ಪ್ರಶ್ನೆ. ಅಜ್ಞಾನಿಗಳು,ಮತ್ತು ಜ್ಞಾನಿಗಳು ನಿತ್ಯ ಜೀವನದಲ್ಲಿ… ನಾಮ, ರೂಪ, ಕ್ರಿಯಾ, ಕರ್ಮ ಕಾರ್ಯಕಲಾಪಗಳನ್ನು, ಯಾವರೀತಿಯಲ್ಲಿ ತಿಳಿಯುತ್ತಾರೆ ? ಯಾವ ರೀತಿಯಲ್ಲಿ, ಅಜ್ಞಾನಿಗಿಂತ ಜ್ಞಾನಿಯು, ಉನ್ನತ ಸ್ಥಿತಿಯಲ್ಲಿ ಇರುವವನು.?
**ಮಹರ್ಷಿಗಳು. **ಜ್ಞಾನಿಗಳಿಗೆ ಶ್ರವಣಗೋಚರ ಅಂದರೆ ಕೇಳಲ್ಪಡುವುದು. ಆತ್ಮನಿಂದ ಬೇರೆಯಾಗಿ ಇರುವುದಿಲ್ಲವೋ, ಅಂತಹವನಿಗೆ ದೃಶ್ಯವು ಅಂದರೆ ನೋಡಲ್ಪಟ್ಟ ವಸ್ತುವೂ, ಆತ್ಮನಿಗಿಂತ ಬೇರೆಯಾಗಿ ಇರುವುದಿಲ್ಲ.
ಜ್ಞಾನಿಗಳಿಗೆ, ಯಾವ ವಿಷಯಗಳು ಮತ್ತು ಆತ್ಮನು ಬೇರೆಯಾಗಿ ಕಾಣುವುದಿಲ್ಲವೊ ,ಅಂತಹವನಿಗೆ ವಸ್ತುಗಳು ಮತ್ತು ಅವುಗಳ ಗ್ರಹಿಕೆಕೂಡ, ಆತ್ಮನಿಗಿಂತ ಬೇರೆಯಾಗಿರುವುದಿಲ್ಲ.
ಬಂಧನಗಳ ಕಾರಣದಿಂದ, ಯಾವ,ಅಜ್ಞಾನಿಗಳಿಗೆ ವಿಷಯಗಳು (ನೋಟವು)ಮತ್ತು ಆತ್ಮನು ಬೇರೆಯಾಗಿ ಇರುತ್ತದೆಯೋ, ಅವರಿಗೆ, ವಸ್ತುಗಳು ಮತ್ತು ಅವುಗಳ ಗ್ರಹಿಕೆಯೂ ಬೇರೆ ಇರುವಂತೆ ಕಾಣುತ್ತದೆ.
ಈ ವ್ಯತ್ಯಾಸದ ನೋಟದಲ್ಲಿಯೇ ಜ್ಞಾನಿಯಾದರೋ ಅವಶ್ಯವಾದದ್ದು ಮಾತ್ರ ಗ್ರಹಿಸುತ್ತಾನೆ. ನೋಟದ ವ್ಯತ್ಯಾಸಗಳಲ್ಲಿ ಸಿಲುಕಿದ ಅಜ್ಞಾನಿಯು, ತನ್ನನ್ನು ಬೇರೆ ಎಂದು ತಿಳಿಯುತ್ತಾನೆ.
ಜ್ಞಾನಿಯು ಮೂಲಭೂತ ಅಸ್ತಿತ್ವವನ್ನು ಒಟ್ಟಾಗಿ ಜೋಡಿಸಿ ನೋಡುತ್ತಾನೆ. ಅಜ್ಞಾನಿಯು ಈ ವ್ಯತ್ಯಾಸವನ್ನು ಬಿಡಿಬಿಡಿಯಾಗಿ ನೋಡುವುದರಿಂದ, ಇವೆಲ್ಲವೂ ತನ್ನಿಂದ ಬೇರೆ ಎಂದು ತಿಳಿದು ಗೊಂದಲಕ್ಕೆ ಸಿಕ್ಕುತ್ತಾನೆ.
