ಜನರ ವ್ಯವಹಾರವು ಅಧ್ಯಾಸಪೂರ್ವಕವಾಗಿದೆ
(ಭಾಷ್ಯ) ೧. ಯುನ್ಮದಸ್ಮತೃತ್ಯಯಗೋಚರಯೋರ್ವಿಷಯವಿಷಯಿಣೋಃ ತಮಃ ಪ್ರಕಾಶವದ್ವಿರುದ್ಧ ಸ್ವಭಾವಯೋಃ ಇತರೇತರಭಾವಾನುಪಪತ್ರ ಸಿದ್ಧಾಯಾಂ ತದ್ಧ ರ್ಮಾಣಾಮಪಿ ಸುತರಾಮ್ ಇತರೇತರಭಾವಾನುವಪತ್ತಿಃ, ಇತ್ಯತಃ ಅಸ್ಮತೃತ್ಯಯ ಗೋಚರೇ ವಿಷಯಿಣಿ ಚಿದಾತ್ಮಕೇ ಯುಷ್ಯತ್ಯಯಗೋಚರಸ್ಯ ವಿಷಯಸ್ಯ ತದ್ದ ರ್ಮಾಣಾಂ ಚ ಅಧ್ಯಾಸಃ, ತದ್ವಿಪರ್ಯಯೇಣ ವಿಷಯಿಣಃ ತದ್ಧರ್ಮಾಣಾಂ ಚ ವಿಷಯ ಅಧ್ಯಾಸಃ ಮಿಥ್ಯಾ ಇತಿ ಭವಿತುಂ ಯುಕ್ತಮ್ | ತಥಾಪಿ ಅನ್ನೋನ್ಯಸ್ಮಿನ್ ಅನ್ನೋನ್ಯಾತ್ಮಕತಾಮ್ ಅನ್ನೋನ್ಯಧರ್ಮಾಂಶ್ಚ ಅಧ್ಯಸ್ಯ ಇತರೇತರಾವಿವೇಕೇನ ಅತ್ಯನ್ತವಿವಿಕ್ತರ್ಧಮ್ರಧರ್ಮಿಗೂ ಮಿಥ್ಯಾಜ್ಞಾನನಿಮಿತ್ತ: ಸತ್ಯಾನೃತೇ ಮಿಥುನೀಕೃತ್ಯ ‘ಅಹಮಿದಮ್,’ ‘ಮಮೇದಮ್’ ಇತಿ ನೈಸರ್ಗಿಕೋತಿಯಂ ಲೋಕವ್ಯವಹಾರಃ ||
(ಭಾಷ್ಯಾರ್ಥ) ‘ನೀನು’, ‘ನಾನು’ - ಎಂಬ ಪ್ರತ್ಯಯಗಳಿಗೆ[1-1] ಗೋಚರವಾಗಿರುವ ವಿಷಯ, ವಿಷಯಿ[1-2] (ಇವು)ಗಳು ಕತ್ತಲೆ-ಬೆಳಕುಗಳ್ ಅಂತ (ಒಂದಕ್ಕೊಂದು) ವಿರುದ್ಧವ್ ಆದ ಸ್ವಭಾವವ್ ಉಳ್ಳವು[2-1](ಗಳ್ ಆದ್ದರಿಂದ ಇವುಗಳಲ್ಲಿ) ಒಂದು ಮತ್ತೊಂದರ ಸ್ವರೂಪವ್ ಆಗುವದ್+++(=ಆಗುವುದ್ ದಕ್ಷಿಣಕರ್ಣಾಟಕಪ್ರಯೊಗ)+++ ಎಂಬುದು ಹೊಂದುವದ್ ಇಲ್ಲವ್ ಎಂಬುದು ಸಿದ್ಧವ್ ಆಗಿರುವಲ್ಲಿ, ಇವುಗಳ ಧರ್ಮಗಳು ಒಂದರವು ಮತ್ತೊಂದರಲ್ಲ್ ಇರುವದ್ ಅಂಬುದು ತೀರ ಹೊಂದದ (ಮಾತಾಗಿರುವದು).
1-1. ಅರಿವುಗಳಿಗೆ.
1-2. ವಿಷಯಿ ಎಂದರೆ ಮಿಕ್ಕಲ್ಲದ್ದನ್ನೂ ಅರಿಯುವ ಆತ್ಮನು ; ವಿಷಯವೆಂದರೆ ಆತ್ಮನ ಅರಿವಿಗೆ ಗೋಚರವಾಗುವ ಮನಸ್ಸು, ಇಂದ್ರಿಯಗಳು, ಶರೀರ, ಹೊರಗಿನ ಶಬ್ದಗಳು - ಇವು.ಭಾಷ್ಯಕಾರರ ಅವತರಣಿಕೆ
2-1. ಸಮಾನಸ್ವಭಾವದ ವಸ್ತುಗಳನ್ನು ಮಾತ್ರ ಒಂದನ್ನು ಮತ್ತೊಂದೆಂದು ಭಾವಿಸಬಹುದು ಎಂದು ಪೂರ್ವಪಕ್ಷಿಯ ಭಾವ.
ಆದ್ದರಿಂದ, ನಾನು ಎಂಬ ಅರಿವಿಗೆ ಗೋಚರವಾಗಿಯೂ ಚಿತೃರೂಪವಾಗಿಯೂ ಇರುವ ವಿಷಯಿಯಲ್ಲಿ ‘ನೀನು’ ಎಂಬ ಅರಿವಿಗೆ ಗೋಚರವಾದ ವಿಷಯವನ್ನೂ ಅದರ ಧರ್ಮ ಗಳನ್ನೂ ಅಧ್ಯಾಸ(ಮಾಡುತ್ತಾರೆಂಬುದೂ) ಇದಕ್ಕೆ ವಿಪರೀತವಾಗಿ ವಿಷಯಿಯನ್ನೂ ಅದರ ಧರ್ಮಗಳನ್ನೂ ವಿಷಯದಲ್ಲಿ ಅಧ್ಯಾಸಮಾಡುತ್ತಾರೆಂಬುದೂ ಸುಳ್ಳು ಎಂದಾಗ ಬೇಕು. ಹೀಗಿದ್ದರೂ ಅತ್ಯಂತವಾಗಿ ಬೇರ್ಪಟ್ಟಿರುವ ಈ ಧರ್ಮಧರ್ಮಿಗಳನ್ನು ಒಂದರಿಂದೊಂದನ್ನು ವಿಂಗಡಿಸಿ ತಿಳಿದುಕೊಳ್ಳದ್ದರಿಂದ ಇವುಗಳಲ್ಲಿ ಒಂದರ ಸ್ವರೂಪ ವನ್ನು ಮತ್ತೊಂದರಲ್ಲಿಯೂ ಒಂದರ ಧರ್ಮಗಳನ್ನು ಮತ್ತೊಂದರಲ್ಲಿಯೂ ಅಧ್ಯಾಸ ಮಾಡಿ’ ತಪ್ಪು ತಿಳಿವಳಿಕೆಯ ನಿಮಿತ್ತದಿಂದ ದಿಟವಾದದ್ದನ್ನೂ ಸಟೆಯಾದದ್ದನ್ನೂ
-
ಚೈತನ್ಯ, ವಿಷಯಿತ್ಯ, ವಿಕಾರವಿಲ್ಲದಿರುವಿಕ - ಮುಂತಾದವು ಆತ್ಮನ ಧರ್ಮಗಳು ; ಜಡತ್ವ, ವಿಷಯ, ವಿಕಾರವಾಗುವಿಕೆ - ಇವು ಅನಾತ್ಮದ ಧರ್ಮಗಳು.
-
ಏಕೆಂದರೆ ಧರ್ಮಗಳು ತಮ್ಮ ಧರ್ಮಿಯನ್ನು ಬಿಟ್ಟು ಬೇರೊಂದು ಧರ್ಮಿಯಲ್ಲಿರಲೇ ಆರವು.
-
ಬೇರೆಬೇರೆಯ ಸ್ವಭಾವವಾಗಿರುವ ಎಂದರ್ಥ. ‘ವಿರುದ್ಧ ಸ್ವಭಾವವುಳ್ಳ’ ಎಂದು ಹಿಂದೆ ಹೇಳಿದ್ದನ್ನೇ ಇಲ್ಲಿ ಬೇರೆಯ ಮಾತುಗಳಿಂದ ತಿಳಿಸಿರುತ್ತದ.
-
ಆತ್ಮ, ಅನಾತ್ಮ - ಎಂಬ ಧರ್ಮಿಗಳನ್ನೂ ಇವುಗಳ ಧರ್ಮಗಳನ್ನೂ ಎಂದರ್ಥ.
-
ಒಂದರಿಂದೂಂದನ್ನು ವಿಂಗಡಿಸಿ ತಿಳಿದುಕೊಳ್ಳದಿರುವ ಅವಿವೇಕವು ಅಧ್ಯಾಸಕ್ಕೆ ನಿಮಿತ್ತವು. ಗೀ, ಭಾ. ೧೩-೨೬, ಭಾ. ಭಾ. ೮೨೬ ನೋಡಿ. ಆತ್ಮ, ಅನಾತ್ಮ - ಎಂಬ ಧರ್ಮಿಗಳನ್ನು ವಿಂಗಡಿಸಿ ತಿಳಿದುಕೊಳ್ಳದೆ ಇರುವದರಿಂದ ಅವುಗಳಲ್ಲಿ ಒಂದನ್ನು ಮತ್ತೊಂದೆಂದು ಭಾವಿಸುವ ಅಧ್ಯಾಸವೂ ಧರ್ಮಗಳು ಯಾವದಕ್ಕೆ ಸಂಬಂಧಪಟ್ಟಿರುವವೆಂಬುದನ್ನು ವಿಂಗಡಿಸಿ ತಿಳಿದುಕೊಳ್ಳದೆ ಇರುವದರಿಂದ ಒಂದರ ಧರ್ಮಗಳನ್ನು ಮತ್ತೊಂದರ ಧರ್ಮಗಳೆಂದು ಭಾವಿಸುವ ಅಧ್ಯಾಸವೂ ಆಗುವವೆಂದು ಭಾವ.
