+ಗೀತಾ ಮಣಿ ಮಾಲೆ

ಮೂಲ ಪ್ರತಿ

ರಮಣ ಆಶ್ರಮ.

ತಿರುವಣ್ಣಾಮಲೈ

ಕನ್ನಡ

ಭಾವಾರ್ಥದೊಂದಿಗೆ

ರಾಧಾಕಷ್ಣನ್ ಗರಣಿ

ಗೀತಾ ಮಣಿ ಮಾಲೆ

ಭಗವಾನ್ ರಮಣ ಮಹರ್ಷಿ

ವೈಶಾಖ ಕೃಷ್ಣ ಏಕಾದಶಿ ೨೦೨೧

೦೫-೦೬-೨೦೩೧

ಕನ್ನಡಕ್ಕೆ

ರಾಧಾಕೃಷ್ಣನ್ ಗರಣಿ

ಈ ಪುಸ್ತಕವು ಅಧ್ಯಯನಕ್ಕೆ ಸೀಮಿತ.

ಯಾವ ರೀತಿಯ ವ್ಯಾಪಾರಕ್ಕಾಗಿ ಅಲ್ಲ

ಮತ್ತು ಖಾಸಗಿ ಉಪಯೋಗಕ್ಕೆ ಮಾತ್ರ ಸಿದ್ಧಪಡಿಸಿದೆ

ಬಹೂನಾಂ ಜನ್ಮನಾಮಂತೇ ಜ್ಞಾನವಾನ್ ಮಾಂ ಪ್ರಪದ್ಯತೇ ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ||

ಅನೇಕ ಜನ್ಮಗಳ ಕೊನೆಯಲ್ಲಿ ಜ್ಞಾನ ಸುದ್ದಿಯನ್ನು ಹೊಂದಿದವನು ನನ್ನನ್ನು ಪಡೆಯುವನು. ವಾಸುದೇವ ನೇ ಸರ್ವಸ್ವ ಎಂದು ತಿಳಿದ ಶುದ್ಧ ಮನಸ್ಸುಳ್ಳ ಮಹಾತ್ಮನು ಸಿಗುವುದು ದುರ್ಲಭ

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||

ಎಲ್ಲಾ ಅನಾತ್ಮ ಧರ್ಮಗಳನ್ನು ತ್ಯಜಿಸಿ ಕೇವಲ ನನಗೆ ಶರಣಾಗು. ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತೇನೆ. ಶೋಕಿಸಬೇಡ

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋ„ಸಿ ಮೇ ||

ನನ್ನನ್ನು ಚಿಂತಿಸು, ನನ್ನ ಭಕ್ತನಾಗು, ನನ್ನನ್ನು ಆರಾಧಿಸು, ನನಗೆ ನಮಸ್ಕರಿಸು. ಆಗ ಖಂಡಿತವಾಗಿಯೂ ನನ್ನಲ್ಲಿಗೆ ಬರುವೆ. ನನಗೆ ಪ್ರಿಯನಾದ್ದರಿಂದ ನಿನಗೆ ಈ ಭರವಸೆಯನ್ನು ಕೊಡುತ್ತೇನೆ

ಈಶ್ವರನ ಅವತಾರ ಸ್ವರೂಪರಾದ ಭಗವಾನ್ ರಮಣಮಹರ್ಷಿಗಳ ಪಾದಾರವಿಂದಗಳಲ್ಲಿ ಸಮರ್ಪಿತ