**ಮಹರ್ಷಿಗಳು. ** ಅರಿವಿನ ಇರುವಿಕೆಯಲ್ಲಿ, ಸ್ಥಿರವಾಗಿ ನೆಲೆಸಿರುವ ಒಂದು ನೆಲೆಗೆ, ಜೀವನ್ನುಕ್ತಿ, ಎನ್ನುತ್ತಾರೆ. ಪ್ರಾಪಂಚಿಕ ಅಥವಾ ಶಾಸ್ತ್ರಗಳ ವಿಷಯಗಳು ಅವರಿಗೆ ಬಾಧಕ ಆಗಲಾರದು.
ಅತೀಂದ್ರಿಯ ಅರಿವು ಅಥವಾ ಪ್ರಜ್ಞಾನದಲ್ಲಿ ಯಾವ ರೀತಿಯ ವ್ಯತ್ಯಾಸವೂ ಇರುವುದಿಲ್ಲ. ಆದ್ದರಿಂದ, ಮುಕ್ತಿ ಎನ್ನುವುದು ಒಂದೇ ಬಗೆ. ಯಾವಾತನು, ಜೀವಿತಕಾಲದಲ್ಲಿ ಮುಕ್ತಿಯನ್ನು ಪಡೆಯುವನೋ, ಅವನು ಜೀವನ್ಮುಕ್ತ.
ಶಾಸ್ತ್ರಗಳ ಪ್ರಕಾರ, ಬ್ರಹ್ಮ ಲೋಕಕ್ಕೆ ತೆರಳಿ ಅಲ್ಲಿ ಮುಕ್ತಿಯ ಅನುಭವ ಪಡೆದವನಿಗೂ,, ಜೀವನ್ನುಕ್ತನ ಅನುಭವಕ್ಕೂ ಯಾವ ವ್ಯತ್ಯಾಸವೂ ಇಲ್ಲ.
ಮೇಲೆ ತಿಳಿಸಿದ ಇಬ್ಬರ ಅನುಭವಗಳಿಗೂ ಮತ್ತು ಮಹಾತ್ಮರ ಮರಣ ಕಾಲದಲ್ಲಿ ಯಾವ ಪ್ರಾಣವು, ಆತ್ಮನಲ್ಲಿ ಲೀನವಾಗುವುದೋ, ಅಂತಹವರ ಅನುಭವಗಳು ಒಂದೇ ರೀತಿಯದಾಗಿ ಇರುತ್ತದೆ.
ಆತ್ಮನಲ್ಲಿ ನೆಲೆ ನಿಲ್ಲುವುದು ಎಲ್ಲರಿಗೂ ಒಂದೇ. ಆದ್ದರಿಂದ ಮುಕ್ತಿಯು ಒಂದೇ. ಇವೆಲ್ಲದರ ವ್ಯತ್ಯಾಸವುqಮಾನವನ ಮನಸ್ಸಿನ ಊಹಾಪೋಹಗಳು ಅಷ್ಟೇ . ಬೇರೆ ಏನೂ ಅಲ್ಲ. ಎಲ್ಲಾ ಅಹಂಕಾರಗಳ ಅನಿಸಿಕೆ ಅಷ್ಟೇ.
ಆತ್ಮನಲ್ಲಿ ನೆಲೆನಿಂತಿರುವ ಯಾವ ಮಹಾತ್ಮನು, ಜೀವಿತ ಕಾಲದಲ್ಲಿಯೇ ಮುಕ್ತಿಯನ್ನು ಪಡೆಯುತ್ತಾನೆಯೋ, ಅಂತಹವನ ಪ್ರಾಣ ಶಕ್ತಿಗಳು ಆತ್ಮನಲ್ಲಿ ಇಲ್ಲಿಯೇ ವಿಲೀನಗೊಳ್ಳುತ್ತದೆ.
ಕೆಲವು ಸಂದರ್ಭಗಳಲ್ಲಿ, ತಪಸ್ಸಿನ ಪಕ್ವತೆಯಿಂದ, ಜೀವನ್ಮುಕ್ತರಲ್ಲಿ ದೇಹವಿದ್ದರೂ ಸ್ಪರ್ಶ ಜ್ಞಾನ ಇಲ್ಲದೆ ಇರುವ ಸ್ಥಿತಿ ಇರುತ್ತದೆ.
