೧೦ ಸಮಾಜ

ಪ್ರಶ್ನೆ. ಸಮಾಜಕ್ಕೂ ಮತ್ತು ಅಲ್ಲಿನ ಸದಸ್ಯರುಗಳಿಗೂ ಇರುವ ಸಂಬಂಧದ ಬಗ್ಗೆ ದಯಮಾಡಿ ತಿಳಿಸಿಕೊಡಿ.

ಮಹರ್ಷಿಗಳು. ಬೇರೆ ಬೇರೆ ವಿಧವಿಧವಾದ ಆಚರಣೆಗಳಲ್ಲಿ ನಿರತರಾಗಿರುವ ಸಮಾಜವು, ದೇಹ ಮತ್ತು ಅದರ ಸದಸ್ಯರುಗಳಾದ ಅಂಗಗಳಂತೆ ಇರುತ್ತದೆ.

ಯಾವ ರೀತಿ ಅಂಗಾಂಗಳು, ದೇಹವನ್ನು ಸೇವೆಮಾಡುತ್ತದೆಯೋ, ಅದೇರೀತಿ, ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾ, ಒಬ್ಬ ವ್ಯಕ್ತಿಯು ಏಳಿಗೆಯನ್ನು ಹೊಂದುತ್ತಾನೆ.

ಸಮಾಜದ ಆಸಕ್ತಿಗಳಿಗಾಗಿ ಯಾವಾಗಲೂ ಕಾಯಾ ವಾಚಾ ಮನಸಾ ನಡೆದುಕೊಳ್ಳಬೇಕು ಮತ್ತು ತನ್ನ ಗುಂಪಿನಲ್ಲಿರುವ ಇತರರನ್ನು ಇದೇ ರೀತಿ ಮಾಡುವಂತೆ ಪ್ರಚೋದಿಸಬೇಕು.

ಸಮಾಜದ ರಕ್ಷಣೆಗಾಗಿ ತಮ್ಮದೇ ಆದ, ಒಂದು ಗುಂಪನ್ನು ರಚಿಸಿಕೊಂಡು ಸಮಾಜವನ್ನು ಸರಿಪಡಿಸುವ ಮೂಲಕ, ಸಮಾಜದ ಏಳಿಗೆಗೆ ಶ್ರಮಿಸಬೇಕು.

ಪ್ರಶ್ನೆ. ಜ್ಞಾನಿಗಳಲ್ಲಿ ಕೆಲವರು ಶಕ್ತಿಯನ್ನು ಮತ್ತೆ ಕೆಲವರು ಶಾಂತಿಯನ್ನು ಪ್ರತಿಪಾದಿಸುತ್ತಾರೆ. ಇದರಲ್ಲಿ ಸಮಾಜದ ಏಳಿಗೆಗೆ ಯಾವುದು ಸಹಕಾರಿ ಆಗಬಲ್ಲದು?

ಮಹರ್ಷಿಗಳು. ತನ್ನ ತನ್ನ ಮನಸ್ಸನ್ನು ಶುದ್ಧಿಗೊಳಿಸಲು, ಶಾಂತಿಯನ್ನೂ ಮತ್ತು ಸಮಾಜದ ಒಳಿತಿಗೆ ಶಕ್ತಿಯನ್ನೂ ಉಪಯೋಗಿಸಬೇಕು. ಶಕ್ತಿಯಿಂದ ಸಮಾಜವನ್ನು ಕಟ್ಟಿದಾಗ ಶಾಂತಿಯು, ತಾನಾಗಿಯೇ ಸ್ಥಿರಗೊಳ್ಳುತ್ತದೆ.

ಪ್ರಶ್ನೆ. ಯಾವ ರೀತಿಯ ಉಚ್ಚ ಗುರಿಯನ್ನು ಸಮಾಜದಲ್ಲಿ ಇಟ್ಟುಕೊಂಡಿರುವುದು ಬಹಳ ಮುಖ್ಯ?

ಮಹರ್ಷಿಗಳು.. ಸಮಾಜ ಮತ್ತು ಸಮಸ್ಯೆಗಳನ್ನು ಗುರಿಯಾಗಿ ಇಟ್ಟುಕೊಂಡು, ಭ್ರಾತೃತ್ವ ಭಾವವನ್ನು, ಪೂರ್ಣ ಸಮಾಜದ ಉಳಿಕೆಗಾಗಿ ಶ್ರಮಪಡಬೇಕು. ಭ್ರಾತೃತ್ವ ಭಾವದಿಂದ ಉತ್ತಮವಾದ ಶಾಂತಿಯು ಭದ್ರವಾಗಿ ನೆಲೆ ನಿಲ್ಲುವುದು. ಆಗ, ಭೂಮಂಡಲವು ಒಂದೇ ಕುಟುಂಬ ಎನ್ನುವಂತೆ ಇರುವುದು.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಸಮಾಜ ಎನ್ನುವ ಹತ್ತನೆಯ ಅಧ್ಯಾಯ.