garaNi-shrInivAsa exegesis

Sources: garaNi-rAdhAkRShNa.

garaNi-shrInivAsa
garaNi-shrInivAsa

About garaNi-shrInivAsa

English Intro

Garani Sreenivasan 1907 - 1985

On the eleventh mile, in the north eastern direction from Madhugiri in the Tumkur district of Karnataka, India, there is a small hamlet by name Garani. In this hamlet lived the grand parents and parents of Garani Sreenivasan. His father Goplachar was a lower division clerk in the office of the land records. They belonged to the Iyengar Brahmin family of Shatamarshana Gotra and followed the Swayam Acharaya Purusha system. Gopalachar’s wife was Venkatalakshamma who was the sole daughter of the chief priest of the famous Melukote temple.

Although Garani Sreenivasan was born in Kodaganur village in 1907, with a native language of Tamil, he grew adopting Kannada. He had two sisters elder to him and an younger brother. Both his parents fell down to intense influenza fever that covered the entire area killing more than ten thousand residents. This happened when he was only eleven years old. After his initial studies in the village, he moved to Bangalore for studies at the Central College. He completed his Bachelor of Arts degree in English, Physics and Mathematics.

He got married while he was still studying. Since he had to support his younger brother, he joined the New High School in Bangalore as a teacher of English in 1936 and became a sub-editor of a news paper after two years. His hopes of opening a school of his own although seemed possible, had to be buried due to the world war. This resulted in his joining the prestigious National High School in 1942. He retired as a Head Master of the school in 1968.

He was a prolific speaker and a very good writer. He knew all the south Indian languages and was freely translating the writings to Kannada. He made an attempt to introduce the famous English writers and their works by translating them to the local language and getting them in the columns of news papers.

Although he was known as an English teacher, he used to write in Kannada, a local language and translated many works from Telugu, Tamil and Sanskrit.

kannaDa intro

ಗರಣಿ ಶ್ರೀನಿವಾಸನ್ 1907-1985

ತುಮುಕೂರು ಜಿಲ್ಲೆಯ ಮಧುಗಿರಿಗೆ ಈಶಾನ್ಯದಲ್ಲಿ ಹನ್ನೊಂದನೆಯ ಮೈಲಿ ಕಲ್ಲಿನ ಬಳಿಯ ಗ್ರಾಮ, ಗರಣಿ. ಈ ಗ್ರಾಮವು ಹೊಳವನಹಳ್ಳಿ ಮತ್ತು ಪಾವಗಡಗಳಿಗೆ ಸಮೀಪದಲ್ಲಿ ಇರುವ ಒಂದು ಸಣ್ಣ ಗ್ರಾಮ.ಇಲ್ಲಿ ಇವರ ಮುತ್ತಾತಂದಿರು ಜೋಡಿದಾರರಾಗಿದ್ದರು. ಸ್ವಯಮಾಚಾರ್ಯ ಕುಲಕ್ಕೆ ಸೇರಿದ ಇವರ ತಂದೆ ಗೋಪಾಲಾಚಾರ್ಯರು ಶಠಮರ್ಷಣ ಗೋತ್ರದವರು. ಇವರು ತಾಲ್ಲೂಕು ಕಛೇರಿಯಲ್ಲಿ ಕೆಳದರ್ಜೆಯ ಗುಮಾಸ್ತನಿಂದ ಶಿರಸ್ತೇದಾರ್ ಪದವಿಯವರೆಗೆ ಬಡ್ತಿಯನ್ನು ಪಡೆದು ನಿವೃತ್ತಿಯನ್ನು ಹೊಂದಿದರು.

ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿಯ ದೇವಾಲಯದ ಮೇಲ್ವಿಚಾರಕರ ಏಕೈಕ ಪುತ್ರಿಯಾಗಿದ್ದ ವೆಂಕಟಲಕ್ಷಮ್ಮ, ಇವರ ತಾಯಿ. ಇವರು 1907ನೇ ಇಸವಿಯಲ್ಲಿ ಕೊಡಗನೂರಿನಲ್ಲಿ ಜನಿಸಿದರು.ತಮಿಳು ಮನೆತನದವರಾದರೂ, ಕನ್ನಡಿಗನಾಗಿಯೇ ಬೆಳೆದರು. ಇವರ ಒಡ ಹುಟ್ಟಿದವರು ಒಬ್ಬ ತಮ್ಮ ಹಾಗೂ ಇಬ್ಬರು ಅಕ್ಕಂದಿರು. ಗ್ರಂಥಕರ್ತರಾದ ಶ್ರೀನಿವಾಸನ್ ಅವರು ತಮ್ಮ ಹನ್ನೊಂದನೆಯ ವಯಸಿನಲ್ಲೇ ಮಾತಾಪಿತೃಗಳಿಬ್ಬರನ್ನೂ ಕಳೆದುಕೊಂಡರು. ಆ ಸಮಯದಲ್ಲಿ ಅವರ ಗ್ರಾಮದಲ್ಲಿ ವಿಷಮಶೀತ ಜ್ವರದಿಂದ ನೂರಾರು ಮಂದಿ ಅಸು ನೀಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಪೂರೈಸಿ, ಕಾಲೇಜಿನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದರು. 1935ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. (ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್) ಪದವೀಧರರಾದರು. ಹದಿನೇಳು ವರುಷಗಳ ಬಳಿಕ ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ., ಇಂಗ್ಲಿಷ್ ಪದವಿಯನ್ನು ಪಡೆದರು.

ಬಿ.ಎ. ಓದುತ್ತಿತ್ರುವಾಗಲೇ ಇವರ ವಿವಾಹ ಲಲಿತಮ್ಮನೊಡನೆ ಆಯಿತು. ಬಹಳ ಶ್ರಮಪಟ್ಟು ವಿದ್ಯಾಭ್ಯಾಸ ನಡೆಸುವುದರ ಜೊತೆಗೆ ತಮ್ಮನನ್ನೂ ಪೋಷಿಸಿಕೊಂಡು, 1936ರಲ್ಲಿ ಪ್ರೌಢಶಾಲಾ ಅಧ್ಯಾಪಕರಾಗಿ ಇವರು ನ್ಯೂ ಹೈಸ್ಕೂಲ್ ಸೇರಿದರು. ಅಲ್ಲಿನ ವಾತಾವರಣದಿಂದ ಬೇಸತ್ತು, ಸ್ವಲ್ಪ ದಿನಗಳಕಾಲ ಕನ್ನಡದ ಪತ್ರಿಕೆಯೊಂದರ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.

ಮೊದಲನೆಯ ಮಹಾಯುದ್ಧದ ಅಂತ್ಯದಲ್ಲಿ., ತಮ್ಮದೇ ಆದ ಶಾಲೆಯೊಂದನ್ನು ತೆರೆಯಲು ಪ್ರಯತ್ನಿಸಿ, ವಿಫಲರಾಗಿ, 1943ರಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿದ್ದ ನ್ಯಾಷನಲ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಮೆಚ್ಚಿನ ಶಿಕ್ಷಕನಾಗಿ, ಹಿತವಂತನಾಗಿ ಕೆಲಸ ನಡೆಸಿ, ಶಾಲೆಯ ಮುಖ್ಯೋಪಾಧ್ಯಾಯರಾಗಿ 1968ರಲ್ಲಿ ನಿವೃತ್ತಿ ಪಡೆದರು. ಇವರಿಗೆ ಒಬ್ಬ ಹೆಣ್ಣು ಮಗಳು ಹಾಗೂ ನಾಲ್ಕು ಮಂದಿ ಗಂಡು ಮಕ್ಕಳು.

