯನ್ನು ೩೧ನೆಯ ಸೂತ್ರದ ಭಾಷ್ಯದಲ್ಲಿ ಉದಾಹರಿಸಿದ. ಪುರುಷಾವಯವಗಳಲ್ಲಿ ವೈಶ್ವಾನರನ ಅವಯವಗಳನ್ನು ಸಂಪಾದನೆಮಾಡಿ ಪುರುಷವಿಧತ್ವವನ್ನು ಕಲ್ಪಿಸಿದೆಯಲ್ಲ, ಅದನ್ನೇ ಈ ಶ್ರುತಿಯಲ್ಲಿ ಹೇಳಿದೆ. ಅವಯವಸಂಪತ್ತಿ ಯಿಂದ ಪುರುಷ ವಿಧತ್ವವನ್ನು ಅವಯವಗಳು ಅವಯವಸಮುದಾಯ(ಶರೀರ)ದಲ್ಲಿ - ಕೊಂಬೆಗಳು ಮಧ್ಯದಲ್ಲಿರುವಂತೆ - ಇರುವವೆಂದು ತಿಳಿಸುವದಕ್ಕೆ ಅಂತಃಪ್ರತಿಷ್ಠಿತತ್ವವನ್ನು ಹೇಳಿದ ಎಂದು ಅಭಿಪ್ರಾಯ.
-
ಪುರುಷಾವಯವಗಳಲ್ಲಿ ಸಂಪಾದನಮಾಡಿರುವದೇ ಇಲ್ಲಿಯೂ ಪುರುಷವಿಧತ್ವವು.
-
ಪುರುಷರೆಲ್ಲರಿಗೂ ಸಾಕ್ಷಿ ಎಂಬುದನ್ನು ತಿಳಿಸುವದಕ್ಕೆ ಪುರುಷನೊಳಗೆ ಇರುತ್ತಾನೆಂದಿದ ಎಂದು ಅಭಿಪ್ರಾಯ.೩೪೨
ಬ್ರಹ್ಮಸೂತ್ರಭಾಷ್ಯ
[ಅ. ೧. ಮಾ. ೨. ವಾಗಿಯೇ ವೃತ್ತಿಯುಳ್ಳದ್ದಾಗುತ್ತದೆ. ಇವನು ವಿಶ್ವನಾದ ನರನು’, ಅಥವಾ ಇವನು ವಿಶ್ವರ ನರನು, ಅಥವಾ ವಿಶ್ಚನರರೂ ಈತನವರು - ಆದ್ದರಿಂದ ಪರಮಾತ್ಮನು ವಿಶ್ವಾನರನು ಎನ್ನಿಸುತ್ತಾನೆ ; ಏಕೆಂದರೆ ಅವನು ಸರ್ವಾತ್ಮನಾಗಿರುತ್ತಾನೆ. ರಾಕ್ಷಸ, ವಾಯಸ - ಮುಂತಾದ ಶಬ್ದಗಳಂತೆ ವಿಶ್ವಾನರನೇ ವೈಶ್ವಾನರನು (ಎಂದು) ಸ್ವಾರ್ಥದಲ್ಲಿ (ವಿಶ್ವಾನರಶಬ್ದಕ್ಕೆ) ತದ್ದಿತ (ಪ್ರತ್ಯಯವು ಬಂದಿರುತ್ತದೆ). ಅಗ್ನಿ ಎಂಬ ಶಬ್ದವೂ ಅಗ್ರಣೀತ್ವವೇ ಮುಂತಾದ ಯೋಗವನ್ನು ಆಶ್ರಯಿಸಿದರೆ ಪರ ಮಾತ್ಮನ ವಿಷಯವೇ ಆಗಬಹುದು. ಗಾರ್ಹಪತ್ಯವೇ ಮುಂತಾದವುಗಳ ಕಲ್ಪನವೂ ಪ್ರಾಣಾಹುತ್ಯಧಿಕರಣತ್ವವೂ ಸರ್ವಾತ್ಮನಾದ್ದರಿಂದ ಪರಮಾತ್ಮನಿಗೇ ಹೊಂದುತ್ತದೆ. ಪ್ರಾದೇಶಮಾತ್ರನೆಂಬ ವಿಶೇಷಣಕ್ಕೆ ಗತಿ
(ಭಾಷ್ಯ) ೨೧೪. ಕಥಂ ಪುನಃ ಪರಮೇಶ್ವರಪರಿಗ್ರಹ ಪ್ರಾದೇಶಮಾತ್ರಶ್ರುತಿಃ ಉಪ ಪದ್ಯತೇ ಇತಿ | ತಾಂ ವ್ಯಾಖ್ಯಾತುಮ್ ಆರಭತೇ -
(ಭಾಷ್ಯಾರ್ಥ) ಇನ್ನು ಪರಮೇಶ್ವರನನ್ನು ತೆಗೆದುಕೊಂಡಾಗ ‘ಪ್ರಾದೇಶಮಾತ್ರ” ನೆಂಬ ಶ್ರುತಿ ಹೇಗೆ ಹೊಂದುತ್ತದ ?- ಎಂದರೆ ಆ (ಶ್ರುತಿಯ ಅರ್ಥವನ್ನು) ವಿವರಿಸುವದಕ್ಕೆ ಆರಂಭಿಸುತ್ತಾರೆ :
ಅಭಿವ್ಯಕ್ತರಿತ್ಯಾತ್ಮರಥಃ ||೨೯||
- ಎಲ್ಲಾ ಜೀವರ ರೂಪವಾಗಿರುವವನು. 2. ಎಲ್ಲರನ್ನೂ ಕರ್ಮಫಲಕ್ಕೆ ಒಯ್ಯುವವನು. 3. ಈತನ ವಶದಲ್ಲಿರುವವರು, ಅಥವಾ ಈತನಿಗಿಂತ ಭಿನ್ನರಲ್ಲದವರು. 4. ರಕ್ಷ ಏವ ರಾಕ್ಷಸಃ, ವಯ ಏವ ವಾಯಸಃ - ಎಂಬಂತೆ.
5.ಅಗ್ರವನ್ನು ಎಂದರೆ ಕರ್ಮಫಲವನ್ನು ಹೊಂದಿಸುತ್ತಾನೆ. ಆದ್ದರಿಂದ ಅಗ್ನಿಯು ; ಅಥವಾ ಮುಂದಿಟ್ಟು ಕೊಂಡು ಫಲಕ್ಕೆ ಕರೆದುಕೊಂಡು ಹೋಗುತ್ತಾನೆ, ಆದ್ದರಿಂದ ಅಗ್ನಿಯು.
-
ಇದುವರೆಗೆ ಶತಪಥಬ್ರಾಹ್ಮಣದಲ್ಲಿಯೂ ಪರಮೇಶ್ವರನ ಉಪಾಸನೆಯನ್ನೇ ಹೇಳಿದ ಎಂದು ಸಾಧಿಸಿದ್ಧಾಯಿತು. ಈಗ ಪ್ರಕೃತವಾದ ಛಾಂದೋಗ್ಯದಲ್ಲಿರುವ ಲಿಂಗಗಳೂ ಪರಮೇಶ್ವರ ನಿಗೇ ಆಗುತ್ತವೆ ಎಂದು ಹೇಳಿದೆ.
-
ಚೋಟಿನ ಅಳತೆಯವನು.
ಅಧಿ. ೭. ಸೂ. ೩೦] ಪ್ರಾದೇಶಮಾತ್ರನೆಂಬ ವಿಶೇಷಣಕ್ಕೆ ಗತಿ
೩೪೩
೨೯. ಅಭಿವ್ಯಕ್ತಿಯಿಂದ (ಪ್ರಾದೇಶಮಾತ್ರನು) ಎಂದು ಆತ್ಮರಥನು (ಅಭಿಪ್ರಾಯಪಡುತ್ತಾನೆ).
(ಭಾಷ್ಯ) ೨೧೫. ಅತಿಮಾತ್ರಸ್ಯಾಪಿ ಪರಮೇಶ್ವರಸ್ಯ ಪ್ರಾದೇಶಮಾತ್ರತ್ವಮ್ ಅಭಿವ್ಯಕ್ತಿನಿಮಿತ್ತಂ ಸ್ಯಾತ್ | ಅಭಿವ್ಯಜ್ಯತೇ ಕಿಲ ಪ್ರಾದೇಶಮಾತ್ರಪರಿಮಾಣ ಪರಮೇಶ್ವರಃ ಉಪಾಸಕಾನಾಂ ಕೃತೇ | ಪ್ರದೇಶೇಷು ವಾ ಹೃದಯಾದಿಷು ಉಪ ಲಬ್ಬಿ ಸ್ಟಾನೇಷು ವಿಶೇಷೇಣ ಅಭಿವ್ಯಜ್ಯತೇ | ಅತಃ ಪರಮೇಶ್ವರ್‌ಪಿ ಪ್ರಾದೇಶ ಮಾತ್ರಶ್ರುತಿಃ ಅಭಿವ್ಯಕ್ತರುಪಪದ್ಯತೇ ಇತಿ ಆತ್ಮರಥ್ಯ ಆಚಾರ್ಯ ಮನ್ಯತೇ ||
(ಭಾಷ್ಯಾರ್ಥ) | ಅತಿಮಾತ್ರನಾದರೂ’ ಪರಮೇಶ್ವರನು ಪ್ರಾದೇಶಮಾತ್ರನು (ಎಂದು ಹೇಳಿರು ವದು) ಅಭಿವ್ಯಕ್ತಿಯ ನಿಮಿತ್ತದಿಂದ ಆಗಬಹುದು. ಏಕೆಂದರೆ ಪರಮೇಶ್ವರನು ಉಪಾಸಕರಿಗೋಸ್ಕರ ಒಂದು ಚೋಟಿನ ಪರಿಮಾಣದವನಾಗಿ ಅಭಿವ್ಯಕ್ತನಾಗುತ್ತಾ ನಂತ. ಅಥವಾ ಹೃದಯವೇ ಮುಂತಾದ ಪ್ರದೇಶಗಳಲ್ಲಿ, ಎಂದರೆ ಅರಿಯುವ ಸ್ಥಾನಗಳಲ್ಲಿ, ವಿಶೇಷವಾಗಿ ಅಭಿವ್ಯಕ್ತನಾಗುತ್ತಾನೆ. ಆದ್ದರಿಂದ ಪ್ರಾದೇಶಮಾತ್ರನೆಂಬ ಶ್ರುತಿಯು ಅಭಿವ್ಯಕ್ತಿಯ (ನಿಮಿತ್ತ)ದಿಂದ ಪರಮೇಶ್ವರನಿಗೂ ಹೊಂದುತ್ತದೆ - ಎಂದು ಆತ್ಮರಥನೆಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ.
