೦೩ ನಾಥಮುನಿಚರಿತ್ರಮ್

॥ ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ॥ ನಾಥಮುನಿಚರಿತ್ರೆ, ಸ್ತುತಿ ಮತ್ತು ಯಾಮುನಮುನಿ ಸ್ತುತಿ ವಿದ್ವಾಹ-ಗೋಪಾಲಾಚಾರರಿಂದ ರಚಿತವಾದವು 1960 ಶಾಶ್ವರಿ-ಆಷಾಢ ಶ್ರೀಕಾಂತ ಪವರ್ ಪ್ರೆಸ್ ಮೈ ಸೂ ರು ಬೆಲೆ : ೫೦ ನ.ಪೈ. 113, 11 ಶ್ರೀಮನ್ನಾಥಮುನೆಯೇ ನಮ ನಾಥಮುನಿಚರಿತ್ರೆ समग्रभित्कयोगाय ज्ञानवैराग्य योगिने । नमांसि नाथमुनये लब्धसर्वार्थसम्पदे ॥ नत्वाचार्यपरंपरां प्रथमत स्तत्पंक्तिविभ्राजतः । श्रीमन्नाथमुनेः पवित्रचरितं कर्णाटवाण्या तथा । तस्यैव स्तुति मातनोमि सुधियां मोदाय दैव्या गिरा । संक्षेपेण यथोपलव्ध मधुना नाथेन सञ्चोदितः ॥ ವಿಶಿಷ್ಟಾವೈತದರ್ಶನದ ಉಪದೇಶಕರೂ, ಪ್ರವರ್ತಕರೂ, ಸಂಸ್ಥಾಪಕರೂ ಆದ ಆಚಾದ್ಯರುಗಳೂ ಮತ್ತು ಆಳ್ವಾರುಗಳೂ ಬಹುಮಂದಿ ಇರುವರು. ಆದರೆ ಆಚಾರರುಗಳ ಪಂಕ್ತಿಯಲ್ಲಿ ಮೊದಲನೆಯವರು ಶ್ರೀಮನ್ನಾಥ ಮುನಿಗಳು ಪ್ರಸಿದ್ಧಿ ಪಡೆದರು. ಆಳ್ವಾರುಗಳ ಶ್ರೇಣಿಯಲ್ಲಿ ನಮ್ಮಾಳ್ವಾರವರು ಪ್ರಪನ್ನ ಜನಕೂಟಸ್ಥರಾಗಿ ವಿಖ್ಯಾತರಾಗಿರುವರು. ನಡುವೆ ಬಹುಕಾಲದವರೆಗೆ ಸದ್ದರ್ಶನ ನಿರ್ವಾಹಕರಾದ ಆಚಾರರಾರೂ ಇಲ್ಲದೆ ಈ ಜಗವು ಅಜ್ಞಾನ ಸಮಯವಾಗಿದ್ದ ಕೊರತೆಯನ್ನು ನೀಗಲು ಪರಮ ಕರುಣಾಳುವಾದ ಭಗವಂತನು ಸಂಕಲ್ಪಿಸಿ, ಶ್ರೀಮನ್ನಾಥ ಮುನಿಗಳೇ ಮೊದಲಾದ ಸದಾಚಾರರುಗಳನ್ನು ಅವತಾರ ಗೊಳಿಸಿದನು. ಅಂತಹ ಮಹನೀಯರ ಉಪದೇಶಗಳಿಂದಲೂ, ಉಭಯ ವೇದಾಂತ ಪ್ರಕಾಶಕವಾದ ಗ್ರಂಥಗಳ ಮೂಲಕವೂ ಒಳ್ಳೆಯ ಅನುಷ್ಠಾನಗಳಿಂದಲೂ, ಎಲ್ಲರನ್ನೂ ಹಾಗೆಯೇ ಆಚರಿಸುವಂತೆ ಮಾಡು ವುದರಿಂದಲೂ, ತಿಳಿವಳಿಕೆಯ ಬೆಳಕನ್ನು ಬೀರಿ ಲೋಕವನ್ನು ಬಾಳಗೊಳಿಸಿದನು. ಇದು ಆ ಪರಮಾತ್ಮನ ಕರುಣೆಯ ಸಹಜ ಗುಣ, ಹಾಗೆಯೇ ಅಂತಹ ಮಹನೀಯರ ಪ್ರಭಾವವನ್ನು ಅನುದಿನವೂ ಅನುಸಂಧಾನ ಮಾಡುವುದು, ಶ್ರೇಯೋಗಾಮಿಗಳ ಕರ್ತವ್ಯವಾಗಿರುವುದೂ ಸಹಜವೇ. ನಮ್ಮ ದರ್ಶನವು ಆಚಾರರ ಪಂಕ್ತಿಯಲ್ಲಿ ಶ್ರೀನಾಥ ಮುನಿಗಳನ್ನೇ ಮೊದಲ ನೆಯ ಪ್ರವರ್ತಕರನ್ನಾಗಿ ಆರಿಸಿ ಕೊಂಡಿರುವುದು, ಇವರ ಅವತಾರದ ಹಿರಿಮೆಯ ಕುರುಹು. 