೦೧ ಪ್ರಾರಂಭದ ಶಂಕೆಗಳು

ಪ್ರಶ್ನೆ. ಆತ್ಮನನ್ನು ಹುಡುಕಬೇಕು ಎಂದಾಗ, ಅದನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎನ್ನುತ್ತೀರಿ. ಈ ಹುಡುಕುವಿಕೆಯ ಸ್ವರೂಪವೇನು,?

ಮಹರ್ಷಿಗಳು. ನೀನು “ಮನಸ್ಸು” ಎಂದುಕೊಳ್ಳೋಣ.. ಮನಸ್ಸು,,ಯೋಚನೆಗಳ ಒಂದು ಸಮೂಹವಲ್ಲದೆ ಮತ್ತೆ ಏನೂ ಅಲ್ಲ. ಪ್ರತಿಯೊಂದು ‌ಯೋಚನೆಯ ಹಿಂದೆ ಸಾಧಾರಣವಾದ ಒಂದು “ನಾನು"ಎಂಬ ಆಲೋಚನೆ ಇದೆ. ಇದೇ ನಿನ್ನ “ಸ್ವರೂಪ”.

ಈ “ನಾನು” ಎನ್ನುವುದನ್ನು ಮೊದಲನೆಯ ಯೋಚನೆ ಅಂದುಕೊಳ್ಳೋಣ. ಆದರೆ ಅದು ಎಲ್ಲಿಂದ ಬಂತು? ಇದು ಏನು ಎಂಬುದನ್ನು ಪ್ರಶ್ನೆ ಹಾಕಿಕೊಂಡಾಗ, ಆ ಪ್ರಶ್ನೆಯೇ ನಿನ್ನಲ್ಲಿ ಬೇರೂರಿದ್ದರೆ, ಬೇರೆ ಯೋಚನೆಗಳೇ ಏಳುವುದಿಲ್ಲ ಅಲ್ಲವೇ?

ಪ್ರಶ್ನೆ. ಈ ‘ನಾನು’ ಎಂಬ ಯೋಚನೆಯಲ್ಲಿ ಇದ್ದಾಗ, ಬೇರೆ ಯೋಚನೆಗಳು ಬಂದು ಹೋಗುತ್ತಿರುತ್ತದೆ ಅಷ್ಟೇ. ಆದರೆ ‘ನಾನು ಯಾರು’ ಎಂದು ಮನದಲ್ಲಿ ಹೇಳುತ್ತಾ ಇದ್ದರೆ ಅದಕ್ಕೆ ಉತ್ತರವೇ ಸಿಗುವುದಿಲ್ಲವಲ್ಲ? ಈ ಆತ್ಮನಿಷ್ಟೆ ಅಥವಾ ಈ ರೀತಿಯಾದ ಒಂದು ನೆಲೆಯಲ್ಲಿ ಇರುವುದನ್ನು ಸಾಧನೆ ಎನ್ನುತ್ತೀರಾ?

ಮಹರ್ಷಿ. ಎಲ್ಲರೂ ಇದೇ ತಪ್ಪನ್ನು ಪದೇಪದೇ ಮಾಡುತ್ತಿರುತ್ತಾರೆ. ನೀವು ಈ “ನಾನು” ಎಂಬುದನ್ನು ತೀವ್ರವಾಗಿ ಹುಡುಕತೊಡಗಿದಾಗ, ನಾನು ಎಂಬ ಯೋಚನೆಯಿಂದ ಆರಂಭಿಸಿದ, ಮೊದಲ ಯೋಚನೆ, ಕಾಣದೆ ಹೋಗಿ, ಬೇರೆ ಯಾವುದೋ ತಳದಿಂದ ಒಂದು ಯೋಚನೆ ಎದ್ದುಬಂದು ನಿನ್ನನ್ನು ಆವರಿಸಿಕೊಂಡಾಗ, ಅದು, ನಾನು ಎಂಬ ಯೋಚನೆ ಪ್ರಾರಂಭ ಮಾಡಿದ್ದು ಅಲ್ಲ ಎಂದು ಗೊತ್ತಾಗುತ್ತದೆ.

ಪ್ರಶ್ನೆ. ಹಾಗಾದರೆ ಆ ಯಾವುದೋ ಒಂದು ಯೋಚನೆ ಯಾವುದು?