ಅನುಸ್ಮತೇರ್ಬಾದರಿಃ ll೩oll ೩೦. ಅನುಸ್ಮೃತಿಯಿಂದ (ಪ್ರಾದೇಶಮಾತ್ರನು) ಎಂದು ಬಾದರಿಯು (ಅಭಿಪ್ರಾಯಪಡುತ್ತಾನೆ).
(ಭಾಷ್ಯ) ೨೧೬. ಪ್ರಾದೇಶಮಾತ್ರಹೃದಯಪ್ರತಿಷ್ಟೇನ ವಾ ಅಯಂ ಮನಸಾ ಅನುಸ್ಮರ್ಯತೇ | ತೇನ ಪ್ರಾದೇಶಮಾತ್ರ ಇತ್ಯುಚ್ಯತೇ | ಯಥಾ ಪ್ರಸ್ಥಮಿತಾ ಯವಾಸಿ
-
ಅಳತೆಯನ್ನೂ ಮೀರಿ ಅನಂತನಾಗಿದ್ದರೂ,
-
ಕಾಣಿಸಿಕೊಳ್ಳುತ್ತಾನೆ. ಇಲ್ಲಿ ಕಿಲ (ಅಂತ) ಎಂಬ ಶಬ್ದವು ಉಪಾಸಕರ ಅನುಭವ ಪ್ರಸಿದ್ಧಿಯನ್ನು ಹೇಳುತ್ತದೆ.
-
ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿಕೊಂಡಿದ್ದರೂ ಹೃದಯವೇ ಮುಂತಾದ ಸ್ಥಾನಗಳಲ್ಲಿ ಮಾತ್ರ ವಿಶೇಷರೂಪದಿಂದ ಆತನನ್ನು ಸಾಕ್ಷಾತ್ಕಾರಮಾಡಿಕೊಳ್ಳಬಹುದು ಎಂದು ಅಭಿಪ್ರಾಯ.
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಪ್ರಸ್ಥಾ ಇತಿ ಉಚ್ಛನ್ನೇ ತದ್ವತ್ | ಯದ್ಯಪಿ ಚ ಯವೇಷು ಸ್ವಗತಮೇವ ಪರಿಮಾಣಂ ಪ್ರಸ್ಥಸಂಬದ್ಧಾತ್ ವ್ಯಜ್ಯತೇ, ನ ಚೇಹ ಪರಮೇಶ್ವರಗತಂ ಕಿಂಚಿತ್ ಪರಿಮಾಣಮ್ ಅಸ್ತಿ ಯದ್ ಹೃದಯಸಂಬಸ್ಥಾತ್ ವ್ಯಜ್ಯತೇ, ತಥಾಪಿ ಪ್ರಯುಕ್ತಾಯಾಃ ಪ್ರಾದೇಶ ಮಾತ್ರಶ್ರುತೇ ಸಂಭವತಿ ಯಥಾಕಥಂಚಿತ್ ಅನುಸ್ಮರಣಮ್ ಆಲಮೃನಮ್ ಇತಿ ಉಚ್ಯತೇ | ಪ್ರಾದೇಶಮಾತ್ರತೇನ ವಾ ಅಯಮ್ ಅಪ್ರಾದೇಶಮಾತ್ರೋಪಿ ಅನು ಸ್ಮರಣೀಯಃ ಪ್ರಾದೇಶಮಾತ್ರಶ್ರುತ್ಯರ್ಥವತ್ತಾಯ್ಯ | ಏವಮ್ ಅನುಸ್ಮೃತಿನಿಮಿತ್ತಾ
ಪರಮೇಶ್ವರ ಪ್ರಾದೇಶಮಾತ್ರಶ್ರುತಿಃ ಇತಿ ಬಾದರಿ: ಆಚಾರ್ಯೊ ಮನ್ಯತೇ ||
(ಭಾಷ್ಯಾರ್ಥ) ಪ್ರಾದೇಶಮಾತ್ರವಾದ ಹೃದಯದಲ್ಲಿರುವ ಮನಸ್ಸಿನಿಂದ ಇವನನ್ನು ಅನುಸ್ಮರಣೆಮಾಡುತ್ತಾರೆ ; ಅದರಿಂದ ಪ್ರಾದೇಶಮಾತ್ರನು ಎನಿಸುತ್ತಾನೆ. ಹೇಗೆ ಬಳ್ಳದಲ್ಲಿ ಅಳದ ಜವೆಕಾಳನ್ನು ಬಳ್ಳ (ಕಾಳು) ಎನ್ನುತ್ತಾರೋ ಅದರಂತೆಯೇ (ಇದು). ಜವೆಕಾಳಿನಲ್ಲಿ ಸ್ವಗತವಾಗಿದ್ದುಕೊಂಡಿರುವ ಪರಿಮಾಣವೇ ಬಳ್ಳದ ಸಂಬಂಧದಿಂದ ವ್ಯಕ್ತವಾಗುತ್ತದೆ ; ಆದರೆ ಪರಮೇಶ್ವರಗತವಾಗಿರುವ ಯಾವದೂಂದು ಪರಿಮಾಣವೂ ಹೃದಯಸಂಬಂಧದಿಂದ ವ್ಯಕ್ತವಾಗುತ್ತದೆ ಎಂಬುದಿಲ್ಲ. ಆದರೂ ಪ್ರಾದೇಶಮಾತ್ರ ಎಂಬ ಶ್ರುತಿಯು ಪ್ರಯುಕ್ತವಾಗಿರುವರಿಂದ (ಅದಕ್ಕೆ) ಅನುಸ್ಮೃತಿಯು ಹೇಗೋ ಆಲಂಬನವಾಗಬಹುದಾಗಿದೆ ಎಂದು (ಇಲ್ಲಿ ಹೀಗೆ) ಹೇಳಿದೆ’ ಅಥವಾ ಪ್ರಾದೇಶಮಾತ್ರದವನಲ್ಲವಾದರೂ ಈತನನ್ನು ಪ್ರಾದೇಶಮಾತ್ರಕೃತಿಯ ಸಾರ್ಥಕ್ಯಕ್ಕಾಗಿ ಪ್ರಾದೇಶಮಾತ್ರನೆಂದು ಅನುಸ್ಮರಣೆಮಾಡಬೇಕು (ಎಂದಾದರೂ ಅರ್ಥವನ್ನು ಮಾಡಬಹುದು). ಹೀಗೆ ಅನುಸ್ಮೃತಿಯ ನಿಮಿತ್ತವಾಗಿ ಪರಮೇಶ್ವರನಲ್ಲಿ ಪ್ರಾದೇಶ ಮಾತ್ರಶ್ರುತಿಯು (ಪ್ರವೃತ್ತವಾಗಿದೆ) ಎಂದು ಬಾದರಿ ಎಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ.
ಸಂಪತ್ಕರಿತಿ ಜೈಮಿನಿಸ್ತಥಾ ಹಿ ದರ್ಶಯತಿ ||೩೧|| ೩೧. ಸಂಪತ್ತಿಯಿಂದ (ಪ್ರಾದೇಶಮಾತ್ರನು) ಎಂದು ಜೈಮಿನಿಯು (ಅಭಿಪ್ರಾಯಪಡುತ್ತಾನೆ). ಹಾಗಲ್ಲವೆ, (ಶ್ರುತಿಯು) ತಿಳಿಸುತ್ತದೆ ?
- ಹೃದಯವು ಪ್ರಾದೇಶಮಾತ್ರವಾಗಿರುವದರಿಂದ ಅದರಲ್ಲಿ ಉಂಟಾಗುವ ಮನಸ್ಸಿನ ಅನುಸ್ಮೃತಿಯೂ ಪ್ರಾದೇಶಮಾತ್ರವೆನ್ನಬಹುದು ; ಆ ಅನುಸ್ಮತಿಗೆ ವಿಷಯವಾಗಿರುವದರಿಂದ ಪರಮೇಶ್ವರನೂ ಪ್ರಾದೇಶಮಾತ್ರನನಿಸುತ್ತಾನೆ - ಎಂದು ಹೇಗೋ ಕಲ್ಪಿಸಬೇಕು ಎಂದು ಭಾವ.