3 दृष्टेऽपहृत्यभावात् अनुमितिविषये लाघवस्यानुरोधात् । शास्त्रेणैवावसेये विहतिविरहिते नास्तिकत्वप्रहाणात् त नाथोपज्ञ प्रवृतं बहुभिरुपचितं यामुनेयप्रबन्धैः । सम्यक् त्रातं यतीन्द्रैः इद मखिलतमः करीनं दर्शनं नः ॥ ಎಂದು ವೇದಾಂತಾಚಾರರೂ, * ಅರುಳಪತ್ರ ನಾದಮುನಿ ಮುದಲಾಂ ನಂ ದೇಶಿಕರೆಯಲ್ಲಾಲ್ ಪೇ ಮನಮೆ ! ನೀ ಪೇಶು ” ಎಂದು ವರವರಮುನಿಗಳೂ ಕೊಂಡಾಡಿರುವುದು ಓದುಗರ ಮನಸ್ಸಿಗೆ ಬರುವುದು ಅವಶ್ಯಕ. ಇವರ ಅವತಾರ ಕಲಿ 3685, ಶೋಭಕೃತ್‌ ವರ್ಷ. ಮಿಥುನ ಮಾಸ ಅನೂರಾಧಾ ನಕ್ಷತ್ರ ಕೂಡಿದ ಶುಭದಿನವೆಂದು ಹಿಂದಿನವರ ಬರಹಗಳಿಂದ ತಿಳಿದು ಬರುತ್ತದೆ. ಅಂದರೆ ಕ್ರಿ. ಶ. 585 ಆಗುವುದು. ಇವರ ಪೌತ್ರರೇ ಯಾಮುನಾಚಾರರು. ಅವರ ಜನನ ಕಲಿ 4048. ಧಾತು, ಸಂ. ಕಟಕ ಮಾಸ, ಉತ್ತರಾಷಾಢಾ ನಕ್ಷತ್ರ ಅಂದರೆ ಕ್ರಿ. ಶ. 1011 ಆಗುವುದು. ಈ ಕಾಲವು ನಿರ್ದಿಷ್ಟವಾಗಿದೆ. ಆದರೆ ತಾತಂದರಿಗೂ ಮೊಮ್ಮಗನಿಗೂ ಇಷ್ಟು ಅಂತರ ಅಚ್ಚರಿಯೆನಿಸದಿರದು. ಇವರೀಲ್ವರೂ ಯೋಗನಿರತರ ಪೀಳಿಗೆಯವರಾದ್ದರಿಂದ ಪೂರ್ಣ ದೀರ್ಘಾಯುಗಳಾಗಿ ಬಾಳಿ ಬೆಳಗಿದವರು. ಯೋಗದ ಮರ್ಮವರಿತವರಿಗೆ ಇದೇ ನಾಕ್ಟರಕರವಲ್ಲ. ಪ್ರಕೃತ ನಮ್ಮ ನಾಥ ಮುನಿಗಳು ಈಶ್ವರ ಮುನಿಗಳಿಗೆ ಪುತ್ರ ರತ್ನರಾಗಿ ಬಾಳಿ ಬೆಳಗಿದವರು. ವೀರನಾರಾಯಣ ಪುರ (ಕಾಟ್ಟು ಮನ್ನಾರ್) ಇವರ ಅವತಾರ ಕ್ಷೇತ್ರ. ಇವರ ಪೂತ್ವಜರು ಅಲ್ಲಿ ನೆಲೆಸಿ ಮುಂದುವರಿಸಿದವರು, ವಿವರ ದೊರೆತಿರುವುದಿಷ್ಟೆ. ಕಾಲ ಕಾಲಕ್ಕೆ ಚೌಲೋಪನಯನಾದಿಗಳನ್ನೂ ಮಾಡಿಕೊಂಡು, ವೇದ ವೇದಾಂಗಗಳನ್ನೂ, ಸಾಮಾನ್ಯ ಶಾಸ್ತ್ರಗಳನ್ನೂ ತಮ್ಮ ಅಸಾಧಾರಣ ಪ್ರತಿಭೆಯಿಂದ ಅತ್ಯಲ್ಪ ಕಾಲದಲ್ಲಿ ಅತ್ಯುನ್ನತ ರೀತಿಯಲ್ಲಿ ಪಡೆದು, ವಿದ್ಯಾಪರಿ ಪೂರ್ಣರಾಗಿ ಬಾಳಿದರು. ‘ಸಕಲ ಸದ್ಗುಣ ಸಂಪನ್ನರೂ, ತೇಜಸ್ವಿಗಳೂ, ಪ್ರಾಪ್ತ ವಯಸ್ಕರೂ ಆದಾಗ “ ವಂಗಿ ಪುರತ್ತಾಚ್ಚಿ ” ಎಂಬುವರು ಸುಗುಣಳೂ ರೂಪವತಿಯೂ ಆಗಿದ್ದ ತಮ್ಮ ಕನ್ಯಕಾಮಣಿ “ ಅರವಿಂದ ಪಾವೈಯಾಳ್ ” ನ್ನು ತಂದು ಕೊಂಡು ಪಾಣಿಗ್ರಹಣ ಮಾಡಿಕೊಂಡರು. ಈ ದಿವ್ಯ ದಂಪತಿಗಳು ಹಲವಾರು ವರ್ಷಗಳು ಗೃಹಸ್ಥ ಧರ್ಮಾ4 ಚರಣೆಯಲ್ಲಿ ನಿರತರಾಗಿ ಜ್ಞಾನ ವೈರಾಗ್ಯ ಧರ್ಮಾನುಷ್ಠಾನಗಳಲ್ಲೂ ಸಹಚ: ರಾಗಿರುತ್ತ ಕಾಲಕ್ರಮದಲ್ಲಿ ಭಗವತ್ಯಪೆಯಿಂದ ಪುತ್ರ ಮಣಿಯನ್ನು ಪಡೆದರು, * ಮಗುವಿಗೆ ಈಶ್ವರ ಮುನಿಯೆಂದೇ ನಾಮಧೇಯವನ್ನು ಇತ್ತರು. ಮಗುವೂ ಬಾಲ್ಯ ದಲ್ಲೇ ತಂದೆಯಂತೆಯೇ ಸಕಲ ಸಂಸ್ಕಾರ ಸಂಪನ್ನರಾಗಿ, ಈಗಿನ “ ಪಂಡಿತ ಪುತ್ರ ನೆನಿಸಿಕೊಳ್ಳದೆ ನಿಜವಾದ ವಿದ್ಯಾನಿಧಿಯಾಗಿ ತಮ್ಮ ಕುಲದ ಯಶವನ್ನು ತೇಜಗೋ ಸಿದರು. ( ನ್ಯಾಯ ನಾಥ ಮುನಿಗಳು ಯೋಗ ಶಾಸ್ತ್ರದಲ್ಲಿ ಸಫಲರಾದ ಪ್ರವೀಣರು. ತತ್ವ ” ವೆಂಬ ಗ್ರಂಥವು ಇವರಿಂದ ರಚಿತವಾದುದು, ಈಗ ಉಪಲಬ್ಲಿಯಿಲ್ಲ. ಆದರೆ ಅದರ ಮಂಗಳ ಪದ್ಯವೊಂದು ಮಾತ್ರ यो वेत्ति युगपत् सर्व प्रत्यक्षेण सदा स्वतः । तं प्रणम्य हरिं शास्त्रं न्यायतत्वं प्रचक्ष्महे ॥ ಎಂಬುದು ಉಳಿದಿದೆ. ಶ್ರೀ ನಿಗಮಾಂತ ಮಹಾದೇಶಿಕರ ಕಾಲದವರೆಗೂ ಈ ಗ್ರಂಥ ಪ್ರಚಾರದಲ್ಲಿದ್ದು ನಂತರ ಮರೆಯಾಗಿರಬೇಕು. ಈ ಮುನಿವರರು ತಮ್ಮ ಕ್ಷೇತ್ರಾಧಿನಾಥನಾದ ಪರಮಾತ್ಮನ ಸನ್ನಿಧಿಯಲ್ಲಿ ಸಕ ವಿಧ ಸೇವೆಗಳನ್ನೂ ಸಲ್ಲಿಸುತ್ತಿದ್ದು, ಉತ್ತರ ದೇಶದ ದಿವ್ಯ ಕ್ಷೇತ್ರಗಳಿಗೆ ಯಾತ್ರೆ ಹೊರಡಬೇಕೆಂದು ಅಭಿನಿವೇಶಗೊಂಡು, ಭಗವದನುಗ್ರಹದಿಂದ ಸಂಸಾರ ಸಮೇತ ಹೊರಟು, ಸಿಂಹಾಚಲ, ಶ್ರೀಕೂರ, ಪುರುಷೋತ್ತಮ, ಬದರೀ ನಾರಾಯಣ, ನೈಮಿಶ, ದ್ವಾರವತಿ, ಪ್ರಯಾಗ, ಮಧುರಾ, ಅಯೋಧ್ಯಾ, ಗಯಾ, ಪುಷ್ಕರ, ಸಾಲಗ್ರಾಮ, ಗಿರಿ, ಮೊದಲಾದ ಕಡೆಗಳಿಗೂ ಹೋಗಿ, ಮರಳಿ ಬರುವಾಗ ದಕ್ಷಿಣ ದೇಶದ ದಿವ್ಯ ಕ್ಷೇತ್ರಗಳಲ್ಲೂ ದೇವರನ್ನು ಸಂದರ್ಶಿಸಿ, ಸೇವಿಸಿ, ತಮ್ಮ ಜನ್ಮ ಭೂಮಿಗೆ ಬಂದು, ವೀರನಾರಾಯಣನ ಸಾನ್ನಿಧ್ಯದಲ್ಲಿ ಭಗವದ್ಭಾಗವತ ಸೇವಾ ನಿರ್ವಾಹಕರಾಗಿಯೂ, ಶಿಷ್ಯ ವೃಂದಕ್ಕೆ ಆಧ್ಯಾತ್ಮ ಶಾಸ್ತ್ರಗಳನ್ನು ಕಾಲಕ್ಷೇಪ ಮಾಡಿ ಸುತ್ತಲೂ ಇದ್ದರು. ಇವರ ಶಿಷ್ಯರಲ್ಲಿ ಮುಖ್ಯರಾದವರು 8 ಮಂದಿ ;- ಉಯ್ಯಕ್ಕೊಂಡಾರ್, ಕುರು ಕ್ಯಾವಲಪ್ಪನ್, ನಂಬಿಕರುಣಾಕರದಾಸರ್, ಏರುತಿರುವುಡೈಯಾರ್, ತಿರುಕ್ಕಣ್ಣ ಮಂಗೈ ಯಾಂಡಾನ್, ವಾನಮಾಮದೇವಿಯಾಂಡಾನ್, ಉರಸ್ಪಟೂ ರಾಚ್ಚಾನ್‌ ಪಿಳ್ಳೆ, ಶೋಕರಾಳಾನ್ ಎಂಬುವರು. ಹೀಗಿರಲು ಒಮ್ಮೆ ತಿರುನಾರಾಯಣ ಪುರವೆಂದು ಖ್ಯಾತವಾದ ಮೇಲುಕೋಟೆಯ ಹಲವರು ಶ್ರೀ E 5 ವೈಷ್ಣವ ಭಾಗವತೋತ್ತಮರು ಯಾತ್ರಾರ್ಥಿಗಳಾಗಿ ಬಂದು, ದೇವಾಲಯದಲ್ಲಿ ದೇವರ ಮುಂದೆ ತಮಗೆ ತಿಳಿದಿದ್ದ ಸ್ತೋತ್ರಗಳನ್ನೆಲ್ಲಾ ಹೇಳುತ್ತಾ, “ನಮ್ಮಾಳ್ವಾರ” * ತಿರುವಾಯ್ ಮೊನಿ” ಯಲ್ಲಿನ ಆರಾವಮುದೇ ! ಅಡಿಯೇ ನುಡಲುಂ ಎಂಬ 10 ಪಾಶುರಗಳನ್ನು ಶ್ರುತಿ ಮನೋಹರವಾಗಿ ಹಾಡಿದರು. ಆ ದಶಕದ ಕೊನೆ ಯಲ್ಲಿ “ ಕುಲಿಲ್ ಮಲಿಯಚ್ಚನ್ನ ಓರಾಯಿರುಳಿಪ್ಪತ್ತುಂ ” ಎಂದು ಅವರು ಅನುಸಂಧಾನ ಮಾಡಿದುದನ್ನು ಕೇಳಿ, ಇಂತಹವೇ ಸಾವಿರ ಪದ್ಯಗಳಿರಬೇಕೆಂದು, ಅವರನ್ನು “ ನಿಮಗೆ ಸಾವಿರ ಪದ್ಯಗಳೂ ಬರುವುವೆ ? ” ಎಂದು ಕೇಳಿದರು, ಅದಕ್ಕೆ ಅವರು * ಈ ಹತ್ತು ಪಾಶುರ ಹೊರತು ಮತ್ತೊಂದೂ ಬಾರದು ” ಎಂದರು. ಹಾಗಾದರೆ ನಿಮ್ಮ ನಾಡಿನಲ್ಲಿ ನಿಮ್ಮೊಡನಾಡಿಗಳಿಗಾದರೂ ಬರುವುದೆ ? ಅಥವಾ ಈ ಗ್ರಂಥವಾದರೂ ಇರುವುದೊ ? ಎನಲು, “ ಇಲ್ಲ ” ಎಂದು ಹೇಳಿ, ತೀರ್ಥ ಪ್ರಸಾದಾದಿಗಳನ್ನು ತೆಗೆದುಕೊಂಡು ಯಾತ್ರಾಕ್ರಮವಾಗಿ ಹೊರಟು ಮುಂದೆ ಸಾಗಿದರು. “} ಆ ಗಳಿಗೆಯಿಂದ ನಾಥಮುನಿಗಳಿಗೆ ಹಗಲಿರುಳೂ ಅದೇ ಚಿಂತೆ. “ ಕುರುಹೂ‌ ತೊನ್ನ ನಾಯಿರಂ ” ಎಂದು ಕಿವಿಗೆ ಬಿದ್ದುದರಿಂದ ಆ “ ಶಠಕೋಪರು ” ಅವತರಿಸಿದ * ಕುರುಹೂರಿ’ ಗೆ ಹೋಗಿ ವಿಚಾರಿಸಿ ತಿಳಿಯಲುತ್ಸುಕರಾದರು, ದೇವರ ಆಣತಿ ಪಡೆದು ಆಳ್ವಾರ್ ತಿರುನಗರಿಗೆ ತೆರಳಿದರು. ಅಲ್ಲಿ ಭಗವಂತನನ್ನೂ, ನಮ್ಮಾಳ್ವಾರನ್ನೂ ಸಂದರ್ಶಿಸಿ, ನಂತರ ಅಲ್ಲಿದ್ದ ಭಾಗವತರೊಬ್ಬರನ್ನು ನೋಡಿದರು. ಆತ “ಮಧುರ ಕವಿ” ಗಳ ಶಿಷ್ಯ ಪರಂಪರೆಯಲ್ಲಿ ಒಬ್ಬರು, * ಪರಾಂಕುಶದಾಸ ” ರೆಂದು ಅವರ ಹೆಸರು, ಮುನಿಗಳು ಇವರನ್ನೂ “ಸ್ವಾಮಿ ! ಇಲ್ಲಿ ಸಾವಿರ ಪಾಶುರಗಳನ್ನೂ ಬಲ್ಲವರಿರುವರೆ? ಅಥವಾ ಆ ಗ್ರಂಥವಾದರೂ ಇದೆಯೋ ? ಯತ್ನಿಸಿದರೆ ದೊರಕುವುದೊ ? ಎಂದು ಕೇಳಿದರು. ಅದಕ್ಕುತ್ತರವಾಗಿ ನಮ್ಮ ಕುಲತಿಲಕರಾದ “ ಮಧುರ ಕವಿಗಳು » ಪಾಡಿದ “ ಕಣ್ಣಿನುಣ್ ಶಿರುತ್ತಾಂಬು " ಎಂಬ ಪ್ರಬಂಧವುಂಟೆಂದೂ, ಅದನ್ನು ನಮ್ಮಾಳ್ವಾರ ಮುಂದೆ ಏಕಾಗ್ರತೆಯಿಂದ ಆಳ್ವಾರಡಿಗಳನ್ನೂ ಧ್ಯಾನಿಸಿ, ನೇಮದಿಂದ “12 ಸಾವಿರ ಸಲ ಜಪಿಸಿದರೆ ಆಳ್ವಾರು ಪ್ರಸನ್ನರಾಗಿ ಇಷ್ಟಾರ್ಥವನ್ನು ಕೊಡುವರು” ಎಂದು ಹಿರಿಯರು ಹೇಳುವರೆಂದೂ ಹೇಳಿದರು. ಅದನ್ನು ಕೇಳಿದೊಡನೆ ಹರ್ಷ ಪ್ರಕರ್ಷಾಂತಃಕರಣಪೂರಿತರಾಗಿ, ಅವರಿಗೆ ವಂದಿಸಿ, ಆ ದಿವ್ಯ ಪ್ರಬಂಧವನ್ನು ಹೇಳಿ ಕೊಡಬೇಕೆಂದು ವಿನಯದಿಂದ ಪ್ರಾರ್ಥಿಸಿದರು, ಅವರೂ ಹರ್ಷಚಿತ್ತರಾಗಿ ಹೇಳಿ ಕೊಟ್ಟರು. ಮುನಿಗಳು ಅದನ್ನು ಕಲಿತು, ತಮ್ಮ ನಿತ್ಯಕರ್ಮವನ್ನು ಅನುಷ್ಠಿಸಿ, ಬಳಿಕ ಆಳ್ವಾರರ ಸನ್ನಿಧಿಯಲ್ಲಿ ಯಥಾವತ್ತಾಗಿ ಜಪಿಸ ತೊಡಗಿದರು. ಮೊದಲೇ ಯೋಗಿಗಳಿವರು. ಇಂತಹವರಿಗೂ ಒಲಿಯದೆ ಮತ್ತೆಂತಹವರಿಗೆ ಒಲಿದು ಒಳವರು ಆ ಶಠಕೋಪ ಯೋಗಿಗಳು ? ಮುನಿಗಳ ಯೋಗ ಫಲಿಸುವಂತಾಗಿ, ಸಾಕ್ಷಾಲ್ಲೋಕ ಮಾತೆಯ ನಿಯಮನದಂತೆ ಮರೆಯಾಗಿದ್ದು, ಅಶರೀರವಾಣಿ ನುಡಿವಂತೆ, * CC " 6 ತಿರುವಾಯ ಮೋದಿ ” ” ಮೊದಲಾದ ನಿಮ್ಮ ಭಿಮತವೇನು ? ” ತಿಳಿಸಿ ಎನಲು, ದಿವ್ಯಪ್ರಬಂಧಾಮೃತವನ್ನು ಪಾನಮಾಡಿಸಬೇಕೆನಲು ಪರಮ ಪ್ರೀತರಾಗಿ, ಅರ್ಜುನ ನಿಗೆ ಶ್ರೀ ಕೃಷ್ಣ ದಿವ್ಯ ಚಕ್ಷುಸ್ಸತ್ತಂತೆ ಆಳ್ವಾರು ಮುನಿಗಳಿಗೆ ದಿವ್ಯಜ್ಞಾನ ಚಕ್ಷು ಸನ್ನಿತ್ತು, ರಹಸ್ಯ ಕ್ರಮವನ್ನೂ, ದಿವ್ಯ ಪ್ರಂಬಂಧಗಳನ್ನೂ, ಸಮಸ್ತ ದರ್ಶನಾರ್ಥ ಗಳನ್ನೂ ಮತ್ತು ಯೋಗ ರಹಸ್ಯವನ್ನೂ ಯೋಗ ದೆಸೆಯಲ್ಲೇ ಅನುಗ್ರಹಿಸಿ, ಅಂತರ್ಧಾನರಾದರು. ಈ ವಿಷಯವನ್ನು ಶ್ರೀ ನಿಗಮಾಂತ ದೇಶಿಕರು ತಮ್ಮ * ಸಂಪ್ರದಾಯ ಪರಿಶು ” ಎಂಬ ರಹಸ್ಯದಲ್ಲಿ “ ವೇದಾಂತ ಸಂಪ್ರದಾಯತ್ತಿರ ಇಂದ ಯುಗಾರಂಭಲೆ ಬ್ರಹ್ಮನಂದ್ಯಾದಿಹಳುಕ್ಕುಪಿನ್ನು ನಮ್ಮಾಳ್ವಾರ್ ಪ್ರವರ್ತ ಕರಾನಾರ್, ” ಎಂದೂ, “ ಇಪ್ಪರಂ ಪರೈಯಾಲುಂ ಪ್ರಾದುರ್ಭಾವ ವಿಶೇಷತ್ತಾಲುಂ ನಾಥ ಮುನಿಹಳುಕ್ ನಮ್ಮಾಳ್ವಾರ್ “ಆಚಾರರಾನಾರ್ ” ಎಂದೂ, ಗುರು ಪರಂಪರಾಸಾರದಲ್ಲಿ ಇವ್ವಾಚಾರ‌ ಹಳಿಲ್ ನಾಥ ಮುನಿಹಳು ಶ್ರೀ ಮಧುರ ಕವಿಹ ಮುದಲಾಹವುಂಡಾನ ಸಂಪ್ರದಾಯ ಪರಂಪರೆಯಾಲುಂ, ತಿರುವಾಯ್ ಮೊಲಿ ಮುಹಾಲು, ಯೋಗ ದಶ್ಚಿ ಯಿಲೇ ಸಾಕ್ಷಾತ್ಯತರಾಯುಂ ನಮ್ಮಾಳ್ವಾರ್ ಆಚಾರರ್ ಆನಾರ್, ” ಎಂದೂ ಹೇಳಿರುವುದನ್ನು ಗಮನಿಸತಕ್ಕದ್ದು ಅತ್ಯಗತ್ಯ, ಇಂದಿಗೂ ಆಚಾರ ಪಂಕ್ತಿಯಲ್ಲಿ ನಾಥ ಮುನಿಗಳಾದನಂತರ ನಮ್ಮಾಳ್ವಾರ ನಾಮ ಧೇಯವನ್ನು ಪಠನ ಮಾಡುವುದು ಸಾಕ್ಷಿಯಾಗಿದೆ. ಪ್ರಕೃತ ಹೀಗೆ ನಮ್ಮಾಳ್ವಾರರಿಂದ ತಮ್ಮ ಸುಕೃತ ಪರಿಪಾಕದಿಂದ ಸತ್ವಸ್ವವನ್ನೂ ಪಡೆದು, ಕೆಲವು ಕಾಲ ಅಲ್ಲೇ ಪ್ರವಚನ ಮಾಡಿಕೊಂಡಿದ್ದು ಅಲ್ಲಿಂದ ಹೊರಟು, ಮಾರ್ಗದಲ್ಲಿ ದಿವ್ಯ ದೇಶಗಳನ್ನು ಸಂದರ್ಶಿಸಿ, ಅಲ್ಲಲ್ಲಿ ಮಂಗಳಾಶಾಸನ ಮಾಡಿ, ತಮಗೆ ಲಭಿಸಿದ್ದ ದಿವ್ಯ ಪ್ರಬಂಧಾಮೃತವನ್ನು ವರ್ಷಿಸುತ್ತಾ, ಮತ್ತೆ ತಮ್ಮ ವಾಸಸ್ಥಳಕ್ಕೆ ಸೇರಿದರು. (” ಅಲ್ಲ ದಿವ್ಯ ಪ್ರಬಂಧವನ್ನು ಆಶ್ರಿತವರ್ಗಕ್ಕೆ ಅಧ್ಯಯನ ಮಾಡಿಸಿ, ತಮ್ಮ ದರಿ ಕುಮಾರರೀಶ್ವರಲ್ಲಿ ವಿಶೇಷ ಕಟಾಕ್ಷವನ್ನು ಬೀರಿ, “ ಸುಶ್ರಾವ್ಯವಾಗಿ ಪಾಡಿ ಮ ದಿವ್ಯ ದಂಪತಿಗಳನ್ನು ಉಲ್ಲಾಸಗೊಳಿಸಬೇಕೆಂದು ನಿ ಯ ಮಿ ಸಿ, ಗಾನ ಎಡಿಸಿದರು. ಸಂಸ್ಕೃತ ವೇದಕ್ಕೆ ಶ್ರೀ ವೇದವ್ಯಾಸರಂತೆ ದ್ರಾವಿಡ ವೇದವೆನಿಸಿದ ಪ್ರಬಂಧ ರಕ್ಕೆ ಶ್ರೀ ನಾಥ ಮುನಿಗಳು ಎಂದು ಖ್ಯಾತಿಗೊಂಡರು. ಸಂಗೀತದಲ್ಲಿಯೂ ಮ ನೈಪುಣ್ಯ ವಿದ್ದಿತು ಮುನಿವರರಿಗೆ, ಇವರ ದೇವ ಗಾನವನ್ನು ಕೇಳಿ, ರಾಜಾದಿ ಪ್ರಭುಗಳು ಸತ್ಕರಿಸಿ, ಸನ್ಮಾನಿಸಬೇಕೆಂದು ಕರೆಯೋಲೆ ಕಳುಹ, ಕೃತವಿರಿಂಚಾದಿ ನಿರಂಕುಶ ವಿಭೂತಯಃ” ಎಂಬಂತೆ ಅದಕ್ಕೆ ಮನಸೋಲದೆ ಾಗಿ ಭಗವಂತನಸನ್ನಿಧಿಯಲ್ಲೇ ನಿತ್ಯ ಸೇವಾನಿರತರಾಗಿ, ವೈರಾಗ್ಯ ನಿಧಿಯಾಗಿ ೦ತಿಯಾಗಿದ್ದರು. 