ಪ್ರಶ್ನೆ. ಈ ನಾಮ ರೂಪ ಮತ್ತು ನೋಟದಲ್ಲಿ ವ್ಯತ್ಯಾಸ ಕಂಡುಬರಲು, ಶಕ್ತಿಯು ಕಾರಣವೋ, ಅಥವಾ ಇವುಗಳು ಶಕ್ತಿ ರಹಿತವಾದವುಗಲೋ.?
**ಮಹರ್ಷಿಗಳು. ** ಈ ಮೂರರಲ್ಲಿ ತೋರುವ ವ್ಯತ್ಯಾಸ ಯಾವುದರಿಂದ ಉಂಟಾಗುತ್ತದೆಯೋ ಅದೇ ಉನ್ನತ ಶಕ್ತಿಯಿಂದ ಕೂಡಿರುವುದು ಎಂದು ವೇದಾಂತವನ್ನು ತಿಳಿದವರು ಹೇಳುತ್ತಾರೆ.
**ಪ್ರಶ್ನೆ. **ವೇದಾಂತಗಳು ತಿಳಿಸುವ ಈ ದೈವಿಕ ಶಕ್ತಿಯೇ ಕ್ರಿಯಾತ್ಮಕವೋ ಅಥವಾ ಸ್ಥಿರವುಳ್ಳದ್ದೋ?
**ಮಹರ್ಷಿಗಳು. **ಈ ಶಕ್ತಿಯ ಚಲನದಿಂದಲೇ ಪ್ರಪಂಚವು ತೋರುವುದು. ಈದೈವಿಕ ಶಕ್ತಿಯು,, ನಿರ್ಗುಣ ,ನಿಷ್ಕ್ರಿಯ,ನಿಶ್ಚಲ, ಅಗೋಚರ ಅನಂತ ಶಕ್ತಿಯುತ ಅಸ್ಥಿತ್ವದ ಸ್ವರೂಪವು. ಅದು ಅಚಲವಾದದ್ದು. ಅದು ಸಕಲ ಕ್ರಿಯೆಗಳಿಗೆ… ಮೂಲವಾಗಿ… ಇರುವುದು. ಅಂದರೆ, ಈ ಶಕ್ತಿಯ ಮೂಲ ಸ್ವರೂಪವು ಎಂದೂ ಅಚಲ ವಾದದ್ದು.
ಈ ಅಚಲವಾಗಿ ಇರುವ ಇರುವಿಕೆಯ ಅರಿವಿನ ಬೆಳಕಿನ ಕಾಂತಿ ಕಿರಣ ಪ್ರತಿಬಿಂಬ ಪ್ರತಿಕ್ರಿಯೆಯೇ ತೋರಿಕೆಗೆ ಕಾರಣ…. ಅದನ್ನು….ವಿವರಿಸಲಾರದ… " ಮಾಯಾ " ಎನ್ನುವರು , ಜ್ಞಾನಿಗಳು, ಮತ್ತು ವೇದಾಂತ ಸಾರ ತಿಳಿದ ಪಂಡಿತರು.
ಪರತಂತ್ರವಶನಾದವನು, ತನ್ನ ದೇಹ ಮತ್ತು ಕಾಣುವ ಜಗತ್ತು ಎರಡೂ ಬೇರೆ ಬೇರೆ ಎಂಬ ನಂಬಿಕೆಯಿಂದ, ಈ ನಿಜ ಸ್ವರೂಪವನ್ನು ಅರಿಯದೆ ಇರುತ್ತಾನೆ.. ಒಂದು ಸರ್ವವ್ಯಾಪಿ ಅಗೋಚರ ಶಕ್ತಿಯಿಂದಲೇ ಇದೆಲ್ಲವೂ ನಮಗೆ ಕಾಣುತ್ತದೆ ಎಂಬ ತಿಳುವಳಿಕೆ ಇಲ್ಲದ ಕಾರಣ, ದೃಷ್ಟಿಯಲ್ಲಿ ಬೇಧ ಉಂಟಾಗುತ್ತದೆ. .