೩೪೫
ಅಧಿ. ೭. ಸೂ. ೩೧] ಪ್ರಾದೇಶಮಾತ್ರನೆಂಬ ವಿಶೇಷಣಕ್ಕೆ ಗತಿ
(ಭಾಷ್ಯ) ೨೧೭. ಸಂಪತ್ತಿನಿಮಿತ್ತಾ ವಾ ಸ್ಯಾತ್ ಪ್ರಾದೇಶಮಾತ್ರಶ್ರುತಿ: 1 ಕುತಃ ? ತಥಾ ಹಿ ಸಮಾನಪ್ರಕರಣಂ ವಾಜಸನೇಯಿಬ್ರಾಹ್ಮಣಂ ದ್ಯುಪ್ರಕೃತೀನ್ ಪೃಥಿವೀಪರ್ಯನಾನ್ ತೈಲೋಕ್ಯಾತ್ಮನೋ ವೈಶ್ವಾನರಸ್ಯ ಅವಯವಾನ್ ಅಧ್ಯಾತ್ಮ ಮೂರ್ಧಪ್ರಕೃತಿಷು ಚುಬುಕಪರ್ಯನೇಷು ದೇಹಾವಯವೇಷು ಸಂಪಾದಯತ್ ಪ್ರಾದೇಶಮಾತ್ರಸಂಪತ್ತಿಂ ಪರಮೇಶ್ವರಸ್ಯ ದರ್ಶಯತಿ - ‘ಪ್ರಾದೇಶಮಾತ್ರಮಿವ ಹ ವೈ ದೇವಾಃ ಸುವಿದಿತಾ ಅಭಿಸಂಪನ್ನಾಸ್ತಥಾ ನು ವ ಏತಾನ್ ವಕ್ಷಾಮಿ ಯಥಾ ಪ್ರಾದೇಶಮಾತ್ರಮೇವಾಭಿ ಸಂಪಾದಯಿಷ್ಕಾಮೀತಿ (ಶತ. ಬ್ರಾ. ೧೦-೬-೧-೧೦) ಸ ಹೋವಾಚ ಮೂರ್ಧಾನ ಮುಪದಿಶನ್ನುವಾಚೈಷ ವಾ ಅತಿಷ್ಠಾ ವೈಶ್ವಾನರ ಇತಿ | ಚಕ್ಷುಷೀ ಉಪದಿಶನ್ ಉವಾಚ ಏಷ ವೈ ಸುತೇಜಾ ವೈಶ್ವಾನರ ಇತಿ | ನಾಸಿಕೇ ಉಪದಿಶನ್ನುವಾಚೈಷ ವ್ಯ ಪೃರ್ಥಾತ್ಮಾ ವೈಶ್ವಾನರ ಇತಿ | ಮುಖ್ಯಮ್ ಆಕಾಶಮ್ ಉಪದಿಶನ್ನು ವಾಚೈಷ ವ್ಯ ಬಹುಲೋ ವೈಶ್ವಾನರ ಇತಿ | ಮುಖ್ಯಾ ಅಪ ಉಪದಿಶನ್ನು ವಾಚೈಷ ವೈ ರಯಿ ರ್ವೆಶ್ವಾನರ ಇತಿ | ಚುಬುಕಮುಪದಿಶನ್ನುವಾಚೈಷ ವೈ ಪ್ರತಿಷ್ಠಾ ವೈಶ್ವಾನರ ಇತಿ’ (ಶತ. ಬ್ರಾ. ೧೦-೬-೧-೧೧) ಚುಬುಕಮ್ ಇತಿ ಅಧರಂ ಮುಖಫಲಕಮ್ ಉಚ್ಯತೇ | ಯದ್ಯಪಿ ವಾಜಸನೇಯಕೇ ದೌರತಿಷ್ಠಾತ್ವಗುಣಾ ಸಮಾಮ್ಮಾಯತೇ, ಆದಿತ್ಯಶ್ಚ ಸುತೇಜಸ್ಯ ಗುಣಃ, ಛಾಂದೋಗ್ಯ ಪುನಃ ದೈಃ ಸುತೇಜಸ್ಯಗುಣಾ ಸಮಾಮ್ರಾಯತೇ ಆದಿತ್ಯಶ್ಚ ವಿಶ್ವರೂಪತ್ವಗುಣಃ, ತಥಾಪಿ ನೃತಾವತಾ ವಿಶೇಷಣ ಕಿಂಚಿತ್ ಹೀಯತೇ | ಪ್ರಾದೇಶಮಾತ್ರಶ್ರುತೀರವಿಶೇಷಾತ್ | ಸರ್ವಶಾಖಾಪ್ರತ್ಯಯ ತಾಚ್ಚ | ಸಂಪತ್ತಿನಿಮಿತ್ತಾಂ ಪ್ರಾದೇಶಮಾತ್ರಶ್ರುತಿಂ ಯುಕ್ತತರಾಂ ಜೈಮಿನಿ ರಾಚಾರ್ಯ ಮತೇ ||
(ಭಾಷ್ಯಾರ್ಥ) ಅಥವಾ (ಈ) ಪ್ರಾದೇಶಮಾತ್ರಶ್ರುತಿಯು ಸಂಪತ್ತಿಯ ನಿಮಿತ್ತದಿಂದಲಾದರೂ ಆಗಬಹುದು. ಏಕ ? ಎಂದರೆ, ಸಮಾನಪ್ರಕರಣವುಳ್ಳ ವಾಜಸನೇಯಿಬ್ರಾಹ್ಮಣವು’ ಹಾಗೆಯೇ ದ್ಯುಲೋಕವೇ ಮುಂತಾಗಿ ಪೃಥಿವಿಯವರೆಗೆ (ಇರುವ) ತೈಲೋಕ್ಯಾತ್ಮನಾದ ವೈಶ್ವಾನರನ ಅವಯವಗಳನ್ನು ಅಧ್ಯಾತ್ಮವಾದ ಮೂರ್ಧವು ಮೊದಲಾಗಿ ಚುಬುಕ ದವರೆಗಿನ ದೇಹಾವಯವಗಳಲ್ಲಿ ಸಂಪಾದನೆಮಾಡಿ ಪರಮೇಶ್ವರನಿಗೆ ಪ್ರಾದೇಶಮಾತ್ರ
- ಅಲ್ಲಿಯೂ ಅಶ್ವಪತಿಗೂ ಔಪಮನ್ಯವನೇ ಮುಂತಾದವರಿಗೂ ನಡೆದ ವೈಶ್ವಾನರ ವಿಷಯಕವಾದ ಸಂವಾದವಿದೆ.
೩೪೬
ಬ್ರಹ್ಮಸೂತ್ರಭಾಷ್ಯ
[ಅ. ೧. ಪಾ. ೨.
ಸಂಪತ್ತಿಯನ್ನೇ ತಿಳಿಸುತ್ತದೆ. (ಹೇಗಂದರ) : “ಪ್ರಾದೇಶಮಾತ್ರವಾಗಿರುವಂತೆ (ಈಶ್ವರನನ್ನು) ದೇವತೆಗಳು ಚೆನ್ನಾಗಿ ತಿಳಿದುಕೊಂಡು (ಅವನನ್ನು) ಪಡೆದು ಕೊಂಡರಲ್ಲವೆ ?* ಹಾಗೆಯೇ ನಿಮಗತಿ ಪ್ರಾದೇಶಮಾತ್ರನನ್ನಾಗಿಯೇ ಸಂಪಾದನೆಮಾಡು ವಂತೆ ಈ (ಅವಯವಗಳನ್ನು ) ಹೇಳುವನು (ಎಂದನು)” (ಶತ. ಬ್ರಾ. ೧೦-೬-೧ ೧೦). ಅವನು ಹೇಳಿದ್ದು ಹೇಗೆಂದರೆ : (ತನ್ನ) ಮೂರ್ಧವನ್ನು ತೋರಿಸಿ ಇವನೇ ಅತಿಷ್ಠಾವೈಶ್ವಾನರನು ಎಂದನು ; ಕಣ್ಣುಗಳನ್ನು ತೋರಿಸಿ ಇವನೇ ಸುತೇಜಾ ವೈಶ್ವಾನರನು ಎಂದನು ; ಮೂಗಿನ ಹೊಳ್ಳೆಗಳನ್ನು ತೋರಿಸಿ ಇವನೇ ಪೃಥರ್ಗ್ವತ್ಮರ್ಾತ್ಮ ವೈಶ್ವಾನರನು ಎಂದನು ; ಮುಖದಲ್ಲಿರುವ ಆಕಾಶವನ್ನು ತೋರಿಸಿ ಇವನೇ ಬಹುಲ ವೈಶ್ವಾನರನು ಎಂದನು ; ಮುಖದ ನೀರನ್ನು ತೋರಿಸಿ ಇವನೇ ರಯಿ ವೈಶ್ವಾನರನು ಎಂದನು ; ಚುಬುಕವನ್ನು ತೋರಿಸಿ ಇವನೇ ಪ್ರತಿಷ್ಠಾ ವೈಶ್ವಾನರನು ಎಂದನು” (ಶತ. ಬ್ರಾ. ೧೦-೬-೧-೧೦) (ಇಲ್ಲಿ) ಚುಬುಕವೆಂದರೆ ಕೆಳಗಿನ ಮುಖದ ಹಲಗೆ (ಗಲ್ಲವು). ವಾಜಸನೇಯಕದಲ್ಲಿ ದ್ಯುಲೋಕವು ಅತಿಷ್ಠಾತ್ವಗುಣವುಳ್ಳದ್ದೆಂದು ಹೇಳಿದೆ, ಆದಿತ್ಯನೋ ಸುತೇಜಸ್ಯಗುಣವುಳ್ಳವನೆಂದು (ಹೇಳಿದೆ) : ಆದರೆ ಛಾಂದೋಗ್ಯದಲ್ಲಿ ದ್ಯುಲೋಕವು ಸುತೇಜಸ್ಯಗುಣವುಳ್ಳದ್ದೆಂದೂ ಆದಿತ್ಯನು ವಿಶ್ವರೂಪತ್ವಗುಣವುಳ್ಳವನೆಂದೂ ಹೇಳಿದೆ. ಹೀಗಿದ್ದರೂ ಇಷ್ಟು ವಿಶೇಷದಿಂದ ಯಾವ ಹಾನಿಯೂ ಇಲ್ಲ ; ಏಕೆಂದರೆ ಪ್ರಾದೇಶಮಾತ್ರಶ್ರುತಿಯು (ಎರಡಕ್ಕೂ) ಸಮಾನ ವಾಗಿದೆ. ಸರ್ವಶಾಖಾಪ್ರತ್ಯಯನ್ಯಾಯದಿಂದಲೂ (ಹೀಗೆಂದು ತಿಳಿಯಬೇಕು).
-
ಮೂರ್ಧದಿಂದ ಚುಬುಕದವರಗಿರುವ ಪ್ರದೇಶವು ಪ್ರಾದೇಶಮಾತ್ರವಾಗಿರುವದರಿಂದ ಅಷ್ಟರಲ್ಲಿಯೇ ಪರಮೇಶ್ವರನಿಗೆ ಸಂಪತ್ತಿಯನ್ನು ಮಾಡಿ ತೋರಿಸಿದೆ.
-
ಈ ಅರ್ಥವನ್ನು ನ್ಯಾಯನಿರ್ಣಯ ಮತ್ತು ರತ್ನಪ್ರಭಾವ್ಯಾಖ್ಯಾನ - ಇವನ್ನನುಸರಿಸಿ ಬರೆದಿದೆ. ಕಲ್ಪತರುವಿನಲ್ಲಿ ದೇವತೆಗಳು ಪ್ರಾದೇಶಮಾತ್ರರಾಗಿ (ಉಪಾಸನೆಯಿಂದ) ಪ್ರಾಪ್ತ ರಾದರೆ ಸುವಿದಿತರಾಗುತ್ತಾರಲ್ಲವೆ?’’ ಎಂಬ ಅರ್ಥವನ್ನು ತೆಗೆದಿದೆ.
-
ಪ್ರಾಚೀನಶಾಲ ಔಪಮನ್ಯವನೇ ಮೊದಲಾದವರಿಗೆ ಅಶ್ವಪತಿಯು ಹೇಳಿದ ಮಾತಿದು. 4. ಹೀಗಂದು ಮೂರ್ಧದಲ್ಲಿ ಸಂಪಾದನೆಮಾಡಬೇಕು ಎಂದು ಅಭಿಪ್ರಾಯ.
-
ಈ ನ್ಯಾಯವನ್ನು ೩-೩-೧ರಲ್ಲಿ ವಿವರಿಸಿದ. ಬೇರೆಬೇರೆಯ ಶಾಖೆಗಳಲ್ಲಿ ವಿಧಿಸಿರುವ ಆಯಾ ಉಪಾಸನೆಗಳನ್ನು ಒಂದೆಂದೇ ಭಾವಿಸಬೇಕು ಎಂಬುದು ನ್ಯಾಯವು. ಒಂದೇ ವಿದ್ಯೆಯನ್ನು ಬೇರೆಬೇರೆಯ ಶಾಖೆಗಳಲ್ಲಿ ವಿಧಿಸಿದ್ಧರೆ ಒಂದೊಂದು ಶಾಖೆಯಲ್ಲಿ ಹೇಳಿರುವ ಗುಣವನ್ನು ಇನ್ನೊಂದು ಶಾಖೆಯಲ್ಲಿ ಹೇಳದಿದ್ದರೂ ಸೇರಿಸಿಕೊಂಡು ಉಪಾಸನಮಾಡಬೇಕು. ಇಲ್ಲಿ ಶಾಖಾ ಭೇದದಿಂದ ಗುಣಗಳನ್ನು ಅಲ್ಲಲ್ಲಿ ಹೇಳಿರುವಷ್ಟನ್ನೇ ಆಯಾ ಶಾಖೆಯವರು ಉಪಾಸನೆ ಮಾಡ ಬಹುದು ಎಂದು ರತ್ನಪ್ರಭಾವ್ಯಾಖ್ಯಾನದಲ್ಲಿರುವ ಮತ್ತೊಂದು ಅಭಿಪ್ರಾಯವು ಯುಕ್ತವಲ್ಲ.
