ಕಾವ್ಯ ಕಂಠ ಗಣಪತಿ ಮುನಿಗಳು
ಮೂಲ. ಸಂಸ್ಕೃತ
ಕನ್ನಡ ಅನುವಾದ
ರಾಧಾಕೃಷ್ಣನ್ ಗರಣಿ
ರಮಣ ಗೀತಾ
ಮೂಲ .ಗಣಪತಿ ಮುನಿ
ಕನ್ನಡ ಅನುವಾದ
ರಾಧಾೃಷ್ಣನ್ ಗರಣಿ
ವೈಶಾಖ ಶುದ್ಧ ಪೂರ್ಣಿಮ
೨೬.೦೫.೨೦೨೧
ಈ ಪುಸ್ತಕವು ವ್ಯಾಸಂಗಕ್ಕೆ ಮಾತ್ರ ಸಿದ್ಧಪಡಿಸಿದೆ. ಯಾವ ವ್ಯಾಪಾರಕ್ಕೆ ಅಲ್ಲ. ಇದು ಅಂತಿರಕ ಉಪಯೋಗಕ್ಕೆ ಸೀಮಿತ
ವಿಷಯ ಸೂಚಿ
ಅಧ್ಯಾಯ-1 ಉಪಾಸನೆಯ ಮಹತ್ವ
ಅಧ್ಯಾಯ-2 ಮೂರು ಪಥಗಳು
ಅಧ್ಯಾಯ-3 ಪ್ರಮುಖ ಕರ್ತವ್ಯಗಳು
ಅಧ್ಯಾಯ-4 ಜ್ಞಾನದ ಪ್ರಕೃತಿ ಮತ್ತು ಸ್ವಭಾವ
ಅಧ್ಯಾಯ-5 ಹೃದಯ ವಿಜ್ಞಾ
ಅಧ್ಯಾಯ-6 ಮನಸ್ಸಿನ ನಿಯಂತ್ರಣ
ಅಧ್ಯಾಯ-7 ಆತ್ಮ ತತ್ವದ ವಿಚಾರಣೆ ಅರ್ಹತೆ ಮತ್ತು . ಘಟಕಗಳು
ಅಧ್ಯಾಯ 8 ಜೀವನದ ವಿವಿಧ ಹಂತಗಳು
ಅಧ್ಯಾಯ 9 ಹೃದಯ ಗ್ರಂಥಿ ಭೇದನೆ
ಅಧ್ಯಾಯ 10 ಸಮಾಜ
ಅಧ್ಯಾಯ 11 ಜ್ಞಾನ ಮತ್ತು ಸಿದ್ಧಿಯ ಹೋಲಿಕೆಗಳು
ಅಧ್ಯಾಯ 12 ಶಕ್ತಿಯ ವಿವರಣೆ
ಅಧ್ಯಾಯ 13 ಸನ್ಯಾಸಕ್ಕೆ ಸ್ತ್ರೀಯರ ಅರ್ಹತೆ
ಅಧ್ಯಾಯ 14 ಜೀವನ್ ಮುಕ್ತಿ
ಅಧ್ಯಾಯ 15 ಶ್ರವಣ ಮನನ ನಿಧಿಧ್ಯಾಸನ
ಅಧ್ಯಾಯ 16 ಭಕ್ತಿ ಮತ್ತು ಅದರ ವಿಶ್ಲೇಷಣೆ
ಅಧ್ಯಾಯ 17 ಜ್ಞಾನದ ಸಾಧನೆ
ಅಧ್ಯಾಯ 18 ಸಿದ್ದರುಗಳ ವೈಭವ
ಅನುಬಂಧ 1 ಮಂತ್ರದ ನಿರೂಪಣೆ
ಅನುಬಂಧ-2 ಪ್ರಶ್ನೆ ಕೇಳಿದ ಶಿಷ್ಯರ ಹೆಸರುಗಳು
ರಮಣ ಗೀತಾ,ಹದಿನೆಂಟು ಅಧ್ಯಾಯಗಳ ಕಾವ್ಯಕಂಠ ಗಣಪತಿ ಮುನಿಗಳ ಅಮೋಘವಾದ ಕೃತಿ. ಮುನಿಗಳ ಆಪ್ತ ಶಿಷ್ಯರುಗಳು ಮತ್ತು ಅವರ ನಿಕಟವರ್ತಿಗಳಿಂದ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಶ್ರೀರಮಣ ಮಹರ್ಷಿಗಳಿಂದ ಪಡೆದ ಉತ್ತಮ ಸಂದೇಶಗಳು.
೧೯೧೩ ರಿಂದ ೧೯೧೭ ರವರೆಗೆ ರಮಣರು, ಅರುಣಾಚಲ ಬೆಟ್ಟದ ವಿರೂಪಾಕ್ಷ ಗುಹೆಯಲ್ಲಿ ಏಕಾಂತದಲ್ಲಿ ಇದ್ದಾಗ, ಬೇರೆ ಬೇರೆ ಸಂಧರ್ಭಗಳಲ್ಲಿ,, ಬೇರೆ ಬೇರೆ ಭಕ್ತರ ಸಮೂಹದಲ್ಲಿ, ಅವರ ಪ್ರಶ್ನೆಗಳಿಗೆ ಕರುಣಿಸಿದ, ಸಂದೇಶಗಳು. ಇವು, ಬ್ರಹ್ಮಸೂತ್ರದ ಸಾರದಂತೆ, ಸಣ್ಣ ಸಣ್ಣ ಉಪದೇಶಗಳು. ಇದರಿಂದ, ಜ್ಞಾನ ಭಕ್ತಿ ಕರ್ಮ ಮತ್ತು ರಾಜಯೋಗಗಳು ಬೆಳಕಿಗೆ ಬರುತ್ತವೆ.
