०७४ कैकेयीगर्हणम्

वाचनम्
ಭಾಗಸೂಚನಾ

ಭರತನು ಕೈಕೇಯಿಯನ್ನು ಬಹಳವಾಗಿ ನಿಂದಿಸಿದುದು

ಮೂಲಮ್ - 1

ತಾಂ ತಥಾ ಗರ್ಹಯಿತ್ವಾ ತು ಮಾತರಂ ಭರತಸ್ತದಾ ।
ರೋಷೇಣ ಮಹತಾವಿಷ್ಟಃ ಪುನರೇವಾಬ್ರವೀದ್ ವಚಃ ॥

ಅನುವಾದ

ಹೀಗೆ ಭರತನು ತಾಯಿಯನ್ನು ಬಹುವಾಗಿ ನಿಂದಿಸಿದರೂ ಅವನ ಕೋಪವು ಶಾಂತವಾಗದೆ, ಪುನಃ ರೋಷಗೊಂಡು ಕಠೋರ ಮಾತುಗಳಿಂದ ನಿಂದಿಸತೊಡಗಿದನು.॥1॥

ಮೂಲಮ್ - 2

ರಾಜ್ಯಾದ್ ಭ್ರಂಶಸ್ವ ಕೈಕೇಯಿ ನೃಶಂಸೇ ದುಷ್ಟಚಾರಿಣಿ ।
ಪರಿತ್ಯಕ್ತಾಸಿ ಧರ್ಮೇಣ ಮಾ ಮೃತಂ ರುದತೀ ಭವ ॥

ಅನುವಾದ

ದುಷ್ಟಚಾರಿಣಿಯೇ! ಕ್ರೂರಸ್ವಭಾವದವಳೇ! ಪಾಪಿಷ್ಠಳೇ! ನೀನು ಈಗಲೇ ರಾಜ್ಯಭ್ರಷ್ಟಳಾಗು. ಧರ್ಮವು ನಿನ್ನನ್ನು ತ್ಯಜಿಸಿದೆ, ಆದ್ದರಿಂದ ಈಗ ನೀನು ಸತ್ತಿರುವ ಮಹಾರಾಜನಿಗಾಗಿ ಅಳಬೇಡ (ಏಕೆಂದರೆ ನೀನು ಪತ್ನೀಧರ್ಮದಿಂದ ಪತಿತಳಾಗಿರುವೆ) ಅಥವಾ ನಾನು ಸತ್ತುಹೋದೆನೆಂದು ತಿಳಿದು ನೀನು ಜೀವನವಿಡೀ ಪುತ್ರನಿಗಾಗಿ ಗೋಳಾಡುತ್ತಲೇ ಇರು.॥2॥

ಮೂಲಮ್ - 3

ಕಿಂ ನು ತೇಽದೂಷಯದ್ ರಾಮೋ ರಾಜಾ ವಾ ಭೃಶಧಾರ್ಮಿಕಃ ।
ಯಯೋರ್ಮೃತ್ಯುರ್ವಿವಾಸಶ್ಚ ತ್ವತ್ಕೃತೇ ತುಲ್ಯಮಾಗತೌ ॥

ಅನುವಾದ

ಶ್ರೀರಾಮನು ಅಥವಾ ಅತ್ಯಂತ ಧರ್ಮಾತ್ಮಾ ಮಹಾರಾಜರು ನಿನಗೇನು ಕೆಡುಕನ್ನು ಮಾಡಿದ್ದರು? ನಿನ್ನ ಕಾರಣದಿಂದ ಅವರಿಗೆ ವನವಾಸ ಮತ್ತು ಮೃತ್ಯುವಿನ ಕಷ್ಟ ಅನುಭವಿಸಬೇಕಾಯಿತಲ್ಲ.॥3॥

ಮೂಲಮ್ - 4

ಭ್ರೂಣಹತ್ಯಾಮಸಿ ಪ್ರಾಪ್ತಾ ಕುಲಸ್ಯಾಸ್ಯ ವಿನಾಶನಾತ್ ।
ಕೈಕೇಯಿ ನರಕಂ ಗಚ್ಛ ಮಾ ಚ ತಾತಸಲೋಕತಾಮ್ ॥

ಅನುವಾದ

ಕೈಕೇಯಿ! ನೀನು ಈ ಕುಲವನ್ನು ನಾಶಮಾಡಿದ್ದರಿಂದ ಭ್ರೂಣಹತ್ಯೆಯ ಪಾಪ ತಲೆಯಲ್ಲಿ ಹೊತ್ತುಕೊಂಡೆ. ಅದಕ್ಕಾಗಿ ನೀನು ನರಕಕ್ಕೆ ಹೋಗು, ತಂದೆಯವರ ಲೋಕ ನಿನಗೆ ಸಿಗದೇ ಹೋಗಲಿ.॥4॥

