०६९ भरतेन दुःस्वप्नदर्शनम्

वाचनम्
ಭಾಗಸೂಚನಾ

ಭರತನ ಚಿಂತೆ, ಮಿತ್ರರಿಂದ ಸಾಂತ್ವನ, ಭರತನು ಮಿತ್ರರಿಗೆ ತಾನು ಕಂಡ ಭಯಂಕರ ದುಃಸ್ವಪ್ನವನ್ನು ವಿವರಿಸಿ ಹೇಳಿದುದು

ಮೂಲಮ್ - 1

ಯಾಮೇವ ರಾತ್ರಿಂ ತೇ ದೂತಾಃ ಪ್ರವಿಶಂತಿ ಸ್ಮ ತಾಂ ಪುರೀಮ್ ।
ಭರತೇನಾಪಿ ತಾಂ ರಾತ್ರಿಂ ಸ್ವಪ್ನೋ ದೃಷ್ಟೋಽಯಮಪ್ರಿಯಃ ॥

ಅನುವಾದ

ದೂತರು ನಗರವನ್ನು ಪ್ರವೇಶಿಸಿ ಹಿಂದಿನ ರಾತ್ರಿಯಲ್ಲಿ ಭರತನು ಒಂದು ಅಪ್ರಿಯವಾದ ಸ್ವಪ್ನವನ್ನು ನೋಡಿದ್ದನು.॥1॥

ಮೂಲಮ್ - 2

ವ್ಯಷ್ಟಾಮೇವ ತು ತಾಂ ರಾತ್ರಿಂ ದೃಷ್ಟ್ವಾ ತಂ ಸ್ವಪ್ನಮಪ್ರಿಯಮ್ ।
ಪುತ್ರೋ ರಾಜಾಧಿರಾಜಸ್ಯ ಸುಭೃಶಂ ಪರ್ಯತಪ್ಯತ ॥

ಅನುವಾದ

ರಾತ್ರಿ ಕಳೆಯುತ್ತಾ ಬೆಳಗಾಗುವುದಲ್ಲಿತ್ತು, ಆಗ ಆ ಅಪ್ರಿಯ ಸ್ವಪ್ನವನ್ನು ನೋಡಿ ರಾಜಾಧಿರಾಜ ದಶರಥನ ಪುತ್ರ ಭರತನು ಮನಸ್ಸಿನಲ್ಲೇ ಬಹಳ ಕಳವಳಗೊಂಡಿದ್ದನು.॥2॥

ಮೂಲಮ್ - 3

ತಪ್ಯಮಾನಂ ತಮಾಜ್ಞಾಯ ವಯಸ್ಯಾಃ ಪ್ರಿಯವಾದಿನಃ ।
ಆಯಾಸಂ ವಿನಯಿಷ್ಯಂತಃ ಸಭಾಯಾಂ ಚಕ್ರಿರೇಕಥಾಃ ॥

ಅನುವಾದ

ಚಿಂತಿತನಾದ ಭರತನನ್ನು ನೋಡಿ ಅವನ ಪ್ರಿಯವಾದೀ ಮಿತ್ರರು ಅವನ ಮನಃಕ್ಲೇಶವನ್ನು ದೂರಗೊಳಿಸಲು ಸಭೆಯಲ್ಲಿ ಅನೇಕ ಪ್ರಕಾರದ ಮಾತುಗಳನ್ನಾಡತೊಡಗಿದರು.॥3॥

ಮೂಲಮ್ - 4

ವಾದಯಂತಿ ತಥಾ ಶಾಂತಿಂ ಲಾಸಯಂತ್ಯಪಿ ಚಾಪರೇ ।
ನಾಟಕಾನ್ಯಪರೇ ಸಾಹುರ್ಹಾಸ್ಯಾನಿ ವಿವಿಧಾನಿ ಚ ॥

ಅನುವಾದ

ಕೆಲವರು ವೀಣೆ ನುಡಿಸತೊಡಗಿದರೆ, ಕೆಲವರು ಅವನ ಖೇದವನ್ನು ಹೋಗಲಾಡಿಸಲು ನರ್ತನ ಮಾಡತೊಡಗಿದರು. ಇತರ ಮಿತ್ರರು ನಾನಾ ಹಾಸ್ಯರಸ ಪ್ರಧಾನವಾದ ನಾಟಕಗಳನ್ನು ಆಯೋಜಿಸಿದರು.॥4॥

