೧೯೧೫ ನೆಯ ಚಾತುರ್ಮಾಸದಲ್ಲಿ ರಮಣ ಮಹರ್ಷಿಗಳಿಂದ ಹೊರ ಹೊಮ್ಮಿದ ಈ ವಾಣಿ, ಅವರ ಉಪದೇಶದ ಸಾರ ಸಂಗ್ರಹ.
ನಾನು ನಾನು ಎಂದು ಘೋಷಿಸುತ್ತಿರುವ ಬ್ರಹ್ಮನ್ ಒಬ್ಬನೇ, ನಮ್ಮೆಲ್ಲರ ಹೃದಯದ ಅಂತರಾಳದಲ್ಲಿ ಬೆಳಗುತ್ತಿರುವವನು. ಮನಸ್ಸಿನಿಂದ ಅನ್ವೇಷಣೆ ಮಾಡುತ್ತಲೋ ಅಥವಾ ಹೃದಯದ ತಳಕ್ಕೆ ಮುಳುಗಿಯೋ ಅಥವಾ ವಾಯು ರೋಧನದಿನ್ದಲೋ ಹೃದಯದಲ್ಲಿ ನೆಲೆಸಿರುವ ಆತ್ಮನಲ್ಲಿ ಲೀನನಾಗು.
ವೇದಾಂತದ ಮೂಲ ಮಂತ್ರವಾದ ಈ ರಮಣ ಮಹರ್ಷಿಗಳ ವಾಣಿಯನ್ನು ಯಾರು ತಿಳಿಯ ಬಲ್ಲರೋ, ಅವರಿಗೆ ಎಂದೂ ಅನುಮಾನವು ಬರುವುದೇ ಇಲ್ಲ.
ಪಂಚಭೂತಾತ್ಮಕವಾದ ಈ ದೇಹದಲ್ಲಿ ಆತ್ಮನ ವಾಸಸ್ಥಾನವನ್ನು ಮಹರ್ಷಿಗಳು ತಮ್ಮ ಮೊದಲನೆಯ ಚರಣದಲ್ಲಿ ನಿಖರವಾಗಿ ತಿಳಿಸಿದ್ದಾರೆ. ಅಲ್ಲಿಯೇ, ಆತ್ಮನ ಕುರಿತು ಪರಿಚಯ ಸಮರ್ಥಿಸಿಕೊಂಡಿದೆ. ವಿವಿಧ ರೀತಿಯ ವಿವರಣೆಗಳಿಂದ ತಿಳಿದಿರುವಂತಹ ದೇವರು ಎಂಬವನು ಬ್ರಹ್ಮನಿಂದ ಬೇರೆ ಅಲ್ಲ ಎಂದು ಖಚಿತ ಪಡಿಸಲಾಗಿದೆ.
ಎರಡನೆಯ ಚರಣದಲ್ಲಿ ಮೂರು ವಿಧವಾದ ಮಾರ್ಗಗಳಲ್ಲಿ ಶಿಷ್ಯನು ತೊಡಗಬೇಕಾದ ಆದೇಶಗಳನ್ನು ತಿಳಿಸಿದ್ದರೂ, ಅವೆಲ್ಲವೂ ಮೂಲಭೂತವಾಗಿ ಒಂದೇ ಆಗಿದೆ.
ಮೊದಲನೆಯ ಪಥಕ್ಕೆ ಮಾರ್ಗಣ ಎಂದು ಹೆಸರು. ಎರಡನೆಯದು ಮಜ್ಜನ ಮತ್ತು ಮೂರನೆಯದು ಪ್ರಾಣರೋಧ, ಅಂದರೆ, ಉಸಿರಾಟದ ನಿಯಂತ್ರಣ.
ಇಲ್ಲಿಗೆ. ಶ್ರೀ ರಮಣ ಗೀತೆ ಎಂಬ ಉಪನಿಷತ್ ಸಾರವಾದ ಬ್ರಹ್ನ ವಿದ್ಯೆಯ ಯೋಗ ಶಾಸ್ತ್ರದ. ಶ್ರೀ ರಮಣರ ಮತ್ತು ಶಿಷ್ಯರ. ಸಂವಾದದ. ಕಾವ್ಯ ಕಂಠ ವಸಿಷ್ಠ ಗಣಪತಿ ಮುನಿಗಳಿಂದ ರಚಿತವಾದ ಮೂರು ಪಥಗಳು ಎಂಬ ಎರಡನೆಯ ಅಧ್ಯಾಯ.
ಮೂರನೆಯ ಅದ್ಯಾಯ