शृङ्गेरि-कुडलि-विवादः

शृङ्गेरि-दृष्टिः

  • शाखामठो हि कुडलि-संस्थानं नाम।

कुडलि-दृष्टिः

  • The non-kuDali shRngeri pITha is the original pITha.
  • senior pIThAdhipati returning from a tour, was diverted to kuDali - even the junior pIThAdhipati followed.
  • shRngeri was in the meantime taken over by a scholar with pustaka-sannyAsa.

न शाखा-मठः

1972ರಲ್ಲಿ ಶ್ರೀ ಅಭಿನವ ವಿದ್ಯಾತೀರ್ಥರು ಕೂಡಲಿ ಗೆ ಬಂದು ಕೂಡಲಿ ಸಂಸ್ಥಾನದ 69 ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ನರಸಿಂಹ ಭಾರತಿಗಳಿಗೆ ಪಟ್ಟಾಭಿಷೇಕ ಮಾಡಿದರು. ಆ ಕಾರಣಕ್ಕೆ ಕೂಡಲಿಯು ಶೃಂಗೇರಿಯ ಶಾಖಾ ಮಠ ಅನ್ನುವುದು ಶೃಂಗೇರಿ ಮಠದ ಭಕ್ತರ ವಾದ.

ಹೊಸಪೇಟೆ ಯಲ್ಲಿ ಇದ್ದ ಶ್ರೀನಿವಾಸ ಸದಾನಂದ ಚಿಂತಾಮಣಿ ಸ್ವಾಮಿಗಳಿಗೆ ಈಗಾಗಲೇ ಸನ್ಯಾಸ ದೀಕ್ಷೆ ಆಗಿತ್ತು. ಕೂಡಲಿಗೆ ಅವರು ಬಂದ ಮೇಲೆ ಕೇವಲ ವಿದ್ಯಾಭಿನವ ನರಸಿಂಹ ಭಾರತೀ ಎಂದು ಹೆಸರು ಬದಲಾವಣೆ ಆಗಿದೆ, ಅದೂ ಕೂಡ ಕಾನೂನು ಮೂಲಕ.

ಅಭಿನವ ವಿದ್ಯಾತೀರ್ಥರು 1972ರಲ್ಲಿ ಧಾರವಾಡದ ಶಾಸ್ತ್ರಿಗಳ ಆಗ್ರಹದಿಂದ ಕೇವಲ ಅತಿಥಿಯಾಗಿ ಕೂಡಲಿಗೆ ಬಂದು ಹೋಗಿದ್ದಾರೆ.

ಅದೂ ಕೂಡ ತಮ್ಮಿಂದ ಕೂಡಲಿ ಸ್ವಾಮಿಗಳು ಉಪದೇಶ ಪಡೆಯಲಿಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಕಾರ್ಯಕ್ರಮದ ಮಧ್ಯದಲ್ಲಿಯೇ ಮರಳಿ ಹೋಗಿದ್ದಾರೆ.

ಹಾಗಿರುವಾಗ, ಅವರ ಕೈಯಿಂದ ಕೂಡಲಿ ಸ್ವಾಮಿಗಳಿಗೆ ಪಟ್ಟಾಭಿಷೇಕ ಆಯ್ತು ಅನ್ನುವುದು ಹಾಸ್ಯಾಸ್ಪದ. ಪ್ರತ್ಯಕ್ಷ ದರ್ಶಿಗಳು ಇನ್ನೂ ಬದುಕಿದ್ದಾರೆ.

ಇನ್ನು, ಅಭಿನವ ವಿದ್ಯಾತೀರ್ಥರು ಕೂಡಲಿಗೆ ಬಂದಾಗ, ಪಟ್ಟಾಭಿಷೇಕದ ಹಿಂದಿನ ದಿನ ಕೂಡಲಿ ಸ್ವಾಮಿಗಳ ಜೊತೆಗೆ ಅವರಿಗೂ ಅಡ್ಡಪಲ್ಲಕ್ಕಿ ಉತ್ಸವ ನಡೆದಿತ್ತು.

ಕೂಡಲಿಯು ಶೃಂಗೇರಿಯ ಶಿಷ್ಯಮಠ ಅಂತಾದರೆ, ಶಿಷ್ಯ ಮಠದ ಶಿಷ್ಯ-ಸ್ವಾಮಿಗೆ ಸಮಾನವಾಗಿ ವಿದ್ಯಾತೀರ್ಥರು ಪಲ್ಲಕ್ಕಿಯಲ್ಲಿ ಕುಳಿತದ್ದೇಕೆ?

ಸಮಾನ ಸ್ಥಾನಮಾನ ಇದ್ದ ಕಾರಣಕ್ಕೆ ಹಾಗೆ ಮಾಡಿದ್ದಲ್ಲವೇ?

ಶಾಖಾ ಮಠಕ್ಕೆ ಸಮಾನ ಸ್ಥಾನ ಹೇಗೆ ಬರುತ್ತದೆ ?