ವಾಸ್ತವ ಸಂಗತಿ ಏನೆಂದರೆ, ಈ ಅಗೋಚರ ಶಕ್ತಿಯೇ ( ಮಾಯಾಶಕ್ತಿ) ಸತ್ಯ ಸ್ವರೂಪ. ಇದು, ದೇಶ ಕಾಲ ಮತ್ತು ಕಾರ್ಯಗಳಿಗೆ,ಮೀರಿ ಇರುವಂತಹ ಒಂದು ಸತ್ ಸ್ವರೂಪ.
ಇದೇ ಅರಿವಿನ ಇರುವಿಕೆ ಅಥವಾ ಇರುವಿಕೆಯ ಅರಿವು
ಈಶ್ವರ ಮತ್ತು ಶಕ್ತಿಗಳ ತೋರಿಕೆಯ ವ್ಯತ್ಯಾಸವು ನಮ್ಮ ದ್ವೈತ ದೃಷ್ಟಿಯ ನೋಡುವಿಕೆಯೇ ಆಗಿದೆ. ಈ ರೀತಿಯಾದ ದೃಷ್ಟಿಯಿಂದ, ಹಿಂದೆ ಸರಿದಾಗ ಇವೆರಡೂ ಒಂದಾಗಿ ಗೋಚರಿಸುತ್ತದೆ.
ಪ್ರಶ್ನೆ. ಹಾಗಾದರೆ ಈ ಬ್ರಹ್ಮಾಂಡದ ಚಟುವಟಿಕೆಗೆ ಕಾರಣನಾದ ಈಶ್ವರನು ಶಾಶ್ವತವೋ ಅಲ್ಲವೋ? ದಯಮಾಡಿ ತಿಳಿಸಿ.
ಮಹರ್ಷಿಗಳು. ಈಶ್ವರನು ಚಲನರಹಿತನು…ಅನಂತನು, ,ಅಗೋಚರನು.. ಈಶ್ವರ ಸನ್ನಿಧಿಯಲ್ಲಿ ಎಲ್ಲಾ, ಅಗೋಚರ ಕಲ್ಪನೆಗಳು ಎಲ್ಲಾ ಅಗೋಚರ ಕಂಪನಗಳು ಉದ್ಭವಿಸುತ್ತದೆ. ಅಥವಾ ಸಂಭವಿಸುತ್ತದೆ. ಚಲನ ರಹಿತವಾದ ಈ ಅತ್ಯುನ್ನತ ಶಕ್ತಿಯು ತನ್ನ ಸ್ವಂತ ಶಕ್ತಿಯಿಂದಲೇ ಚಲಿಸುತ್ತದೆಯಾದರೂ, ಅದು ವಾಸ್ತವಿಕವಾಗಿ ಸ್ಥಿರವಾಗಿದೆ. ಈ ಆಳವಾದ ರಹಸ್ಯವನ್ನು ಋಷಿಗಳು ಮಾತ್ರ ತಿಳಿಯಬಲ್ಲರು.
