೦೬ ಮನಸ್ಸಿನ ನಿಯಂತ್ರಣ

ಹೃದಯದ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಸಿಕೊಟ್ಟ ರಮಣಮಹರ್ಷಿಗಳು ಈಗ ಮನಸ್ಸಿನ ಹತೋಟಿಯ ಬಗ್ಗೆ ಉಪದೇಶವನ್ನು ಕರುಣಿಸಿದ್ದಾರೆ.

ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ ಬಿದ್ದು ಯಾವಾಗಲೂ ಚಿಂತೆಯಲ್ಲಿರುವ ಮನುಷ್ಯನಿಗೆ ಬಲವತ್ತರವಾದ ವಾಸನೆಗಳ ಕಾರಣ, ಮನೋ ನಿಯಂತ್ರಣ ಕಷ್ಟಕರ. ಮಂಗನಂತೆ ವರ್ತಿಸುವ ಚಂಚಲವಾದ ಮನಸ್ಸಿನ ವೇಗವನ್ನು ಸ್ವ ಪ್ರಯತ್ನದಿಂದ ನೈಧಾನ್ಯ ಗೊಳಿಸಿದಾಗ,ಮನಸ್ಸಿನ ಭಾವನೆಗಳೂ ಚಟುವಟಿಕೆಗಳು ಹತೋಟಿಗೆ ಬಂದು,. ಅದು ಕಟ್ಟಿ ಹಾಕಲ್ಪಟ್ಟ ಪ್ರಾಣಿಯಂತೆ ದಾರಿತಪ್ಪಿ ಹೋಗುವುದಿಲ್ಲ.. ವಾಯು ರೋಧದಿಂದ ಮನಸ್ಸಿನ ನಿಯಂತ್ರಣ ಸಾಧಿಸಬಹುದು. ಯಾವಾಗ ಯೋಚನೆಗಳು ನಿಯಂತ್ರಣವಾಗುವುದೋ ಆಗ, ಮೂಲ ನೆಲೆಯಲ್ಲಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಉಸಿರಾಟದ ನಿಯಂತ್ರಣವೆಂದರೆ ಮನಸ್ಸಿನಿಂದ ಉಸಿರಾಟದ ಚಲನವಲನಗಳನ್ನು ಗಮನಿಸುತ್ತಿರುವುದು. ಈ ರೀತಿಯಾದ ವೀಕ್ಷಣೆಯಿಂದ ಕುಂಭಕವು ಲಭ್ಯವಾಗುತ್ತದೆ.

ಯಾರಿಗೆ ಈ ರೀತಿಯಾದ ಕೇವಲ ಕುಂಭಕವನ್ನು( ಉಸಿರಾಟದ ಚಲನವಿಲ್ಲದ ಸ್ಥಿತಿ ಮತ್ತೂ ಮನೋಭಾವನೆ ಇಲ್ಲದೇ ಇರುವ ಈ ಗಮನವೇ ಕೇವಲ ಅರಿವು, ಇದು, ಯಾರಿಗೆ,ಸಾಧ್ಯವಿಲ್ಲವೋ ಅಂತಹವರಿಗೆ ಹಠಯೋಗದ ಮಾರ್ಗವನ್ನು ಹೇಳಲಾಗಿದೆ. ಅಂದರೆ, ಒಂದು ಎಣಿಕೆಯಷ್ಟು ರೆಚಕವನ್ನೂ ಒಂದು ಎಣಿಕೆಯಷ್ಟು ಪೂರಕವನ್ನು ಮತ್ತು ನಾಲ್ಕು ಎಣಿಕೆಗಳ ಕುಂಭಕವನ್ನು ಅಭ್ಯಾಸ ಮಾಡಿದಾಗ ಜೀವಶಕ್ತಿ ಅಥವಾ ಚಲನಶಕ್ತಿಯ ಬಲದಿಂದ ನಾಡಿಗಳು ಶುದ್ಧೀಕರಿಸುತ್ತದೆ. ಯಾವಾಗ ನಾಡಿಗಳು ಶುದ್ಧವಾಗುವುದೋ ಆಗ ಉಸಿರಾಟವು ನಿಯಂತ್ರಣಕ್ಕೆ ಬರುತ್ತದೆ. ಉಸಿರಾಟದ ಪೂರ್ಣ ನಿಯಂತ್ರಣಕ್ಕೆ ಶುದ್ಧ ಕುಂಭಕ ಎನ್ನುತ್ತಾರೆ.

ಜ್ಞಾನಿಗಳಾದರೋ, ನಾನು ದೇಹ ಎಂಬ ಅಭಿಮಾನವನ್ನು ಬಿಡುವುದು ರೇಚಕ ಎಂದೂ, ಆತ್ಮನ ಅನ್ವೇಷಣೆಗೆ ಅಥವಾ ಶೋಧನೆಗೆ ಪೂರಕವೆಂದೂ, ಸಹಜ ಸ್ಥಿತಿಯಲ್ಲಿ ಆತ್ಮನಲ್ಲಿ ನಿಲ್ಲುವುದು ಕುಂಭಕ ಎಂದು ತಿಳಿಯುತ್ತಾರೆ.

ಮಂತ್ರಗಳ ಪುನಶ್ಚರಣೆ ಯಿಂದದಲೂ ಮನಸ್ಸನ್ನು ತಡೆಹಿಡಿಯಬಹುದು. ಆಗ ಮನಸ್ಸು ಮಂತ್ರಮಯವಾಗಿ, ಪ್ರಾಣದಲ್ಲಿ ಒಂದಾಗುತ್ತದೆ. ಮಂತ್ರದ ಉಚ್ಚಾರಣೆಯ ಅಂಶಗಳು ಪ್ರಾಣದಲ್ಲಿ ಲೀನವಾದಾಗ ಅದನ್ನು ಧ್ಯಾನ ಎನ್ನುತ್ತಾರೆ. ಧ್ಯಾನವು ತೀವ್ರವಾಗಿ ಧೃಡವಾದಾಗ ಸಹಜಸ್ಥಿತಿಗೆ ಮಾರ್ಗ ವಾಗುತ್ತದೆ. ಮಹಾಪುರುಷರ ಮತ್ತು ಸಿದ್ಧರುಗಳ ಸಂಘದಲ್ಲಿ ನಿರಂತರವಾಗಿ ಇದ್ದಾಗಲೆಲ್ಲಾ,, ಮನಸ್ಸು ತನ್ನ ಮೂಲದಲ್ಲಿ, ವಿಲೀನ ಗೊಳ್ಳುತ್ತದೆ.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ

ಮನಸ್ಸಿನ ನಿಯಂತ್ರಣ ಎಂಬ ಆರನೆಯ ಅಧ್ಯಾಯವು.