ಮೂಲಮ್ - 5

ಯತ್ತ್ವಯಾ ಹೀದೃಶಂ ಪಾಪಂ ಕೃತಂ ಘೋರೇಣಕರ್ಮಣಾ ।
ಸರ್ವಲೋಕಪ್ರಿಯಂ ಹಿತ್ವಾ ಮಮಾಪ್ಯಾಪಾದಿತಂ ಭಯಮ್ ॥

ಅನುವಾದ

ನೀನು ಈ ಘೋರಕರ್ಮದಿಂದ ಸಮಸ್ತ ಜನರ ಪ್ರಿಯನಾದ ಶ್ರೀರಾಮನನ್ನು ಕಾಡಿಗಟ್ಟಿದೆ, ಇಂತಹ ದೊಡ್ಡ ಪಾಪವನ್ನು ಮಾಡಿರುವ ನೀನು ನನಗೂ ಭಯವನ್ನು ತಂದಿರಿಸಿದೆ.॥5॥

ಮೂಲಮ್ - 6

ತ್ವತ್ಕೃತೇ ಮೇ ಪಿತಾ ವೃತ್ತೋ ರಾಮಶ್ಚಾರಣ್ಯಮಾಶ್ರಿತಃ ।
ಅಯಶೋ ಜೀವಲೋಕೇ ಚ ತ್ವಯಾಹಂ ಪ್ರತಿಪಾದಿತಃ ॥

ಅನುವಾದ

ನಿನ್ನಿಂದಾಗಿ ನನ್ನ ತಂದೆಯವರ ಮೃತ್ಯು ಆಯಿತು, ಶ್ರೀರಾಮನು ಕಾಡನ್ನು ಸೇರಿದನು ಮತ್ತು ನನ್ನನ್ನೂ ಕೂಡ ಈ ಜಗತ್ತಿನಲ್ಲಿ ಅಪಕೀರ್ತಿಗೆ ಭಾಗಿಯಾಗಿಸಿದೆ.॥6॥

ಮೂಲಮ್ - 7

ಮಾತೃರೋಪೇ ಮಮಾಮಿತ್ರೇ ನೃಶಂಸೇ ರಾಜ್ಯಕಾಮುಕೇ ।
ನ ತೇಽಹಮಭಿಭಾಷ್ಯೋಽಸ್ಮಿ ದುರ್ವೃತ್ತೇ ಪತಿಘಾತಿನಿ ॥

ಅನುವಾದ

ರಾಜ್ಯಲೋಭದಿಂದ ಕ್ರೂರವಾದ ಕರ್ಮಮಾಡುವ ದುರಾಚಾರಿಣೀ ಪತಿಘಾತಿನಿಯೆ! ನೀನು ತಾಯಿಯ ರೂಪದ ನನ್ನ ಶತ್ರು ಆಗಿರುವೆ. ನೀನು ನನ್ನೊಡನೆ ಮಾತನಾಡಬೇಡ.॥7॥

ಮೂಲಮ್ - 8

ಕೌಸಲ್ಯಾ ಚ ಸುಮಿತ್ರಾ ಚ ಯಾಶ್ಚಾನ್ಯಾ ಮಮ ಮಾತರಃ ।
ದುಃಖೇನ ಮಹತಾವಿಷ್ಟಾಸ್ತ್ವಾಂ ಪ್ರಾಪ್ಯಕುಲದೂಷಣೀಮ್ ॥

ಅನುವಾದ

ಕೌಸಲ್ಯೆ, ಸುಮಿತ್ರೆ ಹಾಗೂ ಇತರ ನನ್ನ ತಾಯಂದಿರೆಲ್ಲರೂ ಕುಲಕಲಂಕಿನಿಯಾದ ನಿನ್ನಿಂದಾಗಿ ಮಹಾನ್ ದುಃಖದಲ್ಲಿ ಮುಳುಗಿದರು.॥8॥

ಮೂಲಮ್ - 9

ನ ತ್ವಮಶ್ವಪತೇಃ ಕನ್ಯಾ ಧರ್ಮರಾಜಸ್ಯ ಧೀಮತಃ ।
ರಾಕ್ಷಸೀ ತತ್ರ ಜಾತಾಸಿ ಕುಲಪ್ರಧ್ವಂಸಿನೀ ಪಿತುಃ ॥

ಅನುವಾದ

ನೀನು ಬುದ್ಧಿವಂತ ಧರ್ಮರಾಜ ಅಶ್ವಪತಿಯ ಕನ್ಯೆಯಾಗಿರುವೆ. ನೀನು ಅವನ ಕುಲದಲ್ಲಿ ಯಾವುದೋ ರಾಕ್ಷಸಿಯಾಗಿ ಹುಟ್ಟಿರುವೆ. ಅದರಿಂದ ಪಿತನ ವಂಶವನ್ನು ವಿಧ್ವಂಸ ಮಾಡಿರುವೆ.॥9॥

ಮೂಲಮ್ - 10

ಯತ್ತ್ವಯಾ ಧಾರ್ಮಿಕೋ ರಾಮೋ ನಿತ್ಯಂ ಸತ್ಯಪರಾಯಣಃ ।
ವನಂ ಪ್ರಸ್ಥಾಪಿತೋ ವೀರಃ ಪಿತಾಪಿ ತ್ರಿದಿವಂ ಗತಃ ॥

ಮೂಲಮ್ - 11

ಯತ್ಪ್ರಧಾನಾಸಿ ತತ್ಪಾಪಂ ಮಯಿ ಪಿತ್ರಾ ವಿನಾ ಕೃತೇ ।
ಭ್ರಾತೃಭ್ಯಾಂ ಚ ಪರಿತ್ಯಕ್ತೇ ಸರ್ವಲೋಕಸ್ಯ ಚಾಪ್ರಿಯೇ ॥

ಅನುವಾದ

ನೀನು ಸದಾ ಸತ್ಯದಲ್ಲಿ ತತ್ಪರನಾಗಿರುವ ಧರ್ಮಾತ್ಮಾ ವೀರ ಶ್ರೀರಾಮನನ್ನು ಕಾಡಿಗೆ ಕಳಿಸಿಬಿಟ್ಟೆ ಹಾಗೂ ನಿನ್ನ ಕಾರಣದಿಂದ ತಂದೆಯವರು ಸ್ವರ್ಗಸ್ಥರಾದರು; ಇವೆಲ್ಲ ಕೆಟ್ಟಕಾರ್ಯಗಳಿಂದ ಪ್ರಧಾನವಾಗಿ ಗಳಿಸಿದ ಪಾಪವೇ ನನ್ನಲ್ಲಿ ಬಂದು ತನ್ನ ಫಲವನ್ನು ತೋರುತ್ತಿದೆ. ಇದರಿಂದ ನಾನು ಪಿತೃವಿಹೀನನಾದೆ, ಇಬ್ಬರೂ ಸಹೋದರರಿಂದ ಅಗಲಿಹೋದೆ ಮತ್ತು ಸಮಸ್ತ ಜಗತ್ತಿನ ಜನರಿಗೆ ಅಪ್ರಿಯನಾಗಿಬಿಟ್ಟೆ.॥10-11॥

ಮೂಲಮ್ - 12

ಕೌಸಲ್ಯಾಂ ಧರ್ಮಸಂಯುಕ್ತಾಂ ವಿಯುಕ್ತಾಂ ಪಾಪನಿಶ್ಚಯೇ ।
ಕೃತ್ವಾ ಕಂ ಪ್ರಾಪ್ಯ್ಸಸೇ ಹೃದ್ಯ ಲೋಕಂ ನಿರಯಗಾಮಿನಿ ॥

ಅನುವಾದ

ಪಾಪ ಪೂರ್ಣ ವಿಚಾರವುಳ್ಳ ನರಕಗಾಮಿನೀ ಕೈಕೇಯಿ! ಧರ್ಮ ಪರಾಯಣಾ ತಾಯಿ ಕೌಸಲ್ಯೆಯನ್ನು ಪತಿ ಮತ್ತು ಪುತ್ರನಿಂದ ವಂಚಿತಗೊಳಿಸಿ ಈಗ ನೀನು ಯಾವ ಲೋಕಕ್ಕೆ ಹೋಗುವೆ.॥12॥

ಮೂಲಮ್ - 13

ಕಿಂ ನಾವಬುಧ್ಯಸೇ ಕ್ರೂರೇ ನಿಯತಂ ಬಂಧುಸಂಶ್ರಯಮ್ ।
ಜ್ಯೇಷ್ಠಂ ಪಿತೃಸಮಂ ರಾಮಂ ಕೌಸಲ್ಯಾಯಾತ್ಮಸಂಭವಮ್ ॥

ಅನುವಾದ

ಕ್ರೂರಹೃದಯೆ! ಕೌಸಲ್ಯಾಪುತ್ರ ಶ್ರೀರಾಮನು ನನಗೆ ಹಿರಿಯಣ್ಣ ಮತ್ತು ತಂದೆಯಂತೆ ಇದ್ದಾನೆ. ಅವನು ಜಿತೇಂದ್ರಿಯ ಹಾಗೂ ಬಂಧುಗಳ ಆಶ್ರಯದಾತನಾಗಿದ್ದಾನೆ. ನೀನು ಅವನನ್ನು ಹೀಗೆ ತಿಳಿಯಲೇ ಇಲ್ಲವೇ.॥13॥

ಮೂಲಮ್ - 14

ಅಂಗಪ್ರತ್ಯಂಗಜಃಪುತ್ರೋ ಹೃದಯಾಚ್ಚಾಭಿಜಾಯತೇ ।
ತಸ್ಮಾತ್ಪ್ರಿಯತರೋ ಮಾತುಃ ಪ್ರಿಯ ಏವತು ಬಾಂಧವಾಃ ॥

ಅನುವಾದ

ಪುತ್ರನು ತಾಯಿಯ ಅಂಗ-ಪ್ರತ್ಯಂಗ ಮತ್ತು ಹೃದಯದಿಂದ ಉತ್ಪನ್ನನಾಗುತ್ತಾನೆ, ಅದಕ್ಕಾಗಿ ಅವನು ತಾಯಿಗೆ ಹೆಚ್ಚು ಪ್ರಿಯನಾಗಿರುತ್ತಾನೆ. ಇತರ ಬಂಧು-ಬಾಂಧವರು ಕೇವಲ ಪ್ರಿಯರಾಗಿರುತ್ತಾರೆ (ಆದರೆ ಪುತ್ರನು ಪ್ರಿಯತರನಾಗಿರುತ್ತಾನೆ).॥14॥

ಮೂಲಮ್ - 15

ಅನ್ಯದಾ ಕಿಲ ಧರ್ಮಜ್ಞಾ ಸುರಭಿಃ ಸುರಸಮ್ಮತಾ ।
ವಹಮಾನೌ ದದರ್ಶೋರ್ವ್ಯಾಂ ಪುತ್ರೌ ವಿಗತಚೇತಸೌ ॥

ಅನುವಾದ

ಹಿಂದೊಮ್ಮೆ ಧರ್ಮವನ್ನು ತಿಳಿದ ದೇವಸಮ್ಮಾನಿತ ಸುರಭಿ(ಕಾಮಧೇನು)ಯು ಪೃಥಿವಿಯಲ್ಲಿ ತನ್ನ ಇಬ್ಬರು ಪುತ್ರರು ನೇಗಿಲಿನಿಂದ ಉಳುವಾಗ ನಿಃಶ್ಚೇಷ್ಟಿತರಾಗಿರುವುದನ್ನು ನೋಡಿದಳು.॥15॥

ಮೂಲಮ್ - 16

ತಾವರ್ಧದಿವಸಂ ಶ್ರಾಂತೌ ದೃಷ್ಟ್ವಾ ಪುತ್ರೌ ಮಹೀತಲೇ ।
ರುರೋದ ಪುತ್ರಶೋಕೇನಬಾಷ್ಪಪರ್ಯಾಕುಲೇಕ್ಷಣಮ್ ॥

ಅನುವಾದ

ನಡುಮಧ್ಯಾಹ್ನದವರೆಗೆ ಒಂದೇಸಮನೆ ಉತ್ತಿದ್ದರಿಂದ ಅವರು ಬಹಳಲಿದ್ದರು. ಭೂಮಿಯಲ್ಲಿ ತನ್ನ ಇಬ್ಬರೂ ಪುತ್ರರಿಗೆ ಉಂಟಾದ ದುರ್ದೆಶೆಯನ್ನು ಕಂಡು ಸುರಭಿಯು ಪುತ್ರಶೋಕದಿಂದ ಅಳತೊಡಗಿದ್ದಳು. ಆಕೆಯ ಕಣ್ಣುಗಳಿಂದ ಕಂಬನಿ ಹರಿಯಿತು.॥16॥

ಮೂಲಮ್ - 17

ಅಧಸ್ತಾದ್ ವ್ರಜತಸ್ತಸ್ಯಾಃ ಸುರರಾಜ್ಞೋ ಮಹಾತ್ಮನಃ ।
ಬಿಂದವಃ ಪತಿತಾ ಗಾತ್ರೇ ಸೂಕ್ಷ್ಮಾಃ ಸರುಭಿಗಂಧಿನಃ ॥

ಅನುವಾದ

ಅದೇ ಸಮಯದಲ್ಲಿ ಮಹಾತ್ಮಾ ದೇವೇಂದ್ರನು ಸುರಭಿಯ ಕೆಳಗಿನಿಂದ ಎಲ್ಲಿಗೋ ಹೋಗುತ್ತಿದ್ದನು. ಅವನ ಶರೀರದ ಮೇಲೆ ಕಾಮಧೇನುವಿನ ಎರಡು ತೊಟ್ಟು ಸುಗಂಧಿತ ಕಣ್ಣೀರು ಬಿತ್ತು.॥17॥

ಮೂಲಮ್ - 18

ನಿರೀಕ್ಷಮಾಣಸ್ತಾಂ ಶಕ್ರೋ ದದರ್ಶ ಸುರಭಿಂ ಸ್ಥಿತಾಮ್ ।
ಆಕಾಶೇ ವಿಷ್ಠಿತಾಂ ದೀನಾಂ ರುದತೀಂ ಭೃಶದುಃಖಿತಾಮ್ ॥

ಅನುವಾದ

ಇಂದ್ರನು ಮೇಲೆ ನೋಡಿದಾಗ ಆಕಾಶದಲ್ಲಿ ಸುರಭಿಯು ನಿಂತು ಅತ್ಯಂತ ದುಃಖಿತಳಾಗಿ ದೀನಭಾವದಿಂದ ಅಳುತ್ತಿರುವುದನ್ನು ನೋಡಿದನು.॥18॥