ಮಹರ್ಷಿ. ಅದೇ ನಿಜವಾದ ‘ನಾನು’. ಅದರ ಇರುವಿಕೆಯೇ ನಾನು. ಅದು ಅಹಂಕಾರವಲ್ಲ. ಅದು ಒಂದು ಪರಮಾತ್ಮ ಸ್ವರೂಪ.

ಪ್ರಶ್ನೆ. ಆದರೆ, ಈ ರೀತಿ ಹುಡುಕುವಾಗ, ಬರುವ ಎಲ್ಲ ಯೋಚನೆಗಳನ್ನು, ಬಿಡಬೇಕು ಬಿಡಬೇಕು, ಎನ್ನುತ್ತಿರಲಿಲ್ಲ? ಯೋಚನೆಗಳ ಮಹಾಪೂರವೇ ಇದೆ. ಅಂದರೆ, ಒಂದನ್ನು ತಳ್ಳಿಹಾಕಿದರೆ, ಮತ್ತೊಂದು ಯೋಚನೆ ಏಳುತ್ತದೆ. ಅದಕ್ಕೆ ಕೊನೆಯೇ ಇಲ್ಲವಲ್ಲ?

ಮಹರ್ಷಿ. ಯೋಚನೆಗಳನ್ನೆಲ್ಲ ಬಿಡಬೇಕು ಅಥವಾ ತಳ್ಳಿ ಹಾಕಬೇಕು ಎಂದು ನಾನು ಹೇಳಿಲ್ಲವಲ್ಲ. ನೀನು,“ನಾನು’ ಎಂಬ ಯೋಚನೆಯ ಜಾಡನ್ನು ಬಿಡದೆ ಇದ್ದಾಗ, ಮತ್ತು ನಿನ್ನ ಆಸಕ್ತಿ ಎಲ್ಲಾ ಆ ಒಂದೇ ಯೋಚನೆಯಲ್ಲಿಯೇ ಇದ್ದಾಗ, ಬೇರೆ ಯೋಚನೆಗಳು ತಾವಾಗಿಯೇ ಬಿದ್ದುಹೋಗಿ,ಇಲ್ಲದಾಗುತ್ತದೆ.

ಪ್ರಶ್ನೆ. ಹಾಗಾದರೆ ಯೋಚನೆಗಳನ್ನು ತಿರಸ್ಕರಿಸುವುದು ಬೇಕಿಲ್ಲವೇ?

ಮಹರ್ಷಿ. ಇಲ್ಲ. ಕೆಲವರಿಗೆ ಈ ರೀತಿ ತಿರಸ್ಕರಿಸುವುದಕ್ಕೆ ಸ್ವಲ್ಪಕಾಲ ಬೇಕಾಗುವುದು. ಯೋಚನೆಗಳನ್ನು ಒಂದಾದಮೇಲೊಂದು ನಿರ್ಲಕ್ಷ ಮಾಡಬೇಕು ಎಂಬುದು ನಿನ್ನ ಬರಿಯ ಭ್ರಾಂತಿ ಅಷ್ಟೇ. ಅದಕ್ಕೆ ಕೊನೆಯೇ ಇಲ್ಲ. ಆದರೆ ಈ ರೀತಿಯಾದ ಒಂದೊಂದು ಯೋಚನೆಯನ್ನು ಅಲ್ಲಗಳೆಯುತ್ತಾ, ಸ್ಥಿರವಾಗಿ ಇದ್ದಾಗ, ನಿನ್ನ ಅಂತಃಕರಣಕ್ಕೆ ಹೆಚ್ಚು ಹೆಚ್ಚು ಆಳವಾಗಿ ಇಳಿಯುತ್ತಾ ಇದ್ದೀಯೆ. ನೀನು ಯೋಚನೆಗಳನ್ನು ಬಿಡಬೇಕಾದ ಅಗತ್ಯವೇ ಬರುವುದಿಲ್ಲ.

ಪ್ರಶ್ನೆ. ಹಾಗಾದರೆ ಪ್ರಯತ್ನ ಮಾಡಬೇಕಾದ ದಣಿವು ಅಥವಾ ಬಿಗಿಯಾದ ನೆಲೆ ಇರುವುದು ಬೇಕಾಗಿಲ್ಲವೇ?

