११८ अग्निदेवेन लङ्कागमनम्

वाचनम्
ಭಾಗಸೂಚನಾ

ಅಗ್ನಿಯು ಸೀತಾದೇವಿಯನ್ನೆತ್ತಿಕೊಂಡು ಚಿತೆಯಿಂದ ಹೊರಬಂದು ಶ್ರೀರಾಮನಿಗೆ ಒಪ್ಪಿಸುತ್ತಾ ಸೀತೆಯು ಮಹಾಪತಿವ್ರತೆಯೆಂಬುದನ್ನು ಪ್ರತಿಪಾದಿಸಿದುದು, ಹರ್ಷದಿಂದ ಶ್ರೀರಾಮನು ಸೀತೆಯನ್ನು ಸ್ವೀಕರಿಸಿದುದು

ಮೂಲಮ್ - 1

ಏತಚ್ಛ್ರುತ್ವಾ ಶುಭಂ ವಾಕ್ಯಂ ಪಿತಾಮಹಸಮೀರಿತಮ್ ।
ಅಂಕೇನಾದಾಯ ವೈದೇಹೀಮುತ್ಪಪಾತ ವಿಭಾವಸುಃ ॥

ಅನುವಾದ

ಬ್ರಹ್ಮದೇವರು ಹೇಳಿದ ಶುಕರವಾದ ಮಾತುಗಳನ್ನು ಕೇಳಿ ಅಗ್ನಿದೇವನು ಸೀತಾದೇವಿಯನ್ನು (ತಂದೆಯಂತೆ) ತೊಡೆಯಲ್ಲಿ ಕುಳ್ಳಿರಿಸಿಕೊಂಡು ಚಿತೆಯಿಂದ ಮೇಲೆದ್ದು ಬಂದನು.॥1॥

ಮೂಲಮ್ - 2

ವಿಧೂಯಾಥ ಚಿತಾಂ ತಾಂ ತು ವೈದೇಹೀಂ ಹವ್ಯವಾಹನಃ ।
ಉತ್ತಸ್ಥೌ ಮೂರ್ತಿಮಾನಾಶು ಗೃಹೀತ್ವಾ ಜನಕಾತ್ಮಜಾಮ್ ॥

ಅನುವಾದ

ಚಿತೆಯನ್ನು ಅತ್ತಲಿತ್ತಸರಿಸಿ ದಿವ್ಯರೂಪಧಾರೀ ಹವ್ಯವಾಹನ ಅಗ್ನಿದೇವನು ಸೀತೆಯನ್ನೆತ್ತಿಕೊಂಡು ಹೊರ ಬಂದು ಶ್ರೀರಾಮನ ಸನಿಹದಲ್ಲೇ ನಿಂತುಕೊಂಡನು.॥2॥