7 “ಲೋಕೇsವತೀರ್ಣ ಪರಮಾರ್ಥ ಸಮಗ್ರ ಭಕ್ತಿ ಯೋಗಾಯ ನಾಥಮುನಯೇ ಯಮನಾಂವರಾಯ ಎಂದು ಇವರ ಪೌತ್ರರಾದ ಯಾಮುನ ಮುನಿಗಳೇ ಹೇಳಿರುವಂತೆ ಯೋಗದಲ್ಲಿ ಚಿರಕಾಲವಿದ್ದರು. * ಕುರುಹೈಕ್ಕಾವಲರ್ಪ್ಪ” ಎಂಬ ಶಿಷ್ಯರಿಗೆ ಯೋಗರಹಸ್ಯವನ್ನರಿಯುವಂತೆ ನಿ ಯ ಮಿಸಿ, “ಅಷ್ಟಾಂಗ ಯೋಗ ಕ್ರಮವನ್ನುಪದೇಶಿಸಿದರು. 66 ಬಂದು CC ಬ ತಮ್ಮ ಪುತ್ರ ಈಶ್ವರ ಭಟ್ಟಾಳ್ವಾರನ್ನು ನೋಡಿ “ ನಿನಗೆ ಕುಮಾರನೊಬ್ಬ ಜನಿಸುವನು” ಅವನಿಗೆ ೧ ಯಮನೈತ್ತು ಲೈವನ್ " ಎ೦ದು ಹೆಸರಿಡುವಂತೆ ಆಜ್ಞಾಪಿಸಿದರು. (ಆ ಮುನಿಗಳೇ ಯಾಮುನ ಮುನಿಗಳು. ಪಟ್ಟ ಶಿಷ್ಯರಾದ * ಉಯ್ಯಕ್ಕೊಂಡಾ ” ರನ್ನು ನೋಡಿ ಆತನಿಗೆ ದರ್ಶನಾರ್ಥಗಳನ್ನು ಉಪದೇಶಿಸ ಬೇಕೆಂದು ನಿದೇಶವಿತ್ತು, ತಾವು ಎಂದಿನಂತೆ ಯೋಗದಲ್ಲಿ ಮಗ್ನರಾಗಿದ್ದರು. ಕೆಲವು ದಿನಗಳ ಬಳಿಕ ಒಂದು ದಿನ ಚೋಳರಾಜನು ಪರಿವಾರ ಸಮೇತನಾಗಿ ಬೇಟೆಗಾಗಿ ಆ ಮಾರ್ಗವಾಗಿ ಬಂದಿದ್ದು, ಹಿಂದಿರುಗಿ ಹೋಗುತ್ತಿದ್ದುದನ್ನು ಅಕಸ್ಮಾತ್ತಾಗಿ ನೋಡಿದರು ನಮ್ಮ ನಾಥ ಮುನಿಗಳ ಮಕ್ಕಳು. ಕೂಡಲೆ ಆ ಮಕ್ಕಳು ಒಳಕ್ಕೆ ( ಅಪ್ಪ! ಅಪ್ಪ ! ನಮ್ಮ ಮನೆಗೆ ಒ೦ದು ಕಪಿಯೂ, ಇಬ್ಬರು ಬಿಲ್ಲಾಳುಗಳೂ, ಒಬ್ಬ ಹೆಂಗಸೂ, ಬಂದು ನಾಥ ಮುನಿಗಳೆಲ್ಲಿ ? ಎಂದು ಕೇಳಿ ಹೋದರು” ಎಂದರು. ಆಗ ಮುನಿಗಳು C ಅಗ್ರತಃ ಪ್ರಯಮ್ ರಾಮಃ ಸೀತಾ ಮಧ್ಯೆ ಸುಮಧ್ಯಮಾ | ಕೃಷ್ಣತಸ್ತು ಧನುಷಾಣಿ: ಲಕ್ಷ್ಮಣೋನುಜಗಾಮಹ ॥ ಎಂಬಂತೆ ಸೀತೆಯೂ ರಾಮಲಕ್ಷ್ಮಣರೂ ಹನುಮಂತನೂ ಬಂದಿದ್ದಿರ ಬಹುದೆಂದು ಬಗೆದು, ಅವರನ್ನು ಹಿಂಬಾಲಿಸಿ, ನೋಡಬೇಕೆಂದು, ಹೊರಟು ದಾರಿಯಲ್ಲಿ ಕಂಡ ಕಂಡವರನ್ನು ಕೆಲವು ಗುರುತುಗಳನ್ನು ಹೇಳಿ ( ಅಂತಹವರನ್ನು ಕಂಡಿರಾ ” ಎಂದು ಕೇಳಲು, 1 ಹೌದು, ಹೋಗುತ್ತಿರುವರು, ” ಎನ್ನಲು, ಬಲುವೇಗವಾಗಿ ಬಲು ದೂರ ಹೋದರು. ಎಂದರೆ ಚೋಳಪುರದವರೆಗೆ ಹೋಗಿ, ಹೊರಬಾಗಿಲಲ್ಲಿದ್ದವರನ್ನು ಕೇಳಲು, ಅವರು ಯಾರನ್ನೂ ಅಂತಹವರನ್ನು ನೋಡಲಿಲ್ಲವೆಂದಾಗ ಆ ವಿರಹ ವನ್ನೂ ನೋಡಬೇಕೆಂಬ ಆಸೆಯನ್ನೂ ಸಹಿಸದೆ ಅಲ್ಲೇ ಬಿದ್ದು, ಮೋಹಗೊಂಡವ ರಾಗಿ ಅದೇ ನೆಪವಾಗಿ ಆ ಸ್ಥಳದಲ್ಲಿ ಹಾಗೆಯೇ ಪರಮಪದವೇರಿದರೆಂದು ಹಿರಿಯರು ಹೇಳುವರು. ಬಳಿಕ ಬಂಧುವರ್ಗವೆಲ್ಲರಿಗೂ ಈ ಸಂಗತಿಯು ತಿಳಿದು ಅವರ ಚರಮ ಕೈಂಕರವು ನೆರವೇರಿತು. ಹೀಗೆ ಈ ಮಹಿಮರ ಜೀವನ ಚರಿತ್ರೆ ಅಪೂರ್ಣ ಮತ್ತು ಅಸ್ಪುಟ. ಹೇಗಿದ್ದರೂ ಸರಿಯೆ ವಿಭೂತಿ ಪುರುಷರು ವಿಭವಾವತಾರ ಸಾಕ್ಷಾತ್ಕಾರದ ಸಲುವಾಗಿ ಶ್ರಮಿಸಿ, ಹಂಬಲಿಸಿ, ಪರಮ ಪುರುಷನ ಸಾಕ್ಷಾದ್ಧಾಮ ಸಾಕ್ಷಾತ್ಕಾರ ಮಾಡಿ ನಿತ್ಯಸೂರಿಗಳ ಗೋಷ್ಠಿಯಲ್ಲಿ ಸೇರಿ, ನಿತ್ಯಸಂದರ್ಶನ ಭಾಗಿಗಳಾಗಿದ್ದು ಈ ಮಹಾತ್ಮರ ಪುಣ್ಯಸ್ಮರಣೆಗಾಗಿ ಅರಿಕೆ ಮಾಡಿಹೆನು. 8 12-13 ಶತಮಾನಗಳ ಹಿಂದಿನ ಪುಣ್ಯ ಚರಿತರ, ಗಣ್ಯ ಪುರುಷರ, ಆಚಾರ ಮಾಲೆಯ ಅಮೂಲ್ಯ ಮಣಿಗಳ ನೆನಪು ( ಸಿಂಹಾವಲೋಕನದಂತೆ ” ಅವರು ಮಾಡಿದ ಮಹೋಪಕಾರಕ್ಕೆ ಕೃತಜ್ಞತೆಯ ಸೂಚನೆ ಯ ಕಾಣಿಕೆಯಿದಲ್ಲದೆ ಮತ್ತೇನಲ್ಲ. ಆ ಉಪಕಾರವನ್ನು ಪಡೆದು ಸತ್ಪಲವನ್ನನುಭವಿಸುವ ಪ್ರತಿ ವ್ಯಕ್ತಿಯ ಕರ್ತವ್ಯವೂ ಇದೇ ಅಲ್ಲದೆ ಬೇರೇನಿದೆ ? ” ಎಂಬುದನ್ನು ಎಲ್ಲೆಡೆಯೂ ಎಲ್ಲರಿಗೂ ತಿಳಿಸುವುದೇ ಈ ಕಿರುಹೊತ್ತಿಗೆಯ ಗಳಿಕೆ. ಇಂತಹ ಮಹನೀಯರ ನಿತ್ಯ ಸ್ಮರಣೀಯವಾದ ಮಹಿಮಸ್ತುತಿಯೊಂದು ಈವರೆಗಿಲ್ಲದಿದ್ದುದು ಇವರ ಮಹಿಮೆಗೆ ಕುಂದಲ್ಲದಿದ್ದರೂ, ನಮ್ಮಂತಹ ಪಾಮರರಿಗೆ ಇದೊಂದು ಕುಂದೆಂದೆನಿಸದಿರದು. ಈ ಪುಣ್ಯಶ್ಲೋಕರ ಸ್ತೋತ್ರದಿಂದ ಸಕಲ ಚೇತನರೂ ಸ್ಫೂರ್ತಿಗೊಳ್ಳಲಿ, ಉಜೀವನಗೊಳ್ಳಲಿ, ಹಿಂದಿನ ಆ ಶಕ್ತಿಯನ್ನು ಇಂದೂ ಗಳಿಸಲಿ, ಆತ್ಮಸುಸಂಸ್ಕೃತಿಯ ಬಲವನ್ನುಳಿಸಲಿ, ಭಕ್ತರ ಪೀಳಿಗೆ ಯನ್ನುಳಿಸಲಿ, ಎಂಬ ಹೆಬ್ಬಯಕೆಯು ಬರೆಯಲಣಿ ಮಾಡಿತು. ಈ ಸ್ತುತಿಯನ್ನು ಕಂಠಪಾಠ ಮಾಡಿದರೆ ಶ್ರೇಯಸ್ಸಿರದಿರದು. ವೊದಗಿಸಿದ ಆ ಯೋಗೀಂದ್ರನಿಗೆ ಬಾಗಿ ಯೋಗದಿ ಜಾನಿಪೆನು. ॥ ಶ್ರೀ ಮತೇ ನಾಥಮುನಯೇ ನಮಃ ॥ ಈ ಮಹಿಮರ ಈ ಸುಯೋಗ ಇತಿ, ಸದ್ಗುರು ಚರಣ ರೇಣುಃ, ವಿದ್ವಾನ್, ಹ. ಗೋಪಾಲಾಚಾರ: ಶ್ರೀಕಾಂತ ಪವರ್ ಪ್ರೆಸ್, ಮೈಸೂರು