ಮೂಲಮ್ - 19

ತಾಂ ದೃಷ್ಟ್ವಾ ಶೋಕಸಂತಪ್ತಾಂ ವಜ್ರಪಾಣಿರ್ಯಶಸ್ವಿನೀಮ್ ।
ಇಂದ್ರಃ ಪ್ರಾಂಜಲಿರುದ್ವಿಗ್ನಃ ಸುರರಾಜೋಬ್ರವೀದ್ವಚಃ ॥

ಅನುವಾದ

ಯಶಸ್ವಿನೀ ಸುರಭಿಯು ಶೋಕದಿಂದ ಸಂತಪ್ತಳಾಗಿರುವುದನ್ನು ನೋಡಿ ವಜ್ರಧಾರಿ ದೇವೇಂದ್ರನು ಉದ್ವಿಗ್ನನಾಗಿ ಕೈ ಜೋಡಿಸಿ ಕಾಮಧೇನುವಿನಲ್ಲಿ ಹೇಳಿದನು.॥19॥

ಮೂಲಮ್ - 20

ಭಯಂ ಕಚ್ಚಿನ್ನ ಚಾಸ್ಮಾಸು ಕುತಶ್ಚಿದ್ವಿದ್ಯತೇ ಮಹತ್ ।
ಕುತೋನಿಮಿತ್ತಃ ಶೋಕಸ್ತೇ ಬ್ರೂಹಿ ಸರ್ವಹಿತೈಷಿಣಿ ॥

ಅನುವಾದ

ಎಲ್ಲರ ಹಿತವನ್ನು ಬಯಸುವ ದೇವಿಯೆ! ನಮ್ಮ ಮೇಲೆ ಎಲ್ಲಿಂದಲಾದರೂ ಯಾವುದಾದರೂ ಮಹಾಭಯ ಬಂದೆರಗಲಿಲ್ಲವಲ್ಲ? ಯಾವ ಕಾರಣದಿಂದ ನಿನಗೆ ಈ ಶೋಕ ಉಂಟಾಗಿದೆ ಹೇಳು.॥20॥

ಮೂಲಮ್ - 21

ಏವಮುಕ್ತಾ ತು ಸುರಭಿಃ ಸುರರಾಜೇನ ಧೀಮತಾ ।
ಪ್ರತ್ಯುವಾಚ ತತೋ ಧೀರಾ ವಾಕ್ಯಂವಾಕ್ಯವಿಶಾರದಾ ॥

ಅನುವಾದ

ಬುದ್ಧಿವಂತ ದೇವೇಂದ್ರನು ಹೀಗೆ ಕೇಳಿದಾಗ ಮಾತಿನ ಚತುರೆಯಾದ, ಧೀರಸ್ವಭಾವದ ಸುರಭಿಯು ಅವನಲ್ಲಿ ಹೀಗೆ ಉತ್ತರಿಸಿದಳು.॥21॥

ಮೂಲಮ್ - 22

ಶಾಂತಂ ಪಾಪಂ ನ ವಃ ಕಿಂಚಿತ್ಕುತಶ್ಚಿದಮರಾಧಿಪ ।
ಅಹಂ ತು ಮಗ್ನೌ ಶೋಚಾಮಿ ಸ್ವ ಪುತ್ರೌ ವಿಷಮೇ ಸ್ಥಿತೌ ॥

ಅನುವಾದ

ದೇವೇಶ್ವರ! ಪಾಪ ಶಾಂತವಾಗಲಿ, ನಿಮ್ಮ ಮೇಲೆ ಯಾವುದೇ ಭಯವಿಲ್ಲ. ನಾನಾದರೋ ನನ್ನ ಇಬ್ಬರು ಪುತ್ರರು ವಿಷಮ ಪರಿಸ್ಥಿತಿಯಲ್ಲಿ (ಘೋರ ಸಂಕಟದಲ್ಲಿ) ಬಿದ್ದಿರುವುದನ್ನು ನೋಡಿ ಶೋಕಿಸುತ್ತಿರುವೆನು.॥22॥

ಮೂಲಮ್ - 23

ಏತೌ ದೃಷ್ಟ್ವಾ ಕೃಶೌ ದೀನೌ ಸೂರ್ಯ ರಶ್ಮಿಪ್ರತಾಪಿತೌ ।
ವಧ್ಯಮಾನೌ ಬಲೀವರ್ದೌ ಕರ್ಷಕೇಣ ದುರಾತ್ಮಾನಾ ॥

ಅನುವಾದ

ಈ ಎರಡೂ ಎತ್ತುಗಳು ಅತ್ಯಂತ ದುರ್ಬಲ ಮತ್ತು ದುಃಖಿಯಾಗಿವೆ. ಬಿಸಿಲಿನ ಬೇಗೆಯಿಂದ ಬೆಂದು ಹೋಗಿರುವವು. ಮೇಲಿಂದ ಆ ದುಷ್ಟ ರೈತ ಇವುಗಳನ್ನು ಹೊಡೆಯುತ್ತಿದ್ದಾನೆ.॥23॥

