Javed beg kn

ಜಾವೇದ್ ಬೇಗ್ ಅವರು ಕೆಲವು ವರ್ಷಗಳ ಹಿಂದೆ, ಅಭಿನವ ಗುಪ್ತರು ಬೇರ್ವಾ ದವರು ಎಂಬುದು ಗೊತ್ತಾಗಿ ಅವರ ಬಗ್ಗೆ ಇನಷ್ಟು ಓದಿದಾಗ, ಅವರು ಬೇವಾದ ಬೆಟ್ಟವೊಂದರಲ್ಲಿರುವ ಗುಹೆಯಲ್ಲಿ ತಪಸ್ಸು ಅಧ್ಯಯನ ಕೈಗೊಂಡವರು ಹಾಗೂ ವಿಶ್ವದ ವಿವಿಧೆಡೆ ಓಡಾಡಿ ನಂತರ 1200 ಅನುಯಾಯಿ ಅಥವಾ ವಿದ್ಯಾರ್ಥಿಗಳ ಜತೆ ಮರಳಿ ಬೇರ್ವಾಕ್ಕೆ ಬಂದಿದ್ದರು. ತಪಸ್ಸು ಮಾಡಿದ ಗುಹೆಯಲ್ಲೇ ಕುಳಿತು ಅವರಿಗೆಲ್ಲ ಪ್ರವಚನ ನೀಡುತ್ತಿದ್ದರು. ಈ ವಿಷಯ ತಿಳಿದು ಊರಲ್ಲಿರುವ ಭೈರವ ಬೆಟ್ಟದಲಿರುವ ಗುಹೆಯನ್ನು ಹುಡುಕಿದರು. ತನ್ನ ಕೆಲ ಗೆಳೆಯರನ್ನು ಒತ್ತಾಯ ಮಾಡಿ, ಗುಹಯ ಒಳಗೂ ಹೋದರು. ಆರಂಭದಲ್ಲಿ ಸ್ವಲ್ಪ ದೂರ ತೆವಳಿಕೊಂಡು ಹೋದ ಮೇಲೆ, ಗುಹಯೊಳಗೆ ವಿಶಾಲವಾದ ಜಾಗವಿದೆ. ಅಲ್ಲಿ ಸಾಕಷ್ಟು ಲಿಪಿಗಳ ಬರಹ ಮತ್ತು ಕತ್ತನಗಳಿವ, ಅಲ್ಲಿಯೇ ಅಭಿನವ ಗುಪ್ತರು ಅಧ್ಯಯನ ಮತ್ತು ಪ್ರವಚನ ನೀಡಿದ ಸ್ಥಳ ಎಂಬುದು ಸ್ಪಷ್ಟವಾಗುತ್ತದೆ.

ಅದರ ನಂತರ ಜಾವೇದ್ ಬೇಗ್ ಅವರು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಇದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಜಾವೇದ್ ಬೇಗ್ ಅವರನ್ನು ಹದರಿಸುವ, ಸುಮ್ಮನಿರಿಸುವ ಪ್ರಯತ್ನಗಳು ಆದರೂ ಬಿಡದ ಪ್ರಯತ್ನ ಮುಂದುವರಿಸಿದ ಜಾವೇದ್ ಅಂತೂ ಅಭಿನವ ಗುಪ್ತರ ಗುಹಗೊಂದು ಬೋರ್ಡು, ಮೆಟ್ಟಿಲುಗಳ ನಡೆದವು, ದಾರಿ, ಕಳಗಡ ಪಾರ್ಕಿಂಗ್ ಸ್ಥಳ, ಶೌಚಾಲಯ ಮಾಡಿಸುವಲ್ಲಿ ಯಶಸ್ವಿಯಾದರು. ಅಭಿನವ ಗುಪ್ತರು ಮರೆಯಾದಂತೆ, ಅವರ ಗುಹಯೂ ಮರೆಯಾಗುವುದನ್ನು ಜಾವೇದ್ ಬೇಗ್ ತಡೆದರು. ಇತಿಹಾಸದಿಂದ ಅಳಿಸಿಯೇ ಹೋಗಬಹುದಾದ ಐತಿಹಾಸಿಕ ಕುರುಹೊಂದನ್ನು ಕಾಪಾಡಲು ಜಾವೇದ್ ಇಂದಿಗೂ ಪ್ರಯತ್ನಿಸುತ್ತಲೇ ಇದ್ದಾರೆ. ಇದಕ್ಕಾಗಿ ಕೆಲವು ಸ್ಥಳೀಯರು, ಅಕ್ರಮ ಗಣಿಗಾರಿಕೆಯವರು ಮುಂತಾದವರನ್ನು ಜಾವೇದ್ ಎದುರಿಸುತ್ತಿದ್ದಾರೆ. ಅಭಿನವ ಗುಪ್ತರ ಬಗ್ಗೆ ಹಾಗೂ ಅವರಿದ್ದ ಗುಹೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವರ್ಷದಲ್ಲಿ ಒಮ್ಮೆ ಬೈಕ್ ಜಾಥಾವನ್ನು ಕೂಡ ಆಯೋಜಿಸುತ್ತಾರೆ.

शङ्कर-टिप्पनी (द्रष्टुं नोद्यम्)

There are quite a number of kAshmIri muslims it seems who are inclined, at least academically, to work on Abhinavagupta. I remember one muslim phd scholar (whose phd thesis was on AbhAsavAda), who had applied for a project on Kashmir Shaivism at NIAS.