ಚಲನೆಯೇ ಒಂದು ಚಟುವಟಿಕೆ. ಈ ಚಟುವಟಿಕೆಗೆ ಶಕ್ತಿ ಎನ್ನುತ್ತಾರೆ. ಪರಮಾತ್ಮನು ತನ್ನ ಶಕ್ತಿಯಿಂದಲೇ ನಮಗೆ ಗೋಚರಿಸುವ ಎಲ್ಲವನ್ನು ಸೃಷ್ಟಿ ಮಾಡಿದ್ದಾನೆ
ಈ ಚಟುವಟಿಕೆಗಳು ಎರಡು ವಿಧವಾಗಿ ಸ್ಪಷ್ಟವಾಗುತ್ತದೆ. ಒಂದು ಪ್ರವೃತ್ತಿ (ಸೃಷ್ಟಿ+ ಸ್ಥಿತಿ) ಮತ್ತೊಂದು ನಿವೃತ್ತಿ (ಪ್ರಳಯ). ‘ಯಾವಾಗ ಎಲ್ಲವೂ ‘ಆತ್ಮನೆಯಲ್ಲಿಯೇ ಲೀನವಾಗುವುದು’ ಎಂಬ ವೇದ ವಾಕ್ಯ,(ಯದಾ ಸರ್ವಂ ಆತ್ಮನ ಸಂಭೂತಃ) ನಿವೃತ್ತಿಯನ್ನು ಸೂಚಿಸುತ್ತದೆ.
“ಸರ್ವಂ” ಎನ್ನುವುದು ದ್ವೈತ ದೃಷ್ಟಿಯಿಂದ ನೋಡುವ ಎಲ್ಲಾ ನೋಟಗಳು. “ಅಭೂತ್” ಎಂದಾಗ ಒಂದು ರೀತಿಯ ಚಟುವಟಿಕೆ ಎಂದರ್ಥ. ಇವೆಲ್ಲವೂ ತಾನೇ ಆಯಿತು ಎನ್ನುವ ಸಂದೇಶ.
ನಿರ್ದಿಷ್ಟ ಪದವಾದ “ಆತ್ಮನ” ಎಂದರೆ, ಆತನೇ ‘ಸ್ವಯಂ’ ಎಂದರ್ಥ. ಎಲ್ಲ ರೀತಿಯ ವೈವಿಧ್ಯಮಯ ವಸ್ತುಗಳು ಯಾರಿಂದ ಉತ್ಪತ್ತಿಯಾಗಿ ಇದೆಯೋ, ಅದೇ ಕಡೆಯಲ್ಲಿ, ಅವನಲ್ಲಿ /ಆತ್ಮನಲ್ಲಿ,)ಲಯವಾಗುತ್ತದೆ .
ಶಕ್ತಿ ಇಲ್ಲದಿದ್ದರೆ ಇರುವಿಕೆಯನ್ನು ಗ್ರಹಿಸಲು ಅಸಾಧ್ಯ. ಶಕ್ತಿಗೆ ಎರಡು ನಾಮಗಳಿವೆ.
೧. ವ್ಯಾಪಾರ/“ಚಟುವಟಿಕೆ” ೨. ಆಶ್ರಯ/ “ನೆಲೆ”.
ವೇದಾಂತಿಗಳ ಮತ್ತು ಜ್ಞಾನಿಗಳ ಪ್ರಕಾರ, ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ವ್ಯಾಪಾರ(ಚಟುವಟಿಕೆ), ಆಶ್ರಯ ಎಂದರೆ, ಮೂಲ ವಾಸಸ್ಥಾನ. ಇರುವಿಕೆ ಅಥವಾ ಅರಿವು ಅಲ್ಲದೆ ಬೇರೆ ಏನೂ ಅಲ್ಲ.
ಇರುವಿಕೆಯೇ ಎಲ್ಲವೂ ಮತ್ತು ಅದು ಯಾವ ಆಧಾರಗಳ ಮೇಲೆಯೂ ನಿಂತಿಲ್ಲ. ಯಾರು ಚಟುವಟಿಕೆ ಮತ್ತು ಆಶ್ರಯ ಎರಡೂ ಶಕ್ತಿಯ ರೂಪಗಳೇ ಎಂದು ತಿಳಿಯುತ್ತಾನೆಯೋ ಅಥವಾ ತಿಳಿಯಬಲ್ಲವನೋ, ಅವನೇ, ನಿಜವಾದ ಜ್ಞಾನಿ.