ಉತ್ತಮವಾದ ಆಂಗ್ಲ ಸಾಹಿತ್ಯವನ್ನು ಕನ್ನಡಿಗರಿಗೆ ಉಣಿಸಬೇಕೆಂಬ ಹೆಬ್ಬಯಕೆಯನ್ನು ಹೊತ್ತು ‚ಕವಿ ಕಾವ್ಯ ಪರಿಚಯ‛ ಎಂಬ ಶೀರ್ಷಿಕೆಯಲ್ಲಿ ಆಂಗ್ಲ್ಲ ಕವಿಗಳ ಅನೇಕ ಕವನಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು. ಇವು ಪ್ರತಿ ವಾರವೂ ‚ಪ್ರಜಾವಾಣಿ‛ ದಿನಪತ್ರಿಕೆಯಲ್ಲಿ ಒಂದು ವರ್ಷಕಾಲ ಪ್ರಕಟಗೊಂಡವು. ಇದಲ್ಲದೆ, ಕಥಾಂಜಲಿ, ಛಾಯಾ, ಸುಬೋಧ, ಮೊದಲಾದ ವಾರಪತ್ರಿಕೆಗಳಲ್ಲಿ ಅನೇಕ ಆಂಗ್ಲ ಕವಿಗಳ ಕಿರುಗತೆಗಳು ಕ್ರಮವಾಗಿ ಪ್ರಕಟವಾದವು. ಇವರಿಗೆ ವಿಜ್ಞಾನದಲ್ಲಿ ಆಸಕ್ತಿಯು ಇದ್ದಿದ್ದರಿಂದ ಯುನೆಸ್ಕೊ ಸಂಸ್ಥೆಯ ‚ವಿಜ್ಞಾನ ಬೋಧನೆಗೆ ಆಕರ ಗ್ರಂಥ‛ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದರು. ಕರ್ನಾಟಕ ವಿದ್ಯಾ ಇಲಾಖೆಯು ಪ್ರಕಟಿಸುತ್ತಿದ್ದ ವಿಜ್ಞಾನ ಲೇಖನಗಳಲ್ಲಿಯೂ ಕೂಡ ನೆರವಾಗಿದ್ದರು.

ಇವರಿಗೆ ಬರೆಯುವುದು ಹವ್ಯಾಸ. ಇವರು ಇಂಗ್ಲಿಶ್ ಅಧ್ಯಾಪಕರಾಗಿದ್ದರೂ, ತಮಿಳು, ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಪರಿಣಿತರಾಗಿದ್ದರು. ತಮಿಳುನಾಡಿನ ತಿರುಚ್ಚಿರಪಳ್ಳಿ (ತಿರುಚ್ಚಿ) ಯಲ್ಲಿರುವ, ಶ್ರೀ ರಾಮಕೃಷ್ಣ ತಪೋವನದ ಸ್ವಾಮೀಜೀ ಶ್ರೀ ಶ್ರೀ ಚಿದ್ಭವಾನಂದರ ಆಂಗ್ಲ ಮೂಲದ ಭಗವದ್ಗೀತೆಯನ್ನು ಅನುವಾದಿಸಿ ಶ್ರೀಗಳವರ ಅಶೀರ್ವಾದಕ್ಕೆ ಪಾತ್ರರಾದರು.

1985ನೆಯ ಇಸವಿ, ಭಾದ್ರಪದ ಮಾಸದ ಶುಕ್ಲ ಪಕ್ಷದ ಮೊದಲ ತೇದಿಯಂದು ತಮ್ಮ ಎಪ್ಪತ್ತೆಂಟನೆಯ ವಯಸ್ಸಿನಲ್ಲಿ ದೈವಾಧೀನರಾದರು.

The divyaprabandha exegesis

Effort

Nalayira Divya Prabandham is a magnum opus work of 4000 verses Tamil Alzwars and is a source book for the Tamil Iyengar community. Garani Sreenivasan was enthralled by is beauty. He took up the project of translating them into Kannda with word by word meaning, translation and own commentaries. This took him more than ten years to complete. He did not live to complete the last four hundred stanzas as he passed away in 1985 in his seventy seventh year. It was a huge manuscript, with beautiful handwriting. They are of great use for shrIvaiShNa-s in karNATaka, who have long struggled in their devotions due to very slight knowledge of classical tamiL with no knowledge of tamiL script.