-
ಅದರ ಮೇಲೆ ಹಾಕಿ, ತಪ್ಪಾಗಿ ತಿಳಿದುಕೊಂಡು ಎಂದರ್ಥ. ಅಧ್ಯಾಸ, ಆರೋಪ, ಮಿಥ್ಯಾಜ್ಞಾನ, ಮಿಥ್ಯಾಪ್ರತ್ಯಯ, ಭ್ರಾಂತಿ - ಇವೆಲ್ಲ ಒಂದೇ ಅರ್ಥದ ಮಾತುಗಳು.
-
ಆತ್ಮನೂ ಆತ್ಮನ ಧರ್ಮಗಳೂ ಸತ್ಯ, ದಿಟ ; ಅನಾತ್ಮವೂ ಅದರ ಧರ್ಮಗಳೂ ಅನೃತ, ಮಿಥ್ಯ, ಸಟೆ, ತೋರಿದರೂ ನಿಜವಾಗಿಲ್ಲದ್ದನ್ನು ಅನೃತ, ಮಿಥ್ಯಾ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅಧ್ಯಾಸವೆಂದರೆ ಏನು ? ಬೆರೆಯಿಸಿಕೊಂಡು ‘ಇದು ನಾನು’, ‘ನನ್ನದಿದು’, ಎಂದೀ ಪರಿಯಾಗಿ ಜನರು ವ್ಯವಹಾರಮಾಡುತ್ತಿರುವದು ಸ್ವಾಭಾವಿಕವಾಗಿರುತ್ತದೆ.
ಅಧ್ಯಾಸವೆಂದರೆ ಏನು ?
(ಭಾಷ್ಯ) ೨. ಆಹ - ಕೋಯಮ್ ಅಧ್ಯಾಸೋ ನಾಮ ಇತಿ ? ಉಚ್ಯತೇ | ಸ್ಮೃತಿರೂಪಃ ಪರತ್ರ ಪೂರ್ವದೃಷ್ಟಾವಭಾಸಃ | ತಂ ಕೇಚಿತ್ ಅನ್ಯತ್ರ ಅನ್ಯಧರ್ಮಾಧ್ಯಾಸಃ ಇತಿ ವದನ್ತಿ 1 ಕೇಚಿತ್ ತು ಯತ್ರ ಯದಧ್ಯಾಸಃ ತದ್ವಿವೇಕಾಗ್ರಹನಿಬನ್ದನೋ ಭ್ರಮಃ ಇತಿ || ಅತುಯತ್ರಯದಧ್ಯಾಸಃ ತಸ್ಯವ ವಿಪರೀತಧರ್ಮತ್ವಕಲ್ಪನಾಮ್ ಆಚಕ್ಷತೇ ಇತಿ | ಸರ್ವಥಾಪಿ ತು ಅನ್ಯಸ್ಯ ಅನ್ಯಧರ್ಮಾವಭಾಸತಾಂ ನ ವ್ಯಭಿಚರತಿ | ತಥಾ ಚ ಲೋಕೇ ಅನುಭವಃ - ‘ಶುಕ್ತಿಕಾ ಹಿ ರಜತವತ್ ಅವಭಾಸತೇ’, ‘ಏಕಶ್ಯ; ಸದ್ವಿತೀಯವತ್’ ಇತಿ ||
(ಭಾಷ್ಯಾರ್ಥ) (ಪ್ರಶ್ನೆ) : • ಈ ಅಧ್ಯಾಸ ಎಂಬುದು ಯಾವದು ?
(ಉತ್ತರ) :- ಹೇಳುತ್ತೇವೆ, (ಕೇಳಿ). ಹಿಂದೆ ಕಂಡ (ಒಂದು ವಸ್ತು) ಮತ್ತೊಂದರಲ್ಲಿ ಸ್ಮೃತಿರೂಪವಾಗಿ ತೋರುವದೇ (ಅಧ್ಯಾಸವು). ಇದನ್ನು ಕೆಲವರು ಒಂದು (ವಸ್ತು)ವಿನಲ್ಲಿ ಇನ್ನೊಂದರ ಧರ್ಮದ ಅಧ್ಯಾಸವು ಎನ್ನುತ್ತಾರೆ. (ಇನ್ನು)
-
ನಾನು ಮನುಷ್ಯನು, ನನ್ನದು ದೇಹವು ಅಥವಾ ಮನೆಯು - ಎಂದು ಮುಂತಾಗಿ. - 2. ಅವಿಚಾರದ ಅವಸ್ಥೆಯಲ್ಲಿರುವದನ್ನು ಭಾಷ್ಯದಲ್ಲಿ ಸ್ವಾಭಾವಿಕ, ನೈಸರ್ಗಿಕ - ಎಂದು ಕರದಿರುತ್ತದೆ. ಸ್ವಾಭಾವಿಕಜ್ಞಾನದಿಂದ ವ್ಯವಹಾರವು ಸಾಗುತ್ತಿರುವದು ; ವೇದಾಂತವಿಚಾರ ದಿಂದುಂಟಾದ ಜ್ಞಾನದಿಂದ ಈ ಜ್ಞಾನವು ತಪ್ಪಂದು ನಿಶ್ಚಯವಾಗುತ್ತದೆ ಎಂದು ಭಾವ. ಗೀ. ಭಾ.ಭಾ. ೨೮೩ನ್ನು ನೋಡಿ, ವ್ಯಾಖ್ಯಾನಗಳಲ್ಲಿ ಈ ವಾಕ್ಯಕ್ಕೆ ಬೇರೆಯ ಅರ್ಥವನ್ನು ಮಾಡಿ ಮೂಲಾವಿದ್ಯಾವಾದವೆಂಬ ಹೊಸ ವಾದವನ್ನು ಇದರ ಆಧಾರದಮೇಲೆ ಹುಟ್ಟಿ ಹಾಕಿರುತ್ತಾರೆ. ಪೀಠಿಕೆಯನ್ನು ನೋಡಿ.
-
ಒಂದು ಮತ್ತೊಂದೆಂದು ತೋರುವ ಭ್ರಾಂತಿಯೇ ಅಧ್ಯಾಸವು, ಭ್ರಾಂತಿಯಲ್ಲಿ ಹಿಂದೆ ಕಂಡದ್ದೇ ಮತ್ತೊಂದರಲ್ಲಿ ಕಾಣಿಸುವದೆಂಬ ನಿಯಮವಿಲ್ಲವಾದರೂ ಅಧ್ಯಸ್ತವಾದದ್ದು ಮೊದಲು ಕಂಡದ್ದೇ ಎಂದು ತೋರುತ್ತಿರುವದು. ಪೀಠಿಕೆಯನ್ನು ನೋಡಿ.
-
ಯಾವದರಲ್ಲಿ ಅಧ್ಯಾಸವಾಗುವದೋ ಅದನ್ನು ಅಧಿಷ್ಠಾನ ಎಂದು ಕರೆಯುತ್ತಾರ. ಆಚಾರ್ಯರ ಭಾಷ್ಯಗ್ರಂಥಗಳಲ್ಲಿ ಇದನ್ನು ಆಸ್ಪದ ಎಂದು ಕರೆದಿರುವದು ಕಂಡುಬಂದಿರುತ್ತದೆ. ಅಧಿಷ್ಠಾನವೂ ಆರೋಪಿತವಾದದ್ದೂ ಸತ್ಯವೆಂದು ಕೆಲವರ ಮತ ; ಅದಕ್ಕೆ ಅನ್ಯಥಾಖ್ಯಾತಿ ಎಂದು ಹಸರು.
ಭಾಷ್ಯಕಾರರ ಅವತರಣಿಕೆ
ಕೆಲವರಾದರೂ ಯಾವದರಲ್ಲಿ ಯಾವದರ ಅಧ್ಯಾಸ(ವಾಗುವದೂ) ಆ (ಎರ ಡನ್ನೂ) ವಿಂಗಡಿಸಿ ತಿಳಿದುಕೊಳ್ಳದ ನಿಮಿತ್ತದಿಂದ (ಆಗುವ) ಭ್ರಮ’ (ಎನ್ನುತ್ತಾರೆ). ಮತ್ತೆ ಕೆಲವರಾದರೋ ಯಾವದರಲ್ಲಿ ಯಾವದರ ಅಧ್ಯಾಸವಾಗುತ್ತದೆಯೋ ) ಅದಕ್ಕೆ ಬೇರೊಂದು ಧರ್ಮ(ವಿರುವಂತ) ಕಲ್ಪಿಸುವದು’ ಎಂದು ಹೇಳುತ್ತಾರೆ. ಇದು ಹೇಗೇ ಆಗಲಿ, ಒಂದು (ವಸ್ತು) ಮತ್ತೊಂದರ ಧರ್ಮವುಳ್ಳದ್ದಾಗಿ ತೋರುವ ದೆಂಬುದನ್ನು (ಅಧ್ಯಾಸವು) ಬಿಟ್ಟಿರುವದಿಲ್ಲ. ‘ಕಪ್ಪಯಚಿಪ್ಪೇ ಬೆಳ್ಳಿಯಂತೆ ತೋರು ಇದ’, ‘ಒಬ್ಬ ಚಂದ್ರನೇ ಎರಡನೆಯ (ಚಂದ್ರ)ನೊಡನಿರುವಂತೆ (ತೋರುತ್ತಿದಾನ)’ ಎಂದು ಲೋಕದಲ್ಲಿ ಅನುಭವವೂ ಹಾಗೆಯೇ (ಇರುತ್ತದೆ).