ಮೂಲಮ್ - 3

ತರುಣಾದಿತ್ಯ ಸಂಕಾಶಾಂ ತಪ್ತಕಾಂಚನಭೂಷಣಾಮ್ ।
ರಕ್ತಾಂಬರಧರಾಂ ಬಾಲಾಂ ನೀಲಕುಂಚಿತಮೂರ್ಧಜಾಮ್ ॥

ಮೂಲಮ್ - 4

ಅಕ್ಲಿಷ್ಟ ಮಾಲ್ಯಾಭರಣಾಂ ತಥಾರೂಪಾಮನಿಂದಿತಾಮ್ ।
ದದೌ ರಾಮಾಯ ವೈದೇಹೀಮಂಕೇ ಕೃತ್ವಾ ವಿಭಾವಸುಃ ॥

ಅನುವಾದ

ಬಾಲಸೂರ್ಯನಂತೆ ನಸುಗೆಂಪಾದ ಕಾಂತಿಯಿಂದ ಪ್ರಕಾಶಿಸುತ್ತಾ, ಪುಟಕ್ಕೆ ಹಾಕಿದ ಚಿನ್ನದ ಒಡವೆಗಳಿಂದ ಭೂಷಿತಳಾಗಿದ್ದ, ಕೆಂಪಾದ ರೇಶ್ಮೆಯ ಸೀರೆಯನ್ನುಟ್ಟಿದ್ದ, ಕಪ್ಪಾದ ಗುಂಗುರು ಕೇಶರಾಶಿಯಿಂದ ಸುಶೋಭಿತಳಾದ, ಅಗ್ನಿಯಿಂದ ಬಾಡದ ಪುಷ್ಪಹಾರಗಳನ್ನು ಧರಿಸಿದ್ದ, ಅಗ್ನಿಯನ್ನು ಪ್ರವೇಶಿಸುವ ಮೊದಲು ಇದ್ದ ದಿವ್ಯರೂಪವನ್ನೇ ಹೊಂದಿದ್ದ, ಅನಿಂದ್ಯಳಾದ ವೈದೇಹಿಯನ್ನು ಅಗ್ನಿದೇವನು ತೊಡೆಯಿಂದ ಇಳಿಸಿ ಶ್ರೀರಾಮನಿಗೊಪ್ಪಿಸಿದನು.॥3-4॥

ಮೂಲಮ್ - 5

ಅಬ್ರವೀತ್ತು ತದಾ ರಾಮಂ ಸಾಕ್ಷೀಲೋಕಸ್ಯ ಪಾವಕಃ ।
ಏಷಾ ತೇ ರಾಮ ವೈದೇಹೀ ಪಾಪಮಸ್ಯಾಂ ನ ವಿದ್ಯತೇ ॥

ಅನುವಾದ

ಆಗ ಲೋಕಸಾಕ್ಷೀ ಅಗ್ನಿಯು ಶ್ರೀರಾಮನಿಗೆ ಹೇಳಿದನು- ಶ್ರೀರಾಮಾ! ಇವಳು ನಿನ್ನ ಧರ್ಮಪತ್ನೀ ವಿದೇಹರಾಜ ಕುಮಾರಿ ಸೀತೆಯು ಈಕೆಯಲ್ಲಿ ಯಾವುದೇ ಪಾಪ ದೋಷಗಳಿಲ್ಲ.॥5॥

ಮೂಲಮ್ - 6

ನೈವ್ಯವಾಚಾ ನ ಮನಸಾ ನೈವ ಬುದ್ಧ್ಯಾ ನ ಚಕ್ಷುಷಾ ।
ಸುವೃತ್ತಾ ವೃತ್ತಶೌಟೀರ್ಯಂ ನ ತ್ವಾಮತ್ಯಚರಚ್ಛುಭಾ ॥

ಅನುವಾದ

ಉತ್ತಮ ಆಚಾರವುಳ್ಳ ಈ ಶುಭಲಕ್ಷಣೆ ಸೀತೆಯು ಮನ, ವಚನ, ಬುದ್ಧಿ ಅಥವಾ ನೇತ್ರಗಳಿಂದಲೂ ಕೂಡ ನೀನಲ್ಲದೆ ಬೇರೆ ಪುರುಷನನ್ನು ಆಶ್ರಯಿಸಲಿಲ್ಲ. ಇವಳು ಸದಾಚಾರ ಪರಾಯಣ ನಿನ್ನನ್ನೇ ಆರಾಧಿಸಿರುವಳು.॥6॥

ಮೂಲಮ್ - 7

ರಾವಣೇನಾಪನೀತೈಷಾ ವೀರ್ಯೋತ್ಸಿಕ್ತೇನ ರಕ್ಷಸಾ ।
ತ್ವಯಾ ವಿರಹಿತಾ ದೀನಾ ವಿವಶಾ ನಿರ್ಜನೇ ಸತೀ ॥

ಅನುವಾದ

ತನ್ನ ಬಲ-ಗರ್ವ ಪರಾಕ್ರಮ ಹೊಂದಿದ್ದ ರಾವಣನು ಇವಳನನ್ನು ಅಪಹರಿಸಿದಾಗ ಈ ಬಡಪಾಯಿ ಸತೀ ಬರಿದಾದ ಆಶ್ರಮದಲ್ಲಿ ಒಬ್ಬಂಟಿಗಳಾಗಿದ್ದಳು. ನೀನು ಈಕೆಯ ಬಳಿ ಇರಲಿಲ್ಲ; ಆದ್ದರಿಂದ ಇವಳು ವಿವಶಳಾಗಿದ್ದಳು.॥7॥