ಮೂಲಮ್ - 24

ಮಮ ಕಾಯಾತ್ಪ್ರಸೂತೌ ಹಿ ದುಃಖಿತೌ ಭಾರಪೀಡಿತೌ ।
ಯೌ ದೃಷ್ಟ್ವಾ ಪರಿತಪ್ಯೇಽಹಂ ನಾಸ್ತಿ ಪುತ್ರಸಮಃಪ್ರಿಯಃ ॥

ಅನುವಾದ

ನನ್ನ ಶರೀರದಿಂದ ಇವುಗಳ ಉತ್ಪತ್ತಿಯಾಗಿದೆ. ಅವೆರಡೂ ಭಾರದಿಂದ ಪೀಡಿತವಾಗಿ ದುಃಖಿಗಳಾಗಿವೆ. ಅದಕ್ಕಾಗಿ ಇವುಗಳನ್ನು ಕಂಡು ನಾನು ಶೋಕ ಸಂತಪ್ತಳಾಗಿದ್ದೇನೆ ಏಕೆಂದರೆ ಪುತ್ರನಂತೆ ಪ್ರಿಯರು ಬೇರೆ ಯಾರೂ ಇಲ್ಲ.॥24॥

ಮೂಲಮ್ - 25

ಯಸ್ಯಾಃ ಪುತ್ರಸಹಸ್ರೈಸ್ತು ಕೃತ್ಸ್ನಂ ವ್ಯಾಪ್ತಮಿದಂ ಜಗತ್ ।
ತಾಂ ದೃಷ್ಟ್ವಾ ರುದತೀಂ ಶಕ್ರೋ ನ ಸುತಾನ್ಮನ್ಯತೇ ಪರಮ್ ॥

ಅನುವಾದ

ಯಾರ ಸಾವಿರಾರು ಪುತ್ರರಿಂದ ಈ ಜಗತ್ತು ತುಂಬಿಹೋಗಿದೆಯೋ, ಆ ಕಾಮಧೇನುವು ಈ ರೀತಿ ಅಳುತ್ತಿರುವುದನ್ನು ನೋಡಿ ಇಂದ್ರನು - ಪುತ್ರನಿಗಿಂತ ಮಿಗಿಲಾದವರು ಯಾರೂ ಇಲ್ಲವೆಂದು ತಿಳಿದನು.॥25॥

ಮೂಲಮ್ - 26

ಇಂದ್ರೋಹ್ಯಶ್ರುನಿಪಾತಂ ತಂ ಸ್ವಗಾತ್ರೇ ಪುಣ್ಯಗಂಧಿನಮ್ ।
ಸುರಭಿಂ ಮನ್ಯತೇ ದೃಷ್ಟ್ವಾ ಭೂಯಸೀಂ ತಾಂ ಸುರೇಶ್ವರಃ ॥

ಅನುವಾದ

ದೇವೇಶ್ವರ ಇಂದ್ರನು ತನ್ನ ಶರೀರದ ಮೇಲೆ ಈ ಪವಿತ್ರ ಸುಗಂಧಿತ ಕಂಬನಿಗಳನ್ನು ನೋಡಿ ದೇವೀ ಸುರಭಿಯನ್ನು ಈ ಜಗತ್ತಿನಲ್ಲಿ ಎಲ್ಲರಿಗಿಂತ ಶ್ರೇಷ್ಠಳೆಂದು ತಿಳಿದನು.॥26॥

ಮೂಲಮ್ - 27

ಸಮಾಪ್ರತಿಮವೃತ್ತಾಯಾ ಲೋಕಧಾರಣಕಾಮ್ಯಯಾ ।
ಶ್ರೀಮತ್ಯಾ ಗುಣಮುಖ್ಯಾಯಾಃ ಸ್ವಭಾವಪರಿಚೇಷ್ಟಯಾ ॥

ಮೂಲಮ್ - 28

ಯಸ್ಯಾಃ ಪುತ್ರಸಹಸ್ರಾಣಿ ಸಾಪಿ ಶೋಚತಿಕಾಮಧುಕ್ ।
ಕಿಂ ಪುನರ್ಯಾ ವಿನಾ ರಾಮಂ ಕೌಸಲ್ಯಾವರ್ತಯಿಷ್ಯತಿ ॥