(ಭಾಷ್ಯ) ೩. ಕಥಂ ಪುನಃ ಪ್ರತ್ಯಗಾತ್ಮನಿ ಅವಿಷಯೇ ಅಧ್ಯಾಸೋ ವಿಷಯ ತದ್ಧರ್ಮಾಣಾಮ್ ? ಸರ್ವೊ ಹಿ ಪುರೋವಸ್ಥಿತೇ ವಿಷಯೇ ವಿಷಯಾಸ್ತರಮ್ ಅಧ್ಯಸ್ಮತಿ | ಯುಷ್ಯತ್ಯಯಾಪ್ತಸ್ಯ ಚ ಪ್ರತ್ಯಗಾತ್ಮನಃ ಅವಿಷಯತ್ವಂ ಬ್ರವೀಷಿ | ಉಚ್ಯತೇ ! ನ ತಾವತ್ ಅಯಮ್ ಏಕಾಗ್ರೇನ ಅವಿಷಯಃ । ಅಸ್ಮತೃತ್ಯಯ
ವಿಷಯತ್ವಾತ್, ಅಪರೋಕ್ಷತ್ಪಾಚ್ಚ ಪ್ರತ್ಯಗಾತ್ಮಪ್ರಸಿದ್ಧ | ನ ಚಾಯಮಸ್ತಿ ನಿಯಮಃ ಪುರೋವಸ್ಥಿತ ಏವ ವಿಷಯೇ ವಿಷಯಾಸ್ತರಮ್ ಅಧ್ಯಸಿತವ್ಯಮ್ ಇತಿ | ಅಪ್ರತ್ಯಕ್ಷೇsಪಿ ಹಿ ಆಕಾಶ್ ಬಾಲಾಃ ತಲಮಲಿನತಾದಿ ಅಧ್ಯಸ್ಯ | ಏವಮ್ ಅವಿರುದ್ಧ ಪ್ರತ್ಯಗಾತ್ಮನ್ಯಪಿ ಅನಾತ್ಮಾಭ್ಯಾಸಃ !!
(ಭಾಷ್ಯಾರ್ಥ) (ಆಕ್ಷೇಪ) :- ಹಾಗಾದರೆ ವಿಷಯನಲ್ಲದ ಪ್ರತ್ಯಗಾತ್ಮನಲ್ಲಿ ವಿಷಯದ (ಮತ್ತು) ಅದರ ಧರ್ಮಗಳ ಅಧ್ಯಾಸ(ವಾಗಿರುವದೆಂಬುದು) ಹೇಗೆ ? ಎದುರಿಗಿರುವ
-
ಎರಡು ಜ್ಞಾನಗಳಾಗುವವು. ಅವುಗಳಲ್ಲಿ ಒಂದು ಅನುಭವ, ಇನ್ನೊಂದು ಸ್ಮತಿ. ಈ ಎರಡನ್ನೂ ವಿಂಗಡಿಸಿಕೊಳ್ಳದೆ ಇರುವದೇ ಅಧ್ಯಾಸವು ಎಂದು ಅಖ್ಯಾತಿವಾದಿಗಳ ಮತ. ಇವರ ಮತದಲ್ಲಿ ಅವಿವೇಕಕ್ಕಿಂತ ಬೇರೆಯಾದ ಭ್ರಮಯಿಲ್ಲ.
-
ಒಂದನ್ನು ಮತ್ತೊಂದೆಂದು ತಪ್ಪಾಗಿ ತಿಳಿಯುವದೇ ಅಧ್ಯಾಸವಂಬವರ ಮತವಿದು. ಅಧ್ಯಾಸಕ್ಕೆ ಅಧಿಷ್ಠಾನವಾಗಿರುವದು ಅಸತ್ಯವೆಂಬ ಶೂನ್ಯವಾದಿಗಳೂ ಅದು ಸತ್ಯವಂಬ ವೇದಾಂತಿ ಗಳೂ ಈ ಮತದವರು. . ಭಾ.
-
ಅನಿರ್ವಚನೀಯವಾದ ಬೆಳ್ಳಿ, ಎರಡನೆಯ ಚಂದ್ರ ಮುಂತಾದವು ಭ್ರಾಂತಿಯ ಕಾಲಕ್ಕೆ ಹುಟ್ಟಿ ತೋರುವವೆಂಬ ಕೆಲವರು ವೇದಾಂತಿಗಳ ವಾದವು ಭಾಷ್ಯಸಮ್ಮತವಲ್ಲ. ಪೀಠಿಕೆಯನ್ನು ನೋಡಿ.
ವಿದ್ಯಾವಿದ್ಯಗಳ ವಿಂಗಡ
ವಿಷಯದಲ್ಲಲ್ಲವೆ, ಎಲ್ಲರೂ ಮತ್ತೊಂದು ವಿಷಯವನ್ನು ಅಧ್ಯಾಸಮಾಡುತ್ತಾರೆ ? ಆದರೆ ‘ನೀನು’ ಎಂಬ ಪ್ರತ್ಯಯದ (ಸಂಬಂಧ)ವಿಲ್ಲದ (ಕಾರಣ) ಪ್ರತ್ಯಗಾತ್ಮನು ವಿಷಯನಲ್ಲವೆಂದೂ ಹೇಳುತ್ತಿರುವೆಯಲ್ಲ !
(ಪರಿಹಾರ) :- ಹೇಳುತ್ತೇವೆ, (ಕೇಳು). ಒಂದನೆಯದಾಗಿ ಈ (ಆತ್ಮನು) ನಿಯಮದಿಂದ ವಿಷಯನಲ್ಲದವನಾಗಿರುವದಿಲ್ಲ. ಏಕೆಂದರೆ ಇವನು ನಾನು ಎಂಬ ಪ್ರತ್ಯಯಕ್ಕೆ ವಿಷಯನಾಗಿರುತ್ತಾನೆ. ಇದಲ್ಲದೆ ಅಪರೋಕ್ಷವಾಗಿರುವದರಿಂದ ಪ್ರತ್ಯಗಾ ತ್ಮನು ಪ್ರಸಿದ್ಧನಾಗಿರುವನು. ಎದುರಿಗಿರುವ ವಿಷಯದಲ್ಲಿಯೇ ಮತ್ತೊಂದು ವಿಷಯ
ವನ್ನು ಅಧ್ಯಾಸಮಾಡಬೇಕು ಎಂದೇನೂ ನಿಯಮವು ಇರುವದೂ ಇಲ್ಲ. ಆಕಾಶವು ಅಪ್ರತ್ಯಕ್ಷವಾಗಿದ್ದರೂ ಅವಿವೇಕಿಗಳು (ಅದರಲ್ಲಿ) ತಲವು ಮಲಿನವಾಗಿರುವದು ಮುಂತಾದ (ಧರ್ಮ)ವನ್ನು ಅಧ್ಯಾಸಮಾಡುತ್ತಾರಲ್ಲವ ? ಇದರಂತೆ ಪ್ರತ್ಯಗಾತ್ಮ ನಲ್ಲಿಯೂ ಅನಾತ್ಮವನ್ನು ಅಧ್ಯಾಸಮಾಡುತ್ತಾರೆಂಬುದು ವಿರುದ್ಧವಲ್ಲ.
ವಿದ್ಯಾವಿದ್ಯೆಗಳ ವಿಂಗಡ
(ಭಾಷ್ಯ) ೪. ತಮ್ತಮ್ ಏವಂಲಕ್ಷಣಮ್ ಅಧ್ಯಾಸಂ ಪಣ್ಣಿತಾ ಅವಿದ್ಯೆತಿ ಮನ್ಯನೇ || ತದ್ವಿವೇಕೇನ ಚ ವಸ್ತುಸ್ವರೂಪಾವಧಾರಣಂ ವಿದ್ಯಾಮ್ ಆಹುಃ | ತತ್ರ ಏವಂ ಸತಿ ಯತ್ರ ಯದಧ್ಯಾಸಃ ತತೃತೇನ ದೋಷೇಣ ಗುಣೇನ ವಾ ಅಣುಮಾತ್ರೇಣಾಪಿ ಸ ನ ಸಂಬಧ್ಯತೇ ||
(ಭಾಷ್ಯಾರ್ಥ) ಇಂಥ ಲಕ್ಷಣವುಳ್ಳ ಈ ಅಧ್ಯಾಸವನ್ನು ಪಂಡಿತರು ಅವಿದ್ಯ ಎನ್ನುತ್ತಾರೆ ; ಅದನ್ನು
1 ವ್ಯವಹಾರದಲ್ಲಿ ಆತ್ಮನು ನಾನೆಂಬ ಅರಿವಿಗೆ ಗೋಚರನಾಗಿಯೇ ತೋರುತ್ತಾನೆ ಎಂದರ್ಥ. ಆತ್ಮನು ಯಾವಾಗಲೂ ಹೀಗೆಯೇ ತೋರಬೇಕೆಂಬ ನಿಯಮವಿಲ್ಲ ; ಇದು ಅವನ ಸ್ವರೂಪವಲ್ಲ.
