ಪ್ರಶ್ನೆ. ಒಬ್ಬ ಸದ್ಗುರುವಿನ ಅನುಗ್ರಹವಿಲ್ಲದೆ ‘ಆತ್ಮ’
ಎಂಬಲ್ಲಿಗೆ, ತಲುಪಲು ಸಾಧ್ಯವಿಲ್ಲ ಎಂದು ನೀವು ಹೇಳಿದ್ದೀರಿ. ಯಾರು ಈ ಸದ್ಗುರು?
ಮಹರ್ಷಿ. ವಿಚಾರ ಮಾರ್ಗದ ಪಥವನ್ನು ಪರಿಗಣಿಸಿದಾಗ, ಭವ್ಯವಾದ ‘ಆತ್ಮನ’ ನೆಲೆಯೇ ಸದ್ಗುರುವಾಗುತ್ತದೆ. ಅದು, ನಿನ್ನ ಅಹಂಕಾರದಿಂದ ಏಳುವ ‘ನಾನು ‘ನಾನು’ ಅಲ್ಲ. ನೀನು ಯಾವುದನ್ನು ‘ಆತ್ಮ’ ಎಂದು ತಿಳಿದಿದ್ದೀಯೊ,. ಅದು ನಿನ್ನ ಅಹಂಕಾರದಿಂದ ಎದ್ದ “ನಾನು” ಅಲ್ಲ.
ಪ್ರಶ್ನೆ. ಅದೇ ನನ್ನ ಭವ್ಯವಾದ ಸ್ಥಿತಿ ಎಂದು ಹೇಳುವುದಾದರೆ, ಅದನ್ನು ಸದ್ಗುರುವಿನ ಅನುಗ್ರಹದಿಂದ ಪಡೆಯುವುದು ಹೇಗೆ?
ಮಹರ್ಷಿ. ಅಹಂಕಾರದ ‘ನಾನು’ ಎನ್ನುವುದು ಜೀವ. ಅದು ಸರ್ವೇಶ್ವರನಿಂದ ಬೇರೆ. ಯಾವಾಗ, ಜೀವವು, ಶ್ರದ್ಧೆ ಮತ್ತು ಆಸಕ್ತಿ ಇಲ್ಲದ ನೆಲೆಯಲ್ಲಿ ಪರಮೇಶ್ವರನನ್ನು ಸಮೀಪಿಸುತ್ತದೆಯೋ, ಆಗ ನಾಮ ರೂಪಗಳಿಂದ ಕೂಡಿದವರಾಗಿ ಪರಮೇಶ್ವರನೇ ‘ಜೀವ’ ಆಗಿ ಬಿಡುತ್ತಾನೆ. ಆದ್ದರಿಂದಲೇ ಸ್ವಾಮಿಯೇ ಗುರು ಅಲ್ಲದೆ ಬೇರೆ ಯಾರೂ ಅಲ್ಲ. ಅವನೇ,ಸಾಕಾರ ರೂಪದ ದೈವ-ಅನುಗ್ರಹೀತ. (ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ । (ಗೀತಾ 7-18)
ಉದಾರಾ ಸರ್ವೆ ಎವ ಏತೇ, ಜ್ಞಾನಿ ತು ಆತ್ಮಾ ಇವ ಮೇ ಮತಮ್.
ಭಕ್ತಿ ಮಾರ್ಗದಲ್ಲಿ ನಡೆಯುವವರು ಎಲ್ಲರೂ ದೊಡ್ಡವರೇ. ಆದರೆ ಜ್ಞಾನಿ ಮಾತ್ರ ನನಗೆ ತುಂಬಾ ಹತ್ತಿರದಲ್ಲಿ ಇರುವವ, ಏಕೆಂದರೆ ಜ್ಞಾನವಿಲ್ಲದ ಭಕ್ತಿ ಪೂರ್ಣ ಆಗುವುದಿಲ್ಲ. . ಆರ್ತ, ಜಿಜ್ಞಾಸು, ಅರ್ಥಾರ್ಥಿ, ಮತ್ತು ಜ್ಞಾನಿ ಇವರೆಲ್ಲರೂ ಉತ್ತಮರೇ. ಇವರಲ್ಲಿ, ಜ್ಞಾನಿಯು, “ಆತ್ಮನೇ"ಎಂದು ನಾನು ಭಾವಿಸುವೆನು ಎಂದು ಭಗವದ್ ಗೀತೆ ಹೇಳುತ್ತದೆ. ಆ ಪರಮೇಶ್ವರನೇ ನಿಜವಾದ ಗುರು. ಇದನ್ನು ಯಾರು ಶಂಕಿಸ ಬಲ್ಲರು?
ಪ್ರಶ್ನೆ. ಆದರೆ ಕೆಲವರಿಗೆ ದೇಹ ಧಾರಿಯಾದ ಗುರುಗಳೇ ಇರುವಿದಿಲ್ಲವಲ್ಲಾ?