ಅನುವಾದ

ಯಾರ ಚರಿತ್ರವು ಸಮಸ್ತ ಪ್ರಾಣಿಗಳಿಗಾಗಿ ಸಮಾನವಾಗಿ ಹಿತಕರ ಮತ್ತು ಅನುಪಮವಾಗಿದೆಯೋ, ಅಭೀಷ್ಟ ದಾನರೂಪೀ ಐಶ್ವರ್ಯಶಕ್ತಿಯಿಂದ ಸಂಪನ್ನವಾಗಿದೆಯೋ, ಸತ್ಯರೂಪೀ ಗುಣದಿಂದ ಕೂಡಿರುವಳೋ ಹಾಗೂ ಲೋಕರಕ್ಷಣೆಯ ಕಾಮನೆಯಿಂದ ಕಾರ್ಯಪ್ರವೃತ್ತಳಾಗುವಳೋ, ಆಕೆಯ ಸಾವಿರಾರು ಪುತ್ರರಿದ್ದಾರೋ ಅಂತಹ ಕಾಮಧೇನೂ ಕೂಡ ತನ್ನ ಎರಡು ಪುತ್ರರಿಗಾಗಿ, ಅವರ ಸ್ವಾಭಾವಿಕ ಚೇಷ್ಟೆಯಲ್ಲಿ ರತರಾಗಿದ್ದರೂ ಕಷ್ಟಪಡುವುದರಿಂದ ಶೋಕಿಸುತ್ತಿರುವಾಗ ಒಬ್ಬನೇ ಪುತ್ರರಿದ್ದ ಮಾತೆ ಕೌಸಲ್ಯೆ ಶ್ರೀರಾಮನ ಹೊರತು ಹೇಗೆ ಜೀವಿಸಿರಬಲ್ಲಳು.॥27-28॥

ಮೂಲಮ್ - 29

ಏಕಪುತ್ರಾ ಚ ಸಾಧ್ವೀ ಚವಿವತ್ಸೇಯಂ ತ್ವಯಾ ಕೃತಾ ।
ತಸ್ಮಾತ್ತ್ವಂ ಸತತಂ ದುಃಖಂಪ್ರೇತ್ಯ ಚೇಹಚ ಲಪ್ಸ್ಯಸೇ ॥

ಅನುವಾದ

ಒಬ್ಬನೇ ಪುತ್ರನಿರುವ ಈ ಸತೀ-ಸಾಧ್ವೀ ಕೌಸಲ್ಯೆಯನ್ನು ನೀನು ಆಕೆಯ ಪುತ್ರನಿಂದ ಅಗಲಿಸಿದೆ, ಇದಕ್ಕಾಗಿ ಸದಾ ಈ ಲೋಕ ಮತ್ತು ಪರಲೋಕದಲ್ಲಿಯೂ ದುಃಖವನ್ನೇ ಪಡೆಯುವೆ.॥29॥

ಮೂಲಮ್ - 30

ಅಹಂ ತ್ವಪಚಿತಿಂ ಭ್ರಾತುಃ ಪಿತುಶ್ಚ ಸಕಲಾಮಿಮಾಮ್ ।
ವರ್ಧನಂ ಯಶಸಶ್ಚಾಪಿ ಕರಿಷ್ಯಾಮಿ ನ ಸಂಶಯಃ ॥

ಅನುವಾದ

ನಾನಾದರೋ ಈ ರಾಜ್ಯವನ್ನು ಮರಳಿಸಿ ಅಣ್ಣನನ್ನು ಪೂಜಿಸುವೆನು ಮತ್ತು ಈ ಅಂತ್ಯೇಷ್ಟಿ ಸಂಸ್ಕಾರಾದಿಗಳನ್ನು ಮಾಡಿ ಪಿತನನ್ನು ಪೂರ್ಣರೂಪದಿಂದ ಪೂಜಿಸುವೆನು. ನಾನು ನಿಃಸಂದೇಹವಾಗಿ ನನ್ನ ಯಶವನ್ನು ಹೆಚ್ಚಿಸುವಂತಹ, (ನೀನು ಕೊಟ್ಟ ಕಲಂಕವನ್ನು ಇಲ್ಲವಾಗಿಸುವಂತಹ) ಕರ್ಮವನ್ನೇ ಮಾಡುವೆನು.॥30॥

ಮೂಲಮ್ - 31

ಆನಾಯ್ಯ ಚ ಮಹಾಬಾಹುಂ ಕೋಸಲೇಂದ್ರಂ ಮಹಾಬಲಮ್ ।
ಸ್ವಯಮೇವ ಪ್ರವೇಕ್ಷ್ಯಾಮಿ ವನಂ ಮುನಿನಿಷೇವಿತಮ್ ॥

ಅನುವಾದ

ಮಹಾಬಲಿ, ಮಹಾಬಾಹು ಕೋಸಲನರೇಶ ಶ್ರೀರಾಮನನ್ನು ಇಲ್ಲಿ ಮರಳಿ ಕರೆತಂದು ನಾನು ಸ್ವತಃ ಮುನಿಜನಸೇವಿತ ವನವನ್ನು ಪ್ರವೇಶಿಸುವೆನು.॥31॥

ಮೂಲಮ್ - 32

ನಹ್ಯಹಂ ಪಾಪಸಂಕಲ್ಪೇ ಪಾಪೇ ಪಾಪಂ ತ್ವಯಾ ಕೃತಮ್ ।
ಶಕ್ತೋ ಧಾರಯಿತುಂ ಪೌರೈರಶ್ರುಕಂಠೈರ್ನಿರೀಕ್ಷಿತಃ ॥