ಮೂಲಮ್ - 8

ಕ್ರುದ್ಧಾ ಚಾಂತಃ ಪುರೇ ಗುಪ್ತಾ ತ್ವಚ್ಚಿತ್ತಾ ತ್ವತ್ಪರಾಯಣಾ ।
ರಕ್ಷಿತಾ ರಾಕ್ಷಸೀಭಿಶ್ಚ ಘೋರಾಭಿರ್ಘೋರಬುದ್ಧಿಭಿಃ ॥

ಅನುವಾದ

ರಾವಣನು ಈಕೆಯನ್ನು ಕದ್ದೊಯ್ದು ತನ್ನ ಅಂತಃ ಪುರದಲ್ಲಿ ಬಂಧಿಸಿಟ್ಟು, ಭಯಾನಕ ವಿಚಾರವುಳ್ಳ ಭೀಷಣ ರಾಕ್ಷಸಿಯರು ಇವಳನ್ನು ಕಾವಲು ಕಾಯುತ್ತಿದ್ದರು. ಆಗಲೂ ಕೂಡ ಇವಳ ಚಿತ್ತವು ನಿನ್ನಲ್ಲೇ ತೊಡಗಿತ್ತು. ಈಕೆ ನಿನ್ನನ್ನೇ ಪರಮಾಶ್ರಯನೆಂದು ತಿಳಿಯುತ್ತಿದ್ದಳು.॥8॥

ಮೂಲಮ್ - 9

ಪ್ರಲೋಭ್ಯಮಾನಾ ವಿವಿಧಂ ತರ್ಜ್ಯಮಾನಾ ಚ ಮೈಥಿಲೀ ।
ನಾಚಿಂತಯತ ತದ್ರಕ್ಷಸ್ತ್ವದ್ಗತೇನಾಂತರಾತ್ಮನಾ ॥

ಅನುವಾದ

ಅನಂತರ ಬಗೆ ಬಗೆಯ ಆಮಿಷ ಒಡ್ಡಲಾಯಿತು. ಇವಳನ್ನು ಗದರಿಸಿಯೂ ಆಯಿತು. ಆದರೂ ಈಕೆಯ ಅಂತರಾತ್ಮಾ ನಿರಂತರ ನಿನ್ನ ಚಿಂತನದಲ್ಲೇ ತೊಡಗಿತ್ತು. ಇವಳು ಆ ರಾಕ್ಷಸ ವಿಷಯದಲ್ಲಿ ಒಮ್ಮೆಯೂ ಯೋಚಿಸಲಿಲ್ಲ.॥9॥

ಮೂಲಮ್ - 10

ವಿಶುದ್ಧ ಭಾವಾಂ ನಿಷ್ಪಾಪಾಂ ಪ್ರತಿಗೃಹ್ಣೀಷ್ವ ಮೈಥಿಲೀಮ್ ।
ನ ಕಿಂಚಿದಭಿಧಾತವ್ಯಾ ಅಹಮಾಜ್ಞಾಪಯಾಮಿ ತೇ ॥

ಅನುವಾದ

ಆದ್ದರಿಂದ ಇವಳ ಭಾವ ಸರ್ವಥಾ ಶುದ್ಧವಾಗಿದ. ಈ ಮೈಥಿಲಿಯು ಸರ್ವಥಾ ನಿಷ್ಪಾಪಳಾಗಿದ್ದಾಳೆ. ನೀನು ಇವಳನ್ನು ಆದರದಿಂದ ಸ್ವೀಕರಿಸಿ. ನೀನು ಈಕೆಯಲ್ಲಿ ಎಂದೂ ಕಠೋರವಾಗಿ ಮಾತನಾಡಬೇಡ. ಇದು ನನ್ನ ಆಜ್ಞೆಯಾಗಿದೆ.॥10॥

ಮೂಲಮ್ - 11

ತತಃ ಪ್ರೀತಮನಾರಾಮಃ ಶ್ರುತ್ವೈವಂ ವದತಾಂ ವರಃ ।
ದಧ್ಯೌ ಮುಹೂರ್ತಂ ಧರ್ಮಾತ್ಮಾಷ್ಪವ್ಯಾಕುಲಲೋಚನಃ ॥