2 ಅಧಿಷ್ಠಾನವೂ ಆರೋಪಿತವೂ ಪ್ರಸಿದ್ಧವಾಗಿದ್ದರೆ ಅಧ್ಯಾಸವಾಗುವದಕ್ಕೆ ಸಾಕು ; ಅವರಡೂ ವಿಷಯವಾಗಿರಬೇಕು, ಪ್ರತ್ಯಕ್ಷವಾಗಿರಬೇಕು - ಎಂಬ ನಿರ್ಬಂಧವೇನೂ ಇಲ್ಲ ಎಂದು ಭಾವ. ಆತ್ಮನು ಪ್ರಸಿದ್ಧನಾಗಿರುತ್ತಾನೆ ಎಂಬ ಭಾಷ್ಯದ ಅಭಿಪ್ರಾಯವಿದು. ಜೇಯವನ್ನು ಜ್ಞಾತೃವಿನಲ್ಲಿ ಅಧ್ಯಾಸಮಾಡಬಹುದ ? - ಎಂಬ ಆಕ್ಷೇಪಕ್ಕೆ ಉತ್ತರವನ್ನು ಗೀ, ೧೩ನೆಯ ಅಧ್ಯಾಯ ಭಾ. ಭಾ. ೭೬೦ ರಲ್ಲಿ ಹೇಳಿದೆ. ಅವಿಷಯದಲ್ಲಿ ಅಧ್ಯಾಸ ಹೇಗೆ ? - ಎಂಬುದರ ಜೊತೆಗೆ ಅವಿಷಯವನ್ನು ಅಧ್ಯಾಸಮಾಡಬಹುದ ? - ಎಂದೂ ಆಕ್ಷೇಪವನ್ನು ಕಲ್ಪಿಸಬೇಕು.
3 ತತ್ತ್ವಜ್ಞಾನಿಗಳು.
ಭಾಷ್ಯಕಾರರ ಅವತರಣಿಕ
ವಿವೇಚನಮಾಡಿ’ ವಸ್ತುಸ್ವರೂಪವನ್ನು ಗೊತ್ತುಪಡಿಸುವದನ್ನು ವಿದ್ಯೆ ಎಂದು ಕರೆಯು ತ್ತಾರೆ. ಇದು ಹೀಗಿರುವದರಿಂದ ಯಾವದರಲ್ಲಿ ಯಾವದನ್ನು ಅಧ್ಯಾಸಮಾಡುತ್ತಾರೋ ಅದರಿಂದಾದ ದೋಷವಾಗಲಿ ಗುಣವಾಗಲಿ ಅದಕ್ಕೆ ಎಳ್ಳಷ್ಟೂ ಸಂಬಂಧಿಸಿರುವದಿಲ್ಲ. ವ್ಯವಹಾರವು ಆವಿದ್ಯಕವೆಂಬುದು ಹೇಗೆ ?
(ಭಾಷ್ಯ) ೫. ತಮ್ ಏತಮ್ ಅವಿದ್ಯಾಖ್ಯಮ್ ಆತ್ಮಾನಾತ್ಮನೋರಿತರೇತರಾಧ್ಯಾಸಂ ಪುರಸ್ಕೃತ್ಯ ಸರ್ವ ಪ್ರಮಾಣಪ್ರಮೇಯವ್ಯವಹಾರಾ ಲೌಕಿಕಾ ವೈದಿಕಾಶ್ಚ ಪ್ರವೃತ್ತಾ: | ಸರ್ವಾಣಿ ಚ ಶಾಸ್ತ್ರಾಣಿ ವಿಧಿಪ್ರತಿಷೇಧಮೋಕ್ಷಪರಾಣಿ | ಕಥಂ ಪುನಃ ಅವಿದ್ಯಾ ವದ್ವಿಷಯಾಣಿ ಪ್ರತ್ಯಕ್ಷಾದೀನಿ ಪ್ರಮಾಣಾನಿ ಶಾಸ್ತ್ರಾಣಿ ಚ ಇತಿ ? ಉಚ್ಯತೇ | ದೇಹೇಸ್ಟಿಯಾದಿಷು ಅಹಂಮಮಾಭಿಮಾನರಹಿತಸ್ಯ ಪ್ರಮಾತೃತ್ವಾನುಪಪತ್ತೆ ಪ್ರಮಾಣಪ್ರವೃತ್ತನುಪಪತ್ತೆ | ನ ಹಿ ಇನ್ದ್ರಿಯಾಣಿ ಅನುಪಾದಾಯ ಪ್ರತ್ಯಕ್ಷಾದಿ ವ್ಯವಹಾರಃ ಸಮೃವತಿ | ನ ಚ ಅಧಿಷ್ಠಾನಮನ್ನರೇಣ ಇನ್ಸಿಯಾಣಾಂ ವ್ಯವಹಾರ ಸಂಭವತಿ | ನ ಚ ಅನಧಸ್ತಾತ್ಮಭಾವೇನ ದೇಹನ ಕಶ್ಚಿತ್ ವ್ಯಾಪ್ರಿಯತೇ | ನ ಚ ಏತಸ್ಮಿನ್ ಸರ್ವಸ್ಮಿನ್ ಅಸತಿ ಅಸಜ್ಞಸ್ಯ ಆತ್ಮನಃ ಪ್ರಮಾತೃತ್ವಮ್ ಉಪಪದ್ಯತೇ | ನ ಚ ಪ್ರಮಾತೃತ್ವಮ್ ಅನ್ನರೇಣ ಪ್ರಮಾಣಪ್ರವೃತ್ತಿರಸ್ತಿ | ತಸ್ಮಾತ್ ಅವಿದ್ಯಾ ವದ್ವಿಷಯಾವ ಪ್ರತ್ಯಕ್ಷಾದೀನಿ ಪ್ರಮಾಣಾನಿ ಶಾಸ್ತ್ರಾಣಿ ಚ ||
(ಭಾಷ್ಯಾರ್ಥ) ಆ ಈ ಅವಿದ್ಯೆಯೆಂಬ ಆತ್ಮಾನಾತ್ಮಗಳ ಪರಸ್ಪರಾಧ್ಯಾಸವನ್ನು ಮೂಲ ವಾಗಿಟ್ಟುಕೊಂಡು ಎಲ್ಲಾ ಲೌಕಿಕಪ್ರಮಾಣಪ್ರಮೇಯವ್ಯವಹಾರಗಳೂ ವೈದಿಕ
-
ಇದು ಸರಿಯಾದ ತಿಳಿವಳಿಕೆಯಲ್ಲವೆಂದು ವಿವೇಚನಮಾಡಿ : ಅಥವಾ ಅದರಿಂದ ವಿಂಗಡಿಸಿ, ಆತ್ಮನನ್ನೂ ಅನಾತ್ಮನನ್ನೂ ವಿಂಗಡಿಸಿ ಅರಿತುಕೊಂಡು ಎಂದರ್ಥ. ತತ್ ಎಂಬ ಮಾತಿಗೆ ಬುದ್ಧಿಸ್ಥವಾದ ಆತ್ಮಾನಾತ್ಮಗಳಂದು ಅರ್ಥವನ್ನು ಮಾಡಿದರೆ ಆತ್ಮನನ್ನು ಸತ್ಯವೆಂದೂ ಅನಾತ್ಮನನ್ನು ಮಿಥ್ಯಯಂದೂ ವಿವೇಚಿಸಿ ಎಂದೂ ಅಭಿಪ್ರಾಯವನ್ನು ಕಲ್ಪಿಸಬಹುದು. ಗೀ, ಭಾ. ೧೩-೨೬ (ಭಾ. ಭಾ. ೮೨೬) ನ್ನು ನೋಡಿ,
-
ವಿದ್ಯ, ಅವಿದ್ಯ - ಇವುಗಳ ವಿಷಯಕ್ಕೆ ಪೀಠಿಕೆಯನ್ನು ನೋಡಿ.
-
ಅಧ್ಯಸ್ತವಾದದ್ದು ಕಲ್ಪನೆಯಿಂದ ತೋರುವ ಹುಸಿತೋರಿಕೆಯಾದ್ದರಿಂದ ಅಧ್ಯಸ್ತಾತ್ಮನ ಗುಣವು ಅನಾತ್ಮಕ್ಕೆ ಬರುವದಿಲ್ಲ, ಅಧ್ಯಸ್ತವಾದ ಅನಾತ್ಮದ ದೋಷವು ಆತ್ಮನಿಗೂ ಅಂಟುವದಿಲ್ಲ ಎಂದರ್ಥ.
ವ್ಯವಹಾರವು ಆವಿದ್ಯಕವೆಂಬುದು ಹೇಗೆ ? (ಪ್ರಮಾಣಪ್ರಮೇಯವ್ಯವಹಾರಗಳೂ)’ ಹೊರಟಿರುತ್ತವೆ. ವಿಧಿಪ್ರತಿಷೇಧ(ಪರ ವಾಗಿಯೂ) ಮೋಕ್ಷಪರವಾಗಿಯೂ ಇರುವ ಸಕಲ ಶಾಸ್ತ್ರಗಳೂ (ಈ ಅವಿದ್ಯೆಯಂಬ) ಅಧ್ಯಾಸವನ್ನು ಮೂಲವಾಗಿಟ್ಟುಕೊಂಡೇ ಹೊರಟಿರುತ್ತವೆ.
(ಆಕ್ಷೇಪ) :- ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳೂ ಶಾಸ್ತ್ರಗಳೂ ಅವಿದ್ಯಾವಂತರ ವಿಷಯವಾಗಿರುವವೆಂಬುದು ಹೇಗೆ ?