ಚಟುವಟಿಕೆ ಇಲ್ಲದಿದ್ದಲ್ಲಿ ಸತ್ ಸ್ವರೂಪಕ್ಕೆ ವೈವಿಧ್ಯತೆಯೇ ಕಂಡುಬರುವುದಿಲ್ಲ. ಸತ್ತಾ ಎಂಬುದು ಶಕ್ತಿಯಿಂದ ಬೇರೆಯೇ ಅಲ್ಲ. ಚಟುವಟಿಕೆಗಳು ಎಂದೂ ಎಳುವುದೇ ಇಲ್ಲ.
ಕಾಲಾಂತರದಲ್ಲಿ, ಈ ಪ್ರಪಂಚದಲ್ಲಿ ಪ್ರಳಯ ಸ್ಥಿತಿಯು ಉಂಟಾಗಬೇಕು. ಆಗ ಚಟುವಟಿಕೆಗಳು ಇರುವಿಕೆಯಲ್ಲಿ ಅಂದರೆ, ತನ್ನಲ್ಲಿಯೇ ವಿಲೀನಗೊಂಡು ಏನೂ ವ್ಯತ್ಯಾಸವೇ ತೋರದಂತೆ ಇರುತ್ತದೆ.
ಶಕ್ತಿಯವಿನಹ ಯಾವ ರೀತಿಯ ಉತ್ಪತ್ತಿಯಾಗಲೀ ಅಥವಾ ನಾಮ-ರೂಪಗಳ ಸಂವೇದನೆ ಇರುವುದು ಸಾಧ್ಯವೇ ಇಲ್ಲ.
ಸೃಷ್ಟಿಯ ಕಾರ್ಯದ ಕಾರಣ ಉತ್ಕೃಷ್ಟವಾದ ಈ ಶಕ್ತಿಯು ಎರಡು ನಾಮಗಳಿಂದ ಸೂಚಿಸಲ್ಪಡುತ್ತದೆ. ಒಂದು ಅಂತಸ್ಥ ಶಕ್ತಿ ಮತ್ತೊಂದು ನಿಷ್ಕ್ರಿಯ ಶಕ್ತಿ.
ಉತ್ತಮರಾದ ಮನುಷ್ಯರಲ್ಲಿ, ಯಾರು ಚಲನಶಕ್ತಿ ಇದ್ದಾಗಲೇ ಶಕ್ತಿ ತೋರುತ್ತದೆ ಎಂದು ನಂಬಿರುತ್ತಾರೆಯೋ, ಅಂತಹವರಿಗೆ, ಬೇರೆ ರೀತಿಯ ಚಲನರಹಿತ ಶಕ್ತಿಯ ನೆಲೆ ಒಂದು ಇದೆ, ಎಂದು, ತಿಳಿದವರು (ಅಚಲ ಸತ್ಯಸ್ವರೂಪದ ಅನುಭವಿಗಳು) ಸರಿಯಾಗಿ ಅರ್ಥಮಾಡಿಸಬೇಕು.
ಆ ರೀತಿಯಾದ ಏಕೈಕ ಸರ್ವೋಚ್ಚ ಸತ್ಯತೆಯನ್ನು, ಹಲವರು ಶಕ್ತಿ ಎಂದು ಪರಿಗಣಿಸುತ್ತಾರೆ. ಮತ್ತೆ ಕೆಲವರು ‘ಬ್ರಹ್ಮನ್’ ಎಂದೂ, ಮಗದೊಬ್ಬರು, ಒಬ್ಬ ವ್ಯಕ್ತಿ, ಎಂದೂ ತಿಳಿಯುವರು.