ಅಧಿ. ೭. ಸೂ. ೩೨] ಪ್ರಾದೇಶಮಾತ್ರನೆಂಬ ವಿಶೇಷಣಕ್ಕೆ ಗತಿ
೩೪೭
ಪ್ರಾದೇಶಮಾತ್ರಶ್ರುತಿಯು ಸಂಪತ್ತಿನಿಮಿತ್ತವಾಗಿ (ಬಂದದ್ದು ಎಂಬುದು) ಯುಕ್ತ ತರವೆಂದು’ ಜೈಮಿನಿ ಎಂಬ ಆಚಾರ್ಯನು ಅಭಿಪ್ರಾಯಪಡುತ್ತಾನೆ.
ಆಮನನ್ನಿ ಚೈನಮಸ್ಮಿನ್ ||೩೨|| ೩೨. ಮತ್ತು ಈತನನ್ನು ಇದರಲ್ಲಿ (ಜಾಬಾಲಶಾಖೆಯವರು) ಪಠಿಸು ತಲೂ ಇದಾರೆ.
(ಭಾಷ್ಯ) ೨೧೮, ಆಮನನ್ನಿ ಚ ಏನಂ ಪರಮೇಶ್ವರಮ್ ಅಸ್ಮಿನ್ ಮೂರ್ಧಚುಬುಕಾ ನ್ಯಕಾಲೇ ಜಾಬಾಲಾಃ - “ಯ ಏರ್ಷೋನನ್ನೋವ್ಯಕ್ತ: ಆತ್ಮಾಸೋವಿಮುಕ್ತ ಪ್ರತಿಷ್ಠಿತ ಇತಿ | ಸೋSವಿಮುಕ್ತಃ ಕಸ್ಮಿನ್ ಪ್ರತಿಷ್ಠಿತ ಇತಿ 1 ವರಣಾಯಾಂ ನಾಸ್ಕಾಂ ಚ ಮಧ್ಯೆ ಪ್ರತಿಷ್ಠಿತ ಇತಿ | ಕಾ ವೈ ವರಣಾ ಕಾ ಚ ನಾಸೀತಿ” (ಜಾ. ೧) | ತತ್ರ ಚ ಇಮಾಮೇವ ನಾಸಿಕಾಂ ವರಣಾ ನಾಸೀ ಇತಿ ನಿರುಚ್ಯ “ಯಾ ಸರ್ವಾಣೀಯಕೃತಾನಿ ಪಾಪಾನಿ ವಾರಯತೀತಿ ಸಾ ವರಣಾ, ಸರ್ವಾಣೀಯ ಕೃತಾನಿ ಪಾಪಾನಿ ನಾಶಯತೀತಿ ಸಾನಾಸೀ’ಇತಿ, ಪುನರಾಮನ “ಕತಮಚ್ಚಾಸ್ಯ ಸ್ಥಾನಂ ಭವತೀತಿ | ಧ್ರುವೋರ್ಘಾಣಸ್ಯ ಚ ಯಃ ಸಣ್ಣ: ಸ ಏಷ ದ್ಯುಲೋಕಸ್ಯ ಪರಸ್ಯ ಚ ಸಂಧಿರ್ಭವತೀತಿ’’ (ಜಾ. ೧) | ತಸ್ಮಾತ್ ಉಪಪನ್ನಾ ಪರಮೇಶ್ವರೇ ಪ್ರಾದೇಶಮಾತ್ರಶ್ರುತಿಃ ||
(ಭಾಷ್ಯಾರ್ಥ) ಮತ್ತು ಈ ಮೂರ್ಧಚುಬುಕಗಳ ನಡುವೆ ಈ ಪರಮೇಶ್ವರನನ್ನು (ಉಪಾಸನೆ ಮಾಡಬೇಕೆಂದು) ಜಾಬಾಲ (ಶಾಖೆಯವರು) “ಈ ಅನಂತನೂ ಅವ್ಯಕ್ತನೂ ಆದ
-
ಯುಕ್ತತರವೆಂದು ಇಲ್ಲಿ ಹೇಳಿರುವ ಈ ಪಕ್ಷವನ್ನು ಛಾಂದೋಗ್ಯ (೫-೧೮-೧) ಭಾಷ್ಯದಲ್ಲಿ ಒಪ್ಪಿಲ್ಲ. ಈ ಎರಡು ಭಾಷ್ಯಗಳಿಗಿರುವ ಈ ಅಭಿಪ್ರಾಯಭೇದಕ್ಕೆ ಕಾರಣವೇನೋ ತಿಳಿಯದು. ಸಮಾನಪ್ರಕರಣದಲ್ಲಿ ಹೇಳಿರುವ ಸಂವಾದವನ್ನೇ ಇಲ್ಲಿಯೂ ಒಪ್ಪಬಹುದು. ಗುಣಗಳೆರಡನ್ನೂ ಉಪಸಂಹಾರಮಾಡಿಕೊಳ್ಳಬಹುದು. ಆದರೂ ಈ ಉಪಾಸನೆಗಳರಡೂ ಬೇರೆ ಬೇರೆಯೂ ಆಗಿರಬಹುದು - ಎಂಬ ಅಭಿಪ್ರಾಯವನ್ನು ಪ್ರಕೃತಭಾಷ್ಯಕ್ಕೆ ಕಲ್ಪಿಸಿದರೆ ಎರಡೂ ಭಾಷ್ಯಗಳಿಗೆ ಏಕವಾಕ್ಯತೆಯಾಗಬಹುದೆಂದು ತೋರುತ್ತದೆ.
-
“ಸರ್ವಾನಿಯಕೃತಾನ್ ದೋಷಾನ್ ವಾರಯತೀತಿ ತೇನ ವರಣಾ ಭವತಿ | ಸರ್ವಾನಿಯಕೃತಾನ್ ಪಾಪಾನ್ನಾಶಯತೀತಿ ತೇನ ನಾಶೀ ಭವತಿ’ ಎಂದು ಅಚ್ಚಿನ ಪುಸ್ತಕದ ಪಾಠ. ಭಾಷ್ಯದಲ್ಲಿ ಬರೆದಿರುವದು ಪಾಠಾಂತರವೋ ಶ್ರುತಿಯ ಅರ್ಥಮಾತ್ರವೋ ತಿಳಿಯದು.
೩೪೮
ಬ್ರಹ್ಮಸೂತ್ರಭಾಷ್ಯ |
[ಅ. ೧. ಪಾ. ೨.
ಆತ್ಮನಿರುವನಲ್ಲ, ಅವನು ಅವಿಮುಕ್ತನಲ್ಲಿ ಇದ್ದುಕೊಂಡಿರುವನು. ಆ ಅವಿಮುಕ್ತನು ಏತರಲ್ಲಿದ್ದುಕೊಂಡಿರುವನು ? ವರಣಾದಲ್ಲಿಯೂ ನಾಸಿಯಲ್ಲಿಯೂ ನಡುವೆ ಇದ್ದು ಕೊಂಡಿರುವನು. ವರಣಾ ಎಂದರೆ ಯಾವದು ? ಮತ್ತು ನಾಸೀ ಎಂದರೆ ಯಾವದು ? (ಜಾ. ೧) ಎಂದು (ಪಠಿಸುತ್ತಾರೆ) ಮತ್ತು ಅಲ್ಲಿ ಯಾವದು ಇಂದ್ರಿಯಕೃತವಾದ ಸರ್ವಪಾಪಗಳನ್ನೂ ನಿವಾರಣಮಾಡುವದೋ ಅದು ವರಣಾ ; ಇಂದ್ರಿಯಕೃತವಾದ ಸರ್ವಪಾಪಗಳನ್ನೂ ನಾಶಮಾಡುವದರಿಂದ ಅದು ನಾಸೀ’- ಎಂದು ಈ ನಾಸಿಕೆಯನ್ನೇ ವರಣಾ ನಾಸೀ ಎಂದು ನಿರ್ವಚನಮಾಡಿ “ಇವನ ಸ್ಥಾನವು ಯಾವದಾಗಿರುತ್ತದೆ ? ಹುಬ್ಬುಗಳಿಗೂ ಮೂಗಿಗೂ (ನಡುವೆ ಇರುವ) ಸಂಧಿಯಿದೆಯಲ್ಲ, ಆ ಇದು ದ್ಯುಲೋಕಕ್ಕೂ ಪರ(ಲೋಕಕ್ಕೂ) ಸಂಧಿಯು’ (ಜಾ. ೧) ಎಂದು ಮತ್ತೆ ಪಠಿಸು ತ್ತಾರೆ. ಆದ್ದರಿಂದ ಪರಮೇಶ್ವರನಲ್ಲಿ ಪ್ರಾದೇಶಮಾತ್ರ ಎಂಬ ಶ್ರುತಿಯುಯುಕ್ತವಾಗಿದೆ.
