೧೭ ಜ್ಞಾನದ ಸಾಧನೆ

ಪ್ರಶ್ನೆ. ಜ್ಞಾನವು ಕ್ರಮಕ್ರಮವಾಗಿ ಸ್ವಲ್ಪಸ್ವಲ್ಪವಾಗಿ ಬರುವಂತಹ ನೆಲೆಯೋ ಅಥವಾ ಸೂರ್ಯನ ಪ್ರಭೆಯಂತೆ, ಒಂದೇ ಕ್ಷಣದಲ್ಲಿ ದೊರಕುವಂತಹದ್ದೋ?

ಮಹರ್ಷಿಗಳು. ಜ್ಞಾನವು ಎಂದೂ ಮುಕ್ಕು ಮುಕ್ಕಾಗಿ ಬರುವಂತಹದ್ದಲ್ಲ. ಯಾವಾಗ ಅಭ್ಯಾಸವು,ಪರಿಪೂರ್ಣತೆಯನ್ನು ಹೊಂದುವುದೋ, ಆಗ ಅದು ಧಗಧಗಿಸುವ ಜ್ವಾಲೆಯಂತೆ, ಒಮ್ಮೆಲೆ ತೋರಿಕೊಳ್ಳುವುದು.

ಪ್ರಶ್ನೆ. ಧ್ಯಾನದ ಅಭ್ಯಾಸದಲ್ಲಿ ಮನಸ್ಸು ಒಳಗೆ ಹೊರಗೆ ಬಂದು ಹೋಗುತ್ತಿರುತ್ತದೆ. ಒಳಮನಸ್ಕರಾದಾಗ, ಅದನ್ನು ಜ್ಞಾನ ಎನ್ನುತ್ತಾ ರೆಯೇ?

ಮಹರ್ಷಿಗಳು. ಮನಸ್ಸಿನ ಏರಿಳಿತಗಳು ಬರಿಯ ಅಭ್ಯಾಸದ ಒಂದು ಅಂಶವೇ ಹೊರತು ನಿಜವಾದ ಜ್ಞಾನ ಎಂದೂ ಜಾರದೆ. ಇರುವಂತಹದ್ದು.

ಪ್ರಶ್ನೆ. ಋಷಿಮುನಿಗಳು, ಶಾಸ್ತ್ರಗಳಲ್ಲಿ ಹೇಳಿದಂತೆ ಜ್ಞಾನಾರ್ಜನೆಗೆ ಹಲವಾರು ಮೆಟ್ಟಲುಗಳನ್ನು ಸೂಚಿಸಿರುವರಲ್ಲಾ? ಇವುಗಳನ್ನು ಯಾವ ರೀತಿಯಲ್ಲಿ ಸಮನ್ವಯ ಗೊಳಿಸಬೇಕು?

ಮಹರ್ಷಿಗಳು. ಬೇರೆಯವರ ಮನಸ್ಸಿನಲ್ಲಿ, ಶಾಸ್ತ್ರಗಳಿಂದ ತಿಳಿಸಿದ, ಎಲ್ಲ ರೀತಿಯ ಮೆಟ್ಟಿಲುಗಳ ಹಂತಗಳು, ಮುಕ್ತಿಯಲ್ಲಿ ವೈವಿದ್ಯಮಯ ಇರುವಂತೆ ಕಾಣಬಹುದು. ಆದರೆ ತಿಳಿದವರಿಗೆ ಜ್ಞಾನ, ಒಂದೇ. ಎರಡು ಮೂರುಗಳಲ್ಲ..

ಇಂದ್ರಿಯ ಮನಸ್ಸುಗಳ ಪ್ರಾರಬ್ಧದಿಂದ,ಜ್ಞಾನಿಯ ದೇಹದ ಆಚರಣೆಗಳಲ್ಲಿ ಇತರರಿಗೆ, ಹಂತಗಳಂತೆ ಕಂಡರೂ, ಜ್ಞಾನದಲ್ಲಿ ಹಂತಗಳು ಇಲ್ಲವೇ ಇಲ್ಲ.

ಪ್ರಶ್ನೆ. ಎಲ್ಲ ರೀತಿಯ ಅಜ್ಞಾನವನ್ನು ತೊಡೆದುಹಾಕಿದ ಆತ್ಮಜ್ಞಾನದ ಅರಿವು ಆದಮೇಲೆ, ಎಂದಾದರೂ ಅದು ಮತ್ತೆ ಅಜ್ಞಾನದಿಂದ ಹುಟ್ಟಿ, ಮೆರೆಯಲು ಸಾಧ್ಯವೇ?

ಮಹರ್ಷಿಗಳು. ಅಜ್ಞಾನಕ್ಕೆ ವಿರುದ್ಧವಾದ ಜ್ಞಾನವು ಒಂದಾವರ್ತಿ ಆದ ಬಳಿಕ, ಎಂದಿಗೂ ಅದನ್ನು ಮೀರಲು ಸಾಧ್ಯವಾಗಲಾರದು.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಜ್ಞಾನ ಸಾಧನೆ ಎಂಬ ಹದಿನೇಳನೆಯ ಅಧ್ಯಾಯ.