‘ದ್ರಾವಿಡವೇದ’ ಅಥವಾ ‘ತಮಿಳುವೇದ’ ಎಂದೇ ಹೆಸರುವಾಸಿಯಾಗಿರುವ ‘ನಾಲಾಯಿರ ದಿವ್ಯ ಪ್ರಬಂಧಮ್’ ಎಂಬ ಮಹಾನ್ ಕೃತಿಯನ್ನು ತಮಿಳು ಬಾಷೆಯನ್ನು ಓದಲು ಅರಿಯದ ಶ್ರೀವೈಷ್ಣವರಿಗೂ ಹಾಗೂ ಕನ್ನಶದ ಜನತೆಗೆ ಪರಿಚಯಿಸುವ ಹೆಬ್ಬಯಕೆಯಿಂದ, ಈ ‘ನಾಲಾಯಿರಂ’ ಕೃತಿಯ ವ್ಯಾಸಂಗವನ್ನು ಕೈಗೆತ್ತಿಕೊಂಡರು.

ಹನ್ನೆರಡು ಆಳ್ವಾರುಗಳಿಂದ ರಚಿತವಾದ ನಾಲ್ಕುಸಾವಿರ ಪಾಶ್ರುಗಳುಳ್ಳ ಈ ಕೃತಿಯನ್ನು, ಮೂಲ ತಮಿಳಿನಲ್ಲಿ, ಕನ್ನಡದಲ್ಲಿ ತಮಿಳು ಲಿಪಿಯಲ್ಲಿ, ಕನ್ನಡಗ್ದಲ್ಲಿ ಪ್ರತಿಪದಾರ್ಥ, ತಾತ್ಪರ್ಯ ಹಾಗೂ ತಮ್ಮದೇ ಆದ ವಿವರಣೆಯನ್ನು ಕೊಟ್ಟು ಕನ್ನಡದ ಜನತೆಗೆ ಉಣ ಬಡಿಸಲು ಪರಿಶ್ರಮಿಸಿದ ಮಹಾನುಭಾವರಿವರು. ಸುಮಾರು ಹತ್ತು ವರುಷಗಳ ಕಾಲ, ದಿನಕ್ಕೆ ಎರಡು ಪಾಶರುಗಳನ್ನು (ಪದ್ಯಗಳನ್ನು) ಕೂಲಂಕಶವಾಗಿ ಅಧ್ಯಯನ ಮಾಡಿ, ಸತತ ಪರಿಶ್ರಮದಿಂದ ಈ ಮಹಾನ್ ಕೃತಿಯನ್ನು ಹೊರತಂದು, ಭಕ್ತಿಪಂಥದ ಬಾಗಿಲನ್ನು ತೆರೆಯಲು ಅಪೇಕ್ಷಿಸಿದ ಧೀಮಂತ ವ್ಯಕ್ತಿ ಎಂದರೆ ಅತಿಶಯೋಕ್ತಿ ಆಗಲಾರದು.

ज्ञातदोषाः

shrI garaNi shrInivAsa made a few minor mistakes. Examples:

  • २०१२ इत्यत्रापि - ईषत्परिष्कार्यो ऽर्थो भाति। Kausalya Hart तत्र - “2012. The dear lord whose chest is adorned with jewels shines like a golden hill and rides on the bird Garuḍa. He used Mandara mountain as a churning stick and the snake Vasuki as a rope, churned the milky ocean, took the nectar from it and gave it to the gods. If devotees have not seen him, their eyes are not truly eyes.”

Publishing

विस्तारः (द्रष्टुं नोद्यम्)

After he left for vaikuNTha, his son, garaNi-rAdhAkRShNa recovered the sole copy of this precious work from his sister’s house and sought interested shrIvaiShNava-s to preserve (or publish). To this end, he approached various individuals and organizations ranging from the parakAla-maTha to a chennai library - no one agreed.

After he left for vaikuNTha, his son, garaNi-rAdhAkRShNa recovered the sole copy of this precious work. Eventually, he got the manuscripts scanned into pdf files (now available at archive.org), and started distributing them via CD-s and on the internet. Finally, shrI lakṣmī-tātācār of melukoTe showed interest and even suggested getting it typed and publishing it. The material was rapidly typed, but the publishing process was very slow. shrI lakṣmī-tātācār departed for vaikuNTha before the first volume was published, and his son shrI MA Alwar took up the publishing task.

Audio

shrI harIsh, son of kaDaba rangarAjan, somehow came upon the scanned manuscripts and started reading them aloud and saving them in audio files.