೦೩ ಪ್ರಮುಖ ಕರ್ತವ್ಯಗಳು

ಪ್ರಶ್ನೆ.. ಸಂಸಾರದಲ್ಲಿ ಮನುಷ್ಯನಿಗೆ ಪ್ರಮುಖವಾದ ಕಾರ್ಯ ಅಥವಾ ಕರ್ತವ್ಯ ಯಾವುದು?

ಮಹರ್ಷಿಗಳು. ಮಹತ್ವಾಕಾಂಕ್ಷೆ ಇರುವ ಮನುಷ್ಯ, ತನ್ನ ನಿಜಸ್ವರೂಪವನ್ನು ಕಂಡುಕೊಂಡಾಗ ಅದೇ ಎಲ್ಲವೂ ಕರ್ತವ್ಯವಾಗುತ್ತದೆ. ಕರ್ತವ್ಯದ ಫಲಕ್ಕೆ ಇರುವ ಮೂಲ ಅಂಶ ಇದೇ.

ಪ್ರಶ್ನೆ. ತನ್ನ ನಿಜಸ್ವರೂಪವನ್ನು ಯಾವ ರೀತಿಯಲ್ಲಿ ತಿಳಿಯಬಹುದು? ಇದಕ್ಕಾಗಿ ಯಾವ ರೀತಿಯ ಪ್ರಯತ್ನದ ಅವಶ್ಯಕತೆ ಬೇಕು ಮತ್ತು ಭವ್ಯವಾದ ಮಹೋನ್ನತವಾದ ಅಂತರ್ದರ್ಶನಕ್ಕೆ ದಾರಿ ಯಾವುದು?

ಮಹರ್ಷಿಗಳು. ಕಷ್ಟಪಟ್ಟು ಎಲ್ಲ ಇಂದ್ರಿಯಗಳ ಯೋಚನೆಗಳಿಂದ ದೂರಸರಿದು, ಉದ್ದೇಶ ರಹಿತ ಚಿಂತನೆಯಲ್ಲಿ ಮತ್ತು ಆತ್ಮನ ಚಿಂತನೆಯಲ್ಲಿ ಸ್ಥಿರವಾಗಿ ನಿಲ್ಲಬೇಕು. ಬಹಳ ಸೂಕ್ಷ್ಮವಾಗಿ ಹೇಳಬೇಕಾದರೆ, ನಿಜಸ್ವರೂಪವನ್ನು ತಿಳಿಯಲು ಇದು ಒಂದೇ ದಾರಿ. ಈ ಸ್ವ ಪ್ರಯತ್ನದಿಂದಲೇ ಅಂತರಾತ್ಮದ ಬಗ್ಗೆ,ತಿಳಿಯಲು ಸಾಧ್ಯ.

ಪ್ರಶ್ನೆ.. ಯೋಗದಿಂದ ಸಫಲವಾದ ದಾರಿ ಸಿಗುವವರೆಗೂ ನಿಯಮಗಳು, ಅಧ್ಯಾತ್ಮ ಸಾಧನೆ ಸಹಾಯವಾಗಬಲ್ಲದೇ.

ಮಹರ್ಷಿಗಳು. ನಿಯಮಗಳು ಸಾಧಕರಲ್ಲಿ ಖಂಡಿತವಾಗಿಯೂ ಸಹಾಯಕ್ಕೆ ಬರಬಹುದು. ಇವುಗಳು ಯಶಸ್ಸು ಅಥವಾ ಜಯಗಳಿಸಿದಾಗ ತನ್ನಷ್ಟಕ್ಕೆ ತಾನೇ ಬಿದ್ದು ಹೋಗುತ್ತದೆ. ನಂತರ ಮಾಡಬೇಕಾದದ್ದು ಏನೂ ಇರುವುದಿಲ್ಲ.

ಪ್ರಶ್ನೆ. ಉದ್ದೇಶ ರಹಿತ ಚಿಂತನೆಗಳ ವಿಚಾರಣೆಗಳಿಂದ ದೂರ ಸರಿದಾಗ, ಸಿಗುವ ಆನಂದ ಅಥವಾ ಪರಿಣಾಮ, ಮಂತ್ರಗಳ ಉಚ್ಚಾರಣೆಯಿಂದ ಲಭ್ಯವಾಗ ಬಲ್ಲದೇ.

ಮಹರ್ಷಿಗಳು. ಶ್ರದ್ಧಾವಂತ ಸಾಧಕರು ನಿರಂತರವಾಗಿ ಮತ್ತು ಸ್ಥಿರವಾಗಿ ಮನಸ್ಸನ್ನು ನಿಲ್ಲಿಸಿಕೊಂಡು ಮಂತ್ರ ಜಪ ಅಥವಾ ಪ್ರಣವ ಜಪ ಮಾಡಿದರೆ ಯಶಸ್ಸು ದೊರಕಬಲ್ಲದು. ಮಂತ್ರದ ಉಚ್ಚಾರಣೆ ಅಥವಾ ಪ್ರಣವ ಜಪದಿಂದಲೇ ಮನಸ್ಸನ್ನು ಬಾಹ್ಯ ಕರಣಗಳಿಂದ ಕಳೆದುಕೊಳ್ಳಲು ಸಾಧ್ಯ ಮತ್ತು ಅಂತಹವನಿಗೆ ತನ್ನ ನಿಜಸ್ವರೂಪದಲ್ಲಿ ಅದರ ನೆಲೆಯಲ್ಲಿ ತನ್ನನ್ನು ನಿಲ್ಲಿಸಿಕೊಳ್ಳುವವನು, ಆಗುತ್ತಾನೆ.

ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ ಪ್ರಮುಖ ಕರ್ತವ್ಯ ಎಂಬ ಮೂರನೆಯ ಅಧ್ಯಾಯ.

ನಾಲ್ಕನೆಯ ಅಧ್ಯಾಯ.