ಮೂಲ. ರಮಣಾಶ್ರಮ
ಕನ್ನಡಕ್ಕೆ. ರಾಧಾಕಷ್ಣನ್ ಗರಣಿ.
ಖಾಸಗೀ ಉಪಯೋಗಕ್ಕೆ ಸೀಮಿತ
ಮಾರಾಟಕ್ಕೆ ಅಲ್ಲ
ಯಾವ ದೋಷಗಳೂ ಇಲ್ಲದಂತಹ ಸ್ಥಿತಿಯಲ್ಲಿ ಯಾರು ಇರುವನೋ, ಮತ್ತು ಯಾರಲ್ಲಿ, ವ್ಯಕ್ತ-ಅವ್ಯಕ್ತಗಳು ಕೂಡಿದ್ದರೂ ಸ್ವಯಂ ಜ್ಯೋತಿಯಾಗಿ ಇರುವಂತಹ ಶ್ರೀಹರಿಗೆ, ನನ್ನ ನಮನಗಳು.
ಸತ್ ಚಿತ್ ಆನಂದಗಳ ಸ್ವರೂಪನಾದ, ನಾಮರೂಪಗಳು ಇಲ್ಲದಂತಹ, ಶಾಂತನಾದ, ಯಾವ ಆಶ್ರಯದಲ್ಲಿಯೂ ಇಲ್ಲದ,ಗುರುವಾದ ಶಿವನಲ್ಲಿ, ಪ್ರಣಾಮವನ್ನು ಅರ್ಪಿಸುತ್ತೇನ
ತನ್ನ ನಾಮವನ್ನು ಗೋಪ್ಯವಾಗಿ ಇಟ್ಟ, ಒಬ್ಬ ರಮಣ ಮಹರ್ಷಿಗಳ ನಿಕಟವರ್ತಿ ಒಬ್ಬನು, ಸಾವಿರದ ಒಂಬೈನೂರ ಹನ್ನೆರಡರಲ್ಲಿ, ಶ್ರೀರಮಣರ, ವಿಚಾರಧಾರೆಯ ಸಂದೇಹಗಳಿಗೆ, ಉತ್ತರವನ್ನು ಬಯಸಿ ಅವುಗಳನ್ನು ಸಂವಾದದ ರೂಪದಲ್ಲಿ ಪ್ರಕಟಿಸಿ,ನಮ್ಮೆಲ್ಲರಿಗೂ ಒಂದು ಅದ್ಭುತವಾದ ಕೊಡುಗೆಯನ್ನು ನೀಡಿದ್ದಾನೆ. ಈ ಪ್ರಶ್ನೆ ರಮಣ ಮಹರ್ಷಿಗಳು “ನೀನು ಯಾರು”, “ಮೊದಲು, ನಿನ್ನನ್ನು ತಿಳಿದುಕೋ” ಎಂದು ಚಿಂತನೆ ಮಾಡಬೇಕಾದ ಒಂದು ಸಲಹೆಯನ್ನು ಮುಂದಿಟ್ಟು ಕೊಂಡು, ಅದರ ಜಾಡನ್ನು ಹಿಡಿದು, ನಮ್ಮಂತಹ ಎಲ್ಲರ ಸಂದೇಹಗಳನ್ನು ತಾನೇ ಕೇಳಿ, ಅವರಿಂದ ಸೂಕ್ತ ಉತ್ತರವನ್ನು ಪಡೆದಿದ್ದಾನೆ. ಇದು ಬಹಳ ಮಹತ್ತರವಾದ ವಿಷಯ.
ಅವುಗಳನ್ನು, ಅದೇ ಧಾಟಿಯಲ್ಲಿ ಕನ್ನಡ ಭಾಷೆಗೆ ಅಳವಡಿಸಲು ಪ್ರಯತ್ನಿಸಿದ್ದೇನೆ. ಇದರಲ್ಲಿ ಇರಬಹುದಾದ ತಪ್ಪು-ಒಪ್ಪುಗಳಿಗೆ ನಾನೇ ಹೊಣೆ. ಎಲ್ಲಾ ಮುಮುಕ್ಷುಗಳು, ಇದನ್ನು ತಮ್ಮ ಚಿಂತನೆಯಲ್ಲಿ ಇಟ್ಟುಕೊಂಡು, ಈ ಬರಹವನ್ನು ಅವಗಾಹಿಸಬೇಕಾಗಿ ವಿನಂತಿ.