ಅನುವಾದ

ಅಗ್ನಿದೇವನ ಈ ಮಾತನ್ನು ಕೇಳಿ ವಾಗ್ಮಿಗಳಲ್ಲಿ ಶ್ರೇಷ್ಠನಾದ ಧರ್ಮಾತ್ಮಾ ಶ್ರೀರಾಮನ ಮನಸ್ಸು ಪ್ರಸನ್ನ ವಾಯಿತು. ಅವನ ಕಣ್ಣುಗಳಿಂದ ಆನಂದಾಶ್ರುಗಳು ಹರಿದವು. ಅವನು ಸ್ವಲ್ಪಹೊತ್ತು ವಿಚಾರಮಗ್ನನಾದನು.॥11॥

ಮೂಲಮ್ - 12

ಏವಮುಕ್ತೋ ಮಹಾತೇಜಾ ದ್ಯುತಿಮಾನುರುವಿಕ್ರಮಃ ।
ಉವಾಚತ್ರಿ ದಶಶ್ರೇಷ್ಠಂ ರಾಮೋ ಧರ್ಮಭೃತಾಂ ವರಃ ॥

ಅನುವಾದ

ಅನಂತರ ಮಹಾತೇಜಸ್ವೀ, ಧೈರ್ಯವಂತ, ಮಹಾಪರಾಕ್ರಮಿ, ಧರ್ಮಾತ್ಮರಲ್ಲಿ ಶ್ರೇಷ್ಠ ಶ್ರೀರಾಮನು ದೇವಶ್ರೇಷ್ಠ ಅಗ್ನಿಯ ಮಾತಿಗೆ ಉತ್ತರವಾಗಿ ನುಡಿದನು .॥12॥

ಮೂಲಮ್ - 13

ಅವಶ್ಯಂ ಚಾಪಿ ಲೋಕೇಷು ಸೀತಾಪಾವನಮರ್ಹತಿ ।
ದೀರ್ಘಕಾಲೋಷಿತಾ ಹೀಯಂ ರಾವಣಾಂತಃಪುರೇ ಶುಭಾ ॥

ಅನುವಾದ

ಭಗವನ್! ಜನರಲ್ಲಿ ಸೀತೆಯ ಪವಿತ್ರತೆಯ ವಿಶ್ವಾಸ ಉಂಟಾಗಲು ಇವಳ ಈ ಶುದ್ಧಿವಿಷಯಕ ಪರೀಕ್ಷೆ ಆವಶ್ಯಕವಾಗಿತ್ತು; ಏಕೆಂದರೆ ಶುಭಲಕ್ಷಣೆ ಸೀತೆಯು ವಿವಶಳಾಗಿ ಹೆಚ್ಚುದಿನ ರಾವಣನ ಅಂತಃಪುರದಲ್ಲಿದ್ದಳು.॥13॥

ಮೂಲಮ್ - 14

ಬಾಲಿಶೋಬತ ಕಾಮಾತ್ಮಾ ರಾಮೋ ದಶರಥಾತ್ಮಜಃ ।
ಇತಿ ವಕ್ಷ್ಯಂತಿ ಮಾಂ ಲೋಕೋ ಜಾನಕೀಮವಿಶೋಧ್ಯ ಹಿ ॥

ಅನುವಾದ

ನಾನು ಜನಕನಂದಿನಿಯ ಶುದ್ಧಿಯ ವಿಷಯದಲ್ಲಿ ಪರೀಕ್ಷಿಸದಿದ್ದರೆ ಜನರು-ದಶರಥಪುತ್ರ ರಾಮನು ಬಹಳ ಮೂರ್ಖ ಮತ್ತು ಕಾಮುಕನಾಗಿದ್ದಾನೆ ಎಂದು ಹೇಳುವರು.॥14॥

ಮೂಲಮ್ - 15

ಅನನ್ಯ ಹೃದಯಾಂ ಸೀತಾಂ ಮಚ್ಚಿತ್ತ ಪರಿರಕ್ಷಿಣೀಮ್ ।
ಅಹಮಪ್ಯವಗಚ್ಛಾಮಿ ಮೈಥಿಲೀಂ ಜನಕಾತ್ಮಜಾಮ್ ॥

ಅನುವಾದ

ಮಿಥಿಲೇಶನಂದಿನೀ ಜನಕಕುಮಾರಿಯ ಹೃದಯ ಸದಾ ನನ್ನಲ್ಲೇ ತೊಡಗಿತ್ತು. ನನ್ನಿಂದ ಎಂದೂ ಬೇರೆಯಾಗುತ್ತಿರಲಿಲ್ಲ. ಇವಳು ಸದಾ ನನ್ನಲ್ಲೇ ಮನವಿರಿಸಿದ್ದಳು, ನನ್ನ ಇಚ್ಛೆಗನುಸಾರವೇ ನಡೆಯುತ್ತಿದ್ದಳು ಎಂಬುದು ನಾನು ಬಲ್ಲೆನು.॥15॥