ಮೂಲಮ್ - 5

ಸ ತೈರ್ಮಹಾತ್ಮಾ ಭರತಃ ಸಖಿಭಿಃ ಪ್ರಿಯವಾದಿಭಿಃ ।
ಗೋಷ್ಠೀಹಾಸ್ಯಾನಿ ಕುರ್ವದ್ಭಿರ್ನ ಪ್ರಾಹೃಷ್ಯತ ರಾಘವಃ ॥

ಅನುವಾದ

ಆದರೆ ರಘುಕುಲಭೂಷಣ ಮಹಾತ್ಮಾ ಭರತನು ಆ ಪ್ರಿಯವಾದೀ ಮಿತ್ರರ ಗೋಷ್ಠಿಯಲ್ಲಿ ಹಾಸ್ಯ-ವಿನೋದ ಮಾಡಿದರೂ ಸಂತೋಷಗೊಳ್ಳಲಿಲ್ಲ.॥5॥

ಮೂಲಮ್ - 6

ತಮಬ್ರವೀತ್ ಪ್ರಿಯಸಖೋ ಭರತಂ ಸಖಿಭಿರ್ವೃತಮ್ ।
ಸುಹೃದ್ಭಿಃ ಪರ್ಯುಪಾಸೀನಃ ಕಿಂ ಸಖೇನಾನುಮೋದಸೇ ॥

ಅನುವಾದ

ಆಗ ಸುಹೃದರಿಂದ ಸುತ್ತುವರೆದು ಕುಳಿತಿದ್ದ ಭರತನಲ್ಲಿ ಓರ್ವ ಪ್ರಿಯಮಿತ್ರ ಕೇಳಿದನು - ಸಖನೇ! ನೀನು ಇಂದು ಏಕೆ ಪ್ರಸನ್ನನಾಗಿಲ್ಲ.॥6॥

ಮೂಲಮ್ - 7

ಏವಂ ಬ್ರುವಾಣಂ ಸುಹೃದಂ ಭರತಃ ಪ್ರತ್ಯುವಾಚ ಹ ।
ಶೃಣು ತ್ವಂ ಯನ್ನಿಮಿತ್ತಂ ಮೇ ದೈನ್ಯಮೇತದುಪಾಗತಮ್ ॥

ಮೂಲಮ್ - 8

ಸ್ವಪ್ನೇ ಪಿತರಮದ್ರಾಕ್ಷಂ ಮಲಿನಂ ಮುಕ್ತಮೂರ್ಧಜಮ್ ।
ಪತಂತಮದ್ರಿಶಿಖರಾತ್ಕಲುಷೇ ಗೋಮ ಯೇಹ್ರದೇ ॥

ಅನುವಾದ

ಈ ಪ್ರಕಾರ ಕೇಳಿದ ಸುಹೃದನಿಗೆ ಭರತನು ಹೀಗೆ ಉತ್ತರಿಸಿದನು-ಮಿತ್ರನೇ! ಯಾವುದರಿಂದ ನನ್ನ ಮನಸ್ಸಿನಲ್ಲಿ ದೈನ್ಯ ಉಂಟಾಗಿದೆಯೋ ಅದನ್ನು ತಿಳಿಸುತ್ತೇನೆ, ಕೇಳಿರಿ. ನಾನು ಇಂದು ಸ್ವಪ್ನದಲ್ಲಿ ನನ್ನ ತಂದೆಯವರನ್ನು ನೋಡಿದೆ. ಅವರ ಮುಖ ಬಾಡಿತ್ತು, ಕೂದಲು ಕೆದರಿತ್ತು, ಅವರು ಪರ್ವತದ ತುದಿಯಿಂದ ಕಲುಷಿತವಾದ ಸೆಗಣಿಯು ತುಂಬಿದ ಹೊಂಡದಲ್ಲಿ ಬಿದ್ದುಬಿಟ್ಟರು.॥7-8॥

ಮೂಲಮ್ - 9

ಪ್ಲವಮಾನಶ್ಚ ಮೇದೃಷ್ಟಃ ಸ ತಸ್ಮಿನ್ಗೋಮಯೇ ಹ್ರದೇ ।
ಪಿಬನ್ನಂಜಲಿನಾ ತೈಲಂ ಹಸನ್ನಿವ ಮುಹುರ್ಮುಹುಃ ॥

ಅನುವಾದ

ಅವರು ಆ ಸೆಗಣಿಯ ಹೊಂಡದಲ್ಲಿ ಈಜುತ್ತಿರುವುದನ್ನು ನಾನು ನೋಡಿದ್ದೆ. ಅವರು ಬೊಗಸೆಯಿಂದ ಎಣ್ಣೆಯನ್ನು ಕುಡಿಯುತ್ತಿದ್ದರು ಹಾಗೂ ಪದೇ-ಪದೇ ನಗುತ್ತಿರುವಂತೆ ಕಂಡುಬಂದರು.॥9॥