ಸತ್ಯವನ್ನು ಎರಡು ರೀತಿಯಲ್ಲಿ ಗ್ರಹಿಸಬಹುದು ಅದರ ಗುಣ ಲಕ್ಷಣಗಳಿಂದಲೂ ವಿವರಿಸಬಹುದು. ಅಥವಾ ಅನುಭವದಲ್ಲಿ, ಅದರ ಸತ್ಯತೆಯನ್ನು ಗ್ರಹಿಸಬಹುದು.
ಇರುವಿಕೆಯ ಅರಿವನ್ನು, ಎರಡು ರೀತಿಯಲ್ಲಿ ಕಂಡುಕೊಳ್ಳಬಹುದು. ಅದರ ಕ್ರಿಯೆಯಿಂದಲೋ ಅಥವಾ ಅನುಭವದಿಂದಲೋ,ಅಂದರೆ ಪರೋಕ್ಷವಾಗಿ ಅದರ ಗುಣಲಕ್ಷಣಗಳಿಂದ ಅಥವಾ ಪ್ರತ್ಯಕ್ಷದಲ್ಲಿ ಅದರಲ್ಲಿ ಲೀನವಾದಾಗ ತಿಳಿಯಬಹುದು.
ಇರುವಿಕೆಯೇ ಬಚ್ಚ ಬರಿಯ ಅರಿವು. ಕಾರ್ಯಶೀಲತೆಯೇ ಅದರ ಗುಣಲಕ್ಷಣಗಳು ಆದ್ದರಿಂದ ಕಾರ್ಯದ ಲಕ್ಷಣಗಳನ್ನು ಅನುಸರಿಸಿ ಅದರ ಅಸ್ತಿತ್ವವನ್ನು ಕಂಡುಕೊಂಡು ತಳಹದಿಯಲ್ಲಿ ಸ್ಥಿರವಾಗಿ ನಿಲ್ಲುವುದು ಮುಮುಕ್ಷುವಿನ ಗುರಿ ಆಗಬೇಕು.
ಇರುವಿಕೆಯು ಗುಣಲಕ್ಷಣಗಳಿಂದಲೇ ಕೂಡಿರುತ್ತದೆ. ಅಸ್ತಿತ್ವದಲ್ಲಿ ಗುಣಲಕ್ಷಣಗಳು ಇರುತ್ತದೆ. ಗುಣಗಳು ಇದ್ದಲ್ಲಿ ಅಸ್ತಿತ್ವವಿರುತ್ತದೆ. ಇವೆರಡರ ಸಂಬಂಧವೇ ಅದರ ಗುರುತು.
ನಿಜವಾಗಿ ನೋಡಿದಾಗ ಕಾರ್ಯಶೀಲತೆಯೇ ಇರುವಿಕೆ. ಆದರೆ ಈ ವ್ಯತ್ಯಾಸದ ನೋಟ ಅಥವಾ ಜ್ಞಾನ, ಬರಿಯ ಊಹೆಯಷ್ಟೇ. ಚಟುವಟಿಕೆಯು, ಮೂಲ ತಳಹದಿ ಅಲ್ಲವೇ! ಎಲ್ಲಾ ವ್ಯತ್ಯಾಸಗಳ ಜ್ಞಾನ, ಬರಿಯ ಊಹೆ ಮಾತ್ರ.
ಸೃಷ್ಟಿ ಎಂಬ ಶಕ್ತಿಯ ಆಟ, ಈಶ್ವರನ ಆಲೋಚನೆಯೇ ಹೊರತು, ಬೇರೆ ಏನೂ ಅಲ್ಲ. ಈ ಯೋಚನೆಯನ್ನು ಮೀರಿ ನಿಂತಾಗಲೇ, ಅರಿವಿನ ತಳಹದಿ ಗೋಚರ ಆಗಬಲ್ಲದು.
ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ ಶಕ್ತಿಯ ವಿವರಣೆ ಎಂಬ ಹನ್ನೆರಡನೆಯ ಅಧ್ಯಾಯ.