(ಭಾಷ್ಯ) ೨೧೯. ಅಭಿವಿಮಾನಶ್ರುತಿಃ ಪ್ರತ್ಯಗಾತ್ಮಾಭಿಪ್ರಾಯಾ | ಪ್ರತ್ಯಗಾತ್ಮತಯಾ ಸರ್ವೆ ಪ್ರಾಣಿಭಿಃ ಅಭಿವಿಮೀಯತೇ ಇತಿ ಅಭಿವಿಮಾನಃ | ಅಭಿಗತೋ ವಾ ಅಯಂ ಪ್ರತ್ಯಗಾತ್ಮತ್ವಾತ್ ವಿಮಾನಶ್ಯ ಮಾನವಿಯೋಗಾತ್ ಇತಿ ಅಭಿವಿಮಾನಃ | ಅಭಿವಿಮಿಮೀತೇ ವಾ ಸರ್ವಂ ಜಗತ್ಕಾರಣತ್ವಾತ್ ಇತ್ಯಭಿವಿಮಾನಃ | ತಸ್ಮಾತ್ ಪರಮೇಶ್ವರೋ ವೈಶ್ವಾನರಃ ಇತಿ ಸಿದ್ಧಮ್ ||
(ಭಾಷ್ಯಾರ್ಥ) ಅಭಿವಿಮಾನ ಎಂಬ ಶ್ರುತಿಗೆ ಪ್ರತ್ಯಗಾತ್ಮನೆಂಬುದು ಅಭಿಪ್ರಾಯವು. (ತಮ್ಮ) ಪ್ರತ್ಯಗಾತ್ಮನೆಂದು ಎಲ್ಲಾ ಪ್ರಾಣಿಗಳೂ (ಈತನನ್ನು) ಅರಿತುಕೊಳ್ಳುತ್ತಾರೆ ; ಆದ್ದ ರಿಂದ (ಅಭಿವಿಮೀಯತೇ ಇತಿ) ಅಭಿವಿಮಾನನೆಂದು ಹೆಸರು. ಅಥವಾ ಪ್ರತ್ಯಗಾತ್ಮ ನಾಗಿರುವದರಿಂದ ಇವನು ಅಭಿಗತನು ; ಮಾನವಿಯೋಗದಿಂದ (ಪರಿಮಾಣರಾಹಿತ್ಯ ವಿರುವದರಿಂದ) ವಿಮಾನನು.’ ಅಥವಾ ಜಗತ್ತಿಗೆ ಕಾರಣನಾಗಿರುವದರಿಂದ ಎಲ್ಲವನ್ನೂ ಅಳೆಯುತ್ತಾನೆ (ಅಭಿವಿಮಿಮಿಾತೇ), ಆದ್ದರಿಂದ ಅಭಿವಿಮಾನನು.
ಆದ್ದರಿಂದ ವೈಶ್ವಾನರನು ಪರಮೇಶ್ವರನೇ ಎಂದು ಸಿದ್ಧವಾಯಿತು.
-
ಜೀವನಲ್ಲಿ. 2.‘ಭೂಸಹಿತನಾಸಿಕೆಯನ್ನೇ’’ ನ್ಯಾಯನಿರ್ಣಯ ವ್ಯಾ ||
-
ಪ್ರತಿಯೊಬ್ಬನೂ ತನ್ನತನ್ನ ಆತ್ಮನೆಂದೇ ಈತನನ್ನು ಗೊತ್ತುಪಡಿಸಿಕೊಳ್ಳುತ್ತಾನೆ ಎಂದರ್ಥ. ಛಾಂದೋಗ್ಯಭಾಷ್ಯದಲ್ಲಿ ಇದೊಂದೇ ಅರ್ಥವನ್ನು ಕೊಟ್ಟಿರುತ್ತದೆ.
-
ನಮ್ಮ ಆತ್ಮನೇ ಆಗಿ ತೀರ ಹತ್ತಿರವಿರುತ್ತಾನೆ, ಮತ್ತು ಅಪರಿಚಿನ್ನನು ಎಂದರ್ಥ. 5. ‘ಸೃಷ್ಟಿಸುತ್ತಾನೆ’ ಎಂದು ರತ್ನಪ್ರಭಾವ್ಯಾಖ್ಯಾನದ ಅರ್ಥ.
ಅಧಿಕರಣಗಳ ಸಾರ
ಎರಡನೆಯ ಮೂರನೆಯ ಪಾದಗಳಲ್ಲಿ ಅಸ್ಪಷ್ಟಬ್ರಹ್ಮಲಿಂಗವುಳ್ಳ ವೇದಾಂತ ವಾಕ್ಯಗಳನ್ನು ವಿಚಾರಮಾಡಿರುತ್ತದೆ. ಎರಡನೆಯ ಪಾದದಲ್ಲಿ ಉಪಾಸ್ಯಬ್ರಹ್ಮವಾಕ್ಯ ಗಳೇ ಹೆಚ್ಚಾಗಿವೆ.
೧. ಸರ್ವತ್ರಪ್ರಸಿದ್ಯಧಿಕರಣ
ವಿಷಯವೂ ಸಂಶಯವೂ : ಛಾಂದೋಗ್ಯದಲ್ಲಿ ಮನೋಮಯಃ ಪ್ರಾಣಶರೀರಃ’ (ಛಾಂ. ೩-೧೪-೨) ಎಂಬ ಶಾಂಡಿಲ್ಯವಿದ್ಯಾವಾಕ್ಯದಲ್ಲಿ ಮನೋಮಯಾದಿಗುಣಗಳುಳ್ಳವನು ಶಾರೀರನೂ, ಪರಬ್ರಹ್ಮವೊ ?
ಪೂರ್ವಪಕ್ಷ : ಕಾರ್ಯಕರಣವಂತನಾಗಿರುವ ಶಾರೀರನಿಗೇ ಮನದಿಗಳ ಸಂಬಂಧವು ಹೊಂದುವದರಿಂದ ಅವನೇ ಇಲ್ಲಿ ಉಪಾಸ್ಯನಾಗಿರುತ್ತಾನೆ. ಹೃದಯವೆಂಬ ಪರಿಚ್ಛಿನ್ನಸ್ಥಾನ ದಲ್ಲಿರುವ ಆತ್ಮನೆಂದೂ ಅಣುತರವಾದ ಸ್ವರೂಪದವನೆಂದೂ ಹೇಳಿರುವ ಈ ಮನೋಮಯನು ಪರಮಾತ್ಮನಾಗಲಾರನು. ‘ಸರ್ವಂ ಖಲ್ವಿದಂ ಬ್ರಹ್ಮ ತಜ್ಜಲಾನಿತಿ ಶಾನ್ಯ ಉಪಾಸೀತ’ ಎಂಬುದು ಶಮವಿಧಿಪರವಾಗಿರುವದರಿಂದ ಬ್ರಹ್ಮಪಾಸನೆಯನ್ನು ವಿಧಿಸುವದನ್ನುವದಕ್ಕೆ ಬರುವದಿಲ್ಲ. ಸರ್ವಕಾಮಃ ಮುಂತಾದ ವಿಶೇಷಣಗಳನ್ನು ಹೇಗಾದರೂ ಮಾಡಿ ಜೀವನಿಗೇ ಹೊಂದಿಸಬೇಕು.
ಸಿದ್ಧಾಂತ : “ಸರ್ವಂ ಖಲ್ವಿದಂ ಬ್ರಹ್ಮ” ಎಂದು ಉಪಕ್ರಮದಲ್ಲಿ ಬ್ರಹ್ಮವು ಪ್ರಕೃತ ವಾಗಿರುವದರಿಂದಲೂ ಉಪಾಸನಮಾಡಬೇಕೆಂದು ಹೇಳಿರುವ ಸತ್ಯಕಾಮತ್ನ ಸತ್ಯಸಂಕಲ್ಪತ್ವಾದಿ ಗುಣಗಳು ಬ್ರಹ್ಮಕ್ಕ ಹೊಂದುವದರಿಂದಲೂ ಉಪಾಸಕನಾದ ಶಾರೀರನು ಉಪಾಸ್ಕನಾಗಿರುವ ಮನೋಮಯಾದಿಗುಣಯುತವಾದ ಆತ್ಮನನ್ನು ಮುಂದೆ ಪಡೆಯುವನೆಂದು ಹೇಳಿರುವದ ರಿಂದಲೂ ಸಮಾನಪ್ರಕರಣವಾದ (ಶತ ಬ್ರಾ.) ಶ್ರುತ್ಯಂತರದಲ್ಲಿಯೂ (ಗೀ, ೧೮-೬೧) ಸ್ಕೃತಿಯಲ್ಲಿಯೂ ಶಾರೀರನಿಗಿಂತ ಅವನು ಬೇರೆಯೆಂದು ಹೇಳಿರುವದರಿಂದಲೂ ಬ್ರಹ್ಮವೇ ಇಲ್ಲಿ ಹೇಳಿರುವ ಮನೋಮಯಾದಿಗುಣಕನಾದ ಆತ್ಮನು. ಪರಮಾತ್ಮನು ಹೃದಯದಲ್ಲಿರುವನೆಂದು ಹೇಳಿರುವದು ಉಪಾಸನೆಗಾಗಿ ; ಅವನು ಜೀವರ ಹೃದಯದಲ್ಲಿದ್ದರೂ ಜೀವರಿಗ ಮಿಥ್ಯಾಜ್ಞಾನ ದಿಂದಾಗಿರುವ ಸುಖದುಃಖಭೋಗವು ಪರಮಾರ್ಥರೂಪನಾದ ಅವನಿಗೆ ಅಂಟುವದಿಲ್ಲ.
೩೫೦
ಬ್ರಹ್ಮಸೂತ್ರಭಾಷ್ಯ
೨. ಅತ್ಯಧಿಕರಣ
ವಿಷಯವೂ ಸಂಶಯವೂ : ಕಠವಲ್ಲಿಗಳಲ್ಲಿ ‘‘ಯಸ್ಯ ಬ್ರಹ್ಮ ಚ ಕ್ಷತ್ರಂ ಚೋಭೇ ಭವತ ಓದನಃ, ಮೃತ್ಯುರ್ಯಖ್ಯೋಪಸೇಚನಮ್’’ (ಕ. ೧-೨-೨೪) ಎಂಬ ವಾಕ್ಯದಲ್ಲಿ ಉಪದೇಶಿಸಿರುವ ಅತೃವು ಅಗ್ನಿಯೂ, ಜೀವನೋ, ಪರಮಾತ್ಮನೂ ?
ಪೂರ್ವಪಕ್ಷ : ಶ್ರುತ್ಯಂತರದಲ್ಲಿ ಅಗ್ನಿಯನ್ನೂ ಜೀವರನ್ನೂ ಅತೃವಂದು ಹೇಳಿರುವದರಿಂದ ಅವರಿಬ್ಬರಲ್ಲಿ ಒಬ್ಬನು ಅತ್ಯವಾಗಬಹುದು. ಪರಮಾತ್ಮನು ತಿನ್ನುವವನಲ್ಲ, ನೋಡುತ್ತಿರುವವನು ಎಂದು ಶ್ರುತಿಯಲ್ಲಿರುವದರಿಂದ ಈ ವಾಕ್ಯವು ಅವನನ್ನು ಹೇಳಲಾರದು.
ಸಿದ್ಧಾಂತ : ಮೃತ್ಯುವಿನೊಂದೊಡಗೂಡಿದ ಸರ್ವಜಗತ್ತನ್ನೂ ತಿನ್ನುವವನು ಪರಮಾತ್ಮನೇ ಆಗಬೇಕು. ಅವನು ತಿನ್ನುವವನಲ್ಲ ಎನ್ನುವ ಶ್ರುತಿಗೆ ಕರ್ಮಫಲಭೋಗವನ್ನು ನಿಷೇಧ ಮಾಡುವದರಲ್ಲಿ ತಾತ್ಪರ್ಯವೇ ಹೊರತು ಜಗತ್ಸಂಹಾರನಿಷೇಧದಲ್ಲಿ ತಾತ್ಪರ್ಯವಿಲ್ಲ. ಈ ವಾಕ್ಯವು ಪರಮಾತ್ಮನ ಪ್ರಕರಣದಲ್ಲಿ ಬಂದಿರುವದರಿಂದಲೂ ಈ ಅತೃವು ಪರಮಾತ್ಮನೆಂದೇ ತಿಳಿಯಬೇಕು.