ಮಹರ್ಷಿ. ನಿಜ. ಕೆಲವು ಪುಣ್ಯಾತ್ಮರಿಗೆ, ಪರಮೇಶ್ವರನು ಜ್ಯೋತಿಯಾಗಿ ಅವರ ಅಂತರಂಗದ ಜ್ಯೋತಿಯಲ್ಲಿ “ಜ್ಯೋತಿಯಾಗಿ” ತೋರಿ ಕೊಳ್ಳುತ್ತಾನೆ..
ಪ್ರಶ್ನೆ. ಹಾಗಾದರೆ ನಿಜವಾದ ಭಕ್ತಿ ಯಾವುದು?
ಮಹರ್ಷಿ. ಏನೆಲ್ಲವನ್ನು ನಾನು ಮಾಡಿದೆ ಎಂದು ಗಣನೆಗೆ ತಂದುಕೊಳ್ಳುತ್ತೇವೆಯೊ, ಅವೆಲ್ಲವೂ ಅವನಿಂದ ಆದದ್ದೇ ಅಲ್ಲವೇ. ಯಾವುದೂ ನನ್ನದು ಅಲ್ಲ. ಈ ರೀತಿಯಾದ ಒಂದು ಭಾವನೆಯಿಂದ ಇರುವುದೇ, ಅತ್ಯಂತ ಗಹನವಾದ ಭಕ್ತಿ. ಏಕೆಂದರೆ ಪರಮಾತ್ಮನು ಸರ್ವಾಂತರ್ಯಾಮಿ. ನಾಮ ರೂಪಗಳಿಂದ ಅವನನ್ನು ಅರ್ಚಿಸುವುದರಿಂದ, ಅವುಗಳನ್ನು ದಾಟುವ ಸ್ಥಿತಿಗೆ ಮನಸ್ಸನ್ನು ಕೊಂಡೊಯ್ಯುತ್ತದೆ. ಭಕ್ತಿಯೇ ಕಡೆಯಲ್ಲಿ ಜ್ಞಾನದಲ್ಲಿ ಅಂತ್ಯಗೊಳ್ಳುತ್ತದೆ. ಪ್ರಾಪಂಚಿಕ ವಸ್ತುಗಳನ್ನು ಹೊಂದಲು ಮಾಡಿದ ಭಕ್ತಿಯಾದರೋ, ಆ ಆಸೆಗಳು ನೆರವೇರಿದಾಗಲೂ ಅಂತ್ಯ ಗೊಳ್ಳುವುದಿಲ್ಲ. ಪರಮಾತ್ಮನಲ್ಲಿ ದೃಢವಾದ ನಂಬಿಕೆಯು ಬಲವತ್ತರವಾಗಿ, ಕಡೆಯಲ್ಲಿ ಆ ಒಂದು ಭವ್ಯವಾದ ಜ್ಞಾನದಲ್ಲಿ ಸಮಾಪ್ತಗೊಳ್ಳುತ್ತದೆ.
ಪ್ರಶ್ನೆ. ಹಾಗಾದರೆ, ಜ್ಞಾನ ಮಾರ್ಗ ಎಂದರೇನು?
ಮಹರ್ಷಿ. ಅಹಂಕಾರವನ್ನು ತೊರೆದ ಸ್ಥಿತಿಯಿಂದ ಯಾರು ತನ್ನನ್ನು ಗುರುತಿಸಿಕೊಳ್ಳುತ್ತಾನೆಯೋ ಮತ್ತು ತನ್ನನ್ನು ಸ್ಥಾಪಿಸಿಕೊಳ್ಳು ತ್ತಾನೆಯೋ, ಅದೇ ಸ್ವಸ್ವರೂಪ ಸ್ಥಿತಿ.
ಪ್ರಶ್ನೆ. ಭಕ್ತಿ ಮತ್ತು ಜ್ಞಾನಗಳು ಎರಡು ಒಂದೇ ಗುರಿಯನ್ನು ಮುಟ್ಟುತ್ತದೆ ಎಂದು ಹೇಗೆ ಹೇಳುವಿರಿ?
ಮಹರ್ಷಿ. ಯಾಕೆ ಆಗಲಾರದು? ಎರಡು ಮಾರ್ಗಗಳು, ಆ ಶಾಂತತೆಯತ್ತ ಮತ್ತು ಮೌನದತ್ತ ಸಾಗುತ್ತದೆ. ಎಲ್ಲ ರೀತಿಯ ತಿಳುವಳಿಕೆಗಳನ್ನು ದಾಟಿ, ಶಾಂತತೆ ಮತ್ತು ಮೌನದ ಸ್ಥಿತಿಗೆ ಕೊಂಡೊಯ್ಯುವುದಿಲ್ಲ ವೇ?