(ಪರಿಹಾರ) :- ಹೇಳುತ್ತೇವೆ, (ಕೇಳು). ಏಕೆಂದರೆ ದೇಹ, ಇಂದ್ರಿಯಗಳು ಮುಂತಾದವುಗಳಲ್ಲಿ ‘ನಾನು’, ‘ನನ್ನದು’ - ಎಂಬ ಅಭಿಮಾನವಿಲ್ಲದಾತನು ಪ್ರಮಾತ್ಮ ವಾಗಲಾರನಾದ್ದರಿಂದ (ಅವನಲ್ಲಿ) ಪ್ರಮಾಣಗಳು ಪ್ರವರ್ತಿಸುವದು ಆಗಲಾರದು. ಹೇಗೆಂದರೆ, ಇಂದ್ರಿಯಗಳನ್ನಿಟ್ಟುಕೊಳ್ಳದೆ ಪ್ರತ್ಯಕ್ಷವೇ ಮುಂತಾದವುಗಳ ವ್ಯವಹಾರವು ಆಗುವಂತಿಲ್ಲ. (ತಮಗೆ) ಅಧಿಷ್ಠಾನವಾದ (ದೇಹ)ವಿಲ್ಲದ ಇಂದ್ರಿಯಗಳ ವ್ಯಾಪಾರವೂ ಆಗುವಂತಿಲ್ಲ ; ಮತ್ತು ತಾನು ಎಂದು ಅಧ್ಯಾಸಮಾಡಿಕೊಳ್ಳದೆ ಇರುವ ದೇಹದಿಂದ ಯಾವನೂ ಕೆಲಸಮಾಡಲಾರನು. ಇದಿಷ್ಟೂ ಆಗದಿದ್ದರೆ ಅಸಂಗನಾದ ಆತ್ಮನಿಗೆ ಪ್ರಮಾತೃತ್ವವು ಹೊಂದುವದೂ ಇಲ್ಲ. ಪ್ರಮಾತೃತ್ವವಿಲ್ಲದೆ ಪ್ರಮಾಣಗಳು ಪ್ರವರ್ತಿಸುವ ಹಾಗೂ ಇಲ್ಲ. ಆದ್ದರಿಂದ ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳೂ ಶಾಸ್ತ್ರಗಳೂ ಅವಿದ್ಯಾವಂತರ ವಿಷಯವಾದವುಗಳೇ.
- ಇದು ಪ್ರಮಾಣ, ಇದರಿಂದ ಇದನ್ನು ಅರಿಯಬೇಕು - ಎಂಬ ವ್ಯವಹಾರವು ಲೌಕಿಕವಾಗಲಿ ವೈದಿಕವಾಗಲಿ ಅವಿದ್ಯಾಪುರಸ್ಸರವಾಗಿಯೇ ಆಗುತ್ತದೆ ಎಂದರ್ಥ. ಗೀ, ಭಾ. ೨ ೬೯, ಭಾ. ಭಾ. ೧೨೬ನ್ನೂ ಮಾಂ. ಕಾ. ಭಾ. ೨-೩೨ನ್ನೂ ನೋಡಿ.
2.ಇದನ್ನು ಮಾಡಬೇಕು, ಇದನ್ನು ಪಡೆಯಬೇಕು ; ಇದನ್ನು ಮಾಡಬಾರದು, ಮಾಡಿದರ ದುಃಖವಾಗುತ್ತದೆ - ಎಂಬ ಕರ್ಮಕಾಂಡದ ಶಾಸ್ತ್ರವೂ ಜ್ಞಾನವನ್ನು ಸಂಪಾದಿಸಿ ಬ್ರಹ್ಮವನ್ನು ಸೇರಿ ಮುಕ್ತನಾಗಬೇಕು ಎಂದು ಉಪದೇಶಿಸುವ ಜ್ಞಾನಕಾಂಡರೂಪವಾದ ಶಾಸ್ತ್ರವೂ ಅವಿದ್ಯೆಯನ್ನಿಟ್ಟು ಕೊಂಡೇ ಹೊರಟಿರುವವು.
-
ಪ್ರಮಾತ್ಮ ಎಂದರೆ ಎಚ್ಚರದಲ್ಲಿ ಕಾಣುವ ದೇಹವು ತಾನು, ಇಂದ್ರಿಯಗಳು ತನ್ನವು ಎಂಬ ಅಭಿಮಾನವಿರುವವನು. ಇದನ್ನು ಮುಂದಿನ ವಾಕ್ಯಗಳಲ್ಲಿ ವಿವರಿಸಿದ.
-
ಚಾರ್ವಾಕರು ಪ್ರತ್ಯಕ್ಷಮಾತ್ರವನ್ನೂ, ಬೌದ್ಧರು ಪ್ರತ್ಯಕ್ಷಾನುಮಾನಗಳನ್ನೂ, ನೈಯಾಯಿಕರು ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ - ಎಂಬಿವನ್ನೂ ಪೂರ್ವ ಮೀಮಾಂಸಕರು ಇವುಗಳ ಜೊತೆಗೆ ಅರ್ಥಾಪತ್ತಿ, ಅನುಪಲಬ್ದ - ಎಂಬಿವುಗಳನ್ನೂ ಪ್ರಮಾಣ ಗಳಂದು ಒಪ್ಪುತ್ತಾರೆ. ವೇದಾಂತಿಗಳು ಇವೆಲ್ಲವೂ ಅವಿದ್ಯಾಪುರಃಸರವನ್ನುತ್ತಾರೆ.
-
ಆಶ್ರಯವಾದ ಎಂದರ್ಥ.
ಭಾಷ್ಯಕಾರರ ಅವತರಣಿಕ
ಲೌಕಿಕವ್ಯವಹಾರವು ಆವಿದ್ಯಕವೆಂಬುದಕ್ಕೆ ವಿಶೇಷಯುಕ್ತಿ
(ಭಾಷ್ಯ) ೬. ಪಶ್ವಾದಿಭಿಶ್ಚ ಅವಿಶೇಷಾತ್ 1 ಯಥಾ ಹಿ ಪಶ್ಚಾದಯಃ ಶಬ್ದಾದಿಭಿಃ ಶೌತ್ರಾದೀನಾಂ ಸಂಬನ್ಧ ಸತಿ ಶಬ್ದಾದಿವಿಜ್ಞಾನೇ ಪ್ರತಿಕೂಲೇ ಜಾತೇ ತತೋ
ನಿವರ್ತನೇ, ಅನುಕೂಲೇ ಚ ಪ್ರವರ್ತ | ಯಥಾ ದಣೋದತಕರಂ ಪುರುಷಮ್ ಅಭಿಮುಖಮ್ ಉಪಲಭ್ಯ ಮಾಂ ಹನುಮ್ ಅಯಮ್ ಇಚ್ಛತಿ ಇತಿ ಪಲಾಯಿತುಮ್ ಆರಭ | ಹರಿತತೃಣಪೂರ್ಣಪಾಣಿ ಉಪಲಭ್ಯ ತಂ ಪ್ರತಿ ಅಭಿಮುಖೀಭವನ್ತಿ | ಏವಂ ಪುರುಷಾ ಅಪಿ ವ್ಯುತ್ಪನ್ನಚಿತ್ತಾಃ ಕ್ರೂರದೃಷ್ಟಿನ್ ಆಕ್ರೋಶತಃ ಖಡ್ಗದ್ಯತ ಕರಾನ್ ಬಲವತಃ ಉಪಲಭ್ಯ ತತೋ ನಿವರ್ತನೇ, ತದ್ವಿಪರೀತಾನ್ ಪ್ರತಿ ಪ್ರವರ್ತ | ಅತಃ ಸಮಾನಃ ಪಶ್ಚಾದಿಭಿಃ ಪುರುಷಾಣಾಂ ಪ್ರಮಾಣಪ್ರಮೇಯ ವ್ಯವಹಾರಃ | ಪಶ್ವಾದೀನಾಂ ಚ ಪ್ರಸಿದ್ಧ; ಅವಿವೇಕಪುರಃಸರಃ ಪ್ರತ್ಯಕ್ಷಾದಿವ್ಯವಹಾರಃ | ತತ್ಪಾಮಾನ್ಯದರ್ಶನಾತ್ ವ್ಯುತ್ಪತ್ತಿಮತಾಮಪಿ ಪುರುಷಾಣಾಂ ಪ್ರತ್ಯಕ್ಷಾದಿವ್ಯವಹಾರಃ ತತ್ಕಾಲಃ ಸಮಾನಃ ಇತಿ ನಿಶ್ಚಿಯತೇ ||
(ಭಾಷ್ಯಾರ್ಥ) ಪಶ್ಚಾದಿಗಳಿಗಿಂತ (ಯಾವ) ವಿಶೇಷವೂ ಇಲ್ಲದ್ದರಿಂದಲೂ (ಹೀಗೆಂದು ತಿಳಿಯಬೇಕಾಗಿದೆ). ಪಶುಗಳೇ ಮುಂತಾದ (ಪ್ರಾಣಿಗಳು) ಪ್ರೋತ್ರವೇ ಮುಂತಾದ (ಇಂದ್ರಿಯಗಳಿಗೆ) ಶಬ್ದವೇ ಮುಂತಾದ (ವಿಷಯಗಳ) ಸಂಬಂಧವುಂಟಾದಾಗ ಶಬ್ದಾದಿಗಳ ಅರಿವು (ತಮಗೆ) ಪ್ರತಿಕೂಲವಾದರೆ ಅತ್ತಕಡೆಯಿಂದ ಹಿಂಜರಿಯುತ್ತವೆ, ಅನುಕೂಲವಾದರೆ ಮುನ್ನಡೆಯುತ್ತವೆ. ಹೇಗೆಂದರೆ, (ಒಬ್ಬ ಮನುಷ್ಯನು ದೊಣ್ಣೆ ಯನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡು (ತಮ್ಮ) ಎದುರಿಗೆ ಬರುವದನ್ನು