೩. ಗುಹಾಪ್ರವಿಷ್ಕಾಧಿಕರಣ
ವಿಷಯವೂ ಸಂಶಯವೂ : “ಋತಂ ಪಿಬನ್ನ ಸುಕೃತಸ್ಯ ಲೋಕೇ ಗುಹಾಂ ಪ್ರವಿಷ್ಟೇ” (ಕ. ೧-೩-೨) ಎಂಬ ಕಠವಾಕ್ಯದಲ್ಲಿ ಗುಹೆಯನ್ನು ಹೊಕ್ಕಿರುವರೆಂದು ಹೇಳಿರುವದು ಬುದ್ದಿ ಜೀವರನ್ನೂ, ಜೀವಪರಮಾತ್ಮರನ್ನೋ ? ಇಲ್ಲಿ ಜೀವನನ್ನೂ ಹೇಳಬೇಕಾದದ್ದಿದೆ. ಆದ್ದರಿಂದ ಸಂಶಯವುಂಟಾಗುತ್ತದೆ.
ಪೂರ್ವಪಕ್ಷ : ‘ಗುಹೆಯಲ್ಲಿ ಹೊಕ್ಕಿರುವವರು’ ಎಂಬ ವಿಶೇಷಣವು ಸರ್ವಗತನಾದ ಪರಮಾತ್ಮನಿಗಿಂತಲೂ ಬುದ್ದಿಜೀವರಿಗೇ ಹೊಂದುವದರಿಂದಲೂ ‘ಸುಕೃತದ ಲೋಕದಲ್ಲಿ’ ಎಂಬ ಕರ್ಮಗೂಚರತ್ನವು ಜೀವನಿಗೇ ಹೊಂದುವದರಿಂದಲೂ ನರಳು ಬಿಸಿಲುಗಳು’ ಎಂಬುದು ಚೇತನಾಚೇತನರಾದ ಬುದ್ಧಿಜೀವರಿಗೇ ಒಪ್ಪುವದರಿಂದಲೂ ಬುದ್ದಿಜೀವರನ್ನೇ ಇಲ್ಲಿ ಹೇಳಿದೆ.
ಸಿದ್ಧಾಂತ : “ಋತಂ ಪಿಬನ್ಸ್’ ಜೊತೆಯಲ್ಲಿರುವರೆಂದು ಹೇಳಿರುವ ಇಬ್ಬರೂ ಸಮಾನಸ್ವಭಾವದವರಾಗಿರಬೇಕು. ಜೀವಪರಮಾತ್ಮರಿಬ್ಬರೂ ಚೇತನರಾಗಿರುವದರಿಂದ ಸಮಾನ ಸ್ವಭಾವದವರಾಗಿರುತ್ತಾರ. ಋತಪಾನವಂಬ ವಿಶೇಷಣದಿಂದ ಇವರಲ್ಲಿ ಒಬ್ಬನು ಜೀವನೆಂದಾಗುವ ದರಿಂದ ಇನ್ನೊಬ್ಬನು ಪರಮಾತ್ಮನೇ ಆಗಿರಬೇಕು. ಪರಮಾತ್ಮನು ಗುಹೆಯಲ್ಲಿರುವನೆಂದು ಶ್ರುತಿಗಳಲ್ಲಿ ಮತ್ತೆಮತ್ತೆ ಹೇಳಿದೆ. ಅವನು ಸರ್ವಗತನಾದರೂ ಅವನನ್ನು ಅಲ್ಲಿಯೇ ಅರಿತು ಕೊಳ್ಳಬೇಕೆಂಬ ಕಾರಣದಿಂದ ಹೃದಯಗುಹೆಯಲ್ಲಿರುವನೆಂದು ಹೇಳದ. ‘ಸುಕೃತದ ಲೋಕದಲ್ಲಿ ಎಂಬುದು ಛನ್ಯಾಯದಿಂದ ಪರಮಾತ್ಮನಿಗೂ ಆಗಬಹುದು. ‘ನರಳುಬಿಸಿಲುಗಳು’ ಎಂಬ ವಿಶೇಷಣವು ಜೀವನು ಸಂಸಾರಿ, ಪರಮಾತ್ಮನು ಅಸಂಸಾರಿ ಎಂಬ ವೈಲಕ್ಷಣ್ಯವನ್ನು ತಿಳಿಸುತ್ತದ.
ಅಧಿಕರಣಗಳ ಸಾರ
೩೫
ಇಲ್ಲಿರುವ ಜೀವಪರಮಾತ್ಮರನ್ನು ಮಂತ್ರಗಂತವ್ಯರೆಂಬ ವಿಶೇಷಣಗಳಿಂದ ಹೇಳಿರುವದರಿಂದಲೂ ಇದು ಪರಮಾತ್ಮಪ್ರಕರಣವಾಗಿರುವದರಿಂದಲೂ ಇಲ್ಲಿ ಜೀವಪರಮಾತ್ಮರನ್ನೇ ಹೇಳಿದೆ. ಆದ್ದ ರಿಂದ ಜೀವನ ಪರಮಾರ್ಥಸ್ವರೂಪವಾದ ಪರಮಾತ್ಮನನ್ನು ತಿಳಿಸುವದಕ್ಕೆ ಈ ವಾಕ್ಯವು ಬಂದಿದೆ.
೪. ಅಂತರಧಿಕರಣ
ವಿಷಯವೂ ಸಂಶಯವೂ : “ಯ ಏಷೋಕ್ಷಿಣಿ ಪುರುಷೋ ದೃಷ್ಯತ ಏಷ ಆತ್ಮತಿ ಹೋವಾಚೈತದಮೃತಮಭಯಮೇತದೃಹ್ಮತಿ’ (ಛಾಂ. ೪-೧೫-೧) ಎಂದು ಮುಂತಾಗಿರುವ ಉಪಕೋಸಲವಿದ್ಯಯ ವಾಕ್ಯದಲ್ಲಿ ಅಕ್ಷಿಯಲ್ಲಿರುವನೆಂದು ಹೇಳಿರುವ ಉಪಾಸ್ಯಪುರುಷನು ಛಾಯಾತ್ಮನ, ವಿಜ್ಞಾನಾತ್ಮನೆ, ದೇವತಾತ್ಮನೆ, ಅಥವಾ ಈಶ್ವರನೆ ?
ಪೂರ್ವಪಕ್ಷ : ‘ದೃಶ್ಯತೇ’ (ಕಾಣಿಸುತ್ತಾನ) ಎಂದು ಪ್ರಸಿದ್ಧವಾಗಿರುವದನ್ನು ಹೇಳಿರುವದ ರಿಂದ ಛಾಯಾತ್ಮನನ್ನೇ ಉಪಾಸನಮಾಡಬೇಕೆಂದು ಇಲ್ಲಿ ಹೇಳಿದೆ. ವಿಜ್ಞಾನಾತ್ಮನು ಕಣ್ಣಿನಿಂದ ರೂಪವನ್ನು ನೋಡುವದರಿಂದಲೂ ಆದಿತ್ಯಪುರುಷನು ರಶ್ಮಿಗಳಿಂದ ಕಣ್ಣಿನಲ್ಲಿರುವನೆಂದು ಶ್ರುತಿಯಲ್ಲಿರುವದರಿಂದಲೂ ಅವರನ್ನೂ ಬೇಕಾದರ ಅಕ್ಷಿಪುರುಷನೆಂದು ಭಾವಿಸಬಹುದು. ಕಣ್ಣೆಂಬ ಒಂದು ಗೂತ್ತಿನ ಸ್ಥಾನವನ್ನು ಹೇಳಿರುವದರಿಂದ ಇಲ್ಲಿ ಉಪಾಸ್ಯನೆಂದು ಹೇಳಿರುವ ಪುರುಷನು ಸರ್ವಗತನಾದ ಈಶ್ವರನಲ್ಲ.