ಮೂಲಮ್ - 16

ಇಮಾಮಪಿ ವಿಶಾಲಾಕ್ಷೀಂ ರಕ್ಷಿತಾಂ ಸ್ವೇನ ತೇಜಸಾ ।
ರಾವಣೋ ನಾತಿವರ್ತೇತ ವೇಲಾಮಿವ ಮಹೋದಧಿಃ ॥

ಅನುವಾದ

ಮಹಾಸಾಗರವು ತನ್ನ ಮೇರೆ ಹೇಗೆ ಮೀರಿವುದಿಲ್ಲವೋ, ಹಾಗೆಯೇ ರಾವಣನು ತನ್ನ ತೇಜದಿಂದ ಸುರಕ್ಷಿತಳಾದ ಈ ವಿಶಾಲ ಲೋಚನೆ ಸೀತೆಯಮೇಲೆ ಅತ್ಯಾಚಾರ ಮಾಡಲಾರ ಎಂಬ ವಿಶ್ವಾಸವೂ ನನಗಿದೆ.॥16॥

ಮೂಲಮ್ - 17

ಪ್ರತ್ಯಯಾರ್ಥಂ ತು ಲೋಕಾನಾಂ ತ್ರಯಾಣಾಂ ಸತ್ಯಸಂಶ್ರಯಃ ।
ಉಪೇಕ್ಷೇ ಚಾಪಿ ವೈದೇಹೀಂ ಪ್ರವಿಶಂತೀಂ ಹುತಾಶನಮ್ ॥

ಅನುವಾದ

ಹೀಗಿದ್ದರೂ ಮೂರು ಲೋಕದ ಪ್ರಾಣಿಗಳ ಮನಸ್ಸಿನಲ್ಲಿ ವಿಶ್ವಾಸ ಉಂಟುಮಾಡಲು, ಏಕಮಾತ್ರ ಸತ್ಯವನ್ನು ಆಶ್ರಯಿಸಿ ಅಗ್ನಿಪ್ರವೇಶ ಮಾಡುತ್ತಿರುವ ವಿದೇಹಕುಮಾರಿ ಸೀತೆಯನ್ನು ನಾನು ತಡೆಯುವ ಪ್ರಯತ್ನಮಾಡಲಿಲ್ಲ.॥17॥

ಮೂಲಮ್ - 18

ನ ಹಿ ಶಕ್ತಃ ಸು ದುಷ್ಟಾತ್ಮಾ ಮನಸಾಪಿ ಹಿ ಮೈಥಿಲೀಮ್ ।
ಪ್ರಧರ್ಷಯಿತುಮಪ್ರಾಪ್ಯಾಂ ದೀಪ್ತಾಮಗ್ನಿ ಶಿಖಾಮಿವ ॥

ಅನುವಾದ

ಸೀತೆಯು ಪ್ರಜ್ವಲಿತ ಅಗ್ನಿಶಿಖೆಯಂತೆ ದುರ್ಧರ್ಷ ಹಾಗೂ ಬೇರೆಯವರಿಗೆ ಅಲಭ್ಯಳಾಗಿದ್ದಾಳೆ. ದುಷ್ಟಾತ್ಮಾ ರಾವಣನು ಮನಸ್ಸಿನಿಂದಲೂ ಈಕೆಯ ಮೇಲೆ ಅತ್ಯಾಚಾರ ಮಾಡಲು ಸಮರ್ಥನಾಗಲಾರನು.॥18॥