ಮೂಲಮ್ - 10

ತತಸ್ತಿಲೋದನಂ ಭುಕ್ತ್ವಾಪುನಃ ಪುನರಧಃಶಿರಾಃ ।
ತೈಲೇನಾಭ್ಯಸರ್ವಾಂಗಸ್ತೈಲಮೇವಾನ್ವಗಾಹತ ॥

ಅನುವಾದ

ಮತ್ತೆ ಅವರು ತಿಲಮಿಶ್ರಿತ ಅನ್ನವನ್ನು ಉಣ್ಣುತ್ತಿದ್ದರು. ಬಳಿಕ ಅವರು ಇಡೀ ಶರೀರಕ್ಕೆ ಎಣ್ಣೆ ಸವರಿಕೊಂಡು, ತಲೆಕೆಳಗಾಗಿ ಎಣ್ಣೆಯ ಕೊಪ್ಪರಿಗೆಯಲ್ಲಿ ಮುಳುಗಿ ಏಳುತ್ತಿದ್ದರು.॥10॥

ಮೂಲಮ್ - 11

ಸ್ವಪ್ನೇಪಿ ಸಾಗರಂ ಶುಷ್ಕಂ ಚಂದ್ರಂ ಚ ಪತಿತಂ ಭುವಿ ।
ಉಪುರುದ್ಧಾಂ ಚ ಜಗತೀಂ ತಮಸೇವ ಸಮಾವೃತಾಮ್ ॥

ಅನುವಾದ

ಸ್ವಪ್ನದಲ್ಲೇ ನಾನು ಸಮುದ್ರವು ಒಣಗಿದಂತೆ, ಚಂದ್ರನು ನೆಲಕ್ಕೆ ಬಿದ್ದಿರುವಂತೆ, ಪೃಥಿವಿಯೆಲ್ಲ ಉಪದ್ರವಗ್ರಸ್ತವಾಗಿ ಅಂಧಕಾರ ಆವರಿಸಿದಂತೆ ನೋಡಿದೆನು.॥11॥

ಮೂಲಮ್ - 12

ಔಪವಾಹ್ಯಸ್ಯ ನಾಗಸ್ಯ ವಿಷಾಣಂ ಶಕಲೀಕೃತಮ್ ।
ಸಹಸಾ ಚಾಪಿ ಸಂಶಾಂತಾ ಜ್ವಲಿತಾ ಜಾತವೇದಸಃ ॥

ಅನುವಾದ

ಮಹಾರಾಜರ ಸವಾರಿಯ ಆನೆಯ ದಂತಗಳು ಮುರಿದು ಹೋಗಿದ್ದಂತೆ, ಮೊದಲಿನಿಂದ ಉರಿಯುತ್ತಿರುವ ಅಗ್ನಿಯು ಒಮ್ಮೆಗೆ ಆರಿ ಹೋದಂತೆ ಕಂಡೆನು.॥12॥

ಮೂಲಮ್ - 13

ಅವದೀರ್ಣಾಂ ಚ ಪೃಥಿವೀಂ ಶುಷ್ಕಾಂಶ್ಚ ವಿವಿಧಾನ್ ಧ್ರುಮಾನ್ ।
ಅಹಂ ಪಶ್ಯಾಮಿ ವಿಧ್ವಸ್ತಾನ್ಸಧೂಮಾಂಶ್ಚೈವ ಪರ್ವತಾನ್ ॥

ಅನುವಾದ

ಭೂಮಿಯು ಇಬ್ಭಾಗವಾಗಿತ್ತು, ನಾನಾ ಪ್ರಕಾರದ ವೃಕ್ಷಗಳು ಒಣಗಿಹೋಗಿದ್ದವು, ಪರ್ವತಗಳು ಕುಸಿದುಬೀಳುತ್ತಿದ್ದವು, ಅವುಗಳಲ್ಲಿ ಹೊಗೆ ಏಳುತ್ತಿತ್ತು, ಹೀಗೆ ನಾನು ಕನಸಿನಲ್ಲಿ ನೋಡಿದೆ.॥13॥

ಮೂಲಮ್ - 14

ಪೀಠೇ ಕಾರ್ಷ್ಣಾಯಸೇ ಚೈವಂ ನಿಷಣ್ಣಂ ಕೃಷ್ಣವಾಸಸಮ್ ।
ಪ್ರಹರಂತಿಸ್ಮ ರಾಜಾನಂ ಪ್ರಮದಾಃ ಕೃಷ್ಣಪಿಂಗಲಾಃ ॥

ಅನುವಾದ

ಕಪ್ಪಾದ ಕಬ್ಬಿಣದ ಪೀಠದಲ್ಲಿ ಮಹಾರಾಜರು ಕುಳಿತಿದ್ದರು. ಕಪ್ಪಾದ ಬಟ್ಟೆಯನ್ನುಟ್ಟು ಕೊಂಡಿದ್ದರು. ಕಪ್ಪು ಮತ್ತು ಪಿಂಗಳ ವರ್ಣದ ಸ್ತ್ರೀಯರು ಅವರನ್ನು ಹೊಡೆಯುತ್ತಿದ್ದರು.॥14॥

ಮೂಲಮ್ - 15

ತ್ವರಮಾಣಶ್ಚ ಧರ್ಮಾತ್ಮಾ ರಕ್ತಮಾಲ್ಯಾನುಲೇಪನಃ ।
ರಥೇನ ಖರಯುಕ್ತೇನ ಪ್ರಯಾತೋ ದಕ್ಷಿಣಾಮುಖಃ ॥

ಅನುವಾದ

ಧರ್ಮಾತ್ಮನಾದ ಮಹಾರಾಜರು ಕೆಂಪು ಬಣ್ಣದ ಹೂವಿನ ಮಾಲೆಯನ್ನು ಧರಿಸಿಕೊಂಡು ರಕ್ತಚಂದನವನ್ನು ಪೂಸಿಕೊಂಡು ಕತ್ತೆಗಳು ಎಳೆಯುತ್ತಿದ್ದ ರಥದಲ್ಲಿ ಕುಳಿತು ವೇಗವಾಗಿ ದಕ್ಷಿಣ ದಿಕ್ಕಿನ ಕಡೆಗೆ ಹೋದರು.॥15॥

ಮೂಲಮ್ - 16

ಪ್ರಹಸಂತೀವ ರಾಜಾನಂ ಪ್ರಮದಾ ರಕ್ತವಾಸಿನೀ ।
ಪ್ರಕರ್ಷಂತೀ ಮಯಾ ದೃಷ್ಟಾ ರಾಕ್ಷಸೀ ವಿಕೃತಾನನಾ ॥

ಅನುವಾದ

ವಿಕರಾಳ ಮುಖವುಳ್ಳ ರಕ್ಷಸಿಯಂತಿದ್ದ, ಕೆಂಪುಬಟ್ಟೆ ಧರಿಸಿಕೊಂಡ ಒಬ್ಬ ಸ್ತ್ರೀಯು ವಿಕಟವಾಗಿ ನಗುತ್ತ ಮಹಾರಾಜರನ್ನು ಸೆಳೆದುಕೊಂಡು ಸಾಗುತ್ತಿದ್ದಳು. ಇಂತಹ ದೃಶ್ಯವನ್ನು ನಾನು ಕನಸಿನಲ್ಲಿ ನೋಡಿದೆ.॥16॥

ಮೂಲಮ್ - 17

ಏವಮೇತನ್ಮಯಾ ದೃಷ್ಟಮೀಮಾಂ ರಾತ್ರಿಂ ಭಯಾವಹಾಮ್ ।
ಅಹಂ ರಾಮೋಽಥವಾ ರಾಜಾ ಲಕ್ಷ್ಮಣೋ ವಾಮರಿಷ್ಯತಿ ॥

ಅನುವಾದ

ಈ ಪ್ರಕಾರ ರಾತ್ರಿಯಲ್ಲಿ ನಾನು ಈ ಭಯಂಕರ ಸ್ವಪ್ನವನ್ನು ನೋಡಿದೆ. ಇದರ ಫಲವಾಗಿ ಶ್ರೀರಾಮ, ದಶರಥ ಮಹಾರಾಜರ ಅಥವಾ ಲಕ್ಷ್ಮಣ ಇವರಲ್ಲೊಬ್ಬರ ಮೃತ್ಯು ಅವಶ್ಯವಾಗಿ ಆಗಿರಬಹುದು.॥17॥

ಮೂಲಮ್ - 18

ನರೋ ಯಾನೇನ ಯಃ ಸ್ವಪ್ನೇ ಖರಯುಕ್ತೇನ ಯಾತಿ ಹಿ ।
ಅಚಿರಾತ್ತಸ್ಯ ಧೂಮ್ರಾಗ್ರಂಚಿತಾಯಾಂ ಸಂಪ್ರದೃಶ್ಯತೇ ॥