ಸಿದ್ಧಾಂತ : ಆತ್ಮ, ಅಮೃತ, ಅಭಯ - ಎಂದು ಹೇಳಿರುವ ಗುಣಗಳು ಪರಮೇಶ್ವರನಿಗೆ ಮಾತ್ರ ಮುಖ್ಯವೃತ್ತಿಯಿಂದ ಹೊಂದುತ್ತವೆ. ಇಲ್ಲಿ ಅಕ್ಷಿಸ್ಥಾನವು ನಿರ್ಲಪವಾಗಿರುವದೆಂದು ಹೇಳಿರುವದು ಯಾವ ದೋಷವೂ ಇಲ್ಲದ ಪರಮೇಶ್ವರನಿಗೇ ಅನುಗುಣವಾಗಿದೆ. ಸಂಯಾಮ, ವಾಮನೀ, ಭಾಮನೀ - ಎಂಬ ವಿಶೇಷಣಗಳೂ ಆತನಿಗೇ ಹೊಂದುತ್ತವೆ. ಪರಮೇಶ್ವರನಿಗೆ ಹೇಳಿರುವ ಅನೇಕಸ್ಥಾನಗಳಲ್ಲಿ ಅಕ್ಷಿಯು ಒಂದು ; ಪರಮಾತ್ಮನಿಗೆ ಉಪಾಧಿಯ ಸಂಬಂಧದಿಂದ ಸ್ಥಾನ, ನಾಮ, ರೂಪ - ಮುಂತಾದವುಗಳೆಲ್ಲವನ್ನೂ ಉಪಾಸನೆಗಾಗಿ ಹೇಳಿದರೆ ತಪ್ಪಲ್ಲ. ವಾಕ್ಯದ ಉಪಕ್ರಮದಲ್ಲಿ ಸುಖವಿಶಿಷ್ಟವಾದ ಬ್ರಹ್ಮವನ್ನೇ ಹೇಳಿರುವದರಿಂದಲೂ ಉಪಾಸನಗಬೇಕಾಗಿರುವ ಗತಿಯನ್ನು ಆಚಾರ್ಯನು ಹೇಳುವನೆಂದು ಅಗ್ನಿಗಳು ಉಪಕೋಸಲನಿಗೆ ಹೇಳಿರುವದರಿಂದಲೂ ಇಲ್ಲಿ ಹೇಳಿರುವ ಗತಿಯು ಬ್ರಹೋಪಾಸಕರಿಗೆ ಶ್ರುತಿಯಲ್ಲಿ ಹೇಳಿರುವ ದೇವಯಾನವೇ ಆಗಿರುವದರಿಂದಲೂ ಬ್ರಹ್ಮವೇ ಇಲ್ಲಿ ಉಪಾಸ್ಯವೆಂದು ಹೇಳಿದೆ ಎಂದು ನಿಶ್ಚಯವಾಗುತ್ತದೆ. ಛಾಯಾತ್ಮನು ಅಕ್ಕಿಯಲ್ಲಿ ಯಾವಾಗಲೂ ಇರುವದಿಲ್ಲ ; ವಿಜ್ಞಾನಾತ್ಮನು ಶರೀರಕ್ಕಲ್ಲ ಸಂಬಂಧಪಟ್ಟವನಾದ್ದರಿಂದ ಬರಿಯ ಕಣ್ಣಿನಲ್ಲಿಯೇ ಇರುವನೆಂದು ಹೇಳುವದಕ್ಕಾಗುವದಿಲ್ಲ ; ಆದಿತ್ಯನು ಆತ್ಮನಲ್ಲ. ಈ ಮೂವರಿಗೂ ಇಲ್ಲಿ ಹೇಳಿರುವ ಅಮೃತತ್ವಾದಿಗುಣಗಳು ಹೂಂದು ವದಿಲ್ಲ ; ಆದ್ದರಿಂದ ಈ ಉಪಕೋಸಲವಿದ್ಯೆಯಲ್ಲಿ ಅವರನ್ನು ಹೇಳಿಲ್ಲ. ಪ್ರಕೃತವಾಗಿರುವ ಬ್ರಹ್ಮಕ್ಕ ಅಕ್ಷಿಸ್ಥಾನವನ್ನೂ ಸಂಯಲ್ವಾಮಾದಿಗುಣಗಳನ್ನೂ ಹೇಳಿ ಅದನ್ನು ಅಲ್ಲಿ ಹಾಗೆಂದು ಉಪಾಸನಮಾಡಿದವರಿಗೇ ದೇವಯಾನಗತಿಯನ್ನು ಹೇಳಿದೆ ಎಂಬುದು ಯುಕ್ತ.ಬ್ರಹ್ಮಸೂತ್ರಭಾಷ್ಯ
೫. ಅಂತರ್ಯಾಮ್ಯಧಿಕರಣ
ವಿಷಯವೂ ಸಂಶಯವೂ : “ಯಃ ಪೃಥಿವ್ಯಾಂ ತಿಷ್ಠನ್ ಪೃಥಿವ್ಯಾ ಅನ್ತರೋ ಯಂ ಪೃಥಿವೀ ನ ವೇದ ಯಸ್ಯ ಪೃಥಿವೀ ಶರೀರಂ ಯಃ ಪೃಥಿವೀಮನ್ನರೋ ಯಮಯತೋಷ ತ ಆತ್ಮಾನ್ತರ್ಯಾಮೃಮೃತಃ” (ಬೃ. ೩-೭-೩) ಎಂದು ಮುಂತಾಗಿರುವ ವಾಕ್ಯಗಳಲ್ಲಿ ಹೇಳಿರುವ ಅಂತರ್ಯಾಮಿಯು ಆಯಾ ಅಭಿಮಾನಿಯಾದ ದೇವತಾತ್ಮನೊ, ಯಾವನಾದರೂಬ್ಬ ಯೋಗಿಯೂ, ಪರಮಾತ್ಮನೂ, ಅಥವಾ ಮತ್ತೆ ಯಾವನಾದರೂಬ್ಬನೊ ?
ಪೂರ್ವಪಕ್ಷ : ಅಂತರ್ಯಾಮಿ ಎಂಬ ಹೆಸರು ಅಪೂರ್ವವಾಗಿರುವದರಿಂದ ಯಾವನೋ ಒಬ್ಬ ಅಪ್ರಸಿದ್ಧ ಪುರುಷನನ್ನು ಇಲ್ಲಿ ಹೇಳಿದೆ. ಅಥವಾ ಆಯಾ ದೇವತೆಯೋ ಒಬ್ಬ ಯೋಗಿಯೋ ಪೃಥಿವ್ಯಾದಿಗಳನ್ನು ಕಟ್ಟಿನಲ್ಲಿಟ್ಟುಕೊಂಡಿರುವವನಾಗಿರಬಹುದು. ಶರೀರೇಂದ್ರಿಯ ಗಳಿಲ್ಲದ ಪರಮೇಶ್ವರನು ಅಂತರ್ಯಾಮಿಯಾಗಲಾರನು.
ಸಿದ್ಧಾಂತ : ಪರಮಾತ್ಮನು ಎಲ್ಲಕ್ಕೂ ಕಾರಣವಾಗಿರುವದರಿಂದ ಎಲ್ಲವನ್ನೂ ಕಟ್ಟಿ ನಲ್ಲಿಟ್ಟುಕೊಂಡಿರುತ್ತಾನೆಂದು ಹೇಳುವದು ಯುಕ್ತವಾಗಿದೆ. ಅವನು ಆತ್ಮನು,ಅಮೃತನು ಎಂದು ಹೇಳಿರುವದರಿಂದಲೂ ದೇವತೆಗಳಿಗೂ ಅವಿಜೇಯನೆಂದಿರುವದರಿಂದಲೂ ಅದೃಷ್ಟವೇ ಮುಂತಾದ ಧರ್ಮಗಳನ್ನು ಹೇಳಿರುವದರಿಂದಲೂ ಮತ್ತ ಯಾರೂ ಅಂತರ್ಯಾಮಿಯಾಗಲಾರರು. ಪರಮಾತ್ಮನಿಗೆ ಬೇರೆ ಕಾರ್ಯಕರಣಗಳು ಇಲ್ಲವಾದರೂ ಅವರವರ ಕಾರ್ಯಕರಣಗಳನ್ನುಪ ಯೋಗಿಸಿಕೊಂಡೇ ಅವರವರನ್ನು ನಿಯಮಿಸಬಹುದು. ಪ್ರಧಾನದಲ್ಲಿ ಅದೃಷ್ಟತ್ವವೇ ಮುಂತಾದ ಗುಣಗಳಿದ್ದರೂ ಇಲ್ಲಿ ಹೇಳಿರುವ ದ್ರಷ್ಟತಾದಿಗಳಿಲ್ಲ ; ಶಾರೀರನಲ್ಲಿ ದ್ರಷ್ಟಾದಿಗಳಿದ್ದರೂ ಅವನಲ್ಲಿಯೂ ಒಳಗಿದ್ದುಕೊಂಡು ಅವನನ್ನೂ ಅಂತರ್ಯಾಮಿಯು ನಿಯಮಿಸುತ್ತಾನೆಂದು ಇಲ್ಲಿ ಹೇಳಿದೆ. ಆದ್ದರಿಂದ ಈಶ್ವರನೇ ಇಲ್ಲಿ ಅಂತರ್ಯಾಮಿ ಎಂದು ತಿಳಿಯಬೇಕು.
೬. ಅದೃಶ್ಯತ್ವಾಧಿಕರಣ
ವಿಷಯವೂ ಸಂಶಯವೂ : “ಅಥ ಪರಾ ಯಯಾ ತದಕ್ಷರಮಧಿಗಮ್ಯತೇ ಯತ್ನದಿಶ್ಯ ಮಗ್ರಾಹ್ಯಮಗೋತ್ರಮ್ … ತದವಯಂ ಯದ್ದೂತನಿಂ ಪರಿಪಶ್ಯನಿ ಧೀರಾ? (ಮುಂ. ೧-೧-೫, ೬) ಎಂಬ ವಾಕ್ಯದಲ್ಲಿರುವ ಅದೃಶ್ಯಾದಿಗುಣಗಳುಳ್ಳ ಭೂತಯೋನಿಯು ಪ್ರಧಾನವೊ, ಶಾರೀರನೂ ಅಥವಾ ಪರಮೇಶ್ವರನೂ ?
ಪೂರ್ವಪಕ್ಷ : ಭೂತಯೋನಿಗೆ ಅಚೇತನವಾದ ಜೇಡರಹುಳು, ಮನುಷ್ಯಶರೀರ - ಇವನ್ನೇ ದೃಷ್ಟಾಂತವಾಗಿ ಕೊಟ್ಟಿರುವದರಿಂದಲೂ ಅದೃಶ್ಯತ್ವವೇ ಮುಂತಾದ ಧರ್ಮಗಳೆಲ್ಲವೂ ಪ್ರಧಾನಕ್ಕೆ ಹೊಂದುವದರಿಂದಲೂ ಚೇತನಧರ್ಮವನ್ನು ಹೇಳುವ ಸರ್ವಜ್ಞನೆಂಬ ವಿಶೇಷಣವು ಮುಂದ “ಅಕ್ಷರಾತ್ ಪರತಃ ಪರಃ’ (ಮುಂ. ೨-೧-೨) ಎಂಬ ವಾಕ್ಯದಲ್ಲಿರುವ ಅಕ್ಷರವಾದ ಪ್ರಧಾನ ಕ್ಕಿಂತಲೂ ಹೆಚ್ಚಿನ ಮತ್ತೊಂದು ತತ್ತ್ವಕ್ಕೆ ಹೊಂದುವದರಿಂದಲೂ ಪ್ರಧಾನವೇ ಇಲ್ಲಿ
ಅಧಿಕರಣಗಳ ಖರ
2.882
ಭೂತಯೋನಿಯಾದ ಅಕ್ಷರವು, ಅಥವಾ ಭೂತಯೋನಿ ಎಂದರೆ ಭೂತಗಳಿಗೆ ನಿಮಿತ್ತಕಾರಣನು ಎಂದು ಅರ್ಥಮಾಡಿದರೆ ಧರ್ಮಾಧರ್ಮಗಳಿಂದ ಭೂತಗಳಿಗೆ ಕಾರಣನಾಗಿರುವ ಶಾರೀರನೇ ಭೂತಯೊನಿಯಾಗಬಹುದು.
