ಮಹರ್ಷಿಗಳು. ಉಪದೇಶಕನಿಂದ, ವೇದಾಂತ ಶಾಸ್ತ್ರಗಳ ಅರ್ಥ ಮತ್ತು ಭಾಷ್ಯದ ವಿಸ್ತಾರವಾದ ಅರ್ಥವನ್ನು, ಕೇಳುವುದಕ್ಕೆ, ಶ್ರವಣ ಎಂದು ಕೆಲವರು ಹೇಳುತ್ತಾರೆ.
ಮತ್ತೆ ಕೆಲವರ ಪ್ರಕಾರ, ಆತ್ಮನ ಬಗ್ಗೆ, ತನ್ನದೇ ಆದ ಭಾಷೆಯಲ್ಲಿ ಆತ್ಮನ ಸ್ವಭಾವಗಳನ್ನು ವಿವರಿಸುತ್ತಿರುವ ಉಪನ್ಯಾಸಕನ ಭಾಷಣವೇ ಶ್ರವಣ.
ವೇದಾಂತದ ಶಾಸ್ತ್ರಗಳ ಕೇಳುವಿಕೆಯಿಂದ, ಗುರುಗಳ ಸ್ವಂತ ವಾಕ್ಯಗಳನ್ನು ಕೇಳಿದ ಮೇಲೆ ಅಥವಾ ಎರಡೂ ಇಲ್ಲದಿದ್ದಲ್ಲಿ, ಪೂರ್ವ ಜನ್ಮದ ಸಂಸ್ಕಾರಗಳಿಂದ ಮುಮುಕ್ಷತ್ವವನ್ನು ಪಡೆದವ, ‘ನಾನು’ ಎಂಬುದು, ಮನಸ್ಸು ಮತ್ತು ದೇಹಕ್ಕಿಂತ ಬೇರೆ ಬೇರೆ ಎಂದು ತಿಳಿಯುವುದೇ ನಿಜವಾದ ಶ್ರವಣ.
ಶಾಸ್ತ್ರಗಳ ಅರ್ಥಗಳ ಬಗ್ಗೆ ಕೂಲಂಕಷವಾಗಿ ವಿಚಾರ ಮಾಡುವುದು ‘ಮನನ,’ ಎಂದು ಕೆಲವರ ಮತ. ಆದರೆ ಆತ್ಮನ ಅಸ್ತಿತ್ವದ ಬಗ್ಗೆ ಚಿಂತಿಸುವುದೇ ನಿಜವಾದ ಮನನ.
ಬುದ್ಧಿಶಕ್ತಿಯಿಂದ ಬ್ರಹ್ಮನ ಮತ್ತು ಆತ್ಮನ ಬಗ್ಗೆ ಯಾವುದೇ ಅನುಮಾನ ಮತ್ತು ತಪ್ಪು ತಿಳುವಳಿಕೆ ಇಲ್ಲದ ನಿರ್ಣಯವೇ, ನಿಧಿಧ್ಯಾಸನ ಎಂದು ಕೆಲವರ ಮತ.
ಎಷ್ಟೇ ಸಂಶಯವಿಲ್ಲದ ಮತ್ತು ತಪ್ಪು ತಿಳುವಳಿಕೆಯಿಂದ ಅರಿತುಕೊಂಡ,ಎಷ್ಟೇ ತಪ್ಪು ತಿಳುವಳಿಕೆ ಇಲ್ಲದ, ಎಷ್ಟೇ ಅನುಮಾನ ರಹಿತವಾದ ಶಾಸ್ತ್ರಗಳಿಂದ ಕಲಿತರೂ , ‘ಅರಿವಿನ ಇರುವಿಕೆಯ ಜ್ಞಾನ’, ಆತ್ಮನ, ಅನುಭವವನ್ನು ಕೊಡಲಾರದು.
ಸಂಶಯ ಮತ್ತು ತಪ್ಪು ತಿಳುವಳಿಕೆಗಳನ್ನು ಸ್ವಂತ ಅನುಭವದಿಂದಲೇ ದೂರ ಮಾಡಬೇಕೇ ಹೊರತು, ಸಾವಿರಾರು ಶಾಸ್ತ್ರಗಳಿಂದ ತಿಳಿಯುವುದಲ್ಲ..
ಬಲವಾದ ನಂಬಿಕೆ ಇರುವವರಲ್ಲಿ,, ಶಾಸ್ತ್ರ ಪ್ರಮಾಣಗಳು,ಸಂಶಯಗಳನ್ನು ನಿವಾರಿಸಲು ಸಹಾಯಕಾರಿ ಆಗಬಹುದು. ಆದರೆ ಯಾವಾಗ ಈ ನಂಬಿಕೆಯಲ್ಲಿ ಚ್ಯುತಿ ಬರುವುದೋ, ಆಗ ಈ ಸಂಶಯಗಳು ಮತ್ತೆ ತಲೆದೋರುತ್ತವೆ.
ಇರುವಿಕೆಯ ಅಸ್ಥಿತ್ವದ ಅರಿವು ತನ್ನ ಸ್ವಂತ ಅನುಭವ ಮಾತ್ರದಿಂದಲೇ ತಿಳಿಯತಕ್ಕದ್ದು., ಇದರಿಂದ ಎಲ್ಲ ರೀತಿಯ ಗೊಂದಲಗಳ ನಿವಾರಣೆ, ಒಮ್ಮೆಯೇ, ಆಗಬಲ್ಲದು. ಆದ್ದರಿಂದ, ಆತ್ಮನಲ್ಲಿ ಪರಿಪೂರ್ಣವಾಗಿ ನಿಲ್ಲುವಿಕೆಯೇ ನಿದಿಧ್ಯಾಸನ.
ಆತ್ಮನಲ್ಲಿ ನೆಲೆಯಾಗದ, ಮನುಷ್ಯರ ಮನಸ್ಸಿನಲ್ಲಿ,, ಹೊರಗಿನ ಪ್ರಪಂಚವು ಸುಳಿದಾಡುತ್ತಲೇ ಇರುತ್ತದೆ. ಅಂತಹವರಿಗೆ ಶಾಸ್ತ್ರ ವಾಕ್ಯಗಳು ಮತ್ತು ಅದರ ಓದುವಿಕೆ, ನೇರವಾದ ಜ್ಞಾನವನ್ನು ಕೊಡಲಾರದು.
ಆತ್ಮನ ಅರಿವಿನ ನಿಷ್ಟೆಯು, ಯಾವಾಗ ಸ್ವಾಭಾವಿಕವಾಗುವುದೋ ಅದೇ ಪರಿಪೂರ್ಣ ಸ್ವಾತಂತ್ರ್ಯ ಮತ್ತು ಉತ್ಕೃಷ್ಟವಾದ ಸ್ಥಿತಿ. ಇದನ್ನು ನೇರವಾದ ಸಾಕ್ಷಾತ್ಕಾರ ಎನ್ನುವರು.
ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ
ಶ್ರವಣ ಮನನ ನಿಧಿಧ್ಯಾಸನ ಎಂಬ ಹದಿನೈದನೆಯ ಅಧ್ಯಾಯ .
…………………………………..