೧೩ ಸನ್ಯಾಸಕ್ಕೆ ಸ್ತ್ರೀಯರ ಅರ್ಹತೆ

ಪ್ರಶ್ನೆ..೧. ಆತ್ಮನಲ್ಲಿ ನಿರತಳಾಗಿರುವ ಸ್ತ್ರೀಯರಿಗೆ, ಮನೆ ಮಠವನ್ನು ತೊರೆದು ಸನ್ಯಾಸಿಗಳು ಆಗಬೇಕೆಂದು ಶಾಸ್ತ್ರಗಳಲ್ಲಿ ಹೇಳಿದೆಯೆ?

**ಪ್ರಶ್ನೆ ೨. ** ಬದುಕಿರುವಾಗಲೇ ಒಬ್ಬ ಸ್ತ್ರೀಯು ಮುಕ್ತಿಯನ್ನು ಪಡೆದಿದ್ದರೆ ಅಂತಹವಳು, ದೇಹವನ್ನು ತ್ಯಜಿಸಿದರೆ, ಅವಳ ಶವ, ದಹನ ಕ್ರಿಯೆ ಆಗಬೇಕೊ ಅಥವಾ ಸಮಾಧಿ ಆಗಬೇಕೊ?

**ಮಹರ್ಷಿಗಳು **ಸತ್ಯದಲ್ಲಿ ನಿರಂತರವಾಗಿ, ನಿಂತ, ಮಹಿಳೆಯು, ಸನ್ಯಾಸಿ ಆಗಲೇಬೇಕೆಂದು, ಶಾಸ್ತ್ರಗಳಲ್ಲಿ ಯಾವ ರೀತಿಯ ಆದೇಶವು ಇಲ್ಲ. ಇದು ಖಂಡಿತ.

ಮುಕ್ತಿ ಅಥವಾ ಜ್ಞಾನದಲ್ಲಿ ಸ್ತ್ರೀಯರಿಗೂ ಪುರುಷರಿಗೂ ಏನೂ ವ್ಯತ್ಯಾಸವೇ ಇಲ್ಲ. ಜೀವಿತ ಕಾಲದಲ್ಲಿ ಬಿಡುಗಡೆ ಹೊಂದಿದಂತಹ ಸ್ತ್ರೀಯರ ದೇಹವನ್ನು ದಹನ ಮಾಡಬಾರದು. ಏಕೆಂದರೆ ಅದು ಒಂದು ದೇವಾಲಯದಂತೆ.

ಜೀವನ್ಮುಕ್ತನ ದೇಹದ ದಹನ ಕ್ರಿಯೆ ನಡೆಸಿದರೆ ಯಾವ ರೀತಿ ಅವನ ಪಾಪಗಳು ಅವನನ್ನು ಹಿಂಬಾಲಿಸುತ್ತದೆ ಎಂದು ಹೇಳುತ್ತಾರೆಯೋ, ಅದೇ ರೀತಿ ಜೀವನ್ಮುಕ್ತ ಸ್ತ್ರೀಯ ದೇಹವನ್ನು ದಹನ ಮಾಡಿದರೆ ಅವಳ ಪಾಪಗಳು ಅವಳನ್ನು ಹಿಂಬಾಲಿಸುತ್ತದೆ.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಸನ್ಯಾಸಕ್ಕೆ ಸ್ತ್ರೀಯರ ಅರ್ಹತೆ ಎಂಬ ಹದಿಮೂರರನೇ ಅಧ್ಯಾಯ.