- ಸಿದ್ಧಾಂತ : ಸರ್ವಜ್ಞನೆಂಬ ವಿಶೇಷಣವು ಹುಟ್ಟವದಕ್ಕೆಲ್ಲ ಕಾರಣವಾಗಿರುವ ಪ್ರಕೃತವಾದ ಅಕ್ಷರವನ್ನೇ ಹೇಳುತ್ತಿರುವದರಿಂದ ಈ ಭೂತಯೋನಿಯು ಪ್ರಧಾನವಲ್ಲ. ಇದನ್ನು ತಿಳಿಸುವ ವಿದ್ಯೆಯನ್ನು ‘ಪರವಿದ್ಯೆ’, ‘ಬ್ರಹ್ಮವಿದ್ಯೆ’ ಎಂದು ಕರೆದಿರುವದರಿಂದಲೂ “ಅಕ್ಷರಾತ್ ಪರತಃ ಪರಃ” (ಮುಂ. ೨-೧-೨) ಎಂಬ ವಾಕ್ಯದಲ್ಲಿ ಪ್ರಕೃತವಾದ ಭೂತಯೋನಿಯು ಪ್ರಧಾನಕ್ಕಿಂತಲೂ ಬೇರೆಯಾಗಿದೆಯೆಂದೂ ಅಪ್ರಾಣೋ ಹೈಮನಾ’’ (ಮುಂ. ೨-೧-೨) ಎಂಬ ವಾಕ್ಯದಲ್ಲಿ ಶಾರೀರನಿಗಿಂತ ಬೇರೆಯಾಗಿದೆಯೆಂದೂ ತಿಳಿಸಿರುವದರಿಂದಲೂ “ಅಗ್ನಿರ್ಮೂಧರ್ಾ’ (ಮುಂ. ೨ ೧-೪) ಎಂಬ ವಾಕ್ಯದಲ್ಲಿ ಅಥವಾ ಪುರುಷ ಏವೇದಂ ವಿಶ್ವಂ ಕರ್ಮ” (ಮುಂ. ೨-೧-೧೦) ಎಂಬ ವಾಕ್ಯದಲ್ಲಿ ಈ ಭೂತಯೋನಿಯು ಸರ್ವಾತ್ಮಕವಾಗಿರುವದಂದು ರೂಪೋಪನ್ಯಾಸವನ್ನು ಮಾಡಿರುವದರಿಂದಲೂ ಈ ಭೂತಯೋನಿಯು ಪರಮೇಶ್ವರನೇ, ಪ್ರಧಾನವಲ್ಲ, ಶಾರೀರನೂ ಅಲ್ಲ - ಎಂದು ತಿಳಿಯಬೇಕು.
೭. ವೈಶ್ವಾನರಾಧಿಕರಣ
ವಿಷಯವೂ ಸಂಶಯವೂ : ಛಾಂದೋಗ್ಯದಲ್ಲಿರುವ “ಯಸ್ಕೃತಮೇವಂ ಪ್ರಾದೇಶ ಮಾತ್ರಮಭಿವಿಮಾನಮಾತ್ಮಾನಂ ವೈಶ್ವಾನರಮುಪಾಸ್ತೆ ಸ ಸರ್ವಷು ಲೋಕೇಷು ಸರ್ವಷು ಭೂತೇಷು ಸರ್ವಷ್ಟಾತ್ಮಸ್ವನ್ನಮತಿ || ತಸ್ಯ ಹ ವಾ ಏತಸ್ಯಾತ್ಮನೋ ವೈಶ್ವಾನರಸ್ಯ ಮೂರ್ಧವ ಸುತೇಜಾಶ್ಚಕ್ಷುರ್ವಿಶ್ವರೂಪಃ ಪ್ರಾಣಃ ಪೃಥಗ್ವರ್ತ್ಮಾತ್ಮಾ ಸಂದೇಹೋ ಬಹುಲೋ ಬಸ್ತಿರೇವ ರಯಿಃ ಪೃಥಿವ ಪಾದಾವುರ ಏವ ವೇದಿರ್ಲೊಮಾನಿ ಬರ್ಹಿಹ್ರದಯಂ ಗಾರ್ಹಪತ್ಯ ಮನೋನ್ಯಾಹಾರ್ಯಪಚನ ಆಸ್ಯಮಾಹವನೀಯಃ’ (ಛಾಂ. ೫-೧೮-೧, ೨) - ಎಂಬ ವಾಕ್ಯ ದಲ್ಲಿರುವ ವೈಶ್ವಾನರನು ಜಾಠರಾಗ್ನಿಯೊ, ದೇವತೆಯೂ, ಶಾರೀರನೋ ಅಥವಾ ಪರಮೇಶ್ವರನೂ ?
ಪೂರ್ವಪಕ್ಷ : ವೈಶ್ವಾನರ ಎಂಬ ಶಬ್ದವನ್ನು ಜಾಠರಾಗ್ನಿ, ಭೂತಾಗ್ನಿ, ಅಗ್ನಿದೇವತೆ - ಈ ಮೂರಕ್ಕೂ ವೇದದಲ್ಲಿ ಪ್ರಯೋಗಿಸಿದೆ. ಆದ್ದರಿಂದ ಅವುಗಳಲ್ಲಿ ಒಂದು ವೈಶ್ವಾನರನಾಗಬಹುದು. ಇಲ್ಲಿ “ಕೋ ನ ಆತ್ಮಾ’ (ನಮ್ಮ ಆತ್ಮನು ಯಾರು ?) ಎಂದು (ಛಾಂ. ೫-೧೧-೧) ಆತ್ಮಶಬ್ದದಿಂದ ಉಪಕ್ರಮಿಸಿರುವದರಿಂದಲೂ ಪ್ರಾದೇಶಮಾತ್ರ (ಚೋಟುದ್ದದವನು) ಎಂಬ ವಿಶೇಷಣವಿರುವದರಿಂದಲೂ ಶಾರೀರನಾದರೂ ಆಗಬಹುದು. ವೈಶ್ವಾನರ, ಅಗ್ನಿ ಎಂಬ ಶಬ್ದಗಳು, ಗಾರ್ಹಪತ್ಯವೇ ಮುಂತಾದ ಅಗ್ನಿತ್ರಯವನ್ನು ಕಲ್ಪಿಸಿರುವದು, ಪ್ರಾಣಾಹುತಿಗೆ ಅಧಿಕರಣವೆಂದು ಹೇಳಿರುವದು - ಎಂಬೀ ಕಾರಣಗಳಿಂದಲೂ ವೈಶ್ವಾನರನು ಪುರುಷನ ಒಳಗೆ ಇದ್ದು ಕೊಂಡಿರುವನು ಎಂದು ಹೊಂದದಿರುವದರಿಂದಲೂ ವೈಶ್ವಾನರನು ಪರಮೇಶ್ವರನಲ್ಲ.
ಸಿದ್ಧಾಂತ : ‘ಮೂರ್ಧವ ಸುತೇಜಾಃ’ (ಸುತೇಜಸ್ಯಗುಣದಿಂದ ಕೂಡಿದ ದ್ಯುಲೋಕವೇ
೩೫೪
ಬ್ರಹ್ಮಸೂತ್ರಭಾಷ್ಯ
ಮೂರ್ಧವು) ಎಂದು ಮುಂತಾಗಿರುವ ವಿಶೇಷಣವು ಸರ್ವಕಾರಣನಾಗಿರುವ ಪರಮೇಶ್ವರನಿಗೇ ಹೊಂದುತ್ತದೆ ; ಪರಮೇಶ್ವರನಿಗೇ ಈ ಬಗಯ ಸರ್ವಾತ್ಮತ್ವವನ್ನು ಸ್ಮೃತಿಯಲ್ಲಿ ವರ್ಣಿಸಿರುತ್ತದೆ. ಪುರುಷನೊಳಗಿರುವದೆಂಬುದು ಜಾಠರಾಗ್ನಿಪ್ರತೀಕವಾದ ಅಥವಾ ಜಾಠರಾಗ್ನುಪಾಧಿಕವಾದ ಪರಮೇಶ್ವರನಿಗೂ ಉಪಾಸನೆಯ ನಿಮಿತ್ತದಿಂದ ಆಗಬಹುದಾಗಿದೆ. ಅವನು ಪುರುಷವಿಧವೆಂದು ಅದೇ (ಶತ. ಬ್ರಾ.) ಶ್ರುತಿಯಲ್ಲಿರುವ ವಿಶೇಷಣವು ಪರಮೇಶ್ವರನಿಗೆ ಮಾತ್ರ ಹೊಂದುತ್ತದ ; ಏಕೆಂದರೆ ಅಧಿದೈವತವಾಗಿಯೂ ಅಧ್ಯಾತ್ಮವಾಗಿಯೂ ಪರಮೇಶ್ವರನು ಮೂರ್ಧಾದಿಗಳ ಮೂಲಕ ಪುರುಷವಿಧನಾಗಿರುತ್ತಾನೆ. ಪುರುಷಾವಯವಗಳಲ್ಲಿ ಕಲ್ಪಿತವಾಗಿರುವ ಪರಮೇಶ್ವರನ ಪುರುಷ ವಿಧತ್ವವನ್ನು ತಿಳಿಸುವದಕ್ಕೆ ಅಥವಾ ಪುರುಷವಿಧತ್ಯೋಪಾಧಿಯುಳ್ಳ ಪರಮೇಶ್ವರನ ಸಾಕ್ಷಿ ರೂಪವನ್ನೇ ತಿಳಿಸುವದಕ್ಕೆ “ಪುರುಷವಿಧಂ ಪುರುಷೇತನ: ಪ್ರತಿಷ್ಠಿತಂ ವೇದ” ಎಂದು ಶ್ರುತ್ಯಂತರದಲ್ಲಿ ಹೇಳಿದ ಎಂದುಕೂಡ ವಾದಿಸಬಹುದು. ಇನ್ನು ‘ಪ್ರಾದೇಶಮಾತ್ರ’ ನಂಬ ಶ್ರುತಿಯು, ಪ್ರಾದೇಶಮಾತ್ರವಾದ ಪರಿಮಾಣದಿಂದ ಪರಮೇಶ್ವರನು ಉಪಾಸಕರಿಗೆ ಅಭಿವ್ಯಕ್ತ ನಾಗುವದರಿಂದ ಅಥವಾ ಹೃದಯಾದಿಪ್ರದೇಶಗಳಲ್ಲಿ ಅಭಿವ್ಯಕ್ತನಾಗುವದರಿಂದ ಹೊಂದುವ ದೆಂದಾಗಲಿ, ಪ್ರಾದೇಶಮಾತ್ರವಾದ ಹೃದಯದಲ್ಲಿರುವ ಮನಸ್ಸಿನಿಂದ ಸ್ಮರಣೆಮಾಡಲ್ಪಡು ವದರಿಂದ ಹೊಂದುವದಂದಾಗಲಿ, ಜಾಬಾಲಶ್ರುತಿಯಲ್ಲಿ ಹೇಳಿರುವಂತ ವೈಶ್ವಾನರಾವಯವ ಗಳನ್ನು ಪುರುಷನ ಮೂರ್ಧಾದಿಚುಬುಕಾಂತಾವಯವಗಳಲ್ಲಿ ಸಂಪಾದನಮಾಡಿ ಉಪಾಸನಮಾಡ ಬೇಕೆಂಬುದರಿಂದ ಹೊಂದುವದೆಂದಾಗಲಿ, ಕಲ್ಪಿಸಬಹುದು. ಆದ್ದರಿಂದ ಪ್ರಕೃತವಾಕ್ಯದಲ್ಲಿ ಉಪಾಸನೆ ಮಾಡಬೇಕೆಂದು ಹೇಳಿರುವ ವೈಶ್ವಾನರನು ಪರಮೇಶ್ವರನೇ.