ಅತ್ಯಂತ ಮೃದು ಸ್ವಭಾವದವರೂ ಮತ್ತು ಮಿತಭಾಷಿಗಳೂ ಆದ ಮಹರ್ಷಿಗಳು, ಅವರ ಕೋರಿಕೆಗಳಿಗೆ ಸೂಕ್ತ ವಿವರಣೆ ಯನ್ನು ಕರುಣಿಸಿದರು. ಇದನ್ನು ಹದಿನೆಂಟು ಅಧ್ಯಾಯಗಳಾಗಿ ವಿಂಗಡಿಸಿ ಸಂಸ್ಕೃತ ಭಾಷೆಯಲ್ಲಿ ರಚಿಸಿದ ಮಹಾನ್ ವ್ಯಕ್ತಿಯೇ ಕಾವ್ಯಕಂಠ ಗಣಪತಿ ಮುನಿಗಳು.
ಈಶ್ವರನ ಅವತಾರವೆಂದೇ ಪ್ರಸಿದ್ಧರಾದ ಮತ್ತು ಪರಾಶರ ವಂಶದಲ್ಲಿ ಜನಿಸಿದ ರಮಣ ಮಹರ್ಷಿಗಳ ನಿರೂಪಣೆ, ಸ್ವಯಂ ಈಶ್ವರನಿಂದಲೇ ಬಂದಂತಹ ಮುತ್ತುರತ್ನಗಳು. ಬಹಳಷ್ಟು ತೊಡಕಾದ, ಉತ್ತರಿಸಲು ಆಗದಂತಹ ಪ್ರಶ್ನೆಗಳಿಗೆ ಸೂಕ್ತ ಸಲಹೆಯಿಂದ ಗೊಂದಲವನ್ನು ನಿವಾರಣೆ ಮಾಡಿದ ಮಹಾನ್ ವ್ಯಕ್ತಿ, ಶ್ರೀ ರಮಣರು.
ಮುಮುಕ್ಷುಗಳಲ್ಲಿ ಇಂತಹ ಅನೇಕ ಸಂಶಯಗಳು ತೋರಿಕೊಂಡು ಸಾಧನೆಯ ಪಥದಲ್ಲಿ ತೊಡಕು ಉಂಟಾದಾಗ, ರಮಣರ ನುಡಿಗಳು ಅವುಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ.
ಅತ್ಯಂತ ಗಹನ ಮತ್ತು ಸ್ಥಿರವಾದ ಸಲಹೆ ಮತ್ತು ಸಂಶಯ ರಹಿತವಾದ ರಮಣ ಮಹರ್ಷಿಗಳ ನುಡಿಗಳು ಬಹಳ ಉಪಕಾರಿ. ಕಾವ್ಯಕಂಠಮುನಿಗಳ ಈ ಪ್ರಯತ್ನದಿಂದ ಎಲ್ಲರ ಸಾಧನೆ ಸುಗಮವಾಗಿ ನೆರವಾಗಲಿ ಎಂದು ಪ್ರಾರ್ಥಿಸಿ ಅವರಿಗೆ ನಮ್ಮ ನಮನಗಳನ್ನು ಅರ್ಪಿಸೋಣ.
ಬರಹವನ್ನು ಬಹಳ ಸುಲಭವಾಗಿ ತಿಳಿಸುವ ಸಲುವಾಗಿ ಶಿಷ್ಯರ ಹೆಸರುಗಳು ಮತ್ತು ಮಿಕ್ಕ ವಿವರಗಳನ್ನು ಬದಿಗಿಟ್ಟು(ಅನುಬಂಧ 2) ಶಿಷ್ಯನ ಪ್ರಶ್ನೆ ಮತ್ತು ಮಹರ್ಷಿಗಳ ಉತ್ತರವನ್ನು ಮಾತ್ರ ತೆಗೆದುಕೊಂಡು ತಿರುಳನ್ನು ತಲುಪಿಸುವ ಸಾಹಸವನ್ನು ಮಾಡಿದ್ದೇನೆ. ಎಲ್ಲರಿಗೂ ಇದು ಒಪ್ಪಿಗೆ ಎಂದು ನಂಬಿದ್ದೇನೆ. ನನ್ನ ಸ್ನೇಹಿತರ ಸಹಕಾರ ಮತ್ತು ಪ್ರಚೋದನೆ,ಮತ್ತು ಈ ಮಹಾನ್ ಕಾರ್ಯವನ್ನು ಸುಲಭವಾಗಿಸಿದ ಶ್ರೀರಮಣರ ಆಶೀರ್ವಾದಗಳು ನನಗೆ ಸದಾ ಇರಲಿ ಎಂಬ ಆಶಯದಿಂದ ನಾಲ್ಕು ಮಾತು ಗಳನ್ನು ಈ ಪ್ರಸ್ತಾವನೆಯಲ್ಲಿ ತಿಳಿಸುತ್ತಿದ್ದೇನೆ.
ಓಂ ಶಾಂತಿಃ ಶಾಂತಿಃ ಶಾಂತಿಃ