ಕಂಡರೆ ಇವನು ನನ್ನನ್ನು ಹೊಡೆಯಬೇಕೆಂದಿರುವನು ಎಂದು ಓಡುವದಕ್ಕೆ ಮೊದಲು ಮಾಡು ತವ ; ಹಸಿರು ಹುಲ್ಲನ್ನು ಕೈತುಂಬ ಹಿಡಿದುಕೊಂಡಿರುವವನನ್ನು ಕಂಡರೆ ಅವನ ಕಡೆಗೆ ಮುನ್ನಡೆಯುತ್ತವೆ. ಹೀಗೆಯೇ ವಿವೇಕ(ಯುತವಾದ) ಚಿತ್ತವುಳ್ಳ ಪುರುಷರು ಕೂಡ ಕ್ರೂರವಾದ ಕಣ್ಣಿನಿಂದೊಡಗೂಡಿ ಕೂಗುತ್ತಾ ಕತ್ತಿಯನ್ನು ಕೈಯಲ್ಲಿ ಎತ್ತಿ ಹಿಡಿದು ಕೊಂಡಿರುವ ಬಲಿಷ್ಟರನ್ನು ಕಂಡರೆ ಆ ಕಡೆಯಿಂದ ಹಿಂಜರಿಯುತ್ತಾರೆ ; ಹಾಗಿಲ್ಲದೆ (ಸೌಮ್ಯವಾಗಿ ಒಳ್ಳೆಯಮಾತನ್ನಾಡುತ್ತಿರುವವರನ್ನು ಕಂಡರೆ) ಅವರ ಕಡೆಗೆ ಮುನ್ನಡೆ ಯುತ್ತಾರೆ. ಆದ್ದರಿಂದ ಪಶ್ಚಾದಿಗಳಿಗೂ ಮನುಷ್ಯರಿಗೂ ಪ್ರಮಾಣಪ್ರಮೇಯ
ಶಾಸ್ತ್ರಿಯವ್ಯವಹಾರವೂ ಆವಿದ್ಯಕವೆಂಬುದಕ್ಕೆ ಕಾರಣ
ವ್ಯವಹಾರವು ಸಮಾನವಾಗಿರುತ್ತದೆ (ಎಂದಾಯಿತು). ಪಶ್ಚಾದಿಗಳಿಗಂತೂ ಪ್ರತ್ಯಕ್ಷವೇ ಮುಂತಾದವುಗಳ ವ್ಯವಹಾರವು ಅವಿವೇಕದಿಂದಲೇ (ಆಗುವದೆಂಬುದು) ಪ್ರಸಿದ್ಧ ವಾಗಿರುತ್ತದೆ. ಅದಕ್ಕೆ ಸಮಾನವಾಗಿರುವದು ಕಂಡುಬರುವದರಿಂದ ವಿವೇಕವುಳ್ಳ ಪುರುಷರ ಪ್ರತ್ಯಕ್ಷಾಧವ್ಯವಹಾರವೂ ಆ ಕಾಲಕ್ಕೆ ಅದರಂತೆಯೇ? (ಇರುವದೆಂದು) ನಿಶ್ಚಯವಾಗುತ್ತದೆ.
ಶಾಸ್ತ್ರೀಯವ್ಯವಹಾರವೂ ಆವಿದ್ಯಕವೆಂಬುದಕ್ಕೆ ಕಾರಣ
(ಭಾಷ್ಯ) ೭. ಶಾಸ್ತ್ರೀಯೇ ತು ವ್ಯವಹಾರೇ ಯದ್ಯಪಿ ಬುದ್ಧಿಪೂರ್ವಕಾರೀ ನ ಅವಿದಿತ್ವಾ, ಆತ್ಮನಃ ಪರಲೋಕಸಮೃನ್ಗಮ್ ಅಧಿಕ್ರಿಯತೇ, ತಥಾಪಿ ನ ವೇದಾನ್ಯವೇದ್ಯಮ್ ಅಶನಾಯಾದ್ಯತೀತಮ್ ಅಪೇತಬ್ರಹ್ಮಕ್ಷತ್ರಾದಿಭೇದಮ್ ಅಸಂಸಾರಿ ಆತ್ಮತತ್ನಮ್ ಅಧಿಕಾರೇ ಅಪೇಕ್ಷತೇ | ಅನುಪಯೋಗಾತ್, ಅಧಿಕಾರವಿರೋಧಾಚ್ಚ | ಪ್ರಾಕ್ಟ ತಥಾ ಭೂತಾತ್ಮವಿಜ್ಞಾನಾತ್ ಪ್ರವರ್ತಮಾನಂ ಶಾಸ್ತ್ರಮ್ ಅವಿದ್ಯಾವದ್ವಿಷಯತ್ವಂ ನಾತಿ ವರ್ತತೇ | ತಥಾ ಹಿ ‘ಬ್ರಾಹ್ಮಣೋ ಯಜೇತ’’ (?) ಇತ್ಯಾದೀನಿ ಶಾಸ್ತ್ರಾಣಿ ಆತ್ಮನಿ ವರ್ಣಾಶ್ರಮವಯೋವಸ್ಥಾದಿವಿಶೇಷಾಧ್ಯಾಸಮ್ ಆಿತ್ಯ ಪ್ರವರ್ತನೇ |
. (ಭಾಷ್ಯಾರ್ಥ) (ಇನ್ನು) ಶಾಸ್ತ್ರದ ವ್ಯವಹಾರದಲ್ಲಿಯೋ ಎಂದರೆ, ಬುದ್ಧಿಪೂರ್ವಕವಾಗಿ (ಕರ್ಮ)ವನ್ನು ಮಾಡುವಾತನು ತನಗೆ ಪರಲೋಕದ ಸಂಬಂಧವಿದೆ ಎಂಬು)ದನ್ನು ತಿಳಿದುಕೊಳ್ಳದೆ (ಕರ್ಮಕ್ಕೆ) ಅಧಿಕಾರಿಯಾಗಲಾರನೆಂಬುದು ನಿಜ; ಆದರೂ ವೇದಾಂತ ವೇದ್ಯವಾಗಿಯೂ ಹಸಿವು ಮುಂತಾದವುಗಳನ್ನು ಮಾರಿರುವದಾಗಿಯೂ, ಬ್ರಾಹ್ಮಣ್ಯ,
-
ಭಾ. ಭಾ. ೧ರಲ್ಲಿ ಹೇಳಿರುವ ಲೋಕವ್ಯವಹಾರವು ಈ ಪ್ರಮಾಣಪ್ರಮೇಯ ವ್ಯವಹಾರವೇ ಆಗಿರುತ್ತದೆ. ಲೋಕವ್ಯವಹಾರವೆಂದರೆ ಮನುಷ್ಯನೆಂಬ ಅಭಿಮಾನವೆಂದು ವ್ಯಾಖ್ಯಾನಕಾರರು ಮಾಡಿರುವ ಅರ್ಥಕ್ಕೆ ಭಾಷ್ಯದಲ್ಲಿ ಆಧಾರವಿಲ್ಲ.
-
ವ್ಯವಹಾರದ ಕಾಲಕ್ಕೆ ಪಶುಗಳಂತೆಯೇ ಬೇಕಾದದ್ದರ ಕಡೆಗೆ ಮುನ್ನಡೆಯುವದು, ಬೇಡದ್ದನ್ನು ಬಿಟ್ಟು ಹಿಂಜರಿಯುವದು - ಇವನ್ನೇ ಅವರೂ ಅನುಸರಿಸುತ್ತಾರೆ. ಆಮೇಲೆ ನಾವು ಭ್ರಾಂತರಾಗಿದ್ದವು’ ಎಂದು ತಿಳಿಯುತ್ತಾರಾದರೂ ವ್ಯವಹಾರವು ಆವಿದ್ಯಕವೆಂಬುದಕ್ಕೆ ಅದು ಸಾಧಕವಾಗಿಯೇ ಇರುತ್ತದ.
-
ಉಪನಿಷತ್ತುಗಳಿಂದ ಮಾತ್ರವೇ ತಿಳಿದುಬರುವದಾಗಿಯೂ. ಬ್ರ. ೩-೯-೨೬,
-
ಹಸಿವು, ಬಾಯಾರಿಕೆ, ಮುಪ್ಪು, ಸಾವು, ಶೋಕ, ಮೋಹ - ಇವುಗಳ ಸಂಬಂಧ ವಿಲ್ಲದ್ದಾಗಿಯೂ. ಬೃ. ೩-೫-೧.
10
ಭಾಷ್ಯಕಾರರ ಅವತರಣಿಕೆ
ಕ್ಷತ್ರಿಯತ್ವ - ಮುಂತಾದ ಭೇದಗಳು’ ಇಲ್ಲದ್ದಾಗಿಯೂ ಸಂಸಾರಿಯಲ್ಲದ್ದಾಗಿಯೂ
ಇರುವ ಆತ್ಮತತ್ತ್ವವನ್ನು (ಅರಿತಿರುವದು ಆ ಕರ್ಮವ್ಯವಹಾರದ) ಅಧಿಕಾರಕ್ಕೆ ಬೇಕಾಗಿರುವದಿಲ್ಲ. ಏಕೆಂದರೆ (ಆ ಜ್ಞಾನದಿಂದ ಕರ್ಮಿಗೆ) ಉಪಯೋಗವೂ ಇರುವದಿಲ್ಲ, (ಕರ್ಮದಲ್ಲಿ ಅಧಿಕಾರಕ್ಕೆ (ಅದು) ವಿರುದ್ಧವೂ ಆಗಿರುತ್ತದೆ. ಅಂಥ ಆತ್ಮವಿಜ್ಞಾನವು (ಉಂಟಾಗುವದಕ್ಕೆ) ಮೊದಲೇ ಹೊರಟಿರುವ ಶಾಸ್ತ್ರವು ಅಜ್ಞಾನಿಯ ವಿಷಯವಾಗದ ಹೋಗಲಾರದು. ಆದ್ದರಿಂದಲೇ “ಬ್ರಾಹ್ಮಣನು ಯಾಗಮಾಡ ಬೇಕು” (?) ಎಂಬುದೇ ಮುಂತಾದ ಶಾಸ್ತ್ರಗಳು ಆತ್ಮನಲ್ಲಿ ಆಯಾ ವರ್ಣ, ಆಶ್ರಮ, ವಯಸ್ಸು, ಅವಸ್ಥ - ಮುಂತಾದವುಗಳ ಅಧ್ಯಾಸವನ್ನು ಆಶ್ರಯಿಸಿಕೊಂಡು ಹೊರಟಿರುತ್ತವೆ.