ಮತ್ತಷ್ಟು ವಿಕಾಸವಾದಾಗ ದೇಹದ ಅದೃಶ್ಯತೆಯೂ ಏರ್ಪಡುತ್ತದೆ. ಅಂತಹ ಸಾಧುಗಳು , ಪೂರ್ಣ ಅರಿವೇ ಆಗಿ ಉಳಿದು, ತನ್ನ ಇಷ್ಟಬಂದಂತೆ ವಿಹರಿಸುತ್ತಿರುತ್ತಾನೆ.
ಈ ಎರಡೂ ದೇಹದ ಸಿದ್ಧಿಗಳು, ದೇವರ ಕೃಪೆಯಿಂದ,, ಬಹಳ ಬೇಗನೆ, ಸ್ವಲ್ಪಕಾಲದಲ್ಲಿಯೇ ಉಂಟಾಗ ಬಹುದು.
ಸಿದ್ಧಿಗಳಲ್ಲಿ ವ್ಯತ್ಯಾಸ ಎನ್ನುವುದು. ಇದ್ದರೂ,. ಮುಕ್ತಿಯಲ್ಲಿ ವ್ಯತ್ಯಾಸವು ಇರುವುದಿಲ್ಲ. ದೇಹ ವಿದ್ದರೂ ದೇಹ ಇಲ್ಲದಿದ್ದರೂ, ಯಾರು ಆತ್ಮನಲ್ಲಿ ನೆಲೆ ನಿಲ್ಲುತ್ತಾರೆಯೋ, ಅವರು ಮುಕ್ತರೇ.
ಸುಷುಮ್ನ ಮಾಡಿಯ ಮೂಲಕ ಅರ್ಚಿರಾದಿ ಮಾರ್ಗದಲ್ಲಿ, ಮೇಲಿನ ಲೋಕಗಳಿಗೆ, ಯಾರು ತೆರಳುತ್ತಾರೆಯೋ, ಅಂತಹವರು,ಅ ಲೋಕಗಳಲ್ಲಿ ದೊರೆತ ದೈವಕೃಪೆಯಿಂದ ಮುಕ್ತಿಯನ್ನು ಪಡೆಯುತ್ತಾರೆ.
ಬಹಳ ಪಕ್ವಗೊಂಡ ಪ್ರೀತಿಪಾತ್ರ ಭಕ್ತರಿಗೆ, ನಾಡಿಯ ಮೂಲಕ ಉತ್ತಮ ಲೋಕಗಳನ್ನು, ದೈವಕೃಪೆಯಿಂದ ಹೊಂದುತ್ತಾರೆ
ಅಂತಹವನು,ಎಲ್ಲ ಲೋಕಗಳಲ್ಲಿ ತನ್ನ ಇಚ್ಛೆಯಂತೆ ಸಂಚಾರ ಮಾಡಿ ಅನೇಕ ದೇಹಗಳನ್ನು ಹೊಂದಿ,ಬೇರೆಯವರಿಗೂ ತನ್ನ ಅನುಗ್ರಹವನ್ನು ದಯಪಾಲಿಸ ಬಹುದು..
ಕೆಲವರು,ಕೈಲಾಸ,ಮತ್ತೆ ಕೆಲವರು ವೈಕುಂಠ, ಮತ್ತೆ ಇತರರು ಸೂರ್ಯ ಲೋಕಗಳನ್ನು ಮುಕ್ತಿಧಾಮಗಳೆಂದು ಪರಿಗಣಿಸುವರು.
ಅಸಾಧಾರಣವಾದ ಶಕ್ತಿಯಿಂದ, ಭೂಲೋಕ ಮತ್ತು ಇತರ ಮುಕ್ತಿಧಾಮಗಳು, ಬಾಹ್ಯದಲ್ಲಿ ಅಸ್ತಿತ್ವವುಳ್ಳಂತೆ, ಆತ್ಮನಲ್ಲಿ, ಚಿತ್ರಗಳಂತೆ, ಪ್ರಕಟವಾಗುತ್ತದೆ.
ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ
ಜೀವನ್ ಮುಕ್ತಿ ಎಂಬ ಹದಿನಾಲ್ಕನೆಯ ಅಧ್ಯಾಯ.