ಮೂಲಮ್ - 19

ನೇಯಮರ್ಹತಿ ವೈಕ್ಲವ್ಯಂ ರಾವಣಾಂತಃಪುರೇ ಸತೀ ।
ಅನನ್ಯಾ ಹಿ ಮಯಾ ಸೀತಾ ಭಾಸ್ಕರಸ್ಯ ಪ್ರಭಾ ಯಥಾ ॥

ಅನುವಾದ

ಈ ಸತೀ-ಸಾಧ್ವೀ ದೇವೀ ರಾವಣನ ಅಂತಃಪುರದಲ್ಲಿ ಇದ್ದರೂ ವ್ಯಾಕುಲತೆ ಅಥವಾ ಗಾಬರಿಗೊಂಡಿರಲಿಲ್ಲ. ಏಕೆಂದರೆ ಸೂರ್ಯನಿಂದ ಪ್ರಭೆಯು ಅಭಿನ್ನವಿರುವಂತೆ ಇವಳು ನನ್ನಿಂದ ಅಭಿನ್ನಳಾಗಿದ್ದಳು.॥19॥

ಮೂಲಮ್ - 20

ವಿಶುದ್ಧಾಃ ತ್ರಿಷು ಲೋಕೇಷು ಮೈಥಿಲೀ ಜನಕಾತ್ಮಜಾ ।
ನ ವಿಹಾತುಂ ಮಯಾ ಶಕ್ಯಾ ಕೀರ್ತಿರಾತ್ಮವತಾ ಯಥಾ ॥

ಅನುವಾದ

ಜಾನಕಿಯು ಮೂರು ಲೋಕಗಳಲ್ಲಿ ಪರಮ ಪವಿತ್ರಳಾಗಿದ್ದಾಳೆ. ಮನನಶೀಲ ಮನುಷ್ಯನು ಕೀರ್ತಿಯನ್ನು ತ್ಯಜಿಸಲು ಸಾಧ್ಯವಿಲ್ಲದಂತೆ ನಾನೂ ಕೂಡ ಇವಳನ್ನು ಬಿಡಲಾರೆನು.॥20॥

ಮೂಲಮ್ - 21

ಅವಶ್ಯಂ ಚ ಮಯಾ ಕಾರ್ಯಂ ಸರ್ವೇಷಾಂ ವೋ ವಚೋ ಹಿತಮ್ ।
ಸ್ನಿಗ್ಧಾನಾಂ ಲೋಕನಾಥಾನಾಮೇವಂ ಚ ವದತಾಂ ಹಿತಮ್ ॥

ಅನುವಾದ

ನೀವೆಲ್ಲ ಲೋಕಪಾಲರು ನನ್ನ ಹಿತದ ಮಾತನ್ನೇ ಹೇಳುತ್ತಿರುವಿರಿ. ನನ್ನ ಮೇಲೆ ನಿಮ್ಮ ಬಹಳ ಸ್ನೇಹವಿದೆ; ಆದ್ದರಿಂದ ನೀವೆಲ್ಲ ದೇವತೆಗಳ ಹಿತಕರ ಮಾತನ್ನು ಅವಶ್ಯವಾಗಿ ಪಾಲಿಸಬೇಕು.॥21॥

ಮೂಲಮ್ - 22

ಇತ್ಯೇವಮುಕ್ತ್ವಾ ವಿಜಯೀ ಮಹಾಬಲಃ
ಪ್ರಶಸ್ಯಮಾನಃ ಸ್ವಕೃತೇನ ಕರ್ಮಣಾ ।
ಸಮೇತ್ಯ ರಾಮಃ ಪ್ರಿಯಯಾ ಮಹಾಯಶಾಃ
ಸುಖಂ ಸುಖಾರ್ಹೋಽನುಬಭೂವ ರಾಘವಃ ॥

ಅನುವಾದ

ಹೀಗೆ ಹೇಳಿ ತನ್ನ ಪರಾಕ್ರಮದಿಂದ ಪ್ರಶಂಸಿತವಾದ ಮಹಾಬಲೀ, ಮಹಾಯಶಸ್ವೀ, ವಿಜಯವೀರ ರಘುಕುಲನಂದನ ಶ್ರೀರಾಮನು ತನ್ನ ಪ್ರಿಯೆ ಸೀತೆಯನ್ನು ಭೆಟ್ಟಿಯಾದನು ಹಾಗೂ ಬಹಳ ಸುಖವನ್ನು ಅನುಭವಿಸಿದನು; ಏಕೆಂದರೆ ಅವನು ಸುಖವನ್ನು ಅನುಭವಿಸಲು ಯೋಗ್ಯನೇ ಆಗಿದ್ದನು.॥22॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಹದಿನೆಂಟನೆಯ ಸರ್ಗ ಪೂರ್ಣವಾಯಿತು.॥118॥