ಅಧ್ಯಾಸದ ಪ್ರಕಾರಗಳು
(ಭಾಷ್ಯ) ೮. ಅಧ್ಯಾಸೋ ನಾಮ ಅತಸ್ಮಿನ್ ತದ್ಭುದ್ಧಿಃ ಇತಿ ಅಮೋಚಾಮ | ತದ್ ಯಥಾ
• ಪುತ್ರಭಾರ್ಯಾದಿಷು ವಿಕಲೇಷು ಸಕಲೇಷು ವಾ ಅಹಮೇವ ವಿಕಲಃ ಸಕಲೊ ವಾ ಇತಿ ಬಾಹ್ಯಧರ್ಮಾನ್ ಆತ್ಮನಿ ಅಧ್ಯಸ್ಮತಿ | ತಥಾ ದೇಹಧರ್ಮಾನ್ - ‘ಸ್ಫೂಲೋಹಮ್’, “ಕೃಶೋsಹಮ್’, ಗೌರೋಹಮ್’, ‘ತಿಷ್ಠಾಮಿ’, ‘ಗಚ್ಛಾಮಿ’, ‘ಲಜ್ಞಯಾಮಿ ಚ’ ಇತಿ | ತಥಾ ಇನ್ಸಿಯಧರ್ಮಾನ್ - ‘ಮೂಕಃ’, ‘ಕಾಣಃ’, ಕೀಬಃ’, ‘ಬಧಿರಃ’, “ಅನ್ನೊಹಮ್’ ಇತಿ | ತಥಾ ಅನ್ತಃಕರಣಧರ್ಮಾನ್ ಕಾಮಸಲ್ಪವಿಚಿಕಿತ್ಸಾ
-
ಬ್ರಹ್ಮ, ಕತ್ರ, ಲೋಕ, ದೇವತೆಗಳು, ಭೂತಗಳು, ಮುಂತಾದವು. ಬ್ರ. ೨-೪-೬.
-
ನಾನು ಅಕರ್ತ, ಬ್ರಹ್ಮಕ್ಷತ್ರಾದಿಭೇದಗಳಿಲ್ಲದವನು, ಹಸಿವು ಮುಂತಾದ ಸಂಸಾರ ಧರ್ಮಗಳಿಲ್ಲದವನು ಎಂಬ ತಿಳಿವಳಿಕೆಯು ಯಾವ ಕರ್ಮಕ್ಕೂ ಬೇಕಾಗುವದಿಲ್ಲ ; ಎಲ್ಲಾ ಕರ್ಮಕ್ಕೂ ಕರ್ತತ್ಯಾದಿಗಳು ಬೇಕಾಗಿರುವದರಿಂದ ಇದು ಕರ್ಮದ ಅಧಿಕಾರಕ್ಕೆ ವಿರುದ್ಧವಾದದ್ದೂ ಆಗಿರುತ್ತದೆ.
-
ಆದ್ದರಿಂದ ಕರ್ಮಕಾಂಡದ ಜ್ಞಾನವನ್ನು ಬಯಸುವ ಶಾಸ್ತ್ರೀಯವ್ಯವಹಾರವೂ ಅವಿದ್ಯಾವಂತರಿಗೇ ಹೇಳಿದ್ದು. ಮೋಕ್ಷಕ್ಕೆ ಸಾಧನವನ್ನು ಹೇಳುವ ಜ್ಞಾನವಾಕ್ಯಗಳೂ ಪ್ರಮಾತೃ ಪ್ರಮಾಣಪ್ರಮೇಯವೆಂಬ ವಿಭಾಗವನ್ನು ಇಟ್ಟುಕೊಂಡೇ ಹೊರಡುವದರಿಂದ ಅವಿದ್ಯಾವಂತರಿಗೇ ಸರಿ. ಆದರೆ ಅವುಗಳ ಅರ್ಥವನ್ನು ತಿಳಿದುಕೊಂಡವರಿಗೆ ಪ್ರಮಾತೃತ್ವವೇ ಮಿಥಯಂದು ತಿಳಿದು ಬಿಡುವದರಿಂದ ಆ ಜ್ಞಾನವಾದ ಬಳಿಕ ಮತ್ತೆ ಪ್ರಮಾತೃತ್ವವಾಗಲಿ ಕರ್ತತ್ವವಾಗಲಿ ಇರುವದಿಲ್ಲ. ಆದ್ದರಿಂದ ಆ ಬಳಿಕ ಅರಿತುಕೊಳ್ಳತಕ್ಕದ್ದಾಗಲಿ ಮಾಡತಕ್ಕದ್ದಾಗಲಿ ಉಳಿದಿರುವದಿಲ್ಲ. ಗೀ, ಭಾ. ೨-೨೧, ಭಾ. ಭಾ. ೩೯ನ್ನು ನೋಡಿರಿ.
ಅವಿದ್ಯಾನಾಶಕ್ಕಾಗಿ ವೇದಾಂತಪ್ರವೃತ್ತಿ ಧ್ಯವಸಾಯಾದೀನ್ | ಏವಮ್ ಅಹಂಪ್ರತ್ಯಯಿನಮ್ ಅಶೇಷಸ್ವಪ್ರಚಾರಸಾಕ್ಷಿಣಿ ಪ್ರತ್ಯಗಾತ್ಮನಿ ಅಧ್ಯಸ್ಯ ತಂ ಚ ಪ್ರತ್ಯಗಾತ್ಮಾನಂ ಸರ್ವಸಾಕ್ಷಿಣಂ ತದ್ವಿಪರ್ಯಯೇಣ ಅನ್ತಃಕರಣಾದಿಷು ಅಧ್ಯಸ್ಯತಿ ||
(ಭಾಷ್ಯಾರ್ಥ) “ಅಧ್ಯಾಸ’ ಎಂದರೆ ಅದಲ್ಲದ್ದರಲ್ಲಿ ಅದು ಎಂಬ ತಿಳಿವಳಿಕೆ ಎಂದು (ಹಿಂದಯೇ) ಹೇಳಿರುತ್ತೇವೆ. ಅದು ಹೇಗೆಂದರೆ : ಹೆಂಡತಿ, ಮಕ್ಕಳು, ಮುಂತಾದವರು ಬಡವಾದರೆ ಅಥವಾ ಮೈಗೂಡಿಕೊಂಡರೆ ‘ನಾನೇ ಬಡವಾದೆನು’, ‘ಮೈಗೂಡಿಕೊಂಡನು’ ಎಂದು ಹೊರಗಿನ (ವಸ್ತುಗಳ) ಧರ್ಮಗಳನ್ನು ತನ್ನಲ್ಲಿ ಅಧ್ಯಾಸಮಾಡಿಕೊಳ್ಳುತ್ತಾನೆ ; ಹಾಗೆಯೇ “ನಾನು ದಪ್ಪವಾಗಿರುವೆನು’, ‘ನಾನು ಬಡಕಲಾಗಿರುವನು’, ‘ನಾನು ಬೆಳ್ಳಗಿರುವನು’, ನಿಂತಿದೇನೆ’, ‘ನಡೆಯುತ್ತಿದೇನೆ’, ‘ನೆಗೆಯುತ್ತಿದೇನೆ’ ಎಂದು ದೇಹದ ಧರ್ಮಗಳನ್ನು (ಅಧ್ಯಾಸಮಾಡಿಕೊಂಡಿರುತ್ತಾನೆ). ಇದರಂತೆ (ನಾನು) ‘ಮೂಕನು’, ‘ಒಕ್ಕಣ್ಣನು’, “ನಪುಂಸಕನು’, ‘ಕಿವುಡನು’, ‘ನಾನು ಕುರುಡನು’, ಎಂದು ಇಂದ್ರಿಯಗಳ ಧರ್ಮಗಳನ್ನು (ಅಧ್ಯಾಸಮಾಡಿಕೊಳ್ಳುತ್ತಾನೆ) ; ಇದರಂತ ಬಯಸುವದು, ಸಂಕಲ್ಪಿಸುವದು, ಸಂಶಯಪಡುವದು, ನಿಶ್ಚಯಿಸುವದು - ಮುಂತಾದ ಅಂತಃಕರಣದ ಧರ್ಮಗಳನ್ನು (ಅಧ್ಯಾಸಮಾಡಿಕೊಳ್ಳುತ್ತಾನೆ). ಹೀಗೆ ಅಹಂಪ್ರತ್ಯಯಿ(ಯಾದ ಅಂತಃ ಕರಣ)ವನ್ನು ತನ್ನ ಹರಿದಾಟಗಳಿಗೆಲ್ಲ ಸಾಕ್ಷಿಯಾಗಿರುವ ಒಳಗಿನ ಆತ್ಮನಲ್ಲಿ ಅಧ್ಯಾಸ ಮಾಡಿ ಇದಕ್ಕೆ ವಿಪರೀತವಾಗಿ ಆ ಸರ್ವಸಾಕ್ಷಿಯಾದ ಪ್ರತ್ಯಗಾತ್ಮನನ್ನೂ ಅಂತಃಕರಣವೇ ಮುಂತಾದವುಗಳಲ್ಲಿ ಅಧ್ಯಾಸಮಾಡುತ್ತಾನೆ.