ಮಹರ್ಷಿ. ಅದೂ ಅಲ್ಲ. ಒಂದು ಸ್ಥಿತಿಯನ್ನು ಮೀರಿ ನೀನು ಪ್ರಯತ್ನ ಮಾಡಲು ಆಗುವುದೇ ಇಲ್ಲ.

ಪ್ರಶ್ನೆ. ನಾನು ಅದರಿಂದ ಮುಂದಕ್ಕೆ ಹೋಗಿ ಪ್ರಬುದ್ಧನಾದರೂ, ಪರಿಶ್ರಮವನ್ನು ಮಾಡಬೇಕು ಅಲ್ಲವೇ?

ಮಹರ್ಷಿ. ಅದು ಸರಿ. ಪರಿಶ್ರಮವಿಲ್ಲದೆ ಇರಲು ಸಾಧ್ಯವೇ ಇಲ್ಲ. ಯಾವಾಗ ನೀನು, ಅಂತರಾಳದಲ್ಲಿ ಪ್ರಯಾಣ ಮಾಡುತ್ತೀಯೋ, ಆಗ, ನಿನಗೆ ಯಾವ ಪರಿಶ್ರಮವೂ ಮಾಡಲು ಆಗುವುದೇ ಇಲ್ಲ.

ಪ್ರಶ್ನೆ. ಹಾಗಾದರೆ ನಾನು, ಬಾಹ್ಯದಿಂದ ಯಾವ ಸಹಾಯವೂ ಇಲ್ಲದೆ, ನನ್ನ ಸ್ವಂತ ಪರಿಶ್ರಮದಿಂದ, ಈ ಗಹನವಾದ ಸತ್ಯವನ್ನು ಸ್ವತಹ ಮಾಡಬಲ್ಲವನು ಆಗುತ್ತೇನೆಯೆ?

ಮಹರ್ಷಿ. ನಿಜ. ನೀನು ಈ ‘ಆತ್ಮನ’ ಬಗೆಗೆ ಮಾಡುತ್ತಿರುವ ಶೋಧನೆಯೇ ಒಂದು ರೀತಿಯಾದ ದೈವಿಕ ಅನುಭವ ಅಲ್ಲವೇ. ನಿನ್ನ ಹೃದಯದಲ್ಲಿ ಬೆಳಗುತ್ತಿರುವ ಆ ಉಜ್ವಲವಾದ ಆ ಪ್ರಭೆ, (ನಿನ್ನ ಅಂತರಾತ್ಮ), ನಿನ್ನನ್ನು ಒಳಗಡೆಯಿಂದ ಸೇಳೆಯುತ್ತಿರುತ್ತದೆ. ಅದರ ಸಹಾಯವಿಲ್ಲದೆ, ಅದನ್ನು ಪಡೆಯಲು, ನೀನು ಸತತ ಪ್ರಯತ್ನ ಪಡಬೇಕು. ನಿನ್ನ ಪ್ರಯತ್ನಕ್ಕೆ, “ವಿಚಾರ” ಎನ್ನುತ್ತಾರೆ. ಆದರೆ, ನಿನ್ನ ಅಂತರಾಳದಲ್ಲಿ ಇದಕ್ಕಾಗಿ ಅನುಗ್ರಹ ಇರಬೇಕು ಎಂದು ನಾನು ಪದೇಪದೇ ಹೇಳುತ್ತಿರುವುದು. ಅ ರೀತಿಯಾದ ಅನುಗ್ರಹವಿಲ್ಲದಿದ್ದರೆ, ನಿಜವಾದ ವಿಚಾರವೇ ಏಳುವುದಿಲ್ಲ. ಈ ರೀತಿಯಾಗಿ ವಿಚಾರ ಮಾಡದೇ ಇರುವವನಿಗೆ ಅನುಗ್ರಹ ಎನ್ನುವುದೇ ಇರುವುದಿಲ್ಲ. ಆದ್ದರಿಂದ ‘ವಿಚಾರ’ ಮತ್ತು ‘ಅನುಗ್ರಹ’ ಎರಡೂ ಅವಶ್ಯವಾಗಿ ಇರಬೇಕಾದದ್ದು