ಅನುವಾದ

ಪಾಪಪೂರ್ಣ ಸಂಕಲ್ಪ ಮಾಡುವ ಪಾಪಿನಿಯೇ! ಪುರವಾಸಿ ಜನರು ಕಣ್ಣೀರು ಸುರಿಸುತ್ತಾ ಗಂಟಲುಕಟ್ಟಿ ನನ್ನನ್ನು ನೋಡಲಿ ಹಾಗೂ ನೀನು ಮಾಡಿದ ಈ ಪಾಪದ ಹೊರೆಯನ್ನು ನಾನು ಹೊರುತ್ತಾ ಇರಲಿ-ಇದು ನನ್ನಿಂದ ಆಗಲಾರದು.॥32॥

ಮೂಲಮ್ - 33

ಸಾ ತ್ವಮಗ್ನಿಂ ಪ್ರವಿಶ ವಾ ಸ್ವಯಂ ವಾ ವಿಶ ದಂಡಕಾನ್ ।
ರಜ್ಜುಂ ಬದ್ಧ್ವಾಥ ವಾ ಕಂಠೇ ನಹಿ ತೇಽನ್ಯತ್ಪರಾಯಣಮ್ ॥

ಅನುವಾದ

ಈಗ ನೀನು ಉರಿಯುವ ಬೆಂಕಿಗೆ ಬೀಳು, ಅಥವಾ ದಂಡಕಾರಣ್ಯಕ್ಕೆ ಹೊರಟು ಹೋಗು. ಇಲ್ಲವೇ ಕತ್ತಿಗೆ ಹಗ್ಗ ಬಿಗಿದುಕೊಂಡು ಸತ್ತುಹೋಗು, ಇದಲ್ಲದೆ ನಿನಗೆ ಬೇರೆ ಯಾವ ಗತಿಯೂ ಇಲ್ಲ.॥33॥

ಮೂಲಮ್ - 34

ಅಹಮಪ್ಯವನಿಂ ಪ್ರಾಪ್ತೇ ರಾಮೇ ಸತ್ಯಪರಾಕ್ರಮೇ ।
ಕೃತಕೃತ್ಯೋ ಭವಿಷ್ಯಾಮಿ ವಿಪ್ರವಾಸಿತಕಲ್ಮಷಃ ॥

ಅನುವಾದ

ಸತ್ಯಪರಾಕ್ರಮಿ ಶ್ರೀರಾಮಚಂದ್ರನು ಅಯೋಧ್ಯೆಗೆ ಬಂದಾಗಲೇ ಕಳಂಕ ದೂರವಾಗಬಹುದು ಹಾಗೂ ಆಗಲೇ ನಾನು ಕೃತಕೃತ್ಯನಾಗುವೆನು.॥34॥

ಮೂಲಮ್ - 35

ಇತಿ ನಾಗ ಇವಾರಣ್ಯೇ ತೋಮರಾಂಕುಶತೋದಿತಃ ।
ಪಪಾತ ಭುವಿ ಸಂಕ್ರುದ್ಧೋ ನಿಃಶ್ವಸನ್ನಿವ ಪನ್ನಗಃ ॥

ಅನುವಾದ

ಇಷ್ಟು ಹೇಳಿ ಕಾಡಿನಲ್ಲಿ ತೋಮರ, ಅಂಕುಶದಿಂದ ಪೀಡಿತವಾದ ಆನೆಯಂತೆ ಭರತನು ಮೂರ್ಛಿತನಾಗಿ ನೆಲಕ್ಕೆ ಕುಸಿದುಬಿದ್ದನು ಹಾಗೂ ಕ್ರೋಧಗೊಂಡು ಬುಸುಗುಟ್ಟುವ ಹಾವಿನಂತೆ ನಿಟ್ಟುಸಿರುಬಿಡುತ್ತಿದ್ದನು.॥35॥

ಮೂಲಮ್ - 36

ಸಂರಕ್ತನೇತ್ರಃ ಶಿಥಿಲಾಂಬರಸ್ತಥಾ
ವಿಧೂತ ಸರ್ವಾಭರಣಃ ಪರಂತಪಃ ।
ಬಭೂವ ಭೂಮೌ ಪತಿತೋ ನೃಪಾತ್ಮಜಃ
ಶುಚೀಪತೇಃ ಕೇತುರಿವೋತ್ಸವಕ್ಷಯೇ ॥

ಅನುವಾದ

ಪರಂತಪ ರಾಜಕುಮಾರ ಭರತನು ಉತ್ಸವ ಮುಗಿದಾಗ ಇಳಿಸಿದ ಇಂದ್ರಧ್ವಜದಂತೆ ಆಗ ಭೂಮಿಗೆ ಬಿದ್ದಿದ್ದನು. ಅವನ ಕಣ್ಣುಗಳು ಕೆಂಪಾಗಿದ್ದವು, ವಸ್ತ್ರಗಳು ಸಡಿಲಿಸಿದ್ದವು ಮತ್ತು ಆಭರಣಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.॥36॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥74॥