ಅವಿದ್ಯಾನಾಶಕ್ಕಾಗಿ ವೇದಾಂತಪ್ರವೃತ್ತಿ
(ಭಾಷ್ಯ) ೯. ಏವಮ್ ಅಯಮ್ ಅನಾದಿರನನ್ನಃ ನೈಸರ್ಗಿಕೋಧ್ಯಾಸಃ ಮಿಥ್ಯಾಪ್ರತ್ಯಯ
- ಹಿಂದೆ (ಭಾ. ಭಾ. ೨ರಲ್ಲಿ) ಹೇಳಿರುವ ‘ಸ್ಕೃತಿರೂಪಃ ಪರತ್ರಪೂರ್ವದೃಷ್ಟಾವಭಾಸಃ’ “ಅನ್ಯಸ್ಯ ಅನ್ಯಧರ್ಮಾವಭಾಸತಾ’ ಎಂಬ ವಾಕ್ಯಗಳ ಅರ್ಥವು ಇದೇ ಎಂದು ಭಾವ. ಭಾಷ್ಯಕ್ಕೆ ಜ್ಞಾನಾಧ್ಯಾಸದಲ್ಲಿಯೇ ತಾತ್ಪರ್ಯವೆಂಬುದಕ್ಕೆ ಇದು ನಿಸ್ಸಂದಿಗ್ಧವಾದ ಗಮಕವಾಗಿರುತ್ತದೆ.
2 ನಾನೆಂಬ ಪ್ರತ್ಯಯಕ್ಕೆ ಆಶ್ರಯನೂ ವಿಷಯನೂ ಆಗಿರುವ ಜೀವನಿಗೆ ಮುಖ್ಯವಾದ ಉಪಾಧಿ ಅಂತಃಕರಣವು ; ಆದ್ದರಿಂದ ಇಲ್ಲಿ ‘ಅಹಂಪ್ರತ್ಯಯ’ ಎಂಬ ಮಾತಿಗೆ ಅಂತಃಕರಣವೆಂದು
ಅರ್ಥವನ್ನು ಮಾಡಿದ.
3 ವೃತ್ತಿಗಳಿಗಲ್ಲ. ಪ್ರಚಾರವೆಂಬ ಮಾತಿಗೆ ಭಾಷ್ಯದಲ್ಲಿ ವೃತ್ತಿ ಎಂದರ್ಥ. ಗೀ, ಭಾ. ಭಾ. ೪೦೬,೪೦೮.12
ಭಾಷ್ಯಕಾರರ ಅವತರಣಿಕ
ರೂಪಃ ಕರ್ತತ್ವಭೋಕೃತ್ಯಪ್ರವರ್ತಕಃ ಸರ್ವಲೋಕಪ್ರತ್ಯಕ್ಷ | ಅಸ್ಯ ಅನರ್ಥಹೇತೋಃ ಪ್ರಹಾಣಾಯ ಆತ್ಮಕತ್ವವಿದ್ಯಾಪ್ರತಿಪತ್ತಯೇ ಸರ್ವೆ ವೇದಾನ್ತಾ ಆರಭ್ಯನೇ 1 ಯಥಾ ಚ ಅಯಮರ್ಥ: ಸರ್ವಷಾಂ ವೇದಾಸ್ತಾನಾಮ್, ತಥಾ ವಯಮ್ ಅಸ್ಕಾಂ ಶಾರೀರಕಮಿಾಮಾಂಸಾಯಾಂ ಪ್ರದರ್ಶಯಿಷ್ಯಾಮಃ ||
(ಭಾಷ್ಯಾರ್ಥ) | ಹೀಗೆ ಮೊದಲಿಲ್ಲದೆ ಕೊನೆಯಿಲ್ಲದೆ ಸ್ವಾಭಾವಿಕವಾಗಿರುವ ತಪ್ಪುತಿಳಿವಿನ ರೂಪವಾಗಿರುವ ಈ ಅಧ್ಯಾಸವು ಕರ್ತತ್ವಭೋಕ್ತತ್ವಗಳನ್ನು ಉಂಟುಮಾಡುತ್ತಿರುವದು ಎಲ್ಲಾ ಜನರಿಗೂ ಪ್ರತ್ಯಕ್ಷವಾಗಿರುತ್ತದೆ. ಅನರ್ಥಕ್ಕೆ ಕಾರಣವಾಗಿರುವ ಈ (ಅಧ್ಯಾಸ ವನ್ನು ನಾಶಗೊಳಿಸುವದಕ್ಕೆ ಆತ್ಮಕತ್ವವಿದ್ಯಯು (ಜನರಿಗೆ) ದೊರಕಲೆಂದು ವೇದಾಂತಗಳಲ್ಲಿ ಹೊರಟಿರುತ್ತವೆ. ಸರ್ವವೇದಾಂತಗಳಿಗೂ ಇದೇ ಅರ್ಥವೆಂಬುದು ಹೇಗೆಂಬುದನ್ನು ನಾವು ಈ ಶಾರೀರಕಮಿಾಮಾಂಸೆಯಲ್ಲಿ ತೋರಿಸಿಕೊಡುವವು.
-
ಈ ಅಧ್ಯಾಸಕ್ಕೆ ಕಾಲದೃಷ್ಟಿಯಿಂದ ಮೊದಲಾಗಲಿ ಕೊನೆಯಾಗಲಿ ಇರುವದಿಲ್ಲ. ಏಕೆಂದರೆ ನಾನು ಯಾವಾಗಲೂ ಪ್ರಮಾತೃವು ಎಂದೇ ನಮಗೆ ತೋರುತ್ತಿರುತ್ತದೆ. ಜ್ಞಾನದಿಂದ ಆಗುವ ಬಾಧಯ ರೂಪವಾದ ಅಂತವು ಅಧ್ಯಾಸಕ್ಕೆ ಇದ್ದೇ ಇದೆ.
-
ಅವಿದ್ಯಾ, ಮಿಥ್ಯಾಜ್ಞಾನ, ಮಿಥ್ಯಾಪ್ರತ್ಯಯ - ಇವೆಲ್ಲ ಆತ್ಮನ ವಿಷಯದ ತಪ್ಪು ತಿಳಿವಳಿಕೆಯಂಬರ್ಥದ ಶಬ್ದಗಳು.
-
ಅನುಭವದಲ್ಲಿರುತ್ತದೆ.
-
‘ಆತ್ಮನೂಬ್ಬನೇ ಪರಮಾರ್ಥವು, ಇದೆಲ್ಲವೂ ನಾನೂ ಪರಮಾತ್ಮನೇ’ ಎಂಬ ತಿಳಿವಳಿಕ.
-
ಉಪನಿಷತ್ತುಗಳು ಆತ್ಮಕತ್ವವಿದ್ಯಯನ್ನೇ ಮುಖ್ಯವಾಗಿ ಹೇಳುತ್ತವೆ, ಉಪಾಸನಾದಿ ಗಳನ್ನು ಪರಮತಾತ್ಪರ್ಯದಿಂದ ಹೇಳುವದಿಲ್ಲ - ಎಂದು ಭಾವ. ಉಪನಿಷತ್ತಿನಲ್ಲಿ ಉಪಾಸನೆಯ ಮುಂತಾದ ರೂಪದ ಬ್ರಹ್ಮವಿದ್ಯೆಯನ್ನು ವಿಧಿಸಿದ, ಆ ವಿದ್ಯಯೇ ಮುಕ್ತಿಗೆ ಸಾಧನ ಎಂದು ಹೇಳುವ ವಾದಗಳನ್ನು ಭಾಷ್ಯಕಾರರು ಇಲ್ಲಿ ಮುಂದ ಖಂಡಿಸಿರುತ್ತಾರೆ. ಪೀಠಿಕೆಯನ್ನು ನೋಡಿ,
-
ಈ ಶಾಸ್ತ್ರಕ್ಕೆ ‘ಶಾರೀರಕಮೀಮಾಂಸಾ” (ಶಾರೀರಾತ್ಮನಾದ ಜೀವನ ತತ್ತ್ವವನ್ನು ವಿಚಾರಮಾಡುವ ಶಾಸ್ತ್ರ) ಎಂದು ಹೆಸರು. ಮುಂದಿನ ಪ್ರಘಟ್ಟದಲ್ಲಿ ಇದನ್ನು ‘ವೇದಾಂತ ಮೀಮಾಂಸಾಶಾಸ್ತ್ರ’ ಎಂದು ಕರೆದಿದ, ಉಪನಿಷದ್ವಾಕ್ಯಗಳನ್ನು ವಿಚಾರಮಾಡಿ ಅರ್ಥವನ್ನು ನಿರ್ಣಯಿಸುವ ಶಾಸ್ತ್ರ ಎಂದು ಆ ಮಾತಿನ ಅರ್ಥ. ವೇದಾಂತಗಳಿಗೆ ಎಂದರೆ ಉಪನಿಷತ್ತುಗಳಿಗೆ ಆತ್ಮಕತ್ವವೇ ತಾತ್ಪರ್ಯವೆಂಬುದನ್ನು ಈ ಸೂತ್ರರೂಪವಾದ ಗ್ರಂಥದಲ್ಲಿ ನಿರ್ಣಯಿಸಿರುತ್ತದೆ. ಇದರ ಭಾಷ್ಯದಲ್ಲಿ ನಾವು ಇದನ್ನು ಸ್ಪಷ್ಟಪಡಿಸುವವು - ಎಂದು ಭಾವ.