ಮೂಲಮ್ - 19

ಏತನ್ನಿಮಿತ್ತಂ ದೀನೋಽಹಂ ನ ವಚಃ ಪ್ರತಿಪೂಜಯೇ ।
ಶುಷ್ಯತೀವ ಚ ಮೇ ಕಂಠೋ ನ ಸ್ವಸ್ಥಮಿವ ಮೇ ಮನಃ ॥

ಅನುವಾದ

ಯಾವ ಮನುಷ್ಯನು ಸ್ವಪ್ನದಲ್ಲಿ ಕತ್ತೆಗಳನ್ನು ಹೂಡಿದ ರಥದಲ್ಲಿ ಪ್ರಯಾಣ ಮಾಡುವುದನ್ನು ನೋಡುತ್ತೇವೋ, ಅವನ ಚಿತೆಯ ಹೊಗೆಯನ್ನು ಬೇಗನೇ ನೋಡಲಾಗುತ್ತದೆ. ಇದೇ ಕಾರಣದಿಂದ ನಾನು ದುಃಖಿತನಾಗಿ ನಿಮ್ಮ ಮಾತನ್ನು ಆದರಿಸುವುದಿಲ್ಲ. ನನ್ನ ಗಂಟಲು ಒಣಗಿದಂತಾಗಿದೆ ಮತ್ತು ಮನಸ್ಸಿನಲ್ಲಿ ಅಸ್ವಸ್ಥನಂತಾಗಿದ್ದೇನೆ.॥18-19॥

ಮೂಲಮ್ - 20

ನ ಪಶ್ಯಾಮಿ ಭಯಸ್ಥಾನಂ ಭಯಂ ಚೈವೋಪಧಾರಯೇ ।
ಭ್ರಷ್ಟಶ್ಚ ಸ್ವರಯೋಗೋ ಮೇ ಛಾಯಾಚಾಪಗತಾ ಮಮ ।।
ಜುಗುಪ್ಸು ಇವ ಚಾತ್ಮಾನಂ ನ ಚ ಪಶ್ಯಾಮಿಕಾರಣಮ್ ॥

ಅನುವಾದ

ಭಯದ ಯಾವುದೇ ಕಾರಣವನ್ನು ನಾನು ನೋಡದಿದ್ದರೂ ಭಯ ಪಡೆಯುತ್ತಾ ಇದ್ದೇನೆ. ನನ್ನ ಧ್ವನಿ ಬದಲಾಗಿದೆ. ನನ್ನ ಕಾಂತಿ ಮಂಕಾಗಿದೆ. ಮನಸ್ಸು ಜಿಗುಪ್ಸಿತವಾಗಿದೆ, ಆದರೆ ಇದರ ಕಾರಣ ನನಗೆ ತಿಳಿಯದು.॥20॥

ಮೂಲಮ್ - 21

ಇಮಾಂ ಚ ದುಃಸ್ವಪ್ನಗತಿಂ ನಿಶಾಮ್ಯ ಹಿ
ತ್ವನೇಕರೂಪಾಮವಿತರ್ಕಿತಾಂ ಪುರಾ ।
ಭಯಂ ಮಹತ್ತದ್ಧೃದಯಾನ್ನ ಯಾತಿ ಮೇ
ವಿಚಿಂತ್ಯ ರಾಜಾನಮಚಿಂತ್ಯದರ್ಶನಮ್ ॥

ಅನುವಾದ

ಯಾವುದನ್ನು ನಾನು ಮೊದಲು ಎಂದೂ ಯೋಚಿಸಿರಲಿಲ್ಲವೋ, ಅಂತಹ ಅನೇಕ ಪ್ರಕಾರದ ದುಃಸ್ವಪ್ನವನ್ನು ನೋಡಿದೆ. ಕನಸಿನಲ್ಲಿ ಮಹಾರಾಜರನ್ನು ಈ ರೂಪದಲ್ಲಿ ಏಕೆ ನೋಡಿದೆ? ಅದರ ಕಲ್ಪನೆಯೂ ನನ್ನ ಮನಸ್ಸಿಗೆ ಬರುವುದಿಲ್ಲ - ಹೀಗೆ ಯೋಚಿಸಿ ನನ್ನ ಹೃದಯದ ಮಹಾದುಃಖ ದೂರವಾಗುವುದಿಲ್ಲ.॥21॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಅರವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥69॥